Tag: prediction

  • ಅಂಬಲಿ ಹಳಿಸಿತು, ಕಂಬಳಿ ಬೀಸಿತಲೆ ಪರಾಕ್ – ಮೈಲಾರಲಿಂಗೇಶ್ವರ ವರ್ಷದ ದೈವವಾಣಿ

    ಅಂಬಲಿ ಹಳಿಸಿತು, ಕಂಬಳಿ ಬೀಸಿತಲೆ ಪರಾಕ್ – ಮೈಲಾರಲಿಂಗೇಶ್ವರ ವರ್ಷದ ದೈವವಾಣಿ

    ವಿಜಯನಗರ: ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಮೈಲಾರದಲ್ಲಿ ವರ್ಷದ ಭವಿಷ್ಯವಾಣಿ ಮೈಲಾರಲಿಂಗೇಶ್ವರನ (Mylaralingeshwar) ಕಾರ್ಣಿಕೋತ್ಸವ ನಡೆಯಿತು. 15 ಅಡಿ ಬಿಲ್ಲನ್ನೇರಿದ ರಾಮಪ್ಪ ಗೊರವಯ್ಯ ಸದ್ದಲೇ ಎನ್ನುತ್ತಲೆ ಅಂಬಲಿ ಹಳಿಸಿತು, ಕಂಬಳಿ ಬೀಸಿತಲೆ ಪರಾಕ್ ಎಂದು ಈ ವರ್ಷದ ಕಾರ್ಣಿಕ (prediction) ನುಡಿದಿದ್ದಾರೆ.

    ಸುಮಾರು ವರ್ಷಗಳಿಂದ ವರ್ಷಕ್ಕೊಮ್ಮೆ ನಡೆಯುವ ಕಾರ್ಣಿಕವನ್ನು ಕೇಳಲು ಲಕ್ಷಾಂತರ ಜನ ಭಕ್ತರು ಜಮಾಯಿಸುತ್ತಾರೆ. ಭಾರತ ಹುಣ್ಣಿಮೆಯ ಸಮಯದಲ್ಲಿ ನಡೆಯುವ ಜಾತ್ರೆಯ ವೇಳೆ ರಾಮಪ್ಪ ಗೊರವಯ್ಯ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಬಿಲ್ಲನ್ನೇರಿ ಡೆಂಕನಮರಡಿಯಲ್ಲಿ ಸದ್ದಲೇ ಅನ್ನುತ್ತ ಕಾರ್ಣಿಕ ನುಡಿಯುತ್ತಾರೆ.

    ಗೊರವಯ್ಯ ನುಡಿಯುವ ಕಾರ್ಣಿಕವನ್ನು ಮೈಲಾರಲಿಂಗೇಶ್ವರ ದೇವಸ್ಥಾನದ ಧರ್ಮದರ್ಶಿ ವೆಂಕಪ್ಪಯ್ಯ ಒಡೆಯರ್ ವಿಶ್ಲೇಷಣೆ ಮಾಡುತ್ತಾರೆ. ಈ ವರ್ಷ ಗೊರವಯ್ಯ ನುಡಿದ ಕಾರ್ಣಿಕವಾಣಿ ಅಂಬಲಿ ಹಳಸಿತು ಕಂಬಳಿ ಬೀಸಿತಲೆ ಪರಾಕ್ ಎನ್ನುವುದನ್ನು ದೇಶದ ಅನ್ನದಾತರು ಹಾಗೂ ರಾಜಕಾರಣದ ದೈವನುಡಿಯನ್ನು ವಿಶ್ಲೇಷಣೆ ಮಾಡಿದರು. ರೈತರಿಗೆ ರಾಜ್ಯದಲ್ಲಿ ಮಳೆ ಬೆಳೆ ಜಾಸ್ತಿ ಆಗಿ, ಸಮೃದ್ಧಿಯಾಗಲಿದೆ. ಇದರ ಜೊತೆಗೆ ಮಳೆ ಜಾಸ್ತಿಯಾಗಿ ಬೆಳೆ ಹಾನಿಯಾಗಲಿದೆ. ರೈತರಿಗೆ ಬೆಳೆದ ಬೆಳೆ ಸಿಗುತ್ತದೆ. ಈ ಸೂಚನೆ ಮೈಲಾರಲಿಂಗೇಶ್ವರನ ವಾಣಿಯಿಂದ ಸಿಕ್ಕಿದೆ.

    ರಾಜಕೀಯವಾಗಿ 2023ರಲ್ಲಿ ನ್ಯಾಯಯುತವಾಗಿರುವ ನಾಯಕ ಮುಖ್ಯಮಂತ್ರಿ ಆಗಲಿದ್ದಾರೆ. ಪ್ರಾಮಾಣಿಕವಾಗಿ ನಿಷ್ಠೆಯಿಂದ ಇರುವ ವ್ಯಕ್ತಿ ರಾಜ್ಯ ಹಾಗೂ ರಾಷ್ಟ್ರವನ್ನು ಆಳುತ್ತಾರೆ. ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್‌ನಲ್ಲಿ ನಿಷ್ಠೆಯಿಂದ ಇರುವ ನಾಯಕರಿಗೆ ರಾಜ್ಯದ ಪಟ್ಟ ಸಿಗಲಿದೆ ಎಂದು ದೇವಸ್ಥಾನದ ಧರ್ಮದರ್ಶಿ ವೆಂಕಪ್ಪಯ್ಯ ಒಡೆಯರ್ ಕಾರ್ಣಿಕ ವಿಶ್ಲೇಷಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಪ್ರಕೃತಿಯಲ್ಲಿ ಮಳೆ ಆರ್ಭಟ; ಮತೀಯ ಗಲಭೆಯಿಂದ ಸಾವು-ನೋವು ಹೆಚ್ಚಳ – ಕೋಡಿಮಠದ ಶ್ರೀ ಭವಿಷ್ಯ

    ಪ್ರಕೃತಿಯಲ್ಲಿ ಮಳೆ ಆರ್ಭಟ; ಮತೀಯ ಗಲಭೆಯಿಂದ ಸಾವು-ನೋವು ಹೆಚ್ಚಳ – ಕೋಡಿಮಠದ ಶ್ರೀ ಭವಿಷ್ಯ

    ಹಾಸನ: ರಾಜ್ಯದಲ್ಲಿ ಮಳೆಯಿಂದಾಗಿ ಹೆಚ್ಚುತ್ತಿರುವ ಹಾನಿ ಮತ್ತು ಮತೀಯ ಗಲಭೆಯಿಂದ ಉಂಟಾಗುತ್ತಿರುವ ಅಶಾಂತಿ ಬಗ್ಗೆ ಅರಸೀಕೆರೆ ತಾಲ್ಲೂಕಿನ ಶ್ರೀಕ್ಷೇತ್ರ ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.

    ಶುಭಕೃತ ನಾಮ ಸಂವತ್ಸರದ ಫಲದಲ್ಲಿ ಗುಡುಗು, ಮಿಂಚು, ಗಾಳಿ, ಮಳೆ ಹೆಚ್ಚಾಗಿ ಪ್ರಕೃತಿ ಅಲ್ಲೋಲ ಕಲ್ಲೋಲ ಆಗುತ್ತದೆ. ಬಯಲುಸೀಮೆ‌ ಮಲೆನಾಡಾಗುತ್ತದೆ, ಮಲೆನಾಡು ಬಯಲುಸೀಮೆಯಾಗಲು ಬಯಸುತ್ತದೆ. ಇದು ಹೀಗೆಯೇ ಮುಂದುವರಿಯುತ್ತದೆ. ಈ ಸಂವತ್ಸರದ ಫಲ ನೋಡಿದರೆ ಮೇಘ ಘರ್ಜಿಸೀತು, ಭೂಮಿ ತಲ್ಲಣಗೊಂಡೀತು. ಭೂಮಿ ಕಂಪಿಸುತ್ತೆ, ಗುಡ್ಡಗಳು ಕುಸಿಯುತ್ತವೆ, ಕೆರೆ ಕಟ್ಟೆಗಳು ಒಡೆದು ಹೋಗುತ್ತವೆ. ಇದು ಈ ಸಂವತ್ಸರದ ಕಡೆಯವರೆಗೂ ಇರುತ್ತೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಹತ್ಯೆಯಾದವರ ಕುಟುಂಬಗಳಿಗೆ ಪರಿಹಾರ ನೀಡುವಲ್ಲಿ ತಾರತಮ್ಯ ಮಾಡಬಾರದು: ಮಂತ್ರಾಲಯ ಶ್ರೀ

    ಮುಂಗಾರು ಮಳೆ ಕಳೆದ ಮೇಲೆ, ಹಿಂಗಾರು ಕಡಿಮೆಯಾಗುತ್ತದೆ. ಆದರೆ ಅಕಾಲಿಕ ಮಳೆಗಳು ಹೆಚ್ಚಾಗುತ್ತವೆ. ಆಶ್ವಿಜ ಕಾರ್ತಿಕದಲ್ಲಿ ದೇಶಕ್ಕೆ ಕಷ್ಟ, ಭಂಗ, ನೋವಿದೆ. ರೋಗರುಜಿನಗಳು ಹೆಚ್ಚುತ್ತವೆ. ಕಳ್ಳಕಾಕರ ಕಾಟ, ಅಪಮೃತ್ಯಗಳು, ಕೊಲೆಗಳು, ಮತೀಯ ಗಲಭೆಗಳು ಹೆಚ್ಚಾಗಿ ಅಂತಾರಾಷ್ಟ್ರೀಯ ವಿಕೋಪಕ್ಕೆ ತುತ್ತಾಗುತ್ತದೆ. ಎಲ್ಲವೂ ಇನ್ನೂ ಇದೆ, ಇನ್ನೂ‌ ಹೆಚ್ಚುತ್ತದೆ ಎಂದು ಹೇಳಿದ್ದಾರೆ.

    ರಾಜಕೀಯದಲ್ಲಿ ಕಲಹಗಳಾಗುತ್ತವೆ, ಗುಂಪುಗಳಾಗುತ್ತವೆ. ಮಳೆ ಬರುತ್ತೆ ಬೆಳೆ ಸಿಕ್ಕಲ್ಲ, ಬೆಳೆ ಬರುತ್ತೆ ಅದನ್ನು ಮಳೆ ತಿನ್ನುತ್ತದೆ. ಶುಭಕೃತ ನಾಮ ಸಂವತ್ಸದ ಫಲ ಅಶುಭವಾಗಿರುತ್ತದೆ. ಬಲಾಢ್ಯ ಪೃಥ್ವಿ ಹೆಚ್ಚುತ್ತ ಹೋಗುತ್ತದೆ. ಆಕಾಶ ಎಲ್ಲಿ ಬೇಕು ಅಲ್ಲಿ ಘರ್ಜಿಸುತ್ತೆ ಕಂಡಮಂಡಲ ಆಗುತ್ತೆ. ದೊಡ್ಡ ದೊಡ್ಡ ಪಟ್ಟಣಗಳಿಗೆ ಭಂಗವಾಗುತ್ತೆ ಎಂದು ಎಚ್ಚರಿಸಿದ್ದಾರೆ. ಇದನ್ನೂ ಓದಿ: ಭಟ್ಕಳದಲ್ಲಿ ಗುಡ್ಡ ಕುಸಿತ – ನಾಲ್ವರು ಸಾವು, ಮೂವರ ಶವ ಹೊರತೆಗೆದ ರಕ್ಷಣಾ ಸಿಬ್ಬಂದಿ

    ಮತೀಯ ಗಲಭೆ ಇನ್ನೂ ಹೆಚ್ಚಾಗುತ್ತೆ. ಸಾವು-ನೋವು ಇನ್ನೂ ಜಾಸ್ತಿ ಆಗಿ ಅಶಾಂತಿ ಉಂಟಾಗಲಿದೆ. ಕಾರ್ತಿಕ ಆಶ್ವಿಜದಲ್ಲಿ ರಾಷ್ಟ್ರ, ರಾಜ್ಯಮಟ್ಟದ ಗೊಂದಲಗಳು, ಸಾವು-ನೋವುಗಳು ಆಗುವ ಲಕ್ಷಣ ಬಹಳ ಇದೆ. ಜನ ತಲ್ಲಣಗೊಳ್ಳುತ್ತಾರೆ. ಈ ತಿಂಗಳವರೆಗೂ ಕಾದುನೋಡಿ. ಶುಭಕೃತ ನಾಮ ಸಂವತ್ಸರದಲ್ಲಿ ಶುಭ ಆಗೋದಿಲ್ಲ. ಗಾಳಿ, ಮಳೆ, ವೃಕ್ಷಗಳು ಮುರಿದು ಬೀಳುತ್ತವೆ. ವಿಪರೀತ ಮಿಂಚು ಮತ್ತು ಗಾಳಿಯಾಗುತ್ತದೆ. ಸಾವು-ನೋವು ಹೆಚ್ಚಾಗಲಿದೆ. ಜಲಾಶಯಗಳು ತುಂಬಿ ಹರಿಯುತ್ತವೆ. ಕೆಲವು ಕಡೆ ಮಳೆ ಹೋದರೆ ಸಾಕು ಅಂತಾರೆ, ಕೆಲವು ಕಡೆ ಮಳೆ ಬೇಕು ಅಂತಾರೆ ಎಂದು ಶ್ರೀಗಳು ಭವಿಷ್ಯ ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • “ಆಂಧ್ರ-ತೆಲಗು ರಾಜ್ಯಕ್ಕೆ ಕೇಡು” – ಮತ್ತೆ ನಿಜವಾಯ್ತು ಬಬಲಾದಿ ಮಠದ ಭವಿಷ್ಯ

    “ಆಂಧ್ರ-ತೆಲಗು ರಾಜ್ಯಕ್ಕೆ ಕೇಡು” – ಮತ್ತೆ ನಿಜವಾಯ್ತು ಬಬಲಾದಿ ಮಠದ ಭವಿಷ್ಯ

    ವಿಜಯಪುರ: ವಿಜಯಪುರ ಜಿಲ್ಲೆಯ ಬಬಲಾದಿ ಮಠದ ಸದಾಶಿವ ಅಜ್ಜ ನುಡಿದಿದ್ದ ಭವಿಷ್ಯ ಇದೀಗ ನಿಜವಾಗಿದೆ ಎಂದು ಭಕ್ತರು ಮಾತನಾಡಿಕೊಳ್ಳುತ್ತಿದ್ದಾರೆ.

    2021ರಲ್ಲಿ ತೆಲಗು ಮಾತನಾಡುವ ರಾಜ್ಯಕ್ಕೆ ಜಲಕಂಟಕ ಅಂದರೆ “ಆಂಧ್ರ ಪ್ರದೇಶ ರಾಜ್ಯಕ್ಕೆ ಕೇಡು” ಎಂದು ಸಿದ್ದು ಮುತ್ಯಾ ಅವರು ಹೇಳಿದ್ದರು. ಹೀಗಾಗಿ ವಾಯುಭಾರ ಕುಸಿತದಿಂದ ತಿರುಪತಿಯಲ್ಲಿ ಜಲಪ್ರಳಯ, ಸೃಷ್ಟಿಯಾಗಿದ್ದು ಬಬಲಾದಿ ಮಠದ ಶ್ರೀಗಳ ಭವಿಷ್ಯ ಸತ್ಯವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

    ಅದೇ ರೀತಿ ರಾಜ್ಯದಲ್ಲಿ ಭೂಮಿ ಕಂಪಿಸಲಿದೆ ಎಂದು ಶ್ರೀಗಳು ತಿಳಿಸಿದ್ದರು. ಅದರಂತೆ ಕಳೆದ ಎರಡು ತಿಂಗಳಿಂದ ಜಿಲ್ಲೆಯಲ್ಲಿ ಭೂಮಿ ಕಂಪಿಸುತ್ತಿದೆ. ಈ ಮೂಲಕ ಬಬಲಾದಿ ಮಠದ ಸದಾಶಿವ ಅಜ್ಜನ ಭವಿಷ್ಯ ನಿಜವಾಯ್ತು ಎನ್ನಲಾಗುತ್ತಿದೆ. ಸದ್ಯ 2021ರ ಶಿವರಾತ್ರಿಯ ದಿನ ಸಿದ್ದು ಮುತ್ಯಾ ನುಡಿದ ಭವಿಷ್ಯದ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ: ಭಾರತ-ಮ್ಯಾನ್ಮಾರ್ ಗಡಿಯಲ್ಲಿ 6.1 ತೀವ್ರತೆಯ ಭೂಕಂಪ

    500 ವರ್ಷಗಳ ಹಿಂದೆ ಚಿಕ್ಕಯ್ಯಪ್ಪನವರು ಬರೆದಿಟ್ಟಿರುವ ಕಾಲಜ್ಞಾನವನ್ನು ಪ್ರತಿ ವರ್ಷ ಶಿವರಾತ್ರಿಯಂದು ಓದಲಾಗುತ್ತದೆ. ರಾಜ್ಯದಲ್ಲೇ ಬಬಲಾದಿ ಮಠ ಅತ್ಯಂತ ವಿಶಿಷ್ಟವಾಗಿದ್ದು, ಇಲ್ಲಿಗೆ ಬರುವ ಭಕ್ತರಿಗೆ ಮದ್ಯವನ್ನು ಪ್ರಸಾದ ರೂಪದಲ್ಲಿ ನೀಡಲಾಗುತ್ತದೆ ಮತ್ತು ಭಕ್ತರು ಸಹ ಮದ್ಯವನ್ನೇ ನೈವೇದ್ಯಕ್ಕಾಗಿ ತರುತ್ತಾರೆ. ಇದನ್ನೂ ಓದಿ:  ಭಾರತದಲ್ಲಿ ಜನಸಂಖ್ಯಾ ಪ್ರಮಾಣ ಕುಸಿತ – ಗಂಡು ಮಕ್ಕಳಿಗಿಂತ ಹೆಣ್ಮಕ್ಕಳ ಜನನ ಅಧಿಕ

  • ಸರ್ಕಾರ ಉಳಿವಿಗೆ ಸಚಿವ ರೇವಣ್ಣ ಪ್ರಯತ್ನ ಅವಶ್ಯ- ವಿಠ್ಠಲ್ ಭಟ್ ಭವಿಷ್ಯ

    ಸರ್ಕಾರ ಉಳಿವಿಗೆ ಸಚಿವ ರೇವಣ್ಣ ಪ್ರಯತ್ನ ಅವಶ್ಯ- ವಿಠ್ಠಲ್ ಭಟ್ ಭವಿಷ್ಯ

    – ಬಿಎಸ್‍ವೈ, ಸಿದ್ದರಾಮಯ್ಯಗೆ ಗುರುಬಲ ಇಲ್ಲರುವುದಕ್ಕೆ ಸಿಎಂ ಸೇಫ್

    ಬೆಂಗಳೂರು: ಮೈತ್ರಿ ಸರ್ಕಾರದ ಉಳಿವಿಗಾಗಿ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣರ ಪ್ರಯತ್ನ ಬಹು ಅವಶ್ಯಕವಾಗಿದೆ ಎಂದು ಆಚಾರ್ಯ ವಿಠ್ಠಲ್ ಭಟ್ ಭವಿಷ್ಯ ನುಡಿದಿದ್ದಾರೆ.

    ನಗರದಲ್ಲಿ ಮಾತನಾಡಿದ ಅವರು, ರೇವಣ್ಣ ಅವರಿಗೆ ಮಾತ್ರ ಗುರುಬಲ ಉತ್ತಮವಾಗಿದೆ. ಹೀಗಾಗಿ ಸರ್ಕಾರದ ರಕ್ಷಣೆಯಲ್ಲಿ ಅವರ ಪಾತ್ರ ಪ್ರಮುಖವಾಗಿದೆ. ಸಚಿವರು ಸರ್ಕಾರ ರಕ್ಷಿಸುವ ಪ್ರಯತ್ನ ಮಾಡುತ್ತಿಲ್ಲ. ಒಂದು ವೇಳೆ ಪ್ರಯತ್ನಕ್ಕೆ ಮುಂದಾದರೆ ಯಾವುದೇ ಕಾರಣಕ್ಕೂ ಸರ್ಕಾರ ಬೀಳುವುದಿಲ್ಲ ಎಂದು ಭವಿಷ್ಯ ನುಡಿದಿದ್ದಾರೆ.

    ಸಿಎಂ ಕುಮಾರಸ್ವಾಮಿ ಅವರಿಗೆ ಈ ವರ್ಷದ ನವೆಂಬರ್ ವರೆಗೂ ಗುರುಬಲವಿಲ್ಲ. ಇತ್ತ ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೂ ಗುರುಬಲವಿಲ್ಲ. ಇದರಿಂದಾಗಿ ಕುಮಾರಸ್ವಾಮಿ ಅವರ ಸಿಎಂ ಸ್ಥಾನ ಭದ್ರವಾಗಿದೆ. ಒಂದು ವೇಳೆ ಇಬ್ಬರಲ್ಲಿ ಯಾರಿಗಾದರೂ ಗುರುಬಲ ಸಿಕ್ಕಿದ್ದರೆ ಸರ್ಕಾರ ಇಷ್ಟೋತ್ತಿಗೆ ಬಿದ್ದು ಹೋಗುತ್ತಿತ್ತು. ಸದ್ಯದ ಬೆಳವಣಿಗೆ ಪ್ರಕಾರ ರಾಜ್ಯ ದೋಸ್ತಿ ಸರ್ಕಾರಕ್ಕೆ ಯಾವುದೇ ತೊಂದರೆಯಿಲ್ಲ ಎಂದು ನುಡಿದರು.

    ಬಿ.ಎಸ್.ಯಡಿಯೂರಪ್ಪ ಹಾಗೂ ಸಿದ್ದರಾಮಯ್ಯ ಅವರಿಗೆ ಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತುಕೊಳ್ಳುವ ಯೋಗ ಕೂಡಿಬಂದಿಲ್ಲ. ಈ ಯೋಗ ಕೂಡಿ ಬರಲು ಹೆಚ್ಚು ಕಾಲ ಬೇಕಾಗುತ್ತದೆ. ಇದೇ ಕುಮಾರಸ್ವಾಮಿ ಅವರಿಗೆ ಇರುವ ಪ್ಲಸ್ ಪಾಯಿಂಟ್. ಜೊತೆಗೆ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಮಾಡಿಸುತ್ತಿರುವುದು ಕೂಡ ಅವರ ಸ್ಥಾನಕ್ಕೆ ಭದ್ರತೆ ಒದಗಿಸಿದೆ. ಆದರೆ ಅವರ ಈಗಿನ ಪರಿಸ್ಥಿತಿ ಅಷ್ಟು ಉತ್ತಮವಾಗಿಲ್ಲ. ಕುಮಾರಸ್ವಾಮಿ ಅವರು ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು ಎಂದು ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಮ್ಮಿಶ್ರ ಸರ್ಕಾರಕ್ಕೆ ಸಹೋದರರಿಂದ ಕಂಟಕ: ಕೋಡಿ ಶ್ರೀ ಭವಿಷ್ಯ

    ಸಮ್ಮಿಶ್ರ ಸರ್ಕಾರಕ್ಕೆ ಸಹೋದರರಿಂದ ಕಂಟಕ: ಕೋಡಿ ಶ್ರೀ ಭವಿಷ್ಯ

    ಹಾಸನ: ಕಾಂಗ್ರೆಸ್ ಹಾಗೂ ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರ್ಕಾರಕ್ಕೆ ಸಹೋದರರಿಂದ ಕಂಟಕ ಇದೆ ಎಂದು ಕೋಡಿ ಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮಿಗಳು ಭವಿಷ್ಯ ನುಡಿದಿದ್ದಾರೆ.

    ತಾಳೆಗರಿ ಮೂಲಕ ಭವಿಷ್ಯ ನುಡಿಯುವ ಶ್ರೀಗಳು ಬುಧವಾರ ಅರಸೀಕೆರೆ ತಾಲೂಕಿನ ಮಾಡಾಳು ಗ್ರಾಮದಲ್ಲಿ ಮಾತನಾಡಿ, ರಾಜ್ಯ ಸರ್ಕಾರಕ್ಕೆ ಸಹೋದರರಿಂದ ಕಂಟಕವಿದ್ದು, ನವೆಂಬರ್ ತಿಂಗಳವರೆಗೂ ರಾಜಕೀಯ ಪರಿಸ್ಥಿತಿ ಡೋಲಾಯಮಾನವಾಗಿರುತ್ತದೆ. ಬೆಳಗಾವಿ ಸಹೋದರರಂತೆ ಅಧಿಕಾರಕ್ಕಾಗಿ ಮತ್ತೋರ್ವ ಅಣ್ಣ ಹುಟ್ಟಿಕೊಳ್ಳುತ್ತಾನೆ ನೋಡುತ್ತಿರಿ ಎಂದು ಹೇಳಿದ್ದಾರೆ.

    ದೇಶದಲ್ಲಿ ಪ್ರಾಕೃತಿಕ ವಿಕೋಪಗಳು ಇನ್ನೂ ಹೆಚ್ಚಾಗಲಿವೆ. ಭೂ-ಕಂಪನದ ಹೊಡೆತಕ್ಕೆ ದೊಡ್ಡ ದೊಡ್ಡ ನಗರಗಳು ತತ್ತರಿಸುತ್ತವೆ. ಸಾವು-ನೋವುಗಳ ಸರಣಿ ಹೆಚ್ಚಾಗಲಿದೆ. ರಾಜ್ಯದಲ್ಲಿಯೂ ಮಳೆಯ ಆರ್ಭಟ ಮುಂದವರಿಯಲಿದೆ ಎಂದು ಭವಿಷ್ಯ ನುಡಿದರು.

    ಈ ಮೊದಲು ಖಗ್ರಾಸ ಚಂದ್ರಗ್ರಹಣದ ವೇಳೆ `ಅರಸನ ಆಯಸ್ಸು ಉಸಿರಲ್ಲಿ ನಿಂತೀತು, ಪರಸಕ್ಕೆ ಭಂಗ ಪ್ರಸಂಗಕ್ಕೆ ಹಾನಿ, ಭ್ರಾತೃ ಬೆಂಕಿ ಹಿಡಿದಾನು. ರಾಜಕೀಯ ವಿಪ್ಲವವಾಗಲಿದೆ’ ಎಂದು ಒಗಟಾಗಿ ತಿಳಿಸಿದ್ದರು. ಅಂದರೆ `ಸಹೋದರ ಬೆಂಕಿ ಹಿಡಿದಾನು ಎಂದರೆ ಸಿಎಂ ಎಚ್.ಡಿ.ಕುಮಾರಸ್ವಾಮಿಯವರ ಸಹೋದರ ಎಚ್.ಡಿ.ರೇವಣ್ಣ ಮುಖ್ಯಮಂತ್ರಿಯಾಗಲಿದ್ದಾರಾ ಎನ್ನುವ ವಿಶ್ಲೇಷಣೆ ಕೇಳಿಬಂದಿತ್ತು. ಅಲ್ಲದೇ ಪ್ರಾಕೃತಿಕ ಸಂಪನ್ಮೂಲಗಳು ನಾಶವಾಗಲಿದ್ದು, ಮುಂದಿನ ದಿನಗಳಲ್ಲಿ ಭೂಕಂಪನವಾಗಲಿದೆ. ಇನ್ನೂ ಹೆಚ್ಚು ಮಳೆಯಾಗಲಿದ್ದು, ಬರುವ ವಿಶೇಷ ದಿನಗಳು ಕಷ್ಟಕರವಾಗಲಿದೆ ಎಂದು ಭವಿಷ್ಯ ನುಡಿದಿದ್ದರು. ಇದನ್ನೂ ಓದಿ: ಗ್ರಹಣದಿಂದಾಗಿ ರಾಜ್ಯ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ: ಕೋಡಿ ಶ್ರೀ ಭವಿಷ್ಯ

    ಶ್ರೀಗಳ ಭವಿಷ್ಯದಂತೆ ದೇಶದಲ್ಲಿ ಮಳೆಯ ರೌದ್ರನರ್ತನ ಹೆಚ್ಚಾಗಿ ಅನೇಕ ಸಾವು-ನೋವುಗಳು ಸಂಭವಿಸಿದ್ದವು. ರಾಜ್ಯದಲ್ಲಿಯೂ ಸಹ ಕಂಡು ಕೇಳರಿಯದ ಭೀಕರ ಮಳೆಗೆ ಕೊಡುಗು ಜಿಲ್ಲೆ ತತ್ತರಿಸಿ ಹೋಗಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸಿಎಂ ಯಾರಾಗ್ತಾರೆ ಅನ್ನೋ ನಿರ್ಧಾರ ಮಾಡೋದು ಎಚ್‍ಡಿಡಿ: ಶಾ ನಿವಾಸದ ಮುಂದೆ ಜ್ಯೋತಿಷಿ ಭವಿಷ್ಯ

    ಸಿಎಂ ಯಾರಾಗ್ತಾರೆ ಅನ್ನೋ ನಿರ್ಧಾರ ಮಾಡೋದು ಎಚ್‍ಡಿಡಿ: ಶಾ ನಿವಾಸದ ಮುಂದೆ ಜ್ಯೋತಿಷಿ ಭವಿಷ್ಯ

    ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸಾಕಷ್ಟು ಪ್ರಯತ್ನಪಟ್ಟರೆ ಮಾತ್ರ ಸರಳ ಬಹುಮತಗಳಿಸುತ್ತದೆ. ಇಲ್ಲವಾದರೆ ರಾಜ್ಯದಲ್ಲಿ ಸಿಎಂ ಪಟ್ಟ ಯಾರಿಗೆ ಅನ್ನೋದು ದೇವೇಗೌಡರ ಕೈಯಲ್ಲಿರುತ್ತದೆ ಎಂದು ಜ್ಯೋತಿಷಿಯೊಬ್ಬರು ಭವಿಷ್ಯ ನುಡಿದಿದ್ದಾರೆ.

    ಚುನಾವಣೆಯ ಕುರಿತಂತೆ ಭವಿಷ್ಯ ತಿಳಿಸಲು ಶಿರಸಿಯ ಶ್ರೀಕಾಂತ್ ಭಟ್ ಎಂಬವರು ಅಮಿತ್ ಶಾ ಅವರ ನಿವಾಸದ ಬಳಿ ಆಗಮಿಸಿದ್ದರು. ಈ ವೇಳೆ ಭದ್ರತಾ ಸಿಬ್ಬಂದಿ ಮನೆ ಒಳ ಪ್ರವೇಶಿಸಲು ಅನುಮತಿ ನಿರಾಕರಿಸಿದ್ದರು. ಹೀಗಾಗಿ ಅಮಿತ್ ಶಾ ಮನೆಯ ಮುಂದೆ ನಿಂತು ಮಾಧ್ಯಮಗಳ ಜೊತೆ ತನ್ನ ಭವಿಷ್ಯವಾಣಿಯನ್ನು ಹೇಳಿದರು.

    ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲಿ ಯಾವುದೇ ಸರ್ಕಾರ ಬಹುಮತ ಪಡೆಯುವುದಿಲ್ಲ. ಆದರೆ ಪ್ರಯತ್ನಪಟ್ಟರೆ ಬಿಜೆಪಿಗೆ ಬಹುಮತ ಬರಬಹುದು. ಬಿಜೆಪಿಯಲ್ಲಿ 2, 3 ಸಾವಿರ ಮತಗಳ ಅಂತರದಲ್ಲಿ ಸೋಲುವ ಅಭ್ಯರ್ಥಿಗಳು ಇದ್ದಾರೆ. ಅವರ ಕುರಿತು ತಾನು ಮಾಹಿತಿ ನೀಡುವುದಾಗಿ ತಿಳಿಸಿದ್ದಾರೆ.

    ಬಿಜೆಪಿ ನಾಯಕರು ಪಕ್ಷದಲ್ಲಿನ ಈ ತಪ್ಪುಗಳನ್ನು ಸರಿಪಡಿಸಿಕೊಂಡಿಲ್ಲ ಎಂದರೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್‍ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗುತ್ತಾರೆ. ರಾಜ್ಯದಲ್ಲಿ ಯಾರು ಮುಖ್ಯಮಂತ್ರಿ ಆಗಬೇಕು ಎಂಬುವುದನ್ನು ಮಾಜಿ ಪ್ರಧಾನಿ ದೇವೇಗೌಡ ಅವರು ನಿರ್ಧರಿಸುತ್ತಾರೆ.

    ಅತಂತ್ರ ಸರ್ಕಾರ ಬಂದರೆ ಸಿದ್ದರಾಮಯ್ಯ ಹಾಗೂ ಬಿಎಸ್ ಯಡಿಯೂರಪ್ಪ ಅವರು ಮತ್ತೆ ಸಿಎಂ ಆಗಲು ಸಾಧ್ಯವಿಲ್ಲ. ಇನ್ನು ಹೆಚ್‍ಡಿ ರೇವಣ್ಣಗೆ ಸಿಎಂ ಆಗುವ ಅದೃಷ್ಟ ಇಲ್ಲದಿದ್ದರೂ, ಡಿಸಿಎಂ ಆಗುತ್ತಾರೆ ಎಂದು ಹೇಳಿದ್ದಾರೆ.