Tag: Pratap Simha Nayak

  • ಜೈಲುಗಳಲ್ಲಿ ಅಕ್ರಮ ಚಟುವಟಿಕೆ ತಡೆಯಲು ವಿಶೇಷ ಕ್ರಮ : ಪರಮೇಶ್ವರ್

    ಜೈಲುಗಳಲ್ಲಿ ಅಕ್ರಮ ಚಟುವಟಿಕೆ ತಡೆಯಲು ವಿಶೇಷ ಕ್ರಮ : ಪರಮೇಶ್ವರ್

    ಬೆಂಗಳೂರು: ರಾಜ್ಯದ ಜೈಲುಗಳಲ್ಲಿ ನಡೆಯುವ ಅಕ್ರಮ ಚಟುವಟಿಕೆಗಳ ನಿಯಂತ್ರಣಕ್ಕೆ ಗೃಹ ಇಲಾಖೆ ಕಠಿಣ ನಿಯಮಗಳನ್ನು ಜಾರಿ ಮಾಡಿದೆ ಎಂದು ಗೃಹ ಸಚಿವ ಪರಮೇಶ್ವರ್ (Parameshwara) ತಿಳಿಸಿದರು.

    ವಿಧಾನ ಪರಿಷತ್ ‌ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿಯ ಪ್ರತಾಪ್ ಸಿಂಹ ನಾಯಕ್‌ (Pratap Simha Nayak) ಪ್ರಶ್ನೆ ಕೇಳಿದ್ರು. ಜೈಲುಗಳ ಒಳಗೆ ಅಕ್ರಮ ಚಟುವಟಿಕೆಗಳು ಹೆಚ್ಚು ನಡೆಯುತ್ತಿವೆ‌. ಜೈಲಿನಲ್ಲಿ ಅಕ್ರಮ ತಡೆಯಲು ಆಗದೇ ಹೋದರೆ ಹೇಗೆ? ಅಕ್ರಮದಲ್ಲಿ ಭಾಗಿಯಾಗುತ್ತಿರುವವರ ಮೇಲೆ ಯಾವುದೇ ಕ್ರಮ ಆಗಿಲ್ಲ. ಪರಪ್ಪನ ಅಗ್ರಹಾರದಲ್ಲಿಯೇ ಡ್ರಗ್ಸ್ ಪೂರೈಕೆ ಅಗುತ್ತಿದೆ ಎಂಬ ಆರೋಪ ‌ಇದೆ.‌ ಇದಕ್ಕೆ ಗೃಹ ಇಲಾಖೆ ಕಠಿಣ ನಿಯಮ ಜಾರಿ ಮಾಡಬೇಕು ಎಂದು ಒತ್ತಾಯ ಮಾಡಿದರು.

    ಇದಕ್ಕೆ ಸಚಿವ ಪರಮೇಶ್ವರ್ ಉತ್ತರ ನೀಡಿ, ಜೈಲಿನಲ್ಲಿ ಅಕ್ರಮ ಚಟುವಟಿಕೆಗಳು ನಡೆಯುವುದು ಹೊಸದಲ್ಲ. ಅನೇಕ ವರ್ಷಗಳಿಂದ ಇಂತಹ ಕೆಲಸ ನಡೆಯುತ್ತಿದೆ. ಇಡೀ ದೇಶದಲ್ಲಿ ಇಂತಹ ವ್ಯವಸ್ಥೆ ಇದೆ. ಇದು ಸರ್ಕಾರದ ಗಮನಕ್ಕೆ ಬಂದಿದೆ. ಇದಕ್ಕಾಗಿ ಅನೇಕ ಕ್ರಮಗಳನ್ನು ತೆಗೆದುಕೊಂಡಿದ್ದೇವೆ ಎಂದರು‌. ಇದನ್ನೂ ಓದಿ: ಸರ್ಕಾರಿ ನೌಕರರಿಗೆ ಹಳೆ ಪಿಂಚಣಿ ಪದ್ದತಿ ಜಾರಿ ಮಾಡ್ತೀವಿ, ಸಮಯ ನಿಗದಿ ಮಾಡಲು ಆಗಲ್ಲ: ಬೋಸರಾಜು

     

    ತಂತ್ರಜ್ಞಾನವನ್ನ ಬಳಕೆ ಮಾಡಿಕೊಂಡು ಇಂತಹ ಚಟುವಟಿಕೆಗಳು ನಡೆಯಲು ಕ್ರಮವಹಿಸಲಾಗಿದೆ. ಜೈಲಿನಲ್ಲಿ ಗಾರ್ಡ್ಸ್ ಇರುತ್ತಿದ್ದರು. ಅವರ ಮೇಲೆ ಆರೋಪ ಬಂತು. ಈಗ ಜೈಲಿನಲ್ಲಿ KSISF ಫೋರ್ಸ್ ನಿಯೋಜನೆ ಮಾಡಲಾಗಿದೆ. ಪರಪ್ಪನ ಅಗ್ರಹಾರ ಜೈಲಿಗೆ ಎರಡು ಬಾರಿ ಭೇಟಿ ಕೊಟ್ಡಿದ್ದೇನೆ. ಹೈ ರೆಸ್ಯುಲೇಷನ್ ಟವರ್ ಹಾಕಿದ್ದೇವೆ. ಜಾಮರ್ ಹಾಕಿದ್ದೇವೆ. ಕೇಂದ್ರ ಸರ್ಕಾರದಿಂದ ಜೈಲು ಆಧುನಿಕ ಮಾಡಲು ಹಣ ಬಂದಿದೆ. ಅ ಹಣವನ್ನು ಖರ್ಚು ಮಾಡಲಾಗ್ತಿದೆ. ಬೆಂಗಳೂರು ಜೈಲಿನಲ್ಲೇ 280 AI ಕ್ಯಾಮೆರಾ ಹಾಕಿದ್ದೇವೆ. ಮೈಸೂರು, ಮಂಗಳೂರು ಸೇರಿ ಎಲ್ಲಾ ಜೈಲಿನಲ್ಲಿ AI ಕ್ಯಾಮರಾ ಹಾಕಿದ್ದೇವೆ ಎಂದರು.

    ಜೈಲಿನಲ್ಲಿ ಡ್ರಗ್ಸ್ ಸಪ್ಲೈ ಆಗುತ್ತೆ ಅಂತ ನಮ್ಮ ಗಮನಕ್ಕೆ ಬಂದಿದೆ. ಇದಕ್ಕಾಗಿ ಶ್ವಾನದಳ ನಿಯೋಜನೆ ಮಾಡಿದ್ದೇವೆ. ಮೊಬೈಲ್ ಫೋನ್ ಗಳನ್ನು ಹೇಗೇಗೋ ಜೈಲ್ ಗೆ ತೆಗೆದುಕೊಂಡು ಹೋಗ್ತಾರೆ. ಹೀಗಾಗಿ ಕಠಿಣ ಕ್ರಮ ತೆಗೆದುಕೊಂಡಿದ್ದೇವೆ. ಈಗಾಗಲೇ 248 ಪ್ರಕರಣಗಳನ್ನ ದಾಖಲು ಮಾಡಲಾಗಿದೆ. ಸಿಬ್ಬಂದಿಗಳ ಮೇಲೆ ‌ಕ್ರಮ ಅಗಿದೆ. ಈವರೆಗೂ 22 ಅಧಿಕಾರಗಳ ಮೇಲೆ ಕ್ರಮ ತೆಗೆದುಕೊಳ್ಳಲಾಗಿದೆ.ಹಿಂಡಲಗಾ ಜೈಲಿನಿಂದ‌ ಕೇಂದ್ರ ಸಚಿವರಿಗೆ ಬೆದರಿಕೆ ಕರೆ ಹೋಗಿತ್ತು. ಅವರ ಮೇಲೂ ಕ್ರಮ ಕೈಗೊಳ್ಳಲಾಗಿದ್ದು ಮತ್ತಷ್ಟು ಕಠಿಣ ಕ್ರಮ ತೆಗೆದುಕೊಳ್ಳಲು ನಾವು ಮುಂದಾಗಿದ್ದೇವೆ ಅಂತ ತಿಳಿಸಿದರು.

     

  • ಸಿದ್ದರಾಮಯ್ಯಗೆ ಆತ್ಮಸಾಕ್ಷಿ ಇದ್ದರೆ ರಾಜೀನಾಮೆ ಕೊಡಲಿ: ಪ್ರತಾಪ್ ಸಿಂಹ ನಾಯಕ್

    ಸಿದ್ದರಾಮಯ್ಯಗೆ ಆತ್ಮಸಾಕ್ಷಿ ಇದ್ದರೆ ರಾಜೀನಾಮೆ ಕೊಡಲಿ: ಪ್ರತಾಪ್ ಸಿಂಹ ನಾಯಕ್

    ಬೆಂಗಳೂರು : ಸಿಎಂ ಸಿದ್ದರಾಮಯ್ಯಗೆ ಆತ್ಮ ಸಾಕ್ಷಿ ಇದ್ದರೆ ಕೂಡಲೇ ರಾಜೀನಾಮೆ ಕೊಡಬೇಕು ಅಂತ ಬಿಜೆಪಿ ಪರಿಷತ್‌ ಸದಸ್ಯ ಪ್ರತಾಪ್ ಸಿಂಹ ನಾಯಕ್ (Pratap Simha Nayak) ಆಗ್ರಹ ಮಾಡಿದ್ದಾರೆ.

    ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ (Siddaramaiah) ನಾನು ಕಳಂಕರಹಿತ ಅಂತ ಹೇಳ್ತಿದ್ದರು‌. ಇದು ಅವರ ಬಾಯಿಂದ ಹೇಳಿದ್ದೋ, ಅವರ ನಡವಳಿಕೆಯೇ ಇವತ್ತು ಜನರಿಗೆ ಗೊತ್ತಾಗುತ್ತಿದೆ. ಸಿದ್ದರಾಮಯ್ಯ ಉಪದೇಶ ಕೊಡುತ್ತಿದ್ದರು. ಸಿದ್ದರಾಮಯ್ಯ ಅವರ ಮಾತು ಕೇವಲ ನಾಲಿಗೆಯಿಂದ ಬಂದ ಮಾತಾ ಅಂತ ಜ‌ನ ವಿಮರ್ಶೆ ಮಾಡಲಿ. ಹೈಕೋರ್ಟ್ ನಲ್ಲಿ ತೀರ್ಪು ಬಂದಿದೆ‌. ಸಿದ್ದರಾಮಯ್ಯ ನಡೆದುಕೊಳ್ಳುತ್ತಿರುವ ರೀತಿ ಪ್ರಜಾಪ್ರಭುತ್ವ, ಸಂವಿಧಾನ ವಿರೋಧಿ ನಡೆ ಅಂತ ಕಿಡಿಕಾರಿದರು‌. ಇದನ್ನೂ ಓದಿ: ಕಾಂಗ್ರೆಸ್ ಒಂದು ವೃತ್ತಿಪರ ಲೂಟಿಕೋರ ಪಕ್ಷ: ಬಿಜೆಪಿ ವಕ್ತಾರ ಶೆಹಜಾದ್ ಪೂನವಾಲ್ ವಾಗ್ದಾಳಿ

     

    ಮೊದಲ ಬಾರಿ ಸಿದ್ದರಾಮಯ್ಯ ಸಿಎಂ ಆದಾಗ 40+ ಆರೋಪ ಬಂದಿತ್ತು.ಆಗ ಎಸಿಬಿ (ACB) ಮಾಡಿ ಕೇಸ್ ಮುಚ್ಚಿ ಹಾಕಿದರು. ಲೋಕಾಯುಕ್ತವನ್ನ ಅವರು ಮುಚ್ಚಿದ್ದರು. ಅವರ ಎಲ್ಲಾ ಕೇಸ್ ಮುಚ್ಚಿ ಹಾಕಲು ಲೋಕಾಯುಕ್ತ ಮುಚ್ಚಿ ಹಾಕಿದ್ರು. ಸಿದ್ದರಾಮಯ್ಯ ಪ್ರಜಾಪ್ರಭುತ್ವ, ಸಂವಿಧಾನದ ಬಗ್ಗೆ ಕಳಕಳಿ ಇಲ್ಲ. ಕಾಂಗ್ರೆಸ್ ಸಂಸ್ಥೆಗಳನ್ನು ದುರ್ಬಳಕೆ ಮಾಡ್ತಿದೆ. ದೇಶಪಾಂಡೆ, ಎಚ್ ಕೆ ಪಾಟೀಲ್ ಅವರಂತಹ ಹಿರಿಯರು ಕೇಸ್ ಮುಚ್ಚಿ ಹಾಕೋಕೆ ಸಾಥ್ ನೀಡುತ್ತಿರುವುದು ಪ್ರಜಾಪ್ರಭುತ್ವಕ್ಕೆ ಅಪಚಾರ‌.ಈಗ ಸಿಎಸ್ ರಾಜ್ಯಪಾಲರಿಗೆ ವರದಿ ಕೊಡದೇ ಇರೋದು, ಸಿಬಿಐಗೆ ತಡೆ ಹಾಕಿರೋದು ನೋಡಿದ್ರೆ ಸಿಎಂ ನೇರವಾಗಿ ಹಗರಣದಲ್ಲಿ ಭಾಗಿಯಾಗಿರೋದು ಗೊತ್ತಾಗುತ್ತದೆ. ಮುಂದೆ ಇನ್ನು ಅನೇಕ ಹಗರಣ ಹೊರಗೆ ಬರುತ್ತದೆ. ಹೀಗಾಗಿ ಈ ಕ್ರಮ ಮಾಡಿದ್ದಾರೆ ಅಂತ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಕೇಂದ್ರ ಸರ್ಕಾರದ ಹಣಕಾಸು ಸಂಸದೀಯ ಸ್ಥಾಯಿ ಸಮಿತಿಯ ಸದಸ್ಯರಾಗಿ ಡಾ.ಕೆ ಸುಧಾಕರ್ ನೇಮಕ

    ನಾಗೇಂದ್ರ ರಾಜೀನಾಮೆ ಕೇಳುವ ನೀವು ಯಾಕೆ ರಾಜೀನಾಮೆ ಕೊಡ್ತಿಲ್ಲ. ಸಿದ್ದರಾಮಯ್ಯಗೆ ಆತ್ಮಸಾಕ್ಷಿ ಇದ್ದರೆ ರಾಜೀನಾಮೆ ನೀಡಿ ತನಿಖೆ ಎದುರಿಸಬೆಕು. ತನಿಖೆಯಿಂದ ಹಿಂದೆ ಓಡಿ ಹೋಗೋದು ಬೇಡ ಎಂದು ಕಿಡಿಕಾರಿದರು.

     

  • ತಡರಾತ್ರಿ ಬಿಜೆಪಿ ಮೇಲ್ಮನೆ ಪಟ್ಟಿ ಪ್ರಕಟ-ಟಿಕೆಟ್ ನಿರೀಕ್ಷೆಯಲ್ಲಿದ್ದ ಹಳ್ಳಿಹಕ್ಕಿಗೆ ಬಿಗ್ ಶಾಕ್

    ತಡರಾತ್ರಿ ಬಿಜೆಪಿ ಮೇಲ್ಮನೆ ಪಟ್ಟಿ ಪ್ರಕಟ-ಟಿಕೆಟ್ ನಿರೀಕ್ಷೆಯಲ್ಲಿದ್ದ ಹಳ್ಳಿಹಕ್ಕಿಗೆ ಬಿಗ್ ಶಾಕ್

    -ಯಾರಿಗೆ ಯಾವ ಕಾರಣಕ್ಕೆ ಟಿಕೆಟ್?

    ಬೆಂಗಳೂರು: ತಡರಾತ್ರಿ ಬಿಜೆಪಿ ತನ್ನ ಮೇಲ್ಮನೆ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ. ಇಂದು ನಾಲ್ವರು ನಾಮಪತ್ರ ಸಲ್ಲಿಸಲಿದ್ದಾರೆ. ಟಿಕೆಟ್ ನಿರೀಕ್ಷೆಯಲ್ಲಿದ್ದ ಮಾಜಿ ಸಚಿವ ಹೆಚ್. ವಿಶ್ವನಾಥ್ ಬಿಜೆಪಿ ಬಿಗ್ ಶಾಕ್ ನೀಡಿದೆ.

    ಎಂಟಿಬಿ ನಾಗರಾಜ್, ಆರ್.ಶಂಕರ್, ಸುನಿಲ್ ವಲ್ಯಾಪುರೆ ಮತ್ತು ಪ್ರತಾಪ್ ಸಿಂಹ ನಾಯಕ್ ನಾಲ್ವರಿಗೆ ಟಿಕೆಟ್ ಸಿಕ್ಕಿದೆ. ಮೈತ್ರಿ ಸರ್ಕಾರ ಪತನಕ್ಕೆ ಕಾರಣವಾಗಿದ್ದ ಎಂಟಿಬಿ ನಾಗರಾಜ್, ಆರ್.ಶಂಕರ್ ಗೆ ನೀಡಿದ ಮಾತನ್ನು ಸಿಎಂ ಯಡಿಯೂರಪ್ಪ ಉಳಿಸಿಕೊಂಡಿದ್ದಾರೆ. ಆದರೆ ವಿಶ್ವನಾಥ್ ಅವರಿಗೆ ಟಿಕೆಟ್ ಕೊಡಿಸುವಲ್ಲಿ ಸಿಎಂ ವಿಫಲವಾಗಿರೋದು ಮೇಲ್ನೋಟಕ್ಕೆ ಕಾಣಿಸುತ್ತಿದೆ.

    ಹೊಸಕೋಟೆಯ ಉಪಚುನಾವಣೆಯಲ್ಲಿ ಮಾಜಿ ಸಚಿವ ಎಂಟಿಬಿ ನಾಗರಾಜ್ ಸ್ವಪಕ್ಷೀಯರಿಂದಲೇ ಸೋಲು ಕಾಣಬೇಕಾಯ್ತು. ಬಿಜೆಪಿಯಿಂದ ಹೊರಬಂದ ಶರತ್ ಬಚ್ಚೇಗೌಡ ಪಕ್ಷೇತರ ಅಭ್ಯರ್ಥಿಯಾಗಿ ಗೆಲುವು ಕಂಡಿದ್ದರು. ಹೀಗಾಗಿ ಎಂಟಿಬಿ ನಾಗರಾಜ್ ಅವರಿಗೆ ಟಿಕೆಟ್ ಸಿಕ್ಕಿರುವ ಸಾಧ್ಯತೆಗಳಿವೆ. ಅದರಂತೆ ಆರ್.ಶಂಕರ್ ಉಪಚುನಾವಣೆಯಲ್ಲಿ ಹಾವೇರಿ ಜಿಲ್ಲೆಯ ರಾಣೇಬೆನ್ನೂರು ಕ್ಷೇತ್ರವನ್ನು ಬಿಜೆಪಿಯ ಹೈಕಮಾಂಡ್ ಆದೇಶದಂತೆ ಅರುಣ್ ಕುಮಾರ್ ಅವರಿಗೆ ತ್ಯಾಗ ಮಾಡಿದ ಪ್ರತಿಫಲವಾಗಿ ಟಿಕೆಟ್ ಲಭ್ಯವಾಗಿದೆ.

    ಸಿಎಂ ಯಡಿಯೂರಪ್ಪ ಆಪ್ತ ಸುನಿಲ್ ವಲ್ಯಾಪುರೆ ಸಹ ಸಂಸದ ಉಮೇಶ್ ಜಾಧವ್ ಪುತ್ರ ಅವಿನಾಶ್ ಜಾಧವ್ ಗಾಗಿ ಚಿಂಚೋಳಿ ಕ್ಷೇತ್ರವನ್ನು ತ್ಯಾಗ ಮಾಡಿದ್ದರು. ಈ ಹಿನ್ನೆಲೆ ಟಿಕೆಟ್ ಸಿಕ್ಕಿದೆ. ಇತ್ತ ಕೊನೆಯದಾಗಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆಪ್ತ, ದಕ್ಷಿಣ ಕನ್ನಡದ ಬಿಜೆಪಿ ಜಿಲ್ಲಾಧ್ಯಕ್ಷ ಪ್ರತಾಪ್ ಸಿಂಹ ನಾಯಕ್ ಅವರಿಗೆ ಟಿಕೆಟ್ ಲಭ್ಯವಾಗಿದೆ. ಪ್ರತಾಪ್ ಸಿಂಹ ನಾಯಕ್ ಆರ್‍ಎಸ್‍ಎಸ್ ಹಿನ್ನೆಲೆ ಹೊಂದಿರುವ ಮುಖಂಡರಾಗಿದ್ದಾರೆ.