Tag: Praveer Shetty

  • ಪ್ರವೀರ್ ಶೆಟ್ಟಿ ಸಿನಿಮಾಗೆ ಶ್ರೀಮುರಳಿ ಸಾಥ್-‘ನಿದ್ರಾದೇವಿ Next door’ ಟೀಸರ್‌ ಔಟ್‌

    ಪ್ರವೀರ್ ಶೆಟ್ಟಿ ಸಿನಿಮಾಗೆ ಶ್ರೀಮುರಳಿ ಸಾಥ್-‘ನಿದ್ರಾದೇವಿ Next door’ ಟೀಸರ್‌ ಔಟ್‌

    ನ್ನಡ ಚಿತ್ರರಂಗದಲ್ಲೀಗ ಹೊಸ ಪ್ರಯತ್ನಗಳ ಪರ್ವ ಕಾಲ ಶುರುವಾಗಿದೆ. ಹೊಸಬರು ವಿಭಿನ್ನ ಕಥೆಗಳ ಮೂಲಕ ಪ್ರೇಕ್ಷಕರ ಎದುರು ಬರುತ್ತಿದ್ದಾರೆ. ಅದರ ಮುಂದುವರೆದ ಭಾಗವಾಗಿ ರೂಪಗೊಂಡಿರುವ ಸಿನಿಮಾವೇ ‘ನಿದ್ರಾದೇವಿ Next door’. ಬೆಂಗಳೂರಿನ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಟೀಸರ್ ಬಿಡುಗಡೆ ಕಾರ್ಯಕ್ರಮ ನಡೆಯಿತು. ರೋರಿಂಗ್ ಸ್ಟಾರ್ ಶ್ರೀಮುರಳಿ (Srimurali) ಅವರು ಪ್ರವೀರ್‌ ಶೆಟ್ಟಿ (Praveer Shetty) ನಟನೆಯ ‘ನಿದ್ರಾದೇವಿ Next door’ (Nidradevi Next Door) ಟೀಸರ್ ರಿಲೀಸ್ ಮಾಡಿ ಇಡೀ ತಂಡಕ್ಕೆ ಶುಭಕೋರಿದರು. ಇದನ್ನೂ ಓದಿ:BBK 11: ಕೊಟ್ಟ ಮಾತಿನಂತೆ ಹನುಮಂತನಿಗೆ ಗಿಫ್ಟ್ ಕಳುಹಿಸಿದ ಕಿಚ್ಚ

    ಶ್ರೀಮುರಳಿ ಮಾತನಾಡಿ, ನಿರ್ಮಾಪಕರಾದ ಜಯರಾಮ್ ದೇವಸಮುದ್ರ ತುಂಬಾ ಕಾಳಜಿ, ಪ್ರೀತಿಯಿಂದ ಸಿನಿಮಾ ಮಾಡಿದ್ದಾರೆ. ಅವರಿಗೆ ಒಳ್ಳೆಯದು ಆಗಲಿ. ನಿಮ್ಮಂತಹ ನಿರ್ಮಾಪಕರು ಚಿತ್ರರಂಗಕ್ಕೆ ಬೇಕು. ನಾನು ಪ್ರವೀರ್ ಜಿಮ್ ಮೇಟ್ಸ್. ವರ್ಕೌಟ್ ಮಾಡುವಾಗ ಪ್ರವೀರ್ ಸಿನಿಮಾ ಬಗ್ಗೆಯೇ ಮಾತನಾಡುತ್ತಾರೆ. ಅವರಿಗೆ ಒಳ್ಳೆಯದಾಗಲಿ ಎಂದಿದ್ದಾರೆ. ನಿಮ್ಮ ಕಣ್ಣಲ್ಲಿ ನಟನೆ ನೋಡಿದೆ. ಶೈನ್ (Shine Shetty) ಫ್ಯಾನ್ ನಾನು. ನೀವು ಚಿತ್ರದಲ್ಲಿ ಚೆನ್ನಾಗಿ ಕಾಣಿಸಿಕೊಂಡಿದ್ದೀರಾ ಎಂದು ಶೈನ್‌ ಶೆಟ್ಟಿಗೆ ಮೆಚ್ಚುಗೆ ಸೂಚಿಸಿದರು. ಡೈರೆಕ್ಟರ್  ಸುರಾಗ್ ಏನೋ ವಿಷ್ಯ ಹೇಳುತ್ತಿರುವುದು ಗೊತ್ತಾಗುತ್ತಿದೆ. ಮ್ಯೂಸಿಕ್ ಕೂಡ ಟೀಸರ್‌ನಲ್ಲಿ ಚೆನ್ನಾಗಿದೆ ಎಂದರು.

    ನಟ ಪ್ರವೀರ್ ಶೆಟ್ಟಿ ಮಾತನಾಡಿ, ಸುರಾಗ್ ನನಗೂ ಎರಡು ವರ್ಷದ ಜರ್ನಿ ಇದೆ. ನಮ್ಮ ಸ್ಟೋರಿ ಇಟ್ಕೊಂಡು ಹಲವಾರು ನಿರ್ಮಾಪಕರ ಬಳಿ ಹೋದೆವು. ಆದರೆ ಜಯರಾಮ್ ಸರ್ ರಿಸೀವ್ ಮಾಡಿದಷ್ಟು ಬೇರೆ ಯಾರು ರಿಸೀವ್ ಮಾಡಲಿಲ್ಲ. ಥ್ಯಾಂಕೂ ಸರ್. ಇದು ನಿಮ್ಮಿಂದ ಆಗಿರೋದು. ಬ್ಯೂಟಿಫುಲ್ ವಿಷ್ಯುವಲ್ಸ್ ಶೂಟ್ ಮಾಡಿದ್ದಾರೆ ನಮ್ಮ ಛಾಯಾಗ್ರಹಕರು, ಮ್ಯೂಸಿಕ್ ಕೂಡ ತುಂಬಾ ಚೆನ್ನಾಗಿದೆ. ರಿಷಿಕಾ ಅವರಿಂದ ತುಂಬಾ ಕಲಿಯುತ್ತಿದ್ದೇವೆ. ನಮ್ಮ ತಂಡಕ್ಕೆ ನಿಮ್ಮ ಬೆಂಬಲ ಇರಲಿ ಎಂದು ಹೇಳಿದರು.

     

    View this post on Instagram

     

    A post shared by Praveer Shetty (@praveer.shettyy)

    ನಿರ್ದೇಶಕ ಸುರಾಗ್ ಮಾತನಾಡಿ, ಪ್ರವೀರ್ ನಾನು ಒಟ್ಟಿಗೆ ಸೇರಿದಾಗ ನಮ್ಮಿಬ್ಬರಿಗೆ ಒಂದೇ ತರ ಸಿನಿಮಾ ಮಾಡಬೇಕೆಂಬ ವಿಷನ್ ಇತ್ತು. ಅದು ನಮ್ಮಿಬ್ಬರಿಗೂ ಮ್ಯಾಚ್ ಆಯಿತು. ನಾನು ಏನು ಕಥೆ ,ಮಾಡಿಕೊಂಡಿದ್ದೇನೋ ಅದನ್ನು ಪ್ರವೀರ್ ಗೆ ಹೇಳಿದಾಗ ಅವರು ಖುಷಿಪಟ್ಟರು. ನಮ್ಮ ಟೆಕ್ನಿಕಲ್ ಟೀಮ್ ಈ ಚಿತ್ರಕ್ಕೆ ಸಾಕಷ್ಟು ಶ್ರಮಿಸಿದೆ. ಒಂದೊಳ್ಳೆಯ ತಂಡದ ಜೊತೆ ಕೆಲಸ ಮಾಡಿದ ಖುಷಿ ಇದೆ. ನಿರ್ಮಾಪಕ ಜಯರಾಮ್ ಸರ್ ಒಳಗಡೆ ಒಬ್ಬ ನಿರ್ದೇಶಕರಿದ್ದಾರೆ. ಅವರಿಗೆ ಸಿನಿಮಾ ಟೆಸ್ಟ್ ತುಂಬಾ ಚೆನ್ನಾಗಿದೆ ಎಂದರು.

    ‘ನಿದ್ರಾದೇವಿ Next door’ ಟೀಸರ್ ಬಹಳ ಕುತೂಹಲ ಹೆಚ್ಚಿಸಿದೆ. ಟೀಸರ್ ನಲ್ಲಿ ಕಥೆ ಗಟ್ಟುರಟ್ಟು ಮಾಡದೇ ಟೀಸರ್ ಕಟ್ ಮಾಡಲಾಗಿದೆ. ಚೆಂದದ ಲವ್ ಸ್ಟೋರಿ, ನಿದ್ರೆ ಇಲ್ಲದ ವ್ಯಕ್ತಿಯ ಸುತ್ತ ಸಾಗುವ ಕಥಾಹಂದರ ಸಿನಿಮಾದಲ್ಲಿದೆ. ಪ್ರವೀರ್ ಶೆಟ್ಟಿ, ರಿಷಿಕಾ ನಾಯಕ್ ಜೋಡಿಯಾಗಿ ಕಾಣಿಸಿಕೊಂಡಿದ್ದು, ಬಿಗ್ ಬಾಸ್ ಖ್ಯಾತಿಯ ಶೈನ್ ಶೆಟ್ಟಿ ಹಾಗು ಶ್ರುತಿ ಹರಿಹರನ್, ಹಿರಿಯ ನಟ ಕೆ.ಎಸ್.ಶ್ರೀಧರ್, ಸುಧಾರಾಣಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಶ್ರೀವತ್ಸ, ಅನೂಪ್, ಐಶ್ವರ್ಯ ಗೌಡ , ಮಾಸ್ಟರ್ ಸುಜಯ್ ರಾಮ್, ಕಾರ್ತಿಕ್ ಪತ್ತಾರ್ ಮತ್ತು ಅನುರಾಗ್ ಪಾಟೀಲ್ ಸೇರಿದಂತೆ ಇತರರು ತಾರಾಬಳಗದಲ್ಲಿದ್ದಾರೆ. ಈ ಚಿತ್ರಕ್ಕೆ ನಿರ್ಮಾಪಕರಾದ ಜಯರಾಮ್ ದೇವಸಮುದ್ರ ಅವರು ತಮ್ಮ ಸುರಮ್ ಮೂವೀಸ್ ಬ್ಯಾನರ್‌ ಅಡಿಯಲ್ಲಿ ನಿರ್ಮಿಸಿದು, ಈ ಹಿಂದೆ ಇದೇ ಸಂಸ್ಥೆಯಲ್ಲಿ ʻರೇವ್ ಪಾರ್ಟಿʼ ಮತ್ತು ʻಎಂಗೇಜ್‌ಮೆಂಟ್‌’ ಚಿತ್ರಗಳನ್ನು ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾಗೆ ನಕುಲ್ ಅಭ್ಯಂಕರ್ ಅವರ ಸಂಗೀತ, ಅಜಯ್ ಕುಲಕರ್ಣಿ ಅವರ ಛಾಯಾಗ್ರಹಣ, ಉಲ್ಲಾಸ್ ಹೈದೂರ್ ಅವರ ಪ್ರೊಡಕ್ಷನ್ ಡಿಸೈನ್, ಅರ್ಜುನ್ ರಾಜ್ ಅವರ ಸಾಹಸ ನಿರ್ದೇಶನ ಮತ್ತು ಹೇಮಂತ್ ಕುಮಾರ್ ಡಿ ಅವರ ಸಂಕಲನವಿದೆ.

  • ‘ನಿದ್ರಾದೇವಿ Next Door’ ಸಿನಿಮಾಗೆ ಕುಂಬಳಕಾಯಿ ಪ್ರಾಪ್ತಿ

    ‘ನಿದ್ರಾದೇವಿ Next Door’ ಸಿನಿಮಾಗೆ ಕುಂಬಳಕಾಯಿ ಪ್ರಾಪ್ತಿ

    ಸುರಮ್ ಮೂವೀಸ್ ನಿರ್ಮಾಣದ ಯುವ ನಟ ಪ್ರವೀರ್ ಶೆಟ್ಟಿ (Praveer Shetty) ನಾಯಕನಾಗಿ ನಟಿಸಿರುವ ‘ನಿದ್ರಾದೇವಿ Next Door’ (Nidradevi Next Door) ಸಿನಿಮಾದ ಚಿತ್ರೀಕರಣ ಮುಕ್ತಾಯಗೊಂಡಿದೆ. ರಾಜರಾಜೇಶ್ವರಿ ನಗರದಲ್ಲಿ ಕೊನೆಯ ಹಂತದ ಶೂಟಿಂಗ್ ಕಂಪ್ಲೀಟ್ ಮಾಡಿ ಕುಂಬಳಕಾಯಿ ಹೊಡೆಯಲಾಯಿತು. ಈ ವೇಳೆ, ಚಿತ್ರದ ಎಲ್ಲಾ ಕಲಾವಿದರು, ತಂತ್ರಜ್ಞರು ಹಾಗೂ ಕನ್ನಡ ಪರ ಹೋರಾಟಗಾರ ಪ್ರವೀಣ್ ಶೆಟ್ಟಿ ಕೂಡ ಭಾಗಿಯಾಗಿದ್ದರು.


    ಈ ಚಿತ್ರದಲ್ಲಿ ಪ್ರವೀರ್ ಶೆಟ್ಟಿ, ರಿಷಿಕಾ ನಾಯಕ್ ಜೋಡಿಯಾಗಿ ಕಾಣಿಸಿಕೊಂಡಿದ್ದು, ‘ಬಿಗ್ ಬಾಸ್’ ಖ್ಯಾತಿಯ ಶೈನ್ ಶೆಟ್ಟಿ (Shine Shetty) ಹಾಗೂ ಶ್ರುತಿ ಹರಿಹರನ್ (Sruthi Hariharan) ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸುಧಾರಾಣಿ, ಶ್ರೀವತ್ಸ, ಐಶ್ವರ್ಯಾ ಗೌಡ , ಅನೂಪ್, ಮಾಸ್ಟರ್ ಸುಜಯ್ ರಾಮ್, ಕಾರ್ತಿಕ್ ಪತ್ತಾರ್ ಮತ್ತು ಅನುರಾಗ್ ಪಾಟೀಲ್ ಸೇರಿದಂತೆ ಇತರರು ತಾರಾಬಳಗದಲ್ಲಿದ್ದಾರೆ. ಇದನ್ನೂ ಓದಿ:ದೀಪಿಕಾ ದಾಸ್ ನಟನೆಯ ‘ಪಾರು ಪಾರ್ವತಿ’ ಸಾಂಗ್ ರಿಲೀಸ್

    ಈ ಚಿತ್ರವನ್ನು ನಿರ್ಮಾಪಕರಾದ ಜಯರಾಮ್ ದೇವಸಮುದ್ರ ಅವರು ತಮ್ಮ ಸುರಮ್ ಮೂವೀಸ್ ಬ್ಯಾನರ್‌ನಡಿ ನಿರ್ಮಿಸಿದ್ದು, ಈ ಹಿಂದೆ ಇದೇ ಸಂಸ್ಥೆಯಲ್ಲಿ ರೇವ್ ಪಾರ್ಟಿ  ಮತ್ತು  ಎಂಗೇಜ್‌ಮೆಂಟ್ ಚಿತ್ರಗಳನ್ನು ನಿರ್ಮಾಣ ಮಾಡಿದ್ದಾರೆ. ‘ನಿದ್ರಾದೇವಿ Next Door’ ಚಿತ್ರವು ಅವರ ಬ್ಯಾನರ್‌ನಲ್ಲಿ ಬರುತ್ತಿರುವ ವಿಭಿನ್ನ ಚಿತ್ರವಾಗಿದೆ. ಅಂದುಕೊಂಡಂತೆ ಎಲ್ಲಾ ಶೆಡ್ಯೂಲ್ ಅದ್ಭುತವಾಗಿ ಮೂಡಿ ಬಂದಿದೆ ಎಂದು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಡೈರೆಕ್ಟರ್‌ ಸುರಾಗ್ ಸಾಗರ್ ಮಾತನಾಡಿ, ಸಿನಿಮಾದ ಶೂಟಿಂಗ್ ಮುಗಿದಿದೆ. ಪೋಸ್ಟ್ ಪ್ರೊಡಕ್ಷನ್ ಶುರುವಾಗಿದೆ. ಬೆಂಗಳೂರಿನ HMTನಲ್ಲಿ ಒಂದು ಪ್ರತ್ಯೇಕ ಸೆಟ್‌ನಲ್ಲಿ ಚಿತ್ರದ ಒಂದು ಮುಖ್ಯ ಭಾಗವನ್ನು ಶೂಟ್ ಮಾಡಿದ್ದು, ಅದ್ಭುತವಾಗಿ ಈ ಚಿತ್ರವು ಮೂಡಿ ಬಂದಿದೆ ಎಂದು ತಿಳಿಸಿದರು.

    ಚಿತ್ರತಂಡ ಕಳೆದ ಮಾರ್ಚ್ ತಿಂಗಳಲ್ಲಿ ಈ ವಿಭಿನ್ನ ಟೈಟಲ್‌ನೊಂದಿಗೆ ಬೆಂಗಳೂರಿನ ಬಸವನಗುಡಿ ದೊಡ್ಡ ಗಣಪತಿ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತ ಸಮಾರಂಭ ನಡೆಸಿದರು. ಕ್ರೇಜಿಸ್ಟಾರ್ ರವಿಚಂದ್ರನ್ ಅವರು ನಾಯಕ ಪ್ರವೀರ್ ಶೆಟ್ಟಿಯ ಹೊಸ ಪ್ರಯತ್ನಕ್ಕೆ ಸಾಥ್ ನೀಡಿದರು. ಈ ಚಿತ್ರಕ್ಕೆ ಕ್ಲಾಪ್ ಮಾಡಿದ ʻಕನಸುಗಾರʼ ಇಡೀ ತಂಡಕ್ಕೆ ಶುಭ ಹಾರೈಸಿದ್ದರು. ಈ ಚಿತ್ರಕ್ಕೆ ನಕುಲ್ ಅಭ್ಯಂಕರ್ ಅವರ ಸಂಗೀತ, ಅಜಯ್ ಕುಲಕರ್ಣಿ ಅವರ ಛಾಯಾಗ್ರಹಣ, ಊಲಾಸ್ ಹೈದೂರ್ ಅವರ ಪ್ರೊಡಕ್ಷನ್ ಡಿಸೈನ್ ಅರ್ಜುನ್ ರಾಜ್ ಅವರ ಸಾಹಸ ನಿರ್ದೇಶನ (ಯುವ ಸಿನಿಮಾ ಖ್ಯಾತಿ) ಮತ್ತು ಹೇಮಂತ್ ಕುಮಾರ್ ಡಿ ಅವರ ಸಂಕಲನವಿದೆ.

  • ಪ್ರವೀರ್ ಶೆಟ್ಟಿ, ಶೈನ್ ಶೆಟ್ಟಿ ಹೊಸ ಚಿತ್ರಕ್ಕೆ ಕ್ರೇಜಿಸ್ಟಾರ್ ಕ್ಲ್ಯಾಪ್

    ಪ್ರವೀರ್ ಶೆಟ್ಟಿ, ಶೈನ್ ಶೆಟ್ಟಿ ಹೊಸ ಚಿತ್ರಕ್ಕೆ ಕ್ರೇಜಿಸ್ಟಾರ್ ಕ್ಲ್ಯಾಪ್

    ‘ಸೈರನ್’ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದ್ದ ಪ್ರವೀರ್ ಶೆಟ್ಟಿ (Praveer Shetty) ಈಗ ಮತ್ತೊಂದು ವಿಭಿನ್ನ ಕಥೆ ಮೂಲಕ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗುತ್ತಿದೆ. ಅದರ ಮೊದಲ ಭಾಗವೆಂಬಂತೆ ಇಂದು ಬೆಂಗಳೂರಿನ ಬನಶಂಕರಿಯಲ್ಲಿರುವ ದೊಡ್ಡ ಗಣಪತಿ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತ ಸಮಾರಂಭ ನಡೆದಿದೆ. ಕ್ರೇಜಿಸ್ಟಾರ್ ರವಿಚಂದ್ರನ್  ಪ್ರವೀರ್ ಶೆಟ್ಟಿಯ ಹೊಸ ಪ್ರಯತ್ನದ ‘ನಿದ್ರಾದೇವಿ Next Door’ ಸಾಥ್ ಕೊಟ್ಟರು. ಚಿತ್ರಕ್ಕೆ ಕ್ಲ್ಯಾಪ್ ಮಾಡಿದ ಕನಸುಗಾರ ರವಿಚಂದ್ರನ್ (Ravichandran) ಇಡೀ ತಂಡಕ್ಕೆ ಶುಭ ಹಾರೈಸಿದರು.

    ಯುವ ಪ್ರತಿಭೆ ಸುರಾಗ್ ಸಾಗರ್ ‘ನಿದ್ರಾದೇವಿ Next Door’  ಸಿನಿಮಾಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಪ್ರವೀರ್ ಶೆಟ್ಟಿ ಜೊತೆಗೆ ಶೈನ್ ಶೆಟ್ಟಿ (Shine Shetty) ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದು, ರಿಷಿಕಾ ನಾಯಕ್ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. ಮುಹೂರ್ತ ಸಮಾರಂಭದ ಬಳಿಕ ಮಾತನಾಡಿದ ನಿರ್ದೇಶಕ ಸುರಾಗ್ ಸಾಗರ್, ರವಿ ಸರ್ ನಮ್ಮ ಸಿನಿಮಾಗೆ ಕ್ಲ್ಯಾಪ್ ಮಾಡಿದ್ದು ಖುಷಿ ಕೊಟ್ಟಿದೆ. ಅವರು ವಿಭಿನ್ನ ಟೈಟಲ್ ಮೂಲಕ ಬರುತ್ತಾರೆ. ನಮ್ಮ ಟೈಟಲ್ ಕೂಡ ವಿಭಿನ್ನವಾಗಿದೆ. ಇದು ಕಾಕತಾಳೀಯ. ಇಬ್ಬರು ನಿದ್ದೆ ಇಲ್ಲದರ ಜರ್ನಿ. ಅವ್ರಿಗೆ ಯಾಕೆ ನಿದ್ದೆ ಬರಲ್ಲ. ಇದಕ್ಕೆ ಪರಿಹಾರ ಏನು. ಅದರೊಳಗೆ ಅವರು ಕಂಡುಕೊಳ್ಳುವ ಲವ್ ಸ್ಟೋರಿ. ಇದಕ್ಕೆಲ್ಲಾ ಸಿನಿಮಾ ನೋಡಬೇಕು ಎಂದರು. ಇದನ್ನೂ ಓದಿ:ಬಿಗ್ ಬಾಸ್ ಪ್ರಥಮ್ ನಟಿಸಿ, ನಿರ್ದೇಶಿಸಿದ ‘ಫಸ್ಟ್ ನೈಟ್ ವಿತ್ ದೆವ್ವ’ ಟೀಸರ್ ಬಿಡುಗಡೆ


    ನಿರ್ಮಾಪಕ ಜಯರಾಮ್ ದೇವಸಮುದ್ರ ಮಾತನಾಡಿ, ಪ್ರವೀಣ್ ಶೆಟ್ಟಿ ಅವರಿಗೋಸ್ಕರ್ ಈ ಪ್ರಾಜೆಕ್ಟ್‌ಗೆ ಹಣ ಹಾಕುತ್ತಿದ್ದೇನೆ. ಕಥೆ ಬಹಳ ಚೆನ್ನಾಗಿದೆ. ನನಗೆ ಸುರಾಗ್ ಕಥೆ ಹೇಳಿದಾಗ ಫಸ್ಟ್ ಇಂಪ್ರೆಷನ್‌ನಲ್ಲಿಯೇ ಇಷ್ಟವಾಯ್ತು. ಪ್ರತಿಯೊಬ್ಬರು ಲೈಫ್ ನಲ್ಲಿ ನಡೆಯುವ ಕೆಲ ಘಟನೆಗಳು ಜೀವನದಲ್ಲಿವೆ. ಕಾಮಿಡಿ ಜೊತೆಗೆ ಒಂದು ಸಂದೇಶ ಚಿತ್ರದಲ್ಲಿದೆ ಎಂದು ತಿಳಿಸಿದರು.

    ನಾಯಕ ಪ್ರವೀರ್ ಶೆಟ್ಟಿ (Praveer Shetty) ಮಾತನಾಡಿ, ನಿದ್ರೆ ಬರದಿರುವ ಹುಡುಗ ಏನೇನೂ ಕಷ್ಟಪಡುತ್ತಾನೆ. ಅದರ ಸುತ್ತ ನನ್ನ ಪಾತ್ರ ಸಾಗುತ್ತದೆ. ನನ್ನದು ಇಂಟ್ರೆಸ್ಟಿಂಗ್ ಪಾತ್ರ. ಈ ಹಿಂದಿನ ಚಿತ್ರಗಳಿಗೆ ಹೋಲಿಕೆ ಮಾಡಿದರೆ ಇದು ವಿಭಿನ್ನ ಪಾತ್ರ. ಕಳೆದೊಂದು ತಿಂಗಳಿನಿಂದ ರಿಹರ್ಸಲ್ ಮಾಡುತ್ತಿದ್ದೇವೆ ಎಂದರು. ಇದನ್ನೂ ಓದಿ:ಹದಿನಾರು ವರ್ಷಗಳ ನಂತರ ಜೊತೆಯಾದ ಪ್ರಭಾಸ್ ಜೊತೆ ಕಂಗನಾ

    ನಾಯಕಿ ರಿಷಿಕಾ ನಾಯಕ್ ಮಾತನಾಡಿ, ಎರಡು ವರ್ಷದ ಹಿಂದೆಯೇ ನನಗೆ ನಿರ್ದೇಶಕರು ಸಿನಿಮಾದ ಕಥೆ ಹೇಳಿದ್ದರು. ಆಗ ಪಾತ್ರ ಬೇರೆ ಇತ್ತು. ಈಗ ಪಾತ್ರ ಬೇರೆ ಇದೆ. ಒಂದೊಳ್ಳೆ ತಂಡದ ಜೊತೆ ಕೆಲಸ ಮಾಡುತ್ತಿರುವುದು ಖುಷಿ ಕೊಟ್ಟಿದೆ ಎಂದು ತಿಳಿಸಿದರು.

    ಯುರೋಪ್‌ನ ಪ್ರೇಗ್ ಫಿಲ್ಮ್ ಸ್ಕೂಲ್‌ನಲ್ಲಿ ನಿರ್ದೇಶಕ ಪಟು ಕಲಿತಿರುವ ಸುರಾಗ್ ಸಾಗರ್ ಇದೀಗ ‘ನಿದ್ರಾದೇವಿ Next Door’  ಚಿತ್ರದ ಮೂಲಕ ಡೈರೆಕ್ಟರ್ ಕುರ್ಚಿ ಅಲಂಕರಿಸಿದ್ದು, ಚಿತ್ರಕ್ಕೆ ನಿರ್ದೇಶನ ಮಾಡಲಿದ್ದಾರೆ. ಸುಧಾರಾಣಿ, ಶ್ರೀವತ್ಸ, ಕಾರ್ತಿಕ್ ಪತ್ತಾರ್ ಮತ್ತು ಅನುರಾಗ್ ಪಾಟೀಲ್ ಸೇರಿದಂತೆ ಇತರರು ತಾರಾಬಗಳದಲ್ಲಿ ಇದ್ದಾರೆ.

    ರಾಜು ಬೋನಗಾನಿ, ಜಯರಾಮ್ ದೇವಸಮುದ್ರ ಜೊತೆಯಾಗಿ ನಿರ್ಮಿಸಿರುವ ಈ ಚಿತ್ರಕ್ಕೆ ಅಜಯ್ ಕುಲಕರ್ಣಿ ಅವರ ಛಾಯಾಗ್ರಹಣ ಮತ್ತು ನಕುಲ್ ಅಭ್ಯಂಕರ್ ಅವರ ಸಂಗೀತವಿದೆ. ಈ ತಿಂಗಳಾತ್ಯಂತಕ್ಕೆ ‘ನಿದ್ರಾದೇವಿ Next Door’ ತಂಡ ಶೂಟಿಂಗ್ ಅಖಾಡಕ್ಕೆ ಧುಮುಕಲಿದೆ.

  • ಪ್ರವೀರ್ ಶೆಟ್ಟಿ ನಟನೆಯ ‘ಎಂಗೇಜ್‌ಮೆಂಟ್‌’ ಚಿತ್ರದ ಶೂಟಿಂಗ್ ಮುಕ್ತಾಯ

    ಪ್ರವೀರ್ ಶೆಟ್ಟಿ ನಟನೆಯ ‘ಎಂಗೇಜ್‌ಮೆಂಟ್‌’ ಚಿತ್ರದ ಶೂಟಿಂಗ್ ಮುಕ್ತಾಯ

    ಸೈರನ್ ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ ಪ್ರವೀರ್ ಶೆಟ್ಟಿ (Praveer Shetty) ನಾಯಕನಾಗಿ ನಟಿಸಿರುವ ಹಾಗೂ ಜಾಗ್ವಾರ್, ಪ್ರವೀಣ ಚಿತ್ರದಲ್ಲಿ ನಟಿಸಿರುವ ಐಶ್ವರ್ಯ ಗೌಡ  (Aishwarya Gowda) ನಾಯಕಿ ಆಗಿರುವ ‘ಎಂಗೇಜ್‌ಮೆಂಟ್‌’ (Engagement) ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಕೊಡಗು, ಮೈಸೂರು, ಗೋವಾ ಮುಂತಾದ ಕಡೆ ನಲವತ್ತು ದಿನಗಳಿಗೂ ಹೆಚ್ಚು ಕಾಲ ಚಿತ್ರೀಕರಣ ಮಾಡಿದ್ದಾರೆ ನಿರ್ದೇಶಕ ರಾಜು ಬೋನಗಾನಿ.

    ಪ್ರೇಮ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ನಿರ್ದೇಶಕರೆ ಕಥೆ, ಚಿತ್ರಕಥೆ ಬರೆದಿದ್ದಾರೆ. ಇದು ರಾಜು ಬೋನಗಾನಿ ನಿರ್ದೇಶನದ ನಾಲ್ಕನೇ ಚಿತ್ರ.  ಕನ್ನಡ ಸೇರಿದಂತೆ ಏಳು ಭಾಷೆಗಳಲ್ಲಿ ಈ ಪ್ಯಾನ್ ಇಂಡಿಯಾ ಚಿತ್ರ ನಿರ್ಮಾಣವಾಗುತ್ತಿದೆ‌. ಚಿತ್ರದಲ್ಲಿ ಐದು ಹಾಡುಗಳಿದ್ದು,  ದಿಲೀಪ್ ಭಂಡಾರಿ ಹಾಗೂ ರಜತ್ ಘೋಶ್ ಸಂಗೀತ ನೀಡಿದ್ದಾರೆ. ವೆಂಕಟ್ ಮನಂ ಛಾಯಾಗ್ರಹಣ, ರವಿ ಕೊಂಡವೀಟಿ ಸಂಕಲನ, ವೆಂಕಟೇಶ್ ಕಲಾ ನಿರ್ದೇಶನ,  ಡ್ರ್ಯಾಗನ್ ಪ್ರಕಾಶ್ ಸಾಹಸ ನಿರ್ದೇಶನ ಹಾಗೂ ರಾಜು ಪೈಡೆ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.

    ರೋಡಿಯಂ ಎಂಟರ್ಟೈನ್ಮೆಂಟ್ ಅರ್ಪಿಸುವ, ಸುರಾಮ್ ಮೂವೀಸ್ ಲಾಂಛನದಲ್ಲಿ ಜಯರಾಮ್ ದೇವಸಮುದ್ರ ಎಂಗೇಜ್ ಮೆಂಟ್  ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಲಕ್ಷ್ಮೀಕಾಂತ್ ಹಾಗೂ ನಾರಾಯಣಸ್ವಾಮಿ ಈ ಚಿತ್ರದ ಸಹ ನಿರ್ಮಾಪಕರು.

    ಪ್ರವೀರ್ ಶೆಟ್ಟಿ, ಐಶ್ವರ್ಯ ಗೌಡ, ರಾಜಗೋಪಾಲ್ ಅಯ್ಯರ್, ಬಾಲ ರಾಜವಾಡಿ, ಭಾವನ, ರಜನಿಶ್ರೀ, ಶರದ್ ವರ್ಮ, ದೀಪ್ತಿ ಗುಪ್ತ ಹಾಗೂ ಸುಜಯ್ ರಾಮ್ ಮುಂತಾದವರು ಎಂಗೇಜ್‌ಮೆಂಟ್‌ ಚಿತ್ರದ ತಾರಾಬಳಗದಲ್ಲಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ‘ಸೈರನ್’ ಚಿತ್ರದ ಮಂಗ್ಲಿ ಹಾಡಿಗೆ ಪ್ರೇಕ್ಷಕ ಫಿದಾ

    ‘ಸೈರನ್’ ಚಿತ್ರದ ಮಂಗ್ಲಿ ಹಾಡಿಗೆ ಪ್ರೇಕ್ಷಕ ಫಿದಾ

    ರವೇ ರಾಜ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ (Praveen Shetty) ಅವರ ಮಗ ಪ್ರವೀರ್ ಶೆಟ್ಟಿ (Praveer Shetty) ಸ್ಯಂಡಲ್‌ವುಡ್‌ಗೆ ನಾಯಕನಾಗಿ ಎಂಟ್ರಿ ಕೊಡುತ್ತಿರುವುದು ನಿಮಗೆಲ್ಲಾ ಗೊತ್ತೆ ಇದೆ. ಪ್ರವೀರ್ ನಟನೆಯ ‘ಸೈರನ್’ (Siren) ಸಿನಿಮಾ ಬಿಡುಗಡೆಗೆ ಸಿದ್ದವಾಗಿದ್ದು, ಇತ್ತೀಚೆಗೆ ಈ ಚಿತ್ರದ ಹಾಡೊಂದು ಬಿಡುಗಡೆಯಾಗಿದೆ. ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಈ ಗೀತೆಗೆ ಯುವ ಪ್ರತಿಭೆ ಚಿನ್ಮಯ ಸಾಹಿತ್ಯ ಬರೆದಿದ್ದಾರೆ. ‘ಮೈ ಆಟೋಗ್ರಾಫ್’ ಖ್ಯಾತಿಯ ಭಾರತ್ವಾಜ್ ಸಂಗೀತ ಸಂಯೋಜಿಸಿರುವ ‘ಎಣ್ಣೆ ಹೊಡೆಯೋ ಟೈಮಲ್ಲಿ …’ ಸಾಂಗ್‌ನ್ನು (Song) ಮಂಗ್ಲಿ (Mangli)  ಹಾಡಿದ್ದಾರೆ. ಲಹರಿ ಯೂಟ್ಯೂಬ್‌ನಲ್ಲಿ ಗೀತೆ ರಿಲೀಸ್ ಆಗಿದ್ದು, ಹಾಡು ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಲಹರಿ ವೇಲು ‘ಇದು ಪ್ರವೀರ್ ಶೆಟ್ಟಿ ಅವರ ಮೊದಲ ಸಿನಿಮಾ ಆಗಿದ್ದು, ತಯಾರಿ ಮಾಡಿಕೊಂಡು ಚಿತ್ರರಂಗಕ್ಕೆ ಬಂದಿದ್ದಾರೆ. ಹಾಡು ಚನ್ನಾಗಿ ಬಂದಿದೆ. ಜಾನಪದ ಸೊಗಡಿನ ಮೂಲದಿಂದ ಬಂದಂತ ಸಿಂಗರ್‌ಗಳು ಹಾಡಿರುವ ಗೀತೆಗಳು ಚನ್ನಾಗಿರುತ್ತವೆ. ಹಾಗೆಯೇ ಮಂಗ್ಲಿ ಕೂಡ ಜಾನಪದ ಮೂಲದಿಂದ ಬಂದವರು. ತಾಂತ್ರಿಕವಾಗಿ ಸಿನಿಮಾ ಸ್ಟ್ರಾಂಗ್ ಆಗಿ ಬಂದಿದೆ’ ಎಂದು ಹೇಳಿದರು. ಕಾರ್ಯಕ್ರಮಕ್ಕೆ ಅಥಿತಿಯಾಗಿ ಆಗಮಿಸಿದ್ದ ನಿರ್ಮಾಪಕ ಸಂಘದ ಅಧ್ಯಕ್ಷರಾದ ಉಮೇಶ್ ಬಣಕಾರ್ ತಂಡಕ್ಕೆ ಶುಭ ಹಾರೈಸಿದರು.

    ಅಂದಂಗೆ ಈ ಚಿತ್ರವನ್ನು ಮೂಲತಃ ತಮಿಳುನಾಡಿನವರಾದ ರಾಜಾ ವೆಂಕಯ್ಯ ನಿರ್ದೇಶಿಸಿದ್ದಾರೆ. ಕಳೆದ 30 ವರ್ಷಗಳಿಂದ ನಿರ್ದೇಶಕ ಮುರುಗ ದಾಸ್ ಸೇರಿದಂತೆ ಹಲವರ ಬಳಿ ಚಿತ್ರರಂಗದ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿರುವ ರಾಜಾ ವೆಂಕಯ್ಯ ಕನ್ನಡ ಕಲಿತು ಸಿನಿಮಾಗೆ ಆ್ಯಕ್ಷನ್-ಕಟ್ ಹೇಳಿರುವುದು ವಿಶೇಷ. ಇದು ಅವರು ನಿರ್ದೇಶನದ ಮೊದಲ ಕನ್ನಡ ಸಿನಿಮಾ. “ಸೈರನ್’ ಚಿತ್ರದ ಕೆಲಸಗಳು ಈಗಾಗಲೇ ಮುಗಿದಿದ್ದು, ಫೆಬ್ರವರಿ ಮೂರನೇ ವಾರದಲ್ಲಿ ರಿಲೀಸ್ ಮಾಡುವ ಪ್ಲ್ಯಾನ್ ಇದೆ. ಈ ಸಿನಿಮಾವನ್ನು ನಾವು ಕನ್ನಡ ಮತ್ತು ತಮಿಳುನಲ್ಲಿ ಶೂಟ್ ಮಾಡಿದ್ದು, ತೆಲುಗು ಮತ್ತು ಮಲಯಾಳಂಗೆ ಡಬ್ ಮಾಡಿ ರಿಲೀಸ್ ಮಾಡುತ್ತಿದ್ದೇವೆ. ನನ್ನ ಮೊದಲ ಚಿತ್ರಕ್ಕೆ ‘ಡೆಕ್ಕನ್ ಕಿಂಗ್’ ಬ್ಯಾನರ್‌ನಲ್ಲಿ ಸಿನಿಮಾ ನಿರ್ಮಿಸಿರುವ ಬಿಜ್ಜು ಶಿವಾನಂದ್ ತುಂಬಾ ಸಪೋರ್ಟ್ ಮಾಡಿದ್ದಾರೆ. ಮೂಲತಃ ನಾನು ಸಂಕಲನಕಾರನಾಗಿ ಸಾಕಷ್ಟು ಸಿನಿಮಾಗೆ ಕೆಲಸ ಮಾಡಿದ್ದೇನೆ. ಇದೊಂದು ಇನ್ವೆಸ್ಟಿಗೇಷನ್ ಮರ್ಡರ್ ಮಿಸ್ಟರಿ ಕಥೆ ಹೊಂದಿದ್ದು, ಇಲ್ಲಿ ನಾಯಕ ಪ್ರವೀರ್ ಯಂಗ್ ಆ್ಯಂಡ್ ಯನರ್ಜಿ ಇರುವ ಇನ್ವೆಸ್ಟಿಗೇಷನ್ ಆಫೀಸರ್ ಪಾತ್ರ ಮಾಡಿದ್ದಾರೆ’ ಎಂದು ಹೇಳಿದರು. ಇದನ್ನೂ ಓದಿ: ರಾಜಮೌಳಿ ಹತ್ಯೆಗೆ ಸ್ಕೆಚ್ ಹಾಕಿದ ಡೈರೆಕ್ಟರ್ಸ್ : ಬಾಯ್ಬಿಟ್ಟ ವರ್ಮಾ

    ನಂತರ ಮಾತನಾಡಿದ ಚಿತ್ರದ ನಾಯಕ ಪ್ರವೀರ್ ಶೆಟ್ಟಿ ‘ನಾನು ಇದರಲ್ಲಿ ಪೊಲೀಸ್ ಪಾತ್ರ ಮಾಡಿದ್ದೇನೆ. ಇದು ನನ್ನ ಮೊದಲ ಸಿನಿಮಾ. ಬಾಂಬೆಯ ಅನುಪಮ್ ಖೇರ್ ಟ್ರೈನಿಂಗ್‌ ಶಾಲೆಯಲ್ಲಿ  ತರಬೇತಿ ಪಡೆದಿದ್ದು, ಈ ಚಿತ್ರದಲ್ಲಿ ಯಂಗ್ ಇನ್ವೆಸ್ಟಿಗೇಷನ್ ಆಫೀಸರ್ ಪಾತ್ರ ಮಾಡಿದ್ದೇನೆ’ ಎಂದರು. ಮಲಯಾಳಂ ಮೂಲದ ನಾಯಕಿ ಲಾಸ್ಯ ‘ಇದು ನನ್ನ ಅಭಿನಯದ ಮೊದಲ ಸಿನಿಮಾ. ಚಿತ್ರತಂಡ ಒಳ್ಳೆ ಅವಕಾಶ ಕೊಟ್ಟಿದ್ದು, ಇದರಲ್ಲಿ ನಾನೂ ಕೂಡ ಪೋಲಿಸ್ ಆಫೀಸರ್ ಪಾತ್ರ ಮಾಡಿದ್ದೇನೆ’ ಎನ್ನುವರು. ಹೋಟೆಲ್ ಉದ್ಯಮ ನಡೆಸುತ್ತಿರುವ ಚಿತ್ರದ ನಿರ್ಮಾಪಕ ಬಿಜ್ಜು ಶಿವಾನಂದ್ ಮಾತನಾಡಿ ‘ಈ ಚಿತ್ರವನ್ನು ನಾವು ಗೆಳೆಯರು ಸೇರಿ ಕಷ್ಟಪಟ್ಟು ಮಾಡಿದ್ದೇವೆ. ಈ ಸಿನಿಮಾಗಾಗಿ ಎರಡು ವರ್ಷ ಶ್ರಮ ಹಾಕಲಾಗಿದೆ’ ಎಂದರು. ಇದೇ ಸಂದರ್ಭದಲ್ಲಿ ಕರವೇ ರಾಜ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ ಮಗನ ಚಿತ್ರಕ್ಕೆ ಶುಭ ಹಾರೈಸಿದರು. ಚಿತ್ರಕ್ಕೆ ‘ಮೈ ಆಟೋಗ್ರಾಫ್’ ಖ್ಯಾತಿಯ ಭಾರದ್ವಾಜ್ ಸಂಗೀತ, ನಾಗೇಶ್ ಆಚಾರ್ ಛಾಯಾಗ್ರಹಣ, ಕಲೈ ಮಾಸ್ಟರ್ ನೃತ್ಯವಿದೆ. ಚಿತ್ರವನ್ನು ಲಿಖಿತ್ ಫಿಲ್ಮಸ್‌ನ ರಮೇಶ್ ಬಾಬು ವಿತರಣೆ ಮಾಡಲಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕರವೇ ಪ್ರವೀಣ್ ಶೆಟ್ಟಿ ಪುತ್ರನ ಸಿನಿಮಾಗೆ ಹಾಡಿದ ಗಾಯಕಿ ಮಂಗ್ಲಿ

    ಕರವೇ ಪ್ರವೀಣ್ ಶೆಟ್ಟಿ ಪುತ್ರನ ಸಿನಿಮಾಗೆ ಹಾಡಿದ ಗಾಯಕಿ ಮಂಗ್ಲಿ

    ಬಿ.ಜು. ಶಿವಾನಂದ್ ನಿರ್ಮಿಸಿರುವ, ರಾಜ ವೆಂಕಯ್ಯ (Raju Venkaiah) ನಿರ್ದೇಶನದಲ್ಲಿ ಪ್ರವೀರ್ ಶೆಟ್ಟಿ (Praveer Shetty) ನಾಯಕರಾಗಿ ನಟಿಸಿರುವ “ಸೈರನ್” ಚಿತ್ರದ ಹಾಡೊಂದನ್ನು (Song) ಖ್ಯಾತ ಗಾಯಕಿ ಮಂಗ್ಲಿ (Mangli) ಹಾಡಿದ್ದಾರೆ. ಚಿನ್ಮಯ್ ಬಾವಿಕೆರೆ ಬರೆದಿರುವ “ಎಣ್ಣೆ ಹೊಡೆಯೋ ಟೈಮಲ್ಲಿ ನನ್ನ ಸ್ವಲ್ಪ ನೆನಸಿಕೊಳ್ಳಿ” ಎಂಬ ಹಾಡನ್ನು ಮಂಗ್ಲಿ ಹಾಡಿದ್ದಾರೆ. ಈ ಹಾಡಿನ ಲಿರಿಕಲ್ ವಿಡಿಯೋ ಜನವರಿ 24 ರಂದು ಲಹರಿ ಮ್ಯೂಸಿಕ್ ಮೂಲಕ ಬಿಡುಗಡೆಯಾಗಲಿದೆ. ಭಾರದ್ವಾಜ್ ಸಂಗೀತ ನೀಡಿದ್ದಾರೆ.

    ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರ ತೆರೆಗೆ ಬರಲು ಸಿದ್ದವಾಗಿದೆ. ಫೆಬ್ರವರಿಯಲ್ಲಿ ಬಿಡುಗಡೆಯಾಗಲಿದೆ. ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಶೆಟ್ಟಿ ಅವರ ಪುತ್ರ ಪ್ರವೀರ್ ಶೆಟ್ಟಿ ಈ ಚಿತ್ರದ ಮೂಲಕ ನಾಯಕರಾಗಿ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ. ಲಾಸ್ಯ “ಸೈರನ್” ಚಿತ್ರದ ನಾಯಕಿ. ಶರತ್ ಲೋಹಿತಾಶ್ವ, ಅಚ್ಯುತ್ ಕುಮಾರ್, ಪವಿತ್ರ ಲೋಕೇಶ್, ಸ್ಪರ್ಶ ರೇಖಾ, ಸಾಯಿಧೀನ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ. ಇದನ್ನೂ ಓದಿ:ಪತಿ ಜೊತೆಗಿನ ಲಿಪ್‌ಲಾಕ್ ಫೋಟೋ ಹಂಚಿಕೊಂಡ ʻಕಾಂಚನಾ 2ʼ ನಟಿ ಪೂಜಾ

    ನಾಗೇಶ್ ವಿ ಆಚಾರ್ಯ ಛಾಯಾಗ್ರಹಣ, ವಾಲಿ ಕುಲೇಸ್ ಸಂಕಲನ, ಚಂದ್ರು ಬಂಡೆ, ನರಸಿಂಹ ಸಾಹಸ ನಿರ್ದೇಶನ ಹಾಗೂ ಕಲೈ ಅವರ ನೃತ್ಯ ನಿರ್ದೇಶನವಿರುವ ಈ ಚಿತ್ರಕ್ಕೆ ಜುನಿ ಜೋಸೆಫ್ ಮತ್ತು ಕೆ.ರಮೇಶ್ ಸಹ ನಿರ್ಮಾಪಕರು. ಈಗಾಗಲೇ ಸಿನಿಮಾದ ಬಹುತೇಕ ಚಿತ್ರೀಕರಣ ಕೂಡ ಮುಗಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k