Tag: Pregnant Cow

  • ಗರ್ಭಿಣಿ ಹಸುವಿನ ಮೇಲೆ ರೇಪ್ – ವಿಕೃತ ಕಾಮಿ ಅರೆಸ್ಟ್

    ಗರ್ಭಿಣಿ ಹಸುವಿನ ಮೇಲೆ ರೇಪ್ – ವಿಕೃತ ಕಾಮಿ ಅರೆಸ್ಟ್

    ಕೋಲ್ಕತ್ತಾ: ಗರ್ಭಿಣಿ ಹಸುವಿನ ಮೇಲೆ ಅತ್ಯಾಚಾರ ಎಸಗಿದ 29 ವರ್ಷದ ವ್ಯಕ್ತಿಯನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ.

    ದಕ್ಷಿಣ 24 ಪರಗಣ ಜಿಲ್ಲೆಯ ನಮ್‍ಖಾನಾ ಬ್ಲಾಕ್‍ನ ಉತ್ತರ ಚಂದನ್‍ಪಿಡಿ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಆರೋಪಿಯನ್ನು ಪ್ರದ್ಯುತ್ ಭೂಯಾ ಎಂದು ಗುರುತಿಸಲಾಗಿದೆ. ಇದೀಗ ಗರ್ಭಿಣಿ ಹಸುವಿನ ಮಾಲೀಕರು ನೀಡಿದ ದೂರಿನ ಮೇರೆಗೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ವಿಜಯಪುರದಲ್ಲಿ ಭೀಕರ ಅಪಘಾತ – ಬಸ್‍ಗೆ 2 ಕಾರು ಡಿಕ್ಕಿ, ಮೂವರು ಸಾವು

    ಕೆಲವು ದಿನಗಳ ಹಿಂದೆ ನೆರೆಹೊರೆಯಲ್ಲಿ ವಾಸಿಸುತ್ತಿದ್ದ ಪ್ರದ್ಯುತ್, ತಮ್ಮ ಮನೆಯ ಹಿಂದೆ ಇರುವ ದನದ ಕೊಟ್ಟಿಗೆಗೆ ನುಗ್ಗಿ ತಮ್ಮ ಹಸುವಿನ ಮೇಲೆ “ಕ್ರೂರವಾಗಿ ಅತ್ಯಾಚಾರ” ಎಸಗಿದ್ದಾನೆ. ಮಧ್ಯರಾತ್ರಿ ಸುಮಾರಿಗೆ ಅತ್ಯಾಚಾರಕ್ಕೊಳಗಾದ ಹಸು ಅತಿಯಾದ ರಕ್ತಸ್ರಾವದಿಂದ ಸಾವನ್ನಪ್ಪಿದೆ ಎಂದು ಉತ್ತರ ಚಂದನಪಿಡಿ ನಿವಾಸಿ ಆರತಿ ಭೂಯಾ ಮತ್ತು ಅವರ ಕುಟುಂಬಸ್ಥರು ಆರೋಪಿಸಿದ್ದಾರೆ.

    ಸದ್ಯ ಆರೋಪಿ ಪ್ರದ್ಯುತ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 377ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ನಂತರ ಮಂಗಳವಾರ ಕಾಕದ್ವೀಪ ಉಪವಿಭಾಗೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಇದನ್ನೂ ಓದಿ: ಸ್ವಾಮೀಜಿಗಳ ಲೈಂಗಿಕ ದೌರ್ಜನ ಆರೋಪದ ಕೇಸನ್ನು ಸಿಬಿಐಗೆ ಒಪ್ಪಿಸಿ: ಹಿಂದುಸ್ತಾನ್ ಜನತಾ ಪಕ್ಷ ಒತ್ತಾಯ

    ಈಗಾಗಲೇ ಪ್ರದ್ಯುತ್ ವಿರುದ್ಧ ಲೆಕ್ಕವಿಲ್ಲದಷ್ಟು ಆರೋಪಗಳಿವೆ. ಈತ ಈ ಹಿಂದೆ ಮೇಕೆಗಳು, ವಾಹನಗಳು ಮತ್ತು ಹೊಲಗಳಲ್ಲಿ ತರಕಾರಿಗಳನ್ನು ಕಳ್ಳತನ ಮಾಡಿದ್ದನು ಎಂದು ಚಂದನಪಿಡಿ ಗ್ರಾಮದ ನಿವಾಸಿಯೊಬ್ಬರು ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಆನೆ ಆಯ್ತು, ಈಗ ಗರ್ಭಿಣಿ ಹಸುವಿಗೆ ಸ್ಫೋಟಕ ತಿನ್ನಿಸಿದ ಕೀಚಕರು

    ಆನೆ ಆಯ್ತು, ಈಗ ಗರ್ಭಿಣಿ ಹಸುವಿಗೆ ಸ್ಫೋಟಕ ತಿನ್ನಿಸಿದ ಕೀಚಕರು

    ಶಿಮ್ಲಾ: ಕೇರಳದಲ್ಲಿ ಸ್ಫೋಟಕ ತಿನ್ನಿಸಿ ಗರ್ಭಿಣಿ ಆನೆಯನ್ನು ಕೊಂದ ಅಮಾನವೀಯ ಘಟನೆ ಮಾಸುವ ಮುನ್ನವೇ ಹಿಮಾಚಲ ಪ್ರದೇಶದಲ್ಲಿ ಗರ್ಭಿಣಿ ಹಸುವಿಗೆ ಸ್ಫೋಟಕ ತಿನ್ನಿಸಿರುವ ಘಟನೆ ಬೆಳಕಿಗೆ ಬಂದಿದೆ.

    ಹಿಮಾಚಲ ಪ್ರದೇಶದ ಬಿಲಾಸ್ಪುರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಸ್ಫೋಟಕ ಸೇವಿಸಿ ಹಸುವಿನ ಬಾಯಿ ಸಂಪೂರ್ಣ ಬ್ಲಾಸ್ಟ್ ಆಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಕೇರಳದಲ್ಲಿ ನಡೆದ ಘಟನೆಯ ಬಳಿಕ ಮಾನವನ ಕ್ರೌರ್ಯವನ್ನು ತೋರಿಸುವ ಇನ್ನೊಂದು ಘಟನೆ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಸಖತ್ ವೈರಲ್ ಆದ ನಂತರ ಈ ಘಟನೆ ಬಿಲಾಸ್ಪುರ್ ಜಿಲ್ಲೆಯ ಜಂಡುಟ್ಟಾ ಪ್ರದೇಶದಲ್ಲಿ ನಡೆದಿದೆ ಎಂದು ತಿಳಿದು ಬಂದಿದೆ. ಈ ವಿಚಾರವಾಗಿ ಮಾತನಾಡಿರುವ ಹಸುವಿನ ಮಾಲೀಕರು, ಗೋದಿ ಹಿಟ್ಟಿನಲ್ಲಿ ಸ್ಫೋಟಕವನ್ನು ತುಂಬಿ ಹಸುವಿಗೆ ತಿನ್ನಿಸಲಾಗಿದೆ. ಇದು ನರೆಮನೆಯವರು ಮಾಡಿರುವ ಕೃತ್ಯ ಎಂದು ಆರೋಪಿಸಿದ್ದಾರೆ. ಜೊತೆಗೆ ಅಪರಾಧ ಬೆಳಕಿಗೆ ಬಂದಾಗ ಅವರು ಪರಾರಿಯಾಗಿದ್ದಾರೆ ಎಂದು ಹೇಳಿದ್ದಾರೆ.

    ಈ ವಿಚಾರವಾಗಿ ಈಗಾಗಲೇ ಪೊಲೀಸರು ದೂರು ದಾಖಲಿಸಿಕೊಂಡಿದ್ದು, ಇಂತಹ ಘಟನೆಗಳನ್ನು ಸಹಿಸುವುದಿಲ್ಲ ಎಂದು ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಜೈರಾಮ್ ಠಾಕೂರ್ ಹೇಳಿದ್ದಾರೆ. ಈ ಬಗ್ಗೆ ತನಿಖೆ ನಡೆಸುವಂತೆ ಪೊಲೀಸರಿಗೆ ಆದೇಶಿಸಿದ್ದು, ಪ್ರಕರಣದಲ್ಲಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಸಿಎಂ ಭರವಸೆ ನೀಡಿದ್ದಾರೆ.