ಮಂಗಳೂರು: ಬಿಜೆಪಿ ಯುವ ಮೋರ್ಚಾ ಸದಸ್ಯ ಪ್ರವೀಣ್ ಕುಮಾರ್ ನೆಟ್ಟಾರು ಹತ್ಯೆ ಪ್ರಕರಣವನ್ನು ಎನ್‌ಐಎ ತಂಡ ದೆಹಲಿ ಕಚೇರಿಯಲ್ಲಿ ಎಫ್‌ಐಆರ್ ದಾಖಲಿಸಿ ಅಧಿಕೃತವಾಗಿ ತನಿಖೆ ಆರಂಭಿಸಿದೆ.
ಈಗಾಗಲೇ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಪೊಲೀಸರು ಬಂಧಿಸಿದ ಆರೋಪಿಗಳು ಸೇರಿ ನಾಪತ್ತೆಯಾದವರ ಮೇಲೂ ಎನ್‌ಐಎ ತಂಡ ಎಫ್‌ಐಆರ್ ದಾಖಲಿಸಿದೆ. ಜೊತೆಗೆ ಈ ಎಫ್‌ಐಆರ್ ಪ್ರತಿಯನ್ನು ಕೋರ್ಟ್‌ಗೆ ಸಲ್ಲಿಸಿದ್ದು, ಐಪಿಸಿ 302, 34 ಸೇರಿ ಹಲವು ಕಲಂಗಳ ಅಡಿಯಲ್ಲಿ ಎಫ್ಐಆರ್ ದಾಖಲಾಗಿದೆ.
ಪ್ರವೀಣ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಎನ್‌ಐಎ ತಂಡ ತನಿಖೆಯನ್ನು ಪ್ರಾರಂಭಿಸಿದ್ದು, ಈಗಾಗಲೇ ಸುಳ್ಯ, ಪುತ್ತೂರಿನಲ್ಲಿ ಬೀಡು ಬಿಟ್ಟಿದೆ. ಅಷ್ಟೇ ಅಲ್ಲದೇ ತನಿಖೆಯನ್ನು ಚುರುಕುಗೊಳಿಸಿದ್ದು, ನಾಪತ್ತೆಯಾಗಿರುವ ಆರೋಪಿಗಳಿಗೆ ಶೋಧ ಕಾಯವನ್ನು ಆರಂಭಿಸಿದೆ. ಬೆಳ್ಳಾರೆ ಪೊಲೀಸರಿಂದ ಕೇಸ್ ಫೈಲ್ ಪಡೆದು ತನಿಖೆ ಆರಂಭಿಸಿರುವ ಎನ್‌ಐಎ ತಂಡ ಕುಟುಂಬದವರ ಹೇಳಿಕೆ, ದೂರುದಾರನ ಹೇಳಿಕೆಗಳು ಹಾಗೂ ಪೊಲೀಸರು ಸಂಗ್ರಹಿಸಿದ ಸಿಸಿಟಿವಿಗಳನ್ನು ಪರಿಶೀಲಿಸಿದೆ. ಪ್ರವೀಣ್ ನೆಟ್ಟಾರು ಹತ್ಯೆ ಸಂಬಂಧ ಕೂಲಂಕುಷವಾಗಿ ಮಾಹಿತಿ ಕಲೆ ಹಾಕಿದ್ದು, ಬಂಧಿತ ಆರೋಪಿಗಳನ್ನ ವಿಚಾರಣೆ ನಡೆಸುತ್ತಿದೆ. ಇದನ್ನೂ ಓದಿ: ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ- ಅಧಿಕೃತ ಆದೇಶಕ್ಕೆ ಮೊದ್ಲೇ NIA ತನಿಖೆ
ನಿನ್ನೆ ಬಿಜೆಪಿ ಯುವ ಮೋರ್ಚಾ ಸದಸ್ಯ ಪ್ರವೀಣ್ ಕುಮಾರ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಿಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಸುಳ್ಯದ ನಾವೂರ್ ನಿವಾಸಿ ಅಬಿದ್ (22), ಬೆಳ್ಳಾರೆಯ ಗೌರಿಹೊಳೆ ನಿವಾಸಿ ನೌಫಲ್(28) ಬಂಧಿತ ಆರೋಪಿಗಳಾಗಿದ್ದಾರೆ. ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಈವರೆಗೆ 6 ಆರೋಪಿಗಳನ್ನು ಬಂಧಿಸಲಾಗಿದೆ. ಇದನ್ನೂ ಓದಿ: BJP ಮುಖಂಡ ಪ್ರವೀಣ್ ಹತ್ಯೆ ಕೇಸ್ – ಮತ್ತಿಬ್ಬರು ಅರೆಸ್ಟ್
Live Tv
[brid partner=56869869 player=32851 video=960834 autoplay=true]
ಶಿವಮೊಗ್ಗ: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆಯ ಪ್ರವೀಣ್‍ಕುಮಾರ್ ನೆಟ್ಟಾರು ಅವರನ್ನು ಹತ್ಯೆ ಮಾಡಿದವರು ದಕ್ಷಿಣ ಕನ್ನಡ ಜಿಲ್ಲೆಯವರೇ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.
ಶಿವಮೊಗ್ಗದಲ್ಲಿ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅವರು, ಪ್ರವೀಣ್ ಹತ್ಯೆಯ ಹಂತಕರು ಸ್ಥಳೀಯರೇ ಆಗಿದ್ದಾರೆ. ಇವರ ಹಿನ್ನೆಲೆ ಏನು ಯಾವ ಸಂಘಟನೆಗೆ ಸೇರಿದವರು ಎನ್ನುವುದರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಅಷ್ಟೇ ಅಲ್ಲದೇ ಶೀಘ್ರದಲ್ಲೇ ಆರೋಪಿಗಳನ್ನು ಹಿಡಿದು ತರುವ ಪ್ರಯತ್ನದಲ್ಲಿದ್ದಾರೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಹೆಲ್ಮೆಟ್ ಧರಿಸದೇ ಬೈಕ್ ರ‍್ಯಾಲಿ ನಡೆಸಿದ್ದ ಬಿಜೆಪಿಗೆ ಸಂಸದನಿಗೆ ಬಿತ್ತು 20 ಸಾವಿರ ರೂ. ದಂಡ
ಏನಿದು ಘಟನೆ: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆ ಸಮೀಪದ ಪೆರುವಾಜೆ ಕ್ರಾಸ್ ಬಳಿ ಅಕ್ಷಯ್ ಹೆಸರಿನ ಕೋಳಿ ಮಾಂಸದ ಅಂಗಡಿ ಹೊಂದಿದ್ದ ಬಿಜೆಪಿ ಯುವ ಮೋರ್ಚಾ ಸದಸ್ಯ ಪ್ರವೀಣ್ ಕುಮಾರ್ ನೆಟ್ಟಾರು (31), ಜುಲೈ 26ರ ರಾತ್ರಿ 8 ಗಂಟೆಗೆ ಅಂಗಡಿ ಮುಚ್ಚಿ ಮನೆ ಕಡೆ ಹೊರಟಿದ್ದರು. ಈ ವೇಳೆ ಬೈಕಿನಲ್ಲಿ ಬಂದಿದ್ದ ಮೂವರು ತಲ್ವಾರ್‌ನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದರು. ತಕ್ಷಣವೇ ಪುತ್ತೂರು ಆಸ್ಪತ್ರೆಗೆ ದಾಖಲಿಸಿದರೂ ಕುತ್ತಿಗೆಯ ಭಾಗಕ್ಕೆ ತೀವ್ರ ಏಟು ಬಿದ್ದಿದ್ದ ಕಾರಣ ಪ್ರವೀಣ್ ಮೃತಪಟ್ಟಿದ್ದರು. ಇದನ್ನೂ ಓದಿ: ಮಲೇಷ್ಯಾಗೆ 18 ತೇಜಸ್ ವಿಮಾನ – ಅಮೆರಿಕ ಸೇರಿದಂತೆ 6 ರಾಷ್ಟ್ರಗಳಿಂದ ಖರೀದಿಗೆ ಆಸಕ್ತಿ
Live Tv
[brid partner=56869869 player=32851 video=960834 autoplay=true]
ನವದೆಹಲಿ: ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣವನ್ನು ಎನ್‍ಐಎಗೆ ಹಸ್ತಾಂತರಿಸಿದಕ್ಕಾಗಿ ಕೇಂದ್ರ ಕೃಷಿ ರಾಜ್ಯ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಅವರು ಗೃಹ ಸಚಿವ ಅಮಿತ್ ಶಾಗೆ ಅಭಿನಂದನೆ ಸಲ್ಲಿಸಿದ್ದಾರೆ.
ಇಂದು ದೆಹಲಿಯಲ್ಲಿ ಭೇಟಿ ಮಾಡಿದ ಅವರು ಹತ್ಯೆಯ ಬಗ್ಗೆ ತನಿಖೆ ತೀವ್ರಗೊಳ್ಳಬೇಕು ಎಂದು ಮನವಿ ಮಾಡಿದರು. ರಾಜ್ಯದಲ್ಲಿ ಹಿಂದೂ ಕಾರ್ಯಕರ್ತರ ಹತ್ಯೆ ಹೆಚ್ಚುತ್ತಿದೆ. ಎಲ್ಲ ಹತ್ಯೆಗಳು ಒಂದೇ ಮಾದರಿಯಲ್ಲಿದೆ. ನೆರೆಯ ಕೇರಳದಿಂದಲೂ ಹಂತಕರು ಬರುತ್ತಿರುವ ಅನುಮಾನಗಳಿವೆ. ಈ ಹಿನ್ನಲೆಯಲ್ಲಿ ತನಿಖೆ ತೀವ್ರಗೊಳ್ಳಬೇಕು. ಹೆಚ್ಚುವರಿ ಸಿಬ್ಬಂದಿ ನಿಯೋಜಿಸುವ ಮೂಲಕ ಅಪರಾಧಿಗಳನ್ನು ಶೀಘ್ರದಲ್ಲಿ ಪತ್ತೆ ಹೆಚ್ಚಬೇಕು ಎಂದು ಅಮಿತ್ ಶಾಗೆ ಮನವಿ ಮಾಡಿದರು.
ಇನ್ನು ಇದೇ ವೇಳೆ ರಾಜ್ಯದಲ್ಲಿ ವಿದ್ವಂಸಕ ಕೃತ್ಯಗಳು ಹೆಚ್ಚುತ್ತಿರುವ ಹಿನ್ನೆಲೆ ಎನ್‍ಐಎ ಕಚೇರಿ ವ್ಯಾಪ್ತಿಯನ್ನು ಬೆಂಗಳೂರಿಗೆ ವಿಸ್ತರಿಸುವಂತೆ ಮನವಿ ಮಾಡಿದರು. ಎನ್‍ಐಎಯಿಂದ ರಾಜ್ಯದಲ್ಲಿ ಅಪರಾಧ ಪ್ರಕರಣಗಳನ್ನು ನಿಯಂತ್ರಣಕ್ಕೆ ಬರಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಅಕ್ರಮ ಹಣ ವರ್ಗಾವಣೆ ಪ್ರಕರಣ – ಡಿ.ಕೆ ಶಿವಕುಮಾರ್‌ಗೆ ಬಿಗ್ ರಿಲೀಫ್
ಅಮಿತ್ ಶಾ ಭೇಟಿಗೂ ಮುನ್ನ ಶೋಭಾ ಕರಂದ್ಲಾಜೆ ಅವರು ಅಮಿತ್ ಶಾಗೆ ಪತ್ರ ಬರೆದು ಪ್ರವೀಣ್ ಹತ್ಯೆಯನ್ನು ಎನ್‍ಐಎ ತನಿಖೆಗೆ ವಹಿಸಬೇಕು ಎಂದು ಮನವಿ ಮಾಡಿದ್ದರು. ಇದಾದ ಬಳಿಕ ರಾಜ್ಯ ಸರ್ಕಾರವೂ ಎನ್‍ಐಎಗೆ ಪ್ರಕರಣವನ್ನು ಹಸ್ತಾಂತರ ಮಾಡಿತ್ತು. ಈ ಮನವಿಗಳ ಹಿನ್ನಲೆ ಸದ್ಯ ಪ್ರಕರಣ ಎನ್‍ಐಎಗೆ ವರ್ಗಾವಣೆಯಾಗಿದೆ. ಇದನ್ನೂ ಓದಿ: ಕೋವಿಡ್-19 ಲಸಿಕಾಕರಣದ ಬಳಿಕ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ: ಅಮಿತ್ ಶಾ
Live Tv
[brid partner=56869869 player=32851 video=960834 autoplay=true]
ಮಂಗಳೂರು: ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣಗಳ ತನಿಖೆಯನ್ನು ಹಸ್ತಾಂತರಿಸುವ ಮೊದಲೇ ಎನ್‍ಐಎಗೆ ತನಿಖೆಯನ್ನು ಪ್ರಾರಂಭಿಸಿದ್ದು, ಕೆಲವು ಮಾಹಿತಿಗಳನ್ನು ಸಂಗ್ರಹಿಸಿದೆ.
ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಎನ್‍ಐಎ ಟೀಂ ಬೆಳ್ಳಾರೆಗೆ ಭೇಟಿ ನೀಡಿ ಸಹ ಕೆಲ ಮಾಹಿತಿಗಳನ್ನು ಸಂಗ್ರಹಿಸುತ್ತಿದೆ. ಆದರೆ, ಇನ್ನೂ ಅಧಿಕೃತವಾಗಿ ಪ್ರಕರಣ ಎನ್‍ಐಎ ವರ್ಗವಾಗಿಲ್ಲ. ಸದ್ಯದಲ್ಲೇ ಹಸ್ತಾಂತರ ಮಾಡುತ್ತೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ತನಿಖೆಯನ್ನು ಚುರುಕಾಗಿದ್ದು, ಹೊಸ ಹೊಸ ವಿಚಾರಗಳು ಬಯಲಾಗುತ್ತಿವೆ. ಪ್ರವೀಣ್ ಹತ್ಯೆ ಪ್ರಕರಣ ಸಂಬಂಧ ಬೆಂಗಳೂರಲ್ಲಿ ಇಬ್ಬರನ್ನು, ಕೇರಳದಲ್ಲಿ ಒಬ್ಬರನ್ನು ಪೊಲೀಸರು ಹೆಡೆ ಮುರಿಕಟ್ಟಿದ್ದಾರೆ. ಬೆಂಗಳೂರಿನ ಬೇಕರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಸುಳ್ಯ ಮೂಲದ ಅಲ್ತಾಫ್ ಮತ್ತು ಇರ್ಫಾನ್‍ನನ್ನು ಬಂಧಿಸಿರುವ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಇವರು ಪ್ರವೀಣ್ ಹತ್ಯೆಯ ದಿನ ಬೆಳ್ಳಾರೆಯಲ್ಲಿಯೇ ಇದ್ದರು ಎಂಬುದು ತಿಳಿದುಬಂದಿದೆ. ಪ್ರವೀಣ್ ಕೊಲೆಯಲ್ಲಿ ಇವರ ಪಾತ್ರ ಏನು ಎಂಬುದು ಇನ್ನಷ್ಟೇ ತಿಳಿದುಬರಬೇಕಿದೆ. ಝಾಕೀರ್ ವಿರುದ್ಧ ಕೊಲೆಗಡುಕರಿಗೆ 2 ದಿನ ಆಶ್ರಯ ನೀಡಿ, ಬಿರಿಯಾನಿ ಪೂರೈಸಿದ್ದ ಆರೋಪವಿದೆ.
ಇನ್ನೂ ಫಾಝಿಲ್ ಹತ್ಯೆ ಪ್ರಕರಣದಲ್ಲಿ ಹಂತಕರ ಸುಳಿವು ಪೊಲೀಸರಿಗೆ ಲಭ್ಯವಾಗಿದೆ. ಮಂಗಳೂರಲ್ಲಿ ಡಿಜಿಪಿ ಪ್ರವೀಣ್ ಸೂದ್ ಉನ್ನತ ಮಟ್ಟದ ಸಭೆ ನಡೆಸಿ, ಹಲವು ಸೂಚನೆ ನೀಡಿದ್ದಾರೆ. ಆರೋಪಿಗಳು ಯಾವುದೇ ಧರ್ಮೀಯರಾಗಿದ್ರೂ ಬಿಡೋ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಸುರತ್ಕಲ್‌ನಲ್ಲಿ ಬೀಚ್‌ನಲ್ಲಿ ಭಿನ್ನ ಕೋಮಿನ ಯುವಕನ ಜೊತೆ ಬಂದ ಯುವತಿ ಮೇಲೆ ರೇಪ್
ಸುಹಾಸ್, ಮೋಹನ್, ಗಿರಿ ಮತ್ತು ಅಮಿತ್ ಎಂಬ ಪಾತಕಿಗಳು ಫಾಝಿಲ್ ಕೊಲೆಯಲ್ಲಿ ಭಾಗಿ ಆಗಿದ್ದಾರೆ ಎನ್ನಲಾಗಿದ್ದು, ಯಾವುದೇ ಕ್ಷಣದಲ್ಲಿ ಈ ನಾಲ್ವರನ್ನು ಬಂಧಿಸುವ ಸಂಭವ ಇದೆ. ಈ ಹಿಂದೆ ಹಲವು ಕೃತ್ಯಗಳಲ್ಲಿ ಪಾಲ್ಗೊಂಡಿದ್ದ ಸುಹಾಸ್ ಇದರಲ್ಲೂ ಪ್ರಮುಖ ಆರೋಪಿ ಎನ್ನಲಾಗಿದೆ. ಅಮಿತ್ ಕಾರು ಚಾಲಕ ಎಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಅಧಿಕೃತ ಪ್ರಕಟಣೆ ಇನ್ನಷ್ಟೇ ಹೊರಬೀಳಬೇಕಿದೆ. ಇದನ್ನೂ ಓದಿ: ಕಸದ ಜೊತೆ ಡಂಪಿಂಗ್ ಯಾರ್ಡ್‍ಗೆ ಡಂಪ್ ಆದ ಗಾರ್ಬೇಜ್ ಆಟೋ – ಚಾಲಕ ಅಪಾಯದಿಂದ ಪಾರು
Live Tv
[brid partner=56869869 player=32851 video=960834 autoplay=true]
ಮಂಗಳೂರು: ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪೊಲೀಸರಿಗೆ ಇನ್ನೂ ಕಗ್ಗಂಟಾಗಿ ಉಳಿದಿದೆ. ಹತ್ಯೆಗೆ ಏನು ಕಾರಣ? ಪ್ರಕರಣದ ಆರೋಪಿಗಳು ಯಾರು? ಎಂದು ಕಂಡುಹಿಡಿಯಲು ಪೊಲೀಸರಿಗೆ ಸಾಧ್ಯವಾಗಿಲ್ಲ. ಈ ನಡುವೆ ಕೊಲೆಗೆ ಹಲಾಲ್, ಜಟ್ಕಾ ವ್ಯಾಪಾರ ಒಂದು ಕಾರಣ ಎಂಬ ಅನುಮಾನ ಎದ್ದಿದೆ.
ಹಿಜಬ್ ಹೋರಾಟದಿಂದ ಆರಂಭವಾಗಿ ಮುಂದುವರಿದು ಹಲಾಲ್, ಜಟ್ಕಾನೇ ಹತ್ಯೆಗೆ ಕಾರಣವಾಯಿತಾ ಎಂಬ ಗುಮಾನಿ ಈಗ ಪೊಲೀಸರಿಗೆ ಕಾಡುತ್ತಿದೆ. ಉಡುಪಿ ಜಿಲ್ಲೆಯಲ್ಲಿ ಆರಂಭವಾದ ಹಿಜಬ್ ಹೋರಾಟ ನಂತರ ರಾಜ್ಯಕ್ಕೆ ಕಿಚ್ಚು ಹಚ್ಚಿತ್ತು. ಹಲಾಲ್, ಜಟ್ಕಾ, ವ್ಯಾಪಾರ ಬಹಿಷ್ಕಾರ ಹೀಗೆ ಒಂದರ ಮೇಲೆ ಒಂದು ವಿವಾದಗಳು ಆರಂಭವಾಗಿತ್ತು. ನೆಟ್ಟಾರು ಪೇಟೆಯಲ್ಲಿ ಚಿಕನ್ ಸ್ಟಾಲ್ ನಡೆಸುತ್ತಿದ್ದ ಪ್ರವೀಣ್ ಹಲಾಲ್, ಜಟ್ಕಾ ವಿಚಾರದಲ್ಲಿ ಕೊಲೆಯಾದರೇ ಎಂಬ ಅನುಮಾನ ಪೊಲೀಸರಿಗೆ ಬಂದಿದೆ. ಇದನ್ನೂ ಓದಿ: ಕೊಲೆ ಮಾಡಿ ಮನೆಗೆ ಬರಲು ಸಾಧ್ಯವೇ..?: ಬಂಧಿತ ಝಾಕೀರ್ ತಾಯಿ
ಜಟ್ಕಾ ಜಟಾಪಟಿ ನಂತರ ಪ್ರವೀಣ್‍ಗೆ ಒಳ್ಳೆಯ ವ್ಯಾಪಾರ ಆಗುತ್ತಿತ್ತು. ಇದು ಮುಸ್ಲಿಂ ಚಿಕನ್ ವ್ಯಾಪಾರಿಗಳಿಗೆ ನುಂಗಲಾರದ ತುತ್ತಾಗಿತ್ತು ಎನ್ನಲಾಗಿದೆ. ಈ ಕಾರಣಕ್ಕಾಗಿಯೇ ಕೊಲೆಯಾಯ್ತು ಎಂಬ ಪ್ರಶ್ನೆಯನ್ನು ಹಿಡಿದುಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಎಲ್ಲಾ ಸಿಸಿಟಿವಿಗಳನ್ನು ಜಾಲಾಡುತ್ತಿದ್ದಾರೆ. ವಶಕ್ಕೆ ಪಡೆದವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಆದರೆ ಈವರೆಗೆ ನಿಖರ ಕಾರಣಕ್ಕೆ ಪ್ರವೀಣ್ ಕೊಲೆಯಾಗಿದೆ ಎಂದು ಪೊಲೀಸರಿಗೆ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ತನಿಖೆ ನಡೆಯುತ್ತಿದೆ. ಇದನ್ನೂ ಓದಿ: ಫಾಜಿಲ್ ಹತ್ಯೆ ಪ್ರಕರಣ – ಓರ್ವ ಆರೋಪಿ ವಶಕ್ಕೆ
Live Tv
[brid partner=56869869 player=32851 video=960834 autoplay=true]
ದಾವಣಗೆರೆ: ಮಂಗಳೂರಿನಲ್ಲಿ ನಡೆದಂತಹ ಕೊಲೆಗಳು ರಾಜಕೀಯಕ್ಕಾಗಿ ನಡೆದಂತಹ ಕೊಲೆಗಳಾಗಿವೆ. ಇದನ್ನು ಕೂಡಲೇ ಹತೋಟಿಗೆ ತೆಗೆದುಕೊಳ್ಳಬೇಕು ಎಂದು ಸಣ್ಣ ನೀರಾವರಿ ಸಚಿವ ಮಾಧುಸ್ವಾಮಿ ಒತ್ತಾಯಿಸಿದರು.
ದಾವಣಗೆರೆಯಲ್ಲಿ ಮಾತನಾಡಿದ ಅವರು, ರಾಜಕೀಯಕ್ಕೋಸ್ಕರ ಕೊಲೆ ಮಾಡುತ್ತಿರುವುದು ತಪ್ಪು, ಅದು ದುರ್ದೈವ. ಮಂಗಳೂರಿನಲ್ಲಿ ನಡೆದಂತ ಕೊಲೆಗಳು ರಾಜಕೀಯಕ್ಕಾಗಿ ನಡೆದಂತಹ ಕೊಲೆಗಳಾಗಿವೆ. ಅದನ್ನು ಕೂಡಲೇ ಹತೋಟಿಗೆ ತೆಗೆದುಕೊಳ್ಳಬೇಕು. ಇದನ್ನು ಉಲ್ಬಣ ಆಗಲು ಬಿಡಬಾರದು ಎಂದರು.
ಮಂಗಳೂರಿನಲ್ಲಿ ನಡೆದ ಘಟನೆ ಸರ್ಕಾರ ಸಹಿಸುವುದಿಲ್ಲ. ಪರಿಸ್ಥಿತಿ ತಿಳಿ ಮಾಡಲಿಲ್ಲ ಅಂದರೆ ತಪಾತ್ರೆಯ ಕಟ್ಟಿಟ್ಟ ಬುತ್ತಿ, ಹತ್ಯೆ ಮಾಡುವ ಹಂತಕ್ಕೆ ಯಾರು ಹೋಗಬಾರದು. ಆದರೆ ಪ್ರವೀಣ್ ಹತ್ಯೆ ಮಾಡಿದವರು, ಅವರ ಅಂಗಡಿಯಲ್ಲೇ ಕೆಲಸ ಮಾಡುವವರೆಂದು ಹೇಳಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪಿಎಫ್‍ಐ ಸಂಘಟನೆ ನಿಷೇಧ: ಮಂಗಳೂರಿನಲ್ಲಿ ನಡೆದ ಹತ್ಯೆ ಬಗ್ಗೆ ಪಿಎಫ್‍ಐ ಕೈವಾಡ ಇದೆ ಎನ್ನುವುದರ ಬಗ್ಗೆ ಆಧಾರ ಇಲ್ಲದೆ ಮಾತನಾಡಲು ಬರುವುದಿಲ್ಲ. ಅವರು ಈ ಹತ್ಯೆಗಳ ಹಿಂದಿದ್ದರೆ ಅನುಭವಿಸುತ್ತಾರೆ. ಪಿಎಫ್‍ಐ ಅವರ ಬಗ್ಗೆ ಬಿಜೆಪಿ, ಕಾಂಗ್ರೆಸ್‍ನವರ ಬಳಿ ದಾಕ್ಷಿಣ್ಯ ಇಲ್ಲ. ಪಿಎಫ್‍ಐ ವಿರುದ್ಧ ತನಿಖೆ ಮಾಡಲು ಆಧಾರ ಸಾಕ್ಷಿಗಳು ಬೇಕಾಗುತ್ತದೆ ಎಂದು ಹೇಳಿದರು.
ಏಕಾಏಕಿ ಮತ್ತೊಬ್ಬರ ಕಡೆ ಬೊಟ್ಟು ಮಾಡಿ ತೋರಿಸಲು ಬರುವುದಿಲ್ಲ. ಇದನ್ನು ನಾವು ಬಹಳ ಗಂಭೀರವಾಗಿ ತೆಗೆದುಕೊಂಡಿದ್ದೇವೆ. ಒಂದು ಹಂತಕ್ಕೆ ತಂದೇ ತರುತ್ತೇವೆ. ಯಾರು ಹುಡುಗಾಟ ಆಡಲು ಬರುವುದಿಲ್ಲ, ಮಂಗಳೂರಲ್ಲಿ ನಡೆದಿರುವ ಹತ್ಯೆಗಳು ನಿರೀಕ್ಷೆ ಮಾಡಿದ್ದಲ್ಲ. ಸರ್ಕಾರದ ವಿರುದ್ಧ ಕಾರ್ಯಕರ್ತರು ಮುನಿಸುಕೊಳ್ಳಬಾರದು. ಇದಕ್ಕೆ ಕಾರಣೀಕರ್ತರನ್ನು ಹುಡುಕಿ ತಾಕೀತು ಮಾಡಿ ಶಿಕ್ಷೆಗೊಳಪಡಿಸುತ್ತೇವೆ ಎಂದು ಮನವಿ ಮಾಡಿದರು.
ಪ್ರವೀಣ್, ಫಾಝಿಲ್ ಹತ್ಯೆ ವಿಚಾರ: ಪ್ರವೀಣ್ ನೆಟ್ಟಾರು ಹಾಗು ಫಾಝಿಲ್ ಹತ್ಯೆಗೆ ಲಿಂಕ್ ಆಗಿರುವುದು ತಪ್ಪು. ಕೆಲವರು ಮಾತನಾಡುತ್ತಿರುವುದು ಕೂಡ ತಪ್ಪು. ವಿರೋಧ ಪಕ್ಷದವರು ಪ್ರವೀಣ್ ಹಾಗೂ ಫಾಝಿಲ್ ಕೊಲೆಗೆ ಲಿಂಕ್ ಮಾಡ್ತಿದ್ದಾರೆ. ಇದು ಸತ್ಯಕ್ಕೆ ದೂರವಾಗಿರುವ ವಿಚಾರ ಎಂದರು. ಇದನ್ನೂ ಓದಿ: ಶಾಸಕಿ ಅಂಜಲಿ ನಿಂಬಾಳ್ಕರ್ ತರಾಟೆ ಪ್ರಕರಣ – ಆರೋಗ್ಯ ಇಲಾಖೆಗೆ ಪತ್ರ ಬರೆದ ಡಿಹೆಚ್‍ಒ
ಇನ್ನು ಫಾಝಿಲ್ ಹತ್ಯೆಯಾದಾಗ ಸಿಎಂ ಆಗಲಿ ಸಚಿವರಾಗಲಿ ಮನೆಯ ಹತ್ತಿರ ಹೋಗದೆ ಇರಲು ಕಾರಣ ಇದೆ. ಮೃತ ಪ್ರವೀಣ್ ಮನೆಗೆ ಭೇಟಿ ನೀಡಿದ ಬಳಿಕ ಸಿಎಂ ಬೊಮ್ಮಾಯಿ ಅವರು ಫಾಝಿಲ್ ಕೊಲೆಯಾದಾಗ ಅವರು ಏರ್ ಕ್ರಾಪ್ಟ್‌ನಲ್ಲಿದ್ದರು. ಅಲ್ಲಿಂದ ಅವರು ಬೆಂಗಳೂರು ಕಡೆಗೆ ತಮ್ಮ ಪ್ರಯಾಣ ಬೆಳೆಸಿದ್ದರು. ಆದ್ದರಿಂದ ಅವರು ಫಾಝಿಲ್ ಮನೆಗೆ ಹೋಗಲು ಆಗಲಿಲ್ಲ ಎಂದು ಸಮರ್ಥಿಕೊಂಡರು.
ಉತ್ತರ ಪ್ರದೇಶ ಮಾದರಿ ಅಳವಡಿಸಲು ಚಿಂತನೆ ಇಲ್ಲ: ರಾಜ್ಯದಲ್ಲಿ ಯುಪಿ ಮಾದರಿ ತರಲು ಮಾಧ್ಯಮದವರು ಒತ್ತಾಯಿಸಿದ್ದಕ್ಕಾಗಿ ಸಿಎಂ ಬೊಮ್ಮಾಯಿರವರು ಯುಪಿನೇ ಬೇರೆ, ಕರ್ನಾಟಕ ರಾಜ್ಯನೇ ಬೇರೆ. ಅಲ್ಲಿನ ಸಮಸ್ಯೆಗೂ ಇಲ್ಲಿ ಸಮಸ್ಯೆಗೂ ವ್ಯತ್ಯಾಸ ಇದೆ ಎಂದು ಈಗಾಗಲೇ ತಿಳಿಸಿದ್ದಾರೆ. ಆದರೆ ಮಾಧ್ಯಮದವರು ಕೆಲ ದಿನಗಳ ಹಿಂದೆ ಒತ್ತಿ ಒತ್ತಿ ಕೇಳಿದಕ್ಕಾಗಿ ಸಿಎಂ ಬೊಮ್ಮಾಯಿರವರು ಕರ್ನಾಟಕದಲ್ಲೂ ಯುಪಿ ಮಾದರಿ ಆಗಬಹುದು ಎಂದಿದ್ದರು, ಆದರೆ ಅದು ಸತ್ಯಕ್ಕೆ ದೂರವಾದ ವಿಚಾರ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಹಿಂದೂ ಯುವಕರಿಗೆ ರಕ್ಷಣೆ ಇಲ್ಲದಿದ್ದಾಗ ಅಧಿಕಾರದಲ್ಲಿದ್ದು ಏನು ಸಾರ್ಥಕ: ರೇಣುಕಾಚಾರ್ಯ
ಯಡಿಯೂರಪ್ಪನವರೇ ನಮ್ಮ ಲೀಡರ್: ಯಡಿಯೂರಪ್ಪನವರೇ ನಮ್ಮ ಲೀಡರ್. ಅದರಲ್ಲಿ ಎರಡು ಮಾತಿಲ್ಲ, ಅವರನ್ನು ಮೂಲೆ ಗುಂಪು ಮಾಡಬೇಕೆಂಬುದು ಇಡೀ ಬಿಜೆಪಿಯಲ್ಲಿ ಯಾರೊಬ್ಬರ ತಲೆಯಲ್ಲಿಲ್ಲ, ಒಂದು ಪಕ್ಷ ಅಂದರೆ ಕಾರ್ಯಕರ್ತರು ಸಂಘಟನೆ ಮಾಡಿಕೊಂಡು ಪ್ರವಾಸ ಮಾಡಬೇಕಾಗುತ್ತದೆ. ಯಡಿಯೂರಪ್ಪನವರು ಒಬ್ಬರೇ ಮಾಡಲು ಆಗುತ್ತಾ ಆಗಲ್ಲ, ಇನ್ನು ಬೇರೆ ಬೇರೆ ಘಟನೆ ಜರುಗಿದ್ದರಿಂದ ವಿಜಯೋತ್ಸವವನ್ನು ರದ್ದು ಮಾಡಿದ್ದೇವೆ. ಆದರೆ ಯಡಿಯೂರಪ್ಪನವರನ್ನು ಸಂಘಟನೆ ಮಾಡುವ ವಿಚಾರದಲ್ಲಿ ಯಾರು ತಡಿಯಲ್ಲ, ಯಾರು ತಡಿಯಲು ಆಗುವುದಿಲ್ಲ ಎಂದು ತಿಳಿಸಿದರು.
ರನ್ನಿಂಗ್ ರೇಸ್‍ನಲ್ಲಿ ಗೆಲಲ್ಲುತ್ತೇವೆ ಎಂದು ಓಡ್ತಾರೆ, ಓಡ್ಲಿ ಬಿಡಿ ಜನ ಅಲ್ವಾ ತೀರ್ಮಾನ ಮಾಡೋದು ಎಂದು ದಾವಣಗೆರೆಯಲ್ಲಿ ಸಿದ್ದರಾಮಯ್ಯ ಅಮೃತ ಮಹೋತ್ಸವ ಕಾರ್ಯಕ್ರಮದ ಬಗ್ಗೆ ವ್ಯಂಗ್ಯ ಮಾಡಿದರು. ಇನ್ನು ದಾವಣಗೆರೆಯಲ್ಲಿ ಸಿದ್ದರಾಮಯ್ಯ ಅಮೃತ ಮಹೋತ್ಸವ ಮಾಡಿದ್ರೇ ರಾಜ್ಯದಲ್ಲಿ ಗೆದ್ದು ಬಿಡ್ತಾರ ಎಂದು ಪ್ರಶ್ನಿಸಿದರು.
Live Tv
[brid partner=56869869 player=32851 video=960834 autoplay=true]
ಬೆಂಗಳೂರು: ಪ್ರವೀಣ್ ಹತ್ಯೆ ಖಂಡಿಸಿ ಎಬಿವಿಪಿ ಕಾರ್ಯಯರ್ತರು ಹೋಂ ಮಿನಿಸ್ಟರ್ ಮನೆಗೆ ಮುತ್ತಿಗೆ ಹಾಕಿದ ಘಟನೆ ಬೆಂಗಳೂರಿನ ಜಯಮಹಲ್ ರಸ್ತೆಯಲ್ಲಿ ನಡೆದಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಕಾರ್ಯಕರ್ತ ಪ್ರವೀಣ್ ಹತ್ಯೆ ಖಂಡಿಸಿ ಮೊನ್ನೆಯಷ್ಟೇ ಬಿಜೆಪಿ ಕಾರ್ಯಕರ್ತರು ಸಾಮೂಹಿಕ ರಾಜೀನಾಮೆ ನೀಡುವ ಮೂಲಕ ತಮ್ಮ ವಿರೋಧವನ್ನು ವ್ಯಕ್ತಪಡಿಸಿದ್ದರು. ಇದೀಗ ಬಿಜೆಪಿಯ ಮತ್ತೊಂದು ಸಂಘಟನೆಯೇ ಸಿಡಿದೆದ್ದಿದ್ದು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ. ಗೃಹ ಇಲಾಖೆಯನ್ನು ನಿಭಾಯಿಸುವುದರಲ್ಲಿ ಆರಗ ಜ್ಞಾನೇಂದ್ರ ಅವರು ವಿಫಲರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದು, ಎಬಿವಿಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ನಂತರ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಸರ್ಕಾರಿ ನಿವಾಸಕ್ಕೆ ಮುತ್ತಿಗೆ ಹಾಕಿದ್ದಾರೆ.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ನಿಭಾಯಿಸುವಲ್ಲಿ ವಿಫಲರಾದ ಗೃಹ ಸಚಿವರು ಕೂಡಲೇ ರಾಜೀನಾಮೆ ನೀಡಬೇಕು. ಇದರ ಜೊತೆಗೆ ಎಸ್‍ಡಿಪಿಐ, ಪಿಎಫ್‍ಐ ನಿಷೇಧಿಸಬೇಕು ಎಂದು ಒತ್ತಾಯಿಸಿದ ಎಬಿವಿಪಿ ಕಾರ್ಯಕರ್ತರು ಅಸಮರ್ಥ ಸಿಎಂ ಬಸವರಾಜ ಬೊಮ್ಮಾಯಿ ಎಂದು ಘೋಷಣೆ ಕೂಗಿದ್ದಾರೆ. ಈ ಪ್ರತಿಭಟನೆ ಅತಿರೇಕಕ್ಕೆ ಹೋಗಿದ್ದು, ಎಬಿವಿಪಿ ಕಾರ್ಯಕರ್ತರು ಗೇಟ್ ಹಾರಿ ಗೃಹ ಸಚಿವರ ನಿವಾಸಕ್ಕೆ ನುಗ್ಗಿದ್ದಾರೆ. ಇದನ್ನೂ ಓದಿ: ಬಚ್ಚನಕೇರಿ ಗ್ರಾಮದಲ್ಲಿ ಕಿತ್ತೂರು ಅರಮನೆ ನಿರ್ಮಾಣ – ಸ್ಥಳೀಯರಿಂದ ವಿರೋಧ
ಈ ವೇಳೆ ಅಲ್ಲಿದ್ದ ಪೊಲೀಸರು ಎಬಿವಿಪಿ ಕಾರ್ಯಕರ್ತರನ್ನು ಬಾಗಿಲ ಬಳಿ ತಡೆದಿದ್ದಾರೆ. ಆದರೆ ಪೊಲೀಸರ ಮಾತಿಗೆ ಜಗ್ಗದ ಎಬಿವಿಪಿ ಕಾರ್ಯಕರರ್ತರು ಮನೆಯೊಳಗೆ ನುಗ್ಗಿದ್ದಾರೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೊಲೀಸರು ಲಾಠಿ ಚಾರ್ಜ್ ನಡೆಸಿ, ಎಬಿವಿಪಿ ಕಾರ್ಯಕರ್ತರನ್ನ ವಶಕ್ಕೆ ಪಡೆದಿದ್ದಾರೆ. ಸದ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ಶಿವಮೊಗ್ಗ ಜಿಲ್ಲೆಯಲ್ಲಿ ಇದ್ದಾರೆ. ಇದನ್ನೂ ಓದಿ: ಚುನಾವಣೆ ವರ್ಷ ನೆತ್ತರಧಾರೆ ಹರಿದಷ್ಟೂ ಭರ್ಜರಿ ಮತಧಾರೆ: ಎಚ್‍ಡಿಕೆ
Live Tv
[brid partner=56869869 player=32851 video=960834 autoplay=true]
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ಸರಣಿ ಹತ್ಯೆ ರಾಜ್ಯದ ಜನತೆಯನ್ನು ಬೆಚ್ಚಿ ಬೀಳಿಸಿದೆ. ಕೋಮು ಸೂಕ್ಷ್ಮ ಜಿಲ್ಲೆ ಇದೀಗ ಬೂದಿ ಮುಚ್ಚಿದ ಕೆಂಡದಂತಾಗಿದೆ. 3 ದಿನಗಳ ಕಾಲ ಕಠಿಣ ಪರಿಸ್ಥಿತಿ ಇದೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ.
ಈ ಬೆನ್ನಲ್ಲೇ ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡಿದ್ದು. ವಿವಿಧ ಜಿಲ್ಲೆಗಳಿಂದ 2 ಸಾವಿರಕ್ಕೂ ಅಧಿಕ ಪೊಲೀಸರನ್ನು ಕರೆಸಿ ವ್ಯಾಪಕ ಬಂದೋಬಸ್ತ್ ಮಾಡಲಾಗಿದೆ. ಜಿಲ್ಲೆಯ ಎಲ್ಲಾ ಕೋಮು ಸೂಕ್ಷ್ಮ ಪ್ರದೇಶಗಳಲ್ಲಿ ಪಥ ಸಂಚಲನ ನಡೆಸಿ ದುಷ್ಕೃತ್ಯ ನಡೆಸುವವರಿಗೆ ಎಚ್ಚರಿಕೆ ನೀಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಕೋಮುದ್ವೇಷ ಹರಡುವವರ ಮೇಲೂ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಆಗಸ್ಟ್ 1ರ ವರೆಗೂ 144 ಸೆಕ್ಷನ್ ಜಾರಿಗೊಳಿಸಲಾಗಿದ್ದು, ಎಲ್ಲಾ ಮದ್ಯದ ಅಂಗಡಿಗಳನ್ನು ಬಂದ್ ಮಾಡಲಾಗಿದೆ. ಇದನ್ನೂ ಓದಿ: ದಕ್ಷಿಣ ಕನ್ನಡದಲ್ಲಿ ವರುಣನ ಆರ್ಭಟ – 4 ತಾಲೂಕಿನ ಶಾಲೆಗಳಿಗೆ ರಜೆ
ಕೇವಲ ಅಗತ್ಯ ಸೇವೆಗಳಿಗೆ, ಅಗತ್ಯ ಸಂಚಾರಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಹೋಟೆಲ್, ಮಾಲ್‍ಗಳು ಸಹ ಬಂದ್ ಇರಲಿದೆ. ಈ ಮಧ್ಯೆ ಜಿಲ್ಲಾಧಿಕಾರಿ ಕೆ.ವಿ ರಾಜೇಂದ್ರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಮುಖಂಡರು, ಎಲ್ಲ ಪಕ್ಷದ ನಾಯಕರು, ವಿವಿಧ ಸಂಘಟನೆ ಮುಖಂಡರ ಸಮ್ಮುಖದಲ್ಲಿ ಇಂದು ಬೆಳಗ್ಗೆ 11ಕ್ಕೆ ಶಾಂತಿಸಭೆ ನಡೆಯಲಿದೆ. ಕರಾವಳಿ ಜಿಲ್ಲೆ ಈಗ ಖಾಕಿ ಭದ್ರಕೋಟೆಯಂತಾಗಿದೆ. ಇದನ್ನೂ ಓದಿ: ಈಗ ಲೋಕಸಭಾ ಚುನಾವಣೆ ನಡೆದರೆ ಎನ್‍ಡಿಎಗೆ 362 ಸ್ಥಾನ!
ಬೆಳ್ಳಾರೆಯಲ್ಲಿ ಮಸೂದ್, ಪ್ರವೀಣ್ ಹತ್ಯೆ ಬೆನ್ನಲ್ಲೇ ಗುರುವಾರ ರಾತ್ರಿ ಮಂಗಳೂರು ನಗರದ ಹೊರವಲಯದ ಸುರತ್ಕಲ್‍ನಲ್ಲಿ ಫಾಜಿಲ್ ಎಂಬ ಯುವಕನನ್ನು ಹಂತಕರು ಕೊಚ್ಚಿ ಕೊಲೆ ಮಾಡಿದ್ದರು. ಆ ಬಳಿಕ ಪೊಲೀಸರು ಎಚ್ಚೆತ್ತುಕೊಂಡಿದ್ದಾರೆ. ಈ ನಡುವೆ ಈವರೆಗೂ ಫಾಜಿಲ್ ಹತ್ಯೆಗೆ ಕಾರಣವಾಗಲೀ, ಹಂತಕರಾಗಲಿ ಸಿಕ್ಕಿಲ್ಲ. ಆದರೆ, ಫಾಜಿಲ್ ಹತ್ಯೆ ಸಂಬಂಧ 21 ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.
Live Tv
[brid partner=56869869 player=32851 video=960834 autoplay=true]
ಚಿಕ್ಕಮಗಳೂರು: ಬಿಜೆಪಿ ನಾಯಕರೇ ನಿಮ್ಮನ್ನು ಗೆಲ್ಲಿಸೋದು ಗೊತ್ತು. ಸೋಲಿಸೋದು ಗೊತ್ತು. ನೀವು ಸರಿಯಾಗಿ ನಡೆದರೆ ಬೆನ್ನು ತಟ್ಟೋದು ಗೊತ್ತು. ದಾರಿ ತಪ್ಪಿದರೆ ಬೆನ್ನಿಗೆ ಬಾರಿಸೋದು ಗೊತ್ತು ಎನ್ನುವ ವಾಟ್ಸಾಪ್ ಸ್ಟೇಟಸ್ ಮಲೆನಾಡು ಭಾಗದಲ್ಲಿ ಭಾರೀ ಸದ್ದು ಮಾಡುತ್ತಿದೆ.
ಸಾಮಾಜಿಕ ಜಾಲತಾಣದಲ್ಲಿ ಹೀಗೊಂದು ಸಂದೇಶ ಹಾಕುವ ಮೂಲಕ ಹಿಂದೂ ಕಾರ್ಯಕರ್ತರು ರಾಜಕೀಯ ನಾಯಕರಿಗೆ ಎಚ್ಚರಿಕೆ ನೀಡುತ್ತಿದ್ದಾರೆ. ವಾಟ್ಸಾಪ್ ಸ್ಟೇಟಸ್ ಹಾಕುತ್ತಿರುವ ಮಲೆನಾಡ ಹಿಂದೂ ಕಾರ್ಯಕರ್ತರು ಬಿಜೆಪಿ ರಾಜಕೀಯ ನಾಯಕರ ವಿರುದ್ಧ ಅಸಮಾಧಾನ ಹೊರ ಹಾಕುತ್ತಿದ್ದಾರೆ. ನಾವು ಹಿಂದೂ ಕಾರ್ಯಕರ್ತರು. ರಾಜಕೀಯವಾಗಿ ಬಿಜೆಪಿಗೆ ಮತ ನೀಡಿದ್ದೇವೆ. ಪಕ್ಷಕ್ಕಾಗಿ ಯಾವುದೇ ಲಾಭವಿಲ್ಲದೆ, ಪ್ರತಿಫಲಾಪೇಕ್ಷೆ ಇಲ್ಲದೆ ಪ್ರಚಾರ ಮಾಡುತ್ತಿದ್ದೇವೆ. ಹಾಗಾಂತ ನಾವು ಬಿಜೆಪಿ ನಾಯಕರ ಗುಲಾಮರಲ್ಲ. ನಮ್ಮ ನಿಷ್ಠೆ ಏನಿದ್ದರೂ ತತ್ವ-ಸಿದ್ಧಾಂತಕ್ಕೆ ಮಾತ್ರ ಎಂದು ಎಚ್ಚರಿಕೆ ರವಾನಿಸಿದ್ದಾರೆ. ಇದನ್ನೂ ಓದಿ: ನನ್ನ ಪತಿ ಏನು ತಪ್ಪು ಮಾಡಿದ್ದಾರೆಂದು ಪ್ರೂಫ್ ಕೊಡಿ: ಬಂಧಿತ ಝಾಕೀರ್ ಪತ್ನಿ ಅಲಳು
ಮಂಗಳೂರಿನ ಬಿಜೆಪಿ ಯುವ ಮುಖಂಡ ಪ್ರವೀಣ್ ಹತ್ಯೆ ಬಳಿಕ ಹಿಂದೂ ಕಾರ್ಯಕರ್ತರು ಸರ್ಕಾರ ಹಾಗೂ ಬಿಜೆಪಿ ನಾಯಕರ ವಿರುದ್ಧ ಬಹಿರಂಗವಾಗಿ ಆಕ್ರೋಶ ಹೊರಹಾಕಿದ್ದಾರೆ. ಮಲೆನಾಡಿನಾದ್ಯಂತ ನೂರಾರು ಕಾರ್ಯಕರ್ತರು ಪಕ್ಷದ ಪದಾಧಿಕಾರಿಗಳ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಪ್ರತಿ ಬಾರಿ ಹಿಂದೂ ಕಾರ್ಯಕರ್ತರು ಕೊಲೆಯಾದಾಗಲೂ ಸರ್ಕಾರ ಆರೋಪಿಗಳನ್ನು ಕೂಡಲೇ ಬಂಧಿಸುತ್ತೇವೆ. ಸರ್ಕಾರ ಕಠಿಣ ಕಾನೂನು ಕ್ರಮ ಕೈಗೊಳ್ಳುತ್ತದೆ ಎಂದು ಹೇಳುತ್ತಲೇ ಬಂದಿದೆ. ಆದರೆ, ಆರೋಪಿಗೆ ಕಠಿಣ ಶಿಕ್ಷೆ ಆಗಿಲ್ಲ. ಶಿವಮೊಗ್ಗದ ಹಿಂದೂ ಕಾರ್ಯಕರ್ತ ಹರ್ಷನನ್ನು ಕೊಂದವರಿಗೆ ಜೈಲಿನಲ್ಲಿ ರಾಜಾಥಿತ್ಯ ಸಿಗುತ್ತಿದೆ. ಸರ್ಕಾರದ ಕಠಿಣ ಕಾನೂನು ಕ್ರಮಕ್ಕೆ ಸಿದ್ಧ ಹೇಳಿಕೆಯಿಂದ ನೊಂದಿರುವ ಹಿಂದೂ ಪರ ಸಂಘಟನೆ ಕಾರ್ಯಕರ್ತರು ಈ ರೀತಿಯಾಗಿ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕುತ್ತಿದ್ದಾರೆ. ಕೆಲ ಕಾರ್ಯಕರ್ತರು ಪ್ರವೀಣ್ ಸಾವಿಗೆ ಸೂಕ್ತ ನ್ಯಾಯ ಸಿಗುವವರೆಗೂ ಪಕ್ಷದ ಯಾವುದೇ ಕಾರ್ಯಕ್ರಮದಲ್ಲೂ ಭಾಗಿಯಾಗಬಾರದೆಂದು ತೀರ್ಮಾನಿಸಿದ್ದಾರೆ. ಇದನ್ನೂ ಓದಿ: ಸಿಎಂ ನೋಡಲು ಡಿಸೆಂಟ್ ಆದರೆ, ನಿರ್ಣಯಗಳು ತುಂಬಾ ಸ್ಟ್ರಾಂಗ್: ಸುಧಾಕರ್
Live Tv
[brid partner=56869869 player=32851 video=960834 autoplay=true]
ಬೆಂಗಳೂರು: ಬಿಜೆಪಿ ಮುಖಂಡ ಪ್ರವೀಣ್ ಕುಮಾರ್ ನೆಟ್ಟಾರು ಹತ್ಯೆಯ ಬಳಿಕ ದೇಶದಲ್ಲಿ ಅಪರೂಪ ಎಂಬಂತೆ ಕರಾವಳಿಯ ಬಿಜೆಪಿ ಕಾರ್ಯಕರ್ತರು ರೊಚ್ಚಿಗೆದ್ದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಘಟನೆಯಿಂದ ಹೈಕಮಾಂಡ್ ವಿಚಲಿತಗೊಂಡಿದೆ.
ಪ್ರವೀಣ್ ಕುಮಾರ್ ನೆಟ್ಟಾರು ಹತ್ಯೆಯ ಬಳಿಕ ಬೆಳ್ಳಾರೆಗೆ ಅಂತಿಮ ದರ್ಶನಕ್ಕೆ ತೆರಳಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಚಿವರಾದ ಸುನಿಲ್ ಕುಮಾರ್, ಎಸ್. ಅಂಗಾರ ಸೇರಿದಂತೆ ಇತರ ಸಚಿವರಿಗೆ ಘೇರಾವ್, ಕಾರನ್ನೇ ಪಲ್ಟಿ ಹಾಕುವಷ್ಟರ ಮಟ್ಟಿಗೆ ಕಾರ್ಯಕರ್ತರ ಆಕ್ರೋಶದ ಬಗ್ಗೆ ರಾಜ್ಯ ಬಿಜೆಪಿ ಘಟಕದಿಂದ ವೀಡಿಯೋ ಸಮೇತ ಹೈಕಮಾಂಡ್ ವರದಿ ತರಿಸಿಕೊಂಡಿದೆ. ಇದೇ ವೇಳೆ ಕರಾವಳಿ ಭಾಗದ ಹಾಲಿ ಬಿಜೆಪಿ ಶಾಸಕರು, ಸಚಿವರು, ಬಿಜೆಪಿ ನಾಯಕರ ಟ್ರ್ಯಾಕ್ ರೆಕಾರ್ಡ್ ಕೂಡ ಬಿಜೆಪಿ ಹೈಕಮಾಂಡ್ ತರಿಸಿಕೊಂಡಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಆರಗ ಜ್ಞಾನೇಂದ್ರರನ್ನು ಕಿತ್ತುಹಾಕದೆ ಇದ್ದರೆ ರಾಜ್ಯದಲ್ಲಿ ಜನ ಮನೆಯಿಂದ ಹೊರಗೆ ಬರುವುದೂ ಕಷ್ಟ: ಸಿದ್ದರಾಮಯ್ಯ
ಇನ್ನೊಂದೆಡೆ ದಕ್ಷಿಣ ಕನ್ನಡ ಸೇರಿದಂತೆ ರಾಜ್ಯಾದ್ಯಂತ ಪ್ರವೀಣ್ ಹತ್ಯೆ ಖಂಡಿಸಿ ರಾಜೀನಾಮೆ ಪರ್ವ ಮುಂದುವರಿದಿದೆ. ಇದುವರೆಗೆ 300ಕ್ಕೂ ಹೆಚ್ಚು ಕಾರ್ಯಕರ್ತರು ರಾಜೀನಾಮೆ ನೀಡಿದ್ದಾರೆ. ಪಕ್ಷದ ನಾಯಕರ ವಿರುದ್ಧ ಕಾರ್ಯಕರ್ತರ ಅಸಮಾಧಾನ ಮುಂದುವರಿದಿದೆ. ಅಂದು ಬಿಜೆಪಿ ಪಕ್ಷಕ್ಕೆ ಜೈಕಾರ ಹಾಕುತ್ತಿದ್ದ ಬಿಜೆಪಿ ಕಾರ್ಯಕರ್ತರು ಇಂದು ಪಕ್ಷದ ವಿರುದ್ಧವೇ ಧಿಕ್ಕಾರ ಕೂಗುವಂತಾ ಪರಿಸ್ಥಿತಿ ಕರ್ನಾಟಕದಲ್ಲಿ ನಿರ್ಮಾಣವಾಗಿದೆ. ಇದನ್ನೂ ಓದಿ: ಪ್ರವೀಣ್ ಹತ್ಯೆ ಕೇಸ್ – ತಪ್ಪು ಮಾಹಿತಿಯಿಂದ ನಡೀತಾ ಕೊಲೆ?
ಬಿಜೆಪಿಯಲ್ಲಿ ಪಕ್ಷದ ನಾಯಕರ ಧೋರಣೆಗೆ ಬೇಸತ್ತು ಹೋದ ಕಾರ್ಯಕರ್ತರು ಸಾಕು ಈ ಬಾರಿ ತಳಮಟ್ಟದ ಕಾರ್ಯಕರ್ತರಿಗೆ ಟಿಕೆಟ್ ಕೊಡಿ. ನಾವು ಬಿಜೆಪಿ ಇಮೇಜ್ ಬದಲಾಯಿಸುತ್ತೇವೆ. ನಿಮ್ಮ ಮೇಲೆ ಈಗ ನಂಬಿಕೆ ನಿಧಾನವಾಗಿ ಕರಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಜೆಪಿಯ ಭದ್ರ ಕೋಟೆಯಾಗಿ ಗುರುತಿಸಿಕೊಂಡಿದ್ದ ಕರಾವಳಿಯಲ್ಲಿ ಕಾರ್ಯಕರ್ತರೇ ಬಿಜೆಪಿ ನಾಯಕರ ವಿರುದ್ಧ ಕೆಂಡಕಾರಿದ್ದಾರೆ. ಕರಾವಳಿಯ ಕೇಸರಿ ಯುವ ಪಡೆಯ ಆಕ್ರೋಶದ ಕಿಚ್ಚು ಸದ್ದು ಮಾಡುತ್ತಿದೆ. ಇದರಿಂದ ಮುಂದಿನ ದಿನಗಳಲ್ಲಿ ಬಿಜೆಪಿಗೆ ಇದು ಹೊಡೆತ ಬೀಳುವ ಸಾಧ್ಯತೆ ಇದೆ. ಜೊತೆಗೆ ಚುನಾವಣೆ ಹತ್ತಿರದಲ್ಲಿರುವುದರಿಂದ ಈ ಬಗ್ಗೆ ಹೈಕಮಾಂಡ್ ಗಂಭೀರವಾಗಿ ಚಿಂತನೆ ನಡೆಸಿದೆ.
Live Tv
[brid partner=56869869 player=32851 video=960834 autoplay=true]