Tag: Preetam

  • ಪ್ರೀತಂ ಜೊತೆ ಇಷ್ಟು ವರ್ಷ ಏಕೆ ಕೆಲಸ ಮಾಡಿಲ್ಲ – ಮೌನಮುರಿದ ಸೋನು ನಿಗಮ್

    ಪ್ರೀತಂ ಜೊತೆ ಇಷ್ಟು ವರ್ಷ ಏಕೆ ಕೆಲಸ ಮಾಡಿಲ್ಲ – ಮೌನಮುರಿದ ಸೋನು ನಿಗಮ್

    ಮುಂಬೈ: ಖ್ಯಾತ ಗಾಯಕ ಸೋನು ನಿಗಮ್ ‘ಯೇ ಜವಾನಿ ಹೈ ದೀವಾನಿ’ ಸಿನಿಮಾ ನಂತರ ಮತ್ತೆ ಸಂಗೀತ ನಿರ್ದೇಶಕ ಪ್ರೀತಂ ಅವರೊಂದಿಗೆ ಕೆಲಸ ಮಾಡಲು ನಿರ್ಧರಿಸಿದ್ದಾರೆ. ಆದರೆ ಇಷ್ಟು ವರ್ಷ ಏಕೆ ಅವರ ಜೊತೆ ಕೆಲಸ ಮಾಡಿಲ್ಲ ಎಂಬುದರ ಬಗ್ಗೆ ಮೌನಮುರಿದಿದ್ದಾರೆ.

    ಸಂದರ್ಶನವೊಂದರಲ್ಲಿ ಹಲವಾರು ಕಲಾವಿದರು ಒಂದೇ ಹಾಡನ್ನು ಪ್ರಯೋಗಕ್ಕಾಗಿ ಹಾಡುವಂತೆ ಮಾಡುವ ಮತ್ತು ಅವರಲ್ಲಿ ಒಬ್ಬರನ್ನು ಆಯ್ಕೆ ಮಾಡುವ ‘ಟ್ರೆಂಡ್’ ಬಗ್ಗೆ ಸೋನು ಅವರನ್ನು ಪ್ರಶ್ನೆ ಕೇಳಲಾಗಿದೆ. ಈ ಪ್ರಶ್ನೆಗೆ ಉತ್ತರಿಸಿದ ಅವರು, ಈ ರೀತಿ ನನಗೂ ಆಗಿದೆ. ಈ ಹಿಂದೆ ‘ಸುಭಾನಲ್ಲಾ’ ಸಾಂಗ್ ಅನ್ನು ಮೊದಲು ನಾನು ಹಾಡಿದ್ದೆ. ಈ ಹಾಡಿನ ಸಂಗೀತ ನಿರ್ದೇಶನವನ್ನು ಪ್ರೀತಂ ಮಾಡುತ್ತಿದ್ದರು. ಆಗ ನಾನು ಆಡಿದ ಧ್ವನಿಯನ್ನು ಹಾಕದೆ ಬೇರೆಯವರನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂದು ವಿವರಿಸಿದರು. ಇದನ್ನೂ ಓದಿ: ಉತ್ತರಾಖಂಡದ ಬ್ರಾಂಡ್ ಅಂಬಾಸಿಡರ್ ಆಗಿ ಅಕ್ಷಯ್ ಕುಮಾರ್ ನೇಮಕ

    ಈ ಹಾಡನ್ನು ಅವರು ಮತ್ತೆ ಹಾಡಲು ಹೇಳಿದರು. ಆದರೆ ನಾನು ಆಗಲ್ಲ ಎಂದೆ. ಏಕೆಂದರೆ ನಾನು ಆ ಹಾಡನ್ನು ಚೆನ್ನಾಗಿ ಹಾಡಿದ್ದೇನೆ ಎಂದು ನನಗೆ ಗೊತ್ತಿತ್ತು. ಕೊನೆಗೆ ಆ ‘ಸುಭಾನಲ್ಲಾ’ ಹಾಡನ್ನು ಶ್ರೀರಾಮ ಚಂದ್ರ ಅವರು ಹಾಡಿದ್ದಾರೆ. ಅದು ಅವರ ಹಣೆಯಲ್ಲಿ ಬರೆದಿತ್ತು ಎಂದು ವಿವರಿಸಿದರು.

    ಈ ಬಗ್ಗೆ ನಾನು ಪ್ರೀತಂ ಅವರನ್ನು ಕೇಳಿದಾಗ ಅವರು ನನ್ನ ಜೊತೆ ಪ್ರೀತಿಯಿಂದ ಮಾತನಾಡಿ ಈ ವಿಷಯವನ್ನು ತಿಳಿಸಿದರು. ಆಗ ನಾನು ಅಲ್ಲಿಂದ ಹೊರಟು ಬಂದೆ ಎಂದು ತಿಳಿಸಿದರು. ಕೆಲವು ತಿಂಗಳ ಹಿಂದೆ ಸೋನು ಮತ್ತೆ ಪ್ರೀತಂ ಅವರೊಂದಿಗಿನ ಕೆಲಸ ಮಾಡುವುದಾಗಿ ತಿಳಿಸಿದರು. ಪ್ರಸ್ತುತ ಅವರಿಬ್ಬರು ಅಮೀರ್ ಖಾನ್ ನಟನೆಯ ‘ಲಾಲ್ ಸಿಂಗ್ ಚಡ್ಡಾ’ ಸಿನಿಮಾದಲ್ಲಿ ಕೆಲಸ ಮಾಡಿದ್ದಾರೆ. ‘ಲಾಲ್ ಸಿಂಗ್ ಚಡ್ಡಾ’ ಸಿನಿಮಾ ಹಾಡನ್ನು ಸೋನು ಅವರೇ ಹಾಡಬೇಕು ಎಂದು ಅಮೀರ್ ಖಾನ್ ನಿರ್ಧರಿಸಿದ್ದರು. ನಂತರ ಚಿತ್ರತಂಡ ಸೋನು ಅವರನ್ನು ಮನವೊಲಿಸಿ ‘ಲಾಲ್ ಸಿಂಗ್ ಚಡ್ಡಾ’ ಹಾಡನ್ನು ಹಾಡಿಸಿದ್ದಾರೆ.

    ಸೋನು ಹೆಚ್ಚು ಹಿಂದಿ ಮತ್ತು ಕನ್ನಡ ಸಿನಿಮಾಗಳಲ್ಲಿ ಹಾಡಿದ್ದಾರೆ. ಇವರು ಒಟ್ಟು ಒಡಿಯಾ, ಬೆಂಗಾಲಿ, ಗುಜರಾತಿ, ತಮಿಳು, ತೆಲುಗು, ಮರಾಠಿ, ನೇಪಾಳಿ, ಮಲಯಾಳಂ, ಕನ್ನಡ, ಭೋಜ್‍ಪುರಿ ಮತ್ತು ಇತರ ಭಾರತೀಯ ಭಾಷೆಗಳಲ್ಲಿ ಹಾಡುಗಳನ್ನು ಹಾಡಿದ್ದಾರೆ. ಸೋನು ಅವರ ಹಿಟ್ ಲಿಸ್ಟ್ ನಲ್ಲಿ ಮೈ ಅಗರ್ ಕಹೂನ್, ಹನ್ಸ್ ಮತ್ ಪಗ್ಲಿ, ಅಭಿ ಮುಜ್ ಮೇ ಕಹೀನ್, ದೋ ಪಾಲ್ ಮತ್ತು ಸಂದೇಸೆ ಆತೇ ಹೈ ಜನಪ್ರಿಯವಾಗಿದೆ. ಇದನ್ನೂ ಓದಿ: ಸುನಿಲ್ ಗ್ರೋವರ್ ಆರೋಗ್ಯ ವಿಚಾರಿಸಲು ತನ್ನ ವೈದ್ಯ ತಂಡಕ್ಕೆ ಸೂಚಿಸಿದ ಸಲ್ಮಾನ್

    ಸೋನು ನಿಗಮ್ ಅವರು ಹಲವಾರು ಭಾಷೆಗಳಲ್ಲಿ ಸಾವಿರಾರು ಹಾಡುಗಳನ್ನು ಹಾಡಿದ್ದಾರೆ. ಇವರ ಧ್ವನಿಗೆ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಇವರು ಖಾಸಗಿ ರಿಯಾಲಿಟಿ ಶೋವೊಂದರ ತೀರ್ಪುಗಾರರಾಗಿದ್ದರು. ಪ್ರಸ್ತುತ ಹಲವು ಸಿನಿಮಾಗಳಲ್ಲಿ ಹಾಡುತ್ತಿರುವ ಇವರು ಬ್ಯುಸಿಯಾಗಿದ್ದು, ತಮ್ಮದೇ ಆದ ಸಂಗೀತ ತರಬೇತಿ ಕೇಂದ್ರವನ್ನು ಮುಂಬೈನಲ್ಲಿ ತೆರೆದಿದ್ದಾರೆ.