Tag: prerna

  • ತಾಯಿ, ಪತ್ನಿ ಜೊತೆ ಬಂದು ಮತದಾನ ಮಾಡಿದ ನಟ ಧ್ರುವ ಸರ್ಜಾ

    ತಾಯಿ, ಪತ್ನಿ ಜೊತೆ ಬಂದು ಮತದಾನ ಮಾಡಿದ ನಟ ಧ್ರುವ ಸರ್ಜಾ

    ನ್ನಡದ ಹೆಸರಾಂತ ನಟ ಧ್ರುವ ಸರ್ಜಾ (Dhruva Sarja) ಪತ್ನಿ ಪ್ರೇರಣಾ (Prerna) ಹಾಗೂ ತಾಯಿ ಜೊತೆ ಆಗಮಿಸಿ ಮತದಾನ (Voting) ಮಾಡಿದ್ದಾರೆ. ಬೆಂಗಳೂರಿನ ಕೆಆರ್ ರಸ್ತೆಯ ಶ್ರೀ ಶಾರದಾ ದೇವಿ ಹೊಲಿಗೆ ತರಬೇತಿ ಕೇಂದ್ರದಲ್ಲಿ ಕುಟುಂಬ ಸಮೇತ ಬಂದು ಮತಹಾಕಿದ್ದಾರೆ. ಜೊತೆಗೆ ಮತದಾನದ ಅರಿವನ್ನೂ ಅವರು ಮೂಡಿಸಿದ್ದಾರೆ.

    ಡೆವಿಲ್ ಸಿನಿಮಾದ ಚಿತ್ರೀಕರಣ ವೇಳೆ ಕೈಗೆ ಏಟು ಮಾಡಿಕೊಂಡು ಶಸ್ತ್ರ ಚಿಕಿತ್ಸೆಗೆ ಒಳಗಾಗಿರುವ ದರ್ಶನ್, ಇದೀಗ ಪತ್ನಿ ವಿಜಯಲಕ್ಷ್ಮಿ ಸಮೇತ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಮತಗಟ್ಟೆಗೆ ಬಂದು ಮತದಾನ ಮಾಡಿದ್ದಾರೆ. ಸರತಿಸಾಲಿನಲ್ಲಿ ನಿಂತು ಮತದಾನ ಮಾಡಿದ್ದಾರೆ ದರ್ಶನ್ ಮತ್ತು ವಿಜಯಲಕ್ಷ್ಮಿ.

    ಕನ್ನಡದ ಹೆಸರಾಂತ ನಟಿ ರಚಿತಾ ರಾಮ್ ಕತ್ರಿಗುಪ್ಪೆಯಲ್ಲಿ ಮತದಾನ ಮಾಡಿದರು. ಸಾಮಾನ್ಯರಂತೆ ಅರ್ಧ ಗಂಟೆಗೂ ಹೆಚ್ಚು ಕಾಲ ಸರದಿ ಸಾಲಿನಲ್ಲಿ ನಿಂತು ತಮ್ಮ ಹಕ್ಕನ್ನು ಚಲಾಯಿಸಿದರು. ಅಭಿಮಾನಿಗಳು ರಚಿತಾ ಅವರ ಜೊತೆ ಸೆಲ್ಫಿ ತೆಗೆಸಿಕೊಂಡು ಸಂಭ್ರಮಸಿದರು.

     

    ಮತದಾನದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ರಚಿತಾ, ‘ಮನೆಯಲ್ಲಿ ಕೂತು ಕಾಮೆಂಟ್ ಮಾಡೋದಕ್ಕಿಂದ ಬಂದು ವೋಟ್ ಮಾಡಿ. ವೋಟ್ ಮಾಡದೇ ಬ್ಲೇಮ್ ಮಾಡಬೇಡಿ, ನಮ್ಮ ನಾಯಕರ ಆಯ್ಕೆ ಮಾಡಲೇಬೇಕು. ಬಿಸಿಲು ಅಂತ ಮನೆಯಲ್ಲಿ ಕೂರಬೇಡಿ, ಸಂಜೆವರೆಗೂ ಟೈಂ ಇದೆ ಬಂದು ವೋಟ್ ಮಾಡಿ. ಹಿರಿಯನಾಗರೀಕರೆ ಉತ್ಸಾಹದಿಂದ ವೋಟ್ ಮಾಡುವಾಗ ಯುವಕರು ಯಾಕೆ ಮನೆಯಲ್ಲಿ ಕೂರಬೇಕು’ ಎಂದು ಅವರು ಪ್ರಶ್ನೆ ಮಾಡಿದರು.

  • ಗಂಡು ಮಗುವಿಗೆ ತಂದೆಯಾದ ನಟ ಧ್ರುವ ಸರ್ಜಾ

    ಗಂಡು ಮಗುವಿಗೆ ತಂದೆಯಾದ ನಟ ಧ್ರುವ ಸರ್ಜಾ

    ನ್ನಡದ ಹೆಸರಾಂತ ನಟ ಧ್ರುವ ಸರ್ಜಾ  (Dhruva Sarja) ಪತ್ನಿ ಪ್ರೇರಣಾ ಗಂಡು ಮಗುವಿಗೆ (Baby boy)ಜನ್ಮ ನೀಡಿದ್ದಾರೆ. ಬೆಂಗಳೂರಿನ ಬಸವನಗುಡಿಯ ಖಾಸಗಿ ಆಸ್ಪತ್ರೆಯಲ್ಲಿ ಮಗುವಿನ ಜನನವಾಗಿದೆ. ಮೊನ್ನೆಯಷ್ಟೇ ಪ್ರೇರಣಾ ಅವರ ಸೀಮಂತ ಕಾರ್ಯಕ್ರಮವನ್ನು ಅದ್ಧೂರಿಯಾಗಿ ನೆರವೇರಿಸಿದ್ದರು ಧ್ರುವ ಸರ್ಜಾ. ಈ ದಂಪತಿಗೆ ಈಗಾಗಲೇ ಒಂದು ಹೆಣ್ಣು ಮಗುವಿದೆ.

    ಮೊನ್ನೆಯಷ್ಟೇ ನಡೆದಿತ್ತು ಸೀಮಂತ

    ಸಿಹಿಸುದ್ದಿ ಜೊತೆ ಇತ್ತೀಚೆಗೆ ಧ್ರುವ ಪತ್ನಿ ಪ್ರೇರಣಾಗೆ (Prerana) ಸೀಮಂತ (Baby Shower) ಕಾರ್ಯಕ್ರಮ ನೆರವೇರಿತ್ತು, ಈ ಕುರಿತ ವಿಡಿಯೋವೊಂದನ್ನ ನಟ ಶೇರ್ ಮಾಡಿದ್ದರು. ಪತ್ನಿ ಪ್ರೇರಣಾ ಸೀಮಂತ ಸಂಭ್ರಮ ವಿಡಿಯೋವನ್ನ ನಟ ಹಂಚಿಕೊಂಡಿದ್ದು, ಹಸಿರು ಬಣ್ಣದ ಸೀರೆಯಲ್ಲಿ ಪ್ರೇರಣಾ ಕಂಗೊಳಿಸಿದ್ದರು. ಲೈಟ್ ಬಣ್ಣದ ಉಡುಗೆಯಲ್ಲಿ ಧ್ರುವ ಕಾಣಿಸಿಕೊಂಡಿದ್ದರು.

    ಕನಕಪುರ ರಸ್ತೆಯ ಫಾರ್ಮ್ ಹೌಸ್‌ನಲ್ಲಿ ಪ್ರೇರಣಾ ಸೀಮಂತ ಶಾಸ್ತ್ರ ಅದ್ದೂರಿಯಾಗಿ ನಡೆಯಿತು. ಚಿರು ಸರ್ಜಾ (Chiru) ಫೋಟೋವನ್ನ ಫೋನ್‌ನಲ್ಲಿ ಧ್ರುವ ಪುತ್ರಿ ನೋಡ್ತಿರುವ ತುಣುಕು ಗಮನ ಸೆಳೆಯುತ್ತಿದೆ. ಧ್ರುವ ದಂಪತಿ, ಮಗಳಿಗೆ ಚಿರು ಅಂತ ಹೆಸರು ಹೇಳಿ ಕೊಡುತ್ತಿರೋದು ಮುದ್ದಾಗಿದೆ.

     

    ಮನೆಗೆ ಕಳೆದ ವರ್ಷ ಮುದ್ದು ಮಗಳ ಆಗಮನವಾಗಿದೆ. 2ನೇ ಮಗುವಿನ ನಿರೀಕ್ಷೆಯಲ್ಲಿರುವ ಪ್ರೇರಣಾ, 8 ತಿಂಗಳ ತುಂಬು ಗರ್ಭಿಣಿಯಾಗಿದ್ದಾರೆ.  ಸೀಮಂತ ಶಾಸ್ತ್ರ ವಿಡಿಯೋ ಹಂಚಿಕೊಳ್ಳುತ್ತಿದ್ದಂತೆ ಆಪ್ತರು, ಅಭಿಮಾನಿಗಳು ವಿಶ್‌ ಮಾಡಿದ್ದಾರೆ.  ಆಗಸ್ಟ್ 25ರಂದು ವಿಶೇಷ ವಿಡಿಯೋ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಧ್ರುವ ಸರ್ಜಾ 2ನೇ ಮಗುವಿನ ಬಗ್ಗೆ ಗುಡ್ ನ್ಯೂಸ್ ಹೇಳಿದ್ದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಟ ಧ್ರುವ ಸರ್ಜಾ ಪತ್ನಿ ಪ್ರೇರಣಾಗೆ ಇಂದು ಸೀಮಂತ ಕಾರ್ಯ : ಖಾಸಗಿ ಹೋಟೆಲ್ ನಲ್ಲಿ ನಡೆದ ಕಾರ್ಯಕ್ರಮ

    ನಟ ಧ್ರುವ ಸರ್ಜಾ ಪತ್ನಿ ಪ್ರೇರಣಾಗೆ ಇಂದು ಸೀಮಂತ ಕಾರ್ಯ : ಖಾಸಗಿ ಹೋಟೆಲ್ ನಲ್ಲಿ ನಡೆದ ಕಾರ್ಯಕ್ರಮ

    ಟ ಧ್ರುವ ಸರ್ಜಾ ಬಾಳಿನಲ್ಲಿ ಸಂಭ್ರಮ ತಂದಿದ್ದಾರೆ ಪತ್ನಿ ಪ್ರೇರಣಾ. ಸಹೋದರ ಚಿರುವನ್ನು ಕಳೆದುಕೊಂಡು ದುಃಖದಲ್ಲಿದ್ದ ಧ್ರುವ ಮತ್ತು ಸರ್ಜಾ ಕುಟುಂಬಕ್ಕೆ ಹೊಸ ಅತಿಥಿಯ ಆಗಮನವಾಗುತ್ತಿದ್ದು, ಇಂದು ಪ್ರೇರಣಾ ಅವರಿಗೆ ಸೀಮಂತ ಕಾರ್ಯ ಮಾಡಲಾಗಿದೆ. ಈ ಕಾರ್ಯಕ್ರಮದಲ್ಲಿ ಅರ್ಜುನ್ ಸರ್ಜಾ ಸೇರಿದಂತೆ ಸರ್ಜಾ ಕುಟುಂಬದ ಬಹುತೇಕರು ಹಾಜರಿದ್ದರು. ಮತ್ತು ಪ್ರೇರಣಾ ಕುಟುಂಬವೂ ಭಾಗಿ ಆಗಿತ್ತು.

    ಮೊನ್ನೆಯಷ್ಟೇ ಅಭಿಮಾನಿಗಳ ಜೊತೆ ಈ ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದ ಧ್ರುವ ಸರ್ಜಾ, ಪುಟ್ಟ ಕಂದಮ್ಮನಿಗಾಗಿ ಹಾರೈಸಿ ಎಂದು ಮನವಿ ಮಾಡಿದ್ದರು. ಇಂದು ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಪತ್ನಿಯ ಸೀಮಂತ ಮಾಡಿದ್ದಾರೆ. ಈ ಸಂದರ್ಭದಲ್ಲಿ ಚಿರು ಅನುಪಸ್ಥಿತಿಯನ್ನೂ ನೆನೆದು ಬೇಸರಿಸಿಕೊಂಡಿದ್ದಾರೆ. ಚಿರುವನ್ನು ಬಿಟ್ಟು ಯಾವುದೇ ಕಾರ್ಯಕ್ರಮವನ್ನು ಮಾಡಿಕೊಂಡವರಲ್ಲ ಧ್ರುವ. ಹಾಗಾಗಿ ಸೀಮಂತ ಕಾರ್ಯದಲ್ಲಿ ಅಣ್ಣ ಇರಬೇಕಿತ್ತು ಎನ್ನುವುದು ಸಹಜ. ಇದನ್ನೂ ಓದಿ:ʻಬಿಗ್ ಬಾಸ್ʼ ಕನ್ನಡ ಸೀಸನ್ 9ಕ್ಕೆ ಕೌಂಟ್ ಡೌನ್ ಶುರು

    ಈಗಾಗಲೇ ಸರ್ಜಾ ಕುಟುಂಬದಲ್ಲಿ ಚಿರು ಪುತ್ರ ರಾಯನ್ ಲವಲವಿಕೆಗೆ ತಂದಿದ್ದು, ಇದೀಗ ಧ್ರುವ ಸರ್ಜಾ ಮಗು ಕೂಡ ಜೊತೆಯಾಗಲಿದೆ. ಎರಡೂ ಕಂದಮ್ಮಗಳು ಚಿರುವಿನ ನೋವನ್ನು ಸರ್ಜಾ ಕುಟುಂಬಕ್ಕೆ ಮರೆಸಲಿವೆ. ಸೀಮಂತ ಕಾರ್ಯದಲ್ಲಿ ಸಿನಿಮಾ ಉದ್ಯಮದ ಆಪ್ತರು, ಮೇಘನಾ, ಪ್ರೇರಣಾ ಹಾಗೂ ಸರ್ಜಾ ಕುಟುಂಬ ಸದಸ್ಯರು ಹಾಜರಿದ್ದು, ಪ್ರೇರಣಾಗೆ ಹಾರೈಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • Exclusive : ಗಗನಸಖಿ ಬ್ಯೂಟಿಗೆ ಕಾನೂನನ್ನು ತೂರಿ ರಾಜ್ಯ ಸರ್ಕಾರದಿಂದ ಪ್ರಮುಖ ಹುದ್ದೆ ಕರುಣೆ!

    Exclusive : ಗಗನಸಖಿ ಬ್ಯೂಟಿಗೆ ಕಾನೂನನ್ನು ತೂರಿ ರಾಜ್ಯ ಸರ್ಕಾರದಿಂದ ಪ್ರಮುಖ ಹುದ್ದೆ ಕರುಣೆ!

    ಪವಿತ್ರ ಕಡ್ತಲ
    ಬೆಂಗಳೂರು: ಮಾಜಿ ಗಗನಸಖಿಯೊಬ್ಬರಿಗೆ ರಾಜ್ಯ ಸರ್ಕಾರ ಎರಡೆರಡು ಹುದ್ದೆ ಕರುಣಿಸಿರುವುದು ಈಗ ವಿವಾದಕ್ಕೀಡಾಗಿದೆ. ಚಾಮರಾಜನಗರ ವನ್ಯಜೀವಿ ಮಂಡಳಿಯ ಸದಸ್ಯೆ ಹಾಗೂ ಕೆಪಿಸಿಸಿ ಐಟಿ ಸೆಲ್‍ನ ಜಂಟಿ ಕಾರ್ಯದರ್ಶಿಯನ್ನಾಗಿ ಪ್ರೇರಣಾ ಎಂಬುವವರನ್ನು ನೇಮಕ ಮಾಡಿರುವುದು ರಾಜ್ಯಪಾಲರ ಅಂಗಳ ತಲುಪಿದೆ.

    ಗಗನಸಖಿಯಾಗಿದ್ದ ಪ್ರೇರಣಾಗೆ ಚಾಮರಾಜನಗರ ವನ್ಯಜೀವಿ ಮಂಡಳಿಯಲ್ಲಿ ಸದಸ್ಯೆ ಸ್ಥಾನ ಸಿಕ್ಕಿದೆ. ವಿಚಿತ್ರ ಅಂದ್ರೆ ಸ್ಥಳೀಯರಿಗೆ ಈ ಹುದ್ದೆ ನೀಡಬೇಕು. ಆದರೆ ಬೆಂಗಳೂರಿನಲ್ಲಿರೋ ಉಡುಪಿ ಮೂಲದ ಪ್ರೇರಣಾಗೆ ಈ ಹುದ್ದೆ ನೀಡಿ, ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಇದನ್ನೂ ಓದಿ: ಜಾರ್ಜ್ ಮಗನ ಮೇಲೆ ಸಿಎಂಗೆ ಫುಲ್ ಲವ್ – ಕಾಡಲ್ಲಿ ಸ್ವಂತ ವಾಹನದಲ್ಲಿ ಸವಾರಿಗೆ ಪರ್ಮಿಷನ್

    ಇದರ ಜೊತೆಗೇ ಕಾಂಗ್ರೆಸ್‍ನ ಐಟಿ ಸೆಲ್‍ನಲ್ಲಿ ಜಂಟಿ ಕಾರ್ಯದರ್ಶಿಯ ಹುದ್ದೆಯೂ ಈಕೆಗೆ ಒಲಿದಿದೆ. ಕೆಪಿಸಿಸಿ ಐಟಿ ಸೆಲ್ ಜಂಟಿ ಕಾರ್ಯದರ್ಶಿ ಹುದ್ದೆಗೆ ಖುದ್ದು ಪರಮೇಶ್ವರ್ ಅವರೇ ಶಿಫಾರಸು ಮಾಡಿದ್ದಾರೆ ಎನ್ನುವ ಮಾಹಿತಿ ಮೂಲಗಳಿಂದ ಪಬ್ಲಿಕ್ ಟಿವಿಗೆ ಸಿಕ್ಕಿದೆ.

    ಪ್ರೇರಣಾ ಹುದ್ದೆ ಪ್ರಶ್ನಿಸಿ ಸಾಮಾಜಿಕ ಕಾರ್ಯಕರ್ತ ನಾಗರಾಜ್ ಎನ್ನುವವರು ರಾಜ್ಯಪಾಲರಿಗೂ ಪತ್ರ ನೀಡಿದ್ದಾರೆ. ಅರ್ಹತೆ ಇಲ್ಲದೆ ಇದ್ದರೂ ಈಕೆಗೆ ಹುದ್ದೆ ನೀಡಲಾಗಿದೆ. ಈಕೆಯ ಹಿಂದೆ ದೊಡ್ಡ ರಾಜಕೀಯ ವ್ಯಕ್ತಿಗಳ ಕೈವಾಡ ಇದೆ ಅಂತಾ ದೂರು ನೀಡಲಾಗಿದೆ.

    ಈ ದೂರಿನ ಬಗ್ಗೆ ಸ್ಪಷ್ಟನೆ ಕೊಟ್ಟಿರುವ ಪ್ರೇರಣಾ ನನಗೆ ಕಾಡಿನ ಬಗ್ಗೆ ಅರಿವಿದೆ, ಕೆಲ ಸಹಿಸಲು ಸಾಧ್ಯವಾಗದವರು ಇದನ್ನೆಲ್ಲ ಮಾಡಿದ್ದಾರೆ ಎಂದು ಹೇಳಿದ್ದಾರೆ.ಇದನ್ನೂ ಓದಿ: ಬೆಂಗಳೂರಿಗೆ ಸಚಿವ ಕೆ.ಜೆ. ಜಾರ್ಜ್ ರಾಜನಾದ್ರೆ, ಮಗ ಕಾಡಿಗೆ ರಾಜ!

    https://youtu.be/E9bimxuRhbU

    https://youtu.be/lZGSEDhV8kM