Tag: Praveen Kumar Nettar

  • ಮನೆಯ ಸದಸ್ಯನನ್ನ ಕಳೆದುಕೊಂಡಿದ್ದೇವೆ- ಪ್ರವೀಣ್ ಬಗ್ಗೆ ಮಾತನಾಡುತ್ತಾ ಗದ್ಗದಿತರಾದ ಆರಗ

    ಮನೆಯ ಸದಸ್ಯನನ್ನ ಕಳೆದುಕೊಂಡಿದ್ದೇವೆ- ಪ್ರವೀಣ್ ಬಗ್ಗೆ ಮಾತನಾಡುತ್ತಾ ಗದ್ಗದಿತರಾದ ಆರಗ

    ಬೆಂಗಳೂರು: ಬಿಜೆಪಿ ಯುವನಾಯಕ ಪ್ರವೀಣ್ ಕುಮಾರ್ ನೆಟ್ಟಾರ್ ಹತ್ಯೆ ಪ್ರಕರಣ ಸಂಬಂಧ ಇಂದು ಮಾಧ್ಯಮಗಳ ಜೊತೆ ಮಾತನಾಡುತ್ತಾ, ಮನೆಯ ಸದಸ್ಯನನ್ನು ಕಳೆದುಕೊಂಡಿದ್ದೇವೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಗದ್ಗದಿತರಾದರು.

    ಪ್ರಕರಣ ಸಂಬಂಧ ಈಗಾಗಲೇ 15 ಕ್ಕೂ ಹೆಚ್ಚು ಜನರನ್ನ ವಶಕ್ಕೆ ಪಡೆಯಲಾಗಿದೆ. ತನಿಖೆ ಮುಂದುವರಿದಿದೆ. ಅದು ಬಾರ್ಡರ್ ಜಿಲ್ಲೆ. ಹೀಗಾಗಿ ಕೇರಳಕ್ಕೆ ತಂಡ ಹೋಗಿದೆ. ಕೇರಳ ಪೊಲೀಸ್ ನಮ್ಮ ಪೊಲೀಸ್ ಜಂಟಿಯಾಗಿ ಕಾರ್ಯಾಚರಣೆ ಆಗಬೇಕು. ಕರ್ನಾಟಕ ಪೊಲೀಸರು ಕೇರಳದ ಪೊಲೀಸರ ಜೊತೆ ಮಾತಾಡ್ತಿದ್ದಾರೆ. ಸೂತಕದ ಮನೆಯಲ್ಲಿ ಏನು ಮಾಡಬಾರದಿತ್ತು ಎಂದರು.

    ಸಿಎಂ ಒಳ್ಳೆ ನಿರ್ಧಾರ ತೆಗೆದುಕೊಂಡಿದ್ದಾರೆ. ಮಂಗಳೂರು ವಾತಾವರಣ ಶಾಂತವಾಗಿದೆ. ಅಲ್ಲಿನ ಜನ ಬುದ್ಧಿವಂತರು. ಆಕ್ರೋಶನೂ ಹೊರ ಹಾಕಿದ್ದಾರೆ. ಜೊತೆಗೆ ಶಾಂತಿಯೂ ಕಾಪಾಡಿದ್ದಾರೆ. ಪೊಲೀಸರ ಭದ್ರತೆ ಮುಂದುವರಿಯಲಿದೆ. ನಾನು ಮಂಗಳೂರಿಗೆ ಹೋಗ್ತೀನಿ. ಶೀಘ್ರವೇ ಈ ಬಗ್ಗೆ ನಿರ್ಧಾರ ಮಾಡ್ತೀವಿ. ಜನರ ಆಕ್ರೋಶ ಇರೋದು ನಿಜ. ಜನರ ಆಕ್ರೋಶ ಅರ್ಥ ಆಗುತ್ತೆ. ಈ ನಿಟ್ಟಿನಲ್ಲಿ ಸಿಎಂ ಜೊತೆ ಚರ್ಚೆ ಮಾಡಿ ಕ್ರಮ ತಗೋತೀವಿ. ಮತಾಂಧ ಶಕ್ತಿಗಳ ಮೇಲೆ ಅನುಮಾನ ಇದೆ. ಅಂತಹ ಶಕ್ತಿಗಳ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಹೇಳಿದರು. ಇದನ್ನೂ ಓದಿ: ಪ್ರವೀಣ್ ಕುಮಾರ್‌ ನೆಟ್ಟಾರು ಹತ್ಯೆ ಪ್ರಕರಣ – 7 ಮಂದಿ SDPI ಕಾರ್ಯಕರ್ತರು ವಶಕ್ಕೆ

    ಕಾರ್ಯಕರ್ತರ ರಾಜೀನಾಮೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಆಕ್ರೋಶ ಇದೆ. ಪ್ರವೀಣ ಅಮೂಲ್ಯವಾದ ಆಸ್ತಿ. ಆಕ್ರೋಶನೂ ಹೊರ ಹಾಕಿದ್ದಾರೆ. ಜೊತೆಗೆ ಶಾಂತಿಯೂ ಕಾಪಾಡಿದ್ದಾರೆ. ಪೊಲೀಸರ ಭದ್ರತೆ ಮುಂದುವರಿಯಲಿದೆ. ನಾನು ಮಂಗಳೂರಿಗೆ ಹೋಗ್ತೀನಿ. ಶೀಘ್ರವೇ ಈ ಬಗ್ಗೆ ನಿರ್ಧಾರ ಮಾಡ್ತೀವಿ. ಜನರ ಆಕ್ರೋಶ ಇರೋದು ನಿಜ. ಜನರ ಆಕ್ರೋಶ ಅರ್ಥ ಆಗುತ್ತೆ. ಈ ನಿಟ್ಟಿನಲ್ಲಿ ಸಿಎಂ ಜೊತೆ ಚರ್ಚೆ ಮಾಡಿ ಕ್ರಮ ತಗೋತೀವಿ ಎಂದು ತಿಳಿಸಿದರು. ಇದನ್ನೂ ಓದಿ: ಬಿಜೆಪಿಯ ಜನೋತ್ಸವ ರದ್ದು – ಮಧ್ಯರಾತ್ರಿ ಸಿಎಂ ಘೋಷಣೆ

    ಮತಾಂಧ ಶಕ್ತಿಗಳ ಮೇಲೆ ಅನುಮಾನ ಇದೆ. ಅಂತಹ ಶಕ್ತಿಗಳ ಬಗ್ಗೆ ತನಿಖೆ ನಡೆಯುತ್ತಿದೆ. ಬಡತನ ಇದ್ದರೂ ದೇಶ ಮತ್ತು ಧರ್ಮಕ್ಕಾಗಿ ಕೆಲಸ ಮಾಡ್ತಿದ್ದ. ಮನೆಯ ಸದಸ್ಯನನ್ನ ಕಳೆದುಕೊಂಡಿದ್ದೇವೆ. ನಮ್ಮ ಕಾರ್ಯಕರ್ತರು ಕಾಂಗ್ರೆಸ್ ಕಾರ್ಯಕರ್ತರ ಪೇಡ್ ಕಾರ್ಯಕರ್ತರು ಅಲ್ಲ. ಸಹಜವಾಗಿ ಆಕ್ರೋಶ ಭುಗಿಲೆದ್ದಿದೆ. ಹಾಗಂತ ಸಿದ್ದಾಂತದಿಂದ ಅವರು ಹೊರಗೆ ಹೋಗಿಲ್ಲ. ಗೃಹ ಇಲಾಖೆ ಇದನ್ನ ಅರ್ಥ ಮಾಡಿಕೊಂಡಿದೆ. ನಾವು ಅಸಹಾಯಕಲ್ಲ. ಸರ್ಕಾರ ಅಸಹಾಯಕವಾಗಿ ಕೆಲಸ ಮಾಡಿಲ್ಲ ಎಂದರು.

    ಹಿಜಬ್, ಹುಬ್ಬಳ್ಳಿ, ಏಉ,ಆಉ ಹಳ್ಳಿ ಗಲಭೆ, ಹರ್ಷ ಕೊಲೆ ಎಲ್ಲ ನಿಭಾಯಿಸಿದ್ದೇವೆ. ಕಾಂಗ್ರೆಸ್ ಇದ್ದಾಗ ವಿಶ್ವನಾಥ್ ಕೊಲೆ ಆಯ್ತು. ವೀಕ್ ಸೆಕ್ಷನ್ ಹಾಕಿದ್ರು. ಅಮೇಲೆ ಅವರು ಹೊರಗೆ ಬಂದ್ರು. ನಾವು ಹಾಗೆ ಮಾಡ್ತಿಲ್ಲ. ಈIಖ ಹಾಕಿದ್ದೇವೆ ತನಿಖೆ ಮಾಡ್ತಿದ್ದೇವೆ. ಈ ಕೇಸ್ ನಲ್ಲೂ ಅದೇ ರೀತಿ ತನಿಖೆ ಮಾಡ್ತೀವಿ. ಎಲ್ಲರೂ ಸಹಕಾರ ಕೊಡಬೇಕು. ಮತಾಂಧ ಶಕ್ತಿಗಳು ಈ ಕೃತ್ಯ ಮಾಡಿದೆ. ಈ ಆಂಗಲ್ ನಲ್ಲೂ ತನಿಖೆ ಆಗಿದೆ ಎಂದು ಹೇಳಿದರು.

    Live Tv
    [brid partner=56869869 player=32851 video=960834 autoplay=true]

  • ಪ್ರತಿ ಜಿಲ್ಲೆಯ ಯುವ ಮೋರ್ಚಾ ಕಾರ್ಯಕರ್ತರಿಂದ ಪ್ರವೀಣ್ ಕುಟುಂಬಕ್ಕೆ ಸಹಾಯ: ತೇಜಸ್ವಿ ಸೂರ್ಯ

    ಪ್ರತಿ ಜಿಲ್ಲೆಯ ಯುವ ಮೋರ್ಚಾ ಕಾರ್ಯಕರ್ತರಿಂದ ಪ್ರವೀಣ್ ಕುಟುಂಬಕ್ಕೆ ಸಹಾಯ: ತೇಜಸ್ವಿ ಸೂರ್ಯ

    ನವದೆಹಲಿ: ಪ್ರತಿ ಜಿಲ್ಲೆಯಿಂದ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಪ್ರವೀಣ್ ಕುಟುಂಬಕ್ಕೆ ಸಹಾಯ ಮಾಡಲಿದೆ ಎಂದು ಸಂಸದ ತೇಜಸ್ವಿ ಸೂರ್ಯ ಭರವಸೆ ನೀಡಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆ ಬಿಜೆಪಿ ಯುವ ಮೋರ್ಚಾದ ಸದಸ್ಯ ಪ್ರವೀಣ್ ಹತ್ಯೆಯಾಗಿದೆ. ಇಡೀ ರಾಜ್ಯದಲ್ಲಿ ಬೇಸರ, ದುಃಖ, ಅಸಹಾಯಕತೆ, ಆಕ್ರೋಶದ ಭಾವನೆ ಮೂಡಿಸಿದೆ. ಪ್ರವೀಣ್ ಒಂಬತ್ತು ತಿಂಗಳ ಮಗುವಿನ ತಂದೆಯಾಗಿದ್ದರು. ಯಾವುದೇ ತಪ್ಪಿಲ್ಲದಿದ್ದರೂ ದುಷ್ಕರ್ಮಿಗಳು ಹತ್ಯೆಯನ್ನು ಮಾಡಿದ್ದಾರೆ. ಬಿಜೆಪಿ ಕಾರ್ಯಕರ್ತ ಎನ್ನುವ ಕಾರಣಕ್ಕೆ ಹತ್ಯೆ ಮಾಡಲಾಗಿದೆ. ಈ ಆಘಾತ ಸಹಿಸಲು ಕುಟುಂಬಕ್ಕೆ ಶಕ್ತಿ ಕೊಡಲಿ. ನಮ್ಮ ಪ್ರತಿಯೊಬ್ಬ ಕಾರ್ಯಕರ್ತ ಅವರ ಜೊತೆಗಿದ್ದಾರೆ ಎಂದರು.

    ಪ್ರತಿ ಜಿಲ್ಲೆಯಿಂದ ಯುವ ಮೋರ್ಚಾ ಕಾರ್ಯಕರ್ತರು ಪ್ರವೀಣ್ ಕುಟುಂಬಕ್ಕೆ ಸಹಾಯ ಮಾಡಲಿದೆ. ಮಂಗಳೂರಿಗೆ ತೆರಳಿ ಆರ್ಥಿಕ ಸಹಾಯ ಮಾಡಲಿದ್ದೇವೆ. ಜೊತೆಗೆ ಹಿರಿಯ ನಾಯಕರ ಜೊತೆಗೆ ಮಾತನಾಡಿದ್ದೇವೆ. ಈ ಸರಣಿ ಹತ್ಯೆ ಹಿಂದಿರುವ ಗುಂಪು ಪತ್ತೆ ಹಚ್ಚಲು ಸರ್ಕಾರದ ಮೇಲೆ ಒತ್ತಡ ಹಾಕುತ್ತಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ಪ್ರವೀಣ್ ಹತ್ಯೆ ಪ್ರಕರಣ- NIA ತನಿಖೆಗೆ ವಹಿಸುವಂತೆ ಅಮಿತ್ ಶಾಗೆ ಪತ್ರ ಬರೆದ ಶೋಭಾ ಕರಂದ್ಲಾಜೆ

    ಘಟನೆ ಸಂಬಂಧಿಸಿ ಬಿಜೆಪಿ ಕಾರ್ಯಕರ್ತರು ರಾಜೀನಾಮೆ ನೀಡುತ್ತಿರುವುದಕ್ಕೆ ಪ್ರತಿಕ್ರಿಯಿಸಿ, ಸಿದ್ದರಾಮಯ್ಯ, ಜಮೀರ್‌ರಂತಹ ರಾಜಕಾರಣಿಗಳು ಯಾವ ರೀತಿ ಕುಮ್ಮಕ್ಕು ನೀಡಲಾಗುತ್ತಿದೆ ಹಿಂದೂಗಳು ಗಮನಿಸಬೇಕು. ಯಾರ ಮೇಲೆ ಹಿಂದೆ ಹತ್ಯೆಯ ಕೇಸಿತ್ತೋ ಅವರ ಮೇಲಿನ ಎಫ್‍ಐಆರ್ ರದ್ದು ಮಾಡಲಾಗಿತ್ತು. ರಾಜಸ್ಥಾನದಲ್ಲೂ ಕನ್ಹಯ್ಯ ಲಾಲ್ ಹತ್ಯೆ ಮಾಡಲಾಯಿತು. ಈ ರೀತಿ ಆಗುತ್ತಾ ಹೋದರೆ ಸಾಮಾನ್ಯ ಜನರಿಗೂ ಭದ್ರತೆ ನೀಡಲು ಸಾಧ್ಯವಾ. ಇದು ಮತಾಂಧತೆ ಮತ್ತು ಸಿದ್ಧಾಂತದ ಸಮಸ್ಯೆ ಎಂದು ಕಿಡಿಕಾರಿದರು.

    ಹಿಂದೂಗಳ ಹತ್ಯೆಯನ್ನು ಕಾಂಗ್ರೆಸ್ ರಾಜಕೀಯ ಪ್ರಯೋಗ ಮಾಡುತ್ತಿದೆ. ವ್ಯಕ್ತಿಯ ಹತ್ಯೆ ಎನ್ನುವುದು ರಾಜಕೀಯ ಪ್ರಯೋಗನಾ ಎಂದು ಪ್ರಶ್ನಿಸಿದ ಅವರು, ಬಿಜೆಪಿ ಈ ರೀತಿಯ ಪ್ರಯೋಗ ಮಾಡಲ್ಲ. ಕಾರ್ಯಕರ್ತರ ಆಕ್ರೋಶ ಪಕ್ಷದ ಮೇಲೆ ಅಲ್ಲ. ಹಿಂದೂ ಸಮಾಜ ಹೋಗುತ್ತಿರುವ ದಿಕ್ಕು ನೋಡಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ನಾನು ಎಲ್ಲರಿಗೂ ಮನವಿ ಮಾಡುತ್ತೇನೆ, ಯಾರು ರಾಜೀನಾಮೆ ನೀಡಬಾರದು ಎಂದರು. ಇದನ್ನೂ ಓದಿ: ಪ್ರವೀಣ್ ಹತ್ಯೆ ಪ್ರಕರಣ – ತನಿಖೆಗೆ 6 ತಂಡ ರಚನೆ, 15 ಜನ ವಶಕ್ಕೆ: ಎಡಿಜಿಪಿ

    Live Tv
    [brid partner=56869869 player=32851 video=960834 autoplay=true]

  • ಜನರು ನಿಮ್ಮ ಮೇಲೆ ಇಟ್ಟಿರುವ ಗೌರವವನ್ನು ಉಳಿಸಿಕೊಳ್ಳಿ: ಸರ್ಕಾರಕ್ಕೆ ಪೇಜಾವರ ಶ್ರೀ ಎಚ್ಚರಿಕೆ

    ಜನರು ನಿಮ್ಮ ಮೇಲೆ ಇಟ್ಟಿರುವ ಗೌರವವನ್ನು ಉಳಿಸಿಕೊಳ್ಳಿ: ಸರ್ಕಾರಕ್ಕೆ ಪೇಜಾವರ ಶ್ರೀ ಎಚ್ಚರಿಕೆ

    ಉಡುಪಿ: ಜನರು ನಿಮ್ಮ ಮೇಲೆ ಇಟ್ಟಿರುವ ಗೌರವವನ್ನು ಉಳಿಸಿಕೊಳ್ಳಿ ಎಂದು ಹೇಳುವ ಮೂಲಕ ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನತೀರ್ಥರು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಂತಹ ಪ್ರವೀಣ್‍ನನ್ನು ಕೊಲೆ ಮಾಡಿರುವುದು ಖಂಡನೀಯವಾಗಿದೆ. ಇದನ್ನು ಉಗ್ರವಾದ ಮಾತುಗಳಿಂದ ನಾವು ಖಂಡಿಸುತ್ತೇವೆ. ಈ ನೋವನ್ನು ಭರಿಸುವ ಶಕ್ತಿ ದೇವರು ಅವರ ಕುಟುಂಬಕ್ಕೆ ನೀಡಲಿ ಎಂದು ಕೃಷ್ಣನಲ್ಲಿ ಪ್ರಾರ್ಥಿಸುತ್ತೇವೆ ಎಂದರು.

    ಇತ್ತೀಚೆಗೆ ಈ ತರಹದ ಕೊಲೆಗಳು ಹೆಚ್ಚಾಗಿ ರಾಜ್ಯದಲ್ಲಿ ನಡೆಯುತ್ತಿವೆ. ಇದರಿಂದಾಗಿ ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ. ಜನರು ಧಂಗೆ ಏಳುವ ಮೊದಲೇ ಸರ್ಕಾರ ಎಚ್ಚೆತ್ತುಕೊಳ್ಳಬೇಕು. ಜೊತೆಗೆ ಸರ್ಕಾರದ ಮೇಲೆ ಜನ ವಿಶ್ವಾಸ ಕಳೆದುಕೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಬೇಕು. ಸರ್ಕಾರವು ಘಟನೆಗೆ ಸಂಬಂಧಿಸಿದಂತೆ ತೀವ್ರವಾಗಿರುವ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಪತಿಯ ಕಾರ್ಯ ಮುಗಿಯುವುದರೊಳಗೆ ಆರೋಪಿಗಳಿಗೆ ಶಿಕ್ಷೆ ಆಗ್ಬೇಕು: ಪ್ರವೀಣ್ ಪತ್ನಿ ನೂತನಾ

    ಇತ್ತೀಚಿನ ದಿನಗಳಲ್ಲಿ ಸಾಲು ಸಾಲು ಹಿಂದೂ ಯುವಕರ ಕೊಲೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಯುವಕರ ಸಹನೆ ಕಟ್ಟೆ ಒಡೆಯುವುದು ಸಹಜವಾಗಿದ್ದು, ಕಾರ್ಯಕರ್ತರು ತಮ್ಮ ಸಂಯಮ ಕಳೆದುಕೊಳ್ಳಬಾರದು. ಕಾನೂನನ್ನು ಕೈಗೆತ್ತಿಕೊಳ್ಳದೇ ಒಗ್ಗಟ್ಟಿನಿಂದ ಕಾನೂನಿನ ರೀತಿಯಲ್ಲಿ ಹೋರಾಟ ಮಾಡಬೇಕು. ನಿಮ್ಮೆಲ್ಲರ ನೋವಿನ ಜೊತೆಯಲ್ಲಿ ನಾವು ಇದ್ದೇವೆ. ಸಂವಿಧಾನದ ಮೇಲಿರುವ ಗೌರವವನ್ನು ನಾವು ಉಳಿಸಿಕೊಳ್ಳೋಣ ಎಂದು ಮನವಿ ಮಾಡಿದರು. ಇದನ್ನೂ ಓದಿ: ಪ್ರವೀಣ್ ಹತ್ಯೆ ಪ್ರಕರಣ – ತನಿಖೆಗೆ 6 ತಂಡ ರಚನೆ, 15 ಜನ ವಶಕ್ಕೆ: ಎಡಿಜಿಪಿ

    Live Tv
    [brid partner=56869869 player=32851 video=960834 autoplay=true]

  • ಪ್ರವೀಣ್ ಹತ್ಯೆ ಪ್ರಕರಣ- NIA ತನಿಖೆಗೆ ವಹಿಸುವಂತೆ ಅಮಿತ್ ಶಾಗೆ ಪತ್ರ ಬರೆದ ಶೋಭಾ ಕರಂದ್ಲಾಜೆ

    ಪ್ರವೀಣ್ ಹತ್ಯೆ ಪ್ರಕರಣ- NIA ತನಿಖೆಗೆ ವಹಿಸುವಂತೆ ಅಮಿತ್ ಶಾಗೆ ಪತ್ರ ಬರೆದ ಶೋಭಾ ಕರಂದ್ಲಾಜೆ

    ನವದೆಹಲಿ: ಪ್ರವೀಣ್ ನೆಟ್ಟಾರು ಅವರ ಹತ್ಯೆಯ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸುವಂತೆ ಕೋರಿ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದಾರೆ.

    ನಿನ್ನೆ ಕೆಲ ದುಷ್ಕರ್ಮಿಗಳು ಬಿಜೆಪಿ ಮುಖಂಡ ಪ್ರವೀಣ್ ಅವರನ್ನು ರಾತ್ರಿ ವೇಳೆ ಹತ್ಯೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರೆಲ್ಲರೂ ರಾಜೀನಾಮೆ ನೀಡಿ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪತ್ರ ಬರೆದ ಅವರು ಬಿಜೆಪಿ ನಾಯಕ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳಕ್ಕೆ (ಎನ್‍ಐಎ) ವಹಿಸುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಪತಿಯ ಕಾರ್ಯ ಮುಗಿಯುವುದರೊಳಗೆ ಆರೋಪಿಗಳಿಗೆ ಶಿಕ್ಷೆ ಆಗ್ಬೇಕು: ಪ್ರವೀಣ್ ಪತ್ನಿ ನೂತನಾ

    Amith

    ಘಟನೆ ಏನು?: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆ ಸಮೀಪದ ಪೆರುವಾಜೆ ಕ್ರಾಸ್ ಬಳಿ ಅಕ್ಷಯ್ ಹೆಸರಿನ ಕೋಳಿ ಮಾಂಸದ ಅಂಗಡಿ ಹೊಂದಿದ್ದ ಬಿಜೆಪಿ ಯುವ ಮೋರ್ಚಾ ಸದಸ್ಯ ಪ್ರವೀಣ್ ಕುಮಾರ್ ನೆಟ್ಟಾರು (31), ಮಂಗಳವಾರ ರಾತ್ರಿ 8 ಗಂಟೆ ಸುಮಾರಿಗೆ ಅಂಗಡಿ ಮುಚ್ಚಿ ಮನೆ ಕಡೆ ಹೊರಟಿದ್ದರು. ಈ ವೇಳೆ ಬೈಕಿನಲ್ಲಿ ಬಂದಿದ್ದ ಮೂವರು ತಲ್ವಾರ್‍ನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ತಕ್ಷಣವೇ ಪುತ್ತೂರು ಆಸ್ಪತ್ರೆಗೆ ದಾಖಲಿಸಿದರೂ ಕುತ್ತಿಗೆಯ ಭಾಗಕ್ಕೆ ತೀವ್ರ ಏಟು ಬಿದ್ದಿದ್ದ ಕಾರಣ ಪ್ರವೀಣ್ ಮೃತಪಟ್ಟಿದ್ದರು. ಇದನ್ನೂ ಓದಿ: ಪ್ರವೀಣ್ ಹತ್ಯೆ ಪ್ರಕರಣ – ತನಿಖೆಗೆ 6 ತಂಡ ರಚನೆ, 15 ಜನ ವಶಕ್ಕೆ: ಎಡಿಜಿಪಿ

    Live Tv
    [brid partner=56869869 player=32851 video=960834 autoplay=true]

  • ಪತಿಯ ಕಾರ್ಯ ಮುಗಿಯುವುದರೊಳಗೆ ಆರೋಪಿಗಳಿಗೆ ಶಿಕ್ಷೆ ಆಗ್ಬೇಕು: ಪ್ರವೀಣ್ ಪತ್ನಿ ನೂತನಾ

    ಪತಿಯ ಕಾರ್ಯ ಮುಗಿಯುವುದರೊಳಗೆ ಆರೋಪಿಗಳಿಗೆ ಶಿಕ್ಷೆ ಆಗ್ಬೇಕು: ಪ್ರವೀಣ್ ಪತ್ನಿ ನೂತನಾ

    ಮಂಗಳೂರು: ನನ್ನ ಪತಿಯ ಕಾರ್ಯ ಮುಗಿಯುವ ಮುಂಚೆಯೇ ಹತ್ಯೆ ಮಾಡಿದ ಆರೋಪಿಗಳಿಗೆ ಶಿಕ್ಷೆ ಆಗಬೇಕು ಎಂದು ಪ್ರವೀಣ್ ನೆಟ್ಟಾರು ಪತ್ನಿ ನೂತನಾ ಒತ್ತಾಯಿಸಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಪತಿ ತುಂಬಾ ಒಳ್ಳೆಯವರು. ಸಣ್ಣಪುಟ್ಟ ಕೋಪ ತಾಪಗಳಿತ್ತು. ಆದರೆ ಅವರಿಗೆ ಯಾರ ಮೇಲೂ ದ್ವೇಷವಿರಲಿಲ್ಲ. ಆದರೂ ಅವರನ್ನು ಹತ್ಯೆ ಮಾಡಲಾಗಿದೆ. ಅವರಿಗೆ ಆದ ರೀತಿ ಮತ್ಯಾರಿಗೂ ಆಗಬಾರದು. ಅದಕ್ಕೆ ಬೇಕಾದ ಶಿಕ್ಷೆಯನ್ನು ಕಾನೂನಿನ ಮೂಲಕ ಆಗಬೇಕು. ನನ್ನ ಪತಿಯ ಕಾರ್ಯ ಮುಗಿಯುವುದರೊಳಗೆ ಘಟನೆಗೆ ಸಂಬಂಧಿಸಿ ಕಾನೂನಿನಲ್ಲಿ ಯಾವ ಶಿಕ್ಷೆ ಇದೆಯೋ ಅದು ಆಗಬೇಕು ಎಂದರು.

    ನನ್ನ ಗಂಡ ಯಾರಿಗೂ ಕೇಡು ಬಯಸುವವರಲ್ಲ. ಎಲ್ಲಾ ವರ್ಗದ ಜನರ ಸಮಸ್ಯೆಗೆ ಸ್ಪಂದಿಸುತ್ತಿದ್ದರು. ಯಾರಾದರೂ ಸಮಸ್ಯೆಯಿದೆ ಎಂದರೆ ರಾತ್ರಿಯಾದರೂ ಹೋಗುತ್ತಿದ್ದರು. ನನ್ನ ಗಂಡ ಕೊಲೆ ಮಾಡುವಷ್ಟು ಯಾವ ತಪ್ಪು ಮಾಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರ್ ಪಂಚಭೂತಗಳಲ್ಲಿ ಲೀನ

    ನನ್ನ ಮದುವೆಗೂ ಮುಂಚೆಯೂ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದರು. ಪಕ್ಷದಲ್ಲಿಯೂ ಅವರು ಅನ್ಯೋನ್ಯತೆಯಿಂದ ಇದ್ದರು. ಕೊಲೆ ಮಾಡುವಷ್ಟು ಪಕ್ಷದಲ್ಲಿ ಯಾರೊಂದಿಗೂ ಜಗಳ ಮಾಡಿಕೊಂಡಿಲ್ಲ. ಮೊನ್ನೆ ನಡೆದ ಮುಸ್ಲಿಂ ಹತ್ಯೆಗೂ ಇವರಿಗೂ ಯಾವುದೇ ಸಂಬಂಧವಿಲ್ಲ. ಅವರು ಪರಿಚಯನೂ ಇಲ್ಲ. ಅವರಿಗೆ ಇವರಿಗೆ ಯಾವುದೇ ಒಡನಾಟವೂ ಇರಲಿಲ್ಲ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳದಿದ್ರೆ ರಾಜೀನಾಮೆ: ರೇಣುಕಾಚಾರ್ಯ

    Live Tv
    [brid partner=56869869 player=32851 video=960834 autoplay=true]

  • ಹತ್ಯೆಯ ದಿನವೇ ಮುಸ್ಲಿಂ ಸ್ನೇಹಿತನ ಗೃಹಪ್ರವೇಶಕ್ಕೆ ಹೋಗಿದ್ದ ಪ್ರವೀಣ್ ನೆಟ್ಟಾರ್!

    ಹತ್ಯೆಯ ದಿನವೇ ಮುಸ್ಲಿಂ ಸ್ನೇಹಿತನ ಗೃಹಪ್ರವೇಶಕ್ಕೆ ಹೋಗಿದ್ದ ಪ್ರವೀಣ್ ನೆಟ್ಟಾರ್!

    ಮಂಗಳೂರು: ಹತ್ಯೆಯ ದಿನವೇ ಮುಸ್ಲಿಂ ಸ್ನೇಹಿತನೊಬ್ಬನ ಗೃಹ ಪ್ರವೇಶಕಾರ್ಯಕ್ರಮಕ್ಕೆ ಪ್ರವೀಣ್ ಕುಮಾರ್ ನೆಟ್ಟಾರ್ ಹೋಗಿದ್ದರು.

    ಹೌದು. ನಿನ್ನೆ ಸ್ನೇಹಿತ ಆರೀಫ್ ಬೆಳ್ಳಾರೆಯ ಗೃಹಪ್ರವೇಶ ಕಾರ್ಯಕ್ರಮವಿತ್ತು. ಹೀಗಾಗಿ ಪ್ರವೀಣ್ ಅವರು ನಿನ್ನೆ ಮಧ್ಯಾಹ್ನ ಕಾರ್ಯದಲ್ಲಿ ಪಾಲ್ಗೊಂಡು ಮುಸ್ಲಿಂ ಸ್ನೇಹತರೊಂದಿಗೆ ಬೆರೆತಿದ್ದರು. ಮುಸ್ಲಿಂ ಮಿತ್ರನ ಭೇಟಿಯನ್ನು ಪ್ರವೀಣ್ ಅವರು ತಮ್ಮ ವಾಸ್ಟಪ್ ಸ್ಟೇಟಸ್‍ನಲ್ಲಿ ಹಾಕಿಕೊಂಡಿದ್ದರು. ಇದೀಗ ಎಲ್ಲರೊಂದಿಗೆ ಒಡನಾಟದಿಂದ ಇದ್ದ ಪ್ರವೀಣ್‍ನನ್ನು ಮತಾಂಧರ ಹತ್ಯೆ ಆಗಿರೋ ಶಂಕೆ ವ್ಯಕ್ತವಾಗುತ್ತಿದೆ.

    ಘಟನೆ ಏನು?: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆ ಸಮೀಪದ ಪೆರುವಾಜೆ ಕ್ರಾಸ್ ಬಳಿ ಅಕ್ಷಯ್ ಹೆಸರಿನ ಕೋಳಿ ಮಾಂಸದ ಅಂಗಡಿ ಹೊಂದಿದ್ದ ಬಿಜೆಪಿ ಯುವ ಮೋರ್ಚಾ ಸದಸ್ಯ ಪ್ರವೀಣ್ ಕುಮಾರ್ ನೆಟ್ಟಾರು(31), ಮಂಗಳವಾರ ರಾತ್ರಿ 8 ಗಂಟೆ ಸುಮಾರಿಗೆ ಅಂಗಡಿ ಮುಚ್ಚಿ ಮನೆ ಕಡೆ ಹೊರಟಿದ್ದರು. ಈ ವೇಳೆ ಬೈಕಿನಲ್ಲಿ ಬಂದಿದ್ದ ಮೂವರು ತಲ್ವಾರ್‍ನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ತಕ್ಷಣವೇ ಪುತ್ತೂರು ಆಸ್ಪತ್ರೆಗೆ ದಾಖಲಿಸಿದರೂ ಕುತ್ತಿಗೆಯ ಭಾಗಕ್ಕೆ ತೀವ್ರ ಏಟು ಬಿದ್ದಿದ್ದ ಕಾರಣ ಪ್ರವೀಣ್ ಮೃತಪಟ್ಟಿದ್ದರು. ಇದನ್ನೂ ಓದಿ: ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳದಿದ್ರೆ ರಾಜೀನಾಮೆ: ರೇಣುಕಾಚಾರ್ಯ

    ಇಂದು ಪ್ರವೀಣ್ ಮೃತದೇಹವನ್ನು ಪುತ್ತೂರಿನಿಂದ ಮೆರವಣಿಗೆ ಮೂಲಕ ಅವರ ಸ್ವಗೃಹ ಕರೆದೊಯ್ಯಲಾಗಿದ್ದು, ಸಾರ್ವಜನಿಕರ ಅಂತಿಮ ದರ್ಶನದ ಬಳಿಕ ಬಿಲ್ಲವ ಸಂಪ್ರದಾಯದಂತೆ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಮಂತ್ರ ಪಠಣದ ಬಳಿಕ ಮನೆ ಸಮೀಪದಲ್ಲೇ ಪ್ರವೀಣ್ ಚಿತೆಗೆ ಮೂವರು ಮಾವಂದಿರಾದ ಶೀನಪ್ಪ ಪೂಜಾರಿ, ಲಿಂಗಪ್ಪ ಪೂಜಾರಿ ಹಾಗೂ ಲೋಕೇಶ್ ಪೂಜಾರಿ ಅಗ್ನಿ ಸ್ಪರ್ಶ ಮಾಡಿದ್ದಾರೆ.

    ಬಿಲ್ಲವ ಸಂಪ್ರದಾಯದಂತೆ ಪ್ರವೀಣ್ ನೆಟ್ಟಾರ್ ಅವರ ಅಂತ್ಯ ಸಂಸ್ಕಾರವನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಸಂಘಪರಿವಾರದ ಕಾರ್ಯಕರ್ತರು ಅಪಾರ ಸಂಖ್ಯೆ ನೆರೆದಿದ್ದರು. ಇತ್ತ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.

    Live Tv
    [brid partner=56869869 player=32851 video=960834 autoplay=true]

  • ಕೊಲೆಗೆ ಕೊಲೆ ಪ್ರತಿಕಾರವಲ್ಲ – ಸರ್ಕಾರ ಹೆಣದ ರಾಜಕೀಯ ಬಿಟ್ಟು ಕಾನೂನು ಸುವ್ಯವಸ್ಥೆ ಬಿಗಿಗೊಳಿಸಲಿ: ಕಾಂಗ್ರೆಸ್

    ಕೊಲೆಗೆ ಕೊಲೆ ಪ್ರತಿಕಾರವಲ್ಲ – ಸರ್ಕಾರ ಹೆಣದ ರಾಜಕೀಯ ಬಿಟ್ಟು ಕಾನೂನು ಸುವ್ಯವಸ್ಥೆ ಬಿಗಿಗೊಳಿಸಲಿ: ಕಾಂಗ್ರೆಸ್

    ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಸುಳ್ಯದ ಬೆಳ್ಳಾರೆಯಲ್ಲಿ ನಡೆದ ಪ್ರವೀಣ್ ನೆಟ್ಟಾರು ಎಂಬ ಯುವಕನ ಕೊಲೆ ಅತ್ಯಂತ ಹೇಯ ಕೃತ್ಯ. ಕೆಲ ದಿನಗಳ ಹಿಂದೆ ಸುಳ್ಯದಲ್ಲಿ ಅನ್ಯ ಧರ್ಮದ ಯುವಕನ ಕೊಲೆಯಾಗಿತ್ತು. ಆ ಕೊಲೆಗೆ ಪ್ರತಿಕಾರವಾಗಿ ಈ ಕೊಲೆ ನಡೆದ ಶಂಕೆಯಿದೆ. ಇದು ಖಂಡನೀಯ. ಕೊಲೆಗೆ ಕೊಲೆ ಪ್ರತಿಕಾರವಲ್ಲ. ಸರ್ಕಾರ ಹತ್ಯೆ ನಡೆಸಿದ ದುಷ್ಕರ್ಮಿಗಳ ಮಟ್ಟ ಹಾಕಲಿ ಎಂದು ಕಾಂಗ್ರೆಸ್ ಟ್ವೀಟ್ ಮೂಲಕ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.

    ಟ್ವೀಟ್‍ನಲ್ಲಿ ಏನಿದೆ?
    ಕರ್ನಾಟಕದಲ್ಲಿ ‘ಆಪರೇಷನ್ ಕಮಲ’ವೆಂಬ ಅನೈತಿಕ ಮಾರ್ಗದಲ್ಲಿ ಅಧಿಕಾರಕ್ಕೇರಿದ ಬಿಜೆಪಿ ಸರ್ಕಾರ ಮೊದಲ ದಿನದಿಂದಲೂ ಭ್ರಷ್ಟಾಚಾರದ ಜಾತ್ರೆಯನ್ನೇ ನಡೆಸಿಕೊಂಡು ಬಂದಿದೆ. ಸಿಎಂ ಬೊಮ್ಮಾಯಿ ಅವರ 40% ಸರ್ಕಾರದ ಒಂದು ವರ್ಷದ ಆಡಳಿತವು ಕರ್ನಾಟಕದ ‘ಭ್ರಷ್ಟಾಚಾರದ ಮಹಾಪರ್ವ’ ಎಂದೇ ಇತಿಹಾಸದಲ್ಲಿ ದಾಖಲಾಗಲಿದೆ. ದ.ಕನ್ನಡ ಜಿಲ್ಲೆ ಸುಳ್ಯದ ಬೆಳ್ಳಾರೆಯಲ್ಲಿ ನಡೆದ ಪ್ರವೀಣ್ ನೆಟ್ಟಾರು ಎಂಬ ಯುವಕನ ಕೊಲೆ ಅತ್ಯಂತ ಹೇಯ ಕೃತ್ಯ. ಕೆಲ ದಿನಗಳ ಹಿಂದೆ ಸುಳ್ಯದಲ್ಲಿ ಅನ್ಯ ಧರ್ಮದ ಯುವಕನ ಕೊಲೆಯಾಗಿತ್ತು. ಆ ಕೊಲೆಗೆ ಪ್ರತಿಕಾರವಾಗಿ ಈ ಕೊಲೆ ನಡೆದ ಶಂಕೆಯಿದೆ. ಇದು ಖಂಡನೀಯ. ಕೊಲೆಗೆ ಕೊಲೆ ಪ್ರತಿಕಾರವಲ್ಲ. ಸರ್ಕಾರ ಹತ್ಯೆ ನಡೆಸಿದ ದುಷ್ಕರ್ಮಿಗಳ ಮಟ್ಟ ಹಾಕಲಿ. ಇದನ್ನೂ ಓದಿ: ನಮ್ಮದೇ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡ್ತಿದ್ದೇವೆ: ಬಿಜೆಪಿ ಕಾರ್ಯಕರ್ತ ಚಂದ್ರಹಾಸ್

    ರಾಜ್ಯದಲ್ಲಿ ಧಾರ್ಮಿಕ ಹತ್ಯೆಗಳು ಪದೇ ಪದೇ ನಡೆಯುತ್ತಿವೆ. ಈ ಸರಣಿ ಕೊಲೆಗಳು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿರುವ ಸಂಕೇತ. ಕಾನೂನು ದುರ್ಬಲವಾದಾಗ ಮಾತ್ರ ಇಂತಹ ಭೀಕರ ಹತ್ಯೆಗಳು ನಡೆಯಲು ಸಾಧ್ಯ. ರಾಜ್ಯ ಸರ್ಕಾರ ಹೆಣದ ರಾಜಕೀಯ ಮಾಡುವುದನ್ನು ಬಿಟ್ಟು ಕಾನೂನು ಸುವ್ಯವಸ್ಥೆ ಬಿಗಿಗೊಳಿಸಲಿ. ಹತ್ಯೆ ಪರಂಪರೆ ಇಲ್ಲಿಗೆ ಕೊನೆಯಾಗಲಿ ಎಂದು ಟ್ವೀಟ್ ಮಾಡಿದೆ. ಇದನ್ನೂ ಓದಿ: ಪ್ರವೀಣ್ ನೆಟ್ಟಾರು ಹತ್ಯೆ – ಕರ್ನಾಟಕ ಕಾಂಗ್ರೆಸ್ SDPI, PFI ಗೆ ಪ್ರೋತ್ಸಾಹ ನೀಡುತ್ತಿದೆ: ಜೋಶಿ

    Live Tv
    [brid partner=56869869 player=32851 video=960834 autoplay=true]

  • ಹಿಂದೂ, ಬಿಜೆಪಿ ಕಾರ್ಯಕರ್ತರನ್ನು ಹೆದರಿಸುವ ಷಡ್ಯಂತ್ರ – ತನಿಖೆ ನಡೆಸಿ ಉಗ್ರ ಶಿಕ್ಷೆಯಾಗಬೇಕು: ಶೋಭಾ ಕರಂದ್ಲಾಜೆ

    ಹಿಂದೂ, ಬಿಜೆಪಿ ಕಾರ್ಯಕರ್ತರನ್ನು ಹೆದರಿಸುವ ಷಡ್ಯಂತ್ರ – ತನಿಖೆ ನಡೆಸಿ ಉಗ್ರ ಶಿಕ್ಷೆಯಾಗಬೇಕು: ಶೋಭಾ ಕರಂದ್ಲಾಜೆ

    – ಪೂರ್ವ ನಿಯೋಜಿತ ಕೃತ್ಯ
    – ಪ್ರವೀಣ್ ಕೊಲೆ ಹಿಂದೆ ಭಾರಿ ಷಡ್ಯಂತ್ರ

    ನವದೆಹಲಿ: ಬಿಜೆಪಿ ಯುವ ಮೋರ್ಚಾ ಸದಸ್ಯ ಪ್ರವೀಣ್ ಕುಮಾರ್ ನೆಟ್ಟಾರು ಹತ್ಯೆ ಹಿಂದೂ ಮತ್ತು ಬಿಜೆಪಿ ಕಾರ್ಯಕರ್ತರನ್ನು ಹೆದರಿಸುವ ಉದ್ದೇಶವಾಗಿದೆ. ಇದರ ಹಿಂದೆ ದೊಡ್ಡ ಷಡ್ಯಂತ್ರ ಇದೆ. ಈ ಬಗ್ಗೆ ತನಿಖೆ ಆಗಬೇಕು, ಉಗ್ರ ಶಿಕ್ಷೆಯಾಗಬೇಕು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆಗ್ರಹಿಸಿದ್ದಾರೆ.

    ನವದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಂಘ ಪರಿವಾರದ ಪ್ರಮಾಣಿಕ ಕಾರ್ಯಕರ್ತ. ಕೋಳಿ ಅಂಗಡಿ ಇಟ್ಟುಕೊಂಡು ಕೆಲಸ ಮಾಡುತ್ತಿದ್ದ ಪ್ರವೀಣ್‍ನನ್ನು ಕೊಲೆ ಮಾಡಿದ್ದಾರೆ. ಮಸೂದ್ ಹತ್ಯೆಗೆ ಹೊಂದಾಣಿಕೆ ಮಾಡುತ್ತಿದ್ದಾರೆ. ಮಸೂದ್, ಪ್ರವೀಣ್‍ಗೆ ಗೊತ್ತಿರಲಿಲ್ಲ. ಮಸೂದ್ ಹತ್ಯೆ ಮಾಡಿದವರು ವೈಯಕ್ತಿಕ ಜಗಳ ಮಾಡಿಕೊಂಡಿದ್ದರು. ಪಾನಮತ್ತರಾಗಿದ್ದರು. ಹಾಗಾಗಿ ಹತ್ಯೆ ನಡೆದಿತ್ತು. ಆದರೆ ಪ್ರವೀಣ್ ಪ್ರಕರಣ ಭಿನ್ನವಾಗಿದೆ. ಬೈಕ್ ಮೇಲೆ ಬಂದು ಅವರ ಮೇಲೆ ದಾಳಿ ಮಾಡಿದ್ದಾರೆ. ತಲವಾರ್‌ನಿಂದ ಕುತ್ತಿಗೆ ಮತ್ತು ತಲೆಗೆ ಹೊಡೆಯಲಾಗಿದೆ ಎಂದಿದ್ದಾರೆ. ಇದನ್ನೂ ಓದಿ: ಮೋದಿ, ಯೋಗಿ ಮಾದರಿಯಲ್ಲಿ ಇವರಿಗೆ ಗಟ್ಸ್ ಇಲ್ಲ: ಪ್ರವೀಣ್ ಹತ್ಯೆಗೆ ಮುತಾಲಿಕ್ ಕಿಡಿ

    ಕೊಲೆ ನಡೆದ ಪ್ರದೇಶ ಕೇರಳ ಗಡಿ ಭಾಗ. ಗ್ರಾಮೀಣ ಪ್ರದೇಶ ಆಗಿರುವುದರಿಂದ ಸಿಸಿಟಿವಿ ಇರಲ್ಲ. ಅದಾಗ್ಯೂ ಇದರ ಹಿಂದೆ ಇರುವ ಎಲ್ಲರನ್ನು ಬಂಧಿಸಬೇಕು. ಸ್ಥಳೀಯರ ಕುಮ್ಮಕ್ಕು ಇರುವ ಸಾಧ್ಯತೆಗಳಿದೆ. ಯಾವ ಸಂಘಟನೆ ಕೆಲಸ ಮಾಡಿದೆ ಎಂಬುದನ್ನು ಪತ್ತೆ ಹಚ್ಚಬೇಕು. ಇಂದು ಅಮಿತ್ ಶಾ ಅವರನ್ನು ಭೇಟಿ ಮಾಡಿ ಚರ್ಚೆ ಮಾಡುತ್ತೇನೆ. ಎನ್‍ಐಎ ತನಿಖೆ ವಹಿಸಲು ಮನವಿ ಮಾಡುತ್ತೇನೆ. ರಾಷ್ಟ್ರೀಯ ಭದ್ರತೆಗೆ ಸವಾಲಾಗಿರುವವರನ್ನು ಪತ್ತೆ ಹಚ್ಚಬೇಕು ಈ ಬಗ್ಗೆ ಕ್ರಮ ವಹಿಸುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಊರಿನ ಯಾರ ಮನೆಯಲ್ಲಿ ಸಮಸ್ಯೆ ಇದ್ರೂ ಸ್ಪಂದಿಸ್ತಿದ್ದ: ಪ್ರವೀಣ್ ಮಾವ ಕಣ್ಣೀರು

    ಬೇರೆ ಯಾವುದೇ ಪ್ರಶ್ನೆಗಳ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ. ನಾವು ಅಪರಾಧಿಗಳನ್ನು ಪತ್ತೆ ಹಚ್ಚಬೇಕು. ಅಮಾಯಕರನ್ನು ಹತ್ಯೆ ಮಾಡಲಾಗಿದೆ. ಸಂಘಟನೆಯ ಹುಡುಗ, ಕಳೆದ ಬಾರಿ ಸುಳ್ಯಕ್ಕೆ ಭೇಟಿ ನೀಡಿದಾದ ಭೇಟಿಯಾಗಿದ್ದ. ಕಳೆದ ರಕ್ಷ ಬಂಧನದ ವೇಳೆ ಭೇಟಿ ಮಾಡಿದ್ದ. ವೈಯಕ್ತಿಕವಾಗಿ ತುಂಬಾ ಗೊತ್ತಿರುವ ವ್ಯಕ್ತಿ. ವಿವಾದಗಳಲ್ಲಿ ಸಿಲುಕಿಕೊಳ್ಳದೆ ಇದ್ದಾತ. ಯಾವುದೇ ಗಲಭೆಗಳಲ್ಲಿ ಭಾಗಿಯಾಗುತ್ತಿರಲ್ಲ. ಚುನಾವಣೆ ಸಂದರ್ಭದಲ್ಲಿ ಪಕ್ಷ ಕೊಟ್ಟ ಕೆಲಸ ಮಾಡುತ್ತಿದ್ದ ಎಂದು ಪ್ರವೀಣ್ ಕುರಿತಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]