Tag: Pregnant

  • ಬೇಸಿಗೆ ಕಾಲದಲ್ಲಿ ಗರ್ಭಿಣಿಯರ ಆರೋಗ್ಯ ಹೀಗಿರಲಿ

    ಬೇಸಿಗೆ ಕಾಲದಲ್ಲಿ ಗರ್ಭಿಣಿಯರ ಆರೋಗ್ಯ ಹೀಗಿರಲಿ

    ಬೇಸಿಗೆ ಬಂತೆಂದರೆ ಭವಿಷ್ಯದ ಅಮ್ಮಂದಿರಿಗೆ ಇನ್ನಿಲ್ಲದ ಬೇಸರ. ಗರ್ಭದಲ್ಲಿ ಪುಟ್ಟ ಕಂದಮ್ಮನನ್ನು ಹೊತ್ತುಕೊಂಡು ಬಿರುಬೇಸಿಗೆಯ ತಾಪ ತಾಳಲಾರದೆ ಒದ್ದಾಡುತ್ತಿರುತ್ತಾರೆ. ಯಾವಾಗ ಬೇಸಿಗೆ ಮುಗಿಯುತ್ತಪ್ಪ ಎಂದು ಕಾಯುತ್ತಿರುತ್ತಾರೆ. ತಾಯ್ತನವನ್ನು ಅನುಭವಿಸಲು ಕಾಯುತ್ತಿರುವ ಗರ್ಭಿಣಿಯರು ಆದಷ್ಟು ಬೇಗ ಈ ಸಮ್ಮರ್ ಮುಗಿಲಪ್ಪ ಎಂದು ಬೇಡಿಕೊಳ್ಳುತ್ತಿರುತ್ತಾರೆ.

    ಗರ್ಭಿಣಿಯರು ಎಷ್ಟು ಎಚ್ಚರಿಕೆಯಿಂದ ಇದ್ದರೂ ಕಡಿಮೆಯೇ. ಯಾಕಂದ್ರೆ ತಾಯಿ ಆರೋಗ್ಯವಾಗಿದ್ದರೆ ಮಾತ್ರ ಮಗುವೂ ಆರೋಗ್ಯವಾಗಿರುತ್ತದೆ. ಮಹಿಳೆಯ ಗರ್ಭಾವಸ್ಥೆಯ ದಿನಗಳು ಎಂದಿನಂತೆ ಇರುವುದಿಲ್ಲ. ಊಟ, ವಸತಿ, ಬಟ್ಟೆ, ಪಾನಿಯ, ಹೀಗೆ ಹತ್ತು ಹಲವು ರೀತಿಯಲ್ಲಿ ಎಚ್ಚರಿಕೆ ವಹಿಸಬೇಕಾಗುತ್ತದೆ. ಹೀಗಾಗಿ ಗರ್ಭಿಣಿಯರಿಗಾಗಿ ಕೆಲವೊಂದು ಟಿಪ್ಸ್ ಗಳು ಇಲ್ಲಿವೆ.

    * ಪ್ರತಿ ದಿನ 10 ರಿಂದ 12 ಗ್ಲಾಸ್ ನೀರು ಕುಡಿಯುವುದು. ಇದರಿಂದ ನಿರ್ಜಲೀಕರಣ ಸಮಸ್ಯೆ ಎದುರಾಗಲ್ಲ.
    * ದಿನಕ್ಕೆ ಅರ್ಧ ಲೀಟರ್ ನಷ್ಟಾದರೂ ಹಾಲು ಕುಡಿಯಬೇಕು.
    * ಸಡಿಲವಾದ ಕಾಟನ್ ಬಟ್ಟೆ ಮತ್ತು ಹತ್ತಿ ಬಟ್ಟೆ ಧರಿಸುವುದು ಉತ್ತಮ.
    * ಮಾರುಕಟ್ಟೆಯಲ್ಲಿ ಗರ್ಭಿಣಿಯರಿಗಾಗಿಯೇ ಮ್ಯಾಕ್ಸಿ, ಗೌನ್, ಸಡಿಲವಾದ ಹತ್ತಿ ಬಟ್ಟೆ, ತಿಳಿ ಬಣ್ಣದ ಬಟ್ಟೆಗಳು ಸಿಗುತ್ತಿದ್ದು, ಅವುಗಳನ್ನು ಧರಿಸುವುದು ಉತ್ತಮ.
    * ಕೇವಲ ಹತ್ತಿ ಬಟ್ಟೆ ದೇಹದ ಉಷ್ಣವನ್ನು ಮತ್ತು ಬೆವರನ್ನು ಹೀರಿಕೊಳ್ಳುವ ಶಕ್ತಿ ಹೊಂದಿದೆ.
    * ಬಿಸಿಲಿನಲ್ಲಿ ಹೆಚ್ಚು ಸುತ್ತಾಟ ಬೇಡ. ಹೋಗಲೇಬೇಕಿದ್ದರೆ ಸನ್‍ಗ್ಲಾಸ್, ಛತ್ರಿ, ಸನ್ ಸ್ಕ್ರೀನ್ ಲೋಷನ್ ಬಳಸುವುದು ಒಳ್ಳೆಯದು.
    * ಬೆಳಗ್ಗೆ 10 ರಿಂದ ಸಂಜೆ 4.30ರ ವರೆಗೆ ಹೊರಗೆ ಹೋಗುವುದನ್ನು ಆದಷ್ಟು ಕಡಿಮೆ ಮಾಡಿ.


    * ಆದಷ್ಟು ಕಾಫಿ, ಟೀ ಕಡಿಮೆ ಮಾಡಿ.
    * ಉದ್ದವಾದ ಕೂದಲಿದ್ದರೆ, ಅಂತಹವರು ಕೂದಲನ್ನು ಸೇರಿಸಿ ಗಂಟು ಹಾಕಿ, ಬನ್ ಹಾಕಿ. ಇದರಿಂದ ಬೆವರುವುದನ್ನು ಕಡಿಮೆ ಮಾಡಬಹುದು.
    * ಬೇಸಿಗೆ ಕಾಲದಲ್ಲಿ ಹೆಚ್ಚು ಮಸಾಲೆ ಪದಾರ್ಥಗಳ ಸೇವನೆ ಬೇಡ.
    * ಒಂದೇ ಬಾರಿ ತಿನ್ನುವುದಕ್ಕಿಂತ ಆಗಾಗ ತಿನ್ನುವುದು ಒಳ್ಳೆಯದು.
    * ಹೆಚ್ಚೆಚ್ಚು ಸೌತೆಕಾಯಿ ಸೇವಿಸಿ, ಎಳನೀರು ಕುಡಿಯುವುದು, ಮಜ್ಜಿಗೆ, ಲಸ್ಸಿ ಕುಡಿಯಿರಿ
    * ಕಿತ್ತಳೆ ಹಣ್ಣಿನ ರಸ, ನಿಂಬೆಹಣ್ಣಿನ ರಸ ಸೇವಿಸಿದರೆ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

  • ಮದುವೆಗೆ ಮುನ್ನವೇ `ದಿ ವಿಲನ್’ ನಾಯಕಿ ಗರ್ಭಿಣಿ!

    ಮದುವೆಗೆ ಮುನ್ನವೇ `ದಿ ವಿಲನ್’ ನಾಯಕಿ ಗರ್ಭಿಣಿ!

    ಮುಂಬೈ: ಮಾಡೆಲ್ ಮತ್ತು ನಟಿ ಆಮಿ ಜಾಕ್ಸನ್ ಅವರು ಮದುವೆಗೂ ಮುನ್ನವೇ ಗರ್ಭಿಣಿಯಾಗಿದ್ದು, ಈ ಬಗ್ಗೆ ಸ್ವತಃ ಅವರೇ ಹೇಳಿಕೊಂಡಿದ್ದಾರೆ. ಆಮಿ ಈ ವಿಚಾರ ಬಹಿರಂಗಗೊಳಿಸುತ್ತಿದ್ದಂತೆಯೇ ಎಲ್ಲೆಡೆ ಭಾರೀ ಸುದ್ದಿಯಾಗುತ್ತಿದೆ.

    ನಟಿ ಆಮಿ ಜಾಕ್ಸನ್ ಅವರು ತಾವು ಮಗುವಿಗಾಗಿ ಕಾಯುತ್ತಿರುವ ಬಗ್ಗೆ ಇನ್ಸ್ ಸ್ಟಾಗ್ರಾಂನಲ್ಲಿ ಹೇಳಿಕೊಂಡಿದ್ದಾರೆ. ಮಾರ್ಚ್ 31 ರಂದು ಯುಕೆಯಲ್ಲಿ ತಾಯಂದಿರ ದಿನವನ್ನಾಗಿ ಆಚರಿಸುತ್ತಾರೆ. ಹೀಗಾಗಿ ಅಂದಿನ ದಿನವೇ ನಟಿ ಆಮಿ ಅವರು, “ನಾನು ನನ್ನ ಸಂತೋಷವನ್ನು ಗಟ್ಟಿಯಾದ ಧ್ವನಿಯಲ್ಲೇ ಕೂಗಿ ಹೇಳಲು ಕಾಯುತ್ತಿದ್ದೇನೆ. ಇಂದು ತಾಯಂದಿರ ದಿನವಾಗಿದೆ. ಹೀಗಾಗಿ ಇದಕ್ಕಿಂದ ಒಳ್ಳೆಯ ಸಮಯ ಸಿಗುವುದಿಲ್ಲ. ನಾನು ಈಗಾಗಲೇ ಜಗತ್ತಿನ ಎಲ್ಲದಕ್ಕಿಂತ ಹೆಚ್ಚು ನಿನ್ನನ್ನು ಪ್ರೀತಿಸುತ್ತಿದ್ದೇನೆ. ಇದು ಪ್ರಾಮಾಣಿಕ ಪ್ರೀತಿಯಾಗಿದ್ದು, ನಾವು ನಿನ್ನನ್ನು ಭೇಟಿ ಮಾಡಲು ಕಾತರದಿಂದ ಕಾಯುತ್ತಿದ್ದೇವೆ” ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಆಮಿ ತಾವು ಮಗುವಿನ ನಿರೀಕ್ಷೆಯಲ್ಲಿರುವುದನ್ನು ಬಹಿರಂಗಗೊಳಿಸಿದ್ದಾರೆ.

    ಆಮಿ ಅವರು ತಮ್ಮ ಪ್ರಿಯಕರ ಜಾರ್ಜ್ ಪನಯೌಟು ಜೊತೆಗಿರುವ ಒಂದು ಸುಂದರ ಫೋಟೋವನ್ನು ಶೇರ್ ಮಾಡಿದ್ದಾರೆ. ಅದರಲ್ಲಿ ಆಮಿ ಜಾರ್ಜ್ ಪನಯೋಟು ಅವರನ್ನು ತಮ್ಮ ಎರಡು ಕೈಗಳಿಂದ ಹಿಡಿದುಕೊಂಡಿದ್ದು, ಆಗ ಜಾರ್ಜ್ ಆಮಿಯ ಹಣೆಗೆ ಮುತ್ತಿಡುತ್ತಿರುವುದನ್ನು ಕಾಣಬಹುದಾಗಿದೆ. ಅದರಲ್ಲಿ ಆಮಿಯ ಉಬ್ಬಿದ ಹೊಟ್ಟೆ ಕೂಡ ಕಾಣಬಹುದಾಗಿದೆ.

    ಆಮಿ 2019 ಜನವರಿ 1 ರಂದು ತಮ್ಮ ಬಾಯ್ ಫ್ರೆಂಡ್ ಜಾರ್ಜ್ ಪನಯೌಟು ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಫೋಟೋವನ್ನು ಹಂಚಿಕೊಳ್ಳುವ ಮೂಲಕ ಎಲ್ಲರಿಗೂ ತಿಳಿಸಿದ್ದರು. ಇದೀಗ ತಾವು ಗರ್ಭಿಣಿ ಎಂದು ಹೇಳಿಕೊಳ್ಳುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ. ಈ ಜೋಡಿ 2020ಕ್ಕೆ ದಾಂಪತ್ಯಕ್ಕೆ ಕಾಲಿಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

    https://www.instagram.com/p/BvqigfhhAi8/

    ನಟಿ ಆಮಿ ಜಾಕ್ಸನ್ ಅವರು ಸ್ಯಾಂಡಲ್‍ವುಡ್ ನಲ್ಲಿ ಪ್ರೇಮ್ ನಿರ್ದೇಶನದ ಮತ್ತು ಕಿಚ್ಚ ಸುದೀಪ್ ಹಾಗೂ ಶಿವರಾಜ್‍ಕುಮಾರ್ ಅಭಿನಯದ ‘ದಿ ವಿಲನ್’ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸಿದ್ದರು.

    https://www.instagram.com/p/BsGXCchgxnA/?utm_source=ig_embed

  • ಮತ್ತೆ ಐಶ್ವರ್ಯ ರೈ ಗರ್ಭಿಣಿ?

    ಮತ್ತೆ ಐಶ್ವರ್ಯ ರೈ ಗರ್ಭಿಣಿ?

    ಮುಂಬೈ: ಮಾಜಿ ವಿಶ್ವ ಸುಂದರಿ, ನಟಿ ಐಶ್ವರ್ಯ ರೈ ಬಚ್ಚನ್ ಮತ್ತೊಮ್ಮೆ ಗರ್ಭಿಣಿ ಆಗಿದ್ದಾರೆ ಎನ್ನುವ ವಿಚಾರದ ಬಗ್ಗೆ ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ.

    ಇತ್ತೀಚೆಗೆ ಐಶ್ವರ್ಯ ರೈ ಹಾಗೂ ಅಭಿಷೇಕ್ ಬಚ್ಚನ್ ಒಟ್ಟಿಗೆ ಸಮಯ ಕಳೆಯಲು ಗೋವಾ ಬೀಚ್‍ಗೆ ಹೋಗಿದ್ದರು. ಈ ವೇಳೆ ಅವರು ಇಬ್ಬರು ನಡೆದುಕೊಂಡು ಹೋಗುತ್ತಿರುವ ಫೋಟೋ ವೈರಲ್ ಆಗಿದೆ. ಈ ಫೋಟೋ ನೋಡಿದ ಅಭಿಮಾನಿಗಳು ಐಶ್ವರ್ಯ ಎರಡನೇ ಮಗುವಿಗೆ ಗರ್ಭಿಣಿ ಆಗಿದ್ದಾರೆ ಎಂದು ಮಾತನಾಡುತ್ತಿದ್ದಾರೆ.

    ಬೀಚ್‍ನಲ್ಲಿ ಅಭಿಷೇಕ್ ಬಿಳಿ ಬಣ್ಣದ ಶರ್ಟ್ ಹಾಕಿ ಅದಕ್ಕೆ ಶಾರ್ಟ್ಸ್ ಧರಿಸಿದ್ದರು. ಆದರೆ ಐಶ್ವರ್ಯ ಧರಿಸಿದ ಉಡುಪಿನಲ್ಲಿ ಅವರು ಗರ್ಭಿಣಿಯಂತೆ ಕಾಣಿಸುತ್ತಿದ್ದಾರೆ. ಹೀಗಾಗಿ ಅಭಿಮಾನಿಗಳು ಅವರು ಮತ್ತೆ ಗರ್ಭಿಣಿ ಆಗಿದ್ದಾರೆ ಎಂದುಕೊಂಡಿದ್ದರು.

    ಈ ಫೋಟೋ ನೋಡಿ ಅಭಿಮಾನಿಯೊಬ್ಬ ಐಶ್ವರ್ಯ ಮತ್ತೆ ಪ್ರೆಗ್ನೆಂಟ್ ಆಗಿದ್ದಾರಾ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಮತ್ತೊಬ್ಬರು ಇಲ್ಲ ಅವರು ಗರ್ಭಿಣಿ ಆಗಿಲ್ಲ ಎಂದರು. ಇದೇ ವೇಳೆ ಮತ್ತೊಬ್ಬರು ಐಶ್ವರ್ಯ ಮತ್ತೊಂದು ಮಗುವಿಗೆ ಜನ್ಮ ನೀಡಲು ನಾನು ಕಾಯುತ್ತಿದ್ದೇನೆ ಎಂದು ಕಮೆಂಟ್ ಮಾಡಿದ್ದಾರೆ.

    ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯ ರೈ 2007ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. 2011ರಲ್ಲಿ ಐಶ್ವರ್ಯಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಮಗಳಿಗೆ ಆರಾಧ್ಯ ಎಂದು ಹೆಸರನ್ನಿಟ್ಟಿದ್ದಾರೆ.

  • ಕಟ್ಟಡ ಕುಸಿತ ಪ್ರಕರಣ- ಪತಿಗಾಗಿ ಕಾದಿದ್ದ ಗರ್ಭಿಣಿಗೆ ಶಾಕ್

    ಕಟ್ಟಡ ಕುಸಿತ ಪ್ರಕರಣ- ಪತಿಗಾಗಿ ಕಾದಿದ್ದ ಗರ್ಭಿಣಿಗೆ ಶಾಕ್

    ಧಾರವಾಡ: ನಗರದಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಪತಿಗಾಗಿ ಕಾದು ಕುಳಿತಿದ್ದ ಗರ್ಭಿಣಿಗೆ ಶಾಕ್ ಆಗಿದೆ.

    ಮಂಗಳವಾರ ನಿರ್ಮಾಣ ಹಂತದ ಕಟ್ಟಡವೊಂದು ಧರೆಗುಳಿದಿದ್ದು, ಕಟ್ಟಡದ ಅವಶೇಷಗಳಡಿ ಅಶೀತ್ ಹಿರೇಮಠ ಸಿಲುಕಿದ್ದರು. ಹೀಗಾಗಿ ಪತಿ ಕಾಣದೆ ಗರ್ಭಿಣಿ ಪತ್ನಿ ಕಂಗಾಲಾಗಿದ್ದರು. ಅಲ್ಲದೆ ಪತಿಯನ್ನು ಹೊರತರುವಂತೆ ಪತ್ನಿ ರಕ್ಷಣಾ ಸಿಬ್ಬಂದಿಗೆ ಪರಪರಿಯಾಗಿ ಬೇಡಿಕೊಳ್ಳುತ್ತಿದ್ದರು. ಆದ್ರೆ ಇದೀಗ ಅಶೀತ್ ಮೃತಪಟ್ಟಿದ್ದಾರೆ ಎಂದು ಸುದ್ದಿ ತಿಳಿದ ಕೂಡಲೇ ಪತ್ನಿಗೆ ಗರಬಡಿದಂತಾಗಿದೆ. ಇದನ್ನೂ ಓದಿ: ಧಾರವಾಡ ದುರಂತ – ಮೂವರನ್ನು ಕಾಪಾಡಿ ಸಾವನ್ನೇ ಗೆದ್ದು ಬಂದ ಕಾರ್ಮಿಕ

    ಅಶೀತ್ ನಿರ್ಮಾಣ ಹಂತದ ಕಟ್ಟಡದಲ್ಲಿ ಕಳೆದ ಮೂರು ತಿಂಗಳಿನಿಂದ ಪೇಂಟ್ ಅಂಗಡಿ ಇಟ್ಟುಕೊಂಡಿದ್ದರು. ನಿನ್ನೆಯೂ ತನ್ನ ಅಂಗಡಿಯಲ್ಲಿದ್ದ ಅಶೀತ್ ಏಕಾಏಕಿ ಕುಸಿದುಬಿದ್ದ ಕಟ್ಟಡದ ಅವಶೇಷಗಳಡಿ ಸಿಕ್ಕಿಹಾಕಿಕೊಂಡಿದ್ದರು. ಇದರಿಂದ ಅಶೀತ್ ಪತ್ನಿ ಹಾಗೂ ಕುಟುಂಬಸ್ಥರು ಆತಂಕಕ್ಕೀಡಾಗಿದ್ದರು.

    ಇತ್ತ ರಕ್ಷಣಾ ಕಾರ್ಯ ಭರದಿಂದ ಸಾಗುತ್ತಿತ್ತು. ಕಟ್ಟಡದ ಅವಶೇಷಗಳಡಿಯಿಂದ ಹೊರತೆಗೆದ ಎಲ್ಲರನ್ನೂ ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗುತ್ತಿತ್ತು. ಹೀಗಾಗಿ ಅಶೀತ್ ಅವರನ್ನು ಕೂಡ ಕರೆತರುತ್ತಾರೆಂದು ಕುಟುಂಬ ಆಸ್ಪತ್ರೆಯಲ್ಲಿಯೇ ಕಣ್ಣೀರು ಹಾಕುತ್ತಾ ಕಾದು ಕುಳಿತಿತ್ತು. ಇದನ್ನೂ ಓದಿ: ಸತತ 11 ಗಂಟೆಗಳ ಕಾರ್ಯಾಚರಣೆಯಲ್ಲಿ ಬದುಕಿ ಬಂದ ಶ್ವಾನ

    ಕೊನೆಗೂ ಸತತ 14 ಗಂಟೆಗಳ ಕಾರ್ಯಾಚರಣೆ ಮಾಡಿ ಕಟ್ಟಡದಡಿಯಿಂದ ಅವರನ್ನು ಹೊರ ತೆಗೆಯಲಾಯಿತಾದ್ರೂ ಅಶೀತ್ ಮಾತ್ರ ಬದುಕುಳಿಯಲಿಲ್ಲ. ಇದರಿಂದ ಪತಿ ಬರುವಿಕೆಗಾಗಿ ಕಾದು ಕುಳಿತಿದ್ದ ಗರ್ಭಿಣಿ ಪತ್ನಿ ಹಾಗೂ ಕುಟುಂಬಸ್ಥರಿಗೆ ಆಕಾಶವೇ ಕಳಚಿಬಿದ್ದಂತಾಗಿದೆ.

    https://www.youtube.com/watch?v=WhgyTU-1oN8

  • ಗರ್ಭಿಣಿ ಸಹೋದರಿಯ ಮೇಲೆ ಹಲ್ಲೆ ಮಾಡಿದ್ದಕ್ಕೆ ಬಾವನನ್ನೇ ಕೊಂದ

    ಗರ್ಭಿಣಿ ಸಹೋದರಿಯ ಮೇಲೆ ಹಲ್ಲೆ ಮಾಡಿದ್ದಕ್ಕೆ ಬಾವನನ್ನೇ ಕೊಂದ

    ಮುಂಬೈ: ಗರ್ಭಿಣಿ ಸಹೋದರಿ ಮೇಲೆ ಹಲ್ಲೆ ಮಾಡಿದ್ದಕ್ಕೆ ವ್ಯಕ್ತಿಯೊಬ್ಬ ತನ್ನ ಬಾವನನ್ನೇ ಕೊಲೆ ಮಾಡಿ ಬಂಧನಕ್ಕೊಳಗಾದ ಘಟನೆ ಗುರುವಾರ ಮಹಾರಾಷ್ಟ್ರದ ಪಾಲ್ಗರ್ ಜಿಲ್ಲೆಯಲ್ಲಿ ನಡೆದಿದೆ.

    ರಾಮು ಬಲಿರಾಮ್ ಶಿನ್ವಾರ್(45) ಬಂಧಿತ ಆರೋಪಿ. ವಾಸೈನಲ್ಲಿ ರಾಮುವಿನ ಸಹೋದರಿ ಹಾಗೂ ಆಕೆಯ ಪತಿ ಗುರುನಾಥ್ ಚಾತಿಯಾ ಬೋಯಿರ್ ವಾಸಿಸುತ್ತಿದ್ದರು. ಗುರುನಾಥ್ ತನ್ನ ಗರ್ಭಿಣಿ ಸಹೋದರಿ ಮೇಲೆ ಹಲ್ಲೆ ಮಾಡುತ್ತಿದ್ದ ನೋಡಿದ ರಾಮು ಆತನನ್ನು ತಡೆಯಲು ಹೋಗಿದ್ದಾನೆ.

    ರಾಮು ತನ್ನ ಬಾವನನ್ನು ತಡೆಯಲು ಹೋದಾಗ ಇಬ್ಬರ ನಡುವೆ ವಾಗ್ವಾದ ನಡೆದಿದೆ. ಬಳಿಕ ರಾಮು ಕೋಪಗೊಂಡು ಸಿಮೆಂಟ್ ಬ್ಲಾಕ್‍ನಿಂದ ತನ್ನ ಬಾವನ ತಲೆ ಮೇಲೆ ಹಲ್ಲೆ ನಡೆಸಿದ್ದಾನೆ. ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ಗುರುನಾಥ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

    ಸದ್ಯ ಪೊಲೀಸರು ರಾಮುನನ್ನು ಬಂಧಿಸಿ, ಆತನ ವಿರುದ್ಧ ಐಪಿಸಿ ಸೆಕ್ಷನ್ 302 ಅಡಿಯಲ್ಲಿ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಗರ್ಭಿಣಿ ಮೇಲೂ ಕನಿಕರ ತೋರದ ವೈದ್ಯೆ..!

    ಗರ್ಭಿಣಿ ಮೇಲೂ ಕನಿಕರ ತೋರದ ವೈದ್ಯೆ..!

    ಹಾಸನ: ಸರ್ಕಾರಿ ಆಸ್ಪತ್ರೆ ಮಹಿಳಾ ವೈದ್ಯರೊಬ್ಬರು ಗರ್ಭಿಣಿಯ ಬಳಿ ಲಂಚಪಡೆದಿದ್ದಾರೆ ಎನ್ನಲಾದ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಹಾಸನ ಜಿಲ್ಲೆ ಅರಕಲಗೂಡು ಪಟ್ಟಣದಲ್ಲಿರುವ ಸರ್ಕಾರಿ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ಅರಕಲಗೂಡು ಸರ್ಕಾರಿ ಆಸ್ಪತ್ರೆಯ ಡಾ. ಪುಷ್ಪಲತಾ ಲಂಚ ಪಡೆದ ವೈದ್ಯೆ.

    ಗರ್ಭಿಣಿ ಪ್ರತಿ ಬಾರಿಯಂತೆ ಈ ಬಾರಿಯೂ ವೈದ್ಯರ ಬಳಿ ಮಾಸಿಕ ಪರೀಕ್ಷೆಗೆ ಬಂದಿದ್ದರು. ಆ ಸಂದರ್ಭದಲ್ಲಿ ಮಹಿಳೆಯಿಂದ ಒಂದು ಸಾವಿರ ಹಣ ಪಡೆಯುವ ದೃಶ್ಯಾವಳಿ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ತನ್ನ ಪೋಷಕರೊಂದಿಗೆ ಆಸ್ಪತ್ರೆಗೆ ಬಂದ ಮಹಿಳೆ ಬಳಿ ವೈದ್ಯೆ ನಿರ್ಲಕ್ಷ್ಯವಾಗಿ ಮಾತನಾಡಿದ್ದಾರೆ. ಮತ್ತು ಲಂಚವನ್ನು ಪಡೆದಿದ್ದಾರೆ ಗರ್ಭಿಣಿಯ ಪೋಷಕರು ಆರೋಪಿಸಿರುವ ವೀಡಿಯೋ ವಾಟ್ಸಾಪ್ ಮತ್ತು ಫೇಸ್ ಬುಕ್‍ನಲ್ಲಿ ಹರಿದಾಡುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 12ರ ಪೋರನಿಂದ 10 ವರ್ಷದ ಬಾಲಕಿ ಮೇಲೆ ನಿರಂತರ ಅತ್ಯಾಚಾರ

    12ರ ಪೋರನಿಂದ 10 ವರ್ಷದ ಬಾಲಕಿ ಮೇಲೆ ನಿರಂತರ ಅತ್ಯಾಚಾರ

    – ಗರ್ಭಿಣಿಯಾದಳು ಪುಟ್ಟ ಬಾಲಕಿ

    ಮುಂಬೈ: ಅಪ್ರಾಪ್ತ ಬಾಲಕನೊಬ್ಬ 10ರ ಬಾಲೆಯ ಮೇಲೆ ನಿರಂತರವಾಗಿ ಅತ್ಯಾಚಾರ ಎಸಗಿ, ಆಕೆಯನ್ನು ಗರ್ಭಿಣಿಯಾಗಿಸಿದ ಘಟನೆ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದಿದೆ.

    ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಬಾಲಕನಿಗೆ 12 ವರ್ಷ. ಈ ಸಂಬಂಧ ಸಂತ್ರಸ್ತ ಬಾಲಕಿಯ ಪೋಷಕರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

    ಸಂತ್ರಸ್ತ ಬಾಲಕಿ ಹಾಗೂ ಆರೋಪಿ ಬಾಲಕ ಇಬ್ಬರೂ ನೆರೆಹೊರೆಯ ಮನೆಯವರು. ಬಾಲಕ ಕಳೆದ ನಾಲ್ಕು ತಿಂಗಳಿನಿಂದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾರೆನೆಂದು ಸಂತ್ರಸ್ತ ಬಾಲಕಿಯ ಪೋಷಕರು ದೂರಿನಲ್ಲಿ ತಿಳಿಸಿದ್ದಾರೆ ಎಂದು ಮೋಖದಾ ಪೊಲೀಸ್ ಠಾಣೆಯ ಅಧಿಕಾರಿ ಹೇಳಿದ್ದಾರೆ.

     

    ಬಾಲಕಿಗೆ ಕೆಲ ದಿನಗಳ ಹಿಂದೆ ಹೊಟ್ಟೆನೋವು ಕಾಣಿಸಿಕೊಂಡಿತ್ತು. ಇದರಿಂದಾಗಿ ಪೋಷಕರು ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಈ ವೇಳೆ ತಪಾಸಣೆ ನಡೆಸಿದ ವೈದ್ಯರು ಬಾಲಕಿ ಗರ್ಭಿಣಿಯಾಗಿದ್ದಾಳೆ ತಿಳಿಸಿದ್ದಾರೆ. ಇದರಿಂದ ಆತಂಕಕ್ಕೆ ಒಳಗಾದ ಪೋಷಕರು ಕೇಳಿದಾಗ ಬಾಲಕಿ ನಡೆದ ಘಟನೆಯನ್ನು ವಿವರಿಸಿದ್ದಾಳೆ.

    ಈ ಸಂಬಂಧ ಬಾಲಕನ ವಿರುದ್ಧ ಮೋಖದಾ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 376 (ಅತ್ಯಾಚಾರ) ಹಾಗೂ ಪೊಕ್ಸೊ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.

    ಆರೋಪಿ ಬಾಲಕನನ್ನು ಬಂಧಿಸಿಲ್ಲ. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ‘ಗುಡ್‍ನ್ಯೂಸ್’ ಗಾಗಿ ಮತ್ತೆ ಕರೀನಾ ಕಪೂರ್ ಗರ್ಭಿಣಿ

    ‘ಗುಡ್‍ನ್ಯೂಸ್’ ಗಾಗಿ ಮತ್ತೆ ಕರೀನಾ ಕಪೂರ್ ಗರ್ಭಿಣಿ

    ಹೈದರಾಬಾದ್: ಬಾಲಿವುಡ್‍ನ ಬೇಡಿಕೆಯ ನಟಿ ಕರೀನಾ ಕಪೂರ್ ಗರ್ಭಿಣಿಯಾಗಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಆದರೆ ಅಸಲಿಗೆ ಅವರು ತಮ್ಮ ಮುಂದಿನ ‘ಗುಡ್ ನ್ಯೂಸ್’ ಸಿನಿಮಾದಲ್ಲಿ ಗರ್ಭಿಣಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

    ಹೌದು..ಇತ್ತೀಚೆಗೆ ಕರೀನಾ ಅವರು ‘ಗುಡ್ ನ್ಯೂಸ್’ ಸಿನಿಮಾದ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. ಅವರು ಶೂಟಿಂಗ್‍ನಲ್ಲಿ ಬೂದು ಬಣ್ಣದ ಟಾಪ್ ಮತ್ತು ಟ್ರ್ಯಾಕ್ ಪ್ಯಾಂಟನ್ನ ಧರಿಸಿದ್ದು, ಉದ್ದನೆಯ ಒಂದು ಶರ್ಟ್ ಧರಿಸಿದ್ದಾರೆ. ಈ ಉಡುಪಿನಲ್ಲಿ ಅವರು ಗರ್ಭಿಣಿ ರೀತಿ ಕಾಣಿಸಿಕೊಂಡಿದ್ದಾರೆ. ಇದನ್ನೂ ನೋಡಿದ ಅಭಿಮಾನಿಗಳು ಅವರು ಮತ್ತೆ ಗರ್ಭಿಣಿಯಾಗಿದ್ದಾರೆ ಎಂದು ವೈರಲ್ ಮಾಡುತ್ತಿದ್ದಾರೆ.

    ಈ ಸಿನಿಮಾವನ್ನು ಕರಣ್ ಜೋಹರ್, ಅಕ್ಷಯ್ ಕುಮಾರ್ ಹಾಗೂ ವಯಕಾಮ್ ಮೋಷನ್ ಪಿಕ್ಚರ್ಸ್ ಜಂಟಿಯಾಗಿ ನಿರ್ಮಿಸುತ್ತಿವೆ. ನಟ ಅಕ್ಷಯ್ ಕುಮಾರ್, ದಿಲ್‍ಜಿತ್ ದೋಸನ್‍ಜ್ ಹಾಗೂ ಕೈರಾ ಅಡ್ವಾಣಿ ಸಿನಿಮಾದಲ್ಲಿ ಇದ್ದಾರೆ. ರಾಜ್ ಮೆಹ್ತಾ ನಿರ್ದೇಶನದಲ್ಲಿ ‘ಗುಡ್‍ನ್ಯೂಸ್’ ಚಿತ್ರವನ್ನು ಧರ್ಮ ಪ್ರೊಡಕ್ಷನ್ಸ್ ನಿರ್ಮಿಸುತ್ತಿದೆ. ಇದೇ ವರ್ಷ ಸೆಪ್ಟೆಂಬರ್ 6 ರಂದು ಬಿಡುಗಡೆಯಾಗಲಿದೆ.

    ಸದ್ಯಕ್ಕೆ ಕರೀನಾ ಕಪೂರ್ ಗುಡ್‍ನ್ಯೂಸ್ ಸಿನಿಮಾದ ಶೂಟಿಂಗ್‍ನಲ್ಲಿ ಬ್ಯುಸಿಯಾಗಿದ್ದಾರೆ. ಬಳಿಕ ಕರಣ್ ಜೋಹರ್ ನಿರ್ದೇಶನದ ‘ತಾಕ್ತ್’ ಸಿನಿಮಾಕ್ಕೆ ಸಹಿ ಹಾಕಿದ್ದಾರೆ. ಈ ಸಿನಿಮಾದಲ್ಲಿ ರಣ್‍ವೀರ್ ಸಿಂಗ್, ಅಲಿಯಾ ಭಟ್, ವಿಕಿ ಕೌಶಲ್, ಅನಿಲ್ ಕಪೂರ್, ಭೂಮಿ ಪಡ್ನೇಕರ್ ಮತ್ತು ಜಾಹ್ನವಿ ಕಪೂರ್ ಕೂಡ ನಟಿಸಲಿದ್ದಾರೆ.

    ನಟಿ ಕರೀನಾ ಕಪೂರ್ ಅವರಿಗೆ ಈಗಾಗಲೇ ಎರಡು ವರ್ಷದ ತೈಮೂರ್ ಅಲಿ ಖಾನ್ ಮಗನಿದ್ದಾನೆ. ತಾಯಿಯಾಗಿದ್ದರೂ ಕರೀನಾ ಅವರು ದೇಹದ ಸೌಂದರ್ಯವನ್ನು ವರ್ಕೌಟ್ ಮೂಲಕ ಹಾಗೆಯೇ ಉಳಿಸಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಶೂಟಿಂಗ್ ಸೆಟ್‍ನಲ್ಲಿ ನಕ್ಕ ‘ಗರ್ಭಿಣಿ’ ಪ್ರಿಯಾಂಕ!

    ಶೂಟಿಂಗ್ ಸೆಟ್‍ನಲ್ಲಿ ನಕ್ಕ ‘ಗರ್ಭಿಣಿ’ ಪ್ರಿಯಾಂಕ!

    ಹೈದರಾಬಾದ್: ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಗರ್ಭಿಣಿಯಾಗಿದ್ದಾರೆ ಎಂದು ಹೇಳುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಕೆಲವು ದಿನಗಳ ಹಿಂದೆ ಪ್ರಿಯಾಂಕಾ ಚೋಪ್ರಾ ಅವರು ಫೋಟೋ ಶೂಟ್ ಮಾಡಿಸಿಕೊಂಡಿದ್ದರು. ಫೋಟೋ ಶೂಟ್‍ಗೆ ಪೋಸ್ ಕೊಟ್ಟು ಕೊಟ್ಟು ಪ್ರಿಯಾಂಕಾ ಚೋಪ್ರಾ ಸುಸ್ತಾಗಿದ್ದರು. ಈ ವೇಳೆ ಹೊಟ್ಟೆ ಉಬ್ಬಿದ್ದಂತೆ ನಿಂತಿದ್ದು, ಆಗ ಪ್ರಿಯಾಂಕಾ ಅವರ ಫೋಟೋ ಕ್ಲಿಕ್ ಆಗಿದೆ.

    ಆ ಫೋಟೋದಲ್ಲಿ ಪ್ರಿಯಾಂಕಾ ಅವರ ಹೊಟ್ಟೆ ಹುಬ್ಬಿದಂತೆ ಕಾಣುತ್ತಿತ್ತು. ಹೀಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಸಖತ್ ವೈರಲ್ ಆಗಿ, ಪ್ರಿಯಾಂಕಾ ಅವರು ಗರ್ಭಿಣಿ ಆಗಿರಬಹುದು ಎಂದು ಕೆಲವು ಮಂದಿ ಅಭಿಪ್ರಾಯ ಪಟ್ಟಿದ್ದಾರೆ.

    ತನ್ನ ಫೋಟೋದ ಬಗ್ಗೆ ಸೆಟ್ ನಲ್ಲಿ ಮಾತನಾಡುವುದನ್ನು ಕೇಳಿ ಸ್ವತಃ ಪ್ರಿಯಾಂಕ ಅವರೇ ನಕ್ಕಿದ್ದಾರೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಮಾಧ್ಯಮಕ್ಕೆ ತಿಳಿಸಿದ್ದಾರೆ.

    ತಾಯಿ ಸ್ಪಷ್ಟನೆ?
    ಸಾಮಾಜಿಕ ಜಾಲತಾಣಗಲ್ಲಿ ಸುದ್ದಿ ಹರಡುತ್ತಿದ್ದಂತೆ ನಾನೇ ನನ್ನ ಮಗಳಿಗೆ ಫೋನ್ ಮಾಡಿ ಕೇಳಿದೆ. ಆಗ ತುಂಬಾ ಸುಸ್ತಾಗಿತ್ತು. ಅದಕ್ಕೆ ಆ ರೀತಿ ನಿಂತುಕೊಂಡಿದ್ದೆ ಎಂದು ತಿಳಿಸಿದ್ದಾಳೆ. ಪ್ರಿಯಾಂಕ ಗರ್ಭಿಣಿ ಆಗಿಲ್ಲ. ಸದ್ಯಕ್ಕೆ ಪ್ರಿಯಾಂಕಾ ಕೆಲವು ಸಿನಿಮಾಗಳಲ್ಲಿ ಬ್ಯುಸಿಯಿದ್ದಾಳೆ. ಸದ್ಯಕ್ಕೆ ಮಗು ಬೇಡ ಎಂದು ದಂಪತಿ ನಿರ್ಧರಿಸಿಕೊಂಡಿದ್ದಾರೆ ಎಂದು ಪ್ರಿಯಾಂಕ ತಾಯಿ ಮಧು ಚೋಪ್ರಾ ಸ್ಪಷ್ಟನೆ ಕೊಟ್ಟಿದ್ದಾರೆ.

    ಪ್ರಿಯಾಂಕಾ ಚೋಪ್ರಾ 2018 ಡಿಸೆಂಬರ್ ನಲ್ಲಿ ಅಮೆರಿಕಾದ ಪಾಪ್ ಗಾಯಕ ನಿಕ್ ಜೋನ್ಸ್ ಅವರನ್ನು ಮದುವೆ ಆಗಿದ್ದರು. ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಂತರವೂ ತಮ್ಮ ವೃತ್ತಿ ಜೀವನದಲ್ಲಿ ಪ್ರಿಯಾಂಕ ಬ್ಯುಸಿಯಾಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅಪ್ರಾಪ್ತನಿಂದ ಸಹಪಾಠಿ ಗರ್ಭಿಣಿ

    ಅಪ್ರಾಪ್ತನಿಂದ ಸಹಪಾಠಿ ಗರ್ಭಿಣಿ

    ಭುವನೇಶ್ವರ: ಅಪ್ರಾಪ್ತ ವಿದ್ಯಾರ್ಥಿಯೊಬ್ಬ ತನ್ನ ಸಹಪಾಠಿಯನ್ನೇ ಗರ್ಭಿಣಿ ಮಾಡಿದ್ದು, ಈಗ ಅತ್ಯಾಚಾರ ಆರೋಪದ ಮೇರೆಗೆ ಬಾಲಕನನ್ನು ರಿಮ್ಯಾಂಡ್ ಹೋಮ್ ಗೆ ಕಳುಹಿಸಲಾಗಿದೆ.

    ಈ ಘಟನೆ ಒಡಿಶಾದ ಮಯೂರ್ಭಂಜ್ ಜಿಲ್ಲೆಯ ಸರ್ಕಾರಿ ಶಾಲೆಯೊಂದರಲ್ಲಿ ನಡೆದಿದ್ದು, ಶಾಲೆಯ ಮುಖ್ಯೋಪಾಧ್ಯಾಯರು ಈ ಬಗ್ಗೆ ಬುಧವಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 6ನೇ ತರಗತಿ ವಿದ್ಯಾರ್ಥಿನಿ ಗರ್ಭಿಣಿಯಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

    ವಿದ್ಯಾರ್ಥಿನಿಯನ್ನು ಪರೀಕ್ಷೆಗಾಗಿ ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಆಕೆ 6 ತಿಂಗಳ ಗರ್ಭಿಣಿ ಎಂಬುದು ಬೆಳಕಿಗೆ ಬಂದಿದೆ. ಬಳಿಕ ವಿಚಾರಿಸಿದಾಗ ತನ್ನ ತರಗತಿಯ ಸಹಪಾಠಿಯೇ ಅತ್ಯಾಚಾರ ಮಾಡಿರುವ ವಿಷಯವನ್ನು ವಿದ್ಯಾರ್ಥಿನಿ ಬಹಿರಂಗಪಡಿಸಿದ್ದಳು.

    ಸದ್ಯಕ್ಕೆ ಮುಖ್ಯೋಪಾಧ್ಯಾಯ ನೀಡಿದ ದೂರಿನ ಮೇರೆಗೆ ಬಾಲಕನನ್ನು ತನಿಖೆಗೆ ಒಳಪಡಿಸಿ ಬಳಿಕ ಜಿಲ್ಲೆಯ ರಿಮ್ಯಾಂಡ್ ಹೋಮ್‍ಗೆ ಕಳುಹಿಸಲಾಗಿದೆ. ಒಡಿಶಾದಲ್ಲಿ ಕಳೆದ ಒಂದು ತಿಂಗಳಲ್ಲಿ ಎರಡು ಅಪ್ರಾಪ್ತ ಬಾಲಕಿಯರು ಗರ್ಭಿಣಿಯಾಗಿರುವ ಪ್ರಕರಣಗಳು ವರದಿಯಾಗಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv