Tag: Pregnant

  • ಚಿಕ್ಕಮ್ಮನ ಸೆಕ್ಸ್ ವಿಡಿಯೋ ತೋರಿಸಿ ಅಪ್ರಾಪ್ತೆ ಸೊಸೆ ಮೇಲೆ ಅತ್ಯಾಚಾರ

    ಚಿಕ್ಕಮ್ಮನ ಸೆಕ್ಸ್ ವಿಡಿಯೋ ತೋರಿಸಿ ಅಪ್ರಾಪ್ತೆ ಸೊಸೆ ಮೇಲೆ ಅತ್ಯಾಚಾರ

    – ಮದ್ವೆಯಾಗೋದಾಗಿ ನಂಬಿಸಿ ಯುವತಿಯ ಜೊತೆ ಸೆಕ್ಸ್
    – 17ರ ಬಾಲಕಿಯನ್ನ ಗರ್ಭಿಣಿ ಮಾಡಿದ

    ಮುಂಬೈ: ಚಿಕ್ಕಮ್ಮನ ಸೆಕ್ಸ್ ವಿಡಿಯೋವನ್ನು ವೈರಲ್ ಮಾಡುವುದಾಗಿ ಬೆದರಿಸಿ 17 ವರ್ಷದ ಅಪ್ರಾಪ್ತೆಯ ಮೇಲೆ ಅತ್ಯಾಚಾರ ಎಸಗಿದ್ದು, ಇದೀಗ ಆಕೆ ಗರ್ಭಿಣಿಯಾಗಿರುವ ಘಟನೆ ಮುಂಬೈ ನಗರದಲ್ಲಿ ನಡೆದಿದೆ.

    ಆರೋಪಿಯನ್ನು 26 ವರ್ಷದ ಅಜ್ಮಲ್ ಲಷ್ಕರ್ ಅಲಿಯಾಸ್ ಆಶಿಶ್ ದುಬೆ ಎಂದು ಗುರುತಿಸಲಾಗಿದೆ. ಭಾನುವಾರ ಆರೋಪಿಯನ್ನು ಬಂಧಿಸಿ ಸ್ಥಳೀಯ ಕೋರ್ಟಿಗೆ ಹಾಜರುಪಡಿಸಲಾಗಿತ್ತು, ಕೋರ್ಟ್ ಜನವರಿ 17 ರವರೆಗೂ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.

    ಏನಿದು ಪ್ರಕರಣ?
    ಆರೋಪಿ ಆಶಿಶ್ ದುಬೆ ಹೆಸರಲ್ಲಿ 23 ವರ್ಷದ ಯುವತಿ ಮತ್ತು ಆಕೆಯ ಸೋದರ ಸೊಸೆಯನ್ನು ಪಾರ್ಟಿಯೊಂದರಲ್ಲಿ ಪರಿಚಯ ಮಾಡಿಕೊಂಡಿದ್ದನು. ನಂತರ ಯುವತಿಗೆ ಮದುವೆಯಾಗುವುದಾಗಿ ನಂಬಿಸಿ ಆಕೆಯೊಂದಿಗೆ ಸೆಕ್ಸ್ ಮಾಡಿದ್ದಾನೆ. ಆ ವಿಡಿಯೋವನ್ನು ಯುವತಿಗೆ ಗೊತ್ತಿಲ್ಲದಂತೆ ಮೊಬೈಲಿನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾನೆ ಎಂದು ಡಿಸಿಪಿ ಮೋಹನ್ ದಹಿಕರ್ ತಿಳಿಸಿದ್ದಾರೆ.

    ಸ್ವಲ್ಪ ದಿನದ ನಂತರ ಬಾಲಕಿಗೆ ಚಿಕ್ಕಮ್ಮ ಸೆಕ್ಸ್ ವಿಡಿಯೋ ತೋರಿಸಿ ಬ್ಲ್ಯಾಕ್‍ಮೇಲೆ ಮಾಡಿ ಅನೇಕ ಬಾರಿ ಅತ್ಯಾಚಾರ ಮಾಡಿದ್ದಾನೆ. ಅಲ್ಲದೇ ಈ ವಿಚಾರವನ್ನು ಯಾರಿಗಾದರೂ ಹೇಳಿದರೆ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಬಾಲಕಿ ಗರ್ಭಿಣಿಯಾದ ನಂತರ ಕುಟುಂಬದವರಿಗೆ ಈ ವಿಚಾರ ತಿಳಿದಿದೆ. ತಕ್ಷಣ ಮಹಿಳೆ ಬಂಗೂರ್ ಪೊಲೀಸ್ ಠಾಣೆಯಲ್ಲಿ ಆರೋಪಿಯ ವಿರುದ್ಧ ದೂರು ದಾಖಲಿಸಿದ್ದಾರೆ.

    ಯುವತಿ ನೀಡಿದ ದೂರಿನ ಆಧಾರದ ಮೇರೆಗೆ ಆರೋಪಿ ವಿರುದ್ಧ ಐಪಿಸಿ ಕಾಯ್ಡೆಯಡಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ. ಇತ್ತ ಅಪ್ರಾಪ್ತೆಯ ಪೋಷಕರು ನೀಡಿದ ದೂರಿನ ಆಧಾರದ ಮೇರೆಗೆ ಪೋಕ್ಸೋ ಕಾಯ್ಡೆಯಡಿಯೂ ಎಫ್‍ಐಆರ್ ದಾಖಲಿಸಲಾಗಿದೆ. ಆರೋಪಿಯನ್ನು ಪತ್ತೆ ಮಾಡಿ ಉಪನಗರ ಖಾರ್ ಪ್ರದೇಶದಲ್ಲಿ ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

  • ಗರ್ಭಿಣಿಯರಿಗೆ ಗ್ರಹಣ ಭಯ!

    ಗರ್ಭಿಣಿಯರಿಗೆ ಗ್ರಹಣ ಭಯ!

    ಬೆಂಗಳೂರು: ಇಂದು ರಾತ್ರಿ 2020ರ ದಶಕದ ಮೊಟ್ಟಮೊದಲ ಚಂದ್ರಗ್ರಹಣ ಜರುಗಲಿದೆ. ಈ ಗ್ರಹಣ ಕಾಲ ಕೆಟ್ಟದ್ದು ಅನ್ನೋ ನಂಬಿಕೆ ಹಲವರಲ್ಲಿದೆ. ಈ ಗ್ರಹಣದ ಗರ್ಭಿಣಿಯರ ಮೇಲೆ ಪರಿಣಾಮ ಬೀರುತ್ತೆ ಅನ್ನೋದು ಜ್ಯೋತಿಷಿಗಳ ವಾದ. ಗ್ರಹಣದ ಕಾಲ ಕೆಟ್ಟದ್ದು ಹೀಗಾಗಿ ಇಂದು ಹೆರಿಗೆ ಎಲ್ಲಿ ಆಗಿಬಿಡುತ್ತೋ ಅನ್ನೋ ಆಂತಕದಲ್ಲಿ ಗರ್ಭಿಣಿಯರಿದ್ದಾರೆ. ಹೀಗಾಗಿ ಇಂದು ಮತ್ತು ನಾಳೆ ಹೆರಿಗೆ ಮುಂದೂಡುವಂತೆ ವೈದ್ಯರಿಗೆ ದುಂಬಾಲು ಬಿದ್ದಿದ್ದಾರೆ.

    ಚಂದ್ರಗ್ರಹಣಕ್ಕೆ ಬೆಂಗಳೂರಿನ ಗರ್ಭಿಣಿಯರು ಬೆದರಿದ್ದು, ಬಹುತೇಕ ಆಸ್ಪತ್ರೆಗಳಲ್ಲಿ ಇಂದು ಯಾವುದೇ ಸೀಸೇರಿಯನ್‍ಗಳಿಲ್ಲ. ಕೆಲವು ಗರ್ಭಿಣಿಯರು ಮೂರು ದಿನ ಹೆರಿಗೆಯೇ ಬೇಡ ಎನ್ನತ್ತಿದ್ದರೆ, ಮತ್ತೆ ಕೆಲವರು ಗ್ರಹಣದ ವೇಳೆ ರಾತ್ರಿ ಹೆರಿಗೆ ಮೂಂದೂಡಿ ಎಂದು ಹೇಳುತ್ತಿದ್ದಾರೆ. ಹೀಗಾಗಿ ವೈದ್ಯರಿಗೆ ಧರ್ಮಸಂಕಟ ಎದುರಾಗಿದೆ.

    ಸೀಸೇರಿಯನ್ ಪೋಸ್ಟ್ ಪೋನ್ ಮಾಡಬಹುದು. ಆದರೆ ನಾರ್ಮಲ್ ಡೆಲಿವರಿ ಆದರೆ ಏನು ಮಾಡಲು ಆಗಲ್ಲ. ವೈಜ್ಞಾನಿಕವಾಗಿ ಗ್ರಹಣ ಗರ್ಭಿಣಿಯರ ಮೇಲೆ ಯಾವುದೇ ಪರಿಣಾಮ ಬೀರಲ್ಲ ಎಂದು ವೈದ್ಯರು ಹೇಳುತ್ತಾರೆ. ಆದರೂ ಗರ್ಭಿಣಿಯರ ಸೈಕಾಲಜಿ ಮೇಲೆ ಗ್ರಹಣ ಪರಿಣಾಮ ಬೀರಿದ್ದು, ಇಂದಿನ ಗ್ರಹಣಕ್ಕೆ ಬೆಚ್ಚಿಬಿದ್ದಿದ್ದಾರೆ.

  • ದಟ್ಟಾರಣ್ಯ, ಕಲ್ಲು ಮುಳ್ಳಿನ ಹಾದಿ – ಆಸ್ಪತ್ರೆಗೆ ಸಾಗಲು ಗರ್ಭಿಣಿಯರಿಗೆ ಡೋಲಿಯೇ ಸವಾರಿ

    ದಟ್ಟಾರಣ್ಯ, ಕಲ್ಲು ಮುಳ್ಳಿನ ಹಾದಿ – ಆಸ್ಪತ್ರೆಗೆ ಸಾಗಲು ಗರ್ಭಿಣಿಯರಿಗೆ ಡೋಲಿಯೇ ಸವಾರಿ

    – ಇದು ಮಲೆಮಹಾದೇಶ್ವರ ಬೆಟ್ಟದ ತಪ್ಪಲಿನ ದುಸ್ಥಿತಿ

    ಚಾಮರಾಜನಗರ: ಗ್ರಾಮದಲ್ಲಿ ಆರೋಗ್ಯ ಹದಗೆಟ್ರೆ ಕಥೆ ಮುಗೀತು ಅಂತಾನೆ ಅರ್ಥ. ಏನಾದರೂ ಹೆಚ್ಚು ಕಮ್ಮಿ ಆದರೆ 10 ರಿಂದ 15 ಕಿ.ಮೀ ದುರ್ಗಮ ಕಾಡಿನಲ್ಲಿ ಹಾದು ಹೋಗಬೇಕು. ಅಲ್ಲಿನ ಜನರ ಪಾಡು ಆ ದೇವರಿಗೇ ಪ್ರೀತಿ.

    ದಟ್ಟ ಅರಣ್ಯದಲ್ಲಿ ನಡೆದು ಹೋಗುತ್ತಿರುವ ಜನ, ಕಲ್ಲು-ಮುಳ್ಳೆನ್ನದೇ ಸಂಚಾರ ಮಾಡುತ್ತಿರುವ ಮಹಿಳೆಯರು ಒಂದೆಡೆಯಾದರೆ, ಇನ್ನೊಂದೆಡೆ ಡೋಲಿ ಕಟ್ಟಿಕೊಂಡು ಗರ್ಭಿಣಿಯನ್ನ ಹೊತ್ತೊಯ್ತಿರೋ ಗ್ರಾಮಸ್ಥರು. ಇಂತಹ ಮನಕಲುಕುವ ದೃಶ್ಯಗಳು ಕಂಡು ಬಂದಿದ್ದು, ಚಾಮರಾಜನಗರದ ಮಲೆಮಹದೇಶ್ವರ ಬೆಟ್ಟದ ತಪ್ಪಲಿನಲ್ಲಿ.

    ಹೌದು. ಮಲೆ ಮಹದೇಶ್ವರ ಬೆಟ್ಟದ ದಟ್ಟ ಕಾನನದ ನಡುವೆ ಇರುವ ದೊಡ್ಡಾಣೆ, ತೋಕೆರೆ, ಕೊಕ್ಬರೆ, ಕೊಂಬುಡುಕಿ, ಉಯಿಲನತ್ತ, ಚೆಂಗಡಿ ಸೇರಿದಂತೆ 20ಕ್ಕೂ ಹೆಚ್ಚು ಗ್ರಾಮಗಳಲ್ಲಿನ ಜನರ ಪರಿಸ್ಥಿತಿ ಇದು. ಈ ಗ್ರಾಮಗಳಿಗೆ ಕನಿಷ್ಠ ಮೂಲಭೂತ ಸೌಕರ್ಯಗಳಿಲ್ಲದೆ, ರಸ್ತೆ ಸಂಪರ್ಕವೂ ಇಲ್ಲದೆ ಇಂತಹ ಪರಿಸ್ಥಿತಿ ಎದುರಿಸಬೇಕಾಗಿದೆ. ಇದನ್ನೂ ಓದಿ: ಹೆರಿಗೆ ಬಳಿಕ ಬಾಣಂತಿಯರಿಗೆ ನರಕ ದರ್ಶನ – ಬೆಡ್‍ಗಳಿಲ್ಲದೆ ನೆಲದ ಮೇಲೆಯೇ ನರಳಾಟ

    ಇಲ್ಲಿನ ಗ್ರಾಮಸ್ಥರು ಪಡಿತರ ಅಕ್ಕಿ ತರಲು ಕೊಂಬುಡುಕಿ ಗ್ರಾಮಕ್ಕೆ ಸುಮಾರು 7 ಕಿ.ಮೀ ದೂರ ಸಂಚಾರ ಮಾಡಬೇಕು. ಅದರಲ್ಲೂ ದಟ್ಟವಾದ ಕಾಡಿನಲ್ಲಿ ಅಡ್ಡಾಡಬೇಕು. ಎಷ್ಟೋ ಗರ್ಭಿಣಿ ಮಹಿಳೆಯರು ಇಲ್ಲಿರಲಾಗದೆ ಮಾರ್ಟಳ್ಳಿ ಎಂಬ ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದಾರೆ. ಇನ್ನೂ ಕೆಲವರು ಡೋಲಿ ಕಟ್ಟಿಕೊಂಡು ಅದರಲ್ಲಿ ಗರ್ಭಿಣಿಯರನ್ನು ಕಲ್ಲು ಮುಳ್ಳಿನ ದಟ್ಟಾರಣ್ಯದಲ್ಲಿ ಹೊತ್ತೊಯ್ಯತ್ತಿದ್ದಾರೆ.

    ಇಷ್ಟೆಲ್ಲಾ ಸಮಸ್ಯೆಗಳಿದ್ದರು ಕೂಡ ಯಾವ ರಾಜಕಾರಣಿಗಳೂ ಇತ್ತ ತಲೆ ಹಾಕಿಯೂ ಮಲಗಿಲ್ಲ. ರಸ್ತೆ ಸಂಪರ್ಕವಂತೂ ದೂರದ ಮಾತಾಗಿದ್ದು, ವಿಧಿಯಿಲ್ಲದೆ ಜನಪ್ರತಿನಿಧಿಗಳನ್ನು ಶಪಿಸುತ್ತಾ ಇಲ್ಲಿನ ಜನ ಬದುಕುತ್ತಿದ್ದಾರೆ. ಒಟ್ಟಿನಲ್ಲಿ ಇನ್ನಾದರೂ ರಾಜಕಾರಣಿಗಳು ಎಚ್ಚೆತ್ತು ಇಂತಹ ಗ್ರಾಮಗಳನ್ನು ಗುರುತಿಸಿ ಕನಿಷ್ಠ ಮೂಲಭೂತ ಸೌಕರ್ಯಗಳನ್ನಾದ್ರೂ ಒದಗಿಸಿಕೊಡಬೇಕಾಗಿದೆ ಎಂದು ಗ್ರಾಮಸ್ಥರು ಆಗ್ರಹಿಸುತ್ತಿದ್ದಾರೆ.

  • ಕಾಲೇಜಿನಲ್ಲಿ ವೈದ್ಯಕೀಯ ಪರೀಕ್ಷೆ – ಮೂವರು ಗರ್ಭಿಣಿ, ವೈದ್ಯರಿಗೆ ಶಾಕ್

    ಕಾಲೇಜಿನಲ್ಲಿ ವೈದ್ಯಕೀಯ ಪರೀಕ್ಷೆ – ಮೂವರು ಗರ್ಭಿಣಿ, ವೈದ್ಯರಿಗೆ ಶಾಕ್

    ಹೈದರಾಬಾದ್: ವೈದ್ಯಕೀಯ ಪರೀಕ್ಷೆ ವೇಳೆ ತೆಲಂಗಾಣದ ಕಾಲೇಜಿನ ಮೂರು ಮಂದಿ ವಿದ್ಯಾರ್ಥಿನಿಯರು ಗರ್ಭಿಣಿಯಾಗಿರುವ ವಿಚಾರ ಬೆಳಕಿಗೆ ಬಂದಿದೆ.

    ಕುಮಾರಂಭೀಮ್- ಅಸಿಫಾಬಾದ್ ಜಿಲ್ಲೆಯ ಸರ್ಕಾರಿ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಇತ್ತೀಚೆಗೆ ವೈದ್ಯಕೀಯ ಪರೀಕ್ಷೆಯನ್ನು ಆಯೋಜಿಸಲಾಗಿತ್ತು. ವೈದ್ಯಕೀಯ ತಪಾಸಣೆ ಮಾಡಿದಾಗ ವಿದ್ಯಾರ್ಥಿನಿಯರು ಗರ್ಭಿಣಿಯಾಗಿರುವ ವಿಷಯ ಬೆಳಕಿಗೆ ಬಂದಿದೆ.

    ಈ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ (ಡಿಸಿಪಿಒ), ಮೂವರು ವಿದ್ಯಾರ್ಥಿನಿಯರು ಕೆಲವು ದಿನಗಳ ಹಿಂದೆ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಾರೆ. ಹಾಗಾಗಿ ಮೂವರು ಗರ್ಭಿಣಿಯಾಗಿದ್ದಾರೆ ಎಂದು ತಿಳಿಸಿದ್ದಾರೆ. ಈ ಪ್ರಕರಣದ ಆರೋಪಿ ಯಾರು ಎಂಬುದು ಇದುವರೆಗೂ ತಿಳಿದು ಬಂದಿಲ್ಲ. ಮೂವರು ವಿದ್ಯಾರ್ಥಿನಿಯರಲ್ಲಿ ಇಬ್ಬರು ಮೊದಲನೇ ವರ್ಷ ಬಿಎಸ್‍ಸಿ ಓದುತ್ತಿದ್ದಾರೆ, ಮತ್ತೊಬ್ಬ ವಿದ್ಯಾರ್ಥಿನಿ ಎರಡನೇ ವರ್ಷ ಬಿಎಸ್‍ಸಿ ವ್ಯಾಸಂಗ ಮಾಡುತ್ತಿದ್ದಾರೆ.

    ನವೆಂಬರ್ 21ರಂದು ವೈದ್ಯಕೀಯ ತಪಾಸಣೆ ನಡೆದಿತ್ತು. ಆದರೆ ಶನಿವಾರ ಈ ವಿಚಾರ ಬೆಳಕಿಗೆ ಬಂದಿದೆ. ಪ್ರಕರಣದ ಬಗ್ಗೆ ಸ್ಥಳೀಯ ಮಕ್ಕಳ ಹಕ್ಕುಗಳ ಕಾರ್ಯಕರ್ತ ಅಧಿಕಾರಿಗಳಿಗೆ ತಿಳಿಸಿದಾಗ ವಿಚಾರಣೆ ನಡೆಸಲಾಯಿತು. ವಿಚಾರಣೆ ವೇಳೆ ವಿದ್ಯಾರ್ಥಿನಿಯರ ಮನೆಗಳ ಬಳಿ ವಾಸಿಸುವ ವ್ಯಕ್ತಿ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂಬುದು ತಿಳಿದು ಬಂದಿದೆ. ಈ ಬಗ್ಗೆ ಕಾಲೇಜು ಆಡಳಿತ ಮಂಡಳಿ ಇದುವರೆಗೂ ಯಾವುದೇ ದೂರನ್ನು ದಾಖಲಿಸಿಲ್ಲ.

  • ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಿಲ್ಲ- ಹೆರಿಗೆ ನೋವಿನಿಂದ ನರಳಾಡಿದ ಮಹಿಳೆ

    ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಿಲ್ಲ- ಹೆರಿಗೆ ನೋವಿನಿಂದ ನರಳಾಡಿದ ಮಹಿಳೆ

    ಚಿಕ್ಕೋಡಿ(ಬೆಳಗಾವಿ): ಹೆರಿಗೆ ನೋವಿನಿಂದ ನರಳುತ್ತಾ ಗಂಟೆಗೂ ಅಧಿಕ ಸಮಯ ಗರ್ಭಿಣಿಯೊಬ್ಬಳು ವೈದ್ಯರಿಗಾಗಿ ಕಾದು ಯಾತನೆ ಅನುಭವಿಸಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ತೆಲಸಂಗ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.

    ಭಾನುವಾರ ಸಂಜೆ ಸಮೀಪದ ಐಗಳಿ ಗ್ರಾಮದಿಂದ ತೆಲಸಂಗ ಸರ್ಕಾರಿ ಆಸ್ಪತ್ರೆಗೆ ಕಲಾವತಿ ಗೋಪಾಲ ಬಾಳಪ್ಪಗೋಳ ಹೆರಿಗೆ ನೋವಿನಿಂದ ನರಳುತ್ತಾ ಆಸ್ಪತ್ರೆಗೆ ಬಂದಿದ್ದರು. ಆಸ್ಪತ್ರೆಯಲ್ಲಿ ಸ್ಟಾಪ್ ನರ್ಸ್ ಇರಬೇಕು. ಆದರೆ ಭಾನುವಾರ ರಜೆ ಇದ್ದ ಕಾರಣ ಆಸ್ಪತ್ರೆಯಲ್ಲಿ ಸಿಪಾಯಿ ಒಬ್ಬರನ್ನ ಬಿಟ್ಟು ಯಾರೂ ಇರಲಿಲ್ಲ. ಹೀಗಾಗಿ ಮಹಿಳೆ ಹೆರಿಗೆ ನೋವಿನಿಂದ ಆಸ್ಪತ್ರೆಯಲ್ಲಿ ನೆಲದ ಮೇಲೆಯೇ ಬಿದ್ದು ಒದ್ದಾಡಿದ್ದಾರೆ.

    ಆಸ್ಪತ್ರೆಯಲ್ಲಿದ್ದ ಸಿಪಾಯಿ ಏನೂ ಮಾಡಲಾಗದೆ ವೈದ್ಯರಿಗೆ ಫೋನ್ ಮಾಡಿದ್ದಾನೆ. ಹೆರಿಗೆ ನೋವು ಕ್ಷಣ ಕ್ಷಣಕ್ಕೂ ಹೆಚ್ಚುತ್ತಾ ಹೋಗಿದೆ. ಮಹಿಳೆಯ ಸ್ಥಿತಿ ಮತ್ತಷ್ಟು ಗಂಭೀರವಾಗಿದೆ. ಸುಮಾರು 1 ಗಂಟೆಯ ನಂತರ 20 ಕಿ.ಮೀ ಅಂತರದ ತಿಕೋಟಾ ಗ್ರಾಮದಲ್ಲಿದ್ದ ಸ್ಟಾಪ್ ನರ್ಸ್ ಬಸ್ಸಿನಲ್ಲಿ ಆಸ್ಪತ್ರೆಗೆ ಆಗಮಸಿ 10 ನಿಮಿಷದಲ್ಲಿ ಹೆರಿಗೆ ಮಾಡಿಸಿದ್ದಾರೆ.

    ಸ್ಟಾಪ್ ನರ್ಸ್ ಕೊರತೆ: ದಿನದ 24 ಗಂಟೆ ಹೆರಿಗೆ ಆಸ್ಪತ್ರೆ ಇದಾಗಿದ್ದರೂ ಜಿಲ್ಲಾ ಆರೋಗ್ಯಾಧಿಕಾರಿಗಳು ಸ್ಟಾಪ್ ನರ್ಸ್ ಕೊಟ್ಟಿಲ್ಲ. 4 ಜನ ಕೆಲಸ ಮಾಡುವ ಸ್ಥಳದಲ್ಲಿ ಕೇವಲ ಇಬ್ಬರು ಕೆಲಸ ನಿರ್ವಹಿಸುತ್ತಿದ್ದಾರೆ. ಒಬ್ಬರು ರಾತ್ರಿ ಇನ್ನೊಬ್ಬರು ಹಗಲು ಕೆಲಸ ಮಾಡುತ್ತಿದ್ದಾರೆ. ಇವರು ಪ್ರತಿ ಭಾನುವಾರ ಸಿಫ್ಟ್ ಬದಲಾಯಿಸಿಕೊಳ್ಳುತ್ತಾರೆ. ಹೀಗಾಗಿ ರವಿವಾರ ಯಾರೂ ಆಸ್ಪತ್ರೆಗೆ ಆಗಮಿಸಿರಲಿಲ್ಲ.

    ತೆಲಸಂಗ ಹೋಬಳಿಯ 32 ಹಳ್ಳಿಯ ಬಡ ಜನತೆಯ ಹೆರಿಗೆಗಾಗಿ ಇದೊಂದೇ ಆಸ್ಪತ್ರೆ ಕಾರ್ಯ ನಿರ್ವಹಿಸುತ್ತಿದೆ. ಸದ್ಯಕ್ಕೆ ಅಡಹಳ್ಳಿ, ಐಗಳಿ, ಕಮರಿಯಲ್ಲಿನ ಆಸ್ಪತ್ರೆ ಆಟಕ್ಕುಂಟು ಕೆಲಸಕ್ಕಿಲ್ಲ. ಈ ಮೂರು ಗ್ರಾಮಗಳಲ್ಲಿ ಹೆರಿಗೆಯನ್ನು ನಿಲ್ಲಿಸಲಾಗಿದೆ. ಸಿಬ್ಬಂದಿಯನ್ನು ಕಡಿತಗೊಳಿಸಲಾಗಿದೆ. ಹೀಗಿರುವುದು ಹೆರಿಗೆಗಾಗಿ ಗ್ರಾಮದಲ್ಲಿರುವ ಇದೊಂದೇ ಸರ್ಕಾರಿ ಆಸ್ಪತ್ರೆ ಮಾತ್ರ. ಸದ್ಯಕ್ಕೆ ಇದಕ್ಕೂ ಗ್ರಹಣ ಒಕ್ಕರಿಸಿಕೊಂಡಿದ್ದು ಸಿಬ್ಬಂದಿ ಕೊರತೆಯಿಂದ ಬಡ ಗರ್ಭಿಣಿಯರ ಜೀವದ ಜೊತೆ ಜಿಲ್ಲಾ ಆರೋಗ್ಯ ಇಲಾಖೆ ಆಟವಾಡುತ್ತಿದೆ.

    ಅಥಣಿ ಶಾಸಕ ಮಹೇಶ್ ಕುಮಟಳ್ಳಿಯವರ ಸ್ವಗ್ರಾಮ ತೆಲಸಂಗದಲ್ಲಿಯೇ ಹೀಗಾದರೆ ಇನ್ನುಳಿದ ತಾಲೂಕಿನ ಗ್ರಾಮದಳಲ್ಲಿನ ಬಡ ಜನರ ಗತಿ ಏನು ಎಂದು ಜನ ಮಾತಾಡಿಕೊಳ್ಳುತ್ತಿದ್ದಾರೆ. ಶಾಸಕರು ಇತ್ತ ಗಮನಹರಿಸಿ ಆಸ್ಪತ್ರೆಯ ಅವ್ಯವಸ್ಥೆ ಮತ್ತು ಸಿಬ್ಬಂದಿಯ ಕೊರತೆಯನ್ನು ನೀಗಿಸಲಿ ಅನ್ನುವ ಆಸೆ ಜನರದ್ದಾಗಿದ್ದು, ಪದೇ ಪದೇ ಈ ರೀತಿಯ ಘಟನೆಗಳು ನಡೆಯದಂತೆ ನೋಡಿಕೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

  • ಗರ್ಭಿಣಿಯನ್ನ ವಾಪಸ್ ಕಳುಹಿಸಿದ ವೈದ್ಯರು – ಮಾರ್ಗ ಮಧ್ಯೆ ಆಟೋದಲ್ಲೇ ಹೆರಿಗೆ

    ಗರ್ಭಿಣಿಯನ್ನ ವಾಪಸ್ ಕಳುಹಿಸಿದ ವೈದ್ಯರು – ಮಾರ್ಗ ಮಧ್ಯೆ ಆಟೋದಲ್ಲೇ ಹೆರಿಗೆ

    ಯಾದಗಿರಿ: ಚಲಿಸುತ್ತಿರುವ ಆಟೋದಲ್ಲಿಯೇ ಹೆರಿಗೆಯಾಗಿರುವ ಘಟನೆ ಯಾದಗಿರಿ ನಗರದ ಮಧ್ಯ ಭಾಗದಲ್ಲಿ ತಡರಾತ್ರಿ ನಡೆದಿದೆ.

    ದೇವಿ ಎಂಬಾಕೆ ಮಾರ್ಗ ಮಧ್ಯೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ದೇವಿ ಯಾದಗಿರಿ ತಾಲೂಕಿನ ಮುದ್ನಾಳ ತಾಂಡದ ನಿವಾಸಿಯಾಗಿದ್ದು, ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸರ್ಕಾರಿ ಆಸ್ಪತ್ರೆಗೆ ಬಂದಿದ್ದಾರೆ. ಆದರೆ ದಾಖಲೆಗಳು ಸರಿಯಾಗಿಲ್ಲ ಎಂಬ ಒಂದೇ ಕಾರಣಕ್ಕೆ ಹೆರಿಗೆ ನೋವು ಅನುಭವಿಸುತ್ತಿದ್ದ ದೇವಿಯನ್ನು ತಡರಾತ್ರಿ ವೈದ್ಯರು ವಾಪಸ್ ಕಳುಹಿಸಿದ್ದಾರೆ.

    ವಾಪಸ್ ಹೋಗುವಾಗ ಆಟೋದಲ್ಲೇ ಹೆರಿಯಾಗಿದೆ. ಸದ್ಯಕ್ಕೆ ದೇವಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತಾಯಿ ಮತ್ತು ಮಗು ಇಬ್ಬರೂ ಸುರಕ್ಷಿತವಾಗಿದ್ದಾರೆ. ಮುದ್ನಾಳ ಯಾದಗಿರಿಯ ಬಿಜೆಪಿ ಶಾಸಕ ವೆಂಕಟರೆಡ್ಡಿ ಸ್ವಗ್ರಾಮವಾಗಿದ್ದು, ಸ್ವತಃ ಶಾಸಕರ ಗ್ರಾಮದ ಸರ್ಕಾರಿ ಆಸ್ಪತ್ರೆಯ ವೈದ್ಯರು ಈ ರೀತಿ ಅಮಾನವೀಯತೆ ಪ್ರದರ್ಶನ ಮಾಡಿದ್ದು, ದೇವಿ ಅವರ ಕುಟುಂಬಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

  • ಬಾಲ್ಯ ವಿವಾಹದ ಎಫೆಕ್ಟ್ – ಮೂವರು ಅಪ್ರಾಪ್ತೆಯರು ಗರ್ಭಿಣಿಯರು

    ಬಾಲ್ಯ ವಿವಾಹದ ಎಫೆಕ್ಟ್ – ಮೂವರು ಅಪ್ರಾಪ್ತೆಯರು ಗರ್ಭಿಣಿಯರು

    ರಾಮನಗರ: ರಾಜ್ಯ ಸರ್ಕಾರ ಬಾಲ್ಯ ವಿವಾಹಗಳನ್ನು ತಡೆಯಬೇಕೆಂದು ಹಲವು ರೀತಿಯಲ್ಲಿ ಯೋಜನೆಗಳನ್ನು ಕೈಗೊಂಡಿದೆ. ಆದರೆ ಚನ್ನಪಟ್ಟಣ ತಾಲೂಕಿನ ಇರುಳಿಗರ ಕಾಲೋನಿಯಲ್ಲಿ ಯಾವ ಕಾನೂನುಗಳು ಬಾಲ್ಯ ವಿವಾಹಕ್ಕೆ ಬ್ರೇಕ್ ಹಾಕಲು ಸಾಧ್ಯವಾಗಿಲ್ಲ. ಈ ಗ್ರಾಮದ ಮಕ್ಕಳು ಬಾಲ್ಯದಲ್ಲೇ ಮದುವೆಯಾಗಿ ಗರ್ಭಿಣಿಯಾಗ್ತಿದ್ದು, ಹುಟ್ಟುವ ಮಕ್ಕಳು ಕೂಡ ಅಪೌಷ್ಟಿಕತೆಯಿಂದಾಗಿ ಬಳಲಿ ಅನಾರೋಗ್ಯಕ್ಕೆ ತುತ್ತಾಗುತಿದ್ರು ಜನರಲ್ಲಿ ಅರಿವು ಮಾತ್ರ ಮೂಡಿಲ್ಲ.

    ಈ ಗ್ರಾಮದಲ್ಲಿ 50 ಕುಟುಂಬಗಳು ವಾಸವಾಗಿದ್ದು, ಒಟ್ಟು ಜನಸಂಖ್ಯೆ 381 ಆಗಿದ್ರೆ, ಇದರಲ್ಲಿ 120 ಮಕ್ಕಳೇ ಇದ್ದಾರೆ. 6 ವರ್ಷದೊಳಗಿನ ಮಕ್ಕಳು 42 ಜನ, 1 ರಿಂದ 5ನೇ ತರಗತಿ ವ್ಯಾಸಂಗ ಮಾಡುವ ಮಕ್ಕಳು 45 ಜನ, 6 ರಿಂದ 10ನೇ ತರಗತಿ ವ್ಯಾಸಂಗ ಮಾಡುವ ಮಕ್ಕಳು 35 ಜನ ಸದ್ಯ ಈ ಗ್ರಾಮದಲ್ಲಿದ್ದಾರೆ. ಆದರೆ ಈ ಗ್ರಾಮದಲ್ಲಿ ಸುಮಾರು ವರ್ಷಗಳಿಂದಲೂ ಕೂಡ ಬಾಲ್ಯ ವಿವಾಹ ಎಂಬ ಪಿಡುಗು ಎಗ್ಗಿಲ್ಲದೇ ನಡೆದುಕೊಂಡು ಬಂದಿದೆ.

    ಕಳೆದ 3 ತಿಂಗಳ ಹಿಂದೆ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ 3 ಜನ ಹೆಣ್ಣುಮಕ್ಕಳು ಗರ್ಭಿಣಿಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ವಿಚಾರ ತಿಳಿದ ಜಿಲ್ಲಾ ರಕ್ಷಣಾ ಘಟಕದ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ಕೊಟ್ಟು ಸಂಬಂಧಪಟ್ಟ ಕುಟುಂಬಸ್ಥರಿಗೆ ಅರಿವು ಮೂಡಿಸುವ ಪ್ರಯತ್ನ ನಡೆಸಿದ್ದಾರೆ.

    ನಾಲ್ಕು ತಿಂಗಳ ಹಿಂದೆ ಗ್ರಾಮದಲ್ಲಿ ನಾಲ್ವರ ಬಾಲ್ಯ ವಿವಾಹ ನಡೆದಿದ್ದು, ಮೂವರು ಅಪ್ರಾಪ್ತೆಯರು ಗರ್ಭಿಣಿಯರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ಸೂಚನೆ ಮೇರೆಗೆ ಜಿಲ್ಲಾ ಮಕ್ಕಳ ರಕ್ಷಣ ಘಟಕದ ಅಧಿಕಾರಿಗಳು ಎಂ.ಕೆ ದೊಡ್ಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅಪ್ರಾಪ್ತೆಯರು ಗರ್ಭಿಣಿಯರಾಗಿರುವ ವಿಚಾರವಾಗಿ ಪೋಕ್ಸೋ ಅಡಿಯಲ್ಲಿ ದೂರು ದಾಖಲಾಗಿದ್ರೆ, ಪೊಲೀಸರು ಗ್ರಾಮಕ್ಕೆ ಭೇಟಿ ನೀಡಿದ್ದಕ್ಕೆ ಹೆದರಿ ಓರ್ವ ಅಪ್ರಾಪ್ತೆ ಗರ್ಭಿಣಿ ಹಾಗೂ ಆಕೆಯ ಪತಿ ಇಬ್ಬರೂ ಕೂಡ ನಾಪತ್ತೆಯಾಗಿದ್ದಾರೆ.

    ಈ ಗ್ರಾಮದಲ್ಲಿನ ಜನ ಸರ್ಕಾರದ ಯೋಜನೆಗಳಾದ ಮಾತೃಶ್ರೀ ಯೋಜನೆ, ತಾಯಿ ಕಾರ್ಡ್, ಭಾಗ್ಯಲಕ್ಷ್ಮಿ ಬಾಂಡ್ ಸೇರಿದಂತೆ ಆಧಾರ್ ಕಾರ್ಡ್, ಪಡಿತರ ಯಾವುದೊಂದು ಸೌಲಭ್ಯಗಳನ್ನು ಸಹ ಬಹುತೇಕ ಮಂದಿ ಪಡೆದುಕೊಂಡಿಲ್ಲ. ಈ ಯೋಜನೆಗಳ ಪಲಾನುಭವಿಗಳಾದ್ರೆ ಬಾಲ್ಯ ವಿವಾಹ ಹೊರ ಬೀಳುತ್ತೆ ಅಂತಲೇ ದೂರ ಉಳಿದಿದ್ದಾರೆ ಎನ್ನಲಾಗಿದೆ.

    ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿರುವ ಜಿಲ್ಲಾಡಳಿತ ಬಾಲ್ಯ ವಿವಾಹ ತಡೆಗೆ ಮುಂದಾಗಿದ್ದು ಇರುಳಿಗರ ಕಾಲೋನಿಗಳಲ್ಲಿ ಅರಿವು ಮೂಡಿಸುವ ಕಾರ್ಯಕ್ಕೆ ಮುಂದಾಗಿದೆ. ಅಲ್ಲದೇ ಜನರಲ್ಲಿ ಮೂಢನಂಬಿಕೆಯನ್ನು ಹೊರ ಹಾಕಿ ಉತ್ತಮ ಜೀವನ ನಡೆಸಲು ಅಗತ್ಯ ರೀತಿಯ ಅರಿವು ಹಾಗೂ ಮನಪರಿವರ್ತನೆಗೆ ಮುಂದಾಗಿದೆ.

  • ಕಳ್ಳಿಯೆಂದು ಚಿಂದಿ ಆಯುವ ಗರ್ಭಿಣಿಗೆ ಹಿಗ್ಗಾಮುಗ್ಗ ಥಳಿಸಿದ ಕ್ರೂರಿಗಳು

    ಕಳ್ಳಿಯೆಂದು ಚಿಂದಿ ಆಯುವ ಗರ್ಭಿಣಿಗೆ ಹಿಗ್ಗಾಮುಗ್ಗ ಥಳಿಸಿದ ಕ್ರೂರಿಗಳು

    ಬಾಗಲಕೋಟೆ: ಕಳ್ಳತನ ಮಾಡೋದಕ್ಕೆ ಬಂದಿದ್ದಾರೆ ಎಂದು ಆರೋಪಿಸಿ ಚಿಂದಿ ಆಯುವ ಇಬ್ಬರು ಮಹಿಳೆಯರಿಗೆ ಯುವಕರು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಅವರಲ್ಲಿ ಓರ್ವ ಗರ್ಭಿಣಿ ಇದ್ದರೂ ಕರುಣೆ ತೋರದೆ ಮನಬಂದಂತೆ ಕ್ರೂರಿಗಳು ಹಲ್ಲೆ ನಡೆಸಿದ್ದಾರೆ.

    ಜಿಲ್ಲೆಯ ಜಮಖಂಡಿಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಚಿಂದಿ ಆಯುವ ಮಹಿಳೆಯರ ಮೇಲೆ ದುಷ್ಕರ್ಮಿಗಳು ಪ್ರತಾಪ ತೋರಿದ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಚಿಂದಿ ಆಯ್ದುಕೊಂಡು ಹೋಗುತ್ತಿದ್ದ ಮಹಿಳೆಯರಿಗೆ ಕೆಲ ಯುವಕರು ಮನಬಂದಂತೆ ಥಳಿಸಿದ್ದಾರೆ. ಕಳ್ಳತನ ಮಾಡೋದಕ್ಕೆ ಇಲ್ಲಿಗೆ ಬಂದಿದ್ದೀರಾ ಎಂದು ಆರೋಪಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಮಹಿಳೆಯರ ಮೇಲೆ ಹಲ್ಲೆ ಮಾಡಲಾಗಿದೆ.

    ಗರ್ಭಿಣಿಯಿದ್ದಾಳೆ ದಯವಿಟ್ಟು ಹೊಡಿಬೇಡಿ ಎಂದು ಮಹಿಳೆ ಕೈ ಮುಗಿದು ಕೇಳಿದರೂ ಪಾಪಿಗಳು ಕರುಣೆ ತೋರದೆ ಥಳಿಸಿದ್ದಾರೆ. ಮಹಿಳೆಯರ ಕೂದಲು ಹಿಡಿದು ಹೊಡೆದಿದ್ದಲ್ಲದೆ, ಕಾಲಿನಿಂದ ಒದ್ದು, ಹಗ್ಗದಿಂದಲೂ ಹೊಡೆದು ಕ್ರೂರಿಗಳು ಹಲ್ಲೆ ಮಾಡಿದ್ದಾರೆ. ಹೊಟ್ಟೆಪಾಡಿಗೆ ಹೀಗೆ ಮಾಡಿದೆವು ತಪ್ಪಾಯ್ತು ಬಿಟ್ಟುಬಿಡಿ ಎಂದು ಬೇಡಿಕೊಂಡರೂ ದುಷ್ಕರ್ಮಿಗಳು ಥಳಿಸಿದ್ದಾರೆ. ಈ ಎಲ್ಲಾ ದೃಶ್ಯಗಳನ್ನು ಸ್ಥಳೀಯರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.

  • ಚೆಕಪ್‍ಗಾಗಿ ನಿಂತು ಸುಸ್ತಾದ ಗರ್ಭಿಣಿ ಪತ್ನಿಗೆ ಕುರ್ಚಿಯಾದ ಪತಿ: ವಿಡಿಯೋ

    ಚೆಕಪ್‍ಗಾಗಿ ನಿಂತು ಸುಸ್ತಾದ ಗರ್ಭಿಣಿ ಪತ್ನಿಗೆ ಕುರ್ಚಿಯಾದ ಪತಿ: ವಿಡಿಯೋ

    ಬೀಜಿಂಗ್: ಚೆಕಪ್‍ಗಾಗಿ ನಿಂತು ಸುಸ್ತಾದ ಗರ್ಭಿಣಿ ಪತ್ನಿಗೆ ಪತಿಯೊಬ್ಬರು ಕುರ್ಚಿಯಾದ ಅಪರೂಪದ ಸಂಗತಿಯೊಂದು ಚೀನಾದಲ್ಲಿ ನಡೆದಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗುತ್ತಿದೆ.

    ಪತಿ ತನ್ನ ಗರ್ಭಿಣಿ ಪತ್ನಿ ಜೊತೆ ಚೆಕಪ್‍ಗಾಗಿ ಆಸ್ಪತ್ರೆಗೆ ಹೋಗಿದ್ದಾರೆ. ವೈದ್ಯರ ಬಳಿ ಹೋಗಲು ತಮ್ಮ ಸರದಿ ಬರುವವರೆಗೂ ಇಬ್ಬರು ಹೊರಗೆ ಕಾಯುತ್ತಾ ನಿಂತಿದ್ದಾರೆ. ಈ ವೇಳೆ ಮಹಿಳೆ ನಿಂತು ನಿಂತು ಸುಸ್ತಾಗಿದ್ದರು. ಅಲ್ಲದೆ ಅವರ ಕಾಲು ಸೆಳೆಯುತ್ತಿತ್ತು.

    ಪತ್ನಿಯ ಸ್ಥಿತಿ ನೋಡಿ ಪತಿ ಅಲ್ಲಿ ಕುಳಿತಿದ್ದ ಜನರಿಗೆ ಸೀಟು ಬಿಟ್ಟು ಕೊಡುವಂತೆ ಕೇಳಿದ್ದಾರೆ. ಆದರೆ ಯಾರು ಸಹ ಸೀಟು ಬಿಟ್ಟು ಕೊಡಲು ಮುಂದಾಗಲಿಲ್ಲ. ಬಳಿಕ ಪತಿ ತನ್ನ ಭುಜದ ಮೇಲೆ ಪತ್ನಿಯನ್ನು ಕೂರಿಸಿಕೊಳ್ಳುವ ಮೂಲಕ ಕುರ್ಚಿ ಆಗಿದ್ದಾರೆ. ಈ ವಿಡಿಯೋ ನೋಡಿ ನೆಟ್ಟಿಗರು ವಿಶ್ವದ ಅತ್ಯಂತ ಪ್ರೀತಿಯ ಪತಿ ಎಂದು ವ್ಯಕ್ತಿಯನ್ನು ಹೊಗಳುತ್ತಿದ್ದಾರೆ. ಇದನ್ನೂ ಓದಿ: ಪತ್ನಿಗಾಗಿ ಪತಿ ವಿಮಾನದಲ್ಲಿ 6 ಗಂಟೆ ನಿಂತ್ಕೊಂಡೇ ಪ್ರಯಾಣಿಸಿದ 

    ವರದಿಗಳ ಪ್ರಕಾರ, ಈ ವಿಡಿಯೋವನ್ನು ಈಶಾನ್ಯ ಚೀನಾದ ಹೈಲಾಂಗ್‍ಜಿಯಾಂಗ್ ನಗರದ ಹಿಯಾಂಗ್‍ನ ಪೊಲೀಸರು ಭಾನುವಾರ ಡೋಯಿನ್ ಎಂಬ ಕಿರು ವಿಡಿಯೋ ಆ್ಯಪ್‍ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋಗೆ 70 ಲಕ್ಷ ಲೈಕ್ಸ್ ದೊರೆತಿದೆ. ಈ ದೃಶ್ಯ ಆಸ್ಪತ್ರೆಯಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ವಿಡಿಯೋದಲ್ಲಿ, ಮಹಿಳೆ ನಿಂತು ಸುಸ್ತಾಗಿದ್ದಾರೆ. ಈ ವೇಳೆ ಅಲ್ಲಿದ ಜನರು ಕುರ್ಚಿ ಮೇಲೆ ಕುಳಿತುಕೊಂಡು ಮೊಬೈಲ್ ಬಳಸುತ್ತಿದ್ದರು. ಆದರೆ ಯಾರು ಸಹ ತಮ್ಮ ಸೀಟನ್ನು ಮಹಿಳೆಗೆ ಬಿಟ್ಟು ಕೊಡಲಿಲ್ಲ. ತನ್ನ ಪತ್ನಿಯ ಸ್ಥಿತಿಯನ್ನು ನೋಡುವುದಕ್ಕೆ ಆಗದೇ ಪತಿ ಅವರನ್ನು ತನ್ನ ಹೆಗಲ ಮೇಲೆ ಕೂರಿಸಿಕೊಂಡರು

  • ಪ್ರೀತಿಸಿ ಮದುವೆ- ಪತ್ನಿ ಗರ್ಭಿಣಿಯಾಗಿದ್ದಕ್ಕೆ ನಡುರಸ್ತೆಯಲ್ಲೇ ಕೊಂದ

    ಪ್ರೀತಿಸಿ ಮದುವೆ- ಪತ್ನಿ ಗರ್ಭಿಣಿಯಾಗಿದ್ದಕ್ಕೆ ನಡುರಸ್ತೆಯಲ್ಲೇ ಕೊಂದ

    ಚಿಕ್ಕಬಳ್ಳಾಪುರ: ಪತ್ನಿ ಗರ್ಭಿಣಿ ಎಂಬ ವಿಚಾರ ತಿಳಿದ ಗಂಡನೊಬ್ಬ ಆಕೆಯ ಶೀಲ ಶಂಕಿಸಿ ನಡುರಸ್ತೆಯಲ್ಲೇ ಕೊಲೆ ಮಾಡಿರುವ ಘಟನೆ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

    ಜಿಲ್ಲೆಯ ಕಾಕಲಚಿಂತೆ ಗ್ರಾಮದ ಪವಿತ್ರ ಮೃತ ಪತ್ನಿ. ದೇವಸ್ಥಾನ ಹೊಸಹಳ್ಳಿ ಗ್ರಾಮದ ಆನಂದ್ ಗರ್ಭಿಣಿ ಪತ್ನಿಯನ್ನು ನಡುರಸ್ತೆಯಲ್ಲೇ ವೇಲ್‍ನಿಂದ ಕುತ್ತಿಗೆಗೆ ಸುತ್ತಿ ಕೊಲೆ ಮಾಡಿದ್ದಾನೆ.

    ಏನಿದು ಪ್ರಕರಣ?
    ಮೃತ ಪವಿತ್ರಾ ಚಿಕ್ಕಬಳ್ಳಾಪುರ ತಾಲಯ ಸೇಟ್ ದಿನ್ನೆ ಬಳಿ ಫ್ಯಾಕ್ಟರಿ ಕೆಲಸಕ್ಕೆ ಹೋಗುತ್ತಿದ್ದಳು. ಅದೇ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಆನಂದ್ ಕಳೆದ ಮೂರು ವರ್ಷಗಳ ಹಿಂದೆ ಪ್ರೀತಿಸಿ ಪೋಷಕರ ವಿರೋಧದ ನಡುವೆಯೂ ಅಂತರ್ಜಾತಿ ವಿವಾಹವಾಗಿದ್ದನು. ಇತ್ತೀಚೆಗೆ ಪವಿತ್ರ ಬೆಂಗಳೂರಿನಲ್ಲಿ ಬೇರೆ ಕೆಲಸಕ್ಕೆ ಸೇರಿ ರಾಮಮೂರ್ತಿ ನಗರದಲ್ಲಿ ವಾಸವಾಗಿದ್ದಳು. ಆದರೆ ಏನೂ ಕೆಲಸ ಮಾಡದ ಆನಂದ್ ಊರಲ್ಲೇ ಇದ್ದು, ಆಗಾಗ ರಾಮಮೂರ್ತಿ ನಗರಕ್ಕೆ ಹೋಗಿ ಬರುತ್ತಿದ್ದನು ಎಂದು ತಿಳಿದು ಬಂದಿದೆ.

    ಸ್ವಲ್ಪ ದಿನದ ಹಿಂದೆ ಪವಿತ್ರ ಗರ್ಭಿಣಿ ಎಂಬ ವಿಷಯ ತಿಳಿದ ಆನಂದ್ ಆಕೆಯ ಶೀಲದ ಮೇಲೆ ಸಂಶಯಪಟ್ಟಿದ್ದಾನೆ. ನಂತರ ನಿಮ್ಮ ಮನೆಯವರು ವರದಕ್ಷಿಣೆ ಕೊಡಲಿಲ್ಲ ಎಂದು ಆಗಾಗ ಜಗಳ ಮಾಡುತ್ತಿದ್ದನು. ಕೊನೆಗೆ ಪತ್ನಿಯನ್ನು ಕೊಲೆ ಮಾಡಬೇಕು ಎಂದು ಮೊದಲೇ ಪ್ಲಾನ್ ಮಾಡಿಕೊಂಡಿದ್ದನು. ಅದರಂತೆಯೇ ಆನಂದ್ ಆಕೆಯನ್ನ ದೇವನಹಳ್ಳಿ-ದೊಡ್ಡಬಳ್ಳಾಪುರ ಮಾರ್ಗವಾಗಿ ಗೌರಿಬಿದನೂರಿಗೆ ಹೋಗೋಣ ಎಂದು ಕರೆದುಕೊಂಡು ಹೋಗಿದ್ದಾನೆ. ನಂತರ ನಡುರಸ್ತೆಯಲ್ಲೇ ವೇಲ್‍ನಿಂದ ಕುತ್ತಿಗೆಗೆ ಸುತ್ತಿ ಗರ್ಭಿಣಿ ಪತ್ನಿಯನ್ನು ಕೊಲೆ ಮಾಡಿದ್ದಾನೆ.

    ತದನಂತರ ಆಕೆಯ ಮೃತದೇಹವನ್ನು ರಸ್ತೆಯಲ್ಲೇ ಬಿಟ್ಟು ಅಪಘಾತ ಎಂದು ಬಿಂಬಿಸಿದ್ದಾನೆ. ತಡರಾತ್ರಿ ಅಪರಿಚಿತ ಮಹಿಳೆಯ ಮೃತದೇಹ ಕಂಡು ಮಂಚೇನಹಳ್ಳಿ ಪೊಲೀಸರು ಪರಿಶೀಲನೆ ಮಾಡಿದ್ದಾರೆ. ಆಗ ಪತಿ ಆನಂದ್‍ನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ನಡೆದ ಅಸಲಿ ಸತ್ಯ ಬಯಲಾಗಿದೆ.

    ಈ ಕುರಿತು ಮಂಚೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.