Tag: Premium

  • ಪ್ರೀಮಿಯಂ ಚಂದಾದಾರಿಕೆಯನ್ನು ಇದೇ ತಿಂಗಳು ಪ್ರಾರಂಭಿಸಲಿದೆ ಟೆಲಿಗ್ರಾಂ

    ಪ್ರೀಮಿಯಂ ಚಂದಾದಾರಿಕೆಯನ್ನು ಇದೇ ತಿಂಗಳು ಪ್ರಾರಂಭಿಸಲಿದೆ ಟೆಲಿಗ್ರಾಂ

    ಬರ್ಲಿನ್: ಮೆಸೇಜಿಂಗ್ ಅಪ್ಲಿಕೇಶನ್ ಟೆಲಿಗ್ರಾಮ್ ಪ್ರೀಮಿಯಂ ಚಂದಾದಾರಿಕೆಯನ್ನು ಹೊರ ತರಲು ಸಿದ್ಧವಾಗಿದೆ. ಟೆಲಿಗ್ರಾಂ ತನ್ನ ಪ್ರೀಮಿಯಂ ಅನ್ನು ಇದೇ ತಿಂಗಳಿನಲ್ಲಿ ಬಿಡುಗಡೆ ಮಾಡಲಿದೆ ಎಂದು ಟೆಲಿಗ್ರಾಂ ಸಿಇಒ ಪಾವೆಲ್ ಡುರೋವ್ ಖಚಿತಪಡಿಸಿದ್ದಾರೆ.

    ಟೆಲಿಗ್ರಾಂನ ಹೊಸ ಚಂದಾದಾರಿಕೆಯಲ್ಲಿ ಬಳಕೆದಾರರು ಕೆಲವು ಫೀಚರ್‌ಗಳಿಗಾಗಿ ಪಾವತಿ ಮಾಡಬೇಕಾಗುತ್ತದೆ. ಆದರೂ ಸದ್ಯ ಅಸ್ತಿತ್ವದಲ್ಲಿರುವ ಫೀಚರ್‌ಗಳಿಗೆ ಟೆಲಿಗ್ರಾಂ ಶುಲ್ಕ ವಿಧಿಸುವುದಿಲ್ಲ. ಬದಲಾಗಿ ಹೊಸ ಫೀಚರ್‌ಗಳಿಗೆ ಮಾತ್ರವೇ ಶುಲ್ಕ ವಿಧಿಸಲಿದೆ ಎಂದು ಸ್ಪಷ್ಟಪಡಿಸಿದೆ. ಇದನ್ನೂ ಓದಿ: ರಾಜ್ಯದ ಹಲವೆಡೆ ಇಂದಿನಿಂದ 3 ದಿನ ಮಳೆ ಸಾಧ್ಯತೆ – ಹವಾಮಾನ ಇಲಾಖೆ

    ಟೆಲಿಗ್ರಾಂ ಪ್ರೀಮಿಯಂ ಅನ್ನು ಆಯ್ಕೆ ಮಾಡುವ ಬಳಕೆದಾರರು ಚಾಟ್‌ಗಳು, ಮೀಡಿಯಾ ಹಾಗೂ ಫೈಲ್ ಅಪ್‌ಲೋಡ್‌ಗಳಿಗೆ ಹೆಚ್ಚಿನ ಮಿತಿಯನ್ನು ಪಡೆಯುತ್ತಾರೆ ಎಂದು ಡುರೊವ್ ತಿಳಿಸಿದ್ದಾರೆ. ಇದನ್ನೂ ಓದಿ: ಇನ್ಮುಂದೆ ಅಮೆಜಾನ್‌ನಲ್ಲಿ ಶೂ ಕೊಳ್ಳುವುದಕ್ಕೂ ಮೊದಲು ವರ್ಚುವಲ್ ಆಗಿ ಟ್ರೈಮಾಡಿ

    ಮೆಸೇಜಿಂಗ್ ದೈತ್ಯ ಮೆಟಾ ಮಾಲೀಕತ್ವದ ವಾಟ್ಸಪ್‌ಗೆ ಟೆಲಿಗ್ರಾಂ ಪ್ರತಿಸ್ಪರ್ಧಿಯಾಗಿದ್ದು, ಇದು ಪ್ರಸ್ತುತ 50 ಕೋಟಿ ಮಾಸಿಕ ಸಕ್ರಿಯ ಬಳಕೆದಾರರನ್ನು ಹೊಂದಿದೆ. 2 ವರ್ಷಗಳ ಹಿಂದೆ ವಾಟ್ಸಪ್ ಬಳಕೆದಾರರ ಗೌಪ್ಯತೆ ಬಗ್ಗೆ ಚರ್ಚೆಗೆ ಬಂದಿದ್ದಾಗ ಹೆಚ್ಚಿನ ಜನರು ಟೆಲಿಗ್ರಾಂ ಅಪ್ಲಿಕೇಶನ್ ಕಡೆ ವಾಲಿದ್ದರು. ಟೆಲಿಗ್ರಾಂ ವಿಶ್ವದ ಅತಿ ಹೆಚ್ಚು ಬಾರಿ ಡೌನ್‌ಲೋಡ್ ಮಾಡಲಾದ 10 ಅಪ್ಲಿಕೇಶನ್‌ಗಳ ಪಟ್ಟಿಯಲ್ಲಿ ಒಂದಾಗಿದೆ ಎಂದು ವರದಿಯಾಗಿದೆ.

  • ರಾಕ್‍ಲೈನ್ ಮಾಲ್‍ನಲ್ಲಿ ಕುರುಕ್ಷೇತ್ರ ಚಿತ್ರದ ಸ್ಪೆಷಲ್ ಪ್ರೀಮಿಯರ್ ಶೋ

    ರಾಕ್‍ಲೈನ್ ಮಾಲ್‍ನಲ್ಲಿ ಕುರುಕ್ಷೇತ್ರ ಚಿತ್ರದ ಸ್ಪೆಷಲ್ ಪ್ರೀಮಿಯರ್ ಶೋ

    ಬೆಂಗಳೂರು: ಕನ್ನಡದ ಚಿತ್ರರಂಗದಲ್ಲೇ ನಿರ್ಮಿಸಲು ಹೊರಟಿರುವ ಬಹು ನಿರೀಕ್ಷಿತ ಪೌರಾಣಿಕ ಚಿತ್ರ ‘ಮುನಿರತ್ನ ಕುರುಕ್ಷೇತ್ರ’ ಇದೇ ತಿಂಗಳ 9ರಂದು ಬಿಡುಗಡೆಗೆ ಸಿದ್ಧವಾಗಿದೆ.

    ಮುನಿರತ್ನ ಅವರ ನಿರ್ಮಾಣದಲ್ಲಿ ಮೂಡಿ ಬಂದಿರುವ ಕುರುಕ್ಷೇತ್ರ ಸಿನಿಮಾದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸುಯೋಧನನಾಗಿ, ನಿಖಿಲ್ ಕುಮಾರಸ್ವಾಮಿ ಅಭಿಮನ್ಯುವಾಗಿ ನಟಿಸಿದ್ದಾರೆ. ಬಹುನಿರೀಕ್ಷೆ ಹುಟ್ಟಿಸಿರುವ ಚಿತ್ರದ ಸ್ಪೆಷಲ್ ಪ್ರೀಮಿಯರ್ ಶೋವನ್ನು ಸೋಮವಾರ ರಾತ್ರಿ ರಾಕ್‍ಲೈನ್ ಸಿನಿಮಾದಲ್ಲಿ ನಿರ್ಮಾಪಕರು ಆಯೋಜಿಸಿದರು.

    ಅಭಿಮನ್ಯು ಪಾತ್ರದಲ್ಲಿ ನಟಿಸಿರುವ ನಿಖಿಲ್ ಕುಮಾರಸ್ವಾಮಿ, ನಿರ್ಮಾಪಕರಾದ ಮುನಿರತ್ನ, ರಾಕ್‍ಲೈನ್ ವೆಂಕಟೇಶ್ ಹಾಗೂ ಸಾಧು ಕೋಕಿಲಾ ಅವರು ಸಿನಿಮಾವನ್ನು ವೀಕ್ಷಿಸಿದರು. ಕನ್ನಡದಲ್ಲಿ ಮೂಡಿ ಬಂದಿರುವ ಅತ್ಯುತ್ತಮ ಸಿನಿಮಾ ಇದಾಗಿದ್ದು, ನಾನು ಈಗಾಗಲೇ 50ಕ್ಕೂ ಹೆಚ್ಚು ಬಾರಿ ಸಿನಿಮಾ ನೋಡಿದ್ದೇನೆ. ಪ್ರತಿಯೊಬ್ಬ ಕಲಾವಿದರು ಉತ್ತಮವಾಗಿ ಅಭಿನಯ ಮಾಡಿದ್ದಾರೆ. ಬಹು ತಾರಾಗಣ ಇರುವ ಚಿತ್ರವಾಗಿದ್ದು, ಇದೇ ವರಮಹಾಲಕ್ಷ್ಮಿ ಹಬ್ಬಕ್ಕೆ ಬೆಳ್ಳಿಪರದೆಗೆ ಬರಲಿದೆ ಎಂದು ನಿರ್ಮಾಪಕ ಮುನಿರತ್ನ ಹೇಳಿದರು.

    ಸಿನಿಮಾ ನೋಡಿದ ನಿಖಿಲ್ ಕುಮಾರಸ್ವಾಮಿ ಇಂತಹ ಚಿತ್ರದಲ್ಲಿ ನಾನು ನಟಿಸಿದ್ದು ನಾನು ಎಷ್ಟೇ ಸಿನಿಮಾ ಮಾಡಿದರೂ ಈ ಸಿನಿಮಾ ಮಾತ್ರ ಮೊದಲ ಸಾಲಿನಲ್ಲಿರುತ್ತೆ. ಅಂತಹ ಸಿನಿಮಾ ಇದು. ಇದರಲ್ಲಿ ನನಗೆ ಅವಕಾಶ ಕೊಟ್ಟ ಮುನಿರತ್ನ ಅವರಿಗೆ ಧನ್ಯವಾದ ಹೇಳುತ್ತೇನೆ. ಈ ಚಿತ್ರದಲ್ಲಿ ದರ್ಶನ್, ಅರ್ಜುನ್ ಸಾರ್ಜಾ, ಅಂಬರೀಶ್, ರವಿಚಂದ್ರನ್, ರವಿಶಂಕರ್, ಹೀಗೆ ಅನೇಕ ಕಲಾವಿದರು ನಟಿಸಿದ್ದಾರೆ ಎಂದರು.

    ಅಲ್ಲದೆ ಇಂದು ತ್ರಿಡಿಯಲ್ಲಿ ಸಿನಿಮಾ ನೋಡ್ದೆ, ಮತ್ತೆ ಎಲ್ಲಾ ಕಲಾವಿದರೊಂದಿಗೆ ಟೂಡಿಯಲ್ಲಿ ಸಿನಿಮಾ ನೋಡುತ್ತೇನೆ. ಎಲ್ಲರೂ ತಪ್ಪದೇ ಚಿತ್ರಮಂದಿರದಲ್ಲೇ ಕುರುಕ್ಷೇತ್ರ ಸಿನಿಮಾವನ್ನು ನೋಡಿ ಎಂದು ನಿಖಿಲ್ ಕುಮಾರಸ್ವಾಮಿ ಸಿನಿಮಾ ನೋಡಿದ ಸಂತೋಷವನ್ನ ಹಂಚಿಕೊಂಡರು.