Tag: Premam Poojyam

  • ಪ್ರೇಮಂ ಪೂಜ್ಯಂ ಬೆಡಗಿಗೆ ಈಗ ಜೂಲಿಯಟ್

    ಪ್ರೇಮಂ ಪೂಜ್ಯಂ ಬೆಡಗಿಗೆ ಈಗ ಜೂಲಿಯಟ್

    ನೆನಪಿರಲಿ ಪ್ರೇಮ್ ನಟನೆಯ ಪ್ರೇಮಂ ಪೂಜ್ಯಂ ಸಿನಿಮಾ ನೋಡಿದವರು ಕನಸು ಕಂಗಳ ಹುಡುಗಿ ಬೃಂದಾ ಆಚಾರ್ಯ ನೆನಪಿರಲಿಕ್ಕೆ ಸಾಕು. ಮೊದಲ ಸಿನಿಮಾದಲ್ಲಿಯೇ ಗಮನ ಸೆಳೆದ ಈ ನಟಿಗೆ ಮುಂದೆ ಯಾವ ರೀತಿಯ ಅವಕಾಶ ಸಿಗಬಹುದು ಎನ್ನುವ ಕುತೂಹಲವಿತ್ತು. ಸ್ವತಃ ಬೃಂದಾ ಯಾವ ತರಹದ ಪಾತ್ರಗಳನ್ನು ಒಪ್ಪಿಕೊಳ್ಳಬಹುದು ಎನ್ನುವ ಪ್ರಶ್ನೆಯೂ ಮೂಡಿತ್ತು. ಅದಕ್ಕೀಗ ಉತ್ತರ ಸಿಕ್ಕಿದೆ. ಇದನ್ನೂ ಓದಿ : ತೆಲುಗಿನ ಚೊಚ್ಚಲ ಚಿತ್ರದ ಮುಹೂರ್ತದಲ್ಲಿ ಕಾಣಲಿಲ್ಲ ದುನಿಯಾ ವಿಜಯ್


    ಪ್ರೇಮಂ ಪೂಜ್ಯಂ ಸಿನಿಮಾದ ನಂತರ ಹಲವು ರೀತಿಯ ಕಥೆಗಳನ್ನು ಕೇಳಿದ್ದು ಈ ನಟಿ, ಇದೀಗ ಎರಡು ಭಾಷೆಯಲ್ಲಿ ನಿರ್ಮಾಣವಾಗುತ್ತಿರುವ ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಈ ಚಿತ್ರ ತನ್ನದೇ ಆದ ಕಾರಣದಿಂದಾಗಿ ನಿರೀಕ್ಷೆ ಮೂಡಿಸಿದೆ. ಇದನ್ನು ಓದಿ : ಪಾರ್ವತಮ್ಮ ರಾಜ್ ಕುಮಾರ್ ಮತ್ತು ಬೆಳ್ಳಿ ಬಟ್ಟಲು ಸ್ಟೋರಿ ಹೇಳಿದ ರಂಗಾಯಣ ರಘು


    ಬೃಂದಾ ಅವರ ಎರಡನೇ ಚಿತ್ರಕ್ಕೆ ‘ಜೂಲಿಯಟ್’ ಎಂದು ಹೆಸರಿಡಲಾಗಿದೆ. ವಿರಾಟ್ ಗೌಡ ನಿರ್ದೇಶನದಲ್ಲಿ ಈ ಚಿತ್ರ ಮೂಡಿ ಬರಲಿದ್ದು, ಕನ್ನಡ ಮತ್ತು ಮಲೆಯಾಳಂನಲ್ಲಿ ಒಟ್ಟಿಗೆ ಸೆಟ್ಟೇರುತ್ತಿರುವುದು ವಿಶೇಷ. ಇದನ್ನೂ ಓದಿ : ರಾಮ್ ಪೋತಿನೇನಿ ಸಿನಿಮಾಗೆ ಅಖಂಡ ಡೈರೆಕ್ಟರ್ ನಿರ್ದೇಶನ


    ಈ ಸಿನಿಮಾ ಎರಡು ಭಾಗವಾಗಿ ಮೂಡಿ ಬರಲಿದ್ದು, ಮೊದಲ ರಿಲೀಸ್ ಆಗುವ ಚಿತ್ರಕ್ಕೆ “ಜೂಲಿಯಟ್ 2” ಎಂದು, ನಂತರ ಬಿಡುಗಡೆ ಆಗುವ ಚಿತ್ರಕ್ಕೆ “ಜೂಲಿಯಟ್ 1” ಎಂದು ಹೆಸರಿಡಲಾಗಿದೆ. ಎರಡನೇ ಭಾಗದ ಸಿನಿಮಾ ಮೊದಲು ಬಿಡುಗಡೆ ಆಗುವುದಕ್ಕೂ ಕಾರಣವಿದೆಯಂತೆ. ಅದನ್ನು ಸಿನಿಮಾದಲ್ಲಿಯೇ ನೋಡಿ ಎಂದಿದ್ದಾರೆ ಬೃಂದಾ. ಇದನ್ನೂ ಓದಿ : ಹಿರಿಯ ನಟ ರಾಜೇಶ್ ಅವರ ಅಪರೂಪದ ಫೋಟೋಗಳು


    ಕೆಜಿಎಫ್ ಸೇರಿದಂತೆ ಹಲವು ಸಿನಿಮಾಗಳಿಗೆ ಸಂಗೀತ ನೀಡಿರುವ ರವಿ ಬಸ್ರೂರು ಈ ಚಿತ್ರಕ್ಕೆ ಹಿನ್ನೆಲೆ ಸಂಗೀತ ನೀಡುತ್ತಿದ್ದಾರೆ. ಏಕಕಾಲಕ್ಕೆ ಎರಡೂ ಭಾಷೆಗಳಲ್ಲೂ ಈ ಸಿನಿಮಾ ನಿರ್ಮಾಣವಾಗುತ್ತಿರುವುದು ಮತ್ತೊಂದು ವಿಶೇಷ.

  • ಪ್ರೇಮಿಗಳ ದಿನಕ್ಕೆ ಬಿಡುಗಡೆಯಾಯ್ತು ‘ಪ್ರೇಮಂ ಪೂಜ್ಯಂ’ ಲವ್ಲಿ ಟೀಸರ್

    ಪ್ರೇಮಿಗಳ ದಿನಕ್ಕೆ ಬಿಡುಗಡೆಯಾಯ್ತು ‘ಪ್ರೇಮಂ ಪೂಜ್ಯಂ’ ಲವ್ಲಿ ಟೀಸರ್

    ವ್ಲಿ ಸ್ಟಾರ್ ಪ್ರೇಮ್ ಲವರ್ ಬಾಯ್ ಪಾತ್ರದಲ್ಲಿ ಅಭಿನಯಿಸಿರುವ ‘ಪ್ರೇಮಂ ಪೂಜ್ಯಂ’ ಸಿನಿಮಾ ಟೀಸರ್ ಪ್ರೇಮಿಗಳ ದಿನದ ಪ್ರಯುಕ್ತ ಬಿಡುಗಡೆಯಾಗಿದೆ. ಪ್ರೀತಿ ಮಾತು ತುಂಬಿರೋ ಟೀಸರ್ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದು, ಈಗಾಗಲೇ ಐದು ಲಕ್ಷಕ್ಕೂ ಹೆಚ್ಚು ವೀವ್ಸ್ ಪಡೆದುಕೊಂಡಿದೆ ‘ಪ್ರೇಮಂ ಪೂಜ್ಯಂ’ ಟೀಸರ್.

    ಲೈಫ್ ಜೊತೆ ಒನ್ ಸೆಲ್ಫಿ ಸಿನಿಮಾ ನಂತರ ನೆನಪಿರಲಿ ಪ್ರೇಮ್ ಅಭಿನಯಿಸುತ್ತಿರುವ ಚಿತ್ರ ‘ಪ್ರೇಮಂ ಪೂಜ್ಯಂ’. ಇದು ಲವ್ಲಿ ಸ್ಟಾರ್ ಸಿನಿಮಾ ಕೆರಿಯರ್ ನ ವಿಶೇಷ ಸಿನಿಮಾ ಕೂಡ ಹೌದು. ಕಾರಣ ಇದು ಪ್ರೇಮ್ ಸಿನಿ ಬದುಕಿನ 25ನೇ ಚಿತ್ರ. ಪ್ರೇಮ್ ಕೂಡ ಈ ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಚಿತ್ರದ ಇನ್ನೊಂದು ಸ್ಪೆಷಾಲಿಟಿ ಲವ್ಲಿ ಸ್ಟಾರ್ ಲುಕ್. ಪ್ರತಿ ಸಿನಿಮಾದಲ್ಲೂ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳುವ ಪ್ರೇಮ್ ಈ ಸಿನಿಮಾದಲ್ಲೂ ಹೊಸ ಲುಕ್ ನಲ್ಲಿ ಸಖತ್ ಯಂಗ್ ಆಗಿ ಕಾಣಿಸಿಕೊಂಡಿದ್ದಾರೆ. ಬರೋಬ್ಬರಿ ಒಂಭತ್ತು ಲುಕ್ ನಲ್ಲಿ ಪ್ರೇಮ್ ಸಿನಿಮಾದಲ್ಲಿ ಕಾಣಸಿಗಲಿದ್ದಾರೆ.

    ‘ಪ್ರೇಮಂ ಪೂಜ್ಯಂ’ ಸಿನಿಮಾ ಟೈಟಲ್ ಹೇಳುವಂತೆ ರೊಮ್ಯಾಂಟಿಕ್ ಲವ್ ಸ್ಟೋರಿ ಸಿನಿಮಾ. ಹಾಗಂತ ರೆಗ್ಯೂಲರ್ ಪ್ರೇಮಕಥೆ ಇಲ್ಲಿಲ್ಲ. ಹೊಸತನ, ಹೊಸ ಪ್ರಯತ್ನ ಎಲ್ಲವೂ ಪ್ರೇಮಂ ಪೂಜ್ಯಂ ಚಿತ್ರದಲ್ಲಿದೆ. ಚಿತ್ರದಲ್ಲಿ ಪ್ರೀತಿಯ ಆರಾಧಕನಾಗಿ ಲವ್ಲಿ ಸ್ಟಾರ್ ಪ್ರೇಮ್ ಬಣ್ಣ ಹಚ್ಚಿದ್ರೆ, ನಾಯಕ ನಟಿಯಾಗಿ ಬ್ರಿಂದ ಆಚಾರ್ಯ ಅಭಿನಯಿಸಿದ್ದಾರೆ. ರಾಘವೇಂದ್ರ.ಬಿ.ಎಸ್ ಸಿನಿಮಾ ನಿರ್ದೇಶಕ. ವೃತ್ತಿಯಲ್ಲಿ ವೈದ್ಯರಾಗಿರುವ ರಾಘವೇಂದ್ರ ಅವರಿಗೆ ಸಿನಿಮಾ ಮೇಲೆ ಅಪಾರ ಒಲವು. ಆ ಒಲವಿನಿಂದಲೇ ಇಂದು `ಪ್ರೇಮಂ ಪೂಜ್ಯಂ’ ಮೂಲಕ ಸ್ಯಾಂಡಲ್ ವುಡ್ ಅಂಗಳಕ್ಕೆ ನಿರ್ದೇಶಕನಾಗಿ ಪರಿಚಿತರಾಗಿದ್ದಾರೆ.

    ಚಿತ್ರಕ್ಕೆ ಸಂಗೀತ ನಿರ್ದೇಶನ ಹಾಗೂ ಸಾಹಿತ್ಯ ಕೃಷಿ ಕೂಡ ನಿರ್ದೇಶಕ ರಾಘವೇಂದ್ರ ಬಿ.ಎಸ್ ಅವರದ್ದೇ. ಕೆಡಂಬಡಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗಿದ್ದು, ರಕ್ಷಿತ್ ಕೆಡಂಬಡಿ, ಡಾ.ರಾಜ್ಕುಮಾರ್ ಜಾನಕಿರಾಮನ್, ಮನೋಜ್ ಕೃಷ್ಣನ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ನವೀನ್ ಕುಮಾರ್ ಛಾಯಾಗ್ರಹಣ ಚಿತ್ರಕ್ಕಿದೆ. ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಕೆಲಸ ಮುಗಿಸಿ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿರೋ ಚಿತ್ರತಂಡ ಸದ್ಯದಲ್ಲೇ ಸಿನಿಮಾ ಬಿಡುಗಡೆ ಬಗ್ಗೆ ಮಾಹಿತಿ ನೀಡಲಿದೆ.