Tag: Pregnancy

  • ಕರೀನಾ ಬರೆದ ಪ್ರೆಗ್ನೆನ್ಸಿ ಬೈಬಲ್ ಪುಸ್ತಕ ಕೇಸು: ಸರ್ಕಾರದ ಮೂಲಕ ದೂರು ದಾಖಲಿಸಿ ಎಂದ ಹೈಕೋರ್ಟ್

    ಕರೀನಾ ಬರೆದ ಪ್ರೆಗ್ನೆನ್ಸಿ ಬೈಬಲ್ ಪುಸ್ತಕ ಕೇಸು: ಸರ್ಕಾರದ ಮೂಲಕ ದೂರು ದಾಖಲಿಸಿ ಎಂದ ಹೈಕೋರ್ಟ್

    ಬಾಲಿವುಡ್ ನಟಿ ಕರೀನಾ ಕಪೂರ್, ಅದಿತಿ ಶಾ ಭೀಮ್ ಜ್ಞಾನಿ ಜೊತೆಯಾಗಿ ಬರೆದಿರುವ ‘ಕರೀನಾ ಕಪೂರ್ ಪೆಗ್ನೆನ್ಸಿ ಬೈಬಲ್’ ಪುಸ್ತಕ ವಿರೋಧಿಸಿ 2021ರಲ್ಲಿ ವಕೀಲ ಕ್ರಿಸ್ಟೋಫರ್ ಆಂಥೋನಿ ಮಧ್ಯಪ್ರದೇಶದ ಓಮತಿ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದರು. ಈ ದೂರನ್ನು ಪೊಲೀಸರು ಸ್ವೀಕರಿಸದೇ ಇರುವ ಕಾರಣಕ್ಕಾಗಿ ಅವರು ಜಬಲ್ ಪುರದ ಮ್ಯಾಜಿಸ್ಟ್ರೇಟ್ ಕೋರ್ಟ್ ಗೆ ದೂರು ನೀಡಿದ್ದರು. ಬೈಬಲ್ ಎನ್ನುವ ಪದವನ್ನು ಪ್ರೆಗ್ರೆನ್ಸಿಗೆ ಹೋಲಿಸಿರುವುದಕ್ಕೆ ಕ್ರಿಶ್ಚಿಯನ್ ಸಮುದಾಯದ ಭಾವನೆಗಳಿಗೆ ನೋವನ್ನುಂಟು ಮಾಡಿದೆ ಎಂದು ದೂರಿನಲ್ಲಿ ಬರೆದಿದ್ದರು.

    ಜಬಲ್ ಪುರದ ಮ್ಯಾಜಿಸ್ಟ್ರೇಟ್ ದೂರನ್ನು ಪರಿಗಣಿಸಿ, ಮೇಲ್ನೋಟಕ್ಕೆ ಆಕ್ಷೇಪಾರ್ಹ ಸಂಗತಿಗಳು ಪುಸ್ತಕದಲ್ಲಿ ಕಂಡು ಬರುತ್ತಿಲ್ಲ ಎಂದು, ಯಾವ ರೀತಿಯಲ್ಲಿ ಕ್ರಿಶ್ಚಿಯನ್ ಸಮುದಾಯಕ್ಕೆ ನೋವನ್ನುಂಟು ಮಾಡುತ್ತದೆ ಎಂದು ದೂರಿನಲ್ಲಿ ನಮೂದಿಸಿಲ್ಲ ಎಂದು ಅರ್ಜಿ ತಿರಸ್ಕರಿಸಿತ್ತು. ಆದರೂ, ಸುಮ್ಮನಿರದ ಆಂಥೋನಿ ಅವರು ಸೆಷನ್ಸ್ ಕೋರ್ಟ್ ಮೆಟ್ಟಿಲು ಏರಿದ್ದರೂ, ಅಲ್ಲಿಯೂ ಕೂಡ ಅರ್ಜಿ ವಜಾಗೊಂಡಿತ್ತು. ಹಾಗಾಗಿ ಹೈಕೋರ್ಟ್ ಮೊರೆ ಹೋಗಿದ್ದರು. ಇದನ್ನೂ ಓದಿ:ಮತ್ತೆ ಟಾಪ್‌ಲೆಸ್ ಅವತಾರದಲ್ಲಿ ಬಂದ ಉರ್ಫಿ ಜಾವೇದ್: ನೆಟ್ಟಿಗರಿಂದ ನಟಿಗೆ ಕ್ಲಾಸ್

    ಆಂಥೋನಿ ಸಲ್ಲಿಸಿರುವ ಮೇಲ್ಮನವಿ ಅರ್ಜಿಯನ್ನು ಪರಿಶೀಲಿಸಿದ ಹೈಕೋರ್ಟ್ , ದೂರುದಾರ ರಾಜ್ಯ ಸರ್ಕಾರವನ್ನು ಕಕ್ಷಿದಾರನನ್ನಾಗಿ ಸೇರಿಸದೇ ಇರುವ ಕಾರಣಕ್ಕಾಗಿ, ರಾಜ್ಯ ಸರ್ಕಾರದ ಮೂಲಕ ಈ ಪ್ರಕರಣವನ್ನು ದಾಖಲಿಸಿ ಎಂದು ಆಂಥೋಣಿಗೆ ಹೈಕೋರ್ಟ್ ನಿರ್ದೇಶನ ನೀಡಿದೆ. ನ್ಯಾ.ಡಿ.ಕೆ. ಪಲಿವಾಲ್ ಅವರಿದ್ದ ಏಕಸದಸ್ಯ ಪೀಠವು ಇಂಥದ್ದೊಂದು ಆದೇಶ ನೀಡಿದೆ.

    Live Tv
    [brid partner=56869869 player=32851 video=960834 autoplay=true]

  • ಅವಿವಾಹಿತೆಗೂ ಗರ್ಭಪಾತಕ್ಕೆ ಅವಕಾಶ: ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು

    ಅವಿವಾಹಿತೆಗೂ ಗರ್ಭಪಾತಕ್ಕೆ ಅವಕಾಶ: ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು

    ನವದೆಹಲಿ: ಒಮ್ಮತದ ಸಂಬಂಧದಿಂದ ಅವಿವಾಹಿತೆ ಗರ್ಭಧರಿಸಿದ್ದರೆ, ಆಕೆ ಇಚ್ಛಿಸಿದರೆ ಗರ್ಭಪಾತಕ್ಕೆ ಅವಕಾಶ ನಿರಾಕರಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪೊಂದನ್ನು ಹೊರಡಿಸಿದೆ.

    ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್, ಸೂರ್ಯ ಕಾಂತ್ ಮತ್ತು ಎ.ಎಸ್.ಬೋಪಣ್ಣ ಅವರ ಪೀಠವು, ಅವಿವಾಹಿತೆ ಪರೀಕ್ಷಿಸಲು ಇಬ್ಬರು ವೈದ್ಯರ ವೈದ್ಯಕೀಯ ಮಂಡಳಿಯನ್ನು ಸ್ಥಾಪಿಸಲು ಏಮ್ಸ್‌ ನಿರ್ದೇಶಕರಿಗೆ ನಿರ್ದೇಶನ ನೀಡಿದೆ. ಎಂಟಿಪಿ ಕಾಯ್ದೆಯ ಸೆಕ್ಷನ್ 3(2)(ಡಿ) ಅಡಿಯಲ್ಲಿ ಮಂಡಳಿ ರಚಿಸಬೇಕು. ಆಕೆಯ ಜೀವಕ್ಕೆ ಅಪಾಯ ಆಗದಂತೆ ಗರ್ಭಪಾತ ಮಾಡಬೇಕು ಎಂದು ಆದೇಶಿಸಿತು. ಇದನ್ನೂ ಓದಿ: ಆಗಸ್ಟ್ 13 ರಿಂದ 15ರವರೆಗೆ ನಿಮ್ಮ ಮನೆಮುಂದೆ ತ್ರಿವರ್ಣ ಧ್ವಜವನ್ನು ಹಾರಿಸಿ: ಮೋದಿ ಕರೆ

    SUPREME COURT

    ವೈದ್ಯಕೀಯ ಗರ್ಭಪಾತ ಕಾಯ್ದೆಗೆ 2021ರಲ್ಲಿ ತಂದಿರುವ ತಿದ್ದುಪಡಿಯು ಅವಿವಾಹಿತೆಯೂ ಒಳಗೊಳ್ಳುವಂತೆ ಪತಿಗೆ ಬದಲಾಗಿ ʼಪಾರ್ಟ್ನರ್‌ʼ ಎಂಬ ಪದ ಬಳಸಿದೆ ಎಂದು ಪೀಠವು ಹೇಳಿದೆ.

    ಒಮ್ಮತದ ಸಂಬಂಧದಿಂದ ಗರ್ಭಧರಿಸಿದ್ದ 25 ವರ್ಷದ ಅವಿವಾಹಿತೆಯೊಬ್ಬರು ದೆಹಲಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ತನಗೆ ಬೇಡವಾದ 24 ವಾರಗಳ ಭ್ರೂಣದ ಗರ್ಭಪಾತಕ್ಕೆ ಅನುಮತಿ ನೀಡುವಂತೆ ಕೋರ್ಟ್‌ಗೆ ಮನವಿ ಮಾಡಿದ್ದರು. ಆದರೆ ಜು.16 ಅನುಮತಿ ನಿರಾಕರಿಸಿ ಕೋರ್ಟ್‌ ಆದೇಶ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ಅವಿವಾಹಿತೆ ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದರು. ಇದನ್ನೂ ಓದಿ: ವಿಮಾನದಲ್ಲಿ ಪ್ರಯಾಣಿಸಲು ಬಂದ ಪೋಷಕರಿಗೆ ಸರ್‌ಪ್ರೈಸ್‌ ಕೊಟ್ಟ ಪೈಲಟ್

    ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌, 20-24 ವಾರಗಳ ಭ್ರೂಣದ ಗರ್ಭಪಾತಕ್ಕೆ ವಿಧವೆ ಅಥವಾ ವಿಚ್ಛೇದಿತ ಮಹಿಳೆಗೂ ಅನುಮತಿಸಲಾಗಿದೆ. ಆದರೆ ಈ ಪ್ರಕರಣದಲ್ಲಿ ದೆಹಲಿ ಹೈಕೋರ್ಟ್ ಅನಪೇಕ್ಷಿತ ದೃಷ್ಟಿಕೋನ ಹೊಂದಿದೆ ಎಂದು ಕೋರ್ಟ್‌ ಹೇಳಿತು. ಅಲ್ಲದೇ ಈ ಕಾನೂನು ನಿಯಮಗಳ ವ್ಯಾಖ್ಯಾನ ಕುರಿತು ಕೇಂದ್ರಕ್ಕೆ ಸುಪ್ರೀಂ ಕೋರ್ಟ್‌ ನೋಟಿಸ್ ಜಾರಿ ಮಾಡಿತು.

    Live Tv
    [brid partner=56869869 player=32851 video=960834 autoplay=true]

  • ಸಮ್ಮತಿಯ ಸೆಕ್ಸ್‌ನಿಂದ ಅವಿವಾಹಿತೆ ಗರ್ಭಧಾರಣೆ – 20 ವಾರಗಳ ಬಳಿಕ ಗರ್ಭಪಾತಕ್ಕೆ ಅವಕಾಶವಿಲ್ಲ: ಹೈಕೋರ್ಟ್

    ಸಮ್ಮತಿಯ ಸೆಕ್ಸ್‌ನಿಂದ ಅವಿವಾಹಿತೆ ಗರ್ಭಧಾರಣೆ – 20 ವಾರಗಳ ಬಳಿಕ ಗರ್ಭಪಾತಕ್ಕೆ ಅವಕಾಶವಿಲ್ಲ: ಹೈಕೋರ್ಟ್

    ನವದೆಹಲಿ: 23 ವಾರಗಳ ಭ್ರೂಣದ ಗರ್ಭಪಾತಕ್ಕೆ ಅವಕಾಶ ನೀಡುವಂತೆ ಕೋರಿ 25 ವರ್ಷದ ಅವಿವಾಹಿತ ಯುವತಿ ಸಲ್ಲಿಸಿದ ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾ ಮಾಡಿದೆ.

    ಸಮ್ಮತಿಯ ಸೆಕ್ಸ್‍ನಿಂದ ಗರ್ಭವತಿಯಾಗಿ 20 ವಾರಗಳು ಮೀರಿದ ಭ್ರೂಣದ ಗರ್ಭಪಾತಕ್ಕೆ ಅನುಮತಿ ನೀಡಲು ಸಾಧ್ಯವಿಲ್ಲ ಎಂದು ಆದೇಶ ನೀಡಿದೆ. ಪ್ರಕರಣ ಸುದೀರ್ಘ ವಿಚಾರಣೆ ನಡೆಸಿದ ಮುಖ್ಯ ನ್ಯಾ.ಸತೀಶ್ ಚಂದ್ರಶರ್ಮಾ ನೇತೃತ್ವದ ವಿಭಾಗೀಯ ಪೀಠವು, ಒಪ್ಪಿಗೆಯ ಲೈಂಗಿಕ ಸಂಬಂಧದಿಂದ ಮಗುವನ್ನು ಹೆರುವ ಅವಿವಾಹಿತ ಮಹಿಳೆಗೆ ವೈದ್ಯಕೀಯ ಗರ್ಭಪಾತದ ನಿಯಮಗಳ ಪ್ರಕಾರ 20 ವಾರಗಳು ಮೀರಿದ ಗರ್ಭಾವಸ್ಥೆಯನ್ನು ಅಂತ್ಯಗೊಳಿಸಲು(2003 MTP ನಿಯಮಗಳು ಪ್ರಕಾರ) ಅನುಮತಿ ಇಲ್ಲ ಎಂದು ಹೇಳಿದೆ. ಇದನ್ನೂ ಓದಿ: ಬಿಸಾಡಿದ ಮಚ್ಚು ತೋರಿಸುತ್ತೇನೆಂದು ಪೊಲೀಸರ ಮೇಲೆಯೇ ಹಲ್ಲೆ – ಆರೋಪಿಗೆ ಗುಂಡೇಟು 

    ಅವಿವಾಹಿತ ಮಹಿಳೆಯಾಗಿರುವ ಮತ್ತು ಸಮ್ಮತಿಯಿಂದ ಗರ್ಭ ಧರಿಸಿರುವ ಅರ್ಜಿದಾರರು, ವೈದ್ಯಕೀಯ ಮುಕ್ತಾಯದ ನಿಯಮಗಳು 2003ರ ಅಡಿಯಲ್ಲಿ ಯಾವುದೇ ಷರತ್ತುಗಳನ್ನು ಸ್ಪಷ್ಟವಾಗಿ ಒಳಗೊಂಡಿರುವುದಿಲ್ಲ. ಆದ್ದರಿಂದ, ಸೆಕ್ಷನ್ 3(2)(ಬಿ) ಈ ಪ್ರಕರಣದ ಸತ್ಯಾಸತ್ಯತೆಗಳಿಗೆ ಕಾಯ್ದೆ ಅನ್ವಯಿಸುವುದಿಲ್ಲ ಎಂದು ಕೋರ್ಟ್ ತನ್ನ ಆದೇಶದಲ್ಲಿ ಹೇಳಿದೆ.

    ಎಂಟಿಪಿ ನಿಯಮಗಳ 3ಬಿ ಪ್ರಕಾರ 20 ವಾರಗಳ ನಂತರ ಅವಿವಾಹಿತ ಮಹಿಳೆಯ ಗರ್ಭಧಾರಣೆಯನ್ನು ಮುಕ್ತಾಯಗೊಳಿಸಲು ಅನುಮತಿಸುವುದಿಲ್ಲ. ಆದ್ದರಿಂದ, ನ್ಯಾಯಾಲಯವು ಈಗಿರುವ ಶಾಸನವನ್ನು ಮೀರಿ ಹೋಗುವಂತಿಲ್ಲ ಎಂದು ತನ್ನ ಆದೇಶದಲ್ಲಿ ಸೇರಿಸಿದೆ.

    ನ್ಯಾಯಾಲಯವು ಅರ್ಜಿಯನ್ನು ಬಾಕಿ ಉಳಿಸಿಕೊಂಡಿದೆ. ಆಗಸ್ಟ್ 26ರೊಳಗೆ ಅರ್ಜಿಯ ಬಗ್ಗೆ ತನ್ನ ಪ್ರತಿಕ್ರಿಯೆಯನ್ನು ಸಲ್ಲಿಸುವಂತೆ ದೆಹಲಿಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಸೂಚನೆ ನೀಡಿದೆ.

    ನಿಯಮಗಳ ಪ್ರಕಾರ, ಅತ್ಯಾಚಾರದ ಸಂತ್ರಸ್ತರು, ಅಪ್ರಾಪ್ತ ವಯಸ್ಕರು, ಗರ್ಭಾವಸ್ಥೆಯಲ್ಲಿ ವೈವಾಹಿಕ ಸ್ಥಿತಿ ಬದಲಾದ ಮಹಿಳೆಯರು, ಮಾನಸಿಕ ಅಸ್ವಸ್ಥ ಮಹಿಳೆಯರು ಅಥವಾ ಭ್ರೂಣದ ವಿರೂಪತೆ ಹೊಂದಿರುವ ಮಹಿಳೆಯರು ಮಾತ್ರ 24 ವಾರಗಳ ಗರ್ಭಾವಸ್ಥೆಯನ್ನು ಅಂತ್ಯಗೊಳಿಸಲು ಅನುಮತಿಸಲಾಗಿದೆ. ಇದನ್ನೂ ಓದಿ:  ಸರ್ಕಾರಿ ನೌಕರರು 2ನೇ ಮದುವೆಯಾಗಲು ಬೇಕು ಇಲಾಖೆ ಅನುಮತಿ – ಇಲ್ಲವಾದ್ರೆ ಸರ್ಕಾರಿ ಸೌಲಭ್ಯವಿಲ್ಲ 

    ಶುಕ್ರವಾರ ಇದೇ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಧೀಶರು ಗರ್ಭಪಾತವು ಮಗುವನ್ನು ಕೊಲ್ಲುವುದಕ್ಕೆ ಸಮಾನವಾಗಿರುತ್ತದೆ. ಮಗುವನ್ನು ಹೆತ್ತು, ದತ್ತು ಸ್ವೀಕಾರಕ್ಕೆ ಬಿಟ್ಟುಕೊಡಬಹುದು ಎಂದು ಪೀಠ ಸೂಚಿಸಿತ್ತು. ಮಗುವನ್ನು ಏಕೆ ಕೊಲ್ಲುತ್ತಿದ್ದೀರಿ? ಮಕ್ಕಳ ದತ್ತು ಪಡೆಯಲು ದೊಡ್ಡ ಸರತಿ ಸಾಲು ಇದೆ. ಮಗುವನ್ನು ಬೆಳೆಸಲು ಮಹಿಳೆಯನ್ನು ಒತ್ತಾಯಿಸುವುದಿಲ್ಲ. ಎಲ್ಲವನ್ನೂ ಸರ್ಕಾರ ಅಥವಾ ಆಸ್ಪತ್ರೆ ನೋಡಿಕೊಳ್ಳುತ್ತದೆ ಎಂದು ಸೂಚಿಸಲಾಗಿತ್ತು.

    Live Tv
    [brid partner=56869869 player=32851 video=960834 autoplay=true]

  • ಒಂದೇ ಆಸ್ಪತ್ರೆಯ, ಒಂದೇ ವಾರ್ಡ್‌ನ 14 ನರ್ಸ್‌ಗಳು ಒಂದೇ ಸಮಯದಲ್ಲಿ ಪ್ರೆಗ್ನೆಂಟ್!

    ಒಂದೇ ಆಸ್ಪತ್ರೆಯ, ಒಂದೇ ವಾರ್ಡ್‌ನ 14 ನರ್ಸ್‌ಗಳು ಒಂದೇ ಸಮಯದಲ್ಲಿ ಪ್ರೆಗ್ನೆಂಟ್!

    ವಾಷಿಂಗ್ಟನ್: 2019ರಲ್ಲಿ ಕಾರ್ಮಿಕ ಹಾಗೂ ವಿತರಣಾ ಘಟಕದ 9 ಮಹಿಳೆಯರು ಒಂದೇ ಸಮಯದಲ್ಲಿ ಗರ್ಭಿಣಿಯರಾಗಿ ಸುದ್ದಿಯಾಗಿದ್ದರು. ಈ ಬಹು ಅಪರೂಪದ ಘಟನೆ ಮತ್ತೊಮ್ಮೆ ಮರುಕಳಿಸಿದೆ. ಈ ಬಾರಿ ಒಂದೇ ಕಡೆ ಕೆಲಸ ಮಾಡುವ 14 ನರ್ಸ್‌ಗಳು ಒಂದೇ ಸಮಯದಲ್ಲಿ ಪ್ರೆಗ್ನೆಂಟ್ ಆಗಿ ಸುದ್ದಿಯಾಗಿದ್ದಾರೆ.

    ಅಮೆರಿಕದ ಕಾನ್ಸಾಸ್ ನಗರದಲ್ಲಿರುವ ಸೇಂಟ್ ಲ್ಯೂಕ್ ಈಸ್ಟ್ ಆಸ್ಪತ್ರೆಯ ಹೆರಿಗೆ ವಿಭಾಗದಲ್ಲಿ ಕೆಲಸ ಮಾಡುತ್ತಿರುವ 14 ದಾದಿಯರು ಒಂದೇ ಸಮಯದಲ್ಲಿ ಗರ್ಭ ಧರಿಸಿದ್ದಾರೆ. 14 ದಾದಿಯರ ಪೈಕಿ ಮೊದಲು ಗರ್ಭಿಣಿಯಾಗಿದ್ದ ಕೈತಿಲಿನ್ ಹಾಲ್ ಜೂನ್ 3 ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಇದನ್ನೂ ಓದಿ: ಮದುವೆಗೆ ಬುಲ್ಡೋಜರ್ ಮೇಲೆ ವರ ಬಂದಿದ್ದಕ್ಕೆ ಡ್ರೈವರ್‌ಗೆ ಬಿತ್ತು ಫೈನ್

    ನಮ್ಮ ಗುಂಪಿನಲ್ಲಿ ಗರ್ಭಿಣಿಯಾಗಲು ಪ್ರಯತ್ನಿಸುತ್ತಿದ್ದುದು ನಾನೊಬ್ಬಳೇ ಎಂದುಕೊಂಡಿದ್ದೆ. ಇದು ನನ್ನ ಮೊದಲ ಗರ್ಭಧಾರಣೆ. ಹೀಗಾಗಿ ಈ ವಿಚಾರವನ್ನು ನಾನು 12 ವಾರಗಳ ಕಾಲ ಯಾರಿಗೂ ಹೇಳಿರಲಿಲ್ಲ. ಆದರೆ ಇತರು ಗರ್ಭಿಣಿಯಾಗುತ್ತಿರುವುದನ್ನು ತಿಳಿಸಲು ಪ್ರಾರಂಭಿಸಿದಂತೆ ನಾನು ಕೂಡಾ ಬಹಿರಂಗಪಡಿಸಿದೆ ಎಂದು ಹಾಲ್ ಹೇಳಿದ್ದಾರೆ. ಇದನ್ನೂ ಓದಿ: ಕಿಡ್ನಾಪ್ ಮಾಡಿದ್ದವರೇ ಬಾಲಕನನ್ನು ಮನೆಗೆ ತಂದು ಬಿಟ್ರು – ಅನುಮಾನಕ್ಕೆ ಕಾರಣವಾದ ಅಪಹರಣ

    ಸೇಂಟ್ ಲೂಕ್ ಆಸ್ಪತ್ರೆ ಇನ್ನೂ 13 ಮಕ್ಕಳ ಜನನಕ್ಕೆ ಕಾಯುತ್ತಿದೆ. ಈ ವರ್ಷ ಡಿಸೆಂಬರ್ ಒಳಗಾಗಿ ಎಲ್ಲಾ ದಾದಿಯರೂ ಮಕ್ಕಳಿಗೆ ಜನ್ಮ ನೀಡಲಿದ್ದಾರೆ ಎಂದು ಆಸ್ಪತ್ರೆ ತಿಳಿಸಿದೆ.

    Live Tv

  • ಆಸ್ಪತ್ರೆಗೆ ದಾಖಲಾಗಿದ್ದ ಗರ್ಭಿಣಿ ನಾಪತ್ತೆ

    ಆಸ್ಪತ್ರೆಗೆ ದಾಖಲಾಗಿದ್ದ ಗರ್ಭಿಣಿ ನಾಪತ್ತೆ

    ನವದೆಹಲಿ: ಆಸ್ಪತ್ರೆಗೆ ದಾಖಲಾಗಿದ್ದ ಗರ್ಭಿಣಿಯೊಬ್ಬರು ನಾಪತ್ತೆಯಾಗಿರುವ ಘಟನೆ ದೆಹಲಿಯ ಲಾಲ್ ಬಹದ್ದೂರ್ ಶಾಸ್ತ್ರಿ ಆಸ್ಪತ್ರೆಯಲ್ಲಿ ನಡೆದಿದೆ. ಇದೀಗ ಮಹಿಳೆಯ ಕುಟುಂಬಸ್ಥರು ಪೊಲೀಸರ ಮೊರೆಹೋಗಿದ್ದು, ಆಕೆಯನ್ನು ಶೀಘ್ರವೇ ಪತ್ತೆ ಹಚ್ಚುವುದಾಗಿ ಪೊಲೀಸರು ಹೇಳಿದ್ದಾರೆ.

    ಕಾಣೆಯಾದ ಮಹಿಳೆಯನ್ನು ರಜನಿ ಎಂದು ಗುರುತಿಸಲಾಗಿದ್ದು, ಹೊಟ್ಟೆನೋವಿನಿಂದ ಬಳಲುತ್ತಿದ್ದರಿಂದ 5 ತಿಂಗಳು ತುಂಬಿದ್ದ ರಜನಿ ಅವರನ್ನು ಲಾಲ್ ಬಹದ್ದೂರ್ ಶಾಸ್ತ್ರಿ ಆಸ್ಪತ್ರೆಗೆ ಬುಧವಾರ ದಾಖಲಿಸಲಾಗಿತ್ತು. ಸಂಜೆ 5 ಗಂಟೆ ಸುಮಾರಿಗೆ ಪತಿ ವಿನೋದ್ ಜೊತೆಗೆ ಊಟ ಮಾಡಲು ಹೋಗಿದ್ದ ರಜನಿ ನಂತರ ಕಾಣೆಯಾಗಿದ್ದು, ಅವರನ್ನು ಹಲವಾರು ಗಂಟೆಗಳ ಕಾಲ ಕುಟುಂಬಸ್ಥರು ಹುಡುಕಾಡಿದ್ದಾರೆ. ಆದರೆ ಮಹಿಳೆ ಬಗ್ಗೆ ಯಾವುದೇ ಸುಳಿವು ಸಿಗದ ಹಿನ್ನೆಲೆ ಕೊನೆಗೆ ಈ ಬಗ್ಗೆ ಕುಟುಂಬಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: 6 ವರ್ಷದ ಹಿಂದೆ ಮದುವೆ- 4ನೇ ಪತ್ನಿಗೆ ಡಿವೋರ್ಸ್ ಕೊಟ್ಟ 91ರ ರೂಪರ್ಟ್ ಮುರ್ಡೋಕ್

    ಇದೀಗ ಮಹಿಳೆಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ. ಅಲ್ಲದೇ ಈ ಬಗ್ಗೆ ಆಸ್ಪತ್ರೆ ಆಡಳಿತದೊಂದಿಗೆ ಮಾತನಾಡಲು ಪ್ರಯತ್ನಿಸಿದರೆ, ಎಲ್ಲಾ ಅಧಿಕಾರಿಗಳು ಜವಾಬ್ದಾರಿಯಿಂದ ಹಿಂದೆ ಸರಿಯುತ್ತಿದ್ದರು ಮತ್ತು ಮಾತನಾಡಲು ನಿರಾಕರಿಸಿದರು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಇದನ್ನೂ ಓದಿ: ಆಪರೇಷನ್ ಕಮಲ ಬಿಜೆಪಿಯವರ ಅನಿಷ್ಟ ಕೂಸು: ದಿನೇಶ್ ಗುಂಡೂರಾವ್

    Live Tv

  • ಪ್ರಗ್ನೆನ್ಸಿ ಫೋಟೋ ಮೂಲಕ ಸಿಹಿ ಸುದ್ದಿ ಕೊಟ್ಟ  ರವಿಚಂದ್ರನ್ ‘ಹೂ’ ಹುಡುಗಿ ನಮಿತಾ

    ಪ್ರಗ್ನೆನ್ಸಿ ಫೋಟೋ ಮೂಲಕ ಸಿಹಿ ಸುದ್ದಿ ಕೊಟ್ಟ ರವಿಚಂದ್ರನ್ ‘ಹೂ’ ಹುಡುಗಿ ನಮಿತಾ

    ಕ್ರೇಜಿಸ್ಟಾರ್ ರವಿಚಂದ್ರನ್ ನಟನೆಯ ಹಲವು ಸಿನಿಮಾಗಳಲ್ಲಿ ನಟಿಸಿರುವ ನಮಿತಾ, ತಾಯಂದಿರ ದಿನದಂದು ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟಿದ್ದಾರೆ. ಆರು ವರ್ಷಗಳಿಂದ ಮಗುವಿಗಾಗಿ ಕಾಯುತ್ತಿದ್ದ ನಮಿತಾ, ಇದೀಗ ತಾಯಿ ಆಗುತ್ತಿರುವ ವಿಷಯವನ್ನು ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ. ಪ್ರಗ್ನೆನ್ಸಿ ಫೋಟೋವನ್ನು ಹಂಚಿಕೊಂಡಿದ್ದು, ಅಷ್ಟು ದಿನಗಳ ಕಾಯುವಿಕೆಗೆ ಫಲ ಸಿಕ್ಕಿದೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ : ಬೆಸ್ಟ್ ಆಕ್ಟರ್ ಅವಾರ್ಡ್ ಪಡೆದಿದ್ದ ‘ನಾನು ಮತ್ತು ಗುಂಡ’ ಸಿನಿಮಾದ ‌ಶ್ವಾನ ನಿಧನ

    ರವಿಚಂದ್ರನ್ ಜೊತೆ ನೀಲಕಂಡ, ಹೂ ಸೇರಿದಂತೆ ಹಲವು ಚಿತ್ರಗಳಲ್ಲಿ ನಮಿತಾ ನಟಿಸಿದ್ದರು. ಅಲ್ಲದೇ, ಕನ್ನಡದ ಇಂದ್ರ ಚಿತ್ರದಲ್ಲೂ ನಾಯಕಿಯಾಗಿ ನಟಿಸಿದ್ದರು. 2917ರಲ್ಲಿ ವೀರೇಂದ್ರ ಅವರ ಜೊತೆ ತಿರುಪತಿಯ ಇಸ್ಕಾನ್ ಲೋಟಸ್ ದೇಗುಲದಲ್ಲಿ ಹೊಸ ಜೀವನಕ್ಕೆ ಕಾಲಿಟ್ಟಿದ್ದರು. ತಮಿಳು ಸಿನಿಮಾದಲ್ಲಿ ನಟಿಸುವಾಗ ವೀರೇಂದ್ರ ಮತ್ತು ನಮಿತಾ ಸ್ನೇಹಿತರಾಗಿ, ಸ್ನೇಹ ಪ್ರೇಮವಾಗಿ ಆನಂತರ ಮನೆಯವರ ಒಪ್ಪಿಗೆ ಪಡೆದುಕೊಂಡು ವಿವಾಹವಾಗಿದ್ದರು. ಇದನ್ನೂ ಓದಿ: ಫಸ್ಟ್ ಟೈಮ್ ಮಗಳ ಫೋಟೋ ಶೇರ್ ಮಾಡಿದ ಪ್ರಿಯಾಂಕಾ ಚೋಪ್ರಾ

    ತಮಿಳು, ತೆಲುಗು, ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿರುವ ನಮಿತಾ, ಆಯಾ ಸಿನಿಮಾಗಳನ್ನು ಮಾಡುವಾಗ ಅಲ್ಲಿನ ನಟರ ಜೊತೆ ಇವರ ಹೆಸರು ತಳಕು ಹಾಕಿಕೊಳ್ಳುತ್ತಿದ್ದವು. ಹೀಗಾಗಿ ಅನೇಕ ಬಾರಿ ಗಾಸಿಪ್ ಗಳಿಗೂ ನಮಿತಾ ಕಾರಣರಾಗಿದ್ದಾರೆ. ವೀರೇಂದ್ರ ಅವರನ್ನು ಮದುವೆ ಆಗುವ ಮೂಲಕ ಎಲ್ಲ ಗಾಸಿಪ್ ಗಳಿಗೂ ಅವರು ತೆರೆ ಎಳೆದಿದ್ದರು. ಇದನ್ನೂ ಓದಿ : ಜೂನ್ 9ಕ್ಕೆ ನಯನತಾರಾ ಮದುವೆ ಫಿಕ್ಸ್ – ತಿರುಪತಿಯಲ್ಲಿ ವಿವಾಹ

    ನಮಿತಾ ಕೇವಲ ಸಿನಿಮಾ ರಂಗದಲ್ಲಿ ಮಾತ್ರವಲ್ಲ, ಬಿಜೆಪಿ ಪಕ್ಷದ ರಾಜ್ಯ ಕಾರ್ಯಕಾರಿಣಿಯಲ್ಲೂ ಅವರು ಸದಸ್ಯೆಯಾಗಿ ಕೆಲಸ ಮಾಡುತ್ತಿದ್ದಾರೆ. ಇದರ ಜತೆ ತಮಿಳಿನ ಬಿಗ್ ಬಾಸ್ ಗೂ ಹೋಗಿ ಬಂದರು. ಕೆಲ ರಿಯಾಲಿಟಿ ಶೋಗಳಿಗೂ ಅವರು ಜಡ್ಜ್ ಆಗಿ ಕೆಲಸ ಮಾಡಿದ್ದಾರೆ. ಕನ್ನಡದಲ್ಲಿ ಇವರ ನಟನೆಯ ಕೊನೆಯ ಸಿನಿಮಾ ‘ಬೆಂಕಿ ಬಿರುಗಾಳಿ’ ಆನಂತರ ಅವರು ಸಿನಿಮಾ ಮಾಡುವುದನ್ನೇ ಕಡಿಮೆ ಮಾಡಿದರು.

  • 5 ವರ್ಷಗಳಿಂದ ತಾಯಿಯಾಗಲು ಪ್ರಯತ್ನಿಸಿ 4 ಬಾರಿ ಐವಿಎಫ್ ಚುಚ್ಚುಮದ್ದು ಪಡೆದ ನಟಿ

    5 ವರ್ಷಗಳಿಂದ ತಾಯಿಯಾಗಲು ಪ್ರಯತ್ನಿಸಿ 4 ಬಾರಿ ಐವಿಎಫ್ ಚುಚ್ಚುಮದ್ದು ಪಡೆದ ನಟಿ

    ಮುಂಬೈ: ಕಿರಿತೆರೆಯ ನಟಿ ಸಂಭಾವ್ನಾ ಸೆಠ್ 5 ವರ್ಷಗಳಿಂದ ತಾಯಿಯಾಗಲು ಪ್ರಯತ್ನಿಸುತ್ತಿದ್ದು, ಇದರ ಸಲುವಾಗಿ ಅವರು 4 ಬಾರಿ ಐವಿಎಫ್ ಮೂಲಕ ಚಿಕಿತ್ಸೆ ಪಡೆದ್ರೂ ವಿಫಲವಾಗಿದ್ದಾರೆ.

    ಈ ಕುರಿತು ಅವರೇ ಖುದ್ದಾಗಿ ತಮ್ಮ ಯೂಟ್ಯೂಬ್ ಚಾನೆಲ್‍ವೊಂದರಲ್ಲಿ ಹೇಳಿಕೊಂಡಿದ್ದು, ನಟಿಯು ಆಗಾಗ ತಮ್ಮ ವೈಯಕ್ತಿಕ ವಿಷಯಗಳನ್ನು ಅಭಿಮಾನಿಗಳಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಆದರೆ ಈಗ ಅವರು ತಮ್ಮ ಗರ್ಭಾವಸ್ಥೆಯ ಕುರಿತು ಪ್ರತಿಕ್ರಿಯಿಸಿದ್ದಾರೆ.

    2016ರಲ್ಲಿ ನಟಿಯು ಅವಿನಾಶ್ ದ್ವಿವೇದಿ ಜೊತೆ ದಾಪಂತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆಯಾದ 1 ವರ್ಷದ ನಂತರ ದಂಪತಿ ಮಗುವನ್ನು ಹೊಂದಲು ಯೋಜಿಸಿದ್ದರು. ಆದರೆ ನಟಿ ಸಂಭವ್ನಾ ಅವರ ವಯಸ್ಸು ಮೀರಿದ್ದ ಕಾರಣ ಅವರು ಐವಿಎಫ್ ಚಿಕಿತ್ಸೆ ಪಡೆಯಲು ನಿರ್ಧರಿಸಿದ್ದರು. ದುರದೃಷ್ಟವಶಾತ್, ನಾಲ್ಕು ಬಾರಿ ಐವಿಎಫ್ ಚುಚ್ಚುಮದ್ದು ಪಡೆದು ಗರ್ಭಧರಿಸಲು ಪ್ರಯತ್ನಿಸಿದರೂ, ಅವರು ತಾಯಿಯಾಗಲು ಸಾಧ್ಯವಾಗಲಿಲ್ಲ ಎಂದು ತಿಳಿಸಿದ್ದಾರೆ.

    ಆದಾಗ್ಯೂ, ಸಂಭಾವ್ನಾ ಅವರು ಧೃತಿಗೆಡದೆ 5ನೇ ಬಾರಿಗೆ ಐವಿಎಫ್ ಮೂಲಕ ತಾಯಿಯಾಗಲು ಪ್ರಯತ್ನಿಸುತ್ತಿದ್ದಾರೆ. ದಂಪತಿಯು 2017ರಿಂದ ಮಗು ಹೊಂದಲು ಪ್ರಯತ್ನಿಸುತ್ತಿದ್ದು, ಕೆಲ ಜನರು ಅವರ ಗರ್ಭಾವಸ್ಥೆ ಕುರಿತು ಹಿಯಾಳಿಸತೊಡಗಿದ್ದಾರೆ ಎಂದು ಹೇಳಿದರು.

    ಎಷ್ಟು ದಿನ ನಾಯಿಗಳನ್ನು ಪ್ರೀತಿ ಮಾಡುತ್ತಾ ಇರುತ್ತೀರಾ..?. ನಿಮ್ಮದೇ ಆದ ಮಗುವೊಂದನ್ನು ಹೆತ್ತುಕೊಳ್ಳಿ ಎಂದು ಹಿಯಾಳಿಸುತ್ತಿದ್ದಾರೆ. ಅದಲ್ಲದೆ ಅವರ ದೇಹದ ತೂಕದ ಬಗ್ಗೆಯು ಜನರು ಎಷ್ಟು ದಪ್ಪ ಆಗಿದ್ದೀರಾ ಅಂತ ಕೆಟ್ಟದಾಗಿ ಕಾಮೆಂಟ್ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

    ಐವಿಎಫ್ ಚುಚ್ಚುಮದ್ದಿನಿಂದಾಗಿ ನನ್ನ ದೇಹವೂ ಇಷ್ಟೊಂದು ದಪ್ಪ ಆಗಿದೆ. ಮಗು ಹೊಂದಲು ಜೀವನದಲ್ಲಿ ತುಂಬಾ ಹಿಂಸೆ ಅನುಭವಿಸುತ್ತಿದ್ದೇವೆ ಎಂದು ದಂಪತಿ ಬೇಸರ ವ್ಯಕ್ತಪಡಿಸಿದ್ದಾರೆ. ವೀಡಿಯೋ ಕೊನೆಯಲ್ಲಿ ಸಂಭಾವ್ನಾ ಅವರು ನಾನು ಏನನ್ನು ಬಿಟ್ಟುಕೊಡುವವಳಲ್ಲ, ನಾನು ಹೋರಾಟಗಾರ್ತಿ. ಈ ಬಾರಿಯೂ ಪೂರ್ಣ ಧೈರ್ಯದೊಂದಿಗೆ ಐವಿಎಫ್ ಅನ್ನು ಪ್ರಯತ್ನಿಸುತ್ತೇನೆ ಎಂದು ಹೇಳಿದ್ದಾರೆ.

    ಏನಿದು ಐವಿಎಫ್?
    ಸಹಜವಾಗಿ ಗರ್ಭಧಾರಣೆಯಾಗದಿದ್ದರೆ ಕೃತಕವಾಗಿ ಇನ್ ವಿಟ್ರೊ ಫರ್ಟಿಲೈಸೇಷನ್ (ಐವಿಎಫ್) ಮೂಲಕ ಗರ್ಭಧರಿಸಬಹುದು. ಈ ವಿಧಾನದಲ್ಲಿ, ಪತ್ನಿಯ ಅಂಡಾಣು ಹಾಗೂ ಪತಿಯ ವೀರ್ಯಾಣು ತೆಗೆದು ಪ್ರಯೋಗಾಲಯದಲ್ಲಿ ಎರಡನ್ನೂ ಸೇರಿಸಿ ನಿಗದಿತ ಅವಧಿಯವರೆಗೆ ಭ್ರೂಣವನ್ನು ಬೆಳೆಸಲಾಗುತ್ತದೆ. ನಂತರ ಅದನ್ನು ಪತ್ನಿಯ ಗರ್ಭಕೋಶಕ್ಕೆ ವರ್ಗಾವಣೆ ಮಾಡಲಾಗುತ್ತದೆ.

    ಉತ್ತಮ ಲ್ಯಾಬ್ ಹಾಗೂ ಆಧುನಿಕ ತಂತ್ರಜ್ಞಾನ ಬಳಕೆಯಿಂದ ಸ್ವಲ್ಪ ಹೆಚ್ಚು ಹಣ ಖರ್ಚಾಗಲಿದೆ. ಅಗತ್ಯ ಪರೀಕ್ಷೆಗಳ ನಂತರ ಐಯುಐಗೆ ಸುಮಾರು 10 ಸಾವಿರ ಮತ್ತು ಐವಿಎಫ್‍ಗೆ ಸುಮಾರು 1.75 ರೂ. ವೆಚ್ಚ ತಗುಲಬಹುದು.

  • ಪ್ರೆಗ್ನೆನ್ಸಿಯಲ್ಲೂ ಫಿಟ್‍ನೆಸ್ ಇರಬೇಕು ಎಂದು ವೀಡಿಯೋ ಮಾಡಿದ ನಟಿ ಪ್ರಣಿತಾ

    ಪ್ರೆಗ್ನೆನ್ಸಿಯಲ್ಲೂ ಫಿಟ್‍ನೆಸ್ ಇರಬೇಕು ಎಂದು ವೀಡಿಯೋ ಮಾಡಿದ ನಟಿ ಪ್ರಣಿತಾ

    ಸೆಲೆಬ್ರಿಟಿಗಳು ತಮ್ಮ ದಿನನಿತ್ಯದ ಅಪ್ಡೇಟ್‌ಗಳನ್ನು ಹೆಚ್ಚು ಸೋಶಿಯಲ್ ಮೀಡಿಯಾ ಮೂಲಕ ತಿಳಿಸುವುದು ಸಾಮಾನ್ಯವಾಗಿದೆ. ಅಭಿಮಾನಿಗಳು ಸಹ ತಮ್ಮ ನೆಚ್ಚಿನ ನಟ-ನಟಿಯರ ಬಗ್ಗೆ ತಿಳಿದುಕೊಳ್ಳಲು ಕಾಯುತ್ತಿರುತ್ತಾರೆ. ಅದೇ ರೀತಿ ಬಹುಭಾಷಾ ನಟಿ ಪ್ರಣಿತಾ ಸುಭಾಷ್ ಸಹ ತಮ್ಮ ಬೇಬಿ ಬಂಪ್ ಫೋಟೋದಿಂದ ಹಿಡಿದು, ಆ ದಿನ ತಮ್ಮ ನೆಚ್ಚಿನ ಫೋಟೋ, ವೀಡಿಯೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಈಗ ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ಥ್ರೋಬ್ಯಾಕ್ ವೀಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ.

    ಮೊದಲ ಮಗುವಿನ ನಿರೀಕ್ಷೆಯಲ್ಲಿ ಇದ್ದೇವೆ ಎಂಬ ಸುದ್ದಿಯನ್ನು ಪತಿ ನಿತಿನ್ ರಾಜು ಜೊತೆ ಫೋಟೋ ಶೇರ್ ಮಾಡುವ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ತಿಳಿಸಿದ್ದರು ಪ್ರಣಿತಾ. ಈಗ ಈ ನಟಿ ತನ್ನ ಬೇಬಿ ಬಂಪ್ ಫೋಟೋ ಶೇರ್ ಮಾಡುವ ಜೊತೆಗೆ ವರ್ಕೌಟ್ ಮಾಡುವ ವೀಡಿಯೋವನ್ನು ಶೇರ್ ಮಾಡಿದ್ದಾರೆ. ಇದನ್ನೂ ಓದಿ:  ವಿಜಯ್ ಸೇತುಪತಿ ಒಲಿಯುವುದು ನಯನತಾರಾಗಾ ಅಥವಾ ಸಮಂತಗಾ?: ಹೆಚ್ಚಿದ ಕುತೂಹಲ

    ಈ ಚೆಲುವೆ ತನ್ನ ಬೇಬಿ ಬಂಪ್ ಜೊತೆಗೆ ಮುದ್ದಾದ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದು, ಈಗ ಥ್ರೋಬ್ಯಾಕ್ ಡ್ಯಾನ್ಸಿಂಗ್ ವೀಡಿಯೋ ಶೇರ್ ಮಾಡಿರುವ ಈ ನಟಿ ಪ್ರೆಗ್ನೆನ್ಸಿ ಹಿಂದಿನ ದಿನಗಳನ್ನು ಮೆಲುಕು ಹಾಕುತ್ತಿದ್ದಾರೆ. ಜಿಮ್ನಲ್ಲಿ ಡ್ಯಾನ್ಸ್ ಮಾಡಿರುವ ವೀಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿರುವ ಪ್ರಣಿತಾ, ಡ್ಯಾನ್ಸ್ ಟು ಡ್ರೈವಿಂಗ್ ದಿ ಪ್ರೆಗ್ನೆನ್ಸಿ ಬ್ಲೂಸ್. ಮೇಜರ್ ಥ್ರೋಬ್ಯಾಕ್ ಎಂದು ಬರೆದು ಫೋಟೋ ಶೇರ್ ಮಾಡಿದ್ದಾರೆ.

    ಈ ಹಿಂದೆ ಪ್ರಣಿತಾ ಪೂಲ್‍ಸೈಡ್‍ನಲ್ಲಿ ವಿಶ್ರಾಂತಿ ಪಡೆಯುತ್ತ ತಾಯ್ತನದ ಆನಂದವನ್ನು ಸವಿಯುವ ಫೋಟೋವನ್ನು ಶೇರ್ ಮಾಡಿಕೊಂಡಿದ್ದರು. ಅಲ್ಲದೇ ಈ ನಟಿ ತಮ್ಮ ದಿನ ಫಿಟ್‍ನೆಸ್ ದಿನಚರಿಯೊಂದಿಗೆ ಇರಬೇಕು ಎಂದು ಇತರ ತಾಯಂದಿರನ್ನು ಪ್ರೇರೇಪಿಸಲು ಕೆಲವು ವಿಶೇಷ ವೀಡಿಯೋಗಳನ್ನು ಶೇರ್ ಮಾಡಿಕೊಂಡಿದ್ದರು. ಪ್ರಣಿತಾ ತಾಯಿಯಾಗುತ್ತಿದ್ದೇನೆ ಎಂದು ಹೇಳಿದ ಕೆಲವು ದಿನಗಳ ಹಿಂದೆಯೇ ಈ ನಟಿ ಕನ್ನಡಿ ಮುಂದೆ ನಿಂತು ಸೆಲ್ಫಿ ಕ್ಲಿಕಿಸಿಕೊಂಡು ಫೋಟೋ ಶೇರ್ ಮಾಡಿದ್ದರು. ಇದನ್ನೂ ಓದಿ: ಪಿಎಂ ಮನೆ ಮುಂದೆ ಎಲ್ಲ ಧರ್ಮದ ಸಾಲುಗಳನ್ನು ಪಠಿಸಲು ಅವಕಾಶ ಕೊಡಿ: NCP ನಾಯಕಿ 

  • ಪ್ರೆಗ್ನೆನ್ಸಿ ವೇಳೆ ಕಾಜಲ್ ಅಗರ್‌ವಾಲ್ ವರ್ಕೌಟ್ – ವೀಡಿಯೋ ವೈರಲ್

    ಪ್ರೆಗ್ನೆನ್ಸಿ ವೇಳೆ ಕಾಜಲ್ ಅಗರ್‌ವಾಲ್ ವರ್ಕೌಟ್ – ವೀಡಿಯೋ ವೈರಲ್

    ಹೈದರಾಬಾದ್: ಟಾಲಿವುಡ್ ನಟಿ ಕಾಜಲ್ ಅಗರ್‌ವಾಲ್ ಫಿಟ್‍ನೆಸ್ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದಾರೆ. ಏನೇ ಮಿಸ್ ಆದರೂ ಪ್ರತಿನಿತ್ಯ ವರ್ಕೌಟ್ ಮಾಡುವುದನ್ನು ಮಾತ್ರ ತಪ್ಪಿಸುವುದಿಲ್ಲ. ಸದ್ಯ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಕಾಜಲ್ ಗರ್ಭಿಣಿಯರು ಮಾಡುವಂತಹ ವ್ಯಾಯಾಮ ಮಾಡುವುದರಲ್ಲಿ ಫುಲ್ ಬ್ಯುಸಿಯಾಗಿದ್ದಾರೆ.

    ಕಾಜಲ್ ಅಗರ್‌ವಾಲ್ ಅವರು ಪ್ರೆಗ್ನೆನ್ಸಿ ವೇಳೆ ಪ್ರತಿನಿತ್ಯ ವರ್ಕೌಟ್ ಮಾಡುತ್ತಿರುವ ಪುಟ್ಟ ವೀಡಿಯೋವೊಂದನ್ನು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ವೀಡಿಯೋದಲ್ಲಿ ಕಾಜಲ್ ಲ್ಯಾವೆಂಡರ್-ಹ್ಯೂಡ್ ಸ್ಪೋಟ್ರ್ಸ್ ಬ್ರಾ ಧರಿಸಿ ಮತ್ತು ಲೂಸ್ ಜಾಕೆಟ್ ಧರಿಸಿ ವಿವಿಧ ರೀತಿಯಲ್ಲಿ ವ್ಯಾಯಾಮ ಮಾಡುತ್ತಿರುವುದನ್ನು ಕಾಣಬಹುದಾಗಿದೆ. ಜೊತೆಗೆ ಕ್ಯಾಪ್ಷನ್‍ನಲ್ಲಿ ಗರ್ಭಿಣಿಯರಿಗೆ ಏರೋಬಿಕ್ಸ್ ಮತ್ತು ವ್ಯಾಯಾಮ ಬಹಳ ಮುಖ್ಯ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ : ಶಿವರಾತ್ರಿ ಸಡಗರಕ್ಕೆ ಸಿದ್ಧಗೊಂಡ ಸ್ಯಾಂಡಲ್ ವುಡ್

    ನಾನು ಯಾವಾಗಲೂ ತುಂಬಾ ಆ್ಯಕ್ಟೀವ್ ಆಗಿರುತ್ತೇನೆ ಮತ್ತು ನನ್ನ ಇಡೀ ಜೀವನ ಕೆಲಸ ಮಾಡಿದ್ದೇನೆ. ಪ್ರೆಗ್ನೆನ್ಸಿ ವೇಳೆ ಯಾವುದೇ ಸಮಸ್ಯೆಗಳಿಲ್ಲದೆ ಇರಬೇಕೆಂದರೆ, ಎಲ್ಲಾ ಗರ್ಭಿಣಿಯರು ಆರೋಗ್ಯಕರವಾಗಿರಲು ಏರೋಬಿಕ್ ಮತ್ತು ಸ್ಟ್ರೆಂತ್ ಕಂಡೀಷನಿಂಗ್ ವ್ಯಾಯಾಮಗಳನ್ನು ಮಾಡಲು ಪ್ರೋತ್ಸಾಹಿಸಬೇಕು ಎಂದಿದ್ದಾರೆ.

    ಟ್ರೈನರ್ ನನ್ನ ಪ್ರೆಗ್ನೆನ್ಸಿ ವೇಳೆ ನನ್ನ ದೇಹ ಫಿಟ್ ಆಗಿರಲು ಸಹಾಯ ಮಾಡುತ್ತಿದ್ದಾರೆ. ಈ ವ್ಯಾಯಮಗಳು ನನಗೆ ಸ್ಟ್ರಾಂಗ್, ಲಾಂಗ್ ಮತ್ತು ತೆಳ್ಳಗಿರುವ ಫೀಲ್ ನೀಡುತ್ತಿದೆ. ಪ್ರೆಗ್ನೆನ್ಸಿ ವೇಳೆ ಏರೋಬಿಕ್ ನಮ್ಮ ದೇಹ ಫಿಟ್ ಆಗಿರಲು ಸಹಾಯವಾಗಿದೆ. ನಾವು ಕೂಡ ಫಿಟ್‍ನೆಸ್ ಕಾಪಾಡಿಕೊಳ್ಳಬೇಕು ಎಂದು ತಿಳಿಸಿದ್ದಾರೆ. ಇದನ್ನೂ ಓದಿ : ಮಾರ್ಚ್ ನಲ್ಲಿ ರಿಲೀಸ್ ಆಗಲಿರುವ ಬಿಗ್ ಬಜೆಟ್ ಸಿನಿಮಾಗಳಿಗೆ ಮತ್ತೆ ಸಂಕಷ್ಟ

    2022ರ ಹೊಸ ವರ್ಷದಂದು, ಕಾಜಲ್ ಅಗರ್‌ವಾಲ್ ಮತ್ತು ಗೌತಮ್ ಕಿಚ್ಲು ಅಪ್ಪ-ಅಮ್ಮ ಆಗುತ್ತಿರುವ ಸಿಹಿ ಸುದ್ದಿಯನ್ನು ಅಭಿಮಾನಿಗಳೊಂದಿಗೆ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡರು. ಅಲ್ಲದೇ ಇತ್ತೀಚೆಗಷ್ಟೆ ಸೀಮಂತ ಸಮಾರಂಭದ ಫೋಟೋವನ್ನು ಕಾಜಲ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.

  • ತಾಯಿಯಾಗ್ತಿದ್ದಾರಾ ಪ್ರಿಯಾಂಕಾ ಚೋಪ್ರಾ?

    ತಾಯಿಯಾಗ್ತಿದ್ದಾರಾ ಪ್ರಿಯಾಂಕಾ ಚೋಪ್ರಾ?

    ವಾಷಿಂಗ್ಟನ್: ಬಾಲಿವುಟ್ ನಟಿ ಪ್ರಿಯಾಂಕಾ ಚೋಪ್ರಾ ಸೋಶಿಯಲ್ ಮೀಡಿಯಾದಲ್ಲಿ ಒಂದಲ್ಲಾ ಒಂದು ವಿಚಾರಗಳಿಗೆ ಸುದ್ದಿಯಾಗುತ್ತಿರುತ್ತಾರೆ. ಇದೀಗ ಅವರು ಮಗುವನ್ನು ಪಡೆಯುವ ನೀರಿಕ್ಷೆಯಲ್ಲಿದ್ದಾರೆ ಎನ್ನುವ ಗಾಳಿಸುದ್ದಿಯೊಂದು ಹರಿದಾಡುತ್ತಿದೆ.

    ನೆಟ್‌ಫ್ಲಿಕ್ಸ್‌ನಲ್ಲಿ ಜೋನಸ್ ಸಹೋದರರ ಹೊಸ ಕಾರ್ಯಕ್ರಮ ಆರಂಭವಾಗಿದೆ. ಜೋನಸ್ ಬ್ರದರ್ಸ್ ಫ್ಯಾಮಿಲಿ ರೋಸ್ಟ್‌ನಲ್ಲಿ ಹಾಡು, ನೃತ್ಯ, ಚೇಷ್ಟೆ ಎಲ್ಲವೂ ಇರುತ್ತದೆ. ಈ ಕಾರ್ಯಕ್ರಮದಲ್ಲಿ ಪ್ರಿಯಾಂಕಾ ಚೋಪ್ರಾ ಭಾಗಿಯಾಗಿದ್ದರು. ಮೈಕ್ ಹಿಡಿದು ಸ್ಟೇಜ್ ಮೇಲೆ ಬಂದ ಪ್ರಿಯಾಂಕಾ ಚೋಪ್ರಾ ತಮ್ಮ ಪತಿಯ ಕಾಲೆಳೆಯಲು ಶುರುಮಾಡಿದರು. ಅಲ್ಲದೇ ಕೆಲವೇ ಹೊತ್ತಿನಲ್ಲಿ ನಮ್ಮ ಕುಟುಂಬದಲ್ಲಿ ಮಕ್ಕಳಿಲ್ಲದ ಏಕೈಕ ದಂಪತಿ ಎಂದರೆ ನಾನು ಮತ್ತು ನಿಕ್. ಆದರೆ ಸದ್ಯದಲ್ಲೇ ನಾವು ಮಕ್ಕಳನ್ನು ಪಡೆಯಲಿದ್ದೇವೆ ಅಂತ ಅನೌನ್ಸ್ ಮಾಡಿ ಪತಿಗೆ ಶಾಕ್ ನೀಡಿದ್ದಾರೆ. ಈ ಮಾತುಗಳನ್ನು ಪ್ರಿಯಾಂಕಾ ಬಾಯಲ್ಲಿ ಕೇಳುತ್ತಿದ್ದಂತೆ ಒಂದು ಕ್ಷಣ ಗಾಬರಿಗೊಂಡ ನಿಕ್ ಇನ್ನೇನು ತನ್ನ ಖುಷಿ ವ್ಯಕ್ತಪಡಿಸಬೇಕು ಅನ್ನೋವಾಗ್ಲೇ, ಜೋರಾಗಿ ನಕ್ಕ ಪ್ರಿಯಾಂಕಾ ತಮಾಷೆಗಾಗಿ ಹೇಳಿದ್ದು ಎಂದು ಶಾಕ್ ನೀಡಿದ್ದಾರೆ. ಇದನ್ನೂ ಓದಿ: ಪತಿಯಿಂದ ವಿಚ್ಛೇದನ ಪಡೆಯುತ್ತಾರಾ ಪ್ರಿಯಾಂಕಾ ಚೋಪ್ರಾ?

    ಪ್ರಿಯಾಂಕಾ ಛೋಪ್ರಾ ಹಾಗೂ ನಿಕ್ ವಯಸ್ಸಿನ ಅಂತರದಿಂದಾಗಿ ತೀವ್ರ ವಿವಾದಕ್ಕೆ ಒಳಪಟ್ಟಿದ್ದರು. ಇದರ ಬಗ್ಗೆಯೂ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಿಯಾಂಕಾ ವಯಸ್ಸಿನ ಅಂತರ ಎಷ್ಟು ಪರಿಣಾಮ ಬೀರಿದೆ ಅನ್ನೋದನ್ನು ಕೂಡ ಹೇಳಿದ್ದಾರೆ. 90ರ ದಶಕದಲ್ಲಿ ಪಾಪ್ ಸಂಸ್ಕೃತಿ ಹೇಗಿತ್ತು ಎನ್ನೋದು ಅರ್ಥ ಆಗೋದಿಲ್ಲ, ನಾನು ಅದನ್ನ ಅವನಿಗೆ ಕಲಿಸಬೇಕಾಯಿತು. ನನಗೆ ಹೊಸ ಜಮಾನದ ಟಿಕ್ ಟಾಕ್ ಹೇಗೆ ಬಳಸಬೇಕು ಅನ್ನೋದನ್ನ ನಿಕ್ ಕಲಿಸಿದ. ಅಲ್ಲದೆ ಒಬ್ಬ ಯಶಸ್ವಿ ನಟನಾ ವೃತ್ತಿ ಜೀವನ ಹೇಗಿರುತ್ತದೆ ಎಂದು ಅವರಿಗೆ ನಾನು ಕಲಿಸಿದೆ ಅಂತ ಹೇಳಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದವರ ಮೊಗದಲ್ಲಿ ಪ್ರಿಯಾಂಕ ನಗೂ ಮೂಡಿಸಿದರು. ಇದನ್ನೂ ಓದಿ: ಐಷಾರಾಮಿ ರೆಸ್ಟೋರೆಂಟ್ ಆರಂಭಿಸಿದ ಪ್ರಿಯಾಂಕಾ ಚೋಪ್ರಾ

    ಪ್ರಿಯಾಂಕಾ ಅವರು ಪಾಪ್ ಸ್ಟಾರ್ ನಿಕ್ ಜೋನಾಸ್ ಅವರನ್ನು 2018 ಡಿಸೆಂಬರ್ 1ರಂದು ವಿವಾಹವಾಗಿದ್ದರು. ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮೇಲೆ ಪ್ರಿಯಾಂಕಾ ಅಮೆರಿಕದಲ್ಲಿ ನೆಲೆಸಿದ್ದಾರೆ. ಮದುವೆಯ ನಂತರ ಪ್ರಿಯಾಂಕಾ ಚೋಪ್ರಾ ಇನ್‍ಸ್ಟಾಗ್ರಾಮ್‍ನಲ್ಲಿ ತಮ್ಮ ಹೆಸರಿನ ಜೊತೆಗೆ ಜೋನಾಸ್ ಎಂದು ಸೇರಿಸಿಕೊಂಡಿದ್ದರು. ಇತ್ತೀಚೆಗೆ ಜೋನಾಸ್ ಹೆಸರನ್ನು ಸೋಶಿಯಲ್ ಮೀಡಿಯಾದಿಂದ ತೆಗೆದುಹಾಕಿದ್ದರು. ಇಬ್ಬರ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದೆ ಎನ್ನುವ ಸುದ್ದಿಯೊಂದು ಬಾಲಿವುಡ್ ಅಂಗಳಲದಲ್ಲಿ ಹರಿದಾಡುತ್ತಿತ್ತು. ಈ ವೇಳೆ ನಿಕ್ ಜೋನಾಸ್ ಹಾಕಿರುವ ವೀಡಿಯೋಗೆ ಪ್ರಿಯಾಂಕಾ ನಿನ್ನ ತೋಳಿನಲ್ಲಿ ನಾನು ಸಾಯಬೇಕು ಎಂದು ಕಾಮೆಂಟ್ ಮಾಡುವ ಮೂಲಕವಾಗಿ ಗಾಸಿಪ್‍ಗೆ ತೆರೆ ಎಳೆದಿದ್ದಾರೆ.