Tag: Preetham gowda

  • ನೀವು ನನಗೆ ವೋಟು ಹಾಕಲ್ಲ, ಆದ್ರೂ ಕೆಲಸ ಮಾಡಿ ಕೊಡುತ್ತೇನೆ: ಪ್ರೀತಂಗೌಡ

    ನೀವು ನನಗೆ ವೋಟು ಹಾಕಲ್ಲ, ಆದ್ರೂ ಕೆಲಸ ಮಾಡಿ ಕೊಡುತ್ತೇನೆ: ಪ್ರೀತಂಗೌಡ

    ಹಾಸನ: ನೀವು ನನಗೆ ಚುನಾವಣೆಯಲ್ಲಿ ಮತ ಹಾಕುವುದಿಲ್ಲ, ಆದರೂ ನಿಮಗೆ ನಾನು ಕೆಲಸ ಮಾಡಿ ಕೊಡುತ್ತೇನೆ ಎಂದು ಶಾಸಕ ಪ್ರೀತಂಗೌಡ ಹೇಳಿದರು.

    ನಗರದ 30-31 ನೇ ವಾರ್ಡ್‍ಗೆ ಸಂಬಂಧಿಸಿದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 40 ವರ್ಷಗಳಿಂದ ನೆಲೆಸಿರುವ ಜನರಿಗೆ ಹಕ್ಕುಪತ್ರ ಸಂಬಂಧ ಹಾಗೂ ಅವರ ಸಮಸ್ಯೆ ಬಗ್ಗೆ ಚರ್ಚಿಸಲು ಕರೆದಿದ್ದ ಸಭೆ ಇದಾಗಿತ್ತು. ಕಳೆದ ಬಾರಿ ಚುನಾವಣೆಯಲ್ಲಿ ನೀವು ನನಗೆ ಮತ ಹಾಕಿಲ್ಲ. ಮುಂದಿನ ಚುನಾವಣೆಯಲ್ಲೂ ಮತ ಹಾಕುತ್ತೀರಿ ಎಂಬ ನಂಬಿಕೆ ನನಗಿಲ್ಲ. ಆದರೂ ನಾನು ನಿಮಗೆ ಕೆಲಸ ಮಾಡಿಕೊಡುತ್ತೇನೆ ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: 40 ವರ್ಷಗಳ ಹಿಂದೆ ಅವರನ್ನು ಭೇಟಿಯಾಗಿದ್ದೆ- ಸಿಧು ಜೊತೆಗಿನ ಮೊದಲ ಭೇಟಿ ನೆನೆದ ರಾಗಾ

    ನೀವು 2023ರ ಚುನಾವಣೆಯಲ್ಲಿ ಮತ ಹಾಕದಿದ್ದರೂ 2028ಕ್ಕೆ ಆದರೂ ಮತ ಹಾಕುತ್ತೀರಿ. ನನಗೇನು ತುರ್ತು ಮತ ಹಾಕೋದು ಏನೂ ಬೇಡ. ನನಗೆ ಅಥವಾ ಬಿಜೆಪಿಗೆ ಮತ ಹಾಕುವುದಿಲ್ಲವೇ ಬೇಡ. ಆದರೆ ಪ್ರೀತಂಗೌಡ ಅಥವಾ ಬಿಜೆಪಿ ಹೆಸರು ತೋರಿಸಿ ಅವರಿಗೆ ವಿರುದ್ಧವಾಗಿ ಮತ ಕೇಳುವವರಿಗೆ ಮಾತ್ರ ಮತ ಹಾಕಬೇಡಿ. ನಿಮ್ಮ ಕಷ್ಟಕ್ಕೆ ಆದವರಿಗೆ ನೀವು ಮತ ಹಾಕಿ ಎಂದು ಆಗ್ರಹಿಸಿದರು. ಇದನ್ನೂ ಓದಿ: ಬಿಜೆಪಿ ಶಾಸಕನಿಗೆ ಮಹಿಳೆಯಿಂದ ಬ್ಲ್ಯಾಕ್‍ಮೇಲ್ – ತಮಿಳುನಾಡಿನಲ್ಲಿ ನಾಲ್ವರು ವಶ

    ಪ್ರೀತಂ ಗೌಡ ವಿರುದ್ಧ ಮತ ಹಾಕಿ ಅನ್ನುವವರನ್ನು ನಿಮ್ಮ ಹತ್ತಿರ ಸೇರಿಸಬೇಡಿ. ಇದನ್ನೇ 3 ಸಾರಿ ಹೇಳುತ್ತಿದ್ದೇನೆ ಎಲ್ಲರಿಗೂ ತಲೆಗೆ ಹೋಗಲಿ ಅಂತ ತಾಕೀತು ಮಾಡುತ್ತಿದ್ದೇನೆ. ಹಕ್ಕು ಪತ್ರ ನೀಡಿ ಪರೋಕ್ಷವಾಗಿ ಬೇರೆಯವರಿಗೆ ಮತ ಹಾಕಬಾರದು ಅಂತ ತಾಕೀತು ಮಾಡುತ್ತಿದ್ದೇನೆ ಎಂದರು.

  • ಕೋರ್ಟ್ ಅಭಿಪ್ರಾಯ, ಸರ್ಕಾರದ ಆದೇಶ ಪಾಲನೆಯ ಸದ್ಬುದ್ಧಿ ಕೊಡಲಿ: ಪ್ರೀತಂಗೌಡ

    ಕೋರ್ಟ್ ಅಭಿಪ್ರಾಯ, ಸರ್ಕಾರದ ಆದೇಶ ಪಾಲನೆಯ ಸದ್ಬುದ್ಧಿ ಕೊಡಲಿ: ಪ್ರೀತಂಗೌಡ

    ಹಾಸನ: ಪಾದಯಾತ್ರೆ ಮಾಡಿದ್ರೆ ಮಾತ್ರ ಮತ ಹಾಕ್ತಾರೆ ಅನ್ಕೊಂಡ್ರೆ ಮತ ಹಾಕದೇ ಇರುವ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದು ಶಾಸಕ ಪ್ರೀತಂಗೌಡ ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.

    ಮೇಕೆದಾಟು ಪಾದಯಾತ್ರೆ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೋವಿಡ್ ಸಂದರ್ಭದಲ್ಲಿ ಎಲ್ಲರೂ ಅವರವರ ಇತಿಮಿತಿಯಲ್ಲಿರಬೇಕು. ರಾಜಕೀಯ ಪಕ್ಷವೂ ಸೇರಿದಂತೆ ಎಲ್ಲರೂ ತಮ್ಮ ಮಿತಿಯಲ್ಲಿ ಇರಬೇಕು. ಆರೋಗ್ಯ ಕಾಪಾಡಿಕೊಳ್ಳೋದಕ್ಕೆ ಎಲ್ಲರೂ ಸೂಕ್ಷ್ಮವಾಗಿರಬೇಕು. ನಿಯಮಪಾಲನೆ ಮಾಡಬೇಕು. ನಾನಂತೂ ಪಾಲನೆ ಮಾಡ್ತಾ ಇದ್ದೇನೆ. ಭಾರತೀಯ ಜನತಾ ಪಾರ್ಟಿಯೂ ಪಾಲನೆ ಮಾಡುತ್ತಿದೆ ಎಂದು ತಿಳಿಸಿದರು. ಇದನ್ನೂ ಓದಿ: ಪಂಜಾಬ್ ಸಿಎಂ ಅಭ್ಯರ್ಥಿಯನ್ನು ಜನರೇ ಆಯ್ಕೆ ಮಾಡಲಿ – ನಂಬರ್ ಕೊಟ್ಟ ಕೇಜ್ರಿವಾಲ್

    ಎಲ್ಲವನ್ನೂ ಜನರು ಗಮನಿಸುತ್ತಾ ಇರ್ತಾರೆ. ಪಾದಯಾತ್ರೆ ಮಾಡಿದ್ರೆ ಮಾತ್ರ ಜನ ಮತ ಹಾಕ್ತಾರೆ ಅನ್ಕೊಂಡಿದ್ದಾರೆ. ಮತ ಹಾಕದೇ ಇರುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಅವರ ಒಳಿತಿಗಾಗಿ, ಅವರ ಪಕ್ಷದ ಒಳಿತಿಗಾಗಿ ಸಾರ್ವಜನಿಕರ ಹಾಗೂ ಕೋರ್ಟ್ ಅಭಿಪ್ರಾಯ, ಸರ್ಕಾರದ ಆದೇಶ ಪಾಲನೆ ಮಾಡುವ ಸದ್ಬುದ್ಧಿ ಭಗವಂತ ಅವರಿಗೆ ಕೊಡಲಿ ಎಂದು ಕಿವಿಮಾತನ್ನು ಹೇಳಿದರು.


    ನನಗೂ ಸೇರಿದಂತೆ ಎಲ್ಲರಿಗೂ ಬುದ್ಧಿ ಕೊಡಬೇಕು. ಇವತ್ತು ವೈಕುಂಠ ಏಕಾದಶಿ ಎಲ್ಲರಿಗೂ ಒಳ್ಳೆಯದು ಮಾಡಲಿ. ಸಾರ್ವಜನಿಕ ಜೀವನದಲ್ಲಿರುವವರು ರಾಜ್ಯದ ಜನರಿಗೆ ಒಳಿತಾಗುವಂತೆ ನಿರ್ಧಾರಗಳನ್ನು ಕೈಗೊಳ್ಳಲಿ. ಎಲ್ಲ ಜನಪ್ರತಿನಿಧಿಗಳು ಹಾಗೂ ಎಲ್ಲ ರಾಜಕೀಯ ಪಕ್ಷಗಳು ಒಳ್ಳೆ ನಿರ್ಧಾರ ಮಾಡಲಿ ಎಂದು ದೇವರಲ್ಲಿ ಕೇಳುತ್ತೇನೆ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ಖಾಸಗಿ ಲ್ಯಾಬ್‍ಗಳಲ್ಲೂ ಉಚಿತ ಆರ್‌ಟಿ-ಪಿಸಿಆರ್ ಪರೀಕ್ಷೆಗೆ ಎಎಪಿ ಆಗ್ರಹ

  • ರಾಮನಗರ ಜಿಲ್ಲೆಯನ್ನು ಯಾರಿಗೂ ಜಿಪಿಎ ಬರೆದುಕೊಟ್ಟಿಲ್ಲ: ಪ್ರೀತಂಗೌಡ

    ರಾಮನಗರ ಜಿಲ್ಲೆಯನ್ನು ಯಾರಿಗೂ ಜಿಪಿಎ ಬರೆದುಕೊಟ್ಟಿಲ್ಲ: ಪ್ರೀತಂಗೌಡ

    ಹಾಸನ : ಸಂಸದ ಡಿ.ಕೆ.ಸುರೇಶ್ ನಡವಳಿಕೆಯನ್ನು ಇಡೀ ರಾಜ್ಯದ ಜನತೆ ಖಂಡಿಸುತ್ತಿದ್ದಾರೆ. ರಾಮನಗರ ಜಿಲ್ಲೆಯನ್ನು ಯಾರಿಗೂ ಜಿಪಿಎ ಬರೆದುಕೊಟ್ಟಿಲ್ಲ. ಅಲ್ಲಿ ಪಾಳೇಗಾರರ ಸಂಸ್ಕೃತಿ ನಡೆಯುತ್ತಿಲ್ಲ. ಇನ್ಮುಂದೆ ಅವರ ನಡವಳಿಕೆಯನ್ನು ತಿದ್ದಿಕೊಳ್ಳಬೇಕು ಎಂದು ಶಾಸಕ ಪ್ರೀತಂಗೌಡ ಹೇಳಿದರು.

    ಹಾಸನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕ್ಯಾಬಿನೆಟ್ ಮಂತ್ರಿ ಭಾಷಣ ಮಾಡುವಾಗ ಪಾಳೇಗಾರರ ಸಂಸ್ಕೃತಿಯಲ್ಲಿ ಜಗಳಕ್ಕೆ ಹೋಗಿದ್ದಾರೆ. ಸಂಸದ ಡಿ.ಕೆ.ಸುರೇಶ್ ನಡವಳಿಕೆಯನ್ನು ಇಡೀ ರಾಜ್ಯದ ಜನತೆ ಖಂಡಿಸುತ್ತಿದ್ದಾರೆ. ರಾಮನಗರ ಜಿಲ್ಲೆಯನ್ನು ಯಾರಿಗೂ ಜಿಪಿಎ ಬರೆದುಕೊಟ್ಟಿಲ್ಲ. ಅಲ್ಲಿ ಪಾಳೇಗಾರರ ಸಂಸ್ಕೃತಿ ನಡೆಯುತ್ತಿಲ್ಲ. ಇನ್ಮುಂದೆ ಅವರ ನಡವಳಿಕೆಯನ್ನು ತಿದ್ದಿಕೊಳ್ಳಬೇಕು. ಇಡೀ ರಾಜಕಾರಣಿಗಳು ತಲೆ ತಗ್ಗಿಸುವ ಕೆಲಸವನ್ನು ನಿನ್ನೆ ರಾಮನಗರದಲ್ಲಿ ಮಾಡಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಕನಕಪುರ, ರಾಮನಗರ ಯಾರೋಬ್ಬರ ಸ್ವತ್ತಲ್ಲ: ಎಚ್‍ಡಿಕೆ ಕಿಡಿ

    ಇಂದು ರಾಜ್ಯಾದ್ಯಂತ ಅಶ್ವತ್ಥನಾರಾಯಣ ಅವರನ್ನು ಬೆಂಬಲಿಸಿ ಪ್ರತಿಭಟನೆ ಮಾಡುತ್ತಿದ್ದೇವೆ. ಮಾಫಿಯಾ ಆಫ್ ರಾಮನಗರ ಖಂಡಿಸುತ್ತೇವೆ. ಅವರು ಮಾಡುತ್ತಿರುವುದು ಅವರ ಮೇಲೆ ಚಪ್ಪಡಿ ಕಲ್ಲು ಎಳೆದುಕೊಂಡಂತೆ. ಕಾರ್ಯಕ್ರಮಕ್ಕೆ ಡಿ.ಕೆ ಸುರೇಶ್ ಅವರಿಗೆ ಡೋಲ್ ಸೆಟ್ಟು ಇಟ್ಟು ಆಹ್ವಾನ ಕೊಡಲು ಆಗಲ್ಲ. ಡಿಸಿಯಿಂದ ಸಮಸ್ಯೆ ಆಗಿದ್ದರೆ ಹಕ್ಕುಚ್ಯುತಿ ಮಂಡಿಸಲಿ. ಸಾವಿರ ಜನ ಕರೆದುಕೊಂಡು ಬಂದು ಧಿಕ್ಕಾರ ಕೂಗುವುದು ಸಭ್ಯತೆಯಲ್ಲ. ಒಂದೂವರೆ ವರ್ಷ ಸಮ್ಮಿಶ್ರ ಸರ್ಕಾರ ಇತ್ತು. ನನ್ನನ್ನು ಕರೆಯುತ್ತಿರಲಿಲ್ಲ. ನಾನು ಸ್ಟೇಜ್ ಮೇಲೆ ಹೋಗಿ ಕೂಗಾಡಿದ್ನಾ. ನನಗೇನು ಕೂಗಾಡಲು ಬರಲ್ವಾ. ನನ್ನ ಹತ್ರ ಹಾಸನದಲ್ಲಿ ಜನ ಇಲ್ವಾ. ನಾನು ಆ ರೀತಿ ಮಾಡಿದ್ನಾ. ಸಮಾಧಾನವಾಗಿಯೇ ಇದ್ದೆ. ರಾಜಕೀಯ ಬಂದಾಗ ರಾಜಕೀಯ ಮಾಡೋಣ ಎಂದು ಹೇಳಿದರು.

    ಮುಂದಿನ ಚುನಾವಣೆಯಲ್ಲಿ ಹಾಸನದಲ್ಲಿ ಏಳಕ್ಕೆ ಏಳು ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲಲಿದೆ ಎಂಬ ಡಿಕೆಶಿ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಕಳೆದ ಬಾರಿ ಯಾರೂ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿದ್ದರೋ, ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರೋ ಅವರು ಏಳಕ್ಕೆ ಏಳು ಕಾಂಗ್ರೆಸ್ ಗೆಲ್ಲುತ್ತದೆ ಎಂದಿದ್ದರು. ಏಳು ಮಕಾಡೆ ಮಲಗಿ, ಹೇಳಿದವರು ಸೋತರು ಎಂದು ಮಾಜಿ ಸಚಿವ ಎ.ಮಂಜು ವಿರುದ್ಧ ಕುಟುಕಿದರು.

    ನಂತರ 224 ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲುತ್ತದೆ ಎಂದು ಹೇಳುತ್ತೇನೆ. ಮೈಕ್ ಮುಂದೆ ಹೇಳುವುದೇ ಬೇರೆ ರಾಜಕೀಯವೇ ಬೇರೆ. ಮತಗಳೇನು ಅವರ ಜೇಬಿನಲ್ಲಿ ಇರಲ್ಲ ಎಂದು ಡಿ.ಕೆ.ಶಿವಕುಮಾರ್ ಅವರು ಟಾಂಗ್ ನೀಡಿದರು. ಇದನ್ನೂ ಓದಿ: ರಾಮನಗರ ಶಾಂತಿಯ ಜಿಲ್ಲೆ, ಗೂಂಡಾ ರೀತಿಯ ವರ್ತನೆ ಮಾಡಿದ್ದು ತಪ್ಪು: ಎಚ್‍ಡಿಕೆ ಕಿಡಿ

    ಇದೇ ವೇಳೆ ಡಿ.ಕೆ.ಶಿವಕುಮಾರ್ ಮೇಕೆದಾಟು ಯೋಜನೆ ಪಾದಯಾತ್ರೆ ವಿಚಾರವಾಗಿ ಮಾತನಾಡಿದ ಅವರು, ಮೇಕೆದಾಟು ಹೋರಾಟ ರೈತರಿಗೋಸ್ಕರ, ಜನರಿಗೋಸ್ಕರ ಮಾಡುವುದಾದರೆ ಮಾಡಲಿ. ಅದನ್ನು ಬಿಟ್ಟು ರಾಜಕೀಯಕ್ಕಾಗಿ ಮಾಡಬಾರದು. ಚುನಾವಣೆ ಬಗ್ಗೆ ಮಾತನಾಡುತ್ತಿದ್ದಾರೆ ಎಂದರೆ ಮೇಕೆದಾಟು ಚುನಾವಣೆ ಗಿಮಿಕ್ ಎಂದರ್ಥ. ಹಾಸನ, ಹಳೇ ಮೈಸೂರು ಭಾಗದ ಜನರಿಗೆ ಚುನಾವಣೆ ಗಿಮಿಕ್ ಅವಶ್ಯಕತೆ ಇಲ್ಲ. ಈ ಹೋರಾಟದಿಂದ ಹೊಸದಾಗಿ ಸೂಟುಬೂಟು ಹೊಲಿಸಿಕೊಳ್ಳಬಹುದು ಎಂದುಕೊಂಡಿದ್ದರೆ ಆ ಸೂಟು, ಬೂಟು ರೂಂನಲ್ಲಿ ಉಳಿಯುತ್ತದೆ ಹೊರತು ಧರಿಸಲು ಅವಕಾಶ ಸಿಗಲ್ಲ. ಮೇಕೆದಾಟು ವಿಚಾರವನ್ನು ರಾಜಕೀಯಕ್ಕಾಗಿ ಬಳಸಿಕೊಳ್ಳಲು ಹೊರಟಿದ್ದಾರೆ. ರಾಜ್ಯದ ಬಿಜೆಪಿ ಸರ್ಕಾರ ಮೇಕೆದಾಟು ಮಾಡುತ್ತೇವೆ ಎಂದಿದ್ದಾರೆ ಕಾದುನೋಡಿ ಎಂದಿದ್ದಾರೆ. ಇದನ್ನೂ ಓದಿ: ಮೇಕೆದಾಟು ಪಾದಯಾತ್ರೆಗೆ ಟಫ್‍ರೂಲ್ಸ್ ಅನ್ವಯ – ಬಿಜೆಪಿಯಿಂದ ಷಡ್ಯಂತ್ರ ಎಂದ ಕಾಂಗ್ರೆಸ್‌

  • ಅವರ ಮನೆ ಒಡೆಯುವಂತಹ ಕೆಲಸ ಮಾಡಿಲ್ಲ – ಎ.ಮಂಜು ವಿರುದ್ಧ ಪ್ರೀತಂಗೌಡ ಕಿಡಿ

    ಅವರ ಮನೆ ಒಡೆಯುವಂತಹ ಕೆಲಸ ಮಾಡಿಲ್ಲ – ಎ.ಮಂಜು ವಿರುದ್ಧ ಪ್ರೀತಂಗೌಡ ಕಿಡಿ

    ಹಾಸನ : ನನ್ನನ್ನು ಜನ ಹತ್ತು ವರ್ಷದಿಂದ ನೋಡುತ್ತಿದ್ದಾರೆ, ಅವರನ್ನು ಮೂವತ್ತು ವರ್ಷದಿಂದ ನೋಡುತ್ತಿದ್ದಾರೆ. ಯಾರು ಮಾತಿಗೆ ಬದ್ದವಾಗಿರುತ್ತಾರೆ ಎಂದು ಗೊತ್ತಿದೆ. ನಾನು ಅವರ ಮನೆ ಒಡೆಯುವಂತಹ ಕೆಲಸ ಮಾಡಿಲ್ಲ ಎಂದು ಶಾಸಕ ಪ್ರೀತಂಗೌಡ ಹೇಳಿದ್ದಾರೆ.

    ಪ್ರೀತಂಗೌಡ ನಡೆಯಿಂದ ನನ್ನ ಫ್ಯಾಮಿಲಿ ಡಿಸ್ಟರ್ಬ್ ಆಗಿದ್ದರು. ಐದು ಕೋಟಿ ಕೊಡುತ್ತೇನೆ ನಿಮ್ಮ ಮಗನನ್ನು ಹಾಸನದಿಂದ ಎಂಎಲ್‍ಸಿ ಚುನಾವಣೆಗೆ ನಿಲ್ಲಿಸಿ ಎಂದು ಹೇಳಿ ಆನಂತರ ಉಲ್ಟಾ ಹೊಡೆದಿದ್ದರು ಎಂದು ಮಾಜಿ ಸಚಿವ ಎ.ಮಂಜು ಆರೋಪ ಮಾಡಿದ್ದರು.  ಇದನ್ನೂ ಓದಿ:  ಬೆಳಗಾವಿಯಲ್ಲಿ MES ಪುಂಡರ ಅಟ್ಟಹಾಸ – ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಹಾನಿ, ಬಸ್ ಮೇಲೆ ಕಲ್ಲು ತೂರಾಟ

    ಈ ಕುರಿತಂತೆ ಹಾಸನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಪ್ರೀತಂಗೌಡ ಅವರು, ನನ್ನನ್ನ ಜನ ಹತ್ತು ವರ್ಷದಿಂದ ನೋಡುತ್ತಿದ್ದಾರೆ, ಅವರನ್ನು ಮೂವತ್ತು ವರ್ಷದಿಂದ ನೋಡುತ್ತಿದ್ದಾರೆ. ಯಾರು ಮಾತಿಗೆ ಬದ್ದವಾಗಿರುತ್ತಾರೆ. ಯಾರೂ ಯಾವ್ಯಾವ ಪಾರ್ಟಿಗೆ ಯಾವ್ಯಾವ ಟೈಪಲಿ ಲಾಂಗ್ ಜಂಪ್ ಮಾಡುತ್ತಾರೆ ಎನ್ನುವುದು ಗೊತ್ತಿದೆ. ನಾನು ಬದುಕಿರುವವರೆಗೂ ಬಿಜೆಪಿ, ಸಾಯೋವರೆಗೂ ಬಿಜೆಪಿ. ಯಾರೂ ಮಾತನಾಡುತ್ತಿಸದಸ ಅವರ ಬಾಯಲ್ಲಿ ಇವತ್ತು ಯಾವ ಪಕ್ಷ, ನಾಳೆ ಯಾವ ಪಕ್ಷ ಅಂದರೆ ಬಾಯಿ ಹೊರಳಲ್ಲ ಅಂಥವರು ನನ್ನ ಬಗ್ಗೆ ಮಾತನಾಡಲು ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದ್ದಾರೆ.

     

    ಅವರ ಮನೆ ಒಡೆಯುವಂತಹ ಕೆಲಸ ಮಾಡಿಲ್ಲ, ಅವರ ಮನಸ್ಥಿತಿ ಅಷ್ಟು ವೀಕಿದೆ, ನಾನು ಅಷ್ಟೊಂದು ಸ್ಟ್ರಾಂಗ್ ಅಂಥ ಈಗ ಗೊತ್ತಾಗುತ್ತಿದೆ. ನಮ್ಮ ಹತ್ತಿರ ಬಿಜೆಪಿ ಅಭ್ಯರ್ಥಿ ಆಗುತ್ತೀನಿ ಅಂತ ಚರ್ಚೆ ಮಾಡಿದ್ದರು. ಕಾಂಗ್ರೆಸ್ ಅಭ್ಯರ್ಥಿ ಆಗಲು ಯಾವಾಗ ಡಿಡಿ ಕೊಟ್ಟಿದ್ದಾರೆ ಎನ್ನುವುದನ್ನು ಕೆಪಿಸಿಸಿ ಕಚೇರಿಯಲ್ಲಿ ಚೆಕ್ ಮಾಡಲಿ. ಇವರು ಓದಿರುವ ಸ್ಕೂಲ್‍ನಲ್ಲಿ ಓದಿದರೆ, ಆ ಸ್ಕೂಲಿನಲ್ಲಿ ಟೀಚರ್ ಆಗಿ, ಪ್ರಿನ್ಸಿಪಲ್ ಆಗಿ, ರಿಟೈರ್ಡ್ ಆಗಿ ಮ್ಯಾನೇಜ್ ಮೆಂಟ್ ಕಮಿಟಿ ಅಧ್ಯಕ್ಷನಾದ್ದೀನಿ. ಅವರಿನ್ನೂ ಆ ಸ್ಕೂಲ್‍ನಲ್ಲಿ ಓದುತ್ತಿದ್ದಾರೆ, ಜಗತ್ತಿಗೆ ನಾನೋಬ್ಬನೆ ಬುದ್ದಿವಂತ ಅಂದುಕೊಂಡಿದ್ದಾರೆ. ಆ ಕಾಲ ಮುಗಿದು ಹೋಗಿದೆ. ಅಂತಹವರು ಸುಮಾರು ಜನ ಬಂದಿದ್ದಾರೆ. ಹಾಗಾಗಿ ಹೆಚ್ಚು ಚಾಣಾಕ್ಷತನ ತೋರಿಸೋದು ಬೇಡ ಎಂದು ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ದುಷ್ಟಶಕ್ತಿಗಳಿಗೆ ಕನ್ನಡಿಗರು ಹೆದರೋಲ್ಲ, ಕನ್ನಡಿಗರ ಶಕ್ತಿ ಪ್ರದರ್ಶಿಸುವ ಕಾಲ ಬಂದಿದೆ: ಹೆಚ್‍ಡಿಕೆ

    ನನಗೆ ಬಿಜೆಪಿ ಇಷ್ಟವಿಲ್ಲ, ಚುನಾವಣೆ ಮಾಡದೇ ಗೆಲ್ಲುವುದಕ್ಕೆ ಆಗಲಿಲ್ಲ. ವಾಪಾಸ್ ಹೋಗುತ್ತೇನೆ ಅಂದರೆ ಜಿಲ್ಲೆಯ ಜನ ಒಪ್ಪಿಕೊಳ್ಳುತ್ತಾರೆ. ಯಾರಿಂದನೂ ಬಿಜೆಪಿ ಏನು ವ್ಯಾತ್ಯಾಸ ಆಗಲ್ಲ. ರಾಷ್ಟ್ರದಲ್ಲಿ ಬಿಜೆಪಿ ಅತಿ ದೊಡ್ಡ ಪಕ್ಷ. ಹಾಸನ ಜಿಲ್ಲೆಯಲ್ಲೂ ಮುಂದೆ ದೊಡ್ಡ ಪಕ್ಷ ಆಗುತ್ತದೆ. ಎಲ್ಲಾ ರೆಡಿ ಆಗಿರುವ ಮನೆಗೆ ಬಂದು ಗೃಹಪ್ರವೇಶ ಮಾಡುವುದಲ್ಲ. ಹೊಸದಾಗಿ ಸೈಟ್ ಹುಡುಕಿ, ಫೌಂಡೇಶನ್ ತೆಗೆದು, ಕ್ಯೂರಿಂಗ್ ಮಾಡಿ, ಆರ್.ಸಿ.ಸಿ. ಹಾಕಿ ಬಣ್ಣ ಹೊಡೆದು ವಾಸ ಮಾಡಬೇಕೆಂದು ಬಂದಿರುವವನು ನಾನು. ಅವರು ಎಲ್ಲೆಲ್ಲಿ ಮನೆ ಇರುತ್ತೋ ಅಲ್ಲಲ್ಲಿ ಹೋಗಿ ವಾಸ ಮಾಡಿ ಬಾಡಿಗೆ ಮನೆಯಲ್ಲಿ ಹೋಗಿರುತ್ತಾರೆ. ನಾನು ಪರ್ಮನೆಂಟ್ ಗಿರಾಕಿ, ಬಾಡಿಗೆ ಗಿರಾಕಿಗಳ ಬಗ್ಗೆ ಮಾತನಾಡಲ್ಲ ಎಂದು ವ್ಯಂಗ್ಯವಾಡಿದ್ದಾರೆ.

  • ಮುಳ್ಳನ್ನು ಮುಳ್ಳಿನಿಂದ ತೆಗೆಯಬೇಕು, ನಿಂಬೆಹಣ್ಣನ್ನು ನಿಂಬೆಹಣ್ಣಿಂದ ತೆಗೆಯಬೇಕು: ಪ್ರೀತಂಗೌಡ

    ಮುಳ್ಳನ್ನು ಮುಳ್ಳಿನಿಂದ ತೆಗೆಯಬೇಕು, ನಿಂಬೆಹಣ್ಣನ್ನು ನಿಂಬೆಹಣ್ಣಿಂದ ತೆಗೆಯಬೇಕು: ಪ್ರೀತಂಗೌಡ

    ಹಾಸನ: ಮುಳ್ಳನ್ನು ಮುಳ್ಳಿನಿಂದ ತೆಗೆಯಬೇಕು. ಅದೇ ರೀತಿ ನಿಂಬೆಹಣ್ಣನ್ನು ನಿಂಬೆಹಣ್ಣಿಂದ ತೆಗೆಯಬೇಕು ಎಂದು ನಾಮಪತ್ರ ಸಲ್ಲಿಕೆ ವೇಳೆ ಮಾಜಿ ಸಚಿವ ಹೆಚ್.ಡಿ ರೇವಣ್ಣ ವಿರುದ್ಧ ಪರೋಕ್ಷವಾಗಿ ಶಾಸಕ ಪ್ರೀತಂಗೌಡ ವ್ಯಂಗ್ಯವಾಡಿದ್ದಾರೆ.

    ಇಂದು ಬಿಜೆಪಿ ಅಭ್ಯರ್ಥಿ ವಿಶ್ವನಾಥ್ ನಾಮಪತ್ರ ಸಲ್ಲಿಸಲು ಹಾಸನ ಡಿಸಿ ಕಚೇರಿಗೆ ಆಗಮಿಸಿದ್ದರು. ಈ ವೇಳೆ ಅಲ್ಲಿಗೆ ಆಗಮಿಸಿದ್ದ ಪ್ರೀತಂಗೌಡ ತಮ್ಮ ಪಕ್ಷದವರ ಜೊತೆ ಪರೋಕ್ಷವಾಗಿ ಹೆಚ್‍ಡಿ.ರೇವಣ್ಣ ವಿರುದ್ಧ ವ್ಯಂಗ್ಯವಾಗಿ ಮಾತನಾಡಿದ್ದು, ಅವರು ಮಾತನಾಡುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ಕುಟುಂಬದಿಂದ ಒಬ್ಬರೇ ಚುನಾವಣೆಗೆ ನಿಲ್ಲಲಿ ಎಂದು ಕಾನೂನು ತರಲಿ: ಹೆಚ್.ಡಿ ರೇವಣ್ಣ

    Revanna

    ನಮ್ಮದು 12:05 ಕ್ಕೆ ನಾಮಪತ್ರ ಸಲ್ಲಿಸಲು ಸಮಯ ಕೇಳಿದ್ದೇವೆ. ನಮ್ಮದೂ ನಿಂಬೆಹಣ್ಣಿನ ಶಾಸ್ತ್ರವೇ. ವಿರೋಧಿಗಳು ಏನು ಮಾಡ್ತಾರೋ ನಾವು ಅದನ್ನೆ ಮಾಡುತ್ತೇವೆ. ಮುಳ್ಳನ್ನು ಮುಳ್ಳಿನಿಂದ ತೆಗೆಯಬೇಕು. ಅದೇ ರೀತಿ ನಿಂಬೆಹಣ್ಣನ್ನು ನಿಂಬೆಹಣ್ಣಿಂದ ತೆಗೆಯಬೇಕು ಎಂದು ರೇವಣ್ಣಗೆ ಪರೋಕ್ಷವಾಗಿ ಪ್ರೀತಂಗೌಡ ಟಾಂಗ್ ಕೊಟ್ಟರು.  ಇದನ್ನೂ ಓದಿ: ರಾಜ್ಯದಲ್ಲಿ ತಗ್ಗಿದ ಮಳೆ, ಮೋಡ ಕವಿದ ವಾತಾವರಣ ಮುಂದುವರೆಯಲಿದೆ: ಹವಾಮಾನ ಇಲಾಖೆ

  • RSS ಬಗ್ಗೆ ಮಾತನಾಡಿದರೆ ವೋಟು ಬರಲ್ಲ: ಪ್ರೀತಂಗೌಡ ವ್ಯಂಗ್ಯ

    RSS ಬಗ್ಗೆ ಮಾತನಾಡಿದರೆ ವೋಟು ಬರಲ್ಲ: ಪ್ರೀತಂಗೌಡ ವ್ಯಂಗ್ಯ

    ಹಾಸನ: ನಮ್ಮ ಮಾತೃ ಸಂಸ್ಥೆಯಾದ RSS ಬಗ್ಗೆ ಮಾತನಾಡಿದರೆ, ಅವರ ವೋಟು ಅವರಿಗೆ ಬರುವುದಿಲ್ಲ ಎಂದು ಜೆಡಿಎಸ್ ಬಗ್ಗೆ ಪ್ರೀತಂಗೌಡ ವ್ಯಂಗ್ಯವಾಗಿ ಮಾತನಾಡಿದ್ದಾರೆ.

    ಹಾಸನದಲ್ಲಿ ಪ್ರೀತಂಗೌಡ ಅವರು ಉಪಚುನಾವಣೆ ಕುರಿತು ಮಾತನಾಡಿದ್ದು, ಉಪಚುನಾವಣೆ ಪ್ರಚಾರಕ್ಕೆ ಮಾಜಿ ಪ್ರಧಾನಿ ದೇವೇಗೌಡರು, ಮಾಜಿ ಸಿಎಂ ಕುಮಾರಸ್ವಾಮಿ, ಪ್ರಜ್ವಲ್, ರೇವಣ್ಣ, ನಿಖಿಲ್, ಕ್ಯಾಂಡಿಡೇಟ್ ಹೋಗಿದ್ದರು. ಒಬ್ಬೊಬ್ಬರಿಗೆ ಒಂದು ಸಾವಿರ ವೋಟು ಎಂದರೂ ಆರು ಸಾವಿರ ವೋಟು ಬರಬೇಕಿತ್ತು. ಅಲ್ಲಿ ಐದು ಸಾವಿರ ವೋಟು ಕ್ರಾಸ್ ಆಗಿಲ್ಲ ಎಂದು ಜೆಡಿಎಸ್ ವಿರುದ್ಧ ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ಪುನೀತ್ ರಾಜ್‌ಕುಮಾರ್‌ಗೆ ‘ಬಸವಶ್ರೀ ಪ್ರಶಸ್ತಿ’ ಘೋಷಣೆ

    ಬಿಜೆಪಿ ಪಕ್ಷ ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಮೂರು ಕಡೆ ಠೇವಣಿ ಕಳೆದುಕೊಂಡಿದೆ ಎಂಬ ರೇವಣ್ಣ ಹೇಳಿಕೆಗೆ ಟಾಂಗ್ ನೀಡಿದ ಅವರು, ಪ್ರಾದೇಶಿಕ ಪಕ್ಷ ಸದೃಢವಾಗಿರಲಿ ಎಂದು ಆಶಿಸುವುದರಲ್ಲಿ ನಾನೂ ಒಬ್ಬ. ಪ್ರಾದೇಶಿಕ ಪಕ್ಷ ಇರಬೇಕು ನಾಡಿನ ಬಗ್ಗೆ ಹೋರಾಟ ಮಾಡುವ ಶಕ್ತಿ ಉಳಿಸಿಕೊಳ್ಳಬೇಕು ಎಂದು ಸಲಹೆ ಕೊಡುತ್ತೇನೆ. ಇಡೀ ಪ್ರಪಂಚದಲ್ಲಿ ಅತಿ ದೊಡ್ಡ ಪಕ್ಷ ಎಂದರೆ ಬಿಜೆಪಿ. ಇವರ ಹತ್ರ ಇರೋದು 40 ಶಾಸಕರು. ಇವರು ಬಿಜೆಪಿ ಬಗ್ಗೆ ವಿಶ್ಲೇಷಣೆ ಮಾಡ್ತಾರೆ ಎಂದು ಹೇಳಿದರೆ ಅದರ ರಿಸಲ್ಟ್ ಹಾನಗಲ್ ಮತ್ತು ಸಿಂಧಗಿಯಲ್ಲಿ ನೋಡಿದ್ದೀರಿ ಎಂದು ಟಾಂಗ್ ಕೊಟ್ಟಿದ್ದಾರೆ.


    ನಮ್ಮ ಮಾತೃ ಸಂಸ್ಥೆಯಾದ RSS ಬಗ್ಗೆ ಮಾತನಾಡಿದರೆ, ಅವರ ವೋಟು ಅವರಿಗೆ ಬಾರದು. ಯಾವತ್ತೂ ಅವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಬಗ್ಗೆ ಹಗುರವಾಗಿ ಮಾತನಾಡಿದರೋ, ಜನ ತೀರ್ಮಾನ ಮಾಡಿದರು. ಇವರು ರಾಜಕಾರಣದಲ್ಲಿ ಯಾವ ಮಟ್ಟಕ್ಕಾದರೂ ಹೋಗ್ತಾರೆ. ಇವರಿಗೆ ಬುದ್ಧಿ ಕಲಿಸಲು ಸೂಕ್ತ ಸಮಯ ಎಂದು ಹೇಳಿ ಅವರಿಗೆ ಆ ಮತವನ್ನು ಕೊಟ್ಟಿದ್ದಾರೆ. ಗೆದ್ದಂತಹ ಕ್ಷೇತ್ರದಲ್ಲಿ ಐದು ಸಾವಿರ ವೋಟನ್ನು ಉಳಿಸಿಕೊಳ್ಳಲು ಜೆಡಿಎಸ್‍ಗೆ ಆಗಲಿಲ್ಲ ಎಂದು ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಪರಿಸರ ಸ್ನೇಹಿ ಅರಿವು ಮೂಡಿಸಿದ ಪಬ್ಲಿಕ್ ಹೀರೋ

  • ಯಾರು ಆಕಸ್ಮಿಕವಾಗಿ ನಾಮಬಲದಲ್ಲಿ ಶಾಸಕ, ಸಚಿವ, ಸಿಎಂ ಆದ್ರು ಎಂಬುದು ರಾಜ್ಯದ ಜನರಿಗೆ ಗೊತ್ತಿದೆ: ಪ್ರೀತಂಗೌಡ

    ಯಾರು ಆಕಸ್ಮಿಕವಾಗಿ ನಾಮಬಲದಲ್ಲಿ ಶಾಸಕ, ಸಚಿವ, ಸಿಎಂ ಆದ್ರು ಎಂಬುದು ರಾಜ್ಯದ ಜನರಿಗೆ ಗೊತ್ತಿದೆ: ಪ್ರೀತಂಗೌಡ

    ಹಾಸನ: ಯಾರೋ ಒಬ್ಬರು ಸಂಘಟನೆ ಬಗ್ಗೆ ಮಾತನಾಡಿದರೆ ಅವರ ಬಾಯಿ ಚಪಲ ತೀರುತ್ತೆ ಹೊರತು ಸಂಘಟನೆಗೆ ಪರಿಣಾಮ ಬೀರಲ್ಲ. ಯಾರು ಆಕಸ್ಮಿಕವಾಗಿ ಯಾರ ನಾಮಬಲದಲ್ಲಿ ಶಾಸಕರಾಗಿ, ಸಚಿವರಾಗಿ ನಂತರ ಸಿಎಂ ಆದ್ರು ಎಂಬುದು ರಾಜ್ಯದ ಜನರಿಗೆ ಗೊತ್ತಿದೆ ಎಂದು ಆರ್‌ಎಸ್‌ಎಸ್‌ ಬಗ್ಗೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ನೀಡಿದ್ದ ಹೇಳಿಕೆಗೆ ಶಾಸಕ ಪ್ರೀತಂಗೌಡ ತಿರುಗೇಟು ನೀಡಿದ್ದಾರೆ.

    ಆರ್‌ಎಸ್‌ಎಸ್‌ ಕಲಿಸಿಕೊಟ್ಟಿರೋದೆ ನೀಲಿಚಿತ್ರ ನೋಡೋದು ಎಂಬ ಹೆಚ್‍ಡಿಕೆ ಹೇಳಿಕೆಗೆ ಹಾಸನದಲ್ಲಿ ತಿರುಗೇಟು ನೀಡಿದ ಶಾಸಕ ಪ್ರೀತಂಗೌಡ, ಮಹರ್ಶಿ ವಾಲ್ಮೀಕಿ ರಾಮಾಯಣ ಮಹಾಕಾವ್ಯ ರಚಿಸಿದ್ರು. ಪ್ರಪಂಚದ ಆದರ್ಶ ಪುರುಷ ಎಂದರೆ ಶ್ರೀರಾಮಚಂದ್ರ ಎಂದು ಜಗತ್ತೇ ನಂಬಿದೆ. ಭಾರತದ ಪರಂಪರೆ ತಿಳಿಸಿಕೊಟ್ಟಿರುವ ಮಹರ್ಷಿಗಳಿಂದ ಪ್ರೇರಣೆ ಪಡೆದ ಸಂಘಟನೆ ಆರ್‌ಎಸ್‌ಎಸ್‌ ನಾವು ಆದರ್ಶ ಪುರಷರನ್ನು ಹಿಂಬಾಳಿಸುವ ಕಾರ್ಯಕರ್ತರು. ಹಾಗಾಗಿ ಯಾರೋ ಒಬ್ಬರು ಸಂಘಟನೆ ಬಗ್ಗೆ ಮಾತನಾಡಿದ ತಕ್ಷಣ ಅದರ ಶಕ್ತಿ ಕುಂದಲ್ಲ. ಮಾತನಾಡುವವರ ಬಾಯಿ ಚಪಲ ತೀರುತ್ತೆ ಹೊರತು ಸಂಘಟನೆಗೆ ಪರಿಣಾಮ ಬೀರಲ್ಲ ಎಂದು ತಿರುಗೇಟು ನೀಡಿದರು. ಇದನ್ನೂ ಓದಿ: ರಮೇಶ್‌ಕುಮಾರ್‌ನ ಜೈಲಿಗೆ ಕಳುಹಿಸುತ್ತೇನೆ – ಸುಧಾಕರ್ ಶಪಥ

    ಚುನಾವಣಾ ಮತಕ್ಕೋಸ್ಕರ, ರಾಜಕಾರಣಕ್ಕೋಸ್ಕರ ಏನು ಬೇಕಾದ್ರು ಮಾತನಾಡಬಹುದು ಎಂದು ರಾಜಕೀಯ ಪಕ್ಷಗಳು ಅಂದುಕೊಂಡಿದ್ರೆ ದುರ್ದೈವ. ನಮ್ಮ ದೇಶದ ಸಂಸ್ಕೃತಿ ಪರಂಪರೆ ಉಳಿಸುವ ಸಂಘಟನೆ ಬಗ್ಗೆ ಹಗುರವಾಗಿ ಮಾತನಾಡಬಾರದು. ಈ ಬಗ್ಗೆ ಹಿರಿಯರಾದ ಕುಮಾರಸ್ವಾಮಿಗೆ ಮನವಿ ಮಾಡುತ್ತೇನೆ ಈ ಹಿಂದೆ ಶಾಸಕ ಪ್ರೀತಂಗೌಡ ಅಕಸ್ಮಾತ್ ಶಾಸಕರಾಗಿದ್ದಾರೆ ಎಂದು ಎಚ್‍ಡಿಕೆ ಹೇಳಿಕೆ ನೀಡಿದ್ದರು, ಕುಮಾರಣ್ಣ ಏನೇ ಮಾತನಾಡಿದ್ರು ನನಗೆ ಆಶೀರ್ವಾದ. ಕುಮಾರಣ್ಣ ನನ್ನ ಹಿತೈಷಿ. ಯಾವಾಗಲೂ ನನ್ನ ಒಳಿತನ್ನೇ ಬಯಸುತ್ತಾರೆ ಎಂದು ನಂಬಿದ್ದೇನೆ. ಆದರೆ ನಾನು ಯಾವ ಸ್ಪೀಡಲ್ಲೂ ಬಂದಿಲ್ಲ. ಮೂರುವರೆ ವರ್ಷ ಕಷ್ಟಪಟ್ಟು ಜನರ ಮಧ್ಯೆ ಇದ್ದು ಜನರ ಸೇವೆ ಮಾಡಿ, ಚುನಾವಣೆಯಲ್ಲಿ ಜನರ ಆಶೀರ್ವಾದ ಪಡೆದುಕೊಂಡು ಶಾಸಕನಾಗಿದ್ದೇನೆ.

    ಯಾವುದೇ ಕಾರಣಕ್ಕೂ ಆಕಸ್ಮಿಕವಾಗಿ ಶಾಸಕನೂ ಆಗಿಲ್ಲ, ಮಂತ್ರಿಯೂ ಆಗಿಲ್ಲ, ಮುಖ್ಯಮಂತ್ರಿಯೂ ಆಗಿಲ್ಲ. ಯಾರ್ಯಾರು ಯಾವ್ಯಾವ ಸಂದರ್ಭದಲ್ಲಿ ಆಕಸ್ಮಿಕವಾಗಿ ಏನೇನು ಆಗಿದ್ದಾರೆ ಎಂದು ಇತಿಹಾಸ ಪುಟ ತೆರೆದು ನೋಡಿದ್ರೆ ಗೊತ್ತಾಗುತ್ತೆ. ಯಾರು ಆಕಸ್ಮಿಕವಾಗಿ ಯಾರ ನಾಮಬಲದಲ್ಲಿ ಶಾಸಕರಾದ್ರು, ಸಚಿವರಾದ್ರು, ಯಾವ ಕುತಂತ್ರ ಬಳಸಿ ಸಿಎಂ ಆದ್ರು ಎಂಬುವುದು ಇಡೀ ರಾಜ್ಯದ ಜನರಿಗೆ ಗೊತ್ತಿದೆ. ಆಕಸ್ಮಿಕ ಎಂಬ ಪದ ಯಾರಿಗೆ ಸಮಂಜಸ ಎಂದು ಜನರು ತೀರ್ಮಾನಿಸುತ್ತಾರೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಉತ್ತರಾಖಂಡ್ ಪ್ರವಾಹಪೀಡಿತ ಭಾಗದಲ್ಲಿ 10 ಕನ್ನಡಿಗರಿಗೆ ಸಂಕಷ್ಟ

  • ಆನಂದ್ ಸಿಂಗ್ ಪರ ಯತ್ನಾಳ್ ಬ್ಯಾಟಿಂಗ್

    ಆನಂದ್ ಸಿಂಗ್ ಪರ ಯತ್ನಾಳ್ ಬ್ಯಾಟಿಂಗ್

    ವಿಜಯಪುರ: ಆನಂದ್ ಸಿಂಗ್ ಅವರು ಒಬ್ಬ ಪ್ರಬುದ್ಧ ರಾಜಕಾರಣಿ. ಅವರೊಬ್ಬ ಒಳ್ಳೆಯ, ಕ್ರೀಯಾಶೀಲ ವ್ಯಕ್ತಿ. ಅವರನ್ನು ಸಿಎಂ ಗೌರವಯುತ ವಾಗಿ ನೋಡಿಕೊಳ್ಳಬೇಕು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಸಚಿವ ಆನಂದ್ ಸಿಂಗ್ ಪರ ಬ್ಯಾಟ್ ಬೀಸಿದರು.

    ಆನಂದ್ ಸಿಂಗ್ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಯತ್ನಾಳ್, ಇದು ನನ್ನ ವೈಯಕ್ತಿಕ ಅಭಿಪ್ರಾಯ. ಅವರಿಗೆ ಒಂದು ಒಳ್ಳೆಯ ಖಾತೆ ಕೊಟ್ಟರೆ ತಪ್ಪೇನಿಲ್ಲ. ಕೆಲಸ ಮಾಡುವವರಿಗೆ ಕೊಡಬೇಕು. ಅವರು ಅರಣ್ಯ ಇಲಾಖೆಯ ಸಚಿವರಿದ್ದಾಗ ಬಹಳ ಒಳ್ಳೆಯ ಕೆಲಸ ಮಾಡಿದ್ದಾರೆ. ಅವರಿಗೆ ಒಳ್ಳೆಯ ಖಾತೆ ಕೊಡುವುದು ಸೂಕ್ತ. ಬಿಜೆಪಿ ಸರ್ಕಾರ ಬರಬೇಕಾದರೆ ಮೊದಲು ರಾಜೀನಾಮೆ ಕೊಟ್ಟವರು ಆನಂದ್ ಸಿಂಗ್. ನನಗೆ ವಿಶ್ವಾಸ ಇದೆ ಹೈಕಮಾಂಡ್ ಅವರಿಗೆ ಸೂಕ್ತ ಸ್ಥಾನಮಾನ ನೀಡುತ್ತದೆ ಎಂದರು.

    ದೇವೇಗೌಡರ ಮನೆಗೆ ಬೊಮ್ಮಾಯಿ ಭೇಟಿ ಆಗಿದ್ದರ ಬಗ್ಗೆ ನನ್ನ ಆಕ್ಷೇಪ ಇಲ್ಲ. ರಾಷ್ಟ್ರದ ಮಾಜಿ ಪ್ರಧಾನಿಗಳು, ರಾಜ್ಯದ ಹಿರಿಯರು, ಆದರೆ ದೇವೇಗೌಡರನ್ನಷ್ಟೇ ಭೇಟಿ ಆಗಿದ್ದು ಸರಿಯಲ್ಲ. ಈ ಹಿಂದೆ ಎಸ್.ಎಂ ಕೃಷ್ಣ ಅವರು ಸಿಎಂ ಆದಾಗ ಎಲ್ಲ ಕರ್ನಾಟಕದ ಮಾಜಿ ಸಿಎಂಗಳನ್ನು ಭೇಟಿ ಆಗಿದ್ದರು. ಹಾಗೆ ಬೊಮ್ಮಾಯಿ ಅವರು ಕುಮಾರಸ್ವಾಮಿ ಅವರ ಮನೆಗೆ, ಎಸ್.ಎಂ ಕೃಷ್ಣ ಅವರ ಮನೆಗೆ ಮತ್ತು ಇತರ ಮಾಜಿ ಸಿಎಂಗಳ ಮನೆಗೆ ಗೌರವಯುತವಾಗಿ ಹೋಗಿ ಬಂದಿದ್ದರೆ ಈ ಸಮಸ್ಯೆ ಬರುತ್ತಿರಲಿಲ್ಲ ಎಂದು ಅಭಿಪ್ರಾಯಪಟ್ಟರು. ಇದನ್ನೂ ಓದಿ: 2ಎ ಮೀಸಲಾತಿ ಹೋರಾಟ ಮುಂದುವರಿಯುತ್ತದೆ: ಯತ್ನಾಳ್

    ಪಾಪ ಪ್ರೀತಂಗೌಡ ಜೆಡಿಎಸ್ ವಿರುದ್ಧ ಅಲ್ಲಿ ಹೋರಾಟ ಮಾಡುತ್ತಿರುತ್ತಾರೆ. ಪಾಪ ಬೊಮ್ಮಾಯಿ ಅವರಿಗೆ ಸಮಸ್ಯೆ ಏನಂದ್ರೆ, ಕೂಸು ಮಲಗಿದೆ, ಅದನ್ನು ಚೂಟುತ್ತಾರೆ, ಅದು ಅಳಲು ಪ್ರಾರಂಭಿಸುತ್ತೆ ಯಾಕಪ್ಪ ಯಾಕೆ ಅಳುತ್ತಿದ್ದಿಯಾ ಎಂದು ಕೇಳುತ್ತಿದ್ದಾರೆ ಎನ್ನುವ ಮೂಲಕ ಯಡಿಯೂರಪ್ಪ ವಿರುದ್ಧ ಪರೋಕ್ಷವಾಗಿ ವ್ಯಂಗ್ಯವಾಡಿದರು.

  • ಪ್ರೀತಂ ಬಗ್ಗೆ ಪ್ರಶ್ನೆಗಳನ್ನು ಕೇಳ್ಬೇಡಿ, ಅಷ್ಟು ಕೆಳಮಟ್ಟಕ್ಕೆ ನನ್ನ ಇಳಿಸ್ಬೇಡಿ: ಹೆಚ್‍ಡಿಡಿ

    ಪ್ರೀತಂ ಬಗ್ಗೆ ಪ್ರಶ್ನೆಗಳನ್ನು ಕೇಳ್ಬೇಡಿ, ಅಷ್ಟು ಕೆಳಮಟ್ಟಕ್ಕೆ ನನ್ನ ಇಳಿಸ್ಬೇಡಿ: ಹೆಚ್‍ಡಿಡಿ

    ನವದೆಹಲಿ: ನನಗೆ ಶಾಸಕ ಪ್ರೀತಂಗೌಡ ಬಗೆಗಿನ ಪ್ರಶ್ನೆಗಳನ್ನು ಕೇಳಬೇಡಿ, ನನ್ನನ್ನು ಅಷ್ಟು ಕೆಳ ಮಟ್ಟಕ್ಕೆ ಇಳಿಸಬೇಡಿ ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಹೇಳುವ ಮೂಲಕ ಶಾಸಕರ ಪ್ರಶ್ನೆಗೆ ಅಸಮಾಧಾನ ಹೊರ ಹಾಕಿದ್ದಾರೆ.

    ಸಂಸತ್ ಕಲಾಪದ ವಿಚಾರಗಳ ಬಗ್ಗೆ ಇಂದು ಅವರು ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದರು. ಸುದ್ದಿಗೋಷ್ಠಿಯಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ, ಹೆಚ್.ಡಿ ದೇವೇಗೌಡರ ಭೇಟಿ ಸಂಬಂಧ ಪ್ರೀತಂಗೌಡ ವ್ಯಕ್ತಪಡಿಸಿದ ಅಸಮಾಧಾನ ಬಗ್ಗೆ ಪ್ರಶ್ನೆ ಮಾಡಲಾಯಿತು. ಇದಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನೀವು ಈ ಬಗ್ಗೆ ನನ್ನ ಮತ್ತೆ ಮತ್ತೆ ಪ್ರಶ್ನೆ ಮಾಡಬೇಡಿ, ಈ ಕುರಿತು ನಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಸಿಡಿಮಿಡಿಗೊಂಡರು.

    ಬಿಜೆಪಿ ಪಕ್ಷದಲ್ಲಿ ನಡೆಯುವ ವಿದ್ಯಮಾನಗಳ ಬಗ್ಗೆ ಮಾತನಾಡಿದ ಅವರು, ನಾನು ಆ ಬಗ್ಗೆ ಚರ್ಚೆ ಮಾಡಲ್ಲ. ಯಡಿಯೂರಪ್ಪ ಮಾರ್ಗದರ್ಶನದಲ್ಲಿ ಬೊಮ್ಮಾಯಿ ನಿರ್ಧಾರ ಮಾಡುತ್ತಾರೆ. ಗೊಂದಲಗಳನ್ನು ನಿಭಾಯಿಸಲು ಬೊಮ್ಮಾಯಿ ಸಮರ್ಥರಿದ್ದಾರೆ ಎಂದರು. ಇದನ್ನೂ ಓದಿ: ಒಂದು ದಿನವೂ ಗೈರಾಗಲಿಲ್ಲ, ಆದ್ರೂ ರಾಜ್ಯಸಭೆಯಲ್ಲಿ ಮಾತಾಡಲು ಅವಕಾಶ ಸಿಗಲಿಲ್ಲ: ಹೆಚ್‍ಡಿಡಿ ಬೇಸರ

    ಸಿಎಂ ಬೊಮ್ಮಾಯಿ ಅವರು ನನ್ನ ಮನೆಗೆ ಬಂದಿದ್ದರು. ನನ್ನಿಂದ ಸರ್ಕಾರಕ್ಕೆ ಏನೂ ತೊಂದರೆ ಆಗಲ್ಲ ಎಂದಿದ್ದೇನೆ ಅಷ್ಟೇ. ನೆಲ-ಜಲ-ಭಾಷೆ ವಿಚಾರವಾಗಿ ಸಹಕಾರ ನೀಡುತ್ತೇವೆ. ಜೊತೆಗೆ ರಾಜ್ಯದ ಜನತೆ ಅಭಿವೃದ್ಧಿ ವಿಚಾರವಾಗಿ ನಮ್ಮ ಪಕ್ಷ ಎಲ್ಲ ಸಹಕಾರಕ್ಕೂ ಸಿದ್ದವಿದೆ ಎಂದು ಹೇಳಿರುವುದಾಗಿ ಅವರು ತಿಳಿಸಿದರು.

  • ಪ್ರೀತಂಗೌಡ ಬೆಳೆಯಬೇಕಾದ ಹುಡುಗ: ವಿ. ಸೋಮಣ್ಣ

    ಪ್ರೀತಂಗೌಡ ಬೆಳೆಯಬೇಕಾದ ಹುಡುಗ: ವಿ. ಸೋಮಣ್ಣ

    ಮಂಡ್ಯ: ಶಾಸಕ ಪ್ರೀತಂಗೌಡ ಇನ್ನೂ ಹುಡುಗ. ಹಾಸನ ಜಿಲ್ಲೆಯಲ್ಲಿ ಇನ್ನೂ ಬೆಳೆಯಬೇಕಾದವನು. ಹೀಗಾಗಿ ಅವನು ಇತಿಮಿತಿಯಲ್ಲಿ ಇರಬೇಕು ಎಂದು ಸಚಿವ ವಿ.ಸೋಮಣ್ಣ ಚಾಟಿ ಬೀಸಿದ್ದಾರೆ.

    ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವೇಗೌಡರ ಕುಟುಂಬಕ್ಕೆ 50 ವರ್ಷದ ರಾಜಕೀಯ ಇತಿಹಾಸವಿದೆ. ನಾನು ಸಚಿವ ಆಗಿದ್ದಾಗ ಪ್ರೀತಂಗೌಡ ಇನ್ನೂ ಹುಟ್ಟಿಯೇ ಇರಲಿಲ್ಲ. ದೇವೇಗೌಡರ ಮನೆಗೆ ಹೋಗುವುದರಲ್ಲಿ ಏನು ತಪ್ಪಿದೆ. ದೇವೇಗೌಡರು ರಾಷ್ಟದ ಪ್ರಧಾನಿಗಳಾಗಿದ್ದಂತವರು, ನಾನು ಕೂಡ ಅವರ ಮನೆಗೆ ಹೋಗಿದ್ದೇನೆ. ಪ್ರೀತಂಗೌಡ ಇನ್ನೂ ಬೆಳೆಯಬೇಕಾದ ಹುಡುಗ, ಸುಮ್ಮನೆ ಹಾಗೆಲ್ಲಾ ಮಾತನಾಡುವುದು ಸರಿ ಅಲ್ಲ ಎಂದು ಟಾಂಗ್ ಕೊಟ್ಟರು.

    ಇದೇ ವೇಳೆ ಸಚಿವರ ಖಾತೆ ಅಸಮಾಧಾನ ವಿಚಾರದ ಕುರಿತು ಮಾತನಾಡಿದ ಅವರು, ಈ ವಿಚಾರದಲ್ಲಿ ಯಾರಿಗೂ ಅಸಮಾಧಾನ ಇಲ್ಲ. ಬಸವರಾಜ್ ಬೊಮ್ಮಯಿ ಅವರು ಬುದ್ಧಿವಂತರಿದ್ದಾರೆ. ರಾಜ್ಯ ಬಿಜೆಪಿ ಸರ್ಕಾರ ಒಳ್ಳೆಯ ಕೆಲಸ ಮಾಡ್ತಾ ಇದೆ. ಆಗಸ್ಟ್ 15 ರಂದು ಬೊಮ್ಮಯಿ, ಯಾರೂ ಯೋಚನೆ ಮಾಡದ ರೀತಿಯಲ್ಲಿ ಜನಪರ ಕಾರ್ಯಕ್ರಮಗಳನ್ನು ಘೋಷಣೆ ಮಾಡುತ್ತಾರೆ. 15 ರಿಂದ 20 ದಿವಸದಲ್ಲಿ ಸರ್ಕಾರ ಟೇಕಫ್ ಆಗಿದೆ ಎಂದ ಭಾವನೆ ಜನರಿಗೆ ಬರುತ್ತದೆ ಎಂದರು. ಇದನ್ನೂ ಓದಿ: ಅಡ್ಜೆಸ್ಟ್‌ಮೆಂಟ್ ರಾಜಕಾರಣ ಮಾಡೋದು ಬೇಡ: ಶಾಸಕ ಪ್ರೀತಂ ಗೌಡ