Tag: preganant

  • ಬಂಜೆತನ ನಿವಾರಿಸಲು IVF ಚಿಕಿತ್ಸೆ- ಏನಿದು ಚಿಕಿತ್ಸೆ..?, ಖರ್ಚು ಎಷ್ಟು..?

    ಬಂಜೆತನ ನಿವಾರಿಸಲು IVF ಚಿಕಿತ್ಸೆ- ಏನಿದು ಚಿಕಿತ್ಸೆ..?, ಖರ್ಚು ಎಷ್ಟು..?

    ಹಿಳೆಯರು ಗರ್ಭಿಣಿಯಾಗುವ ಸಮಯದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸುತ್ತಾರೆ. ಕೆಲವರು ಆರೋಗ್ಯವಂತರಾಗಿದ್ದರೂ ಗರ್ಭಿಣಿಯಾಗಲು ಸಾಧ್ಯವಾಗುವುದಿಲ್ಲ. ಇದರಿಂದ ಅವರು ಮಾನಸಿಕ, ದೈಹಿಕ ನೋವು ಅನುಭವಿಸುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಅದಕ್ಕೆಲ್ಲ ಕೊರಗುವ ಅವಶ್ಯಕತೆ ಇಲ್ಲ, ಯಾಕೆಂದರೆ ವೈದ್ಯ ಲೋಕದಲ್ಲಿ ಸಾಕಷ್ಟು ಬೆಳವಣಿಗೆಗಳಾಗಿವೆ. ನಾನಾ ವಿಧಾನಗಳಲ್ಲಿ ಗರ್ಭಧಾರಣೆಗೆ ಪ್ರಯತ್ನ ನಡೆಯುತ್ತದೆ. ಅಂಥವುಗಳಲ್ಲಿ ಐವಿಎಫ್ (IVF Treatment) ಕೂಡ ಒಂದು.

    ಏನಿದು ಐವಿಎಫ್?: ಮದುವೆಯಾಗಿ ಒಂದು ವರ್ಷಕ್ಕಿಂತ ಹೆಚ್ಚು ಅವಧಿಯ ನಂತರವೂ ಗರ್ಭಧರಿಸಲು ಸಾಧ್ಯವಾಗದ ದಂಪತಿ ಈ ಚಿಕಿತ್ಸೆ ತೆಗೆದುಕೊಳ್ಳಲು ಮುಂದಾಗುತ್ತಾರೆ. ಕೃತಕವಾಗಿ ಇನ್ ವಿಟ್ರೊ ಫರ್ಟಿಲೈಸೇಷನ್ (ಐವಿಎಫ್) ಮೂಲಕ ಗರ್ಭಧಾರಣೆ ಮಾಡಬಹುದು. ಅಂದರೆ ಪತ್ನಿಯ ಅಂಡಾಣು ಹಾಗೂ ಪತಿಯ ವೀರ್ಯಾಣು ತೆಗೆದು ಪ್ರಯೋಗಾಲಯದಲ್ಲಿ ನಿಗದಿತ ಅವಧಿಯವರೆಗೆ ಭ್ರೂಣವನ್ನು ಬೆಳೆಸಲಾಗುತ್ತದೆ. ನಂತರ ಅದನ್ನು ಪತ್ನಿಯ ಗರ್ಭಕೋಶಕ್ಕೆ ವರ್ಗಾವಣೆ ಮಾಡಲಾಗುತ್ತದೆ. ಈ ಪ್ರಕ್ರಿಯೆಯನ್ನು ಐವಿಎಫ್ ಎಂದು ಕರೆಯುತ್ತಾರೆ. ವಾಸ್ತವವಾಗಿ ಈ ಐವಿಎಫ್‍ನ ಚಕ್ರವು ಪೂರ್ಣಗೊಳ್ಳಲು 2 ರಿಂದ 3 ವಾರಗಳ ಸಮಯ ಬೇಕಾಗುತ್ತದೆ. ಈ ಅವಧಿ ಕೆಲವೊಮ್ಮೆ ಹೆಚ್ಚು ಕಡಿಮೆಯಾಗಬಹುದು.

    ಸಂತಾನೋತ್ಪತ್ತಿ ತಂತ್ರಜ್ಞಾನ: ಐವಿಎಫ್ ಚಿಕಿತ್ಸೆ ಇತ್ತೀಚೆಗೆ ಸಾಕಷ್ಟು ಜನಪ್ರಿಯ ಹಾಗೂ ಪರಿಣಾಮಕಾರಿಯಾಗಿದೆ. ಇದು ಅಂಡಾಣು ಅಥವಾ ಭ್ರೂಣಗಳು ಮತ್ತು ವೀರ್ಯಾಣುಗಳ ನಿರ್ವಹಣೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡುತ್ತದೆ. ಈ ಕಾರಣದಿಂದಲೇ ಇದನ್ನು `ಸಹಾಯಕ ಸಂತಾನೋತ್ತತ್ತಿ ತಂತ್ರಜ್ಞಾನ’ ಎಂದು ಕರೆಯಲಾಗುತ್ತದೆ.

    ದಂಪತಿ ಸ್ವಂತ ಮೊಟ್ಟೆಗಳನ್ನು ಬಳಕೆ ಮಾಡಬಹುದು: ಐವಿಎಫ್ ಚಿಕಿತ್ಸೆಗೆ ಒಳಗಾಗುವ ದಂಪತಿ ತಮ್ಮದೇ ಆದ ಸ್ವಂತ ಮೊಟ್ಟೆಗಳು ಮತ್ತು ವೀರ್ಯವನ್ನು ಬಳಸಿಕೊಂಡು ಚಿಕಿತ್ಸೆ ಪಡೆಯಬಹುದಾಗಿದೆ. ಇದರ ಹೊರತಾಗಿ ಅಪರಿಚಿತ ದಾನಿಗಳ ಮೊಟ್ಟೆ, ವೀರ್ಯ ಅಥವಾ ಭ್ರೂಣಗಳಿಂದಲೂ ಈ ಚಿಕಿತ್ಸೆ ಮಾಡಬಹುದು.

    ಮಗುವಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಾ?: ಆರೋಗ್ಯಕರ ಮಗುವನ್ನು ಹೊಂದುವ ನಿಮ್ಮ ಸಾಧ್ಯತೆಗಳು ನಿಮ್ಮ ವಯಸ್ಸು ಮತ್ತು ಬಂಜೆತನದ ಕಾರಣದಂತಹ ಅನೇಕ ಅಂಶಗಳನ್ನು ಅವಲಂಬಿಸಿರುತ್ತದೆ.

    ಚಿಕಿತ್ಸೆಗೆ ತಯಾರಿ: ಐವಿಎಫ್ ಚಿಕಿತ್ಸೆಗೆ ಒಳಗಾಗುವ ದಂಪತಿ ಮೊದಲು ಅನೇಕ ಮೌಲ್ಯಮಾಪನಗಳಿಗೆ ಒಳಗಾಗುತ್ತಾರೆ. ಮಹಿಳೆಯ ಅಂಡಾಶಯದ ಮೀಸಲು ಸೈಕಲ್ ದಿನದ ಮೂರು ಕೋಶಕ-ಉತ್ತೇಜಿಸುವ ಹಾರ್ಮೋನ್ (FSH) ಮತ್ತು ಎಸ್ಟ್ರಾಡಿಯೋಲ್ (E2), ಆಂಟಿ-ಮುಲ್ಲೆರಿಯನ್ ಹಾರ್ಮೋನ್ (AMH) ಅಥವಾ ಆಂಟ್ರಲ್ ಕೋಶಕ ಎಣಿಕೆಯನ್ನು ಬಳಸಿಕೊಂಡು ಮೌಲ್ಯಮಾಪನ ಮಾಡಲಾಗುತ್ತದೆ. ಈ ಮೌಲ್ಯ ಮಾಪನದಲ್ಲಿ ಮಹಿಳೆಯು ಕಳಪೆ ಅಂಡಾಶಯವನ್ನು ಹೊಂದಿದ್ದರೆ, ಅಂಥವರು ಐವಿಎಫ್ ಚಿಕಿತ್ಸೆ ಪಡೆಯಬಹುದು. ಹಾಗೆಯೇ ವೀರ್ಯ ರೂಪವಿಜ್ಞಾನ, ಎಣಿಕೆ ಮತ್ತು ಚಲನಶೀಲತೆಯ ಆಧಾರದ ಮೇಲೆ ಐಸಿಎಸ್‍ಐ ಅನ್ನು ಸೂಚಿಸಲಾಗಿದೆಯೇ ಎಂದು ಪುರುಷ ಪಾಲುದಾರ ವೀರ್ಯವನ್ನು ಪರೀಕ್ಷಿಸಲಾಗುತ್ತದೆ. ಇವುಗಳ ಜೊತೆಗೆ ದಂಪತಿ ಹೆಚ್‍ಐವಿ, ಹೆಪಟೈಟಿಸ್ ಬಿ, ಮತ್ತು ಅ ಮತ್ತು ಸಿಫಿಲಿಸ್‍ಗಾಗಿ ಸಾಂಕ್ರಾಮಿಕ ರೋಗ ತಪಾಸಣೆಯನ್ನು ಪಾಲುದಾರರಿಗೆ ಶಿಫಾರಸು ಮಾಡಲಾಗಿದೆ.

    ಐವಿಎಫ್ ಸಾಧಕ-ಬಾಧಕಗಳನ್ನು ಕೂಡ ಹೊಂದಿದೆ.  ಕಾರ್ಯವಿಧಾನದ ಮೂಲಕ ಒಂದಕ್ಕಿಂತ ಹೆಚ್ಚು ಭ್ರೂಣಗಳನ್ನು ಗರ್ಭಾಶಯದಲ್ಲಿ ಇರಿಸಿದರೆ ಅದು ಒಂದಕ್ಕಿಂತ ಹೆಚ್ಚು ಮಗುವಿನ ಗರ್ಭಧಾರಣೆಗೆ ಕಾರಣವಾಗುತ್ತದೆ. ಇದನ್ನು ಸಾಮಾನ್ಯವಾಗಿ `ಬಹು ಗರ್ಭಧಾರಣೆ’ ಎಂದೇ ಕರೆಯುತ್ತಾರೆ.

    ಚಿಕಿತ್ಸೆ ತೀರಾ ದುಬಾರಿಯಲ್ಲ ಸಾಮಾನ್ಯವಾಗಿ ಐಯುಐ (Intrauterine insemination) ಮತ್ತು ಐವಿಎಫ್ ಚಿಕಿತ್ಸೆ ಮೂಲಕ ಮಕ್ಕಳನ್ನು ಮಾಡಿಕೊಳ್ಳಲು ತುಂಬಾ ದುಬಾರಿ ಹಣ ತೆರಬೇಕಾಗುತ್ತದೆ ಎಂಬ ಭಾವನೆ ಜನರಲ್ಲಿದೆ. ಆದರೆ ಆ ತಂತ್ರಜ್ಞಾನದ ಚಿಕಿತ್ಸೆ ತೀರಾ ದುಬಾರಿಯಲ್ಲ. ಉತ್ತಮ ಲ್ಯಾಬ್ ಹಾಗೂ ಆಧುನಿಕ ತಂತ್ರಜ್ಞಾನ ಬಳಕೆಯಿಂದ ಸ್ವಲ್ಪ ಹೆಚ್ಚು ಹಣ ಖರ್ಚಾಗಲಿದೆ. ಅಗತ್ಯ ಪರೀಕ್ಷೆಗಳ ನಂತರ ಐಯುಐಗೆ ಸುಮಾರು 10 ಸಾವಿರ ಮತ್ತು ಐವಿಎಫ್‍ಗೆ ಸುಮಾರು 1.75 ರೂ. ವೆಚ್ಚ ತಗಲಬಹುದು.

    ಐವಿಎಫ್ ಮೂಲಕ ಮಕ್ಕಳನ್ನು ಮಾಡಿಕೊಂಡರೆ ಮುಂದೆ ತೊಂದರೆ ಆಗಲಿದೆಯೇ?: ಹಾಗೇನೂ ಇಲ್ಲ, ಅವೂ ಮಾಮೂಲಿ ಮಕ್ಕಳಂತೆ ಇರುತ್ತವೆ. ಅದರಲ್ಲಿಪತ್ನಿಯ ಅಂಡಾಣುವಿನಲ್ಲಿಪತಿಯ ವೀರ್ಯಾಣು ಸೇರಿಸಿ ಭ್ರೂಣ ಬೆಳೆಸುತ್ತೇವೆ. ಅಂಥ ವ್ಯತ್ಯಾಸವೇನೂ ಇಲ್ಲ. ಐವಿಎಫ್ ತಂತ್ರಜ್ಞಾನದ ಮೂಲಕ ಪಡೆಯುವ ಮಕ್ಕಳು ಮಾಮೂಲಿಯಂತೆ ಇರಲಿವೆ, ಅವರಿಗೆ ಭವಿಷ್ಯದಲ್ಲಿಯಾವುದೇ ಆರೋಗ್ಯ ಸಮಸ್ಯೆ ಆಗದು, ಅಡ್ಡ ಪರಿಣಾಮಗಳೇನೂ ಇರುವುದಿಲ್ಲ. ಆ ಮಕ್ಕಳು ಕೂಡ ಸಾಮಾನ್ಯ ಮಕ್ಕಳಂತಿರುತ್ತವೆ. ಯಾವುದೇ ನ್ಯೂನತೆ ಕಾಣುವುದಿಲ್ಲ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಗರ್ಭಿಣಿ, ಬಾಣಂತಿಯರಿಗೆ ಕೆಟ್ಟಿರುವ ಮೊಟ್ಟೆಗಳ ವಿತರಣೆ

    ಗರ್ಭಿಣಿ, ಬಾಣಂತಿಯರಿಗೆ ಕೆಟ್ಟಿರುವ ಮೊಟ್ಟೆಗಳ ವಿತರಣೆ

    ಹಾಸನ: ಹೊಳೆನರಸೀಪುರ (Holenarasipura) ಪಟ್ಟಣದ ಅಂಗನವಾಡಿ ಕೇಂದ್ರದಲ್ಲಿ ಗರ್ಭಿಣಿ ಮತ್ತು ಬಾಣಂತಿಯರಿಗೆ ಕೆಟ್ಟಿರುವ ಮೊಟ್ಟೆಗಳನ್ನು ವಿತರಣೆ ಮಾಡಲಾಗಿದೆ.

    ಪಟ್ಟಣದ ಹೌಸಿಂಗ್ ಬೋರ್ಡ್‍ನ ಕಿಕ್ಕೇರಮ್ಮ ದೇವಸ್ಥಾನದ ಬಳಿಯಿರುವ ಅಂಗನವಾಡಿ ಕೇಂದ್ರದಲ್ಲಿ ತಾಯಿ ಕಾರ್ಡ್ ಹೊಂದಿರುವ ಗರ್ಭಿಣಿ ಮತ್ತು ಬಾಣಂತಿ ಮಹಿಳೆಯರಿಗೆ ಇಂದು ಕೋಳಿ ಮೊಟ್ಟೆಗಳನ್ನು (Egg) ನೀಡಿದ್ದಾರೆ. ಮನೆಗೆ ಹೋಗಿ ಕೋಳಿ ಮೊಟ್ಟೆಗಳನ್ನು ಒಡೆದಾಗ ಮೊಟ್ಟೆಗಳು ಹಾಳಾಗಿರುವುದು ಬೆಳಕಿಗೆ ಬಂದಿದೆ. ಇದನ್ನೂ ಓದಿ: ಯತೀಂದ್ರ ನಮ್ಮ ಮನೆಯಲ್ಲಿದ್ದಾರೆ ಅಂತ ಆರೋಪ ಮಾಡೋದು ಸರಿಯಲ್ಲ – HDK ವಿರುದ್ಧ ಸಿಎಂ ವಾಗ್ದಾಳಿ

    ಕೆಟ್ಟಿರುವ ಮೊಟ್ಟೆಗಳನ್ನು ಪೂರೈಕೆ ಮಾಡಿರುವವರ ವಿರುದ್ಧ ಮಹಿಳೆಯರು ಆಕ್ರೋಶ ಹೊರಹಾಕಿದ್ದಾರೆ. ಟೆಂಡರ್ ಪಡೆದು ಕಳಪೆ ಗುಣಮಟ್ಟದ ಆಹಾರ ಪದಾರ್ಥಗಳು ಹಾಗೂ ಕೊಳೆತ ಮೊಟ್ಟೆಗಳನ್ನು ಪೂರೈಕೆ ಮಾಡಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಮಹಿಳೆಯರ ಒತ್ತಾಯಿಸಿದ್ದು, ಸಿಡಿಪಿಒ ಭಾಗ್ಯಮ್ಮ ಅವರಿಗೆ ದೂರು ನೀಡಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಕ್ಕಳ ಹೊಂದುವ ಕುರಿತು ಆಲಿಯಾ ಬಗ್ಗೆ ಅಚ್ಚರಿಯ ವಿಚಾರ ರಿವೀಲ್ ಮಾಡಿದ ರಣ್‌ಬೀರ್ ಕಪೂರ್

    ಮಕ್ಕಳ ಹೊಂದುವ ಕುರಿತು ಆಲಿಯಾ ಬಗ್ಗೆ ಅಚ್ಚರಿಯ ವಿಚಾರ ರಿವೀಲ್ ಮಾಡಿದ ರಣ್‌ಬೀರ್ ಕಪೂರ್

    ಬಾಲಿವುಡ್ ಸ್ಟಾರ್ ನಟ ರಣ್‌ಬೀರ್ ಕಪೂರ್ ಸದ್ಯ `ಶಂಶೇರಾ’ ಚಿತ್ರದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಈ ವೇಳೆ ಆಲಿಯಾ ಜೊತೆಗಿನ ಮೊದಲ ಭೇಟಿಯ ಬಗ್ಗೆ ಮಾತನಾಡಿದ್ದಾರೆ. ಮದುವೆ, ಸಂಸಾರದ ಕುರಿತು ಆಲಿಯಾ ಇದ್ದ ಕನಸುಗಳ ಬಗ್ಗೆ ರಣ್‌ಬೀರ್ ಮಾತನಾಡಿದ್ದಾರೆ.

    ಬಾಲಿವುಡ್‌ನ ಬೆಸ್ಟ್ ಜೋಡಿಗಳಲ್ಲಿ ಒಂದಾಗಿರುವ ರಣ್‌ಬೀರ್ ಮತ್ತು ಆಲಿಯಾ ಇತ್ತೀಚೆಗಷ್ಟೇ ತಾವು ತಾಯಿಯಾಗುತ್ತಿರುವ ಗುಡ್ ನ್ಯೂಸ್ ಕೊಟ್ಟಿದ್ದರು. ನಂತರ ಹಾಲಿವುಡ್ ಸಿನಿಮಾಗಾಗಿ ಲಂಡನ್‌ಗೆ ಹಾರಿದ್ದಾರೆ. ಇದೀಗ ರಣ್‌ಬೀರ್ `ಶಂಶೇರಾ’ ಚಿತ್ರದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಈ ವೇಳೆ ಪತ್ನಿ ಆಲಿಯಾ ಬಗ್ಗೆ ಅಚ್ಚರಿಯ ವಿಚಾರವೊಂದನ್ನ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಬಟ್ಟೆಗೆ ಮ್ಯಾಚ್ ಆಗುವಂತೆ ಹೇರ್ ಕಲರಿಂಗ್ ಮಾಡಿಸಿದ `ದಬಾಂಗ್’ ನಟಿ

    ರಣ್‌ಬೀರ್ ಮತ್ತು ಆಲಿಯಾ ಪ್ರೀತಿಸಿದ ಮೊದಲ ದಿನದಿಂದಲೂ ಮಕ್ಕಳನ್ನು ಹೊಂದುವ ವಿಚಾರವನ್ನು ಆಲಿಯಾ ಮಾತನಾಡುತ್ತಿದ್ದರು. ಆಲಿಯಾ ಮಕ್ಕಳನ್ನು ಹೊಂದುವ ಮನಸ್ಸಿದೆ. ಮದುವೆ, ಸಂಸಾರದ ಕುರಿತು ಆಸಕ್ತಿ ಇದೆ. ನಟನೆ ಮತ್ತು ಕುಟುಂಬ ಎರಡು ಸರಿದೂಗಿಸಿಕೊಂಡು ಹೋಗುವ ಗಟ್ಟಿತನ ಆಲಿಯಾಗೆ ಇದೆ ಎಂದು ರಣ್‌ಬೀರ್ ಕಪೂರ್ ಮಾತನಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಬಾಗಲಕೋಟೆ ಗರ್ಭಿಣಿ ಕುಟುಂಬದವರ 8 ಜನರ ವರದಿ ನೆಗೆಟಿವ್

    ಬಾಗಲಕೋಟೆ ಗರ್ಭಿಣಿ ಕುಟುಂಬದವರ 8 ಜನರ ವರದಿ ನೆಗೆಟಿವ್

    ಬಾಗಲಕೋಟೆ: ಬದಾಮಿ ತಾಲೂಕಿನ ಡಾಣಕಶಿರೂರು ಗ್ರಾಮದ ಗರ್ಭಿಣಿಯ ಕುಟುಂಬಸ್ಥರ ಕೊರೊನಾ ವರದಿ ನೆಗೆಟಿವ್ ಬಂದಿದೆ.

    ಬುಧವಾರ ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಮಾಧ್ಯಮ ಬುಲೆಟಿನ್ ನಲ್ಲಿ 12 ಜನರಿಗೆ ಸೋಂಕು ತಗುಲಿರೋದು ದೃಢಪಟ್ಟಿತ್ತು. ಆದ್ರೆ ಗರ್ಭಿಣಿಯ ಪ್ರಾಥಮಿಕ ಸಂಪರ್ಕದಲ್ಲಿದ್ದ 9 ಜನರಿಗೆ ಸೋಂಕು ತಗುಲಿಲ್ಲ ಎಂಬುವುದು ವರದಿಯಲ್ಲಿ ಬಂದಿದೆ. ಜಿಲ್ಲಾಡಳಿತ ಇಂದು ಗ್ರಾಮದ 45 ಜನರ ಗಂಟಲು ದ್ರವ ಪರೀಕ್ಷೆ ವರದಿ ನಿರೀಕ್ಷೆಯಲ್ಲಿದೆ. ಸದ್ಯ ಡಾಣಕಶಿರೂರು ಗ್ರಾಮಸ್ಥರಲ್ಲಿ ಯಾರ ವರದಿ ಪಾಸಿಟಿವ್ ಬರುತ್ತೋ ಎಂಬ ಆತಂಕ ಮನೆ ಮಾಡಿದೆ.

    ಬುಧವಾರ ಸೋಂಕು ದೃಢಪಟ್ಟ 12 ಜನರ ಕಾಲ್ ಡೀಟೆಲ್ಸ್ ಕಲೆ ಹಾಕುವಲ್ಲಿ ಅಧಿಕಾರಿಗಳು ನಿರತರಾಗಿದ್ದಾರೆ. ಈ ಮೂಲಕ 12 ಜನರ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕದಲ್ಲಿರೋ ಜನರನ್ನ ಪತ್ತೆ ಹಚ್ಚಲಾಗುತ್ತಿದೆ.

    ಗರ್ಭಿಣಿಯ ಸಂಪರ್ಕದಲ್ಲಿದ್ದ 125ಕ್ಕೂ ಹೆಚ್ಚು ಜನರನ್ನು ಚಿಕ್ಕಮುಚ್ಚಳಗುಡ್ಡ ಗ್ರಾಮದ ಬಳಿಯ ಹಾಸ್ಟೆಲ್ ನಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಕ್ವಾರಂಟೈನ್ ಕೇಂದ್ರದಲ್ಲಿ ಸಮರ್ಪಕವಾಗಿ ಊಟ ವಿತರಿಸಿದ ಹಿನ್ನೆಲೆಯಲ್ಲಿ ಜನರು ತಟ್ಟೆ ಹಿಡಿದು ಒಬ್ಬರ ಮೇಲೆ ಮುಗಿಬಿದ್ದಿರುವ ದೃಶ್ಯಗಳು ಕಂಡು ಬಂದಿವೆ.

  • ಭಾರತ್ ಬಂದ್: ದಾವಣಗೆರೆ ಬಸ್‍ಸ್ಟ್ಯಾಂಡ್‍ನಲ್ಲಿ ಬಾಣಂತಿ ಪರದಾಟ.!

    ಭಾರತ್ ಬಂದ್: ದಾವಣಗೆರೆ ಬಸ್‍ಸ್ಟ್ಯಾಂಡ್‍ನಲ್ಲಿ ಬಾಣಂತಿ ಪರದಾಟ.!

    ದಾವಣಗೆರೆ: ಕಾರ್ಮಿಕರ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಕೇಂದ್ರ ಸರ್ಕಾರದ ವಿರುದ್ಧ ಇಂದು ಮತ್ತು ನಾಳೆ ಭಾರತ್ ಬಂದ್ ಗೆ ಕರೆ ನೀಡಲಾಗಿದೆ. ಬಂದ್ ಹಿನ್ನೆಲೆಯಲ್ಲಿ ದಾವಣಗೆರೆಯ ಬಸ್ ನಿಲ್ದಾಣದಲ್ಲಿ ಗರ್ಭಿಣಿಯೊಬ್ಬರು ಪರದಾಡಿದ್ದಾರೆ.

    ದಾವಣಗೆರೆಯ ಕೆಎಸ್‍ಆರ್ ಟಿಸಿ ಬಸ್ ನಿಲ್ದಾಣದಲ್ಲಿ ಈ ಅಮಾನವೀಯ ಘಟನೆ ನಡೆದಿದೆ. ಬಸ್ ಗಾಗಿ ನಿಲ್ದಾಣದಲ್ಲಿ ಕಾದು ಕುಳಿತಿದ್ದ ಗರ್ಭಿಣಿ, ಬಸ್ ಸಿಗದೇ ಬೆಂಚ್ ಮೇಲೆಯೇ ಮಲಗಿರುವ ದೃಶ್ಯ ಮನಕಲಕುವಂತಿತ್ತು.

    ಚಿತ್ರದುರ್ಗದ ಹಿರಿಯೂರು ತಾಲೂಕಿನ ಅದಿವಾಲ ಗ್ರಾಮದ ನಿವಾಸಿ ಗರ್ಭಿಣಿ ಜಿಲ್ಲಾಸ್ಪತ್ರೆಯಲ್ಲಿ ಮೂರು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಅವರು ಡಿಸ್ಚಾರ್ಜ್ ಆಗಿದ್ದು, ಬಸ್ ಗಾಗಿ ಕಾಯುತ್ತಿದ್ದರು. ಆದ್ರೆ ಕೆಎಸ್‍ಆರ್‍ಟಿಸಿ ಸಿಬ್ಬಂದಿ ಏಕಾಏಕಿ ಬಸ್ ಸಂಚಾರ ಸ್ಥಗಿತಗೊಳಿಸಿದ್ದರಿಂದ ಖಾಸಗಿ ಬಸ್ ನಲ್ಲಿ ಪ್ರಯಾಣಿಸಲು ಸಾಧ್ಯವಾಗದ ಪರಿಸ್ಥಿತಿ ಎದುರಾಗಿದೆ. ದಿಕ್ಕು ತೋಚದ ಸ್ಥಿತಿಯಲ್ಲಿ ಸಂಬಂಧಿಕರಿದ್ದು, ಗರ್ಭಿಣಿ ನಿಲ್ದಾಣದಲ್ಲೇ ಬೆಂಚ್ ಮೇಲೆ ಮಲಗಿದ್ದಾರೆ. ಇದನ್ನೂ ಓದಿ: ಭಾರತ್ ಬಂದ್- ಪಬ್ಲಿಕ್ ಟಿವಿ ವಾಹನದಲ್ಲಿ ರೋಗಿ ಆಸ್ಪತ್ರೆಗೆ ರವಾನೆ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv