Tag: Premlata

  • ನಿರುದ್ಯೋಗದಿಂದ ಯುವಕರು ಅತ್ಯಾಚಾರ ಮಾಡ್ತಾರೆ – ಬಿಜೆಪಿ ಶಾಸಕಿ

    ನಿರುದ್ಯೋಗದಿಂದ ಯುವಕರು ಅತ್ಯಾಚಾರ ಮಾಡ್ತಾರೆ – ಬಿಜೆಪಿ ಶಾಸಕಿ

    ಚಂಡೀಗಢ: ನಿರುದ್ಯೋಗಿ ಯುವಕರು ಹತಾಶೆಗೆ ಒಳಗಾಗಿ ಸಾಮೂಹಿಕ ಅತ್ಯಾಚಾರಕ್ಕೆ ಮುಂದಾಗುತ್ತಾರೆ ಎಂದು ಹರ್ಯಾಣದ ಬಿಜೆಪಿ ಶಾಸಕಿ ಪ್ರೇಮಲತಾ ವಿವದಾತ್ಮಕ ಹೇಳಿಕೆ ನೀಡಿದ್ದಾರೆ.

    ಸಿಬಿಎಸ್‍ಎ ಬೋರ್ಡ್ ಪರೀಕ್ಷೆಯಲ್ಲಿ ಟಾಪರ್ ಆಗಿದ್ದ ರಾಜ್ಯದ ಯುವತಿಯೊಬ್ಬಳನ್ನು ಅಪಹರಿಸಿ ಕೆಲ ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಈ ಪ್ರಕರಣದ ಕುರಿತು ಪ್ರೇಮಲತಾ ಅವರು ಪ್ರತಿಕ್ರಿಯೆ ನೀಡಿ ಭಾರೀ ಟೀಕೆಗೆ ಗುರಿಯಾಗಿದ್ದಾರೆ. ಪ್ರೇಮಲತಾ ಅವರು ಕೇಂದ್ರ ಸಚಿವ ಬಿರೇಂದ್ರ ಸಿಂಗ್ ಪತ್ನಿಯಾಗಿದ್ದಾರೆ.

    ಪ್ರೇಮಲತಾ ಹೇಳಿದ್ದು ಏನು?
    ಯುವತಿಯನ್ನ ನೋಡುತ್ತಿದ್ದಂತೆ ಯುವಕರ ದೃಷ್ಟಿಕೋನ ಬದಲಾಗುತ್ತಿದೆ. ಸಮಾಜದಲ್ಲಿ ಬದಲಾವಣೆ ಕಾಣುತ್ತಿದ್ದು, ಉದ್ಯೋಗ ಇಲ್ಲದ ಕಾರಣ ಯುವಕರು ಮಾನಸಿನ ಖಿನ್ನತೆಗೆ ಒಳಗಾಗುತ್ತಿದ್ದಾರೆ. ಅವರು ಭವಿಷ್ಯದ ಬಗ್ಗೆ ಯೋಚಿಸದೆ ಅತ್ಯಾಚಾರ ಎಸಗುತ್ತಿದ್ದಾರೆ ಎಂದು ಹೇಳಿದ ಅವರು, ಕೃತ್ಯ ಎಸಗಿದವರನ್ನು ತಕ್ಷಣವೇ ಗಲ್ಲಿಗೆ ಏರಿಸುವಂತೆ ಜನತೆ ಒತ್ತಾಯಿಸುತ್ತಿದ್ದಾರೆ. ಆದರೆ ಅದಕ್ಕೆ ಕಾನೂನು ರಚನೆ ಆಗಲು ಸಮಯಬೇಕಾಗುತ್ತದೆ ಎಂದು ಪ್ರೇಮಲತಾ ಹೇಳಿದ್ದಾರೆ. ಇದನ್ನು ಓದಿ: ಗ್ಯಾಂಗ್ ರೇಪ್- ಪ್ರಮುಖ ಆರೋಪಿ ಓರ್ವ ರಕ್ಷಣಾ ಸಿಬ್ಬಂದಿ

    ಏನಿದು ಪ್ರಕರಣ?:
    ಹರಿಯಾಣದ ಮಹೇಂದ್ರಗಢ ಎಂಬಲ್ಲಿ ಸಿಬಿಎಸ್‍ಇ ಬೋರ್ಡ್ ಪರೀಕ್ಷೆಯಲ್ಲಿ ಟಾಪರ್ ಆಗಿ, ರಾಷ್ಟ್ರಪತಿಯವರಿಂದ ಬಹುಮಾನ ಸ್ವೀಕರಿಸಿದ್ದ 19 ವರ್ಷದ ಕಾಲೇಜು ವಿದ್ಯಾರ್ಥಿನಿಯನ್ನು ಅಪಹರಿಸಿ ಬಳಿಕ ಅತ್ಯಾಚಾರವೆಸಗಿರುವ ಘಟನೆ ಬುಧವಾರ ನಡೆದಿತ್ತು. ಸಂತ್ರಸ್ತೆ 12ನೇ ತರಗತಿಯಲ್ಲಿ ಓದುತ್ತಿದ್ದಳು. ಈಕೆ ರಿವಾರಿಯಲ್ಲಿಯಲ್ಲಿರೋ ತನ್ನ ಗ್ರಾಮಕ್ಕೆ ಕೋಚಿಂಗ್ ಗೆಂದು ತೆರಳುತ್ತಿದ್ದಳು. ಈ ವೇಳೆ 3 ಮಂದಿ ಯುವಕರ ಗುಂಪೊಂದು ಕಾರಿನಲ್ಲಿ ಬಂದು ಆಕೆಯನ್ನು ಅಡ್ಡಹಾಕಿತ್ತು. ಅಲ್ಲದೇ ಬಳಿಕ ವಿದ್ಯಾರ್ಥಿನಿಯನ್ನು ತಮ್ಮ ಕಾರಿನೊಳಗೆ ಎಳೆದು ಹಾಕಿದ್ದಾರೆ. ಹೀಗೆ ಅಪಹರಣ ಮಾಡಿದ ಬಳಿಕ ಕಾರಿನಲ್ಲಿಯೇ ಆಕೆಯ ಮೇಲೆ ಸಾಮೂಹಿಕವಾಗಿ ಅತ್ಯಾಚಾರವೆಸಗಿದ್ದರು ಅಂತ ವರದಿಯಾಗಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv