Tag: Pratap Lion

  • ಚಾಮರಾಜನಗರದಲ್ಲಿ ಆಗಿರುವಂತಹ ಘಟನೆ ಮೈಸೂರಿನಲ್ಲೂ ಸಂಭವಿಸುತ್ತಿತ್ತು: ಪ್ರತಾಪ್ ಸಿಂಹ

    ಚಾಮರಾಜನಗರದಲ್ಲಿ ಆಗಿರುವಂತಹ ಘಟನೆ ಮೈಸೂರಿನಲ್ಲೂ ಸಂಭವಿಸುತ್ತಿತ್ತು: ಪ್ರತಾಪ್ ಸಿಂಹ

    ಬೆಂಗಳೂರು: ನಾವು ಮೈಸೂರಿನ ಜನರ ಜೊತೆಗೆ ಮಂಡ್ಯ, ಚಾಮರಾಜನಗರದ ಜನರನ್ನು ಸಹ ರಕ್ಷಣೆ ಮಾಡಬೇಕು. ಎಲ್ಲಾ ಕಡೆ ಆಕ್ಸಿಜನ್ ಕೊರತೆ ಇದೆ. ಚಾಮರಾಜನಗರದ ಘಟನೆಯನ್ನು ನೋಡಿ ಎಲ್ಲರೂ ಎಚ್ಚೆತ್ತುಕೊಳ್ಳಬೇಕು ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ.

    ಆಕ್ಸಿಜನ್ ಕೊರತೆಯಿಂದ ಚಾಮರಾಜನಗರದಲ್ಲಿ 24 ಮಂದಿ ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅವರು, ಚಾಮರಾಜದಲ್ಲಿ ಆಗಿರುವಂತಹ ಘಟನೆಯೆ ಮೈಸೂರಿನಲ್ಲಿಯೂ 2 ದಿನಹಿಂದೆ ಸಂಭವಿಸುತ್ತಿತ್ತು. ಆಗ ನಮ್ಮ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಎಸ್ ಟಿ ಸೋಮಶೇಖರ್ ಹಾಗೂ ಜಿಲ್ಲಾಧಿಕಾರಿಗಳಾದ ರೋಹಿಣಿ ಸಿಂಧೂರಿ ಅವರು ಒಂದು ತಿರ್ಮಾನವನ್ನು ಮಾಡಿದ್ದೆವು. ಖಾಸಗಿ ಆಸ್ಪತ್ರೆಯವರಿಗೆ 2 ದಿನಕ್ಕೆ ಆಗುವಷ್ಟು ಶನಿವಾರ ಮತ್ತು ಭಾನುವಾರಕ್ಕೆ ಆಗುವಷ್ಟು ಆಕ್ಸಿಜನ್ ಕೊಟ್ಟು ಪರಿಸ್ಥಿತಿಯನ್ನು ನಾವು ಹತೋಟಿಗೆ ತಂದಿದ್ದೆವು. ಆದರೆ ಇವತ್ತು ಮತ್ತೆ ನಮಗೆ ಒತ್ತಡದ ಪರಿಸ್ಥಿತಿ ಇದೆ ಎಂದರು.

    ನನಗೆ ಚಾಮರಾಜನಗರದ ಡಿಸಿ ಕರೆ ಮಾಡಿರಲಿಲ್ಲ. ನಾನೇ ಚಾಮರಾಜನಗರ ಡಿಸಿಗೆ ಕರೆಮಾಡಿದ್ದೆ. ಚಾಮರಾಜನಗರದಲ್ಲಿ ಆಕ್ಸಿಜನ್ ಕೊರತೆ ಇದೆ ಎಂದು ಗೊತ್ತಾಯಿತು. ಇಲ್ಲಿ ತುಂಬಾ ಸಮಸ್ಯೆ ಎದುರಾಗಿದೆ ಎಂದು ಸಹ ಹೇಳಿದ್ದರು. ಆಗ ನಾನು ಚಾಮರಾಜನಗರ ಡಿಸಿಗೆ ಸಂಪರ್ಕಿಸಲು ಪ್ರಯತ್ನ ಪಟ್ಟೆ. ಆದರೆ ಅವರಿಗೆ ಕರೆ ಹೋಗಲಿಲ್ಲ, ಕಂಟ್ರೋಲ್ ರೂಂಗೆ ಹೋಯಿತು. ಆಗ ಅವರಿಗೆ ಡಿಸಿ ಅವರು ಬೇಗ ನನ್ನನ್ನು ಸಂಪರ್ಕ ಮಾಡಲಿ ಎಂದು ಹೇಳಿದ್ದೇನು.

    ಚಾಮರಾಜನಗರ ಡಿಸಿ ಕರೆ ಮಾಡಿದ್ರು. ಈ ವೇಳೆ ಮೈಸೂರು ಎಡಿಸಿ ಅವರಿಗೆ ಕಾನ್ಫರೆನ್ಸ್ ಕಾಲ್ ಹಾಕಿದ್ದೆ. ಈ ವೇಳೆ ತಕ್ಷಣವಾಗಿ 50 ಸಿಲಿಂಡರ್ ಕಳಿಸಿಕೊಟ್ಟೆವು. ಬೆಳಗ್ಗಿನ ಜಾವ 3 ಗಂಟೆಗೆ ಮತ್ತು 7 ಗಂಟೆ ಸಹ ಕಳಿಸಿಕೊಟ್ಟಿದ್ದೇವೆ. ಇಷ್ಟಾದರೂ 24 ಜನ ಸಾವನ್ನಪ್ಪಿರುವುದು ನಮಗೆ ನೋವು ತಂದಿದೆ. ನಾವು ಮೈಸೂರಿನ ಜನರ ಜೊತೆಗೆ ಮಂಡ್ಯ, ಚಾಮರಾಜನಗರದ ಜನರನ್ನು ಸಹ ರಕ್ಷಣೆ ಮಾಡಬೇಕು. ಎಲ್ಲಾ ಕಡೆ ಆಕ್ಸಿಜನ್ ಕೊರತೆ ಇದೆ. ಮೈಸೂರಿಗೆ 73 ಕೆಎಲ್ ಆಕ್ಸಿಜನ್ ಬೇಕಾಗಿದೆ. ನಾನು ಯಾರ ಮೇಲಿಯೂ ಆರೋಪ ಮಾಡಲ್ಲ ಎಂದಿದ್ದಾರೆ.

    ಸದ್ಯ ಎಲ್ಲಾ ಕಡೆ ಸವಾಲಿನ ಪರಿಸ್ಥಿತಿ ಇದೆ. ಈಗ ಅವರಿವರನ್ನು ದೂಶಿಸುವುದು ಸರಿಯಲ್ಲ. ಚಾಮರಾಜನಗರದ ಘಟನೆಯನ್ನು ನೋಡಿ ಎಲ್ಲರೂ ಎಚ್ಚೆತ್ತುಕೊಳ್ಳಬೇಕು. ಚಾಮರಾಜನಗರ ಡಿಸಿ ಮೈಸೂರಿನ ಜಿಲ್ಲಾಡಳಿತಕ್ಕೆ ಮೊದಲು ಕೇಳಿದ್ದಾರೆ. ಮೈಸೂರಿನಲ್ಲಿ ಕೆಆರ್ ಆಸ್ಪತ್ರೆಯಲ್ಲಿ 300 ಬೆಡ್‍ಗಳು ಇವೆ. ಇಲ್ಲೂ ಸ್ವಲ್ಪ ಸಮಸ್ಯೆ ಇದ್ದರಿಂದ ಅದು ಆಗಿಲ್ಲ. ನಾನು ಕರೆ ಮಾಡಿದ್ದಾಗ ಅವರು 50 ಸಿಲಿಂಡರ್ ಬೇಕು ಎಂದು ಕೇಳಿಕೊಂಡಿದ್ದರು ನಾನು ಕಳಿಸಿಕೊಟ್ಟಿದ್ದೇನೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಈ ಬಗ್ಗೆ ಹಗಲಿರುಳು ಕೆಲಸ ಮಾಡುತ್ತಿದ್ದಾರೆ. ನಮಗೆ ಟ್ರಾನ್ಸ್‍ಪೋರ್ಟ್ ಸಮಸ್ಯೆ ಎದುರಾಗುತ್ತಿದೆ. ಜನರು ಸಹ ಜಾಗೃತರಾಗಬೇಕು ಎಂದು ತಿಳಿಸಿದ್ದಾರೆ.

  • ಗಲಾಟೆಗೆ ಪ್ರಚೋದನೆ ಮಾಡೋದಷ್ಟೇ ಪ್ರತಾಪ್ ಸಿಂಹ ಕೆಲ್ಸ- ಶಾಸಕ ಇಕ್ಬಾಲ್ ಅನ್ಸಾರಿ ವಾಗ್ದಾಳಿ

    ಗಲಾಟೆಗೆ ಪ್ರಚೋದನೆ ಮಾಡೋದಷ್ಟೇ ಪ್ರತಾಪ್ ಸಿಂಹ ಕೆಲ್ಸ- ಶಾಸಕ ಇಕ್ಬಾಲ್ ಅನ್ಸಾರಿ ವಾಗ್ದಾಳಿ

    ಕೊಪ್ಪಳ: ಪ್ರತಾಪ್ ಸಿಂಹ ಬರೀ ಪೇಪರ್ ಸಿಂಹ. ಗಲಾಟೆಗೆ ಪ್ರಚೋದನೆ ಮಾಡೋದಷ್ಟೇ ಅವನ ಕೆಲಸ ಎಂದು ಗಂಗಾವತಿ ಶಾಸಕ ಇಕ್ಬಾಲ್ ಅನ್ಸಾರಿ ಕಿಡಿ ಕಾರಿದ್ದಾರೆ.

    ಜಿಲ್ಲೆಯ ಗಂಗಾವತಿಯಲ್ಲಿ ಶನಿವಾರ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಪೇಪರ್ ಸಿಂಹ ಬರೀ ಕೀ ಕೊಟ್ಟು ಪ್ರಚೋದನೆ ಕೊಡೋದು ಅವನ ಕೆಲಸ. ಗಂಗಾವತಿ ಗಲಾಟೆ ಆದಾಗ ಅಲ್ಲಿಂದ ಮಂದಿ ಕಳಿಸುತ್ತಿದ್ದ. ಆಗ ನಮಗೆ ಯೋಚನೆ ಆಗಿಬಿಡುತ್ತಿತ್ತು. ಆತ ಸುಮ್ಮನೆ ಪೇಪರ್ ನಲ್ಲಿ ಬರೆಯೋದು ಕೆಲಸಕ್ಕೆ ಬರುವಂಗಿಲ್ಲ. ಆತ ನನ್ನ ಬಗ್ಗೆ ಪೇಪರನಲ್ಲಿ ಹೇಳಿಕೆ ಕೊಟ್ಟಿದ್ದ. ಅದೆಲ್ಲ ಲೆಕ್ಕಕ್ಕೆ ಬರೋಲ್ಲ. ಆತ ಪ್ರತಾಪ್ ಸಿಂಹ ಅಲ್ಲ ಪೇಪರ್ ಸಿಂಹ ಅಂತಾ ಗಂಗಾವತಿ ಶಾಸಕ ಇಕ್ಬಾಲ್ ಅನ್ಸಾರಿ ವ್ಯಂಗ್ಯವಾಡಿದರು.

    ಗೂಂಡಾಗಳಿಂದ ಗಂಗಾವತಿ ಬಚಾವೋ ಆಂದೋಲನ ಸಮಿತಿಯಿಂದ ನವೆಂಬರ್ 16 ರಂದು ಶಾಂತಿಯುತ ಪ್ರತಿಭಟನೆ ನಡೆಸಲಾಗುವುದು. ಮತ್ತೆ ಆರ್‍ಎಸ್‍ಎಸ್, ಬಿಜೆಪಿ ದೋಸ್ತಿ ಬಿಟ್ಟು ಕಾಂಗ್ರೆಸ್ ಪಕ್ಷದಿಂದ ಪ್ರತಿಭಟಿಸಿ ನಿನ್ನ ಸಾಮಥ್ರ್ಯವನ್ನು ತೋರಿಸು ಅಂತಾ ಸವಾಲು ಹಾಕಿ ಮಾಜಿ ಎಂಎಲ್‍ಸಿ ಎಚ್.ಆರ್ ಶ್ರೀನಾಥಗೆ ಟಾಂಗ್ ಕೊಟ್ಟಿದ್ದಾರೆ.

    ಇದನ್ನು ಓದಿ:  4 ಮದುವೆಯಾಗಿ ಮತ್ತೊಂದು ಮದುವೆಗೆ ಸಿದ್ಧವಾಗಿರೋ ಶಾಸಕರ ಬಂಟ