Tag: Pregnancy

  • ಎರಡನೇ ಮಗುವಿನ ನಿರೀಕ್ಷೆಯಲ್ಲಿ ಸೋನಂ ಕಪೂರ್

    ಎರಡನೇ ಮಗುವಿನ ನಿರೀಕ್ಷೆಯಲ್ಲಿ ಸೋನಂ ಕಪೂರ್

    ಬಾಲಿವುಡ್ ನಟ ಅನಿಲ್ ಕಪೂರ್ ಪುತ್ರಿ, ನಟಿ ಸೋನಂ ಕಪೂರ್ (Sonam Kapoor) ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

    2022ರಲ್ಲಿ ಗಂಡು ಮುಗುವಿಗೆ ಜನ್ಮ ನೀಡಿದ್ದ ಸೋನಂ ಈಗ ಮತ್ತೆ ಗರ್ಭಿಣಿಯಾಗಿದ್ದಾರೆ. ಮೊದಲ ಮಗು ವಾಯು ಜನಿಸಿದ ಬಳಿಕ ಸಿನಿಮಾದಲ್ಲಿ ನಟಿಸುವುದನ್ನ ಕಡಿಮೆ ಮಾಡಿದ್ದ ಸೋನಂ ಮಾಡೆಲಿಂಗ್ ಕ್ಷೇತ್ರದಲ್ಲೇ ಹೆಚ್ಚಿನ ಜನಪ್ರಿಯತೆ ಗಳಿಸಿದ್ದಾರೆ. ಇದನ್ನೂ ಓದಿ:  ವಿಜಯ್ ದೇವರಕೊಂಡ ಕಾರು ಅಪಘಾತ – ಅಪಾಯದಿಂದ ಪಾರು

    ಗರ್ಭಿಣಿಯಾದ ಬಳಿಕ ಸೋನಂ ಎಲ್ಲಿಯೂ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿಲ್ಲ. ಜೊತೆಗೆ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚಿನ ಫೋಟೋಗಳನ್ನ ಪೋಸ್ಟ್ ಮಾಡುವ ವೇಳೆ ಹೊಟ್ಟೆಯನ್ನ ಹೈಡ್ ಮಾಡುತ್ತಿದ್ದಾರೆ. ಹೀಗಾಗಿ ಸೋನಂ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂಬ ವದಂತಿ ಹಬ್ಬಿದೆ.

    ಅಂದಹಾಗೆ ಸೋನಂ ಕಪೂರ್ 2018 ರಲ್ಲಿ ಉದ್ಯಮಿ ಆನಂದ್ ಅಹೂಜಾರನ್ನ ಮದುವೆಯಾಗಿದ್ದರು. ಶೀಘ್ರವೇ ಗರ್ಭಿಣಿಯಾಗುರುವುದನ್ನು ಸೋನಂ ಅಧಿಕೃತವಾಗಿ ಪ್ರಕಟಿಸುವ ಸಾಧ್ಯತೆಯಿದೆ.

  • ಪುಟ್ಟ ಗಣೇಶನ ಹಿಡಿದು ಸಿಹಿ ಸುದ್ದಿ ಹಂಚಿಕೊಂಡ ಐಶ್ವರ್ಯ-ವಿನಯ್ ದಂಪತಿ

    ಪುಟ್ಟ ಗಣೇಶನ ಹಿಡಿದು ಸಿಹಿ ಸುದ್ದಿ ಹಂಚಿಕೊಂಡ ಐಶ್ವರ್ಯ-ವಿನಯ್ ದಂಪತಿ

    ರಾಜಾ-ರಾಣಿ ರಿಯಾಲಿಟಿ ಶೋ ಮೂಲಕ ಖ್ಯಾತಿ ಗಳಿಸಿದ ಐಶ್ವರ್ಯ- ವಿನಯ್ ದಂಪತಿ (Aishwarya Vinay) ಸಿಹಿ ಸುದ್ದಿಯೊಂದನ್ನು ಹಂಚಿಕೊಂಡಿದ್ದಾರೆ.

    ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ದಂಪತಿ ಗಣೇಶ ಹಬ್ಬದಂದು ಪುಟ್ಟ ವಿಗ್ರಹ ಹಿಡಿದುಕೊಂಡು ಚತುರ್ಥಿ ಹಬ್ಬ ಆಚರಿಸಿದ್ದಾರೆ.

    ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಎಲ್ಲರಿಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳು. ಈ ವಿಶೇಷ ದಿನದಂದು ನಿಮಗೆ ಪುಟ್ಟ ರಹಸ್ಯವೊಂದನ್ನು ಹೇಳುತ್ತಿದ್ದೇವೆ. ನಾವು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದೇವೆ. ದೇವರು ನಾವು ಕೇಳಿದ್ದಕ್ಕಿಂತ ಹೆಚ್ಚಿನದನ್ನು ನೀಡಿದ್ದಾನೆ. ನಿಮ್ಮ ಪ್ರೀತಿ ಮತ್ತು ಆಶೀರ್ವಾದ ನಮ್ಮ ಜೊತೆ ಇರಲಿ. ದೃಷ್ಟಿ ಹಾಕಬೇಡಿ ಎಂದು ಬರೆದುಕೊಂಡಿದ್ದಾರೆ.

    ಮೂಲತಃ ಉತ್ತರ ಕರ್ನಾಟಕದವರಾದ ಇವರು ಹಲವುಗಳ ವರ್ಷಗಳ ಕಾಲ ಪ್ರೀತಿಸಿ, ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಐಶ್ವರ್ಯ ಅಗ್ನಿಸಾಕ್ಷಿ, ರಾಮಾಚಾರಿ ಸೇರಿದಂತೆ ತೆಲುಗು, ತಮಿಳು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಇನ್ನೂ ವಿನಯ್ ಕೂಡ ಹಲವು ಸೀರಿಯಲ್‌ಗಳಲ್ಲಿ ನಟಿಸಿದ್ದಾರೆ. ಅದಲ್ಲದೇ ಇಬ್ಬರು ಒಟ್ಟಿಗೆ ರಾಜಾ-ರಾಣಿ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡಿದ್ದರು.

    ಇತ್ತೀಚಿಗೆ ರಾಮಾಚಾರಿ ಧಾರಾವಹಿಯಲ್ಲಿ ನಟಿಸುತ್ತಿದ್ದ ಐಶ್ವರ್ಯ ಅವರು ಕೆಲ ದಿನಗಳಿಂದ ಕಾಣಿಸುತ್ತಿರಲಿಲ್ಲ. ಸದ್ಯ ದಂಪತಿ ಗಣೇಶ ಹಬ್ಬದಂದು ಮೊದಲ ಮಗುವಿನ ಬಗ್ಗೆ ಸಿಹಿ ಹಂಚಿಕೊಂಡಿದ್ದಾರೆ.

  • 1+ 1 = 3 ಎಂದರು ನಟಿ ಪರಿಣಿತಿ ಚೋಪ್ರಾ

    1+ 1 = 3 ಎಂದರು ನಟಿ ಪರಿಣಿತಿ ಚೋಪ್ರಾ

    ಬಾಲಿವುಡ್ ನಟಿ ಪರಿಣಿತಿ ಚೋಪ್ರಾ (Parineeti Chopra) ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇದೀಗ ಪರಿಣಿತಿ ಗರ್ಭಿಣಿಯಾಗಿದ್ದು ಇನ್ಸ್‌ಸ್ಟಾಗ್ರಾಂನಲ್ಲಿ (Instagram) ಅಧಿಕೃತ ಘೋಷಣೆ ಮಾಡಿದ್ದಾರೆ. 1+ 1 = 3 ಎಂಬ ಬರಹದಲ್ಲಿ ಪುಟ್ಟ ಪಾದಗಳ ಚಿತ್ರ ತೋರಿಸಿದ್ದಾರೆ. ನಮ್ಮ ಪುಟ್ಟ ಜಗತ್ತು ಬರುತ್ತಿದೆ ಎಂದು ಮಗುವಿನ ನಿರೀಕ್ಷೆಯಲ್ಲಿರುವ ಸುದ್ದಿಯನ್ನು ವಿಭಿನ್ನವಾಗಿ ನೀಡಿದ್ದಾರೆ ಬಾಲಿವುಡ್ ನಟಿ.ಇದನ್ನೂ ಓದಿ: ಅಂಗವಿಕಲರ ಬಗ್ಗೆ ತಮಾಷೆ – ಸ್ಟ್ಯಾಂಡ್ ಅಪ್ ಕಾಮಿಡಿಯನ್‌ಗಳಿಗೆ ಸುಪ್ರೀಂ ತರಾಟೆ

    ರಾಜ್ಯಸಭಾ ಸದಸ್ಯ ರಾಘವ್ ಚಡ್ಡಾರನ್ನು (Raghav Chadha) ನಟಿ ಪರಿಣಿತಿ ಚೋಪ್ರಾ 2023ರಲ್ಲಿ ವಿವಾಹವಾಗಿದ್ದರು. ಬಳಿಕ ಸಿನಿಮಾ ನಟನೆಯಿಂದ ದೂರವೇ ಉಳಿದಿದ್ದರು ಪರಿಣಿತಿ. ಮದುವೆ ಬಳಿಕ ಪರಿಣಿತಿ ತೂಕ ಹೆಚ್ಚಿಸಿಕೊಂಡಾಗ ಗರ್ಭಿಣಿ ಎಂದು ವದಂತಿ ಹಬ್ಬುತ್ತಿದ್ದ ವೇಳೆ ಪರಿಣಿತಿ ಖಾರವಾಗಿ ಉತ್ತರ ಕೊಟ್ಟಿದ್ದನ್ನ ಇಲ್ಲಿ ನೆನೆಯಬಹುದು. `ಗರ್ಭಿಣಿಯಾದಾಗ ಖಂಡಿತ ಹೇಳ್ತೀನಿ, ದಪ್ಪಗಾದ ಮಾತ್ರಕ್ಕೆ, ಅಗಲ ಬಟ್ಟೆ ಧರಿಸಿದ ಮಾತ್ರ ಗರ್ಭಿಣಿ ಎಂದು ಜಡ್ಜ್ ಮಾಡಬೇಡಿ’ ಎಂದಿದ್ದರು. ಇದೀಗ ಕೊನೆಗೂ ತಾವು ಗರ್ಭಿಣಿಯಾಗಿರುವ ಸುದ್ದಿ ಕೊಟ್ಟಿದ್ದಾರೆ ಪರಿಣಿತಿ ಚೋಪ್ರಾ.

    ಅಂದಹಾಗೆ ಪರಿಣಿತಿಗೆ ಈಗೆಷ್ಟು ತಿಂಗಳು..? ಯಾವಾಗ ಮಗು ನಿರೀಕ್ಷಿಸಬಹುದು ಎಂಬ ಪ್ರಶ್ನೆಗಳಿಗೆ ಇನ್ನೂ ಉತ್ತರ ಸಿಕ್ಕಿಲ್ಲ. ಇತ್ತೀಚೆಗೆ ಪತಿ ಜೊತೆ ವೆಕೇಷನ್‌ಗೆ ತೆರಳಿದ್ದ ಫೋಟೋಗಳನ್ನ ಇನ್ಸ್‌ಸ್ಟಾಗ್ರಾಂನಲ್ಲಿ ಪರಿಣಿತಿ ಪೋಸ್ಟ್ ಮಾಡ್ದಾಗೆಲ್ಲ ಪರಿಣಿತಿಗೆ ಇದೇ ಪ್ರಶ್ನೆ ಎದುರಾಗಿತ್ತು. ಇದೀಗ ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿರುವ ಸುದ್ದಿಯನ್ನ ಅಧಿಕೃತವಾಗಿ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. ಇನ್ನು ನಟಿಯರಾದ ಪ್ರಿಯಾಂಕಾ ಚೋಪ್ರಾ, ಕತ್ರೀನಾ ಕೈಫ್, ಸೋನಂ ಕಪೂರ್, ಸೇರಿದಂತೆ ಹಲವರು ಇನ್ಸ್‌ಸ್ಟಾಗ್ರಾಂನಲ್ಲಿನಲ್ಲೇ ಶುಭಾಶಯ ಕೋರಿದ್ದಾರೆ. ಅಂದಹಾಗೆ ಪರಿಣಿತಿ ಚೋಪ್ರಾ ಖ್ಯಾತ ನಟಿ ಪ್ರಿಯಾಂಕ ಚೋಪ್ರಾಗೆ ಸಂಬಂಧದಲ್ಲಿ ಸಹೋದರಿ ಆಗಬೇಕು.ಇದನ್ನೂ ಓದಿ: ಮಾತಾಡೋರು ಮಾತಾಡಲಿ, ಸೂಕ್ತ ವೇದಿಕೆಯಲ್ಲಿ ನಾನು ಮಾತಾಡ್ತೀನಿ: ಬಾನು ಮುಷ್ತಾಕ್

  • ಭಾರತದಲ್ಲಿ ಮಗು ಭ್ರೂಣದಲ್ಲಿ ಸಾವನ್ನಪ್ಪುತ್ತಿರುವ ಸಂಖ್ಯೆ ಹೆಚ್ಚಾಗುತ್ತಿದೆ, ಇದರ ತಡೆಗೆ ಕ್ರಮಗಳೇನು?

    ಭಾರತದಲ್ಲಿ ಮಗು ಭ್ರೂಣದಲ್ಲಿ ಸಾವನ್ನಪ್ಪುತ್ತಿರುವ ಸಂಖ್ಯೆ ಹೆಚ್ಚಾಗುತ್ತಿದೆ, ಇದರ ತಡೆಗೆ ಕ್ರಮಗಳೇನು?

    ಭಾರತವು (India) ವಿಶ್ವದಲ್ಲೇ ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರವಾಗಿ, ಜಗತ್ತಿಗೆ ಅಗ್ರಗಣ್ಯ ಕೊಡುಗೆ ನೀಡುತ್ತದೆ. ಇದರ ಜೊತೆಗೆ ಭಾರತವು ವಿಶ್ವದಲ್ಲಿಯೇ ಭ್ರೂಣ ಮರಣಗಳಿಗೆ (Fetal Mortality) ಸಾಕ್ಷಿಯಾಗಿದೆ.

    ಹೌದು, ಭ್ರೂಣ ಹತ್ಯೆ ಮಾಡುವುದರ ಹೊರತಾಗಿಯೂ ಭಾರತದಲ್ಲಿ ಭ್ರೂಣದಲ್ಲಿ ಶಿಶುಗಳ ಮರಣ ಹೊಂದುತ್ತಿರುವ ಸಂಖ್ಯೆ ಹೆಚ್ಚಾಗುತ್ತಿದ್ದು, ಇದರ ಹಿಂದೆ ಹಲವು ಕಾರಣಗಳಿವೆ. ಅಧಿಕ ರಕ್ತದೊತ್ತಡ, ಗರ್ಭಾವಸ್ಥೆಯ ಮಧುಮೇಹ, ಸೋಂಕುಗಳು, ಅಪೌಷ್ಟಿಕತೆಯಂತಹ ತಾಯಿಯಲ್ಲಿನ ಸಮಸ್ಯೆಗಳು ಭ್ರೂಣದಲ್ಲಿ ಮಗು ಸಾವನ್ನಪ್ಪಲು ಪ್ರಮುಖ ಕಾರಣವಾಗುತ್ತದೆ.

    ಸಾಮಾನ್ಯವಾಗಿ ಹೆರಿಗೆಯ ನಂತರ ತಾಯಿಯ ಮರಣ, ನವಜಾತ ಶಿಶುವಿನ ಮರಣವಾದಾಗ ಇವುಗಳ ಮೇಲೆ ಹೆಚ್ಚಿನ ಗಮನ ಹರಿಸಲಾಗುತ್ತದೆ. ಆದರೆ ಭ್ರೂಣದಲ್ಲಿಯೇ ಸಾಯುವ ಮಗುವಿನ ಸಾವಿನ ಕಾರಣವನ್ನು ಪತ್ತೆ ಹಚ್ಚುವಲ್ಲಿ ಕಡಿಮೆ ಗಮನಹರಿಸಲಾಗಿದೆ.

    ಭ್ರೂಣ ಮರಣ ಎಂದರೇನು?
    ಒಂದು ಹೆಣ್ಣು ಗರ್ಭಿಣಿಯಾದ ಬಳಿಕ ಮಗು ಹೊಟ್ಟೆಯಲ್ಲಿಯೇ ಉಸಿರಾಟ, ಹೃದಯ ಇಲ್ಲದೇ ಇರುವುದು ಅಥವಾ ಹೆರಿಗೆಯ ಬಳಿಕ ಉಸಿರಾಡದೇ ಇರುವುದು ಈ ರೀತಿಯ ಸಮಸ್ಯೆಯಿಂದ ಮೃತಪಟ್ಟಿರುತ್ತದೆ ಇದನ್ನು ಭ್ರೂಣ ಮರಣ ಎಂದು ಕರೆಯಲಾಗುತ್ತದೆ.

    ಗರ್ಭಾವಸ್ಥೆಯ 28 ವಾರಗಳು ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯಲ್ಲಿ ಮರಣಹೊಂದಿದ ಮಗು ಜನನ ಹೊಂದುತ್ತವೆ. ಗ್ಲೋಬಲ್ ಬರ್ಡನ್ ಆಫ್ ಡಿಸೀಸ್ ಅಧ್ಯಯನನ ಪ್ರಕಾರ, 2021ರಲ್ಲಿ ಭಾರತದಲ್ಲಿ 20 ವಾರಗಳ ಗರ್ಭಾವಸ್ಥೆಯಲ್ಲಿ 567,000 ಮತ್ತು 28 ವಾರಗಳ ಗರ್ಭಾವಸ್ಥೆಯಲ್ಲಿ 397,300 ಮರಣ ಹೊಂದಿದ ಶಿಶುಗಳು ಜನಿಸಿರುವುದನ್ನು ವರದಿ ಹೊಂದಿದೆ. ಇದು ಜಾಗತಿಕವಾಗಿ ಅತೀ ಹೆಚ್ಚು ಭ್ರೂಣ ಮರಣಗಳ ಸಂಖ್ಯೆಯಾಗಿದೆ. ಹೆರಿಗೆಯ ಸಂಖ್ಯೆ ಕಡಿಮೆಯಾದರೂ ಕೂಡ ಭ್ರೂಣ ಮರಣಗಳ ಇಳಿಕೆಯ ವೇಗ ಕಡಿಮೆಯಾಗಿದೆ.

    2030ರ ವೇಳೆಗೆ 28 ವಾರಗಳ ಗರ್ಭಾವಸ್ಥೆಯ ಅವಧಿಯಲ್ಲಿ ಮರಣ ಹೊಂದಿದ ಜನನದ ಪ್ರಮಾಣವನ್ನು 1000ಕ್ಕೆ ಇಳಿಸುವ ಗುರಿಯನ್ನು ಜಾಗತಿಕ ನವಜಾತ ಕ್ರಿಯಾ ಯೋಜನೆಯು ಹೊಂದಿದೆ.

    ಭಾರತದಲ್ಲಿ ಭ್ರೂಣ ಮರಣಕ್ಕೆ ಕಾರಣವೇನು?
    ಮೂಲ ಕಾರಣ ತಾಯಿಯ ಜೀವನ ಶೈಲಿ, ಅಪೌಷ್ಟಿಕತೆ, ಅನುವಂಶೀಯತೆ ಎನ್ನುವುದು ಮೂಲ ಕಾರಣಗಳಾಗಿ ಪರಿಣಮಿಸುತ್ತವೆ. 20% ರಷ್ಟು ಭ್ರೂಣ ಮರಣವು ಅನುವಂಶೀಯಾಗಿ ಹಾಗೂ 13% ನಷ್ಟು ಅಸಮರ್ಪಕ ಭ್ರೂಣದ ಬೆಳವಣಿಗೆಯಿಂದ ಹೊಂದುತ್ತದೆ. ಇನ್ನೂ ಕೆಲವು ಗ್ರಾಮೀಣ ವಸತಿ ಸ್ಥಿತಿ, ಕಡಿಮೆ ಸಾಮಾಜಿಕ-ಆರ್ಥಿಕ ಸ್ತರಗಳು ಮತ್ತು ಪ್ರಸವಪೂರ್ವ ಆರೈಕೆಯ ಕಳಪೆಯಿಂದಾಗಿ ಮರಣ ಹೊಂದುತ್ತವೆ.

    ಇನ್ನೂ ಇದರಿಂದ ತಾಯಿಯ ಮೇಲೆ ಪರಿಣಾಮ ಬೀರುವುದಲ್ಲದೇ, ಖಿನ್ನತೆ, ಆತಂಕ ಹಾಗೂ ಮಾನಸಿಕ ರೋಗಗಳಿಂದ ಬಳಲುತ್ತಾರೆ. ಅವರ ಪಾಲುದಾರರು ಹೆಚ್ಚಿನ ಖಿನ್ನತೆ, ಆತಂಕ ಮತ್ತು ಇತರ ಮಾನಸಿಕ ರೋಗಲಕ್ಷಣಗಳಿಂದ ಬಳಲುತ್ತಾರೆ.

    ಭ್ರೂಣ ಮರಣವು ಮಹಿಳೆಯ ಸಂತಾನೋತ್ಪತ್ತಿ ಆರೋಗ್ಯದ ಮೇಲೆ ಗಮನಾರ್ಹವಾದ ದೀರ್ಘಕಾಲೀನ ಪರಿಣಾಮವನ್ನು ಬೀರುತ್ತದೆ. ಇನ್ನೊಂದು ಹೆರಿಗೆಯ ಸಂದರ್ಭದಲ್ಲಿ ಅಪಾಯದ ಪರಿಣಾಮ ಸುಮಾರು ಐದು ಪಟ್ಟು ಹೆಚ್ಚು ಹೊಂದಿರುತ್ತಾರೆ.

    ಭ್ರೂಣ ಹತ್ಯೆಯನ್ನು ತಡೆಯುವುದು ಹೇಗೆ?
    ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಹೆರಿಗೆಗಳ ಸಾಂಕ್ರಾಮಿಕ ರೋಗಶಾಸ್ತ್ರ, ರೋಗನಿರ್ಣಯ ಮತ್ತು ತಡೆಗಟ್ಟುವಿಕೆ ಮತ್ತು ಆರೋಗ್ಯ ವ್ಯವಸ್ಥೆಯಲ್ಲಿನ ಸವಾಲುಗಳನ್ನು ಎತ್ತಿಹಿಡಿಯುತ್ತಿದೆ. ಈ ಮೂಲಕ ಸಮಸ್ಯೆಯನ್ನು ಬಗೆಹರಿಸುವಲ್ಲಿ ಭಾರತವು ಮಹತ್ವದ ಕ್ರಮಗಳನ್ನು ತೆಗೆದುಕೊಳ್ಳುತ್ತದೆ.

    ವೈದ್ಯಕೀಯ ತಜ್ಞರು ಪೆರಿಕಾನ್ಸೆಪ್ಷನಲ್ ಫೋಲಿಕ್ ಆಸಿಡ್ ಪೂರೈಕೆ, ಸಿಫಿಲಿಸ್ ಮತ್ತು ಮಲೇರಿಯಾದಂತಹ ಸೋಂಕುಗಳ ಆರಂಭಿಕ ಪತ್ತೆ, ಮಧುಮೇಹ ನಿರ್ವಹಣೆ ಮತ್ತು ಗರ್ಭಾವಸ್ಥೆಯಲ್ಲಿ ಅಧಿಕ ರಕ್ತದೊತ್ತಡದ ಅಸ್ವಸ್ಥತೆಗಳ ಪತ್ತೆ ಹಾಗೂ ಪೌಷ್ಟಿಕಾಂಶ ಆಹಾರ ಮೂಲಕ ತಡೆಗಟ್ಟುವ ಕ್ರಮಗಳನ್ನು ಸೂಚಿಸುತ್ತದೆ.

  • ಬಳ್ಳಾರಿ| ಒಂದೇ ದಿನ ಸಿಸೇರಿಯನ್‌ – ಮೂವರು ಗರ್ಭಿಣಿಯರು ಸಾವು, ಐಸಿಯುನಲ್ಲಿ ನಾಲ್ವರಿಗೆ ಚಿಕಿತ್ಸೆ

    ಬಳ್ಳಾರಿ| ಒಂದೇ ದಿನ ಸಿಸೇರಿಯನ್‌ – ಮೂವರು ಗರ್ಭಿಣಿಯರು ಸಾವು, ಐಸಿಯುನಲ್ಲಿ ನಾಲ್ವರಿಗೆ ಚಿಕಿತ್ಸೆ

    – ಬಳ್ಳಾರಿ ಸರ್ಕಾರಿ ಆಸ್ಪತ್ರೆಯಲ್ಲಿ ದುರಂತ
    – ಮೂವರ ಸಾವಿಗೆ IV Fluid ಔಷಧಿಯೇ ಕಾರಣ?
    – ಇನ್ನೂ ಬಳ್ಳಾರಿಗೆ ಭೇಟಿ ನೀಡಿಲ್ಲ ಜಮೀರ್‌ ಅಹ್ಮದ್‌

    ಬಳ್ಳಾರಿ: ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ನ. 9 ರಂದು ಸಿಸೇರಿಯನ್ (Cesarean) ಒಳಗಾಗಿದ್ದ ಮೂವರು ಬಾಣಂತಿಯರು ಏಕಾಏಕಿ ಸಾವನ್ನಪ್ಪಿದ ಪ್ರಕರಣ ಈಗ ಹಲವು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.

    ನ.9 ರಂದು ಹೆರಿಗೆಗೆ ಬಂದಿದ್ದ ಏಳು ಗರ್ಭಿಣಿಯರು ಬಳ್ಳಾರಿ ಜಿಲ್ಲಾ ಆಸ್ಪತ್ರೆಯಲ್ಲಿ (Ballari District Hospital) ಸಿಸೇರಿಯನ್‌ಗೆ ಒಳಗಾಗಿದ್ದರು. ನ.10 ರಂದು ನಂದಿನಿ ಮತ್ತು ಲಲಿತಮ್ಮ ಸಾವನ್ನಪ್ಪಿದ್ದರೆ ನ.13 ರಂದು ರೋಜಮ್ಮ ಮೃತಪಟ್ಟಿದ್ದರು. ಉಳಿದ ನಾಲ್ವರು ಬಾಣಂತಿಯರು ಬಿಮ್ಸ್ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಸಾವಿಗೆ ಕಾರಣ ಏನು?
    ಮೂವರು ತಾಯಂದಿರ ಸಾವಿಗೆ ಅಸಲಿ ಕಾರಣ ಇನ್ನೂ ತಿಳಿದು ಬಾರದೇ ಇದ್ದರೂ ಮೇಲ್ನೋಟಕ್ಕೆ ಇದು ಮೆಡಿಕಲ್ ರಿಯಾಕ್ಷನ್ ಎನ್ನುವ ಅನುಮಾನ ಶುರುವಾಗಿದೆ. ಮೂವರ ಸಾವಿಗೆ IV Fluid ಔಷಧಿಯೇ ಕಾರಣ  ಎಂಬ ಸಂಶಯ ವ್ಯಕ್ತವಾಗುತ್ತಿದೆ. ಯಾಕೆಂದರೆ ಸಿಸೇರಿಯನ್ ಬಳಿಕ ವೈದ್ಯರು ಐವಿ ಫ್ಲೂಯಿಡ್ ಹಾಗೂ ಎನ್‌ಎಸ್‌ಎಲ್‌ ಗ್ಲುಕೋಸ್‌ ಹಾಕಿದ್ದರು. ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ(KSMSCL) ಕಳುಹಿಸಿದ್ದ ಗ್ಲುಕೋಸ್‌ಗಳನ್ನು ನ. 9 ರಂದು ಹಾಕಲಾಗಿತ್ತು. ಆ ಬಳಿಕ ಬಾಣಂತಿಯರ ಆರೋಗ್ಯದಲ್ಲಿ ಏಕಾಏಕಿ ಏರುಪೇರಾಗಿ ನ.10 ರಂದು ನಂದಿನಿ ಹಾಗೂ ಲಲಿತಮ್ಮ ಮೃತಪಟ್ಟಿದ್ದರು. ಕೂಡಲೇ ಇನ್ನುಳಿದ ಐದು ಬಾಣಂತಿಯರನ್ನು ಬಿಮ್ಸ್‌ಗೆ ರವಾನೆ ಮಾಡಲಾಗಿತ್ತು. ಇದನ್ನೂ ಓದಿ: ಬಿಪಿಎಲ್, ಎಪಿಎಲ್‌ ಕಾರ್ಡ್‌ದಾರರಿಗೆ ಬಿಗ್‌ ಶಾಕ್!

     

    KSMSCL ಕಳುಹಿಸಿದ್ದ ಗ್ಲುಕೋಸ್‌ಗಳೇ ಇದಕ್ಕೆಲ್ಲಾ ಕಾರಣ ಎಂಬ ಬಲವಾದ ಅನುಮಾನ ವ್ಯಕ್ತವಾಗುತ್ತಿದೆ. ಪಶ್ಚಿಮ ಬಂಗಾಳ ಮೂಲದ ಒಂದು ಖಾಸಗಿ ಮೆಡಿಕಲ್ ಸಪ್ಲೈ ಕಂಪನಿಯಿಂದ ಈ ಗ್ಲುಕೋಸ್‌ ಖರೀದಿಸಲಾಗಿದೆ. ಈ ಹಿಂದೆ ಈ ಕಂಪನಿಯನ್ನು ಬ್ಲಾಕ್‌ ಲಿಸ್ಟ್‌ಗೆ ಹಾಕಲಾಗಿತ್ತು ಎನ್ನಲಾಗುತ್ತಿದೆ. ಇದೇ ಕಂಪನಿ ನೀಡಿದ ಮೆಡಿಸಿನ್ ಪಡೆದು ತುಮಕೂರಿನಲ್ಲೂ ಹಲವರು ಸಾವಿಗೀಡಾಗಿದ್ದರು. ಈಗ ಅದೇ ಕಂಪನಿಯ ಔಷಧಿಯಿಂದಲೇ ಬಳ್ಳಾರಿಯ ಬಾಣಂತಿಯರ ಸಾವಾಗಿರಬಹುದು ಎನ್ನುವ ಶಂಕೆ ಇದೆ.

    ಆರೋಗ್ಯವಾಗಿವೆ ಶಿಶುಗಳು:
    ಮೂವರು ಬಾಣಂತಿಯರಿಗೆ ಜನಿಸಿರುವ ಶಿಶುಗಳು ಆರೋಗ್ಯದಿಂದ ಇವೆಯಾದರೂ ಮೃತ ಬಾಣಂತಿಯರ ಕುಟುಂಬಸ್ಥರು ದಿಕ್ಕು ತೋಚದ ಸ್ಥಿತಿಯಲ್ಲಿದ್ದಾರೆ. ಏನೂ ಅರಿಯದ ಹಸುಳೆಗಳನ್ನ ಕಂಡು ಮಮ್ಮಲ ಮರುಗುತ್ತಿದ್ದಾರೆ.

    ರೋಜಾಮ್ಮ ಅವರ ಗಂಡ ರಾಜಾ ಹೆಂಡತಿಯ ಸಾವನ್ನು ಅರಗಿಸಿಕೊಳ್ಳಲಾಗದೇ ಶುಕ್ರವಾರ ಸಂಜೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕೊಪ್ಪಳದ ಗಂಗಾವತಿಯ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಇಡೀ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿರುವ ಸರ್ಕಾರ ತನಿಖಾ ತಂಡವನ್ನು ರಚಿಸಿದೆ. ಇದರ ನಡುವೆ ಸಂಸದ ಈ ತುಕಾರಾಂ, ಶಾಸಕ ನಾರಾ ಭರತ್ ರೆಡ್ಡಿ ಆಸ್ಪತ್ರೆಗೆ ಭೇಟಿ ನೀಡಿ,ಪರಿಶೀಲನೆ ನಡೆಸಿದ್ದು ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ.

    ಚುನಾವಣೆಯಲ್ಲಿ ಜಮೀರ್‌ ಬ್ಯುಸಿ:
    ಇಷ್ಟೊಂದು ದೊಡ್ಡ ಘಟನೆ ಸಂಭವಿಸಿದರೂ ಉಸ್ತುವಾರಿ ಸಚಿವ ಜಮೀರ್‌ ಅಹ್ಮದ್‌ ಇನ್ನೂ ಬಳ್ಳಾರಿಗೆ ಬಂದಿಲ್ಲ. ಕರ್ನಾಟಕ ಉಪಚುನಾವಣೆಯ ಪ್ರಚಾರದಲ್ಲಿ ತೊಡಗಿದ್ದ ಜಮೀರ್‌ ಮುಂದೆ ಮಹಾರಾಷ್ಟ್ರ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಲಿದ್ದಾರೆ ಎಂಬ ವಿಚಾರ ತಿಳಿದು ಬಂದಿದೆ.

     

  • ಕೊನೆಗೂ ಮಗುವಿನ ತಂದೆ ಯಾರೆಂದು ತಿಳಿಸಿದ ನಟಿ ಇಲಿಯಾನಾ

    ಕೊನೆಗೂ ಮಗುವಿನ ತಂದೆ ಯಾರೆಂದು ತಿಳಿಸಿದ ನಟಿ ಇಲಿಯಾನಾ

    ಬಾಲಿವುಡ್ (Bollywood) ಬ್ಯೂಟಿ ಇಲಿಯಾನಾ (Ileana) ಸದ್ಯ ಮೊದಲ ಮಗುವಿನ ಬರುವಿಕೆಯ ಕಾತರದಲ್ಲಿದ್ದಾರೆ. ಮದುವೆಯಾಗದೇ ತಾಯಿಯಾಗುತ್ತಿರುವ ವಿಚಾರ ತಿಳಿಸುತ್ತಿದ್ದಂತೆ ತಂದೆ ಯಾರು.? ಎಂಬು ಪ್ರಶ್ನೆ ಎದುರಾಗಿತ್ತು. ಇದೀಗ ಇದಕ್ಕೆಲ್ಲಾ ನಟಿ ಉತ್ತರಿಸಿದ್ದಾರೆ. ಅಷ್ಟೇ ಅಲ್ಲ, ತನ್ನ ಗೆಳೆಯನ ಜೊತೆಯಿರುವ ಫೋಟೋ ಹಂಚಿಕೊಂಡು, ತಾಯ್ತನದ ಬಗ್ಗೆ ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.

    ಕೆಲ ವರ್ಷಗಳಿಂದ ಸಿನಿಮಾ ರಂಗದಿಂದಲೇ ದೂರವಿದ್ದ ನಟಿ ಇಲಿಯಾನಾ, ಇದೀಗ ಮತ್ತೆ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಹಿಂದಿ, ತೆಲುಗು, ತಮಿಳು, ಕನ್ನಡವೂ ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿದ್ದ ಇವರು, ಇನ್ನೂ ಮದುವೆ ಆಗಿಲ್ಲ. ಆದರೂ, ತಾಯಿ ಆಗ್ತಿದ್ದೀನಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಳ್ಳುವ ಮೂಲಕ ಇತ್ತೀಚಿಗೆ ಅಚ್ಚರಿ ಮೂಡಿಸಿದ್ದರು.

    ತಾವು ತಾಯಿ ಆಗುತ್ತಿರುವ ಮತ್ತು ಮಗುವಿಗಾಗಿ ಕಾಯುತ್ತಿದ್ದೇನೆ ಎಂದು ಬರಹವನ್ನೂ ಬರೆದಿದ್ದಾರೆ. ಪೋಸ್ಟ್ ಮಾಡಲಾದ ಫೋಟೋದಲ್ಲಿ ಚಿಕ್ಕದೊಂದು ಟೀ ಶರ್ಟ್ ಹಾಗೂ ಕುತ್ತಿಗೆಯಲ್ಲಿ ಮಾಮಾ ಎನ್ನುವ ಲಾಕೆಟ್ ಇದೆ. ಆ ಟೀ ಶರ್ಟ್ ನಲ್ಲಿ ಅಂಡ್ ಸೋ ದಿ ಅಡ್ವೆಂಚರ್ ಬಿಗಿನ್ಸ್ ಎಂದು ನಟಿ ಪೋಸ್ಟ್ ಮಾಡಿದ್ದರು. ಇದನ್ನೂ ಓದಿ:ಎಂಗೇಜ್‌ಮೆಂಟ್‌ ಸಂಭ್ರಮದಲ್ಲಿ ‘ಅಣ್ಣ- ತಂಗಿ’ ಸೀರಿಯಲ್‌ ನಟಿ ಅಖಿಲಾ ಪ್ರಕಾಶ್

     

    View this post on Instagram

     

    A post shared by Ileana D’Cruz (@ileana_official)

    ಇದಾದ ಬಳಿಕ ಎಲ್ಲರೂ ಅವಳ ಮಗುವಿನ ತಂದೆಯ ಬಗ್ಗೆ ಕೇಳುತ್ತಿದ್ದರು. ಇತ್ತೀಚೆಗೆ ನಟಿ ತನ್ನ ಬೇಬಿಮೂನ್‌ನಲ್ಲಿದ್ದರು. ಮೊದಲ ಬಾರಿಗೆ ತನ್ನ ಸಂಗಾತಿ ಜೊತೆ ಮುಖವನ್ನು ಬಹಿರಂಗಪಡಿಸದ ಫೋಟೋವನ್ನು ಹಂಚಿಕೊಂಡಿದ್ದಾರೆ. ಆದರೆ ಅವರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ಬಹಿರಂಗಪಡಿಸಲು ಅವರು ಉಂಗುರಗಳನ್ನು ತೋರಿಸಿದರು. ಈಗ ಮತ್ತೊಮ್ಮೆ ತನ್ನ ಮಗುವಿನ ತಂದೆಯೊಂದಿಗೆ ಬ್ಲರ್ ಚಿತ್ರವನ್ನು ಹಂಚಿಕೊಂಡಿದ್ದಾರೆ.

    ಗರ್ಭಿಣಿಯಾಗಿರುವುದು (Pregnancy) ನಮಗೆ ಸಿಗುವ ತುಂಬಾ ಸುಂದರವಾದ ಆಶೀರ್ವಾದ. ನಾನು ಅದೃಷ್ಟಶಾಲಿ. ನನ್ನೊಳಗೆ ಒಂದು ಜೀವ ಬೆಳೆಯುತ್ತದೆ ಎಂದು ಅರಿತುಕೊಳ್ಳುವುದೇ ಎಷ್ಟು ಸುಂದರವಾಗಿದೆ ಎಂದು ಎಮೋಷನಲ್ ಆಗಿ ನಟಿ ಬರೆದುಕೊಂಡಿದ್ದಾರೆ. ಅಂದ್ಹಾಗೆ, ನಟಿ ಕತ್ರಿನಾ ಕೈಫ್ ಸಹೋದರ ಸಭಾಸ್ಟಿನ್ ಎಂಗೇಜ್ ಆಗಿದ್ದಾರೆ ಎನ್ನಲಾಗಿದೆ.

  • ಮದುವೆಗೂ ಮುನ್ನ ನಟಿ ಇಲಿಯಾನ ಮಗು : ಬೆಂಬಲಿಸಿದ ತಾಯಿ

    ಮದುವೆಗೂ ಮುನ್ನ ನಟಿ ಇಲಿಯಾನ ಮಗು : ಬೆಂಬಲಿಸಿದ ತಾಯಿ

    ಬಾಲಿವುಡ್ (Bollywood) ನಟಿ ಇಲಿಯಾನ (Ileana) ಇಂದು ಅಚ್ಚರಿಯ ಸುದ್ದಿಯೊಂದನ್ನು ಹಂಚಿಕೊಂಡಿದ್ದರು. ‘ನಾನು ಮಗುವಿನ ನಿರೀಕ್ಷೆಯಲ್ಲಿದ್ದೇನೆ’ ಎಂದು ಅವರು ಪೋಸ್ಟ್ ಮಾಡಿದ್ದರು. ಮದುವೆ ಆಗಿದ್ದರ ಬಗ್ಗೆ ಯಾವತ್ತೂ ಹೇಳಿಕೊಳ್ಳದ ನಟಿಗೆ ಮಗು ಹೇಗೆ? ಎಂದು ಎಲ್ಲರಲ್ಲೂ ಪ್ರಶ್ನೆ ಮೂಡಿತ್ತು. ಇದೇನಾದರೂ ಸಿನಿಮಾ ಪ್ರಮೋಷನ್ನಾ ಇರಬಹುದಾ ಎನ್ನುವ ಅನುಮಾನವನ್ನೂ ಹುಟ್ಟು ಹಾಕಿತ್ತು. ಆದರೆ, ಇಲಿಯಾನ ತಾಯಿ ಮಾಡಿರುವ ಪೋಸ್ಟ್ ಮತ್ತೊಂದು ಸುತ್ತಿನ ಚರ್ಚೆಗೆ ಮುನ್ನುಡಿ ಬರೆದಿದೆ.

    ನಾನು ಮಗುವಿನ ನಿರೀಕ್ಷೆಯಲ್ಲಿರುವೆ ಎಂದು ಹಾಕಲಾದ ಪೋಸ್ಟ್ ಗೆ ಇಲಿಯಾನ ತಾಯಿ ಕೂಡ ಪ್ರತಿಕ್ರಿಯೆ ನೀಡಿದ್ದು. ನಾನು ಮೊಮ್ಮಗುವಿನ ನಿರೀಕ್ಷೆಯಲ್ಲಿರುವೆ. ಕಾಯುವುದಕ್ಕೆ ಆಗುತ್ತಿಲ್ಲ, ಬೇಗ ಮೊಮ್ಮಗು ಮನೆಗೆ ಬರಲಿ ಎಂದು ಪ್ರತಿಕ್ರಿಯಿಸಿದ್ದಾರೆ. ಅಲ್ಲಿಗೆ ನಿಜವಾಗಿಯೂ ಇಲಿಯಾನ ತಾಯಿ ಆಗುತ್ತಿದ್ದಾರಾ? ಹಾಗಾದರೆ, ಆ ಮಗುವಿನ ತಂದೆ ಯಾರಿರಬಹುದು ಎನ್ನುವ ಅನುಮಾನ ಮೂಡಿದೆ. ಇದನ್ನೂ ಓದಿ:ಮತ್ತೆ ಹಾಟ್ ಅವತಾರ ತಾಳಿದ ಸಲ್ಮಾನ್ ಖಾನ್ ನಾಯಕಿ ದಿಶಾ ಪಟಾನಿ

    ತಾಯಿ ಆಗುತ್ತಿರುವ ಕುರಿತು ಇಲಿಯಾನ ಇನ್ಸ್ಟಾದಲ್ಲಿ ಎರಡು ಫೋಟೋಗಳನ್ನು ಶೇರ್ ಮಾಡಿರುವ ಇಲಿಯಾನ, ‘ತಾವು ತಾಯಿ ಆಗುತ್ತಿರುವ ಮತ್ತು ಮಗುವಿಗಾಗಿ ಕಾಯುತ್ತಿದ್ದೇನೆ’ ಎಂದು ಬರಹವನ್ನೂ ಬರೆದಿದ್ದಾರೆ. ಪೋಸ್ಟ್ ಮಾಡಲಾದ ಫೋಟೋದಲ್ಲಿ ಚಿಕ್ಕದೊಂದು ಟೀ ಶರ್ಟ್ ಹಾಗೂ ಕುತ್ತಿಗೆಯಲ್ಲಿ ಮಾಮಾ ಎನ್ನುವ ಲಾಕೆಟ್ ಇದೆ. ಆ ಟೀ ಶರ್ಟ್ ನಲ್ಲಿ ‘ಅಂಡ್ ಸೋ ದಿ ಅಡ್ವೆಂಚರ್ ಬಿಗಿನ್ಸ್’ ಎನ್ನುವ ಬರಹವಿದೆ.

    ಇಲಿಯಾನ ಪ್ರೆಗ್ನಿನ್ಸಿ (Pregnancy) ಸುದ್ದಿಯನ್ನು ಹಂಚಿಕೊಳ್ಳುತ್ತಿದ್ದಂತೆಯೇ ಹಲವರು ಹಲವು ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಕೆಲವರು ಶುಭಾಶಯಗಳನ್ನು ಕೋರಿದ್ದರೆ, ಇನ್ನೂ ಕೆಲವರು ಮದುವೆ ಆಗದೇ ಮಗು ಹೇಗೆ? ಯಾವಾಗ ಮದುವೆಯಾದೆ? ಮಗುವಿನ ತಂದೆ ಯಾರು? ಹೀಗೆ ಸಾಕಷ್ಟು ಪ್ರಶ್ನೆಗಳನ್ನು ಅಭಿಮಾನಿಗಳು ಮಾಡಿದ್ದಾರೆ.

  • ಮದುವೆ ಆಗದೇ ಮಗುವಿಗಾಗಿ ಕಾಯುತ್ತಿರುವೆ ಎಂದು ಶಾಕ್ ಕೊಟ್ಟ ಇಲಿಯಾನ

    ಮದುವೆ ಆಗದೇ ಮಗುವಿಗಾಗಿ ಕಾಯುತ್ತಿರುವೆ ಎಂದು ಶಾಕ್ ಕೊಟ್ಟ ಇಲಿಯಾನ

    ಕೆಲ ವರ್ಷಗಳಿಂದ ಸಿನಿಮಾ ರಂಗದಿಂದಲೇ ದೂರವಿದ್ದ ನಟಿ ಇಲಿಯಾನ (Ileana), ಇದೀಗ ಮತ್ತೆ ಚಿತ್ರರಂಗದಲ್ಲಿ ಸಕ್ರೀಯರಾಗಿದ್ದಾರೆ. ಹಿಂದಿ, ತೆಲುಗು, ತಮಿಳು, ಕನ್ನಡವೂ ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿದ್ದ ಇವರು, ಇನ್ನೂ ಮದುವೆ (Marriage) ಆಗಿಲ್ಲ. ಆದರೂ, ತಾಯಿ (Pregnancy) ಆಗ್ತಿದ್ದೀನಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

    ಇನ್ಸ್ಟಾದಲ್ಲಿ ಎರಡು ಫೋಟೋಗಳನ್ನು ಶೇರ್ ಮಾಡಿರುವ ಇಲಿಯಾನ, ‘ತಾವು ತಾಯಿ ಆಗುತ್ತಿರುವ ಮತ್ತು ಮಗುವಿಗಾಗಿ ಕಾಯುತ್ತಿದ್ದೇನೆ’ ಎಂದು ಬರಹವನ್ನೂ ಬರೆದಿದ್ದಾರೆ. ಪೋಸ್ಟ್ ಮಾಡಲಾದ ಫೋಟೋದಲ್ಲಿ ಚಿಕ್ಕದೊಂದು ಟೀ ಶರ್ಟ್ ಹಾಗೂ ಕುತ್ತಿಗೆಯಲ್ಲಿ ಮಾಮಾ ಎನ್ನುವ ಲಾಕೆಟ್ ಇದೆ. ಆ ಟೀ ಶರ್ಟ್ ನಲ್ಲಿ ‘ಅಂಡ್ ಸೋ ದಿ ಅಡ್ವೆಂಚರ್ ಬಿಗಿನ್ಸ್’ ಎನ್ನುವ ಬರಹವಿದೆ.

    ಇಲಿಯಾನ ಪ್ರೆಗ್ನಿನ್ಸಿ ಸುದ್ದಿಯನ್ನು ಹಂಚಿಕೊಳ್ಳುತ್ತಿದ್ದಂತೆಯೇ ಹಲವರು ಹಲವು ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಕೆಲವರು ಶುಭಾಶಯಗಳನ್ನು ಕೋರಿದ್ದರೆ, ಇನ್ನೂ ಕೆಲವರು ಮದುವೆ ಆಗದೇ ಮಗು ಹೇಗೆ? ಯಾವಾಗ ಮದುವೆಯಾದೆ? ಮಗುವಿನ ತಂದೆ ಯಾರು? ಹೀಗೆ ಸಾಕಷ್ಟು ಪ್ರಶ್ನೆಗಳನ್ನು ಅಭಿಮಾನಿಗಳು ಮಾಡಿದ್ದಾರೆ.

    ಇಲಿಯಾನ ನಿಜವಾಗಿಯೂ ಗರ್ಭಿಣಿಯಾ ಅಥವಾ ಯಾವುದಾದರೂ ಸಿನಿಮಾದ ಪ್ರಮೋಷನ್ ಗೆ ಈ ರೀತಿ ಪೋಸ್ಟ್ ಮಾಡಿರಬಹುದಾ ಎನ್ನುವ ಅನುಮಾನ ಕೂಡ ಮೂಡಿದೆ. ಸದ್ಯದಲ್ಲೇ ಈ ಎಲ್ಲ ಅನುಮಾನಗಳಿಗೆ ಅವರೇ ತೆರೆ ಎಳೆಯಲಿದ್ದಾರೆ.

  • ತಾಯಿಯ ಆಯ್ಕೆಯೇ ಅಂತಿಮ – 33 ವಾರಗಳ ಗರ್ಭಿಣಿಯ ಗರ್ಭಪಾತಕ್ಕೆ ಹೈಕೋರ್ಟ್ ಅಸ್ತು

    ತಾಯಿಯ ಆಯ್ಕೆಯೇ ಅಂತಿಮ – 33 ವಾರಗಳ ಗರ್ಭಿಣಿಯ ಗರ್ಭಪಾತಕ್ಕೆ ಹೈಕೋರ್ಟ್ ಅಸ್ತು

    ನವದೆಹಲಿ: 33 ವಾರಗಳ ಗರ್ಭಿಣಿಯ (Pregnant Women) ಗರ್ಭಪಾತಕ್ಕೆ ದೆಹಲಿ ಹೈಕೋರ್ಟ್ (Delhi High Court) ಅನುಮತಿ ನೀಡಿದೆ. ಪ್ರಕರಣವೊಂದರ ವಿಚಾರಣೆ ನಡೆಸಿದ ನ್ಯಾ. ಪ್ರತಿಭಾ ಎಂ. ಸಿಂಗ್ (Prathiba M Singh), ತಾಯಿಯ ಆಯ್ಕೆಯೇ ಅಂತಿಮವಾಗಿದ್ದು, ಅದರ ಆಧಾರದ ಮೇಲೆ ಅನುಮತಿ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ.

    33 ವಾರಗಳ ಗರ್ಭಿಣಿಯಾಗಿರುವ 26 ವರ್ಷದ ಮಹಿಳೆಯೊಬ್ಬರು ತಮ್ಮ ಗರ್ಭಾವಸ್ಥೆಯನ್ನು ವೈದ್ಯಕೀಯವಾಗಿ ಮುಕ್ತಾಯಗೊಳಿಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾ. ಪ್ರತಿಭಾ ಸಿಂಗ್, ಎನ್‌ಎನ್‌ಜೆಪಿ ಆಸ್ಪತ್ರೆ (LNJP Hospital) ವೈದ್ಯರ ಸಲಹೆ ಕೇಳಿದ್ದರು. ಆದರೆ ವರದಿಯಲ್ಲಿ ವೈದ್ಯರು ಗರ್ಭಪಾತವನ್ನು ತಿರಸ್ಕರಿಸಿದ್ದರು. ಇದನ್ನೂ ಓದಿ: ಭಾರತ ಜಾತ್ಯತೀತ ರಾಷ್ಟ್ರ ಎಂದ ಸುಪ್ರೀಂ – ಠಾಕೂರ್‌ ಚಂದ್ರರನ್ನು ʼಪರಮಾತ್ಮʼ ಎಂದು ಘೋಷಿಸಲು ಕೋರಿದ್ದ PIL ವಜಾ

    ಬಳಿಕ ಆಸ್ಪತ್ರೆಯ ನರಶಸ್ತ್ರಚಿಕಿತ್ಸಕ ಮತ್ತು ಸ್ತ್ರೀರೋಗತಜ್ಞರಿಂದ ವರದಿ ಕೇಳಿದರು. ನರಶಸ್ತ್ರಚಿಕಿತ್ಸಕರು ಮಗುವಿಗೆ ಏನಾದರೂ ನ್ಯೂನತೆ ಇರುವ ಸಾಧ್ಯತೆಯಿದೆ, ಮಗುವಿನ `ಜೀವನದ ಗುಣಮಟ್ಟ’ವನ್ನು ಊಹಿಸಲು ಸಾಧ್ಯವಿಲ್ಲ ಎಂದು ವರದಿ ನೀಡಿದ್ದರು. ಆದರೆ ಮಗುವಿನ ಜನನದ ಬಳಿಕ ಸುಮಾರು 10 ವಾರಗಳ ನಂತರ ಕೆಲವು ಸಮಸ್ಯೆಗಳಿಗೆ ಶಸ್ತ್ರಚಿಕಿತ್ಸೆ ನಡೆಸಬಹುದು ಎಂದು ತಿಳಿಸಿದ್ದರು.

    ವರದಿ ಆಧರಿಸಿ ತೀರ್ಪು ನೀಡಿದ ನ್ಯಾ. ಪ್ರತಿಭಾ ಸಿಂಗ್, ಭಾರತದ ಕಾನೂನಿನಲ್ಲಿ ಮಹಿಳೆ ತಾನು ಗರ್ಭಾವಸ್ಥೆಯಲ್ಲಿ ಮುಂದುವರಿಯಬೇಕೆ ಅಥವಾ ಬೇಡವೇ ಎಂಬುದು ಅಂತಿಮವಾಗಿ ಅವರೇ ನಿರ್ಧರಿಸಬೇಕು. ಈ ರೀತಿಯ ಪ್ರಕರಣಗಳಲ್ಲಿ ಮಹಿಳೆಯ ತೀವ್ರ ಸಂದಿಗ್ಧತೆಯನ್ನು ಎತ್ತಿ ತೋರಿಸುತ್ತವೆ. ಆಧುನಿಕ ತಂತ್ರಜ್ಞಾನದ ಸಹಾಯದಿಂದ ಗರ್ಭಪಾತ ಮಾಡಬಹುದು ಎಂದು ಆದೇಶಿಸಿದರು. ಇದನ್ನೂ ಓದಿ: ಮೋರ್ಬಿ ಸೇತುವೆ ದುರಂತದ ಬಗ್ಗೆ ಟ್ವೀಟ್ ಮಾಡಿದ TMC ವಕ್ತಾರ ಅರೆಸ್ಟ್ – ಮೋದಿ ವಿರುದ್ಧ ಮಮತಾ ಗರಂ

    ತಾಯಿಯ ಆಯ್ಕೆ ಮೇಲೆ ಈ ಆದೇಶ ನೀಡಲಾಗುತ್ತಿದ್ದು, ಅರ್ಜಿದಾರ ಮಹಿಳೆ ಎನ್‌ಎನ್‌ಜೆಪಿ ಅಥವಾ ಇತರೆ ಯಾವುದೇ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಗಾಗಬಹುದು ಎಂದು ತಿಳಿಸಿದರು. ವೈದ್ಯರು ಅಗತ್ಯ ನೆರವು ನೀಡುವಂತೆ ನಿರ್ದೇಶಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಪ್ರೆಗ್ನೆನ್ಸಿ ಟೆಸ್ಟಿಂಗ್ ಕಿಟ್ ಪೋಸ್ಟ್ ಮಾಡಿ ಶಾಕ್ ಮೂಡಿಸಿದ ಸ್ಟಾರ್ ನಟಿಯರು

    ಪ್ರೆಗ್ನೆನ್ಸಿ ಟೆಸ್ಟಿಂಗ್ ಕಿಟ್ ಪೋಸ್ಟ್ ಮಾಡಿ ಶಾಕ್ ಮೂಡಿಸಿದ ಸ್ಟಾರ್ ನಟಿಯರು

    ಲಯಾಳಂ ಸಿನಿಮಾ ರಂಗಕ್ಕೆ ಈ ಇಬ್ಬರು ಸ್ಟಾರ್ ನಟಿಯರು ಇಂದು ಶಾಕ್ ಮೂಡಿಸಿದ್ದಾರೆ. ಮದುವೆ ಆಗದೇ ಇರುವ ಈ ಖ್ಯಾತ ತಾರೆಯರು ಪ್ರಗ್ನೆನ್ಸಿ ಕಿಟ್ ಅನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಮೂಲಕ ಅಚ್ಚರಿ ಮೂಡಿಸಿದ್ದರು. ಪ್ರೆಗ್ನೆನ್ಸಿ ಕಿಟ್ ಹಾಕಿ ಶಾಕ್ ಮೂಡಿಸಿರುವ ಇಬ್ಬರೂ ನಟಿಯರು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ.

    ಕನ್ನಡದ ಅನೇಕ ಸಿನಿಮಾಗಳಲ್ಲಿ ನಟಿಸಿರುವ ಪಾರ್ವತಿ ಮೆನನ್ ಮತ್ತು ನಿತ್ಯಾ ಮೆನನ್ ಈ ರೀತಿ ಪೋಸ್ಟ್ ಮಾಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.  ಪುನೀತ್ ರಾಜ್ ಕುಮಾರ್ ನಟನೆಯ ಮಿಲನಾ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಪ್ರವೇಶ ಮಾಡಿದ್ದ ಮಲಯಾಳಿ ಚೆಲುವೆ ಪಾರ್ವತಿ ಮೆನನ್, ನಂತರ ಅನೇಕ ಭಾಷೆಯ ಚಿತ್ರಗಳಲ್ಲಿ ನಟಿಸಿದ್ದಾರೆ. ಇನ್ನೂ ಮದುವೆಯಾಗದ ಈ ತಾರೆ ಪ್ರೆಗ್ನೆನ್ಸಿ ಕಿಟ್ ಅನ್ನು ಇನ್ಸಸ್ಟಾದಲ್ಲಿ ಪೋಸ್ಟ್ ಮಾಡುವ ಮೂಲಕ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. ಈ ಪೋಸ್ಟ್ ಹಾಕಿರುವ ಉದ್ದೇಶವನ್ನು ಹೇಳದೇ ಇರುವ ಕಾರಣಕ್ಕಾಗಿ ಸಖತ್ ಚರ್ಚೆ ನಡೆಯುತ್ತಿದೆ. ಇದನ್ನೂ ಓದಿ:ಗಂಧದ ಗುಡಿ ಅಬ್ಬರದ ನಡುವೆಯೂ ‘ಕಾಂತಾರ’ ಹೌಸ್ ಫುಲ್

    ಜೋಶ್ ಸಿನಿಮಾದ ಮೂಲಕ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟ ನಿತ್ಯಾ ಮೆನನ್ ಕೂಡ ಇಂಥದ್ದೇ ಪೋಸ್ಟ್ ಮಾಡಿದ್ದಾರೆ. ಇವರೂ ಕೂಡ ಪ್ರೆಗ್ನೆನ್ಸಿ ಕಿಟ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.  ನಿತ್ಯಾ ಕೂಡ ಮದುವೆ ಆಗದೇ ಇರುವ ಕಾರಣಕ್ಕಾಗಿ ಈ ಪೋಸ್ಟ್ ಮತ್ತಷ್ಟು ಗೊಂದ ಸೃಷ್ಟಿ ಮಾಡಿದೆ. ನಿತ್ಯಾ ಕೂಡ ಈ ಕುರಿತು ಸವಿವರವಾಗಿ ಏನನ್ನೂ ಹೇಳಿಲ್ಲ. ಹಾಗಾಗಿ ಮೆನನ್ ಚೆಲುವಿಯರ ನಿಗೂಢ ನಡೆ ಕುತೂಹಲ ಮೂಡಿಸಿದೆ.

    ಪಾರ್ವತಿ ಮೆನನ್ ಮತ್ತ ನಿತ್ಯಾ ಮೆನನ್ ಪೋಸ್ಟ್ ಒಂದೇ ಆಗಿರುವುದರಿಂದ ಇದೊಂದು ಜಾಹೀರಾತಾ ಅಥವಾ ಸಿನಿಮಾ ಬಗೆಗಿನ ಪ್ರಮೋಷನ್ನಾ? ಎನ್ನುವ ಅನುಮಾನ ಕೂಡ ಮೂಡಿದೆ. ಮದುವೆ ಆಗದೇ ಇರುವ ಕಾರಣಕ್ಕಾಗಿ ಇವರು ಇಂತಹ ಜಾಹೀರಾತಿನಲ್ಲಿ ನಟಿಸಬೇಕಿತ್ತಾ ಎನ್ನುವ ಪ್ರಶ್ನೆಯನ್ನೂ ಅಭಿಮಾನಿಗಳು ಹಾಕಿದ್ದಾರೆ. ಒಟ್ಟಿನಲ್ಲಿ ಈ ನಟಿಯರು ಏನು ಹೇಳುವುದಕ್ಕೆ ಹೊರಟಿದ್ದಾರೆ ಎನ್ನುವುದು ಸದ್ಯಕ್ಕಿರುವ ಕುತೂಹಲ.

    Live Tv
    [brid partner=56869869 player=32851 video=960834 autoplay=true]