Tag: president

  • ಉಪರಾಷ್ಟ್ರಪತಿ ಜಗದೀಪ್ ಧನಕರ್ ರಾಜೀನಾಮೆ ಅಂಗೀಕರಿಸಿದ ದ್ರೌಪದಿ ಮುರ್ಮು

    ಉಪರಾಷ್ಟ್ರಪತಿ ಜಗದೀಪ್ ಧನಕರ್ ರಾಜೀನಾಮೆ ಅಂಗೀಕರಿಸಿದ ದ್ರೌಪದಿ ಮುರ್ಮು

    ನವದೆಹಲಿ: ಜಗದೀಪ್ ಧನಕರ್ ಅವರು ಉಪರಾಷ್ಟ್ರಪತಿ ಹುದ್ದೆಗೆ ರಾಜೀನಾಮೆ ನೀಡಿ ಸಲ್ಲಿಸಿದ್ದ ಪತ್ರವನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅಂಗೀಕರಿಸಿದ್ದಾರೆ.

    ಅನಾರೋಗ್ಯದ ಕಾರಣ ನೀಡಿ ಜಗದೀಪ್ ಧನಕರ್ ಅವರು ಉಪರಾಷ್ಟ್ರಪತಿ ಹುದ್ದೆಗೆ ರಾಜೀನಾಮೆ ನೀಡಿ ಸಲ್ಲಿಸಿದ್ದ ಪತ್ರವನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಂಗೀಕರಿಸಿದ್ದು, ಅವರ ಅನುಮೋದನೆಯ ನಂತರ ಗೃಹ ಸಚಿವಾಲಯವು ಜಗದೀಪ್ ಧನಕರ್ ಅವರ ರಾಜೀನಾಮೆಯನ್ನು ಅಧಿಕೃತವಾಗಿ ಘೋಷಿಸಿದೆ.ಇದನ್ನೂ ಓದಿ: ಅಹಮದಾಬಾದ್ ಏರ್‌ಪೋರ್ಟ್‌ಗೆ ಬಾಂಬ್ ಬೆದರಿಕೆ – ಪೊಲೀಸರು, ಬಾಂಬ್ ನಿಷ್ಕ್ರಿಯ ದಳದಿಂದ ಶೋಧ

    ಇಂದು ಅಧಿವೇಶನದಲ್ಲಿ ಜಗದೀಪ್ ಧನಕರ್ ಅವರು ರಾಜ್ಯಸಭಾ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಳ್ಳಲಿಲ್ಲ. ಹೀಗಾಗಿ ಉಪರಾಷ್ಟ್ರಪತಿಗಳ ಅಧಿಕಾರಾವಧಿಯ ಬಗ್ಗೆ ತಿಳಿಸುವ ಸಂವಿಧಾನದ 67ನೇ ವಿಧಿಯ ಅಡಿಯಲ್ಲಿ, ಹೊಸ ಉಪಾಧ್ಯಕ್ಷರ ಆಯ್ಕೆಯಾಗುವವರೆಗೂ ಉಪಸಭಾಪತಿ ಹರಿವಂಶ್ ನಾರಾಯಣ್ ಸಿಂಗ್ ಅವರು ಕಾರ್ಯನಿರ್ವಹಿಸುತ್ತಾರೆ.

    ರಾಜ್ಯಸಭಾ ಅಧ್ಯಕ್ಷರಾಗಿ ಸಂಸತ್ತಿನ ಮಳೆಗಾಲದ ಅಧಿವೇಶನದ ಮೊದಲ ದಿನದ ಅಧ್ಯಕ್ಷತೆ ವಹಿಸಿದ ನಂತರ ಸೋಮವಾರ (ಜು.21) ರಾಜೀನಾಮೆ ಘೋಷಿಸಿದ್ದರು. ದ್ರೌಪದಿ ಮುರ್ಮು ಅವರಿಗೆ ಸಲ್ಲಿಸಿದ್ದ ಪತ್ರದಲ್ಲಿ, ಆರೋಗ್ಯ ದೃಷ್ಟಿಯಿಂದ ಹಾಗೂ ವೈದ್ಯಕೀಯ ಸಲಹೆಗಳನ್ನು ಪಾಲಿಸುವ ನಿಟ್ಟಿನಲ್ಲಿ ರಾಜೀನಾಮೆ ಘೋಷಿಸಿರುವುದಾಗಿ ಉಲ್ಲೇಖಿಸಿದ್ದರು.

    ಕೆಲ ದಿನಗಳ ಹಿಂದೆ ಉತ್ತರಾಖಂಡದ ನೈನಿತಾಲ್‌ನ ಕುಮಾವೂನ್ ವಿಶ್ವವಿದ್ಯಾಲಯದ ಸುವರ್ಣ ಮಹೋತ್ಸವದಲ್ಲಿ ಭಾಗವಹಿಸಿದ್ದ ವೇಳೆ ಉಪರಾಷ್ಟ್ರಪತಿ ಜಗದೀಪ್ ಧನಕರ್ ಮೂರ್ಛೆ ಹೋಗಿದ್ದರು. ಸೋಮವಾರ ಬೆಳಿಗ್ಗೆ ಕೂಡ ತಮ್ಮ ಕಚೇರಿಯಲ್ಲಿ ಕುಸಿದು ಬಿದ್ದಿದ್ದರು ಎನ್ನಲಾಗಿದೆ.ಇದನ್ನೂ ಓದಿ: ತಿಂಗಳ ಬಳಿಕ ಹಾರಿದ ಬ್ರಿಟನ್‌ ಬಾನಾಡಿ – ಕೇರಳದಿಂದ ಆಸ್ಟ್ರೇಲಿಯಾಗೆ ಜಿಗಿದ F-35B ಜೆಟ್

  • ರಾಷ್ಟ್ರಪತಿ ದ್ರೌಪದಿ ಮುರ್ಮುರನ್ನು `ಮುರ್ಮಾಜೀ’ ಎಂದು ಉಚ್ಛರಿಸಿ ಅಪಮಾನ ಮಾಡಿದ ಖರ್ಗೆ

    ರಾಷ್ಟ್ರಪತಿ ದ್ರೌಪದಿ ಮುರ್ಮುರನ್ನು `ಮುರ್ಮಾಜೀ’ ಎಂದು ಉಚ್ಛರಿಸಿ ಅಪಮಾನ ಮಾಡಿದ ಖರ್ಗೆ

    ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮುರನ್ನು (Draupadi Murmu)`ಮುರ್ಮಾಜೀ’ ಎಂದು ಉಚ್ಛರಿಸಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅಪಮಾನ ಮಾಡಿದ್ದಾರೆ.

    ಛತ್ತೀಸ್‌ಘಡದ ರಾಯಪುರ್‌ನ ಕಾರ್ಯಕ್ರಮವೊಂದರಲ್ಲಿ ಮಾತನಾಡುವಾಗ ಮುರ್ಮು ಅವರನ್ನು `ಮುರ್ಮಾಜೀ’ ಎಂದು ತಪ್ಪಾಗಿ ಉಚ್ಛರಿಸಿದ್ದಾರೆ. ತಕ್ಷಣವೇ ಎಚ್ಚೆತ್ತು ತಿದ್ದಿಕೊಂಡಿದ್ದಾರೆ. ನಂತರ ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು `ಕೋವಿಡ್’ ಅಂತಲೂ ತಪ್ಪಾಗಿ ಉಚ್ಛರಿಸಿದ್ದಾರೆ. ಛತ್ತೀಸ್‌ಗಡದಲ್ಲಿ ದೊಡ್ಡಪ್ರಮಾಣದಲ್ಲಿ ಅರಣ್ಯನಾಶ ಮಾಡಲಾಗ್ತಿದೆ. ಬಿಜೆಪಿಗರು ದೊಡ್ಡ ಉದ್ದಿಮೆದಾರರ ಸ್ನೇಹಿತರು ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.ಇದನ್ನೂ ಓದಿ: ಯೆಮೆನ್‌ನಲ್ಲಿ ಮರಣದಂಡನೆಗೆ ಗುರಿಯಾಗಿರುವ ಕೇರಳ ನರ್ಸ್‌ಗೆ ಜು.16ಕ್ಕೆ ನೇಣು

    ನೆಲ-ಜಲ-ಅರಣ್ಯ ಸಂರಕ್ಷಣೆ ನಮ್ಮ ಹೊಣೆ. ಮುರ್ಮಾಜೀ, ಕೋವಿಡ್‌ರನ್ನು ನಾವು ರಾಷ್ಟ್ರಪತಿ ಮಾಡಿದ್ದೇವೆ ಎಂದು ಬಿಜೆಪಿಯವರು ಹೇಳಿಕೊಳ್ಳಬಹುದು. ಯಾಕೆಂದರೆ, ನಮ್ಮ ನೆಲ-ಜಲ-ಅರಣ್ಯ, ಸಂಪನ್ಮೂಲಗಳನ್ನು ಲೂಟಿ ಮಾಡಲು. ಅದಾನಿ, ಅಂಬಾನಿ ಅಂತವರು ಇವತ್ತು ಇದನ್ನೆಲ್ಲಾ ವಶಪಡಿಸಿಕೊಂಡಿದ್ದಾರೆ ಎಂದು ಖರ್ಗೆ ಟೀಕಿಸಿದ್ದಾರೆ.

    ಖರ್ಗೆ ಹೇಳಿಕೆಯನ್ನು ಬಿಜೆಪಿ ಕಟುವಾಗಿ ಟೀಕಿಸಿದೆ. ಮುರ್ಮು ಅವರ ವಿರುದ್ಧ ಖರ್ಗೆ ಅಗೌರವ, ಆಕ್ಷೇಪಾರ್ಹ ಪದ ಬಳಸಿದ್ದಾರೆ. ದೇಶದ ಇಡೀ ಬುಡಕಟ್ಟು ಸಮುದಾಯ ಇದನ್ನು ಖಂಡಿಸುತ್ತೆ. ಇದು ಎಸ್‌ಸಿ/ಎಸ್‌ಟಿ ವಿರೋಧಿ ಕಾಂಗ್ರೆಸ್ ಮನಸ್ಥಿತಿ ತೋರಿಸುತ್ತೆ ಎಂದು ಬಿಜೆಪಿ ತೀವ್ರವಾಗಿ ಖಂಡಿಸಿದೆ.ಇದನ್ನೂ ಓದಿ: ದಾವಣಗೆರೆಯಲ್ಲಿ ಅತೃಪ್ತರ ಬಲ ಪ್ರದರ್ಶನ – ಬಿಎಸ್‌ವೈ ವಿರುದ್ಧ ಸಿದ್ದೇಶ್ವರ್, ಲಿಂಬಾವಳಿ ಗುಡುಗು

  • ರಾಷ್ಟ್ರಪತಿ ಭೇಟಿ ವೇಳೆ ಸಿದ್ದರಾಮಯ್ಯ, ಆಮೀರ್ ಖಾನ್ ಮುಖಾಮುಖಿ

    ರಾಷ್ಟ್ರಪತಿ ಭೇಟಿ ವೇಳೆ ಸಿದ್ದರಾಮಯ್ಯ, ಆಮೀರ್ ಖಾನ್ ಮುಖಾಮುಖಿ

    ನವದೆಹಲಿ: ರಾಷ್ಟ್ರಪತಿ ಭೇಟಿಗಾಗಿ ಸಿಎಂ ಸಿದ್ದರಾಮಯ್ಯ (CM Siddaramaiah) ರಾಷ್ಟ್ರಪತಿ ಭವನಕ್ಕೆ ತೆರಳಿದಾಗ ಬಾಲಿವುಡ್ ನಟ, ನಿರ್ದೇಶಕ ಆಮೀರ್ ಖಾನ್ (Aamir Khan) ಮುಖಾಮುಖಿಯಾದರು.

    ರಾಜ್ಯದ ಏಳು ಮಸೂದೆಗಳಿಗೆ ಅನುಮೋದನೆ ನೀಡುವಂತೆ ಕೋರಿ ಸಿಎಂ ಸಿದ್ದರಾಮಯ್ಯ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು (Draupadi Murmu) ಭೇಟಿಗಾಗಿ ನವದೆಹಲಿ ತೆರಳಿದ್ದರು. ಇಂದು ರಾಷ್ಟ್ರಪತಿ ಭವನಕ್ಕೆ ತೆರಳಿದಾಗ ಬಾಲಿವುಡ್ ನಟ, ನಿರ್ದೇಶಕ ಮುಖಾಮುಖಿಯಾದರು. ಈ ವೇಳೆ ಪರಸ್ಪರ ಕುಶಲೋಪರಿ ವಿಚಾರಿಸಿ, ಶುಭ ಹಾರೈಸಿದರು.ಇದನ್ನೂ ಓದಿ: 24 ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ – ಕಾಮುಕ ಶಿಕ್ಷಕ ಅರೆಸ್ಟ್‌

    ಸಿಎಂ ಸಿದ್ದರಾಮಯ್ಯ ಅವರು ಸಚಿವರಾದ ಮಹದೇವಪ್ಪ, ಕೆ.ಜೆ ಚಾರ್ಜ್, ಸತೀಶ್ ಜಾರಕಿಹೊಳಿ ಸಮ್ಮುಖದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗಿದ್ದಾರೆ. ಈ ವೇಳೆ ರಾಜ್ಯಪಾಲರಿಂದ ಬಂದಿರುವ ರಾಜ್ಯದ ಏಳು ಮಸೂದೆಗಳಿಗೆ ಅನುಮೋದನೆ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ.

    ಏಳು ಮಸೂದೆಗೆಳು ಯಾವವು?
    1. ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕಾಗಿ ಮಕ್ಕಳ ಹಕ್ಕು (ಕರ್ನಾಟಕ ತಿದ್ದುಪಡಿ) ಮಸೂದೆ, 2015
    2. ಕರ್ನಾಟಕ (ಖನಿಜ ಹಕ್ಕುಗಳು ಮತ್ತು ಖನಿಜ ಹೊಂದಿರುವ ಭೂಮಿ) ತೆರಿಗೆ ಮಸೂದೆ 2024.
    3. ನೋಂದಣಿ (ಕರ್ನಾಟಕ ತಿದ್ದುಪಡಿ) ಮಸೂದೆ, 2024.
    4. ನೋಟರಿಗಳು (ಕರ್ನಾಟಕ ತಿದ್ದುಪಡಿ) ಮಸೂದೆ, 2025
    5. ನೋಂದಣಿ (ಕರ್ನಾಟಕ ತಿದ್ದುಪಡಿ) ಮಸೂದೆ, 2025
    6. ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ (ತಿದ್ದುಪಡಿ) ಕಾಯ್ದೆ, 2025.
    7. ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ (ತಿದ್ದುಪಡಿ) ಕಾಯ್ದೆ, 2024.ಇದನ್ನೂ ಓದಿ: ಸುದೀಪ್ `ಬಿಲ್ಲ ರಂಗ ಬಾಷ’ ಸೆಟ್ ರಿವೀಲ್!

  • ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟಕ್ಕೆ ಜಾತಿ ಸಮೀಕರಣ – ಭಿನ್ನರ ಪಟ್ಟಿಯಲ್ಲಿ ಯಾರಿದ್ದಾರೆ?

    ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟಕ್ಕೆ ಜಾತಿ ಸಮೀಕರಣ – ಭಿನ್ನರ ಪಟ್ಟಿಯಲ್ಲಿ ಯಾರಿದ್ದಾರೆ?

    ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ (BJP President) ಸ್ಥಾನಕ್ಕೆ ಚುನಾವಣೆ ನಡೆದರೆ ಜಾತಿ (Caste) ಸಮೀಕರಣದಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಭಿನ್ನರ ಬಣ ಪ್ಲ್ಯಾನ್‌ ಮಾಡಿದೆ. ಇದರಡಿ ಲಿಂಗಾಯತ, ದಲಿತ ಹಾಗೂ ಒಬಿಸಿ ಅಡಿ ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸಿದೆ.

    ಹೈಕಮಾಂಡ್ (High Command) ಯಾರಿಗೆ ಒಪ್ಪಿಗೆ ನೀಡುತ್ತದೋ ಅವರನ್ನು ಅಧ್ಯಕ್ಷ ಚುನಾವಣೆಗೆ ಕಣಕ್ಕಿಳಿಸಲು ಬಯಸಿದೆ.

    ಲಿಂಗಾಯತ ಫಾರ್ಮುಲಾ
    ಯತ್ನಾಳ್, ಶಾಸಕ
    ಬೊಮ್ಮಾಯಿ, ಸಂಸದ
    ಅರವಿಂದ ಬೆಲ್ಲದ್, ಶಾಸಕ
    ಸೋಮಣ್ಣ, ಕೇಂದ್ರ ಸಚಿವ


    ದಲಿತ ಫಾರ್ಮುಲಾ
    ಶ್ರೀರಾಮುಲು, ಮಾಜಿ ಸಚಿವ
    ಲಿಂಬಾವಳಿ, ಮಾಜಿ ಸಚಿವ

    ಒಬಿಸಿ ಫಾರ್ಮುಲಾ
    ಸುನೀಲ್‌ಕುಮಾರ್, ಮಾಜಿ ಸಚಿವ
    ಕುಮಾರ್ ಬಂಗಾರಪ್ಪ, ಮಾಜಿ ಶಾಸಕ ಇದನ್ನೂ ಓದಿ: ಬಿಜೆಪಿಯಲ್ಲಿನ ಆಂತರಿಕ ಕಿತ್ತಾಟ ಲಕ್ಷಾಂತರ ಕಾರ್ಯಕರ್ತರಿಗೆ ದುಃಖ ಉಂಟು ಮಾಡಿದೆ: ಸಿ.ಟಿ.ರವಿ

  • ಸೋನಿಯಾ ಗಾಂಧಿ ಹೇಳಿಕೆಯಿಂದ ರಾಷ್ಟ್ರಪತಿ ಹುದ್ದೆಯ ಘನತೆಗೆ ಘಾಸಿ – ರಾಷ್ಟ್ರಪತಿ ಭವನ ಪ್ರತಿಕ್ರಿಯೆ

    ಸೋನಿಯಾ ಗಾಂಧಿ ಹೇಳಿಕೆಯಿಂದ ರಾಷ್ಟ್ರಪತಿ ಹುದ್ದೆಯ ಘನತೆಗೆ ಘಾಸಿ – ರಾಷ್ಟ್ರಪತಿ ಭವನ ಪ್ರತಿಕ್ರಿಯೆ

    ನವದೆಹಲಿ: ಸಂಸತ್ತಿನ ಬಜೆಟ್‌ ಅಧಿವೇಶನ ಇಂದಿನಿಂದ ಆರಂಭವಾಗಿದ್ದು, ಉಭಯ ಸದನಗಳನ್ನುದ್ದೇಶಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅವರು ಮಾತನಾಡಿದರು. ಈ ಬಗ್ಗೆ ಸಂಸತ್‌ನ ಹೊರಗೆ ಮಾತನಾಡಿದ ರಾಜ್ಯಸಭಾ ಸದಸ್ಯೆ ಸೋನಿಯಾ ಗಾಂಧಿ ʻPoor Ladyʼ ಎಂದು ಕರೆದಿದ್ದು, ಬಿಜೆಪಿ ಕಟುವಾಗಿ ಟೀಕಿಸಿದೆ. ಈ ಬೆನ್ನಲ್ಲೇ ರಾಷ್ಟ್ರಪತಿ ಭವನ ಸೋನಿಯಾ ಗಾಂಧಿ ಅವರ ಹೆಸರು ಉಲ್ಲೇಖಿಸದೇ ಪ್ರತಿಕ್ರಿಯೆ ನೀಡಿದೆ.

    ಬಜೆಟ್​ ಅಧಿವೇಶನ ಭಾಷಣದ ವೇಳೆ ಎಲ್ಲಿಯೂ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸುಸ್ತಾಗಿಲ್ಲ. ಇದು ಉನ್ನತ ಹುದ್ದೆಯನ್ನು ಘಾಸಿಗೊಳಿಸುವ ಹೇಳಿಕೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದೆ. ಇದನ್ನೂ ಓದಿ: ದ್ರೌಪದಿ ಮುರ್ಮುಗೆ Poor Lady ಎಂದ ಸೋನಿಯಾ – ಮುಗಿಬಿದ್ದ ಬಿಜೆಪಿ ನಾಯಕರು

    ಮುಂದುವರಿದು… ಸತ್ಯದಿಂದ ದೂರವಿರಲು ಸಾಧ್ಯವಿಲ್ಲ ಎಂದು ರಾಷ್ಟ್ರಪತಿ ಭವನ ಸ್ಪಷ್ಟಪಡಿಸಲು ಬಯಸುತ್ತದೆ. ರಾಷ್ಟ್ರಪತಿಗಳು ಯಾವುದೇ ಹಂತದಲ್ಲೂ ದಣಿದಿಲ್ಲ, ಆದರೆ ವಾಸ್ತವವಾಗಿ, ಅವರು ತಮ್ಮ ಭಾಷಣದ ಸಂದರ್ಭದಲ್ಲಿ ಅಳಿವಿನ ಅಂಚಿನಲ್ಲಿರುವ ಸಮುದಾಯಗಳ ಪರವಾಗಿ, ಮಹಿಳೆಯರು ಮತ್ತು ರೈತರ ಪರವಾಗಿ ಮಾತನಾಡುವುದು ಎಂದಿಗೂ ಆಯಾಸವಾಗುವುದಿಲ್ಲ ಎಂದು ನಂಬುತ್ತಾರೆ ಎಂದು ಸಹ ತನ್ನ ಹೇಳಿಕೆಯಲ್ಲಿ ಉಲ್ಲೇಖಿಸಿದೆ.

    ರಾಷ್ಟ್ರಪತಿ ಭವನ ಪ್ರಕಟಣೆಯಲ್ಲೇನಿದೆ?
    ರಾಷ್ಟ್ರಪತಿಗಳು ಸಂಸತ್ತಿನಲ್ಲಿ ಮಾಡಿದ ಭಾಷಣದ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸುವಾಗ, ಕಾಂಗ್ರೆಸ್ ಪಕ್ಷದ ಕೆಲವು ಪ್ರಮುಖ ನಾಯಕರು ಉನ್ನತ ಹುದ್ದೆಯ ಘನತೆಯನ್ನು ಘಾಸಿಗೊಳಿಸುವ ಹೇಳಿಕೆ ನೀಡಿದ್ದಾರೆ. ರಾಷ್ಟ್ರಪತಿಗಳು ಭಾಷಣದ ಕೊನೆಯಲ್ಲಿ ಸುಸ್ತಾಗಿದ್ದರು, ಮಾತನಾಡಲು ಕಷ್ಟಪಟ್ಟರು ಎಂದೂ ಹೇಳಿದ್ದಾರೆ. ಇಂತಹ ಹೇಳಿಕೆಗಳು ಸ್ವೀಕಾರಾರ್ಹವಲ್ಲ.

    ಸತ್ಯದಿಂದ ದೂರವಿರಲು ಸಾಧ್ಯವಿಲ್ಲ ಎಂದು ರಾಷ್ಟ್ರಪತಿ ಭವನ ಸ್ಪಷ್ಟಪಡಿಸಲು ಬಯಸುತ್ತದೆ. ಅವರು ಯಾವುದೇ ಹಂತದಲ್ಲೂ ದಣಿದಿರಲಿಲ್ಲ. ವಾಸ್ತವವಾಗಿ ಅಳಿವಿನ ಅಂಚಿನಲ್ಲಿರುವ ಸಮುದಾಯ, ಮಹಿಳೆಯರು ಮತ್ತು ರೈತರ ಪರವಾಗಿ ಮಾತನಾಡುವಾಗ ಎಂದಿಗೂ ಆಯಾಸವಾಗುವುದಿಲ್ಲ ಎಂದು ಅವರು ನಂಬಿದ್ದರು. ಆದ್ರೆ ಈ ನಾಯಕರು ಹಿಂದಿಯಂತಹ ಭಾರತೀಯ ಭಾಷೆಗಳಲ್ಲಿನ ಭಾಷಾವೈಶಿಷ್ಟ್ಯ ಮತ್ತು ಪ್ರವಚನದ ಬಗ್ಗೆ ತಮ್ಮನ್ನು ತಾವು ಪರಿಚಯಿಸಿಕೊಂಡಿಲ್ಲ. ಇದರಿಂದಾಗಿ ತಪ್ಪು ಅನಿಸಿಕೆ ಉಂಟಾಗಿರಬಹುದು ಎಂದು ರಾಷ್ಟ್ರಪತಿಗಳ ಕಚೇರಿ ನಂಬುತ್ತದೆ. ದುರದೃಷ್ಟವಶಾತ್‌ ಅವರು ಕಳಪೆ ಅಭಿರುಚಿಯಲ್ಲಿದ್ದರೆ ಅದನ್ನು ತಪ್ಪಿಸಬಹುದು ಎಂದು ತನ್ನ ಹೇಳಿಕೆಯಲ್ಲಿ ತಿಳಿಸಿದೆ.

    ಸೋನಿಯಾ ಗಾಂಧಿ ಹೇಳಿದ್ದೇನು?
    ರಾಷ್ಟ್ರಪತಿಗಳ ಭಾಷಣ ಮುಕ್ತಾಯದ ಬಳಿಕ ಸಂಸತ್‌ ಹೊರಗಡೆ ಬಂದ ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ, ಪ್ರಿಯಾಂಕ ಗಾಂಧಿ ಅವರನ್ನು ಮಾಧ್ಯಮಗಳು ಮಾತನಾಡಿಸಿವೆ. ಈ ವೇಳೆ ಸೋನಿಯಾ ಗಾಂಧಿ, Poor Lady ಭಾಷಣ ಮುಗಿಸುವ ಹೊತ್ತಿಗೆ ಸುಸ್ತಾಗಿ ಹೋಗಿದ್ದರು. ಅವರಿಗೆ ಮಾತನಾಡಲು ಕಷ್ಟವಾಗುತ್ತಿತ್ತು ಎಂದು ಹೇಳಿದರು. ಈ ಸಂದರ್ಭದಲ್ಲಿ ರಾಹುಲ್‌ ಗಾಂಧಿ ಭಾಷಣ ತುಂಬಾ ಬೋರ್‌ ಆಗಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

    ಸೋನಿಯಾ ಗಾಂಧಿ ದ್ರೌಪತಿ ಮುರ್ಮು ಅವರನ್ನು Poor Lady ಎಂದು ಕರೆದಿದ್ದಕ್ಕೆ ಬಿಜೆಪಿ (BJP) ನಾಯಕರು ಕಾಂಗ್ರೆಸ್‌ ವಿರುದ್ಧ ಮುಗಿಬಿದ್ದಿದ್ದಾರೆ. ಬುಡಕಟ್ಟು ಮಹಿಳೆ ರಾಷ್ಟ್ರಪತಿ ಸ್ಥಾನವನ್ನು ಅಲಂಕರಿಸಿದ್ದನ್ನು ಸಹಿಸಲು ಕಾಂಗ್ರೆಸ್‌ಗೆ ಆಗುತ್ತಿಲ್ಲ. ಕೂಡಲೇ ಸೋನಿಯಾ ಗಾಂಧಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೊರ ಹಾಕುತ್ತಿದ್ದಾರೆ.

    ಕೇಂದ್ರ ಸಚಿವ ಜೆಪಿ ನಡ್ಡಾ ಕಿಡಿ
    ಕೇಂದ್ರ ಸಚಿವ ಜೆ.ಪಿ. ನಡ್ಡಾ ಸಹ ತಮ್ಮ ಎಕ್ಸ್‌ ಖಾತೆ ಮೂಲಕ ಸೋನಿಯಾ ಗಾಂಧಿ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಪಾರ್ಟಿಯು ಭಾರತದ ಬುಡಕಟ್ಟು ಸಮುದಾಯಗಳ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದ್ದಾರೆ. ಇಂತಹ ಪದಗಳನ್ನು ಉದ್ದೇಶಪೂರ್ವಕವಾಗಿ ಬಳಸುವ ಮೂಲಕ ಕಾಂಗ್ರೆಸ್ ಪಕ್ಷದ ಬಡವರ ವಿರೋಧಿ ಮತ್ತು ಬುಡಕಟ್ಟು ವಿರೋಧಿ ನೀತಿಯನ್ನು ತೋರಿಸುತ್ತದೆ ಎಂದು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

  • ಫಿಲ್ಮ್‌ ಚೇಂಬರ್‌ ಎಲೆಕ್ಷನ್;‌ ಸಾರಾ ಗೋವಿಂದು ಬಣಕ್ಕೆ ಜಯ – ಅಧ್ಯಕ್ಷರಾಗಿ ನರಸಿಂಹಲು ಆಯ್ಕೆ

    ಫಿಲ್ಮ್‌ ಚೇಂಬರ್‌ ಎಲೆಕ್ಷನ್;‌ ಸಾರಾ ಗೋವಿಂದು ಬಣಕ್ಕೆ ಜಯ – ಅಧ್ಯಕ್ಷರಾಗಿ ನರಸಿಂಹಲು ಆಯ್ಕೆ

    ರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ (Karnataka Film Chamber Of Commerce) ನಡೆದ ಚುನಾವಣೆಯಲ್ಲಿ ಮತ್ತೆ ಸಾರಾ ಗೋವಿಂದು ಬಣಕ್ಕೆ ಜಯವಾಗಿದೆ. ಈ ಬಾರಿ ಫಿಲ್ಮ್‌ ಚೇಂಬರ್‌ ಅಧ್ಯಕ್ಷರಾಗಿ ಎಂ.ನರಸಿಂಹಲು (M.Narasimhalu) ಆಯ್ಕೆಯಾಗಿದ್ದಾರೆ.

    ಈ ಬಾರಿ ಅಧ್ಯಕ್ಷ ಸ್ಥಾನ ಪ್ರದರ್ಶಕರ ವಲಯಕ್ಕೆ ಮೀಸಲಾಗಿತ್ತು. ಎಂ.ನರಸಿಂಹಲು ಅವರು ತಮ್ಮ ಪ್ರತಿಸ್ಪರ್ಧಿ ಆರ್‌.ಸುಂದರ್‌ ರಾಜು ಅವರನ್ನು ಸೋಲಿಸಿ ಅಧ್ಯಕ್ಷ ಸ್ಥಾನಕ್ಕೆ ಏರಿದ್ದಾರೆ. ಇದನ್ನೂ ಓದಿ: ಅಂತರ್ ರಾಜ್ಯ ವರ್ತಕರ ಹಾವಳಿ | ಸ್ಥಳೀಯ ವ್ಯಾಪಾರಿಗಳ ಆಕ್ರೋಶ – ಡಿ.16ಕ್ಕೆ ಬೀಳಗಿ ಬಂದ್‌ಗೆ ಕರೆ

    ಉಪಾಧ್ಯಕ್ಷ ಸ್ಥಾನಕ್ಕೆ ಸಫಾಯರ್ ವೆಂಕಟೇಶ್ ಆಯ್ಕೆಯಾಗಿದ್ದಾರೆ. ವಿತರಕ ಮತ್ತು ಪ್ರದರ್ಶಕರ ವಲಯದಿಂದ ಉಪಾಧ್ಯಕ್ಷರಾಗಿ ಶಿಲ್ಪಾ ಶ್ರೀನಿವಾಸ್‌, ಕಾರ್ಯದರ್ಶಿಯಾಗಿ ಎಂ.ಎನ್‌.ಕುಮಾರ್‌, ಪ್ರದರ್ಶಕರ ಉಪಾಧ್ಯಕ್ಷ – ಕೆ.ರಂಗಪ್ಪ, ಕಾರ್ಯದರ್ಶಿ ಕುಶಾಲ್‌, ಖಜಾಂಚಿ – ಮಹದೇವ್‌ ಚುನಾಯಿತರಾಗಿದ್ದಾರೆ.

    ನಿರ್ಮಾಪಕರ ವಲಯದಿಂದ ಗೌರವ ಕಾರ್ಯದರ್ಶಿ ಡಿ.ಕೆ.ರಾಮಕೃಷ್ಣ, ಗೌರವ ಕಾರ್ಯದರ್ಶಿ ಎಂ.ಎನ್.ಕುಮಾರ್‌, ಪ್ರದರ್ಶಕರಾಗಿ ಎಂ.ಸಿ.ಕುಶಾಲ್‌ ಆಯ್ಕೆಯಾಗಿದ್ದಾರೆ. ಇದನ್ನೂ ಓದಿ: ನನ್ನ ಸಿನಿಮಾ ರಿಲೀಸ್ ಟೈಮಲ್ಲೇ ಕಟೌಟ್‍ನಿಂದ ಬಿದ್ದು ದುರಂತ ಆಗಿತ್ತು: ಸುದೀಪ್

  • ಗಯಾನಾ ಅಧ್ಯಕ್ಷಗೆ ಚನ್ನಪಟ್ಟಣ ಗೊಂಬೆ ಗಿಫ್ಟ್ ನೀಡಿದ ಮೋದಿ

    ಗಯಾನಾ ಅಧ್ಯಕ್ಷಗೆ ಚನ್ನಪಟ್ಟಣ ಗೊಂಬೆ ಗಿಫ್ಟ್ ನೀಡಿದ ಮೋದಿ

    – 5 ದಿನ, 31 ನಾಯಕರ ಭೇಟಿ ಮಾಡಿದ ಪ್ರಧಾನಿ

    ನವದೆಹಲಿ: ಗಯಾನಾ (Guyana) ಭೇಟಿ ನೀಡಿದ್ದ ಪ್ರಧಾನಿ ಮೋದಿ (PM Modi) ಅಧ್ಯಕ್ಷ ಇರ್ಫಾನ್ ಅಲಿಗೆ (Mohamed Irfaan Ali) ಚನ್ನಪಟ್ಟಣ ಗೊಂಬೆಯನ್ನು (Channapatna Doll) ಉಡುಗೊರೆಯಾಗಿ ನೀಡಿದ್ದಾರೆ.

    5 ದಿನಗಳ ಕಾಲ ಮೂರು ದೇಶಗಳ ಪ್ರವಾಸ ಮುಗಿಸಿ ಶುಕ್ರವಾರ (ನ.22) ಭಾರತಕ್ಕೆ ಮರಳಿದ ಮೋದಿ, ಗಯಾನಾ, ಬೆಜ್ರಿಲ್ ಹಾಗೂ ನೈಜೀರಿಯಾ ಪ್ರವಾಸ ಮಾಡಿದ್ದು, ಒಟ್ಟು 31 ನಾಯಕರನ್ನು ಭೇಟಿ ಮಾಡಿದ್ದಾರೆ.ಇದನ್ನೂ ಓದಿ: ನಿಖಿಲ್‌ ಕುಮಾರಸ್ವಾಮಿ, ಭರತ್‌ ಬೊಮ್ಮಾಯಿ, ಅನ್ನಪೂರ್ಣ ತುಕಾರಾಂಗೆ ಮುನ್ನಡೆ

    ಭೇಟಿಯಾದ ಗಣ್ಯರಿಗೆ ಭಾರತದ ಶ್ರೀಮಂತಿಕೆಯನ್ನು ಎತ್ತಿ ಹಿಡಿಯುವ ಉಡುಗೊರೆಗಳನ್ನು ನೀಡಿದ್ದಾರೆ. ಗಯಾನಾ ಅಧ್ಯಕ್ಷ ಮೊಹಮ್ಮದ್ ಇರ್ಫಾನ್ ಅಲಿ ಅವರ ಮಗ ಲಿಲನ್ ಅಲಿಗೆ ಗೊಂಬೆಗಳಿಗೆ ಪ್ರಸಿದ್ಧವಾದ ಕರ್ನಾಟಕದ ಚನ್ನಪಟ್ಟಣದ ಮರದ ಆಟಿಕೆ ರೈಲನ್ನು ಉಡುಗೊರೆಯಾಗಿ ನೀಡಿದ್ದಾರೆ.

    ಕರ್ನಾಟಕದ್ದು ಮಾತ್ರವಲ್ಲದೇ ಮಹಾರಾಷ್ಟ್ರದ 8, ಜಮ್ಮು ಕಾಶ್ಮೀರದಿಂದ 5, ತಮಿಳುನಾಡು, ಉತ್ತರ ಪ್ರದೇಶ, ಬಿಹಾರ, ಒಡಿಶಾ, ಲಡಾಖ್‌ನ ತಲಾ ಒಂದೊಂದು ಉಡುಗೊರೆಗಳನ್ನು ಮೋದಿ ವಿವಿಧ ನಾಯಕರಿಗೆ ನೀಡಿದ್ದಾರೆ.ಇದನ್ನೂ ಓದಿ: ನಿಖಿಲ್‌ ಕುಮಾರಸ್ವಾಮಿ, ಭರತ್‌ ಬೊಮ್ಮಾಯಿ, ಅನ್ನಪೂರ್ಣ ತುಕಾರಾಂಗೆ ಮುನ್ನಡೆ

  • ಮೋದಿ ಅತ್ಯುತ್ತಮ ಕೆಲಸ ಮಾಡಲಿದ್ದಾರೆ- ಲೋಕಸಭಾ ಎಲೆಕ್ಷನ್ ನಂತ್ರದ ಮೊದಲ ಭಾಷಣದಲ್ಲಿ ಮುರ್ಮು ಹೇಳಿದ್ದೇನು?

    ಮೋದಿ ಅತ್ಯುತ್ತಮ ಕೆಲಸ ಮಾಡಲಿದ್ದಾರೆ- ಲೋಕಸಭಾ ಎಲೆಕ್ಷನ್ ನಂತ್ರದ ಮೊದಲ ಭಾಷಣದಲ್ಲಿ ಮುರ್ಮು ಹೇಳಿದ್ದೇನು?

    – ಸಾಮಾಜಿಕ, ಆರ್ಥಿಕ ಬದಲಾವಣೆಯತ್ತ ಹೆಜ್ಜೆ ಇಡುತ್ತಿದ್ದೇವೆ

    ನವದೆಹಲಿ: ಮೂರನೇ ಬಾರಿಗೆ ಪ್ರಧಾನಿಯಾಗಿ ಆಯ್ಕೆಯಾಗಿರುವ ನರೇಂದ್ರ ಮೋದಿಯವರು ಅತ್ಯುತ್ತಮ ಕೆಲಸಗಳನ್ನು ಮಾಡಲಿದ್ದಾರೆ ಎಂದು ಭಾವಿಸಿದ್ದೇನೆ ಅಂತಾ ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದ್ದಾರೆ.

    18ನೇ ಸಂಸತ್ತಿನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಸಂಸತ್ತಿನಲ್ಲಿ ಇಂದು ಮಾತನಾಡಿದ ಅವರು, ನೂತನ ಸಂಸದರಿಗೆ ಅಭಿನಂದನೆ ಸಲ್ಲಿಸಿ ಬಳಿಕ ಮಾತನಾಡಿದ ಮುರ್ಮು ಅವರು ಮೊದಲಿಗೆ ಓಂ ಬಿರ್ಲಾ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಿದರು. ಬಳಿಕ ಓಂ ಬಿರ್ಲಾ ಅವರು ಅತ್ಯುತ್ತಮವಾಗಿ ಕೆಲಸ ಮಾಡಲಿದ್ದಾರೆ ಎಂದು ಭಾವಿಸಿದ್ದೇನೆ ಎಂದು ಹೇಳಿದರು.

    ಅಪಪ್ರಚಾರಕ್ಕೆ ಚುನಾವಣೆ ಮೂಲಕ ಉತ್ತರ: ಇದೇ ವೇಳೆ ಚುನಾವಣಾ ಆಯೋಗಕ್ಕೂ ಅಭಿನಂದನೆಗಳನ್ನು ಸಲ್ಲಿಸಿದ ಅವರು, ವಿಶ್ವದ ಅತಿದೊಡ್ಡ ಚುನಾವಣೆ, ಜನರು ಉತ್ಸಾಹದಿಂದ ಮತದಾನ ಮಾಡಿದ್ದಾರೆ. ಮಹಿಳೆಯರು ಹೆಚ್ಚು ಮತದಾನ ಮಾಡಿದ್ದಾರೆ. ಜಮ್ಮು-ಕಾಶ್ಮೀರದಲ್ಲಿ ದಾಖಲೆಯ ಮತದಾನವಾಗಿದೆ. ಕಾಶ್ಮೀರದ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿತ್ತು. ಆದರೆ ಈ ಚುನಾವಣೆ ಮೂಲಕ ಉತ್ತರ ನೀಡಲಾಗಿದೆ ಎಂದು ಹೇಳಿದರು.

    ಈ ಅವಧಿಯ ಮೊದಲ ಬಜೆಟ್ ಮಂಡಿಸಲಿದೆ. ದೊಡ್ಡ ಆರ್ಥಿಕ, ಸಾಮಾಜಿಕ ಬದಲಾವಣೆಯತ್ತ ಹೆಜ್ಜೆ ಇಡುವ ಬಜೆಟ್ ಇದಾಗಲಿದೆ. ರಾಜ್ಯದ ವಿಕಾಸವೇ ದೇಶದ ವಿಕಾಸ್ ಎನ್ನುವ ಭಾವನೆಯಿಂದ ನಮ್ಮ ಸರ್ಕಾರ ಮುಂದುವರಿಯಲಿದೆ. 12 ರಿಂದ 5 ನೇ ಬಲಿಷ್ಠ ಆರ್ಥಿಕತೆಯಾಗಿ ದೇಶ ಬದಲಾಗಿದೆ. ಕೊರೊನಾ ಮತ್ತು ಯುದ್ಧದ ಪರಿಸ್ಥಿತಿಯಲ್ಲೂ ಭಾರತ ಅಭಿವೃದ್ಧಿ ಸಾಧಿಸಿದೆ. ಸರ್ವಿಸ್ ಸೆಕ್ಟರ್ ಬಲಪಡಿಸುವ ಕೆಲಸ ಮಾಡಲಾಗುತ್ತಿದೆ ಎಂದರು.

    ಪ್ರತಿ ಕ್ಷೇತ್ರದಲ್ಲಿ ಭಾರತ ಲೀಡರ್‌: ನಮ್ಮ ಸರ್ಕಾರ ಮೂರನೇ ಬಲಿಷ್ಠ ಆರ್ಥಿಕತೆಯಾಗಲು ಹೊರಟಿದೆ. ಪ್ರತಿ ಕ್ಷೇತ್ರದಲ್ಲಿ ಭಾರತ ಲೀಡರ್ ಆಗುತ್ತಿದೆ. ಉದ್ಯೋಗ ಸೃಷ್ಟಿಯಾಗುತ್ತಿವೆ. ಕೃಷಿ ಆಧಾರಿತ ಉದ್ಯಮ ವಿಸ್ತರಣೆ ಮಾಡಲಾಗುತ್ತಿದೆ. ರೈತರಿಗಾಗಿ ಸರ್ಕಾರಿ ಸಂಸ್ಥೆಗಳ ನೆಟ್ವರ್ಕ್ ಮಾಡುತ್ತಿದೆ. ಸಹಕಾರಿ ವಲಯದಲ್ಲಿ ದೊಡ್ಡ ಬದಲಾವಣೆ ಮಾಡುತ್ತಿದೆ. ಸಣ್ಣ ಖರ್ಚು ನಿಭಾಯಿಸಲು ಕಿಸಾನ್ ಸಮ್ಮಾನ್ ನಿಧಿ ಯೋಜನೆ ಮೂಲಕ ರೈತರಿಗೆ ಸಹಾಯ ಮಾಡಲಾಗುತ್ತಿದೆ. ಎಂಎಸ್‍ಪಿಯಲ್ಲಿ ದಾಖಲೆಯ ಸಾಧನೆ ಮಾಡಿದೆ. ವರ್ತಮಾನ ಅಗತ್ಯ ಆಧರಿಸಿ ಕೃಷಿ ವಲಯದಲ್ಲಿ ಬದಲಾವಣೆ ಮಾಡುತ್ತಿದೆ ಎಂದು ತಿಳಿಸಿದರು.

    ವಿಶ್ವದ ಹಲವು ದೇಶಗಳನ್ನು ಭಾರತ ಪ್ರೇರೆಪಿಸುತ್ತಿದೆ. ಭಾರತಕ್ಕೆ ಬೆಂಬಲ ನೀಡುತ್ತಿವೆ. ಗ್ರೀನ್ ಎನರ್ಜಿಗೆ ಭವಿಷ್ಯವಿದೆ. ಈ ಹಿನ್ನೆಲೆ ನಮ್ಮ ಸರ್ಕಾರ ಇದಕ್ಕೆ ಹೆಚ್ಚು ಒತ್ತು ನೀಡುತ್ತಿದೆ. ಮಹಿಳೆಯರ ಆರ್ಥಿಕ ಸ್ಥಿತಿ ಹೆಚ್ಚಿಸಿದೆ. ಪಿಎಂ ಆವಾಸ್ ಯೋಜನೆಯಡಿ ಮಹಿಳೆಯರಿಗೆ ಹೆಚ್ಚು ಮನೆ ನೀಡಿದೆ. ಮುಂದಿನ ಅವಧಿಯಲ್ಲಿ ಮೂರು ಕೋಟಿ ಮನೆ ನಿರ್ಮಿಸಿ ಹೆಚ್ಚು ಮಹಿಳೆಯರಿಗೆ ನೀಡಲಾಗುವುದು. ಸ್ವಂಸಹಾಯ ಗುಂಪುಗಳಿಗೆ ಆದ್ಯತೆ ನೀಡಲಾಗುತ್ತಿದೆ. ನಮೋ ಡ್ರೋನ್ ಮೂಲಕ, ಲಕ್ ಪತಿ ದೀದಿ ಮೂಲಕ ಮಹಿಳೆಯರನ್ನು ಸ್ವಾವಲಂಬಿ ಮಾಡಲಾಗುತ್ತಿದೆ ಎಂದರು.

    ಮೂಲಭೂತ ಸೌಕರ್ಯಗಳ ಹೆಚ್ಚಳ: ಎರಡು, ಮೂರನೇ ಹಂತದ ನಗರಗಳಲ್ಲಿ ರಸ್ತೆ ಅಭಿವೃದ್ಧಿಯಾಗುತ್ತಿದೆ. ಮಹಾನಗರಗಳಲ್ಲಿ ಮೆಟ್ರೋ ವಿಸ್ತರಣೆಯಾಗುತ್ತಿದೆ. ವಂದೇ ಭಾರತ್ ರೈಲು ಯೋಜನೆ ಆರಂಭವಾಗಲಿದೆ. ನಗರಗಳ ಮೂಲ ಸೌಕರ್ಯ ಹೆಚ್ಚಿಸಲಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಎರಡು ಪಟ್ಟು ಹೆಚ್ಚಿಸಿದೆ. ಹೈಸ್ಪೀಡ್ ರೈಲ್ ಕಾಮಗಾರಿ ವೇಗವಾಗಿ ನಡೆಯುತ್ತಿದೆ. ಬಾಕಿ ಕಡೆ ಬುಲೆಟ್ ಟ್ರೈನ್ ಸಾಧ್ಯತೆ ಪರಿಶೀಲಿಸಲಾಗುತ್ತಿದೆ. ಈಶಾನ್ಯ ರಾಜ್ಯಗಳ ಅಭಿವೃದ್ಧಿಗೆ ಕೆಲಸ ಮಾಡುತ್ತಿದೆ. ಅಸ್ಸಾಂನಲ್ಲಿ ಸೆಮಿ ಕಂಡಕ್ಟರ್ ಉತ್ಪಾದನೆ ಮಾಡಲಾಗುವುದು. ಹತ್ತು ವರ್ಷಗಳಲ್ಲಿ ಅನೇಕ ಸಮಸ್ಯೆ ಬಗೆಹರಿಸಿದೆ. ದೇಶದ ಹಲವು ಕ್ಷೇತ್ರಗಳು ಅಭಿವೃದ್ಧಿ ಕಂಡಿದೆ. ಈಶಾನ್ಯ ರಾಜ್ಯಗಳ ವಿಷಯ ಬರುತ್ತಿದ್ದಂತೆಯೇ ಮಣಿಪುರ ವಿಚಾರ ಪ್ರಸ್ತಾಪಿಸಿ ವಿಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿದವು.

    ಮಹಿಳೆಯರಿಗೆ ಬ್ಯಾಂಕ್ ನಲ್ಲಿ ಹೆಚ್ಚು ಬಡ್ಡಿ ನೀಡಲಾಗುತ್ತಿದೆ. ಉಚಿತ ರೇಷನ್, ಕಡಿಮೆ ದರದಲ್ಲಿ ಗ್ಯಾಸ್ ನೀಡಿದ್ದು, ಮಹಿಳೆಯರ ಉಳಿತಾಯ ಹೆಚ್ಚಿದೆ. ವಿದ್ಯುತ್ ಉಚಿತ ಮಾಡಲು ಸೋಲಾರ್ ಹಾಕಿ ಕೊಡಲಾಗುತ್ತಿದೆ. ಎಸ್‍ಸಿ, ಎಸ್ಟಿ ಓಬಿಸಿಗಳಿಗೆ ಹೆಚ್ಚಿನ ಆದ್ಯತೆ ನೀಡಿದೆ. ಅವರ ಜೀವನ ಬದಲಿಸುವ ಕೆಲಸ ಮಾಡಿದೆ. ಜೀವನ ಭೀಮಾ ಯೋಜನೆ ಮೂಲಕ ಸುರಕ್ಷೆ ನೀಡಲಾಗುತ್ತಿದೆ. ಸರ್ಕಾರ ಬಡವರ ಸೇವೆ ಮಾಡುತ್ತಿದೆ ಎಂದು ಜನರ ಭಾವನೆಗೆ ಬಂದಿದೆ. ಸ್ವಚ್ಛ ಭಾರತ್ ಯೋಜನೆಯನ್ನು ರಾಷ್ಟ್ರೀಯ ವಿಷಯ ಮಾಡಿದೆ. ಕೋಟ್ಯಂತರ ಶೌಚಾಲಯ ನಿರ್ಮಾಣ ಮಾಡಿದೆ. 55 ಕೋಟಿ ಆಯುಷ್ಮಾನ್ ಭಾರತ್ ಯೋಜನೆ ಲಾಭ ಪಡೆದಿದ್ದಾರೆ. ಜನೋಷಧಿ ಮೂಲಕ ಕಡಿಮೆ ದರದಲ್ಲಿ ಔಷಧಿ ನೀಎಲಾಗುತ್ತಿದೆ. ಈ ಬಾರಿ ಆಯುಷ್ಮಾನ್ ಯೋಜನೆ ವಿಸ್ತರಿಸಿದೆ, ವೃದ್ಧರಿಗೆ ಈಗ ಲಾಭ ಸಿಗಲಿದೆ ಎಂದರು.

    ಎರಡು ವರ್ಷದ ಹಿಂದೆ ಬ್ಯಾಂಕಿಂಗ್ ವಲಯ ಮುಳುಗಡೆ ತಡೆಯಲು ಪುನಶ್ಚೇತನ ಮಾಡಲಾಯಿತು. ಈಗ ಬ್ಯಾಂಕುಗಳು ಸಾಕಷ್ಟು ಅಭಿವೃದ್ಧಿಯಾಗಿವೆ. ಆರ್ಥಿಕ ಬೆಳವಣಿಗಗಳಿಗೆ ಸಹಕಾರಿಯಾಗಿವೆ. ಸರ್ಕಾರಿ ಬ್ಯಾಂಕ್ ಗಳ ಎನ್‍ಪಿಎ ಕಡಿಮೆಯಾಗಿದೆ. ದೇಶದ ರಕ್ಷಣಾ ವಲಯದಲ್ಲಿ ಹೆಚ್.ಎ.ಎಲ್ ಶಕ್ತಿ ನೀಡುತ್ತಿದೆ. ಡಿಜಿಟಲ್ ಇಂಡಿಯಾಗೆ ಇಡೀ ವಿಶ್ವ ಆಕರ್ಷಣೆಯಾಗಿದೆ. ಎರಡು ಕೋಟಿಗೂ ಅಧಿಕ ವಹಿವಾಟು ನಡೆಸಿ ದಾಖಲೆ ಸಾಧಿಸಿದೆ. ರಕ್ಷಣಾ ವಲಯ ಆತ್ಮ ನಿರ್ಭರ್ ಮಾಡಲು ಸಾಕಷ್ಟು ಕ್ರಮ ತೆಗೆದುಕೊಂಡಿದೆ. ಒಂದು ಲಕ್ಷ ಕೋಟಿಗೂ ಅಧಿಕ ರಕ್ಷಣಾ ವಲಯದಲ್ಲಿ ಭಾರತ ಉತ್ಪಾದನೆ ಮಾಡುತ್ತಿದೆ. ಬ್ರಹ್ಮಾಸ್ ಅನ್ನು ರಫ್ತು ಮಾಡಲಾಗುತ್ತಿದೆ. ಸೈನಿಕರ ಹಿತ ಕಾಯುತ್ತಿದೆ. ಒನ್ ಯಾರ್ಂಕ್ ಒನ್ ಪೆನ್ಷನ್ ಯೋಜನೆ ಜಾರಿ ಮಾಡಿದೆ. ರಾಷ್ಟ್ರೀಯ ಯುದ್ಧ ಸ್ಮಾರಕ ನಿರ್ಮಿಸಿದೆ ಎಂದರು.

    ಕೇಂದ್ರ ಸರ್ಕಾರದ ಗ್ರೂಪ್ ಸಿ ಡಿ ಯಲ್ಲಿ ಸಂದರ್ಶನ ರದ್ದು ಮಾಡಿದೆ. ಯುವಕರಿಗೆ ಹೆಚ್ಚು ಉದ್ಯೋಗ ನೀಡಲಾಗುತ್ತಿದೆ. ಹೊಸ ಶಿಕ್ಷಣ ನೀತಿ ಜಾರಿ ಮಾಡಿದೆ. ಭಾರತೀಯ ಭಾಷೆಯಲ್ಲಿ ಎಂಜಿನಿಯರಿಂಗ್ ಮಾಡಬಹುದು. 7 IIT, 16IIIT, 6 IIM, 315 ಮೆಡಿಕಲ್ ಕಾಲೇಜು, 390 ವಿವಿ ನಿರ್ಮಾಣ ಮಾಡಲಿದೆ. ಪೇಪರ್ ಲೀಕ್ ತಡೆಯಲು ಕಾನೂನು ಕ್ರಮ ತೆಗೆದುಕೊಳ್ಳಲು ನನ್ನ ಸರ್ಕಾರ ಬದ್ಧವಾಗಿದೆ. ಅಕ್ರಮ ತಡೆಯಲು ಕಾನೂನು ಜಾರಿ ಮಾಡಿದೆ. ಪರೀಕ್ಷಾ ಸುಧಾರಣೆಗೆ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.

    ನಳಂದಾ ಕ್ಯಾಂಪಸ್ ಅಭಿವೃದ್ಧಿಪಡಿಸಿದೆ. ಅದೊಂದು ವಿವಿ ಮಾತ್ರವಲ್ಲ, ಅದು ವಿಶ್ವದ ಜ್ಞಾನಕೇಂದ್ರ. ಇದು ಮುಂದಿನ ದಿನಗಳ ವಿಶ್ವದ ಗಮನ ಸೆಳೆದಿದೆ. ತೀರ್ಥ ಕ್ಷೇತ್ರ, ಆಧ್ಯಾತ್ಮಿಕ ಕ್ಷೇತ್ರಗಳನ್ನು ಅಭಿವೃದ್ಧಿ ಪಡಿಸಿದೆ. ಚಂದ್ರಯಾನ ಯಶಸ್ವಿಗೆ ನಾವು ಗರ್ವಪಡಬೇಕು. ದೇಶದ ಬಲಿಷ್ಠ ಆರ್ಥಿಕತೆಯಾಗುತ್ತಿದೆ. ಅತ್ಯುತ್ತಮ ಚುನಾವಣಾ ವ್ಯವಸ್ಥೆಗೆ ಪ್ರಜಾಪ್ರಭುತ್ವದ ತಾಯಿಯಾಗಿರಲು ನಾವು ಗರ್ವ ಪಡಬೇಕು ಎಂದರು.

  • ಚಲನಚಿತ್ರ ಅಕಾಡೆಮಿಗೆ ನಟ, ಸಂಗೀತ ನಿರ್ದೇಶಕ ಸಾಧು ಕೋಕಿಲಾ ಅಧ್ಯಕ್ಷರಾಗಿ ನೇಮಕ

    ಚಲನಚಿತ್ರ ಅಕಾಡೆಮಿಗೆ ನಟ, ಸಂಗೀತ ನಿರ್ದೇಶಕ ಸಾಧು ಕೋಕಿಲಾ ಅಧ್ಯಕ್ಷರಾಗಿ ನೇಮಕ

    ರ್ನಾಟಕ ಚಲನಚಿತ್ರ ಅಕಾಡೆಮಿಗೆ (Chalanachitra Academy) ಅಧ್ಯಕ್ಷರಾಗಿ (President) ಹಾಸ್ಯ ನಟ, ಸಂಗೀತ ನಿರ್ದೇಶಕ ಸಾಧು ಕೋಕಿಲಾರನ್ನು (Sadhu Kokila) ಸರ್ಕಾರ ನೇಮಕ ಮಾಡಿ ಆದೇಶ ಹೊರಡಿಸಿದೆ. ನಿಗಮ ಮಂಡಳಿಗೆ 44 ಜನರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೇಮಕ ಮಾಡಿದ್ದು, ಅದರಲ್ಲಿ ಚಲನಚಿತ್ರ ಅಕಾಡೆಮಿಯು ಸೇರಿದೆ.

    ಹಲವು ದಿನಗಳಿಂದ ಅಧ್ಯಕ್ಷ ಗಾದೆಗೆ ಹಲವಾರು ಹೆಸರುಗಳು ಕೇಳಿ ಬಂದಿದ್ದವು, ಅದರಲ್ಲಿ ಸಾಧು ಕೋಕಿಲಾ ಹೆಸರೂ ಇತ್ತು. ಸಿದ್ದರಾಮಯ್ಯನವರಿಗೆ ಆಪ್ತರಾಗಿರುವ ಮತ್ತು ಕಾಂಗ್ರೆಸ್ ಪಕ್ಷದೊಂದಿಗೆ ಗುರುತಿಸಿಕೊಂಡಿರುವ ಸಾಧು ಕೋಕಿಲಾ ಅವರನ್ನೇ ಅಧ್ಯಕ್ಷರನ್ನಾಗಿ ಮಾಡುತ್ತಾರೆ ಎನ್ನುವ ಮಾತೂ ಕೇಳಿ ಬಂದಿತ್ತು. ಅದೇ ನಿಜವಾಗಿದೆ.

    ಹಾಸ್ಯ ನಟರಾಗಿ, ಸಂಗೀತ ನಿರ್ದೇಶಕರಾಗಿ ಸಾಕಷ್ಟು ಸಿನಿಮಾಗಳಿಗೆ ಕೆಲಸ ಮಾಡಿರುವ ಸಾಧು ಕೋಕಿಲಾ, ನಿರ್ಮಾಪಕರಾಗಿ, ನಿರ್ದೇಶಕರಾಗಿಯೂ ಕೆಲಸ ಮಾಡಿದ್ದಾರೆ. ಕಿರುತೆರೆ, ಹಿರಿತೆರೆಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಈ ಆಯ್ಕೆ ಸೂಕ್ತ ಎನ್ನುವುದು ಹಲವರ ಅಭಿಪ್ರಾಯ. ಇಂದು ಅಕಾಡೆಮಿಯ ವತಿಯಿಂದ ಚಿತ್ರೋತ್ಸವ ನಡೆಯಲಿದೆ. ಇಂದು ಅವರು ಅಧಿಕಾರ ವಹಿಸುತ್ತಾರಾ ಕಾದು ನೋಡಬೇಕು.

  • ಮೆಟ್ರೋದಲ್ಲಿ ಸಂಚರಿಸಿ ಸಹಪ್ರಯಾಣಿಕರಲ್ಲಿ ಅಚ್ಚರಿ ಮೂಡಿಸಿದ ರಾಷ್ಟ್ರಪತಿ ಮುರ್ಮು

    ಮೆಟ್ರೋದಲ್ಲಿ ಸಂಚರಿಸಿ ಸಹಪ್ರಯಾಣಿಕರಲ್ಲಿ ಅಚ್ಚರಿ ಮೂಡಿಸಿದ ರಾಷ್ಟ್ರಪತಿ ಮುರ್ಮು

    ನವದೆಹಲಿ: ದೇಶದ ಪ್ರಥಮ ಪ್ರಜೆ, ರಾಷ್ಟ್ರಪತಿ ದ್ರೌಪದಿ ಮುರ್ಮು (Draupadi Murmu) ಶ್ರೀಸಾಮಾನ್ಯರ ರೀತಿ ದೆಹಲಿ ಮೆಟ್ರೋದಲ್ಲಿ ಸಂಚರಿಸಿದ್ದಾರೆ.

    ಭಾರೀ ಭದ್ರತೆಯ ಅಂಗರಕ್ಷಕ ಪಡೆಯನ್ನು ತೊರೆದ ರಾಷ್ಟ್ರಪತಿಗಳು ಕೆಲ ಹೊತ್ತು ಮೆಟ್ರೋದಲ್ಲಿ ಸಂಚರಿಸಿ ಸಹ ಪ್ರಯಾಣಿಕರ ಅಚ್ಚರಿಗೆ ಕಾರಣರಾದರು. ದೇಶದ ಪ್ರಥಮಪ್ರಜೆಯನ್ನು ಹತ್ತಿರದಿಂದ ಕಂಡು ಜನ ಸಂಭ್ರಮಿಸಿದರು. ಪಕ್ಕದಲ್ಲೇ ಕುಳಿತಿದ್ದ ವಿದ್ಯಾರ್ಥಿಗಳ ಜೊತೆ ರಾಷ್ಟ್ರಪತಿಗಳು ಸಂವಾದ ನಡೆಸಿದ್ರು.

    ದೆಹಲಿ ಮೆಟ್ರೊದ ನೇರಳೆಮಾರ್ಗದಲ್ಲಿ ಮುರ್ಮು ಪ್ರಯಾಣಿಸಿದ್ದಾರೆ. ಕಾಶ್ಮೀರ್ ಗೇಟ್- ರಾಜಾ ನಹರ್ ಸಿಂಗ್ (ಬಲ್ಲಭಗಢ) ನಡುವೆ ಈ ನೇರಳೆ ಮಾರ್ಗ ಚಲಿಸುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಶ್ರೀಕೃಷ್ಣ ಪಾಂಡವರಿಗಾಗಿ 5 ಗ್ರಾಮಗಳನ್ನ ಕೇಳಿದ, ನಾವು 3 ಸ್ಥಳ ಕೇಳುತ್ತಿದ್ದೇವೆ – ʻಮಹಾಭಾರತʼದ ಪಾಠ ಹೇಳಿದ ಯೋಗಿ