Tag: preamble

  • ಸಂವಿಧಾನದ ಪೀಠಿಕೆ ರಾಷ್ಟ್ರದ ಆತ್ಮ, ತಿದ್ದುಪಡಿಯಿಂದ ಸಂವಿಧಾನದ ಆಶಯಕ್ಕೆ ಧಕ್ಕೆಯಾಗಿದೆ: ಜಗದೀಪ್ ಧನ್ಕರ್ ಕಳವಳ

    ಸಂವಿಧಾನದ ಪೀಠಿಕೆ ರಾಷ್ಟ್ರದ ಆತ್ಮ, ತಿದ್ದುಪಡಿಯಿಂದ ಸಂವಿಧಾನದ ಆಶಯಕ್ಕೆ ಧಕ್ಕೆಯಾಗಿದೆ: ಜಗದೀಪ್ ಧನ್ಕರ್ ಕಳವಳ

    ನವದೆಹಲಿ: ಭಾರತದ ಸಂವಿಧಾನದ ಪೀಠಿಕೆ (Preamble) ರಾಷ್ಟ್ರದ ಆತ್ಮವಾಗಿದ್ದು, ಇದನ್ನು ಬದಲಾಯಿಸುವುದು ಅಥವಾ ತಿದ್ದುಪಡಿ ಮಾಡುವುದು ಸಂವಿಧಾನದ ಮೂಲ ಆಶಯಕ್ಕೆ ಧಕ್ಕೆ ತಂದಂತೆ ಎಂದು ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ತೀವ್ರವಾಗಿ ಹೇಳಿದ್ದಾರೆ.

    ಕರ್ನಾಟಕದ ಮಾಜಿ ಪರಿಷತ್ ಸದಸ್ಯ ಡಿ.ಎಸ್ ವೀರಯ್ಯ ಅವರು ಸಂಕಲಿಸಿದ ‘ಅಂಬೇಡ್ಕರ್‌ರ ಸಂದೇಶಗಳು’ ಎಂಬ ಪುಸ್ತಕದ ಮೊದಲ ಪ್ರತಿಯನ್ನು ಸ್ವೀಕರಿಸುವ ಸಂದರ್ಭದಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿದರು. ಇದನ್ನೂ ಓದಿ: ಆಪರೇಷನ್ ಸಿಂಧೂರ ವೇಳೆ S-400 ಯಶಸ್ವಿ ಕಾರ್ಯಾಚರಣೆ; S-500 ರಕ್ಷಣಾ ವ್ಯವಸ್ಥೆ ಖರೀದಿಗೂ ಆಸಕ್ತಿ ತೋರಿದ ಭಾರತ

    ಬಳಿಕ ಮಾತನಾಡಿದ ಅವರು, 1976ರ 42ನೇ ಸಂವಿಧಾನ ತಿದ್ದುಪಡಿಯ ಮೂಲಕ ಪೀಠಿಕೆಗೆ ‘ಸಮಾಜವಾದ’, ‘ಜಾತ್ಯತೀತ’ ಮತ್ತು ‘ಸಮಗ್ರತೆ’ ಎಂಬ ಪದಗಳನ್ನು ಸೇರಿಸಿದ್ದನ್ನು ತೀವ್ರವಾಗಿ ವಿರೋಧಿಸಿದರು. ಪೀಠಿಕೆಯು ಸಂವಿಧಾನದ ಬೀಜವಾಗಿದ್ದು, ಇದನ್ನು ಬದಲಾಯಿಸಲು ಸಾಧ್ಯವಿಲ್ಲ. ಆದರೆ, 1975ರ ಜೂನ್ 25ರಂದು ಘೋಷಿತವಾದ ತುರ್ತು ಪರಿಸ್ಥಿತಿಯ ಶಾಸನಬಾಹಿರ ಕಾಲದಲ್ಲಿ, ಜನತೆಯ ಮೂಲಭೂತ ಹಕ್ಕುಗಳನ್ನು ಕಸಿದುಕೊಂಡು, ಜನರನ್ನು ಸೆರೆಯಲ್ಲಿಟ್ಟು, ಈ ಬದಲಾವಣೆಯನ್ನು ಮಾಡಲಾಗಿದೆ. ಇದು ಸಂವಿಧಾನದ ಆತ್ಮಕ್ಕೆ ಮಾಡಿದ ಅವಮಾನವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಆರ್‌ಎಸ್‌ಎಸ್ ಪ್ರ.ಕಾರ್ಯದರ್ಶಿ ಹೊಸಬಾಳೆ ಹೇಳಿಕೆ ಸಮಂಜಸವಲ್ಲ: ಪರಂ

    ಭಾರತವನ್ನು ಹೊರತುಪಡಿಸಿ, ವಿಶ್ವದ ಯಾವುದೇ ರಾಷ್ಟ್ರದ ಸಂವಿಧಾನದ ಪೀಠಿಕೆಯನ್ನು ಬದಲಾಯಿಸಿಲ್ಲ. ಆದರೆ, ಭಾರತದಲ್ಲಿ ಇದನ್ನು ತುರ್ತು ಪರಿಸ್ಥಿತಿಯ ಅವಧಿಯಲ್ಲಿ ಮಾಡಲಾಗಿದೆ. ಇದು ಸನಾತನ ಸಂಸ್ಕೃತಿಯ ಸ್ಫೂರ್ತಿಗೆ ಮಾಡಿದ ದ್ರೋಹವಾಗಿದೆ. ಈ ಪದಗಳ ಸೇರ್ಪಡೆ ಮೂಲಕ ಸಂವಿಧಾನದ ರಚನಾಕಾರರ ಚಿಂತನೆಯನ್ನು ಅವಮಾನಿಸಿದೆ ಎಂದು ತಿಳಿಸಿದರು. ಇದನ್ನೂ ಓದಿ: 5 ಹುಲಿಗಳ ಸಾವು ಕೇಸ್ – ಮೃತ ಹಸು ಮಾಲೀಕ ಸೇರಿ ಮೂವರ ಬಂಧನ

    ಕೇಶವಾನಂದ ಭಾರತಿ ವರ್ಸಸ್ ಕೇರಳ ರಾಜ್ಯ (1973) ಮತ್ತು ಐಸಿ ಗೋಲಕ್‌ನಾಥ್ ವರ್ಸಸ್ ಪಂಜಾಬ್ ರಾಜ್ಯ ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್ನ 13 ಮತ್ತು 11 ನ್ಯಾಯಾಧೀಶರ ತೀರ್ಪುಗಾರರ ಸಂಯೋಜನೆಯ ತೀರ್ಪುಗಳನ್ನು ಉಲ್ಲೇಖಿಸಿದ ಧನ್ಕರ್, ನ್ಯಾಯಮೂರ್ತಿ ಹೆಚ್‌ಆರ್ ಖನ್ನಾ, ನ್ಯಾಯಮೂರ್ತಿ ಸಿಕ್ರಿ, ನ್ಯಾಯಮೂರ್ತಿ ಹಿದಾಯತುಲ್ಲಾ, ನ್ಯಾಯಮೂರ್ತಿ ಹೆಗ್ಡೆ, ನ್ಯಾಯಮೂರ್ತಿ ಮುಖರ್ಜಿ, ನ್ಯಾಯಮೂರ್ತಿ ಶೆಲತ್ ಮತ್ತು ನ್ಯಾಯಮೂರ್ತಿ ಗ್ರೋವರ್ ಅವರಂತಹ ದಿಗ್ಗಜರು ಪೀಠಿಕೆಯು ಸಂವಿಧಾನದ ಆತ್ಮವಾಗಿದ್ದು, ಇದು ಬದಲಾಯಿಸಲಾಗದು ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ ಎಂದರು. ಇದನ್ನೂ ಓದಿ: ಸಿದ್ದರಾಮಯ್ಯ ಇಲ್ಲದಿದ್ರೆ ರಾಜಕೀಯ ಬಿಡ್ತೀನಿ: ರಾಜಣ್ಣ

    ಡಾ.ಬಿಆರ್ ಅಂಬೇಡ್ಕರ್ ಅವರನ್ನು ಸ್ಮರಿಸಿದ ಉಪರಾಷ್ಟ್ರಪತಿಗಳು, ಅಂಬೇಡ್ಕರ್ ಅವರು ರಾಷ್ಟ್ರದ ಹೃದಯದಲ್ಲಿ, ಮನಸ್ಸಿನಲ್ಲಿ ಮತ್ತು ಆತ್ಮದಲ್ಲಿ ಜೀವಂತವಾಗಿದ್ದಾರೆ. ಅವರ ಸಂದೇಶಗಳು ಇಂದಿಗೂ ಸಮಕಾಲೀನ ಪ್ರಸ್ತುತತೆಯನ್ನು ಹೊಂದಿವೆ. ಈ ಸಂದೇಶಗಳನ್ನು ಪ್ರತಿಯೊಬ್ಬ ಭಾರತೀಯನೂ, ವಿಶೇಷವಾಗಿ ಸಂಸದೀಯರು ಮತ್ತು ಶಾಸಕರು ಗೌರವಿಸಬೇಕು ಎಂದು ಕರೆ ನೀಡಿದರು. ಅಂಬೇಡ್ಕರ್ ಅವರ ಕೊನೆಯ ಭಾಷಣವನ್ನು ಉಲ್ಲೇಖಿಸಿ, ದೇಶವನ್ನು ಧರ್ಮ, ಸಂಸ್ಕೃತಿ ಅಥವಾ ಭಾಷೆಯ ಆಧಾರದಲ್ಲಿ ವಿಭಜಿಸದೆ, ಎಲ್ಲರೂ ಭಾರತೀಯರಾಗಿ ಒಗ್ಗೂಡಬೇಕು. ಒಡಕುಗಳಿಂದ ದೇಶದ ಸ್ವಾತಂತ್ರ‍್ಯಕ್ಕೆ ಧಕ್ಕೆ ಬರಬಹುದು ಎಂದು ಎಚ್ಚರಿಕೆಯನ್ನು ನೆನಪಿಸಿದರು. ಇದನ್ನೂ ಓದಿ: ಬಾಲಿವುಡ್ ನಟಿ ಶೆಫಾಲಿ ಸಾವು – ಮುಂಬೈ ಪೊಲೀಸರು ಹೇಳಿದ್ದೇನು?

    ನಾವು ದೇಶದ ಐಕ್ಯತೆ ಮತ್ತು ಸಮಗ್ರತೆಗಾಗಿ ಕೊನೆಯ ಹನಿ ರಕ್ತದವರೆಗೂ ಹೋರಾಡಬೇಕು ಎಂದು ಡಾ. ಅಂಬೇಡ್ಕರ್‌ರ ಮಾತುಗಳನ್ನು ಉಲ್ಲೇಖಿಸಿದ ಧನ್ಕರ್, ಈ ಸಂದೇಶವನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ಕೋಡಿಮಠ ಸ್ವಾಮೀಜಿ ಚಿನ್ನಾಭರಣ ಕಳ್ಳತನ; 7 ವರ್ಷಗಳ ಬಳಿಕ ಆರೋಪಿ ಬಂಧನ

  • ಇನ್ಮುಂದೆ ಶಾಲೆಗಳಲ್ಲಿ ಪ್ರಾರ್ಥನೆಯ ಬಳಿಕ ಸಂವಿಧಾನ ಪ್ರಸ್ತಾವನೆ ವಾಚನ ಕಡ್ಡಾಯ

    ಇನ್ಮುಂದೆ ಶಾಲೆಗಳಲ್ಲಿ ಪ್ರಾರ್ಥನೆಯ ಬಳಿಕ ಸಂವಿಧಾನ ಪ್ರಸ್ತಾವನೆ ವಾಚನ ಕಡ್ಡಾಯ

    ಬೆಂಗಳೂರು: ಭಾರತದ ಸಂವಿಧಾನದ ಮಹತ್ವ ಕುರಿತು ಶಾಲಾ ಹಂತದಲ್ಲೇ ಮಕ್ಕಳಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇರಿಸಿದೆ. ಶಾಲೆಗಳಲ್ಲಿ ಪ್ರತಿನಿತ್ಯ ಪ್ರಾರ್ಥನೆಯ ಅವಧಿಯಲ್ಲಿ ಸಂವಿಧಾನದ ಪ್ರಸ್ತಾವನೆಯ ವಾಚನವನ್ನು ಕಡ್ಡಾಯಗೊಳಿಸಿ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.

    ಸಂವಿಧಾನದ ಪ್ರಸ್ತಾವನೆಯನ್ನು ಓದಿ ಹೇಳುವ ಮತ್ತು ಉಪಸ್ಥಿತರೆಲ್ಲರೂ ಪುನರ್ ಉಚ್ಚರಿಸುವ ವ್ಯವಸ್ಥೆಯನ್ನು ಜಾರಿ ಮಾಡಲಾಗಿದೆ. ಶಾಲಾ ವ್ಯಾಪ್ತಿಯಲ್ಲಿರುವ ಸಂವಿಧಾನ ತಜ್ಞರನ್ನು ಶಾಲೆಗೆ ಆಹ್ವಾನಿಸಿ ಅವರಿಂದ ವಿಶೇಷ ಉಪನ್ಯಾಸವನ್ನು ಏರ್ಪಡಿಸುವ ಮೂಲಕ ಮಕ್ಕಳಲ್ಲಿ ಸಂವಿಧಾನದ ಬಗ್ಗೆ ಅರಿವು ಮೂಡಿಸುವ ಬಗ್ಗೆ ಕ್ರಮ ಕೈಗೊಳ್ಳಲು ಸಹ ಸರ್ಕಾರ ಸೂಚಿಸಿದೆ.

    ನವೆಂಬರ್ 26 ರಂದು ಪ್ರತಿವರ್ಷ ಸಂವಿಧಾನದ ದಿನಾಚರಣೆ ಆಚರಿಸಲು ಸರಕಾರ ಈಗಾಗಲೇ ಆದೇಶ ಹೊರಡಿಸಿದೆ. ಇದರ ಮುಂದುವರಿದ ಭಾಗವಾಗಿ ಈಗ ಶಾಲೆಗಳಲ್ಲಿ ಸಂವಿಧಾನದ ಪೀಠಿಕೆಯನ್ನೂ ವಾಚಿಸಲು ಆದೇಶಿಸಲಾಗಿದೆ. ಆ ಮೂಲಕ ಮಕ್ಕಳಲ್ಲಿ ಸಂವಿಧಾನದ ಮಹತ್ವ ಅರಿವಿಗೆ ಬರಲಿ ಎನ್ನುವುದು ಸರ್ಕಾರದ ಆಶಯವಾಗಿದೆ.

    ಪ್ರಸ್ತಾವನೆಯಲ್ಲಿ ಏನಿದೆ?
    “ಭಾರತದ ಪ್ರಜೆಗಳಾದ ನಾವು ಭಾರತವನ್ನು ಒಂದು ಸಾರ್ವಭೌಮ, ಪ್ರಜಾಸತ್ತಾತ್ಮಕ, ಸಮಾಜವಾದಿ, ಜಾತ್ಯತೀತ, ಗಣರಾಜ್ಯವನ್ನಾಗಿ ನಿರ್ಮಿಸುವ ಸಲುವಾಗಿ ಮತ್ತು ಭಾರತದ ಸಮಸ್ತ ಪ್ರಜೆಗಳಿಗೆ, ಸಾಮಾಜಿಕ, ಆರ್ಥಿಕ, ರಾಜಕೀಯ ನ್ಯಾಯ ದೊರಕುವಂತೆಯೂ ವಿಚಾರ, ಅಭಿವ್ಯಕ್ತಿ, ನಂಬಿಕೆ, ಧರ್ಮ, ಮತ್ತು ಉಪಾಸನೆಗಳ ಸ್ವಾತಂತ್ರ್ಯ ದೊರಕುವಂತೆ ಮಾಡುವುದು, ಅಂತಸ್ತು ಮತ್ತು ಅವಕಾಶದಲ್ಲಿ ಸಮಾನತೆಯನ್ನು ಸಾಧಿಸುವ ಹಾಗೂ ಎಲ್ಲರಿಗೂ ವ್ಯಕ್ತಿ ಗೌರವ ದೊರಕಿ ರಾಷ್ಟ್ರದ ಐಕ್ಯತೆ ಮತ್ತು ಸಮಗ್ರತೆ ಇವುಗಳನ್ನು ವೃದ್ಧಿಗೊಳಿಸಿ, ಭ್ರಾತೃ ಭಾವನೆಯನ್ನು ಎಲ್ಲರಲ್ಲೂ ಬೆಳೆಸಲು ದೃಢ ಸಂಕಲ್ಪ ಮಾಡಿ ಈ ದಿನ ಅಂದರೆ ನವೆಂಬರ್ 26, 1949ರಂದು ಈ ಸಂವಿಧಾನವನ್ನು ಅಂಗೀಕರಿಸಿ ಶಾಸನ ಮಾಡಿ ನಮಗೆ ನಾವೇ ಅರ್ಪಿಸಿಕೊಂಡಿದ್ದೇವೆ”