Tag: Premaloka 2

  • ‘ಪ್ರೇಮಲೋಕ 2’ ಚಿತ್ರಕ್ಕಾಗಿ ಮಕ್ಕಳನ್ನು ತಯಾರಿ ಮಾಡುತ್ತಿದ್ದಾರೆ ರವಿಚಂದ್ರನ್

    ‘ಪ್ರೇಮಲೋಕ 2’ ಚಿತ್ರಕ್ಕಾಗಿ ಮಕ್ಕಳನ್ನು ತಯಾರಿ ಮಾಡುತ್ತಿದ್ದಾರೆ ರವಿಚಂದ್ರನ್

    ಕ್ರೇಜಿಸ್ಟಾರ್ ರವಿಚಂದ್ರನ್  ಅಂದಾಕ್ಷಣ ಥಟ್ಟನೆ ನೆನಪಾಗೋ ಸಿನಿಮಾ ಪ್ರೇಮಲೋಕ. ಕನ್ನಡ ಚಿತ್ರ ಜಗತ್ತಲ್ಲಿ ಈ ಚಿತ್ರಕ್ಕೆ ತನ್ನದೇ ಆದ ಮಹತ್ವವಿದೆ. ಹಲವು ದಾಖಲೆಗಳನ್ನು ಮಾಡಿರುವ ಸಿನಿಮಾ ಇದಾಗಿದೆ. ಈಗ ರವಿಚಂದ್ರನ್ ಆ ಸಿನಿಮಾದ ಎರಡನೇ ಭಾಗವನ್ನು ಕೈಗೆತ್ತಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ತಮ್ಮ ಇಬ್ಬರೂ ಮಕ್ಕಳಿಗೆ ಪಾತ್ರ ಕೊಟ್ಟಿದ್ದಾರೆ. ಆ ಪಾತ್ರಕ್ಕಾಗಿ ತಯಾರಿ ಕೂಡ ಮಾಡಿಸುತ್ತಿದ್ದಾರೆ.

    ಪ್ರೇಮಲೋಕ 2 ಚಿತ್ರಕ್ಕಾಗಿ ಡಾನ್ಸ್ ಮತ್ತು ಮೈ ಹುರಿಗೊಳಿಸಿಕೊಳ್ಳುತ್ತಿರುವೆ. ಅಪ್ಪನೇ ಮಾರ್ಗದರ್ಶನ ಮಾಡುತ್ತಿದ್ದಾರೆ. ಪ್ರೇಮಲೋಕ ಸಿನಿಮಾದ ಹೆಸರೇ ದೊಡ್ಡದು. ಹಾಗಾಗಿ ನಿರೀಕ್ಷೆ ಇದ್ದೇ ಇರುತ್ತದೆ. ಹಾಗಾಗಿ ಸಾಕಷ್ಟು ತಯಾರಿ ಮಾಡಿಕೊಂಡು ಕ್ಯಾಮೆರಾ ಮುಂದೆ ನಿಲ್ಲುತ್ತೇನೆ ಎನ್ನುತ್ತಾರೆ (Manoranjan) ಮನೋರಂಜನ್.

    ರವಿಚಂದ್ರನ್ (Ravichandran) ಕೆರಿಯರ್ ಬದಲಿಸಿದ ಸಿನಿಮಾ ಅಂದರೆ 1987ರಲ್ಲಿ ತೆರೆಕಂಡ ಪ್ರೇಮಲೋಕ. ತಾವೇ ನಿರ್ದೇಶಿಸಿ, ನಟಿಸಿ ಗೆದ್ದಿದ್ದರು. ಈಗ ಪ್ರೇಮಲೋಕ ಪಾರ್ಟ್ 2  ಸಿನಿಮಾ ಮಾಡೋಕೆ ಮುಂದಾಗಿದ್ದಾರೆ. ಮೇ 30ರಿಂದ ಶೂಟಿಂಗ್ ಕೂಡ ಶುರುವಾಗಲಿದೆ. ಕಾರ್ಯಕ್ರವೊಂದರಲ್ಲಿ ಅತಿಥಿಯಾಗಿ ರವಿಚಂದ್ರನ್ ಭಾಗವಹಿಸಿದ್ದರು. ‘ಪ್ರೇಮಲೋಕ 2’ ಬಗ್ಗೆ ಮಾಹಿತಿ ನೀಡಿದ್ದಾರೆ. ಮೇ 30ರಂದು ‘ಪ್ರೇಮಲೋಕ 2’ (Premaloka 2) ಸಿನಿಮಾವನ್ನು ಆರಂಭಿಸುತ್ತೇನೆ. ನನ್ನ ದೊಡ್ಡ ಮಗ ಮನೋರಂಜನ್ ಅದರಲ್ಲಿ ನಟಿಸುತ್ತಾನೆ. ಚಿಕ್ಕ ಮಗ ವಿಕ್ರಮ್ ಚಿಕ್ಕ ಪಾತ್ರ ನಟಿಸುತ್ತಾನೆ. ನಾನು ತಂದೆ ಪಾತ್ರದಲ್ಲಿ ನಟಿಸುತ್ತಿದ್ದೇನೆ ಎಂದು ಕ್ರೇಜಿ ಸ್ಟಾರ್ ತಿಳಿಸಿದ್ದಾರೆ.

    ‘ಪ್ರೇಮಲೋಕ 2’ ಸಿನಿಮಾದಲ್ಲಿ ಬರೀ 20-25 ಹಾಡುಗಳು ಇರುತ್ತೆದೆ ಅಷ್ಟೇ. ಆದರೆ ಜೀವನಪೂರ್ತಿ ಇಡೀ ಸಿನಿಮಾ ಚಿಕ್ಕವರಿಂದಿಡಿದು ದೊಡ್ಡವರ ತನಕ ಎಲ್ಲರಿಗೂ ಕಾಡುತ್ತದೆ. ಈ ಸಿನಿಮಾದಲ್ಲಿ ಪ್ರೀತಿ ಇದೆ, ಜಾತಿ ಇಲ್ಲ. ಭೇದ ಭಾವ ಇಲ್ಲ, ಹಣದ ಕುರಿತು ಇಲ್ಲ. ಇದೇ ಬೇರೆ ಥರದ ಕಥೆ ಇರುವ ಸಿನಿಮಾ. ನನಗೆ ಪ್ರೀತಿ ಬಿಟ್ಟರೆ ಬೇರೆ ಏನೂ ಗೊತ್ತಿಲ್ಲ ಎಂದು ರವಿಚಂದ್ರನ್ ಹೇಳಿದ್ದಾರೆ.

     

    ಈ ಚಿತ್ರದಲ್ಲಿ ಕಥೆ ನಡೆಯೋದು ಜನರ ಮಧ್ಯೆ. ಪ್ರತಿಯೊಬ್ಬರಿಗೂ ಸಿನಿಮಾದಲ್ಲಿ ನಟಿಸೋ ಅವಕಾಶ ಇದೆ. ಆ ಸಿನಿಮಾದಲ್ಲಿ ಯಾರೆಲ್ಲ ನಟಿಸಬೇಕು ಎಂದಿದ್ದೀರೋ, ನನ್ನ ಇನ್ಸ್ಟಾಗ್ರಾಂ ಅಕೌಂಟ್‌ಗೆ ಫ್ಯಾಮಿಲಿ ಫೋಟೋ ಶೇರ್ ಮಾಡಿ ಬನ್ನಿ. ನಾನು ಅವರನ್ನು ಕರೆಸಿ ಶೂಟ್ ಮಾಡುತ್ತೇನೆ ಎಂದಿದ್ದಾರೆ. ಹೊಸಬರಿಗೆ ಓಪನ್ ಆಫರ್ ಕೊಟ್ಟಿದ್ದಾರೆ ರವಿಚಂದ್ರನ್.

  • ಮೇ 30ಕ್ಕೆ ‘ಪ್ರೇಮಲೋಕ 2’ ಶೂಟಿಂಗ್ ಶುರು

    ಮೇ 30ಕ್ಕೆ ‘ಪ್ರೇಮಲೋಕ 2’ ಶೂಟಿಂಗ್ ಶುರು

    ಕ್ರೇಜಿ ಸ್ಟಾರ್ ರವಿಚಂದ್ರನ್ (Ravichandran) ಕೆರಿಯರ್ ಬದಲಿಸಿದ ಸಿನಿಮಾ ಅಂದರೆ 1987ರಲ್ಲಿ ತೆರೆಕಂಡ ಪ್ರೇಮಲೋಕ. ತಾವೇ ನಿರ್ದೇಶಿಸಿ, ನಟಿಸಿ ಗೆದ್ದಿದ್ದರು. ಈಗ ಪ್ರೇಮಲೋಕ ಪಾರ್ಟ್ 2 (Premaloka) ಸಿನಿಮಾ ಮಾಡೋಕೆ ಮುಂದಾಗಿದ್ದಾರೆ. ಮೇ 30ರಿಂದ ಶೂಟಿಂಗ್ ಕೂಡ ಶುರುವಾಗಲಿದೆ. ಇದನ್ನೂ ಓದಿ:ಪುತ್ರ ಅನಂತ್ ಪ್ರೀ-ವೆಡ್ಡಿಂಗ್‌ನಲ್ಲಿ ನೀತಾ ಅಂಬಾನಿ ಡ್ಯಾನ್ಸ್

    ಕಾರ್ಯಕ್ರವೊಂದರಲ್ಲಿ ಅತಿಥಿಯಾಗಿ ರವಿಚಂದ್ರನ್ ಭಾಗವಹಿಸಿದ್ದರು. ‘ಪ್ರೇಮಲೋಕ 2’ ಬಗ್ಗೆ ಮಾಹಿತಿ ನೀಡಿದ್ದಾರೆ. ಮೇ 30ರಂದು ‘ಪ್ರೇಮಲೋಕ 2’ (Premaloka 2) ಸಿನಿಮಾವನ್ನು ಆರಂಭಿಸುತ್ತೇನೆ. ನನ್ನ ದೊಡ್ಡ ಮಗ ಮನೋರಂಜನ್ ಅದರಲ್ಲಿ ನಟಿಸುತ್ತಾನೆ. ಚಿಕ್ಕ ಮಗ ವಿಕ್ರಮ್ ಚಿಕ್ಕ ಪಾತ್ರ ನಟಿಸುತ್ತಾನೆ. ನಾನು ತಂದೆ ಪಾತ್ರದಲ್ಲಿ ನಟಿಸುತ್ತಿದ್ದೇನೆ ಎಂದು ಕ್ರೇಜಿ ಸ್ಟಾರ್ ತಿಳಿಸಿದ್ದಾರೆ.

    ‘ಪ್ರೇಮಲೋಕ 2’ ಸಿನಿಮಾದಲ್ಲಿ ಬರೀ 20-25 ಹಾಡುಗಳು ಇರುತ್ತೆದೆ ಅಷ್ಟೇ. ಆದರೆ ಜೀವನಪೂರ್ತಿ ಇಡೀ ಸಿನಿಮಾ ಚಿಕ್ಕವರಿಂದಿಡಿದು ದೊಡ್ಡವರ ತನಕ ಎಲ್ಲರಿಗೂ ಕಾಡುತ್ತದೆ. ಈ ಸಿನಿಮಾದಲ್ಲಿ ಪ್ರೀತಿ ಇದೆ, ಜಾತಿ ಇಲ್ಲ. ಭೇದ ಭಾವ ಇಲ್ಲ, ಹಣದ ಕುರಿತು ಇಲ್ಲ. ಇದೇ ಬೇರೆ ಥರದ ಕಥೆ ಇರುವ ಸಿನಿಮಾ. ನನಗೆ ಪ್ರೀತಿ ಬಿಟ್ಟರೆ ಬೇರೆ ಏನೂ ಗೊತ್ತಿಲ್ಲ ಎಂದು ರವಿಚಂದ್ರನ್ ಹೇಳಿದ್ದಾರೆ.

    ಈ ಚಿತ್ರದಲ್ಲಿ ಕಥೆ ನಡೆಯೋದು ಜನರ ಮಧ್ಯೆ. ಪ್ರತಿಯೊಬ್ಬರಿಗೂ ಸಿನಿಮಾದಲ್ಲಿ ನಟಿಸೋ ಅವಕಾಶ ಇದೆ. ಆ ಸಿನಿಮಾದಲ್ಲಿ ಯಾರೆಲ್ಲ ನಟಿಸಬೇಕು ಎಂದಿದ್ದೀರೋ, ನನ್ನ ಇನ್ಸ್ಟಾಗ್ರಾಂ ಅಕೌಂಟ್‌ಗೆ ಫ್ಯಾಮಿಲಿ ಫೋಟೋ ಶೇರ್ ಮಾಡಿ ಬನ್ನಿ. ನಾನು ಅವರನ್ನು ಕರೆಸಿ ಶೂಟ್ ಮಾಡುತ್ತೇನೆ ಎಂದಿದ್ದಾರೆ. ಹೊಸಬರಿಗೆ ಓಪನ್ ಆಫರ್ ಕೊಟ್ಟಿದ್ದಾರೆ ರವಿಚಂದ್ರನ್.

  • ‘ಪ್ರೇಮಲೋಕ 2’ ಬರತ್ತೆ: ಹೊಸ ಕನಸು ಹಂಚಿಕೊಂಡ ಕ್ರೇಜಿಸ್ಟಾರ್

    ‘ಪ್ರೇಮಲೋಕ 2’ ಬರತ್ತೆ: ಹೊಸ ಕನಸು ಹಂಚಿಕೊಂಡ ಕ್ರೇಜಿಸ್ಟಾರ್

    ಕ್ರೇಜಿಸ್ಟಾರ್ ರವಿಚಂದ್ರನ್ (Ravichandran) ಅಂದಾಕ್ಷಣ ಥಟ್ಟನೆ ನೆನಪಾಗುವ ಸಿನಿಮಾ ಪ್ರೇಮಲೋಕ. ಈ ಸಿನಿಮಾ ಸೃಷ್ಟಿದ ದಾಖಲೆಗಳು ಒಂದಲ್ಲ, ಎರಡಲ್ಲ. ಈ ಹೊತ್ತಿಗೂ ಎವರ್ ಗ್ರೀನ್ ಸಿನಿಮಾಗಳ ಸಾಲಿನಲ್ಲಿ ಪ್ರೇಮಲೋಕ ಯಾವತ್ತಿಗೂ ಕಾಣಿಸಿಕೊಳ್ಳತ್ತೆ. ಈ ಸಿನಿಮಾದ ಪಾರ್ಟ್ 2 (Premaloka 2) ಮಾಡುವ ಕುರಿತು ರವಿಚಂದ್ರನ್ ಹೇಳಿದ್ದಾರೆ.

    ಹಂಪಿ ಉತ್ಸವದಲ್ಲಿ ಅತಿಥಿಯಾಗಿ ಪಾಲ್ಗೊಂಡಿದ್ದ ರವಿಚಂದ್ರನ್, ತಮ್ಮ ಪ್ರೇಮಲೋಕ 2 ಚಿತ್ರದ ಕನಸನ್ನು ಅಭಿಮಾನಿಗಳ ಮುಂದೆ ಹಂಚಿಕೊಂಡರು. ಜೊತೆಗೆ ಈ ಸಿನಿಮಾದಲ್ಲಿ ಬರೋಬ್ಬರಿ 25 ಹಾಡುಗಳು ಇರಲಿವೆ ಎಂದು ಅಚ್ಚರಿಕೆಯ ಹೇಳಿಕೆಯನ್ನೂ ನೀಡಿದರು. 25 ಹಾಡುಗಳು ಇರಲಿವೆ ಎನ್ನುವ ಮಾತು ಕೇಳುತ್ತಿದ್ದಂತೆಯೇ ಸ್ವತಃ ಸಚಿವರಾದ ಜಮೀರ್ ಅಚ್ಚರಿ ವ್ಯಕ್ತ ಪಡಿಸಿದರು.

    ಹೌದು, ಪ್ರೇಮಲೋಕ ಸಿನಿಮಾದ ಅಷ್ಟೂ ಹಾಡುಗಳು ಹಿಟ್ ಆಗಿದ್ದವು. ಈ ಹೊತ್ತಿಗೂ ಈ ಹಾಡುಗಳು ಟ್ರೆಂಡಿಂಗ್ ನಲ್ಲಿವೆ. ಅಂಥದ್ದೇ ಮತ್ತಷ್ಟು ಹಾಡುಗಳನ್ನು ಪ್ರೇಮಲೋಕ 2 ಚಿತ್ರಕ್ಕೆ ಅಳವಡಿಸಲಿದ್ದಾರಂತೆ ರವಿಚಂದ್ರನ್. ಈ ಹಾಡುಗಳು ಕಥೆಯ ರೂಪದಲ್ಲೂ ಬರಲಿವೆ ಎನ್ನುವುದು ವಿಶೇಷ.

     

    ಕೇವಲ ಸಿನಿಮಾ ಮಾಡುವ ಕುರಿತು ಮಾತ್ರ ರವಿಚಂದ್ರನ್ ಮಾತನಾಡಿದ್ದಾರೆ. ಯಾವಾಗ ಶುರು? ಕಥೆಯೇ ಏನು? ಕಲಾವಿದರು ಯಾರೆಲ್ಲ ಇರಲಿದ್ದಾರೆ ಎನ್ನುವ ಮಾಹಿತಿಯನ್ನು ಅವರು ಬಹಿರಂಗ ಪಡಿಸಿಲ್ಲ. ಮುಂದಿನ ದಿನಗಳಲ್ಲಿ ಹೇಳಬಹುದು.

  • ಅಭಿಮಾನಿಗಳಿಗೆ ಮರೆಯಲಾಗದ ಉಡುಗೊರೆ ನೀಡಲು ಕ್ರೇಜಿಸ್ಟಾರ್ ರೆಡಿ!

    ಅಭಿಮಾನಿಗಳಿಗೆ ಮರೆಯಲಾಗದ ಉಡುಗೊರೆ ನೀಡಲು ಕ್ರೇಜಿಸ್ಟಾರ್ ರೆಡಿ!

    ಬೆಂಗಳೂರು: ಕ್ರೇಜಿಸ್ಟಾರ್ ರವಿಚಂದ್ರನ್ ತಮ್ಮ ಅಭಿಮಾನಿಗಳಿಗೆ ಮರೆಯಲಾಗದ ಉಡುಗೊರೆ ನೀಡಲು ಸಿದ್ಧತೆ ನಡೆಸಿದ್ದು, ಈ ಕುರಿತ ಮಾಹಿತಿಯನ್ನು ಸ್ವತಃ ಅವರೇ ರಿವೀಲ್ ಮಾಡಿದ್ದಾರೆ.

    ‘ಆ ದೃಶ್ಯಂ’ ಸಿನಿಮಾದ ಸಕ್ಸಸ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ರವಿಚಂದ್ರನ್ ಅವರು, ತಮ್ಮ 35 ವರ್ಷದ ಕನಸನ್ನು ಸಾಕಾರಗೊಳಿಸಲು ಸಜ್ಜಾಗಿದ್ದು, ಪ್ರೇಮಲೋಕ-2 ಚಿತ್ರದಲ್ಲಿ ಮನೋರಂಜನ್ ರವಿಚಂದ್ರನ್ ರಣಧೀರನಾಗಿ ಗ್ರ್ಯಾಂಡ್ ಕೊಡಲಿದ್ದಾರೆ ಎಂದರು.

    ವಿಶೇಷ ಎಂದರೆ ಈ ಸಿನಿಮಾದಲ್ಲಿ ರವಿಚಂದ್ರನ್ ಅವರ 2ನೇ ಪುತ್ರ ವಿಕ್ರಮ್‍ಗೂ ಒಂದು ಚಾನ್ಸ್ ಕೊಡುವ ನಿರ್ಧಾರವನ್ನು ಪ್ರಕಟಿಸಿದ ಅವರು, ಈ ಕುರಿತು ಸಿದ್ಧತೆಗಳು ಫೈನಲ್ ಆಗಬೇಕಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಮೂವರು ಒಟ್ಟಿಗೆ ಸ್ಕ್ರೀನ್ ಶೇರ್ ಮಾಡಬಹುದು ಎಂದು ರವಿಚಂದ್ರನ್ ಹೇಳಿದರು.

    ‘ಆ ದೃಶ್ಯ’ ಸಿನಿಮಾ ನೋಡಿದ ಪ್ರೇಕ್ಷಕರು ಮೆಚ್ಚುಗೆ ಸೂಚಿಸಿದ್ದಾರೆ. ನನ್ನನ್ನು ಪ್ರೇಕ್ಷಕರು ಹೀರೋ ಆಗಿಯೇ ನೋಡಲು ಬಯಸುತ್ತಾರೆ. ಅಂತಹವರಿಗೆ ಈ ಸಿನಿಮಾ ಇಷ್ಟವಾಗಿದ್ದು, ನಾನು ಹೀರೋ ಪಾತ್ರ ಹಾಗೂ ವಿಶೇಷ ಪಾತ್ರ ಎರಡರಲ್ಲೂ ಮಾಡಲು ಸಿದ್ಧನಿದ್ದೇನೆ. ಕಳೆದ ಹಲವು ವರ್ಷಗಳಿಂದ ಪ್ರೇಮಲೋಕ-2 ಸಿನಿಮಾ ಮಾಡುವ ತಯಾರಿ ನಡೆಯುತ್ತಿತ್ತು. ಆದರೆ ಇದುವರೆಗೂ ಆದು ಆಗಿರಲಿಲ್ಲ. ಆದರೆ ಮಗಳ ಹುಟ್ಟುಹಬ್ಬದ ಸಂಭ್ರಮ ವೇಳೆ ಕಥೆಗೆ ಸ್ಪಷ್ಟನೆ ಸಿಕ್ತು. ಶೀಘ್ರವೇ ಈ ಕುರಿತು ಅಧಿಕೃತ ಮಾಹಿತಿಯನ್ನು ನೀಡುತ್ತೇನೆ ಎಂದರು.