Tag: Pregnancy

  • ಒಂದಲ್ಲ, ಎರಡಲ್ಲ, 7 ಮಕ್ಕಳಿಗೆ ಜನ್ಮಕೊಟ್ಟ ಮಹಿಳೆ

    ಒಂದಲ್ಲ, ಎರಡಲ್ಲ, 7 ಮಕ್ಕಳಿಗೆ ಜನ್ಮಕೊಟ್ಟ ಮಹಿಳೆ

    ಇಸ್ಲಾಮಾಬಾದ್: ಒಂದಲ್ಲ, ಎರಡಲ್ಲ, ಏಳು ಮಕ್ಕಳಿಗೆ ಮಹಿಳೆಯೊಬ್ಬಳು ಜನ್ಮ ನೀಡಿರುವ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ.

    ಅಲ್ಲಿನ ಖೈಬರ್ ಫಖ್ತಂಖ್ವಾ ಅಬೋಟಾಬಾದ್‍ನ ಖಾಸಗಿ ಆಸ್ಪತ್ರೆಯಲ್ಲಿ ಮಹಿಳೆ ಏಕಕಾಲದಲ್ಲಿ 7 ಮಕ್ಕಳಿಗೆ ಜನ್ಮ ನೀಡಿದ್ದಾರೆ. ವೈದ್ಯರು 5 ಮಕ್ಕಳು ಮಹಿಳೆಯ ಹೊಟ್ಟೆಯಲ್ಲಿದ್ದಾರೆ ಎಂದು ಹೇಳಿದರು. ಆದರೆ ಹೆರಿಗೆ ವೇಳೆ 7 ಮಕ್ಕಳಿಗೆ ಜನ್ಮ ನೀಡಿದ್ದಾರೆ. ಸದ್ಯ ತಾಯಿ ಹಾಗೂ 7 ಮಕ್ಕಳು ಆರೋಗ್ಯವಾಗಿದ್ದಾರೆಂದು ತಿಳಿದುಬಂದಿದೆ. ಇದನ್ನು ಓದಿ: ರಾಹುಲ್ ಗಾಂಧಿ ಡ್ರಗ್ ಪೆಡ್ಲರ್: ಕಟೀಲ್

    8 ತಿಂಗಳ ಗರ್ಭಿಣಿಯಾಗಿದ್ದ ಮಹಿಳೆ ಶನಿವಾರ ಮೊದಲ ಬಾರಿಗೆ ಈ ಆಸ್ಪತ್ರೆಗೆ ಬಂದಿದ್ದರು. ಆ ಸಮಯದಲ್ಲಿ ಆಕೆಯ ಗರ್ಭದಲ್ಲಿ ಐದು ಮಕ್ಕಳಿದ್ದವು ಎಂದು ತಿಳಿದುಬಂತು. ಮಹಿಳೆಯ ರಕ್ತದೊತ್ತಡ ತುಂಬಾ ಹೆಚ್ಚಾಗಿತ್ತು. ಅವಳ ಹೊಟ್ಟೆಯೂ ತುಂಬಾ ಊದಿಕೊಂಡಿತ್ತು. ಆಪರೇಷನ್ ಆಯ್ಕೆಯೂ ಅಪಾಯಕಾರಿ, ಏಕೆಂದರೆ ಮಹಿಳೆ ಈ ಹಿಂದೆ ಎರಡು ಆಪರೇಷನ್‍ಗೆ ಒಳಗಾಗಿದ್ದಳು. ಆಕೆಯ ಹಳೆಯ ಹೊಲಿಗೆಗಳು ಮತ್ತು ಗರ್ಭಾಶಯಕ್ಕೆ ಹಾನಿಯಾಗಬಹುದೆಂಬ ಭಯವೂ ಇತ್ತು. ಹೀಗಾಗಿ ವೈದ್ಯರ ತಂಡವು ಒಂದು ಗಂಟೆಗೂ ಹೆಚ್ಚು ಕಾಲ ಚಿಕಿತ್ಸೆ ನೀಡಿ ನಂತರ ಮಾಡಿಸಿದರು. ಸದ್ಯ ಮಹಿಳೆಯ ICUನಲ್ಲಿ ಇದ್ದು, ಎಲ್ಲಾ ಏಳು ಮಕ್ಕಳು ಮತ್ತು ಮಹಿಳೆ ಆರೋಗ್ಯವಾಗಿದ್ದಾರೆಂದು ತಿಳಿದುಬಂದಿದೆ.  ಇದನ್ನು ಓದಿ:  ನಳಿನ್ ಕುಮಾರ್ ಕಟೀಲ್ ಒಬ್ಬ ಅವಿವೇಕಿ, ಮಾನಸಿಕ ಅಸ್ವಸ್ಥ: ದಿನೇಶ್ ಗುಂಡೂರಾವ್

    ಯಾರ್ ಮೊಹಮ್ಮದ್ ಅವರ ಪತ್ನಿಗೆ ಹೆರಿಗೆ ನೋವು ಕಾಣಿಸಿಕೊಂಡ ಕಾರಣ ತಕ್ಷಣ ಅಲ್ಲಿನ ಜಿನ್ನಾ ಅಂತರಾಷ್ಟ್ರಿಯ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಈ ವೇಳೆ 7 ಮಕ್ಕಳಲ್ಲಿ ನಾಲ್ಕು ಗಂಡು ಮಕ್ಕಳು ಮತ್ತು ಮೂರು ಹೆಣ್ಣು ಮಕ್ಕಳಿಗೆ ಮೊಹಮ್ಮದ್ ಪತ್ನಿ ಜನ್ಮ ನೀಡಿದ್ದಾರೆ.

  • ತಾತ ಆಗಲಿದ್ದಾರೆ ಎಚ್‍ಡಿಕೆ – ಸಂಭ್ರಮದಲ್ಲಿ ಗೌಡರ ಕುಟುಂಬ

    ತಾತ ಆಗಲಿದ್ದಾರೆ ಎಚ್‍ಡಿಕೆ – ಸಂಭ್ರಮದಲ್ಲಿ ಗೌಡರ ಕುಟುಂಬ

    ಬೆಂಗಳೂರು: ಮಾಜಿ ಸಿಎಂ ಕುಮಾರಸ್ವಾಮಿಯವರ ನಿವಾಸಕ್ಕೆ ಶೀಘ್ರವೇ ಹೊಸ ಅತಿಥಿಯೊಬ್ಬರು ಬರಲಿದ್ದಾರೆ. ಅಷ್ಟಕ್ಕೂ ಯಾರಪ್ಪಾ ಅದು ಅಂತ ಯೋಚಿಸ್ತಿದ್ದೀರಾ? ಹೌದು ನಟ ನಿಖಿಲ್ ಕುಮಾರ್ ಸ್ವಾಮಿಯವರು ತಂದೆಯಾಗಲಿದ್ದಾರೆ.

    ಇಂದು ನಿಖಿಲ್ ಮನದರಸಿ ರೇವತಿಯವರ ಹುಟ್ಟುಹಬ್ಬವಿದ್ದು, ಪ್ರೀತಿಯ ಪತ್ನಿಗೆ ನಿಖಿಲ್ ಸೋಶಿಯಲ್ ಮೀಡಿಯಾ ಮೂಲಕ ವಿಶ್ ಮಾಡಿದ್ದರು. ಇದೀಗ ಮಾಜಿ ಸಿಎಂ ಕುಮಾರ ಸ್ವಾಮಿಯವರ ಸೊಸೆ ರೇವತಿಯವರು 5 ತಿಂಗಳ ಗರ್ಭಿಣಿಯಾಗಿದ್ದಾರೆ.

    ನಿಖಿಲ್- ರೇವತಿ ದಂಪತಿಗಳು ಅಪ್ಪ- ಅಮ್ಮ ಆಗುತ್ತಿರುವ ಸಂತಸದಲ್ಲಿದ್ದರೆ, ಈ ಸಿಹಿ ಸುದ್ದಿ ಕೇಳಿ ಇಡೀ ದೇವೇಗೌಡರ ಕುಟುಂಬ ಫುಲ್ ಖುಷ್ ಆಗಿದೆ. ಒಟ್ಟಾರೆ ನಿಖಿಲ್ ಕುಮಾರಸ್ವಾಮಿ ಪತ್ನಿ ರೇವತಿಯವರ ಹುಟ್ಟುಹಬ್ಬದ ದಿನದಂದೇ ಈ ವಿಚಾರ ರಿವೀಲ್ ಆಗಿರುವುದು ಅಭಿಮಾನಿಗೆ ಸಂತಸ ತರಿಸಿದೆ. ಇದನ್ನೂ ಓದಿ: ಹುಟ್ಟು ಹಬ್ಬದ ಶುಭಾಶಯಗಳು ಮೈ ಲವ್: ನಿಖಿಲ್ ಕುಮಾರಸ್ವಾಮಿ

  • ಗರ್ಭಿಣಿ, ರಂಜಾನ್ ಉಪವಾಸದಲ್ಲಿದ್ದರೂ ಕೋವಿಡ್ ರೋಗಿಗಳ ಸೇವೆ ನಿಲ್ಲಿಸಿಲ್ಲ

    ಗರ್ಭಿಣಿ, ರಂಜಾನ್ ಉಪವಾಸದಲ್ಲಿದ್ದರೂ ಕೋವಿಡ್ ರೋಗಿಗಳ ಸೇವೆ ನಿಲ್ಲಿಸಿಲ್ಲ

    ಗಾಂಧಿನಗರ: ಗರ್ಭಿಣಿ ನರ್ಸ್ ರಂಜಾನ್ ಉಪವಾಸದಲ್ಲಿದ್ದರು ಕೋವಿಡ್ ರೋಗಿಗಳ ಸೇವೆ ಸಲ್ಲಿಸುತ್ತಿರುವುದರ ಕುರಿತಾಗಿ ಸೋಶಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

    ನ್ಯಾನ್ಸಿ ಆಯೆಜಾ ಮಿಸ್ತ್ರಿ ಉಪವಾಸ ಮಾಡುತ್ತಲೇ ಗುಜರಾತ್‍ನ ಸೂರತ್‍ನ ಕೋವಿಡ್ ಆರೈಕೆ ಕೇಂದ್ರವೊಂದರಲ್ಲಿ ದಣಿವೆಯಿಲ್ಲದೆ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಪ್ರತಿದಿನ ಎಂಟರಿಂದ ಹತ್ತು ಗಂಟೆಗಳ ಕಾಲ, ಮಿಸ್ತ್ರಿ ಆಲ್ಥಾನ್ ಸಮುದಾಯ ಭವನದಲ್ಲಿ ಅಟಲ್ ಕೋವಿಡ್ – 19 ಕೇಂದ್ರದಲ್ಲಿ ರೋಗಿಗಳಿಗೆ ಸಹಾಯ ಮಾಡುತ್ತಿದ್ದಾರೆ.

    ನಾಲ್ಕು ತಿಂಗಳ ಗರ್ಭಿಣಿಯಾಗಿರುವ ನ್ಯಾನ್ಸಿ ಅವರು ಉಪವಾಸವನ್ನು ಮಾಡುತ್ತಾ ಕೊರೊನಾ ರೋಗಿಗಳು ಸೇವೆಯನ್ನು ಮಾಡುತ್ತಿದ್ದಾರೆ. ನರ್ಸ್‍ನ ಈ ಕಾರ್ಯಕ್ಕೆ ಎಲ್ಲಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಕಳೆದ ವರ್ಷವೂ ಕೊರೊನಾ ಸಂದರ್ಭದಲ್ಲಿ ಅವರು ಕೆಲಸ ಮಾಡಿದ್ದರು. ಆದರೆ ಈ ವರ್ಷ ಗರ್ಭಿಣಿಯಾಗಿದ್ದರೂ ತಮ್ಮ ಕರ್ತವ್ಯ ಮಾಡುವುದನ್ನು ನಿಲ್ಲಿಸಿಲ್ಲ. ಇದನ್ನು ಓದಿವೀಡಿಯೋ ವೈರಲ್-ಗರ್ಭಿಣಿ ಅಧಿಕಾರಿಯಿಂದ ಜನರಿಗೆ ಕೋವಿಡ್ ಪಾಠ

    ನಾನು ದಾದಿಯಾಗಿ ನನ್ನ ಕರ್ತವ್ಯವನ್ನು ಮಾಡುತ್ತಿದ್ದೇನೆ. ಜನರಿಗೆ ಸೇವೆ ಮಾಡುವುದನ್ನು ನಾನು ಪ್ರಾರ್ಥನೆ ಎಂದು ಪರಿಗಣಿಸುತ್ತೇನೆ ಎಂದು ನ್ಯಾನ್ಸಿ ಆಯೆಜಾ ಮಿಸ್ತ್ರಿ ಹೇಳಿದ್ದಾರೆ.

  • ಮದ್ವೆ ಆಗೋದು ಹೇಳಿ ಸೆಕ್ಸ್- ಗರ್ಭಿಣಿಯಾಗ್ತಿದ್ದಂತೆ ಬಯಲಾಯ್ತು ಪ್ರೇಮಿಯ ಕರಾಳ ಮುಖ

    ಮದ್ವೆ ಆಗೋದು ಹೇಳಿ ಸೆಕ್ಸ್- ಗರ್ಭಿಣಿಯಾಗ್ತಿದ್ದಂತೆ ಬಯಲಾಯ್ತು ಪ್ರೇಮಿಯ ಕರಾಳ ಮುಖ

    – ಮತಾಂತರ, ಗರ್ಭಪಾತಕ್ಕೆ ಒತ್ತಡ, ಕಿರುಕುಳ
    – ವಿಚ್ಛೇದನ ಮಹಿಳೆಗೆ ಹಿಂದೂ ಅಂತ ಹೇಳಿಕೊಂಡಿದ್ದ ಪ್ರಿಯಕರ

    ಲಕ್ನೊ: ಉತ್ತರ ಪ್ರದೇಶದಲ್ಲಿ ಲವ್ ಜಿಹಾದ್ ಪ್ರಕರಣ ಬೆಳಕಿಗೆ ಬಂದಿದ್ದು, ನೊಂದ ಮಹಿಳೆ ನ್ಯಾಯಕ್ಕಾಗಿ ಮೊರೆ ಹೋಗಿದ್ದಾರೆ. ಯುವಕ ಪ್ರೀತಿಸುವಾಗ ತಾನೋರ್ವ ವಿಚ್ಛೇದಿತ ಮತ್ತು ಹಿಂದೂ ಅಂತ ಪರಿಚಯ ಮಾಡಿಕೊಂಡಿದ್ದನು. ಮಹಿಳೆ ಗರ್ಭಿಣಿ ಆಗುತ್ತಿದ್ದಂತೆ ನೀಚ ಪ್ರೇಮಿ ಮುಸ್ಲಿಂ ಅನ್ನೋ ವಿಚಾರ ಬೆಳಕಿಗೆ ಬಂದಿದೆ.

    ಉತ್ತರ ಪ್ರದೇಶದ ಬಾಗಪತ್ ಜಿಲ್ಲೆಯಲ್ಲಿ ಲವ್ ಜಿಹಾದ್ ಪ್ರಕರಣ ಬೆಳಕಿಗೆ ಬಂದಿದೆ. ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಆಗಿದ್ದ ಗಂಡನಿಂದ ದೂರವಾಗಿದ್ದ ಮಹಿಳೆಗೆ ವರ್ಷದ ಹಿಂದೆ ಯುವಕನೋರ್ವನ ಪರಿಚಯವಾಗಿತ್ತು. ಪರಿಚಿತನಾದವನು ತನ್ನನ್ನು ಅಕ್ಷ ಎಂದು ಹೇಳಿಕೊಂಡಿದ್ದನು.

    ಸುಳ್ಳು ಕಥೆ: ತಾನೋರ್ವ ಖಾಸಗಿ ಆಸ್ಪತ್ರೆಯ ವೈದ್ಯನಾಗಿದ್ದು, ಬಿಡುವಿನ ವೇಳೆ ಹರಿಯಾಣದ ಸಿನಿಮಾಗಳಲ್ಲಿ ನಟಿಸುತ್ತೇನೆ. ಪತ್ನಿಯಿಂದ ವಿಚ್ಛೇದನ ಪಡೆದುಕೊಂಡು ಮಗು ಸಹ ಇದೆ ಎಂದು ಕಥೆ ಕಟ್ಟಿದ್ದನು. ಮಗುವಿನ ಆರೈಕೆಗಾಗಿ ಮತ್ತೊಂದು ಮದುವೆ ಆಗಲು ನಿರ್ಧರಿಸಿರುವ ಕುರಿತು ಹೇಳಿಕೊಂಡಿದ್ದನು. ಮಹಿಳೆಯ ಜೊತೆಗಿನ ಸ್ನೇಹ ಪ್ರೇಮವಾಗಿ ಬದಲಾಗಿತ್ತು. ಮಹಿಳೆ ಜೊತೆ ಹಲವು ಬಾರಿ ದೇವಸ್ಥಾನಕ್ಕೂ ತೆರಳಿ ಪೂಜೆಯಲ್ಲಿ ಭಾಗಿಯಾಗಿದ್ದನು. ಇದನ್ನೂ ಓದಿ: ಯುವತಿ ಕೊಲೆ ಪ್ರಕರಣಕ್ಕೆ ಟ್ವಿಸ್ಟ್- ಮತಾಂತರಕ್ಕೆ ಒಪ್ಪದ್ದಕ್ಕೆ ಕೊಲೆ, ಲವ್ ಜಿಹಾದ್ ಎಂದ ಪೋಷಕರು

    ಕೆಲ ದಿನಗಳ ಒಡನಾಟದ ಬಳಿಕ ಮಹಿಳೆಗೆ ನಿನ್ನನ್ನು ಮದುವೆ ಆಗುತ್ತೇನೆ ಎಂದು ನಂಬಿಸಿ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ಗರ್ಭಿಣಿಯಾಗುತ್ತಿದ್ದಂತೆ ತನ್ನನ್ನು ಮದುವೆ ಆಗುವಂತೆ ಮಹಿಳೆ ಅಕ್ಷ್ ಬಳಿ ಕೇಳಿಕೊಂಡಿದ್ದಳು. ಮದುವೆ ಪ್ರಸ್ತಾಪ ಬಂದಾಗ ಆತನ ನಿಜವಾದ ಹೆಸರು ಅಕ್ರಂ ಖುರೇಷಿ ಎಂಬುವುದು ಗೊತ್ತಾಗಿದೆ. ಇದನ್ನೂ ಓದಿ: ಮೂವರು ಹೆಂಡ್ತೀರು, ನಾಲ್ವರು ಮಕ್ಕಳು – ಅಪ್ರಾಪ್ತೆಯ ರೇಪ್, ಪ್ರಕಟವಾಯ್ತು ಲವ್ ಜಿಹಾದ್ ಕೇಸ್

    ಮತಾಂತರಕ್ಕೆ ಒತ್ತಡ: ಮಹಿಳೆ ಮದುವೆ ಆಗುವಂತೆ ಹೇಳಿದಾಗ ಅಕ್ರಂ ಹಿಂದೂ ಧರ್ಮದಿಂದ ಇಸ್ಲಾಂಗೆ ಮತಾಂತರ ಆಗಬೇಕು ಮತ್ತು ಗರ್ಭಪಾತ ಮಾಡಿಸಿಕೊಳ್ಳಬೇಕೆಂದು ಕಂಡೀಷನ್ ಹಾಕಿದ್ದನು. ಆರೋಪಿ ಅಕ್ರಂನಿಗೆ ಈಗಾಗಲೇ ಮದುವೆಯಾಗಿದ್ದು ಎರಡು ಮಕ್ಕಳಿರುವ ವಿಚಾರ ಮಹಿಳೆಗೆ ತಿಳಿದಿದೆ. ಪತ್ನಿಯಿಂದಲೂ ಅಕ್ರಂ ಡಿವೋರ್ಸ್ ಪಡೆದುಕೊಂಡಿರಲಿಲ್ಲ. ಇದನ್ನೂ ಓದಿ: ಲವ್ ಜಿಹಾದ್ ಪ್ರಕರಣ ಸಾಬೀತು – ಪ್ರೀತಿಗಾಗಿ ಅಬುಧಾಬಿಗೆ ಹಾರಿದ ಕ್ರಿಶ್ಚಿಯನ್ ಯುವತಿ

    ವೀಡಿಯೋ ತೋರಿಸಿ ಬ್ಲ್ಯಾಕ್‍ಮೇಲ್: ಮಹಿಳೆ ಮತಾಂತರ ಮತ್ತು ಗರ್ಭಪಾತಕ್ಕೆ ಒಪ್ಪದಿದ್ದಾಗ ತನ್ನ ಜೊತೆಗೆ ಕಳೆದ ಕೆಲ ಖಾಸಗಿ ವೀಡಿಯೋಗಳನ್ನು ತೋರಿಸಿ ಬೆದರಿಕೆ ಹಾಕಿದ್ದನು. ಕೊನೆಗೆ ಅಕ್ರಂ ಬೆದರಿಸಿ ಮಹಿಳೆಯನ್ನ ಮತಾಂತರಗೊಳಿಸಿದ್ದನು. ನಿನ್ನನ್ನು ಜೊತೆಯಲ್ಲಿ ಇಟ್ಟುಕೊಳ್ಳಲು ಸಾಧ್ಯವಿಲ್ಲ ಎಂದು ವೀಡಿಯೋ ತೋರಿಸಿ ಬೆದರಿಸುತ್ತಿದ್ದನು ಅಂತ ಮಹಿಳೆ ಆರೋಪಿಸಿದ್ದಾರೆ. ಇದನ್ನೂ ಓದಿ: ಲವ್ ಜಿಹಾದ್ ಹೆಸರಲ್ಲಿ 46 ಯುವತಿಯರ ಮಾರಾಟ-ವೈರಲ್ ಫೋಟೋ ಸತ್ಯ

    ಮಹಿಳೆಗೆ ಅಕ್ರಂ ಒಂದು ವರ್ಷದಿಂದ ಕಿರುಕುಳ ನೀಡಿದ್ದಾನೆ. ಮಹಿಳೆ ಹಿಂದೂ ಧರ್ಮದಲ್ಲಿಯೇ ಇರಲು ಇಷ್ಟಪಟ್ಟಿದ್ದು, ಆತನಿಂದ ದೂರ ಬಂದಿದ್ದಾರೆ. ಮಹಿಳೆಯ ದೂರಿನನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಬೆಂಗ್ಳೂರಿನಲ್ಲಿ ಲವ್ ಜಿಹಾದ್- ಮುಸ್ಲಿಂ ಹುಡುಗನನ್ನು ವರಿಸಿದವಳು ಸೂಸೈಡ್

  • ಮದ್ವೆಯಾಗಿದ್ರೂ ಅನೈತಿಕ ಸಂಬಂಧ ಮುಂದುವರಿಸಲು ಹಠ – ಒರ್ವನ ಮೇಲಿನ ಸೇಡಿಗೆ ಜೋಡಿ ಕೊಲೆ

    ಮದ್ವೆಯಾಗಿದ್ರೂ ಅನೈತಿಕ ಸಂಬಂಧ ಮುಂದುವರಿಸಲು ಹಠ – ಒರ್ವನ ಮೇಲಿನ ಸೇಡಿಗೆ ಜೋಡಿ ಕೊಲೆ

    – ಮಹಿಳೆಯರ ಜೋಡಿ ಕೊಲೆ ಪ್ರಕರಣ ಭೇದಿಸಿದ ಪೊಲೀಸರು

    ಬೆಳಗಾವಿ: ವಾರದ ಹಿಂದೆ ಬೆಳಗಾವಿ ತಾಲೂಕಿನ ಮಚ್ಛೆ ಗ್ರಾಮದಲ್ಲಿ ನಡೆದಿದ್ದ ಮಹಿಳೆಯರ ಜೋಡಿ ಕೊಲೆ ಪ್ರಕರಣದ ಹಂತಕರನ್ನು ನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ: ಕಣ್ಣಿಗೆ ಖಾರದ ಪುಡಿ ಎರಚಿ, 5 ತಿಂಗ್ಳ ಗರ್ಭಿಣಿ ಸೇರಿ ಇಬ್ಬರು ಮಹಿಳೆಯರ ಕೊಲೆ

    ಮಚ್ಛೆಯ ಲಕ್ಷ್ಮಿ ನಗರದಲ್ಲಿ ವಾಯು ವಿಹಾರ ಮಾಡುತ್ತಿದ್ದ ರೋಹಿನಿ ಹುಲಮನಿ (21) ಹಾಗೂ ರಾಜಶ್ರೀ ಬನ್ನಾರ (21) ಅವರ ಬರ್ಬರ ಹತ್ಯೆಯಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮಹಿಳೆಯರ ಜೋಡಿ ಕೊಲೆ ಹಿಂದೆ ಮತ್ತೋರ್ವ ಮಹಿಳೆಯ ಸಂಚು ಹಾಗೂ ಅನೈತಿಕ ಸಂಬಂಧವೇ ಪ್ರಮುಖ ಕಾರಣ ಎಂಬುವುದು ತನಿಖೆಯಿಂದ ದೃಢಪಟ್ಟಿದೆ.

    ಬಂಧಿತರನ್ನು ಕಾಳ್ಯಾನಟ್ಟಿ ಗ್ರಾಮದ ಕಲ್ಪನಾ ಮಲ್ಲೇಶ್ (35), ಸುರತೆ ಗ್ರಾಮದ ಮಹೇಶ್ ಮೊನಪ್ಪ ನಾಯಿಕ (20), ಬೆಳಗುಂದಿ ಗ್ರಾಮದ ರಾಹುಲ್ ಮಾರುತಿ ಪಾಟೀಲ (19) ಗಣೇಪುರದ ರೋಹಿತ್ ವಡ್ಡರ (21) ಹಾಗೂ ಕಾಳ್ಯಾನಟ್ಟಿಯ ಶಾನೂರ ಬನ್ನಾರ (18) ಎಂದು ಗುರುತಿಸಲಾಗಿದೆ.

    ಕೊಲೆ ಪ್ರಕರಣದ ಮೊದಲನೇ ಆರೋಪಿ ಕಲ್ಪನಾ ಹಾಗೂ ಮೃತ ರೋಹಿನಿ ಪತಿ ಗಂಗಪ್ಪ ಹುಲಮನಿ ಮದುವೆಗೂ ಮುನ್ನ ಮಧ್ಯೆ ಅನೈತಿಕ ಸಂಬಂಧ ಇತ್ತು. ಬಳಿಕ ಕಲ್ಪನಾಳಿಂದ ದೂರವಾಗಿದ್ದ ಗಂಗಪ್ಪ ರೋಹಿನಿ ಜೊತೆಗೆ ವಿವಾಹವಾಗಿದ್ದನು. ಅಲ್ಲದೇ ರೋಹಿನಿ ಐದು ತಿಂಗಳ ಗರ್ಭಿಣಿ ಕೂಡ ಆಗಿದ್ದಳು. ಮದುವೆ ಮುಂಚೆ ಗಂಗಪ್ಪನಿಗೆ ಆರ್ಥಿಕ ಸಹಾಯ ಮಾಡುತ್ತಿದ್ದ ಕಲ್ಪನಾ ಅನೈತಿಕ ಸಂಬಂಧ ಬೆಳೆಸಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

    ರೋಹಿಣಿ ವಿವಾಹದ ಬಳಿಕ ಗಂಗಪ್ಪ ಊರು ಬಿಟ್ಟು ಮಚ್ಚೆ ಗ್ರಾಮಕ್ಕೆ ಬಂದು ನೆಲೆಸಿದ್ದನು. ಇದರಿಂದ ಗಂಗಪ್ಪ ದೂರವಾಗಿದ್ದನ್ನು ಆರೋಪಿ ಕಲ್ಪನಾಗೆ ಸಹಿಸಿಕೊಳ್ಳಲು ಆಗಿಲ್ಲ. ಈ ಹಿಂದೆ ನೀಡಲಾಗಿದ್ದ ಹಣ ಮರಳಿಸುವಂತೆ ಗಂಗಪ್ಪನಿಗೆ ಆರೋಪಿ ಕಲ್ಪನಾ ಸತಾಯಿಸುತ್ತಿದ್ದಳು. ಅಲ್ಲದೇ ಗಂಗಪ್ಪನ ಜೊತೆಯೇ ಸಂಬಂಧ ಮುಂದುವರಿಸಲು ಹಠಕ್ಕೆ ಬಿದ್ದ ಕಲ್ಪನಾ, ರೋಹಿನಿ ಕೊಲೆಗೆ ಸಂಚು ರೂಪಿಸಿದ್ದಾಳೆ. ಸಹೋದರಿ ಪುತ್ರ ಮಹೇಶ್ ಕೂಡ ಇದಕ್ಕೆ ಸಾಥ್ ನೀಡಿದ್ದಾನೆ. ಈ ವಿಷಯವನ್ನು ಮಹೇಶ್ ಸಂಬಂಧಿಕರ ಬಳಿ ಹೇಳಿ ಕೊಲೆಗೆ ಸಂಚು ರೂಪಿಸಿದ್ದಳು.

    ಅದರಂತೆಯೇ ಸೆಪ್ಟೆಂಬರ್ 26 ಸಂಜೆ ಸುಮಾರು 4 ಗಂಟೆಗೆ ಗರ್ಭಿಣಿ ರೋಹಿನಿ ಸ್ನೇಹಿತೆ ಜ್ಯೋತಿ ಜೊತೆಗೆ ಮಚ್ಛೆಯ ಲಕ್ಷ್ಮಿನಗರದಲ್ಲಿ ವಾಯುವಿಹಾರ ಮಾಡುತ್ತಿದ್ದಳು. ಆಗ ಬೈಕ್ ಮೇಲೆ ಬಂದ ನಾಲ್ವರು ಮೊದಲು ಇಬ್ಬರ ಕಣ್ಣಿಗೆ ಖಾರದ ಪುಡಿ ಎರಚಿದ್ದಾರೆ. ಮೊದಲು ರೋಹಿನಿಯನ್ನು ಹತ್ಯೆ ಮಾಡಿದ್ದಾರೆ. ಆದರೆ ಸಾಕ್ಷ್ಯ ನಾಶಪಡಿಸಲು ರಾಜಶ್ರೀ ಬನ್ನಾರಳನ್ನು ಹತ್ಯೆಗೈದಿದ್ದಾರೆ. ಈ ಪ್ರಕರಣ ದಾಖಲಿಸಿಕೊಂಡ ಬೆಳಗಾವಿ ಗ್ರಾಮೀಣ ಪೊಲೀಸರು ಒಂದೇ ವಾರದಲ್ಲಿ ಆರೋಪಿಗಳನ್ನ ಹಿಡಿದು ಜೈಲಿಗಟ್ಟಿದ್ದಾರೆ. ಆದರೆ ಗಂಗಪ್ಪ ಹಾಗೂ ಕಲ್ಪನಾ ಮಧ್ಯೆ ವಿವಾಹ ಪೂರ್ವ ಇದ್ದ ದೈಹಿಕ ಸಂಬಂಧ ಜೋಡಿ ಕೊಲೆಗೆ ಕಾರಣವಾಗಿದೆ ಎಂದು ಬೆಳಗಾವಿ ಡಿಸಿಪಿ ಘಟನೆಯ ವಿವರವನ್ನು ತಿಳಿಸಿದರು.

  • ಆರು ತಿಂಗಳ ಹಿಂದೆ ಮದ್ವೆ – ನೇಣು ಬಿಗಿದ ಸ್ಥಿತಿಯಲ್ಲಿ 3 ತಿಂಗ್ಳ ಗರ್ಭಿಣಿಯ ಶವ ಪತ್ತೆ

    ಆರು ತಿಂಗಳ ಹಿಂದೆ ಮದ್ವೆ – ನೇಣು ಬಿಗಿದ ಸ್ಥಿತಿಯಲ್ಲಿ 3 ತಿಂಗ್ಳ ಗರ್ಭಿಣಿಯ ಶವ ಪತ್ತೆ

    ದಾವಣಗೆರೆ: ಆರು ತಿಂಗಳ ಹಿಂದೆಯಷ್ಟೆ ಮದುವೆಯಾಗಿದ್ದ ಗೃಹಿಣಿಯ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಇರೋಡಿ ತಾಂಡಾದಲ್ಲಿ ನಡೆದಿದೆ.

    ಶಿಲ್ಪಾ (22) ಸಾವನ್ನಪ್ಪಿದ ಗೃಹಿಣಿ. ವರದಕ್ಷಿಣೆ ಕಿರುಕಳ ನೀಡಿ ಕೊಲೆ ಮಾಡಿದ್ದಾರೆ ಎಂದು ಮೃತ ಶಿಲ್ಪಾಳ ಕುಟುಂಬಸ್ಥರು ಆರೋಪಿಸಿದ್ದಾರೆ. ಮೃತ ಶಿಲ್ಪಾ ಕಳೆದ ಆರು ತಿಂಗಳ ಹಿಂದೆ ದೀಪಕ್ ಜೊತೆ ಮದುವೆಯಾಗಿದ್ದು, ಮೂರು ತಿಂಗಳ ಗರ್ಭಿಣಿ ಎಂದು ತಿಳಿದುಬಂದಿದೆ.

    ಭಾನುವಾರ ರಾತ್ರಿಯೇ ಶಿಲ್ಪಾ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಮೃತಪಟ್ಟಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಈ ಬಗ್ಗೆ ತಿಳಿದು ಶಿಲ್ಪಾ ಪೋಷಕರು ಬಂದು ಗಲಾಟೆ ಮಾಡಿದ್ದಾರೆ. ಜಗಳ ಮಾಡಿದ ನಂತರ ಶಿಲ್ಪಾ ಪತಿ ದೀಪಕ್ ಹಾಗೂ ಆತನ ಕುಟುಂಬದ ಸದಸ್ಯರು ನಾಪತ್ತೆಯಾಗಿದ್ದಾರೆ.

    ಪತಿ ಮತ್ತು ಆತನ ಮನೆಯವರೇ ಕೊಲೆ ಮಾಡಿ ನೇಣು ಹಾಕಿದ್ದಾರೆ ಎಂದು ಶಿಲ್ಪಾ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ. ಸದ್ಯಕ್ಕೆ ಈ ಕುರಿತು ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.

  • ಅಂತ್ಯಸಂಸ್ಕಾರಕ್ಕೆ ಬಿಡದ ಗ್ರಾಮಸ್ಥರು- ಗರ್ಭಿಣಿ ಶವವನ್ನ ಕಾಡಿನಲ್ಲಿ ಮರಕ್ಕೆ ಕಟ್ಟಿ ಹೋದ ಕುಟುಂಬಸ್ಥರು

    ಅಂತ್ಯಸಂಸ್ಕಾರಕ್ಕೆ ಬಿಡದ ಗ್ರಾಮಸ್ಥರು- ಗರ್ಭಿಣಿ ಶವವನ್ನ ಕಾಡಿನಲ್ಲಿ ಮರಕ್ಕೆ ಕಟ್ಟಿ ಹೋದ ಕುಟುಂಬಸ್ಥರು

    – ಪೊಲೀಸರಿಂದಲೇ ಗರ್ಭಿಣಿಯ ಅಂತ್ಯಕ್ರಿಯೆ

    ಹೈದರಾಬಾದ್: ಒಂಬತ್ತು ತಿಂಗಳ ಗರ್ಭಿಣಿ ಮೃತದೇಹವನ್ನು ಕುಟುಂಬದವರೇ ಅರಣ್ಯದಲ್ಲಿ ಮರವೊಂದಕ್ಕೆ ಕಟ್ಟಿ ಬಿಟ್ಟು ಹೋಗಿದ್ದ ಅಮಾನವೀಯ ಘಟನೆ ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿ ನಡೆದಿದೆ.

    ಲಾವಣ್ಯ ಮೃತ ಗರ್ಭಿಣಿ. ಸ್ಥಳೀಯರು ಗ್ರಾಮದ ಮಹಿಳೆಯ ಅಂತಿಮ ವಿಧಿ-ವಿಧಾನಗಳನ್ನು ಮಾಡಲು ತಡೆದಿದ್ದಾರೆ. ನಂತರ ಕುಟುಂಬದರು ರುದ್ರವರಂನ ಅರಣ್ಯ ಪ್ರದೇಶದಲ್ಲಿ ಆಕೆಯ ಶವವನ್ನು ಮರಕ್ಕೆ ಕಟ್ಟಿ ಬಿಟ್ಟು ಹೋಗಿದ್ದರು.

    ಏನಿದು ಪ್ರಕರಣ?
    ಮೃತ ಲಾವಣ್ಯ ಜಿಲ್ಲೆಯ ಬಿ.ನಾಗಿರೆಡ್ಡಿಪಲ್ಲೆ ಗ್ರಾಮದ ಧರ್ಮೇಂದ್ರನ ಜೊತೆ ಮದುವೆಯಾಗಿದ್ದಳು. ಈಕೆಯ ಪತಿ ದೈನಂದಿನ ಕೂಲಿ ಕಾರ್ಮಿಕನಾಗಿದ್ದು, ಲಾವಣ್ಯ ತುಂಬು ಗರ್ಣಿಣಿಯಾಗಿದ್ದು, ಹೆರಿಗೆಗಾಗಿ ಪಕ್ಕದ ಸಿರಿವೆಲ್ಲಾ ಮಂಡಲದಲ್ಲಿರುವ ತನ್ನ ತವರು ಮನೆಗೆ ಹೋಗಿದ್ದಳು. ಪೋಷಕರು ಶುಕ್ರವಾರ ಗರ್ಭಿಣಿಯನ್ನು ನಂದ್ಯಾಲ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಹೆರಿಗೆಯ ಸಮಯದಲ್ಲಿ ತೊಂದರೆಯಾಗಿ ಶನಿವಾರ ಲಾವಣ್ಯ ಮೃತಪಟ್ಟಿದ್ದಾಳೆ.

    ಆಕೆಯ ಅಂತ್ಯ ಸಂಸ್ಕಾರಕ್ಕಾಗಿ ಕುಟುಂಬದವರು ಮೃತದೇಹವನ್ನು ನಾಗಿರೆಡ್ಡಿಪಲ್ಲೆಗೆ ತೆಗೆದುಕೊಂಡು ಬಂದಿದ್ದಾರೆ. ಅಲ್ಲಿ ಆಚರಣೆಗಳ ಪ್ರಕಾರ ಮೃತದೇಹವನ್ನು ಸಮಾಧಿ ಮಾಡಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದರು. ಇದೇ ವೇಳೆ ಗ್ರಾಮಸ್ಥರು ಬಂದು ಗರ್ಭಿಣಿಯ ಅಂತಿಮ ವಿಧಿ-ವಿಧಾನಗಳನ್ನು ಗ್ರಾಮದಲ್ಲಿ ನೆರವೇರಿಸುವುದರಿಂದ ಗ್ರಾಮಕ್ಕೆ ಒಳಿತಾಗುವುದಿಲ್ಲ. ಅಲ್ಲದೇ ಶವಸಂಸ್ಕಾರ ಮಾಡಿದರೆ ಗ್ರಾಮಕ್ಕೆ ಮಳೆ ಬರುವುದಿಲ್ಲ ಎಂದು ಅಂತ್ಯಸಂಸ್ಕಾರ ಮಾಡಲು ಅವಕಾಶ ಮಾಡಿಕೊಡಲಿಲ್ಲ.

    ಕುಟುಂವದರು ಮನವಿ ಮಾಡಿಕೊಂಡು ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿದರು. ಕೊನೆಗೆ ಬೇರೆ ದಾರಿಯಿಲ್ಲದೆ ಕುಟುಂಬದವರು ಮೃತದೇಹವನ್ನು ಹತ್ತಿರದ ಅರಣ್ಯ ಪ್ರದೇಶಕ್ಕೆ ತೆಗೆದುಕೊಂಡು ಹೋಗಿ ಮರಕ್ಕೆ ಕಟ್ಟಿ ವಾಪಸ್ಸಾಗಿದ್ದಾರೆ. ಮರುದಿನ ಕಾಡಿನಲ್ಲಿ ಕಟ್ಟಿಗೆ ಸಂಗ್ರಹಿಸಲು ಹೋದಾಗ ನೆರೆಹೊರೆಯ ಗ್ರಾಮಸ್ಥರು ನೋಡಿ ರುದ್ರವರಂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದು ಪೊಲೀಸರು ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದ್ದಾರೆ.

    ವಿಚಾರಣೆಯ ನಂತರ ನಾವು ಮೃತ ಮಹಿಳೆಯ ಕುಟುಂಬದವರನ್ನು ಪತ್ತೆ ಹಚ್ಚಿದ್ದೇವೆ. ಗ್ರಾಮದಲ್ಲಿ ಮಹಿಳೆಯ ಅಂತ್ಯಕ್ರಿಯೆ ಮಾಡಲು ಗ್ರಾಮಸ್ಥರು ಅವಕಾಶ ನೀಡಲಿಲ್ಲ. ಹೀಗಾಗಿ ಕುಟುಂಬದರು ಕಾಡಿನಲ್ಲಿ ಮೃತದೇಹವನ್ನು ಮರಕ್ಕೆ ಕಟ್ಟಿ ಬಿಟ್ಟು ಹೋಗಿದ್ದಾರೆ. ನಾವು ಗ್ರಾಮಸ್ಥರ ಮನವೊಲಿಸಲು ಪ್ರಯತ್ನ ಮಾಡಿದೆವು ಎಂದು ಸಬ್ ಇನ್ಸ್ ಪೆಕ್ಟರ್ ರಾಮಮೋಹನ್ ರೆಡ್ಡಿ ತಿಳಿಸಿದರು.

    ಗ್ರಾಮಸ್ಥರು ಗ್ರಾಮದಲ್ಲಿ ಮಹಿಳೆಯ ಅಂತ್ಯಕ್ರಿಯೆ ಮಾಡಲು ಆಕ್ಷೇಪ ವ್ಯಕ್ತಪಡಿಸಿದರು. ಕೊನೆಗೆ ಪೊಲೀಸರೇ ಲಾವಣ್ಯ ಅಂತಿಮ ವಿಧಿ-ವಿಧಾನಗಳನ್ನು ಮಾಡಿದ್ದಾರೆ. ನಂತರ ಈ ಕುರಿತು 15 ಜನರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಕೊರೊನಾ ಸೋಂಕಿತ ಗರ್ಭಿಣಿಗೆ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ

    ಕೊರೊನಾ ಸೋಂಕಿತ ಗರ್ಭಿಣಿಗೆ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ

    – ಆರೋಗ್ಯವಂತ ಹೆಣ್ಣು ಮಗುವಿಗೆ ಜನ್ಮ ನೀಡಿದ ತಾಯಿ

    ಹುಬ್ಬಳ್ಳಿ: ಜಿಲ್ಲೆಯಲ್ಲಿ ಕೊರೊನಾ ಸೋಂಕಿತ ಗರ್ಭಿಣಿಗೆ ಶಸ್ತ್ರಚಿಕಿತ್ಸೆ ಮೂಲಕ ಯಶಸ್ವಿಯಾಗಿ ಹೆರಿಗೆ ಮಾಡಿಸಲಾಗಿದೆ.

    ಕೊರೊನಾ ಸೋಂಕು ಪಾಸಿಟಿವ್ ಇದ್ದ ಹುಬ್ಬಳ್ಳಿ ತಾಲೂಕು ಉಮಚಗಿ ಗ್ರಾಮದ 25 ವರ್ಷದ ತುಂಬು ಗರ್ಭಿಣಿಗೆ, 39 ವಾರಗಳು ಹಾಗೂ 04 ದಿನಗಳು ಪೂರ್ಣಗೊಂಡಿದ್ದರೂ ಸಹಜ ಹೆರಿಗೆ ಸಾಧ್ಯವಿಲ್ಲದ ಲಕ್ಷಣಗಳಿದ್ದವು. ಹೀಗಾಗಿ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡಿಸುವಲ್ಲಿ ಕಿಮ್ಸ್ ವೈದ್ಯರ ತಂಡ ಯಶಸ್ವಿಯಾಗಿದೆ.

    ಕಿಮ್ಸ್ ನಲ್ಲಿ ಇಂದು ಬೆಳಿಗ್ಗೆ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆಯಾಗಿದ್ದು, 3.5 ಕೆ.ಜಿ ತೂಕದ ಹೆಣ್ಣು ಮಗುವಿಗೆ ತಾಯಿ ಜನ್ಮ ನೀಡಿದ್ದಾಳೆ. ವಿಭಾಗದ ಮುಖ್ಯಸ್ಥೆ ಡಾ.ಕಸ್ತೂರಿ ಡೋಣಿಮಠ, ಶಸ್ತ್ರಚಿಕಿತ್ಸಕ ಡಾ.ವೈ.ಎಂ.ಕಬಾಡಿ, ಅರವಳಿಕೆ ತಜ್ಞೆ ಡಾ.ವೀಣಾ, ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳಾದ ಡಾ.ಅಕ್ಷತಾ ನಿಂಗನೂರೆ, ಡಾ.ಸಹನಾ, ಡಾ.ರೂಪಾ, ನರ್ಸಿಂಗ್ ವಿಭಾಗದ ಶ್ವೇತಾ, ರೇಷ್ಮಾ, ಸಹಾಯಕ ಸಿಬ್ಬಂದಿ ಕಳಕಪ್ಪ ಮತ್ತಿತರರ ತಂಡ ಈ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದೆ.

    ಕಿಮ್ಸ್ ತಜ್ಞರ ಕಾರ್ಯಕ್ಕೆ ಜಿಲ್ಲಾಧಿಕಾರಿಗಳಾದ ದೀಪಾ ಚೋಳನ್, ಕಿಮ್ಸ್ ನಿರ್ದೇಶಕ ಡಾ.ರಾಮಲಿಂಗಪ್ಪ ಅಂಟರಠಾಣಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

  • ಪತ್ನಿಯನ್ನ ಆಸ್ಪತ್ರೆಗೆ ಸೇರಿಸಿ ವಿಷ ಕುಡಿದ- ಬೆಳಗ್ಗೆ ಹೆಂಡ್ತಿ, ಸಂಜೆ ಪತಿ ಸಾವು

    ಪತ್ನಿಯನ್ನ ಆಸ್ಪತ್ರೆಗೆ ಸೇರಿಸಿ ವಿಷ ಕುಡಿದ- ಬೆಳಗ್ಗೆ ಹೆಂಡ್ತಿ, ಸಂಜೆ ಪತಿ ಸಾವು

    – ಪ್ರೀತಿಸಿ 8 ತಿಂಗಳ ಹಿಂದೆಯಷ್ಟೆ ಜೋಡಿ ಮದ್ವೆ
    – ಪೋಷಕರಿಗೆ ಗುಡ್‍ನ್ಯೂಸ್ ಹೇಳೋಣ ಎಂದಿದ್ದೆ ತಪ್ಪಾಯ್ತು

    ಹೈದರಾಬಾದ್: ಪರಸ್ಪರ ಪ್ರೀತಿಸಿ ಮದುವೆಯಾಗಿದ್ದ ದಂಪತಿ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿರುವ ಘಟನೆ ಆಂಧ್ರ ಪ್ರದೇಶದ ಕೃಷ್ಣ ಜಿಲ್ಲೆಯಲ್ಲಿ ನಡೆದಿದೆ.

    ಗುಂಜಿ ವೆಂಕಟೇಶ್ವರ ರಾವ್ (24) ಮತ್ತು ಶ್ರಾವಣಿ (21) ಆತ್ಮಹತ್ಯೆ ಮಾಡಿಕೊಂಡ ದಂಪತಿ. ಎರಡು ಮನೆಯವರ ವಿರೋಧದ ನಡುವೆಯೂ 2019ರ ಅಕ್ಟೋಬರ್ ನಲ್ಲಿ ಮದುವೆಯಾಗಿದ್ದರು. ವೆಂಕಟೇಶ್ವರ ರಾವ್ ಕೃಷಿ ಕೆಲಸ ಮಾಡಿಕೊಂಡು ಜೀವನವನ್ನು ನಡೆಸುತ್ತಿದ್ದರು.

    ಇತ್ತೀಚೆಗಷ್ಟೆ ಶ್ರಾವಣಿ ಗರ್ಭಿಣಿಯಾಗಿದ್ದಳು. ಈ ಖುಷಿಯ ವಿಚಾರವನ್ನು ತನ್ನ ಮನೆಯವರಿಗೆ ಹೇಳಬೇಕು ಎಂದು ಶ್ರಾವಣಿ ಪತಿ ವೆಂಕಟೇಶ್ವರ ರಾವ್ ಬಳಿ ಜೂನ್ 10 ರಂದು ಅಂದರೆ ಬುಧವಾರ ತಮ್ಮ ಹುಟ್ಟೂರಿಗೆ ಹೋಗೋಣ ಎಂದು ಕೇಳಿಕೊಂಡಿದ್ದಳು. ಇದಕ್ಕೆ ಪತಿ ನಿರಾಕರಿಸಿದ್ದು, ಆಗ ಇಬ್ಬರ ಮಧ್ಯೆ ಜಗಳ ನಡೆದಿದೆ. ಇದರಿಂದ ಕೋಪಗೊಂಡ ಶ್ರಾವಣಿ ಮನೆಯಲ್ಲಿ ಕೀಟನಾಶಕವನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ.

    ಇದನ್ನ ಗಮನಿಸಿದ ಪತಿ ಆಕೆಯನ್ನು ತಕ್ಷಣ ಸಮೀಪ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾನೆ. ಅಲ್ಲಿ ಪ್ರಥಮ ಚಿಕಿತ್ಸೆಯ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಗುಂಟೂರು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದ್ದಾನೆ. ಆದರೆ ವೈದ್ಯರು ಶ್ರಾವಣಿಯ ಸ್ಥಿತಿ ಗಂಭೀರವಾಗಿದೆ ಎಂದು ವೆಂಕಟೇಶ್ವರ ರಾವ್‍ಗೆ ಹೇಳಿದ್ದಾರೆ. ಇದನ್ನು ಸಹಿಸಲಾಗದ ಪತಿ ಕೂಡ ಗುರುವಾರ ಗುಂಟೂರು ಸರ್ಕಾರಿ ಆಸ್ಪತ್ರೆಯ ಸಮೀಪದಲ್ಲೇ ಕೀಟನಾಶಕವನ್ನು ಕುಡಿದಿದ್ದಾನೆ.

    ಸ್ಥಳೀಯರು ಆತನನ್ನು ನೋಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಶ್ರಾವಣಿ ಶುಕ್ರವಾರ ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ. ಇತ್ತ ವೆಂಕಟೇಶ್ವರ ರಾವ್ ಕೂಡ ಸಂಜೆ ಮೃತಪಟ್ಟಿದ್ದಾನೆ. ಮಾಹಿತಿ ತಿಳಿದು ಸ್ಥಳೀಯ ಪೊಲೀಸರು ಆಸ್ಪತ್ರೆಗೆ ಬಂದು ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

  • ಕಂಟೈನ್ಮೆಂಟ್ ಝೋನ್‍ದಿಂದ ಬಂದ ಗರ್ಭಿಣಿಯನ್ನು ಅಡ್ಮಿಟ್ ಮಾಡ್ಕೊಳ್ಳಲು ಆಸ್ಪತ್ರೆಗಳು ನಕಾರ

    ಕಂಟೈನ್ಮೆಂಟ್ ಝೋನ್‍ದಿಂದ ಬಂದ ಗರ್ಭಿಣಿಯನ್ನು ಅಡ್ಮಿಟ್ ಮಾಡ್ಕೊಳ್ಳಲು ಆಸ್ಪತ್ರೆಗಳು ನಕಾರ

    – ನರಳಿ ನರಳಿ ಸಾವನ್ನಪ್ಪಿದ 6 ತಿಂಗಳ ಗರ್ಭಿಣಿ
    – ಖಾಸಗಿ ಆಸ್ಪತ್ರೆ ಮುಂದೆಯೇ ಪ್ರಾಣ ಬಿಟ್ಟ ಮಹಿಳೆ

    ಲಕ್ನೋ: ಕಂಟೈನ್ಮೆಂಟ್ ಝೋನ್‍ನಿಂದ ಬಂದ ಗರ್ಭಿಣಿಯನ್ನು ಖಾಸಗಿ ಆಸ್ಪತ್ರೆಗಳು ಅಡ್ಮಿಟ್ ಮಾಡಿಕೊಳ್ಳಲು ನಿರಾಕರಿಸಿದ್ದರಿಂದ 6 ತಿಂಗಳ ಗರ್ಭಿಣಿ ನರಳಿ ನರಳಿ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

    ಸಾವನ್ನಪ್ಪಿದ ಗರ್ಭಿಣಿಯನ್ನು 28 ವರ್ಷದ ಅರ್ಷಿ ಎಂದು ಗುರುತಿಸಲಾಗಿದೆ. ಅರ್ಷಿ ಉತ್ತರ ಪ್ರದೇಶದ ಪಿಲಿಭಿತ್‍ನ ಫೀಲ್‍ಖಾನಾ ಪ್ರದೇಶದಲ್ಲಿ ವಾಸಿಸುತ್ತಿದ್ದರು. ಆಕೆಯ ಪತಿಯನ್ನು ಶಿರಾಜುದ್ದೀನ್ ಎಂದು ಗುರುತಿಸಲಾಗಿದೆ. ಈ ವಲಸೆ ಕಾರ್ಮಿಕ ದಂಪತಿ ಈ ಪ್ರದೇಶಕ್ಕೆ ಬಂದ ನಂತರ ಅದನ್ನು ಕಂಟೈನ್ಮೆಂಟ್ ಝೋನ್ ಎಂದು ಗುರುತಿಸಲಾಗಿತ್ತು.

    ಆರು ತಿಂಗಳ ಗರ್ಭಿಣಿಯಾಗಿದ್ದ ಅರ್ಷಿ ರಂಜಾನ್ ತಿಂಗಳಲ್ಲಿ ಉಪವಾಸ ಮಾಡಿ ತುಂಬಾ ವೀಕ್ ಆಗಿದ್ದರು. ಈ ಕಾರಣದಿಂದ ಮನೆಯಲ್ಲಿ ಕುಸಿದು ಬಿದ್ದ ಅರ್ಷಿಯನ್ನು ಆಕೆಯ ಗಂಡ ಶಿರಾಜುದ್ದೀನ್ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಆದರೆ ಅವರು ಕಂಟೈನ್ಮೆಂಟ್ ಝೋನ್‍ನಿಂದ ಬಂದ ಕಾರಣ ಖಾಸಗಿ ಆಸ್ಪತ್ರೆ ಸಿಬ್ಬಂದಿ ನಾವು ಅಡ್ಮಿಟ್ ಮಾಡಿಕೊಳ್ಳಲ್ಲ, ಚಿಕಿತ್ಸೆ ನೀಡಲ್ಲ ಎಂದು ನಿರಾಕರಿಸಿದ್ದಾರೆ.

    ಶಿರಾಜುದ್ದೀನ್ ಖಾಸಗಿ ಆಸ್ಪತ್ರೆಯ ಸಿಬ್ಬಂದಿಯನ್ನು ಪರಿಪರಿಯಾಗಿ ಬೇಡಿಕೊಂಡಿದ್ದಾರೆ. ಆದರೆ ಆಸ್ಪತ್ರೆಯವರು ಈ ಸಮಯದಲ್ಲಿ ಕಂಟೈನ್ಮೆಂಟ್ ಏರಿಯಾದಿಂದ ಬಂದ ಯಾರಿಗೂ ನಾವು ಚಿಕಿತ್ಸೆ ನೀಡಲ್ಲ ಎಂದು ಹೇಳಿದ್ದಾರೆ. ಜೊತೆಗೆ ನಿಮ್ಮ ಪತ್ನಿಗೆ ಚಿಕಿತ್ಸೆ ಬೇಕು ಎಂದರೆ ಜಿಲ್ಲಾಧಿಕಾರಿಗಳ ಬಳಿ ಪತ್ರವನ್ನು ಬರೆಸಿಕೊಂಡು ಬನ್ನಿ ನಂತರ ನಾವು ಚಿಕಿತ್ಸೆ ನೀಡುತ್ತೇವೆ ಎಂದು ತಿಳಿಸಿದ್ದಾರೆ.

    ಈ ವಿಚಾರದ ಬಗ್ಗೆ ಮಾತನಾಡಿರುವ ಮೃತಳ ಪತಿ ಶಿರಾಜುದ್ದೀನ್, ನನ್ನ ಹೆಂಡತಿ ಪ್ರಾಣವನ್ನು ಉಳಿಸಿ ಎಂದು ನಾನು ವೈದ್ಯರನ್ನು ಬೇಡಿಕೊಂಡಿದ್ದೆ. ನಾನು ಎಷ್ಟೇ ಬೇಡಿಕೊಂಡರೂ ವೈದ್ಯರ ಮನಸ್ಸು ಕರಗಲಿಲ್ಲ. ಅವರು ನನ್ನ ಪತ್ನಿಯನ್ನು ಮುಟ್ಟಿಕೂಡ ನೋಡಲಿಲ್ಲ. ಆದ್ದರಿಂದ ನನ್ನ ಪತ್ನಿ ಖಾಸಗಿ ಆಸ್ಪತ್ರೆ ಮುಂದೆಯೇ ನರಳಿ ನರಳಿ ಪ್ರಾಣ ಬಿಟ್ಟಳು ಎಂದು ಕಣ್ಣೀರು ಹಾಕಿದ್ದಾರೆ.

    ಈ ವಿಚಾರದ ಬಗ್ಗೆ ಖಾಸಗಿ ಆಸ್ಪತ್ರೆ ಮಾಲೀಕರು ಮಾತನಾಡಿ, ಖಾಸಗಿ ಆಸ್ಪತ್ರೆಗಳು ತುಂಬ ಒತ್ತಡದಿಂದ ಕಾರ್ಯನಿರ್ವಹಿಸುತ್ತಿವೆ. ಒಂದು ವೇಳೆ ಕೊರೊನಾ ಸೋಂಕಿತರನ್ನು ನಾವು ಚಿಕಿತ್ಸೆ ಮಾಡಿದರೆ ಜಿಲ್ಲಾಡಳಿತ ನಮ್ಮ ಮೇಲೆ ಕಠಿಣವಾದ ಕ್ರಮ ತೆಗೆದುಕೊಳ್ಳುತ್ತದೆ ಎಂದು ಹೇಳಿದ್ದಾರೆ. ಈ ಘಟನೆಯ ಬಗ್ಗೆ ತನಿಖೆಗೆ ಆದೇಶಿಸಲಾಗುವುದು ಎಂದು ಮುಖ್ಯ ವೈದ್ಯಾಧಿಕಾರಿ ಡಾ.ಸೀಮಾ ಅಗ್ರವಾಲ್ ತಿಳಿಸಿದ್ದಾರೆ.