Tag: pratap reddy

  • ಐಪಿಎಸ್‌ ಪ್ರತಾಪ್ ರೆಡ್ಡಿ ದಿಢೀರ್‌ ರಾಜೀನಾಮೆ – ನಿವೃತ್ತಿಗೆ ಎರಡು ತಿಂಗಳು ಬಾಕಿ ಇರುವಾಗ ಗುಡ್‌ಬೈ

    ಐಪಿಎಸ್‌ ಪ್ರತಾಪ್ ರೆಡ್ಡಿ ದಿಢೀರ್‌ ರಾಜೀನಾಮೆ – ನಿವೃತ್ತಿಗೆ ಎರಡು ತಿಂಗಳು ಬಾಕಿ ಇರುವಾಗ ಗುಡ್‌ಬೈ

    ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯಲ್ಲಿ (Police Department) ಮಹತ್ವದ ಬೆಳವಣಿಗೆ ನಡೆದಿದ್ದು ನಿವೃತ್ತಿಗೆ ಎರಡು ತಿಂಗಳು ಬಾಕಿ ಇರುವಾಗ ಹಿರಿಯ ಐಪಿಎಸ್‌ ಅಧಿಕಾರಿ ಪ್ರತಾಪ್ ರೆಡ್ಡಿ (Pratap Reddy) ರಾಜೀನಾಮೆ ನೀಡಿದ್ದಾರೆ.

    ಕರ್ನಾಟಕದ ಆಂತರಿಕ ಭದ್ರತೆ ವಿಭಾಗದ ಡಿಜಿಪಿಯಾಗಿ (DGP) ಕಾರ್ಯ ನಿರ್ವಹಣೆ ಮಾಡುತ್ತಿದ್ದ ಪ್ರತಾಪ್ ರೆಡ್ಡಿ ವೈಯುಕ್ತಿಕ ಕಾರಣ ನೀಡಿ ರಾಜೀನಾಮೆ ನೀಡಿದ್ದಾರೆ. ಇದನ್ನೂ ಓದಿ: ಚೌಧರಿ ಚರಣ್ ಸಿಂಗ್, ಪಿವಿ ನರಸಿಂಹ ರಾವ್‌, ಸ್ವಾಮಿನಾಥನ್‌ಗೆ ಭಾರತ ರತ್ನ

     

    ಬರುವ ಏಪ್ರಿಲ್ 30ಕ್ಕೆ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಈ ಹಿಂದೆ ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿಯೂ ಅವರು ಸೇವೆ ಸಲ್ಲಿಸಿದ್ದರು. ಪ್ರತಾಪ್ ರೆಡ್ಡಿ ಅವರು 1991ನೇ ಬ್ಯಾಚ್​​ನ ಐಪಿಎಸ್​​ ಅಧಿಕಾರಿಯಾಗಿದ್ದು ಮೂಲತಃ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯವರು.

    ಡಿಜಿಪಿ ಆಗಿದ್ದರೂ ಕೆಲವೊಂದು ಬೆಳವಣಿಗಿಂದ ಅವರಿಗೆ ಬೇಸರ ಆಗಿತ್ತು. ಕೆಲವರು ಅವರಿಗೆ ಬೇಸರ ಆಗುವಂತೆ ನಡೆದುಕೊಂಡಿದ್ದರು. ಹೀಗಾಗಿ ರಾಜೀನಾಮೆ ನೀಡಿದ್ದಾರೆ ಎಂದು ಹಿರಿಯ ಅಧಿಕಾರಿಗಳು ಪಬ್ಲಿಕ್‌ ಟಿವಿಗೆ ತಿಳಿಸಿದ್ದಾರೆ.

     

  • Cyber Crimeː 1 ತಿಂಗಳಲ್ಲಿ 1,228 ಕೇಸ್ – ಪರಿಹರಿಸಲು ಪೊಲೀಸ್ ಸಿಬ್ಬಂದಿ ಕೊರತೆ

    Cyber Crimeː 1 ತಿಂಗಳಲ್ಲಿ 1,228 ಕೇಸ್ – ಪರಿಹರಿಸಲು ಪೊಲೀಸ್ ಸಿಬ್ಬಂದಿ ಕೊರತೆ

    ಬೆಂಗಳೂರು: ಸಿಲಿಕಾನ್ ಸಿಟಿ ತಾಂತ್ರಿಕವಾಗಿ ಅಭಿವೃದ್ಧಿ ಹೊಂದುತ್ತಿದ್ದಂತೆ ಆನ್‌ಲೈನ್‌ನಲ್ಲಿ (Online) ವಂಚಿಸುವ ಜಾಲವು ಬೃಹತ್ತಾಗಿಯೇ ಬೆಳೆಯುತ್ತಿದೆ. ಜೇಬಿಗೆ ಕತ್ತರಿ ಹಾಕುವ ಬದಲು ಲೇಟೆಸ್ಟ್ ಕಳ್ಳರು ನೇರವಾಗಿ ಬ್ಯಾಂಕ್ ಖಾತೆಗಳಿಂದಲೇ (Bank Account) ಹಣ ಎಗರಿಸಲು ಶುರು ಮಾಡಿದ್ದಾರೆ.

    ರಾಜಧಾನಿ ಬೆಂಗಳೂರಲ್ಲಿ (Bengaluru) ಈ ವರ್ಷದ ಆರಂಭದಲ್ಲಿ ಸೈಬರ್ ಕಳ್ಳರು (Cyber Crime) ತಮ್ಮ ಕೈಚಳಕ ತೋರಿಸಿದ್ದಾರೆ. ಕಳೆದ ಜನವರಿ ಒಂದು ತಿಂಗಳಲ್ಲೇ ಬರೋಬ್ಬರಿ 1,228 ಪ್ರಕರಣಗಳು ದಾಖಲಾಗಿವೆ. ಆದ್ರೆ ಸಿಬ್ಬಂದಿ ಕೊರತೆಯಿಂದಾಗಿ ಪೊಲೀಸರು (Police) ಸಮಸ್ಯೆಗಳನ್ನು ಬಗೆಹರಿಸಲಾಗದೇ ತಿಣುಕಾಡುತ್ತಿದ್ದಾರೆ. ಇದನ್ನೂ ಓದಿ: ಹರತಾಳು ಹಾಲಪ್ಪ ಬೀಗರ ಕಾರಿಗೆ ಇಬ್ಬರು ಬಲಿ- ನಾಲ್ವರಿಗೆ ಗಾಯ, ಚಾಲಕ ವಶಕ್ಕೆ

    ಕಳೆದ ವರ್ಷವೂ ಬೆಂಗಳೂರಿನಲ್ಲಿ ಅತಿಹೆಚ್ಚು ಸೈಬರ್ ಪ್ರಕರಣಗಳು (Cyber Crime Case) ವರದಿಯಾಗಿದ್ದವು. ಈ ಬಾರಿ ವರ್ಷಾರಂಭದಲ್ಲೇ ಕೇಸ್‌ಗಳ ಸಂಖ್ಯೆ ಹೆಚ್ಚಾಗಿದೆ. ಕೇಂದ್ರ ವಿಭಾಗದ ಸೆನ್ ಪೊಲೀಸ್ ಠಾಣೆಯಲ್ಲಿ 90, ದಕ್ಷಿಣ ವಿಭಾಗದ ಸೆನ್ ಪೊಲೀಸ್ ಠಾಣೆಯಲ್ಲಿ 145, ಉತ್ತರ ವಿಭಾಗ ಸೆನ್ ಪೊಲೀಸ್ ಠಾಣೆಯಲ್ಲಿ 215, ಪೂರ್ವ ವಿಭಾಗ ಸೆನ್ ಪೊಲೀಸ್ ಠಾಣೆಯಲ್ಲಿ 122, ಪಶ್ಚಿಮ ವಿಭಾಗ ಸೆನ್ ಪೊಲೀಸ್ ಠಾಣೆಯಲ್ಲಿ 118, ಅಗ್ನೇಯ ವಿಭಾಗ ಸೆನ್ ಪೊಲೀಸ್ ಠಾಣೆಯಲ್ಲಿ 223, ಈಶಾನ್ಯ ವಿಭಾಗ ಸೆನ್ ಪೊಲೀಸ್ ಠಾಣೆಯಲ್ಲಿ 155 ಹಾಗೂ ವೈಟ್ ಫೀಲ್ಡ್ ವಿಭಾಗದ ಸೆನ್ ಪೊಲೀಸ್ ಠಾಣೆಯಲ್ಲಿ 160 ಕೇಸ್‌ಗಳು ದಾಖಲಾಗಿವೆ ಎಂದು ಪೊಲೀಸ್ ಇಲಾಖೆ ಮಾಹಿತಿ ನೀಡಿದೆ. ಇದನ್ನೂ ಓದಿ: ಸಹಾಯಧನ ಮಂಜೂರು ಮಾಡಲು 10 ಸಾವಿರ ಲಂಚ – ಮೂವರು ಲೋಕಾಯುಕ್ತ ಬಲೆಗೆ

    ಸಿಬ್ಬಂದಿ ಕೊರತೆ: ಸೈಬರ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದರೂ ಉಪ ವಿಭಾಗದ ಮಟ್ಟದಲ್ಲಿ ಸೆನ್ ಠಾಣೆಗಳನ್ನ ತೆರಯಲು ಸರ್ಕಾರ ಹಿಂದೇಟು ಹಾಕುತ್ತಿದೆ. ಇದರಿಂದ ಸೆನ್ ಪೊಲೀಸ್ ಠಾಣೆಗಳಲ್ಲಿ ಸಿಬ್ಬಂದಿ ಕೊರತೆ ಕಾಡುತ್ತಿದ್ದು, ಪೊಲೀಸರು ಅಸಹಾಯಕರಾಗಿ ವರ್ತಿಸಬೇಕಾದ ಸ್ಥಿತಿ ಎದುರಾಗಿದೆ. ಸರ್ಕಾರದ ಈ ನಡೆಗೆ ಸಾರ್ವಜನಿಕರು ಹಿಡಿ ಶಾಪ ಹಾಕಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಹೊಸ ವರ್ಷದ ಸಂಭ್ರಮಾಚರಣೆಗೆ ಹೆಚ್ಚಿನ ಭದ್ರತೆ – ಬೆಂಗಳೂರು ಪೊಲೀಸರಿಗೆ 35 ಅಂಶಗಳ ಟಾಸ್ಕ್‌ ಕೊಟ್ಟ ಕಮಿಷನರ್

    ಹೊಸ ವರ್ಷದ ಸಂಭ್ರಮಾಚರಣೆಗೆ ಹೆಚ್ಚಿನ ಭದ್ರತೆ – ಬೆಂಗಳೂರು ಪೊಲೀಸರಿಗೆ 35 ಅಂಶಗಳ ಟಾಸ್ಕ್‌ ಕೊಟ್ಟ ಕಮಿಷನರ್

    ಬೆಂಗಳೂರು: ನಗರದಲ್ಲಿ ಈಗಾಗಲೇ ಹೊಸ ವರ್ಷದ (New Year) ಸಂಭ್ರಮದ ತಯಾರಿ ಆರಂಭಗೊಂಡಿದೆ. ಈ ನಡುವೆ ಹೊಸ ವರ್ಷಸಂಭ್ರಮಾಚರಣೆಯ ಹೊಣೆ, ಭದ್ರತಾ ಹೊಣೆಯನ್ನು ಎಸಿಪಿ (ACP), ಡಿಸಿಪಿ (DCP) ಹಾಗೂ ಹೆಚ್ಚುವರಿ ಪೊಲೀಸ್ ಆಯಕ್ತರು ಇನ್ಸ್‌ಪೆಕ್ಟರ್‌ಗಳ ಹೆಗಲಿಗೆ ಹೊರಿಸಲಾಗಿದೆ. ಭದ್ರತೆಗೆ ಯಾವೇಲ್ಲ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು 35 ಅಂಶಗಳನ್ನು ಒಳಗೊಂಡ ಪಟ್ಟಿಯೊಂದಿಗೆ ಕಮಿಷನರ್ ಪ್ರತಾಪ್ ರೆಡ್ಡಿ (Pratap Reddy) ಹೊಸ ಟಾಸ್ಕ್ ನೀಡಿದ್ದಾರೆ.

    ಆಯಾ ವಲಯ, ವಿಭಾಗದ ಬಂದೂಬಸ್ತ್ ಪ್ಲಾನ್ ಗಳನ್ನು ಡಿಸೆಂಬರ್ 21ರ ಒಳಗೆ ಕಮಿಷನರ್ ಕಛೇರಿಗೆ ಒಂದು ಪ್ರತಿ ನೀಡುವಂತೆ ಸೂಚನೆ ನೀಡಲಾಗಿದೆ. ಈ ಮೂಲಕ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದ್ದಾರೆ.

    35 ಅಂಶಗಳ ಟಾಸ್ಕ್:
    1) ಉಪ ಪೊಲೀಸ್ ಆಯುಕ್ತರುಗಳು ತಮ್ಮ ಅಧೀನದ ಎಲ್ಲಾ ಪೊಲೀಸ್ ಠಾಣೆಗಳಿಗೆ ಇಲಾಖಾ ವತಿಯಿಂದ ಹಂಚಿಕೆಯಾಗಿರುವ ಎಲ್ಲಾ ದ್ವಿ-ಚಕ್ರ ವಾಹನಗಳನ್ನು ಮೊಬೈಲ್ ಪೆಟ್ರೋಲಿಂಗ್ ವಾಹನಗಳನ್ನಾಗಿ ಉಪಯೋಗಿಸಿ ಸೂಕ್ತ ಗಸ್ತು ನಿರ್ವಹಿಸುವ ಬಗ್ಗೆ ಕ್ರಮ ಕೈಗೊಳ್ಳುವುದು.

    2) ಉಪ ಪೊಲೀಸ್ ಆಯುಕ್ತರುಗಳು ಹೊಸ ವರ್ಷಾಚರಣೆ ಬಂದೋಬಸ್ತ್ ಯೋಜನೆಯಲ್ಲಿ ವಲಯವಾರು ಬಂದೋಬಸ್ತ್ ಮತ್ತು ಸೆಕ್ಟರ್ ಮೊಬೈಲ್‍ಗಳನ್ನು ಕರ್ತವ್ಯಕ್ತಿ ನಿಯೋಜಿಸಿ, ಅವುಗಳಿಗೆ ನಿಗದಿತ ಸಮಯ ಹಾಗೂ ನಿಗದಿತ ರೂಟ್ ಅನ್ನು ಕೊಟ್ಟು, ಸೆಕ್ಟರ್ ಪೆಟ್ರೋಲಿಂಗ್ ಅನ್ನು ವ್ಯವಸ್ಥಿತವಾಗಿ ಏರ್ಪಡಿಸಲು ಸೂಚಿಸಲಾಗಿದೆ. ಇದನ್ನೂ ಓದಿ: ಸ್ನೇಹಿತರನ್ನು ಮೆಚ್ಚಿಸಲು ಪಾರ್ಟಿಗೆ ಗನ್ ತೆಗೆದುಕೊಂಡು ಹೋದ ವ್ಯಕ್ತಿ ಪೊಲೀಸರಿಗೆ ಅತಿಥಿಯಾದ

    3) ಹೊಸ ವರ್ಷಾಚರಣೆಯನ್ನು ವಿರೋಧಿಸುವ ಸಂಘ ಸಂಸ್ಥೆಗಳ ಬಗ್ಗೆ ಮುಂಗಡವಾಗಿ ಮಾಹಿತಿ ಸಂಗ್ರಹಿಸಿ ಅಂತಹ ಸಂಘ ಸಂಸ್ಥೆಗಳ ಚಲನವಲನಗಳ ಬಗ್ಗೆ ಗುಪ್ತ ಮಾಹಿತಿ ಸಂಗ್ರಹಿಸಿ, ಅಗತ್ಯ ಮುನ್ನೆಚ್ಚಕ ಕ್ರಮಗಳನ್ನು ಕೈಗೊಳ್ಳುವುದು.

    4) ಉಪ ಪೊಲೀಸ್ ಆಯುಕ್ತರುಗಳು ಎಲ್ಲಾ ಮಾಲ್‍ಗಳ ವ್ಯವಸ್ಥಾಪಕರಿಗೆ ಲಿಖಿತವಾದ ಸೂಚನೆ ನೀಡಿ, ಅವರುಗಳು ಮಾಲ್‍ಗಳಿಗೆ ಒಳಬರುವ ವ್ಯಕ್ತಿಗಳ ವೈಯಕ್ತಿಕ ಶೋಧನೆ ಹಾಗೂ ಅವರುಗಳ ಲಗೇಜುಗಳ ಪರಿಶೀಲನೆಯನ್ನು ಹೆಚ್.ಹೆಚ್.ಎಂಡಿ/ಡಿ.ಎಫ್.ಎಂ.ಡಿ. ಇವುಗಳನ್ನು ಅಳವಡಿಸಿ ಪರಿಶೀಲನೆ ಮಾಡುವ ಅಗತ್ಯತೆ ಬಗ್ಗೆ ಮತ್ತೊಮ್ಮೆ ತಿಳಿಸುವುದು.

    5) ಮಾಲ್‍ಗಳಲ್ಲಿ ಅಳವಡಿಸಿರುವ ಸಿ.ಸಿ.ಕ್ಯಾಮೆರಾಗಳು ಸುಸ್ಥಿತಿಯಲ್ಲಿರುವ ಬಗ್ಗೆ, ಮಾಲ್‍ಗಳಿಗೆ ಆಗಮಿಸುವ ವಾಹನಗಳನ್ನೂ ಸಹ ಸೂಕ್ತವಾಗಿ ಪರಿಶೀಲಿಸಿದ ನಂತರ ಒಳಪ್ರವೇಶಿಸಲು ಅನುಮತಿ ನೀಡುವ ಬಗ್ಗೆ ಸಂಬಂಧಪಟ್ಟ ಮಾಲ್‍ಗಳ ಮಾಲೀಕರುಗಳಿಗೆ ಸೂಕ್ತ ತಿಳುವಳಿಕೆ ನೀಡುವುದು.

    6) ಎಲ್ಲಾ ಪಿಐರವರುಗಳು ತಮ್ಮ ಠಾಣಾ ವ್ಯಾಪ್ತಿಯಲ್ಲಿ ಡಿ.31 ರಂದು ರಾತ್ರಿ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಿಕೊಂಡು ಮೇಲುಸ್ತುವಾರಿ ವಹಿಸುವುದು. ಇದನ್ನೂ ಓದಿ: ಕಾರಿನಲ್ಲೇ ನೈಟ್ರೋಜನ್‌ ಸಿಲಿಂಡರ್‌ ಲೀಕ್‌ ಮಾಡ್ಕೊಂಡು ಸೀನಿಯರ್‌ ಟೆಕ್ಕಿ ಆತ್ಮಹತ್ಯೆ

    7) ಬಂದೋಬಸ್ತ್‌ಗೆ ನೇಮಕವಾದ ಸಿಬ್ಬಂದಿ ಮೇಲಾಧಿಕಾರಿಗಳ ಆದೇಶವಿಲ್ಲದೆ ಸ್ಥಳವನ್ನು ಬಿಡಬಾರದು.

    8) ಠಾಣಾ ವ್ಯಾಪ್ತಿಯಲ್ಲಿ ಪ್ರಮುಖ ಸ್ಥಳಗಳಲ್ಲಿ ವಾಹನ ತಪಾಸಣಾ ಪಾಯಿಂಟ್/ಪಿಕೆಟಿಂಗ್ ಪಾಯಿಂಟ್ ಸಿಬ್ಬಂದಿ ನಿಯೋಜಿಸುವುದು.

    9) ಬಂದೋಬಸ್ತ್‌ಗೆ ನೇಮಕ ಮಾಡಿದ ಎಲ್ಲಾ ಅಧಿಕಾರಿಗಳು ಸರ್ವೀಸ್ ರಿವಾಲ್ವಾರ್ ಹೊಂದಿರತಕ್ಕದ್ದು ಹಾಗೂ ಸಿಬ್ಬಂದಿ ಹೆಲೈಟ್ ಮತ್ತು ಲಾಠಿಗಳನ್ನು ಹೊಂದಿರತಕ್ಕದ್ದು.

    10) ಎಲ್ಲಾ ಸಿಬ್ಬಂದಿ, ಅಧಿಕಾರಿಗಳು ಜೆರ್ಸಿ ಹಾಗೂ ರೈನ್ ಕೋಟ್ ಹೊಂದಿರತಕ್ಕದ್ದು.

    11) ರಾತ್ರಿ ಸಮಯದಲ್ಲಿ ಸಾರ್ವಜನಿಕರು ಮದ್ಯಪಾನ ಸೇವಿಸಿ ಬರುವ ಸಂಭವವಿರುವುದರಿಂದ ಅಧಿಕಾರಿ ಮತ್ತು ಸಿಬ್ಬಂದಿ ಸೌಜನ್ಯದಿಂದ ವರ್ತಿಸಿ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಕಟ್ಟೆಚ್ಚರ ವಹಿಸುವುದು.

    12) ಪ್ರಮುಖವಾಗಿ ಎಂ.ಜಿ.ರಸ್ತೆ ಹಾಗೂ ಬ್ರಿಗೇಡ್ ರಸ್ತೆಗಳಲ್ಲಿ ಹೆಚ್ಚಿನ ಜನಸಂದಣಿ ಇರುತ್ತದೆ. ಇಂತಹ ಸಮಯದಲ್ಲಿ ಕಿಸೆ ಕಳ್ಳತನ, ಸರ ಅಪಹರಣ ಇತ್ಯಾದಿಗಳು ನಡೆಯುವ ಸಾಧ್ಯತೆಗಳಿರುವುದರಿಂದ ಅಧಿಕಾರಿ ಮತ್ತು ಸಿಬ್ಬಂದಿ, ಸಂಶಯಾಸ್ಪದ ವ್ಯಕ್ತಿಗಳ ಮೇಲೆ ತೀವ್ರ ನಿಗಾವಹಿಸುವುದು ಮತ್ತು ಸಾರ್ವಜನಿಕರ ಜೊತೆ ಸೌಜನ್ಯದಿಂದ ವರ್ತಿಸುವುದು

    13) ಹೆಣ್ಣು ಮಕ್ಕಳನ್ನು ಚುಡಾಯಿಸುವವರ ವಿರುದ್ಧ ಕೂಡಲೇ ಗಮನಹರಿಸಿ ಕಾನೂನಿನಡಿಯಲ್ಲಿ ಬಂಧನಕ್ಕೆ ಒಳಗಾಗಿಸುವುದು.

    14) ಕುಡಿದು ರಸ್ತೆಗಳ ಮೇಲೆ ಬಾಟಲಿಗಳನ್ನು ಹೊಡೆದು/ಎಸೆದು ದಾಂಧಲೆ ಮಾಡುವವರನ್ನು ಕೂಡಲೇ ವಶಕ್ಕೆ ಪಡೆದು ಅಗತ್ಯ ಕಾನೂನು ಕ್ರಮ ಜರುಗಿಸುವುದು. ಇದನ್ನೂ ಓದಿ: ಒಂದೇ ನೇಣಿಗೆ ಕೊರಳೊಡ್ಡಿ ಆತ್ಮಹತ್ಯೆಗೆ ಶರಣಾದ ಪ್ರೇಮಿಗಳು

    15) ಮದ್ಯ ಮಾರಾಟ ಮಾಡುವ ಎಲ್ಲಾ ಸ್ಥಳಗಳ ಮಾಲೀಕರಿಗೆ ಕಲಂ.21 ಕರ್ನಾಟಕ ಅಬಕಾರಿ ಕಾಯ್ದೆ ಅಡಿಯಲ್ಲಿ ನೋಟಿಸ್ ಅನ್ನು ಜಾರಿ ಮಾಡುವುದು. ಸದರಿ ಅಂಗಡಿಗಳಲ್ಲಿ/ ಅದರ ಸಮೀಪದಲ್ಲಿ ಆಗುವ ಗಲಾಟೆ, ದೊಂಬಿ, ಮಹಿಳೆಯರನ್ನು ಚುಡಾಯಿಸುವುದು, ಬಾಟಲಿಗಳನ್ನು ಎಸೆಯುವುದು ಇತ್ಯಾದಿಗಳು ನಡೆದರೆ ಅವರನ್ನೇ ಹೊಣೆಗಾರರೆಂದು ಮಾಡಲಾಗುವುದು ಎಂದು ತಿಳಿಸತಕ್ಕದ್ದು.

    16) ಜನರು ಸೇರುವ ರಸ್ತೆಗಳನ್ನು ಮತ್ತು ಪ್ರದೇಶಗಳನ್ನು ಗುರುತಿಸಿ ರಾತ್ರಿ ವೇಳೆಯಲ್ಲಿ ರೆಕಾರ್ಡ್ ಆಗುವಂತಹ ಸಿಸಿಟಿವಿ. ಕ್ಯಾಮೆರಾಗಳನ್ನು ಅಳವಡಿಸುವುದು.

    17) ಎಲ್ಲಾ ರಸ್ತೆಗಳಲ್ಲಿ ವಿದ್ಯುತ್ ದೀಪಗಳು ಕೆಲಸ ಮಾಡುವಂತೆ ಖಚಿತಪಡಿಸಿಕೊಳ್ಳುವುದು ಮತ್ತು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿ ಅಗತ್ಯ ಕ್ರಮ ಕೈಗೊಳ್ಳುವುದು.

    18) ಡಿ.31 ರಂದು ಸಂಜೆ 6 ಗಂಟೆಯಿಂದ ಮರುದಿನ ಜ.1ರ ವರೆಗೆ ಬೆಳಗ್ಗೆ 6 ಗಂಟೆವರೆಗೆ ಎಲ್ಲಿಯೂ ವಿದ್ಯುತ್ ಕಡಿತವಾಗದಂತೆ ಬೆಸ್ಕಾಂ ಅಧಿಕಾರಿಗಳೊಂದಿಗೆ ಸಮಾಲೋಚಿಸುವುದು.

    19) ಜನ ಹೆಚ್ಚಿಗೆ ಸೇರುವ ರಸ್ತೆಗಳಾದ ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್, ಎಂ.ಜಿ.ರಸ್ತೆ ಮತ್ತು ಇತರೆ ರಸ್ತೆಗಳಲ್ಲಿ ಸ್ಥಳಾವಕಾಶಕ್ಕನುಗುಣವಾಗಿ ಜನರ ಆಗಮನ ಮತ್ತು ನಿರ್ಗಮನವನ್ನು ನಿಯಂತ್ರಿಸುವುದು.

    20) ಅಬಕಾರಿ ಇಲಾಖೆಯ ಅಧಿಕಾರಿಗಳೊಂದಿಗೆ ಸಂಪರ್ಕವನ್ನಿಟ್ಟುಕೊಂಡು ಪಬ್‍ಗಳು, ಬಾರ್ & ರೆಸ್ಟೋರೆಂಟ್‍ಗಳು, ವೈನ್‍ಶಾಪ್‍ಗಳು ಇತ್ಯಾದಿ ಸ್ಥಳಗಳಲ್ಲಿ ಅನಧಿಕೃತವಾದ ಮಾರಾಟದ ಬಗ್ಗೆ ಜಂಟಿ ತಪಾಸಣೆಯನ್ನು ಕೈಗೊಳ್ಳುವುದು.

    21) ಹೊಸ ವರ್ಷಾಚರಣೆಯ ಸಂದರ್ಭವನ್ನು ಬಳಸಿಕೊಂಡು ದಾಂಧಲೆ ಮಾಡುವ ಕಿಡಿಗೇಡಿಗಳ ವಿರುದ್ಧ ಮುಂಜಾಗ್ರತಾ ಕ್ರಮವನ್ನು ತೆಗೆದುಕೊಳ್ಳುವುದು.

    22) ಎಲ್ಲಾ ಠಾಣೆಯ ಅಧಿಕಾರಿಗಳು, ಎಲ್ಲಾ ಉಪ ವಿಭಾಗಾಧಿಕಾರಿಗಳು ಚಟುವಟಿಕೆಯಲ್ಲಿರುವ ರೌಡಿಗಳು ಹಾಗೂ ಅವರ ಚಟುವಟಿಕೆಗಳ ಬಗ್ಗೆ ನಿಗಾ ವಹಿಸುವುದು

    23) ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್ ಮತ್ತು ಕಬ್ಬನ್ ರೋಡ್‍ಗಳಲ್ಲಿ ವಾಹನ ನಿಲುಗಡೆಯನ್ನು ನಿಷೇದಿಸಿದ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡುವುದು. ಇದನ್ನೂ ಓದಿ: ಭೈರಿದೇವರಕೊಪ್ಪ ದರ್ಗಾ ತೆರವು ಕಾರ್ಯಾಚರಣೆ ಆರಂಭ

    23) ಪ್ರಮುಖ ಫೈಓವರ್‌ಗಳ ಮೇಲೆ ವಾಹನ ಸಂಚಾರವನ್ನು ನಿಷೇಧಿಸಿರುವ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡುವುದು.

    24) ಬಂದೋಬಸ್ತ್ ಕರ್ತವ್ಯಕ್ಕೆ ನಿಯೋಜಿಸಿದ ಎಲ್ಲಾ ಅಧಿಕಾರಿಗಳು ತಮ್ಮ ವಾಹನಗಳಿಗೆ ಪಿ.ಎ. ಸಿಸ್ಟಮ್ ಅಳವಡಿಸಿಕೊಳ್ಳುವುದು.

    25) ಗಸ್ತು ಮತ್ತು ಪಾಯಿಂಟ್‍ಗಳಿಗೆ ನೇಮಕ ಮಾಡಿರುವ ಅಧಿಕಾರಿ ಮತ್ತು ಸಿಬ್ಬಂದಿ ತಮ್ಮ ಸ್ಥಳಗಳಲ್ಲಿ ಏನಾದರೂ ವಿಶೇಷತೆ ಕಂಡುಬಂದಲ್ಲಿ ಕೂಡಲೇ ಮೇಲಾಧಿಕಾರಿಗಳ ಗಮನಕ್ಕೆ ತರುವಂತೆ ತಿಳುವಳಿಕೆ ನೀಡುವುದು.

    26) ಇತ್ತೀಚಿನ ಭಯೋತ್ಪಾದಕ ಚಟುವಟಿಕೆಗಳ ಹಿನ್ನೆಲೆಯಲ್ಲಿ, ಕೆಲವು ಸಮಾಜ ಘಾತುಕ ಚಟುವಟಿಕೆಗಳು ಶಾಂತಿಭಂಗವನ್ನುಂಟು ಮಾಡುವ ಸಂಭವವಿದ್ದು ಅಂತಹವರ ಮೇಲೆ ಸೂಕ್ತ ನಿಗಾವಹಿಸಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳುವುದು.

    27) ಠಾಣೆಯ ಎಲ್ಲಾ ಹೊಯ್ಸಳ ಮತ್ತು ಚೀತಾಗಳು ಠಾಣಾ ಸರಹದ್ದಿನಲ್ಲಿ ಚುರುಕಾದ ಗಸ್ತು ಕರ್ತವ್ಯವನ್ನು ನಿರ್ವಹಿಸುವುದು.

    28) ಬಂದೋಬಸ್ತ್ ಕರ್ತವ್ಯಕ್ಕೆ ಅವಶ್ಯಕತೆ ಇರುವ ಹೋಂಗಾಡ್ರ್ಸ್, ಸಿವಿಲ್ ಡಿಫೆನ್ಸ್ ಅಧಿಕಾರಿಗಳು, ಅಗ್ನಿಶಾಮಕ ವಾಹನಗಳು, ಅಂಬುಲೆನ್ಸ್ ವಾಹನಗಳು ಇತ್ಯಾದಿಗಳ ಬಗ್ಗೆ ಡಿ.31 ಒಳಗಾಗಿ ಕೋರಿಕೆಯನ್ನು ಈ ಕಛೇರಿಗೆ ಕಳುಹಿಸುವುದು.

    29) ಈ ಸಂಬಂಧ ಏರ್ಪಡಿಸಿರುವ ಬಂದೋಬಸ್ತ್ ಯೋಜನೆಯನ್ನು ಡಿ.31ರ ಒಳಗಾಗಿ ಈ ಕಛೇರಿಯ ಈಮೇಲ್ ableintbcp@ksp.gov.in ಗೆ ಹಾಗೂ ಒಂದು ಪ್ರತಿಯನ್ನು ಈ ಕಳುಹಿಸಿಕೊಡಲು ಸೂಚಿಸಿದೆ

    30) ಉಪ ಪೊಲೀಸ್ ಕಮಿಷನರ್, ನಿಯಂತ್ರಣ ಕೋಣೆಯವರು ವಿಭಾಗೀಯ ಉಪ ಪೊಲೀಸ್ ಆಯುಕ್ತರುಗಳು ಕೋರಿರುವಂತೆ ಕೆ.ಎಸ್.ಆರ್.ಪಿ, ಸಿ.ಎ.ಆರ್ ತುಕಡಿಗಳನ್ನು ಮತ್ತು ಇತರೆ ವಾಹನಗಳನ್ನು ಅವರನ್ನು ಸಂಪರ್ಕಿಸಿ ಅವಶ್ಯಕತೆಗನುಗುಣವಾಗಿ ಅವರ ಕೋರಿಕೆಯ ಮೇರೆಗೆ ನಿಗದಿತ ಸ್ಥಳಗಳಿಗೆ ನಿಯೋಜಿಸುವುದು

    31) ಪೊಲೀಸ್ ಇನ್ಸ್‌ಪೆಕ್ಟರ್‌ಗಳು ಬಂದೋಬಸ್ತ್ ಯೋಜನೆಯಲ್ಲಿ ನಿಯೋಜಿಸಿರುವ ಸ್ಥಳಗಳನ್ನು ಹೊರತುಪಡಿಸಿ ಇನ್ಯಾವುದಾದರೂ ಸೂಕ್ಷ್ಮ/ಪ್ರಮುಖ ಸ್ಥಳಗಳಿದ್ದಲ್ಲಿ ಅಂತಹ ಸ್ಥಳಗಳಿಗೆ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ನಿಯೋಜಿಸುವುದು.

    32) ಉಪ ಪೊಲೀಸ್ ಆಯುಕ್ತರುಗಳು/ಸಹಾಯಕ ಪೊಲೀಸ್ ಆಯುಕ್ತರುಗಳು ತಮ್ಮ ವಿಭಾಗದ ಮತ್ತು ಉಪ ವಿಭಾಗಗಳ ಸಂಪೂರ್ಣ ಬಂದೋಬಸ್ತ್ ಉಸ್ತುವಾರಿಯನ್ನು ನೋಡಿಕೊಳ್ಳುವುದು.

    33) ವಿಶೇಷ ಪೊಲೀಸ್ ಆಯುಕ್ತರು, ಸಂಚಾರದವರು ಸಂಚಾರ ವ್ಯವಸ್ಥೆಯ ಪೂರ್ಣ ಉಸ್ತುವಾರಿ ವಹಿಸುವುದು. ಇದನ್ನೂ ಓದಿ: ಸಾರ್ವಕಾಲಿಕ ಶ್ರೇಷ್ಠ ನಟರ ಪಟ್ಟಿಯಲ್ಲಿ ಶಾರುಖ್ ಖಾನ್: ಈ ಸ್ಥಾನ ಪಡೆದ ಏಕೈಕ ಭಾರತದ ನಟ

    34) ಅಪರ ಪೊಲೀಸ್ ಆಯುಕ್ತರು, ಪೂರ್ವ ಮತ್ತು ಪಶ್ಚಿಮ ರವರು ತಮ್ಮ ವಲಯಗಳ ಬಂದೋಬಸ್ತ್ ಮಾಡಿಕೊಳ್ಳುವುದು.

    35) ಮಹಿಳೆಯರನ್ನು ಚುಡಾಯಿಸುವುದು ಕಂಡುಬಂದಲ್ಲಿ ಸದರಿ ಸ್ಥಳಗಳನ್ನು ತಾತ್ಕಾಲಿಕವಾಗಿ ಬಂದ್ ಮಾಡುವುದು.

    Live Tv
    [brid partner=56869869 player=32851 video=960834 autoplay=true]

  • ಬೆಂಗಳೂರು ಹೋಟೆಲ್‌ ಮಾಲೀಕರಿಗೆ ಗುಡ್‌ನ್ಯೂಸ್‌ – ಮಧ್ಯರಾತ್ರಿ 1 ಗಂಟೆವರೆಗೂ ಹೋಟೆಲ್‌ ತೆರೆಯಲು ಅನುಮತಿ

    ಬೆಂಗಳೂರು ಹೋಟೆಲ್‌ ಮಾಲೀಕರಿಗೆ ಗುಡ್‌ನ್ಯೂಸ್‌ – ಮಧ್ಯರಾತ್ರಿ 1 ಗಂಟೆವರೆಗೂ ಹೋಟೆಲ್‌ ತೆರೆಯಲು ಅನುಮತಿ

    ಬೆಂಗಳೂರು: ನಗರದ ಹೋಟೆಲ್‌ (Bengaluru Hotels) ಮಾಲೀಕರಿಗೆ ಸರ್ಕಾರ ಗುಡ್‌ನ್ಯೂಸ್‌ ನೀಡಿದೆ. ಇನ್ಮೇಲೆ ಮಧ್ಯರಾತ್ರಿ 1 ಗಂಟೆ ವರೆಗೂ ಹೋಟೆಲ್‌ ತೆರೆಯಲು ಅನುಮತಿ ನೀಡಲಾಗಿದೆ.

    ನಗರ ವ್ಯಾಪ್ತಿ ಹೋಟೆಲ್‌ಗಳು ಮಧ್ಯರಾತ್ರಿ 1 ಗಂಟೆ ವರೆಗೂ ತೆರೆಯಲು ಅನುಮತಿ ನೀಡಲಾಗಿದೆ. ನಗರ ಕಮಿಷನರ್ ಪ್ರತಾಪ್ ರೆಡ್ಡಿ ಅವರು ಈ ಸಂಬಂಧ ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ದಾಖಲೆ ಮಳೆ – 92 ವಾರ್ಡ್‍ಗಳಲ್ಲಿ ವರುಣಾರ್ಭಟ

    ಈ ಹಿಂದೆ ರಾತ್ರಿ ಒಂದು ಗಂಟೆಯ ತನಕ ಕೆಲವು ಕಡೆ ಮಾತ್ರ ಹೋಟೆಲ್‌ಗಳು ತೆರೆದಿರುತ್ತಿದ್ದವು. ಕೆಲವು ಕಡೆ ಪೊಲೀಸರು ಹೋಟೆಲ್ ಬಂದ್ ಮಾಡಿಸುತ್ತಿದ್ದರು. ಈಗ ಎಲ್ಲಾ ಕಡೆಯಲ್ಲೂ ಮಧ್ಯರಾತ್ರಿ ಒಂದು ಗಂಟೆಯ ತನಕ ಹೋಟೆಲ್ ತೆರೆಯಲು ಅನುಮತಿ ನೀಡಲಾಗಿದೆ. ನಗರದಾದ್ಯಂತ ರಾತ್ರಿ 1 ಗಂಟೆ ವರೆಗೂ ಹೋಟೆಲ್ ಊಟ ಸಿಗಲಿದೆ.

    Live Tv
    [brid partner=56869869 player=32851 video=960834 autoplay=true]

  • PayCM ಪೋಸ್ಟರ್‌ಗೆ ಸಿಎಂ ಗರಂ – ಎಫ್‌ಐಆರ್‌ ದಾಖಲು

    PayCM ಪೋಸ್ಟರ್‌ಗೆ ಸಿಎಂ ಗರಂ – ಎಫ್‌ಐಆರ್‌ ದಾಖಲು

    ಬೆಂಗಳೂರು: ನಗರದ ಹಲವೆಡೆ PayCM ಪೋಸ್ಟರ್‌ ಅಂಟಿಸಿದನ್ನು ನೋಡಿ ಸಿಎಂ ಬೊಮ್ಮಾಯಿ(Basavaraj Bommai) ಗರಂ ಆದ ಬೆನ್ನಲ್ಲೇ ಎಫ್‌ಐಆರ್‌ ದಾಖಲಾಗಿದೆ.

    ಮಾಧ್ಯಮಗಳಲ್ಲಿ ಸುದ್ದಿ ಪ್ರಕಟವಾದ ಬೆನ್ನಲ್ಲೇ ಸಿಎಂ ಬೊಮ್ಮಾಯಿ ಗುಪ್ತಚರ ಇಲಾಖೆ ಅಧಿಕಾರಿಗಳು ಮತ್ತು ಹಿರಿಯ ಪೊಲೀಸರ ವಿರುದ್ಧ  ಗರಂ ಆಗಿದ್ದಾರೆ.  ಗರಂ ಆದ ಬೆನ್ನಲ್ಲೇ ಪೊಲೀಸರು ಪೋಸ್ಟರ್‌ಗಳನ್ನು ತೆರವು ಮಾಡಿದ್ದಾರೆ.

    ಕರ್ನಾಟಕ ತೆರೆದ ಸ್ಥಳಗಳ (ವಿಕಾರ ತಡೆಗಟ್ಟುವಿಕೆ) ಕಾಯ್ದೆಯ ಅಡಿ ಕೇಂದ್ರ ವಿಭಾಗದಲ್ಲಿ ಒಂದು ಎಫ್‌ಐಆರ್ ದಾಖಲಾಗಿದೆ. ಈಗಾಗಲೇ ಸಂಬಂಧಪಟ್ಟ ಡಿಸಿಪಿಗಳಿಂದ ಮಾಹಿತಿ ಕೇಳಲಾಗಿದೆ. ಸದ್ಯಕ್ಕೆ ಒಂದು ಎಫ್‌ಐಆರ್ ಮಾತ್ರ ಆಗಿದ್ದು ತನಿಖೆ ನಡೆಯುತ್ತಿದೆ ಎಂದು ಪೊಲೀಸ್‌ ಆಯುಕ್ತ ಪ್ರತಾಪ್‌ ರೆಡ್ಡಿ(Pratap Reddy) ಹೇಳಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಗಂಜಿ ಗಿರಾಕಿಗಳಿಂದ ದೂರವಿರಿ – ಬಿಜೆಪಿಯಿಂದ ರಿಡೂ ಸಿದ್ದರಾಮಯ್ಯ, ಇಡಿ ಡಿಕೆಶಿ ಅಭಿಯಾನ

    ಪೋಸ್ಟರ್ ಅಂಟಿಸಿದವರ ಪತ್ತೆಗೆ ಮುಂದಾಗುತ್ತಿರುವ ಪೊಲೀಸರು ಈಗ ಸಿಸಿಟಿವಿ ಪರಿಶೀಲನೆ ನಡೆಸುತ್ತಿದ್ದಾರೆ.

    ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ 40% ಕಮಿಷನ್(40 Percent Commission) ಆರೋಪ ಮಾಡಿ ಬೆಂಗಳೂರಿನ ಹಲವು ಕಡೆ ಸಿಎಂ ಬೊಮ್ಮಾಯಿ ಫೋಟೊ ಪ್ರಕಟಿಸಿ ಕಾಂಗ್ರೆಸ್‌ ಕ್ಯೂ ಆರ್ ಕೋಡ್ ಮಾದರಿಯ ಪೋಸ್ಟರ್ ಅಂಟಿಸಿ ಅಭಿಯಾನ ಆರಂಭಿಸಿತ್ತು. ಇದನ್ನೂ ಓದಿ: 40 ಪರ್ಸೆಂಟ್‌ ಸರ್ಕಾರ ಅಣಕ – ಪೇಟಿಎಂ ಮಾದರಿಯಲ್ಲಿ ʻಪೇ ಸಿಎಂʼ ಪೋಸ್ಟರ್‌ ವೈರಲ್‌

    ಸಿಎಂ ನಿವಾಸದ ರಸ್ತೆ, ಸಿದ್ದರಾಮಯ್ಯ ಸರ್ಕಾರಿ ನಿವಾಸದ ರಸ್ತೆ ಸೇರಿದಂತೆ ಹಲವು ಕಡೆ ಅಂಟಿಸಲಾಗಿತ್ತು. ಈಗ ಬಿಬಿಎಂಪಿ ಸಿಬ್ಬಂದಿ, ಪೊಲೀಸ್ ಸಿಬ್ಬಂದಿ ಪೇ ಸಿಎಂ ಪೋಸ್ಟರ್‌ಗಳನ್ನು ತೆರವು ಮಾಡಿದ್ದಾರೆ.

    ಕರ್ನಾಟಕ ಕರ್ನಾಟಕ ತೆರೆದ ಸ್ಥಳಗಳ (ವಿಕಾರ ತಡೆಗಟ್ಟುವಿಕೆ) ಕಾಯ್ದೆಯ ಅಡಿ ಪೋಸ್ಟರ್‌ ಅಂಟಿಸುವುದನ್ನು ನಿಷೇಧಿಸಲಾಗಿದೆ. ಆರೋಪ ಸಾಬೀತಾದರೆ ಗರಿಷ್ಠ 6 ತಿಂಗಳ ಕಾಲ ಜೈಲು ಶಿಕ್ಷೆ ವಿಧಿಸಬಹುದಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಸುಮ್ಮನೆ ವಾಹನ ತಡೆ ಹಿಡಿಯುತ್ತಿದ್ದ ಟ್ರಾಫಿಕ್ ಪೊಲೀಸ್ ಅಮಾನತು

    ಸುಮ್ಮನೆ ವಾಹನ ತಡೆ ಹಿಡಿಯುತ್ತಿದ್ದ ಟ್ರಾಫಿಕ್ ಪೊಲೀಸ್ ಅಮಾನತು

    ಬೆಂಗಳೂರು: ಡಿಜಿ-ಐಜಿಪಿ ಆದೇಶದ ಬಳಿಕವೂ ನಿಯಮ ಉಲ್ಲಂಘಿಸಿ ಸುಖಾ ಸುಮ್ಮನೆ ದ್ವಿಚಕ್ರ ವಾಹನಗಳನ್ನು ತಡೆಹಿಡಿಯುತ್ತಿದ್ದ ಹೆಚ್.ಎಸ್.ಆರ್ ಟ್ರಾಫಿಕ್ ಠಾಣೆಯ ಪೊಲೀಸ್ ಕಾನ್ಸ್‌ಟೇಬಲ್‌ ಅನ್ನು ಅಮಾನತು ಮಾಡಲಾಗಿದೆ.

    ಸಂಚಾರ ನಿಯಮ ಉಲ್ಲಂಘಿಸಿ ಬೆಳ್ಳಂದೂರು `eco space’ (ಇಕೋ ಸ್ಪೇಸ್) ಬಳಿ ಸುಖಾ ಸುಮ್ಮನೆ ದ್ವಿಚಕ್ರ ವಾಹನ ತಡೆಯುತ್ತಿದ್ದರು. ಈ ಕುರಿತು ಸಾರ್ವಜನಿಕರು ಟ್ವೀಟ್ ಮೂಲಕ ಡಿಜಿಪಿ ಪ್ರವಿಣ್ ಸೂದ್, ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿಗೆ ದೂರು ನೀಡಿದ್ದರು. ಈ ಬಗ್ಗೆ ತನಿಖೆ ನಡೆಸುವಂತೆ ಪೊಲೀಸ್ ಆಯುಕ್ತರು ನಗರ ಸಂಚಾರ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ಹಾಗೂ ಪೂರ್ವ ವಿಭಾಗ ಡಿಸಿಪಿ ಕಲಾ ಕೃಷ್ಣಸ್ವಾಮಿಗೆ ಸೂಚನೆ ನೀಡಿದ್ದರು. ಇದನ್ನೂ ಓದಿ: ಕಾಂಗ್ರೆಸ್‍ನಲ್ಲಿ ಜೋರಾಯ್ತು ಕುರ್ಚಿ ಕದನ – ಸಿಎಂ ಪಟ್ಟಕ್ಕಾಗಿ ಸಮುದಾಯದ ಬೆಂಬಲ ಕೋರಿದ ಡಿಕೆ

    ತನಿಖೆ ವೇಳೆ ಕಾನ್ಸ್‌ಟೇಬಲ್‌ ಸುಖಾ ಸುಮ್ಮನೆ ವಾಹನ ತಡೆದಿರುವುದು ಬೆಳಕಿಗೆ ಬಂದಿದೆ. ಅಲ್ಲದೆ ಪೊಲೀಸರು ಕರ್ತವ್ಯ ವೇಳೆ ಬಾಂಡಿ ವೋರ್ನ್ ಕ್ಯಾಮೆರಾ ಆನ್ ಮಾಡಿಕೊಂಡು ಕೆಲಸ ಮಾಡಬೇಕು. ಆದರೆ ಟ್ರಾಫಿಕ್ ಕಾನ್ಸ್‌ಟೇಬಲ್‌ ಬಾಂಡಿ ವೋರ್ನ್ ಕ್ಯಾಮರಾ ರೆರ್ಕಾಡಿಂಗ್‌ನ ಆನ್ ಮಾಡದೇ ಕರ್ತವ್ಯ ನಿರ್ವಹಿಸುತ್ತಿದ್ದ. ಈ ಬಗ್ಗೆ ತನಿಖಾ ವರದಿ ನೀಡಿದ ಬಳಿಕ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ಅವರು ಕಾನ್ಸ್‌ಟೇಬಲ್‌ ಅಮಾನತು ಮಾಡಿ ಅದೇಶ ಹೊರಡಿಸಿದ್ದಾರೆ. ಇದನ್ನೂ ಓದಿ: ಖಾದ್ಯ ತೈಲ ಬೆಲೆ 30 ರೂ. ಭಾರೀ ಇಳಿಕೆ

    ಅಲ್ಲದೆ ಡಿಜಿ-ಐಜಿಪಿ ಆದೇಶದ ಬಳಿಕವೂ ನಿಯಮ ಉಲ್ಲಂಘನೆ ಮಾಡಿದ ಕಾನ್ಸ್‌ಟೇಬಲ್‌ ವಿರುದ್ಧ ಇಲಾಖೆ ತನಿಖೆಗೆ ಆದೇಶಿಸಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಕುವೆಂಪು ಬಗ್ಗೆ ಅವಹೇಳನ – ರೋಹಿತ್ ಚಕ್ರತೀರ್ಥ ವಿರುದ್ಧ ದೂರು

    ಕುವೆಂಪು ಬಗ್ಗೆ ಅವಹೇಳನ – ರೋಹಿತ್ ಚಕ್ರತೀರ್ಥ ವಿರುದ್ಧ ದೂರು

    ಬೆಂಗಳೂರು: ರಾಷ್ಟ್ರಕವಿ ಕುವೆಂಪು ಅವರ ಬಗ್ಗೆ ಅವಹೇಳನ ಮಾಡಲಾಗಿದೆ ಹಾಗೂ ನಾಡಗೀತೆಗೆ ಅಪಮಾನ ಮಾಡಲಾಗಿದೆ ಎಂದು ಆರೋಪಿಸಿ ಪಠ್ಯಪುಸ್ತಕ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ವಿರುದ್ಧ ಪೊಲೀಸ್ ಆಯುಕ್ತರಿಗೆ ದೂರು ನೀಡಲಾಗಿದೆ.

    ರೋಹಿತ್ ಚಕ್ರತೀರ್ಥ ಹಾಗೂ ಲಕ್ಷ್ಮಣ ಅಕಾಶೆ ಕಾರ್ಕಳ ವಿರುದ್ಧ ವಕೀಲ ಎ.ಪಿ.ರಂಗನಾಥ್, ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿಗೆ ದೂರು ನೀಡಿದ್ದಾರೆ. ಜೊತೆಗೆ ಪುನೀತ್ ಕೆರೆಹಳ್ಳಿ ವಿರುದ್ಧ ರೌಡಿಪಟ್ಟಿ ತೆರೆಯಬೇಕು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಹಿಂದೂ ದೇವಸ್ಥಾನ ಕೆಡವಿ ನಿರ್ಮಾಣವಾದ ಒಂದೇ ಒಂದು ಮಸೀದಿಯನ್ನೂ ಬಿಡೋದಿಲ್ಲ: ಈಶ್ವರಪ್ಪ

    ROHIT CHAKRATHEERTHA

    ರಾಷ್ಟ್ರಕವಿ ಕುವೆಂಪು ಅವರ ಬಗ್ಗೆ ಅವಹೇಳನಕಾರಿಯಾಗಿ ಬರೆದು ಸಾಮಾಜಿಕ ಜಾಲಾತಾಣದಲ್ಲಿ ಹಾಕಲಾಗಿತ್ತು. ಅಲ್ಲದೆ ನಾಡಗೀತೆಗೂ ಅಪಮಾನ ಮಾಡಲಾಗಿದೆ. ಲಕ್ಷ್ಮಣ ಎಂಬವರು ಕುವೆಂಪು ಬಗ್ಗೆ ಕೆಟ್ಟ ಪದಗಳಿಂದ ನಿಂದನೆ ಮಾಡಿದ್ದಾರೆ. ಇವರಿಬ್ಬರ ವಿರುದ್ಧ ಸಮಾಜ ಸ್ವಾಸ್ಥ್ಯ ಕದಡುವ ಪ್ರಕರಣದ ಅಡಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಆಯುಕ್ತರಿಗೆ ದೂರು ನೀಡಲಾಗಿದೆ.

  • ಸದ್ಯದಲ್ಲಿಯೇ ಬೆಂಗಳೂರಿನಲ್ಲಿ ಟೋಯಿಂಗ್ ಆರಂಭ?

    ಸದ್ಯದಲ್ಲಿಯೇ ಬೆಂಗಳೂರಿನಲ್ಲಿ ಟೋಯಿಂಗ್ ಆರಂಭ?

    ಬೆಂಗಳೂರು: ಗೊಂದಲದ ಗೂಡಾಗಿ ತಾತ್ಕಾಲಿಕವಾಗಿ ನಿಂತಿರುವ ಟೋಯಿಂಗ್ ಮರು ಜೀವ ನೀಡಲು ಹೊಸ ಪೊಲೀಸ್ ಕಮೀಷನರ್ ಪ್ರತಾಪ್ ರೆಡ್ಡಿ ಚಿಂತನೆಯಲ್ಲಿದ್ದಾರೆ.

    ಶೀಘ್ರದಲ್ಲೇ ಟೋಯಿಂಗ್ ಸಮಸ್ಯೆಗೆ ಪರಿಹಾರ ಕಂಡುಕೊಂಡು ಪುನಃ ಟೋಯಿಂಗ್ ಪ್ರಾರಂಭ ಮಾಡುವ ನಿಟ್ಟಿನಲ್ಲಿ ಕೆಲಸಗಳು ನಡೆಯುತ್ತವೆ. ಟೋಯಿಂಗ್ ಸಮಸ್ಯೆ ಬಗ್ಗೆ ಸರ್ಕಾರದ ಜೊತೆ ಮಾತನಾಡಿ ಶೀಘ್ರದಲ್ಲೇ ಹೊಸ ಮಾರ್ಗಸೂಚಿಯೊಂದಿಗೆ ಪ್ರಾರಂಭ ಮಾಡಲಾಗುವುದೆಂದು ಪ್ರತಾಪ್ ರೆಡ್ಡಿ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಇದನ್ನೂ ಓದಿ: ನಮ್ಮಲ್ಲಿ ಪೆಟ್ರೋಲ್ ಮುಗಿದಿದೆ: ಶ್ರೀಲಂಕಾ

    ನಗರದಲ್ಲಿ ಎಲ್ಲಾ ಚಟುವಟಿಕೆಗಳು ಮಾಮೂಲಿಯಂತೆ ನಡೆಯುತ್ತಿರುವದರಿಂದ ನಗರದಲ್ಲಿ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದೆ. ನಗರದಲ್ಲಿ ಆಗುತ್ತಿರುವ ಟ್ರಾಫಿಕ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದರ ಜೊತೆಗೆ ಪುನಃ ಟೋಯಿಂಗ್ ಪ್ರಾರಂಭ ಮಾಡುವ ನಿಟ್ಟಿನಲ್ಲಿ ಕೆಲಸಗಳು ಮಾಡಲಾಗುತ್ತದೆ ಎಂದರು. ಇದನ್ನೂ ಓದಿ: ರಫ್ತಿಗೆ ನಿಷೇಧ ಹೇರಿದ ಭಾರತ- ಗೋಧಿ ಬೆಲೆ ದಾಖಲೆ ಮಟ್ಟದಲ್ಲಿ ಏರಿಕೆ

  • ಬೆಂಗಳೂರು ನಗರ ಪೊಲೀಸ್‌ ಆಯುಕ್ತರಾಗಿ ಪ್ರತಾಪ್‌ ರೆಡ್ಡಿ ನೇಮಕ

    ಬೆಂಗಳೂರು ನಗರ ಪೊಲೀಸ್‌ ಆಯುಕ್ತರಾಗಿ ಪ್ರತಾಪ್‌ ರೆಡ್ಡಿ ನೇಮಕ

    ಬೆಂಗಳೂರು: ನಗರದ ನೂತನ ಪೊಲೀಸ್‌ ಆಯುಕ್ತರನ್ನಾಗಿ ಸಿ.ಹೆಚ್‌.ಪ್ರತಾಪ್‌ ರೆಡ್ಡಿ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

    ಇದುವರೆಗೂ ಕಮಿಷನರ್‌ ಸ್ಥಾನದಲ್ಲಿದ್ದ ಕಮಲ್‌ ಪಂತ್‌ ಅವರನ್ನು ಬೆಂಗಳೂರು ನೇಮಕಾತಿ ವಿಭಾಗದ ಡಿಜಿಯಾಗಿ ವರ್ಗಾಯಿಸಲಾಗಿದೆ. ಇದನ್ನೂ ಓದಿ: ಬಸವೇಶ್ವರ ಮೂರ್ತಿಗೆ ಮುಸ್ಲಿಂರಿಂದ ಸ್ವಾಗತ

    1991 ರ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿರುವ ಪ್ರತಾಪ್ ರೆಡ್ಡಿ, ಆಂಧ್ರಪ್ರದೇಶದ ಗುಂಟೂರು ಮೂಲದವರು. ಬೆಂಗಳೂರಲ್ಲಿ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿ ಕೆಲಸ ಮಾಡಿದ್ದರು. ಕಾನೂನು ಸುವ್ಯವಸ್ಥೆ ಎಡಿಜಿಪಿ ಹುದ್ದೆಯಿಂದ ಬೆಂಗಳೂರು ಪೊಲೀಸ್ ಆಯುಕ್ತರಾಗಿ ವರ್ಗಾವಣೆಗೊಂಡಿದ್ದಾರೆ.

    ಕಾನೂನು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕರಾಗಿ ಅಲೋಕ್‌ ಕುಮಾರ್‌ ನಿಯುಕ್ತಿಗೊಂಡಿದ್ದಾರೆ. ಕೆಎಸ್‌ಆರ್‌ಪಿ ಎಡಿಜಿಪಿಯಾಗಿ ಆರ್‌.ಹಿತೇಂದ್ರ ಹಾಗೂ ಸಿಐಡಿ ಎಸ್‌ಪಿಯಾಗಿ ಎಂ.ಎನ್.ಅನುಚೇತ್‌ ನೇಮಕಗೊಂಡಿದ್ದಾರೆ. ಇದನ್ನೂ ಓದಿ: ವಿಧಾನ ಪರಿಷತ್ ಸಭಾಪತಿ ಸ್ಥಾನ, ಜೆಡಿಎಸ್‌ಗೆ ಬಸವರಾಜ ಹೊರಟ್ಟಿ ರಾಜೀನಾಮೆ

    ಅಷ್ಟೇ ಅಲ್ಲದೆ ರಾಜ್ಯದಲ್ಲಿ 37 ಇನ್‌ಸ್ಪೆಕ್ಟರ್‌ಗಳನ್ನು ವರ್ಗಾಯಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಗಾಂಜಾ ಕೇಸ್‌ಗೆ ಸಂಬಂಧಿಸಿದಂತೆ ಅಮಾನತುಗೊಂಡಿದ್ದ ಅಶ್ವಥ್ ಗೌಡರನ್ನು ತೀರ್ಥಹಳ್ಳಿ ಪೊಲೀಸ್ ಠಾಣಾ ಇನ್‌ಸ್ಪೆಕ್ಟರ್‌ ಆಗಿ ವರ್ಗಾಯಿಸಲಾಗಿದೆ.