Tag: Praveen Sattaru

  • ಪ್ರವೀಣ್ ನೆಟ್ಟಾರು ಹತ್ಯೆ – ಕರ್ನಾಟಕ ಕಾಂಗ್ರೆಸ್ SDPI, PFI ಗೆ ಪ್ರೋತ್ಸಾಹ ನೀಡುತ್ತಿದೆ: ಜೋಶಿ

    ಪ್ರವೀಣ್ ನೆಟ್ಟಾರು ಹತ್ಯೆ – ಕರ್ನಾಟಕ ಕಾಂಗ್ರೆಸ್ SDPI, PFI ಗೆ ಪ್ರೋತ್ಸಾಹ ನೀಡುತ್ತಿದೆ: ಜೋಶಿ

    ನವದೆಹಲಿ: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆಯನ್ನು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಖಂಡಿಸಿ, ಕಾಂಗ್ರೆಸ್ ಪಕ್ಷದ ಮೇಲೆ ಗಂಭೀರ ಆರೋಪ ಮಾಡಿದ್ದಾರೆ.

    ಪ್ರವೀಣ್ ನೆಟ್ಟಾರು ಹತ್ಯೆ ಕುರಿತು ನವದೆಹಲಿಯಲ್ಲಿ ಪ್ರತಿಕ್ರಿಯೆ ನೀಡಿರುವ ಜೋಶಿ ಅವರು, ಪ್ರಕರಣದ ಕುರಿತು ಆರಂಭಿಕ ವರದಿಗಳು ಮತ್ತು ಕೆಲವು ಮಾಧ್ಯಮ ವರದಿಗಳು ಎಸ್‍ಡಿಪಿಐ, ಪಿಎಫ್‍ಐ ಲಿಂಕ್‍ಗಳಿರೋದನ್ನ ಸೂಚಿಸುತ್ತಿದೆ. ಕೇರಳದಲ್ಲಿ ಅವರಿಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಕೂಡಾ ಇಂಥವರನ್ನ ಪ್ರೋತ್ಸಾಹಿಸುತ್ತಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಪಿಎಫ್‍ಐ ಕಾರ್ಯಕರ್ತರ ಮೇಲಿನ ಕೇಸುಗಳನ್ನೆಲ್ಲ ಹಿಂಪಡೆದರು ಎಂದು ದೂರಿದ್ದಾರೆ. ಇದನ್ನೂ ಓದಿ: ಚೆಸ್ ಒಲಿಂಪಿಯಾಡ್‌ನಲ್ಲಿ ಮೋದಿ ಫೋಟೋ ಹಾಕದೇ ಜಾಹೀರಾತು – ಎಲ್ಲ ಬೋರ್ಡ್‍ಗಳಿಗೂ ಫೋಟೋ ಅಂಟಿಸಿದ ಬಿಜೆಪಿ

    ಈ ರೀತಿ ಕಾಂಗ್ರೆಸ್ ಪಿಎಫ್‍ಐಗೆ ಪ್ರೋತ್ಸಾಹ ನೀಡುತ್ತಿದೆ. ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಮ್ಮ ಕರ್ನಾಟಕ ಸರ್ಕಾರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಭರವಸೆ ಕೊಟ್ಟಿದ್ದಾರೆ.

    ಇದೇ ವೇಳೆ ಪ್ರವೀಣ್ ಸಾವಿಗೆ ತೀವ್ರ ಸಂತಾಪ ವ್ಯಕ್ತಪಡಿಸಿದ ಅವರು, ದುಷ್ಕರ್ಮಿಗಳು ನಡೆಸಿದ ದಾಳಿಯಿಂದ ನಮ್ಮ ಕಾರ್ಯಕರ್ತನ ಹತ್ಯೆಯಾಗಿದೆ. ಈ ಕೃತ್ಯ ಎಸಗಿದವರನ್ನು ಯಾವುದೇ ಮುಲಾಜಿಲ್ಲದೆ ಬಂಧಿಸಬೇಕು. ಎಲ್ಲರಿಗೂ ಪಾಠವಾಗುವಂತೆ ಶಿಕ್ಷೆ ಆಗಬೇಕು. ಆ ನಿಟ್ಟಿನಲ್ಲಿ ರಾಜ್ಯ ಬಿಜೆಪಿ ಸರ್ಕಾರ ಹಾಗೂ ಮುಖ್ಯಮಂತ್ರಿಗಳು ಕ್ರಮ ಕೈಗೊಳ್ಳುವುದಾಗಿ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:  ಪಾಕ್ ಏಜೆಂಟರ ಹನಿಟ್ರ್ಯಾಪ್‍ಗೆ ಸಿಲುಕಿದ ಸೇನಾ ಸಿಬ್ಬಂದಿ – ಮಾಹಿತಿ ಸೋರಿಕೆ 

    ಪ್ರವೀಣ್ ನೆಟ್ಟಾರು ಆತ್ಮಕ್ಕೆ ಶಾಂತಿ ಕೋರಿದ ಸಚಿವರು, ಪ್ರವೀಣ್ ಕುಟುಂಬಕ್ಕೆ ದುಃಖ ನೀಗಿಸುವ ಶಕ್ತಿ ಭಗವಂತ ನೀಡಲಿ ಎಂದು ಪ್ರಾರ್ಥಿಸಿದರು.

    Live Tv
    [brid partner=56869869 player=32851 video=960834 autoplay=true]