Tag: Pregnant women

  • ಬೆಂಗಳೂರು | ಗರ್ಭಿಣಿ ಅನುಮಾನಾಸ್ಪದ ಸಾವು – ಪತ್ನಿ ಶವದ ಮುಂದೆ 2 ದಿನ ಕಳೆದಿದ್ದ ಪತಿ

    ಬೆಂಗಳೂರು | ಗರ್ಭಿಣಿ ಅನುಮಾನಾಸ್ಪದ ಸಾವು – ಪತ್ನಿ ಶವದ ಮುಂದೆ 2 ದಿನ ಕಳೆದಿದ್ದ ಪತಿ

    – ಮೃತದೇಹದ ವಾಸನೆ ಬರ್ತಿದ್ದಂತೆ ಗಂಡ ಜೂಟ್‌

    ಬೆಂಗಳೂರು: ನಗರದಲ್ಲಿ ಗರ್ಭಿಣಿ ಮಹಿಳೆಯೊಬ್ಬರು (Pregnant Women) ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಹೆಣ್ಣೂರು ಪೊಲೀಸ್ ಠಾಣಾ (Hennur Police Station) ವ್ಯಾಪ್ತಿಯ ಥಣಿಸಂದ್ರದಲ್ಲಿ ನಡೆದಿದೆ.

    ಉತ್ತರ ಪ್ರದೇಶ ಮೂಲದ ಸುಮನಾ (22) ಸಾವನ್ನಪ್ಪಿದ ಮಹಿಳೆ. ಪತಿ ಶಿವಂ ಜೊತೆ ಬಾಡಿಗೆ ಮನೆಯಲ್ಲಿ ವಾಸವಿದ್ದ ಸುಮನಾ ಮೂರು ದಿನಗಳ ಹಿಂದಷ್ಟೇ ಮನೆಯಲ್ಲಿ ಸಾವನ್ನಪ್ಪಿದ್ದಾರೆ. ಮೃತದೇಹ ದುರ್ವಾಸನೆ ಬಂದು ಸ್ಥಳೀಯರು ಗಮನಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಧರ್ಮಸ್ಥಳ ಹೂತಿಟ್ಟ ಶವ ಕೇಸ್‌- ಓರ್ವ ಐಪಿಎಸ್ ಅಧಿಕಾರಿಯನ್ನು ಕೈಬಿಡಲು ಸರ್ಕಾರಕ್ಕೆ ಶಿಫಾರಸು

    ಸುಮನಾ ಮೃತದೇಹದ ಮೇಲೆ ಗಾಯದ ಗುರುತುಗಳು ಪತ್ತೆಯಾಗಿಲ್ಲ. ಮೂಗಿನಲ್ಲಿ ರಕ್ತ ಸ್ರಾವವಾಗಿ ಸಾವನ್ನಪ್ಪಿರೋ ಬಗ್ಗೆ ಮಾಹಿತಿ ಲಭ್ಯವಾಗಿದೆ. ಅಲ್ಲದೇ ಪತ್ನಿಯ ಮೃತದೇಹದ ಜೊತೆಯೇ ಪತಿ ಶಿವಂ ಎರಡು ದಿನ ಕಳೆದಿದ್ದ. ಪತ್ನಿ ಸತ್ತ ಮೊದಲ ದಿನ ಕೆಲಸಕ್ಕೆ ಹೋಗಿಬಂದಿದ್ದ, 2ನೇ ದಿನ ರಾತ್ರಿ ಮೃತದೇಹದ ಮುಂದೆ ಮದ್ಯಪಾನ, ಊಟ ಮಾಡಿದ್ದ, ಎಗ್‌ಬುರ್ಜಿ ಮಾಡ್ಕೊಂಡು ಶವದ ಮುಂದೆ ಊಟ ಮಾಡಿದ್ದ. ಬುಧವಾರ (ಜು.23) ಮಧ್ಯಾಹ್ನದ ವೇಳೆಗೆ ಮೃಹದೇಹ ಕೊಳೆತು ದುರ್ವಾಸನೆ ಬರಲಾರಂಭಿಸಿದೆ. ಸ್ಥಳೀಯರು ಇದನ್ನು ಗಮನಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಅಕ್ಕಪಕ್ಕದ ಮನೆಯವರು ಬಂದು ನೋಡುವ ಹೊತ್ತಿಗೆ ಪತಿ ಶಿವಂ ಎಸ್ಕೇಪ್‌ ಆಗಿದ್ದಾನೆ.

    ಸದ್ಯ ಮಹಿಳೆ ಸುಮನಾ ಅನುಮಾನಾಸ್ಪದ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಸದ್ಯ ನಾಪತ್ತೆಯಾಗಿರೋ ಪತಿ ಶಿವಂ ಗಾಗಿ ಹೆಣ್ಣೂರು ಪೊಲೀಸರಿಂದ ಹುಡುಕಾಟ ನಡೆದಿದೆ. ಇದನ್ನೂ ಓದಿ: ಟೇಕಾಫ್ ವೇಳೆ ಅಹಮದಾಬಾದ್-ದಿಯು ಇಂಡಿಗೋ ವಿಮಾನದ ಎಂಜಿನ್‌ನಲ್ಲಿ ಬೆಂಕಿ – ಹಾರಾಟ ಸ್ಥಗಿತ

  • ವಿಶ್ವದ ಪ್ರತಿ ದೇಶದಲ್ಲೂ ನನ್ನದೊಂದು ಮಗು ಇರಬೇಕು – ಅಮೆರಿಕದ ವೀರ್ಯದಾನಿಯ ಹೆಬ್ಬಯಕೆ

    ವಿಶ್ವದ ಪ್ರತಿ ದೇಶದಲ್ಲೂ ನನ್ನದೊಂದು ಮಗು ಇರಬೇಕು – ಅಮೆರಿಕದ ವೀರ್ಯದಾನಿಯ ಹೆಬ್ಬಯಕೆ

    – 100 ಮಕ್ಕಳ ತಂದೆಯಾಗುವ ಸನಿಹದಲ್ಲಿ ಕೈಲ್‌ ಗೋರ್ಡಿ

    ವಾಷಿಂಗ್ಟನ್‌: ಪ್ರಸಿದ್ಧ ವೀರ್ಯ ದಾನಿ (Sperm Donor) ಎಂದು ಖ್ಯಾತಿ ಪಡೆದಿರುವ ಅಮೆರಿಕದ ಕೈಲ್‌ ಗೋರ್ಡಿ (Kyle Gordy) ಇದೀಗ 100 ಮಕ್ಕಳ ತಂದೆಯಾಗುವ ಸನಿಹದಲ್ಲಿದ್ದಾರೆ.

    ಕಳೆದ ಕೆಲ ವರ್ಷಗಳಿಂದ ಅಮೆರಿಕದ (America) ಲಾಸ್‌ ಏಂಜಲೀಸ್‌ನಲ್ಲಿ ಗರ್ಭಧಾರಣೆಗಾಗಿ ಹೋರಾಡುತ್ತಿದ್ದ ಮಹಿಳೆಯರಿಗೆ ಉಚಿತ ವೀರ್ಯಧಾನ ಮಾಡುತ್ತಿದ್ದ ಗೋರ್ಡಿ ಈವರೆಗೆ 87 ಮಕ್ಕಳ (Childrens) ತಂದೆಯಾಗಿದ್ದಾರೆ. ʻಬಿ ಪ್ರೆಗ್ನೆಂಟ್ ನೌʼ ವೆಬ್‌ಸೈಟ್‌ ಆರಂಭಿಸಿ ಮಹಿಳೆಯರಿಗೆ ವೀರ್ಯದಾನ ಮಾಡುತ್ತಾ ಬರುತ್ತಿದ್ದಾರೆ. ಇದೀಗ ಅವರು ನೂರು ಮಕ್ಕಳಿಗೆ ತಂದೆಯಾಗುವ ಸನಿಹದಲ್ಲಿದ್ದಾರೆ ಎಂದು ನ್ಯೂಯಾರ್ಕ್‌ಪೋಸ್ಟ್‌ ವರದಿ ಮಾಡಿದೆ. ಇದನ್ನೂ ಓದಿ: 12 ಗಂಟೆಯಲ್ಲಿ 1,057 ಪುರುಷರೊಂದಿಗೆ ಸೆಕ್ಸ್‌ – ವಿಶ್ವದಾಖಲೆ ಬರೆದ ನೀಲಿ ತಾರೆ

    ನೂರು ಮಕ್ಕಳ ಗುರಿ ಪೂರೈಸಲು ಸ್ವೀಡನ್, ನಾರ್ವೆ, ಇಂಗ್ಲೆಂಡ್ ಮತ್ತು ಸ್ಕಾಟ್ಲೆಂಡ್‌ನ 13 ಮಹಿಳೆಯರಿಗೆ ವೀರ್ಯದಾನ ಮಾಡಲು ಮುಂದಾಗಿದ್ದಾರೆ.‌ ಇದನ್ನೂ ಓದಿ: ಅದಾನಿ ಕಂಪನಿಗಳನ್ನು ಕಾಡಿದ್ದ ಹಿಂಡನ್‌ಬರ್ಗ್‌ಗೆ ಬೀಗ – ಬಂದ್‌ ಆಗಿದ್ದು ಯಾಕೆ?

    ಅಲ್ಲದೇ ಕೈಲ್‌ ಗೋರ್ಡಿ ವಿಶ್ವದ ಎಲ್ಲಾ ದೇಶಗಳಲ್ಲೂ ಒಂದೊಂದು ಮಗು ಹೊಂದಬೇಕೆಂಬ ಹೆಬ್ಬಯಕೆಯನ್ನೂ ವ್ಯಕ್ತಪಡಿಸಿದ್ದಾರೆ. ಅದ್ಕಕಾಗಿ ತಾನು ನಿರ್ದಿಷ್ಟ ಮಕ್ಕಳನ್ನು ಹೊಂದಬೇಕೆಂಬ ಗುರಿ ಹಾಕಿಕೊಂಡಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಸುದೀರ್ಘ ಯುದ್ಧ ಅಂತ್ಯಗೊಳಿಸಲು ನಿರ್ಧಾರ; ಕದನ ವಿರಾಮ ಒಪ್ಪಂದಕ್ಕೆ ಇಸ್ರೇಲ್-ಹಮಾಸ್ ಒಪ್ಪಿಗೆ

    ಪ್ರಸಕ್ತ ವರ್ಷದಲ್ಲಿ ಜಾಗತೀಕ ಪ್ರವಾಸ ಹಮ್ಮಿಕೊಂಡಿದ್ದೇನೆ. ಜಪಾನ್‌, ಐರ್ಲೆಂಡ್‌ ಮತ್ತು ಕೊರಿಯಾ ಸೇರಿದಂತೆ ಹಲವು ಹೊಸ ರಾಷ್ಟ್ರಗಳಿಗೆ ಪ್ರವಾಸ ಕೈಗೊಂಡಿದ್ದೇನೆ. ಅಲ್ಲಿ ನಿರ್ದಿಷ್ಟ ಸಂಸ್ಥೆಗಳನ್ನು ಸಂಪರ್ಕಿಸಿ, ಗರ್ಭಧರಿಸಲು ಹಂಬಲಿಸುತ್ತಿರುವ ಮಹಿಳೆಯರಿಗೆ ವೀರ್ಯದಾನ ಮಾಡುತ್ತೇನೆ. ಈ ಮೂಲಕ 2026ರ ವೇಳೆಗೆ ವಿಶ್ವದ ಪ್ರತಿಯೊಂದು ದೇಶದಲ್ಲೂ ಒಂದೊಂದು ಮಗುವನ್ನು ಹೊಂದುವ ಯೋಜನೆ ಹಾಕಿಕೊಂಡಿದ್ದೇನೆ ಎಂಬುದಾಗಿ ಹೇಳಿಕೊಂಡಿದ್ದಾರೆ.

  • ಬೆಳಗಾವಿಯಿಂದ ಹುಬ್ಬಳ್ಳಿಗೆ ಶಿಫ್ಟ್‌ | ಗರ್ಭಿಣಿ ಸಾವು, ವಿಷ ಸೇವಿಸಿದ ಪತಿ – ಐಸಿಯುನಲ್ಲಿ ಚಿಕಿತ್ಸೆ

    ಬೆಳಗಾವಿಯಿಂದ ಹುಬ್ಬಳ್ಳಿಗೆ ಶಿಫ್ಟ್‌ | ಗರ್ಭಿಣಿ ಸಾವು, ವಿಷ ಸೇವಿಸಿದ ಪತಿ – ಐಸಿಯುನಲ್ಲಿ ಚಿಕಿತ್ಸೆ

    ಧಾರವಾಡ: ತೀವ್ರ ಅನಾರೋಗ್ಯ ಹಿನ್ನೆಲೆ ಬೆಳಗಾವಿಯಿಂದ (Belagavi) ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ (KIMS Hospital) ಶಿಫ್ಟ್‌ ಆಗಿದ್ದ ಗರ್ಭಿಣಿ (Pregnant Women) ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದು, ಪತ್ನಿ ಮತ್ತು ಮಗು ಸಾವಿನಿಂದ ನೊಂದು ಪತಿ ಕೂಡ ಆಸ್ಪತ್ರೆಯಲ್ಲೇ ಆತ್ಮಹತ್ಯೆ ಯತ್ನಿಸಿದ ಘಟನೆ ನಡೆದಿದೆ.

    ಬೆಳಗಾವಿಯ 19 ವರ್ಷ ರಾಧಿಕಾ ಮೃತ ಗರ್ಭಿಣಿ. ಎಂಟು ತಿಂಗಳ‌ ಗರ್ಭಿಣಿಯಾಗಿದ್ದ ರಾಧಿಕಾ, ಹೊಟ್ಟೆ ನೋವಿನಿಂದ ಬೆಳಗಾವಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಬಿಮ್ಸ್‌ ಆಸ್ಪತ್ರೆಗೆ ರವಾನಿಸಲಾಗಿತ್ತು.

    ಬಿಮ್ಸ್‌ನಲ್ಲಿ ಸರಿಯಾದ ಚಿಕಿತ್ಸೆ ಇಲ್ಲದ ಕಾರಣ ಬೆಳಗಾವಿಯಿಂದ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಈ ಹೊತ್ತಿಗೆ ರಾಧಿಕಾ ಹೊಟ್ಟೆಯೊಳಗಿದ್ದ ಮಗು ಸಾವನ್ನಪ್ಪಿತ್ತು. ಹೀಗಿದ್ದರೂ ಕಳೆದ 24 ಗಂಟೆಯಿಂದ ಕಿಮ್ಸ್ ವೈದ್ಯರು ರಾಧಿಕಾ ಉಳಿಸಿಕೊಳ್ಳಲು ಸಾಕಷ್ಟು ಪ್ರಯತ್ನಪಟ್ಟರೂ ಯಾವುದೇ ಪ್ರಯೋಜನವಾಗಿಲ್ಲ. ಇಂದು (ಡಿ.31) ಬೆಳಗ್ಗೆ 11 ಗಂಟೆಗೆ ಕೊನೆಯುಸಿರೆಳೆದರು.  ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಸಿಲಿಂಡರ್ ಸ್ಫೋಟ ಕೇಸ್‌ – ಮತ್ತೊಬ್ಬ ಅಯ್ಯಪ್ಪ ಮಾಲಾಧಾರಿ ಸಾವು – 8 ಕ್ಕೇರಿದ ಸಾವಿನ ಸಂಖ್ಯೆ

    ಮಗು ಮತ್ತು ಪತ್ನಿಯ ಸಾವಿನ ಸುದ್ದಿ ತಿಳಿ ಪತಿ ಮಲ್ಲೇಶಿ ಆಸ್ಪತ್ರೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದು, ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ.

     

    ಕಿಮ್ಸ್‌ ವೈದ್ಯರು ಹೇಳಿದ್ದೇನು?
    ಈ ಬಗ್ಗೆ ಮಾತನಾಡಿದ ಕಿಮ್ಸ್ ನಿರ್ದೇಶಕ ಎಸ್ ಎಫ್ ಕಮ್ಮಾರ, ಬೆಳಗಾವಿಯಿಂದ ಕಿಮ್ಸ್ ಆಸ್ಪತ್ರೆ ಬಂದಾಗಲೇ ಗರ್ಭಿಣಿ ರಾಧಿಕಾ ಆರೋಗ್ಯ ಸ್ಥಿತಿ ಚಿಂತಾಜನಕವಾಗಿತ್ತು. ಬಿಪಿ, ನಾಡಿಮಿಡಿತ ಇರಲಿಲ್ಲ, ರಾಧಿಕಾ ಅವರಿಗೆ ಪ್ರಜ್ಞೆಯೇ ಇರಲಿಲ್ಲ. ಹೊಟ್ಟೆಯಲ್ಲಿ ಮಗು ಮೃತಪಟ್ಟು ಬಹಳಷ್ಟು ಸಮಯವಾಗಿತ್ತು. ಆದರೆ ನಮ್ಮ ವೈದ್ಯರು ಸಕಾಲದಲ್ಲಿ ದಾಖಲಿಸಿಕೊಂಡು ಚಿಕಿತ್ಸೆ ನೀಡಿದ್ದರು. ರಾಧಿಕಾ ಅವರಿಗೆ ಪ್ರಜ್ಞೆ ಬಂದಾಗ ಗರ್ಭದಿಂದ ಮಗು ಹೊರ ತೆಗೆಯುವ ಆಲೋಚನೆ ಇತ್ತು. ಆದರೆ ಅವರ ಆರೋಗ್ಯ ಚೇತರಿಕೆ ಆಗಲೇ ಇಲ್ಲ. ಇಂದು ಬೆಳಗ್ಗೆ 11 ಗಂಟೆ ರಾಧಿಕಾ ಸಾವನ್ನಪ್ಪಿದ್ದಾರೆ. ಇದರಿಂದ ಮನನೊಂದು ಆಕೆ ಪತಿ ಮಲ್ಲೇಶಿ ಆತ್ಮಹತ್ಯೆ ಪ್ರಯತ್ನ ಮಾಡಿದ್ದು ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ. ಅವರಿಗೆ ಕಿಮ್ಸ್ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

  • ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಹೆರಿಗೆಗೆ ಗರ್ಭಿಣಿಯರ ಹಿಂದೇಟು – ದಾಖಲಾತಿ ಪ್ರಮಾಣ ಅರ್ಧಕರ್ಧ ಇಳಿಕೆ

    ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಹೆರಿಗೆಗೆ ಗರ್ಭಿಣಿಯರ ಹಿಂದೇಟು – ದಾಖಲಾತಿ ಪ್ರಮಾಣ ಅರ್ಧಕರ್ಧ ಇಳಿಕೆ

    – ಖಾಸಗಿ ಆಸ್ಪತ್ರೆಗಳತ್ತ ಮುಖ ಮಾಡಿದ ಕುಟುಂಬಸ್ಥರು
    – ಸರಣಿ ಸಾವಿನಿಂದ ಜಿಲ್ಲಾಸ್ಪತ್ರೆಗೆ ಬಂದಿದೆ ಕಪ್ಪು ಚುಕ್ಕೆ

    ಬಳ್ಳಾರಿ: ಬಾಣಂತಿಯರ ಸರಣಿ ಸಾವಿನ ಪ್ರಕರಣ (Maternal Deaths Case) ಬೆಳಕಿಗೆ ಬಂದ ಬೆನ್ನಲ್ಲೇ ಜಿಲ್ಲಾಸ್ಪತ್ರೆಯಲ್ಲಿ (District Hospital) ಹೆರಿಗೆ ಮಾಡಿಸಿಕೊಳ್ಳಲು ಗರ್ಭಿಣಿಯರು (Pregnant Women) ಹಿಂದೇಟು ಹಾಕಿದ್ದು, ದಾಖಲಾಗುವ ಗರ್ಭಿಣಿಯರ ಪ್ರಮಾಣ ಅರ್ಧಕರ್ಧ ಇಳಿದಿದೆ.

    ನವೆಂಬರ್ 10 ರಂದು ಸಿಸೇರಿಯನ್‌ ಮೂಲಕ ಹೆರಿಗೆಯಾದ ಬಳಿಕ ಐವಿ ಫ್ಲೂಯಿಡ್‌ ಗ್ಲೂಕೋಸ್ ರಿಯಾಕ್ಷನ್‌ನಿಂದಾಗಿ ಐವರು ಬಾಣಂತಿಯರು ಮೃತಪಟ್ಟಿದ್ದರು. ಹೆರಿಗೆ ಬಂದಾಗ ಆರೋಗ್ಯವಾಗಿಯೇ ಇದ್ದ ಲಲಿತಾ, ನಂದಿನಿ, ರೋಜಾ, ಮುಸ್ಕಾನ್ ಹಾಗೂ ಸುಮಯಾ ಏಕಾಏಕಿ ಅಸ್ವಸ್ಥರಾಗಿ ಚಿಕಿತ್ಸೆ ಫಲಿಸದೇ ಉಸಿರು ಚೆಲ್ಲಿದ್ದರು.

    ಈ ಪ್ರಕರಣ ದೇಶಾದ್ಯಂತ ವರದಿಯಾದ ನಂತರ ಈಗ ಹೆರಿಗೆಗೆ ಬರಲು ಗರ್ಭಿಣಿಯರು ಭಯ ಪಡುತ್ತಿದ್ದಾರೆ. ಗರ್ಭಿಣಿಯರಲ್ಲದೇ ಕುಟುಂಬಸ್ಥರೂ ಸರ್ಕಾರಿ ಆಸ್ಪತ್ರೆ ಕಡೆ ಮುಖ ಮಾಡದೇ ಖಾಸಗಿ ಆಸ್ಪತ್ರೆಗಳ ಮೊರೆ ಹೋಗುತ್ತಿರುವುದರಿಂದ ಹೆರಿಗೆ ಮಾಡಿಸಿಕೊಳ್ಳಲು ದಾಖಲಾಗುವವರ ಸಂಖ್ಯೆಯಲ್ಲಿ ಅರ್ಧಕ್ಕರ್ಧ ಇಳಿಕೆಯಾಗಿದೆ. ಇದನ್ನೂ ಓದಿ: ಕೊಲ್ಲಾಪುರದ ಕಾಳಮ್ಮವಾಡಿ ಡ್ಯಾಂನಿಂದ ಭಾರೀ ಪ್ರಮಾಣದ ನೀರು ಸೋರಿಕೆ

    ಎಷ್ಟು ಇಳಿಕೆಯಾಗಿದೆ?
    ಕಳೆದ ಮೂರು ತಿಂಗಳ ಅಂಕಿ ಅಂಶ ನೋಡುವುದಾದರೆ ಸೆಪ್ಟೆಂಬರ್‌ನಲ್ಲಿ 585, ಅಕ್ಟೋಬರ್‌ನಲ್ಲಿ 577 ಗರ್ಭಿಣಿಯರು ಹೆರಿಗೆಗೆ ದಾಖಲಾಗಿದ್ದರು. ನವೆಂಬರ್ ತಿಂಗಳಲ್ಲಿ ಬಾಣಂತಿಯರ ಸರಣಿ ಸಾವಾಗಿದ್ದರಿಂದ ಹೆರಿಗೆಗೆ ದಾಖಲಾಗುವ ಗರ್ಭಿಣಿಯರ ಸಂಖ್ಯೆ 289ಕ್ಕೆ ಕುಸಿದಿದೆ.

    ಪ್ರತೀ ವರ್ಷ ಜಿಲ್ಲಾಸ್ಪತ್ರೆಯಲ್ಲಿ ಸರಿ ಸುಮಾರು ಆರು ಸಾವಿರ ಹೆರಿಗೆಗಳು ಆಗುತ್ತಿದ್ದು ಪ್ರತಿ ತಿಂಗಳು ಕನಿಷ್ಟ 500 ಮಂದಿಯಾದರೂ ದಾಖಲಾಗುತ್ತಿದ್ದರು. ಆದರೆ ಒಂದೇ ತಿಂಗಳಿನಲ್ಲಿ ಇಷ್ಟೊಂದು ಸಂಖ್ಯೆ ಇಳಿಕೆಯಾಗಿದ್ದು ಇದೇ ಮೊದಲು.

    ಬಾಣಂತಿಯರ ಸರಣಿ ಸಾವು, ಆಸುರಕ್ಷತೆ, ವೈದ್ಯರ ನಿರ್ಲಕ್ಷ್ಯ ಭಾವನೆ, ಕಳಪೆ ಔಷಧ, ಅವಧಿ ಮುಗಿದಿರುವ ಔಷಧಿಗಳ ಬಳಕೆ ಬಗ್ಗೆ ಅನುಮಾನ ಎದ್ದಿರುವ ಕಾರಣ ಬಾಣಂತಿಯರು ಇಲ್ಲಿ ಹೆರಿಗೆ ಮಾಡಿಸಲು ಹಿಂದೇಟು ಹಾಕುತ್ತಿದ್ದಾರೆ.

    ಈ ಹಿಂದೆ ಬಳ್ಳಾರಿ ಜಿಲ್ಲಾಸ್ಪತ್ರೆ ಸುರಕ್ಷಿತ ಹೆರಿಗೆ, ಸ್ವಚ್ಚತೆ, ಗುಣಮಟ್ಟದ ಚಿಕಿತ್ಸೆಗಾಗಿ ಪ್ರಶಸ್ತಿ ಪಡೆದಿತ್ತು. ಈಗ ಬಾಣಂತಿಯರ ಸರಣಿ ಸಾವಿನಿಂದ ಆಸ್ಪತ್ರೆಗೆ ಕಪ್ಪು ಚುಕ್ಕೆ ಬಂದಿದೆ. ಆರೋಗ್ಯ ಇಲಾಖೆ ಕೂಡಲೇ ಎಚ್ಚೆತ್ತುಕೊಂಡು, ಸರ್ಕಾರಿ ಆಸ್ಪತ್ರೆಗಳ ಮೇಲೆ ಜನರಿಗಿರುವ ಅಪನಂಬಿಕೆ ದೂರ ಮಾಡುವ ಕೆಲಸ ನಡೆಸಬೇಕಿದೆ.

  • ಬಳ್ಳಾರಿಯಲ್ಲಿ ಬಾಣಂತಿಯರ ಸಾವು ಮಾಸುವ ಮುನ್ನವೇ ಹೆರಿಗೆ ಬಳಿಕ ಮಗು ಸಾವು!

    ಬಳ್ಳಾರಿಯಲ್ಲಿ ಬಾಣಂತಿಯರ ಸಾವು ಮಾಸುವ ಮುನ್ನವೇ ಹೆರಿಗೆ ಬಳಿಕ ಮಗು ಸಾವು!

    ಬಳ್ಳಾರಿ: ಬಾಣಂತಿಯರ ಸರಣಿ ಸಾವಿನ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಆಘಾತಕಾರಿ ಘಟನೆ ಬೆಳಕಿಗೆ ಬಂದಿದ್ದು, ಬಿಮ್ಸ್ ಆಸ್ಪತ್ರೆಯಲ್ಲಿ (BIMS) ಹೆರಿಗೆ ಬಳಿಕ ಮಗು ಮೃತಪಟ್ಟಿದೆ.

    ಸಿರಗುಪ್ಪ ತಾಲೂಕಿನ ಸಿರಗೇರಿ ಗ್ರಾಮದ ಬಾಣಂತಿ (Pregnant Women) ಗಂಗೋತ್ರಿ ನಾರ್ಮಲ್ ಹೆರಿಗೆ ಮಾಡಿಸಲು ದಾಖಲಾಗಿದ್ದರು. ಆದರೆ ವೈದ್ಯರು ಸಿಸೇರಿಯನ್‌ ಮಾಡಿದ್ದಾರೆ. ಹೆರಿಗೆ ಬಳಿಕ ಆರಂಭದಲ್ಲಿ ಗಂಡು ಮಗು ಆರೋಗ್ಯವಾಗಿದೆ ಎಂದಿದ್ದರು. ಇದನ್ನೂ ಓದಿ: ಬಳ್ಳಾರಿಯಲ್ಲಿ ಬಾಣಂತಿಯರ ಸರಣಿ ಸಾವು – ಜಿಲ್ಲಾ ಉಸ್ತುವಾರಿ ಸಚಿವರು ನಾಪತ್ತೆ: ಜನಾಕ್ರೋಶ

     

    ಗಂಡು ಮಗುವಿನ ಜನನವಾಯಿತು ಎಂದು ಗಂಗೋತ್ರಿ ಕುಟುಂಬಸ್ಥರು ಸಂತಸ ಪಟ್ಟಿದ್ದರು. ಆದರೆ ಮಧ್ಯಾಹ್ನ 12 ಗಂಟೆಯ ಬಳಿಕ ಮಗು (Baby) ಏಕಾಏಕಿ ಸಾವನ್ನಪ್ಪಿದೆ ಎಂದು ವೈದ್ಯರು ಹೇಳಿದ್ದಾರೆ.

    ಈಗ ವೈದ್ಯರ ನಿರ್ಲಕ್ಷ್ಯಕ್ಕೆ ಮಗು ಸಾವಾಗಿದೆ ಅಂತಾ ಪೋಷಕರು ಆರೋಪಿಸಿದ್ದಾರೆ. ವೈದ್ಯರು ಅವೈಜ್ಞಾನಿಕವಾಗಿ ಹೆರಿಗೆ ಮಾಡಿದ್ದಕ್ಕೆ ಮಗು ಸಾವಾಗಿದೆ ಅಂತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಗರ್ಭದಲ್ಲಿ ಮಲ ತಿಂದು ಮಗುವಿಗೆ ಶ್ವಾಸಕೋಶದ ತೊಂದರೆಯಾಗಿತ್ತು. ಇದೇ ಕಾರಣಕ್ಕೆ ಮಗು ಸಾವನ್ನಪ್ಪಿದೆ ಅಂತಾ ವೈದ್ಯರು ಸಮಜಾಯಿಷಿ ನೀಡಿದ್ದಾರೆ. ಬಳ್ಳಾರಿ ಜಿಲ್ಲಾಸ್ಪತ್ರೆ ಹಾಗೂ ಬಿಮ್ಸ್ ಆಸ್ಪತ್ರೆಯಲ್ಲಿ ಈ ರೀತಿಯ ದುರ್ಘಟನೆಗಳು ಪದೇ ಪದೇ ನಡೆಯುತ್ತಿರುವ ಕಾರಣ ಜಿಲ್ಲೆಯ ಜನ ಆತಂಕಕ್ಕೆ ಒಳಗಾಗಿದ್ದಾರೆ.

     

  • ಅಪ್ರಾಪ್ತ ಬಾಲಕಿ ಜನ್ಮವಿತ್ತ ನವಜಾತ ಶಿಶು ಹತ್ಯೆ ಕೇಸ್‌ – ಮೂವರು ಆರೋಪಿಗಳು ಅಂದರ್

    ಅಪ್ರಾಪ್ತ ಬಾಲಕಿ ಜನ್ಮವಿತ್ತ ನವಜಾತ ಶಿಶು ಹತ್ಯೆ ಕೇಸ್‌ – ಮೂವರು ಆರೋಪಿಗಳು ಅಂದರ್

    ಮಡಿಕೇರಿ: ಕೊಡಗು (Kodagu) ಜಿಲ್ಲೆಯಲ್ಲಿ ಸಂಚಲನ ಸೃಷ್ಟಿಸಿದ್ದ, ಅಪ್ರಾಪ್ತ ಬಾಲಕಿ ಜನ್ಮ ನೀಡಿದ್ದ ಮಗುವನ್ನು ಹತ್ಯೆಗೈದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮೃತ ನವಜಾತ ಶಿಶುವಿನ ತಾಯಿ, ಅಜ್ಜಿ ಹಾಗೂ ಅಜ್ಜ ಬಂಧನಕ್ಕೊಳಗಾದವರು.

    ಕಳೆದ ಅಕ್ಟೋಬರ್​ 17ರಂದು ಮಡಿಕೇರಿ (Madikeri) ತಾಲೂಕಿನ ನಾಪೋಕ್ಲು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 14 ವರ್ಷದ ಬಾಲಕಿಯೊಬ್ಬಳು ರಹಸ್ಯವಾಗಿ ಮಗುವಿಗೆ ಜನ್ಮ ನೀಡಿದ್ದಳು. ಆದರೆ ಪ್ರಸೂತಿಯಾಗಿ 4 ದಿನ ಕಳೆದರೂ ನವಜಾತ ಶಿಶು ಕಂಡುಬಂದಿರಲಿಲ್ಲ. ಆಸ್ಪತ್ರೆಯಿಂದ ಆ ಶಿಶು ನಾಪತ್ತೆಯಾಗಿತ್ತು. ಇದನ್ನೂ ಓದಿ: Champions Trophy | ಪಾಕ್‌ ಆಕ್ರಮಿತ ಕಾಶ್ಮೀರ ಪ್ರವಾಸಕ್ಕೆ ಬಿಸಿಸಿಐ ಆಕ್ಷೇಪ, ನೋ ಎಂದ ಐಸಿಸಿ

    ಒಂದು ವಾರ ಕಳೆದ ನಂತರ ನವಜಾತ ಶಿಶುವಿನ ಮೃತದೇಹ ಗುಂಡಿಯಲ್ಲಿ ಪತ್ತೆಯಾಗಿತ್ತು. ಮೊದಲಿಗೆ ಹೆತ್ತಾಕೆಯೇ ಮಗುವನ್ನು ನಾಪತ್ತೆ ಮಾಡಿರಬಹುದೆಂಬ ಶಂಕೆ ವ್ಯಕ್ತವಾಗಿತ್ತು. ನಂತರ ಅಜ್ಜಿಯೇ ಕೊಂದು ಹೂತಿಟ್ಟಿದ್ದ ಶಂಕೆ ವ್ಯಕ್ತವಾದಾಗ ಶಿಶು ಜನಿಸಿಯೇ ಇಲ್ಲ‌ ಎಂದು ಅಜ್ಜಿ ವಾದಿಸಿದ್ದರು. ಆದರೆ ಗುಂಡಿಯಲ್ಲಿ ನವಜಾತ ಶಿಸುವಿನ ಮೃತದೇಹ ದೊರೆತಿದ್ದರಿಂದ ತನಿಖೆ ಮುಂದುವರೆದು ಅದರ ತಾಯಿ, ಅಜ್ಜಿ ಹಾಗೂ ಅಜ್ಜನ ವಿರುದ್ಧ ಕೊಲೆ‌ ಪ್ರಕರಣ‌ ದಾಖಲಾಗಿದೆ. ಇದನ್ನೂ ಓದಿ: ವಂಚಕರ ಜಾಲಕ್ಕೆ ಬಿದ್ದು ಡಿಜಿಟಲ್‌ ಅರೆಸ್ಟ್‌ ಆಗಿ 10 ಕೋಟಿ ಕಳೆದುಕೊಂಡ ನಿವೃತ್ತ ಎಂಜಿನಿಯರ್‌

    ತಾನು ಗರ್ಭಿಣಿ ಆಗಲು 13 ವರ್ಷದ ಬಾಲಕ ಕಾರಣ ಎಂದು ಬಾಲಕಿ ಆರೋಪಿಸಿದ್ದಳು. ಹೀಗಾಗಿ ಬಾಲಕನ ವಿರುದ್ಧ ಕೂಡ ಎಫ್ಐಆರ್ ದಾಖಲಾಗಿತ್ತು. ಆದರೆ ಶಿಶುವಿನ ಡಿಎಸ್​ಎ ಪರೀಕ್ಷೆ ನಡೆಸುವಂತೆ ಆತನ ಪೋಷಕರು ಆಗ್ರಹಿಸಿದ್ದರು. ಇದೀಗ ತನಿಖೆ ಮಾಡುವ ಸಂದರ್ಭಗಳಲ್ಲಿ ಬಾಲಕಿಯ ಪೋಷಕರೇ ಮಗುವನ್ನು ಹತ್ಯೆ ಮಾಡಿರಬೇಕು ಎಂದು ಪೊಲೀಸರು ಅನುಮಾನಗೊಂಡು ಇದೀಗ ಅರೇಸ್ಟ್ ಮಾಡಿ ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದಾರೆ. ಇದನ್ನೂ ಓದಿ: 50 ಸಾವಿರ ಲಂಚ ಸ್ವೀಕಾರ – ಭಟ್ಕಳ ಪುರಸಭಾ ಮುಖ್ಯಾಧಿಕಾರಿ ಲೋಕಾಯುಕ್ತ ಬಲೆಗೆ 

  • ಬಾಗಲಕೋಟೆ| ಅಂಗನವಾಡಿಗಳಿಗೆ ಮೂರು ತಿಂಗಳಿನಿಂದ ಸರಬರಾಜು ಆಗುತ್ತಿಲ್ಲ ಆಹಾರ!

    ಬಾಗಲಕೋಟೆ| ಅಂಗನವಾಡಿಗಳಿಗೆ ಮೂರು ತಿಂಗಳಿನಿಂದ ಸರಬರಾಜು ಆಗುತ್ತಿಲ್ಲ ಆಹಾರ!

    ಬಾಗಲಕೋಟೆ: ಹುನಗುಂದ‌ (Hungund) ಹಾಗೂ ಇಳಕಲ್ (Ilkal) ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಅಂಗನವಾಡಿಗಳಿಗೆ (Anganwadi) ಮೂರು ತಿಂಗಳಿನಿಂದ ಆಹಾರ (Food) ಸರಬರಾಜು ಆಗುತ್ತಿಲ್ಲ ಎಂಬ ಆರೋಪ ಬಂದಿದೆ.

    ಅಂಗನವಾಡಿ ‌ಮಕ್ಕಳಿಗೆ ಹಾಗೂ ಗರ್ಭಿಣಿಯರಿಗೆ ಸಮರ್ಪಕ ಪೌಷ್ಟಿಕ ಆಹಾರ ಸಿಗುತ್ತಿಲ್ಲ ಎಂದು ಆ ತಾಲೂಕಿನ ಗರ್ಭಿಣಿಯರು ಆರೋಪ ಮಾಡಿದ್ದಾರೆ.

    ಹುನಗುಂದ, ಇಳಕಲ್ ತಾಲ್ಲೂಕಿನ ವ್ಯಾಪ್ತಿಯಲ್ಲಿ ಒಟ್ಟು 422 ಅಂಗನವಾಡಿ ಕೇಂದ್ರಗಳಿದ್ದು, ಈ ಅಂಗನವಾಡಿಗಳಿಗೆ ಜುಲೈ, ಆಗಸ್ಟ್‌, ಸೆಪ್ಟೆಂಬರ್ ತಿಂಗಳಿನಲ್ಲಿ ಸಮರ್ಪಕ ಆಹಾರ ಸಿಕ್ಕಿಲ್ಲ ಎಂದು ದೂರಿದ್ದಾರೆ. ದಾಸ್ತಾನು ಅಂಗನವಾಡಿಗಳಿಗೆ ವಿತರಣೆಯಾಗದೇ ಮೂರು ತಿಂಗಳಿನಿಂದ ರೇಷನ್ ಮಹಿಳಾ ಸಪ್ಲಿಮೆಂಟರಿ ನ್ಯೂಟ್ರಿಷನ್ ಪ್ರೊಡಕ್ಟ್‌ ಸೆಂಟರ್‌ನಲ್ಲೇ (MSPTC) ಉಳಿದಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ. ಇದನ್ನೂ ಓದಿ: ಹಾವೇರಿ| 3 ತಿಂಗಳಿನಿಂದ ಪಾವತಿಯಾಗಿಲ್ಲ ಅಂಗನವಾಡಿ ಟೀಚರ್‌ಗಳ ಸಂಬಳ

    ಎಂಎಸ್‌ಪಿಟಿಸಿಯಿಂದ ಎಲ್ಲಾ ಅಂಗನವಾಡಿಗೆ ರೇಷನ್ ಸಾಗಿಸಬೇಕಾಗಿತ್ತು. ಆದರೆ ದಾಸ್ತಾನು ಯಾವ ಕಾರಣಕ್ಕೆ ಹಂಚಿಕೆಯಾಗಿಲ್ಲ ಎಂದು ಜನರು ಪ್ರಶ್ನೆ ಮಾಡುತ್ತಿದ್ದಾರೆ. ಜನರ ಆರೋಪವನ್ನು ಗಮನಿಸಿದಾಗ ಇಲ್ಲಿ ಮಹಿಳಾ‌ ಮತ್ತು ಮಕ್ಕಳ‌ ಕಲ್ಯಾಣ ಇಲಾಖೆ ಅಧಿಕಾರಿಗಳ ಬೇಜವಾಬ್ದಾರಿ ಎದ್ದು‌ಕಾಣುತ್ತಿದೆ.

    ಈ ವಿಚಾರದ ಬಗ್ಗೆ ಜಿಲ್ಲಾ ಪಂಚಾಯತ್ ಸಿಇಓ ಶಶಿಧರ್ ಕುರೇರ್ ಅವರನ್ನು ಕೇಳಿದರೆ ಎಲ್ಲಾ ಅಂಗನವಾಡಿಗಳಿಗೆ ಎರಡು ತಿಂಗಳ ದಾಸ್ತಾನು ಸರಬರಾಜು ಮಾಡಲಾಗಿದೆ. ಆದರೆ ಈ ವಿಷಯ ಈಗ ನನ್ನ ಗಮನಕ್ಕೆ ಬಂದಿದ್ದು, ಈ ಕುರಿತು ಕೂಡಲೇ ಇಲಾಖೆ ಅಧಿಕಾರಿಗಳು ಹಾಗೂ ಆ ಭಾಗದ ಸಿಡಿಪಿಓ ಅವರಿಗೆ ವರದಿ ಕೇಳಿದ್ದೇನೆ. ಅಕ್ರಮವಾಗಿ ಸಂಗ್ರಹಿಸಿ ಇಟ್ಟಿದ್ದರೆ ಅವರ ವಿರುದ್ದ ಖಂಡಿತ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ್ದಾರೆ.

     

  • ಶಿವಮೊಗ್ಗದಲ್ಲಿ ಮತ್ತೊಂದು ಝಿಕಾ ವೈರಸ್‌ ಕೇಸ್‌ ಪತ್ತೆ – ಡೆಂಗ್ಯೂ ನಡುವೆ ಹೆಚ್ಚಾಯ್ತು ಆತಂಕ!

    ಶಿವಮೊಗ್ಗದಲ್ಲಿ ಮತ್ತೊಂದು ಝಿಕಾ ವೈರಸ್‌ ಕೇಸ್‌ ಪತ್ತೆ – ಡೆಂಗ್ಯೂ ನಡುವೆ ಹೆಚ್ಚಾಯ್ತು ಆತಂಕ!

    ಶಿವಮೊಗ್ಗ: ಸದ್ಯ ರಾಜ್ಯದಲ್ಲಿ ಡೆಂಗ್ಯೂ ಜ್ವರದ ನಡುವೆ ಝಿಕಾ ವೈರಸ್‌ (Zika virus) ಆತಂಕ ಹೆಚ್ಚಾಗಿದೆ. ಶಿವಮೊಗ್ಗದಲ್ಲಿ ಝಿಕಾ ವೈರಸ್‌ಗೆ ವೃದ್ಧರೊಬ್ಬರು  ಬಲಿಯಾದ ಬೆನ್ನಲ್ಲೇ ಮತ್ತೊಂದು ಕೇಸ್‌ ಪತ್ತೆಯಾಗಿದೆ.

    ಶಿವಮೊಗ್ಗದ (Shivamogga) ಗಾಂಧಿನಗರದಲ್ಲಿ 74 ವರ್ಷದ ವ್ಯಕ್ತಿ ಝಿಕಾ ವೈರಸ್‌ಗೆ ಬಲಿಯಾದ ಬೆನ್ನಲ್ಲೇ ಸಾಗರದ ಯುವಕನಲ್ಲಿ ವೈರಸ್‌ ಪತ್ತೆಯಾದ ಘಟನೆ ಬೆಳಕಿಗೆ ಬಂದಿದೆ. ಯುವಕ ಯಾವುದೇ ಪ್ರಯಾಣ ಹಿನ್ನೆಲೆ ಹೊಂದಿಲ್ಲ ಎಂದು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ. ಸದ್ಯ ಝಿಕಾ ವೈರಸ್‌ ಕಾಣಿಸಿಕೊಂಡ ಬೆನ್ನಲ್ಲೇ ಆರೋಗ್ಯಾಧಿಕಾರಿಗಳು (Health Officer) ಫುಲ್‌ ಅಲರ್ಟ್‌ ಆಗಿದ್ದು, ಜಾಗೃತಿ ಮೂಡಿಸಲು ಮುಂದಾಗಿದ್ದಾರೆ. ಇದನ್ನೂ ಓದಿ: ಹೈ-ಫ್ಲೈಯರ್ಸ್ ಸ್ಕೇಟಿಂಗ್ ಕ್ಲಬ್ ವಾರ್ಷಿಕೋತ್ಸವ: ಸ್ಕೇಟರ್‌ಗಳಿಗೆ ಚಿನ್ನ, ಬೆಳ್ಳಿ ನಾಣ್ಯ ನೀಡಿ ಗೌರವ

    ಮಹಾರಾಷ್ಟ್ರದಲ್ಲಿ 9 ಕೇಸ್‌ ಪತ್ತೆ:
    ಮತ್ತೊಂದೆಡೆ ಮಹಾರಾಷ್ಟ್ರದಲ್ಲಿ (Maharashtra) 9 ಝಿಕಾ ವೈರಸ್‌ ಕೇಸ್‌ ಪತ್ತೆಯಾಗಿದೆ. ಈ ಪೈಕಿ ಐವರು ಗರ್ಭಿಣಿಯರಲ್ಲಿ ವೈರಸ್‌ ಪತ್ತೆಯಾಗಿದೆ. ಈ ಬೆನ್ನಲ್ಲೇ ಹೆಚ್ಚಿನ ನಿಗಾ ವಹಿಸಿದ್ದು, ಇನ್ನೂ 68 ಗರ್ಭಿಣಿಯರ ಮಾದರಿಗಳನ್ನು ರಾಷ್ಟ್ರೀಯ ವೈರಾಲಜಿ ಸಂಸ್ಥೆಗೆ ಪರೀಕ್ಷೆಗೆ ಕಳುಹಿಸಲಾಗಿದೆ ಪುಣೆ ಮುನ್ಸಿಪಲ್ ಕಾರ್ಪೊರೇಷನ್ (ಪಿಎಂಸಿ) ಸಹಾಯಕ ವೈದ್ಯಾಧಿಕಾರಿ ಡಾ.ರಾಜೇಶ್ ದಿಘೆ ತಿಳಿಸಿದ್ದಾರೆ. ಇದನ್ನೂ ಓದಿ: ಶವಸಂಸ್ಕಾರಕ್ಕೆ ತೆರಳಿದ್ದ ವೇಳೆ ಹೆಜ್ಜೇನು ದಾಳಿ – 42 ಮಂದಿಗೆ ಗಾಯ, 19 ಜನ ಆಸ್ಪತ್ರೆಗೆ

    ಝಿಕಾ ವೈರಸ್ ರೋಗ ಲಕ್ಷಣಗಳು: ಕೆಲ ದಿನಗಳ ಹಿಂದೆಯಷ್ಟೇ ಕೇರಳದ ಕೋಝಿಕೋಡ್‌ನಲ್ಲಿ ಪತ್ತೆಯಾಗಿದ್ದ ಝಿಕಾ ವೈರಸ್ ಇದೀಗ ಚಿಕ್ಕಬಳ್ಳಾಪುರದಲ್ಲಿ ಪತ್ತೆಯಾಗಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಈ ವೈರಸ್‌ ಜ್ವರ, ತಲೆನೋವು, ತುರಿಕೆ, ಕಣ್ಣಿನ ಬಣ್ಣ ಬದಲಾವಣೆ, ಮೈ ಕೈ ನೋವು ಲಕ್ಷಣಗಳನ್ನು ಹೊಂದಿದೆ. ಇದನ್ನೂ ಓದಿ: ಎಕ್ಸ್‌ಪ್ರೆಸ್ ವೇಯಲ್ಲಿ ತಡೆಗೋಡೆಗೆ ಡಿಕ್ಕಿ ಹೊಡೆದು ಕಾರು ಪಲ್ಟಿ – ಚಾಲಕ ಗಂಭೀರ

  • ಕಾಲೇಜಿನಲ್ಲೇ ಹೆಣ್ಣು ಮಗುವಿಗೆ ಜನ್ಮವಿತ್ತ ಅಪ್ರಾಪ್ತೆ – ಮಗು ಕರುಣಿಸಿದ ಭೂಪನಿಗಾಗಿ ಹುಡುಕಾಟ!

    ಕಾಲೇಜಿನಲ್ಲೇ ಹೆಣ್ಣು ಮಗುವಿಗೆ ಜನ್ಮವಿತ್ತ ಅಪ್ರಾಪ್ತೆ – ಮಗು ಕರುಣಿಸಿದ ಭೂಪನಿಗಾಗಿ ಹುಡುಕಾಟ!

    ಕೋಲಾರ: ಅಪ್ರಾಪ್ತೆಯೊಬ್ಬಳು ಕಾಲೇಜಿನಲ್ಲೇ ಮಗುವಿಗೆ ಜನ್ಮ ನೀಡಿರುವ ಘಟನೆ ಕೋಲಾರ ಹೊರವಲಯದಲ್ಲಿರುವ ಖಾಸಗಿ ಕಾಲೇಜಿನಲ್ಲಿ (Kolara Private College) ನಡೆದಿದೆ.

    ಪ್ರಥಮ ಪಿಯುಸಿ ವಿದ್ಯಾರ್ಥಿನಿ (PUC Student) ಕಾಲೇಜು ಶೌಚಾಲಯದಲ್ಲಿ ಹೆಣ್ಣು ಮಗುವಿಗೆ ಅಪ್ರಾಪ್ತೆ ಜನ್ಮ ನೀಡಿದ್ದಾಳೆ. ಈ ಸಂಭಂಧ ಪ್ರಕರಣ ದಾಖಲಿಸಿಕೊಂಡಿರುವ ಕೋಲಾರ ಮಹಿಳಾ ಪೊಲೀಸರು (Kolara Women Police) ಬಾಲಕಿ ಸ್ಥಿತಿಗೆ ಕಾರಣನಾದ ಭೂಪನಿಗಾಗಿ ಹುಡುಕಾಟ ನಡೆಸಿದ್ದಾರೆ. ಇದನ್ನೂ ಓದಿ: ಹಂಪಿ ವಿರೂಪಾಕ್ಷ ಸನ್ನಿಧಿಯಲ್ಲಿ ಸೆಟ್ಟೇರಿತು ರಾಮ್ ಚರಣ್ ನಿರ್ಮಾಣದ ‘ದಿ ಇಂಡಿಯಾ ಹೌಸ್’ ಸಿನಿಮಾ

    ಏನಿದು ಘಟನೆ?
    ಪೊಲೀಸರಿಗೆ ಸಿಕ್ಕ ಪ್ರಾಥಮಿಕ ಮಾಹಿತಿ ಪ್ರಕಾರ, ಬಾಲಕಿಯು ಯುವಕನೊಂದಿಗೆ ಪ್ರೀತಿಯಲ್ಲಿದ್ದಳು. ಆದ್ರೆ ಆತ ಅದೇ ಕಾಲೇಜಿನ ಯುವಕನಾ ಅಥವಾ ಹೊರಗಿನವನಾ ಎಂಬುದು ಸದ್ಯಕ್ಕೆ ತಿಳಿದುಬಂದಿಲ್ಲ. ಬಾಲಕಿ ಸ್ಥಿತಿ ಕಾರಣನಾದ ಯುವಕನಿಗಾಗಿ ಹುಟುಕಾಟ ನಡೆಸಿದ್ದೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಬಾರ್ಬಡೋಸ್‌ನಲ್ಲೇ ಸಿಲುಕಿದ ಟೀಂ ಇಂಡಿಯಾ – ಜಿಂಬಾಬ್ವೆ ಸರಣಿಗೆ ಸುದರ್ಶನ್‌, ರಾಣಾ, ಜಿತೇಶ್‌ ಆಯ್ಕೆ!

    ಮಂಗಳವಾರ ಶೌಚಾಲಯಕ್ಕೆ ತೆರಳಿದಾಗ ಬಾಲಕಿ ಅಲ್ಲಿಯೇ ಗಂಡುಮಗುವಿಗೆ ಜನ್ಮ ನೀಡಿದ್ದಾಳೆ. ಸದ್ಯ ಬಾಲಕಿಯನ್ನ ಆರ್.ಎಲ್.ಜಾಲಪ್ಪ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದ್ರೆ ಇಷ್ಟು ದಿನ ಯಾರಿಗೂ ಗೊತ್ತಿರಲಿಲ್ಲವೇ? ಅಥವಾ ಸ್ನೇಹಿತರಿಗೆ ಗೊತ್ತಿದ್ದೂ ವಿಚಾರ ಮುಚ್ಚಿಟ್ಟಿದ್ದರಾ? ಅನ್ನೋ ಬಗ್ಗೆಯೂ ತನಿಖೆ ನಡೆಯುತ್ತಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಇದನ್ನೂ ಓದಿ: 17% ಭಾರತೀಯರ ಬ್ಯಾಂಕಿಂಗ್ ಪಾಸ್‌ವರ್ಡ್ ಅಸುರಕ್ಷಿತವಾಗಿವೆ – ಸಮೀಕ್ಷೆ

  • ಸಂಧಾನಕ್ಕೆ ಹೋಗಿದ್ದ ಗರ್ಭಿಣಿ ಮೇಲೆ ಗ್ಯಾಂಗ್‌ ರೇಪ್‌; ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ ದುರುಳರು!

    – ಪತಿ ಅತ್ಯಾಚಾರ ಪ್ರಕರಣವನ್ನು ಸಂಧಾನ ಮಾಡಲು ಹೋಗಿದ್ದ ಮಹಿಳೆ

    ಭೋಪಾಲ್‌: ಸಂಧಾನ ಮಾಡಲು ತೆರಳಿದ್ದ ಗರ್ಭಿಣಿಯ (Pregnant Women) ಮೇಲೆ ಮೂವರು ವ್ಯಕ್ತಿಗಳು ಸಾಮೂಹಿಕ ಅತ್ಯಾಚಾರ ಎಸಗಿ, ಬೆಂಕಿ ಹಚ್ಚಿ ಹತ್ಯೆಗೈಯಲು ಯತ್ನಿಸಿದ ಭೀಕರ ಘಟನೆ ಮಧ್ಯಪ್ರದೇಶದ (Madhya Pradesh) ಮೊರೇನಾ ಜಿಲ್ಲೆಯಲ್ಲಿ ನಡೆದಿದೆ.

    38 ವರ್ಷದ ಸಂತ್ರಸ್ಥೆಯು ತನ್ನ ಪತಿ ಮಾಡಿದ ಅತ್ಯಾಚಾರಕ್ಕೆ ಮಾತನಾಡಿ ಸಂಧಾನ ನಡೆಸಲು ಆರೋಪಿಗಳ ಮನೆಗೆ ತೆರಳಿದ್ದರು. ಈ ವೇಳೆ ಅಲ್ಲಿನ ಮೂವರು ಆರೋಪಿಗಳು ಅತ್ಯಾಚಾರ ಎಸಗಿದ್ದಾರೆ.

    ಬಳಿಕ ಸಂತ್ರಸ್ಥ ಮಹಿಳೆ ಪತಿಯ ಮೇಲೆ ಮೇಲೆ ಆತ್ಯಾಚಾರದ ಆರೋಪದ ಮಾಡಿದ್ದ ಮಹಿಳೆ, ಗರ್ಭಿಣಿ ಮೇಲೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ್ದಾಳೆ. ಮಹಿಳೆಗೆ ಶೇ.80 ರಷ್ಟು ಸುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ಸದ್ದಿಲ್ಲದೇ ಬಸ್‌ ಹತ್ತಿ, ಮೊಬೈಲ್‌ ಎಗರಿಸಿಕೊಂಡು ಹೋಗ್ತಿದ್ರು; 120 ಮೊಬೈಲ್‌ಗಳೊಂದಿಗೆ ಕಳ್ಳಿಯರ ಗ್ಯಾಂಗ್‌ ಸಿಕ್ಕಿಬಿದ್ದಿದ್ದು ಹೇಗೆ?

    ಸದ್ಯ ಅತ್ಯಾಚಾರ ಪ್ರಕರಣದಲ್ಲಿ ಸದ್ಯ ಸಂತ್ರಸ್ತೆಯ ಪತಿಯನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಸ್ಥಳೀಯ ಮ್ಯಾಜಿಸ್ಟ್ರೇಟ್‌ ಬಳಿ ಸಂಸ್ತ್ರಸ್ತೆ ಹೇಳಿಕೆ ದಾಖಲಿಸಿದ್ದಾರೆ. ಪೊಲೀಸರು ಈವರೆಗೆ ಹೇಳಿಕೆ ದಾಖಲಿಸಿಲ್ಲ, ಆದ್ರೆ ತನಿಖೆ ಮುಂದುವರಿಸುತ್ತಿರುವುದಾತಿ ತಿಳಿಸಿದ್ದಾರೆ. ಇದನ್ನೂ ಓದಿ: ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿ ಆತ್ಮಹತ್ಯೆ – ವಾರ್ಡನ್, ತಾಲೂಕಾಧಿಕಾರಿ ವಿರುದ್ಧ ದೂರು ದಾಖಲು

    ಮಾಹಿತಿ ಪ್ರಕಾರ, ಸಂತ್ರಸ್ತೆಯ ಪತಿ ಸುರೇಶ್‌ ಸಂಖ್ವಾರ್‌ ಮೊರೆನಾ ಜಿಲ್ಲೆಯ ಅಂಬಾಹ್‌ ಪಟ್ಟಣದ ಚಾಂದ್‌ಪುರದ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದ. ಆಕೆ ಮದುವೆ ವಿಷಯ ಪ್ರಸ್ತಾಪಿಸಿದಾಗ ಸುರೇಶ್‌ ಅದನ್ನು ನಿರಾಕರಿಸಿದ್ದ. ಹಾಗಾಗಿ ಮಹಿಳೆ ಪತಿ ಮೇಲೆ ಅತ್ಯಾಚಾರ ಆರೋಪ ಹೊರಿಸಿದ್ದಳು. ಈ ಪ್ರಕರಣವನ್ನು ಸಂತ್ರಸ್ತೆ ಸಂಧಾನ ಮಾಡಲು ಹೋದಾಗಲೇ ದುರುಳರು ಆಕೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.