Tag: Pratt & Whitney

  • ಹಾರಾಟ ನಿಲ್ಲಿಸಿದ ಗೋ ಫಸ್ಟ್ – ಕಂಪನಿ ದಿವಾಳಿಯಾಗಿದ್ದು ಯಾಕೆ?

    ಹಾರಾಟ ನಿಲ್ಲಿಸಿದ ಗೋ ಫಸ್ಟ್ – ಕಂಪನಿ ದಿವಾಳಿಯಾಗಿದ್ದು ಯಾಕೆ?

    ಮುಂಬೈ: ತೀವ್ರ ಹಣಕಾಸಿನ ಕೊರತೆಯಿಂದಾಗಿ ಗೋ ಫಸ್ಟ್ ಏರ್‌ಲೈನ್ಸ್‌ (Go First airline) ತನ್ನ ಹಾರಾಟವನ್ನು ನಿಲ್ಲಿಸಿದೆ.

    ಆರ್ಥಿಕ ಸಮಸ್ಯೆಯಿಂದಾಗಿ ಅಮೆರಿಕ ಮೂಲದ ಕಂಪನಿಯಿಂದ ಎಂಜಿನ್‍ಗಳನ್ನು ಪಡೆಯಲು ಸಾಧ್ಯವಾಗದ ಕಾರಣ ಸಂಸ್ಥೆಯ 50% ನಷ್ಟು ವಿಮಾನಗಳನ್ನು ಈಗಾಗಲೇ ಸ್ಥಗಿತಗೊಳಿಸಲಾಗಿತ್ತು. ಇದೀಗ ಸಂಪೂರ್ಣ ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸುವುದಾಗಿ ಸಂಸ್ಥೆ ಘೋಷಿಸಿಕೊಂಡಿದೆ. ಈ ಬಗ್ಗೆ 24 ಗಂಟೆಗಳ ಒಳಗಾಗಿ ಉತ್ತರವನ್ನು ನೀಡುವಂತೆ ವಿಮಾನಯಾನ ನಿಯಂತ್ರಣ ಸಂಸ್ಥೆ (DGCA) ಕೇಳಿದೆ. ವಿಮಾನ ಹಾರಾಟ ಸ್ಥಗಿತಕ್ಕೂ ಮುನ್ನ ನಿಯಂತ್ರಣ ಸಂಸ್ಥೆಗೆ ಮಾಹಿತಿ ನೀಡುವುದು ಕಡ್ಡಾಯವಾಗಿದ್ದು, ಮಾಹಿತಿ ನೀಡದಿದ್ದಲ್ಲಿ ನಿಯಮದ ಉಲ್ಲಂಘನೆಯಾಗಲಿದೆ. ಇದನ್ನೂ ಓದಿ: ಕೇಂದ್ರದ ಮಾಜಿ ನೌಕರನ ಮನೆ ಮೇಲೆ ಸಿಬಿಐ ದಾಳಿ – 20 ಕೋಟಿ ವಶ

    ಪಿ ಅಂಡ್ ಡಬ್ಲ್ಯೂ (Pratt & Whitney) ಇಂಟರ್‌ನ್ಯಾಷನಲ್ ಏರೋ ಇಂಜಿನ್‍ಗಳು ನಿರಂತರವಾಗಿ ಸಮಸ್ಯೆ ನೀಡುತ್ತಿದ್ದವು. ಇದರ ಪರಿಣಾಮವಾಗಿ ಗೋ ಫಸ್ಟ್ 28 ವಿಮಾನಗಳನ್ನು ಸ್ಥಗಿತಗೊಳಿಸಬೇಕಾದ ಅನಿವಾರ್ಯತೆ ಎದುರಾಯಿತು. ವಾಡಿಯಾ ಗ್ರೂಪ್ ಒಡೆತನದ ರಾಷ್ಟ್ರೀಯ ಕಂಪನಿಯು ಕಾನೂನು ನ್ಯಾಯಮಂಡಳಿಯ ಮುಂದೆ ದಿವಾಳಿತನಕ್ಕಾಗಿ ಅರ್ಜಿ ಸಲ್ಲಿಸಿದೆ. ಇದು ದುರದೃಷ್ಟಕರ ನಿರ್ಧಾರ, ಆದರೆ ಕಂಪನಿಯ ಹಿತಾಸಕ್ತಿಗಳನ್ನು ರಕ್ಷಿಸಲು ಇದನ್ನು ಮಾಡಬೇಕಾಗಿದೆ ಎಂದು ಗೋ ಫಸ್ಟ್ ಮುಖ್ಯ ಕಾರ್ಯನಿರ್ವಾಹಕ ಕೌಶಿಕ್ ಖೋನಾ ತಿಳಿಸಿದ್ದಾರೆ.

    ವಿಮಾನಯಾನ ಸಂಸ್ಥೆಯು ಇಂಜಿನ್‍ಗಳ ಪೂರೈಕೆ ಸಮಸ್ಯೆಗಳನ್ನು ಎದುರಿಸುತ್ತಿದೆ. ಅಲ್ಲದೆ ಸರ್ಕಾರವು ಸಂಸ್ಥೆಗೆ ಸಾಧ್ಯವಿರುವ ಎಲ್ಲ ರೀತಿಯ ಸಹಾಯ ಮಾಡಲಿದೆ ಎಂದು ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ (Jyotiraditya Scindia) ತಿಳಿಸಿದ್ದಾರೆ.

    ಗೋ ಫಸ್ಟ್ ದಿವಾಳಿಗೇನು ಕಾರಣ?
    ಗೋ ಫಸ್ಟ್ ವಿಮಾನಗಳು ಎಂಜಿನ್ ಸಮಸ್ಯೆ ಎದುರಿಸುತ್ತಿದ್ದವು. ಆದರೆ ಎಂಜಿನ್ ಪೂರೈಕೆ ಒಪ್ಪಂದ ಮಾಡಿಕೊಂಡಿದ್ದ ಪಿ ಅಂಡ್ ಡಬ್ಲ್ಯೂ ಕಂಪನಿ ಎಂಜಿನ್ ಪೂರೈಕೆ ಮಾಡುವಲ್ಲಿ ವಿಫಲವಾಗಿತ್ತು. ಇದರಿಂದ 28 ವಿಮಾನಗಳನ್ನು ಸಂಸ್ಥೆ ನಿಲ್ಲಿಸಿತ್ತು. ಇದು ಸಂಸ್ಥೆಯ ಆರ್ಥಿಕ ನಷ್ಟಕ್ಕೆ ಕಾರಣವಾಗಿತ್ತು.

    17 ವರ್ಷಗಳ ಹಿಂದೆ ಸ್ಥಾಪನೆಗೊಂಡಿದ್ದ ಸಂಸ್ಥೆಯು 9000 ಕೋಟಿ ರೂ. ಸಾಲವನ್ನು ಹೊಂದಿದೆ. ವಿಮಾನಯಾನ ಸಂಸ್ಥೆಯನ್ನು ಉಳಿಸಲು ಹೂಡಿದಾರರು ಕಳೆದ ಮೂರು ವರ್ಷಗಳಲ್ಲಿ 3200 ಕೋಟಿ ರೂ. ಹೂಡಿಕೆ ಮಾಡಿದ್ದರು. ಇದನ್ನೂ ಓದಿ: ಪೊಲೀಸರೆಂದು ಯಾಮಾರಿಸಿ ವಿದೇಶಿ ಪ್ರಜೆಯ ಹಣ ದೋಚಿದ ದುಷ್ಕರ್ಮಿಗಳು