Tag: Pregnant

  • ವಿರಾಟ್ ಆಗಲಿದ್ದಾರೆ ಅಪ್ಪ!- ಅನುಷ್ಕಾ ಬೇಬಿ ಬಂಪ್ ಫೋಟೋ ವೈರಲ್

    ವಿರಾಟ್ ಆಗಲಿದ್ದಾರೆ ಅಪ್ಪ!- ಅನುಷ್ಕಾ ಬೇಬಿ ಬಂಪ್ ಫೋಟೋ ವೈರಲ್

    ಮುಂಬೈ: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅಪ್ಪ ಆಗುತ್ತಿದ್ದಾರೆ. ಸದ್ಯ ವಿರಾಟ್ ಪತ್ನಿ, ನಾಯಕಿ ಅನುಷ್ಕಾ ಶರ್ಮಾ ಅವರ ಬೇಬಿ ಬಂಪ್ ಫೋಟೋ ವೈರಲ್ ಆಗಿದ್ದು, ವಿರುಷ್ಕಾ ನಿಜವಾಗಿಯೂ ಅಪ್ಪ- ಅಮ್ಮ ಆಗುತ್ತಿದ್ದಾರಾ ಎಂಬ ಕುತೂಹಲ ಎಲ್ಲರಿಗೂ ಮೂಡಿದೆ.

    ನಟಿ ಅನುಷ್ಕಾ ಅವರ ಒಂದು ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ಫೋಟೋದಲ್ಲಿ ಅನುಷ್ಕಾ ಗರ್ಭಿಣಿ ರೀತಿ ಕಾಣಿಸುತ್ತಿದೆ. ಹಾಗಾಗಿ ಅಭಿಮಾನಿಗಳು ವಿರುಷ್ಕಾ ಅಪ್ಪ-ಅಮ್ಮ ಆಗುತ್ತಿದ್ದಾರೆ ಎಂದು ಖುಷಿಯಲ್ಲಿದ್ದಾರೆ.

    ವಿರಾಟ್‍ಗೆ ಮಕ್ಕಳೆಂದರೆ ತುಂಬಾ ಇಷ್ಟ. ಅವರು ಶಿಖರ್ ಧವನ್ ಮಗ ಜೋರಾವರ್, ಎಂ.ಎಸ್ ಧೋನಿ ಅವರ ಪುತ್ರಿ ಝೀವಾ ಹಾಗೂ ಸುರೇಶ್ ರೈನಾ ಅವರ ಪುತ್ರಿ ಗ್ರೇಸಿಯಾ ಜೊತೆ ಹೆಚ್ಚು ಸಮಯ ಕಳೆಯುತ್ತಾರೆ. ಸದ್ಯ ವಿರಾಟ್ ಈಗ ತಮ್ಮ ಸ್ವಂತ ಮಗುವಿನ ಜೊತೆ ಕಾಲ ಕಳೆಯಲು ಇಚ್ಛಿಸುತ್ತಿದ್ದಾರೆ ಎಂದು ಅಭಿಮಾನಿಗಳು ಊಹಿಸಿಕೊಳ್ಳುತ್ತಿದ್ದಾರೆ.

    ಕಳೆದ ವರ್ಷ ಡಿ. 11ರಂದು ಇಟಲಿಯ ಟಸ್ಕನಿ ನಗರದ `ಬೋಗೋ ಫಿನೊಕಿಯೆಟೊ’ ಎಂಬ ದುಬಾರಿ ರೆಸಾರ್ಟ್‍ನಲ್ಲಿ ದ್ರಾಕ್ಷಿ ಹಣ್ಣಿನ ತೋಟದ ನಡುವೆಯಿರುವ ಸ್ವರ್ಗದಂಥಹ ತಾಣದಲ್ಲಿ ವಿರುಷ್ಕಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆ ಸಿಂಪಲ್ ಆಗಿ ಆದರೂ ಪ್ರತಿಯೊಂದು ವಸ್ತುಗಳು ಕೂಡ ತುಂಬಾ ದುಬಾರಿಯಾಗಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಬೆಂಗ್ಳೂರಿಂದ ಪಾಟ್ನಾಗೆ ತೆರಳ್ತಿದ್ದ ಎಕ್ಸ್ ಪ್ರೆಸ್ ರೈಲಿನಲ್ಲಿ ಗಂಡು ಮಗು ಜನನ

    ಬೆಂಗ್ಳೂರಿಂದ ಪಾಟ್ನಾಗೆ ತೆರಳ್ತಿದ್ದ ಎಕ್ಸ್ ಪ್ರೆಸ್ ರೈಲಿನಲ್ಲಿ ಗಂಡು ಮಗು ಜನನ

    ಕೋಲಾರ: ಸಂಘಮಿತ್ರ ಎಕ್ಸ್ ಪ್ರೆಸ್ ರೈಲಿನಲ್ಲೇ ತಾಯಿಯೊಬ್ಬಳು ಗಂಡು ಮಗುವಿಗೆ ಜನ್ಮ ನೀಡಿದ ಘಟನೆ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಟೇಕಲ್ ಬಳಿ ನಡೆದಿದೆ.

    ಬೆಂಗಳೂರಿನಿಂದ-ಪಾಟ್ನಾಗೆ ತೆರಳುತ್ತಿದ್ದ ಸಂಘಮಿತ್ರ ಎಕ್ಸ್ ಪ್ರೆಸ್ ರೈಲಿನಲ್ಲಿ ಮಹಿಳೆಗೆ ಮಾಲೂರು ಬಳಿ ಹೊಟ್ಟೆ ನೋವು ಕಾಣಿಸಿಕೊಂಡಿದ್ದು, ಟೇಕಲ್ ಬಳಿ ಪ್ರಸವ ಆಗಿದೆ. ತಮಿಳುನಾಡು ಕಾಟ್ ಪಡಿ ಮೂಲದ 25 ವರ್ಷದ ಮಾಲತಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

    ಮಾಲತಿ ಹಾಗೂ ಮುನಿಸ್ವಾಮಿ ಬೆಂಗಳೂರಿನಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದಾರೆ. ಹೆರಿಗೆಗಾಗಿ ಬೆಂಗಳೂರಿನಿಂದ ಕಾಟ್ ಪಡಿಗೆ ತೆರಳುತ್ತಿದ್ದ ವೇಳೆ ಟೇಕಲ್ ಬಳಿ ರೈಲಿನಲ್ಲೇ ಹೆರಿಗೆಯಾಗಿದೆ. ತಾಯಿ ಮಗು ಆರೋಗ್ಯವಾಗಿದ್ದು, ಕೂಡಲೇ ಸಹ ಪ್ರಯಾಣಿಕರು 108 ಗೆ ಕರೆ ಮಾಡಿ ತಾಯಿ ಮಗು ಇಬ್ಬರನ್ನು ಬಂಗಾರಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಸರ್ಕಾರಿ ಆಸ್ಪತ್ರೆಯ ಶೌಚಾಲಯದಲ್ಲಿ ಹೆರಿಗೆ- ನವಜಾತ ಶಿಶು ಸಾವು

    ಸರ್ಕಾರಿ ಆಸ್ಪತ್ರೆಯ ಶೌಚಾಲಯದಲ್ಲಿ ಹೆರಿಗೆ- ನವಜಾತ ಶಿಶು ಸಾವು

    ಡೆಹರಾಡೂನ್: ಸರ್ಕಾರಿ ಆಸ್ಪತ್ರೆಯಲ್ಲಿ ಶೌಚಾಲಯದಲ್ಲಿ ಹೆರಿಗೆಯ ನಂತರ ನವಜಾತ ಶಿಶು ಮೃತ ಪಟ್ಟಿರುವ ಘಟನೆ ಉತ್ತರಾಖಂಡದ ಡೆಹರಾಡೂನ್ ನ ದೂನ್ ಮಹಿಳಾ ಸರ್ಕಾರಿ ಆಸ್ಪತ್ರೆಯಲ್ಲಿ ಭಾನುವಾರ ನಡೆದಿದೆ.

    27 ವರ್ಷದ ಗರ್ಭಿಣಿಯು ಭಾನುವಾರ ಬೆಳಗ್ಗೆ ದೂನ್ ಮಹಿಳಾ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಶೌಚಾಲಯಕ್ಕೆ ಹೋದಾಗ ಅಲ್ಲಿಯೇ ಹೆರಿಗೆಯಾಗಿದೆ. ಇದನ್ನ ಕಂಡ ಆಕೆಯ ಅಜ್ಜಿ ವೈದ್ಯರಿಗೆ ವಿಷಯ ತಿಳಿಸಿ ನರ್ಸ್ ಹಾಗೂ ವೈದ್ಯರು ಸ್ಥಳಕ್ಕೆ ಬಂದು ಮಹಿಳೆಯನ್ನು ಹೆರಿಗೆ ಕೋಣೆಗೆ ಕರೆದೊಯ್ದಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ನವಜಾತ ಶಿಶು ಮೃತ ಪಟ್ಟಿದೆ ಎಂದು ವೈದ್ಯರು ತಿಳಿಸಿದ್ದಾರೆ.

    ಈ ಹಿಂದೆಯೂ ಆಸ್ಪತ್ರೆಯಲ್ಲಿ ಬೆಡ್ ಇಲ್ಲದ ಕಾರಣ ಗರ್ಭಿಣಿಯೊಬ್ಬರು ಶೌಚಾಲಯದಲ್ಲಿಯೇ ಹೆರಿಗೆಯಾಗಿ ಮೃತ ಪಟ್ಟಿದ್ದರು. ಆಸ್ಪತ್ರೆಯಲ್ಲಿ ಇದು ಮೂರನೇ ಘಟನೆಯಾಗಿದ್ದು, ಜನರು ಆಸ್ಪತ್ರೆ ಸಿಬ್ಬಂದಿಯ ಮೇಲೆ ಅನುಮಾನ ಪಡುವಂತಾಗಿದೆ. ಈ ವಿಚಾರವಾಗಿ ಮಗುವಿನ ಸಾವಿನ ಕುರಿತು ವಿಚಾರಣೆ ನಡೆಸಬೇಕೆಂದು ಹಿರಿಯ ಅಧಿಕಾರಿಗಳು ಆದೇಶ ನೀಡಿದ್ದಾರೆ.

    ಆಸ್ಪತ್ರೆ ಸಿಬ್ಬಂದಿಯ ಪ್ರಕಾರ, ಗರ್ಭಿಣಿಗೆ 7 ತಿಂಗಳಾಗಿದ್ದು, ಮಗು ಸರಿಯಾಗಿ ಬೆಳವಣಿಗೆ ಆಗಿರಲಿಲ್ಲ. ಹಾಗಾಗಿ ಮಗುವಿಗೆ ಚಿಕಿತ್ಸೆ ನೀಡಿದ್ದರೂ ಫಲಕಾರಿಯಾಗದೇ ಮೃತಪಟ್ಟಿದೆ. ಇದರಲ್ಲಿ ಆಸ್ಪತ್ರೆಯ ನಿರ್ಲಕ್ಷ್ಯವಿಲ್ಲ ಎಂದು ಸಿಬ್ಬಂದಿ ಹೇಳಿಕೆಯನ್ನ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ತಾನು ಗರ್ಭಿಣಿ ಎಂದಿದ್ದಕ್ಕೆ ಸುಟ್ಟು ಹಾಕಿದ ಅಪ್ರಾಪ್ತ ಪ್ರೇಮಿ!

    ತಾನು ಗರ್ಭಿಣಿ ಎಂದಿದ್ದಕ್ಕೆ ಸುಟ್ಟು ಹಾಕಿದ ಅಪ್ರಾಪ್ತ ಪ್ರೇಮಿ!

    ಹೈದರಾಬಾದ್: ಪ್ರೇಯಸಿ ತಾನು ಗರ್ಭಿಣಿ ಎಂದು ಹೇಳಿದ ಬಳಿಕ 17 ವರ್ಷದ ಯುವಕನೊಬ್ಬ ತನ್ನ ಸ್ನೇಹಿತರ ಜೊತೆ ಸೇರಿ ಆಕೆಯನ್ನು ಹತ್ಯೆ ಮಾಡಿರುವ ಘಟನೆ ಆಂಧ್ರ ಪ್ರದೇಶದ ವಿಶಾಖಪಟ್ಟಣಂನಲ್ಲಿ ನಡೆದಿದೆ.

    ಆರೋಪಿ ಸೇರಿದಂತೆ ಆತನಿಗೆ ಸಹಾಯ ಮಾಡಿದ್ದ ಇಬ್ಬರು ಅಪ್ರಾಪ್ತ ಯುವಕರನ್ನು ಪೊಲೀಸರು ಬಂಧಿಸಿದ್ದಾರೆ. ಮೃತಳು 16 ವರ್ಷದ ಅಪ್ರಾಪ್ತೆಯಾಗಿದ್ದು, ಹೈಸ್ಕೂಲ್ ಓದುತ್ತಿದ್ದಳು ಎಂದು ತಿಳಿದು ಬಂದಿದೆ. ಹುಡುಗಿ ಮನೆಯಿಂದ ಹೊರಗೆ ಹೋದವಳು ಮರಳಿ ಮನೆಗೆ ಹಿಂದಿರುಗಲಿಲ್ಲ. ಬಳಿಕ ಆಕೆಯ ಪೋಷಕರು ನವೆಂಬರ್ 7ರಂದು ನಾಪತ್ತೆ ದೂರು ನೀಡಿದ್ದರು. ನಂತರ ಪೊಲೀಸರು ತನಿಖೆಯನ್ನು ಶುರು ಮಾಡಿದ್ದಾರೆ.

    ಮೂವರು ಆರೋಪಿಗಳ ಮನೆ ಕೂಡ ಮೃತ ಹುಡುಗಿ ಮನೆ ಬೀದಿಯಲ್ಲಿಯೇ ಇತ್ತು. ಮೂವರಲ್ಲಿ ಒಬ್ಬ ಒಂದು ವರ್ಷದಿಂದ ಹುಡುಗಿಯನ್ನು ಪ್ರೀತಿ ಮಾಡುತ್ತಿದ್ದನು. ಆದರೆ 15 ದಿನಗಳ ಹಿಂದೆ ಹುಡುಗಿ ನಾನು ಗರ್ಭಿಣಿ ಎಂದು ಆರೋಪಿಗೆ ತಿಳಿಸಿದ್ದಾಳೆ. ಗರ್ಭಪಾತದ ಮಾತ್ರೆ ಸೇವನೆ ಮಾಡುವಂತೆ ಹುಡುಗ ಹೇಳಿದ್ದಾನೆ. ಆದರೆ ಆಕೆ ಅದಕ್ಕೆ ನಿರಾಕರಿಸಿದ್ದಳು. ನಂತರ ಆರೋಪಿ ಪ್ರೇಯಸಿಯ ಕುಟುಂಬದವರ ಭಯದಿಂದ ಆಕೆಯನ್ನು ಕೊಲೆ ಮಾಡಲು ನಿರ್ಧಾರ ಮಾಡಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

    ಕೊಲೆ ಮಾಡಿದ್ದು ಹೇಗೆ..?
    ನವೆಂಬರ್ 7 ಸಂಜೆ ಆಕೆಯನ್ನು ಸಮೀಪದ ಕ್ರೀಡಾಂಗಣಕ್ಕೆ ಬರುವಂತೆ ಹೇಳಿದ್ದಾನೆ. ಆಕೆ ಬರುತ್ತಿದ್ದಂತೆ ಮೊದಲು ಹುಡುಗಿ ತಲೆಗೆ ರಾಡ್ ನಿಂದ ಹೊಡೆದಿದ್ದಾನೆ. ಬಳಿಕ ಆತ ತನ್ನ ಸ್ನೇಹಿತರ ಸಹಾಯದಿಂದ ಹುಡುಗಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ತದನಂತರ ಹುಡುಗಿಯ ಗುರುತು ಸಿಗಬಾರದೆಂದು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಆದರೆ ಶವ ಸರಿಯಾಗಿ ಸುಡದ ಕಾರಣ ಸತ್ಯ ಹೊರಬಿದ್ದಿದೆ ಎಂದು ಪೊಲೀಸರು ಹೇಳಿದ್ದಾರೆ.

    ಪೊಲೀಸರು ಸದ್ಯ ಮೂವರನ್ನು ಬಂಧಿಸಿದ್ದು, ವಿಚಾರಣೆ ನಡೆಸಿದ್ದಾರೆ. ಆಗ ಮುಖ್ಯ ಆರೋಪಿ ತಾನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಸದ್ಯಕ್ಕೆ ಸಾವಿನ ಕಾರಣಗಳು ಮತ್ತು ಮೃತ ಹುಡುಗಿ ಗರ್ಭಿಣಿಯಾಗಿದ್ದಳಾ ಅಥವಾ ಇಲ್ಲವಾ ಎಂದು ಖಚಿತಪಡಿಸಿಕೊಳ್ಳಲು ಪೊಲೀಸರು ಮರಣೋತ್ತರ ವರದಿಗಾಗಿ ಕಾಯುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಕತ್ತು ಕೊಯ್ದ ಸ್ಥಿತಿಯಲ್ಲಿ ಹೆಣವಾದ್ಳು 4 ತಿಂಗಳ ಗರ್ಭಿಣಿ..!

    ಕತ್ತು ಕೊಯ್ದ ಸ್ಥಿತಿಯಲ್ಲಿ ಹೆಣವಾದ್ಳು 4 ತಿಂಗಳ ಗರ್ಭಿಣಿ..!

    ವಿಜಯಪುರ: ದೀಪ ಬೆಳಗುವ ದಿನದಂದು ಮನೆಯ ದೀಪವೊಂದು ಆರಿ ಹೋಗಿದೆ. ನಾಲ್ಕು ತಿಂಗಳ ಗರ್ಭಿಣಿ ಪ್ರೀತಿಸಿ ಮದುವೆಯಾದ ಕಾರಣ ಮಂಗಳವಾರ ಮರ್ಯಾದಾ ಹತ್ಯೆಗೆ ಬಲಿಯಾದ ಹೃದಯ ವಿದ್ರಾವಕ ಘಟನೆ ವಿಜಯಪುರದಲ್ಲಿ ನಡೆದಿದೆ.

    ರೇಣುಕಾ ಬರ್ಬರವಾಗಿ ಹತ್ಯೆಯಾದ ಗರ್ಭಿಣಿ. ರೇಣುಕಾ ಮೂಲತಃ ರಾಯಚೂರಿನ ಕ್ಯಾದಿಗೇರಿ ಗ್ರಾಮದವಳು. ಎರಡು ವರ್ಷದ ಹಿಂದೆ ಕ್ಯಾದಿಗೇರಿ ಗ್ರಾಮದ ಪಕ್ಕದಲ್ಲಿರುವ ಶಿರವಾರ ಗ್ರಾಮದ ಶಂಕರ್ ಜೊತೆ ಪ್ರೀತಿಸಿ ಮನೆ ಬಿಟ್ಟು ಇಬ್ಬರು ಓಡಿ ಬಂದು ಮದುವೆ ಆಗಿ ವಿಜಯಪುರ ಜಿಲ್ಲೆಯ ನಿಡಗುಂದು ತಾಲೂಕಿನ ಯಲಗೂರು ಗ್ರಾಮದಲ್ಲಿ ವಾಸವಾಗಿದ್ದರು.

    ಇವರಿಬ್ಬರ ಪ್ರೀತಿಗೆ ಅಂತರ್ ಜಾತಿಯೇ ಮುಳುವಾದ ಕಾರಣ ಓಡಿ ಬಂದು ಇಲ್ಲಿ ವಾಸವಾಗಿದ್ದರು. ಮೊಬೈಲ್ ಅಂಗಡಿವೊಂದರಲ್ಲಿ ಕೆಲಸ ಮಾಡುತ್ತ ಇಬ್ಬರು ಎರಡು ವರ್ಷ ಅನ್ಯೋನ್ಯವಾಗಿ ಸಂಸಾರ ನಡೆಸಿದ್ದರು. ಆದರೆ ಅದ್ಯಾರ ದೃಷ್ಟಿ ತಗುಲಿತು ಗೊತ್ತಿಲ್ಲ. ಮಂಗಳವಾರ ರೇಣುಕಾ ಕತ್ತು ಕೊಯ್ದ ಸ್ಥಿತಿಯಲ್ಲಿ ಹೆಣವಾಗಿದ್ದಾಳೆ.

    ಕಳೆದ ನಾಲ್ಕು ತಿಂಗಳ ಹಿಂದೆ ತಾಯಿಯ ನೆನಪಾಗ್ತಿದೆ ಅಂತಾ ರೇಣುಕಾ ತನ್ನ ತಾಯಿಯೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದಾಳೆ. ನಂತರ ಕಳೆದ ಒಂದು ವಾರದ ಹಿಂದೆ ರೇಣುಕಾ ತಾಯಿ, ಸಹೋದರ ಮತ್ತು ತಂಗಿಯ ಗಂಡ ಯಲಗೂರಿನ ಮನೆಗೆ ಬಂದು ಟಿಕಾಣಿ ಹೂಡಿದ್ದರು. ಅಲ್ಲದೆ ರೇಣುಕಾ ತಾಯಿ ಗರ್ಭಿಣಿಯಾಗಿದ್ಯಾ ಊರಿಗೆ ಬಾ, ಇಲ್ಲೇ ಹೆರಿಗೆ ಮಾಡಿಸೋಣ ಅಂತಾನೂ ಹೇಳಿದ್ದರು. ಆಗ ರೇಣುಕಾಗೆ ಶಂಕರ್ ನೋಡು ನನಗೆ ಯಾಕೋ ಸರಿ ಅನಿಸುತ್ತಿಲ್ಲ ಅಂತಾ ಎಚ್ಚರಿಸಿದ್ದನು. ಅಷ್ಟರಲ್ಲೇ ಮಂಗಳವಾರ ತಾನು ಕೆಲಸಕ್ಕೆ ಹೋದಾಗ ಈ ಘಟನೆ ನಡೆದು ಹೋಗಿದೆ ಅಂತಾ ಶಂಕರ್ ಹೆಂಡತಿಯನ್ನು ಕಳೆದುಕೊಂಡು ಕಣ್ಣೀರಿಡುತ್ತಿದ್ದಾನೆ.

    ಘಟನೆಯ ನಂತರ ರೇಣುಕಾ ತಾಯಿ, ಸಹೋದರ ಮತ್ತು ತಂಗಿ ಗಂಡ ಪರಾರಿಯಾಗಿದ್ದಾರೆ ಅಂತಾ ಶಂಕರ್ ಆರೋಪಿಸುತ್ತಿದ್ದಾನೆ. ಸದ್ಯ ಸ್ಥಳಕ್ಕೆ ನಿಡಗುಂದಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ತನಿಖೆಯ ನಂತರ ಸತ್ಯಾಸತ್ಯತೆ ಹೊರ ಬೀಳಲಿದೆ. ಸದ್ಯ ಮೇಲ್ನೋಟಕ್ಕೆ ಇದೊಂದು ಮರ್ಯಾದಾ ಹತ್ಯೆ ಎಂದು ಕಂಡುಬರುತ್ತಿದ್ದು, ಪೊಲೀಸರ ತನಿಖೆಯ ನಂತರ ಸತ್ಯ ಹೊರಬಿಳಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಫೇಸ್‍ಬುಕ್ ನಿಂದಾದ ಪರಿಚಯ ಪ್ರೀತಿಗೆ ತಿರುಗಿ ಗರ್ಭಿಣಿ ಮಾಡ್ದ!

    ಫೇಸ್‍ಬುಕ್ ನಿಂದಾದ ಪರಿಚಯ ಪ್ರೀತಿಗೆ ತಿರುಗಿ ಗರ್ಭಿಣಿ ಮಾಡ್ದ!

    ತುಮಕೂರು: ಫೇಸ್‍ಬುಕ್ ಪರಿಚಯವಾದ ಯುವಕ-ಯುವತಿ ಪ್ರೀತಿಸಿ ಮದುವೆ ಮಾಡಿಕೊಂಡು ಇದೀಗ ಯುವಕ ಯುವತಿಯನ್ನು ಗರ್ಭಿಣಿ ಮಾಡಿ ಕೈಕೊಟ್ಟ ಘಟನೆ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಬುಳಸಂದ್ರದಲ್ಲಿ ನಡೆದಿದೆ.

    ಬೆಂಗಳೂರಿನ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಸಿದ್ದಲಿಂಗಪ್ಪ ಚನ್ನಪಟ್ಟಣ ಮೂಲದ ಯುವತಿಗೆ ಮೋಸ ಮಾಡಿದ ಯುವಕ. ಫೇಸ್‍ಬುಕ್ ನಲ್ಲಿ ಪ್ರೀತಿಸಿ, ಮದುವೆಯಾಗಿ ವಂಚನೆ ಮಾಡಿದ್ದಲ್ಲದೇ ಗರ್ಭಿಣಿಯಾದ ಬಳಿಕ ಆಕೆಯನ್ನು ಮಧುಗಿರಿಗೆ ಕರೆತಂದು ಗರ್ಭಪಾತಕ್ಕೆ ಯತ್ನಿಸಿದ್ದಾನೆ. ಅದಕ್ಕೆ ಒಪ್ಪದಿದ್ದಾಗ ಸಿದ್ದಲಿಂಗಪ್ಪ ಆಕೆಯನ್ನು ಬಿಟ್ಟು ಪರಾರಿಯಾಗಿದ್ದಾನೆ.

    ಒಂದು ತಿಂಗಳ ಹಿಂದೆ ಸಿದ್ದಲಿಂಗಪ್ಪ ಮಧುಗಿರಿಯಲ್ಲಿ ಬಿಟ್ಟು ಹೋಗಿದ್ದನು. ನಾಪತ್ತೆಯಾದ ಗಂಡನಿಗಾಗಿ ಆತನ ಮನೆ ಮುಂದೆ ಕುಳಿತು ಗರ್ಭಿಣಿ ಧರಣಿ ನಡೆಸುತ್ತಿದ್ದಾರೆ. ಆದರೆ ಸಿದ್ದಲಿಂಗಪ್ಪ ಕುಟುಂಬಸ್ಥರೇ ಆತನನ್ನು ಬಚ್ಚಿಟ್ಟಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ.

    ಈ ಘಟನೆ ಬಡವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮದ್ವೆಯಾದ 7 ತಿಂಗಳಿಗೆ ನೇಣು ಬಿಗಿದುಕೊಂಡ ಗರ್ಭಿಣಿ

    ಮದ್ವೆಯಾದ 7 ತಿಂಗಳಿಗೆ ನೇಣು ಬಿಗಿದುಕೊಂಡ ಗರ್ಭಿಣಿ

    ಹೈದರಾಬಾದ್: ವರದಕ್ಷಿಣೆ ಕಿರುಕುಳದಿಂದ ಗರ್ಭಿಣಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆಂಧ್ರಪ್ರದೇಶದ ಶ್ರೀಕಾಕುಲಂ ಜಿಲ್ಲೆಯಲ್ಲಿ ನಡೆದಿದೆ.

    ಧನಲಕ್ಷ್ಮಿ (22) ಆತ್ಮಹತ್ಯೆಗೆ ಶರಣಾದ ಗರ್ಭಿಣಿ. ಶ್ರೀಕಾಕುಲಂ ಜಿಲ್ಲೆಯ ಪತಿವಾಡಪಾಲೆಮ್ ನಲ್ಲಿ ಗುರುವಾರ ಈ ಘಟನೆ ನಡೆದಿದೆ. ವರದಕ್ಷಿಣೆ ಕಿರುಕುಳದಿಂದ ನಮ್ಮ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೋಷಕರು ಆರೋಪಿಸಿ ಮಗಳ ಪತಿಯ ವಿರುದ್ಧ ದೂರು ನೀಡಿದ್ದಾರೆ.

    ವಿಜಯನಗರ ಜಿಲ್ಲೆಯ ಮೃತ ಧನಲಕ್ಷ್ಮಿಗೆ ಉಪ್ಪಾಲಾ ಗುರುಮೂರ್ತಿ ಜೊತೆ ಏಪ್ರಿಲ್ 18 ರಂದು ಮದುವೆಯಾಗಿತ್ತು. ಆದರೆ ಮದುವೆಯಾದ ಕೆಲವು ತಿಂಗಳಲ್ಲೇ ಎರಡೂ ಕುಟುಂಬದವರಿಗೆ ವರದಕ್ಷಿಣೆ ಕುರಿತು ಜಗಳವಾಡಿದ್ದರು. ಮೃತ ಧನಲಕ್ಷ್ಮಿ ಗರ್ಭಿಣಿಯಾಗಿದ್ದರಿಂದ ದಸರಾ ಹಬ್ಬದ ಸಮಯದಲ್ಲಿ ತನ್ನ ಪೋಷಕರ ಮನೆಗೆ ಹೋಗಿದ್ದರು ಎಂದು ಸಂಬಂಧಿಕರು ಹೇಳಿದ್ದಾರೆ.

    ಅಕ್ಟೋಬರ್ 30 ರಂದು ಗುರುಮೂರ್ತಿಯ ಅಜ್ಜಿ ನಿಧನರಾಗಿದ್ದರು. ಅಂದು ಧನಲಕ್ಷ್ಮಿ ಪತಿಯ ಮನೆಗೆ ವಾಪಸ್ ಬಂದಿದ್ದಾರೆ. ಆದರೆ ಆ ದಿನವೇ ಸುಮಾರು 6 ಗಂಟೆಗೆ ಮನೆಯಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಗಳ ಸಾವಿನ ಸುದ್ದಿ ತಿಳಿದ ಪೋಷಕರು ಸ್ಥಳಕ್ಕೆ ದೌಡಾಯಿಸಿದ್ದು, ಬಳಿಕ ಮೃತಳ ತಂದೆ ಮುತ್ಯಾಲ ವೆಂಕಟರಮಣ ಅವರು ಜೆ.ಆರ್.ಪುರಾಮ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ನನ್ನ ಮಗಳಿಗೆ ಪ್ರತಿದಿನ ವರದಕ್ಷಿಣೆ ಬೇಕೆಂದು ಗುರುಮೂರ್ತಿ ಕಿರುಕುಳ ನೀಡುತ್ತಿದ್ದನು. ಆದ್ದರಿಂದ ಅವಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆರೋಪಿಸಿದ್ದಾರೆ. ಬಳಿಕ ಮೃತಳ ತಂದೆ ನೀಡಿದ ದೂರಿನ ಮೆರೆಗೆ ಪೊಲೀಸರು ಮೃತ ಧನಲಕ್ಷ್ಮಿ ಪತಿ ಗುರುಮೂರ್ತಿ ಸೇರಿದಂತೆ ಈ ಪ್ರಕರಣಕ್ಕೆ ಸಂಬಂಧಿಸಿದ ಮೂವರ ವಿರುದ್ಧ ಪ್ರಕರಣವನ್ನು ದಾಖಲಿಸಿದ್ದಾರೆ.

    ಮಾಹಿತಿ ತಿಳಿದು ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ಮೃತದೇಹವನ್ನು ಆರ್‍ಐಎಮ್‍ಎಸ್ ಆಸ್ಪತ್ರೆಗೆ ರವಾನಿಸಿದ್ದು, ಪೊಲೀಸರು ಈ ಕುರಿತು ತನಿಖೆಯನ್ನು ಪ್ರಾರಂಭಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • 108 ವಾಹನದಲ್ಲೇ ಮಗುವಿಗೆ ಜನ್ಮ ನೀಡಿದ್ರು ಗರ್ಭಿಣಿ

    108 ವಾಹನದಲ್ಲೇ ಮಗುವಿಗೆ ಜನ್ಮ ನೀಡಿದ್ರು ಗರ್ಭಿಣಿ

    ವಿಜಯಪುರ: ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ 108 ವಾಹನದಲ್ಲೇ ತುಂಬು ಗರ್ಭಿಣಿಗೆ ಹೆರಿಗೆ ಆಗಿರುವ ಅಪರೂಪದ ಘಟನೆ ವಿಜಯಪುರದಲ್ಲಿ ನಡೆದಿದೆ.

    ಸಿಂದಗಿ ತಾಲೂಕಿನ ದೇವೂರ ಗ್ರಾಮದ ಸಂಗೀತಾ ಪವಾರ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಹೀಗಾಗಿ ದೇವರಹಿಪ್ಪರಗಿಯಿಂದ ವಿಜಯಪುರ ಜಿಲ್ಲಾ ಆಸ್ಪತ್ರೆಗೆ ಗರ್ಭಿಣಿಯನ್ನು ಸಾಗಿಸುವ ಮಾರ್ಗ ಮಧ್ಯೆ ವಾಹನದಲ್ಲೇ ವಿಜಯಪುರ ನಗರದ ಗೋಳಗುಮ್ಮಟ ಬಳಿ ಹೆರಿಗೆ ಆಗಿದೆ. ಸದ್ಯಕ್ಕೆ ತಾಯಿ-ಮಗು ಇಬ್ಬರು ಸುರಕ್ಷಿತವಾಗಿದ್ದಾರೆ.

    ಸಂಗೀತಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, 108 ವಾಹನದಲ್ಲೇ ಶೋಭಾ ಕೋಳಿ ಹಾಗೂ ಪೈಲಟ್ ವಿಶ್ವನಾಥ ಸುರಕ್ಷಿತ ಹೆರಿಗೆ ಮಾಡಿಸಿದ್ದಾರೆ. ಹೆರಿಗೆ ಬಳಿಕ ತಾಯಿ-ಮಗುವನ್ನು ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಲಾಗುತ್ತಿದೆ. ಸುರಕ್ಷಿತ ಹೆರಿಗೆ ಮಾಡಿಸಿದ್ದಕ್ಕೆ ಸಂಗೀತಾ ಕುಟುಂಬಸ್ಥರು 108 ಸಿಬ್ಬಂದಿಗೆ ಧನ್ಯವಾದ ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪತಿ ಬರುವಿಕೆಗಾಗಿ ಕಾಯ್ತಿದ್ದ ಗರ್ಭಿಣಿಯ ಮೇಲೆ ಮೂವರಿಂದ ಪೈಶಾಚಿಕ ಕೃತ್ಯ

    ಪತಿ ಬರುವಿಕೆಗಾಗಿ ಕಾಯ್ತಿದ್ದ ಗರ್ಭಿಣಿಯ ಮೇಲೆ ಮೂವರಿಂದ ಪೈಶಾಚಿಕ ಕೃತ್ಯ

    ಕೋಲ್ಕತ್ತಾ: ಗರ್ಭಿಣಿ ಮಹಿಳೆಯ ಮೇಲೆ ಮೂವರು ಕಾಮುಕರು ಸಾಮೂಹಿಕವಾಗಿ ಅತ್ಯಾಚಾರ ಎಸಗಿರುವ ಅಮಾನವೀಯ ಘಟನೆ ಪಶ್ಚಿಮ ಬಂಗಾಳದಲ್ಲಿ ಅಸನ್ನೋಲ್ ಜಿಲ್ಲೆಯಲ್ಲಿ ನಡೆದಿದೆ.

    ಈ ಘಟನೆ ಗುರುವಾರ ಸಂತ್ರಸ್ತೆ ಒಬ್ಬಳೆ ಮನೆಯಲ್ಲಿದ್ದಾಗ ನಡೆದಿದೆ. ಮಹಿಳೆ 4 ತಿಂಗಳ ಗರ್ಭಿಣಿ ಎಂದು ವರದಿಯಾಗಿದೆ. ಮನೆಯಲ್ಲಿ ಒಬ್ಬಳೆ ಇದ್ದು, ಪತಿಗಾಗಿ ಕಾಯುತ್ತಿದ್ದರು. ಈ ವೇಳೆ ಮನೆಯಲ್ಲಿ ಒಂಟಿಯಾಗಿದ್ದನ್ನು ತಿಳಿದ ಮೂವರು ಕಾಮುಕರು ಬಂದು ಬಾಗಿಲು ಬಡಿದಿದ್ದಾರೆ. ಸಂತ್ರಸ್ತೆ ಬಾಗಿಲು ತೆರೆಯುತ್ತಿದ್ದಂತೆ ಬಲವಂತವಾಗಿ ಒಳಗೆ ನುಗ್ಗಿ ಗರ್ಭಿಣಿ ಎಂದು ನೋಡದೆ ಆಕೆಯ ಮೇಲೆ ಸಾಮೂಹಿಕವಾಗಿ ಅತ್ಯಾಚಾರವೆಸಗಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಪತಿ ಮೆಕ್ಯಾನಿಕ್ ಕೆಲಸ ಮಾಡುತ್ತಿದ್ದು, ಕೆಲಸ ಮುಗಿಸಿ ಮನೆಗೆ ಬಂದಿದ್ದಾರೆ. ಆಗ ಪತ್ನಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದನ್ನು ಕಂಡು ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಳಿಕ ಅಸ್ಸಾನ್ಸೋಲ್ ದುರ್ಗಾಪುರ್ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾಗಿ ಪೊಲೀಸರು ಹೇಳಿದ್ದಾರೆ.

    ಕುಟುಂಬದವರು ನೀಡಿದ ದೂರಿನ ಆಧಾರದ ಮೇರೆಗೆ ಮೂವರ ಮೇಲೆ ಪೊಲೀಸರು ಎಫ್‍ಐಆರ್ ದಾಖಲಿಸಿಕೊಂಡಿದ್ದಾರೆ. ಆರೋಪಿಗಳಲ್ಲಿ ಒಬ್ಬನ ಹೆಸರು ಕುಲದೀಪ್ ಸಿಂಗ್ ಎಂದು ತಿಳಿದು ಬಂದಿದೆ. ಆದರೆ ಮತ್ತಿಬ್ಬರ ಬಗ್ಗೆ ಇನ್ನೂ ಮಾಹಿತಿ ಲಭ್ಯವಾಗಿಲ್ಲ.

    ಸಂತ್ರಸ್ತೆಯ ವೈದ್ಯಕೀಯ ಪರೀಕ್ಷೆಯಲ್ಲಿ ಅತ್ಯಾಚಾರ ನಡೆದಿರುವುದು ಖಚಿತವಾಗಿದೆ. ಸಂತ್ರಸ್ತೆ ಕೂಡ ನ್ಯಾಯಾಲಯದಲ್ಲಿ ಹೇಳಿಕೆಯನ್ನು ಕೊಟ್ಟಿದ್ದಾರೆ. ಆರೋಪಿಗಳಿಗಾಗಿ ಬಲೆ ಬೀಸಿದ್ದೇವೆ. ಸದ್ಯದಲ್ಲೇ ಆರೋಪಿಗಳನ್ನು ಬಂಧಿಸಲಾಗುತ್ತದೆ ಎಂದು ಪೊಲೀಸ್ ಆಯುಕ್ತರಾದ ಲಕ್ಷ್ಮಿ ನಾರಾಯಣ ಮೀನಾ ಅವರು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • 6 ತಿಂಗಳ ಗರ್ಭಿಣಿ ಮೇಲೆಯೇ ಪೊಲೀಸಪ್ಪನಿಂದ ಅತ್ಯಾಚಾರ!

    6 ತಿಂಗಳ ಗರ್ಭಿಣಿ ಮೇಲೆಯೇ ಪೊಲೀಸಪ್ಪನಿಂದ ಅತ್ಯಾಚಾರ!

    ಬಳ್ಳಾರಿ: ಇದು ಇಡೀ ಪೊಲೀಸ್ ಇಲಾಖೆಯೇ ತಲೆ ತಗ್ಗಿಸುವಂತಹ ಸ್ಟೋರಿಯಾಗಿದೆ. ಕಾಮುಕರ ಹೆಡೆಮುರಿ ಕಟ್ಟಬೇಕಾದ ಖಾಕಿಯೇ ಗರ್ಭಿಣಿಯ ಮೇಲೆ ಅತ್ಯಾಚಾರವೆಸಗಿದ ಅಮಾನವೀಯ ಘಟನೆಯೊಂದು ಬಳ್ಳಾರಿಯಲ್ಲಿ ನಡೆದಿರುವ ಬಗ್ಗೆ ಬೆಳಕಿಗೆ ಬಂದಿದೆ.

    ಮರಿಸ್ವಾಮಿ, ಕಾಮುಕ ಪೊಲೀಸ್ ಅಧಿಕಾರಿ. ಈತ ಶಿವಮೊಗ್ಗದ ಕೆಎಸ್ ಆರ್ ಪಿ ಬೆಟಾಲಿಯನ್‍ನಲ್ಲಿ ಜಮೇದಾರನಾಗಿ ಕೆಲಸ ಮಾಡ್ತಿದ್ದಾನೆ. ಮೊಹರಂ ರಜೆ ಮೇಲೆ ಹುಟ್ಟೂರು ಬಳ್ಳಾರಿಗೆ ಬಂದು ಪೊಲೀಸ್ ಇಲಾಖೆಯೇ ತಲೆ ತಗ್ಗಿಸುವಂತಹ ಕೆಲಸ ಮಾಡಿದ್ದಾನೆ. ಪಕ್ಕದ ಮನೆಯ ಗರ್ಭಿಣಿಯೊಬ್ಬರು ಪರಿಚಯಸ್ಥರು ಅಂತ ತಮ್ಮ ಮನೆಗೆ ಕರೆದು ಅತಿಥಿ ಸತ್ಕಾರ ಮಾಡಿದ್ದಾರೆ. ಈ ವೇಳೆ ಆಕೆಯ ಮೇಲೆ ಕಣ್ಣಾಕಿದ ಕಾಮುಕ ಪೊಲೀಸ್ ಅಧಿಕಾರಿ ಮರಿಸ್ವಾಮಿ ಅತ್ಯಾಚಾರ ಮಾಡಿದ್ದಾನೆ.

    ಅತ್ಯಾಚಾರಕ್ಕೆ ಯತ್ನಿಸಿದಾಗ ಗರ್ಭಿಣಿ ಕೂಗಿಕೊಂಡಿದ್ದಾರೆ. ಇದರಿಂದ ಗಾಬರಿಯಾದ ಪೊಲೀಸ್ ಅಧಿಕಾರಿ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಮೊದಲು ದೂರು ದಾಖಲಿಸಿಕೊಳ್ಳಲು ಹಿಂದೇಟು ಹಾಕಿದ ಬಳ್ಳಾರಿ ಮಹಿಳಾ ಠಾಣೆ ಪೊಲೀಸರು, ಕೊನೆಗೆ ಸ್ಥಳೀಯರ ಒತ್ತಡಕ್ಕೆ ಮಣಿದು ಪ್ರಕರಣ ದಾಖಲಿಸಿದ್ದಾರೆ. ಅತ್ಯಾಚಾರದ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯರು ಪೊಲೀಸ್ ಅಧಿಕಾರಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಈಗ ಕಾಮುಕ ಪೊಲೀಸ್ ಅಧಿಕಾರಿ ಮರಿಸ್ವಾಮಿಗೆ ವಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

    ಆದ್ರೆ ಸಂತ್ರಸ್ತೆಗೆ ನ್ಯಾಯ ಕೊಡಿಸಬೇಕಾದ ಪೊಲೀಸ್ ಇಲಾಖೆ ಕಾಮುಕ ಅಧಿಕಾರಿಯ ರಕ್ಷಣೆಗೆ ನಿಂತಿದೆ. ತಮ್ಮ ವಿರುದ್ಧ ದೂರು ಕೊಟ್ಟ ಗರ್ಭಿಣಿ ಕುಟುಂಬಸ್ಥರ ವಿರುದ್ಧವೇ ದೂರು ದಾಖಲಿಸಿದೆ. ತಮ್ಮ ಮೇಲೆ ಸುಳ್ಳು ಆರೋಪ ಮಾಡಿ ಹಲ್ಲೆ ಮಾಡಿದ್ದಾರೆ ಅಂತ ಬ್ರೂಸ್‍ಪೇಟೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv