Tag: Praveen Kumar

  • ಸಂಜಯ್ ದತ್ತ್ ಲುಕ್‍ನಲ್ಲಿ ಕಾಣಿಸಿಕೊಂಡ ಮಾಜಿ ಕ್ರಿಕೆಟಿಗ

    ಸಂಜಯ್ ದತ್ತ್ ಲುಕ್‍ನಲ್ಲಿ ಕಾಣಿಸಿಕೊಂಡ ಮಾಜಿ ಕ್ರಿಕೆಟಿಗ

    ನವದೆಹಲಿ: 13 ವರ್ಷಗಳ ತಮ್ಮ ಕ್ರಿಕೆಟ್ ವೃತ್ತಿ ಜೀವನಕ್ಕೆ 2018ರಲ್ಲಿ ವಿದಾಯ ಹೇಳಿದ್ದ ಟೀಂ ಇಂಡಿಯಾ ಮಾಜಿ ಬೌಲರ್ ಪ್ರವೀಣ್ ಕುಮಾರ್, ನಟ ಸಂಜಯ್ ದತ್ತ್ ಲುಕ್‍ನಲ್ಲಿ ಕಾಣಿಸಿಕೊಂಡಿದ್ದು, ತಮ್ಮ ಹೊಸ ಲುಕ್ ಫೋಟೋವನ್ನು ಇನ್‍ಸ್ಟಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

    33 ವರ್ಷದ ಪ್ರವೀಣ್ ಕುಮಾರ್ ತಮ್ಮ ಜೀವನದಲ್ಲಿ ಬೌಲಿಂಗ್ ಮಾತ್ರವಲ್ಲದೇ ಅವರು ಧರಿಸುತ್ತಿದ್ದ 50 ತೊಲೆ ಚಿನ್ನದ ಸರದಿಂದಲೂ ಹೆಚ್ಚು ಖ್ಯಾತಿ ಪಡೆದಿದ್ದರು. ಆದರೆ 8 ಲಕ್ಷ ರೂ. ಮೌಲ್ಯದ ಸರ 2014 ರಲ್ಲಿ ಕಳೆದು ಹೋಗಿತ್ತು. ವಿಜಯ್ ಹಜಾರೆ ಟೂರ್ನಿಯ ಸಂದರ್ಭದಲ್ಲಿ ಉತ್ತರ ಪ್ರದೇಶದ ಪರ ಆಡುತ್ತಿದ್ದ ಪ್ರವೀಣ್ ಫೀಲ್ಡಿಂಗ್‍ಗೆ ತೆರಳುವ ಮುನ್ನ ಸರವನ್ನು ಬಿಚ್ಚಿಟ್ಟು ತೆರಳಿದ್ದರು. ಆದರೆ ಆ ಬಳಿಕ ಅದನ್ನು ಅಲ್ಲಿಯೇ ಮರೆತು ಹೋಟೆಲ್ ರೂಮ್‍ಗೆ ಮರಳಿದ್ದರು.

    https://www.instagram.com/p/B3gkR97jWdM/

    ತಾವು ಸರವನ್ನು ಮರೆತು ಬಂದ ಬಗ್ಗೆ ಪ್ರವೀಣ್ ಕ್ರೀಡಾಂಗಣದ ಅಧಿಕಾರಿಗಳಿಗೆ ದೂರು ನೀಡಿದರು ಕೂಡ ಯಾವುದೇ ಪ್ರಯೋಜನ ಆಗಿರಲಿಲ್ಲ. ಆದರೆ ಇತ್ತೀಚೆಗೆ ತಮ್ಮ ಫೋಟೋ ಪೋಸ್ಟ್ ಮಾಡಿರುವ ಪ್ರವೀಣ್ ಕುಮಾರ್, ‘ಸಂಜು ಬಾಬಾರನ್ನ ನಾನು ಗಂಭೀರವಾಗಿ ತೆಗೆದುಕೊಂಡಾಗ.. ನನ್ನ 50 ತೊಲದ ಸರವನ್ನ ನೋಡಿ’ ಎಂದು ಸಿನಿಮಾ ಡೈಲಾಂಗ್ ಹೇಳಿದ್ದಾರೆ. ಅಂದಹಾಗೇ ಈ ಡೈಲಾಗ್ ಸಂಜಯ್ ದಂತ್ ಅವರು 1999 ರಲ್ಲಿ ಬಿಡುಗಡೆಯಾಗಿದ್ದ ‘ವಾಸ್ತವ್’ ಸಿನಿಮಾದಲ್ಲಿ ಹೇಳಿದ್ದರು.

    2007 ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ಪಾದಾರ್ಪಣೆ ಮಾಡಿದ್ದ ಪ್ರವೀಣ್ ಕುಮಾರ್ ಅವರು, ನಿವೃತ್ತಿ ಬಳಿಕ ಟಿ10 ಲೀಗ್ ನಲ್ಲಿ ಭಾಗವಹಿಸಿದ್ದರು. ಭಾರತದ ಪರ 6 ಟೆಸ್ಟ್, 68 ಏಕದಿನ ಹಾಗೂ 10 ಟಿ20 ಪಂದ್ಯಗಳನ್ನು ಪ್ರವೀಣ್ ಆಡಿದ್ದು ಕ್ರಮವಾಗಿ 27, 77, 8 ವಿಕೆಟ್ ಪಡೆದಿದ್ದಾರೆ. 2012 ರಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸದ ಟಿ20 ಸರಣಿಯಲ್ಲಿ ಅಂತಿಮವಾಗಿ ಆಡಿದ್ದರು.

    https://www.instagram.com/p/Bi_NibaFZ1i/

    https://www.instagram.com/p/BpJOJU3lD7y/