Tag: Prequel

  • ‘ಕಾಂತಾರ’ ಪ್ರೀಕ್ವೆಲ್ ಸಿನಿಮಾಗೆ ಮಾಲಿವುಡ್ ನಟ ಎಂಟ್ರಿ

    ‘ಕಾಂತಾರ’ ಪ್ರೀಕ್ವೆಲ್ ಸಿನಿಮಾಗೆ ಮಾಲಿವುಡ್ ನಟ ಎಂಟ್ರಿ

    ರಿಷಬ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡುತ್ತಿರುವ ‘ಕಾಂತಾರ’ ಪ್ರೀಕ್ವೆಲ್ ಟೀಮ್‍ ನಿಂದ ಮತ್ತೊಂದು ಹೊಸ ಸುದ್ದಿ ಬಂದಿದೆ. ಸದ್ದಿಲ್ಲದೇ ರಿಷಬ್ ಕಲಾವಿದರನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದು, ಈ ಸಿನಿಮಾದ ಮಹತ್ವದ ಪಾತ್ರವೊಂದನ್ನು ಮಾಲಿವುಡ್ ನಟ ಜಯರಾಮ್  (Jayaram) ನಿರ್ವಹಿಸುತ್ತಿದ್ದಾರೆ. ಈ ಹಿಂದೆ ಇವರು ಶಿವರಾಜ್ ಕುಮಾರ್ ನಟನೆಯ ಘೋಸ್ಟ್ ಸಿನಿಮಾದಲ್ಲೂ ನಟಿಸಿದ್ದರು.

    ರಿಷಬ್ ಶೆಟ್ಟಿ (Rishab Shetty) ಸದ್ಯ ‘ಕಾಂತಾರ’ (Kantara 1) ಪ್ರೀಕ್ವೆಲ್ ಚಿತ್ರದ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ಮೇ.7 ರಂದು ಬೈಂದೂರಿನ ಕೆರಾಡಿಯಲ್ಲಿ ರಿಷಬ್ ಮತದಾನ ಮಾಡಿ, ಈ ವೇಳೆ ಕಾಂತಾರ ಪಾರ್ಟ್ 1 ಬಗ್ಗೆ ರಿಷಬ್ ಮಾಹಿತಿ ನೀಡಿದ್ದರು.

    ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದ ರಿಷಬ್, ಜನ ಸಿನಿಮಾವನ್ನು ಚಿತ್ರಮಂದಿರದಲ್ಲಿ ನೋಡಿದ್ರೆ ಒಳ್ಳೆಯದು. ಕಾಂತಾರ ಚಿತ್ರದ ಕುರಿತು ಅಧಿಕೃತವಾಗಿ ಹೊಂಬಾಳೆ ಸಂಸ್ಥೆ ಎಲ್ಲವನ್ನೂ ಘೋಷಣೆ ಮಾಡುತ್ತದೆ. ಈಗಾಗಲೇ ‘ಕಾಂತಾರ’ ಪ್ರೀಕ್ವೆಲ್ ಚಿತ್ರೀಕರಣ ಆರಂಭವಾಗಿದೆ. ಸಿನಿಮಾದ ಕೆಲಸ ಬಹಳ ಚೆನ್ನಾಗಿ ನಡೆಯುತ್ತಿದೆ ಎಂದು ಮಾಹಿತಿ ಹಂಚಿಕೊಂಡಿದ್ದರು.

    ‘ಕಾಂತಾರ’ ಸಕ್ಸಸ್ ನಂತರ ಮೊದಲಿಗಿಂತ ಜವಾಬ್ದಾರಿ ಹೆಚ್ಚಾಗಿದೆ. ನಮ್ಮ ಸಿನಿಮಾಗಾಗಿ ದೊಡ್ಡ ತಂಡ ಕೆಲಸ ಮಾಡುತ್ತಿದೆ ಎಂದಿದ್ದರು. ಹೊಂಬಾಳೆ ಸಂಸ್ಥೆ ಸಿಕ್ಕಿರುವುದು ಫಿಲ್ಮ್ ಮೇಕರ್‌ಗೆ ಒಂದು ಪುಣ್ಯ ಎಂದು ರಿಷಬ್‌ ಖುಷಿಯಿಂದ ಮಾತನಾಡಿದ್ದರು.  ಕಾಂತಾರಗಾಗಿ ಅದ್ಭುತವಾದ ಟೆಕ್ನಿಷಿಯನ್ಸ್‌ಗಳು ಕೆಲಸ ಮಾಡುತ್ತಿದ್ದಾರೆ. ನಿರಂತರವಾಗಿ ಪಾರ್ಟ್ ಬೈ ಪಾರ್ಟ್ ಚಿತ್ರೀಕರಣ ನಡೆಯುತ್ತದೆ ಎಂದು ರಿಷಬ್ ಹೇಳಿದ್ದರು.

    ಜನ ‘ಕಾಂತಾರ’ ಚಿತ್ರವನ್ನು ಗೆಲ್ಲಿಸಿದ್ದಾರೆ ಬಾಯಲ್ಲಿ ಏನು ಹೇಳಲ್ಲ. ಕೆಲಸದ ಮೂಲಕ ಮಾಡಿ ತೋರಿಸಬೇಕು ಎಂದು ಅಂದುಕೊಂಡಿದ್ದೇನೆ. ನನಗೆ ಯಾವ ಒತ್ತಡವು ಇಲ್ಲ. ಆಗ ನನಗೆ ಬಹಳ ದೊಡ್ಡ ಚಿತ್ರವಾಗಿತ್ತು. ಸಿನಿಮಾ ಯಾವಾಗಲೂ ಕಲಿಯುವ ಪ್ರೊಸೆಸ್ ಅದನ್ನು ಮಾಡುತ್ತಿದ್ದೇನೆ ಎಂದಿದ್ದರು ರಿಷಬ್.‌

     

    ಈ ವೇಳೆ, ಸಿನಿಮಾಗೋಸ್ಕರ ಒಂದು ವರ್ಷದಿಂದ ಗಡ್ಡ ಕೂದಲು ಬಿಟ್ಟಿರೋದಾಗಿ ತಿಳಿಸಿದ್ದರು. ಇನ್ನೂ ‘ಕಾಂತಾರ 1’ ಚಿತ್ರೀಕರಣ ಪೂರ್ತಿ ಮುಗಿದ ಮೇಲೆ ಅಭಿಮಾನಿಗಳಿಗೆ, ಮಾಧ್ಯಮದವರಿಗೆ ಚಿತ್ರೀಕರಣ ಸ್ಥಳಕ್ಕೆ ಕರೆಯುತ್ತೇವೆ ಎಂದು ರಿಷಬ್ ತಿಳಿಸಿದ್ದಾರೆ. ಚಿತ್ರೀಕರಣ ಮುಗಿಯುವವರೆಗೆ ಬಹಳ ಗೌಪ್ಯತೆಯನ್ನು ಕಾಪಾಡಬೇಕಾಗುತ್ತದೆ ಎಂದು ಹೇಳಿದ್ದಾರೆ. ನಮ್ಮ ಸಿನಿಮಾ ಪೂರ್ತಿ ಕರಾವಳಿ ಭಾಗದಲ್ಲಿ ಚಿತ್ರೀಕರಣ ಮಾಡುತ್ತೇವೆ ಎಂದು ರಿಷಬ್ ಮಾತನಾಡಿದ್ದರು.

  • ‘ಕಾಂತಾರ 2’ ಚಿತ್ರಕ್ಕೆ ಮುಹೂರ್ತ ದಿನಾಂಕ, ಸ್ಥಳ ಫಿಕ್ಸ್ : ಬದಲಾಗಲ್ಲ ರಿಷಬ್ ನಂಬಿಕೆ

    ‘ಕಾಂತಾರ 2’ ಚಿತ್ರಕ್ಕೆ ಮುಹೂರ್ತ ದಿನಾಂಕ, ಸ್ಥಳ ಫಿಕ್ಸ್ : ಬದಲಾಗಲ್ಲ ರಿಷಬ್ ನಂಬಿಕೆ

    ಟ, ನಿರ್ದೇಶಕ ರಿಷಬ್ ಶೆಟ್ಟಿ (Rishabh Shetty) ‘ಕಾಂತಾರ’  ಪ್ರೀಕ್ವೆಲ್ ಸ್ಕ್ರಿಪ್ಟ್ ಅನ್ನು ಬಹುತೇಕ ಮುಗಿಸಿದ್ದಾರಂತೆ. ಕಾಂತಾರ (Kantara) ಚಿತ್ರಕ್ಕೆ ಮಾತುಗಳನ್ನೂ ಹೆಣೆದಿರುವ ಅವರು ಸ್ಕ್ರಿಪ್ಟ್ ಗೆ ಅಂತಿಮ ಸ್ಪರ್ಷ ನೀಡುತ್ತಿದ್ದಾರೆ ಎನ್ನುವ ಮಾಹಿತಿ ಇದೆ. ಇದರ ಜೊತೆ ಜೊತೆಗೆ ಶೂಟಿಂಗ್ (Shooting) ಸ್ಥಳಗಳನ್ನೂ ಅವರು ಹುಡುಕುತ್ತಿದ್ದು, ಈ ಎಲ್ಲವನ್ನೂ ಮುಗಿಸಿಕೊಂಡು ಆಗಸ್ಟ್ ನಲ್ಲಿ ಚಿತ್ರಕ್ಕೆ ಮುಹೂರ್ತ ಮಾಡಲಿದ್ದಾರೆ ಎನ್ನುವುದು ಅವರ ತಂಡದಿಂದ ಸಿಕ್ಕಿರುವ ಮಾಹಿತಿ.

    ಕಾಂತಾರ ಸಿನಿಮಾದ ಮುಹೂರ್ತ ಕಳೆದ ಬಾರಿ ಯಾವ ದೇವಸ್ಥಾನದಲ್ಲಿ ಆಗಿತ್ತೋ, ಮತ್ತೆ ಅದೇ ದೇವಸ್ಥಾನದಲ್ಲೇ ಕಾಂತಾರ ಪ್ರಿಕ್ವೆಲ್ (Prequel) ಮುಹೂರ್ತ ಆಗಲಿದೆಯಂತೆ. ಆನೆಗುಡಿ (Anegudi) ಗಣಪತಿ ದೇವಸ್ಥಾನದಲ್ಲೇ ಮುಹೂರ್ತ ಮಾಡಲು ಸಿದ್ದತೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಆಗಸ್ಟ್ 27ನೇ ತಾರೀಖು ಕಾಂತಾರ ಪ್ರಕ್ವೆಲ್ ಗೆ ಮಹೂರ್ತ ನಿಗದಿಯಾಗಿದೆ. ಕಾಂತಾರ ಮೊದಲ ಭಾಗ ಕೂಡ ಆಗಸ್ಟ್ ನಲ್ಲಿ ಮುಹೂರ್ತ ಕಂಡಿತ್ತು. ಇದನ್ನೂ ಓದಿ:ಕನಕದಾಸನಾಗಿ ಕಂಗೊಳಿಸಲಿದ್ದಾರೆ ರಿಯಲ್‌ ಸ್ಟಾರ್‌ ಉಪೇಂದ್ರ

    ಆಗಸ್ಟ್ ನಲ್ಲಿ ಕಾಂತಾರ ಪ್ರಿಕ್ವೆಲ್ ಗೆ ಮುಹೂರ್ತವಾದರೆ ಸೆಪ್ಟೆಂಬರ್ ತಿಂಗಳಿಂದ ಚಿತ್ರೀಕರಣ ಆರಂಭಿಸಲಿದ್ದಾರಂತೆ ರಿಷಬ್ ಶೆಟ್ಟಿ. ಪಂಜುರ್ಲಿ ದೈವದ ಸುತ್ತವೇ ಚಿತ್ರಕಥೆ ಇರುವುದರಿಂದ ಕೆರಾಡಿ ಸುತ್ತಮುತ್ತವೇ ಶೂಟಿಂಗ್ ಆಗಲಿದೆ ಎನ್ನುವ ಮಾತು ಹರಿದಾಡುತ್ತಿದೆ. ಜೊತೆಗೆ ‘ಕಾಂತಾರ’ 2 ನಲ್ಲಿ ಯಾರೆಲ್ಲಾ ಕಲಾವಿದರು ಇರುತ್ತಾರೆ ಎಂಬ ಕುತೂಹಲವಿದೆ.

    ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಅವರು ಕಾಂತಾರ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚಿದ್ದಾರೆ. ಹೊಂಬಾಳೆ ಫಿಲ್ಮ್ಸ್(Hombale Films) ನಿರ್ಮಾಣದಲ್ಲಿ ಕಾಂತರ ಚಿತ್ರ ಮೂಡಿ ಬಂದಿತ್ತು. ರಿಷಬ್‌ಗೆ ಸಪ್ತಮಿ ಗೌಡ (Saptami Gowda) ನಾಯಕಿಯಾಗಿ ನಟಿಸಿದ್ದರು. ದೈವ ಕಥೆಯುಳ್ಳ ಈ ಚಿತ್ರ ಸಕ್ಸಸ್ ಕಂಡಿತ್ತು. ಹಾಗಾಗಿ ಕಾಂತಾರ 2 ಚಿತ್ರದ ಮೇಲೆ ಅತೀ ನಿರೀಕ್ಷೆ ಮೂಡಿದೆ.

  • ‘ಭೈರತಿ ರಣಗಲ್’ ಪ್ಯಾನ್ ಇಂಡಿಯಾ ಸಿನಿಮಾ: ಮಾ.5ಕ್ಕೆ ಟೈಟಲ್ ಡಿಸೈನ್ ರಿಲೀಸ್

    ‘ಭೈರತಿ ರಣಗಲ್’ ಪ್ಯಾನ್ ಇಂಡಿಯಾ ಸಿನಿಮಾ: ಮಾ.5ಕ್ಕೆ ಟೈಟಲ್ ಡಿಸೈನ್ ರಿಲೀಸ್

    ಫ್ತಿ (Mufti,) ಸಿನಿಮಾದ ನಂತರ ನಿರ್ದೇಶಕ ನರ್ತನ್ (Narthan) ಹಾಗೂ ನಟ ಶಿವರಾಜ್ ಕುಮಾರ್ (Shivraj Kumar) ಮತ್ತೆ ಒಂದಾಗಿದ್ದು, ಈ ಬಾರಿ ಜೋಡಿಯು ಪ್ಯಾನ್ ಇಂಡಿಯಾ (Pan India) ಸಿನಿಮಾವನ್ನು ಮಾಡಲಿದೆ. ‘ಭೈರತಿ ರಣಗಲ್’ (Bhairati Rangal) ಹೆಸರಿನಲ್ಲಿ ಈ ಸಿನಿಮಾ ಹಲವು ಭಾಷೆಗಳಲ್ಲಿ ಮೂಡಿ ಬರುತ್ತಿದ್ದು, ಸಿನಿಮಾದ ಟೈಟಲ್ ಡಿಸೈನ್ ಅನ್ನು ಮಾರ್ಚ್ 5ರಂದು ರಿಲೀಸ್ ಮಾಡುವುದಾಗಿ ಚಿತ್ರತಂಡ ಘೋಷಣೆ ಮಾಡಿದೆ.

    ಗೀತಾ ಪಿಕ್ಚರ್ಸ್ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಎರಡನೇ ಸಿನಿಮಾ ಇದಾಗಿದ್ದು,  ಶಿವರಾಜ್ ಕುಮಾರ್ ಮತ್ತು ನಿರ್ದೇಶಕ ನರ್ತನ್ ಈ ಸಿನಿಮಾದ ಮೂಲಕ ಮತ್ತೆ ಒಂದಾಗಿದ್ದು ಸಾಕಷ್ಟು ಕುತೂಹಲ ಮೂಡಿಸಿದೆ. ಐದು ವರ್ಷಗಳ ನಂತರ ಮಫ್ತಿ ಸಿನಿಮಾದ ಭೈರತಿ ರಣಗಲ್ ಪಾತ್ರದ ಹಿನ್ನೆಲೆಯನ್ನು ಈ ಚಿತ್ರದಲ್ಲಿ ಬಿಚ್ಚಿಡಲಿದ್ದಾರೆ. ಹಾಗಾಗಿ ಇದು ಮಫ್ತಿ ಸಿನಿಮಾದ ಸೀಕ್ವೆಲ್ ಅಲ್ಲ, ಪ್ರೀಕ್ವೆಲ್ ಸಿನಿಮಾ ಎನ್ನಲಾಗುತ್ತಿದೆ. ಭೈರತಿ ರಣಗಲ್ ನ ರೋಚಕ ಸಂಗತಿಗಳನ್ನು ಈ ಸಿನಿಮಾದಲ್ಲಿ ತೋರಿಸಲಿದ್ದಾರಂತೆ ನಿರ್ದೇಶಕರು. ಇದನ್ನೂ ಓದಿ: 150 ಕೋಟಿ ಮೌಲ್ಯದ ಹೊಸ ಮನೆಯನ್ನು ಪೋಷಕರಿಗೆ ಗಿಫ್ಟ್ ನೀಡಿದ ಧನುಷ್

    ಮಫ್ತಿ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಹೊಸ ಸಂಚಲನ ಮೂಡಿಸಿದ್ದ ನಿರ್ದೇಶಕ ನರ್ತನ್, ಆ ನಂತರ ಯಶ್ ಗಾಗಿ ಅವರು ಸಿನಿಮಾ ಮಾಡಲಿದ್ದಾರೆ ಎಂದು ಸುದ್ದಿಯಾಗಿತ್ತು. ಬರೋಬ್ಬರಿ ಎರಡ್ಮೂರು ವರ್ಷಗಳ ಕಾಲ ಯಶ್ ಹಿಂದೆ ಸುತ್ತಿದರು ನರ್ತನ್. ಒಂದು ವರ್ಷಕ್ಕೂ ಹೆಚ್ಚು ಕಾಲ ಕೂತು ಯಶ್ ಗಾಗಿ ಕಥೆ ಬರೆದರು. ಆನಂತರ ಆ ಸಿನಿಮಾ ಆಗಲಿಲ್ಲ. ನಾನಾ ಕಾರಣಗಳಿಂದಾಗಿ ಯಶ್ ಗಾಗಿ ನರ್ತನ್ ಸಿನಿಮಾ ಮಾಡುವುದಿಲ್ಲ ಎನ್ನುವ ವಿಷಯ ಹೊರಬಿತ್ತು.

    ಯಶ್ ಗಾಗಿ ಸಿನಿಮಾ ಆಗುವುದಿಲ್ಲ ಎಂದು ಗೊತ್ತಾಗುತ್ತಿದ್ದಂತೆಯೇ ತೆಲುಗು ನಟ ರಾಮ್ ಚರಣ್ ಗಾಗಿ ಮತ್ತೊಂದು ಕಥೆಯನ್ನು ಸಿದ್ದಮಾಡಿಕೊಂಡರಂತೆ ನರ್ತನ್. ಆ ಕಥೆಯನ್ನು ರಾಮ್ ಚರಣ್ ವರೆಗೂ ಮುಟ್ಟಿಸಿದರು ಎನ್ನುವ ಸುದ್ದಿಯಿದೆ. ಅದು ನಿಜವೋ, ಬರೀ ಗಾಳಿ ಸುದ್ದಿಯೋ ಅವರೇ ಹೇಳಬೇಕು. ಇತ್ತೀಚಿನ ದಿನಗಳಲ್ಲಿ ರಾಮ್ ಚರಣ್ ಕೂಡ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ ಎಂದು ಹೇಳಲಾಗುತ್ತಿದೆ. ಪ್ರತಿಭಾವಂತ ನಿರ್ದೇಶಕನಿಗೆ ಹೀಗಾದಾಗ ಹತಾಸೆ ಆಗುವುದು ನಿಜ. ಹಾಗಂತ ನರ್ತನ್ ನನ್ನು ಕೈ ಬಿಡಲಿಲ್ಲ ಶಿವರಾಜ್ ಕುಮಾರ್.

    ಶಿವರಾಜ್ ಕುಮಾರ್ ವೃತ್ತಿ ಬದುಕಿನಲ್ಲಿ ಮಫ್ತಿ ಕೂಡ ಒಂದೊಳ್ಳೆ ಸಿನಿಮಾದ ಯಾದಿಯಲ್ಲಿದೆ. ಹಾಗಾಗಿ ತಮ್ಮದೇ ಬ್ಯಾನರ್ ಸಿನಿಮಾದಲ್ಲಿ ನರ್ತನ್ ಗೆ ಅವಕಾಶ ನೀಡಿದ್ದಾರೆ ಶಿವಣ್ಣ. ಈ ಸಿನಿಮಾಗೆ ‘ಭೈರತಿ ರಣಗಲ್’ ಎಂದು ಹೆಸರಿಟ್ಟಿದ್ದಾರೆ. ಮಫ್ತಿಯಲ್ಲಿ ಶಿವರಾಜ್ ಕುಮಾರ್ ಮಾಡಿದ್ದ ಪಾತ್ರದ ಹೆಸರು ಇದಾಗಿದೆ. ಈ ಸಿನಿಮಾ ಕುರಿತು ಗೀತಾ ಪಕ್ಚರ್ಸ್ ಹಲವು ಮಾಹಿತಿಗಳನ್ನು ಹಂಚಿಕೊಂಡಿದೆ.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಶಿವಣ್ಣ ನಟನೆಯ ‘ಭೈರತಿ ರಣಗಲ್’ ಸಿನಿಮಾ ಸೀಕ್ವೆಲ್ ಅಲ್ಲ, ಪ್ರೀಕ್ವೆಲ್

    ಶಿವಣ್ಣ ನಟನೆಯ ‘ಭೈರತಿ ರಣಗಲ್’ ಸಿನಿಮಾ ಸೀಕ್ವೆಲ್ ಅಲ್ಲ, ಪ್ರೀಕ್ವೆಲ್

    ಗೀತಾ ಪಿಕ್ಚರ್ಸ್ ತನ್ನ ಎರಡನೇ ಸಿನಿಮಾ ಘೋಷಣೆ ಮಾಡಿದ್ದು, ಶಿವರಾಜ್ ಕುಮಾರ್ (Shivraj Kumar) ಮತ್ತು ನಿರ್ದೇಶಕ ನರ್ತನ್ (Narthan) ಈ ಸಿನಿಮಾದ ಮೂಲಕ ಮತ್ತೆ ಒಂದಾಗುತ್ತಿದ್ದಾರೆ. ಐದು ವರ್ಷಗಳ ನಂತರ ಮಫ್ತಿ (Mufti) ಸಿನಿಮಾದ ಭೈರತಿ ರಣಗಲ್ (Bhairati Rangal) ಪಾತ್ರದ ಹಿನ್ನೆಲೆಯನ್ನು ಈ ಚಿತ್ರದಲ್ಲಿ ಬಿಚ್ಚಿಡಲಿದ್ದಾರೆ. ಹಾಗಾಗಿ ಇದು ಮಫ್ತಿ ಸಿನಿಮಾದ ಸೀಕ್ವೆಲ್ ಅಲ್ಲ, ಪ್ರೀಕ್ವೆಲ್ ಸಿನಿಮಾ ಎನ್ನಲಾಗುತ್ತಿದೆ. ಭೈರತಿ ರಣಗಲ್ ನ ರೋಚಕ ಸಂಗತಿಗಳನ್ನು ಈ ಸಿನಿಮಾದಲ್ಲಿ ತೋರಿಸಲಿದ್ದಾರಂತೆ ನಿರ್ದೇಶಕರು.

    ಮಫ್ತಿ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಹೊಸ ಸಂಚಲನ ಮೂಡಿಸಿದ್ದ ನಿರ್ದೇಶಕ ನರ್ತನ್, ಆ ನಂತರ ಯಶ್ ಗಾಗಿ ಅವರು ಸಿನಿಮಾ ಮಾಡಲಿದ್ದಾರೆ ಎಂದು ಸುದ್ದಿಯಾಗಿತ್ತು. ಬರೋಬ್ಬರಿ ಎರಡ್ಮೂರು ವರ್ಷಗಳ ಕಾಲ ಯಶ್ ಹಿಂದೆ ಸುತ್ತಿದರು ನರ್ತನ್. ಒಂದು ವರ್ಷಕ್ಕೂ ಹೆಚ್ಚು ಕಾಲ ಕೂತು ಯಶ್ ಗಾಗಿ ಕಥೆ ಬರೆದರು. ಆನಂತರ ಆ ಸಿನಿಮಾ ಆಗಲಿಲ್ಲ. ನಾನಾ ಕಾರಣಗಳಿಂದಾಗಿ ಯಶ್ ಗಾಗಿ ನರ್ತನ್ ಸಿನಿಮಾ ಮಾಡುವುದಿಲ್ಲ ಎನ್ನುವ ವಿಷಯ ಹೊರಬಿತ್ತು.

    ಯಶ್ ಗಾಗಿ ಸಿನಿಮಾ ಆಗುವುದಿಲ್ಲ ಎಂದು ಗೊತ್ತಾಗುತ್ತಿದ್ದಂತೆಯೇ ತೆಲುಗು ನಟ ರಾಮ್ ಚರಣ್ ಗಾಗಿ ಮತ್ತೊಂದು ಕಥೆಯನ್ನು ಸಿದ್ದಮಾಡಿಕೊಂಡರಂತೆ ನರ್ತನ್. ಆ ಕಥೆಯನ್ನು ರಾಮ್ ಚರಣ್ ವರೆಗೂ ಮುಟ್ಟಿಸಿದರು ಎನ್ನುವ ಸುದ್ದಿಯಿದೆ. ಅದು ನಿಜವೋ, ಬರೀ ಗಾಳಿ ಸುದ್ದಿಯೋ ಅವರೇ ಹೇಳಬೇಕು. ಇತ್ತೀಚಿನ ದಿನಗಳಲ್ಲಿ ರಾಮ್ ಚರಣ್ ಕೂಡ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ ಎಂದು ಹೇಳಲಾಗುತ್ತಿದೆ. ಪ್ರತಿಭಾವಂತ ನಿರ್ದೇಶಕನಿಗೆ ಹೀಗಾದಾಗ ಹತಾಶೆ ಆಗುವುದು ನಿಜ. ಹಾಗಂತ ನರ್ತನ್ ನನ್ನು ಕೈ ಬಿಡಲಿಲ್ಲ ಶಿವರಾಜ್ ಕುಮಾರ್.

    ಶಿವರಾಜ್ ಕುಮಾರ್ ವೃತ್ತಿ ಬದುಕಿನಲ್ಲಿ ಮಫ್ತಿ ಕೂಡ ಒಂದೊಳ್ಳೆ ಸಿನಿಮಾದ ಯಾದಿಯಲ್ಲಿದೆ. ಹಾಗಾಗಿ ತಮ್ಮದೇ ಬ್ಯಾನರ್ ಸಿನಿಮಾದಲ್ಲಿ ನರ್ತನ್ ಗೆ ಅವಕಾಶ ನೀಡಿದ್ದಾರೆ ಶಿವಣ್ಣ. ಈ ಸಿನಿಮಾಗೆ ‘ಭೈರತಿ ರಣಗಲ್’ ಎಂದು ಹೆಸರಿಟ್ಟಿದ್ದಾರೆ. ಮಫ್ತಿಯಲ್ಲಿ ಶಿವರಾಜ್ ಕುಮಾರ್ ಮಾಡಿದ್ದ ಪಾತ್ರದ ಹೆಸರು ಇದಾಗಿದೆ. ಈ ಸಿನಿಮಾ ಕುರಿತು ಗೀತಾ ಪಕ್ಚರ್ಸ್ ಹಲವು ಮಾಹಿತಿಗಳನ್ನು ಹಂಚಿಕೊಂಡಿದೆ.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k