Tag: prayaga martin

  • ಗೀತಾ ಮಾತಿನ ಚಿತ್ರೀಕರಣ ಮುಗೀತು!

    ಗೀತಾ ಮಾತಿನ ಚಿತ್ರೀಕರಣ ಮುಗೀತು!

    ಬೆಂಗಳೂರು: ನಿರ್ಮಾಪಕರಾದ ಸೈಯದ್ ಸಲಾಂ ಮತ್ತು ಶಿಲ್ಪಾ ಗಣೇಶ್ ಅವರ ಬ್ಯಾನರ್ ಗಳಾದ ಎಸ್ ಎಸ್ ಫಿಲ್ಮ್ ಮತ್ತು ಗೋಲ್ಡನ್ ಮೂವೀಸ್ ಅಡಿಯಲ್ಲಿ ಜಂಟಿಯಾಗಿ ನಿರ್ಮಿಸುತ್ತಿರುವ ಗೀತಾ ಚಿತ್ರದ ಮಾತಿನ ಚಿತ್ರೀಕರಣ ಮುಗಿದಿದೆ. ಇನ್ನು ಎರಡು ಹಾಡುಗಳ ಚಿತ್ರೀಕರಣ ಬಾಕಿ ಉಳಿದಿದೆ.

    ಮನಾಲಿ, ಕೊಲ್ಕತ್ತಾ, ಮೈಸೂರು, ಹೈದರಾಬಾದ್, ಬೆಂಗಳೂರು ಮತ್ತು ಇನ್ನಿತರ ಸ್ಥಳಗಳಲ್ಲಿ ಶೂಟಿಂಗ್ ನಡೆಸಿದೆ. ಗೋಲ್ಡನ್ ಸ್ಟಾರ್ ಗಣೇಶ್ ಅವರೊಡನೆ ಸಾನ್ವಿ, ಪಾರ್ವತಿ, ಪ್ರಯಾಗ ಮಾರ್ಟಿನ್, ಸುಧಾರಾಣಿ, ದೇವರಾಜ್, ಅಚ್ಯುತ್, ರಂಗಾಯಣ ರಘು ಮತ್ತು ಇನ್ನಿತರರು ಅಭಿನಯಿಸಿದ್ದಾರೆ.

    ಮಿಸ್ಟರ್ & ಮಿಸೆಸ್ ರಾಮಾಚಾರಿ ಮತ್ತು ರಾಜಕುಮಾರ ಚಿತ್ರದ ಸಹ ನಿರ್ದೇಶಕರು ಮತ್ತು ಸಂಭಾಷಣೆಕಾರರಾಗಿ ಕೆಲಸ ಮಾಡಿದ್ದ ವಿಜಯ್  ನಾಗೇಂದ್ರ ಅವರು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ಅನುಪ್ ರೂಬೆನ್ಸ್ ಈ ಚಿತ್ರಕ್ಕೆ ಸಂಗೀತವನ್ನು ನೀಡುತ್ತಿದ್ದಾರೆ. ಚಿತ್ರಕ್ಕೆ ಶ್ರೀಶ ಕುಂದ್ರಳ್ಳಿ ಅವರ ಛಾಯಾಗ್ರಹಣವಿದೆ.

  • ಗೋಲ್ಡನ್ ಸ್ಟಾರ್ ಗಣೇಶ್ ಚಿತ್ರಕ್ಕೆ ಶಾನ್ವಿ ನಾಯಕಿ!

    ಗೋಲ್ಡನ್ ಸ್ಟಾರ್ ಗಣೇಶ್ ಚಿತ್ರಕ್ಕೆ ಶಾನ್ವಿ ನಾಯಕಿ!

    ಗೋಲ್ಡನ್ ಸ್ಟಾರ್ ಗಣೇಶ್ ಗೀತಾ ಎಂಬ ಚಿತ್ರದಲ್ಲಿ ನಟಿಸುತ್ತಿರೋ ವಿಚಾರ ಗೊತ್ತೇ ಇದೆ. ಈ ಚಿತ್ರಕ್ಕೆ ಈಗಾಗಲೇ ಚಾಲನೆ ಸಿಕ್ಕಿದೆ. ಇದೇ ಸಮಯದಲ್ಲಿ ಬಾಕಿ ಉಳಿದಿದ್ದ ಮೂರನೇ ನಾಯಕಿಯ ಆಯ್ಕೆಯೂ ನಡೆದಿದೆ. ಶಾನ್ವಿ ಶ್ರೀವಾಸ್ತವ ಈ ಚಿತ್ರಕ್ಕೆ ಹೊಸತಾಗಿ ಎಂಟ್ರಿ ಕೊಟ್ಟಿದ್ದಾರೆ.

    ಗೀತಾ ಚಿತ್ರದಲ್ಲಿ ಮೂವರು ನಾಯಕಿಯರು ನಟಿಸಲಿದ್ದಾರೆ. ಈಗಾಗಲೇ ಮಲೆಯಾಳಿ ಚೆಲುವೆಯರಾದ ಪ್ರಯಾಗಾ ಮಾರ್ಟಿನ್ ಮತ್ತು ಪಾರ್ವತಿ ಅರುಣ್ ನಾಯಕಿಯರಾಗಿ ನಿಕ್ಕಿಯಾಗಿದ್ದರು. ಮೂರನೇ ನಾಯಕಿಗಾಗಿ ವ್ಯಾಪಕವಾಗಿ ಹುಡುಕಾಟ ಆರಂಭವಾಗಿತ್ತು. ಇದೀಗ ಆ ಪಾತ್ರಕ್ಕೆ ಶಾನ್ವಿ ಆಗಮನವಾಗಿದೆ.

    ಈ ಚಿತ್ರಕ್ಕೆ ಈ ಹಿಂದೆ ಮುಗುಳು ನಗೆ ಚಿತ್ರ ನಿರ್ಮಾಣ ಮಾಡಿದ್ದ ಸೈಯದ್ ಸಲಾಮ್ ಅವರೇ ಹಣ ಹೂಡಿದ್ದಾರೆ. ವಿಜಯ್ ನಾಗೇಂದ್ರ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಶಾನ್ವಿ ಶ್ರೀವಾಸ್ತವ ಮುಂದಿನ ಶೆಡ್ಯೂಲ್ ಹೊತ್ತಿಗೆಲ್ಲ ಚಿತ್ರತಂಡ ಸೇರಿಕೊಳ್ಳಲಿದ್ದಾರಂತೆ. ಮುಂದಿನ ಹಂತದ ಚಿತ್ರೀಕರಣ ಕೋಲ್ಕತ್ತಾದಲ್ಲಿ ನಡೆಯಲಿದೆ. ಅಲ್ಲಿಂದ ಕಾಶ್ಮೀರದಲ್ಲಿಯೂ ಚಿತ್ರೀಕರಣ ನಡೆಸಲು ಚಿತ್ರತಂಡ ತೀರ್ಮಾನಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews