Tag: Prateek Chaudhury

  • ಸಿತಾರ್ ವಾದಕ ಪ್ರತೀಕ್ ಚೌಧರಿ ಕೋವಿಡ್‍ಗೆ ಬಲಿ

    ಸಿತಾರ್ ವಾದಕ ಪ್ರತೀಕ್ ಚೌಧರಿ ಕೋವಿಡ್‍ಗೆ ಬಲಿ

    ನವದೆಹಲಿ: ಖ್ಯಾತ ಸಿತಾರ್ ವಾದಕ ಪ್ರತಿಕ್ ಚೌಧರಿ(49) ಕೊರೊನಾಗೆ ಬಲಿಯಾಗಿದ್ದಾರೆ. ಪ್ರತಿಕ್ ಚೌಧರಿಯವರ ತಂದೆ ಪ್ರಸಿದ್ಧ ಪಂಡಿತ್ ದೇವಬ್ರತ ಚೌಧರಿ ಕಳೆದ ವಾರವಷ್ಟೇ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದರು.

    ಕೊರೊನಾ ಸೋಂಕಿಗೆ ಒಳಗಾಗಿದ್ದ ಪ್ರತೀಕ್ ಚೌಧರಿಯವರನ್ನು ಗುರು ತೇಜ್ ಬಹದ್ದೂರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಾಕಾರಿಯಾಗದೇ ಗುರುವಾರ ಸಾವನ್ನಪ್ಪಿದ್ದಾರೆ.

    ಪ್ರತಿಕ್ ಚೌಧರಿಯವರು ನಿಧನರಾಗಿರುವ ಬಗ್ಗೆ ಭಾರತ ಸರ್ಕಾರ ಸಂಸ್ಕೃತಿ ಸಚಿವಾಲಯ, ತನ್ನ ಟ್ವಿಟ್ಟರ್ ಖಾತೆಯಲ್ಲಿ ಶುಕ್ರವಾರ ಮಾಹಿತಿ ಹಂಚಿಕೊಂಡಿದೆ. ಪ್ರಖ್ಯಾತ ಸಿತಾರ ವಾದಕ ಪ್ರತೀಕ್ ಚೌಧರಿಯವರ ಸಾವಿಗೆ ಸಂತಾಪ ಸೂಚಿಸುತ್ತೇವೆ. ಅವರು ದೆಹಲಿಯ ವಿಶ್ವವಿದ್ಯಾಲಯದ ಸಂಗೀತ ಮತ್ತು ಲಲಿತಕಲಾ ವಿಭಾಗದ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ದುಃಖವನ್ನು ತಡೆದುಕೊಳ್ಳುವ ಶಕ್ತಿಯನ್ನು ಅವರ ಕುಟುಂಬಕ್ಕೆ ದೇವರು ನೀಡಲಿ ಮತ್ತು ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಸಂತಾಪ ಸೂಚಿಸಿದ್ದಾರೆ.

    ಈ ಮುನ್ನ ಅವರ ತಂದೆ ಕೂಡ ಕೊರೊನಾ ಸೋಂಕಿಗೆ ಒಳಗಾಗಿದ್ದರು. ಅವರನ್ನು ದೆಹಲಿಯ ತೇಗ್ ಬಹದ್ದೂರ್ ಆಸ್ಪತ್ರೆಯ ಐಸಿಯುವಿನಲ್ಲಿ ದಾಖಲಿಸಲಾಗಿತ್ತು. ಆದರೆ ಉಸಿರಾಟದ ಸಮಸ್ಯೆಯುಂಟಾಗಿ ಚಿಕಿತ್ಸೆ ಫಲಾಕಾರಿಯಾಗದೇ ಕೊನೆಯುಸಿರೆಳೆದಿದ್ದರು.