Tag: Pregnant

  • 8 ತಿಂಗಳ ಹಿಂದೆ ಪ್ರೇಮ ವಿವಾಹವಾಗಿದ್ದ ಮಹಿಳೆಯ ಅನುಮಾನಾಸ್ಪದ ಸಾವು

    8 ತಿಂಗಳ ಹಿಂದೆ ಪ್ರೇಮ ವಿವಾಹವಾಗಿದ್ದ ಮಹಿಳೆಯ ಅನುಮಾನಾಸ್ಪದ ಸಾವು

    ಮಂಡ್ಯ: ಎರಡು ತಿಂಗಳ ಗರ್ಭಿಣಿಯ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಜಿಲ್ಲೆಯ ಪಾಂಡವಪುರ ತಾಲೂಕಿನ ಮೇಲುಕೋಟೆಯಲ್ಲಿ ನಡೆದಿದೆ.

    ಪ್ರೀತಿ (20) ಆತ್ಮಹತ್ಯೆಗೆ ಶರಣಾದ ಮಹಿಳೆ. ಪ್ರೀತಿ ಎಂಟು ತಿಂಗಳ ಹಿಂದೆ ಮೇಲುಕೋಟೆಯ ಆಟೋ ಚಾಲಕ ಮಂಜುನಾಥ ಜೊತೆ ಪ್ರೇಮ ವಿವಾಹವಾಗಿದ್ದಳು. ಆದರೆ ಗುರುವಾರ ಮಧ್ಯಾಹ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

    ಪ್ರೀತಿ ಎರಡು ತಿಂಗಳ ಗರ್ಭಿಣಿಯಾಗಿದ್ದರು ಎಂದು ತಿಳಿದು ಬಂದಿದೆ. ಮಗಳ ಆತ್ಮಹತ್ಯೆಯಿಂದ ನೊಂದ ಸಂಬಂಧಿಕರು ಪತಿಯ ಮನೆಯವರು ಕೊಲೆ ಮಾಡಿದ್ದಾರೆ ಎಂದು ಆರೋಪಿಸುತ್ತಿದ್ದಾರೆ. ಅಷ್ಟೇ ಅಲ್ಲದೇ ಆಕ್ರೋಶಗೊಂಡ ಸಂಬಂಧಿಕರು ಪತಿಯ ಮನೆಗೆ ಮುತ್ತಿಗೆ ಹಾಕಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ನಂತರ ಸ್ಥಳಕ್ಕೆ ಮೇಲುಕೋಟೆ ಪೊಲೀಸರು ಆಗಮಿಸಿ ಪರಿಸ್ಥಿತಿಯನ್ನು ಸುಧಾರಿಸಿದ್ದಾರೆ.

    ಈ ಘಟನೆ ಸಂಬಂಧ ಮೇಲುಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ನೇಣು ಬಿಗಿದ ಸ್ಥಿತಿಯಲ್ಲಿ 5 ತಿಂಗ್ಳ ಗರ್ಭಿಣಿ ಶವ ಪತ್ತೆ

    ನೇಣು ಬಿಗಿದ ಸ್ಥಿತಿಯಲ್ಲಿ 5 ತಿಂಗ್ಳ ಗರ್ಭಿಣಿ ಶವ ಪತ್ತೆ

    ಧಾರವಾಡ: ಅನುಮಾನಾಸ್ಪದ ರೀತಿಯಲ್ಲಿ ಐದು ತಿಂಗಳ ಗರ್ಭಿಣಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಧಾರವಾಡ ತಾಲೂಕಿನ ಮನಗುಂಡಿ ರಸ್ತೆಯಲ್ಲಿ ನಡೆದಿದೆ.

    24 ವರ್ಷದ ಲಕ್ಷ್ಮಿ ರೊಟ್ಟಿ ಮೃತ ಮಹಿಳೆ. ಲಕ್ಷ್ಮಿಯನ್ನು ಔಷಧ ಅಂಗಡಿಯ ಮಾಲೀಕನಾಗಿದ್ದ ಶ್ರೀನಿವಾಸ್ ಜೊತೆ 4 ವರ್ಷಗಳ ಹಿಂದೆ ಮದುವೆ ಮಾಡಿಕೊಡಲಾಗಿತ್ತು. ಮದುವೆ ಸಮಯದಲ್ಲಿ 25 ಸಾವಿರ ನಗದು ಹಣ, ಒಂದುವರೆ ತೊಲ ಚಿನ್ನ ಕೊಡಲಾಗಿತ್ತು. ಲಕ್ಷ್ಮಿಗೆ ಈಗಾಗಲೇ ಒಂದು ಮಗುವಿದ್ದು, ಈಗ ಹೊಟ್ಟೆಯಲ್ಲಿ 5 ತಿಂಗಳ ಭ್ರೂಣ ಬೆಳೆಯುತಿತ್ತು. ಆದರೆ ಇಂದು ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಲಕ್ಷ್ಮೀ ಶವ ಪತ್ತೆಯಾಗಿದೆ.

    ಗಂಡನ ಮನೆಯವರು ವರದಕ್ಷಿಣೆಗಾಗಿ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ. ನಂತರ ನೇಣು ಹಾಕಿದ್ದಾರೆ ಎಂದು ಲಕ್ಷ್ಮಿ ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಸಂಬಂಧ ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ಮುಂದುವರಿದಿದೆ.

  • ಬೇಕರಿ ತಿನಿಸು ತಿಂದು ಗರ್ಭಿಣಿ ಸೇರಿದಂತೆ 9 ಮಕ್ಕಳು ಅಸ್ವಸ್ಥ

    ಬೇಕರಿ ತಿನಿಸು ತಿಂದು ಗರ್ಭಿಣಿ ಸೇರಿದಂತೆ 9 ಮಕ್ಕಳು ಅಸ್ವಸ್ಥ

    ಮಂಡ್ಯ: ಬೇಕರಿಯಲ್ಲಿ ಖರೀದಿಸಿದ ತಿನಿಸು ತಿಂದು ಗರ್ಭಿಣಿ ಸೇರಿದಂತೆ 9 ಮಕ್ಕಳು ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ ಘಟನೆ ಮಂಡ್ಯ ಜಿಲ್ಲೆಯ ಕೆಆರ್ ಪೇಟೆಯಲ್ಲಿ ನಡೆದಿದೆ.

    ಕೆಆರ್ ಪೇಟೆ ಪಟ್ಟಣದ ಬೇಕರಿಯೊಂದರಲ್ಲಿ ವಿವಿಧ ಗ್ರಾಮಗಳ ಜನ ಕೇಕ್ ಖರೀದಿಸಿ ಮನೆಗೆ ತೆಗೆದುಕೊಂಡು ಹೋಗಿದ್ದರು. ಕೇಕ್ ತಿಂದ ನಂತರ ಗರ್ಭಿಣಿ ಸೇರಿದಂತೆ 9 ಮಕ್ಕಳು ವಾಂತಿ ಮಾಡಿಕೊಂಡು ಅಸ್ವಸ್ಥರಾಗಿದ್ದಾರೆ.

    ಗುರುವಾರ ಸಂಜೆ 6 ಗಂಟೆಯಿಂದ ಒಬ್ಬರಾದ ಮೇಲೆ ಒಬ್ಬರಂತೆ ರಾತ್ರಿ 11 ಗಂಟೆವರೆಗೂ ಅಸ್ವಸ್ಥಗೊಂಡಿದ್ದು, ಕೂಡಲೇ ಅವರನ್ನು ಕೆಆರ್ ಪೇಟೆ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಯಲ್ಲಿ ಮಕ್ಕಳಿಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ.

    ಏಳು ಮಕ್ಕಳನ್ನು ಮುಂಜಾಗ್ರತಾ ಕ್ರಮವಾಗಿ ಮೈಸೂರು ಆಸ್ಪತ್ರೆಗೆ ರವಾನಿಸಲಾಗಿದೆ. ಸದ್ಯ ಎಲ್ಲರ ಆರೋಗ್ಯದಲ್ಲೂ ಚೇತರಿಕೆ ಕಂಡುಬಂದಿದ್ದು, ಈ ಪ್ರಕರಣದಿಂದಾಗಿ ಪೋಷಕರಲ್ಲಿ ಆತಂಕ ಮೂಡಿದೆ. ಘಟನೆ ನಡೆದ ತಕ್ಷಣ ಬೇಕರಿಗೆ ದೌಡಾಯಿಸಿದ ಅಧಿಕಾರಿಗಳು ಅನಾರೋಗ್ಯಕ್ಕೆ ಕಾರಣವಾದ ಕೇಕ್ ವಶಪಡಿಸಿಕೊಂಡು ತನಿಖೆ ನಡೆಸಿದ್ದಾರೆ.

  • 7 ತಿಂಗ್ಳ ಗರ್ಭಿಣಿಯನ್ನು ಕಲ್ಲಿನಿಂದ ಜಜ್ಜಿ, ಕಾಲುವೆಗೆ ಬಿಸಾಕಿ, ಪೊಲೀಸರಿಗೆ ಶರಣಾದ ಪಾಪಿ ಪತಿ

    7 ತಿಂಗ್ಳ ಗರ್ಭಿಣಿಯನ್ನು ಕಲ್ಲಿನಿಂದ ಜಜ್ಜಿ, ಕಾಲುವೆಗೆ ಬಿಸಾಕಿ, ಪೊಲೀಸರಿಗೆ ಶರಣಾದ ಪಾಪಿ ಪತಿ

    ಬಳ್ಳಾರಿ: ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿ ಬಳಿಕ ಶವವನ್ನು ಕಾಲುವೆಗೆ ಎಸೆದು ಪೊಲೀಸರಿಗೆ ಶರಣಾಗಿರುವ ಘಟನೆಯೊಂದು ಜಿಲ್ಲೆಯ ಕಂಪ್ಲಿ ತಾಲೂಕಿನ ರಾಮಸಾಗರ ಗ್ರಾಮದಲ್ಲಿ ನಡೆದಿದೆ.

    ಶಶಿಕಲಾ (21) ಮೃತ ದುರ್ದೈವಿ. ಪತಿ ಉಮೇಶ್ ಎರಡು ಮದುವೆಯಾಗಿದ್ದನು. ಆದರೆ ಈತ ಮೊದಲನೇ ಹೆಂಡತಿಯ ಮೇಲೆ ಸದಾ ಅನುಮಾನಪಡುತ್ತಿದ್ದನು. ಹೀಗಾಗಿ ಮೊದಲನೇ ಪತ್ನಿ ಶಶಿಕಲಾಳನ್ನು ಕಲ್ಲಿನಿಂದ ಜಜ್ಜಿ ಹತ್ಯೆ ಮಾಡಿದ್ದಾನೆ.

    ಶಶಿಕಲಾ ಏಳು ತಿಂಗಳ ಗರ್ಭಿಣಿಯಾಗಿದ್ದರೂ ಆಕೆಯನ್ನು ನಿರ್ದಯವಾಗಿ ಕಲ್ಲಿನಿಂದ ಜಜ್ಜಿ ಪತಿ ಉಮೇಶ್ ಬರ್ಬರವಾಗಿ ಕೊಲೆ ಮಾಡಿದ್ದಾನೆ. ನಂತರ ಪತ್ನಿಯ ಶವವನ್ನು ಕಾಲುವೆಗೆ ಎಸೆದು ಕಂಪ್ಲಿ ಪೊಲೀಸರಿಗೆ ಶರಣಾಗಿದ್ದಾನೆ.

    ಉಮೇಶ್, ಮೊದಲ ಪತ್ನಿ ಶಶಿಕಲಾಳಿಗೆ ಮಕ್ಕಳಾಗಲ್ಲ ಎಂದು ಎರಡನೇ ಮದುವೆಯಾಗಿದ್ದನು. ಆದರೆ ಮೊದಲ ಪತ್ನಿ ಏಳು ತಿಂಗಳ ಗರ್ಭಿಣಿಯಾದ ನಂತರ ಅನುಮಾನಗೊಂಡು ಈಗ ಪತ್ನಿಯನ್ನು ಕೊಲೆಗೈದಿದ್ದಾನೆ. ಸದ್ಯ ಆರೋಪಿ ಉಮೇಶ್ ನನ್ನು ಕಂಪ್ಲಿ ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ಘಟನೆಯ ಬಗ್ಗೆ ಶಶಿಕಲಾ ಪೋಷಕರಿಗೆ ವಿಷಯ ತಿಳಿಯುತ್ತಿದ್ದಂತೆ ಆಕ್ರಂದನ ಮುಗಿಲು ಮುಟ್ಟಿದೆ.

    ಈ ಘಟನೆಯ ಕುರಿತು ಕಂಪ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಪತಿ ರಜೆ ಪಡೆಯಲಿಲ್ಲ ಎಂದು 19 ವರ್ಷದ 2 ತಿಂಗಳ ಗರ್ಭಿಣಿ ನೇಣಿಗೆ ಶರಣು!

    ಪತಿ ರಜೆ ಪಡೆಯಲಿಲ್ಲ ಎಂದು 19 ವರ್ಷದ 2 ತಿಂಗಳ ಗರ್ಭಿಣಿ ನೇಣಿಗೆ ಶರಣು!

    ಯಾದಗಿರಿ: ಪತಿ ರಜೆ ಪಡೆಯದ ಹಿನ್ನಲೆಯಲ್ಲಿ ಮನನೊಂದು ಎರಡು ತಿಂಗಳ ಗರ್ಭಿಣಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಯಾದಗಿರಿ ನಗರದ ರೈಲ್ವೆ ನಿಲ್ದಾಣದ ಹತ್ತಿರ ನಡೆದಿದೆ.

    ಪೂಜಾ ರಾಠೋಡ್(19) ಆತ್ಮಹತ್ಯೆ ಮಾಡಿಕೊಂಡ ಮೃತ ದುರ್ದೈವಿ. ಮೃತ ಪೂಜಾಳ ಗಂಡ ಆನಂದ್ ಯಾದಗಿರಿ ಈಶಾನ್ಯ ಸಾರಿಗೆ ಸಂಸ್ಥೆಯಲ್ಲಿ ಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಗುರುವಾರ ಪೂಜಾ ಗಂಡ ಆನಂದ್ ಅವರಿಗೆ ರಜೆ ಪಡೆಯಲು ಸೂಚಿಸಿದ್ದಳು. ಆದರೆ ಆನಂದ್ ರಜೆ ಪಡೆಯದೆ ಕರ್ತವ್ಯಕ್ಕೆ ಹಾಜರಾಗಿದ್ದರು. ಇದರಿಂದ ಮನನೊಂದು ಪೂಜಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

    ನಾನು ಎರಡು ದಿನದಲ್ಲಿ ರಜೆ ಪಡೆದುಕೊಂಡು ಊರಿಗೆ ಹೋಗಬೇಕು ಎಂದು ತೀರ್ಮಾನಿಸಿದ್ದೆ. ಆದರೆ ಕರ್ತವ್ಯ ಮಗಿಸಿಕೊಂಡು ಬಂದಾಗ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆನಂದ್ ಹೇಳಿದ್ದಾರೆ.

    ಸದ್ಯ ಸ್ಥಳಕ್ಕೆ ನಗರ ಪೊಲೀಸರು ಭೇಟಿ ನೀಡಿದ್ದು, ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡುತ್ತಿದ್ದಾರೆ.

  • ಮಗುವಿಗೆ ತೊಂದ್ರೆಯಾಗುತ್ತೆ, ಕುಡಿಬೇಡ ಎಂದು ಎಷ್ಟು ಹೇಳಿದ್ರೂ ಕೇಳದ ಗರ್ಭಿಣಿ ಪತ್ನಿಯನ್ನ ಕೊಂದೇಬಿಟ್ಟ!

    ಮಗುವಿಗೆ ತೊಂದ್ರೆಯಾಗುತ್ತೆ, ಕುಡಿಬೇಡ ಎಂದು ಎಷ್ಟು ಹೇಳಿದ್ರೂ ಕೇಳದ ಗರ್ಭಿಣಿ ಪತ್ನಿಯನ್ನ ಕೊಂದೇಬಿಟ್ಟ!

    ಮುಂಬೈ: ಕುಡಿಬೇಡ ಎಂದು ಎಷ್ಟು ಹೇಳಿದರೂ ಕೇಳಲಿಲ್ಲವೆಂದು ವ್ಯಕ್ತಿಯೊಬ್ಬ ತನ್ನ ಎಂಟು ತಿಂಗಳ ಗರ್ಭಿಣಿ ಪತ್ನಿಯನ್ನು ಕೊಂದು ಮನೆಯ ಹಿಂದೆಯೇ ಸಮಾಧಿ ಮಾಡಿರುವ ಘಟನೆ ನಗರದ ಬಿವಂಡಿಯಲ್ಲಿ ನಡೆದಿದೆ.

    ಮಾಯ್ ಪತಿಯಿಂದ ಹತ್ಯೆಯಾದ ದುರ್ದೈವಿ. ಸದ್ಯಕ್ಕೆ ಆರೋಪಿ ಪತಿ ಕಲ್ಪೇಶ್ ಠಾಕ್ರೆಯ್ ಪೊಲೀಸರಿಗೆ ಶರಣಾಗಿದ್ದಾನೆ. ಗಣೇಶ್ಪುರಿ ಪೊಲೀಸರು ಈತನನ್ನು ಬಂಧಿಸಿದ್ದು ಮೃತದೇಹವನ್ನು ವಶಪಡಿಸಿಕೊಂಡಿದ್ದಾರೆ.

    ನಡೆದಿದ್ದೇನು?: ಮಾಯ್ 8 ತಿಂಗಳ ಗರ್ಭಿಣಿಯಾಗಿದ್ದು, ಕುಡಿತದ ಅಭ್ಯಾಸ ಇತ್ತು. ಆದ್ದರಿಂದ ಪತಿ ಕಲ್ಪೇಶ್ ನಮ್ಮ ಮಗುವಿಗೆ ತೊಂದರೆಯಾಗುತ್ತದೆ, ಕುಡಿಯುವುದನ್ನು ನಿಲ್ಲಿಸು ಎಂದು ಆಗಾಗ ಹೇಳುತ್ತಿದ್ದ. ಆದರೆ ಆಕೆ ಪತಿಯ ಮಾತಿಗೆ ಕಿವಿ ಕೊಡಲಿಲ್ಲ. ಮಾರ್ಚ್ 12 ರಂದು ಮತ್ತೆ ಇದೇ ವಿಚಾರಕ್ಕೆ ಜಗಳವಾಗಿ ಕೋಪಗೊಂಡ ಕಲ್ಪೇಶ್ ಪತ್ನಿಯನ್ನು ಕೊಲೆ ಮಾಡಿ ಮನೆಯ ಹಿಂದೆ ಸಮಾಧಿ ಮಾಡಿದ್ದಾನೆ. ಒಂದು ದಿನದ ನಂತರ ನನ್ನ ಹೆಂಡತಿಯ ಕಾಣೆಯಾಗಿದ್ದಾಳೆ ಎಂದು ದೂರು ದಾಖಲಿಸಿದ್ದಾನೆ. ಆದರೆ ಬಳಿಕ ಆತನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡು ಶರಣಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ಕಲ್ಪೇಶ್ ಮೂರು ವರ್ಷಗಳ ಹಿಂದೆ ಬಾರಿನಲ್ಲಿ ಡ್ಯಾನ್ಸರ್ ಆಗಿ ಕೆಲಸ ಮಾಡುತ್ತಿದ್ದ ಮಾಯ್ ಳನ್ನು ನೋಡಿ ಪ್ರೀತಿ ಮಾಡಿದ್ದು, ಕಳೆದ ವರ್ಷ ಇಬ್ಬರೂ ವಿವಾಹವಾಗಿದ್ದರು. ಮಹಿಳೆಗೆ ಕುಡಿತದ ಅಭ್ಯಾಸ ಇದ್ದುದ್ದರಿಂದ ಪ್ರತಿದಿನ ಇಬ್ಬರ ನಡುವೆ ಜಗಳ ನಡೆಯುತ್ತಿತ್ತು. ಅದೇ ರೀತಿ ಮಾರ್ಚ್ 11 ರಂದು ಈ ಜಗಳ ವಿಕೋಪಕ್ಕೆ ತಿರುಗಿ ಮಾಯ್ ಳನ್ನು ಕೊಂದು ತಮ್ಮ ಮನೆ ಬಳಿ ಸಮಾಧಿ ಮಾಡಿದ್ದಾನೆ. ಸದ್ಯಕ್ಕೆ ಮೃತದೇಹದ ಅವಶೇಷಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ವೈದ್ಯರ ವರದಿಗಾಗಿ ನಾವು ಕಾಯುತ್ತಿದ್ದೇವೆ ಎಂದು ಇನ್ಸ್ ಪೆಕ್ಟರ್ ಶೇಖರ್ ಧೋಬ್ ಹೇಳಿದ್ದಾರೆ.

  • ಮದ್ವೆಯಾಗಿ ಗಂಡನ ಮನೆಗೆ ಹೋಗ್ತಿದ್ದಂತೆ ಬಯಲಾಯ್ತು ವಧುವಿನ ರಹಸ್ಯ!

    ಮದ್ವೆಯಾಗಿ ಗಂಡನ ಮನೆಗೆ ಹೋಗ್ತಿದ್ದಂತೆ ಬಯಲಾಯ್ತು ವಧುವಿನ ರಹಸ್ಯ!

    ಇಂದೋರ್: ಮದುವೆಯಾಗಿ ಗಂಡನ ಮನೆಗೆ ಬರುತ್ತಿದ್ದಂತೆ ವಧು ವಾಂತಿ ಮಾಡಿದ್ದು, ನಂತರ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಪತ್ನಿ ಆರು ವಾರದ ಗರ್ಭಿಣಿ ಎನ್ನುವ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.

    ಕೆಂಟ್ ರೋಡ್ ನಿವಾಸಿಯಾದ ಸಿದ್ಧಾರ್ಥ್ (ಹೆಸರು ಬದಲಾಯಿಸಲಾಗಿದೆ) ಮತ್ತು ಜಾರ್ಖಂಡ್‍ನ ರಾಮ್‍ಗಡ್‍ನಲ್ಲಿರುವ ಪೂಜಾ (ಹೆಸರು ಬದಲಾಯಿಸಲಾಗಿದೆ) ಜೊತೆ ಮದುವೆ ನಡೆದಿತ್ತು. ಮದುವೆಯಾಗಿ ಇಂದೋರ್ ನಲ್ಲಿರುವ ತನ್ನ ಗಂಡನ ಮನೆಗೆ ಬರುತ್ತಿದ್ದಂತೆ ವಧು ವಾಂತಿ ಮಾಡಲು ಶುರು ಮಾಡಿದ್ದಾಳೆ.

    ನಂತರ ಸಿದ್ಧಾರ್ಥ್ ವಧು ಪೂಜಾಳನ್ನು ಮಹಿಳಾ ವೈದ್ಯರ ಬಳಿ ಕರೆದುಕೊಂಡು ಹೋಗಿದ್ದಾರೆ. ಆಗ ಪೂಜಾ 6 ವಾರದ ಗರ್ಭಿಣಿ ಎಂಬ ವಿಷಯ ತಿಳಿದು ಬಂದಿದೆ. ನಂತರ ಸಿದ್ಧಾರ್ಥ್ ಈ ವಿಷಯದ ಬಗ್ಗೆ ಪೂಜಾಳ ಹತ್ತಿರ ಕೇಳಿದ್ದಾರೆ. ಆಗ ಪೂಜಾ ಸತ್ಯವನ್ನು ಒಪ್ಪಿಕೊಂಡಿದ್ದಾಳೆ.

    ಮದುವೆಯಾಗುವ ಮುಂಚೆ ನಾನು ನನ್ನ ಸಂಬಂಧಿಕನ ಜೊತೆ ದೈಹಿಕ ಸಂಬಂಧ ಬೆಳೆಸಿಕೊಂಡಿದ್ದೆ. ಹಾಗಾಗಿ ನಾನು ಈಗ ಗರ್ಭಿಣಿ ಆಗಿದ್ದೀನಿ ಎಂದು ಪೂಜಾ ಒಪ್ಪಿಕೊಂಡಿದ್ದಾಳೆ. ಪೂಜಾ ಸತ್ಯವನ್ನು ಒಪ್ಪಿಕೊಂಡ ಬಳಿಕ 100 ರೂ. ಸ್ಯ್ಟಾಂಪ್ ಮೇಲೂ ಬರೆದಿದ್ದಾಳೆ.

    ಮದುವೆಯಾಗಿ ಮೋಸ ಹೋದ ಸಿದ್ಧಾರ್ಥ್ ಕೋರ್ಟ್ ನ ಮೊರೆ ಹೋಗಿದ್ದಾರೆ. ನಂತರ ಕೋರ್ಟ್ ಪೂಜಾಳನ್ನು ಕರೆದು ವಿಚಾರಿಸಿದಾಗ ನಾನು ಈ ಮೊದಲು ನನ್ನ ಸಂಬಂಧಿಕನ ಜೊತೆ ದೈಹಿಕ ಸಂಬಂಧ ಬೆಳೆಸಿಕೊಂಡಿದ್ದೆ ಎಂದು ಪೂಜಾ ಕೋರ್ಟ್‍ನಲ್ಲೂ ಸತ್ಯವನ್ನು ಒಪ್ಪಿಕೊಂಡಿದ್ದಾಳೆ.

    ಒಂದು ಬಾರಿ ವಿಚಾರಣೆ ನಡೆಸಿದ ಬಳಿಕ ಕೋರ್ಟ್ ಮತ್ತೊಂದು ದಿನಾಂಕಕ್ಕೆ ವರ ಹಾಗೂ ವಧುವಿಗೆ ಬರಲು ಹೇಳಿದ್ದರು. ಆದರೆ ವಧು ಕೋರ್ಟ್ ವಿಚಾರಣೆಗೆ ಹಾಜರಾಗಿರಲಿಲ್ಲ. ಹೀಗಾಗಿ ಕೋರ್ಟ್ ಈ ಮದುವೆಯನ್ನು ಕಾನೂನು ಸಮ್ಮತವಾದ ಮದುವೆ ಅಲ್ಲ ಎಂದು ಆದೇಶ ನೀಡಿದೆ.

  • ಮದ್ವೆಯಾಗುವುದಾಗಿ ನಂಬಿಸಿ 3-4 ಬಾರಿ ಅತ್ಯಾಚಾರ- ವಿಷ ಕುಡಿದ ಗರ್ಭಿಣಿ

    ಮದ್ವೆಯಾಗುವುದಾಗಿ ನಂಬಿಸಿ 3-4 ಬಾರಿ ಅತ್ಯಾಚಾರ- ವಿಷ ಕುಡಿದ ಗರ್ಭಿಣಿ

    ಚಿತ್ರದುರ್ಗ: ಗರ್ಭಿಣಿಯೊಬ್ಬರು ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಚಿತ್ರದುರ್ಗ ತಾಲೂಕಿನ ಹುಲ್ಲೂರು ಲಂಬಾಣಿಹಟ್ಟಿ ಗ್ರಾಮದಲ್ಲಿ ನಡೆದಿದೆ.

    ಉಮೇಶ್ ಎಂಬ ಯುವಕ ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿದ್ದಾನೆ ಎಂದು ಏಳು ತಿಂಗಳ ಗರ್ಭಿಣಿ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಸಂತ್ರಸ್ತೆಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಕುರಿತು ಆರೋಪಿ ವಿರುದ್ಧ ದೂರು ದಾಖಲಾಗಿದೆ.

    ದೂರಿನಲ್ಲಿ ಏನಿದೆ?: ನಾನು ನನ್ನ ತಾಯಿಯ ಜೊತೆ ವಾಸಿಸುತ್ತಿದ್ದೆ.  ಮನೆ- ಹೊಲದ ಕೆಲಸ ಮಾಡಿಕೊಂಡು ಮನೆಯಲ್ಲಿರುತ್ತಿದ್ದೆ. ಅದೇ ಗ್ರಾಮದ ಉಮೇಶ್ ಹಾಗೂ ನಾನು ಪ್ರೀತಿಸುತ್ತಿದ್ದೆವು. ಅಕ್ಟೋಬರ್ ನಲ್ಲಿ ಬಲವಂತವಾಗಿ ನನ್ನ ಮೇಲೆ ಅತ್ಯಾಚಾರ ಎಸಗಿದ್ದನು. ನಂತರ ಈ ವಿಷಯವನ್ನು ಯಾರಿಗಾದರೂ ಹೇಳಿದರೆ ಪ್ರಾಣಸಹಿತ ಬಿಡುವುದಿಲ್ಲ ಎಂದು ಹೆದರಿಸಿದ್ದನು. ನಂತರ ನಮ್ಮ ಪೋಷಕರು ಮನೆಯಲ್ಲಿ ಇಲ್ಲದ ಸಮಯ ನೋಡಿಕೊಂಡು ಒಬ್ಬಳೇ ಇದ್ದ ಸಂದರ್ಭದಲ್ಲಿ ಮನೆಗೆ ಬಂದು 4- 5 ಬಾರಿ ಅತ್ಯಾಚಾರ ಎಸಗಿದ್ದಾನೆ ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾರೆ.

    ನಾನು ಗರ್ಭಿಣಿಯಾಗಿದ್ದು, ಈ ವಿಚಾರವನ್ನು ಉಮೇಶ್ ಗೆ ಫೋನ್ ಮಾಡಿ ತಿಳಿಸಿದ್ದೆ. ಆಗ ನಾನು ಮದುವೆಯಾಗುತ್ತೇನೆ ಎಂದು ಹೇಳಿದ್ದ. ಆದರೆ ನಮ್ಮ ಚಿಕ್ಕಮ್ಮ ಅವರಿಂದ ಇದೇ ತಿಂಗಳು ದಿನಾಂಕ 11ರಂದು ಆತ ಬೇರೆ ಹುಡುಗಿ ಜೊತೆ ಮದುವೆ ನಿಶ್ಚಯವಾಗಿದೆ ಎಂಬ ವಿಷಯ ತಿಳಿಯಿತು. ನಾನು ಫೋನ್ ಮಾಡಿದರೂ ಅವನು ರಿಸೀವ್ ಮಾಡುತ್ತಿರಲಿಲ್ಲ. ನನಗೆ ನಂಬಿಸಿ ಮೋಸ ಮಾಡಿದ್ದಾನೆ. ಆದ್ದರಿಂದ ನನಗೆ  ನ್ಯಾಯ ಕೊಡಿಸಿ ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

    ಕಳೆದ ಎರಡು ದಿನಗಳಿಂದ ದೂರು ದಾಖಲಿಸಿಕೊಳ್ಳದೆ ಪೊಲೀಸರು ನಿರ್ಲಕ್ಷಿಸಿದ್ದರು ಎಂದು ಆರೋಪಿಸಲಾಗಿದೆ. ಸಂತ್ರಸ್ತೆ ಆತ್ಮಹತ್ಯೆಗೆ ಯತ್ನಿಸಿದ ಬಳಿಕ ಸೋಮವಾರ ತಡರಾತ್ರಿ ಚಿತ್ರದುರ್ಗ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಚಾಕ್ಲೇಟ್, ತಿಂಡಿ ಕೊಟ್ಟು ಅಪ್ರಾಪ್ತೆಯನ್ನ ನಿರಂತರ ರೇಪ್ ಮಾಡಿ ಗರ್ಭಿಣಿ ಮಾಡಿದ 76 ರ ಮುದುಕ

    ಚಾಕ್ಲೇಟ್, ತಿಂಡಿ ಕೊಟ್ಟು ಅಪ್ರಾಪ್ತೆಯನ್ನ ನಿರಂತರ ರೇಪ್ ಮಾಡಿ ಗರ್ಭಿಣಿ ಮಾಡಿದ 76 ರ ಮುದುಕ

    ಹೈದರಾಬಾದ್: 76 ವರ್ಷದ ವೃದ್ಧನೊಬ್ಬ ಅಪ್ರಾಪ್ತ ಬಾಲಕಿಯ ಮೇಲೆ ನಿರಂತವಾಗಿ ಅತ್ಯಾಚಾರ ಮಾಡಿ ಆಕೆಯನ್ನು ಗರ್ಭಿಣಿ ಮಾಡಿರುವ ಘಟನೆ ತೆಲಂಗಾಣದ ಹೈದರಾಬಾದ್ ನಗರದ ಓಲ್ಡ್ ಸಿಟಿಯಲ್ಲಿ ನಡೆದಿದೆ.

    ಆರೋಪಿಯನ್ನು ಅಬ್ದುಲ್ ವಹಾಬ್ ಎಂದು ಗುರುತಿಸಲಾಗಿದ್ದು, ಆತನ ವಿರುದ್ಧ ಗುರುವಾರ ಪೋಷಕರು ದೂರು ನೀಡಿದ ಬಳಿಕ ಈ ಪ್ರಕರಣ ಬೆಳಕಿಗೆ ಬಂದಿದೆ. ಸದ್ಯ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿ ವಹಾಬ್ ಹಬೀಬ್ ನಗರದಲ್ಲಿರುವ ಅಘಪುರದಲ್ಲಿ ವಾಸಿಸುತ್ತಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.

    ಪೋಷಕರ ದೂರಿನನ್ವಯ ನಾವು ಆರೋಪಿ ವಹಾಬ್ ನನ್ನು ಬಂಧಿಸಿದ್ದೇವೆ. ಸಂತ್ರಸ್ತೆ ಮತ್ತು ಆರೋಪಿ ಒಂದೇ ಪ್ರದೇಶದಲ್ಲಿ ವಾಸಿಸುತ್ತಿದ್ದರು. 2017ರ ಜೂನ್ ನಿಂದ ಸೆಪ್ಟೆಂಬರ್ ವರೆಗೆ ತಮ್ಮ ಮಗಳನ್ನು ಅನೇಕ ಬಾರಿ ಅತ್ಯಾಚಾರ ಎಸಗಿದ್ದಾನೆ ಎಂದು ಪೋಷಕರು ತಿಳಿಸಿದ್ದಾರೆ. ಸಂತ್ರಸ್ತೆಗೆ ಚಾಕ್ಲೇಟ್ ಮತ್ತು ತಿಂಡಿಗಳ ಆಮಿಷವೊಡ್ಡಿ ಅತ್ಯಾಚಾರ ಎಸಗಿದ್ದಾನೆ. ಈಗ ಸಂತ್ರಸ್ತೆ ಗರ್ಭಿಣಿಯಾಗಿದ್ದು, ತನ್ನ ಪೋಷಕರಿಗೆ ಹೊಟ್ಟೆ ನೋವು ಎಂದು ತಿಳಿಸಿದ್ದಾಳೆ. ನಂತರ ಅವರು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪರೀಕ್ಷೆ ಮಾಡಿಸಿದಾಗ ವಿಷಯ ತಿಳಿದಿದೆ. ಕೂಡಲೇ ಆರೋಪಿ ಬಗ್ಗೆ ತಿಳಿದುಕೊಂಡು ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾರೆ ಎಂದು ಹಬೀಬ್ ನಗರ ಪೊಲೀಸ್ ಠಾಣೆಯ ಅಧಿಕಾರಿ ಮಧುಕರ್ ಸ್ವಾಮಿ ತಿಳಿಸಿದ್ದಾರೆ.

    ಆರೋಪಿ ವಹಾಬ್ ನನ್ನು ಬಂಧಿಸಿದ್ದು, ಆತನ ವಿರುದ್ಧ ಐಪಿಸಿ ಸೆಕ್ಷನ್ 376 ಮತ್ತು ಪೋಕ್ಸೋ ಕಾಯ್ದೆಯಡಿ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಸ್ವಾಮಿ ಹೇಳಿದ್ದಾರೆ.

  • ಪ್ರಸವ ವೇದನೆಯಲ್ಲಿದ್ದ ಗರ್ಭಿಣಿಯನ್ನ ಒಂಟಿಯಾಗಿ ಬಿಟ್ಟು ಹೋದ ವೈದ್ಯರು-ವಾಪಸ್ ಬಂದು ನೋಡ್ದಾಗ ಕಸದ ಬುಟ್ಟಿಯಲ್ಲಿತ್ತು ಮಗು

    ಪ್ರಸವ ವೇದನೆಯಲ್ಲಿದ್ದ ಗರ್ಭಿಣಿಯನ್ನ ಒಂಟಿಯಾಗಿ ಬಿಟ್ಟು ಹೋದ ವೈದ್ಯರು-ವಾಪಸ್ ಬಂದು ನೋಡ್ದಾಗ ಕಸದ ಬುಟ್ಟಿಯಲ್ಲಿತ್ತು ಮಗು

    ಚಂಡೀಘಢ: ವೈದ್ಯರು ಹಾಗೂ ಆಸ್ಪತ್ರೆ ಸಿಬ್ಬಂದಿಯ ನಿರ್ಲಕ್ಷ್ಯದಿಂದಾಗಿ ನವಜಾತ ಶಿಶು ಸಾವು ಬದುಕಿನ ಮಧ್ಯೆ ಹೋರಾಡುವಂತಾಗಿರುವ ಘಟನೆ ಹರಿಯಾಣದ ಫರೀದಾಬಾದ್‍ನಲ್ಲಿ ನಡೆದಿದೆ.

    ಸೋಮವಾರದಂದು ಇಲ್ಲಿನ ಸಿವಿಕ್ ಆಸ್ಪತ್ರೆಗೆ ಗರ್ಭಿಣಿಯನ್ನ ಹೆರಿಗೆಗಾಗಿ ದಾಖಲಿಸಲಾಗಿತ್ತು. ಆದ್ರೆ ಪ್ರಸವ ವೇದನೆಯಲ್ಲಿದ್ದ ಗರ್ಭಿಣಿಯನ್ನ ಆಸ್ಪತ್ರೆಯ ಬೆಡ್ ಮೇಲೆ ಒಂಟಿಯಾಗಿ ಬಿಟ್ಟಿದ್ದು, ಯಾವುದೇ ವೈದ್ಯಕೀಯ ನೆರವು ನೀಡಿರಲಿಲ್ಲ. ವೈದ್ಯರು ಹೊರಗಡೆ ಇದ್ದ ವೇಳೆ ಯಾವುದೇ ಸಹಾಯ ಇಲ್ಲದೆ ಮಹಿಳೆ ಮಗುವಿಗೆ ಜನ್ಮ ನೀಡಿದ್ದರು.

    ವೈದ್ಯರು ಹಾಗೂ ನರ್ಸ್‍ಗಳು ಇಲ್ಲದೆಯೇ ಮಹಿಳೆಗೆ ಹೆರಿಗೆಯಾಗಿತ್ತು. ಆದ್ರೆ ಹಾಸಿಗೆ ಬಳಿ ಇಟ್ಟಿದ್ದ ಕಸದ ಬುಟ್ಟಿಯೊಳಗೆ ನೇರವಾಗಿ ಮಗು ಬಿದ್ದಿತ್ತು. ಹಾಸಿಗೆ ಮೇಲೆ ಮಲಗಿದ್ದ ತಾಯಿ ಸಹಾಯಕ್ಕಾಗಿ ಕಿರುಚಾಡುತ್ತಿದ್ರು.

    ವೈದ್ಯರು ಹಾಗೂ ಸಿಬ್ಬಂದಿ ಬಂದು ನೋಡಿದಾಗ ಮಗು ಕಸದ ಬುಟ್ಟಿಯಲ್ಲಿ ಪತ್ತೆಯಾಗಿತ್ತು. ಮಗುವಿನ ಕರುಳ ಬಳ್ಳಿ ಇನ್ನೂ ತಾಯಿಯ ದೇಹಕ್ಕೆ ಅಂಟಿಕೊಂಡೇ ಇತ್ತು. ಮಗುವನ್ನ ರಕ್ಷಣೆ ಮಾಡಿದ ಬಳಿಕ ವೈದ್ಯರು ಕರುಳ ಬಳ್ಳಿಯನ್ನ ಕಟ್ ಮಾಡಿದ್ದಾರೆ.

    ಹುಟ್ಟಿದ ತಕ್ಷಣ ಮಗು ಅಳಲಿಲ್ಲವಾದ್ದರಿಂದ ವೈದ್ಯರು ಶಿಶುವನ್ನ ಐಸಿಯುನಲ್ಲಿರಿಸಿದ್ದರು. ಮಗು ಕಸದ ಬುಟ್ಟಿಗೆ ಬಿದ್ದಿದ್ದರಿಂದ ಅದರ ತಲೆಗೆ ಏಟು ಬಿದ್ದಿದ್ದು, ಫಿಟ್ಸ್ ಬರಲು ಶುರುವಾಗಿತ್ತು. ನಂತರ ಮಗುವನ್ನ ಬೇರೊಂದು ಆಸ್ಪತ್ರೆಗೆ ರವಾನಿಸಲಾಗಿದೆ. ಆದರೂ ಮಗುವಿನ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿಯಾಗಿದೆ.