Tag: Pre Wedding Shoot

  • ಕಾಶ್ಮೀರದಲ್ಲಿ ಅದ್ಧೂರಿ ಪ್ರಿ ವೆಡ್ಡಿಂಗ್‌ ಶೂಟ್‌ ಮಾಡಿಸಿದ್ದ ಕೃತಿಕಾ, ಮಹೇಂದ್ರ

    ಕಾಶ್ಮೀರದಲ್ಲಿ ಅದ್ಧೂರಿ ಪ್ರಿ ವೆಡ್ಡಿಂಗ್‌ ಶೂಟ್‌ ಮಾಡಿಸಿದ್ದ ಕೃತಿಕಾ, ಮಹೇಂದ್ರ

    ಬೆಂಗಳೂರು: ಕೃತಿಕಾ ರೆಡ್ಡಿ (Krutkia Reddy) ಹಾಗೂ ಮಹೇಂದ್ರ ರೆಡ್ಡಿ (Mahendra Reddy) ವಿವಾಹಕ್ಕೂ ಮುನ್ನ ಕಾಶ್ಮೀರದಲ್ಲಿ ಪ್ರಿ ವೆಡ್ಡಿಂಗ್‌ ಶೂಟ್‌ (Pre Wedding Shoot) ಮಾಡಿಸಿದ್ದರು.

    ಮೇ 26, 2024 ರಲ್ಲಿ ಇವರಿಬ್ಬರ ವಿವಾಹ ಅದ್ದೂರಿಯಾಗಿ ನಡೆದಿತ್ತು. ಮದುವೆ ಮುನ್ನ ಫೆಬ್ರವರಿಯಲ್ಲಿ ಇವರಿಬ್ಬರು ಸಿನಿಮಾದ ನಾಯಕ, ನಾಯಕಿಯರಂತೆ ಪ್ರಿ-ವೆಡ್ಡಿಂಗ್ ಶೂಟ್ ಮಾಡಿಸಿದ್ದರು.

    ಪ್ರಿವೆಡ್ಡಿಂಗ್‌ ಶೂಟ್‌ಗಾಗಿ ಇವರಿಬ್ಬರು ಕಾಶ್ಮೀರದ ದಾಲ್‌ ಲೇಕ್‌, ಸೋನಮಾರ್ಗ್, ಗುಲ್ಮಾರ್ಗ್, ಡ್ರಂಗ್‌ ವಾಟರ್‌ಫಾಲ್‌, ಶಂಕರ ಆಚಾರ್ಯ ದೇವಸ್ಥಾನ , ದರ್ಗಾ ಹಜರತ್ಬಾಲ್‌ನಲ್ಲಿ ಶೂಟ್‌ ಮಾಡಲಾಗಿತ್ತು. ಇದನ್ನೂ ಓದಿ:  ಪತಿಯಿಂದ ವೈದ್ಯೆ ಹತ್ಯೆ; ಮಗಳಿಗಾಗಿ ಕಟ್ಟಿಸಿದ್ದ 4 ಕೋಟಿ ರೂ. ಮನೆ ಇಸ್ಕಾನ್‌ಗೆ ದಾನ ಮಾಡಿದ ತಂದೆ

     

    ಏನಿದು ಪ್ರಕರಣ?
    ಅನಸ್ತೇಶಿಯಾ ಕೊಟ್ಟು ವೈದ್ಯ ಪತ್ನಿಯನ್ನೇ ವೈದ್ಯ ಪತಿ ಮರ್ಡರ್ ಮಾಡಿದ ಘಟನೆ 6 ತಿಂಗಳ ಬಳಿಕ ಬೆಳಕಿಗೆ ಬಂದಿದೆ. 11 ತಿಂಗಳ ಹಿಂದೆ ಡಾ.ಕೃತಿಕಾ ರೆಡ್ಡಿ-ಡಾ.ಮಹೇಂದ್ರ ರೆಡ್ಡಿಗೆ ಮದುವೆಯಾಗಿತ್ತು. ಇಬ್ಬರೂ ವಿಕ್ಟೋರಿಯಾದಲ್ಲಿ ಕೆಲಸ ಮಾಡ್ತಿದ್ದರು. ಚರ್ಮರೋಗ ತಜ್ಞೆ ಆಗಿರೋ ಡಾ.ಕೃತಿಕಾ ರೆಡ್ಡಿ ಅಜೀರ್ಣ, ಗ್ಯಾಸ್ಟ್ರಿಕ್‌, ಲೋಶುಗರ್‌ನಿಂದ ಬಳಲುತ್ತಿದ್ದರು. ಆದರೆ ಇದನ್ನು ಮುಚ್ಚಿಟ್ಟು ನನಗೆ ಮದುವೆ ಮಾಡಿಸಿದ್ದಾರೆ ಅಂತ ಕುಪಿತಗೊಂಡಿದ್ದ ಪತಿ ಡಾ. ಮಹೇಂದ್ರ ರೆಡ್ಡಿ, ಗ್ಯಾಸ್ಟ್ರಿಕ್‌ಗೆ ಚಿಕಿತ್ಸೆ ಕೊಡುವ ನೆಪದಲ್ಲಿ ಅನಸ್ತೇಶಿಯಾ ಕೊಟ್ಟು ಕೊಲೆ ಮಾಡಿದ್ದಾನೆ. ಇದು ವಿಧಿವಿಜ್ಞಾನ ಪ್ರಯೋಗಾಲಯದ ವರದಿಯಲ್ಲಿ ದೇಹದ ಅಂಗಾಂಗಳಲ್ಲಿ ಅನಸ್ತೇಶಿಯಾ ಇರುವುದು ಬಯಲಾದ ಕಾರಣ ಈ ಪ್ರಕರಣ ಬೆಳಕಿಗೆ ಬಂದಿದೆ.

  • ಪ್ರೀ ವೆಡ್ಡಿಂಗ್‌ಗೆ ಫೋಟೋಗ್ರಾಫರ್ ಕರೆಸಿ 8 ಲಕ್ಷ ಮೌಲ್ಯದ ಕ್ಯಾಮೆರಾ ಕದ್ದ ಅಸಾಮಿ

    ಪ್ರೀ ವೆಡ್ಡಿಂಗ್‌ಗೆ ಫೋಟೋಗ್ರಾಫರ್ ಕರೆಸಿ 8 ಲಕ್ಷ ಮೌಲ್ಯದ ಕ್ಯಾಮೆರಾ ಕದ್ದ ಅಸಾಮಿ

    ಮೈಸೂರು: ಪ್ರೀ ವೆಡ್ಡಿಂಗ್ ಶೂಟ್‌ಗೆ (Pre Wedding Shoot)ಕರೆಸಿದ ವ್ಯಕ್ತಿ 8 ಲಕ್ಷ ರೂ. ಮೌಲ್ಯದ ಕ್ಯಾಮೆರಾ ಕದ್ದು ಪರಾರಿಯಾದ ಘಟನೆ ಮೈಸೂರಿನ ದೇವರಾಜ ಪೊಲೀಸ್ ಠಾಣೆ (Devaraja Police Station) ವ್ಯಾಪ್ತಿಯಲ್ಲಿ ನಡೆದಿದೆ.

    ನಿಮ್ಮ ಇನ್‌ಸ್ಟಾಗ್ರಾಮ್‌ ಫ್ರೋಪೈಲ್ ನೋಡಿದ್ದೇನೆ ಮೈಸೂರಿನಲ್ಲಿ ಪ್ರೀ ವೆಡ್ಡಿಂಗ್ ಶೂಟ್ ಮಾಡಬೇಕು ಎಂದು ಗಣೇಶ್ ಎಂಬ ವ್ಯಕ್ತಿ ಮೈಸೂರಿನ ಸಾಲಿಗ್ರಾಮದ ಭಾರ್ಗವ್ ಎನ್ನುವ ಫೋಟೋ ಗ್ರಾಫರ್‌ಗೆ ಕರೆ ಮಾಡಿದ್ದಾನೆ. ಬಳಿಕ 75,000 ರೂ.ಗೆ ಫೋಟೋ ಶೂಟ್ ಅಗ್ರಿಮೆಂಟ್ ಮಾಡಿಕೊಂಡು ಇದಕ್ಕೆ 2,000 ಹಣವನ್ನು ಆನ್‌ಲೈನ್‌ನಲ್ಲಿ ಗಣೇಶ್ ವರ್ಗಾವಣೆ ಸಹ ಮಾಡಿದ್ದಾನೆ. ದನ್ನೂ ಓದಿ: ಕ್ರಿಸ್‌ಮಸ್‌ ಸಂಭ್ರಮ – ನೀವೂ ವಿಶ್‌ ಮಾಡ್ಬೇಕಾ? ವಾಟ್ಸಪ್‌ ಸ್ಟೇಟಸ್‌ಗೆ ಇಲ್ಲಿದೆ ಸಿಂಪಲ್‌ ಟಿಪ್ಸ್‌

    ಮೈಸೂರಿಗೆ ಫೋಟೋಗ್ರಾಫರ್ ಭಾರ್ಗವ್‌ನನ್ನ ಕರೆಸಿದ ಗಣೇಶ್‌ ತಾನೇ ಬುಕ್ ಮಾಡಿದ ಲಾಡ್ಜ್‌ನಲ್ಲಿ ಉಳಿಯುವಂತೆ ಹೇಳಿದ್ದಾನೆ. ಬಳಿಕ ನಮ್ಮ ಕಡೆಯವರು ದೇವರಾಜ ಮಾರುಕಟ್ಟೆ ಬಳಿ ಇದ್ದಾರೆ, ಅವರ ಜೊತೆ ಊಟ ಮಾಡಿಕೊಂಡು ಬನ್ನಿ. ಫೋಟೋ ಶೂಟ್‌ಗೆ ಅವರಿಗೆ ಲೊಕೇಷನ್ ತೋರಿಸಿ ಎಂದು ಭಾರ್ಗವ್ ನನ್ನು ಹೊರಗಡೆ ಕಳುಹಿಸಿದ ಗಣೇಶ್‌ನಂತರ ಕೆಲಹೊತ್ತಿನ ನಂತರ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾನೆ. ಆಗ ಭಾರ್ಗವ್ ರೂಂ ನಲ್ಲಿ ಬಂದು ನೋಡಿದಾಗ ತನ್ನ ಕ್ಯಾಮೆರಾ ಅಲ್ಲಿ ಇರಲಿಲ್ಲ. ಸದ್ಯ ದೇವರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದನ್ನೂ ಓದಿ: ʻಸಾಂತಾಕ್ಲಾಸ್‌ʼನಲ್ಲಿ ವರ್ಷಪೂರ್ತಿ ಕ್ರಿಸ್‌ಮಸ್‌ ಸಂಭ್ರಮ – ವಿಲೇಜ್‌ ಇರೋದಾದ್ರೂ ಎಲ್ಲಿ?

  • ಟಿಬಿ ಡ್ಯಾಂ ಮೇಲೆ ಪ್ರೀ ವೆಡ್ಡಿಂಗ್ ಫೋಟೋಶೂಟ್

    ಟಿಬಿ ಡ್ಯಾಂ ಮೇಲೆ ಪ್ರೀ ವೆಡ್ಡಿಂಗ್ ಫೋಟೋಶೂಟ್

    – ನಿಷೇಧವಿದ್ದರೂ ಕ್ರಸ್ಟ್ ಗೇಟ್ ಮೇಲ್ಭಾಗದಲ್ಲಿಯೇ ಫೋಟೋಶೂಟ್ ಮಾಡಿಸಿಕೊಂಡ ಜೋಡಿ
    – ಅಧಿಕಾರಿಗಳ ವಿರುದ್ಧ ಸ್ಥಳೀಯರ ಆಕ್ರೋಶ; ತನಿಖೆಗೆ ಆಗ್ರಹ

    ಕೊಪ್ಪಳ: ನಿಷೇಧವಿದ್ದರೂ ತುಂಗಭದ್ರಾ ಡ್ಯಾಂ (Tungabhadra Dam) ಬಳಿ ಜೋಡಿಯೊಂದು ಪ್ರೀ ವೆಡ್ಡಿಂಗ್ ಫೋಟೋಶೂಟ್ (Pre-Wedding Photoshoot) ಮಾಡಿಸಿಕೊಂಡಿದ್ದು, ಸ್ಥಳೀಯರು ಆಕ್ರೋಶಕ್ಕೆ ಕಾರಣವಾಗಿದೆ.

    ಹೊಸಪೇಟೆ (Hosapete) ಮೂಲದ ಜೋಡಿ ಫೋಟೋಶೂಟ್ ಮಾಡಿಸಿಕೊಂಡವರು ಎಂದು ತಿಳಿದುಬಂದಿದೆ. ಬುಧವಾರ (ಸೆ.4) ಬೆಳ್ಳಂಬೆಳಗ್ಗೆ ಫೋಟೋ ಹಾಗೂ ವಿಡಿಯೋ ಶೂಟ್ ಮಾಡಿಸಿಕೊಂಡಿದ್ದಾರೆ. ಸದ್ಯ ಪ್ರೀ ವೆಡ್ಡಿಂಗ್ ಶೂಟ್ ಫೋಟೋಸ್ ವೈರಲ್ ಆಗಿವೆ.ಇದನ್ನೂ ಓದಿ: ಎತ್ತಿನಹೊಳೆ ಯೋಜನೆಗೆ ಚಾಲನೆ ಹಿನ್ನೆಲೆ ಹೋಮ – 9 ಪೂರ್ಣ ಕುಂಭಗಳಿಗೆ ಪೂಜೆ ಸಲ್ಲಿಸಿದ ಡಿಕೆಶಿ

    ಕೆಎ-01 ಎಂ ವೈ 2174 ನಂಬರ್ ಹೊಂದಿರುವ ಕಾರಿನಲ್ಲಿ ಕೂತು ಪ್ರೀ ವೆಡ್ಡಿಂಗ್ ಶೂಟ್ ಮಾಡಿಸಿಕೊಂಡಿದ್ದಾರೆ. ಮೊನ್ನೆಯಷ್ಟೇ ರಿಪೇರಿಗೊಂಡ ಕ್ರಸ್ಟ್ ಗೇಟ್ ಆಪರೇಟರ್ ಸಿಸ್ಟಮ್ ಪಕ್ಕದಲ್ಲಿಯೇ ಕುಳಿತು ಫೋಟೋಶೂಟ್ ಮಾಡಿಸಿದ್ದಾರೆ.

    ಟಿಬಿ ಡ್ಯಾಂನ 19ನೇ ಕ್ರಸ್ಟ್ ಗೇಟ್ ಕಿತ್ತುಹೋದ ಪ್ರಕರಣ ಬಳಿಕ ಡ್ಯಾಂ ಮೇಲೆ ಪ್ರವೇಶವನ್ನು ನಿಷೇಧಿಸಲಾಗಿತ್ತು. ಸಾರ್ವಜನಿಕರು ಸೇರಿದಂತೆ ಮಾಧ್ಯಮದವರಿಗೂ ಪ್ರವೇಶವನ್ನು ನಿಷೇಧಿಸಲಾಗಿದೆ. ನಿಷೇಧವಿದ್ದರೂ ಜೋಡಿ ಪ್ರೀ ವೆಡ್ಡಿಂಗ್ ಶೂಟ್ ಮಾಡಿಸಿಕೊಂಡಿದ್ದು ಹೇಗೆ ಎಂದು ಪ್ರಶ್ನೆ ವ್ಯಕ್ತವಾಗಿದೆ.ಇದನ್ನೂ ಓದಿ: ಗಣೇಶ ಮತ್ತೆ ಬಂದ.. ಪರಿಸರ ಸ್ನೇಹಿ ಮೂರ್ತಿಯ ಪ್ರಯೋಜನ ನಿಮಗೆಷ್ಟು ಗೊತ್ತು?

    ವೈರಲ್ ಆದ ಫೋಟೋಸ್‌ನಲ್ಲಿ ಜೋಡಿ ಇದ್ದ ಕಾರಿನ ಹಿಂದೆ ಇನ್ನೊಂದು ಕಾರು ನಿಂತಿರುವುದು ಕಾಣಿಸಿದೆ. ಫೋಟೋಶೂಟ್‌ಗೆ ಅಧಿಕಾರಿಗಳು ಸಾಥ್ ನೀಡಿದ್ದಾರಾ ಎಂದು ಸ್ಥಳೀಯರು ಪ್ರಶ್ನಿಸಿದ್ದಾರೆ. ನಿಷೇಧಿತ ಸ್ಥಳದಲ್ಲಿ ಪ್ರೀ ವೆಡ್ಡಿಂಗ್ ಶೂಟ್ ನಡೆದಿರುವ ಕುರಿತು ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.