Tag: prathap

  • Bigg Boss: 5 ಫೈನಲಿಸ್ಟ್‌ಗಳ ನಡುವೆ ಟಫ್ ಫೈಟ್- ಯಾರಿಗೆ ಸಿಗಲಿದೆ ಗೆಲುವು?

    Bigg Boss: 5 ಫೈನಲಿಸ್ಟ್‌ಗಳ ನಡುವೆ ಟಫ್ ಫೈಟ್- ಯಾರಿಗೆ ಸಿಗಲಿದೆ ಗೆಲುವು?

    ಅಂತೂ ಇಂತೂ ಬಿಗ್ ಬಾಸ್ ಕನ್ನಡ ಸೀಸನ್ 10ಕ್ಕೆ (Bigg Boss Kannada 10) ತೆರೆ ಬೀಳುವ ಸಮಯ ಬಂದಿದೆ. ದೊಡ್ಮನೆಯ ವಿನ್ನರ್ ಯಾರಾಗಬಹುದು ಎಂದು ಕನ್ನಡಿಗರು ಎದುರು ನೋಡ್ತಿದ್ದಾರೆ. ಅದಕ್ಕೆ ಉತ್ತರ, ಇಂದು (ಜ.28) ರಾತ್ರಿ ಬಿಗ್ ಬಾಸ್ ಫಿನಾಲೆ ಎಪಿಸೋಡ್‌ನಲ್ಲಿ ಸಿಗಲಿದೆ. ತುಕಾಲಿ ಸಂತು ನಂತರ ಇನ್ನೂಳಿದ 5 ಫೈನಲಿಸ್ಟ್‌ಗಳ ನಡುವೆ ಗೆಲುವಿಗಾಗಿ ಟಫ್ ಫೈಟ್ ಶುರುವಾಗಿದೆ.

    ಈ ಬಾರಿ 6 ಜನ ಸ್ಪರ್ಧಿಗಳು ಫೈನಲಿಸ್ಟ್‌ಗಳಾಗಿ ಫಿನಾಲೆಗೆ ಎಂಟ್ರಿ ಪಡೆದುಕೊಂಡಿದ್ದರು. ಇದು ಸುದೀಪ್ ಅವರು ಸ್ಪರ್ಧಿಗಳಿಗೆ ನೀಡಿದ ಉಡುಗೊರೆಯಾಗಿತ್ತು. ನಿನ್ನೆ ಎಪಿಸೋಡ್‌ನಲ್ಲಿ (ಜ.27) 6ನೇ ರನ್ನರ್ ಅಪ್ ಆಗಿ ತುಕಾಲಿ ಸಂತೋಷ್ ಹೊರಬಂದಿದ್ದಾರೆ. ಇದನ್ನೂ ಓದಿ:ಇಂದು ಹಾಸ್ಯನಟ ನಾಗಭೂಷಣ್ ಮದುವೆ

    ಸದ್ಯ ಫಿನಾಲೆ ಹಣಾಹಣಿಯಲ್ಲಿ ಕಾರ್ತಿಕ್ ಮಹೇಶ್ (Karthik Mahesh), ಸಂಗೀತಾ (Sangeetha), ಡ್ರೋನ್ ಪ್ರತಾಪ್, ವಿನಯ್, ವರ್ತೂರು ಸಂತೋಷ್ ಇದ್ದಾರೆ. ಈ 5 ಸ್ಪರ್ಧಿಗಳಲ್ಲಿ ಯಾರಿಗೆ ಬಿಗ್ ಬಾಸ್ ವಿನ್ನರ್ ಪಟ್ಟ ಸಿಗಲಿದೆ ಎಂಬುದೇ ಸದ್ಯದ ಪ್ರಶ್ನೆಯಾಗಿದೆ.‌ ಇದನ್ನೂ ಓದಿ:ಹನುಮಾನ್ ಶಕ್ತಿಗೆ ಬಾಕ್ಸ್ ಆಫೀಸ್ ಉಡೀಸ್: 14 ದಿನಕ್ಕೆ 250 ಕೋಟಿ ಲೆಕ್ಕ

    5 ಜನ ಸ್ಪರ್ಧಿಗಳು ಸ್ಟ್ರಾಂಗ್ ಇದ್ದಾರೆ. ಮೈಂಡ್ ಗೇಮ್, ಜನ ಬಲ, ಟಾಸ್ಕ್ ಅಂತ ಬಂದಾಗ ಠಕ್ಕರ್ ಕೊಡುವ ಗುಣ ಎಲ್ಲವೂ ಇದೆ. ಹೀಗಿರುವಾಗ ಯಾರಿಗೆ ಗೆಲುವಿನ ಲಕ್ಷ್ಮಿ ಒಲಿಯುತ್ತಾಳೆ ಎಂಬುದು ಅಭಿಮಾನಿಗಳ ಯಕ್ಷ ಪ್ರಶ್ನೆಯಾಗಿದೆ.

    ಈ ಸೀಸನ್‌ನಲ್ಲಿರೋ ಎಕೈಕ ಮಹಿಳಾ ಸ್ಪರ್ಧಿ ಎಂದರೆ ಅದು ಸಂಗೀತಾ ಶೃಂಗೇರಿ. ಮೊದಲ ದಿನದಿಂದಲೂ ಟಫ್ ಫೈಟ್ ನೀಡುತ್ತಲೇ ಬಂದಿದ್ದಾರೆ. ವಿನಯ್, ಕಾರ್ತಿಕ್ ಏನು ಕಮ್ಮಿಯಿಲ್ಲ. ಎದುರಾಳಿಗಳಿಗೆ ಠಕ್ಕರ್ ಕೊಟ್ಟು ಬರುವ ಸ್ಪರ್ಧಿಗಳು. ವರ್ತೂರು ಸಂತೋಷ್, ಪ್ರತಾಪ್ ಸೈಲೆಂಟ್ ಆಗಿದ್ರು ಕೂಡ ಸಮಯ ಬಂದಾಗ ವೈಲೆಂಟ್ ಆಗಿ ಆಟ ಆಡಿದ್ದು ಇದೆ. ಹಾಗಾಗಿ ವಿನ್ನರ್ ಘೋಷಣೆಗೆ ಬಿಗ್ ಬಾಸ್ ಫಿನಾಲೆ ಎಪಿಸೋಡ್ ಪ್ರಸಾರ ಆಗುವವರೆಗೂ ಕಾಯಬೇಕಿದೆ.

  • ಮಾನವೀಯತೆ ಮರೆತ ಸ್ಪರ್ಧಿಗಳು- ಸಂಗೀತಾ ಸಹೋದರ ಬೇಸರ

    ಮಾನವೀಯತೆ ಮರೆತ ಸ್ಪರ್ಧಿಗಳು- ಸಂಗೀತಾ ಸಹೋದರ ಬೇಸರ

    ಬಿಗ್ ಬಾಸ್ ಮನೆಯ (Bigg Boss Kannada 10) ಕುರಿತು ಸದ್ಯ ಸಿಕ್ಕಾಪಟ್ಟೆ ಸುದ್ದಿಯಾಗ್ತಿರೋ ವಿಚಾರ ಅಂದರೆ ಸಂಗೀತಾ- ಪ್ರತಾಪ್ (Prathap) ಜೊತೆ ಸ್ಪರ್ಧಿಗಳು ರಾಕ್ಷಸರಂತೆಯೇ ವರ್ತಿಸಿರೋದು. ಈ ಪರಿಣಾಮ, ಸಂಗೀತಾ- ಪ್ರತಾಪ್ ಆಸ್ಪತ್ರೆಗೆ ಸೇರಿದ್ದು. ಈ ಬೆನ್ನಲ್ಲೇ, ಸಂಗೀತಾ ಸಹೋದರ ಸಂತೋಷ್ ಕುಮಾರ್ (Santhosh Kumar) ಸ್ಪರ್ಧಿಗಳ ಕ್ರೂರತ್ವದ ಬಗ್ಗೆ ಸಿಡಿದೆದಿದ್ದಾರೆ.

    ಸದ್ಯ ಇಬ್ಬರೂ ಚಿಕಿತ್ಸೆ ಪಡೆದು, ಈಗ ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದಾರೆ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಭಾರೀ ಚರ್ಚೆ ಆಗುತ್ತಿದೆ. ಇದೆಲ್ಲದರ ನಡುವೆ ಸಂಗೀತಾ ಶೃಂಗೇರಿ ಸಹೋದರ ಸಂತೋಷ್ ಕುಮಾರ್ ಸೋಷಿಯಲ್ ಮೀಡಿಯಾದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಟ ಸುದೀಪ್ ಹಾಗೂ ವಾಹಿನಿಗೆ ಕುರಿತು ಬೇಸರ ಹೊರಹಾಕಿದ್ದಾರೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸ್ಟೋರಿಯಲ್ಲಿ ಪೋಸ್ಟ್ ಮಾಡಿದ್ದು, ಅದರ ಸ್ಕ್ರಿನ್‌ಶಾಟ್ ವೈರಲ್ ಆಗುತ್ತಿದೆ. ಇದನ್ನೂ ಓದಿ:ಸಿಎಂ, ಗಣ್ಯರ ಅಂತಿಮ ದರ್ಶನದ ಬಳಿಕ ಲೀಲಾವತಿ ಅಂತಿಮ ಸಂಸ್ಕಾರ

    ಸುದೀಪ್ ಸರ್, ನೀವು ಹೇಳಿದ್ದಿರಿ. ಬಿಗ್‌ಬಾಸ್ ಮನೆ ಸುರಕ್ಷಿತ. ಏನು ಆಗಲ್ಲ ಅಂತ. ಆದರೆ ಈಗ ನೋಡಿದ್ರೆ, ಇದು ಹಾಗಿಲ್ಲ. ಇದು ಕುಟುಂಬದ ಶೋ ಅಂತ ಕಾಣಲ್ಲ. ಕೇವಲ ಹಿಂಸೆಯೇ ಕಾಣ್ತಿದೆ. ಕುಟುಂಬದವರು ಈ ರೀತಿಯ ಆಕ್ರಮಣಕಾರಿ ವರ್ತನೆಯನ್ನು ಹೇಗೆ ನೋಡ್ತಾರೆ ಎಂದು ಪ್ರಶ್ನಿಸಿದ್ದಾರೆ. ವಾಹಿನಿ, ನಾವ್ ಸುದೀಪ್ ಸರ್ ಇದರ ಬಗ್ಗೆ ಸರಿ ಮಾಡುವವರೆಗೂ ನಾವು ಯಾಕೆ ಕಾಯಬೇಕು ಎಂದು ಸಂಗೀತಾ ಸಹೋದರ ಸಂತೋಷ್‌ ಕುಮಾರ್‌ ಪ್ರಶ್ನೆ ಮಾಡಿದ್ದಾರೆ.

    ಬಿಗ್ ಬಾಸ್ ಇರೋದು ಜನರ ತಪ್ಪುಗಳನ್ನು ತಕ್ಷಣ ಅವರಿಗೆ ಅರ್ಥ ಮಾಡಿಸಲು ಅಲ್ಲವೇ? ಎಂದು ಬರೆದುಕೊಂಡಿದ್ದಾರೆ. ಸದ್ಯ ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ವೀಕ್ಷಕರು ಕೂಡ ಈ ಬಗ್ಗೆ ಬೇಸರ ಹೊರ ಹಾಕುತ್ತಿದ್ದಾರೆ.

    ಸದ್ಯ ಬಿಗ್ ಬಾಸ್ ವಾರಾಂತ್ಯದ ಸುದೀಪ್ ಮಾತುಕತೆ ವೇಳೆ, ಸಂಗೀತಾ ಮತ್ತು ಪ್ರತಾಪ್ ಇಬ್ಬರೂ ಎಂಟ್ರಿ ಕೊಟ್ಟಿದ್ದು, ಆರೋಗ್ಯದ ಸ್ಥಿತಿ ಹೇಗಿದೆ ಎಂಬುದು ಇನ್ನಷ್ಟೇ ಬಹಿರಂಗವಾಗಬೇಕಿದೆ.