Tag: Preetham gowda

  • ಹಾಸನದಲ್ಲಿ ಅಭ್ಯರ್ಥಿ ಹೆಸರು ಗೊತ್ತಿಲ್ಲ ಎಂದಿದ್ದವರು ಈಗ ಮಗ ಎನ್ನುತ್ತಿದ್ದಾರೆ: ಭವಾನಿಗೆ ಪ್ರೀತಂ ಗೌಡ ಟಾಂಗ್

    ಹಾಸನದಲ್ಲಿ ಅಭ್ಯರ್ಥಿ ಹೆಸರು ಗೊತ್ತಿಲ್ಲ ಎಂದಿದ್ದವರು ಈಗ ಮಗ ಎನ್ನುತ್ತಿದ್ದಾರೆ: ಭವಾನಿಗೆ ಪ್ರೀತಂ ಗೌಡ ಟಾಂಗ್

    ಹಾಸನ: ಹಾಸನದಲ್ಲಿ (Hassan) ಅಭ್ಯರ್ಥಿ ಹೆಸರು ಗೊತ್ತಿಲ್ಲ ಎಂದವರು ಈಗ ಮಗ ಎಂದು ಹೇಳುತ್ತಿದ್ದಾರೆ. ಇದೆಲ್ಲಾ ರಾಜಕಾರಣದಲ್ಲಿ ಸಹಜ. ಈಗ ಅಮ್ಮ, ಮಗ, ತಂದೆ ತಾಯಿ ಎಲ್ಲಾ ನೆನಪಿಗೆ ಬರುತ್ತಾರೆ ಎಂದು ಶಾಸಕ ಪ್ರೀತಂ ಗೌಡ (Preetham Gowda) ಭವಾನಿ ರೇವಣ್ಣ (Bhavani Revanna) ಅವರಿಗೆ ಟಾಂಗ್ ನೀಡಿದರು.

    ಸ್ವರೂಪ್ (Swaroop) ನನ್ನ ಮಗ. ಅವನನ್ನು ಗೆಲ್ಲಿಸುವುದೇ ನನ್ನ ಗುರಿ ಎಂಬ ಭವಾನಿ ರೇವಣ್ಣ ಹೇಳಿಕೆ ಕುರಿತಾಗಿ ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವರ ಪ್ರೀತಿ ಸ್ವರೂಪ್ ಮೇಲೆ ಇರುವುದು ಗೊತ್ತಾಗಿದೆ. ಇಬ್ಬರು ಹೊಂದಾಣಿಕೆ ಮಾಡಿಕೊಂಡಿರುವುದು ಒಳ್ಳೆಯ ಬೆಳವಣಿಗೆ. 2024ಕ್ಕೆ ಅವರ ಮಗ ಎಂಪಿ (MP) ಕ್ಯಾಂಡಿಡೇಟ್ ಆಗುವುದರಿಂದ ಅವರು ಈ ಎಲ್ಲಾ ಸರ್ಕಸ್ ಮಾಡಬೇಕಾಗುತ್ತದೆ. ಅವರು ಚುನಾವಣಾ ಪ್ರಚಾರ ಮಾಡುತ್ತಿರುವುದು 2023ರ ಅಭ್ಯರ್ಥಿ ಗೆಲ್ಲಲಿ ಎಂದು ಅಲ್ಲಾ. 1947ರಲ್ಲಿ ಇದೆಲ್ಲಾ ಮಾಡಿದರೆ ಜನರಿಗೆ ಅರ್ಥ ಆಗುತ್ತಿರಲಿಲ್ಲ. ಈಗ ಏನೇ ಮಾಡಿದರೂ ಜನರಿಗೆ ಗೊತ್ತಾಗುತ್ತದೆ. ಅವರು ಒಂದಾಗಿರುವುದು ಅವರ ಪಕ್ಷಕ್ಕೆ ಒಳ್ಳೆಯದು. ಹೀಗೆ ಒಂದಾಗಿದ್ದು ಅವರ ಕಾರ್ಯಕರ್ತರಿಗೆ ಸ್ಫೂರ್ತಿ ನೀಡಲಿ ಎಂದು ತಿರುಗೇಟು ನೀಡಿದರು. ಇದನ್ನೂ ಓದಿ: ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಏನೂ ಮಾಡಿಲ್ಲ, ಪಿಎಫ್‌ಐ ಮಾತ್ರ ಅಭಿವೃದ್ಧಿಯಾಯ್ತು: ಅರುಣ್ ಸಿಂಗ್ 

    ಪ್ರೀತಂ ಗೌಡ ಅಭಿವೃದ್ಧಿ ಮಾಡಿದ್ದಾನೆ ಎಂದರೆ ಜನರು ಆಶೀರ್ವದಿಸುತ್ತಾರೆ. ಅದನ್ನು ಈ ಬಾರಿ ಹಾಸನ ಕ್ಷೇತ್ರದ ಮತದಾರರು ತೀರ್ಮಾನ ಮಾಡುತ್ತಾರೆ. ಯಾರು ಹತಾಶರಾಗಿದ್ದಾರೆ ಎನ್ನುವುದನ್ನು ಜನಸಾಮಾನ್ಯರು ನೋಡುತ್ತಿದ್ದಾರೆ. ಬೆಳಗ್ಗೆ 10:30ಕ್ಕೆ ಜೆಡಿಎಸ್ (JDS) ರ‍್ಯಾಲಿ ಶುರುವಾಗಬೇಕಿತ್ತು. ಅದಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಜನ ಸೇರುತ್ತಾರೆ ಎಂದು ಹೇಳಿದ್ದರು. ಗಂಟೆ 12:30 ಆದರೂ ಸಹ ನೂರಾರು ಸಂಖ್ಯೆಯಲ್ಲಿ ಕೂಡಾ ಜನ ಸೇರಲಿಲ್ಲ. ಅದೇ ನಾನು ರ‍್ಯಾಲಿ ಮಾಡುತ್ತಿರುವುದು ಒಂದು ವಾರ್ಡ್. ಜನ ಸಾಮಾನ್ಯರು ಎಷ್ಟು ಬರುತ್ತಿದ್ದಾರೆ ಎಂದು ನೀವೇ ನಿಮ್ಮ ಕಣ್ಣಾರೆ ನೋಡಿ ಎಂದರು. ಇದನ್ನೂ ಓದಿ: ಜಗದೀಶ್‌ ಶೆಟ್ಟರ್‌ 100ಕ್ಕೆ ನೂರರಷ್ಟು ಗೆಲ್ತಾರೆ – ರಕ್ತದಲ್ಲಿ ಪತ್ರ ಬರೆದ ಅಭಿಮಾನಿ

    ಜೆಡಿಎಸ್‌ನವರು ಇಡೀ ನಗರದಲ್ಲಿ ರ‍್ಯಾಲಿ ಮಾಡುತ್ತೇವೆ ಎಂದು ಹೇಳಿದ್ದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹಾಗೂ ಚುನಾವಣೆಯಲ್ಲಿ (Election) ಜನ ಯಾರ ಪರ ಇದ್ದಾರೆ ಎನ್ನುವುದು ಮುಖ್ಯ. ಪ್ರಧಾನಿ ನರೇಂದ್ರ ಮೋದಿ, ಸಿದ್ದರಾಮಯ್ಯ, ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಶಾಸಕನಾದ ನನಗೂ ಒಂದೇ ವೋಟು. ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಒಂದೇ ವೋಟು ಇರೋದು. ಜನ ಯಾರ ಪರ ನಿಲ್ಲತ್ತಾರೋ ಅವರು ಜನಪ್ರತಿನಿಧಿಯಾಗುತ್ತಾರೆ. ಯಾರೋ ಒಬ್ಬರು ಹೇಳಿದ ತಕ್ಷಣ ಅದು ಆಗುವುದಿಲ್ಲ. ಜನ ಅದನ್ನು ಯಾವ ರೀತಿ ತೆಗೆದುಕೊಳ್ಳುತ್ತಾರೆ ಎನ್ನುವುದನ್ನು ಕಾದುನೋಡೋಣ ಎಂದು ಹೆಳಿದರು. ಇದನ್ನೂ ಓದಿ: ಅಮಿತ್ ಶಾ, ವಿ.ಸೋಮಣ್ಣ ವಿರುದ್ಧ ಪೊಲೀಸರಿಗೆ ‘ಕೈ’ ನಾಯಕರ ದೂರು

    ಪ್ರೀತಂ ಗೌಡ ಅವರನ್ನು ಹಾಸನ ಬಿಟ್ಟು ಓಡಿಸುತ್ತೇವೆ ಎಂದು ಹೇಳಿಲ್ಲ ಎಂದು ಹೇಳುತ್ತಿದ್ದಾರೆ. ಪ್ರಜ್ವಲ್ ರೇವಣ್ಣ (Prajwal Revanna) ಅವರ ಬೈಟ್ ನೋಡಿ. ಈ ವಿಷಯ ನನಗೂ ಗೊತ್ತಿರಲಿಲ್ಲ. ಗ್ರಾಮಕ್ಕೆ ಹೋದಾಗ ಎಂಪಿಯವರು ಉದ್ವೇಗದಿಂದ ಈ ರೀತಿಯಾಗಿ ಮಾತನಾಡಿದ್ದಾರೆ ಎಂದು ಒಬ್ಬ ಸೀನಿಯರ್ ಸಿಟಿಜನ್ ಹೇಳಿದರು. ಅವರು ಹಾಗೆ ಹೇಳಿಲ್ಲ ಎಂದರೆ ಸಂತೋಷ. ನಾನು ಯಾವುದೇ ಕಾರಣಕ್ಕೂ ಅವರ ರೀತಿ ರಾಜಕೀಯದಲ್ಲಿ ವಿಚಲಿತನಾಗುವುದಿಲ್ಲ ಎಂದು ಹರಿಹಾಯ್ದರು. ಇದನ್ನೂ ಓದಿ: ಟ್ರ್ಯಾಕ್ಟರ್‌ಗೆ ಮಾರುತಿ ಕಾರು ಚಕ್ರ ಹಾಕಿದ್ರೆ ಸರಿಯಾಗಿ ಓಡುತ್ತಾ? – ‘ಡಬಲ್ ಎಂಜಿನ್ ಸರ್ಕಾರ’ ಮುಖ್ಯ ಎಂದ ಮೋದಿ

    ದೇವೇಗೌಡರಿಗೆ (H.D.Deve Gowda) ಹಾಗೂ ರೇವಣ್ಣನಿಗೆ ಪ್ರೀತಂ ಗೌಡ ಅಗೌರವ ತೋರಿದ್ದಾರೆ ಎಂಬ ಭವಾನಿ ರೇವಣ್ಣ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ದೇವೇಗೌಡರ ಬಗ್ಗೆ ಪ್ರೀತಂ ಗೌಡಗೆ ಇರುವ ಕನಿಷ್ಠ ಗೌರವ ಕೂಡಾ ಅವರ ಮನೆಯವರಿಗೆ ಇಲ್ಲ. ಅವರನ್ನು ಹಾಸನದಲ್ಲಿ ನಿಲ್ಲಿಸಿ ಗೆಲ್ಲಿಸಬೇಕು ಎನ್ನುವುದು ಕಾರ್ಯಕರ್ತರ ಅಭಿಲಾಷೆ ಆಗಿತ್ತು. ಆದರೆ ಅವರ ಸ್ವಾರ್ಥಕ್ಕೆ, ಮಗನನ್ನು ಅಭ್ಯರ್ಥಿಯನ್ನಾಗಿ ಮಾಡಲು ತುಮಕೂರಿಗೆ (Tumkur) ಕಳಿಸಿದರು. ಇದು ಅವರ ಕುಟುಂಬದಲ್ಲೇ ವ್ಯಕ್ತವಾಗಿರುವ ಮಾತು. ಅವರನ್ನು ತುಮಕೂರಿಗೆ ಕಳಿಸುವ ಔಚಿತ್ಯ ಏನಿತ್ತು ಎಂದು ಅವರೇ ಯೋಚನೆ ಮಾಡಲಿ. ದೇವೇಗೌಡರ ಬಗ್ಗೆ ಹಾಸನದ ಜನ ಏನು ಗೌರವ ಇಟ್ಟಿದ್ದಾರೋ ಅದರ ಅರ್ಧಭಾಗ ಅವರ ಕುಟುಂಬ ಇಟ್ಟುಕೊಂಡರೆ ಸಾಕು. ಅವರು ರಾಜಕಾರಣದ ಲಾಭ ಬಿಟ್ಟು ಗೌರವ ಇಟ್ಟುಕೊಳ್ಳಲಿ. ಆಗ ದೇವೇಗೌಡರಿಗೆ ಒಂದು ನೆಮ್ಮದಿ. ಇಷ್ಟು ಸುದೀರ್ಘ ರಾಜಕಾರಣ ಮಾಡಿದ ಗೌಡರನ್ನು ತುಮಕೂರಿಗೆ ಕಳಿಸಿ ಸೋಲಿಸಿದ್ದನ್ನು ಯಾರೂ ಮರೆತಿಲ್ಲ. ನಾನು ವಿರೋಧ ಪಕ್ಷದಲ್ಲಿ ಇದ್ದರೂ ಆ ವ್ಯಕ್ತಿ ಬಗ್ಗೆ ಗೌರವ ಇಟ್ಟುಕೊಂಡಿದ್ದೇನೆ. ದೇವೇಗೌಡರ ಬಗ್ಗೆ ಅವರಿಗಿಂತ ಹೆಚ್ಚಿನ ಗೌರವ ಹೊಂದಿದ್ದೇನೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಮಾವನ ಪರ ಪ್ರಚಾರಕ್ಕೆ ಧುಮುಕಿದ ಸಿದ್ದು ಸೊಸೆ

    ಪ್ರೀತಂಗೌಡರನ್ನು ಸೋಲಿಸಿ ಎಂಬ ದೇವೇಗೌಡರ ಹೇಳಿಕೆ ವಿಚಾರವಾಗಿ ಉತ್ತರಿಸಿದ ಅವರು, ಅವರು ವಿರೋಧ ಪಕ್ಷದ ರಾಷ್ಟ್ರೀಯ ನಾಯಕರು. ಅವರು ಪ್ರೀತಂಗೌಡರನ್ನ ಗೆಲ್ಲಿಸಿ ಎನ್ನಲು ಆಗುತ್ತಾ? ಅವರು ಅವರ ಪಕ್ಷದ ಅಭ್ಯರ್ಥಿ ಗೆಲ್ಲಿಸಿ ಎಂದಿದ್ದಾರೆ. ಅಮಿತ್ ಶಾ (Amit Shah) ಅವರು ಪ್ರೀತಂಗೌಡ ಅವರನ್ನು ಗೆಲ್ಲಿಸಿ ಎಂದರು. ಅವರು ಬೇರೆಯವರನ್ನ ಗೆಲ್ಲಿಸಿ ಎನ್ನಲು ಆಗುತ್ತಾ? ಇಲ್ಲಿ ಏನು ಅಭಿವೃದ್ಧಿ ಆಗಿದೆ, ಎಷ್ಟು ಜನ ಬೆಂಬಲ ಇದೆ ಎಂದು ನೀವೆ ನೋಡಿ. ಯಾರೊ ಬಂದು ಪ್ರೀತಂಗೌಡ ಅವರನ್ನು ಓಡಿಸಿ ಎಂದ ಕೂಡಲೇ ಓಡಿಸೋಕೆ ಜನರು ದಡ್ಡರಲ್ಲ. ಜನರ ಕಷ್ಟ ಹಾಗೂ ಸುಖಕ್ಕೆ ನಾನು ಮನೆ ಮಗನಾಗಿ ಕೆಲಸ ಮಾಡಿದ್ದೇನೆ ಎಂದರು. ಇದನ್ನೂ ಓದಿ: ಚುನಾವಣೆಗೆ ಅಣಿಗೊಳಿಸಲು ಮೋದಿ ರಣತಂತ್ರ – 50 ಲಕ್ಷ ಬಿಜೆಪಿ ಕಾರ್ಯಕರ್ತರೊಂದಿಗೆ ಸಂವಾದ

  • ಒಂದು ಲಕ್ಷ ಮತಗಳೊಂದಿಗೆ ಗೆಲುವು ಸಾಧಿಸುವೆ: ಪ್ರೀತಂ ಗೌಡ

    ಒಂದು ಲಕ್ಷ ಮತಗಳೊಂದಿಗೆ ಗೆಲುವು ಸಾಧಿಸುವೆ: ಪ್ರೀತಂ ಗೌಡ

    ಹಾಸನ: ನಮ್ಮ ನಾಯಕರು ಈ ಬಾರಿಯ ಚುನಾವಣೆಯಲ್ಲಿ (Election) ಒಂದು ಲಕ್ಷ ಮತ ಪಡೆದು ಗೆಲ್ಲಬೇಕು ಎಂದು ಹೇಳಿದ್ದಾರೆ. ಆ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಗುರಿ ನಿಶ್ಚಯವಾಗಿದೆ. ದಾರಿ ಸೊಗಸಾಗಿದೆ. ಆ ನಿಟ್ಟಿನಲ್ಲಿ ಸಾಗುವೆ ಎಂದು ಶಾಸಕ ಪ್ರೀತಂ ಗೌಡ (Preetham Gowda) ಹೇಳಿದ್ದಾರೆ.

    ಹಾಸನದಲ್ಲಿ (Hassan) ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ ಒಂದು ಲಕ್ಷ ಮತಗಳೊಂದಿಗೆ ಗೆಲುವು ಸಾಧಿಸಬೇಕೆಂಬುದು ಜನರ ಹಾಗೂ ಕಾರ್ಯಕರ್ತರ ಅಪೇಕ್ಷೆಯಾಗಿದೆ. ಈ ನಿಟ್ಟಿನಲ್ಲಿ ಪ್ರತೀ ಕಾರ್ಯಕರ್ತ ನಾನೇ ಮತದಾರ ಎಂದು ಕೆಲಸ ಮಾಡುತ್ತಿದ್ದಾರೆ. ಈ ಬಗ್ಗೆ ಏನಾದರೂ ಆಕ್ಷೇಪ ಇದ್ದರೆ ಈಗಲೇ ಇವಿಎಂ (EVM) ಚೆಕ್ ಮಾಡಿಕೊಳ್ಳಲಿ. ಅಲ್ಲದೇ ಕೋವಿಡ್ ಸಂದರ್ಭ ಸೇರಿದಂತೆ ಎಲ್ಲಾ ಹಂತದಲ್ಲೂ ನಮ್ಮ ಶಾಸಕರು ಎಂಬ ಭಾವನೆಯಿಂದ ಎಲ್ಲರೂ ಸೇರಿ ಕೆಲಸ ಮಾಡಿ ಅಭಿವೃದ್ಧಿ ಮಾಡಿದ್ದಾರೆ. ಎಲ್ಲರೂ ಸೇರಿ ನನ್ನನ್ನು ಗೆಲ್ಲಿಸುತ್ತಾರೆ ಎಂಬ ವಿಶ್ವಾಸವಿದೆ ಎಂದರು. ಇದನ್ನೂ ಓದಿ: ವರುಣಾ, ಚಾಮರಾಜನಗರ ಎರಡೂ ಕ್ಷೇತ್ರದಲ್ಲಿ ಗೆಲ್ಲುತ್ತೇವೆ: ಪುಟ್ಟರಂಗಶೆಟ್ಟಿ 

    ಜೆಡಿಎಸ್ (JDS) ಅಭ್ಯರ್ಥಿ ಕಿತ್ತಾಟ ನಿಮಗೆ ಪ್ಲಸ್ ಆಗಲಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಯಾರೇ ಅಭ್ಯರ್ಥಿಯಾದರೂ ಪ್ರೀತಂ ಗೌಡ ಒಂದು ಲಕ್ಷ ಮತ ಪಡೆಯಬೇಕು ಎಂದು ಜನತೆ ಸಂಕಲ್ಪ ಮಾಡಿದ್ದಾರೆ. ನನಗೆ ನನ್ನದೇ ಆದ ಬಳಗವಿದೆ. ವೋಟು ಹಾಕಿಸುವ ಶಕ್ತಿ ಇದೆ. ನಾನು ವಿಪಕ್ಷಗಳ ಬಗ್ಗೆ ವಿಶ್ಲೇಷಣೆ ಮಾಡಲು ಹೋಗುವುದಿಲ್ಲ. ಐವತ್ತು ಸಾವಿರ ಲೀಡ್‌ನಿಂದ ಗೆಲ್ಲುವೆ ಎಂದು ಹದಿನೆಂಟು ತಿಂಗಳ ಹಿಂದೆ ಹೇಳಿದ್ದೆ. ಆಗಲೇ ಉತ್ತರ ಕೊಟ್ಟಿದ್ದರೆ ಅಸ್ತಿತ್ವ ಇರುತ್ತಿತ್ತು. ಈಗ ಸಮಯ ಮೀರಿದೆ. ಆದರೆ ನನ್ನ ಹೇಳಿಕೆಗೆ ಈಗಲೂ, ಮುಂದೆಯೂ ಬದ್ಧವಾಗಿರುತ್ತೇನೆ ಎಂದು ಹೇಳಿದರು.

    ಮಾಜಿ ಸಚಿವ ಹೆಚ್.ಡಿ.ರೇವಣ್ಣ (H.D.Revanna) ಹಿರಿಯರು. ಅವರಿಗೆ ಶಕ್ತಿ ಇಲ್ಲ ಎನ್ನುವುದಿಲ್ಲ. ಇಡೀ ರಾಜ್ಯದಲ್ಲಿ ಜೆಡಿಎಸ್ ಎಂಪಿ (MP) ಚುನಾವಣೆಯಲ್ಲಿ ಸೋತಾಗ ಹಾಸನದಲ್ಲಿ ಗೆಲ್ಲಿಸಿದರು. ಅವರು ಜಿಲ್ಲೆಯ ಜೆಡಿಎಸ್ ಶಕ್ತಿ. ಆ ಬಗ್ಗೆ ಯಾರೂ ಪ್ರಶ್ನೆ ಮಾಡುವಂತಿಲ್ಲ. ಹಾಸನ ಕ್ಷೇತ್ರದಲ್ಲಿ ನನ್ನ ಶಕ್ತಿ ಇದೆ. ಆದರೆ ರೇವಣ್ಣನವರ ಆಶೀರ್ವಾದ ಇಲ್ಲದೆ ಹಾಸನ ಅಭ್ಯರ್ಥಿ ಡೆಪಾಸಿಟ್ ಪಡೆಯಲು ಸಾಧ್ಯವಿಲ್ಲ. ರೇವಣ್ಣ ಒಂದು ಶಕ್ತಿ. ಅವರ ಮುಖ ನೋಡಿಯೇ ಜನ ವೋಟ್ ಹಾಕೋದು. ಅವರ ಧೋರಣೆ ಒಪ್ಪದಿರಬಹುದು ಆದರೆ ಅವರಲ್ಲಿ ಶಕ್ತಿ ಇದೆ ಎಂದು ರೇವಣ್ಣ ಪರ ಬ್ಯಾಟಿಂಗ್ ಮಾಡಿದರು. ಇದನ್ನೂ ಓದಿ: ಡಿಕೆಶಿ ಆಥಿತ್ಯ ಸ್ವೀಕರಿಸ್ತೀವಿ, ಮಿಲ್ಟ್ರಿ ಹೋಟೆಲ್ ಊಟಾನೂ ಮಾಡ್ತೀವಿ – ಅಶ್ವಥ್‌ ನಾರಾಯಣ್‌  

    ಹೊಳೆನರಸೀಪುರದಲ್ಲಿ ದೇವೇಗೌಡರ (H.D.Deve Gowda) ಕುಟುಂಬ ಹಾಗೂ ಹಾಸನದಲ್ಲಿ ಹೆಚ್.ಎಸ್.ಪ್ರಕಾಶ್ (H.S.Prakash) ಅವರ ಕುಟುಂಬದ ಹಿಡಿತದಲ್ಲೇ ಎಲ್ಲವೂ ನಡೆಯುತ್ತಿತ್ತು. ಈಗ ಜನ ಸಾಮಾನ್ಯ ಕುಟುಂಬದ ಪ್ರೀತಂ ಅವರನ್ನು ಬೆಂಬಲಿಸಿ ಬದಲಾವಣೆ ತರಬೇಕು ಎಂದು ಜನ ಬಯಸಿದ್ದಾರೆ. ಹಾಸನ ಜಿಲ್ಲೆಯಲ್ಲಿ ಏಳು ಕ್ಷೇತ್ರಗಳ ಟಿಕೆಟ್ ನೀಡುವಾಗ ವರಿಷ್ಠರು ನನ್ನ ಫೀಡ್‌ಬ್ಯಾಕ್ (Feedback) ಕೇಳಿದ್ದರು. ಈಗ ಹೋರಾಟ ಮಾಡುತ್ತೇವೆ. ಜಿಲ್ಲೆಯಲ್ಲಿ ಹೆಚ್ಚು ಸ್ಥಾನ ಗೆದ್ದು ನಾನೇ ಮೊದಲಾಗುತ್ತೇನೆ. ಎರಡನೇ ಸ್ಥಾನಕ್ಕೆ ಜೆಡಿಎಸ್-ಕಾಂಗ್ರೆಸ್ (Congress) ಪೈಪೋಟಿ ನಡೆಸಬೇಕು ಎಂದರು.

    ನಾನು ಐದು ದಿನ ರಾಜ್ಯದ ವಿವಿಧೆಡೆ ಪ್ರವಾಸ ಮಾಡಿ ಮೂರು ದಿನ ಜಿಲ್ಲೆಯಲ್ಲಿ ಸುತ್ತಾಡುತ್ತೇನೆ. ಉಳಿದ ಅವಧಿಯಲ್ಲಿ ನನ್ನ ಕ್ಷೇತ್ರದಲ್ಲಿ ಕೆಲಸ ಮಾಡುತ್ತೇನೆ. ಪ್ರಧಾನಿ ಮೋದಿಯವರು (Narendra Modi) ಹಾಸನಕ್ಕೆ ಬರುವ ವಿಶ್ವಾಸವಿದೆ. ಪ್ರೀತಂ ಸಚಿವರಾಗಬೇಕು, ಅವರಿಗೆ ಮತ ಹಾಕುತ್ತೇವೆ ಎಂದು ಜನರು ಹೇಳುವುದಕ್ಕೆ ನನ್ನ ಸಹಮತವಿದೆ. ನಾನೇನು ಸನ್ಯಾಸಿಯಲ್ಲ. ಕಾರ್ಯಕರ್ತರ ಬಯಕೆ ತಪ್ಪಲ್ಲ ಎಂದು ಹೇಳಿದರು. ಇದನ್ನೂ ಓದಿ: ಕಡೂರು ಕ್ಷೇತ್ರದಿಂದ ವೈಎಸ್‌ವಿ ದತ್ತ ಸ್ಪರ್ಧೆ: ರೇವಣ್ಣ ಘೋಷಣೆ 

    ಶುಕ್ರವಾರ ಹಾಸನದಲ್ಲಿ ನಾಮಪತ್ರ (Nomination Papers) ರ‍್ಯಾಲಿ ಹಮ್ಮಿಕೊಳ್ಳಲಾಗಿದೆ. ಬೆಳಗ್ಗೆ 10 ಗಂಟೆಗೆ ಜಿಲ್ಲಾ ಕ್ರೀಡಾಂಗಣದಿಂದ ರ‍್ಯಾಲಿ (Rally) ಹೊರಡಲಿದ್ದು, ಸಾಲಗಾಮೆ ರಸ್ತೆ, ಸಹ್ಯಾದ್ರಿ ಸರ್ಕಲ್, ಹೇಮಾವತಿ ಪ್ರತಿಮೆ, ಎನ್‌ಆರ್ ವೃತ್ತದ ಮೂಲಕ ಡಿಸಿ ಕಚೇರಿ ತಲುಪಲಿದೆ. ಪಕ್ಷ ಎರಡನೇ ಬಾರಿಗೆ ಶಾಸಕರಾಗಲು ಅವಕಾಶ ಮಾಡಿಕೊಟ್ಟದ್ದಕ್ಕಾಗಿ ನಾವೆಲ್ಲರೂ ಬೃಹತ್ ರ‍್ಯಾಲಿ ಮೂಲಕ ಬೆಂಬಲ ವ್ಯಕ್ತಪಡಿಸುತ್ತೇವೆ ಎಂದು ಗ್ರಾಮಾಂತರ ಮಂಡಲದ ಅಧ್ಯಕ್ಷರು, ಮುಖಂಡರು, ಕಾರ್ಯಕರ್ತರು ಮತ್ತು ಅಭಿಮಾನಿಗಳು ನಿರ್ಧರಿಸಿದ್ದಾರೆ. ರ‍್ಯಾಲಿಯ ಮತ್ತೊಂದು ವಿಶೇಷವೆಂದರೆ ಏಪ್ರಿಲ್ 14ರಂದು ಅಂಬೇಡ್ಕರ್ ಜಯಂತಿ, ರಂಜಾನ್ ಹಾಗೂ ಲಕ್ಷ್ಮಿವಾರ. ಸರ್ವಧರ್ಮ ಸಮನ್ವಯ ಹಾಗೂ ಎಲ್ಲರಿಗೂ ಒಳಿತಾಗಲಿ ಎಂದು ಈ ರ‍್ಯಾಲಿ ಹಮ್ಮಿಕೊಳ್ಳಲಾಗಿದೆ. ಶುಕ್ರವಾರ ನಾಮಪತ್ರ ಸಲ್ಲಿಸುವುದಿಲ್ಲ. ನಾಮಪತ್ರ ಸಲ್ಲಿಕೆ ದಿನಾಂಕ ನಂತರ ತಿಳಿಸಲಾಗುವುದು ಎಂದು ಸ್ಪಷ್ಟನೆ ನೀಡಿದರು. ಇದನ್ನೂ ಓದಿ: ಬಿಜೆಪಿಯಿಂದ ಟಿಕೆಟ್‌ ಸಿಗ್ಲಿಲ್ಲ ಅಂತಾ ಬೆಂಬಲಿಗರ ಸಭೆಯಲ್ಲಿ ಬಿಕ್ಕಿ ಬಿಕ್ಕಿ ಅತ್ತ ಟಿಕೆಟ್‌ ವಂಚಿತೆ ನಾಗಶ್ರೀ

  • ಶಾಸಕ ಪ್ರೀತಂ ಗೌಡರಿಂದ 100 ಕೋಟಿ ಗುಳುಂ- ಹೆಚ್.ಕೆ.ಮಹೇಶ್ ಆರೋಪ

    ಶಾಸಕ ಪ್ರೀತಂ ಗೌಡರಿಂದ 100 ಕೋಟಿ ಗುಳುಂ- ಹೆಚ್.ಕೆ.ಮಹೇಶ್ ಆರೋಪ

    ಹಾಸನ: ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಚನ್ನಪಟ್ಟಣ ಕೆರೆ ಅಭಿವೃದ್ಧಿಗೆಂದು ಮಂಜೂರಾಗಿದ್ದ 144 ಕೋಟಿ ರೂ. ಹಣದಲ್ಲಿ 100 ಕೋಟಿ ರೂ.ಗಳನ್ನು ಶಾಸಕ ಪ್ರೀತಂ ಗೌಡ (Preetham Gowda) ಪಡೆದಿದ್ದಾರೆ ಎಂದು ಕಾಂಗ್ರೆಸ್ (Congress) ಮುಖಂಡ ಹೆಚ್.ಕೆ.ಮಹೇಶ್ ಆರೋಪಿಸಿದ್ದಾರೆ.

    ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕ ಪ್ರೀತಂ ಗೌಡ, 144 ಕೋಟಿ ಹಣದಲ್ಲಿ 6 ಕೆರೆ ಹಾಗೂ 9 ಪಾರ್ಕ್ ಅಭಿವೃದ್ಧಿ ಮಾಡಿದ್ದಾರೆ. ಆದರೆ ಇದರಲ್ಲಿ ಭಾರಿ ಭ್ರಷ್ಟಾಚಾರ ನಡೆದಿದೆ. ಸುಮಾರು 100 ಕೋಟಿ ರೂ.ಗಳನ್ನು ಶಾಸಕರು ಪಡೆದಿದ್ದಾರೆ ಎಂದಿದ್ದಾರೆ. ಇದನ್ನೂ ಓದಿ: ಶಿರಹಟ್ಟಿಯಲ್ಲಿ ಕಾರ್ಯಕರ್ತರಿಂದಲೇ ಶಾಸಕರ ಹಠಾವೋ ಬಿಜೆಪಿ ಬಚಾವೋ ಅಭಿಯಾನ

    ಶಾಸಕರು ಭ್ರಷ್ಟಾಚಾರ ಮಾಡಿಲ್ಲ ಎನ್ನುವುದಾದರೆ, ಯಾವ ಕಾಮಗಾರಿಗೆ ಎಷ್ಟು ಹಣ ಖರ್ಚಾಗಿದೆ? ನಿಗದಿಯಾಗಿದ್ದ ಮೊತ್ತ ಎಷ್ಟು? ಯಾವ ಇಲಾಖೆ ಆ ಹಣ ನೀಡಿದ್ದು? ಎಂಬುದನ್ನು ಕಾಮಗಾರಿ ನಡೆದ ಸ್ಥಳದಲ್ಲಿ ನಾಮಫಲಕ ಅಳವಡಿಸಲಿ ಎಂದು ಆಗ್ರಹಿಸಿದರು. ತಮಗೆ ಇಷ್ಟ ಬಂದಂತೆ ಶಾಸಕರು ಕಾಮಗಾರಿ ಮಾಡಿರುವುದು ಹಾಗೂ ಭ್ರಷ್ಟಾಚಾರದಿಂದಾಗಿ ಚನ್ನಪಟ್ಟಣ ಕೆರೆ ಅಂಗಳವೂ ಸೂಕ್ತ ರೀತಿಯಲ್ಲಿ ಅಭಿವೃದ್ಧಿಯಾಗಿಲ್ಲ. ಉಳಿದ ಕೆರೆ, ಪಾರ್ಕ್‍ಗಳ ಸ್ಥಿತಿಯೂ ಇದೇ ರೀತಿಯಾಗಿದೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.

    ಕಾಮಗಾರಿಗೆ ಬಳಕೆಯಾದ ಹಣ ಕಾವೇರಿ ನೀರಾವರಿ ನಿಗಮದ್ದಾಗಿದೆ. ರೈತರಿಗೆ ಸೇರಬೇಕಾದ ಅನುದಾನ ಬೇರೆಯವರ ಜೇಬು ಸೇರಿದೆ. ಮಹಾರಾಜ ಪಾರ್ಕ್‍ಗೆ 14.36 ಕೋಟಿ ರೂ., ಉಳಿದ ಉದ್ಯಾನವನಗಳಿಗೆ 22 ಕೋಟಿ ರೂ. ವೆಚ್ಚ ಮಾಡಲಾಗಿದೆ. ಉಳಿದ 6 ಕೆರೆಗಳಿಗೆ 7 ರಿಂದ 8 ಕೋಟಿ ರೂ. ಹಣ ಬಳಕೆ ಮಾಡಿ 144 ಕೋಟಿ ರೂ. ಲೆಕ್ಕವನ್ನು ತೋರಿಸಿದ್ದಾರೆ. ಆದರೆ ಎಲ್ಲೂ ಯೋಜನೆಯ ಫಲಕ ಹಾಕಿಲ್ಲ ಎಂದಿದ್ದಾರೆ.

    ಈ ಸಂಬಂಧ ಲೋಕಾಯುಕ್ತರಿಗೆ (Lokayukta) ದೂರು ನೀಡಲಾಗುವುದು. ಶಾಸಕರ ಭ್ರಷ್ಟಾಚಾರಕ್ಕೆ ಸಹಕರಿಸಿರುವ ಎಲ್ಲಾ ಅಧಿಕಾರಿಗಳು ಜೈಲಿಗೆ ಹೋಗುವ ಕಾಲ ಬರಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಶಾಸಕಿ ಸೌಮ್ಯಾ ರೆಡ್ಡಿ ಕಾರು ಸೀಜ್

  • ಯಾವುದೇ ಬೌಲಿಂಗ್ ಬಂದರೂ ಉತ್ತಮ ಸ್ಕೋರ್ ಮಾಡ್ತೇನೆ – ಪ್ರೀತಂ ಗೌಡ

    ಯಾವುದೇ ಬೌಲಿಂಗ್ ಬಂದರೂ ಉತ್ತಮ ಸ್ಕೋರ್ ಮಾಡ್ತೇನೆ – ಪ್ರೀತಂ ಗೌಡ

    ಹಾಸನ: ಯಾವುದೇ ಬೌಲಿಂಗ್ (Bowling) ಬಂದರೂ ಉತ್ತಮ ಸ್ಕೋರ್ (Score) ಕೊಡುವ ಪ್ರಯತ್ನ ಮಾಡುತ್ತೇನೆ. ರಾಜ್ಯದ ಜನ ತಿರುಗಿ ನೋಡುವಂತೆ ಫಲಿತಾಂಶ ಕೊಡಲು ಜನ ತಯಾರಾಗಿದ್ದಾರೆ ಎಂದು ಜಿಲ್ಲೆಯಲ್ಲಿ ಏಳಕ್ಕೆ ಏಳು ಕ್ಷೇತ್ರ ಜೆಡಿಎಸ್ (JDS) ಗೆಲ್ಲುತ್ತದೆ ಎಂಬ ಹೆಚ್.ಡಿ.ರೇವಣ್ಣನವರ (H.D.Revanna) ಹೇಳಿಕೆಗೆ ಶಾಸಕ ಪ್ರೀತಂ ಗೌಡ (Preetham Gowda) ಟಾಂಗ್ (Tong) ನೀಡಿದ್ದಾರೆ.

    ಹಾಸನದಲ್ಲಿ (Hassan) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರಾದರೂ ಏಳಕ್ಕೆ ಏಳು ಕ್ಷೇತ್ರ ಗೆಲ್ಲಲೇಬೇಕು. ಆದರೆ ಜೆಡಿಎಸ್ ಎಷ್ಟು? ಬಿಜೆಪಿ (BJP) ಎಷ್ಟು? ಕಾಂಗ್ರೆಸ್ (Congress) ಎಷ್ಟು ಎಂದು ಫಲಿತಾಂಶದ ದಿನ ಗೊತ್ತಾಗುತ್ತದೆ. ವಿಪಕ್ಷಗಳು ಹಾಸನ ಕ್ಷೇತ್ರದ ಟಿಕೆಟ್ ಇನ್ನೂ ಅಂತಿಮಗೊಳಿಸಲಿಲ್ಲ. ನಮ್ಮ ಟಿಕೆಟ್ ಕೂಡ ರಾಷ್ಟ್ರೀಯ ನಾಯಕರು ಇನ್ನೂ ಘೋಷಣೆ ಮಾಡಿಲ್ಲ. ಎಲ್ಲದಕ್ಕೂ ಕಾಯುತ್ತಿದ್ದೇವೆ ಎಂದರು. ಇದನ್ನೂ ಓದಿ: ವಿಜಯ ಮಲ್ಯ ಬಳಿ ಸಾಲ ತೀರಿಸುವಷ್ಟು ಹಣವಿದೆ – CBIನಿಂದ 3ನೇ ಚಾರ್ಜ್‌ಶೀಟ್‌ ಸಲ್ಲಿಕೆ

    ಅಖಾಡದಲ್ಲಿ ಯಾರು ಅಭ್ಯರ್ಥಿಯಾಗುತ್ತಾರೆ ಎಂದು ನಿರ್ಧಾರವಾದ ಮೇಲೆ ಕಾವೇರುತ್ತದೆ. ನಂತರ ಸ್ಪೀಡ್ ಬೌಲರ್‌ಗೆ ಯಾವರೀತಿಯಾಗಿ ಫುಟ್ ಹಾಕಬೇಕು. ಸ್ಪಿನ್, ಮೀಡಿಯಂ ಪೇಸರ್ ಆದರೆ ಹೇಗೆ ಆಡಬೇಕು ಎಂದು ವರ್ಕೌಟ್ ಮಾಡಿದ್ದೇನೆ. ಯಾವ ಬೌಲರ್ ಬರುತ್ತಾರೆ ಎಂದು ನೋಡಿ, ಪವರ್ ಪ್ಲೇ ಹೇಗೆ ಆಡಬೇಕು, ಸ್ಲ್ಯಾಗ್ ಓವರ್ ಹೇಗೆ ಆಡಬೇಕು, ಮಧ್ಯದಲ್ಲಿ ಹೇಗೆ ಆಡಬೇಕು ಎಂದು ನೋಡುತ್ತೇನೆ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ಪೊಲೀಸರ ಭರ್ಜರಿ ಕಾರ್ಯಾಚರಣೆ – ದಾಖಲೆ ಇಲ್ಲದ 9 ಕೆಜಿ ಚಿನ್ನ ಜಪ್ತಿ

    ರೇವಣ್ಣ ಸ್ಪರ್ಧೆ ಮಾಡಿದರೆ ಐವತ್ತು ಸಾವಿರ ಮತಗಳ ಅಂತರದಿಂದ ಗೆಲ್ಲುತ್ತೇನೆ ಎಂದು ಸವಾಲು ಹಾಕಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನನ್ನದೇನಿಲ್ಲ. ಜನರು ಏನು ಹೇಳುತ್ತಾರೆ ಅದಕ್ಕೆ ನಾನು ಬದ್ಧ. ಆಗ ನಾನು ಶಾಸಕನಾಗಿ ಅಭಿವೃದ್ಧಿ ವಿಚಾರ ಬಂದಾಗ ಮಾತನಾಡುತ್ತಿದ್ದೆ. ಆದರೆ ಈಗ ಅಭ್ಯರ್ಥಿಯಾಗಿ ನಾನು ಏನನ್ನೂ ಮಾತನಾಡುವುದಿಲ್ಲ. ನನ್ನನ್ನು ಎಷ್ಟು ಸಾವಿರದಲ್ಲಿ ಗೆಲ್ಲಿಸುತ್ತಾರೆ ಎಂದು ಜನರು ತೀರ್ಮಾನ ಮಾಡುತ್ತಾರೆ. ನಾನು ಅದರ ಬಗ್ಗೆ ಮಾತನಾಡಿದರೆ ಅಪ್ರಸ್ತುತ ಆಗುತ್ತದೆ. ಈ ಕುರಿತು ಚುನಾವಣೆ (Election) ಸಮಯದಲ್ಲಿ ಮತದಾರರು ತೀರ್ಮಾನ ಮಾಡುತ್ತಾರೆ ಎಂದರು. ಇದನ್ನೂ ಓದಿ: ಕ್ಷೇತ್ರ ಆಯ್ಕೆಯಲ್ಲಿ ಗೊಂದಲ: ಸಿದ್ದು ಪತ್ನಿ ಹೇಳಿದ್ದೇನು? ಪುತ್ರ ಹೇಳಿದ್ದೇನು? 

    ಅಭಿವೃದ್ಧಿ ಕಾಮಗಾರಿಗೆ ತೊಡಕು ಮಾಡಿದ್ದರಿಂದ ಆ ಉತ್ತರ ಕೊಟ್ಟಿದ್ದೆ. ನಾನು ಅಂದು ಕೊಟ್ಟಿದ್ದ ಹೇಳಿಕೆಯನ್ನು ಜನರು ಗಮನಿಸಿದ್ದಾರೆ. ಪ್ರೀತಂಗೌಡ ಸರಿಯಾಗಿ ಹೇಳಿದ್ದಾನೆ ಎಂದರೆ ಜನ ಸಾಮಾನ್ಯರೇ ಅದನ್ನು ಮಾಡುತ್ತಾರೆ. ನನ್ನದು ಯೂಟರ್ನ್ ಇಲ್ಲವೇ ಇಲ್ಲ. ನೇರವಾಗಿ ಹೋಗುವುದೇ ನನ್ನ ಕೆಲಸ. ನೇರವಾಗಿ ಹೋಗುವಾಗ ಹಂಪ್ಸ್ ಬಂದರೆ ಸ್ಲೋ ಮಾಡಬೇಕು. ಟ್ರಾಫಿಕ್ ಸಿಗ್ನಲ್ ಬಂದಾಗ 30 ಸೆಕೆಂಡ್ ನಿಂತು ಮುಂದೆ ಹೊರಡಬೇಕು. ಗುರಿ ನಿಚ್ಚಳವಾಗಿದೆ. ಗುರು ಮೋದಿಯವರ (Narendra Modi) ಮಾರ್ಗದರ್ಶನ ಕೂಡ ಸರಿಯಾಗಿದೆ. ಹಾಗಾಗಿ ಯೂಟರ್ನ್ ಇಲ್ಲಾ. ಲೆಫ್ಟ್, ರೈಟ್ ಇಲ್ಲ. ನೇರ ಹೋಗೋದೆ ಎಂದು ಟೀಕಾಪ್ರಹಾರ ನಡೆಸಿದರು. ಇದನ್ನೂ ಓದಿ: ಸೋಮಣ್ಣ ವಿರುದ್ಧ ಸುದ್ದಿಗೋಷ್ಠಿ ನಡೆಸಿದ್ದ ಬಿಜೆಪಿ ವಕ್ತಾರನಿಗೆ ನೋಟಿಸ್

    ರೇವಣ್ಣ ತಮ್ಮ ವಿರುದ್ದ ಸ್ಪರ್ಧೆ ಮಾಡಿದರೆ 49,999 ಮತಗಳ ಅಂತರದಲ್ಲಿ ಗೆದ್ದು ಐವತ್ತು ಸಾವಿರಕ್ಕೆ ಒಂದೇ ಮತ ಕಡಿಮೆಯಾದರೂ ರಾಜಿನಾಮೆ ನೀಡುವ ಸವಾಲು ವಿಚಾರಕ್ಕೆ ಸ್ಪಷ್ಟನೆ ನೀಡಿದ ಅವರು, ಈ ಸವಾಲಿಗೆ ಕಂಡಿಷನ್ ಅಪ್ಲೈ ಇದೆ. ಯಾರು ಅಭ್ಯರ್ಥಿ ಆಗುತ್ತಾರೆ ಬರಲಿ. ಫೀಲ್ಡ್ ರೆಡಿಯಾಗಲಿ. ನಾವು ಯಾರು ಬಂದರೂ ಗೆಲ್ಲತ್ತೇನೆ, ಯಾರು ಬಂದರೂ ಐವತ್ತು ಸಾವಿರ ಲೀಡ್ ಎಂದು ನಾನು ಮಾತೇ ಆಡಲಿಲ್ಲ. ನನಗೆ ನೀವು ಸಮಸ್ಯೆ ಮಾಡುತ್ತಿದ್ದೀರಿ. ಇದನ್ನು ಜನರ ಮುಂದೆ ಹೇಳುತ್ತೇನೆ ಅಂತಾ ಹೇಳಿದ್ದೆ. ನೀವು ಅಭಿವೃದ್ಧಿ ಮಾಡಲು ಬಿಡುತ್ತಿಲ್ಲ. ಫುಡ್ ಕೋರ್ಟ್, ಆಟೋ ಸ್ಟ್ಯಾಂಡ್ ಮಾಡಲು ಬಿಡುತ್ತಿಲ್ಲ. ರಸ್ತೆ- ಪಾರ್ಕ್ ಮಾಡಲು ಬಿಡುತ್ತಿಲ್ಲ. ಇವೆಲ್ಲಾ ತೊಂದರೆ ಕೊಡುತ್ತಿರುವ ನೀವೇನಾದರೂ ಬಂದರೆ ನೀವು ಮಾಡಿರುವ ಸಮಸ್ಯೆಗಳನ್ನು ಹಾಸನದ ಜನರ ಮುಂದೆ ಹೇಳುತ್ತೇನೆ ಎಂದಿದ್ದೆ. ಅವರು ನಿಮ್ಮನ್ನು ಐವತ್ತು ಸಾವಿರ ಹಿನ್ನಡೆ ಮಾಡುತ್ತಾರೆ ಎಂದು ಹೇಳಿದ್ದೆ. ಅದಕ್ಕೆ ಈಗಲು ಬದ್ಧನಾಗಿದ್ದೇನೆ. ಅವರು ಬಂದು ನಿಂತ ಮೇಲೆ ನಾನು ಕಮೆಂಟ್ ಮಾಡುತ್ತೇನೆ. ಅಂತೆ ಕಂತೆಗಳಿಗೆ ಉತ್ತರ ಕೊಡುವುದಿಲ್ಲ ಎಂದರು. ಇದನ್ನೂ ಓದಿ: ಶ್ರವಣಬೆಳಗೊಳ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಜಿನೈಕ್ಯ

  • ಪ್ರೀತಂ ಗೌಡರಿಂದ ಭರಪೂರ ಕೊಡುಗೆ – ಬಾಗಿನ ಹೆಸರಲ್ಲಿ ಸೀರೆ, ಬೆಳ್ಳಿಯ ದೇವರ ಫೋಟೋ ಹಂಚಿಕೆ

    ಪ್ರೀತಂ ಗೌಡರಿಂದ ಭರಪೂರ ಕೊಡುಗೆ – ಬಾಗಿನ ಹೆಸರಲ್ಲಿ ಸೀರೆ, ಬೆಳ್ಳಿಯ ದೇವರ ಫೋಟೋ ಹಂಚಿಕೆ

    ಹಾಸನ: ಜಿಲ್ಲೆಯಲ್ಲಿ ಚುನಾವಣೆ ಕಾವು ರಂಗೇರುತ್ತಿದ್ದು ಹಾಸನ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಪ್ರೀತಂ ಗೌಡರಿಂದ (Preetham Gowda) ಮತದಾರರಿಗೆ ಭರಪೂರ ಉಡುಗೊರೆ (Gift) ನೀಡಲಾಗುತ್ತಿದೆ.

    ಅಷ್ಟಲಕ್ಷ್ಮಿ ಪೂಜೆ, ಬಾಗಿನ ಎಂಬ ಹೆಸರಿನಲ್ಲಿ ಕ್ಷೇತ್ರದ ಮಹಿಳೆಯರಿಗೆ (Women) ಸೀರೆ, ಬೆಳ್ಳಿಯ ದೇವರ ಫೋಟೋ ಹಂಚುತ್ತಿದ್ದಾರೆ. ಮಹಿಳೆಯರಿಗೆ ಉಡುಗೊರೆ ಹಂಚುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದಲ್ಲದೇ ಬಿಜೆಪಿ (BJP) ಕಚೇರಿ ಬಳಿ ಗಿಫ್ಟ್ ಪಡೆಯಲು ಜನರು ಮುಗಿಬಿದ್ದಿದ್ದು, ಗಿಫ್ಟ್ ಪಡೆದ ಕೆಲವರು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದ್ದಾರೆ.

    ಚುನಾವಣೆ ಘೋಷಣೆಯಾದರೆ ನೀತಿ ಸಂಹಿತೆ ಅಡ್ಡಿಯಾಗುವ ಕಾರಣಕ್ಕೆ ಪ್ರತಿದಿನ ಒಂದೊಂದು ಪಂಚಾಯಿತಿ ವ್ಯಾಪ್ತಿಯಲ್ಲಿ ಕಾರ್ಯಕ್ರಮ ಆಯೋಜಿಸಿ ಉಡುಗೊರೆ ನೀಡಲಾಗುತ್ತಿದೆ. ಈ ಹಿಂದೆಯೂ ಗೌರಿ ಹಬ್ಬದ ಸಂದರ್ಭದಲ್ಲಿ ಮಹಿಳೆಯರಿಗೆ ಸೀರೆ, ಬಳೆ, ಕುಂಕುಮ, ಪುರುಷರಿಗೆ ಪಂಚೆ, ಶರ್ಟ್ ಅನ್ನು ಶಾಸಕ ಪ್ರೀತಂ ಗೌಡ ಉಡುಗೊರೆಯಾಗಿ ನೀಡಿದ್ದರು. ಇದನ್ನೂ ಓದಿ: EXCLUSIVE: ದೇವರ ದುಡ್ಡನ್ನೂ ಬಿಡದ ನಾಯಕರು- ಮುಜರಾಯಿ ಹಣದ ಮೇಲೆ ಬಿಜೆಪಿ ಶಾಸಕನ ಕಣ್ಣು

    ಇದೀಗ ಚುನಾವಣೆ ಹೊಸ್ತಿಲಲ್ಲಿ ಮತದಾರರನ್ನು ಓಲೈಸಲು ಪ್ರೀತಂ ಗೌಡ ದುಬಾರಿ ಉಡುಗೊರೆಗಳನ್ನು ನೀಡುತ್ತಿದ್ದಾರೆ. ಇದನ್ನೂ ಓದಿ: ವಿಧಾನಸೌಧದಲ್ಲಿನ ಎಣ್ಣೆ ಬಾಟ್ಲಿ ಹಿಂದಿನ ಕಥೆ ರಿವೀಲ್

  • ಕುಮಾರಣ್ಣ ನನ್ನ ಹಿತೈಷಿ, ಬಿಜೆಪಿ ಬಂದರೆ ಸ್ವಾಗತ: ಪ್ರೀತಂ ಗೌಡ

    ಕುಮಾರಣ್ಣ ನನ್ನ ಹಿತೈಷಿ, ಬಿಜೆಪಿ ಬಂದರೆ ಸ್ವಾಗತ: ಪ್ರೀತಂ ಗೌಡ

    ಹಾಸನ: ಕುಮಾರಣ್ಣ (HD Kumaraswamy) ನನ್ನ ಹಿತೈಷಿ, ಯಾವಾಗಲೂ ನನ್ನ ಒಳಿತನ್ನೇ ಬಯಸುವಂತಹವರು. ಅವರು ಏನು ಹೇಳಿದರೂ ಆಶೀರ್ವಾದ ಅನ್ಕೊತೀನಿ ಎಂದು ಬಿಜೆಪಿ (BJP) ಶಾಸಕ ಪ್ರೀತಂ ಗೌಡ (Preetham Gowda) ಹೇಳಿದ್ದಾರೆ.

    ಅವನ್ಯಾವನೋ ಶಾಸಕ 50 ಸಾವಿರ ಲೀಡ್‌ನಿಂದ ಗೆಲ್ತೀನಿ ಅಂತ ಚಾಲೆಂಜ್ ಹಾಕ್ತಾನೆ ಎಂಬ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಾಗ್ದಾಳಿಗೆ ನಯವಾಗಿಯೇ ತಿರುಗೇಟು ಕೊಟ್ಟ ಪ್ರೀತಂ ಗೌಡ, ಅವರು ವೈಯುಕ್ತಿಕವಾಗಿ ನನ್ನ ಬಗ್ಗೆ ಮಾತಾನಾಡಿದರೆ ಅವರು ಯಾವಾಗಲೂ ನನ್ನ ಹಿತೈಷಿಯೇ. ನನ್ನ ಬಗ್ಗೆ ವೈಯುಕ್ತಿಕವಾಗಿ ಮಾತನಾಡಿದರೆ ಅವರು ಪ್ರೀತಿಯಿಂದ ಮಾತನಾಡಿರುತ್ತಾರೆ ಎಂದು ಹೇಳಿಕೆ ನೀಡಿದರು.

    ಅವರ ಪ್ರೀತಿಯನ್ನು ನಾನು ಆಶೀರ್ವಾದ ಎಂದು ತೆಗೆದುಕೊಂಡಿರುತ್ತೇನೆ. ಅವರ ಆಶೀರ್ವಾದ ಯಾವಾಗಲೂ ನನ್ನ ಮೇಲೆ ಇರುತ್ತದೆ. ಅವರು ಏನು ಬಯಸುತ್ತಾರೆ ಅದನ್ನು ಮಾಡುವುದಕ್ಕೆ ಅವರ ಒಬ್ಬ ಸಹೋದರನಾಗಿ ನಾನು ಹಾಸನದಲ್ಲಿ ಅವರ ಪರವಾಗಿ ಯೋಚನೆ ಮಾಡುತ್ತೇನೆ ಎಂದರು.

    ಕುಮಾರಸ್ವಾಮಿ ಅವರು ಯಾವುದೇ ಕಾರಣಕ್ಕೂ ರೇವಣ್ಣ ಅವರ ಮನೆಯವರನ್ನು ಕ್ಯಾಂಡಿಡೇಟ್ ಮಾಡಲ್ಲ ಎಂದು ಶಪಥ ಮಾಡಿದ್ದಾರೆ ಹೊರತು ಪ್ರೀತಂ ಗೌಡನನ್ನು ಚುನಾವಣೆಯಲ್ಲಿ ಸೋಲಿಸುತ್ತೇನೆ ಎಂದು ಶಪಥ ಮಾಡಿಲ್ಲ. ಅವರು ಸಾಮಾನ್ಯ ಕಾರ್ಯಕರ್ತನನ್ನು ಕ್ಯಾಂಡಿಡೇಟ್ ಮಾಡುತ್ತೇನೆ ಎಂದು ಹೇಳಿದ್ದಾರೆ. ಸಾಮಾನ್ಯ ಕಾರ್ಯಕರ್ತನನ್ನು ಶಾಸಕನಾಗಿ ಮಾಡುತ್ತೇನೆ ಎಂದು ಅವರು ಹೇಳಿದ್ದಾರಾ? ಅವರು ಹಾಗೆ ಹೇಳಲ್ಲ, ಪಾಪ ಅವರು ನನ್ನ ಹಿತೈಷಿ ಎಂದು ತಿರುಗೇಟು ನೀಡಿದರು.

    ಕ್ಷೇತ್ರದಲ್ಲಿ ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್ ಕೊಡ್ತೀನಿ ಎಂದಿದ್ದಾರೆ ಹೊರತು ಗೆಲ್ಲಿಸಿಕೊಳ್ತೀನಿ ಅಂತ ಹೇಳಿಲ್ಲ. ಗೆಲ್ಲಿಸಿಕೊಳ್ಳೋದು ಪ್ರೀತಂ ಗೌಡನನ್ನು. ಟಿಕೆಟ್ ಕೋಡೋದು ಸಾಮಾನ್ಯ ಕಾರ್ಯಕರ್ತನಿಗೆ. ನಿಮಗೆ ಅಷ್ಟು ರಾಜಕೀಯ ಮರ್ಮ ಅರ್ಥವಾಗಲಿಲ್ಲ ಎಂದರೆ ನಾನು ಮತ್ತೇನು ಹೇಳಲಿ ಎಂದು ಪತ್ರಕರ್ತರನ್ನು ಪ್ರಶ್ನಿಸಿದರು. ಇದನ್ನೂ ಓದಿ: ಕಾರವಾರದಲ್ಲಿ PDO ವರ್ಗಾವಣೆ ಕಿರಿಕ್ – ಕಚೇರಿಯಲ್ಲೇ ಹಾಲಿ, ಮಾಜಿ ಶಾಸಕರ ಫೈಟ್

    ಅವರು ನಮ್ಮ ಜೊತೆ ಬರುತ್ತಾರೆ. ನಾನು ಹೇಳ್ತಿರೋದು ಅಧಿಕಾರ ಮಾಡೋಕೆ ಬರ್ತಾರೆ ಅಂತ ಅಲ್ಲ. ಕುಮಾರಣ್ಣ ಬಿಜೆಪಿಗೆ ಬಂದರೆ ಸ್ವಾಗತ, ಯಾರು ಬೇಡ ಅಂತಾರೆ? ಕುಮಾರಣ್ಣನನ್ನು ನಾನು ಭಾರತೀಯ ಜನತಾ ಪಾರ್ಟಿಗೆ ಕರೆಯುತ್ತಿದ್ದೇನೆ. ನಿಮ್ಮ ಕುಟುಂಬದಲ್ಲಿ ಆಗುತ್ತಿರುವಂತಹ ಒತ್ತಡವನ್ನು ನನ್ನಿಂದ ನೋಡಲು ಆಗುತ್ತಿಲ್ಲ. ಆ ಒತ್ತಡವನ್ನು ಅವರಿಂದ ಸಹಿಸಲು ಆಗುತ್ತಿಲ್ಲ ಎಂದರೆ ದಯಮಾಡಿ ಭಾರತೀಯ ಜನತಾ ಪಾರ್ಟಿಗೆ ಬಂದು ಸೇರಿಕೊಳ್ಳಿ ಎಂದು ಟಾಂಗ್ ನೀಡಿದರು.

    ನಿಮಗೆ ಉತ್ತಮವಾದಂತಹ ಜನಾಭಿಪ್ರಾಯ ಇದೆ. ನಾನು ವೈಯಕ್ತಿಕವಾಗಿ ನನ್ನ ಹಾಗೂ ಅವರ ಸಂಬAಧದ ಮೇಲೆ ಕರೆಯುತ್ತಿದ್ದೇನೆ. ನನಗೆ ಪಕ್ಷದ ಅಥವಾ ಸರ್ಕಾರದ ಯಾವುದೇ ಜವಾಬ್ದಾರಿ ಇಲ್ಲ. ಅವರು ಏಕವಚನದಲ್ಲಿ ಮಾತನಾಡಿರುವುದು ನಮ್ಮಿಬ್ಬರ ನಡುವೆ ಇರುವಂತಹ ಸಲುಗೆ, ವಿಶ್ವಾಸ, ಪ್ರೀತಿಯಿಂದ. ಆ ಪ್ರೀತಿಗೆ ಯಾಕೆ ಅಪಾರ್ಥ ಕಲ್ಪಿಸಬೇಕು ಎಂದು ನುಡಿದರು. ಇದನ್ನೂ ಓದಿ: ಮಾಡಾಳ್ ಕುಟುಂಬದಿಂದ ಖತರ್ನಾಕ್ ಪ್ಲಾನ್- ಲೋಕಾಯುಕ್ತ ಬರುತ್ತೆ ಅಂತ ಸಿಸಿಟಿವಿ ಆಫ್!

  • ಪ್ರೀತಂಗೌಡ ನಮಗೆ ಅಣ್ಣನ ಸಮಾನ – ವೀಡಿಯೋವನ್ನು ತಿರುಚಿ ವೈರಲ್ ಮಾಡಿದ್ದಾರೆ: ಸ್ಥಳೀಯರ ಆಕ್ರೋಶ

    ಪ್ರೀತಂಗೌಡ ನಮಗೆ ಅಣ್ಣನ ಸಮಾನ – ವೀಡಿಯೋವನ್ನು ತಿರುಚಿ ವೈರಲ್ ಮಾಡಿದ್ದಾರೆ: ಸ್ಥಳೀಯರ ಆಕ್ರೋಶ

    ಹಾಸನ: ಶ್ರೀನಗರ ಬಡಾವಣೆಯಲ್ಲಿ ಶಾಸಕ ಪ್ರೀತಂಗೌಡ (Preetham Gowda) ತಮಗೆ ಮತ (Vote) ಹಾಕುವಂತೆ ಬೆದರಿಕೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಬಡಾವಣೆ ನಿವಾಸಿಗಳು ಶಾಸಕರ ಪರವಾಗಿ ನಿಂತಿದ್ದಾರೆ. ಶಾಸಕರು ನಮ್ಮನ್ನು ಸಹೋದರಿಯರು ಎಂದುಕೊಂಡಿದ್ದಾರೆ. ಅವರು ನಮಗೆ ಅಣ್ಣನ ಸಮಾನ. ಯಾರೋ ಕೆಲವರು ಶಾಸಕರ ವೀಡಿಯೋ ಮಾಡಿ ತಿರುಚಿ ಅದನ್ನು ವೈರಲ್ ಮಾಡಿದ್ದಾರೆ ಎಂದು ಸ್ಥಳೀಯ ನಿವಾಸಿಗಳ ಕಿಡಿಕಾರಿದ್ದಾರೆ.

    ನಮ್ಮ ಬಡಾವಣೆಯಲ್ಲಿ ಹಿಂದೂ, ಮುಸ್ಲಿಂ ಎನ್ನುವ ಭೇದಭಾವ ಇಲ್ಲ. ಎಲ್ಲರೂ ಒಂದಾಗಿ ಇದ್ದೇವೆ, ಇರ್ತೇವೆ. ಶಾಸಕರು ನಮ್ಮನ್ನು ಸಹೋದರಿಯರು ಎಂದುಕೊಂಡಿದ್ದಾರೆ. ಅವರು ನಮಗೆ ಅಣ್ಣನ ಸಮಾನ, ಆದರೆ ಇಂತಹವರಿಗೆ ವೋಟ್ ಹಾಕಿ ಎಂದು ನಮಗೆ ಯಾರ ಹೇಳುವಂತಿಲ್ಲ. ಅವರು ಹೇಳಿಲ್ಲ ಎಂದು ಸ್ಪಷ್ಟಪಡಿಸಿದರು. 28 ವರ್ಷಗಳಿಂದ ನಮಗೆ ಯಾರು ಹಕ್ಕು ಪತ್ರ ನೀಡುವುದಾಗಿ ಬಂದಿಲ್ಲ. ಅಷ್ಟು ವರ್ಷಗಳಿಂದಲೂ ಇದೇ ಕೊಳಚೆ, ವಾಸನೆ, ಗಲೀಜು ನಡುವೆ ನಾವು ಬದುಕಿದ್ದೇವೆ. ಇದುವರೆಗೆ ಬಂದವರೆಲ್ಲಾ ಕೇವಲ ಭರವಸೆ ಕೊಟ್ಟು ವೋಟ್ ಹಾಕಿಸಿಕೊಂಡು ಹೋಗಿದ್ದಾರೆ ಅಷ್ಟೇ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ವೋಟ್ ಹಾಕದಿದ್ರೆ ಯುಜಿಡಿ ಕಾಮಗಾರಿ ಮಾಡಲ್ಲ: ಶಾಸಕ ಪ್ರೀತಂಗೌಡ

    ಶಾಸಕ ಪ್ರೀತಂಗೌಡ ಅವರು ನಮ್ಮ ಕೆಲಸ ಮಾಡ್ತೀವಿ ಎಂದು ಬಂದಿದ್ದಾರೆ. ಅವರು ಮತ ನೀಡಿ ಎಂದು ಯಾವುದೇ ಬೆದರಿಕೆ ಹಾಕಿಲ್ಲ. ಯಾರೋ ಕೆಲವರು ಶಾಸಕರ ವೀಡಿಯೋ ಮಾಡಿ ತಿರುಚಿ ಅದನ್ನು ವೈರಲ್ ಮಾಡಿದ್ದಾರೆ ಎಂದು ಸ್ಥಳೀಯ ನಿವಾಸಿಗಳು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಅಧಿಕಾರಿಗೆ ಹಲ್ಲೆ ನಡೆಸಲು ಮಚ್ಚು ಹಿಡಿದು ಬಂದ ಮಹಿಳೆ

    Live Tv
    [brid partner=56869869 player=32851 video=960834 autoplay=true]

  • ಪ್ರೀತಂಗೌಡ V/S ಹೆಚ್.ಡಿ.ರೇವಣ್ಣ- ಹಾಸನದಲ್ಲಿ ಚುನಾವಣೆಗೆ ನಿಲ್ಲುವಂತೆ ಶಾಸಕರ ಸವಾಲು

    ಪ್ರೀತಂಗೌಡ V/S ಹೆಚ್.ಡಿ.ರೇವಣ್ಣ- ಹಾಸನದಲ್ಲಿ ಚುನಾವಣೆಗೆ ನಿಲ್ಲುವಂತೆ ಶಾಸಕರ ಸವಾಲು

    ಹಾಸನ: ಹಾಸನದಲ್ಲಿ ಶಾಸಕ ಪ್ರೀತಂಗೌಡ (Preetham Gowda) ಮತ್ತು ಹೆಚ್.ಡಿ.ರೇವಣ್ಣ (HD Revanna) ಮಧ್ಯೆ ರಾಜಕೀಯ ಜಟಾಪಟಿ ಜೋರಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ (K Gopalaiah) ಅಧ್ಯಕ್ಷತೆಯಲ್ಲಿ ನಡೆದ 2022-2023ನೇ ಸಾಲಿನ 2ನೇ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀನಾ ಸಭೆಯಲ್ಲಿ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ. ಜಿಲ್ಲೆಯ ಎಲ್ಲಾ ಶಾಸಕರು ಸಭೆಯಲ್ಲಿ ಭಾಗಿಯಾಗಿದ್ದರು.

    ಸಭೆಯಲ್ಲಿ ಮಾತನಾಡಿದ ಮಾಜಿ ಸಚಿವ ಎಚ್.ಡಿ.ರೇವಣ್ಣ, ನಮ್ಮ ಸರ್ಕಾರದ ಅವಧಿಯಲ್ಲಿ ಚನ್ನಪಟ್ಟಣ ಕೆರೆ ಅಭಿವೃದ್ಧಿಗೆ 144 ಕೋಟಿ ವೆಚ್ಚದಲ್ಲಿ ಯೋಜನೆ ರೂಪಿಸಲಾಗಿತ್ತು. ಈ ಯೋಜನೆ ಬದಲಿಸಿ ಬೇರೆ ಕಾಮಗಾರಿಗೆ ಬಳಸಲಾಗಿದೆ. ಕೆಲಸ ಕೂಡ ಸರಿಯಾಗಿ ನಡೆಯುತ್ತಿಲ್ಲ. ಈ ಬಗ್ಗೆ ತನಿಖೆ ನಡೆಯಬೇಕು ಎಂದರು. ಇದನ್ನೂ ಓದಿ: ನನ್ಮೇಲೆ ದಾಳಿ ಮಾಡಿದ್ರೆ, ನಾನು ಆನೆಯನ್ನ ಕೊಲ್ತೀನಿ: ಮಾಜಿ ಶಾಸಕ

    ರೇವಣ್ಣ ಮಾತಿಗೆ ಪ್ರತ್ಯುತ್ತರ ನೀಡಿದ ಶಾಸಕ ಪ್ರೀತಂಗೌಡ, ಯಾವ ತನಿಖೆ ಬೇಕಾದ್ರೂ ಮಾಡಿಸಲಿ ನಾನು ಹೆದರಲ್ಲ. ಕ್ಯಾಬಿನೆಟ್ (Cabinet) ನಿರ್ಧಾರವನ್ನು ಇಲ್ಲಿ ಚರ್ಚೆ ಮಾಡುವುದಾದ್ರೆ ಕ್ಯಾಬಿನೆಟ್‍ನ್ನು ಕೆಡಿಪಿ ಮಟ್ಟಕ್ಕೆ ಇಳಿಸಬೇಡಿ ಸಂಪುಟ ಸಭೆಯಲ್ಲಿ ತೀರ್ಮಾನ ಆದಂತೆ ಕಾಮಗಾರಿ ನಡೆಯುತ್ತಿದೆ ಎಂದರು. ಮತ್ತೆ ರೇವಣ್ಣ ಮಾತನಾಡಿ, ನೀರಾವರಿ ಸೇರಿದಂತೆ ಬಿಜೆಪಿ ಸರ್ಕಾರ, ಜಿಲ್ಲೆಗೆ ಯಾವುದೇ ಅನುದಾನ ಕೊಟ್ಟಿಲ್ಲ. ಈ ಸರ್ಕಾರಕ್ಕೆ ನಾಚಿಕೆ ಆಗಬೇಕು ಎಂದು ಕಿಡಿಕಾರಿದರು. ಹಳೇಬೀಡು ರಣಘಟ್ಟ ನೀರಾವರಿ ಯೋಜನೆಗೆ ಹಣ ಕೊಟ್ಟಿಲ್ವಾ, ನೀವು ಬರೀ ಘೋಷಣೆ ಮಾಡಿ ಹೋಗ್ತೀರಾ, ಕೆಲಸ ಮಾಡೋದು ನಾವೇ. ನಾಚಿಕೆ ಯಾರಿಗೆ ಆಗಬೇಕೋ ಅವರಿಗೆ ಆಗಲಿ ಎಂದು ತಿರುಗೇಟು ನೀಡಿದ್ರು.

    ವಾಕ್ಸಮರ ಮುಂದುವರಿಸಿದ ರೇವಣ್ಣ, ಕುಮಾರಸ್ವಾಮಿ (HD Kumaraswamy) ಅವಧಿಯಲ್ಲಿ ಮಾಡಿದ್ದು, ನಿಮ್ಮ ಸರ್ಕಾರ ಏನೂ ಮಾಡಿಲ್ಲ. ಯಡಿಯೂರಪ್ಪ (BS Yediyurappa) ಈ ಜಿಲ್ಲೆಗೆ ಏನೆಲ್ಲಾ ಅನ್ಯಾಯ ಮಾಡಿದ್ದಾರೆ ಎಂಬುದನ್ನು ಸಮಯ ಬಂದಾಗ ಹೇಳುತ್ತೇನೆ ಎಂದರು. ನೀವು ಬಜೆಟ್‍ (Budget) ನಲ್ಲಿ ಅನೌನ್ಸ್ ಮಾಡಿ ಮನೆಗೆ ಹೋಗುವುದಲ್ಲ. ಕೆಲಸ ಮಾಡಿಸಬೇಕು. ರಾಜಕಾರಣ ಹೊರಗೆ ಮಾಡೋಣ, ನಾನು ಹೆದರಿ ಓಡಿ ಹೋಗೋದಿಲ್ಲ. ಇಲ್ಲಿ ಕೆಡಿಪಿ ಸಭೆ ನಡೆಯುತ್ತಿದೆ. ಜಿಲ್ಲೆಯ ಅಭಿವೃದ್ಧಿ ಕಾರ್ಯಕಗಳ ಬಗ್ಗೆ ಮಾತಾಡಿ ಎಂದು ಪ್ರೀತಂಗೌಡ ಹೇಳಿದರು.

    ಜಲಜೀವನ್ ಮಾಡಿರುವುದು ಪ್ರಧಾನಿ ಮೋದಿ (Narendra Modi) ಅವರು, ಅದನ್ನೂ ನಾನೇ ಮಾಡಿದ್ದು ಅಂತಿಯಾ ಎಂದು ರೇವಣ್ಣ ಅವರನ್ನು ಏಕ ವಚನದಲ್ಲೇ ಪ್ರೀತಂ ಕುಟುಕಿದರು. ಜಿಲ್ಲಾ ಕೇಂದ್ರ ಎಂದು ಎಲ್ಲರೂ ಹಾಸನಕ್ಕೆ ಬಂದು ಎಂಎಲ್‍ಎ ಗಿರಿ ಮಾಡಿದರೆ ನಾನು ನನ್ನ ಕ್ಷೇತ್ರಬಿಟ್ಟು ಹೊಳೆನರಸೀಪುರಕ್ಕೆ ಹೋಗಿ ಅಧಿಕಾರ ಚಲಾಯಿಸಲು ಆಗುತ್ತಾ? ರೇವಣ್ಣ ಅವರಿಗೆ ಜಿಲ್ಲಾ ಕೇಂದ್ರದ ಬಗ್ಗೆ ಅಷ್ಟೊಂದು ಕಾಳಜಿ ಇದ್ದರೆ 2023 ರ ಚುನಾವಣೆಯಲ್ಲಿ ಹಾಸನದಿಂದಲೇ ಸ್ಪರ್ಧಿಸಲಿ ಎಂದು ಮತ್ತೊಮ್ಮೆ ಬಹಿರಂಗ ಆಹ್ವಾನ ನೀಡಿದರು.

    ರೇವಣ್ಣ ಅವರ ಆರೋಪಕ್ಕೆ ಪ್ರೀತಂಗೌಡ ಖಾರವಾಗಿಯೇ ಪ್ರತ್ಯುತ್ತರ ನೀಡಿದ್ದು, ರೇವಣ್ಣ ಮತ್ತಷ್ಟು ಕೆರಳಲು ಕಾರಣವಾಯಿತು. ನೀನಾ, ನಾನಾ ಎಂಬಂತೆ ಇಬ್ಬರ ನಡುವೆ ನಡೆದ ವಾಕ್ಸಮರ ಮುಂದಿನ ಚುನಾವಣೆಯಲ್ಲಿ ಎದುರು ಬದುರಾಗುವ ಮುನ್ಸೂಚನೆಯೇ ಎಂದು ಅನೇಕರು ಮಾತನಾಡಿಕೊಂಡರು.

    Live Tv
    [brid partner=56869869 player=32851 video=960834 autoplay=true]

  • ಭವಾನಿ ಅಕ್ಕ, ಪ್ರಜ್ವಲ್ ರೇವಣ್ಣ ನಶೆಯಲ್ಲಿರ್ತಾರೆ; ಥರ್ಟಿ, ಸಿಕ್ಸ್ಟಿ ಅಲ್ಲ 2 ಬಾಟ್ಲಿ ಕುಡಿತಾರೆ – ಪ್ರೀತಂ ಗೌಡ

    ಭವಾನಿ ಅಕ್ಕ, ಪ್ರಜ್ವಲ್ ರೇವಣ್ಣ ನಶೆಯಲ್ಲಿರ್ತಾರೆ; ಥರ್ಟಿ, ಸಿಕ್ಸ್ಟಿ ಅಲ್ಲ 2 ಬಾಟ್ಲಿ ಕುಡಿತಾರೆ – ಪ್ರೀತಂ ಗೌಡ

    ಹಾಸನ: ಭವಾನಿ ಅಕ್ಕ, ಸಂಸದ ಪ್ರಜ್ವಲ್ ರೇವಣ್ಣ ನಶೆಯಲ್ಲಿ ಮಾತಾಡ್ತಾರೆ. ಅವರು ಥರ್ಟಿ, ಸಿಕ್ಸ್ಟಿ ಅಲ್ಲ, 2 ಬಾಟ್ಲಿ ಕುಡಿತಾರೆ. ತಾಯಿ, ಮಗ ಇಬ್ಬರೂ 2 ಗಂಟೆಯವರೆಗೆ ನಶೆ ಏರಿಸಿಕೊಂಡು, ಬೆಳಗ್ಗೆ ಬಂದು ಏನು ಮಾತಾಡ್ತೀವಿ ಎಂಬುದೇ ಗೊತ್ತಾಗಲ್ಲ ಎಂದು ಭವಾನಿ ರೇವಣ್ಣ (Bhavani Revanna) ಹಾಗೂ ಪ್ರಜ್ವಲ್ ರೇವಣ್ಣ (Prajwal Revanna) ವಿರುದ್ಧ ಶಾಸಕ ಪ್ರೀತಂ ಗೌಡ (Preetham Gowda) ಟೀಕಾಪ್ರಹಾರ ನಡೆಸಿದ್ದಾರೆ.

    ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ತಂದೆಯವರು ತಮ್ಮ ಇಡೀ ವೃತ್ತಿ ಜೀವನದಲ್ಲಿ ಒಂದೇ ಒಂದು ದಿನ ಬಿಬಿಎಂಪಿ ಕೆಲಸ ಮಾಡಿದ್ರೆ, ಅವರು ಶಿಫಾರಸು ಮಾಡಿದ್ದನ್ನು ತೋರಿಸಿದರೆ ನಾನು ರಾಜೀನಾಮೆ ಕೊಡುತ್ತೇನೆ. ನಾನು ಏನಕ್ಕೆ 5ನೇ ಕ್ಲಾಸ್, 7ನೇ ಕ್ಲಾಸ್ ಅಂತಿನಿ ಅನ್ನೋದು ಇದಕ್ಕೆ. ಅವರಿಗೆ ವಿಷಯ, ವಿಚಾರ ಗೊತ್ತಿಲ್ಲದೆ ಮಾತನಾಡುತ್ತಾರೆ ಎಂದರು.

    ಹುಟ್ಟುಗುಣ ಸುಟ್ಟರೂ ಹೋಗಲ್ಲ ಅಂತ ಅಜ್ಜಿ ಒಬ್ಬರು ನನ್ನ ಬಳಿ ಹೇಳಿದ್ರು. ಯಡಿಯೂರು ಗ್ರಾಮಕ್ಕೆ ಹೋದ ವೇಳೆ ವ್ಯಕ್ತಿಯೊಬ್ಬರು ಹೇಳಿದ್ರು. ಅಣ್ಣಾ ಇಬ್ಬರಿಗೂ ರಾತ್ರಿ ನಶೆ ಜಾಸ್ತಿ ಆಗಿರುತ್ತದೆ. ಬೆಳಗ್ಗೆ ಆದರೂ ಇಳಿದಿರಲ್ಲ. ಹೀಗಾಗಿ ಮಾತನಾಡುತ್ತಾರೆ ಅಂತ. ಅಮ್ಮ-ಮಗ ಇಬ್ಬರೂ ಒಂದೇ ತರ ಮಾತನಾಡುತ್ತಾರೆ. ರಾತ್ರಿಯ ನಶೆ ಬೆಳಗ್ಗೆಯಾದರೂ ಇಳಿದಿರಲ್ಲ. ಹೀಗಾಗಿ ಮಾತನಾಡುತ್ತಾರೆ ಎಂದು ವಾಗ್ದಾಳಿ ನಡೆಸಿದರು.

    ರೇವಣ್ಣ ಅವರು ಮಾತನಾಡಿಲ್ಲ, ಅವರು ಬಹಳ ಸಂಸ್ಕಾರವಂತರು. ದೇವೇಗೌಡರು, ಚನ್ನಮ್ಮ ಅವರಿಗೆ ಸಂಸ್ಕಾರ ಕೊಟ್ಟಿದ್ದಾರೆ. ಇವರಿಗೆ ಸಂಸ್ಕಾರ ಇದೆಯೋ, ಇಲ್ಲವೋ ಗೊತ್ತಿಲ್ಲ. ಸಂಸದರಿಗೆ ಸಂಸ್ಕಾರ ಕಲಿಸಬೇಕಿರುವವರು ತಾಯಿ. ತಾಯಿನೇ ಆ ರೀತಿ ಮಾತನಾಡಿದರೆ ಹೇಗೆ ಎಂದು ಪ್ರಶ್ನಿಸಿದರು.

    ನಮ್ಮ ತಾಯಿ ಹುಟ್ಟುವ ಮುಂಚೆ 100 ಎಕರೆ ಖಾತೆದಾರರು, ನಮ್ಮ ತಾಂದೆ ಹುಟ್ಟುವ ಮುಂಚೆ ಹತ್ತಾರು ಎಕರೆ ಖಾತೆದಾರರು. ಸಾಲಿಗ್ರಾಮಕ್ಕೆ ಹೋಗಿ ಅಕ್ಕ ಅವರ ಮನೆಯಲ್ಲಿ ಎಷ್ಟು ಗುಂಟೆ ಜಾಗ ಇತ್ತು ಅಂತ ಕೇಳಿ. ಹೊಳೆನರಸೀಪುರಕ್ಕೆ ಸೊಸೆಯಾಗಿ ಬರುವ ಮುಂಚೆ ಅವರ ಮನೆಯ ಪರಿಸ್ಥಿತಿ ಏನು ಅಂತ ಅವರು ಆತ್ಮ ವಿಮರ್ಶೆ ಮಾಡಿಕೊಳ್ಳಲಿ. ಮೈಸೂರು ಮಹಾರಾಜರು ಏನಾದರೂ ಸಾಲ ಕೊಟ್ಟು ಅವರಿಗೆ ಆಗರ್ಭ ಶ್ರೀಮಂತರಾಗಿದ್ದರಾ? ಭವಾನಿ ಅಕ್ಕ ಮಾತನಾಡೋ ಶೈಲಿ ನೋಡಿದರೆ ಅವರು ಆಗರ್ಭ ಶ್ರೀಮಂತರು ಎನಿಸುತ್ತದೆ ಎಂದು ಟೀಕಿಸಿದರು.

    ಅಲ್ಕೋಮೀಟರ್ ಇಟ್ಕೊಂಡಿರಿ, ನೆಕ್ಸ್ಟ್ ಪ್ರೆಸ್‌ಮೀಟ್ ಬಂದಾಗ ಚೆಕ್‌ಮಾಡಿ ಏನಾದರೂ ನಶೆ ಇದ್ದರೆ ಏನೂ ಅಂದುಕೊಳ್ಳಬೇಡಿ. ರೇವಣ್ಣ ಅವರು ಮಾತಾಡಲ್ಲ, ಯಾಕೆ ಅಂದರೆ ಅವರು ನಶೆ ಏರಿಸಿಕೊಳ್ಳಲ್ಲ. ಭವಾನಿ ಅಕ್ಕ, ಎಂಪಿ ನಶೆ ಮೇಲೆ ಮಾತಾಡಿದ್ದಾರೆ. ಈ ಬಗ್ಗೆ ಹಾಸನ ಕ್ಷೇತ್ರದ ಜನರು, ಇಡೀ ರಾಜ್ಯದ ಜನರು ಮಾತನಾಡುತ್ತಿದ್ದಾರೆ. ರೇವಣ್ಣ ಈ ನಶೆಯರ ಮಧ್ಯೆ ಸಿಲುಕಿಕೊಂಡು ನರಳಿ ಹೋಗಿದ್ದಾರೆ ಎಂದರು. ಇದನ್ನೂ ಓದಿ: ಶಾಸಕ ಪ್ರೀತಂಗೌಡ ವಿರುದ್ಧ ಏಕವಚನದಲ್ಲಿ ಹರಿಹಾಯ್ದ ಭವಾನಿ ರೇವಣ್ಣ

    ನಮ್ಮ ತಾಯಿ ಬಿಎ, ನಮ್ಮ ತಂದೆ ಬಿಇ ಓದಿದ್ದಾರೆ. ಹಾಗಾಗಿ ನಮಗೆ ಸಂಸ್ಕಾರ ಕಲಿಸಿಕೊಟ್ಟಿದ್ದಾರೆ. ಎಲ್ಲಾ ಅಧಿಕಾರಿಗಳಿಗೆ ಕೈಮುಗಿದು ಕೇಳಿಕೊಳ್ಳುತ್ತೇನೆ. ಯಾವುದೇ ಕಾರಣಕ್ಕೂ ಆ ಕುಟುಂಬದ ಹತ್ತಿರ ಹೋಗಬೇಡಿ. ಸಹಾಯ ಪಡೆಯದಿರುವ ಶಾಸಕರ ತಂದೆ ಬಗ್ಗೆಯೇ ಮಾತನಾಡುತ್ತಾರೆ ಎಂದರೆ, ಸಾಮಾನ್ಯ ನೌಕರರ ಪಾಡು ಏನಾಗಬೇಕು? ಅಪ್ಪಿ ತಪ್ಪಿ ಅವರ ಮನೆ ಬಾಗಿಲಿಗೆ ಹೋಗಬೇಡಿ. ಯಾವುದು ಶಿಫಾರಸು ತಗೋಬೇಡಿ. ನಿಮ್ಮ ಜೀವನ ನಡಿತಿರೋದೇ ಅವರಿಂದ ಎನ್ನುತ್ತಾರೆ. ಬಹಳ ಎಚ್ಚರಿಕೆಯಿಂದ ಇರಿ ಎಂದರು.

    ಅನಿತಕ್ಕ ಬಂದರೆ, ಆ ಅಕ್ಕನನ್ನು ನೋಡಿ ಎರಡು ಕೈ ಮುಗಿದು ಬನ್ನಿ ಅಕ್ಕ ಅಂತ ಕರಿಬೇಕು ಅನ್ಸುತ್ತೆ. ತುಂಬಿದ ಕೊಡ ತುಳುಕುವುದಿಲ್ಲ. ಅನಿತಕ್ಕನ ಬಗ್ಗೆ ಮಾತನಾಡಲು ಆಗುತ್ತ? ಅನಿತಕ್ಕ ಸಂಸ್ಕಾರವಂತರಿದ್ದಾರೆ. ದೇವೇಗೌಡರು ಮಾಜಿ ಪ್ರಧಾನಿಗಳು, ಅವರ ಸೊಸೆ ನಾನೇ ಮಾಜಿ ಪ್ರಧಾನಿ ಅಂತ ತಲೇಲಿ ಇಟ್ಟುಕೊಂಡಿದ್ದಾರೆ. ಅವರ ಮೊಮ್ಮಗ ಬರೀ ಎಂಪಿ, ನಾನೇ ಮಾಜಿ ಪ್ರಧಾನಿ ಅನ್ನೋ ನಿಟ್ಟಿನಲ್ಲಿ ಮಾತನಾಡುತ್ತಾರೆ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ಚುನಾವಣಾ ಗಿಮಿಕ್‍ಗಾಗಿ ರಥಯಾತ್ರೆಗಳು ನಡೆಯುತ್ತಿವೆ : ಆರ್.ಅಶೋಕ್

    Live Tv
    [brid partner=56869869 player=32851 video=960834 autoplay=true]