Tag: Pre Release Event

  • `ರೆಟ್ರೋ’ ಪ್ರೀ-ರಿಲೀಸ್ ಈವೆಂಟ್‌ನಲ್ಲಿ ಆಕ್ಷೇಪಾರ್ಹ ಹೇಳಿಕೆ – ವಿಜಯ್ ದೇವರಕೊಂಡ ವಿರುದ್ಧ ಕೇಸ್ ದಾಖಲು

    `ರೆಟ್ರೋ’ ಪ್ರೀ-ರಿಲೀಸ್ ಈವೆಂಟ್‌ನಲ್ಲಿ ಆಕ್ಷೇಪಾರ್ಹ ಹೇಳಿಕೆ – ವಿಜಯ್ ದೇವರಕೊಂಡ ವಿರುದ್ಧ ಕೇಸ್ ದಾಖಲು

    `ರೆಟ್ರೋ’ (Retro) ಪ್ರೀ-ರಿಲೀಸ್ (Pre-Release Event) ಈವೆಂಟ್‌ನಲ್ಲಿ ಬುಡಕಟ್ಟು ಸಮುದಾಯದ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿದ್ದಕ್ಕಾಗಿ ತೆಲುಗು ನಟ ವಿಜಯ್ ದೇವರಕೊಂಡ (Vijay Devarakonda) ವಿರುದ್ಧ ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

    ಮೇ 1ರಂದು ತೆರೆಕಂಡಿರುವ `ರೆಟ್ರೋ’ ಸಿನಿಮಾದಲ್ಲಿ ತಮಿಳು ನಟ ಸೂರ್ಯ ಹಾಗೂ ನಟಿ ಪೂಜಾ ಹೆಗ್ಡೆ ನಟಿಸಿದ್ದಾರೆ. ಸಿನಿಮಾ ರಿಲೀಸ್‌ಗೂ ಮುನ್ನ ಏ.26ರಂದು ಹೈದರಾಬಾದ್‌ನ ಜೆಆರ್‌ಸಿ ಕನ್‌ವೆನ್ಷನ್‌ನಲ್ಲಿ ತೆಲುಗು `ರೆಟ್ರೋ’ ಸಿನಿಮಾದ ಪ್ರೀ-ರಿಲೀಸ್ ಈವೆಂಟ್ ಆಯೋಜಿಸಲಾಗಿತ್ತು.ಇದನ್ನೂ ಓದಿ: ಜಯಂ ರವಿ ಜೊತೆ ಬೋಲ್ಡ್ ಆಗಿ ಕಾಣಿಸ್ಕೊಂಡ ವದಂತಿ ಗೆಳತಿ ಕೆನೀಶಾ

    ಕಾರ್ಯಕ್ರಮದಲ್ಲಿ ತೆಲುಗು ನಟ ವಿಜಯ್ ದೇವರಕೊಂಡ ಅವರು ಭಾಗಿಯಾಗಿದ್ದರು. ಈ ವೇಳೆ ಕಾಶ್ಮೀರದಲ್ಲಿ ನಡೆದ ಪಹಲ್ಗಾಮ್ ದಾಳಿಯನ್ನು ಉಲ್ಲೇಖಿಸಿ ಮಾತನಾಡಿದ್ದ ವಿಜಯ್, ಈ ರೀತಿಯ ಘಟನೆಗಳಿಗೆ ಪರಿಹಾರವೆಂದರೆ ಭಯೋತ್ಪಾದಕರಿಗೆ ಶಿಕ್ಷಣ ನೀಡುವುದು. ಅಂದರೆ ಭಯೋತ್ಪಾದಕರಾಗದಂತೆ ತಡೆಯುವುದು. ಭಯೋತ್ಪಾದನೆಯಿಂದ ಅವರಿಗೆ ಏನು ಲಾಭ? ಕಾಶ್ಮೀರ ಭಾರತಕ್ಕೆ ಸೇರಿದ್ದು, ಕಾಶ್ಮೀರಿಗಳು ನಮ್ಮವರು. ಇನ್ನೂ ಪಾಕಿಸ್ತಾನದ ಮೇಲೆ ಭಾರತ ದಾಳಿ ಮಾಡುವ ಅವಶ್ಯಕತೆಯಿಲ್ಲ. ಈಗಾಗಲೇ ಪಾಕಿಸ್ತಾನದವರು ತಮ್ಮ ಸರ್ಕಾರದಿಂದಾಗಿ ಕಿತ್ತು ತಿನ್ನುವ ಪರಿಸ್ಥಿತಿಗೆ ಬಂದಿದ್ದಾರೆ. ಇದು ಹೀಗೆ ಮುಂದುವರಿದರೆ ಪಾಕಿಸ್ತಾನದ ಪ್ರಜೆಗಳೇ ತಮ್ಮ ಸರ್ಕಾರದ ಮೇಲೆ ದಾಳಿ ನಡೆಸುತ್ತಾರೆ. 500 ವರ್ಷಗಳ ಹಿಂದೆ ಸಾಮಾನ್ಯ ಜ್ಞಾನವಿಲ್ಲದೆ ಬುಡಕಟ್ಟು ಜನಾಂಗದವರು ಹೋರಾಡಿದಂತೆ ಇದೀಗ ಭಯೋತ್ಪಾದಕರು ವರ್ತಿಸುತ್ತಿದ್ದಾರೆ ಎಂದು ಹೇಳಿದರು.

    ಈ ಹೇಳಿಕೆಯಿಂದಾಗಿ ಬುಡಕಟ್ಟು ಸಮುದಾಯದವರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಬಳಿಕ ಇದನ್ನರಿತ ವಿಜಯ್ ಕ್ಷಮೆಯಾಚಿಸಿದ್ದರು. ನಾನು ಯಾವುದೇ ಸಮುದಾಯವನ್ನು ಗುರಿಯಾಗಿಸಿಕೊಂಡು ಈ ಹೇಳಿಕೆ ನೀಡಿಲ್ಲ. ಯಾರನ್ನೂ ನೋವಿಸುವ ಉದ್ದೇಶ ನನ್ನದಾಗಿರಲಿಲ್ಲ. ನಾನು ಎಲ್ಲರನ್ನು ಗೌರವಿಸುತ್ತೇವೆ ಎಂದು ಹೇಳಿದ್ದರು.

    ಸದ್ಯ ಸೈದಾಬಾದ್ ನಿವಾಸಿ ಮತ್ತು ಬುಡಕಟ್ಟು ಸಮುದಾಯಗಳ ಜಂಟಿ ಕ್ರಿಯಾ ಸಮಿತಿಯ ರಾಜ್ಯ ಅಧ್ಯಕ್ಷ ನೆನವತ್ ಅಶೋಕ್ ಕುಮಾರ್ ನಾಯಕ್ ಅವರು ನಟ ವಿಜಯ್ ದೇವರಕೊಂಡ ಅವರ ವಿರುದ್ಧ ದೂರು ದಾಖಲಿಸಿದ್ದಾರೆ. ನಟ ವಿಜಯ್ ಹೇಳಿಕೆ ನೀಡಿದ ಒಂದು ತಿಂಗಳ ನಂತರ ಸೈಬರಾಬಾದ್‌ನ ರಾಯದುರ್ಗ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

    ಇದಕ್ಕೂ ಮುನ್ನ ಹೈದರಾಬಾದ್ ಮೂಲದ ವಕೀಲ ಲಾಲ್ ಚೌಹಾಣ್ ನಟನ ವಿರುದ್ಧ ದೂರು ದಾಖಲಿಸಿದ್ದರು. ಸದ್ಯ ವಿಜಯ್ ದೇವರಕೊಂಡ `ಕಿಂಗ್ಡಮ್’ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ.ಇದನ್ನೂ ಓದಿ: ಮಾಜಿ ಪ್ರಧಾನಿ ದೇವೇಗೌಡರಿಗೆ ‘ಶ್ರೀ ಗಂಗ ಸಾಮ್ರಾಟ ಶ್ರೀ ಪುರುಷ’ ಪ್ರಶಸ್ತಿ ಪ್ರದಾನ

  • ಮಂಡ್ಯದಲ್ಲಿ ಇಂದು ‘ಕಾಟೇರ’ ರೈತಗೀತೆ ಬಿಡುಗಡೆ

    ಮಂಡ್ಯದಲ್ಲಿ ಇಂದು ‘ಕಾಟೇರ’ ರೈತಗೀತೆ ಬಿಡುಗಡೆ

    ರ್ಶನ್ (Darshan) ನಟನೆಯ ಕಾಟೇರ ಸಿನಿಮಾದ ಪ್ರಿ ರಿಲೀಸ್ ಇವೆಂಟ್ (Pre Release Event) ಇಂದು ಮಂಡ್ಯದಲ್ಲಿ (Mandya) ಅದ್ಧೂರಿಯಾಗಿ ನಡೆಯಲಿದೆ. ಇಂದು ರೈತದಿನ ಆಗಿದ್ದರಿಂದ ಈ ಕಾರ್ಯಕ್ರಮದಲ್ಲಿ ರೈತಗೀತೆಯನ್ನು ಬಿಡುಗಡೆ ಮಾಡುವುದಾಗಿ ಚಿತ್ರತಂಡ ಹೇಳಿದೆ. ಸಾವಿರಾರು ಸಂಖ್ಯೆಯಲ್ಲಿ ಇಂದು ದರ್ಶನ್ ಅಭಿಮಾನಿಗಳು ಮಂಡ್ಯದಲ್ಲಿ ಸೇರಲಿದ್ದಾರೆ.

    ಮೊನ್ನೆಯಷ್ಟೇ ಕಾಟೇರ (Katera) ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ. ಅದ್ಭುತ ಪ್ರತಿಕ್ರಿಯೆ ಕೂಡ ವ್ಯಕ್ತವಾಗಿದೆ. ಹುಬ್ಬಳ್ಳಿಯಲ್ಲಿ ನಡೆದ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ದರ್ಶನ್ ಸಿನಿಮಾ ಕುರಿತಾದ ಹಲವು ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಈ ಸಿನಿಮಾದ ಕಥೆಯು ನೈಜ ಘಟನೆಯನ್ನು ಆಧರಿಸಿದ್ದು, ಅದು ಇಂದಿರಾ ಗಾಂಧಿ (Indira Gandhi) ಕಾಲದ ಕಥೆಯಾಗಿದೆ ಎಂದು ಗುಟ್ಟು ಬಿಟ್ಟುಕೊಟ್ಟಿದ್ದಾರೆ.

    ಅದು 1974ರ ಕಾಲ. ಉಳುವವನೆ ಭೂಮಿಯ ಒಡೆಯ ಕಾನೂನು ಬಂದಾಗ ನಡೆದಿರುವ ಘಟನೆ. ಆವಾಗ ಬಾವಿಯೊಂದರಲ್ಲಿ ತುಂಬಾ ಜನರ ಮೂಳೆಗಳು ಸಿಕ್ಕಿದ್ದವು. ಆ ಮೂಳೆಗಳು ಯಾರವು ಅಂತ ಯಾರಿಗೂ ಗೊತ್ತಿಲ್ಲ. ಆ ಕಹಿ ಘಟನೆಯನ್ನು ಈ ಸಿನಿಮಾದಲ್ಲಿ ಹೇಳಲು ಹೊರಟಿದ್ದೇವೆ ಎಂದಿದ್ದಾರೆ ದರ್ಶನ್.

     

    ರಾಕ್‌ಲೈನ್‌ ವೆಂಕಟೇಶ್‌ ನಿರ್ಮಾಣದ, ತರುಣ್ ಸುದೀರ್ ನಿರ್ದೇಶನದ ಕಾಟೇರ ಚಿತ್ರ ಇದೇ ತಿಂಗಳು 29ಕ್ಕೆ ತೆರೆಗೆ ಬರಲು ಸಿದ್ಧವಾಗಿದೆ. ನಟ ದರ್ಶನರ ಬಹು ನಿರೀಕ್ಷಿತ ಚಿತ್ರ ಇದಾಗಿದ್ದು, ಈಗಾಗಲೇ ಚಿತ್ರ ಭಾರೀ ಹೈಪ್ ಕ್ರಿಯೆಟ್ ಮಾಡಿದೆ. ಬಹಳ ದಿನಗಳ ಬಳಿಕ ಡಿ ಬಾಸ್ ಮಾಸ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಟೀಸರ್ ಮತ್ತು ಸಾಂಗ್ ಯೂಟ್ಯೂಬ್‌ನಲ್ಲಿ ಸೆನ್ಸೇಷನ್ ಕ್ರಿಯೇಟ್‌ ಮಾಡಿದೆ. ಚಿತ್ರ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಈ ನಡುವೆ ವಾಣಿಜ್ಯ ನಗರಿಯಲ್ಲಿ ಅದ್ಧೂರಿಯಾಗಿ ಟ್ರೈಲರ್ ಬಿಡುಗಡೆಗೊಳಿಸಲಾಗಿದೆ.

  • ‘ಗಂಧದ ಗುಡಿ’ ಪ್ರಿ ರಿಲೀಸ್ ಇವೆಂಟ್ : ಅಮಿತಾಭ್, ರಜನಿ ಸೇರಿ ಗಣ್ಯರಿಗೆ ಆಹ್ವಾನ

    ‘ಗಂಧದ ಗುಡಿ’ ಪ್ರಿ ರಿಲೀಸ್ ಇವೆಂಟ್ : ಅಮಿತಾಭ್, ರಜನಿ ಸೇರಿ ಗಣ್ಯರಿಗೆ ಆಹ್ವಾನ

    ಪುನೀತ್ ರಾಜ್ ಕುಮಾರ್ ನಟಿಸಿರುವ ‘ಗಂಧದ ಗುಡಿ’ (Gandhad Gudi) ಡಾಕ್ಯುಮೆಂಟರಿ ಮಾದರಿಯ ಸಿನಿಮಾ ಇದೇ ತಿಂಗಳು ಕೊನೆಯಲ್ಲಿ ಬಿಡುಗಡೆ ಆಗುತ್ತಿದೆ. ರಿಲೀಸ್ ಗೂ ಮುನ್ನ ಪುನೀತ್ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ (Puneeth Rajkumar) ಅದ್ಧೂರಿಯಾಗಿ ಪ್ರಿ ರಿಲೀಸ್ ಇವೆಂಟ್ ಆಯೋಜನೆ ಮಾಡಲಾಗಿದ್ದು, ಭಾರತೀಯ ಸಿನಿಮಾ ರಂಗದ ದಿಗ್ಗಜರಿಗೆ ಅವರು ಆಹ್ವಾನ ನೀಡಿದ್ದಾರೆ. ಬಾಲಿವುಡ್ ಹಿರಿಯ ನಟ ಅಮಿತಾಭ್ ಬಚ್ಚನ್, ಹಿರಿಯ ನಟ ರಜನಿಕಾಂತ್, ಕಮಲ್ ಹಾಸನ್ ಸೇರಿದಂತೆ ಅನೇಕರಿಗೆ ಆಹ್ವಾನ ಹೋಗಿದೆ.

    ಈಗಾಗಲೇ ಕನ್ನಡ ಸಿನಿಮಾ ರಂಗದ ಅನೇಕರಿಗೆ ಆಹ್ವಾನ ಪತ್ರಿಕೆಯನ್ನು ಕೊಡಲಾಗಿದ್ದು, ಡಾ.ರಾ‍ಜ್ ಕುಟುಂಬ ಮೊನ್ನೆಯಷ್ಟೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ ಮಾಡಿ, ಕಾರ್ಯಕ್ರಮಕ್ಕೆ ಆಹ್ವಾನಿಸಿದೆ. ಈ ಕಾರ್ಯಕ್ರಮಕ್ಕೆ ಆಹ್ವಾನಿಸಲೆಂದೇ ವಿಶೇಷ ಆಮಂತ್ರಣ ಪತ್ರಿಕೆಯನ್ನು ರೆಡಿ ಮಾಡಲಾಗಿದ್ದು, ಪುನೀತ್ ಪುತ್ಥಳಿ, ಗಂಧದ ತುಂಡಿನಲ್ಲಿ ಪುನೀತ್ ಹಸ್ತಾಕ್ಷರ ಹಾಗೂ ಮರದ ಹಲಗೆಯಲ್ಲಿ ಕೆತ್ತಲಾದ ಆಮಂತ್ರಣ ಪತ್ರಿಕೆಯನ್ನು ತಯಾರಿಸಲಾಗಿದೆ. ಇದನ್ನೂ ಓದಿ:ಕನ್ನಡದ ಹೆಸರಲ್ಲಿ ರೋಲ್‌ಕಾಲ್‌: ಪ್ರೂವ್ ಮಾಡಿದರೆ ನೇಣಿಗೇರುವೆ ಎಂದ ರೂಪೇಶ್ ರಾಜಣ್ಣ

    ಮೊನ್ನೆಯಷ್ಟೇ  ಗಂಧದ ಗುಡಿ ಟೀಸರ್ ಬಿಡುಗಡೆ ಆಗಿದ್ದು, ಪ್ರೇಕ್ಷಕರು ದಾಖಲೆ ರೀತಿಯಲ್ಲಿ ಅದನ್ನು ವೀಕ್ಷಿಸಿದ್ದಾರೆ. ಈ ಟೀಸರ್ ನಲ್ಲಿ ಏನಿಲ್ಲ, ಎಲ್ಲವೂ ಇದೆ. ಬೆಟ್ಟ, ಗುಡ್ಡ, ನದಿ, ಹಳ್ಳ, ಕೊಳ್ಳ, ಅರಣ್ಯ, ಕಾಡು ಪ್ರಾಣಿಗಳು, ಕಾಡಂಚಿನ ಜನರು, ದೇವರು, ದೈವ ಎಲ್ಲವನ್ನೂ ಒಂದೇ ಉಸಿರಿಗೆ ಹಿಡಿದಿಟ್ಟಿದ್ದಾರೆ ಪುನೀತ್ ರಾಜ್‍ಕುಮಾರ್. ರಾತ್ರಿ ಅವರು ಕಾಡಿನೊಳಗೆ ನುಗ್ಗಿದಾಗ ನಾವೇ ಭಯಪಡುವಷ್ಟು ಸುಂದರವಾಗಿ ಸೆರೆ ಹಿಡಿದಿದ್ದಾರೆ ಆ ರಾತ್ರಿಯನ್ನು. ಸಮುದ್ರದಾಳಕ್ಕೆ ಅಪ್ಪು ಜಿಗಿದಾಗ ಇಲ್ಲಿ ನಾವೇ ಒದ್ದೆಯಾಗುವಂತೆ ಸಿನಿಮಾಟೋಗ್ರಫಿ ಇದೆ. ಎಲ್ಲವೂ ಚಂದ, ಚಂದ.

    ಗಂಧದ ಗುಡಿ ಟ್ರೈಲರ್ ನ ಮತ್ತೊಂದು ಸೊಗಸು ಅಂದರೆ, ಅಪ್ಪು ಹಾಗೂ ಅವರ ಅಪ್ಪಾಜಿ ಬಾಳಿ ಬದುಕಿದ ಮನೆಯನ್ನು ತೋರಿಸಿದ್ದಾರೆ. ಸ್ವತಃ ಆ ಮನೆಯ ಬಗ್ಗೆ ಪುನೀತ್ ರಾಜ್‍ಕುಮಾರ್ ಅವರೇ ವಿವರಿಸುತ್ತಾರೆ. ಮನೆಯನ್ನು ಕಣ್ತುಂಬಿಕೊಳ್ಳುವ ಹೊತ್ತಲ್ಲಿ ಡಾ.ರಾಜ್ ಕುಮಾರ್ ಪ್ರವೇಶ. ಥ್ರಿಲ್ ಅನಿಸುವಷ್ಟು ಮಜಾ ಕೊಡುತ್ತದೆ ಟ್ರೇಲರ್.

    ಇಂದು ಬೆಂಗಳೂರಿನ ನರ್ತಕಿ ಚಿತ್ರಮಂದಿರದಲ್ಲಿ ಪುನೀತ್ ರಾಜ್‍ಕುಮಾರ್ ಅಭಿಮಾನಿಗಳಿಗಾಗಿ ಟ್ರೇಲರ್ ಪ್ರದರ್ಶನ ಏರ್ಪಡಿಸಲಾಗಿತ್ತು. ಗಂಧದ ಗುಡಿಯ ಅಂದವನ್ನು ಕಣ್ತುಂಬಿಕೊಂಡ ಕಂಗಳಲ್ಲಿ ಅಪ್ಪು ಇಲ್ಲ ಅನ್ನುವ ಕಂಬನಿ ಸುರಿಯುತ್ತಿತ್ತು. ರಾಘವೇಂದ್ರ ರಾಜಕುಮಾರ ಸೇರಿದಂತೆ ಅಲ್ಲಿದ್ದವರ ಅಷ್ಟೂ ಕಣ್ಣುಗಳು ಒದ್ದೆ ಆಗಿದ್ದವು. ಟ್ರೇಲರೇ ಇಷ್ಟೊಂದು ಭಾವುಕತೆ ಸೃಷ್ಟಿ ಮಾಡಿದೆ. ಇದೇ ತಿಂಗಳು ಕೊನೆಯಲ್ಲಿ ಪೂರ್ತಿ ಚಿತ್ರವೇ ಬಿಡುಗಡೆ ಆಗುತ್ತಿದೆ. ಹೃದಯ ಒಡೆಯುವ ಕಾಲವದು.

    Live Tv
    [brid partner=56869869 player=32851 video=960834 autoplay=true]

  • ಯಾರು ರಾಜಮೌಳಿ ಅವನು? – RRR ಇವೆಂಟ್ ಬಗ್ಗೆ ವಾಟಾಳ್ ನಾಗರಾಜ್ ಆಕ್ರೋಶ

    ಯಾರು ರಾಜಮೌಳಿ ಅವನು? – RRR ಇವೆಂಟ್ ಬಗ್ಗೆ ವಾಟಾಳ್ ನಾಗರಾಜ್ ಆಕ್ರೋಶ

    ಚಿಕ್ಕಬಳ್ಳಾಪುರ: ಮಾರ್ಚ್ 19 ರಂದು ಚಿಕ್ಕಬಳ್ಳಾಪುರ ತಾಲೂಕಿನ ಅಗಲಗುರ್ಕಿ ಬಳಿ ನಡೆದ ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್‌ ಚಿತ್ರದ ಪ್ರೀ ರಿಲೀಸ್ ಇವೆಂಟ್ ವಿರುದ್ಧ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಆಕ್ರೋಶ ಹೊರಹಾಕಿದ್ದಾರೆ.

    ಚಿಕ್ಕಬಳ್ಳಾಪುರ ನಗರದ ರೈಲ್ವೆ ನಿಲ್ದಾಣದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಅಂದು ಪರಭಾಷಾ ಚಿತ್ರಗಳು ಕರ್ನಾಟಕದಲ್ಲಿ ಬೇಡ ಅಂತ ಮೈಸೂರು ನಗರದಲ್ಲಿ ಚಳವಳಿ ಮಾಡಿದೆ. ಆದರೆ ಅದೇ ದಿನ ಚಿಕ್ಕಬಳ್ಳಾಪುರದಲ್ಲಿ ಆರ್‌ಆರ್‌ಆರ್‌ ಸಿನಿಮಾದ ಪ್ರೀ ರಿಲೀಸ್ ಇವೆಂಟ್ ಮಾಡಿದ್ದಾರೆ. ಇದು ನನಗೆ ಬಹಳ ನೋವು ತಂದಿತು. ಇದು ಗಂಡು ಮೆಟ್ಟಿದ ಕನ್ನಡಿಗರ ನೆಲ, ಇಲ್ಲಿ ಕನ್ನಡಕ್ಕೆ, ಕನ್ನಡಿಗರಿಗೆ, ಮಾನ್ಯತೆ ಗೌರವ ಇರಬೇಕು. ಆದರೆ ತೆಲುಗು ಭಾಷೆಯ ಆರ್‌ಆರ್‌ಆರ್‌ ಚಿತ್ರದ ಪ್ರೀ ರಿಲೀಸ್ ಇವೆಂಟ್ ಮಾಡಿದ್ದಾರೆ. ಮಾನ ಮಾರ್ಯಾದೆ ಇರುವವರು ಮಾಡುವ ಕೆಲಸ ಇದಲ್ಲ ಅಂತ ಅಸಮಾಧಾನ ಹೊರಹಾಕಿದರು. ಇದನ್ನೂ ಓದಿ: ಅಮೆರಿಕಾದಲ್ಲಿ ಅಪ್ಪು ಬರ್ತಡೇ, ಪುನೀತ್ ರಾಜ್ ಕುಮಾರ್ ಮಗಳೇ ಅತಿಥಿ

    ಮುಖ್ಯಮಂತ್ರಿಗಳು ಒಳ್ಳೆಯವರು ಅವರನ್ನು ದಾರಿ ತಪ್ಪಿಸಿ ಕಾರ್ಯಕ್ರಮಕ್ಕೆ ಕರೆ ತಂದಿದ್ದಾರೆ. ಅವರಿಗೆ ಏನಾಗಿದೆ ಅಂದರೆ ಈ ಕಡೆ ಈ ಮಂತ್ರಿ ಆ ಕಡೆ ಆ ಮಂತ್ರಿ ಕರೆದ ಕಡೆ ಹೋಗಬೇಕಿದೆ. ಆರ್‌ಆರ್‌ಆರ್‌ ಪ್ರೀ ರಿಲೀಸ್ ಇವೆಂಟ್ ಮಾಡಿದ್ದು ಕನ್ನಡಿಗರಿಗೆ ಕನ್ನಡ ಚಿತ್ರರಂಗಕ್ಕೆ ಅಪಮಾನ. ಯಾರು ರಾಜಮೌಳಿ ಅವನು? ಅಂತ ಖಾರವಾಗಿ ಪ್ರಶ್ನೆ ಮಾಡಿ, ಏನು ಅವನದು ಹೈದರಾಬಾದ್ ಆಂಧ್ರದಲ್ಲಿ ತೆಲಂಗಾಣದಲ್ಲಿ ಮಾಡಿಕೊಳ್ಳಲಿ. ಕರ್ನಾಟಕದ ನಂದಿಬೆಟ್ಟದ ಪಕ್ಕಕ್ಕೆ ಬಂದು ಕನ್ನಡಿಗರ ನೆಲ ದುರ್ಬಳಕೆ ಮಾಡಿಕೊಂಡಿದ್ದು ಸರಿ ಇಲ್ಲ. ಈ ವಿಚಾರದಲ್ಲಿ ಜಿಲ್ಲಾಡಳಿತ ವಿಫಲ ಪೊಲೀಸ್ ಇಲಾಖೆ ವೈಫಲ್ಯ ಅನುಭವಿಸಿದೆ. ಡಿಸಿಯವರೇ ಕಾರ್ಯಕ್ರಮಕ್ಕೆ ಹೇಗೆ ಅನುಮತಿ ನೀಡಿದ್ದೀರಾ? ಯಾವ ಕಾರಣಕ್ಕೆ ಕೊಟ್ರಿ? ಕನ್ನಡ ಚಿತ್ರ ನಾ ಎಂದಾದರೂ ಈ ತರ ಕಾರ್ಯಕ್ರಮ ಮಾಡಿದ್ದೀರಾ? ಮೆರವಣಿಗೆ ಪ್ರಚಾರ ಮಾಡಿದ್ದೀರಾ. ಯಾವ ತೆವಲಿಗೆ ಮಾಡಿದ್ದೀರಾ? ಏನ್ ತೀಟೆ ನಿಮ್ಮದು, ಅಂತ ಜಿಲ್ಲಾಡಳಿತದ ನಡೆ ಬಗ್ಗೆ ಖಂಡಿಸಿದರು. ಇದನ್ನೂ ಓದಿ: ಆರೋಗ್ಯ ಇಲಾಖೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ: ಸುಧಾಕರ್ ರಾಜೀನಾಮೆಗೆ ಎಎಪಿ ಆಗ್ರಹ

    ಕನ್ನಡ ಭಾಷೆಯ ಮೇಲೆ ಈ ರೀತಿಯ ದೌರ್ಜನ್ಯ ಸರಿ ಅಲ್ಲ. ಒಂದು ಕಡೆ ಶಾಸನ ಸಭೆ ನಡೆಯುತ್ತಿದ್ದು, ಇಲ್ಲಿ ನಡೆದಿರುವ ದುರಂತದ ಬಗ್ಗೆ ಖಂಡಿಸುತ್ತೇನೆ. ಸಮಗ್ರ ವಾದ ಉನ್ನತ ಮಟ್ಟದ ತನಿಖೆ ಮಾಡುವಂತೆ ಆಗ್ರಹಿಸುತ್ತೇನೆ ಎಂದರು. ನಿಮ್ಮ ವ್ಯಾಪಾರಕ್ಕೋಸ್ಕರ ಕನ್ನಡಿಗರ ಭೂಮಿ ಬಳಸಿದ್ದು ಅಕ್ಷಮ್ಯ ಅಪರಾಧ. ನಾನು ನನ್ನ ಜೀವನದುದ್ದಕ್ಕೂ ಕನ್ನಡ ಬಿಟ್ಟು ಬೇರೆ ಮಾತು ಇಲ್ಲ ಪಕ್ಷಾಂತರ ಮಾಡಿಲ್ಲ. ಕನ್ನಡಕ್ಕೆ ಅಪಮಾನ ಆಗಿದೆ. ಹೀಗಾಗಿ ಸಚಿವ ಡಾ. ಕೆ. ಸುಧಾಕರ್ ಬಹಿರಂಗ ಕ್ಷಮಾಪಣೆ ಕೇಳಬೇಕು. ಸಚಿವ ಸ್ಥಾನಕ್ಕೆ ಸುಧಾಕರ್ ರಾಜೀನಾಮೆ ಕೊಡಬೇಕು. ಇದು ಕನ್ನಡಿಗರು ಮಾಡಿದ ಅಪಮಾನ ನೋವಿನ ಸಂಗತಿ. ಕರ್ನಾಟಕದಲ್ಲಿ ಪರಭಾಷಾ ಚಿತ್ರಗಳನ್ನ ಬಹಿಷ್ಕಾರ ಹಾಕಬೇಕು. ಶಿವರಾಜ್ ಕುಮಾರ್ ಸಹ ಕಾರ್ಯಕ್ರಮಕ್ಕೆ ಬರಬಾರದಿತ್ತು ಎಂದರು.

  • ಸ್ಟೇಜ್‌ನತ್ತ ನುಗ್ಗಿದ ಫ್ಯಾನ್ಸ್‌ ನಿಯಂತ್ರಣಕ್ಕೆ ಪೊಲೀಸರ ಹರಸಾಹಸ- RRR ಪ್ರೀ-ರಿಲೀಸ್‌ ಇವೆಂಟ್‌ ತಡವಾಗಿ ಆರಂಭ

    ಸ್ಟೇಜ್‌ನತ್ತ ನುಗ್ಗಿದ ಫ್ಯಾನ್ಸ್‌ ನಿಯಂತ್ರಣಕ್ಕೆ ಪೊಲೀಸರ ಹರಸಾಹಸ- RRR ಪ್ರೀ-ರಿಲೀಸ್‌ ಇವೆಂಟ್‌ ತಡವಾಗಿ ಆರಂಭ

    ಖ್ಯಾತ ನಿರ್ದೇಶಕ ರಾಜಮೌಳಿ ನಿರ್ದೇಶನದ ‘RRR’ ಸಿನಿಮಾ ಪ್ರೀ-ರಿಲೀಸ್ ಇವೆಂಟ್ ಚಿಕ್ಕಬಳ್ಳಾಪುರದಲ್ಲಿ ಅದ್ದೂರಿಯಾಗಿ ನಡೆಯುತ್ತಿದೆ. ಈ ಇವೆಂಟ್‍ಗೆ ಅಭಿಮಾನಿಗಳ ಜಾತ್ರೆಯೇ ನೆರದಿದ್ದು, ತಡವಾಗಿ ಕಾರ್ಯಕ್ರಮ ಪ್ರಾರಂಭವಾಯಿತು.

    ತಮ್ಮ ನೆಚ್ಚಿನ ನಟರಾದ ಜ್ಯೂ.ಎನ್‍ಟಿಆರ್, ರಾಮ್‍ಚರಣ್‍ತೇಜ ಮತ್ತು ನಿರ್ದೇಶಕ ರಾಜಮೌಳಿಯನ್ನು ನೋಡಲು ಅಭಿಮಾನಿಗಳು ಕಿಕ್ಕಿರಿದು ಸೇರಿಕೊಂಡಿದ್ದರು. ಈ ವೇಳೆ ಪೊಲೀಸರನ್ನು ಲೆಕ್ಕಿಸದೆ ಅಭಿಮಾನಿಗಳು ಸ್ಟೇಜ್‌ ಬಳಿ ನುಗ್ಗಿದರು ಹೋದರು. ಭದ್ರತೆಗೆ ಹಾಕಿದ್ದ ಬ್ಯಾರಿಕೇಡ್ ತಳ್ಳಿ ಓಡಿದರು. ಅಭಿಮಾನಿಗಳನ್ನು ತಡೆಯಲು ಪೊಲೀಸರು ಹರಸಾಹಸಪಟ್ಟರು. ಈ  ಹಿನ್ನೆಲೆ ‘RRR’ ಕಾರ್ಯಕ್ರಮ ಸ್ವಲ್ಪ ತಡವಾಗಿ ಪ್ರಾರಂಭವಾಯಿತು. ಈ ಕಾರ್ಯಕ್ರಮದ ನಿರೂಪಣೆಯನ್ನು ಅನುಶ್ರೀ ನಡೆಸಿಕೊಟ್ಟರು. ಇದನ್ನೂ ಓದಿ: ಇಂದು ಚಿಕ್ಕಬಳ್ಳಾಪುರದಲ್ಲಿಆರ್.ಆರ್.ಆರ್ ಮೆಗಾ ಪ್ರೀ ರಿಲೀಸ್ ಇವೆಂಟ್ : ಏನೆಲ್ಲ ವಿಶೇಷ?

    ಅಭಿಮಾನಿಗಳ ಪ್ರತಿಕ್ರಿಯೆ ನೋಡಿದ ಸಿನಿಮಾ ತಂಡ ಫುಲ್ ಖುಷ್ ಆಗಿದ್ದು, ಗಲಾಟೆ ಮಾಡದಂತೆ ವಿನಂತಿ ಮಾಡಿಕೊಂಡಿದೆ. ಇವೆಂಟ್‍ಗೂ ಮುನ್ನ ಸುದ್ದಿಗೋಷ್ಠಿ ನಡೆಸಿದ ಚಿತ್ರತಂಡ ತಮ್ಮ ಸಿನಿಮಾಗಳ ಬಗ್ಗೆ ಗುಟ್ಟು ಬಿಟ್ಟುಕೊಟ್ಟಿಲ್ಲ. ಈ ವೇಳೆ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರನ್ನು ನೆನೆದು ಭಾವುಕರಾಗಿ ಮಾತನಾಡಿದ್ದಾರೆ.

  • 100 ಎಕರೆ ಪ್ರದೇಶದಲ್ಲಿ ಆರ್.ಆರ್.ಆರ್  ಕನ್ನಡ ಪ್ರಿರಿಲೀಸ್ ಇವೆಂಟ್ : ಯಾರೆಲ್ಲ ಬರ್ತಾರೆ ಗೊತ್ತಾ?

    100 ಎಕರೆ ಪ್ರದೇಶದಲ್ಲಿ ಆರ್.ಆರ್.ಆರ್ ಕನ್ನಡ ಪ್ರಿರಿಲೀಸ್ ಇವೆಂಟ್ : ಯಾರೆಲ್ಲ ಬರ್ತಾರೆ ಗೊತ್ತಾ?

    ರಾಜಮೌಳಿ ನಿರ್ದೇಶನದ ಆರ್.ಆರ್.ಆರ್ ಸಿನಿಮಾದ ಕನ್ನಡ ಇವೆಂಟ್ ಚಿಕ್ಕಬಳ್ಳಾಪುರದಲ್ಲಿ ನಡೆಯಲಿದೆ. ಮಾರ್ಚ್ 19ರಂದು ನಡೆಯಲಿರುವ ಈ ಇವೆಂಟ್ ಗಾಗಿ 100 ಎಕರೆ ಪ್ರದೇಶ ಸಿದ್ಧಗೊಳ್ಳುತ್ತಿದೆ. 2 ಲಕ್ಷಕ್ಕೂ ಹೆಚ್ಚು ಅಭಿಮಾನಿಗಳು ಸೇರಲಿರುವ ಈ ಕಾರ್ಯಕ್ರಮದಲ್ಲಿ ತೆಲುಗು, ತಮಿಳು ಮತ್ತು ಕನ್ನಡದ ಸ್ಟಾರ್ ನಟರು ಭಾಗಿಯಾಗುತ್ತಿರುವುದು ವಿಶೇಷ. ಇದನ್ನೂ ಓದಿ : ದಿ ಕಾಶ್ಮೀರ್ ಫೈಲ್ಸ್ : ಅಂಥದ್ದೇನಿದೆ ಸಿನಿಮಾದಲ್ಲಿ? ದಳ್ಳುರಿಯಲ್ಲಿ ದಹನದ ಕಥನ!

    ಈ ಇವೆಂಟ್ ಅನ್ನು ಪುನೀತ್ ರಾಜ್ ಕುಮಾರ್ ಅವರಿಗೆ ಅರ್ಪಿಸಲು ಚಿತ್ರತಂಡ ನಿರ್ಧರಿಸಿದ್ದು, ಪುನೀತ್ ನೆನಪಿನಲ್ಲಿ ಹಲವು ಕಾರ್ಯಕ್ರಮಗಳು ಕೂಡ ನಡೆಯುತ್ತವೆ. ಇದರ ನೇತೃತ್ವವನ್ನು ಶಿವರಾಜ್ ಕುಮಾರ್ ಅವರಿಗೆ ವಹಿಸಲಾಗಿದೆಯಂತೆ.  ಇದನ್ನೂ ಓದಿ : ಉಪೇಂದ್ರ ಅವರ ಹೊಸ ಸಿನಿಮಾದ ಪೋಸ್ಟರ್ : ಅಸಲಿನಾ? ನಕಲಾ?

    ಸಿನಿಮಾ ರಂಗದ ಕಲಾವಿದರು ಮತ್ತು ತಂತ್ರಜ್ಞರು ಮಾತ್ರವಲ್ಲ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ, ಆರೋಗ್ಯ ಸಚಿವ ಸುಧಾಕರ್ ಸೇರಿದಂತೆ ಹಲವು ರಾಜಕೀಯ ಮುಖಂಡರು ಕೂಡ ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎನ್ನುವ ಮಾಹಿತಿ ಇದೆ. ಹಾಗಾಗಿ ಎಲ್ಲ ರೀತಿಯ ಭದ್ರತೆಯನ್ನೂ ಮಾಡಿಕೊಳ್ಳಲಾಗುತ್ತಿದೆಯಂತೆ. ಇದನ್ನೂ ಓದಿ : ದಿ ಕಾಶ್ಮೀರ್ ಫೈಲ್ಸ್ : ಬಾಲಿವುಡ್ ಮೇಲೆ ಕಿಡಿಕಾರಿದ ಕಂಗನಾ ರಣಾವತ್

    ಈ ಕಾರ್ಯಕ್ರಮದಲ್ಲಿ ನಿರ್ದೇಶಕ ರಾಜಮೌಳಿ, ನಟರಾದ ರಾಮ್ ಚರಣ್ ತೇಜ್, ಜ್ಯೂನಿಯರ್ ಎನ್.ಟಿ.ಆರ್, ಆಲಿಯಾ ಭಟ್, ಅಜಯ್ ದೇವಗನ್,  ಸಂಗೀತ ನಿರ್ದೇಶಕ ಎಂ.ಎಂ. ಕೀರವಾಣಿ ಸೇರಿದಂತೆ ಚಿತ್ರತಂಡದ ಬಹುತೇಕ ಸದಸ್ಯರು ಕೂಡ ಅಂದು ಭಾಗಿಯಾಗಲಿದ್ದಾರೆ. ಮನರಂಜನೆ ಕಾರ್ಯಕ್ರಮ ಮತ್ತು ಚಿತ್ರತಂಡದೊಂದಿಗೆ ಸಂವಾದ ಕೂಡ ಈ ಸಂದರ್ಭದಲ್ಲಿ ಏರ್ಪಡಿಸಲಾಗಿದೆ.