Tag: Pregnant

  • ತುಂಬು ಗರ್ಭಿಣಿ ಸಮೀರಾರಿಂದ ಅಂಡರ್‌ವಾಟರ್ ಫೋಟೋಶೂಟ್

    ತುಂಬು ಗರ್ಭಿಣಿ ಸಮೀರಾರಿಂದ ಅಂಡರ್‌ವಾಟರ್ ಫೋಟೋಶೂಟ್

    ಮುಂಬೈ: ಬಹುಭಾಷಾ ನಟಿ ಸಮೀರಾ ರೆಡ್ಡಿ ಈಗ ತುಂಬು ಗರ್ಭಿಣಿಯಾಗಿದ್ದು, ಅವರು ಈಗ ಅಂಡರ್‌ವಾಟರ್ ಫೋಟೋಶೂಟ್ ಮಾಡಿಸಿದ್ದಾರೆ. ಈ ಫೋಟೋ ನೋಡಿದ ಅಭಿಮಾನಿಗಳು ಸಮೀರಾರನ್ನು ಟ್ರೋಲ್ ಮಾಡಲು ಶುರು ಮಾಡಿದ್ದಾರೆ.

    ಇತ್ತೀಚೆಗೆ ಸಮೀರಾ ಅಂಡರ್‌ವಾಟರ್ ಫೋಟೋಶೂಟ್ ಮಾಡಿಸಿ ಆ ಫೋಟೋಗಳನ್ನು ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಶೂಟನ್ನು ಪ್ರೇರಣಾ ಬೇಯೋಸ್ ಅವರಿಂದ ಮಾಡಿಸಿದ್ದು, ಸಮೀರಾ ಅಂಡರ್‌ವಾಟರ್ ಫೋಟೋಶೂಟ್‍ನ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

    ಈ ಬಗ್ಗೆ ಮಾತನಾಡಿದ ಸಮೀರಾ, “ನಾನು ಈ ಫೋಟೋಶೂಟ್ ಮಾಡಿಸುವಾಗ ತುಂಬಾ ಆನಂದಿಸಿದ್ದೇನೆ. ನಾನು ನನ್ನ ಜೀವನ ವೃತ್ತಿಯಲ್ಲಿ ಮಾಡಿಸಿದ ರೋಮಾಂಚಕ ಫೋಟೋಶೂಟ್‍ಗಳಲ್ಲಿ ಇದು ಒಂದಾಗಿದೆ. ನಾನು ಕೆಲವೇ ಸಮಯದಲ್ಲಿ ಈ ಫೋಟೋಶೂಟ್ ಮಾಡಿಸಿದ್ದೇನೆ. ಇದು ಒಳ್ಳೆಯ ಅನುಭವ” ಎಂದು ಹೇಳಿದ್ದಾರೆ.

    ಸಮೀರಾ ಫೋಟೋ ನೋಡಿ ಕೆಲವರು, ನೀವು ಈ ಫೋಟೋದಲ್ಲಿ ಸೂಪರ್ ಕೂಲ್ ಆಗಿ ಕಾಣಿಸುತ್ತಿದ್ದೀರಾ ಎಂದು ನಿಮಗೆ ಅನಿಸಿರಬಹುದು. ಆದರೆ ಪ್ರೆಗ್ನೆನ್ಸಿ ಸಮಯದಲ್ಲಿ ಈ ರೀತಿ ಫೋಟೋಶೂಟ್ ಮಾಡಿಸುವ ಅವಶ್ಯಕತೆ ಆದರೂ ಏನಿತ್ತು. ದಯವಿಟ್ಟು ಹುಷಾರಾಗಿರಿ. ಮಕ್ಕಳು ದೇವರು ಕೊಟ್ಟ ಉಡುಗೊರೆ ಎಂದು ಕಾಮೆಂಟ್ ಮಾಡಿದ್ದಾರೆ.

    ಮತ್ತೆ ಕೆಲವು ಅಭಿಮಾನಿಗಳು, ಗರ್ಭಿಣಿಯಾಗಿರುವ ಸಮಯದಲ್ಲಿ ಈ ರೀತಿ ಫೋಟೋಶೂಟ್ ಮಾಡಿಸುವುದು ಸರಿಯಲ್ಲ ಎಂದು ಕಾಮೆಂಟ್ ಮಾಡಿದ್ದರೆ, ಮತ್ತೆ ಕೆಲವರು ನಿಮಗೆ ತಲೆ ಕೆಟ್ಟಿದ್ದೀಯಾ ಎಂದು ಕಮೆಂಟ್ ಮಾಡಿ ಟ್ರೋಲ್ ಮಾಡುತ್ತಿದ್ದಾರೆ.

     

    View this post on Instagram

     

    I wanted to celebrate the beauty of the the bump in my 9 th month . At a time when we feel the most vulnerable, tired , scared, excited and at our biggest and most beautiful!???? I look forward to sharing it with you guys and I know the positivity will resonate because we all are at different phases of our lives with unique sizes and we need to love and accept ourselves at every level #imperfectlyperfect . @luminousdeep you have been outstanding and you are super talented ! Thnk you ❤️???? #bts ???? @thelensofsk @jwmarriottjuhu . . #positivebodyimage #socialforgood #loveyourself #nofilter #nophotoshop #natural #water #keepingitreal #acceptance #body #woman #underwater #picoftheday #underwaterphotography #maternityshoot #pool #maternityphotography #bump #bumpstyle #pregnantbump #positivevibes #pregnancy #pregnant #pregnancyphotography #preggo #bikini

    A post shared by Sameera Reddy (@reddysameera) on

    ಸಮೀರಾ ಅವರ ಈ ಫೋಟೋಗಳಿಗೆ ಯಾವುದೇ ಫಿಲ್ಟರ್ ಅಥವಾ ಫೋಟೋಶಾಪ್ ಮಾಡಲಿಲ್ಲ. ಈ ಫೋಟೋಗಳು ಸುಂದರವಾಗಿ ಬಂದಿದ್ದು, ಇದರಿಂದ ಸಮೀರಾ ಖುಷಿಯಾಗಿದ್ದಾರೆ. ಆದರೆ ಅವರ ಅಭಿಮಾನಿಗಳು ಈ ಫೋಟೋ ನೋಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಸಮೀರಾ ರೆಡ್ಡಿ 2014ರಲ್ಲಿ ಉದ್ಯಮಿ ಅಕ್ಷಯ್ ವಾರ್ದೆ ಅವರನ್ನು ಮದುವೆಯಾಗಿದ್ದರು. ಸಮೀರಾ ರೆಡ್ಡಿಗೆ ಈಗಾಗಲೇ ಒಂದು ಗಂಡು ಮಗು ಇದ್ದು, ಈಗ ಅವರು ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಸಮೀರಾ ರೆಡ್ಡಿ ಬಹುಭಾಷಾ ನಟಿಯಾಗಿದ್ದು, ತೆಲುಗಿನಲ್ಲಿ ಮೆಗಾ ಸ್ಟಾರ್ ಚಿರಂಜೀವಿ ಅವರ ಜೊತೆ ನಟಿಸಿದ್ದಾರೆ. ಅಲ್ಲದೇ ಕನ್ನಡದಲ್ಲೂ ಕಿಚ್ಚ ಸುದೀಪ್ ಅವರ ಜೊತೆ `ವರದನಾಯಕ’ ಚಿತ್ರದಲ್ಲಿ ನಟಿಸಿದ್ದಾರೆ. ಸಮೀರಾ 2014ರಲ್ಲಿ ಮದುವೆ ಆದ ಬಳಿಕ ಚಿತ್ರರಂಗದಿಂದ ದೂರ ಇದ್ದಾರೆ.

  • ಆಸ್ಪತ್ರೆಯಲ್ಲಿ ಗರ್ಭಿಣಿಗೆ ಸ್ಟ್ರೆಚರ್ ಸಿಗದೆ ಭುಜದ ಮೇಲೆ ಹೊತ್ತೊಯ್ದ ಪತಿ

    ಆಸ್ಪತ್ರೆಯಲ್ಲಿ ಗರ್ಭಿಣಿಗೆ ಸ್ಟ್ರೆಚರ್ ಸಿಗದೆ ಭುಜದ ಮೇಲೆ ಹೊತ್ತೊಯ್ದ ಪತಿ

    ಪಾಟ್ನಾ: ಗರ್ಭಿಣಿಯನ್ನು ಆಸ್ಪತ್ರೆಗೆ ಕರೆತಂದ ಕುಟುಂಬವು ಸ್ಟ್ರೆಚರ್ ಸಿಗದೆ ಗಂಟೆಗಳ ಕಾಲ ಪರದಾಡಿ, ಕೊನೆಗೆ ಪತಿಯೇ ಆಕೆಯನ್ನು ಭುಜದ ಮೇಲೆ ಹೊತ್ತೊಯ್ದ ಘಟನೆ ಬಿಹಾರದಲ್ಲಿ ನಡೆದಿದೆ.

    ರಾಜ್ಯದ ಅತಿದೊಡ್ಡ ಆಸ್ಪತ್ರೆಯಾದ ಪಾಟ್ನಾ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ (ಪಿಎಂಸಿಹೆಚ್) ಈ ಘಟನೆ ನಡೆದಿದೆ. ರಾಜ್ಯದ ಅತಿದೊಡ್ಡ ಆಸ್ಪತ್ರೆಯಾಗಿದ್ದರೂ ಗರ್ಭಿಣಿಗೆ ಸಿಬ್ಬಂದಿ ಸ್ಟ್ರೆಚರ್ ನೀಡದೇ ಅಮಾನವೀಯತೆ ತೋರಿದ್ದಾರೆ. ಬಳಿಕ ವಿಧಿಯಿಲ್ಲದೆ ಗರ್ಭಿಣಿಯನ್ನು ಪತಿ ಮಗುವಂತೆ ಭುಜದ ಮೇಲೆ ಕರೆದುಕೊಂಡು ಹೋಗಿದ್ದಾರೆ. ಆದರೆ ಬಳಿಕ ನೋವಿನಿಂದ ಬಳಲುತ್ತಿದ್ದ ಗರ್ಭಿಣಿ ನೆಲದ ಮೇಲೆ ಮಲಗಬೇಕಾಯಿತು ಎಂದು ವರದಿಯಾಗಿದೆ.

    ಮಾಹಿತಿ ಪ್ರಕಾರ, ಗರ್ಭಿಣಿಯ ಸಂಬಂಧಿಕರು ಆಸ್ಪತ್ರೆಗೆ ಬಂದ ಕೂಡಲೇ ಸ್ಟ್ರೆಚರ್ ನೀಡಿ ಎಂದು ಆಸ್ಪತ್ರೆ ಸಿಬ್ಬಂದಿ ಬಳಿ ಒತ್ತಾಯಿಸಿದ್ದರು. ಆದರೆ ಸಿಬ್ಬಂದಿ ಕುಟುಂಬದವರ ಬಳಿ 100 ರೂ. ಬೇಡಿಕೆ ಇಟ್ಟಿದ್ದಾರೆ. ಆದರೆ ಬಡ ಕುಟುಂಬಸ್ಥರ ಬಳಿ ಅಷ್ಟು ಹಣವಿರದ ಕಾರಣಕ್ಕೆ ಕೇವಲ 30 ರೂಪಾಯಿ ಮಾತ್ರ ಇದೆ ಎಂದಿದ್ದಾರೆ. ಇದರಿಂದಾಗಿ ಸಿಬ್ಬಂದಿ ಮಹಿಳೆಯನ್ನು ಸ್ಟ್ರೆಚರ್ ಮೇಲೆ ಕರೆದೊಯ್ಯಲು ನಿರಾಕರಿಸಿದ್ದಾರೆ.

    ಈ ಘಟನೆಯ ಬಗ್ಗೆ ಪಿಎಂಸಿಎಚ್ ನಿರ್ವಹಣೆ ಏನೂ ಪ್ರತಿಕ್ರಿಯೆ ನೀಡಿರಲಿಲ್ಲ. ಆದರೆ ಮಾಧ್ಯಮಗಳಲ್ಲಿ ಸುದ್ದಿಯಾದ ನಂತರ, ಎಚ್ಚೆತ್ತ ಪಿಎಂಸಿಎಚ್ ವೈದ್ಯರು ಮಹಿಳೆಗೆ ಚಿಕಿತ್ಸೆಯನ್ನು ಪ್ರಾರಂಭಿಸಿದರು.

    ಬಿಹಾರ ಆರೋಗ್ಯ ಸಚಿವ ಮಂಗಲ್ ಪಾಂಡೆ ರಾಜ್ಯದಲ್ಲಿ ಉತ್ತಮ ಆರೋಗ್ಯ ಸೇವೆ ಒದಗಿಸಲು ಲಕ್ಷಾಂತರ ರೂ. ಖರ್ಚು ಮಾಡುತ್ತಿದ್ದೇವೆ ಎನ್ನುತ್ತಾರೆ. ಆದರೆ ಆಸ್ಪತ್ರೆಗಳ ವಾಸ್ತವವೇ ಬೇರೆ ಇದೆ. ಪಿಎಂಸಿಹೆಚ್‍ನಲ್ಲಿ ರೋಗಿಗಳಿಗೆ ಕನಿಷ್ಠ ಸೌಲಭ್ಯವನ್ನು ಒದಗಿಸದೆ ಇರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ ಎಂದು ಜನ ವ್ಯವಸ್ಥೆಯ ಬಗ್ಗೆ ಆಕ್ರೋಶ ಹೊರ ಹಾಕುತ್ತಿದ್ದಾರೆ.

  • ಅಂಬುಲೆನ್ಸ್ ಸಿಗದಕ್ಕೆ ಬೈಕ್‍ನಲ್ಲಿ ಗರ್ಭಿಣಿಯನ್ನ ಕರೆತಂದ ಕುಟುಂಬಸ್ಥರು

    ಅಂಬುಲೆನ್ಸ್ ಸಿಗದಕ್ಕೆ ಬೈಕ್‍ನಲ್ಲಿ ಗರ್ಭಿಣಿಯನ್ನ ಕರೆತಂದ ಕುಟುಂಬಸ್ಥರು

    ರಾಂಚಿ: ಸೂಕ್ತ ಸಮಯಕ್ಕೆ ಅಂಬುಲೆನ್ಸ್ ಸಿಗದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಗರ್ಭಿಣಿಯನ್ನು ಸುಮಾರು 10 ಕಿ.ಮೀ ವರೆಗೆ ಬೈಕ್ ನಲ್ಲಿಯೇ ಕರೆತಂದಿದ್ದಾರೆ. ಜಾರ್ಖಂಡ್ ರಾಜ್ಯದ ಚಂದ್ವಾ ಹೋಬಳಿಯಲ್ಲಿ ಈ ಘಟನೆ ನಡೆದಿದೆ.

    ಗರ್ಭಿಣಿ ಶಾಂತಿ ದೇವಿ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡು ತೀವ್ರ ರಕ್ತಸ್ರಾವವಾಗಿತ್ತು. ಹೆರಿಗೆ ನೋವು ಕಾಣಿಸಿಕೊಂಡಾಗ ಕುಟುಂಬಸ್ಥರು ಮೊದಲು ಚಂದ್ವಾ ಆರೋಗ್ಯ ಸಮುದಾಯ ಕೇಂದ್ರಕ್ಕೆ ಕರೆ ಮಾಡಿ ಅಂಬುಲೆನ್ಸ್ ಕಳುಹಿಸುವಂತೆ ಮನವಿ ಮಾಡಿಕೊಂಡಿದ್ದಾರೆ. ಆದರೆ ಆಸ್ಪತ್ರೆ ಸಿಬ್ಬಂದಿ, ಅಂಬುಲೆನ್ಸ್ ಸೇವೆಯಲ್ಲಿಲ್ಲ ಎಂದು ಹೇಳಿದ್ದಾರೆ.

    ಶಾಂತಿದೇವಿ ಅವರ ಆರೋಗ್ಯ ಸ್ಥಿತಿ ಹದೆಗೆಡುತ್ತಿದ್ದಂತೆ ಭಯಬೀತರಾದ ಕುಟುಂಬಸ್ಥರು ಗ್ರಾಮದ ವ್ಯಕ್ತಿಯೊಬ್ಬರ ಬೈಕ್ ನಲ್ಲಿಯೇ ಗರ್ಭಿಣಿಯನ್ನು ಚಂದ್ವಾ ಆಸ್ಪತ್ರೆಗೆ ಕರೆತಂದಿದ್ದಾರೆ. ಮಹಿಳೆಯ ಪರಿಸ್ಥಿತಿ ನೋಡಿದ ವೈದ್ಯರು ಪ್ರಾಥಮಿಕ ಚಿಕಿತ್ಸೆ ನೀಡಿ ಲತೆಹಾರ್ ಗೆ ಕರೆದೊಯ್ಯುವಂತೆ ಸೂಚಿಸಿ ಮುಂದಿನ 27 ಕಿ.ಮೀ. ಪ್ರಯಾಣಕ್ಕೆ ಅಂಬುಲೆನ್ಸ್ ಸೇವೆ ಒದಗಿಸಿದ್ದಾರೆ. ಲತೆಹಾರ್ ನಲ್ಲಿ ತಾತ್ಕಾಲಿಕ ಚಿಕಿತ್ಸೆ ನೀಡಿ ಗರ್ಭಿಣಿಯನ್ನು ರಾಂಚಿ ರಾಜೇಂದ್ರ ಇನ್ಸಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಸದ್ಯ ಮಹಿಳೆ ಆರೋಗ್ಯವಾಗಿದ್ದಾರೆ.

    ಈ ಕುರಿತು ಪ್ರತಿಕ್ರಿಯಿಸಿರುವ ಶಾಂತಿದೇವಿ ಪತಿ ಕಮಲ್ ಗಂಜು, ಪತ್ನಿಗೆ ಹೆರಿಗೆ ನೋವು ಕಾಣಿಸಿಕೊಳ್ಳುತ್ತಿದ್ದಂತೆ 108 ನಂಬರ್ ಗೆ ಕರೆ ಮಾಡಿ ಅಂಬುಲೆನ್ಸ್ ಕಳುಹಿಸುವಂತೆ ಮನವಿ ಮಾಡಿಕೊಂಡೆ. ಆಸ್ಪತ್ರೆಯ ಸಿಬ್ಬಂದಿ ನಮ್ಮ ಸಮಸ್ಯೆಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಮಹಿಳೆಯನ್ನು ಕರೆತಂದಾಗ ಆಕೆಯ ದೇಹದಲ್ಲಿ ಹೀಮೋಗ್ಲೋಬಿನ್ ಪ್ರಮಾಣ ತುಂಬಾನೆ ಇಳಿಕೆಯಾಗಿತ್ತು. ಮಹಿಳೆಗೆ ಹೊಂದಿಕೆಯಾಗುವ ರಕ್ತ ನಮ್ಮ ಬ್ಲಡ್ ಬ್ಯಾಂಕ್ ನಲ್ಲಿರಲಿಲ್ಲ. ಅನಿವಾರ್ಯವಾಗಿ ಮಹಿಳೆಗೆ ಪ್ರಾಥಮಿಕ ಚಿಕಿತ್ಸೆ ನೀಡಿ ರಾಂಚಿಗೆ ಕಳುಹಿಸಲಾಯ್ತು ಎಂದು ಜಿಲ್ಲಾ ಸರ್ಜನ್ ಶಿವಪೂಜನ್ ಶರ್ಮಾ ಹೇಳಿದ್ದಾರೆ.

    108 ನಂಬರ್ ಗೆ ಕರೆ ಮಾಡಿದಾಗ ಅಂಬುಲೆನ್ಸ್ ಸೇವೆ ನೀಡಿಲ್ಲ ಎಂಬುವುದು ಆಧಾರ ರಹಿತ ಆರೋಪವಾಗಿದೆ. ಒಂದು ಸಾರಿ ಕರೆ ಮಾಡಿದ್ರೆ ರೋಗಿ ಕೆಲವು ಬಾರಿ 40 ನಿಮಿಷಗಳವರೆಗ ಕಾಯಬೇಕಾಗುತ್ತದೆ. 40 ನಿಮಿಷದ ಮೇಲೆಯೂ ಅಂಬುಲೆನ್ಸ್ ಬರದೇ ಇದ್ದಲ್ಲಿ ಕ್ರಮ ತೆಗೆದುಕೊಳ್ಳಬಹುದು. ಕುಟುಂಬಸ್ಥರು ಅವಸರವಾಗಿ ಮಹಿಳೆಯನ್ನು ಬೈಕಿನಲ್ಲಿ ಆಸ್ಪತ್ರೆಗೆ ಕರೆತಂದಿದ್ದಾರೆ ಎಂದು ಶಿವಪೂಜನ್ ತಿಳಿಸಿದ್ದಾರೆ.

    ಘಟನೆ ಸಂಬಂಧ ಸ್ಥಳೀಯ ಸಿಪಿಎಂ ಮುಖಂಡರು ಜಿಲ್ಲಾ ಆರೋಗ್ಯ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಸೂಕ್ತ ತನಿಖೆ ನಡೆಸಿ ಜಿಲ್ಲಾ ಸರ್ಜನ್ ವಿರುದ್ಧ ಸರ್ಕಾರ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದ್ದಾರೆ.

  • 40 ವರ್ಷಗಳಿಂದ ಗರ್ಭಿಣಿಯರಿಗೆ ಸಹಾಯಹಸ್ತ ಚಾಚ್ತಿದ್ದಾರೆ ವಿಜಯಪುರದ ಉದ್ಯಮಿ ರಾಧಾಬಾಯಿ

    40 ವರ್ಷಗಳಿಂದ ಗರ್ಭಿಣಿಯರಿಗೆ ಸಹಾಯಹಸ್ತ ಚಾಚ್ತಿದ್ದಾರೆ ವಿಜಯಪುರದ ಉದ್ಯಮಿ ರಾಧಾಬಾಯಿ

    ವಿಜಯಪುರ: ಅಲ್ಪನಿಗೆ ಐಶ್ವರ್ಯ ಸಿಕ್ಕರೆ ಮಧ್ಯರಾತ್ರಿ ಕೊಡೆ ಹಿಡೀತಾನೆ ಅನ್ನೋ ಗಾದೆಯಿದೆ. ಆದರೆ, ವಿಜಯಪುರದ ಪಬ್ಲಿಕ್ ಹೀರೋ ರಾಧಾಬಾಯಿ ಅವರು ಇದಕ್ಕೆ ವಿರೋಧವಾಗಿದ್ದಾರೆ. ಪತಿಯ ಆಸೆಯಂತೆ ಸುಮಾರು 40 ವರ್ಷಗಳಿಂದ ಸರ್ಕಾರಿ ಆಸ್ಪತ್ರೆಯ ಗರ್ಭಿಣಿಯರಿಗೆ ಚಿಕ್ಕ ಸೇವೆ ಮಾಡುತ್ತಿದ್ದಾರೆ.

    ಹೌದು. ಜಿಲ್ಲೆಯ ಪ್ರತಿಷ್ಠಿತ ಹತ್ತಿ ಉದ್ಯಮಿಯಾಗಿರುವ 80 ವರ್ಷದ ರಾಧಾಬಾಯಿ ಅವರ ಮೊಮ್ಮಕ್ಕಳು ಕೂತು ತಿಂದರೂ ಖಾಲಿ ಆಗದಷ್ಟು ಆಸ್ತಿ ಇದೆ. ಆದರೆ ಜನಸಾಮಾನ್ಯರಿಗೆ ಸಹಾಯ ಹಸ್ತ ಚಾಚಿದ್ದಾರೆ. ಪತಿ ಕಿಶನ್‍ಲಾಲ ಅವರು 1980ರಲ್ಲಿ ವಿಜಯಪುರದ ಸರ್ಕಾರಿ ಆಸ್ಪತ್ರೆಗೆ ಬರುವ ಗರ್ಭಿಣಿಯರಿಗೆ ಖುದ್ದು ತಾವೇ ತೆರಳಿ 2 ಗ್ಲಾಸ್ ಅಕ್ಕಿ, 5 ರೂ. ನೀಡಿ ಸಹಾಯ ಮಾಡುತ್ತಿದ್ದರು. ಸರ್ಕಾರಿ ಆಸ್ಪತ್ರೆಯಲ್ಲಿ ಅದೆಷ್ಟೇ ಗರ್ಭಿಣಿಯರು ದಾಖಲಾಗಿದ್ದರೂ ಅವರಿಗೆಲ್ಲ 15 ದಿನಕ್ಕೊಮ್ಮೆ ಈ ರೀತಿ ಸಹಾಯ ಮಾಡುತ್ತಿದ್ದರು. 1985ರಲ್ಲಿ ಅವರು ನಿಧನರಾದ ಮೇಲೆ ಈ ಕಾಯಕವನ್ನ ಪತ್ನಿ ರಾಧಾಬಾಯಿ ಮುಂದುವರಿಸಿದ್ದಾರೆ.

    ಯಾರೊಬ್ಬರ ಆಸರೆ ಇಲ್ಲದೆ ನಡೆಯಲು ಬರಲ್ಲ. ಆದರೂ, ಮಗ ಅಥವಾ ವಾಹನ ಚಾಲಕರ ಸಹಾಯ ಪಡೆದು 15 ದಿನಕ್ಕೊಮ್ಮೆ ಆಸ್ಪತ್ರೆಗೆ ಭೇಟಿ ನೀಡಿ ಪತಿಯ ಮಹದಾಸೆಯನ್ನು ಪೂರೈಸುತ್ತಿದ್ದಾರೆ. ಈ ಇಳಿವಯಸ್ಸಿನಲ್ಲಿ ಅಕ್ಕಿ ಹೊತ್ತು ತಂದು ಕೊಡಲಾಗದ ಕಾರಣ, ಗರ್ಭಣಿಯರಿಗೆ 20 ರೂ. ಹಾಗೂ 2 ಬಿಸ್ಕೆಟ್ ಪ್ಯಾಕ್ ಕೊಡುತ್ತಿದ್ದಾರೆ ಎಂದು ಗರ್ಭಿಣಿ ಶೋಭಾ ಹೇಳಿದ್ದಾರೆ.

    ಒಟ್ಟಿನಲ್ಲಿ ಪತಿಯ ಆಸೆಯನ್ನು 40 ವರ್ಷಗಳಿಂದ ಮುಂದುವರಿಸಿಕೊಂಡು ಬಂದಿರೋ ರಾಧಾಬಾಯಿ ಅವರು ಗರ್ಭಿಣಿಯರಿಗೆ ಸಹಾಯ ಹಸ್ತ ಚಾಚುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

  • ನಿಮ್ಮ ಯೋಗ್ಯತೆಗೆ 30 ಕುರ್ಚಿ ಹಾಕಕ್ಕೆ ಆಗಲ್ವಾ – ಕ್ಯೂ ನಿಂತಿದ್ದ ಗರ್ಭಿಣಿಯರನ್ನ ನೋಡಿ ಸಚಿವರ ತರಾಟೆ

    ನಿಮ್ಮ ಯೋಗ್ಯತೆಗೆ 30 ಕುರ್ಚಿ ಹಾಕಕ್ಕೆ ಆಗಲ್ವಾ – ಕ್ಯೂ ನಿಂತಿದ್ದ ಗರ್ಭಿಣಿಯರನ್ನ ನೋಡಿ ಸಚಿವರ ತರಾಟೆ

    ಬೀದರ್: ಸ್ಕ್ಯಾನಿಂಗ್ ಗಾಗಿ ಎರಡು ಗಂಟೆಗಳಿಂದ ಕ್ಯೂನಲ್ಲಿ ನಿಂತಿರುವ ಗರ್ಭಿಣಿಯರು ಹಾಗೂ ರೋಗಿಗಳನ್ನು ನೋಡಿ ಕೆಂಡಾಮಂಡಲರಾದ ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಕಾಶೆಂಪೂರ್ ಬ್ರಿಮ್ಸ್ ನಿರ್ದೇಶಕರಿಗೆ ಫುಲ್ ತರಾಟೆ ತೆಗೆದುಕೊಂಡು ಘಟನೆ ನಡೆದಿದೆ.

    ಕ್ಯೂನಲ್ಲಿ ನಿಂತಿರುವ ಗರ್ಭಿಣಿಯರಿಗೆ ನಿಮ್ಮ ಯೋಗ್ಯತೆಗೆ 30 ಕುರ್ಚಿ ಹಾಕುವುದಕ್ಕೆ ಆಗಲ್ವಾ. ಗರ್ಭಿಣಿಯರು ಬೆಳಗ್ಗೆಯಿಂದಲೂ ನಿಂತಿದ್ದರು ಕುರ್ಚಿ ಹಾಕಲು ನಿಮ್ಮ ಬಳಿ ಹಣ ಇಲ್ವಾ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಬ್ರಿಮ್ಸ್ ನಿರ್ದೇಶಕರಿಗೆ ರೋಗಿಗಳ ಮುಂದೆಯೇ ಫಲ್ ಕ್ಲಾಸ್ ತೆಗೆದುಕೊಂಡಿದ್ದಾರೆ.

    ಸಚಿವರು ಗರಂ ಆದ ತಕ್ಷಣ ಬ್ರಿಮ್ಸ್ ನಿರ್ದೇಶಕ ಕ್ಷೀರಸಾಗರ ಇನ್ನು ಟೆಂಡರ್ ಆಗಬೇಕು ಸರ್ ಎಂದಿದ್ದಾರೆ. ಅದಕ್ಕೆ ಸಚಿವರು ಟೆಂಡರ್ ಬಿಡ್ರೀ ಒಂದು ಗಂಟೆಯಲ್ಲಿ ಇಲ್ಲಿ ಕುರ್ಚಿ ಹಾಕಬೇಕು ಎಂದು ಸಚಿವರು ತಾಕೀತು ಮಾಡಿದ್ದಾರೆ. ಬೆಳಗ್ಗೆಯಿಂದ ನಾವು ಸ್ಕ್ಯಾನಿಂಗ್‍ಗಾಗಿ ಕ್ಯೂ ನಿಂತಿದ್ದೇವೆ. ನಮಗೆ ಹೋಗಲಿ ಗರ್ಭಿಣಿಯರು ಕ್ಯೂನಲ್ಲಿ ನಿಂತರೂ ಆರೋಗ್ಯ ಅಧಿಕಾರಿ ಸ್ಕ್ಯಾನಿಂಗ್ ಮಾಡಲು ರೆಡಿ ಇಲ್ಲಾ ಎಂದು ರೋಗಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಸಮಂತಾ ಗರ್ಭಿಣಿಯಾ?- ಜಾಣತನದ ಉತ್ತರ ನೀಡಿದ ನಟಿ

    ಸಮಂತಾ ಗರ್ಭಿಣಿಯಾ?- ಜಾಣತನದ ಉತ್ತರ ನೀಡಿದ ನಟಿ

    ಹೈದರಾಬಾದ್: ನಟಿ ಸಮಂತಾ ಗರ್ಭಿಣಿಯಾ ಎಂದು ಪ್ರಶ್ನಿಸಿ ತೆಲುಗು ವೈಬ್‍ಸೈಟ್‍ವೊಂದು ನಟಿಯ ಟ್ವಿಟ್ಟರಿಗೆ ಟ್ಯಾಗ್ ಮಾಡಿತ್ತು. ಈ ಪ್ರಶ್ನೆಗೆ ನಟಿ ಸಮಂತಾ ಅಕ್ಕಿನೇನಿ ಹಾಸ್ಯಾಸ್ಪದವಾಗಿ ಪ್ರತಿಕ್ರಿಯಿಸಿದ್ದಾರೆ.

    ತೆಲುಗು ವೆಬ್‍ಸೈಟ್, ಸಮಂತಾ ಗರ್ಭಿಣಿಯಾ ಎಂದು ಪ್ರಶ್ನಿಸಿ ಅವರಿಗೆ ಟ್ಯಾಗ್ ಮಾಡಿ ಟ್ವೀಟ್ ಮಾಡಿತ್ತು. ಈ ಟ್ವೀಟ್‍ಗೆ ಸಮಂತಾ, ನಿಜವಾಗಿಯೂ ಹೌದಾ? ನಿಮಗೆ ಗೊತ್ತಾದರೆ ದಯವಿಟ್ಟು ನನಗೆ ತಿಳಿಸಿ ಎಂದು ಹಾಸ್ಯವಾಗಿ ರೀ-ಟ್ವೀಟ್ ಮಾಡಿದ್ದಾರೆ.

    ಸಮಂತಾ ಈಗ ತಮ್ಮ ಮುಂಬರುವ ‘ಓ ಬೇಬಿ’ ಚಿತ್ರದ ಪ್ರಮೋಶನ್‍ನಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರವನ್ನು ಬಿ.ವಿ ನಂದಿನಿ ರೆಡ್ಡಿ ನಿರ್ದೇಶನ ಮಾಡುತ್ತಿದ್ದು, ಈ ಚಿತ್ರಕ್ಕಾಗಿ ಸಮಂತಾ ತಮ್ಮ ಟ್ವಿಟ್ಟರ್ ಖಾತೆಯನ್ನು ಬೇಬಿ ಅಕ್ಕಿನೇನಿ ಎಂದು ಬದಲಾಯಿಸಿಕೊಂಡಿದ್ದಾರೆ.

    ಓ ಬೇಬಿ ಚಿತ್ರವನ್ನು ಸೌತ್ ಕೊರಿಯಾದ ‘ಮಿಸ್ ಗ್ರ್ಯಾನಿ’ ಚಿತ್ರದಿಂದ ಪ್ರೇರಣೆಗೊಂಡು ಮಾಡಲಾಗಿದೆ. ಈ ಚಿತ್ರದಲ್ಲಿ ನಾಗಾ ಶೌರ್ಯಮ ಲಕ್ಷ್ಮಿ, ರಾವ್ ರಮೇಶ್ ಹಾಗೂ ಸ್ನಿಗ್ದಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಜುಲೈ 5 ರಂದು ಈ ಚಿತ್ರ ಬಿಡುಗಡೆ ಆಗಲಿದೆ.

    ಸಮಂತಾ ಅವರು 2017, ಅಕ್ಟೋಬರ್ ತಿಂಗಳಲ್ಲಿ ನಟ ನಾಗಚೈತನ್ಯ ಅವರ ಜೊತೆ ಗೋವಾದಲ್ಲಿ ಡೆಸ್ಟಿನೇಶನ್ ವೆಡ್ಡಿಂಗ್ ಆಗಿದ್ದರು. ಮೊದಲು ಇಬ್ಬರು ಹಿಂದೂ ಸಂಪ್ರದಾಯದಂತೆ ಮದುವೆಯಾಗಿ ನಂತರ ಕ್ರೈಸ್ತ ಸಂಪ್ರದಾಯದಂತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

  • ಅನುಮಾನಾಸ್ಪದವಾಗಿ 5 ತಿಂಗಳ ಗರ್ಭಿಣಿ ಸಾವು

    ಅನುಮಾನಾಸ್ಪದವಾಗಿ 5 ತಿಂಗಳ ಗರ್ಭಿಣಿ ಸಾವು

    ಬೆಂಗಳೂರು: ನೆಲಮಂಗಲ ಪಟ್ಟಣದ ಜಕ್ಕಸಂದ್ರದಲ್ಲಿ ಐದು ತಿಂಗಳ ಗರ್ಭಿಣಿ ಪತಿಯ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

    ನಳಿನ (22) ಮೃತ ಗರ್ಭಿಣಿ. ಮನೆಯ ಫ್ಯಾನ್‍ಗೆ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಮೃತ ನಳಿನ ಮೂಲತಃ ಮಾಗಡಿ ತಾಲೂಕಿನ ಬಾಣಸವಾಡಿ ನಿವಾಸಿಯಾಗಿದ್ದು, ಎರಡು ವರ್ಷಗಳ ಹಿಂದೆ ಬಸವರಾಜು ಜೊತೆ ಮದುವೆಯಾಗಿದ್ದರು.

    ಈಗ ನಳಿನ ಐದು ತಿಂಗಳ ಗರ್ಭಿಣಿಯಾಗಿದ್ದರು. ಆದರೆ ಶುಕ್ರವಾರ ರಾತ್ರಿ ಮನೆಯಲ್ಲಿ ಯಾರು ಇಲ್ಲದ ವೇಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ  ಎಂದು ಪತಿ ಮನೆಯವರು ಹೇಳಿದ್ದಾರೆ.

    ಇಂದು ಮುಂಜಾನೆ ಪತಿ ಮತ್ತು ಪಕ್ಕದ ಮನೆಯವರು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಆದರೆ ಮೃತಳ ಪೋಷಕರು ವರದಕ್ಷಿಣೆ ಕಿರುಕುಳದ ಆರೋಪ ಮಾಡುತ್ತಿದ್ದಾರೆ. ಸದ್ಯಕ್ಕೆ ಮಾಹಿತಿ ತಿಳಿದು ನೆಲಮಂಗಲ ಟೌನ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮೃತಳ ಪತಿ ಬಸವರಾಜುವನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

    ಈ ಕುರಿತು ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ತುಂಬು ಗರ್ಭಿಣಿಯನ್ನು ಹೊರ ಹಾಕಿದ ಅಧಿಕಾರಿಗಳು!

    ತುಂಬು ಗರ್ಭಿಣಿಯನ್ನು ಹೊರ ಹಾಕಿದ ಅಧಿಕಾರಿಗಳು!

    ಉಡುಪಿ: ಲೋಕೋಪಯೋಗಿ ಇಲಾಖೆಗೆ ಸೇರಿದ ಜಮೀನಿನಲ್ಲಿ ಮಹಿಳೆಯೊಬ್ಬರು ಅಕ್ರಮವಾಗಿ ನಿರ್ಮಿಸಿದ್ದ ಮನೆಯನ್ನು ಇಲಾಖೆಯ ಅಧಿಕಾರಿಗಳು ನೆಲಸಮ ಮಾಡಿದ ಘಟನೆ ಉಡುಪಿಯಲ್ಲಿ ನಡೆದಿದೆ.

    ನ್ಯಾಯಾಲಯದ ಆದೇಶದಂತೆ ಕುತ್ಯಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಅಗರ್‍ದಂಡೆ ಕೊಡಪಟ್ಯ ಬಳಿ ಸುಂದರಿ ಆಚಾರ್ಯ ಎಂಬವರ ಮನೆ ಕೆಡವಲಾಗಿದೆ. ಸ್ಥಳೀಯ ಪಾಂಡುರಂಗ ಹೆಗ್ಡೆ ಎಂಬವರಿಗೆ ಸೇರಿದ ಜಮೀನಿಗೆ ಹೊಂದಿಕೊಂಡು ಇದ್ದ ಲೋಕೋಪಯೋಗಿ ಇಲಾಖೆಯ ಜಮೀನಿನಲ್ಲಿ ಸುಂದರಿ ಆಚಾರ್ಯ ಅವರು ಅಕ್ರಮವಾಗಿ ಮನೆ ನಿರ್ಮಿಸಿದ್ದರು.

    ಇದರ ವಿರುದ್ಧ ಹೆಗ್ಡೆಯವರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಕಳೆದ ಹಲವು ವರ್ಷಗಳಿಂದ ಈ ಪ್ರಕರಣ ನ್ಯಾಯಾಲಯದಲ್ಲಿದ್ದು, ಹೈಕೋರ್ಟ್ ಮನೆ ತೆರವುಗೊಳಿಸುವಂತೆ ಲೋಕೋಪಯೋಗಿ ಇಲಾಖೆಗೆ ಆದೇಶ ನೀಡಿದೆ. ಒಂದು ವೇಳೆ ಆದೇಶ ಪಾಲಿಸದಿದ್ದಲ್ಲಿ ಇಲಾಖೆ ಅಧಿಕಾರಿಗಳ ಮೇಲೆ ಕ್ರಮ ಜರಗಿಸುವುದಾಗಿ ನ್ಯಾಯಾಲಯ ತಿಳಿಸಿತ್ತು.

    ಜಿಲ್ಲಾಧಿಕಾರಿ ಹಾಗೂ ಉಪ ವಿಭಾಗಾಧಿಕಾರಿಯವರ ಮಾರ್ಗದರ್ಶನದಂತೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಮನೆ ತೆರವುಗೊಳಿಸುವ ಸಂದರ್ಭ ಅಮಾನವೀಯ ಘಟನೆ ನಡೆದಿದೆ. ಮನೆಯಲ್ಲಿ ಒಂಬತ್ತು ತಿಂಗಳ ತುಂಬು ಗರ್ಭಿಣಿಯನ್ನು ಮನೆಯಿಂದ ಹೊರಗೆ ಕಳುಹಿಸಿ ಬೀಗ ಹಾಕಲಾಯಿತ್ತು. ಬಳಿಕ ಮನೆಯನ್ನು ನೆಲಸಮ ಮಾಡಲಾಯ್ತು.

    ಈ ಸಂದರ್ಭ ಮನೆಯವರು ಪೊಲೀಸರು ಮತ್ತು ಅಧಿಕಾರಿಗಳ ನಡುವೆ ವಾಗ್ವಾದ, ಅಳು, ಆಕ್ರೋಶ, ಚೀರಾಟ ನಡೆದಿದೆ. ಕಾಲಾವಕಾಶ ನೀಡಿದರೂ ಮನೆ ತೆರವು ಮಾಡಿಲ್ಲ ಎಂಬೂದು ಅಧಿಕಾರಿಗಳ ವಾದವಾಗಿದೆ. ನ್ಯಾಯಾಲಯಕ್ಕೆ, ಪೊಲೀಸರಿಗೆ, ಅಧಿಕಾರಿಗಳಿಗೆ ದೂರು ನೀಡಿದ ಹೆಗ್ಡೆ ಕುಟುಂಬಕ್ಕೆ ಮಾನವೀಯತೆ ಇಲ್ಲ ಎಂದು ನೆಟ್ಟಿಗರು ಆಕ್ರೋಶದಿಂದ ವಿಡೀಯೋವನ್ನು ಶೇರ್ ಮಾಡುತ್ತಿದ್ದಾರೆ.

  • ಕೆಜಿಎಫ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಗದೆ ನರಳಾಡಿ ಮಗು ಕಳೆದುಕೊಂಡ ತಾಯಿ!

    ಕೆಜಿಎಫ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಗದೆ ನರಳಾಡಿ ಮಗು ಕಳೆದುಕೊಂಡ ತಾಯಿ!

    ಕೋಲಾರ: ಇಲ್ಲಿನ ಕೆಜಿಎಫ್ ಸರ್ಕಾರಿ ಆಸ್ಪತ್ರೆಯಲ್ಲಿ ಗರ್ಭಿಣಿಯೊಬ್ಬರಿಗೆ ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೆ ನರಳಾಡಿ ಮಗುವನ್ನ ಕಳೆದುಕೊಂಡ ಅಮಾನವೀಯ ಘಟನೆ ನಡೆದಿದೆ.

    ಹೌದು. ಸೋಮವಾರ ಮಧ್ಯಾಹ್ನ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ 8ನೇ ಬ್ಲಾಕ್‍ನ ರಿಯಾಜ್ ಎಂಬವರ ಪತ್ನಿ ಸಮೀನಾ ಕೆಜಿಎಫ್ ಸರ್ಕಾರಿ ಆಸ್ಪತ್ರೆಗೆ ತೆರಳಿದ್ದರು. ಆದರೆ ಅಲ್ಲಿ ಆಕೆ ನರಳಾಡಿದರೂ ವೈದ್ಯರಾಗಲಿ, ಸಿಬ್ಬಂದಿಯಾಗಲಿ ಯಾರೂ ಕೇಳಿರಲಿಲ್ಲ. ಮಹಿಳೆಗೆ ಚಿಕಿತ್ಸೆ ನೀಡದೆ ವೈದ್ಯರು ಕೂಡ ದುರಹಂಕಾರದ ವರ್ತನೆ ತೋರಿಸಿದ್ದರು. ನಂತರ ಸಂಜೆ 5 ಗಂಟೆ ಸುಮಾರಿಗೆ ಆಸ್ಪತ್ರೆ ಸರ್ಜನ್ ಶಿವಕುಮಾರ್, ಸ್ಥಳಕ್ಕೆ ಧಾವಿಸಿ ಅಂಬುಲೆನ್ಸ್ ಮೂಲಕ ಜಿಲ್ಲಾಸ್ಪತ್ರೆಗೆ ಕಳುಹಿಸಿದ್ದಾರೆ.

    ಸಮಯಕ್ಕೆ ಸರಿಯಾದ ಚಿಕಿತ್ಸೆ ನೀಡದ ಕೆಜಿಎಫ್ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿ ವರ್ತನೆಗೆ ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಚಿಕಿತ್ಸೆ ತಡವಾದ ಹಿನ್ನೆಲೆಯಲ್ಲಿ ಹೊಟ್ಟೆಯಲ್ಲೇ ಗಂಡು ಮಗು ಸಾವನ್ನಪ್ಪಿದೆ. ನಮಗಾದ ನೋವು ಸಂಕಟ ಬೇರಯವರಿಗೆ ಆಗುವುದು ಬೇಡ. ಇನ್ನಾದರೂ ಆಸ್ಪತ್ರೆಯಲ್ಲಿ ಸರಿಯಾದ ವೈದ್ಯರು, ಸಿಬ್ಬಂದಿಯನ್ನ ನೇಮಕ ಮಾಡಲಿ ಎಂದು ಸಮೀನಾ ಪೋಷಕರು ಒತ್ತಾಯಿಸಿದ್ದಾರೆ.

    7 ತಿಂಗಳ ಹೆರಿಗೆ ನೋವಿನಿಂದ ಆಸ್ಪತ್ರೆಯಲ್ಲೇ ಬಿದ್ದು ಗರ್ಭಿಣಿ ಮಹಿಳೆ ನರಳಾಡುತ್ತಿರುವ ವಿಡಿಯೋ ನಿನ್ನೆಯಿಂದ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಕೆಜಿಎಫ್ ಆಸ್ಪತ್ರೆಯಿಂದ, ಜಿಲ್ಲಾಸ್ಪತ್ರೆಗೆ ಅದಾದ ಬಳಿಕ ಗರ್ಭಿಣಿ ಮಹಿಳೆಯನ್ನು ರಾತ್ರಿಯೇ ಆರ್.ಎಲ್. ಜಾಲಪ್ಪ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆಗೆ ಸರಿಯಾಗಿ ಸ್ಪಂದಿಸದ ಹಿನ್ನೆಲೆಯಲ್ಲಿ ಹೊಟ್ಟೆಯಲ್ಲಿಯೇ ಗಂಡು ಮಗು ಸಾವನ್ನಪ್ಪಿದೆ.

    ಆಸ್ಪತ್ರೆ ವೈದ್ಯರು ಹಾಗೂ ಸಿಬ್ಬಂದಿ ನಿರ್ಲಕ್ಷ್ಯ ವಿರುದ್ಧ ಕ್ರಮಕೈಗೊಳ್ಳುವಂತೆ ಸಂಬಂಧಿಕರು ಒತ್ತಾಯಿಸಿದ್ದಾರೆ. ಅಲ್ಲದೆ ತಾಯಿ ಸಮೀನಾ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾಳೆ. ಇಷ್ಟಾದ್ರೂ ಯಾವೊಬ್ಬ ಆರೋಗ್ಯ ಇಲಾಖೆ ಅಧಿಕಾರಿಗಳಾಗಲಿ, ಜಿಲ್ಲಾ ಆರೋಗ್ಯಾಧಿಕಾರಿಗಳಾಗಲಿ ಸ್ಥಳಕ್ಕೆ ಬಂದಿಲ್ಲ. ತಾಯಿಯ ಆರೋಗ್ಯ ವಿಚಾರಿಸಿಲ್ಲ ಎಂದು ಸಮೀನಾ ಸಂಬಂಧಿಕರು ಆರೋಪಿಸಿದ್ದಾರೆ.

    ಇಷ್ಟು ಮಾತ್ರವಲ್ಲದೇ ಸೊಮವಾರ ಬೆಳಗ್ಗೆ ಇದೇ ಕೆಜಿಎಫ್ ಸರ್ಕಾರಿ ಆಸ್ಪತ್ರೆಯಲ್ಲಿ ಕೆಜಿಎಫ್ ನಗರದ ನಿವಾಸಿ ದಿಲೀಪ್ (31) ಎಂಬಾತ ಚಿಕಿತ್ಸೆ ಸಿಗದೆ ಸಾವನ್ನಪ್ಪಿದ್ದಾನೆ. ಘಟನೆ ಖಂಡಿಸಿ ಪೋಷಕರು ಆಸ್ಪತ್ರೆ ಎದುರು ಶವವಿಟ್ಟು ಪ್ರತಿಭಟನೆ ನಡೆಸಿದ್ದಾರೆ. ಎರಡು ವಿಷಯಗಳು ತಿಳಿಯುತ್ತಿದ್ದಂತೆ ಕೆಜಿಎಫ್ ಶಾಸಕಿ ರೂಪ ಶಶಿಧರ್ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರೊಂದಿಗೆ ಮಾತುಕತೆ ನಡೆಸಿ ಆಸ್ಪತ್ರೆ ಪರಿಶೀಲನೆ ನಡೆಸಿದ್ದಾರೆ.

  • ಕೊಲೆ ಮಾಡಿ ಗರ್ಭಿಣಿ ಹೊಟ್ಟೆಯಿಂದ ಮಗು ಹೊರತೆಗೆದ ಕಿರಾತಕಿ!

    ಕೊಲೆ ಮಾಡಿ ಗರ್ಭಿಣಿ ಹೊಟ್ಟೆಯಿಂದ ಮಗು ಹೊರತೆಗೆದ ಕಿರಾತಕಿ!

    – ಮತ್ತೊಂದು ಮಗುವಿನ ನಿರೀಕ್ಷೆಯಲ್ಲಿದ್ದ ತಾಯಿ
    – ಕಸದ ತೊಟ್ಟಿಯಲ್ಲಿ ಮಹಿಳೆಯ ಶವ ಪತ್ತೆ

    ವಾಷಿಂಗ್ಟನ್: ಕೊಲೆಯಾದ 9 ತಿಂಗಳ ಗರ್ಭಿಣಿಯ ಹೊಟ್ಟೆಯಿಂದ ಶಿಶುವನ್ನು ಕತ್ತರಿಸಿ ಹೊರ ತೆಗೆದ ಆಘಾತಕಾರಿ ಘಟನೆ ಅಮೆರಿಕದಲ್ಲಿ ನಡೆದಿದೆ.

    ಮಾರ್ಲೆನ್ ಒಕೊವಾ ಲೋಪೆಜ್(19) ಕೊಲೆಯಾದ ಗರ್ಭಿಣಿಯಾಗಿದ್ದು, ಕ್ಲಾರಿಸಾ ಫಿಗುಯೆರಾ ಕೊಲೆ ಮಾಡಿದ ಆರೋಪಿ. ಎರಡು ವರ್ಷಗಳ ಹಿಂದೆ ಕ್ಲಾರಿಸಾ ಮಗ ಮೃತಪಟ್ಟಿದ್ದನು. ಬಳಿಕ ಆಕೆ ತನಗೆ ಮತ್ತೊಂದು ಮಗು ಪಡೆಯಬೇಕು ಎಂದುಕೊಂಡಿದ್ದಳು. ಹೀಗಾಗಿ ಮಾರ್ಲೆನ್ 9 ತಿಂಗಳ ಗರ್ಭಿಣಿಯಾಗಿದ್ದಳು.

    ಆರೋಪಿ ಕ್ಲಾರಿಸಾ ಚಿಕ್ಕ ಮಕ್ಕಳ ಉಡುಪನ್ನು ಮಾರಾಟ ಮಾಡುತ್ತಿದ್ದಳು. ಈ ವೇಳೆ ಮಾರ್ಲೆನ್ ತನ್ನ ಮಗುವಿಗೆ ಉಡುಪು ಖರೀದಿಸಲು ಕ್ಲಾರಿಸಾಳನ್ನು ಫೇಸ್‍ಬುಕ್‍ನಲ್ಲಿ ಸಂಪರ್ಕಿಸಿದ್ದಳು. ಕ್ಲಾರಿಸಾ ಕೊಲೆಯಾದ ಮಾರ್ಲೆನ್‍ಗೆ ಉಡುಪು ನೀಡಿ ಮತ್ತಷ್ಟು ಉಡುಪು ಕೊಡುವುದಾಗಿ ಹೇಳಿ ತನ್ನ ಮನೆಗೆ ಕರೆದುಕೊಂಡು ಹೋಗಿದ್ದಳು. ಈ ವೇಳೆ ಆಕೆ ಮಾರ್ಲೆನ್‍ಳನ್ನು ಕೊಲೆ ಮಾಡಿ ಆಕೆಯ ಹೊಟ್ಟೆಯಲ್ಲಿದ್ದ ಮಗುವನ್ನು ಹೊರತೆಗೆದಿದ್ದಾಳೆ.

    ಕ್ಲಾರಿಸಾ ಮನೆಗೆ ಬಂದ ಮಾರ್ಲೆನ್‍ನ ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ. ಅಲ್ಲದೆ ಆಕೆಯ ಮಗುವನ್ನು ಹೊಟ್ಟೆಯಿಂದ ಹೊರ ತೆಗೆದು ಆಕೆಯ ಶವವನ್ನು ಕಸದ ತೊಟ್ಟಿಯಲ್ಲಿ ಬಿಸಾಕಿದ್ದಳು. ಕ್ಲಾರಿಸಾ ಮಗುವನ್ನು ಹೊರತೆಗೆದ ನಂತರ ಅದು ಉಸಿರಾಡುತ್ತಿರಲಿಲ್ಲ. ಆಗ ಕ್ಲಾರಿಸಾ ಎಮರ್ಜೆನ್ಸಿ ನಂಬರ್ 911ಗೆ ಕರೆ ಮಾಡಿ ವಿಷಯ ತಿಳಿಸಿದ್ದಳು. ಅಷ್ಟರಲ್ಲಿ ಮಗುವಿನ ದೇಹ ನೀಲಿ ಬಣ್ಣಕ್ಕೆ ತಿರುಗಿತ್ತು. ಅಲ್ಲದೆ ಸ್ಥಳಕ್ಕೆ ಬಂದ ಪೊಲೀಸರು ಯುವಕನೊಬ್ಬನ ಸಹಾಯದಿಂದ ಮಗುವನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಸದ್ಯ ಮಗು ಬದುಕುವುದು ಕಷ್ಟ ಎಂದು ಹೇಳಲಾಗುತ್ತಿದೆ.

    ಈ ನಡುವೆ ಮಾರ್ಲಿನ್ ನಾಪತ್ತೆಯಾದ ವಿಷಯ ಬೆಳಕಿಗೆ ಬಂದಿದೆ. ಮಾರ್ಲಿನ್ ಮಗುವಿಗೆ ಉಡುಪು ತೆಗೆದುಕೊಳ್ಳಲು ಕ್ಲಾರಿಸಾಳನ್ನು ಫೇಸ್‍ಬುಕ್‍ನಲ್ಲಿ ಸಂಪರ್ಕಿಸಿದ್ದಳು ಎಂದು ಮಾರ್ಲಿನ್ ಸ್ನೇಹಿತರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಇದೇ ವೇಳೆ ಕ್ಲಾರಿಸಾ ಸಾಯುತ್ತಿದ್ದ ಮಗುವಿನ ಅಂತ್ಯಸಂಸ್ಕಾರಕ್ಕೆ ತಯಾರಿ ಮಾಡಿಕೊಳ್ಳುತ್ತಿದ್ದಳು. ಆಗ ಪೊಲೀಸರಿಗೆ ಕ್ಲಾರಿಸಾ ಮೇಲೆ ಅನುಮಾನ ಬಂದಿದೆ.

    ಪೊಲೀಸರಿಗೆ ಅನುಮಾನ ಬಂದು ಡಿಎನ್‍ಎ ಟೆಸ್ಟ್ ಮಾಡಿಸಿದ್ದರು. ಆಗ ವರದಿಯಲ್ಲಿ ಮಗು ಮಾರ್ಲಿನ್ ಳದ್ದು ಎಂದು ತಿಳಿದು ಬಂದಿದೆ. ಹೀಗಾಗಿ ಪೊಲೀಸರು ಕ್ಲಾರಿಸಾಳನ್ನು ವಿಚಾರಣೆ ನಡೆಸಲು ಆಕೆಯ ಮನೆಗೆ ಹೋದರು. ಮಗುವಿಗೆ ಜನ್ಮ ನೀಡಿದ್ದ ನಂತರ ಆಕೆಯ ತಾಯಿಯ ಕಾಲಿಗೆ ಪೆಟ್ಟು ಬಿದ್ದಿದೆ. ಮಗುವಿನ ತಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಕ್ಲಾರಿಸಾ ಮಗಳು ಪೊಲೀಸರಿಗೆ ತಿಳಿಸಿದ್ದಾಳೆ.

    ಕ್ಲಾರಿಸಾ ಮಗಳ ಮಾತು ಕೇಳಿದ ಪೊಲೀಸರಿಗೆ ಅನುಮಾನ ಶುರುವಾಯಿತು. ಆಗ ಪೊಲೀಸರು ಕ್ಲಾರಿಸಾ ಮನೆಯ ಅಕ್ಕಪಕ್ಕ ಹುಡುಕಾಟ ನಡೆಸಲು ಶುರು ಮಾಡಿದ್ದರು. ಈ ವೇಳೆ ಮಾರ್ಲೆನ್ ಕಾರು ಪತ್ತೆಯಾಗಿದೆ. ಬಳಿಕ ಪೊಲೀಸರು ಸರ್ಚ್ ವಾರೆಂಟ್ ಜೊತೆ ಹಿಂತಿರುಗಿ ಕ್ಲಾರಿಸಾ ಮನೆಯಲ್ಲಿ ಸಾಕ್ಷಿಗಳನ್ನು ಹುಡುಕಿದ್ದರು. ಈ ವೇಳೆ ಮನೆಯ ಹಿಂದೆ ಇದ್ದ ಕಸದ ತೊಟ್ಟಿಯಲ್ಲಿ ಮಾರ್ಲಿನ್ ಶವ ಪತ್ತೆಯಾಗಿದೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕಾಗೋ ಪೊಲೀಸರು ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.