Tag: Pratap Singh

  • ವಿವಾದ ಸೃಷ್ಟಿಸುವುದೇ ಪ್ರತಾಪ್ ಸಿಂಹ ಕೆಲಸ: ಯತೀಂದ್ರ ಸಿದ್ದರಾಮ್ಯಯ ಕಿಡಿ

    ವಿವಾದ ಸೃಷ್ಟಿಸುವುದೇ ಪ್ರತಾಪ್ ಸಿಂಹ ಕೆಲಸ: ಯತೀಂದ್ರ ಸಿದ್ದರಾಮ್ಯಯ ಕಿಡಿ

    ಚಾಮರಾಜನಗರ: ಇಲ್ಲದಿರುವ ವಿವಾದ ಸೃಷ್ಟಿಸುವುದೇ ಪ್ರತಾಪ್ ಸಿಂಹ ಕೆಲಸವಾಗಿದೆ ಎಂದು ಹೆಳುವ ಮೂಲಕ ಸಂಸದ ಪ್ರತಾಪ್ ಸಿಂಹಗೆ ತಿರುಗೇಟು ನೀಡಿದ್ದಾರೆ.

    ಕೊಡಗಿನ ಜನ ಟಿಪ್ಪು ಸುಲ್ತಾನ್‍ಗೆ ಹೆದರಲಿಲ್ಲ, ಸಿದ್ದು ಸುಲ್ತಾನ್‍ಗೆ ಹೆದರುತ್ತಾರೆ ಎಂಬ ಪ್ರತಾಪ್‍ಸಿಂಹ ಹೇಳಿಕೆ ವಿಚಾರವಾಗಿ ಚಾಮರಾಜನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರಚೋದನಾಕಾರಿ ಹೇಳಿಕೆ ಕೊಟ್ಟು ಇಲ್ಲದಿರುವ ವಿವಾದ ಸೃಷ್ಟಿಸುವುದೇ ಪ್ರತಾಪ್ ಸಿಂಹ ಕೆಲಸ. ಕೊಡಗಿನ ಜನ ಧೈರ್ಯವಂತರು, ವೀರರು ಹಾಗೂ ಒಳ್ಳೆಯ ಜನ. ಅಂತಹವರನ್ನು ಬಿಜೆಪಿಯವರು ಹೇಡಿಗಳಾಗಿ ಕಲ್ಲರಸೆಯುವ ಮಟ್ಟಕ್ಕೆ ತಂದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಆರ್‍ಎಸ್‍ಎಸ್ ಸಂಚಾಲಕ ಹಾಗೂ ಬಿಜೆಪಿ ಕಾರ್ಯಕರ್ತನ ಮೂಲಕ ಮೊಟ್ಟೆ ಎಸೆಸಿದ್ದಾರೆ. ಕೊನೆಗೆ ಆತ ನಮ್ಮ ಕಾರ್ಯಕರ್ತನೇ ಅಲ್ಲ. ಕಾಂಗ್ರೆಸ್ ಕಾರ್ಯಕರ್ತ ಅಂತ ಸುಳ್ಳು ಹೇಳಿ ಬಿಜೆಪಿಯವರು ಹೇಡಿತನ ತೋರಿಸುತ್ತಿದ್ದಾರೆ. ಬಿಜೆಪಿಯವರ ರಾಜಕೀಯ ಅಸಹ್ಯ ಹುಟ್ಟಿಸುತ್ತಿದೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ನಾಟಿ ಕೋಳಿ ಊಟ ಮಾಡಿ ಅಂಬಾರಿಗೆ ಪುಷ್ಪಾರ್ಚನೆ: ಸಿದ್ದು ವಿರುದ್ಧ ಪ್ರತಾಪ್‌ ಸಿಂಹ ಕಿಡಿ

    ಸಿದ್ದರಾಮಯ್ಯ ಹತ್ಯೆಗೆ ಸಂಚು ಮಾಡಲಾಗಿದೆ ಎಂಬ ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಅವರು ಆರೋಪ ಮಾಡಿರುವ ವಿಚಾರವಾಗಿ ಮಾತನಾಡಿದ ಅವರು, ಆ ಬಗ್ಗೆ ನನಗೆ ಗೊತ್ತಿಲ್ಲ. ಆದರೆ ಬಿಜೆಪಿಯವರ ಹಾಗೂ ಹಿಂದುತ್ವವಾದಿ ಸಂಘಟನೆಗಳ ಇತಿಹಾಸ ಗಮನಿಸಿದಾಗ ಹಿಂಸಾಚಾರದಲ್ಲಿ ತೊಡಗಿರುವುದು ಕಂಡುಬಂದಿದೆ. ಅವರು ಏನು ಮಾಡಲು ಹೇಸುವವರಲ್ಲ. ನಾವು ಯಾವುದಕ್ಕೂ ಹೆದರುವುದಿಲ್ಲ, ನಮ್ಮ ಹೋರಾಟ ಮುಂದುವರಿಸುತ್ತೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ದಿನೇಶ್ ಗುಂಡೂರಾವ್ ವಾಹನದ ಮೇಲೆ ಕಾಂಗ್ರೆಸ್ ಕಾರ್ಯಕರ್ತರ ದಾಳಿ

    Live Tv
    [brid partner=56869869 player=32851 video=960834 autoplay=true]

  • ರಾಜ್ಯದಲ್ಲಿ ಮೈತ್ರಿ ಸರ್ಕಾರವಿದ್ದರೂ ಮೈಸೂರಿನಲ್ಲಿ ಜನರ ಬೆಂಬಲ ನಮಗಿದೆ: ಪ್ರತಾಪ್ ಸಿಂಹ

    ರಾಜ್ಯದಲ್ಲಿ ಮೈತ್ರಿ ಸರ್ಕಾರವಿದ್ದರೂ ಮೈಸೂರಿನಲ್ಲಿ ಜನರ ಬೆಂಬಲ ನಮಗಿದೆ: ಪ್ರತಾಪ್ ಸಿಂಹ

    ಮೈಸೂರು: ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ 62 ವಾರ್ಡ್‌ಗಳಲ್ಲಿ 22 ಸ್ಥಾನಗಳನ್ನು ಪಡೆದಿರುವುದು ಉತ್ತಮ ಸಾಧನೆಯಾಗಿದೆ ಎಂದು ಸಂಸದ ಪ್ರತಾಪ್ ಸಿಂಹ ಸಂತಸ ವ್ಯಕ್ತಪಡಿಸಿದ್ದಾರೆ.

    ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ರಾಜ್ಯದಲ್ಲಿ ಮೈತ್ರಿ ಸರ್ಕಾರ ಇದ್ದರೂ ನಮಗೆ ಮೈಸೂರಿನ ಜನ ಬೆಂಬಲ ನೀಡಿದ್ದಾರೆ. ಮೈಸೂರು ಮಹಾನಗರ ಪಾಲಿಕೆಯಲ್ಲಿ ನಡೆದ ಚುನಾವಣೆಯಲ್ಲಿ 62 ವಾರ್ಡ್‌ಗಳಲ್ಲಿ ಬಿಜೆಪಿ 22 ಸ್ಥಾನಗಳನ್ನು ಗೆದ್ದಿದೆ. ಬಿಜೆಪಿಯ ಬಂಡಾಯ ಅಭ್ಯರ್ಥಿ ಒಂದು ಕಡೆ ಗೆಲವು ಸಾಧಿಸಿದ್ದಾರೆ. ಹೀಗಾಗಿ ಬಿಜೆಪಿ ಒಟ್ಟು 23 ಸ್ಥಾನಗಳನ್ನು ಪಡೆದಿದ್ದಾರೆ. ಕಾಂಗ್ರೆಸ್ ರಾಜ್ಯದಲ್ಲಿ ಒಟ್ಟಿಗೆ ಅಧಿಕಾರ ನಡೆಸುತ್ತಿರುವ ಸಂದರ್ಭದಲ್ಲೂ ಗೆದ್ದಿರುವುದು ಮೈಸೂರು ಮಹಾನಗರ ಪಾಲಿಕೆ ಇತಿಹಾಸದಲ್ಲೇ ಉತ್ತಮವಾದ ಸಾಧನೆಯಾಗಿದೆ ಎಂದರು.

    ಜೆಡಿಎಸ್ ಮುಂದೆ ಈಗ ಆಯ್ಕೆ ಇದೆ. ಅವರು ಯಾರ ಜೊತೆ ಹೋಗುತ್ತಾರೆ ಎಂಬುದನ್ನ ಅವರೇ ತೀರ್ಮಾನಿಸಲಿ. ಇಲ್ಲವಾದಲ್ಲಿ ನಾವು ವಿರೋಧ ಪಕ್ಷದಲ್ಲಿ ಕುಳಿತು ಕೆಲಸ ಮಾಡುತ್ತೇವೆ. ಪಾಲಿಕೆಯಲ್ಲಿ ಈ ಹಿಂದೆ ಇದ್ದ ಬಿಜೆಪಿ, ಜೆಡಿಎಸ್ ಮೈತ್ರಿ ಬಗ್ಗೆ ಆ ನಂತರ ಮಾತನಾಡುತ್ತೇನೆ. ಅವರ ಜೊತೆ ಮತ್ತೆ ಮೈತ್ರಿ ಮಾಡಿಕೊಳ್ಳುವ ಸಂದರ್ಭ ಬಂದಾಗ ಈ ಬಗ್ಗೆ ಚರ್ಚೆ ಮಾಡುತ್ತೇವೆ. ಆದರೆ ಮೈಸೂರಿನಲ್ಲಿ ನಮ್ಮ ಸಾಧನೆ ಸಮಾಧಾನ ತಂದಿದೆ. ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದರು.

    ಮೈಸೂರು ಮಹಾನಗರ ಪಾಲಿಕೆ ಅತಂತ್ರ ಫಲಿತಾಂಶ ನಿರ್ಮಾಣವಾಗಿದ್ದು ಬಿಜೆಪಿ 22ರಲ್ಲಿ ಜಯಗಳಿಸಿದರೆ, ಜೆಡಿಎಸ್ 18ರಲ್ಲಿ ಗೆದ್ದಿದೆ. ಕಾಂಗ್ರೆಸ್ 19, ಪಕ್ಷೇತರ 5, ಬಿಎಸ್‍ಪಿ 1 ಕ್ಷೇತ್ರದಲ್ಲಿ ಗೆಲುವು ಪಡೆದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸಂಸದರ ವಿರುದ್ಧ ಟ್ರೋಲ್ ಬಾಂಬ್: ರಮ್ಯಾ ಕಾಲೆಳೆದ ಪ್ರತಾಪ್‍ಸಿಂಹ

    ಸಂಸದರ ವಿರುದ್ಧ ಟ್ರೋಲ್ ಬಾಂಬ್: ರಮ್ಯಾ ಕಾಲೆಳೆದ ಪ್ರತಾಪ್‍ಸಿಂಹ

    ಮೈಸೂರು: ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡಲು ಮೈಸೂರಿನ ಬಿಜೆಪಿ ಸಂಸದರು ಹಾಗೂ ಬೆಂಗಳೂರಿನ ಒಬ್ಬ ಬಿಜೆಪಿ ರಾಜ್ಯಸಭಾ ಸದಸ್ಯರು ಟ್ರೋಲ್ ಟೀಂ ನೇಮಕ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ ಮಾಜಿ ಸಂಸದೆ ರಮ್ಯಾ ಅವರನ್ನು ಸಂಸದ ಪ್ರತಾಪ್ ಸಿಂಹ ಕಾಲೆಳಿದ್ದಾರೆ.

    ರಮ್ಯಾ ಅವರ ಆರೋಪಕ್ಕೆ ಪ್ರತಿಕಿಯಿಸಿರುವ ಸಂಸದ ಪ್ರತಾಪ್ ಸಿಂಹ, ಪೆದ್ದು ಪೆದ್ದು ಹೇಳಿಕೆ ನೀಡಿ, ಕರ್ನಾಟಕದ ರಾಹುಲ್ ಗಾಂಧಿ ಆಗಿರೋ ರಮ್ಯಾರಿಗೆ ತಾವು ಏನೂ ಹೇಳಿಕೆ ಕೊಡುತ್ತಿದ್ದೇನೆ ಅನ್ನೋದೆ ಗೊತ್ತಿರಲ್ಲ. ಚಿತ್ರರಂಗದಲ್ಲೂ, ರಾಜಕೀಯದಲ್ಲೂ ಎರಡಲ್ಲೂ ರಮ್ಯಾ ನಿರುದ್ಯೋಗಿಯಾಗಿದ್ದರು. ಹೀಗಾಗಿ ರಾಹುಲ್ ಗಾಂಧಿ ಅವರಿಗೆ ಟ್ರೋಲ್ ಮಾಡುವ ಕೆಲಸ ಕೊಟ್ಟಿದ್ದಾರೆ. ಅದನ್ನು ನೆಟ್ಟಗೆ ಮಾಡಲಿ ಎಂದು ರಮ್ಯಾರ ಕಾಲೆಳೆದಿದ್ದಾರೆ.

    ಸಾಮಾಜಿಕ ಜಾಲತಾಣದಲ್ಲಿ ರಮ್ಯಾರ ಪೆದ್ದತನ ಬಯಲು ಮಾಡೋಕೆ ದೊಡ್ಡ ಯುವ ಸಮೂಹವಿದೆ. ಇವರೆಲ್ಲಾ ನಮ್ಮ ಟೀಂ ಅಂತಾ ರಮ್ಯಾ ಅಂದುಕೊಂಡರೆ ನಾವೇನೂ ಮಾಡೋಕೆ ಆಗುತ್ತದೆ. ಪದೇ ಪದೇ ನನ್ನ ಬಗ್ಗೆ ರಮ್ಯಾ ಟೀಕೆ ಮಾಡುತ್ತಾರೆ. ಅದು ಯಾಕೆ ಅಷ್ಟು ನನ್ನ ಮೇಲೆ ಪ್ರೀತಿನೋ ಗೊತ್ತಿಲ್ಲ ಎಂದು ಪ್ರತಾಪ್ ಸಿಂಹ ಟಾಂಗ್ ನೀಡಿದರು.

    https://www.youtube.com/watch?v=x6gp3DzIT0o

    https://www.youtube.com/watch?v=oLvbal29zT8