Tag: Prayag Raj

  • ಮಹಾ ಕುಂಭ ಮೇಳಕ್ಕೆ ತೆರಳುತ್ತಿದ್ದ ವೇಳೆ ಭೀಕರ ಅಪಘಾತ – ಬೆಳಗಾವಿಯ 7 ಮಂದಿ ದುರ್ಮರಣ

    ಮಹಾ ಕುಂಭ ಮೇಳಕ್ಕೆ ತೆರಳುತ್ತಿದ್ದ ವೇಳೆ ಭೀಕರ ಅಪಘಾತ – ಬೆಳಗಾವಿಯ 7 ಮಂದಿ ದುರ್ಮರಣ

    ಬೆಳಗಾವಿ: ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳ (Maha Kumbh 2025) ಮುಕ್ತಾಯಗೊಳ್ಳಲು ಇನ್ನೆರಡು ದಿನಗಳಷ್ಟೇ ಬಾಕಿಯಿದೆ. ಈ ಹಿನ್ನೆಲೆ ಪುಣ್ಯಸ್ನಾನಕ್ಕೆ (Holy Bath) ತೆರಳುತ್ತಿದ್ದ ಬೆಳಗಾವಿ ಗೋಕಾಕ್‌ ನಗರದ 7 ಮಂದಿ ಸಾವನ್ನಪ್ಪಿರುವ ಘಟನೆ ನಡೆದಿದೆ.

    ಮಧ್ಯ ಪ್ರದೇಶದ (Madhya Pradesh) ಜಬಲಪೂರ ಪೆಹರಾ ಟೋಲ್ ನಾಕಾ ಬಳಿ ಬೆಳಗಿನ ಜಾವ ಕ್ರೂಸರ್‌ ಬಸ್‌ಗೆ ಡಿಕ್ಕಿ ಹೊಡೆದ ಪರಿಣಾಮ ದುರಂತ ಸಂಭವಿಸಿದೆ. 7 ಮಂದಿ ಕನ್ನಡಿಗರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಮೂವರ ಸ್ಥಿತಿ ಗಂಭೀರವಾಗಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಸುಳ್ಳಾಯ್ತು ಐಐಟಿ ಬಾಬಾ ಭವಿಷ್ಯ – ಪಾಕ್‌ ವಿರುದ್ಧ ಗೆದ್ದು ಬೀಗಿದ ಭಾರತ

    ಕಳೆದ ಎರಡು ದಿನಗಳ ಹಿಂದೆ ಗೋಕಾಕ್‌ ನಗರದಿಂದ 10 ಮಂದಿ ಕ್ರೂಸರ್‌ನಲ್ಲಿ ಮಹಾ ಕುಂಭಮೇಳಕ್ಕೆ ಹೊರಟಿದ್ದರು. ಇಂದು ಮುಂಜಾನೆ ಮಧ್ಯಪ್ರದೇಶ ಸಾರಿಗೆ ಬಸ್‌ಗೆ ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ. ಇದನ್ನೂ ಓದಿ: ವ್ಯಕ್ತಿಯೊಬ್ಬನಿಂದ ಕಿರುಕುಳ ಆರೋಪ – ಬಿಬಿಎಂಪಿ ಕಚೇರಿಯಲ್ಲಿ ಕೆಲಸ ಮಾಡ್ತಿದ್ದ ಮಹಿಳೆ ಆತ್ಮಹತ್ಯೆ

    https://youtu.be/9aRZwimkiN0?si=1pIJY_bEtIdzMSF8

  • ಮಹಾ ಕುಂಭಮೇಳದಲ್ಲಿ ನಡೆಯುವ ಅಮೃತ ಸ್ನಾನದ ವಿಶೇಷತೆ, ಹಿನ್ನೆಲೆ ಏನು?

    ಮಹಾ ಕುಂಭಮೇಳದಲ್ಲಿ ನಡೆಯುವ ಅಮೃತ ಸ್ನಾನದ ವಿಶೇಷತೆ, ಹಿನ್ನೆಲೆ ಏನು?

    ಕುಂಭಮೇಳವು ಪ್ರತಿ ಮೂರು ವರ್ಷಗಳಿಗೊಮ್ಮೆ ನಾಲ್ಕು ವಿಭಿನ್ನ ಸ್ಥಳಗಳಲ್ಲಿ ನಡೆಯುತ್ತದೆ. ಪ್ರತಿ 12 ವರ್ಷಗಳಿಗೊಮ್ಮೆ ಪ್ರಯಾಗರಾಜ್‌ನಲ್ಲಿ (Prayag Raj) ಮಹಾಕುಂಭವನ್ನು (Maha Kumbh Mela) ಆಯೋಜಿಸಲಾಗುತ್ತದೆ. ಆದರೆ ಈ ಬಾರಿಯ ಮಹಾಕುಂಭಮೇಳ ಬಹಳ ವಿಶೇಷವಾಗಿದ್ದು, 144 ವರ್ಷಗಳ ಬಳಿಕ ಈ ಕುಂಭಮೇಳ ನಡೆಯುತ್ತಿದೆ.

    ಈ ಬಾರಿ ಪ್ರಯಾಗರಾಜ್‌ದಲ್ಲಿ ಜನವರಿ 13 ರಿಂದ ಫೆಬ್ರವರಿ 26 ರವರೆಗೆ ಮಹಾಕುಂಭಮೇಳ ನಡೆಯುತ್ತಿದ್ದು, ದೇಶ ವಿದೇಶಗಳಿಂದ ಲಕ್ಷಾಂತರ ಆಗಮಿಸುತ್ತಿದ್ದಾರೆ. ಮಹಾಕುಂಭಮೇಳ ಕೇವಲ ಉತ್ಸವ ಮಾತ್ರವಲ್ಲ, ಸಾವಿರಾರು ವರ್ಷಗಳ ಐತಿಹ್ಯ, ಪುರಾತನ ಇತಿಹಾಸ ಹೊಂದಿರುವ ಉತ್ಸಾಹಭರಿತ ಸಾಂಸ್ಕೃತಿಕ ಕಾರ್ಯಕ್ರಮವಾಗಿದೆ. ಈ ಉತ್ಸವವು ಪ್ರಾಚೀನ ಹಿಂದೂ ಪುರಾಣ ಮತ್ತು ಭಾರತದ ಶ್ರೀಮಂತ ಧಾರ್ಮಿಕ ಪರಂಪರೆಯ ಸಾಕ್ಷಿಯಾಗಿದೆ.

    ಫೆಬ್ರವರಿ 26ರಮಹಾ ಶಿವರಾತ್ರಿವರೆಗೂ ನಡೆಯಿರುವ ಮಹಾಕುಂಭ ಮೇಳದ ಒಟ್ಟು 40 ಕೋಟಿಗೂ ಅಧಿಕ ಜನರು ಭಾಗಿಯಾಗುವ ನಿರೀಕ್ಷೆಯಿದೆ. ಇನ್ನೂ ಗಂಗಾ, ಯಮುನಾ, ಸರಸ್ವತಿ ನದಿಗಳ ಸಂಗಮದಲ್ಲಿ ಪುಣ್ಯ ಸ್ನಾನ ನಡೆಯುತ್ತಿದ್ದು, ಕೆಲವು ಪ್ರಮುಖ ದಿನಗಳಲ್ಲಿ ಪವಿತ್ರ ಸ್ನಾನಗಳು ನಡೆಯುತ್ತಿವೆ. ಈಗಾಗಲೇ ಮೂರು ದಿನಗಳ ಪೂರ್ನಗೊಂಡಿದ್ದು, ಇನ್ನೂ ಮೂರು ರೀತಿಯ ಪುಣ್ಯ ಸ್ನಾನಗಳು ಬಾಕಿಯಿವೆ.

    ಸಂಗಮದಲ್ಲಿ ಶಾಹಿಸ್ನಾನ:
    ಜನವರಿ 13-ಪೌಷ ಪೂರ್ಣಿಮಾ ಸ್ನಾನ (ಉದ್ಘಾಟನಾ ದಿನ)
    ಜನವರಿ 15 -ಮಕರ ಸಂಕ್ರಾಂತಿ ಸ್ನಾನ
    ಜನವರಿ 29 -ಮೌನಿ ಅಮಾವಾಸ್ಯೆ ಸ್ನಾನ (ರಾಜ ಸ್ನಾನ/ಶಾಹಿ ಸ್ನಾನ)
    ಫೆಬ್ರವರಿ 3 – ವಸಂತ ಪಂಚಮಿ ಸ್ನಾನ (ರಾಜ ಸ್ನಾನ/ಶಾಹಿ ಸ್ನಾನ)
    ಫೆಬ್ರವರಿ 12- ಮಾಘಿ ಪೂರ್ಣಿಮಾ ಸ್ನಾನ
    ಫೆಬ್ರವರಿ 26- ಮಹಾ ಶಿವರಾತ್ರಿ ಸ್ನಾನ (ಸಮಾಪ್ತಿಯ ದಿನ)

    ಕೊನೆಯ ದಿನ ಫೆ.26 ರಂದು ನಡೆಯಲಿರುವ ಅಮೃತ ಸ್ನಾನದಲ್ಲಿ ಕೋಟ್ಯಂತರ ಜನರು ಭಾಗಿಯಾಗುವ ನೀರಿಕ್ಷೆಯಿದೆ. ಏಕೆಂದರೆ ಇದು ಕುಂಭಮೇಳದ ಕೊನೆಯ ದಿನ ಆಗಿರಲಿದ್ದು, ಜೊತೆಗೆ ಈ ದಿನ ಸ್ನಾನ ಮಾಡುವುದು ವಿಭಿನ್ನ ಹಾಗೂ ವಿಶೇಷವಾಗಿಲಿದೆ. ಹೀಗಾಗಿ ಹೆಚ್ಚಿನ ಜನ ಈ ದಿನ ಅಮೃತ ಸ್ನಾನದಲ್ಲಿ ಭಾಗಿಯಾಗಲಿದ್ದಾರೆ.

     

     

    ಅಮೃತ ಸ್ನಾನ ಹೆಸರಿಗೆ ಕಾರಣ:
    ಮಹಾಕುಂಭ ಮೇಳದ ಇತಿಹಾಸವು ಸಮುದ್ರ ಮಂಥನ ಹಿಂದೂ ಪುರಾಣವನ್ನು ಉಲ್ಲೇಖಿಸುತ್ತದೆ. ಪುರಾಣ ಪ್ರಕಾರ, ಸಮುದ್ರ ಮಾಂಥನ ವೇಳೆ ದೊರೆತ ಅಮೃತವನ್ನು ವಿಷ್ಣು, ಮೋಹಿನಿ ರೂಪತಾಳಿ ಅಸುರರ ಕಣ್ಣು ತಪ್ಪಿಸಿ ಕೊಂಡೊಯ್ಯುವಾಗ ಕುಂಭದಿಂದ ನಾಲ್ಕು ಹನಿಯು ಪ್ರಯಾಗರಾಜ್, ಹರಿದ್ವಾರ, ನಾಸಿಕ್ ಮತ್ತು ಉಜ್ಜಯಿನಿಯಲ್ಲಿ ಬಿದ್ದಿತು. ಅದೇ ಜಾಗದಲ್ಲಿ ಮೇಳ ಆಚರಿಸಲಾಗುತ್ತದೆ. ಬೇರೊಂದು ಕಥೆ ಪ್ರಕಾರ, ಇಂದ್ರನ ಮಗ ಜಯಂತ ಕುಂಭ ಪಡೆದುಕೊಂಡು ಓಡು­ವಾಗ ರಾಕ್ಷ­ಸ­ರರು ಬೆನ್ನಟ್ಟಿರುತ್ತಾರೆ. ಜಯಂತನ ಸುರಕ್ಷೆಗೆ ಸೂರ್ಯ, ಚಂದ್ರ, ಶನಿ, ಬೃಹಸ್ಪತಿ ಗ್ರಹ ನಿಲ್ಲುತ್ತಾರೆ. 12 ದಿನ ಓಡುತ್ತಲೇ ಇದ್ದ ಜಯಂತ ಈ ನಡುವೆ 4 ಸ್ಥಳಗಳಲ್ಲಿ ಕುಂಭ ಕೆಳ ಗಿಟ್ಟಿದ್ದನಂತೆ. ಆ 4 ಸ್ಥಳಗಳಲ್ಲೇ ಗ್ರಹಗಳು ವಿಶಿಷ್ಟ ರಾಶಿಗಳಲ್ಲಿ ನಿಂತು ಕುಂಭ ರಕ್ಷಿಸಿದ್ದರಂತೆ ಆ ಸ್ಥಳಗಳಲ್ಲಿ ಇದೀಗ ಕುಂಭಮೇಳ ನಡೆಯುತ್ತದೆ. ಹೀಗೆ ಈ ನಾಲ್ಕು ಸ್ಥಳಗಳು ಪವಿತ್ರ ತೀರ್ಥಸ್ಥಳಗಳಾದವು. ಈ ತೀರ್ಥಸ್ಥಳಗಳ ಮೂಲಕ ಹರಿಯುವ ನದಿಗಳಲ್ಲಿ ಸ್ನಾನ ಮಾಡುವುದರಿಂದ ಮೋಕ್ಷ ಸಿಗುತ್ತದೆ. ಹೀಗಾಗಿ ಅಮೃತ ಸ್ನಾನವೆಂದು ಕರೆಯಲಾಗುತ್ತದೆ ಎಂದು ನಂಬಲಾಗಿದೆ.

    ಮಹಾ ಕುಂಭ ಮೇಳವು ಮುಖ್ಯವಾಗಿ ಈ ಪವಿತ್ರ ಸಂಗಮದಲ್ಲಿ ಸ್ನಾನ ಮಾಡುವ ಪ್ರಾಮುಖ್ಯತೆಯನ್ನು ಹೆಚ್ಚಿಸುತ್ತದೆ. ಪ್ರತಿ ಸ್ನಾನವು ಪಾಪಗಳನ್ನು ಕಳೆಯುವುದರ ಜೊತೆಗೆ ಮೋಕ್ಷ ನೀಡುತ್ತದೆ ಎಂಬ ನಂಬಿಕೆಯಿದೆ. ವಿಮೋಚನೆಗಾಗಿ ಪವಿತ್ರ ಸ್ನಾನದಲ್ಲಿ ತೊಡಗುವುದು ಮುಖ್ಯ ಎಂದು ಜನರು ನಂಬುತ್ತಾರೆ. ಅಮೃತ ಸ್ನಾನವನ್ನು ಹಿಂದೆ ಶಾಹಿ ಸ್ನಾನ ಎಂದು ಕರೆಯಲಾಗುತ್ತಿತ್ತು. ಎಂದರೆ `ಮಕರಂದ ಸ್ನಾನ’. ಕುಂಭಮೇಳದ ಸಮಯದಲ್ಲಿ ಭಕ್ತರು ಪವಿತ್ರ ನೀರಿನಲ್ಲಿ ಮುಳುಗುವ ಆಚರಣೆಯಾಗಿದೆ.

    ಜುನಾ ಅಖಾಡದ ಪೀಠಾಧೀಶ್ವರ ಆಚಾರ್ಯ ಸ್ವಾಮಿ ಅವಧೇಶಾನಂದ ಗಿರಿ ಮಹಾರಾಜರ ಪ್ರಕಾರ, ಗುರುವು ವೃಷಭ ರಾಶಿಯನ್ನು ಪ್ರವೇಶಿಸಿದಾಗ ಅಮೃತ ಸ್ನಾನ ಸಂಭವಿಸುತ್ತದೆ ಮತ್ತು ಸೂರ್ಯ ಮತ್ತು ಚಂದ್ರರು ಮಕರ ರಾಶಿಯಲ್ಲಿ ಒಟ್ಟುಗೂಡುತ್ತಾರೆ. ಇದನ್ನು `ಅಮೃತ್ ಯೋಗ’ ಎಂದು ಕರೆಯುತ್ತಾರೆ.
    ಇದು 12 ವರ್ಷಗಳಿಗೊಮ್ಮೆ ಮಾತ್ರ ಸಂಭವಿಸುತ್ತದೆ.

    ಅಮೃತ ಸ್ನಾನವು ಹಿಂದೂಗಳಿಗೆ ಮುಖ್ಯವಾಗಿದೆ. ಯಾಕೆಂದರೆ ಮಕರ ಸಂಕ್ರಾಂತಿ ಯ ಬಳಿಕ ಸೂರ್ಯ ಉತ್ತರಕ್ಕೆ ಚಲಿಸುತ್ತಾನೆ. ಇದನ್ನು ಉತ್ತರಾಯಣ ಎಂದು ಕರೆಯುತ್ತಾರೆ. ಹೀಗಾಗಿ ಉತ್ತರಾಯಣದಲ್ಲಿ ಪವಿತ್ರ ಸ್ನಾನದಲ್ಲಿ ತೊಡಗುವುದರಿಂದ ಒಳ್ಳೆಯದಾಗುತ್ತದೆ ಎಂದು ನಂಬಲಾಗುತ್ತದೆ. ಪ್ರತಿಯೊಂದು ಸ್ನಾನಕ್ಕೂ ಧಾರ್ಮಿಕ ನಿಯಮಗಳಿದ್ದು, ಫೆಬ್ರವರಿ 26ರಂದು ನಡೆಯುವ ಅಮೃತ ಸ್ನಾನ ಪವಿತ್ರ ಸ್ನಾನಗಳ ಕೊನೆಯ ದಿನವಾಗಿದೆ. ಮಹಾಶಿವರಾತ್ರಿಯನ್ನು ಶಿವನ ಮಹಾನ್ ರಾತ್ರಿ ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ ಈ ದಿನ ಸ್ನಾನದಲ್ಲಿ ತೊಡಗುವುದರಿಂದ ಶಿವನ ಶಕ್ತಿ ದೊರೆಯುತ್ತದೆ. ಜೀವನದಿಂದ ಎಲ್ಲಾ ರೀತಿಯ ಅಜ್ಞಾನಗಳು ದೂರವಾಗುತ್ತದೆ.

  • ಮಹಾ ಕುಂಭಮೇಳದಲ್ಲಿ `ಐಐಟಿ ಬಾಬಾ’ – ಏರೋಸ್ಪೇಸ್ ಎಂಜಿನಿಯರಿಂಗ್ ಪದವಿ ಪಡೆದವ ಈಗ ಸಾಧು

    ಮಹಾ ಕುಂಭಮೇಳದಲ್ಲಿ `ಐಐಟಿ ಬಾಬಾ’ – ಏರೋಸ್ಪೇಸ್ ಎಂಜಿನಿಯರಿಂಗ್ ಪದವಿ ಪಡೆದವ ಈಗ ಸಾಧು

    ಪ್ರಯಾಗ್‌ರಾಜ್: ಇಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ `ಐಐಟಿ ಬಾಬಾ’ ಎಂದು ಕರೆಯಿಸಿಕೊಳ್ಳುವ ವ್ಯಕ್ತಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದ್ದಾರೆ.

    ಕಳೆದ 2 ದಿನಗಳಿಂದ ಪ್ರಯಾಗ್‌ರಾಜ್‌ದಲ್ಲಿ (Prayag Raj) ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ದೇಶ-ವಿದೇಶಗಳಿಂದ ಕೋಟ್ಯಂತರ ಜನರು ಭೇಟಿ ನೀಡುತ್ತಿದ್ದಾರೆ. ಅಂತೆಯೇ ಹರಿಯಾಣ ಮೂಲದ ಅಭಯ್ ಸಿಂಗ್ ಎಂಬುವವರು, ಬಾಂಬೆಯ ಐಐಟಿಯಲ್ಲಿ ಏರೋಸ್ಪೇಸ್ ಎಂಜಿನಿಯರ್ ಪದವಿ ಪಡೆದಿದ್ದು, ಇದೀಗ ಕುಂಭಮೇಳದಲ್ಲಿ ಸಾಧು ಆಗಿ ಕಾಣಿಸಿಕೊಂಡಿದ್ದಾರೆ.ಇದನ್ನೂ ಓದಿ: ಜುಕರ್‌ಬರ್ಗ್‌ ಹೇಳಿಕೆಗೆ ಕ್ಷಮೆ ಕೇಳಿದ ಮೆಟಾ – ಈ ವಿಚಾರ ಇಲ್ಲಿಗೆ ಮುಕ್ತಾಯ: ನಿಶಿಕಾಂತ್‌ ದುಬೆ

    ಸಂದರ್ಶನವೊಂದರಲ್ಲಿ ಮಾತನಾಡಿದ್ದ ಅವರು, ತಮ್ಮನ್ನು ತಾವು `ಐಐಟಿ ಬಾಬಾ’ ಎಂದು ಹೇಳಿಕೊಳ್ಳುವ ಮೂಲಕ ಸುದ್ದಿಯಾಗಿದ್ದರು. ಸಂದರ್ಶನದಲ್ಲಿ ಇಂಗ್ಲೀಷ್‌ನಲ್ಲಿ ಮಾತನಾಡುತ್ತಿರುವಾಗ ಬಾಂಬೆಯ ಐಐಟಿಯಲ್ಲಿ ಎಂಜಿನಿಯರ್ ಪದವಿ ಪಡೆದಿರುವುದಾಗಿ ಹೇಳಿಕೊಂಡಿದ್ದರು.

    ಸಂದರ್ಶನದಲ್ಲಿ ಮಾತನಾಡಿದ ಅವರು, 2014ರಲ್ಲಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (IIT) ಬಾಂಬೆಯಲ್ಲಿ ಏರೋಸ್ಪೇಸ್ ಎಂಜಿನಿಯರಿಂಗ್ ಪದವಿಯನ್ನು ಪೂರ್ಣಗೊಳಿಸಿದ್ದೇನೆ. ಫೋಟೋಗ್ರಫಿಯಲ್ಲಿ ಆಸಕ್ತಿ ಹೊಂದಿದ್ದರಿಂದ ಎಂಜಿನಿಯರಿಂಗ್ ತೊರೆದು 4 ವರ್ಷಗಳ ಕಾಲ ಮುಂಬೈನಲ್ಲಿ ಫೋಟೋಗ್ರಫಿ ಶುರುಮಾಡಿದೆ. ಟ್ರಾವೆಲ್ ಫೋಟೋಗ್ರಫಿಯಲ್ಲಿ ವೃತ್ತಿಪರ ಕೋರ್ಸ್ ಮಾಡುತ್ತಾ ಮುಂದೆ ಕೋಚಿಂಗ್ ಸೆಂಟರ್ ತೆಗೆದು ಮಕ್ಕಳಿಗೆ ಭೌತಶಾಸ್ರ್ರ ಪಾಠ ಮಾಡುವಲ್ಲಿ ತೊಡಗಿಕೊಂಡೆ. ಪಾಠ ಮಾಡುತ್ತಾ ಆಸಕ್ತಿ ಆಧ್ಯಾತ್ಮಿಕತೆಯ ಕಡೆಗೆ ತಿರುಗಿತು. ಬಳಿಕ ತನ್ನ ಜೀವನವನ್ನು ಆಧ್ಯಾತ್ಮಿಕತೆಗೆ ಮುಡಿಪಾಗಿಟ್ಟೆ ಎಂದು ಹೇಳಿಕೊಂಡಿದ್ದಾರೆ.

    ಇದೀಗ ಶಿವನ ಭಕ್ತನಾಗಿ ಆಧ್ಯಾತ್ಮಿಕತೆಯನ್ನು ಆನಂದಿಸುತ್ತಿದ್ದೇನೆ. ವಿಜ್ಞಾನದ ಆಳಕ್ಕಿಳಿದು ಆಧ್ಯಾತ್ಮಿಕತೆಯನ್ನು ಅರ್ಥಮಾಡಿಕೊಳ್ಳುತ್ತೇನೆ. ಇಲ್ಲಿ ಎಲ್ಲವೂ ಶಿವನೇ, ಸತ್ಯವೇ ಶಿವ ಹಾಗೂ ಶಿವನೇ ಸುಂದರವಾಗಿದ್ದಾನೆ. ಈ ಕುಂಭಮೇಳದಲ್ಲಿ ಭಾಗಿಯಾಗಿರುವುದು ನನ್ನ ಮನಸ್ಸಿಗೆ ನೆಮ್ಮದಿ ತಂದುಕೊಟ್ಟಿದೆ ಎಂದು ಸಂತಸ ವ್ಯಕ್ತಪಡಿಸಿದರು.ಇದನ್ನೂ ಓದಿ: PUBLiC TV ಇಂಪ್ಯಾಕ್ಟ್ | KSRTC ಬಸ್‌ನಲ್ಲಿ ಟಿಕೆಟ್ ಕೊಡ್ತಿದ್ದ ಖಾಸಗಿ ವ್ಯಕ್ತಿ ಮೇಲೆ ದೂರು – ಕಂಡಕ್ಟರ್‌ ಸಸ್ಪೆಂಡ್

  • ಮಹಾಕುಂಭಮೇಳದಲ್ಲಿ ‘ನಂದಿನಿ’ ಕಮಾಲ್ – ಕೆಎಂಎಫ್ ಸಹಭಾಗಿತ್ವದಲ್ಲಿ 10 ಚಾಯ್ ಪಾಯಿಂಟ್

    ಮಹಾಕುಂಭಮೇಳದಲ್ಲಿ ‘ನಂದಿನಿ’ ಕಮಾಲ್ – ಕೆಎಂಎಫ್ ಸಹಭಾಗಿತ್ವದಲ್ಲಿ 10 ಚಾಯ್ ಪಾಯಿಂಟ್

    – 1 ಕೋಟಿ ಟೀ ಮಾರಾಟಕ್ಕೆ ಗುರಿ
    – ಟೀ ಪಾಯಿಂಟ್‌ನಲ್ಲಿ ನಂದಿನಿ ಹಾಲು ಬಳಕೆ, ಉತ್ಪನ್ನಗಳ ಮಾರಾಟ

    ಪ್ರಯಾಗ್‌ರಾಜ್: ಇಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ (Maha KumbaMela) 10 ಟೀ ಪಾಯಿಂಟ್ (Tea Point) ತೆರೆಯಲು ಕೆಎಂಎಫ್ (KMF) ಒಪ್ಪಂದ ಮಾಡಿಕೊಂಡಿದೆ.

    ಮಹಾಕುಂಭಮೇಳದಲ್ಲಿ ಕೆಎಂಎಫ್ ಸಹಭಾಗಿತ್ವದಲ್ಲಿ 10 ಟೀ ಪಾಯಿಂಟ್ ತೆರೆಯಲು ಸಿದ್ಧತೆ ನಡೆಸಲಾಗಿದ್ದು, ಜೊತೆಗೆ ನಂದಿನಿ ಹಾಲಿನ (Nandini Milk) ಬಳಕೆ ಹಾಗೂ ನಂದಿನಿ ಉತ್ಪನ್ನಗಳ ಮಾರಾಟ ನಡೆಯಲಿದೆ. ಈ ಟೀ ಪಾಯಿಂಟ್‌ನಿಂದ ಸುಮಾರು ಒಂದು ಕೋಟಿ ಟೀ ಮಾರಾಟ ಮಾಡುವ ಗುರಿಯನ್ನು ಕೆಎಂಎಫ್ ಹಾಕಿಕೊಂಡಿದೆ. ಈ ಮೂಲಕ ಒಂದು ಮೇಳದಲ್ಲಿ ಅತೀ ಹೆಚ್ಚು ಟೀ ಮಾರಾಟ ಮಾಡಿದ ಸಂಸ್ಥೆಯೆಂದು ಗಿನ್ನಿಸ್ ದಾಖಲೆ ನಿರ್ಮಿಸುವ ಪ್ರಯತ್ನ ಮಾಡಲಿದೆ.ಇದನ್ನೂ ಓದಿ: BBK 11: ವರಸೆ ಬದಲಿಸಿದ ಭವ್ಯಾಗೆ ಪುಂಗಬೇಡ ಎಂದ ತ್ರಿವಿಕ್ರಮ್‌

    ಉತ್ತರಪ್ರದೇಶದ (Uttara Pradesh) ಪ್ರಯಾಗ್‌ರಾಜ್‌ನಲ್ಲಿ ಜ.13ರಿಂದ ಪ್ರಾರಂಭವಾಗಿರುವ ಮಾಹಕುಂಭಮೇಳ 44 ದಿನಗಳ ಕಾಲ ನಡೆಯಲಿದ್ದು, ಈ ಮೇಳದಲ್ಲಿ ನಂದಿನಿ ಹಾಲಿನ ಮೂಲಕ ಖ್ಯಾತಿ ಪಡೆದಿರುವ ಕೆಎಂಎಫ್ ತನ್ನ ಕೈ ಚಳಕ ತೋರಿಸಲಿದೆ.

    ಇನ್ನೂ ಮಾಹಕುಂಭಮೇಳದಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ನಾಗ ಸಾಧುಗಳು ಶಾಹಿ ಸ್ನಾನದಲ್ಲಿ ಭಾಗಿಯಾಗಿದ್ದು, ಗಂಗಾ, ಯಮುನಾ, ಸರಸ್ವತಿ ನದಿಗಳ ಸಂಗಮದಲ್ಲಿ ಪುಣ್ಯ ಸ್ನಾನ ನಡೆಯುತ್ತಿದೆ. ಫೆ.26ರ ಮಹಾ ಶಿವರಾತ್ರಿವರೆಗೂ ಮಹಾಕುಂಭಮೇಳ ನಡೆಯಲಿದೆ.ಇದನ್ನೂ ಓದಿ:ಕಾರು ಅಪಘಾತದಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್‌ಗೆ ಬೆನ್ನುಮೂಳೆ ಮುರಿತ – ಸಚಿವೆ ಆರೋಗ್ಯದ ಬಗ್ಗೆ ವೈದ್ಯರು ಹೇಳೋದೇನು?

     

     

  • ಇಂದಿನಿಂದ ಮಹಾ ಕುಂಭಮೇಳ – ನಾಗಸಾಧುಗಳು, ಅಘೋರಿಗಳ ಸಮಾಗಮ, ಏನೆಲ್ಲಾ ವಿಶೇಷತೆಗಳಿವೆ?

    ಇಂದಿನಿಂದ ಮಹಾ ಕುಂಭಮೇಳ – ನಾಗಸಾಧುಗಳು, ಅಘೋರಿಗಳ ಸಮಾಗಮ, ಏನೆಲ್ಲಾ ವಿಶೇಷತೆಗಳಿವೆ?

    – ಸಂಪೂರ್ಣ ಪರಿಸರ ಸ್ನೇಹಿ ಕುಂಭಮೇಳ, ಒಂದು ದೇಶ-ಒಂದು ಚುನಾವಣೆ ಉಪನ್ಯಾಸ

    ವಿಶ್ವದ ಅತಿದೊಡ್ಡ ಧಾರ್ಮಿಕ ಮೇಳಗಳಲ್ಲಿ ಒಂದಾದ ಮಹಾ ಕುಂಭಮೇಳ (MahaKumbh 2025) ಉತ್ತರ ಪ್ರದೇಶದ ಪ್ರಯಾಗ್‌ ರಾಜ್‌ನಲ್ಲಿ ಇಂದಿನಿಂದ ಆರಂಭವಾಗಿದೆ. ಬರೋಬ್ಬರಿ 144 ವರ್ಷಗಳಿಗೊಮ್ಮೆ ನಡೆಯುವ ಮಹಾ ಕುಂಭಮೇಳದಲ್ಲಿ ಅಧ್ಯಾತ್ಮ ವಿಸ್ಮಯವೇ ಜರುಗಲಿದೆ. ಈ ಧಾರ್ಮಿಕ ಮೇಳದಲ್ಲಿ ಕೋಟಿಗಟ್ಟಲೇ ಸಾಧು-ಸಂತರು ನಾಗಸಾಧುಗಳು, ಅಘೋರಿಗಳು, ಭಕ್ತರು (Devotees) ಆಗಮಿಸುವುದು ಇಲ್ಲಿನ ವಿಶೇಷ.

    ಪ್ರತಿ 12 ವರ್ಷಗಳಿಗೊಮ್ಮೆ ನಡೆಯುವ ಕುಂಭಮೇಳ ಈ ಬಾರಿ ಅತೀ ವಿಶೇಷವಾಗಿದೆ. ಏಕೆಂದರೆ ಪ್ರಯಾಗ್‌ ರಾಜ್‌ನಲ್ಲಿ ಮಹಾ ಕುಂಭಮೇಳ ನಡೆಯುತ್ತಿದ್ದರೆ, ಸಮೀಪದಲ್ಲೇ ಇರುವ ಅಯೋಧ್ಯೆಯಲ್ಲಿ ಮೊದಲ ವಾರ್ಷಿಕೋತ್ಸವ ಸಂಭ್ರಮ ನಡೆಯುತ್ತಿದೆ. ಭಾರತ ಅಷ್ಟೇ ಅಲ್ಲದೇ ವಿದೇಶಗಳಿಂದಲೂ ಭಕ್ತರು ಆಗಮಿಸುತ್ತಿದ್ದಾರೆ. ಗಂಗಾ, ಯಮುನಾ, ಸರಸ್ವತಿ ನದಿಗಳ ಪವಿತ್ರ ಸಂಗಮದಲ್ಲಿ ಪುಣ್ಯಸ್ನಾನ ಮಾಡುತ್ತಾರೆ. ಇಲ್ಲಿ ಸ್ನಾನ ಮಾಡಿದ್ರೆ, ಪಾಪನಾಶ, ಮೋಕ್ಷ ಸಿಗುತ್ತದೆ ಎಂಬುದು ಭಕ್ತರ ನಂಬಿಕೆ. ಈಗಾಗಲೇ ಕಳೆದ 2 ದಿನಗಳಲ್ಲಿ 85 ಲಕ್ಷ ಮಂದಿ ಸ್ನಾನ ಮಾಡಿದ್ದಾರೆ. ಈ ಎಲ್ಲ ಕಾರಣಗಳಿಂದ ಈ ಬಾರಿ ಕುಂಭಮೇಳ ಅತ್ಯಂತ ವಿಶೇಷವಾಗಿದೆ. ಅಲ್ಲದೇ ಈ ಕುಂಭಮೇಳದಲ್ಲಿ ಏನೇನು ವಿಶೇಷತೆಗಳಿವೆ ಎಂಬುದನ್ನು ತಿಳಿಯಬೇಕಾದ್ರೆ ಮುಂದೆ ಓದಿ…

    ಇಂದಿನಿಂದ ಕುಂಭಮೇಳ ಆರಂಭ
    ಈ ಹಿಂದೆ 2013ರಲ್ಲಿ ಮಹಾ ಕುಂಭಮೇಳ ನಡೆದಿತ್ತು. ಇದೀಗ 2025ರ ಜ.13ರಿಂದ ಆರಂಭವಾಗಿದೆ. ಫೆ.26ರ ಶಿವರಾತ್ರಿ ದಿನದಂದು ಈ ಕುಂಭಮೇಳ ಸಂಪನ್ನಗೊಳ್ಳಲಿದೆ. ಜ.14ರಂದು ಮಕರ ಸಂಕ್ರಾಂತಿ, ವಸಂತ, ಪಂಚಮಿ, ಹೀಗೆ 5 ಬಾರಿ ಪುಣ್ಯಸ್ನಾನ ಪ್ರಯಾಗ್‌ರಾಜ್‌ನಲ್ಲಿರುವ ತ್ರಿವೇಣಿ ಸಂಗಮದಲ್ಲಿ ನಡೆಯಲಿದೆ.

    ಸಂಪೂರ್ಣ ಪರಿಸರ ಸ್ನೇಹಿ ಕುಂಭಮೇಳ
    ಈ ಬಾರಿಯ ಮಹಾಕುಂಭಮೇಳದಲ್ಲಿ ಒಂದೇ ಒಂದು ಪ್ಲಾಸ್ಟಿಕ್‌ ಬಳಸದೇ ಸಂಪೂರ್ಣ ಪರಿಸರ ಸ್ನೇಹಿಯಾಗಿ ಆಚರಿಸಲು ಉದ್ದೇಶಿಸಲಾಗಿದೆ. ಸ್ವಚ್ಛತೆ ಮತ್ತು ಶುದ್ಧತೆ ಕಾಪಾಡುವುದಕ್ಕಾಗಿ ಬರೋಬ್ಬರಿ 1,500 ಪೌರ ಕಾರ್ಮಿಕರು ಹಗಲಿರುಳು ದುಡಿಯುತ್ತಿದ್ದಾರೆ. ನದಿಯ ಒಂದು ದಡದಿಂದ ಮತ್ತೊಂದು ದಡಕ್ಕೆ ಸರಾಗವಾಗಿ ಸಾಗಲು 50ಕ್ಕೂ ಹೆಚ್ಚು ತಾತ್ಕಾಲಿಕ ಬ್ರಿಡ್ಜ್‌ಗಳನ್ನ ನಿರ್ಮಿಸಲಾಗಿದೆ. ಅಲ್ಲದೇ 1.5 ಲಕ್ಷ ಶೌಚಾಲಯ, ಸ್ನಾನಗೃಹಗಳನ್ನು ನಿರ್ಮಿಸಲಾಗಿದೆ. ಏಕಕಾಲಕ್ಕೆ ಸಾವಿರಾರು ಜನರು ತಂಗಲು ಅನುಕೂಲವಾಗುವಂತೆ ಅಲ್ಲಲ್ಲಿ ಟೆಂಟ್‌ಗಳನ್ನ ನಿರ್ಮಿಸಿರುವುದು ವಿಶೇಷ.

    ಒಂದು ದೇಶ-ಒಂದು ಚುನಾವಣೆ ಉಪನ್ಯಾಸ
    ಕುಂಭಮೇಳ ನಡೆಯುವ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಹರಿದ್ವಾರ ಮೂಲದ ಸಂಘಟನೆಯೊಂದು ʻಒಂದು ದೇಶ ಒಂದು ಚುನಾವಣೆ’ ಸೇರಿ ಒಟ್ಟು 7 ವಿಷಯಗಳ ಬಗ್ಗೆ ಉಪನ್ಯಾಸ ಆಯೋಜಿಸಿದೆ. ಜ. 12ರಂದು ಉಪನ್ಯಾಸ ಆರಂಭಗೊಂಡಿದ್ದು, ಮೊದಲ ದಿನ ಸ್ವಾಮಿ ವಿವೇಕಾನಂದರ ಬಗ್ಗೆ ಉಪನ್ಯಾಸ ನೀಡಲಾಗಿದೆ. ʻಒಂದು ದೇಶ ಒಂದು ಚುನಾವಣೆ’ ವಿಷಯದ ಬಗ್ಗೆ ಜ.18ರಂದು ಉಪನ್ಯಾಸ ನಿಗದಿಯಾಗಿದೆ. ಮಹಾಕುಂಭಮೇಳ ನಡೆಯುವ ಸ್ಥಳದಲ್ಲಿ ಒಟ್ಟು ಏಳು ಉಪನ್ಯಾಸಗಳ ಸರಣಿ ನಡೆಯಲಿವೆ. ಜನವರಿ 18ರಂದು ಒಂದು ‘ದೇಶ ಒಂದು ಚುನಾವಣೆ- ವಿಕಸಿತ ಭಾರತದ ವೇಳೆಯಲ್ಲಿ ಆರ್ಥಿಕ, ರಾಜಕೀಯ ಸುಧಾರಣೆ’ ಎನ್ನುವ ವಿಷಯದ ಬಗ್ಗೆ ಭಾಷಣ ನಡೆಯಲಿದೆ. ಈ ವಿಷಯದ ಬಗ್ಗೆ ಮಾತನಾಡಲು ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರಿಗೆ ಆಹ್ವಾನ ನೀಡಲಾಗಿದ್ದು, ಅವರು ಕುಂಭಮೇಳ ನಡೆಯುವ ಸ್ಥಳಕ್ಕೆ ಬಂದು ಭಾಷಣ ಮಾಡಲಿದ್ದಾರೆ. ಇದರೊಂದಿಗೆ ಜಾಗತಿಕ ಭಯೋತ್ಪಾದನೆ, ಭಾರತದ ಸಮಗ್ರತೆ ಮತ್ತು ಸವಾಲುಗಳು, ಲಿಂಗ ಸಮಾನತೆ ಮತ್ತು ಮಹಿಳಾ ಸಬಲೀಕರಣ, ಸಾಮಾಜಿಕ ಮಾಧ್ಯಮದಲ್ಲಿ ಗೌಪ್ಯತೆ ಮತ್ತು ಸುರಕ್ಷತೆ ಮುಂತಾದ ವಿಷಯಗಳ ಬಗ್ಗೆ ಉಪನ್ಯಾಸ ಇರಲಿದೆ ಎಂದು ಸಂಬಂಧಪಟ್ಟ ಅಧಿಕಾರಿಗಳು ತಿಳಿಸಿದ್ದಾರೆ.

    15 ಲಕ್ಷಕ್ಕೂ ಹೆಚ್ಚು ವಿದೇಶಿಯರು ಭಾಗಿ ನಿರೀಕ್ಷೆ
    ಮಹಾಕುಂಭ ಮೇಳದಲ್ಲಿ 15 ಲಕ್ಷಕ್ಕೂ ಹೆಚ್ಚು ವಿದೇಶಿಯರು ಭಾಗವಹಿಸುವ ನೀರಿಕ್ಷೆ ಇದೆ ಎಂದು ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್‌ ಭಾನುವಾರ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರವಾಸೋದ್ಯಮ ಸಚಿವಾಲಯವು ಆಯುರ್ವೇದ ಚಿಕಿತ್ಸೆ, ಯೋಗ ಮತ್ತು ಪಂಚಕರ್ಮದಂತಹ ಸೌಲಭ್ಯಗಳನ್ನು ಒದಗಿಸಲು ಟೆಂಟ್‌ಗಳನ್ನು ಸ್ಥಾಪಿಸಿದೆ.

    ಸಂಗಮ ನಗರಿ ಸೃಷ್ಟಿ
    45 ದಿನಗಳ ಕಾಲ ನಡೆಯಲಿರುವ ಕುಂಭಮೇಳದಲ್ಲಿ ಬರೋಬ್ಬರಿ 45 ಕೋಟಿ ಜನ ಬಂದು ಹೋಗುವ ಸಾಧ್ಯತೆಗಳಿವೆ ಎಂದು ಅಂದಾಜಿಸಲಾಗಿದೆ. ಅದಕ್ಕೆ ತಕ್ಕಂತೆ ರಾಜ್ಯ ಸರ್ಕಾರ ತಯಾರಿ ಮಾಡಿಕೊಂಡಿದೆ. ಗಂಗೆ, ಯಮುನೆ, ಸರಸ್ವತ ನದಿಗಳ ತ್ರಿವೇಣಿ ಸಂಗಮದಲ್ಲಿ ʻಸಂಗಮನಗರಿʼ ಎಂಬ ನಗರವನ್ನೇ ಸೃಷ್ಟಿಸಿದೆ.

    ಸಂಗಮದಲ್ಲಿ ಶಾಹಿಸ್ನಾನ
    ಜನವರಿ 13-ಪೌಷ ಪೂರ್ಣಿಮಾ ಸ್ನಾನ (ಉದ್ಘಾಟನಾ ದಿನ)
    ಜನವರಿ 15 – ಮಕರ ಸಂಕ್ರಾಂತಿ ಸ್ನಾನ
    ಜನವರಿ 29 – ಮೌನಿ ಅಮಾವಾಸ್ಯೆ ಸ್ನಾನ (ರಾಜ ಸ್ನಾನ/ಶಾಹಿ ಸ್ನಾನ)
    ಫೆಬ್ರವರಿ 3 – ವಸಂತ ಪಂಚಮಿ ಸ್ನಾನ (ರಾಜ ಸ್ನಾನ/ಶಾಹಿ ಸ್ನಾನ)
    ಫೆಬ್ರವರಿ 12 – ಮಾಘಿ ಪೂರ್ಣಿಮಾ ಸ್ನಾನ
    ಫೆಬ್ರವರಿ 26 – ಮಹಾ ಶಿವರಾತ್ರಿ ಸ್ನಾನ (ಸಮಾಪ್ತಿಯ ದಿನ)

    ಕುಂಭ ದಿನಾಂಕವನ್ನು ಹೇಗೆ ನಿರ್ಧರಿಸಲಾಗುತ್ತದೆ?
    ಕುಂಭಮೇಳದ ಸ್ಥಳ ಮತ್ತು ದಿನಾಂಕವನ್ನು ನಿರ್ಧರಿಸಲು, ಜ್ಯೋತಿಷಿಗಳು ಮತ್ತು ವಿವಿಧ ಅಖಾರಗಳ (ಪಂಗಡಗಳ ಗುಂಪುಗಳು) ನಾಯಕರು ಭೇಟಿಯಾಗಿ ಗುರು ಮತ್ತು ಸೂರ್ಯನ ಸ್ಥಾನಗಳನ್ನು ಪರಿಶೀಲಿಸುತ್ತಾರೆ. ಗುರು ಮತ್ತು ಸೂರ್ಯ ಇಬ್ಬರೂ ಹಿಂದೂ ಜ್ಯೋತಿಷ್ಯದಲ್ಲಿ ಪ್ರಮುಖ ಗ್ರಹಗಳಾಗಿವೆ ಮತ್ತು ಕುಂಭಮೇಳದ ಸಮಯ ಮತ್ತು ಸ್ಥಳವನ್ನು ಅವುಗಳ ಸ್ಥಾನಗಳ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ.

  • 12 ವರ್ಷಗಳ ಬಳಿಕ ಉತ್ತರ ಪ್ರದೇಶದಲ್ಲಿ ಮಹಾ ಕುಂಭಮೇಳ – ಸಿದ್ಧತೆ ಹೇಗಿದೆ? ವಿಶೇಷತೆಗಳೇನು?

    12 ವರ್ಷಗಳ ಬಳಿಕ ಉತ್ತರ ಪ್ರದೇಶದಲ್ಲಿ ಮಹಾ ಕುಂಭಮೇಳ – ಸಿದ್ಧತೆ ಹೇಗಿದೆ? ವಿಶೇಷತೆಗಳೇನು?

    12 ವರ್ಷಗಳ ಬಳಿಕ ಪ್ರಯಾಗ್‌ರಾಜ್‌ನಲ್ಲಿ ಮಹಾ ಕುಂಭಮೇಳ ನಡೆಸಲು ಉತ್ತರ ಪ್ರದೇಶ ಸಜ್ಜಾಗಿದೆ. ಇದಕ್ಕಾಗಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ ಸಕಲ ಸಿದ್ಧತೆಗಳನ್ನು ಕೈಗೊಂಡಿದೆ. ಹಿಂದೂ ಧರ್ಮದ ಅತ್ಯಂತ ಮಹತ್ವದ ಮೇಳ ಇದಾಗಿದ್ದು, ಲಕ್ಷಾಂತರ ಮಂದಿ ಭಕ್ತರು ಇದರಲ್ಲಿ ಭಾಗವಹಿಸಲಿದ್ದಾರೆ. ಅನೇಕ ಮಂದಿ ಭಕ್ತರು ಸೇರುವ ಹಿನ್ನೆಲೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಯೋಗಿ ಸರ್ಕಾರ ಸಕಲ ಸಿದ್ಧತೆಗಳೊಂದಿಗೆ ಮುಂಜಾಗ್ರತ ಕ್ರಮಗಳನ್ನು ಕೈಗೊಂಡಿದೆ. ಹಾಗಿದ್ರೆ ಹೇಗೆ ನಡೆಯಲಿದೆ ಮಹಾ ಕುಂಭಮೇಳ? ಸಿದ್ಧತೆ ಹೇಗಿದೆ? ವಿಶೇಷತೆಗಳೇನು ಎಂಬ ಕುರಿತು ಇಲ್ಲಿ ವಿವರಿಸಲಾಗಿದೆ.

    ಮಹಾ ಕುಂಭಮೇಳ ಯಾವಾಗ?
    ಮಹಾ ಕುಂಭಮೇಳ 12 ವರ್ಷಗಳಿಗೊಮ್ಮೆ ನಡೆಯುತ್ತದೆ. ಕುಂಭಮೇಳವನ್ನು ಯಶಸ್ವಿಯಾಗಿ ಆಯೋಜಿಸುವ ಸಲುವಾಗಿ ಉತ್ತರ ಪ್ರದೇಶ ಸರ್ಕಾರ ನಾಲ್ಕು ತಾಲೂಕುಗಳನ್ನು ಒಳಗೊಂಡ ‘ಮಹಾಕುಂಭ ನಗರವನ್ನು’ ಹೊಸ ಜಿಲ್ಲೆಯಾಗಿ ಘೋಷಿಸಿದೆ. ಈ ಬಾರಿ 2025ರ ಜ.14ರಿಂದ ಫೆ.26ರವರೆಗೆ ಮಹಾ ಕುಂಭಮೇಳ ನಡೆಯಲಿದೆ. ಗಂಗಾ, ಯಮುನಾ ಹಾಗೂ ಸರಸ್ವತಿ ನದಿಗಳು ಸಂಗಮಿಸುವ ತ್ರಿವೇಣಿ ಸಂಗಮದಲ್ಲಿ ಮಿಂದೇಳುವ ಮೂಲಕ ತನ್ನ ಪಾಪಗಳಿಂದ ಮುಕ್ತಿ ಪಡೆಯುವ ಅವಕಾಶವನ್ನು ಭಕ್ತರಿಗೆ ನೀಡಲಾಗುತ್ತದೆ. 12 ವರ್ಷಗಳಿಗೊಮ್ಮೆ ಪ್ರಯಾಗ್‌ರಾಜ್, ಹರಿದ್ವಾರ, ಉಜ್ಜಯಿನಿ ಹಾಗೂ ನಾಸಿಕ್‌ನಲ್ಲಿ ಮಹಾ ಕುಂಭಮೇಳ ನಡೆಸಲಾಗುತ್ತದೆ. ಈ ಬಾರಿ ಪ್ರಯಾಗ್‌ರಾಜ್‌ನಲ್ಲಿ ಮಹಾ ಕುಂಭಮೇಳ ನಡೆಯಲಿದೆ. ಈ ಕುಂಭಮೇಳ 30 ರಿಂದ 45 ದಿನಗಳವರೆಗೆ ನಡೆಯುತ್ತದೆ.

    ಮಹತ್ವ ಏನು?
    ಮಹಾ ಕುಂಭಮೇಳಕ್ಕೆ ತನ್ನದೇ ಆದ ಪೌರಾಣಿಕ ಹಿನ್ನೆಲೆ ಇದೆ. ಮಹಾ ಕುಂಭಮೇಳ ಆಚರಣೆಯು ಸಮುದ್ರ ಮಂಥನ ಕಥೆಯಿಂದ ಹುಟ್ಟಿಕೊಂಡಿದೆ ಎಂದು ನಂಬಲಾಗಿದೆ. ಪುರಾಣಗಳ ಪ್ರಕಾರ, ಸಮುದ್ರ ಮಂಥನದ ಸಮಯದಲ್ಲಿ ಅಮೃತ ಮಡಿಕೆ ನಾಲ್ಕು ಕಡೆಗಳಲ್ಲಿ ಬಿತ್ತು. ಆ ನಾಲ್ಕು ಸ್ಥಳಗಳೇ ಪ್ರಯಾಗ್‌ರಾಜ್, ಹರಿದ್ವಾರ, ಉಜ್ಜಯಿನಿ ಹಾಗೂ ನಾಸಿಕ್. ಅಂದಿನಿಂದ ಈ ಸ್ಥಳಗಳನ್ನು ಪವಿತ್ರ ಸ್ಥಳಗಳೆಂದು ಪೂಜಿಸಲಾಗುತ್ತಿದೆ. ಮೋಕ್ಷವನ್ನು ಪಡೆಯುವ ಸಲುವಾಗಿ ಈ ಸ್ಥಳಗಳಲ್ಲಿ ಮಹಾ ಕುಂಭಮೇಳ ನಡೆಸಲಾಗುತ್ತದೆ.

    ಎಐ ಸಿಸಿಟಿವಿ ಅಳವಡಿಕೆ:
    ಮಹಾ ಕುಂಭಮೇಳಕ್ಕೆ ಭೇಟಿ ನೀಡುವ ಯಾತ್ರಿಕರ ನಿಖರ ಸಂಖ್ಯೆಯನ್ನು ತಿಳಿದುಕೊಳ್ಳುವ ಸಲುವಾಗಿ ಉತ್ತರ ಪ್ರದೇಶ ಸರ್ಕಾರ ಕೃತಕ ಬುದ್ಧಿಮತ್ತೆ (ಎಐ) ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲು ನಿರ್ಧರಿಸಿದೆ. ಬಹುತೇಕ ಯಾತ್ರಿಕರು ಮುಂಜಾನೆ 3ರಿಂದ ಬೆಳಗ್ಗೆ 7ರವರೆಗೆ ತೀರ್ಥಸ್ನಾನಕ್ಕೆ ತೆರಳುತ್ತಾರೆ. ಹೀಗಾಗಿ ಎಐ ಆಧಾರಿತ ಸಿಸಿ ಕ್ಯಾಮೆರಾಗಳು ಇದೇ ಸಮಯದಲ್ಲಿ ಭಕ್ತರ ಲೆಕ್ಕ ಹಾಕಿ ಪ್ರತಿ ನಿಮಿಷಕ್ಕೊಮ್ಮೆ ಪರಿಷ್ಕೃತ ಮಾಹಿತಿಯನ್ನು ಒದಗಿಸಲಿದೆ. 95% ನಿಖರತೆಯನ್ನು ಇದು ಸಾಧಿಸಲಿದೆ ಎಂದು ಉತ್ತರ ಪ್ರದೇಶ ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.

    ಪ್ರಯಾಗ್‌ರಾಜ್‌ನ 200 ಸ್ಥಳಗಳಲ್ಲಿ 744 ತಾತ್ಕಾಲಿಕ ಹಾಗೂ 268 ಕಡೆಗಳಲ್ಲಿ 1107 ಶಾಶ್ವತ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಜೊತೆಗೆ 100ಕ್ಕೂ ಹೆಚ್ಚು ಪಾರ್ಕಿಂಗ್ ಜಾಗಗಳಲ್ಲಿ 720 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲು ಉದ್ದೇಶಿಸಿದ್ದು, ಸುಗಮ ಸಂಚಾರಕ್ಕೆ ಹಾಗೂ ಜನದಟ್ಟಣೆ ನಿರ್ವಹಣೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಾದೇಶಿಕ ಆಯುಕ್ತ ವಿಜಯ್ ವಿಶ್ವಾಸ್ ಪಂತ್ ಮಾಹಿತಿ ನೀಡಿದ್ದಾರೆ.

    ಗೂಗಲ್‌ನಿಂದ ‘ನ್ಯಾವಿಗೇಷನ್ ಸಿಸ್ಟಮ್’:
    ಮಹಾ ಕುಂಭಮೇಳಕ್ಕಾಗಿ ವಿಶೇಷ ನ್ಯಾವಿಗೇಷನ್ ಸಿಸ್ಟಮ್ ಅನ್ನು ಗೂಗಲ್ ಅಭಿವೃದ್ಧಿಪಡಿಸುತ್ತಿದೆ. ಗೂಗಲ್ ತಾತ್ಕಾಲಿಕ ನಗರಕ್ಕೆ ನ್ಯಾವಿಗೇಷನ್ ಸಿಸ್ಟಮ್ ಅನ್ನು ರಚಿಸುತ್ತಿರುವುದು ಇದೇ ಮೊದಲು. ಇದು ಪ್ರವಾಸಿಗರಿಗೆ ಅಥವಾ ಭಕ್ತರಿಗೆ ಪ್ರಮುಖ ರಸ್ತೆಗಳು, ಧಾರ್ಮಿಕ ಸ್ಥಳಗಳು, ಘಾಟ್‌ಗಳ ಬಗ್ಗೆ ಮಾಹಿತಿಯನ್ನು ನೀಡುತ್ತದೆ.

    ಐಷಾರಾಮಿ ಟೆಂಟ್ ಸಿಟಿ:
    ಯಾತ್ರಾರ್ಥಿಗಳ ಸಂಚಾರಕ್ಕೆ ಅನುವಾಗಲು ಹಾಗೂ ಪರಿಸರಸ್ನೇಹಿ ಪ್ರಯಾಣ ಖಚಿತಕ್ಕಾಗಿ ಆ್ಯಪ್ ಆಧಾರಿತ ಇ-ರಿಕ್ಷಾ ಸೇವೆಯನ್ನು ಸರ್ಕಾರ ಒದಗಿಸುತ್ತಿದೆ. ಯಾತ್ರಾರ್ಥಿಗಳಿಗಾಗಿ ಟೆಂಟ್ ಸಿಟಿ ನಿರ್ಮಿಸಲಾಗುತ್ತಿದೆ. ವಿಲ್ಲಾ, ಮಹಾರಾಜ, ಸ್ವಿಜ್ ಕಾಟೇಜ್, ಡಾರ್ಮೆಟ್ರಿ ಎಂಬ 4 ವಿಧಗಳ ಟೆಂಟ್ ಇರಲಿದ್ದು, ಐಷಾರಾಮಿ ಸೇವೆಯ 2000 ಸ್ವಿಜ್ ಕಾಟೇಜ್‌ಗಳನ್ನೂ ನಿರ್ಮಿಸಲಾಗುತ್ತಿದೆ ಎಂದು ಸರ್ಕಾರ ಹೇಳಿದೆ.

    ಮಾಹಿತಿ ಒದಗಿಸಲು ಚಾಟ್‌ಬಾಟ್:
    ಭಾರತ ತಂತ್ರಜ್ಞಾನದಲ್ಲಿ ಸಾಧಿಸುತ್ತಿರುವ ಪ್ರಗತಿಯನ್ನು ಕುಂಭಮೇಳಕ್ಕೂ ವಿಸ್ತರಿಸಿದೆ. ಪ್ರಯಾಣಿಕರಿಗೆ ನೆರವು ನೀಡುವುದಕ್ಕಾಗಿ ಕೃತಕ ಬುದ್ಧಿಮತ್ತೆ ಚಾಟ್‌ಬಾಟನ್ನು ಸ್ಥಾಪನೆ ಮಾಡಿದೆ. ಈ ಚಾಟ್‌ಬಾಟ್ ಪ್ರಯಾಗ್‌ರಾಜ್ ಮಹಾ ಕುಂಭಮೇಳದಲ್ಲಿ ದಿನದ 24 ಗಂಟೆಯೂ ಕಾರ್ಯನಿರ್ವಹಿಸಲಿದೆ. ಇದೊಂದು ಆ್ಯಪ್ ಆಗಿದ್ದು, ‘ಓಲಾ ಕೃತಿಮ್’ ಇದನ್ನು ತಯಾರು ಮಾಡಿದೆ. ಕನ್ನಡ, ಹಿಂದಿ, ಇಂಗ್ಲಿಷ್, ತಮಿಳು, ತೆಲುಗು, ಮರಾಠಿ, ಮಲಯಾಳ, ಉರ್ದು, ಗುಜರಾತಿ, ಪಂಜಾಬಿ ಮತ್ತು ಬೆಂಗಾಲಿಗಳಲ್ಲಿ ಇದು ಮಾಹಿತಿ ಒದಗಿಸಲಿದೆ. ಅಲ್ಲದೇ ಇಡೀ ಕುಂಭಮೇಳದ ಮ್ಯಾಪ್ ಒದಗಿಸಲಿದ್ದು, ಕುಂಭಮೇಳದ ಇತಿಹಾಸ, ಪದ್ಧತಿ ಸೇರಿದಂತೆ ಹಲವು ಮಾಹಿತಿಯನ್ನು ಒದಗಿಸಲಿದೆ.

    ಏಕಮಾರ್ಗ:
    ಮಹಾ ಕುಂಭದ ಸಮಯದಲ್ಲಿ ಸುಗಮ ಸಂಚಾರಕ್ಕಾಗಿ 7 ಪ್ರಮುಖ ಮಾರ್ಗಗಳಲ್ಲಿ ಏಕಮುಖ ಮಾರ್ಗ ವ್ಯವಸ್ಥೆಯನ್ನು ಜಾರಿಗೊಳಿಸಲಾಗುತ್ತದೆ. ಇದರಲ್ಲಿ ಜಾನ್‌ಪುರ, ವಾರಣಾಸಿ, ಮಿರ್ಜಾಪುರ, ರೇವಾ, ಕಾನ್ಪುರ, ಲಕ್ನೋ ಮತ್ತು ಅಯೋಧ್ಯೆ-ಪ್ರತಾಪಗಢ ಸೇರಿದೆ.

    ಪಾರ್ಕಿಂಗ್ ಸೌಲಭ್ಯ:
    ಒಟ್ಟು 101 ಪಾರ್ಕಿಂಗ್ ಸೈಟ್‌ಗಳನ್ನು ಪ್ರಸ್ತಾಪಿಸಿದ್ದು, ಸುಮಾರು 5 ಲಕ್ಷ ವಾಹನಗಳಿಗೆ ಅವಕಾಶ ಕಲ್ಪಿಸುತ್ತದೆ. ಭಾರೀ ಹಾಗೂ ಲಘು ವಾಹನಗಳಿಗೆ ಪ್ರತ್ಯೆಕ ಪಾರ್ಕಿಂಗ್ ವ್ಯವಸ್ಥೆ ಇರುತ್ತದೆ.

    ಶಟಲ್ ಸೇವೆ:
    ಮಹಾ ಕುಂಭದ ಸಮಯದಲ್ಲಿ 550 ಶಟಲ್ ಬಸ್ಸುಗಳು ಹಾಗೂ 20,000 ಇ ರಿಕ್ಷಾಗಳು ವಿವಿಧ ಪ್ರದೇಶಗಳಲ್ಲಿ ಪ್ರಯಾಣಿಕರಿಗೆ ಸೌಲಭ್ಯ ಒದಗಿಸುತ್ತದೆ. ಕುಂಭ ಮೇಳ ನಡೆಯುವ ಪ್ರದೇಶದಲ್ಲಿ 100 ಡಿಜಿಟಲ್ ಬೋರ್ಡ್ ಹಾಗೂ 80 ವಿಎಂಡಿ ಅಳವಡಿಸಲಾಗುತ್ತದೆ. ಇದರಿಂದ ಯಾತ್ರಾರ್ಥಿಗಳಿಗೆ ಸಂಚಾರ ಮಾರ್ಗ ಮತ್ತು ಪಾರ್ಕಿಂಗ್ ಸ್ಥಿತಿಯಂತಹ ವಿವಿಧ ವಿವರಗಳನ್ನು ಒದಗಿಸುತ್ತದೆ.

    ಮಹಾ ಕುಂಭದ ಅವಧಿಯಲ್ಲಿ 18,000 ಆರ್‌ಪಿಎಫ್ ಮತ್ತು ಜಿಆರ್‌ಪಿ ಯೋಧರನ್ನು ನಿಯೋಜಿಸಲಾಗಿದೆ. ಇದರಲ್ಲಿ ಆರ್‌ಪಿಎಫ್ ಯೋಧರ ಸಂಖ್ಯೆ 8,000 ಮತ್ತು ಜಿಆರ್‌ಪಿ ಸೈನಿಕರ ಸಂಖ್ಯೆ 10,000 ಇರಲಿದೆ. ಅಲ್ಲದೇ ದೇಶಾದ್ಯಂತ 13,000 ರೈಲ್ವೆ ಅಧಿಕಾರಿಗಳು ಮತ್ತು ನೌಕರರನ್ನು ಇಲ್ಲಿಗೆ ನಿಯೋಜಿಸಲಾಗುತ್ತಿದೆ. ಹಿಂದಿ ಮತ್ತು ಇಂಗ್ಲಿಷ್ ಜೊತೆ ದಕ್ಷಿಣ ಭಾರತ, ಪಂಜಾಬಿ, ಬೆಂಗಾಲಿ, ಮರಾಠಿ, ಗುಜರಾತಿ ಇತ್ಯಾದಿ ಮಾತನಾಡಬಲ್ಲ ಉದ್ಯೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ.

    ಮಹಾ ಕುಂಭಮೇಳದ ಸಂದರ್ಭದಲ್ಲಿ ಭಕ್ತರಿಗೆ ಸ್ಥಳಾವಾಕಾಶ ಕಲ್ಪಿಸಲು 3,000 ವಿಶೇಷ ರೈಲುಗಳನ್ನು ಒಳಗೊಂಡಮತೆ 45 ದಿನಗಳಲ್ಲಿ ಒಟ್ಟು 13,000 ರೈಲುಗಳು ಕಾರ್ಯ ನಿರ್ವಹಿಸಲಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.

  • ಡ್ರೋಣ್ ಪ್ರತಾಪ್ ಮೋಸದ ಆರೋಪ: ಡಾ.ಪ್ರಯಾಗ್ ಎಂಟ್ರಿ

    ಡ್ರೋಣ್ ಪ್ರತಾಪ್ ಮೋಸದ ಆರೋಪ: ಡಾ.ಪ್ರಯಾಗ್ ಎಂಟ್ರಿ

    ನಗೆ ಡ್ರೋಣ್ ಪ್ರತಾಪ್ (Drone Pratap) ಅವರು 83 ಲಕ್ಷ ರೂಪಾಯಿ ಮೋಸ ಮಾಡಿದ್ದಾರೆ ಎಂದು ಇಂದು ಬೆಳಗ್ಗೆಯಷ್ಟೇ ಸಾರಂಗ್ ಮಾನೆ (Sarang Mane) ಎನ್ನುವವರು ಆರೋಪ ಮಾಡಿದ್ದರು. ಡ್ರೋಣ್ ಗಳನ್ನು ರೆಡಿ ಮಾಡಿಕೊಡುವುದಾಗಿ ದುಡ್ಡು ಪಡೆದು, ಕೆಲವೇ ಡ್ರೋಣ್ ನೀಡಿದ್ದಾರೆ. ಅವೂ ಕೂಡ ಕೆಲಸ ಮಾಡುತ್ತಿಲ್ಲವೆಂದು ಹೇಳಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾರಂಗ್ ಮಾನೆ, ಈ ಹಿಂದೆ ಡ್ರೋಣ್ ಮೇಲೆ ಮಾನನಷ್ಟ ಹೂಡಿದ್ದ ಡಾ.ಪ್ರಯಾಗ್ ರಾಜ್ (Prayag Raj) ಅವರನ್ನು ಸಂಪರ್ಕಿಸಿದ್ದಾರೆ.

    ಈ ಕುರಿತಂತೆ ಸ್ವತಃ ಪ್ರಯಾಗ್ ಅವರೇ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. ‘ನಾನು ಡ್ರೋಣ್ ಪ್ರತಾಪ್ ಮೇಲೆ ಮಾನನಷ್ಟ ಪ್ರಕರಣ ದಾಖಲು ಮಾಡಿದ್ದೆ. ಹೀಗಾಗಿ ಡ್ರೋಣ್ ಪ್ರತಾಪ್  ಜೊತೆ ಇದ್ದ ಮಾಜಿ ಪಾರ್ಟನರ್  ಸಾರಂಗ್ ಮಾನೆ  ಸಾಮಾಜಿಕ ಜಾಲತಾಣದಲ್ಲಿ ನನ್ನನ್ನು ಸಂಪರ್ಕಿಸಿದ್ರು. 83 ಲಕ್ಷ ಪ್ರತಾಪ್ ಮೋಸ ಮಾಡಿದ್ರು ಅಂತಾ ಒಂದಿಷ್ಟು ಡಾಕ್ಯುಮೆಂಟ್ ಕಳಿಸಿದ್ರು. ನಂಗೆ ಸಪೋರ್ಟ್ ಕೊಡಿ ನಾನು ಪೊಲೀಸ್ ಗೆ ದೂರು ಕೊಡಬೇಕು ಅಂತಾ ಸಾರಂಗ್ ಕೇಳಿಕೊಂಡಿದ್ದಾರೆ. ದೂರು ಕೊಡೋಕೆ ಕೂಡ ರೆಡಿಯಾಗಿದ್ದಾರೆ. ಆದರೆ, ಈಗ ಡ್ರೋಣ್ ಕಡೆಯವರು ಸಾರಂಗ್ ಗೆ ಬೆದರಿಕೆ ಹಾಕುತ್ತಿದ್ದಾರೆ’ ಆರೋಪ ಮಾಡಿದ್ದಾರೆ.

    ಪ್ರತಾಪ್ ಈಗಾಗಲೇ 2 ಡ್ರೋಣ್ ಕಳಿಸಿದ್ದಾರೆ. ಆದರೆ, ಅವು ಸರಿಯಾಗಿ ಕಾರ್ಯ ಮಾಡುತ್ತಿಲ್ಲ. ಒಂದು ವರ್ಷವಾಗಿದೆ ಹಣವನ್ನೂ ಕೊಡುತ್ತಿಲ್ಲ ಎಂದು ಸಾರಂಗ್ ಮಾನೆ ಆರೋಪ ಮಾಡುತ್ತಿದ್ದಾರೆ. ರೈತರ ಬೆಳೆಗಳಿಗೆ ಕ್ರಿಮಿನಾಶಕ ಔಷಧ ಸಿಂಪಡಿಸುವ ಡ್ರೋಣ್ ಗಳ ಎಕ್ಸಿಬಿಷನ್ ವೇಳೆ ಸಾರಂಗ್ ಮಾನೆ ಅವರಿಗೆ  ಡ್ರೋಣ್ ಪ್ರತಾಪ್ ಪರಿಚವಾಗಿದ್ದರಂತೆ. ರೈತರಿಗೆ ಡ್ರೋಣ್ ಕಳಿಸಿಕೊಡುವ ಟೆಂಡರ್ ಪಡೆದಿದ್ದ ಸಾರಂಗ್ ಮಾನೆ ಅವರು ಪ್ರತಾಪ್ ಗೆ ಆ ಜವಾಬ್ದಾರಿ ನೀಡಿದ್ದರು. ಆದರೆ, ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸಿಲ್ಲ ಎನ್ನುವುದು ಮಾನೆ ಆರೋಪಕ್ಕೆ.

     

    ಇದರ ಸತ್ಯಾಸತ್ಯೆ ಏನು ಎನ್ನುವುದನ್ನು ಡ್ರೋಣ್ ಪ್ರತಾಪ್ ಅವರೇ ಬಹಿರಂಗ ಪಡಿಸಬೇಕು. ಇನ್ನೇನು ಎರಡ್ಮೂರು ದಿನದೊಳಗೆ ಬಿಗ್ ಬಾಸ್ ಮನೆಯಿಂದ ಡ್ರೋಣ್ ಆಚೆ ಬರ್ತಾರೆ. ಅವಾಗ ಸ್ಪಷ್ಟ ಉತ್ತರ ಸಿಗಬಹುದು.