Tag: Pre-Wedding Photoshoot

  • ಪ್ರೀ ವೆಡ್ಡಿಂಗ್ ಶೂಟ್‌ಗೆ ತೆರಳಿದ್ದವರ ಕಾರಿನ ಗಾಜು ಒಡೆದು 4 ಲಕ್ಷದ ಕ್ಯಾಮೆರಾ, ಲೆನ್ಸ್ ದೋಚಿದ ಕಳ್ಳರು

    ಪ್ರೀ ವೆಡ್ಡಿಂಗ್ ಶೂಟ್‌ಗೆ ತೆರಳಿದ್ದವರ ಕಾರಿನ ಗಾಜು ಒಡೆದು 4 ಲಕ್ಷದ ಕ್ಯಾಮೆರಾ, ಲೆನ್ಸ್ ದೋಚಿದ ಕಳ್ಳರು

    ಬಳ್ಳಾರಿ: ಪ್ರೀ ವೆಡ್ಡಿಂಗ್(Pre-Wedding) ಫೋಟೋಶೂಟ್ ಮಾಡಲು ಹೋಗಿದ್ದಾಗ ಕಾರಿನ ಗಾಜು ಒಡೆದು 4 ಲಕ್ಷ ರೂ. ಮೌಲ್ಯದ ಕ್ಯಾಮೆರಾ(Camera) ಹಾಗೂ ಲೆನ್ಸ್(Lense) ಕಳ್ಳತನ ಮಾಡಿರುವ ಘಟನೆ ವಿಜಯನಗರ(Vijayanagara) ಜಿಲ್ಲೆಯ ಹೊಸಪೇಟೆಯ ತುಂಗಭದ್ರಾ ಜಲಾಶಯದ ಹಿನ್ನೀರಿನ ಗುಂಡಾ ಫಾರೆಸ್ಟ್ ಬಳಿ ನಡೆದಿದೆ.

    ರಾಯಚೂರಿನ ಮಾನ್ವಿ ಮೂಲದ ಫೋಟೋಗ್ರಾಫರ್ ಹುಮಾಯುನ್ ಅವರಿಗೆ ಸೇರಿದ್ದ ಕಾರಿನಲ್ಲಿ ಕಳ್ಳತನವಾಗಿದೆ. ಕಾರಿನಲ್ಲಿ ಕ್ಯಾಮೆರಾ ಹಾಗೂ ಲೆನ್ಸ್ ಇಟ್ಟಿದ್ದ ಹುಮಾಯುನ್ ಬ್ಯಾಕ್ ವಾಟರ್ ಫೋಟೋಶೂಟ್‌ಗೆ ತೆರಳಿದ್ದರು. ಇದನ್ನೂ ಓದಿ: ದಿಢೀರ್‌ ರಬಕವಿ-ಬನಹಟ್ಟಿಯಲ್ಲಿ ಜಿಲ್ಲಾ ಪಂಚಾಯತ್‌ ಕಾಮಗಾರಿ ವೀಕ್ಷಿಸಿದ ಸಿಇಒ ಶಶಿಧರ ಕುರೇರ

    ಕಳ್ಳರು ಕಾರಿನ ಸುತ್ತಲೂ ಯಾರೂ ಇಲ್ಲದ್ದನ್ನ ಗಮನಿಸಿ ಗಾಜು ಒಡೆದು ಕೆನಾನ್ ಖ೫ ಕ್ಯಾಮೆರಾ ಹಾಗೂ 4 ಲಕ್ಷ ರೂ. ಲೆನ್ಸ್ ಕಳ್ಳತನ ಮಾಡಿ ಪರಾರಿಯಾಗಿದ್ದಾರೆ. ಮರಿಯಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ : ಕೆಎನ್ ರಾಜಣ್ಣ ಬಾಯಿ ಚಪಲಕ್ಕೆ ಮಾತನಾಡಬಾರದು: ಹೆಚ್.ಸಿ ಬಾಲಕೃಷ್ಣ

  • ಮೈಸೂರಿನಲ್ಲಿ ಮಾಸ್ಕ್ ಧರಿಸಿ ಪ್ರಿ ವೆಡ್ಡಿಂಗ್ ಫೋಟೋ ಶೂಟ್

    ಮೈಸೂರಿನಲ್ಲಿ ಮಾಸ್ಕ್ ಧರಿಸಿ ಪ್ರಿ ವೆಡ್ಡಿಂಗ್ ಫೋಟೋ ಶೂಟ್

    ಮೈಸೂರು: ಮಹಾಮಾರಿ ಕೊರೊನಾ ವೈರಸ್‍ಗೆ ಈಡೀ ವಿಶ್ವವೇ ಬೆಚ್ಚಿಬಿದ್ದಿದೆ. ಅದರಲ್ಲೂ ಭಾರತದಲ್ಲಿ ಕೊರೊನಾ ಬಲಿ ಪಡೆದ ಪ್ರಕರಣ ಕರ್ನಾಟಕದ ಕಲಬುರಗಿಯಲ್ಲಿ ನಡೆದಿದ್ದರಿಂದ ರಾಜ್ಯದ ಜನರು ಆತಂಕಕ್ಕೆ ಸಿಲುಕಿದ್ದಾರೆ. ಈ ಮಧ್ಯೆ ಮೈಸೂರು ನಗರದಲ್ಲಿ ಜೋಡಿಯೊಂದು ಸರ್ಕಾರಕ್ಕೆ ಟಾಂಗ್ ಕೊಡುವ ರೀತಿ ಮಾಸ್ಕ್ ಧರಿಸಿ ಪ್ರಿ ವೆಡ್ಡಿಂಗ್ ಫೋಟೋ ಶೂಟ್ ಮಾಡಿಸಿಕೊಂಡಿದೆ.

    ಕೊರೊನಾ ವೈರಸ್‍ನಿಂದಾಗಿ ಜನರು ಮಾಸ್ಕ್ ಧರಿಸುತ್ತಿದ್ದಾರೆ. ಜೊತೆಗೆ ಸರ್ಕಾರವು ಕೊರೊನಾ ವೈರಸ್ ಬಗ್ಗೆ ಮುಂಜಾಗ್ರತಾ ಕ್ರಮದ ಬಗ್ಗೆ ತಿಳಿಸಿದ್ದು, ಕೈ ಕುಲುಕಬೇಡಿ, ಒಬ್ಬರಿಂದ ಒಬ್ಬರು ಆರು ಅಡಿ ದೂರವಿರಿ ಎಂದು ಆದೇಶಿಸಿದೆ. ಈ ಮಧ್ಯೆ ಮೈಸೂರಿನ ಜೋಡಿಯೊಂದು ಅಣಕಿಸುವ ರೀತಿಯಲ್ಲಿ ಮಾಸ್ಕ್ ಧರಿಸಿ, ಕೈ ಕೈ ಹಿಡಿದು ಅತಿ ಸಮೀಪದಲ್ಲಿಯೇ ನಿಂತು ಮೈಸೂರಿನ ಹಲವೆಡೆ ಪ್ರಿ ವೆಡ್ಡಿಂಗ್ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ.

    ಮೈಸೂರಿನ ಜೋಡಿ ಅರಮನೆ ಮುಂದೆ ನಿಂತು ಪ್ರಿ ವೆಡ್ಡಿಂಗ್ ಶೂಟ್ ಮಾಡಿಸಿಕೊಂಡ ವಿಡಿಯೋ ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಈ ಬಗ್ಗೆ ನೆಟ್ಟಿಗರು ತಮ್ಮದೆ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಜೋಡಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.

    ಕೊರೊನಾ ವೈರಸ್ ಎಫೆಕ್ಟ್ ನೇರವಾಗಿ ಮೈಸೂರು ಪ್ರವಾಸೋದ್ಯಮದ ಮೇಲೆ ಬಿದ್ದಿದೆ. ಹೋಟೆಲ್, ಲಾಡ್ಜಿಂಗ್‍ನಲ್ಲಿ ಬರೋಬ್ಬರಿ 50 ಕೋಟಿ ರೂ. ನಷ್ಟು ವಹಿವಾಟು ಸ್ಥಗಿತವಾಗಿದೆ. ಪ್ರವಾಸಿಗರ ಸಂಖ್ಯೆಯಲ್ಲಿ ಶೇ.85 ರಷ್ಟು ಕುಸಿತ ಕಂಡಿದ್ದು, ಹೋಟೆಲ್ ಬುಕ್ಕಿಂಗ್‍ಗಳು ಕ್ಯಾನ್ಸಲ್ ಆಗಿವೆ. ಅದರಲ್ಲೂ ಕೇರಳದ ಪ್ರವಾಸಿಗರು ಶೇಕಡ ಒಂದರಷ್ಟು ಕೂಡ ಮೈಸೂರಿಗೆ ಬರುತ್ತಿಲ್ಲ. ಇದರಿಂದ ಮೈಸೂರಿನ ಹೋಟೆಲ್‍ಗಳು, ಲಾಡ್ಜ್ ಗಳು ಖಾಲಿ ಹೊಡೆಯುತ್ತಿವೆ.

  • ಅನಾಥ ಮಕ್ಕಳ ಜೊತೆ ನಟ ಚೇತನ್ ಪ್ರೀವೆಡ್ಡಿಂಗ್ ಫೋಟೋಶೂಟ್

    ಅನಾಥ ಮಕ್ಕಳ ಜೊತೆ ನಟ ಚೇತನ್ ಪ್ರೀವೆಡ್ಡಿಂಗ್ ಫೋಟೋಶೂಟ್

    ಬೆಂಗಳೂರು: ‘ಆ ದಿನಗಳು’ ಖ್ಯಾತಿಯ ನಟ ಚೇತನ್ ತಾವು ಪ್ರೀತಿಸಿದ ಹುಡುಗಿ ಮೇಘಾ ಜೊತೆ ಮುಂದಿನ ತಿಂಗಳು ಅಂದರೆ ಫೆಬ್ರವರಿ 2 ರಂದು ಹಸೆಮಣೆ ಏರಲಿದ್ದಾರೆ.

    ಮದುವೆ ಸಂಭ್ರಮದಲ್ಲಿರುವ ಚೇತನ್ ಸ್ಪೆಷಲ್ ಪ್ರೀವೆಡ್ಡಿಂಗ್ ಶೂಟ್ ಮಾಡಿಸಿದ್ದಾರೆ. ಪರಿಸರ ಸ್ನೇಹಿ ವೆಡ್ಡಿಂಗ್ ಕಾರ್ಡ್, ವಲ್ಲಭ್ ನಿಕೇತನ ವಿನೋಬಾ ಭಾವೆ ಆಶ್ರಮದ ಮಕ್ಕಳು ಮತ್ತು ವೃದ್ಧರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟು ವಿಭಿನ್ನವಾಗಿ ಮದುವೆ ಸಂಭ್ರಮ ಆಚರಿಸಿಕೊಳ್ಳಲಿರುವ ಚೇತನ್ ಈಗ ಪ್ರೀವೆಡ್ಡಿಂಗ್ ಫೋಟೋ ಕೂಡ ಟ್ರೆಂಡ್ ಆಗಿದೆ.

    ಅನಾಥ ಮಕ್ಕಳ ಜೊತೆ ಫೋಟೋ ಶೂಟ್ ಮಾಡಿಸಿಕೊಂಡಿರುವ ನವಜೋಡಿಗಳ ಫೋಟೋ ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ. ಮಕ್ಕಳ ಜೊತೆ ಬಣ್ಣದ ಓಕುಳಿಯ ಚಿತ್ತಾರ ಬಿಡಿಸಿ, ಬುಗುರಿ ಆಟವಾಡಿ, ಪೇಟಿಂಗ್ ಮಾಡಿ ನವಜೋಡಿ ಫೋಟೋ ಶೂಟ್ ಮಾಡಿಸಿದ್ದಾರೆ. ಪುಟಾಣಿ ಮಕ್ಕಳ ನಗುವಿನೊಂದಿಗೆ ಹೊಸ ಜೀವನದ ಆರಂಭದ ಸಂಭ್ರಮದಲ್ಲಿದ್ದಾರೆ ಚೇತನ್ ಮೇಘಾ. ಈ ಸ್ಪೆಷಲ್ ಫೋಟೋ ಶೂಟ್ ಈಗ ಎಲ್ಲರ ಗಮನ ಸೆಳೆದಿದೆ.

  • ಪ್ರೀ-ವೆಡ್ಡಿಂಗ್ ಫೋಟೋಶೂಟ್‍ನಲ್ಲೂ ಪೌರತ್ವದ ಕಿಚ್ಚು- ಕೇರಳ ದಂಪತಿ ಫೋಟೋ ವೈರಲ್

    ಪ್ರೀ-ವೆಡ್ಡಿಂಗ್ ಫೋಟೋಶೂಟ್‍ನಲ್ಲೂ ಪೌರತ್ವದ ಕಿಚ್ಚು- ಕೇರಳ ದಂಪತಿ ಫೋಟೋ ವೈರಲ್

    ತಿರುವನಂತಪುರಂ: ಪೌರತ್ವ ಕಾಯ್ದೆ(ಸಿಎಎ), ರಾಷ್ಟ್ರೀಯ ನಾಗರಿಕ ನೋಂದಣಿ(ಎನ್ಆರ್‌ಸಿ) ವಿರೋಧಿಸಿ ಕೇರಳದ ದಂಪತಿ ಮಾಡಿಸಿರುವ ಪ್ರೀ ವೆಡ್ಡಿಂಗ್ ಫೋಟೋ ಶೂಟ್ ಸಖತ್ ವೈರಲ್ ಆಗಿದೆ.

    ಇತ್ತೀಚೆಗೆ ಪ್ರೀ-ವೆಡ್ಡಿಂಗ್ ಫೋಟೋಶೂಟ್ ಮಾಡಿಸುವುದು ಟ್ರೆಂಡ್ ಆಗಿಬಿಟ್ಟಿದೆ. ಸುಂದರ ಲೊಕೆಷನ್‍ನಲ್ಲಿ ದಂಪತಿ ಫೋಟೋಗಳಿಗೆ ಪೋಸ್‍ಕೊಟ್ಟು ಫೋಟೋಶೂಟ್ ಮಾಡಿಕೊಳ್ಳುತ್ತಾರೆ. ಆದರೆ ಕೇರಳದ ಅರುಣ್ ಗೋಪಿ ಹಾಗೂ ಆಶಾ ಶೇಖರ್ ದಂಪತಿ ಸಿಎಎ ಮತ್ತು ಎನ್ಆರ್‌ಸಿ ವಿರೋಧಿಸಿ ಪ್ರೀ-ವೆಡ್ಡಿಂಗ್ ಫೋಟೋಶೂಟ್ ಮಾಡಿಸಿರುವುದು ವಿಶೇಷವಾಗಿದೆ. ಸುಂದರವಾದ ಪೊನ್ಮುಡಿ ಬೆಟ್ಟದ ಮುಂಭಾಗ ‘ಸಿಎಎ ಬೇಡ’, ‘ಎನ್ಆರ್‌ಸಿ ಬೇಡ’ ಎಂಬ ಫಲಕಗಳನ್ನು ಹಿಡಿದು ಕೇರಳ ದಂಪತಿ ಪ್ರೀ-ವೆಡ್ಡಿಂಗ್ ಫೋಟೋಶೂಟ್ ಮಾಡಿಸಿದ್ದಾರೆ. ಈ ಫೋಟೋಗಳನ್ನು ತಮ್ಮ ಫೇಸ್‍ಬುಕ್‍ನಲ್ಲಿ ದಂಪತಿ ಹಂಚಿಕೊಂಡಿದ್ದು, ಸಿಎಎ, ಎನ್ಆರ್‌ಸಿ ವಿರೋಧಿಸಿದ ಪ್ರೀ-ವೆಡ್ಡಿಂಗ್ ಫೋಟೋಗಳು ಎಲ್ಲೆಡೆ ವೈರಲ್ ಆಗಿದೆ. ಇದನ್ನೂ ಓದಿ: ಪ್ರಿ-ವೆಡ್ಡಿಂಗ್ ಶೂಟ್‍ನಲ್ಲಿ ಕಿಸ್ ಮಾಡೋವಾಗ ಮಗುಚಿದ ದೋಣಿ – ವಿಡಿಯೋ ನೋಡಿ

    ಡಿಸೆಂಬರ್ 18ರಂದು ‘ಫಸ್ಟ್ ಲುಕ್ ಫೋಟೋಗ್ರಾಫಿ’ ಹೆಸರಿನ ಫೇಸ್‍ಬುಕ್ ಖಾತೆಯಿಂದ ಅರುಣ್ ಗೋಪಿ ಹಾಗೂ ಆಶಾ ಶೇಖರ್ ಅವರ ಪ್ರೀ-ವೆಡ್ಡಿಂಗ್ ಫೋಟೋಶೂಟ್ ಫೋಟೋಗಳನ್ನು ಅಪ್ಲೋಡ್ ಮಾಡಲಾಗಿತ್ತು. ನಂತರ ಈ ಫೋಟೋಗಳನ್ನು ಇತರ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಶೇರ್ ಮಾಡಿಕೊಂಡಿದ್ದು, ಈ ಫೋಟೋಶೂಟ್ ಪರ ಹಾಗೂ ವಿರೋಧ ಕಮೆಂಟ್‍ಗಳು ವ್ಯಕ್ತವಾಗಿದೆ. ಆದರೆ ಎಲ್ಲೆಡೆ ಪ್ರತಿಭಟನೆ, ಗಲಾಟೆಗಳು ಮಾಡುವ ಮೂಲಕ ಸಿಎಎ, ಎನ್ಆರ್‌ಸಿ ವಿರೋಧಿಸುತ್ತಿರುವ ಜನರ ನಡುವೆ ಈರೀತಿ ವಿನೂತನವಾಗಿ ತಮ್ಮ ವಿರೋಧ ವ್ಯಕ್ತಪಡಿಸಿದ ದಂಪತಿ ಫೋಟೋಗಳು ಎಲ್ಲರ ಗಮನ ಸೆಲೆದಿದೆ.  ಇದನ್ನೂ ಓದಿ: ಕೆಸರಿನಲ್ಲಿ ಜೋಡಿಯ ವೆಡ್ಡಿಂಗ್ ಫೋಟೋಶೂಟ್

    ತಿರುವನಂತಪುರಂ ಜಿಲ್ಲಾ ಮಕ್ಕಳ ಕಲ್ಯಾಣ ಮಂಡಳಿಯ ಖಜಾಂಚಿಯಾಗಿರುವ ಅರುಣ್, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ(ಮಾಕ್ರ್ಸ್‍ವಾದಿ) ಅಧೀನದಲ್ಲಿರುವ ಮಕ್ಕಳ ಸಂಸ್ಥೆ ಬಾಲಸಂಘಂನ ರಾಜ್ಯಾಧ್ಯಕ್ಷರಾಗಿದ್ದಾರೆ. ಫಸ್ಟ್ ಲುಕ್ ಫೋಟೋಗ್ರಾಫಿಯ ಪಾರ್ಟ್‍ನರ್ ಆಗಿರುವ ಅರ್ಜುನ್ ಎಪಿ ಅವರು ಈ ಫೋಟೋಶೂಟ್ ಬಗ್ಗೆ ಪ್ರತಿಕ್ರಿಯಿಸಿ, ದಂಪತಿಯ ಈ ವಿಶೇಷ ಫೋಟೋಶೂಟ್‍ಗೆ ನಾವು ಐಡಿಯಾ ಕೊಟ್ಟಿದ್ದು, ಆದರೆ ದಂಪತಿ ಖುಷಿಯಿಂದ ಈ ಐಡಿಯಾವನ್ನು ಒಪ್ಪಿಕೊಂಡು ಸಹಕರಿಸಿದರು. ನಾವು ಫೇಸ್‍ಬುಕ್ ಪೋಸ್ಟ್ ಟ್ಯಾಗ್‍ಲೈನ್ ಹಾಕಿದಂತೆ ಇವರು ಜವಾಬ್ದಾರಿ ಇರುವ ದಂಪತಿ ಎಂದು ತಿಳಿಸಿದರು.

  • ಸಲಿಂಗಿಗಳ ರೊಮ್ಯಾಂಟಿಕ್ ಪ್ರಿ-ವೆಡ್ಡಿಂಗ್ ಫೋಟೋಶೂಟ್ ವೈರಲ್

    ಸಲಿಂಗಿಗಳ ರೊಮ್ಯಾಂಟಿಕ್ ಪ್ರಿ-ವೆಡ್ಡಿಂಗ್ ಫೋಟೋಶೂಟ್ ವೈರಲ್

    ತಿರುವನಂತಪುರಂ: ಇತ್ತೀಚೆಗೆ ಪ್ರಿ-ವೆಡ್ಡಿಂಗ್ ಫೋಟೋ ಶೂಟ್ ಸಖತ್ ಟ್ರೆಂಡ್ ಆಗಿದ್ದು, ಮದುವೆಗೆ ಮುನ್ನ ಫೋಟೋಶೂಟ್ ಮಾಡಿಸಿಕೊಳ್ಳಲು ಅನೇಕ ಜೋಡಿಗಳು ಖುಷಿಪಡುತ್ತಾರೆ. ಹಾಗೆಯೇ ಇತ್ತೀಚೆಗೆ ಕೇರಳದ ಸಲಿಂಗಿ ಜೋಡಿಯೊಂದು ಮಾಡಿಸಿರುವ ರೊಮ್ಯಾಂಟಿಕ್ ಪ್ರಿ-ವೆಡ್ಡಿಂಗ್ ಫೋಟೋಶೂಟ್ ಎಲ್ಲೆಡೆ ವೈರಲ್ ಆಗಿದೆ.

    ಕೇರಳ ಮೂಲದ ಸಲಿಂಗ ಜೋಡಿ ಅಬ್ದುಲ್ ರೆಹಿಮ್ ಮತ್ತು ನೆವಿದ್ ಆಂಟೋನಿ ಚುಲ್ಲಿಕಾಲ್ ಪ್ರಿ-ವೆಡ್ಡಿಂಗ್ ಫೋಟೋಶೂಟ್ ಮಾಡಿಸಿದ್ದಾರೆ. ಈ ಜೋಡಿ ನೀಡಿರುವ ರೊಮ್ಯಾಂಟಿಕ್ ಪೋಸ್‍ಗಳು ನೆಟ್ಟಿಗರು ಹುಬ್ಬೇರಿಸುವಂತೆ ಮಾಡಿದೆ. ಸಾಮಾನ್ಯವಾಗಿ ಎಲ್ಲರು ಪ್ರಿ-ವೆಡ್ಡಿಂಗ್ ಶೂಟ್ ಮಾಡಿಸುತ್ತಾರೆ. ನಮಗೂ ಎಲ್ಲರಂತೆ ಖುಷಿ ಖುಷಿಯಾಗಿ ಮದುವೆ ಆಗಬೇಕು ಎನ್ನುವ ಆಸೆ ಇದೆ. ಅದಕ್ಕೆ ಪ್ರಿ-ವೆಡ್ಡಿಂಗ್ ಫೋಟೋ ಶೂಟ್ ಮಾಡಿಕೊಂಡಿದ್ದೇವೆ ಎಂದು ಸಲಿಂಗಿಗಳು ಹೇಳಿದ್ದಾರೆ. ಇದನ್ನೂ ಓದಿ: ಪ್ರಿ-ವೆಡ್ಡಿಂಗ್ ಶೂಟ್‍ನಲ್ಲಿ ಕಿಸ್ ಮಾಡೋವಾಗ ಮಗುಚಿದ ದೋಣಿ – ವಿಡಿಯೋ ನೋಡಿ

    ತಮ್ಮ ರೊಮ್ಯಾಂಟಿಕ್ ಪ್ರಿ-ವೆಡ್ಡಿಂಗ್ ಫೋಟೋಗಳನ್ನು ಈ ಜೋಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಇವರ ಫೋಟೋಗಳನ್ನು ನೋಡಿ ನೆಟ್ಟಿಗರು ಕೂಡ ಖುಷಿಪಟ್ಟಿದ್ದು, ಜೋಡಿಗೆ ಶುಭ ಹಾರೈಸಿದ್ದಾರೆ. ಇದನ್ನೂ ಓದಿ: ಕೆಸರಿನಲ್ಲಿ ಜೋಡಿಯ ವೆಡ್ಡಿಂಗ್ ಫೋಟೋಶೂಟ್

    ಈ ಸಲಿಂಗ ಜೋಡಿ ತಮ್ಮ ಸಾಕು ನಾಯಿಗಳ ಜೊತೆ ಕೂಡ ಫೋಟೋಶೂಟ್ ಮಾಡಿಕೊಂಡಿದ್ದಾರೆ. ಅಲ್ಲದೆ ಎಲ್ಲಾ ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ಈ ವಿಶೇಷ ಫೋಟೋಶೂಟ್‍ಗೆ ನೆಟ್ಟಿಗರು ಮನಸೋತಿದ್ದಾರೆ.

    ಕಳೆದ 5 ವರ್ಷಗಳಿಂದ ಈ ಜೋಡಿ ಡೇಟಿಂಗ್ ಮಾಡುತ್ತಿದ್ದರಂತೆ. ಆದರೆ 2018ರಲ್ಲಿ ಸುಪ್ರೀಂ ಕೋರ್ಟ್ ಸಲಿಂಗ ಕಾಮ ಅಪರಾಧವಲ್ಲ ಎಂದು 377 ವಿಧಿಯನ್ನು ರದ್ದುಗೊಳಿಸಿದ ಬಳಿಕ ಇಬ್ಬರೂ ಮದುವೆಯಾಗಲು ಇಚ್ಛಿಸಿದ್ದಾರೆ. ಈ ಮದುವೆಗೆ ಮನೆಯವರ ಒಪ್ಪಿಗೆ ಇಲ್ಲದಿದ್ದರೂ ಅಬ್ದುಲ್ ಮತ್ತು ನೆವಿದ್ ವಿವಾಹವಾಗುತ್ತಿದ್ದಾರೆ.

    ಈ ಸಲಿಂಗ ಜೋಡಿ ಸದ್ಯದಲ್ಲೇ ಬೆಂಗಳೂರಿನಲ್ಲಿ ಮದುವೆಯಾಗಲು ನಿರ್ಧರಿಸಿದ್ದಾರೆ, ಆದರೆ ಮದುವೆ ದಿನಾಂಕವನ್ನು ನಿಗದಿಗೊಳಿಸಿಲ್ಲ.