Tag: Premium phones

  • ಅಮೆಜಾನ್ ಶಾಪಿಂಗ್ ಹಬ್ಬ- 36 ಗಂಟೆಯಲ್ಲಿ 750 ಕೋಟಿ ರೂ. ಮೌಲ್ಯದ ಪ್ರೀಮಿಯಂ ಸ್ಮಾರ್ಟ್ ಫೋನ್ ಮಾರಾಟ

    ಅಮೆಜಾನ್ ಶಾಪಿಂಗ್ ಹಬ್ಬ- 36 ಗಂಟೆಯಲ್ಲಿ 750 ಕೋಟಿ ರೂ. ಮೌಲ್ಯದ ಪ್ರೀಮಿಯಂ ಸ್ಮಾರ್ಟ್ ಫೋನ್ ಮಾರಾಟ

    ನವದೆಹಲಿ: ದಸರಾ ಹಬ್ಬದ ನಿಮಿತ್ತ ಅಮೆಜಾನ್ ತನ್ನ ಗ್ರಾಹಕರಿಗೆ ವಿಶೇಷ ಆಫರ್ ನೀಡುವ ಮೂಲಕ ಕೋಟ್ಯಂತರ ರೂ. ವ್ಯವಹಾರ ನಡೆಸಿ ದಾಖಲೆ ಬರೆದಿದೆ.

    ‘ಗ್ರೇಟ್ ಇಂಡಿಯನ್ ಫೆಸ್ಟಿವಲ್’ ಸೆಪ್ಟೆಂಬರ್ 29ರಿಂದ ಆರಂಭಿಸಿದ್ದು, ಅಕ್ಟೋಬರ್ 4ರಂದು ಮುಕ್ತಾಯವಾಗಲಿದೆ. ಮಾರಾಟ ಆರಂಭಗೊಂಡ ಕೇವಲ 36 ಗಂಟೆಗಳಲ್ಲಿ 750 ಕೋಟಿ ರೂ. ಮೌಲ್ಯದ ಸ್ಮಾರ್ಟ್ ಫೋನ್‍ಗಳನ್ನು ಮಾರಾಟ ಮಾಡಲಾಗಿದೆ ಎಂದು ಅಮೆಜಾನ್ ತಿಳಿಸಿದೆ.

    ಒನ್‍ಪ್ಲಸ್, ಸ್ಯಾಮ್ಸಂಗ್ ಹಾಗೂ ಆ್ಯಪಲ್ ಕಂಪನಿಯ ಒಟ್ಟು 750 ಕೋಟಿ ರೂ. ಮೌಲ್ಯದ ಪ್ರೀಮಿಯಂ ಬ್ರ್ಯಾಂಡ್ ಸ್ಮಾರ್ಟ್ ಫೋನ್‍ಗಳು ಮಾರಾಟವಾಗಿವೆ. ಅತಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರೈಮ್ ಸದಸ್ಯರು ಸೇರ್ಪಡೆಯಾಗಿದ್ದಾರೆ. ಗ್ರೇಟ್ ಇಂಡಿಯನ್ ಫೆಸ್ಟಿವಲ್ ನಲ್ಲಿ ದಾಖಲೆ ಮಟ್ಟದಲ್ಲಿ ಗ್ರಾಹಕರು ಹಾಗೂ ಮಾರಾಟಗಾರರು ಭಾಗಹಿಸಿದ್ದಾರೆ ಎಂದು ಅಮೆಜಾನ್ ಗ್ಲೋಬಲ್‍ನ ಭಾರತದ ಮುಖ್ಯಸ್ಥ ಅಮಿತ್ ಅಗರ್ವಾಲ್ ಮಾಹಿತಿ ನೀಡಿದ್ದಾರೆ.

    ಆನ್‍ಲೈನ್ ಗ್ರಾಹಕರು ಹೆಚ್ಚಾಗಿ ಸ್ಮಾರ್ಟ್ ಫೋನ್ ಖರೀದಿಯ ಮೇಲೆ ಆಸಕ್ತಿ ತೋರಿದ್ದಾರೆ. ಇದರ ಜೊತೆಗೆ ಸೌಂದರ್ಯ ವರ್ಧಕಗಳು ಹಾಗೂ ಫ್ಯಾಷನ್ ವಸ್ತುಗಳ ಖರೀದಿಯಲ್ಲೂ ಗಮನ ನೀಡಿದ್ದಾರೆ ಎಂದು ಅಮಿತ್ ಅಗರ್ವಾಲ್ ತಿಳಿಸಿದ್ದಾರೆ.

    ಇತ್ತ ಫ್ಲಿಪ್‍ಕಾರ್ಟ್ ಕೂಡ ತನ್ನ ವ್ಯಾಪಾರದ ಬಗ್ಗೆ ಮಾಹಿತಿ ನೀಡಿದ್ದು, ಕಳೆದ ವರ್ಷಕ್ಕಿಂತ ಈ ಬಾರಿಯ ಬಿಗ್ ಬಿಲಿಯನ್ ಡೇಸ್‍ನ ಮೊದಲ ದಿನವೇ ಎರಡು ಪಟ್ಟು ಮಾರಾಟ ಪ್ರಗತಿ ದಾಖಲಿಸಿದೆ ಎಂದು ಹೇಳಿದೆ.