Tag: Praveen Tej

  • ‘ಜಿಗರ್’ ಚಿತ್ರದಲ್ಲಿ ಪ್ರವೀಣ್ ತೇಜ್ ಮಾಸ್: ಟೀಸರ್ ರಿಲೀಸ್

    ‘ಜಿಗರ್’ ಚಿತ್ರದಲ್ಲಿ ಪ್ರವೀಣ್ ತೇಜ್ ಮಾಸ್: ಟೀಸರ್ ರಿಲೀಸ್

    ಸ್ಯಾಂಡಲ್‌ವುಡ್ ನಟ ಪ್ರವೀಣ್ ತೇಜ್ (Praveen Tej) ಜಿಗರ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. ಈಗಾಗಲೇ ತರಹೇವಾರಿ ಪಾತ್ರಗಳ ಮೂಲಕ ಅಭಿಮಾನಿಗಳನ್ನು ರಂಜಿಸಿರುವ ಪ್ರವೀಣ್ ಈ ಬಾರಿ ಮಾಸ್ ಲುಕ್‌ನಲ್ಲಿ ಎಂಟ್ರಿ ಕೊಡುತ್ತಿದ್ದಾರೆ. ಅಂದಹಾಗೆ ಮೊದಲ ಬಾರಿಗೆ ಪ್ರವೀಣ್ ಆಕ್ಷನ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರುತ್ತಿದ್ದಾರೆ. ಈಗಾಗಲೇ ಸಿನಿಮಾದ ಮೊದಲ ಹಾಡನ್ನು ರಿಲೀಸ್ ಮಾಡಿದ್ದ ಸಿನಿಮಾತಂಡ ಇದೀಗ ಟೀಸರ್ (Teaser) ಮೂಲಕ ಎಂಟ್ರಿ  ಕೊಟ್ಟಿದ್ದಾರೆ.

    ಕರಾವಳಿ ಸುತ್ತ ಮುತ್ತ ಚಿತ್ರೀಕರಣಗೊಂಡಿರುವ ಜಿಗರ್ ಔಟ್ ಅಂಡ್ ಔಟ್ ಆಕ್ಷನ್ ಸಿನಿಮಾ. ರೊಮ್ಯಾಂಟಿಕ್ ಪಾತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದ ಪ್ರವೀಣ್ ಜಿಗರ್ ನಲ್ಲಿ ಚಾಕು ಚುಚ್ಚಿ ರಕ್ತ ಹರಿಸಿದ್ದನ್ನು ನೋಡಿ ಪ್ರೇಕ್ಷಕರು ಅಚ್ಚರಿ ಪಟ್ಟಿದ್ದಾರೆ. ಅಂದಹಾಗೆ ಚಿತ್ರಕ್ಕೆ ಸೂರಿ ಕುಂದರ್ ಆಕ್ಷನ್ ಕಟ್ ಹೇಳಿದ್ದಾರೆ. ನಿರ್ದೇಶಕ ಸೂರಿ ಅವರಿಗೆ ಇದು ಮೊದಲ ಸಿನಿಮಾ.

    ಈಗಾಗಲೇ ಸ್ಯಾಂಡಲ್‌ವುಡ್‌ನಲ್ಲಿ ಅನೇಕ ಸಿನಿಮಾಗಳಿಗೆ ಸಹಾಯಕ  ನಿರ್ದೇಶಕರಾಗಿ ಕೆಲಸ ಮಾಡಿದ್ದ ನಿರ್ದೇಶಕ ಸೂರಿ ಜಿಗರ್ ಮೂಲಕ ಪೂರ್ಣ ಪ್ರಮಾಣದ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ. ತನ್ನ ಮೊದಲ ಸಿನಿಮಾದ ಮೇಲೆ ನಿರ್ದೇಶಕ ಸೂರಿ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಯು ಕೆ ಪ್ರೊಡಕ್ಷನ್ ಅಡಿಯಲ್ಲಿ ಸಿನಿಮಾ ನಿರ್ಮಾಣವಗಿದ್ದು ಪೂಜಾ ವಸಂತ್ ಚಿತ್ರಕ್ಕೆ  ಬಂಡವಾಳ ಹಾಕಿದ್ದಾರೆ ,

    ಇನ್ನೂ ಈ ಸಿನಿಮಾದಲ್ಲಿ ಪ್ರವೀಣ್‌ಗೆ ನಾಯಕಿಯಾಗಿ ವಿಜಯ್ ಶ್ರೀ ಕಾಣಿಸಿಕೊಂಡಿದ್ದಾರೆ. ವಿಜಯ್ ಶ್ರೀ (Vijay Sri) ಅವರಿಗೂ ಇದು ಮೊದಲ ಸಿನಿಮಾವಾಗಿದೆ.  ಚಿತ್ರಕ್ಕೆ ರಿತ್ವಿಕ್ ಮುರಳಿಧರ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಮಲ್ಫೆ, ಮರುವಂತೆ, ಮಂಗಳೂರು ಸುತ್ತಮುತ್ತ ಜಿಗರ್ ಸಿನಿಮಾವನ್ನು ಸೆರೆಹಿಡಿಯಲಾಗಿದೆ. ಸಂಪೂರ್ಣ ಸಿನಿಮಾ ಕೂಡ ಇದೇ ಬ್ಯಾಕ್‌ಡ್ರಾಪ್‌ನಲ್ಲಿ ಇರಲಿದೆ.

    ಪ್ರವೀಣ್ ಮೊದಲ ಬಾರಿಗೆ ಮಾಸ್ ಅವತಾರದಲ್ಲಿ ಕಾಣಿಸಿಕೊಂಡಿದ್ದು ಅಭಿಮಾನಿಗಳು ಹೇಗೆ ಸ್ವೀಕರಿಸುತ್ತಾರೆ ಎಂದು ಎದುರುನೋಡುತ್ತಿದ್ದಾರೆ. ಕೊನೆಯದಾಗಿ ಪ್ರವೀಣ್ ಹೊಂದಿಸಿ ಬರೆಯಿರಿ ಸಿನಿಮಾ ಮೂಲಕ ಸಿನಿಮಾ ಪ್ರೇಕ್ಷಕರ ಮುಂದೆ ಬಂದಿದ್ದರು. ಸದ್ಯ ಟೀಸರ್ ಮೂಲಕ ಅಭಿಮಾನಿಗಳ ಗಮನ  ಸೆಳೆದಿರುವ ಜಿಗರ್ ಸಿನಿಮಾ ಹೇಗಿರಲಿದೆ ಎನ್ನುವ ಕುತೂಹಲ ಹೆಚ್ಚಿಸಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ’ತುಕ್ರ-ತನಿಯ’ ಕಥೆ ಹೇಳ್ತಿದ್ದಾರೆ ರಾಘು ಶಿವಮೊಗ್ಗ: ಟೈಟಲ್ ಲಾಂಚ್ ಮಾಡಿದ ದುನಿಯಾ ವಿಜಯ್

    ’ತುಕ್ರ-ತನಿಯ’ ಕಥೆ ಹೇಳ್ತಿದ್ದಾರೆ ರಾಘು ಶಿವಮೊಗ್ಗ: ಟೈಟಲ್ ಲಾಂಚ್ ಮಾಡಿದ ದುನಿಯಾ ವಿಜಯ್

    ಚೂರಿಕಟ್ಟೆ, ಪೆಂಟಗನ್ ರೀತಿಯ ಹೊಸ ಬಗೆಯ ಸಿನಿಮಾಗಳನ್ನು ನಿರ್ದೇಶಿಸಿರುವ ನಟ ಕಂ ನಿರ್ದೇಶಕ ರಾಘು ಶಿವಮೊಗ್ಗ(Raghu Shivamogga) ಮೂರನೇ ಕನಸು ಇಂದು ಅನಾವರಣಗೊಂಡಿದೆ. ರಾಘು ನಿರ್ದೇಶನದ ಹೊಸ ಸಿನಿಮಾದ ಟೈಟಲ್ (Title) ಅನ್ನು ಭೀಮ ದುನಿಯಾ ವಿಜಯ್ (Duniy Vijay) ಅನಾವರಣ ಮಾಡಿ ಶುಭಾಶಯ ಕೋರಿದ್ದಾರೆ.

    ರಾಘು ಶಿವಮೊಗ್ಗ ನಿರ್ದೇಶಿಸುತ್ತಿರುವ ಮೂರನೇ ಸಿನಿಮಾಗೆ ವಿಶೇಷ ಟೈಟಲ್ ಅನ್ನು ಆಯ್ಕೆ ಮಾಡಿಕೊಂಡಿದ್ದು, ಚಿತ್ರಕ್ಕೆ ಅವರು ‘ತುಕ್ರ ತನಿಯ’ (Thukra-Taniya) ಎಂಬ ವಿಭಿನ್ನ ಬಗೆಯ ಶೀರ್ಷಿಕೆ ಇಟ್ಟಿದ್ದಾರೆ. ತುಕ್ರ ಅಂದರೆ ಶುಕ್ರವಾರ ಹುಟ್ಟಿದವನು. ತನಿಯ ಅಂದರೆ ಶನಿವಾರ ಹುಟ್ಟಿದವನು. ಶುಕ್ರವಾರ-ಶನಿವಾರ ಹುಟ್ಟಿದ ಇಬ್ಬರ ನಡುವಿನ ಕಥಾಹಂದರ ಇದಾಗಿದೆ.

    ಪ್ರವೀಣ್ ತೇಜ್ (Praveen Tej) ಹಾಗೂ ಅಚ್ಯುತ್ ಕುಮಾರ್ (Achyut Kumar) ಮುಖ್ಯಭೂಮಿಕೆಯಲ್ಲಿ ನಟಿಸುತ್ತಿರುವ ಈ ಚಿತ್ರವನ್ನು ಪದ್ಮಾ ಪಿಕ್ಚರ್ಸ್ ಹಾಗೂ ಗೌರಿ ಟಾಕೀಸ್ ನಡಿ ನಿರ್ಮಾಣ ಮಾಡಲಾಗುತ್ತಿದೆ. ಮಲೆನಾಡಿನ ಗ್ರಾಮೀಣ ಭಾಗದಲ್ಲಿ ಡಿಸೆಂಬರ್ ನಿಂದ ಚಿತ್ರೀಕರಣ ನಡೆಸೋದಿಕ್ಕೆ ಚಿತ್ರತಂಡ ತಯಾರಿ ನಡೆಸಿದೆ. ತುಕ್ರ ತನಿಯ ಸಿನಿಮಾಗೆ ಶಾಂತಿ ಸಾಗರ್ ಛಾಯಾಗ್ರಹಣ, ಕದ್ರಿ ಮಣಿಕಾಂತ್ ಸಂಗೀತ, ಪ್ರಕಾಶ್ ಕಾರಿಂಜ ಸಂಕಲನವಿದೆ.

    ನಿರ್ದೇಶಕನ ಕನಸ್ಹೊತ್ತು ಚಿತ್ರೋದ್ಯಮಕ್ಕೆ ಬಂದಿದ್ದ ರಾಘು, ಮೊದಲು ಚೌಕಬಾರ ಹೆಸರಿನ ಕಿರುಚಿತ್ರ ಮಾಡಿದರು. ಆ ಸಿನಿಮಾವನ್ನು ಥಿಯೇಟರ್ ಗೆ ರಿಲೀಸ್ ಮಾಡಿ, ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದರು. ಈ ಕಿರು ಚಿತ್ರಕ್ಕೆ ಕರ್ನಾಟಕ ಸರಕಾರದ ರಾಜ್ಯ ಪ್ರಶಸ್ತಿ ಕೂಡ ಬಂತು. ಸೈಮಾ ಆವಾರ್ಡ್ ಅನ್ನು ಕೂಡ ಪಡೆದುಕೊಂಡರು. ಕಿರುಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ಬಂದ ಕಾರಣದಿಂದಾಗಿ ಅವರಿಗೆ ಸಿನಿಮಾ ನಿರ್ದೇಶನ ಮಾಡಲು ಅವಕಾಶ ಸಿಕ್ಕಿತು.

    ಚೂರಿಕಟ್ಟೆ ರಾಘು ನಿರ್ದೇಶನದ ಮೊದಲ ಸಿನಿಮಾ. ಮೊದಲ ಸಿನಿಮಾದಲ್ಲೇ ರಾಘು ಭರವಸೆ ಮೂಡಿಸಿದರು. ಈ ಸಿನಿಮಾ ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಯಿತು. ಅವರಿಗೂ ಒಳ್ಳೆಯ ಹೆಸರು ಬಂತು. ನಂತರ ಆಕ್ಟ್ 1978 ಸಿನಿಮಾಗೆ ನಟರಾಗಿ ಪ್ರವೇಶ ಮಾಡಿದರು. ಈ ಸಿನಿಮಾದಲ್ಲಿನ ಪಾತ್ರ ಅವರನ್ನು ಬ್ಯುಸಿ ನಟನನ್ನಾಗಿ ಮಾಡಿತು. ಸಾಕಷ್ಟು ಸಿನಿಮಾಗಳಲ್ಲಿ ನಟನಾಗಿಯೇ ಬ್ಯುಸಿಯಾದರು. ಈಗ ಮತ್ತೆ ನಿರ್ದೇಶನದತ್ತ ಮುಖ ಮಾಡಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಟ ಪ್ರವೀಣ್ ತೇಜ ಕಾರಿನ ಗಾಜು ಪುಡಿಪುಡಿ : ಹಲ್ಲೆ ಮಾಡಿದವನ ವಿರುದ್ಧ ದೂರು

    ನಟ ಪ್ರವೀಣ್ ತೇಜ ಕಾರಿನ ಗಾಜು ಪುಡಿಪುಡಿ : ಹಲ್ಲೆ ಮಾಡಿದವನ ವಿರುದ್ಧ ದೂರು

    ಚೂರಿಕಟ್ಟೆ ಸೇರಿದಂತೆ ಕನ್ನಡದ ಅನೇಕ ಚಿತ್ರಗಳಲ್ಲಿ ನಾಯಕನಾಗಿ ನಟಿಸಿರುವ ಪ್ರವೀಣ್ ತೇಜ (Praveen Tej) ಮೇಲೆ ಹಲ್ಲೆಯಾದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ತಮ್ಮ ಮೇಲೆ ದಿಲೀಪ್ (Dileep) ಎನ್ನುವವ ಹಲ್ಲೆ ಮಾಡಿ, ದುಬಾರಿ ಕಾರಿನ ಗಾಜನ್ನು ಪುಡಿ ಪುಡಿ ಮಾಡಿದ್ದಾನೆ. ಜೊತೆಗೆ ತಮ್ಮ ಕುಟುಂಬಕ್ಕೆ ಪ್ರಾಣ ಬೆದರಿಕೆ ಹಾಕಿದ್ದಾನೆ ಎಂದು ಪ್ರವೀಣ್ ಕೋಣನಕುಂಟೆ  (Konanakunte) ಠಾಣೆಗೆ (Police) ದೂರು (Complaint) ನೀಡಿದ್ದಾರೆ. ದಿಲೀಪ್ ವಿರುದ್ಧ ಕ್ರಮ ತಗೆದುಕೊಳ್ಳುವಂತೆ ಮನವಿ ಮಾಡಿದ್ದಾರೆ.

    ಫೆಬ್ರವರಿ 12 ರಂದು ಬನ್ನೇರುಘಟ್ಟ ರಸ್ತೆಯಲ್ಲಿರುವ ಗೆಳೆಯನ ಅಪಾರ್ಟ್ ಮೆಂಟ್ ನಲ್ಲಿ ನಡೆಯುತ್ತಿದ್ದ ಹುಟ್ಟು ಹಬ್ಬದಲ್ಲಿ ಪ್ರವೀಣ್ ಪಾಲ್ಗೊಂಡಿದ್ದಾರೆ. ಈ ಸಮಯದಲ್ಲಿ ದಿಲೀಪ್ ಎಂಬ ಪರಿಚಿತನೊಬ್ಬನಿಂದ ಗಲಾಟೆ ಶುರುವಾಗಿದೆ. ಪ್ರವೀಣ್ ಅವರ ವೃತ್ತಿಯ ಬಗ್ಗೆ ದಿಲೀಪ್ ಕೆಟ್ಟದ್ದಾಗಿ ಮಾತನಾಡಿದ್ದಾನಂತೆ. ಮಾತಿಗೆ ಮಾತು ಬೆಳೆದು ಅದು ಹೊಡೆದಾಟದ ಹಂತಕ್ಕೆ ತಲುಪಿದೆ. ಪ್ರವೀಣ್ ಮೇಲೆ ದೈಹಿಕ ಹಲ್ಲೆಯಾಗಿದ್ದು, ಕುತ್ತಿಗೆ ಭಾಗದಲ್ಲಿ ಗಾಯಗಳಾಗಿವೆ ಎಂದು ದೂರಿನಲ್ಲಿ ಬರೆಯಲಾಗಿದೆ. ಇದನ್ನೂ ಓದಿ: 150 ಕೋಟಿ ಮೌಲ್ಯದ ಹೊಸ ಮನೆಯನ್ನು ಪೋಷಕರಿಗೆ ಗಿಫ್ಟ್ ನೀಡಿದ ಧನುಷ್

    ಘಟನೆಯಿಂದ ನೊಂದಿದ್ದ ಪ್ರವೀಣ್ ಆ ರಾತ್ರಿ ಅದೇ ಅಪಾರ್ಟ್ ಮೆಂಟ್ ನಲ್ಲಿ ಉಳಿದುಕೊಂಡಿದ್ದಾರೆ. ಬೆಳಗ್ಗೆ ಮನೆಗೆ ಹೊರಡಲು ಕಾರು ಬಳಿ ಬಂದರೆ ಕಾರಿನ ಗ್ಲಾಸ್ ಗಳನ್ನು ಹೊಡೆದು ಹಾಕಲಾಗಿತ್ತು. ಸಿಸಿ ಟಿವಿ ಪರಿಶೀಲನೆ ಮಾಡಿದಾಗ ದಿಲೀಪ್ ಅವರೇ ಕಾರಿನ ಗಾಜು ಒಡೆದಿದ್ದಾರೆ ಎನ್ನುವುದು ಗೊತ್ತಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

    ‘ಹೊಂದಿಸಿ ಬರೆಯಿರಿ’ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿರುವ ಪ್ರವೀಣ್ ತೇಜ್, ಈವರೆಗೂ ಯಾವುದೇ ಗಲಾಟೆ ಅಥವಾ ಗಾಸಿಪ್ ಗಳಲ್ಲಿ ಕಾಣಿಸಿಕೊಂಡಿಲ್ಲ. ಇದೇ ಮೊದಲ ಬಾರಿಗೆ ಅವರು ಪೊಲೀಸ್ ಠಾಣೆ ಮೆಟ್ಟಿಲು ಏರಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸ್, ಸೂಕ್ತ ಕ್ರಮದ ಭರವಸೆ ನೀಡಿದ್ದಾರಂತೆ.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ವಿಜಯ ಪ್ರಕಾಶ್ ಹಾಡಿದ ‘ನೆನಪಿನ ಹಾದಿಯಲಿ ಒಂಟಿ ಪಯಣ’ ಆಲ್ಬಂ ಸಾಂಗ್ ರಿಲೀಸ್

    ವಿಜಯ ಪ್ರಕಾಶ್ ಹಾಡಿದ ‘ನೆನಪಿನ ಹಾದಿಯಲಿ ಒಂಟಿ ಪಯಣ’ ಆಲ್ಬಂ ಸಾಂಗ್ ರಿಲೀಸ್

    ಸಂಚಾರಿ ವಿಜಯ್ ಅಭಿನಯದ ‘6 ನೇ ಮೈಲಿ’ ಹಾಗೂ ಪ್ರಸ್ತುತ ವಸಿಷ್ಠ ಸಿಂಹ ಅಭಿನಯದ ‘ತಲ್ವಾರ್ ಪೇಟೆ’ ಚಿತ್ರಗಳ ನಿರ್ಮಾಪಕ ಡಾ.ಶೈಲೇಶ್ ಕುಮಾರ್ ಅವರು ಎಸ್ ಎನ್ ಸಿ ಕ್ರಿಯೇಷನ್ಸ್ ಯೂಟ್ಯೂಬ್ ಚಾನಲ್ ಆರಂಭಿಸಿದ್ದಾರೆ. ಅದರ ಮೊದಲ ಹಜ್ಜೆಯಾಗಿ ‘ನೆನಪಿನ ಹಾದಿಯಲ್ಲಿ ಒಂಟಿ ಪಯಣ’ ಎಂಬ ಆಲ್ಬಂ ಸಾಂಗ್ ಬಿಡುಗಡೆ ಮಾಡಿದ್ದಾರೆ.

    ಶಶಿಕಲಾ ಪುಟ್ಟಸ್ವಾಮಿ ಹಾಡನ್ನು ಬರೆದು ನಿರ್ದೇಶನ ಮಾಡಿದ್ದಾರೆ. ಖ್ಯಾತ ಗಾಯಕ ವಿಜಯ ಪ್ರಕಾಶ್ ಅವರ ಕಂಠಸಿರಿಯಲ್ಲಿ ಮೂಡಿಬಂದಿರುವ ಈ ಹಾಡಿನಲ್ಲಿ ನಟ ಪ್ರವೀಣ್ ತೇಜ್ ಹಾಗೂ ನಟಿ ಯಶಾ ಶಿವಕುಮಾರ್ ಅಭಿನಯಿಸಿದ್ದಾರೆ. ಸಾಯಿ ಶ್ರೀಕಿರಣ್ ಸಂಗೀತ ನೀಡಿದ್ದಾರೆ. ಚಂದ್ರಶೇಖರ್ ಛಾಯಾಗ್ರಹಣ ಹಾಗೂ ಕೆ.ಎಂ.ಪ್ರಕಾಶ್ ಸಂಕಲನ ಮಾಡಿದ್ದಾರೆ. ಧನಂಜಯ್ ನೃತ್ಯ ನಿರ್ದೇಶನ ಈ ಹಾಡಿಗಿದೆ. ಇದನ್ನೂ ಓದಿ: ತಂದೆಯ ಹುಟ್ಟುಹಬ್ಬಕ್ಕೆ ವಿಶೇಷ ಫೋಟೋ ಹಂಚಿಕೊಂಡ ನಟಿ ರಾಧಿಕಾ ಪಂಡಿತ್

    ಇತ್ತೀಚೆಗೆ ‘ನೆನಪಿನ ಹಾದಿಯಲ್ಲಿ ಒಂಟಿ ಪಯಣ’ ಆಲ್ಬಂ ಸಾಂಗ್ ಬಿಡುಗಡೆ ಸಮಾರಂಭ ಅದ್ದೂರಿಯಾಗಿ ನೆರವೇರಿತು. ಖ್ಯಾತ ಹಾಕಿ ಆಟಗಾರ ಧನರಾಜ್ ಪಿಳ್ಳೈ,  ವಿ.ನಾಗೇಂದ್ರ ಪ್ರಸಾದ್,  ಲಕ್ಕಣ್ಣ ಅವರು ಸೇರಿದಂತೆ ಅನೇಕರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ನಿರ್ಮಾಪಕ ಶೈಲೇಶ್ ಕುಮಾರ್ ಮಾತನಾಡಿ, ಹಾಡು ಚೆನ್ನಾಗಿದೆ. ಎಸ್ ಎನ್ ಸಿ ಕ್ರಿಯೇಷನ್ಸ್ ಯೂಟ್ಯೂಬ್ ಚಾನಲ್ ಆರಂಭಿಸಿದ್ದೇವೆ.  ಆ ಮೂಲಕ ಈ ಹಾಡನ್ನು ಬಿಡುಗಡೆ ಮಾಡಿದ್ದೇವೆ.  ನಮ್ಮ ಹೊಸಪ್ರಯತ್ನಕ್ಕೆ ಎಲ್ಲರ ಪ್ರೋತ್ಸಾಹವಿರಲಿ ಎಂದರು.

    ಸಂಗೀತ ನಿರ್ದೇಶಕ ಸಾಯಿ ಶ್ರೀಕಿರಣ್ ಅವರಿಂದ ಈ ತಂಡದ ಪರಿಚಯವಾಯಿತು. ಶಶಿಕಲಾ ಅವರು ಬರೆದಿರುವ ಈ ಹಾಡು ಸುಂದರವಾಗಿದೆ. ಅಷ್ಟೇ ಚೆನ್ನಾಗಿ ನಿರ್ದೇಶನ ಕೂಡ ಮಾಡಿದ್ದಾರೆ.    ಇಡೀ ತಂಡದ ಪರಿಶ್ರಮದಿಂದ ಹಾಡು ಚೆನ್ನಾಗಿ ಬಂದಿದೆ ಎಂದು ನಟ ಪ್ರವೀಣ್ ತೇಜ್ ಹೇಳಿದರು. ಇದು ನನ್ನ ಮೊದಲ ಆಲ್ಬಂ ಸಾಂಗ್. ಎಲ್ಲರೂ ನೋಡಿ. ಪ್ರೋತ್ಸಾಹ ನೀಡಿ ಎಂದರು ನಟಿ ಯಶಾ ಶಿವಕುಮಾರ್. ಹಾಡು ಬರೆದು, ನಿರ್ದೇಶಿಸಿರುವ ಶಶಿಕಲಾ ಪುಟ್ಟಸ್ವಾಮಿ , ಛಾಯಾಗ್ರಾಹಕ ಚಂದ್ರಶೇಖರ್ ಹಾಗೂ ಸಂಗೀತ ನಿರ್ದೇಶಕ ಸಾಯಿ ಶ್ರೀಕಿರಣ್ ಹಾಡಿನ ಬಗ್ಗೆ ಮಾತನಾಡಿದರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ‘ಹೊಂದಿಸಿ ಬರೆಯಿರಿ’ ಚಿತ್ರದ ಪೆಪ್ಪಿ ಸಾಂಗ್ ರಿಲೀಸ್

    ‘ಹೊಂದಿಸಿ ಬರೆಯಿರಿ’ ಚಿತ್ರದ ಪೆಪ್ಪಿ ಸಾಂಗ್ ರಿಲೀಸ್

    ರಾಮೇನಹಳ್ಳಿ ಜಗನ್ನಾಥ್ ನಿರ್ದೇಶನದ ಬಹು ತಾರಾಗಣದ ‘ಹೊಂದಿಸಿ ಬರೆಯಿರಿ’ ಸಿನಿಮಾ ದಿನದಿಂದ ದಿನಕ್ಕೆ ಸ್ಯಾಂಡಲ್ ವುಡ್ ಸಿನಿಪ್ರಿಯರ ಗಮನ ಸೆಳೆಯುತ್ತಿದೆ. ಸಿನಿಮಾದ ಪ್ರತಿಯೊಂದು ಸ್ಯಾಂಪಲ್ ಗಳು ಪ್ರಾಮಿಸಿಂಗ್ ಆಗಿದ್ದು ಚಿತ್ರರಸಿಕರ ಮನಗೆದ್ದಿವೆ. ಬಿಡುಗಡೆಯ ಹೊಸ್ತಿಲಲ್ಲಿರುವ ಸಿನಿಮಾ ತಂಡ ಭರ್ಜರಿ ಪ್ರಚಾರದ ಮೂಲಕವೂ ಗಮನ ಸೆಳೆಯುತ್ತಿದೆ. ‘ಹೊಂದಿಸಿ ಬರೆಯಿರಿ’ ಹಾಡುಗಳ ಮೆರವಣಿಗೆ ಆರಂಭವಾಗಿದ್ದು, ಈಗಾಗಲೇ ಬಿಡುಗಡೆಯಾದ ಎರಡು ಹಾಡುಗಳು ಕೇಳುಗರ ಮನ ಗೆದ್ದಿದೆ, ಇದೀಗ ಚಿತ್ರದ ಬಹು ನಿರೀಕ್ಷಿತ ಮೂರನೇ ಸಾಂಗ್ ಬಿಡುಗಡೆ ಮಾಡಿದೆ ಚಿತ್ರತಂಡ.

    ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್ ಸಾಹಿತ್ಯದಲ್ಲಿ ಅರಳಿರುವ ‘ತಲೆಹರಟೆ ಮಾಡುತ್ತಿದೆ ಈ ಹೃದಯ’ ಎಂಬ ಪೆಪ್ಪಿ ಸಾಂಗ್ ಇದಾಗಿದೆ. ಐಶ್ವರ್ಯ ರಂಗರಾಜನ್, ವರುಣ್ ರಾಮಚಂದ್ರ ಈ ಹಾಡಿಗೆ ದನಿಯಾಗಿದ್ದಾರೆ. ಜೋ ಕೋಸ್ಟ ಅವರ ಫ್ರೆಶ್ ಮ್ಯೂಸಿಕ್ ಎಲ್ಲರ ಗಮನ ಸೆಳೆಯುತ್ತಿದೆ. ಈ ಹಿಂದೆ ಬಿಡುಗಡೆಯಾಗಿದ್ದ ‘ಬೆಳಕಲಿ’ ಹಾಗೂ ‘ಓ ಕವನ’ ಹಾಡುಗಳು ಸಿನಿರಸಿಕರಿಂದ ಮೆಚ್ಚುಗೆ ಗಳಿಸಿಕೊಂಡಿತ್ತು. ಈ ಹಾಡು ಕೂಡ ಕೇಳುಗರನ್ನು ಮೋಡಿ ಮಾಡುವ ಎಲ್ಲಾ ಲಕ್ಷಣಗಳನ್ನೂ ಹೊಂದಿದೆ. ಇದನ್ನೂ ಓದಿ:`ಮಿಸ್ ಯೂ ಸಾನ್ಯ’ ಎಂದು ಬಿಕ್ಕಿ ಬಿಕ್ಕಿ ಅತ್ತ ರೂಪೇಶ್ ಶೆಟ್ಟಿ

    ಎಲ್ಲಾ ಅಂದುಕೊಂಡಂತೆ ಆಗಿದ್ರೆ ನವೆಂಬರ್ 18ರಂದು ಸಿನಿಮಾ ಬಿಡುಗಡೆಯಾಗಬೇಕಿತ್ತು. ಚಿತ್ರತಂಡ ಕೂಡ ರಿಲೀಸ್ ಡೇಟ್ ಅನೌನ್ಸ್ ಮಾಡಿತ್ತು. ಆದ್ರೆ ಸಿನಿಮಾದ ಅಂತಿಮ ಹಂತದ ತಾಂತ್ರಿಕ ಕೆಲಸಗಳು ಬಾಕಿ ಇರುವುದರಿಂದ ಬಿಡುಗಡೆಯನ್ನು ಚಿತ್ರತಂಡ ಮುಂದೂಡಿದೆ. ನವೆಂಬರ್ 18ರ ಬದಲಾಗಿ ಹೊಸದಾದ ರಿಲೀಸ್ ಡೇಟ್ ಸಿನಿಮಾ ತಂಡ ಅನೌನ್ಸ್ ಮಾಡಲಿದೆ ಎಂದು ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್ ತಿಳಿಸಿದ್ದಾರೆ. ಪರಿಸ್ಥಿತಿಗಳೊಂದಿಗೆ ಹೊಂದಿಕೊಂಡು ಸಾಗುವ ಬದುಕಿನ ಪಯಣವೇ ಜೀವನ ಎನ್ನುವ ಒನ್ ಲೈನ್ ಕಹಾನಿ ಸುತ್ತ ಹೆಣೆಯಲಾದ ಸುಂದರವಾದ ಕಥಾಹಂದರವೇ ‘ಹೊಂದಿಸಿ ಬರೆಯಿರಿ’.  ರಾಮೇನಹಳ್ಳಿ ಜಗನ್ನಾಥ್ ಚೊಚ್ಚಲ ನಿರ್ದೇಶನದಲ್ಲಿ ಮೂಡಿ ಬರ್ತಿರುವ ಈ ಚಿತ್ರದಲ್ಲಿ ಐದು ಜನ ಸ್ನೇಹಿತರ ಬದುಕಿನ ಒಂದೊಂದು ಚಿತ್ರಣವಿದೆ ಹಾಗೂ ಭಾವನಾತ್ಮಕ ಜರ್ನಿ ಇದೆ.

    ಪ್ರವೀಣ್ ತೇಜ್, ಐಶಾನಿ ಶೆಟ್ಟಿ, ಸಂಯುಕ್ತ ಹೊರನಾಡು, ಶ್ರೀಮಹಾದೇವ್, ಭಾವನಾ ರಾವ್, ನವೀನ್ ಶಂಕರ್, ಅರ್ಚನಾ ಜೋಯಿಸ್, ಅನಿರುದ್ಧ್ ಆಚಾರ್ಯ ಚಿತ್ರದ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದು, ಸುನೀಲ್ ಪುರಾಣಿಕ್, ಪ್ರವೀಣ್ ಡಿ ರಾವ್, ಧರ್ಮೇಂದ್ರ ಅರಸ್, ನಂಜುಂಡೇ ಗೌಡ, ಸುಧಾ ನರಸಿಂಹರಾಜು ಒಳಗೊಂಡ ದೊಡ್ಡ ತಾರಾಬಳಗ ಸಿನಿಮಾದಲ್ಲಿದೆ. ಜೋ ಕೋಸ್ಟ ಸಂಗೀತ, ಕೆ ಕಲ್ಯಾಣ್, ಹೃದಯಶಿವ ಹಾಗೂ ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್ ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ. ಗುಳ್ಟು ಚಿತ್ರ ಖ್ಯಾತಿಯ ಶಾಂತಿ ಸಾಗರ್ ಕ್ಯಾಮೆರಾ ವರ್ಕ್ ಚಿತ್ರಕ್ಕಿದೆ. ಟಗರು ಖ್ಯಾತಿಯ ಮಾಸ್ತಿ, ಪೊಗರು ಖ್ಯಾತಿಯ ಪ್ರಶಾಂತ್ ರಾಜಪ್ಪ ಹಾಗೂ ಜಗನ್ನಾಥ್ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ. “ಸಂಡೇ ಸಿನಿಮಾಸ್ “ಬ್ಯಾನರ್ ನಡಿ ರಾಮೇನಹಳ್ಳಿ ಜಗನ್ನಾಥ್ ಹಾಗೂ ಸ್ನೇಹಿತರು ಸಿನಿಮಾ ನಿರ್ಮಾಣ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ‘ಹೊಂದಿಸಿ ಬರೆಯಿರಿ’ ಎನ್ನುವ ಹುಡುಗರಿಗೆ ಮೋಹಕ ತಾರೆ ರಮ್ಯಾ ಸಾಥ್

    ‘ಹೊಂದಿಸಿ ಬರೆಯಿರಿ’ ಎನ್ನುವ ಹುಡುಗರಿಗೆ ಮೋಹಕ ತಾರೆ ರಮ್ಯಾ ಸಾಥ್

    ರಾಮೇನಹಳ್ಳಿ ಜಗನ್ನಾಥ್ ಸಾರಥ್ಯದಲ್ಲಿ ತಯಾರಾಗಿರುವ ಹೊಂದಿಸಿ ಬರೆಯಿರಿ (Hondisi bareyiri) ಸಿನಿಮಾ ಇದೀಗ ಸಮಸ್ತ ಪ್ರೇಕ್ಷಕರ ಕುತೂಹಲದ ಕೇಂದ್ರ ಬಿಂದುವಾಗಿದೆ. ಕಥೆ, ಪಾತ್ರವರ್ಗದ ಬಗ್ಗೆ ಪ್ರೇಕ್ಷಕ ಕುತೂಹಲಗೊಂಡಿದ್ದಾನೆ. ಫಸ್ಟ್ ಲುಕ್ ನಿಂದ ಹಿಡಿದು ಇಲ್ಲಿವರೆಗೂ ನಾನಾ ಬಗೆಯಲ್ಲಿ ಪ್ರೇಕ್ಷಕರನ್ನು ಆವರಿಸಿರುವ ಹೊಂದಿಸಿ ಬರೆಯಿರಿ ಸಿನಿಮಾಗೆ ಈಗ ಮೋಹಕ ತಾರೆ ರಮ್ಯಾ ಸಾಥ್ ಕೊಡ್ತಿದ್ದಾರೆ.  ಇದೇ 28ರಂದು ಚಿತ್ರದ ಓ ಕವನ ಎಂಬ ವಿಡಿಯೋ ಸಾಂಗ್ ನ್ನು ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ (Ramya) ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭ ಹಾರೈಸಲಿದ್ದಾರೆ. ಸಂಡೇ ಸಿನಿಮಾಸ್ ಯೂಟ್ಯೂಬ್ ನಲ್ಲಿ ಬೆಳಗ್ಗೆ 11.31ಕ್ಕೆ ಹಾಡು ಅನಾವರಣವಾಗಲಿದೆ.

    ನವೆಂಬರ್‌ 18ಕ್ಕೆ ಸಿನಿಮಾ ರಾಜ್ಯಾದ್ಯಂತ ತೆರೆಗೆ ಬರುತ್ತಿರುವ ಚಿತ್ರದಲ್ಲಿ ಕಲರ್ ಫುಲ್ ತಾರಾಬಗಳವಿದೆ. ಪ್ರವೀಣ್‌ ತೇಜ್‌ (Praveen Tej), ಐಶಾನಿ ಶೆಟ್ಟಿ (Aishani Shetty), ಸಂಯುಕ್ತ ಹೊರನಾಡು, ಶ್ರೀಮಹಾದೇವ್‌, ಭಾವನಾ ರಾವ್‌, ನವೀನ್‌ ಶಂಕರ್‌, ಅರ್ಚನಾ ಜೋಯಿಸ್‌ ಚಿತ್ರದ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದು, ಸುನೀಲ್‌ ಪುರಾಣಿಕ್‌, ಪ್ರವೀಣ್‌ ಡಿ ರಾವ್‌, ಧರ್ಮೇಂದ್ರ ಅರಸ್‌, ನಂಜುಂಡೇ ಗೌಡ, ಸುಧಾ ನರಸಿಂಹರಾಜು ಹಿರಿಯ ಕಲಾವಿದರ ದಂಡು ಚಿತ್ರದಲ್ಲಿದೆ.

    ನಮ್ಮ ಬದುಕಿನಲ್ಲಿ ಏನೇ ಆದರೂ, ಅದಕ್ಕೆ ನಾವೇ ಹೊಣೆ. ಆಗಿರುವ ವಿಷಯಗಳನ್ನು ಹೊಂದಿಸಿ ಬರೆದುಕೊಂಡು ಜೀವನ ಸಾಗಿಸಬೇಕು ಎನ್ನುವ ಸಂದೇಶವನ್ನು   ಇಟ್ಟುಕೊಂಡು ಸಿನಿಮಾವನ್ನು ರೂಪಿಸಲಾಗಿದ್ದು, ಏಳು ಯುವಕ-ಯುವತಿಯರ ಒಂದೊಂದು ಕಥೆಯೂ ಚಿತ್ರದಲ್ಲಿದೆ. ಇದನ್ನೂ ಓದಿ:ಬೆಳಗ್ಗೆ ಎದ್ದಾಗ್ಲೇ ಬಿಕ್ಕಳಿಕೆ- ಯಾರೋ ಮಿಸ್ ಮಾಡಿಕೊಳ್ತಿದ್ದಾರೆ ಅಂದ್ರು ರಶ್ಮಿಕಾ

    ಜೋ ಕೋಸ್ಟ ಸಂಗೀತ, ಕೆ ಕಲ್ಯಾಣ್, ಹೃದಯಶಿವ ಹಾಗೂ ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್ (Ramenahalli Jagannath) ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ.ಗುಳ್ಟು ಚಿತ್ರಕ್ಕೆ ಸಿನಿಮಾಟೋಗ್ರಫಿ ಮಾಡಿದ್ದ ಶಾಂತಿ ಸಾಗರ್‌ ಈ ಚಿತ್ರಕ್ಕೆ ಕ್ಯಾಮೆರಾ ಹಿಡಿದಿದ್ದಾರೆ.  ಟಗರು  ಖ್ಯಾತಿಯ ಮಾಸ್ತಿ, ಪೊಗರು ಖ್ಯಾತಿಯ ಪ್ರಶಾಂತ್ ರಾಜಪ್ಪ ಹಾಗೂ ಜಗನ್ನಾಥ್ ಸೇರಿದಂತೆ ಮೂವರು ಈ ಚಿತ್ರಕ್ಕೆ ಸಂಭಾಷಣೆ ಬರೆದಿದ್ದು, “ಸಂಡೇ ಸಿನಿಮಾಸ್ “ಬ್ಯಾನರ್ ನಡಿ ರಾಮೇನಹಳ್ಳಿ ಜಗನ್ನಾಥ್ ಹಾಗೂ ಅವರ ಸ್ನೇಹಿತರು ನಿರ್ಮಾಣ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಹೊಂದಿಸಿ ಬರೆಯಿರಿ ಸಿನಿಮಾ ಸ್ಪೆಷಲ್ ಯಾಕೆ?

    ಹೊಂದಿಸಿ ಬರೆಯಿರಿ ಸಿನಿಮಾ ಸ್ಪೆಷಲ್ ಯಾಕೆ?

    ರಾಮೇನಹಳ್ಳಿ ಜಗನ್ನಾಥ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ‘ಹೊಂದಿಸಿ ಬರೆಯಿರಿ’ ಸಿನಿಮಾ ಹತ್ತು ಹಲವು ವಿಶೇಷತೆಗಳನ್ನು ಹೊಂದಿದೆ. ಈ ಸಿನಿಮಾದ ಸ್ಪೆಷಲ್ ಅಂದರೆ ತಾರಾಗಣ. ಮೊದಲ ಸಿನಿಮಾದಲ್ಲಿಯೇ ಭವರಸೆ ಮೂಡಿಸಿದ್ದ ಸಾಕಷ್ಟು ಪ್ರತಿಭೆಗಳು ಈ ಸಿನಿಮಾದಲ್ಲಿ ಒಂದಾಗಿವೆ. ಇದನ್ನೂ ಓದಿ : ಆತ ವಾರದಿಂದ ಮಾನಸಿಕ ಹಿಂಸೆ ಕೊಟ್ಟಿದ್ದಾನೆ : ಫ್ಯಾಶನ್ ಐಕಾನ್ ಪುತ್ರನ ವಿಚಿತ್ರ ಖಯಾಲಿ ಬಿಚ್ಚಿಟ್ಟ ನಟಿ ಸಂಜನಾ

    ಜತೆಗೆ ಒಂದಷ್ಟು ಪ್ರೇಮಕಥೆಗಳನ್ನು ವಿಭಿನ್ನ ದೃಷ್ಟಿಯಲ್ಲಿ ಹೇಳುವ ಪ್ರಯತ್ನವಾಗಿದೆಯಂತೆ. ನಮ್ಮ ಬದುಕಿನಲ್ಲಿ ಏನೇ ಆದರೂ, ಅದಕ್ಕೆ ನಾವೇ ಹೊಣೆ. ಆಗಿರುವ ವಿಷಯಗಳನ್ನು ನೀಟಾಗಿ, ಹೊಂದಿಸಿ ಬರೆದುಕೊಂಡು ಜೀವನ ಸಾಗಿಸಬೇಕು ಎನ್ನುವ ಸಂದೇಶವನ್ನು ಈ ಸಿನಿಮಾ ನೀಡಲಿದೆಯಂತೆ. ಇದನ್ನೂ ಓದಿ : ಬಜೆಟ್ ನಲ್ಲಿ ಪುನೀತ್ ರಾಜ್ ಕುಮಾರ್ ಮತ್ತು ಸಂಚಾರಿ ವಿಜಯ್ ಪ್ರಸ್ತಾಪ

    ಈಗಷ್ಟೇ ಸಿನಿಮಾದ ಮೊದಲ ಪೋಸ್ಟರ್ ಬಿಡುಗಡೆ ಆಗಿದ್ದು, ಅಲ್ಲಿರುವ ಕಲಾವಿದರಿಂದಾಗಿಯೇ ಸಿನಿಮಾ ಕುತೂಹಲ ಮೂಡಿಸಿದೆ. ಇದನ್ನೂ ಓದಿ : ಮಾರ್ಚ್ 27ಕ್ಕೆ ಕೆಜಿಎಫ್ 2 ಟ್ರೈಲರ್ ರಿಲೀಸ್

    ಏಳು ಯುವಕ-ಯುವತಿಯರ ಒಂದೊಂದು ಕಥೆಯೇ ‘ಹೊಂದಿಸಿ ಬರೆಯಿರಿ’ ಚಿತ್ರ. ಚೂರಿಕಟ್ಟೆ ಖ್ಯಾತಿಯ ಪ್ರವೀಣ್, ಗುಳ್ಟು ಖ್ಯಾತಿಯ ನವೀನ್, ರಾಕೇಟ್ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿರುವ ಐಶಾನಿ ಶೆಟ್ಟಿ, ಇದನ್ನೂ ಓದಿ : ಜನಾರ್ದನ ರೆಡ್ಡಿ ಪುತ್ರನ ಸಿನಿಮಾದಲ್ಲಿ ಇಬ್ಬರು ನಾಯಕಿಯರು?

    ಕೆಜಿಎಫ್ ಸಿನಿಮಾದಲ್ಲಿ ರಾಕಿಭಾಯ್ ಗೆ ಅಮ್ಮನಾಗಿ ನಟಿಸಿದ್ದ ರಚನಾ ಜೋಯಿಸ್, ವಗ್ಗರಣೆ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿರುವ ಸಂಯುಕ್ತ ಹೊರನಾಡು, ಇಷ್ಟದೇವತೆ ಧಾರಾವಾಹಿಯ ಖ್ಯಾತಿಯ ಶ್ರೀಮಹಾದೇವ್, ಗಾಳಿಪಟ ಚಿತ್ರಖ್ಯಾತಿಯ ಭಾವನಾ ಹೀಗೆ ಪ್ರತಿಭೆಗಳ ಗಣಿಯೇ ಸಿನಿಮಾದಲ್ಲಿ. ಇದನ್ನೂ ಓದಿ: ಮೈಕಲ್ ಅಂಡ್ ಮಾರ್ಕೊನಿ ಸಿನಿಮಾದಲ್ಲಿ ಪ್ರಶಾಂತ್ ಸಿದ್ದಿ ವಿಶೇಷ ಪಾತ್ರ

    ಈಗಾಗಲೇ ಬಹುತೇಕ ಶೂಟಿಂಗ್ ಆಗಿದ್ದು, ಮಾಸ್ತಿ ಸೇರಿದಂತೆ ಮೂವರು ಈ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ. ಸಾಹಿತಿ ಶ್ರೀಧರ್ ಬನವಾಸಿ ಕೂಡ ಸಿನಿಮಾದ ಭಾಗವಾಗಿದ್ದಾರೆ.

  • ಅಮೆಜಾನ್ ಪ್ರೈಮ್‍ನಲ್ಲಿ ಆಟ ಶುರುವಿಟ್ಟ ಸ್ಟ್ರೈಕರ್!

    ಅಮೆಜಾನ್ ಪ್ರೈಮ್‍ನಲ್ಲಿ ಆಟ ಶುರುವಿಟ್ಟ ಸ್ಟ್ರೈಕರ್!

    ಕೊರೊನಾ ಕಾಟದಿಂದ ಚಿತ್ರಮಂದಿರಗಳು ಮುಚ್ಚಿಕೊಂಡಿರೋದರ ಬಗ್ಗೆ ಚಿತ್ರ ಪ್ರೇಮಿಗಳಲ್ಲೊಂದು ಕೊರಗಿದೆ. ಅದನ್ನು ಕೊಂಚ ನೀಗಿಸಿ ಮನೆಯೊಳಗೆ ಬಣ್ಣದ ಜಗತ್ತು ಕಣ್ತೆಯುವಂತೆ ಮಾಡುವಲ್ಲಿ ಅಮೆಜಾನ್ ಪ್ರೈಮ್‍ನ ಪಾತ್ರ ದೊಡ್ಡದು. ಈಗಾಗಲೇ ಕನ್ನಡದ ಒಂದಷ್ಟು ಸಿನಿಮಾಗಳು ಅಮೆಜಾನ್ ಪ್ರೈಮ್ ಮೂಲಕ ಲಾಕ್‍ಡೌನ್ ಕಾಲವನ್ನು ಸಹನೀಯವಾಗಿಸಿವೆ. ಅದರಲ್ಲಿಯೇ ಕೆಲ ಚಿತ್ರಗಳು ದೊಡ್ಡ ಮಟ್ಟದಲ್ಲಿ ಗೆದ್ದು ಬೀಗಿವೆ. ಅಂಥಾದ್ದೇ ಆವೇಗದೊಂದಿಗೆ ಇದೀಗ ಪ್ರವೀಣ್ ತೇಜ್ ನಾಯಕನಾಗಿ ನಟಿಸಿರೋ ‘ಸ್ಟ್ರೈಕರ್’ ಚಿತ್ರ ಅಮೆಜಾನ್ ಪ್ರೈಮ್‍ನಲ್ಲಿ ಆಟ ಶುರುವಿಟ್ಟಿದೆ.

    ಇದು ಗರುಡಾದ್ರಿ ಫಿಲಮ್ಸ್ ಬ್ಯಾನರಿನಡಿಯಲ್ಲಿ ನಿರ್ಮಾಣಗೊಂಡು, ಪವನ್ ತ್ರಿವಿಕ್ರಮ್ ನಿರ್ದೇಶನ ಮಾಡಿದ್ದ ಚಿತ್ರ. ಪ್ರವೀಣ್ ತೇಜ್ ಮತ್ತು ಶಿಲ್ಪಾ ಮಂಜುನಾಥ್ ನಾಯಕ ನಾಯಕಿಯರಾಗಿ ನಟಿಸಿದ್ದ ಸ್ಟ್ರೈಕರ್ ಈ ವರ್ಷದ ಹಿಂದೆ ಬಿಡುಗಡೆಗೊಂಡಿತ್ತು. ಆರಂಭದಲ್ಲಿಯೇ ವಿಭಿನ್ನ ಕಥಾ ಹಂದರದ ಸುಳಿವಿನೊಂದಿಗೆ ಮಿರುಗುತ್ತಾ ಅದೇ ಆವೇಗದಲ್ಲಿ ತೆರೆ ಕಂಡಿತ್ತು. ಆ ಬಳಿಕ ಪ್ರೇಕ್ಷಕರೆಲ್ಲ ಈ ಸೈಕಾಲಾಜಿಕಲ್ ಕ್ರೈಂ ಥ್ರಿಲ್ಲರ್ ಕಥೆಗೆ ಮಾರು ಹೋಗಿದ್ದರು.

    ನಿರ್ದೇಶಕ ಪವನ್ ತ್ರಿವಿಕ್ರಮ್ ಈ ಸಿನಿಮಾವನ್ನು ಕಟ್ಟಿ ಕೊಟ್ಟಿದ್ದ ರೀತಿಯೇ ಅಂಥಾದ್ದಿದೆ. ಕ್ರೈಂ ಥ್ರಿಲರ್ ಚಿತ್ರಗಳನ್ನು ಅನುಭವಿಸಿ ನೋಡೋ ದೊಡ್ಡ ಪ್ರೇಕ್ಷಕ ವರ್ಗವೇ ಕನ್ನಡದಲ್ಲಿದೆ. ಹಾಗಿದ್ದ ಮೇಲೆ ಹೊಸ ಪ್ರಯೋಗಗಳೊಂದಿಗೆ ರೂಪುಗೊಂಡಿದ್ದ ಸ್ಟ್ರೈಕರ್ ಅವರಿಗೆ ಇಷ್ಟವಾಗದಿರಲು ಸಾಧ್ಯವೇ? ಈ ಕಾರಣದಿಂದಲೇ ಸ್ಟ್ರೈಕರ್ ಗೆಲುವು ಕಂಡಿತ್ತು. ಇದೀಗ ಆ ಚಿತ್ರ ಕೊರೊನಾ ಕಾಲದಲ್ಲಿ ಮತ್ತಷ್ಟು ಜನರನ್ನು ತಲುಪಿಕೊಳ್ಳುವ ಇರಾದೆಯಿಂದ ಅಮೆಜಾನ್ ಪ್ರೈನಲ್ಲಿ ಕಾರುಬಾರು ಆರಂಭಿಸಿದೆ.

    ಮೂವರು ಸ್ನೇಹಿತರು ಮತ್ತು ಅಲ್ಲಿ ನಡೆಯೋ ಒಂದು ಕೊಲೆಯ ಸುತ್ತಲಿನ ಕಥಾ ಹಂದರ ಈ ಸಿನಿಮಾದಲ್ಲಿದೆ. ಹಾಗಂತ ಅಷ್ಟಕ್ಕೆ ಮಾತ್ರವೇ ಸೀಮಿತವಾಗಿಲ್ಲ. ಈ ಕಥೆಯ ಕೇಂದ್ರಕ್ಕೆ ಹಲವಾರು ಕವಲುಗಳಿದ್ದಾವೆ. ಅವೆಲ್ಲವನ್ನೂ ಅಪರಿಮಿತವಾದ ರೋಮಾಂಚಕ ಶೈಲಿಯಲ್ಲಿ, ಪಕ್ಕಾ ಕಮರ್ಶಿಯಲ್ ಹಾದಿಯಲ್ಲಿ ರೂಪಿಸಲಾಗಿದೆ. ಹೆಜ್ಜೆ ಹೆಜ್ಜೆಗೂ ಚೇತೋಹಾರಿ ಅನುಭವ ನೀಡುವ, ರೋಮಾಂಚಕ ಕ್ಷಣಗಳನ್ನ ಯಥೇಚ್ಛವಾಗಿ ಕೊಡಮಾಡುವ ಸ್ಟ್ರೈಕರ್ ನಿಮ್ಮೊಳಗಿನ ಏಕತಾನತೆಯನ್ನ ನೀಗಿಸುವಂತಾಗಲಿ.

  • ಸದ್ಗುರುವಿನೊಂದಿಗೆ ‘ಮುಂದಿನ ನಿಲ್ದಾಣ’ ತಂಡ

    ಸದ್ಗುರುವಿನೊಂದಿಗೆ ‘ಮುಂದಿನ ನಿಲ್ದಾಣ’ ತಂಡ

    ಬೆಂಗಳೂರು: ತೆರೆ ಕಾಣುವ ಮುನ್ನವೇ ಯುವ ನಿರ್ದೇಶಕ ವಿನಯ್ ಭಾರದ್ವಾಜ್ ಅವರ ಮುಂದಿನ ನಿಲ್ದಾಣ ಚಿತ್ರವು ಎಲ್ಲೆಡೆಯೂ ಒಂದಲ್ಲ ಒಂದು ರೀತಿಯಲ್ಲಿ ಸದ್ದು ಮಾಡುತ್ತಲೇ ಇದೆ. ಮೊನ್ನೆಯಷ್ಟೇ ರಿಲೀಸ್ ಆದ ಈ ಚಿತ್ರದ ಮನಸೇ ಮಾಯ ಹಾಡು ಯೂಟ್ಯೂಬ್, ಟಿಕ್ ಟಾಕ್ ಗಳಲ್ಲಿ ವೈರಲ್ ಆಗಿದ್ದು ದಿನದಿಂದ ದಿನಕ್ಕೆ ಅದರ ಕಾವು ಏರುತ್ತಾ ಇದೆ. ಇದರ ಜೊತೆಯಲ್ಲಿಯೇ, ಕಾವೇರಿ ತಾಯಿಯ ಒಡಲಿನ ಕಾವನ್ನು ತಗ್ಗಿಸುವ ಪ್ರಯತ್ನಕ್ಕೂ ಚಿತ್ರ ತಂಡವು ಕೈಜೋಡಿಸಿದೆ!

    ಚಿತ್ರದ ಮುಖ್ಯ ಪಾತ್ರಗಳಲ್ಲಿ ನಟಿಸುತ್ತಿರುವ ರಾಧಿಕಾ ನಾರಾಯಣ್, ಪ್ರವೀಣ್ ತೇಜ್ ಹಾಗೂ ಅನನ್ಯಾ ಕಶ್ಯಪ್ ಅವರನ್ನೊಳಗೊಂಡ ತಂಡವು ಕಾವೇರಿ ಕೂಗು ಅಭಿಯಾನ ಮಾಡುತ್ತಿರುವ ಈಶಾ ಫೌಂಡೇಶನ್‍ನ ಸದ್ಗುರು ಜಗ್ಗಿ ವಾಸುದೇವ್ ಅವರನ್ನು ಭೇಟಿ ಮಾಡಿತು.

    ಮುಂದಿನ ನಿಲ್ದಾಣ ಚಿತ್ರ ತಂಡವು ಸದಾ ಕಾವೇರಿಯ ಹಾಗೂ ಕನ್ನಡದ ನೆಲ, ಜಲ ಹಾಗೂ ಭಾಷೆಯ ಉಳಿವಿಗೆ ಬದ್ಧವಾಗಿದೆ ಎಂಬ ಮಾತನ್ನು ಸದ್ಗುರುವಿನ ಜೊತೆ ಹಂಚಿಕೊಳ್ಳುತ್ತಾ, ಚಿತ್ರ ತಂಡವು ಬೆಂಗಳೂರಿಗೆ ಮರಳಿತು.