Tag: pregnant womens

  • ಗರ್ಭಿಣಿಯರು ಹೆರಿಗೆಗೆ ಕೈಲಾಸಕ್ಕೆ ಬನ್ನಿ: ನಿತ್ಯಾನಂದನ ಕರೆಯೋಲೆ

    ಗರ್ಭಿಣಿಯರು ಹೆರಿಗೆಗೆ ಕೈಲಾಸಕ್ಕೆ ಬನ್ನಿ: ನಿತ್ಯಾನಂದನ ಕರೆಯೋಲೆ

    ಬೆಂಗಳೂರು: ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ (Nithyananda) ಕೈಲಾಸ (Kailasa) ಎಂಬ ಪ್ರತ್ಯೇಕ ರಾಷ್ಟ್ರವನ್ನು ಕಟ್ಟಿಕೊಂಡಿರುವುದು ಗೊತ್ತೇ ಇದೆ. ಈಗ ವಿಶ್ವದ ಎಲ್ಲಾ ಗರ್ಭಿಣಿಯರಿಗೆ ಆಫರ್ ಒಂದನ್ನು ನೀಡಿ ಸುದ್ದಿಯಾಗುತ್ತಿದೆ.

    ಕೈಲಾಸದಲ್ಲಿ ಬಿಂದಾಸ್ ಆಗಿರುವ ಬಿಡದಿ ಸ್ವಾಮಿ ನಿತ್ಯಾನಂದ, ವಿಶ್ವದ ಎಲ್ಲಾ ಮಹಿಳೆಯರು ಹೆರಿಗೆಗೆ (Delivery) ಕೈಲಾಸಕ್ಕೆ ಬನ್ನಿ ಎಂದು ಆಹ್ವಾನ ನೀಡಿದ್ದಾನೆ. ಕೈಲಾಸದಲ್ಲಿ ಹೆರಿಗೆಯಾಗುವ ಪ್ರತಿ ಮಗುವಿಗೆ, ವಿಶೇಷವಾದ ಅಲೌಕಿಕವಾದ ಪ್ರಕಾಶಮಾನವಾದ ಶಕ್ತಿಯುಳ್ಳ ಡಿಎನ್‍ಎ (DNA) ದಯಪಾಲಿಸುವುದಾಗಿ ತಿಳಿಸಿದ್ದು, ಅಲ್ಲದೇ ಕೈಲಾಸದಲ್ಲಿ ಹೆರಿಗೆಯಾದರೆ ಏನೇನು ಪ್ರಯೋಜನಗಳಿವೆ ಎಂಬುದರ ಕುರಿತಾಗಿ ವೀಡಿಯೋ ಮೂಲಕ ವಿವರಿಸಿದ್ದಾನೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಈ ವೀಡಿಯೋ ವೈರಲ್ ಆಗುತ್ತಿದೆ. ಇದನ್ನೂ ಓದಿ: ಟಿಪ್ಪು ಎಕ್ಸ್‌ಪ್ರೆಸ್ ಇನ್ನುಮುಂದೆ ಒಡೆಯರ್ ಎಕ್ಸ್‌ಪ್ರೆಸ್ – ಶಿವಮೊಗ್ಗಕ್ಕೆ ಕುವೆಂಪು ಎಕ್ಸ್‌ಪ್ರೆಸ್

    ಕೈಲಾಸದಲ್ಲಿ ಇಡೀ ಬ್ರಹ್ಮಾಂಡಕ್ಕಾಗಿಯೇ ಮೀಸಲಾಗಿರುವ ಶಾಶ್ವತ ಕಾಸ್ಮಿಕ್ ಏರ್‌ಪೋರ್ಟ್‌ ಹಾಗೂ ಹೆರಿಗೆ ಆಸ್ಪತ್ರೆಯನ್ನು ಸದ್ಯದಲ್ಲೇ ನಿರ್ಮಿಸಲಾಗುತ್ತದೆ. ಇಲ್ಲಿ ಹೆರಿಗೆಯಾಗುವ ಪ್ರತಿ ಮಗುವಿಗೂ ಪ್ರಬುದ್ಧವಾದಂತಹ ಅಲೌಕಿಕವಾದ ಪ್ರಕಾಶಮಾನವಾದ ಶಕ್ತಿಯುಳ್ಳ ಡಿಎನ್‍ಎ ಒಲಿಯುತ್ತದೆ. ಜೊತೆಗೆ, ಬ್ರಹ್ಮಜ್ಞಾನವುಳ್ಳ ಅನುವಂಶೀಯ ಕೋಡ್ ಅನ್ನು ನೀಡಲಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾನೆ.

    ನೀವು ಎಲ್ಲೇ ಇರಿ, ಯಾವ ದೇಶದಲ್ಲೇ ಇರಿ ಅಲ್ಲೇ ಗರ್ಭಿಣಿಯಾಗಿರಿ. ಆದರೆ, ನೀವು ಹೆರಿಗೆಗೆ ಮಾತ್ರ ಕೈಲಾಸಕ್ಕೆ ಬನ್ನಿ. ಈ ಮೂಲಕ ನಿಮ್ಮ ಮಗುವಿಗೆ ಹಲವು ಪ್ರಯೋಜನಗಳಿವೆ. ಈ ಪ್ರಯೋಜನಗಳನ್ನು ಬಳಸಿಕೊಳ್ಳಿ ಎಂದು ಆಫರ್ ನೀಡಿದ್ದಾನೆ. ಇದನ್ನೂ ಓದಿ: ಕದ್ದು ಮುಚ್ಚಿ ಮಾಲ್ಡೀವ್ಸ್‌ಗೆ ಹಾರಿದ ರಶ್ಮಿಕಾ ಮಂದಣ್ಣ- ವಿಜಯ್ ದೇವರಕೊಂಡ

    ಕೈಲಾಸ ಎಲ್ಲಿದೆ?
    ಕೈಲಾಸ ಎಲ್ಲಿದೆ ಎಂಬುದು ನಿಖರವಾಗಿ ತಿಳಿದಿಲ್ಲ. ಆದರೆ ಮಾಧ್ಯಮಗಳ ಪ್ರಕಾರ ದಕ್ಷಿಣ ಅಮೆರಿಕದ ಈಕ್ವೆಡಾರ್‌ನ ಸಮುದ್ರದ ಮಧ್ಯದಲ್ಲಿರುವ ಪುಟ್ಟ ದ್ವೀಪವನ್ನು ನಿತ್ಯಾನಂದ ಖರೀದಿಸಿ ಅದಕ್ಕೆ ಕೈಲಾಸ ಎಂದು ನಾಮಕರಣ ಮಾಡಿದ್ದಾನೆ ಎನ್ನಲಾಗುತ್ತಿದೆ. ಆದರೆ ಈಕ್ವೆಡಾರ್ ಇದನ್ನು ಅಲ್ಲಗಳೆದಿದ್ದು, ಅಂತಹ ಯಾವುದೇ ವ್ಯಕ್ತಿಗೆ ದ್ವೀಪವನ್ನು ನೀಡಿಲ್ಲ ಎಂದು ಹೇಳಿದೆ.

    Live Tv
    [brid partner=56869869 player=32851 video=960834 autoplay=true]

  • ವಿಕಲಾಂಗರು, ಗರ್ಭಿಣಿಯರಿಗೆ ವರ್ಕ್‌ ಫ್ರಮ್‌ ಹೋಮ್‌ – ದೆಹಲಿ ಸರ್ಕಾರ ಆದೇಶ

    ವಿಕಲಾಂಗರು, ಗರ್ಭಿಣಿಯರಿಗೆ ವರ್ಕ್‌ ಫ್ರಮ್‌ ಹೋಮ್‌ – ದೆಹಲಿ ಸರ್ಕಾರ ಆದೇಶ

    ನವದೆಹಲಿ: ವಿಕಲಾಂಗರಿಗೆ ಮತ್ತು ನಗರ ಸರ್ಕಾರಿ ಇಲಾಖೆಗಳಲ್ಲಿ ಕೆಲಸ ಮಾಡುವ ಗರ್ಭಿಣಿಯರಿಗೆ ವರ್ಕ್ ಫ್ರಮ್ ಹೋಮ್ ಮಾಡಲು ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರವು ಅವಕಾಶ ನೀಡಿದೆ. ಈ ನೌಕರರು ಇನ್ನು ಮುಂದೆ ಕಚೇರಿಗಳಿಗೆ ಹಾಜರಾಗುವ ಅಗತ್ಯವಿಲ್ಲ ಎಂದು ಡಿಡಿಎಂಎ ತಿಳಿಸಿದೆ.

    ಪಿಎಸ್‍ಯುಗಳು, ನಿಗಮಗಳು, ಸ್ವಾಯತ್ತ ಸಂಸ್ಥೆಗಳು, ಸ್ಥಳೀಯ ಸಂಸ್ಥೆಗಳ ಕಚೇರಿಗಳಿಗೆ ಆಗಮಿಸುವ ಅಂಗವಿಕಲರು ಮತ್ತು ಗರ್ಭಿಣಿಯರಿಗೆ ಆರೋಗ್ಯ ಮತ್ತು ಸುರಕ್ಷತೆಯ ದೃಷ್ಟಿಯಿಂದ ಕಚೇರಿಗೆ ಆಗಮಿಸುವ ಬದಲಾಗಿ ಮನೆಯಲ್ಲಿಯೇ ಕೆಲಸ ಮಾಡಲು ವಿನಾಯಿತಿ ನೀಡಲಾಗಿದೆ. ಇದನ್ನೂ ಓದಿ: ಚುನಾವಣೆ ಮುಂದೂಡುವಂತೆ ಆಯೋಗಕ್ಕೆ ಪಂಜಾಬ್‌ ಸಿಎಂ ಮನವಿ ಪತ್ರ

    ವರ್ಕ್ ಫ್ರಮ್ ಹೋಂ ಮಾಡುವ ಉದ್ಯೋಗಿಗಳು ತಮ್ಮ ಕಚೇರಿಗಳೊಂದಿಗೆ ಮೊಬೈಲ್ ಫೋನ್ ಅಥವಾ ಇ-ಮೇಲ್ ಮೂಲಕ ಸಂವಹನ ನಡೆಸಬಹುದಾಗಿದೆ ಎಂದು ತಿಳಿಸಲಾಗಿದೆ. ಈ ವಾರದ ಆರಂಭದಲ್ಲಿ ದೆಹಲಿಯಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಡಿಡಿಎಂಎ ಚಾರ್ಟರ್ಡ್ ಅಕೌಂಟೆಂಟ್ ಮತ್ತು ಆದಾಯ ತೆರಿಗೆ ಇಲಾಖೆಯ ಉದ್ಯೋಗಿಗಳು ಸೇರಿದಂತೆ ಹಲವಾರು ಕಚೇರಿಯ ಉದ್ಯೋಗಿಗಳಿಗೆ ದೆಹಲಿ ಸರ್ಕಾರಿ ವರ್ಕ್ ಫ್ರಮ್ ಹೋಮ್ ಮಾಡುವಂತೆ ಆದೇಶ ಹೊರಡಿಸಿತ್ತು. ಆದರೆ ಅಗತ್ಯವಿದ್ದರೆ ಮಾತ್ರ ಉದ್ಯೋಗಿಗಳು ತಮ್ಮ ಕಚೇರಿಗಳಿಗೆ ಆಗಮಿಸಿ ಕೆಲಸ ಮಾಡಬಹುದು ಎಂದು ಸೂಚಿಸಿತ್ತು. ಇದನ್ನೂ ಓದಿ: ಅಯೋಧ್ಯೆ ಅಲ್ಲ, ಗೋರಖ್‌ಪುರ ಕ್ಷೇತ್ರದಿಂದ ಯೋಗಿ ಆದಿತ್ಯನಾಥ್ ಸ್ಪರ್ಧೆ

  • ಮರಗಳ್ಳನ ಹಿಡಿಯುವ ನೆಪದಲ್ಲಿ ಗರ್ಭಿಣಿಯರ ಮೇಲೆ ಹಲ್ಲೆ!

    ಮರಗಳ್ಳನ ಹಿಡಿಯುವ ನೆಪದಲ್ಲಿ ಗರ್ಭಿಣಿಯರ ಮೇಲೆ ಹಲ್ಲೆ!

    ಮೈಸೂರು: ಮರಗಳ್ಳನ ಹುಡುಕುವ ನೆಪದಲ್ಲಿ ಕಾಡಿನೊಳಗಿನ ಹಾಡಿ ಜನರ ಮೇಲೆ ಅರಣ್ಯ ಇಲಾಖೆ ಸಿಬ್ಬಂದಿ ಹಲ್ಲೆ ಮಾಡಿರುವ ಆರೋಪಗಳು ಕೇಳಿಬಂದಿವೆ. ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕು ಮೇಟಿಕುಪ್ಪೆ ಹಾಡಿಯಲ್ಲಿ ಈ ಘಟನೆ ನಡೆದಿದೆ.

    ಅಕ್ಕಿ ಕುಮಾರ್ ಎಂಬಾತ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಮರಗಳ್ಳತನ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿತ್ತು. ಆದ್ದರಿಂದ ಅಕ್ಕಿ ಕುಮಾರನ್ನ ಹುಡುಕುತ್ತಾ ಮೇಟಿಕುಪ್ಪೆ ಹಾಡಿ ಮೇಲೆ ಅರಣ್ಯ ಇಲಾಖೆ ಸಿಬ್ಬಂದಿ ಮಂಗಳವಾರ ದಾಳಿ ನಡೆಸಿದ್ದರು. ಈ ವೇಳೆ ಅಲ್ಲಿನ ಗರ್ಭಿಣಿಯರ ಮೇಲೆ ಸಿಬ್ಬಂದಿ ಹಲ್ಲೆ ನಡೆಸಿದ್ದಾರೆ ಎಂದು ಹಾಡಿ ಜನರು ಆರೋಪಿಸಿದ್ದಾರೆ. ಅಲ್ಲದೆ ಈ ದಾಳಿಯಲ್ಲಿ ಇಬ್ಬರು ಮಹಿಳೆಯರು ಗಂಭೀರ ಗಾಯಗೊಂಡಿದ್ದು, ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಒಂದೆಡೆ ಈ ಬಗ್ಗೆ ಹಾಡಿ ಜನರು ಅರಣ್ಯ ಇಲಾಖೆ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದರೇ, ಇನ್ನೊಂದೆಡೆ ಹಾಡಿ ಜನರ ಮೇಲೆ ಹಲ್ಲೆ ಮಾಡಿಲ್ಲ. ಇದು ಸುಳ್ಳು ಆರೋಪವೆಂದು ಅರಣ್ಯ ಇಲಾಖೆಯ ಹಿರಿಯ ಅರಣ್ಯಾಧಿಕಾರಿಗಳು ಹೇಳಿದ್ದಾರೆ.