ತುಮಕೂರು: ಬೇರೆಯರ ಮೇಲೆ ಆಗದ ಕ್ರಮ ನನ್ನ ವಿರುದ್ಧ ಮಾತ್ರ ಯಾಕೆ ಆಗಿದೆ ಎಂದು ಡ್ರೋನ್ ಪ್ರತಾಪ್ (Drone Pratap) ಪ್ರಶ್ನಿಸಿದ್ದಾರೆ.
ನ್ಯಾಯಾಲಯದಿಂದ ಜಾಮೀನು (Bail) ಪಡೆದು ಜೈಲಿನಿಂದ (Jail) ಬಿಡುಗಡೆಯಾದ ಬಳಿಕ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಕೇವಲ 500 ಗ್ರಾಂ ಮಾತ್ರ ಸ್ಫೋಡಿಯಂ ಸ್ಫೋಟ (Sodium Blast) ಮಾಡಿದ್ದೇನೆ. ಅದರೇ ದೇಶದಲ್ಲಿ ಹಲವು ಮಂದಿ ಯೂಟ್ಯೂಬರ್‌ಗಳು 1 ಕೆಜಿಗಿಂತಲೂ ಹೆಚ್ಚಿನ ಸೋಡಿಯಂ ಸ್ಫೋಟ ಮಾಡಿದ್ದಾರೆ. ಯೂಟ್ಯೂಬ್ ನೋಡಿದರೆ ವಿಶ್ವದಲ್ಲಿ ಹಲವು ಮಂದಿ ಈ ರೀತಿ ಬ್ಲ್ಯಾಸ್ಟ್ ಮಾಡಿದ್ದಾರೆ. ಅವರ ಮೇಲೂ ಆಗದ ಕ್ರಮ ನನ್ನ ಮೇಲೆ ಮಾತ್ರ ಯಾಕೆ ಎಂದು ಕೇಳಿದರು. ಇದನ್ನೂ ಓದಿ: ಉಡುಪಿ| ದೈವದ ಕಾರಣಿಕ – 28 ವರ್ಷಗಳ ಬಳಿಕ ಮನೆಗೆ ಮರಳಿ ಬಂದ ಮಗ
ಅದು ಅರ್ಟಿಫಿಶಿಯಲ್ ಪಾಂಡ್. ವಿಜ್ಞಾನ ಪ್ರಯೋಗಕ್ಕೆ ಸಂಬಂಧಿಸಿದಂತೆ ಸ್ಫೋಟ ಮಾಡಿದ್ದೇನೆ ಎಂದು ಯೂಟ್ಯೂಬ್‌ನಲ್ಲೇ ತಿಳಿಸಿದ್ದೇನೆ. ಈ ವಿಚಾರ ಹೈಸ್ಕೂಲ್ ಮಕ್ಕಳ ಪಠ್ಯದಲ್ಲಿದೆ. ಯೂಟ್ಯೂಬ್ ಓಪನ್ ಮಾಡಿದರೆ ಹಲವು ಮಂದಿ ಈ ರೀತಿಯ ಪ್ರಯೋಗ ಮಾಡಿದ್ದಾರೆ. ಆದರೆ ನನ್ನನ್ನು ಮಾತ್ರ ಬಂಧಿಸಿದ್ದು ಯಾಕೆ? ನನಗೆ ನ್ಯಾಯ ಬೇಕು ಎಂದು ಅಳಲು ತೋಡಿಕೊಂಡರು.
ಸೋಮವಾರ ಡ್ರೋನ್ ಪ್ರತಾಪ್‌ಗೆ ಗೆ ಮಧುಗಿರಿಯ 4ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಿಂದ ಜಾಮೀನು ಸಿಕ್ಕಿತ್ತು. ಈ ವೇಳೆ 2 ಲಕ್ಷ ರೂ. ಬಾಂಡ್, ಹಾಗೂ ಇಬ್ಬರು ಶ್ಯೂರಿಟಿ ನೀಡಬೇಕು ಎಂದು ಕೋರ್ಟ್ ಷರತ್ತು ವಿಧಿಸಿತ್ತು. ಜಾಮೀನು ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಇಂದು ಸಂಜೆ ಮಧುಗಿರಿಯ ಉಪ ಕಾರಾಗೃಹದಿಂದ ಡ್ರೋನ್ ಪ್ರತಾಪ್ ಬಿಡುಗಡೆಯಾಗಿದ್ದಾರೆ.
– ಮಾನವೀಯತೆ ಮೆರೆದ ಪ್ರತಾಪ್
– ಸಾರಿಗೆ ಸಚಿವರ ವಿರುದ್ಧ ಆಕ್ರೋಶ
ಕೊಪ್ಪಳ: ಅಪಘಾತದಲ್ಲಿ ಗಾಯಗೊಂಡು ನರಳಾಡುತ್ತಿದ್ದ ವ್ಯಕ್ತಿಯನ್ನು ಬೈಕಿನಲ್ಲಿ ಕೂರಿಸಿಕೊಂಡು ಆಸ್ಪತ್ರೆಗೆ ಕರೆದೊಯ್ದ ವಿಲಕ್ಷಣ ಘಟನೆಯೊಂದು ಕೊಪ್ಪಳದಲ್ಲಿ ನಡೆದಿದೆ.
ಈ ಘಟನೆ ಕೊಪ್ಪಳ ತಾಲೂಕಿನ ಅಳವಂಡಿ ಬಳಿ ನಡೆದಿದೆ. ಅಪಘಾತವಾಗಿ ಗಾಯಗೊಂಡು ನರಳಾಡುತ್ತಿದ್ದ ವ್ಯಕ್ತಿ ಗದಗ ಮೂಲದವನು. ಗಾಯಗೊಂಡು ನರಳಾಡುತ್ತಿದ್ದುದನ್ನು ಕಣ್ಣಾರೆ ಕಂಡ ಸ್ಥಳೀಯ ನಿವಾಸಿ ಪ್ರತಾಪ್, ಅಂಬುಲೆನ್ಸ್ ಗೆ ಕರೆ ಮಾಡಿದ್ದಾರೆ. ಆದರೆ ಕೆಲ ಹೊತ್ತಾದರೂ ಅಂಬುಲೆನ್ಸ್ ಸ್ಥಳಕ್ಕೆ ಬಾರದ ಹಿನ್ನೆಲೆಯಲ್ಲಿ ಕೊನೆಗೆ ತನ್ನ ಬೈಕಿನಲ್ಲಿಯೇ ಕರೆದುಕೊಂಡು ಹೋಗಿ ಆಸ್ಪತ್ರೆಗೆ ದಾಖಲಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಅಳವಂಡಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಗಾಯಾಳುವನ್ನು ಪ್ರತಾಪ್ ಸೇರಿಸಿದ್ದಾರೆ. ಬಳಿಕ ಹೆಚ್ಚಿನ ಚಿಕಿತ್ಸೆಗೆ ಗದಗ್ ಗೆ ರವಾನೆ ಮಾಡಿದ್ದಾರೆ. ಗಾಯಾಳುವನ್ನು ಬೈಕಿನಲ್ಲಿ ಕರೆದುಕೊಂಡು ಹೋಗುತ್ತಿರುವುದನ್ನು ತಮ್ಮ ಮೊಬೈಲ್ ನಲ್ಲಿ ವೀಡಿಯೋ ಮಾಡಿರುವ ಪ್ರತಾಪ್, ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ವೀಡಿಯೋದಲ್ಲಿ ಪ್ರತಾಪ್ ಅವರು ಸಾರಿಗೆ ಸಚಿವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಸ್ತೆ ರಿಪೇರಿ ಮಾಡಲು ಮನವಿ ಮಾಡಿದ್ರೂ ಕ್ಯಾರೇ ಅನ್ನದ ಸಾರಿಗೆ ಸಚಿವರರ ವಿರುದ್ಧ ಕಿಡಿಕಾರಿದ್ದಾರೆ.
ಚಿಕ್ಕೋಡಿ/ಬೆಳಗಾವಿ: ರೈತರಿಗೆ ಸರ್ಕಾರ ಸಾಲಮನ್ನಾ ಮಾಡುವುದು ಬೇಡ, ಆಫೀಸ್‍ಗೆ ಹೋದರೆ ರೈತರನ್ನ ಕೂರಿಸಿ ಏನಪ್ಪ ಅಂತ ಕೇಳುವಂತ ಅಧಿಕಾರಿ ಬೇಕು ಎಂದು ಯುವ ವಿಜ್ಞಾನಿ ಡ್ರೋಣ್ ಪ್ರತಾಪ್ ಹೇಳಿದರು.
ಜಿಲ್ಲೆಯ ನದಿ ಇಂಗಳಗಾಂವದಲ್ಲಿ ನಡೆದ ಅದಮ್ಯ ಫೌಂಡೇಶನ್ ವತಿಯಿಂದ ಅದಮ್ಯೋತ್ಸವ ಕಾರ್ಯಕ್ರಮದ ಅಂಗವಾಗಿ ವಿಶೇಷ ಆಹ್ವಾನಿತರಾಗಿ ಯುವ ವಿಜ್ಞಾನಿ ಡ್ರೋಣ್ ಪ್ರತಾಪ್ ಆಗಮಿಸಿದ್ದರು. ಈ ವೇಳೆ ಮಾತನಾಡಿ, ಮೊಬೈಲ್‍ಗಳ ಮಿತವಾದ ಬಳಕೆಯ ಜೊತೆಗೆ ತಂತ್ರಜ್ಞಾನದ ಅರಿವು ಇರಬೇಕು. ಸತತವಾದ ಪರಿಶ್ರಮ ಇದ್ದರೆ ಮಾತ್ರ ಜೀವನದಲ್ಲಿ ಯಶಸ್ಸು ಬರುತ್ತದೆ ಎಂದರು.
ನಮ್ಮ ದೇಶದಲ್ಲಿ ರೈತನಿಗೆ ಸರ್ಕಾರ ಮಾಡುವ ಸಾಲಮನ್ನಾ ಬೇಡ. ಅವರು ಒಂದು ಕಚೇರಿಗೆ ಹೋದರೆ ಕೂರಿಸಿ ಏನಪ್ಪ ಅಂತ ಕೇಳುವಂತ ಅಧಿಕಾರಿ ಬೇಕು. ನಾನು ಒಬ್ಬ ರೈತನ ಮಗನಾಗಿ ರೈತರ ಬಗ್ಗೆ ಮಾತನಾಡುತ್ತಿದ್ದೇನೆ ಎಂದರು.
ಸಮಾಜದ ಮೂಲೆಯಲ್ಲಿರುವ ಯುವ ಸಾಧಕರನ್ನು ಗುರುತಿಸಿ ಮುಖ್ಯ ವಾಹಿನಿಗೆ ತರುವ ಕೆಲಸ ಅದಮ್ಯ ಫೌಂಡೇಶನ್ ಮಾಡುತ್ತಿದ್ದು, ಅವರ ಕೆಲಸ ಶ್ಲಾಘನೀಯ. ಸತತವಾದ ಪರಿಶ್ರಮ ಒಂದೇ ಸಾಧನೆಯ ಮುಖ್ಯ ಅಸ್ತ್ರ. ತಂದೆ ತಾಯಿಗಳನ್ನು ಪೂಜ್ಯನಿಯ ಭಾವದಿಂದ ನೋಡಿಕೊಂಡು ಮೌಲ್ಯಯುತವಾಗಿ ಇಂದಿನ ಯುವ ಸಮೂಹ ಜೀವನ ನಡೆಸಬೇಕು ಎಂದು ತಿಳಿಸಿದ್ದಾರೆ.
ಅದಮ್ಯ ಫೌಂಡೇಶನ್ ಪ್ರಾರಂಭವಾಗಿ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಅದಮ್ಯೋತ್ಸವ ಕಾರ್ಯಕ್ರಮದಲ್ಲಿ ಯುವ ಸಾಧಕರಿಗೆ ಸನ್ಮಾನ ಹಮ್ಮಿಕೊಳ್ಳಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ್ದ ಯುವಕರನ್ನು ಗುರುತಿಸಿ ಸನ್ಮಾನಿಸಲಾಯಿತು. ಕಳೆದ ವರ್ಷ ಪುಲ್ವಾಮಾ ದಾಳಿಯಲ್ಲಿ ವೀರ ಮರಣ ಹೊಂದಿದ್ದ ಭಾರತೀಯ ಯೋದರಿಗೆ ಗೀತ ನಮನ ಸಲ್ಲಿಸಲಾಗಿದೆ.
ಕಾರ್ಯಕ್ರಮದ ಸಾನಿಧ್ಯವಹಿಸಿದ್ದ ಅಥಣಿಯ ಮೋಟಗಿ ಮಠದ ಪ್ರಭು ಚನ್ನಬಸವ ಸ್ವಾಮೀಜಿ ಮಾತನಾಡಿ, ಇಂದಿನ ಯುವಕರು ಬೇಡದ ಕೆಲಸಗಳಿಂದ ತಮ್ಮ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಅಂತವರಿಗೆ ಬದುಕಿನ ಮೌಲ್ಯಗಳ ಜೊತೆಗೆ ಆಧ್ಯಾತ್ಮಿಕ ಸಾರ ನೀಡಬೇಕಾದ ಅವಶ್ಯಕತೆ ಇದೆ. ಈ ಕೆಲಸವನ್ನು ಕಳೆದ ಒಂದು ವರ್ಷದಿಂದ ಅದಮ್ಯ ಫೌಂಡೇಶನ್ ಮಾಡುತ್ತಿದೆ ಎಂದರು.
ಬೆಂಗಳೂರು: ರಿಯಾಲಿಟಿ ಶೋ ‘ಬಿಗ್‍ಬಾಸ್ ಸೀಸನ್ 7’ ಕೊನೆಯ ಹಂತ ತಲುಪಿದ್ದು, ಇನ್ನೂ ಎರಡು ದಿನಗಳು ಬಿಗ್‍ಬಾಸ್‍ನ ಗ್ರ್ಯಾಂಡ್ ಫಿನಾಲೆ ನಡೆಯಲಿದೆ. ಈ ನಡುವೆ ಭೂಮಿ ಶೆಟ್ಟಿಗಾಗಿ ವಾಸುಕಿ, ಶೈನ್ ಮತ್ತು ಕುರಿ ಪ್ರತಾಪ್ ಹುಡುಗಿಯರ ವೇಷ ಹಾಕಿಕೊಂಡು ಬಿಗ್‍ಮನೆಯಲ್ಲಿ ಓಡಾಡಿದ್ದಾರೆ.
ಸ್ಪರ್ಧಿಗಳು ಈ ವಾರ ಮಾತ್ರ ಬಿಗ್‍ಬಾಸ್ ಮನೆಯಲ್ಲಿರುತ್ತಾರೆ. ಹೀಗಾಗಿ ಬಿಗ್ ಮನೆಯಲ್ಲಿ ನಿಮಗೆ ಈಡೇರಬೇಕಾದ ಯಾವುದಾದರೂ ಆಸೆ ಇದ್ದರೆ ತಿಳಿಸಿ ಎಂದು ಬಿಗ್‍ಬಾಸ್ ಹೇಳಿದ್ದರು. ಆಗ ಭೂಮಿ ಹುಡುಗರು ಹುಡುಗಿಯರ ರೀತಿ ಬಟ್ಟೆ ಧರಿಸಿಕೊಂಡು ಮನೆಯಲ್ಲಿ ಓಡಾಡಬೇಕು, ಹುಡುಗಿಯರು ಹುಡುಗರ ರೀತಿ ಡ್ರೆಸ್ ಮಾಡಿಕೊಂಡು ಓಡಾಡಬೇಕು ಎಂಬ ಆಸೆಯನ್ನು ಬಿಗ್‍ಬಾಸ್‍ಗೆ ತಿಳಿಸಿದ್ದರು.
ಅದರಂತಯೇ ಬಿಗ್‍ಬಾಸ್ ಒಂದು ಗಂಟೆಯ ಕಾಲ ಪುರುಷರು ಮಹಿಳೆಯರ ರೀತಿ ಉಡುಪು ಧರಿಸಿಕೊಂಡು ಬಿಗ್‍ಬಾಸ್ ಮನೆಯಲ್ಲಿ ಓಡಾಡಬೇಕು ಎಂದು ತಿಳಿಸಿದ್ದರು. ಭೂಮಿಗಾಗಿ ಕುರಿ ಪ್ರತಾಪ್, ಶೈನ್ ಶೆಟ್ಟಿ ಮತ್ತು ವಾಸುಕಿ ಮೂವರು ಹುಡುಗಿಯ ರೀತಿ ಉಡುಪು ಧರಿಸಿಕೊಂಡು, ಧ್ವನಿ ಬದಲಾಯಿಸಿಕೊಂಡು ಮಾತನಾಡಿದ್ದಾರೆ. ಆಗ ದೀಪಿಕಾ ದಾಸ್ ಮತ್ತು ಭೂಮಿ ಶೆಟ್ಟಿ ಹುಡುಗರ ರೀತಿ ಬಟ್ಟೆ ಧರಿಸಿಕೊಂಡು, ಮೀಸೆ ಬರೆದುಕೊಂಡು ಹುಡುಗಿಯರ ವೇಷದಲ್ಲಿದ್ದ ಮೂವರು ಹುಡುಗರನ್ನು ರೇಗಿಸುತ್ತಿದ್ದರು.
ಸೋಫಾ ಮೇಲೆ ಕುಳಿತು ಮಾತನಾಡುತ್ತಿದ್ದಾಗ ವಾಸುಕಿ ಯಾರೋ ಒಬ್ಬರ ಚಟಕ್ಕೆ ನಾವು ಎಷ್ಟು ಜನ ಬಲಿಯಾಗಿದ್ದೀವಿ ನೋಡಿ ಎಂದು ಬೇಸರದಿಂದ ಹೇಳಿದ್ದಾರೆ. ಒಂದು ಗಂಟೆಯಾದ ತಕ್ಷಣ ಕುರಿ ಪ್ರತಾಪ್, ಶೈನ್, ವಾಸುಕಿ ಮೂವರು ಭೂಮಿಗೆ ತಮಾಷೆಯಿಂದ ಹೊಡೆದಿದ್ದಾರೆ. ಇದೊಂದು ಆಸೆನಾ, ನಮ್ಮ ಪರಿಸ್ಥಿತಿ ನೋಡು ಹೇಗಿದೆ, ನೀನು ಬೇಕಿದ್ದರೆ ಇಡೀ ದಿನ ಹುಡುಗರ ರೀತಿ ಬಟ್ಟೆ ಧರಿಸಿಕೊಂಡು ಓಡಾಡಬೇಕಿತ್ತು ಎಂದು ಬೈದಿದ್ದಾರೆ.
ಬೆಂಗಳೂರು: ರಿಯಾಲಿಟಿ ಶೋ ‘ಬಿಗ್‍ಬಾಸ್ ಸೀಸನ್ 7’ ಕೊನೆಯ ಹಂತ ತಲುಪಿದ್ದು, ಇನ್ನೂ ಎರಡು ದಿನಗಳಲ್ಲಿ ಫಿನಾಲೆ ನಡೆಯಲಿದೆ. ಆದರೆ ಮನೆಯ ಸದಸ್ಯರು ತಮಾಷೆಗೆ ಭೂಮಿಯನ್ನು ಎತ್ತಿಕೊಂಡು ಹೋಗಿ ಬಿಗ್‍ಬಾಸ್ ಗೇಟ್ ಬಳಿ ಬಿಟ್ಟಿದ್ದಾರೆ.
ಗುರುವಾರ ಪ್ರಸಾರವಾದ ಸಂಚಿಕೆಯಲ್ಲಿ ಮನೆಯ ಸದಸ್ಯರು ಎದ್ದೇಳುವ ಮೊದಲೇ ಗಾಯಕ ರಘು ದೀಕ್ಷಿತ್ ಬಿಗ್‍ಮನೆಗೆ ಎಂಟ್ರಿ ಕೊಟ್ಟಿದ್ದರು. ನಂತರ ರಘು ದೀಕ್ಷಿತ್ ಹಾಡುವ ಹೇಳುವ ಮೂಲಕ ಸ್ಪರ್ಧಿಗಳನ್ನು ಎದ್ದೇಳಿಸಿದ್ದಾರೆ. ಸ್ಪರ್ಧಿಗಳು ರಘು ದೀಕ್ಷಿತ್ ನೋಡಿ ಅಚ್ಚರಿ ಪಟ್ಟಿದ್ದು, ಅವರು ಹಾಡಿದ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಬಳಿಕ ಎಲ್ಲರೂ ಮನೆಯೊಳಗೆ ಹೋಗಿ ಕುಳಿತುಕೊಂಡು ಕೆಲಕಾಲ ಮಾತನಾಡಿದ್ದಾರೆ.
ರಘು ದೀಕ್ಷಿತ್ ಮನೆಯಿಂದ ಹೋದ ಬಳಿಕ ಕುರಿ ಪ್ರತಾಪ್ ಮತ್ತು ವಾಸುಕಿ ವೈಭವ್ ಅಡುಗೆ ಮನೆಯಲ್ಲಿದ್ದರು. ಭೂಮಿ ಸೋಫಾ ಮೇಲೆ ಮಲಗಿದ್ದು, ಶೈನ್ ಭೂಮಿ ಪಕ್ಕದಲ್ಲಿ ಕುಳಿತಿದ್ದರು. ಆಗ ಭೂಮಿ, ನನಗೆ ಒಂಥರಾ ಆಗುತ್ತಿದೆ, ಏನಾಗುತ್ತಿದೆ ಎಂದು ಗೊತ್ತಾಗುತ್ತಿಲ್ಲ. ವಾಮಿಟ್ ಬರೋತರ ಆಗುತ್ತಿದೆ ಎಂದು ಹೇಳಿದ್ದಾರೆ.
ಆಗ ವಾಸುಕಿ, ಶೈನ್ ಮತ್ತು ಕುರಿ ಪ್ರತಾಪ್ ಅಯ್ಯೋ ಇನ್ನೂ ಮೂರು ದಿನ ಇರುವುದಕ್ಕೂ ಆಗುವುದಿಲ್ಲವೆನೋ ಎಂದು ರೇಗಿಸುತ್ತಾ ಭೂಮಿಯನ್ನು ಎತ್ತಿಕೊಂಡು ಹೋಗಿ ಬಿಗ್‍ಬಾಸ್ ಗೇಟ್ ಬಳಿ ತಂದು ಕೂರಿಸಿದ್ದಾರೆ. ಅಷ್ಟೇ ಅಲ್ಲದೇ ಶೈನ್ ತಮಾಷೆಗೆ ಆಕೆಯ ಸೂಟ್‍ಕೇಸ್, ಬಟ್ಟೆ ತಂದು ಕೊಟ್ಟಿದ್ದಾರೆ.
ಜೋಪಾನವಾಗಿ ಹೋಗು, ಹೊರಗಡೆ ಸಿಗೋಣ. ತುಂಬಾ ಚೆನ್ನಾಗಿ ಆಟವಾಡಿದ್ದೀಯಾ, ವಾರ ವಾರ ದಪ್ಪ ಆಗಿದ್ದೀಯಾ, ನಿನಗೆ ಹೊರಗಡೆ ಉಜ್ವಲವಾದ ಭವಿಷ್ಯವಿದೆ. ಹೋಗುವಾಗ ಬಿಗ್‍ಬಾಸ್ ಆಸ್ಪತ್ರೆಗೆ ತೋರಿಸುತ್ತಾರೆ ಎಂದು ಶೈನ್ ರೇಗಿಸಿದ್ದಾರೆ. ಕೊನೆಗೆ ತಿಂಡಿ ಜಾಸ್ತಿ ತಿಂದಿದ್ದಕ್ಕೆ ಈ ರೀತಿ ಆಗಿದೆ ಎಂದು ಭೂಮಿ ಒಪ್ಪಿಕೊಂಡಿದ್ದಾರೆ. ನಂತರ ಭೂಮಿಯನ್ನು ಬಿಗ್‍ಮನೆಗೆ ವಾಪಸ್ ಕರೆದುಕೊಂಡು ಹೋಗಿದ್ದಾರೆ.
ಮೈಸೂರು: ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದಂತೆ ಕಾಂಗ್ರೆಸ್‍ಗೆ ಇದು ಪುಟುಗೋಸಿ ಡೀಲ್ ಆಗಿದೆ. ಅವರ ಪ್ರಕಾರ 26 ಲಕ್ಷ ರೂಪಾಯಿ ಯಾವ್ ಭ್ರಷ್ಟಾಚಾರವಾಗಿದೆ. 50 ಕೋಟಿ 100 ಕೋಟಿ 500 ಕೋಟಿ ಹಣ ಲಪಟಾಯಿಸೋ ಕಾಂಗ್ರೆಸ್ಸಿಗರಿಗೆ 26 ಲಕ್ಷ ಹಣವೇ ಅಂತ ಸಂಸದ ಪ್ರತಾಪ್ ಸಿಂಹ ವ್ಯಂಗ್ಯವಾಡಿದ್ದಾರೆ.
ವಿಧಾನಸೌಧದಲ್ಲಿ ಹಣ ಸಿಕ್ಕ ವಿಚಾರದ ಕುರಿತು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಿನೇಶ್ ಗುಂಡೂರಾವ್ ಅವರು ಸತ್ಯ ಒಪ್ಪಿಕೊಂಡಿದ್ದಾರೆ. ಸ್ಟೀಲ್ ಬ್ರಿಡ್ಜ್‍ನಂತಹ ಯೋಜನೆಯಲ್ಲಿ ಸಾವಿರಾರು ಕೋಟಿ ಬರುವಾಗ 26 ಲಕ್ಷ ಅವರಿಗೆ ಪುಟುಗೋಸಿನೆ. ಹೀಗಾಗಿ ದಿನೇಶ್ ಗುಂಡೂರಾವ್ ಅವರನ್ನ ನಾನು ಅಭಿನಂದಿಸುತ್ತೇನೆ ಅಂತ ಹೇಳಿದ್ರು.
ಶಬರಿಮಲೆ ಎಂಟ್ರಿ:
ಅಯ್ಯಪ್ಪನ ದೇವಾಲಯಕ್ಕೆ ಮಹಿಳೆಯರ ಎಂಟ್ರಿ ವಿಚಾರದ ಕುರಿತು ಪ್ರತಿಕ್ರಿಯಿಸಿದ ಸಂಸದರು, ಅಯ್ಯಪ್ಪನ ದೇವಾಲಯಕ್ಕೆ ಬರೋಕೆ ಮುಸ್ಲಿಂ ಮಹಿಳೆಯರು ಯಾರು ಅಂತ ಪ್ರಶ್ನಿಸಿದ್ರು. ಅವರೇನು ಅವರ ಮಸೀದಿಗಳಿಗೆ ನಮ್ಮನ್ನು ಬಿಟ್ಟುಕೊಳ್ಳುತ್ತಾರಾ, ನಮ್ಮ ಶ್ರದ್ಧಾ ಭಕ್ತಿಯನ್ನು ಹಾಳು ಮಾಡುದಕ್ಕೆ ಅವರಿಗೆ ಕುಮ್ಮಕ್ಕು ಕೊಟ್ಟವರು ಯಾರು, ಕಳ್ಳರ ರೀತಿ ಬುರ್ಕಾ ಧರಿಸಿಕೊಂಡು ದೇವಾಸ್ಥಾನಕ್ಕೆ ಹೋಗಿದ್ದೀರಲ್ಲ ನೀವೇನು ನಿಜವಾದ ಭಕ್ತರಾ, ನಿಮ್ಮ ಮುಖದಲ್ಲಿ ಶ್ರದ್ಧೆ ಭಕ್ತಿ ಇದೆಯಾ ಅಂತ ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿದ್ರು.
ಕಮ್ಯೂನಿಸ್ಟ್ ಸರ್ಕಾರದ ಕುಮ್ಮಕ್ಕಿನಿಂದ ಇಂತದ್ದೆಲ್ಲ ನಡೆದಿದೆ. ಕಮ್ಯೂನಿಸ್ಟ್ ಸರ್ಕಾರವನ್ನ ಕೆಲವೆಡೆ ಬಿಜೆಪಿ ನಾಶ ಮಾಡಿದೆ. ಕೇರಳದಲ್ಲೂ ನಾಶವಾಗುವ ಕಾಲ ಬಂದಿದೆ. ಅಯ್ಯಪ್ಪನ ವಿಚಾರವೇ ಕಮ್ಯೂನಿಸ್ಟ್ ಪಕ್ಷವನ್ನ ನಾಶ ಮಾಡಲಿದೆ. ಪ್ರಪಂಚದಲ್ಲಿ ಹಿಂದೂ ಧರ್ಮ ಮಾತ್ರ ಮಹಿಳೆಯನ್ನ ಪೂಜ್ಯ ಸ್ಥಾನದಲ್ಲಿ ಇಟ್ಟಿದೆ. ಎಡಬಿಡಂಗಿಗಳಿಗೆ ಇದು ಅರ್ಥ ಆಗೋಲ್ಲ. ಬೇರೆ ಧರ್ಮದಲ್ಲಿ ಹೆಣ್ಣನ್ನ ಕೇವಲ ಸುಖ ನೀಡುವ ವಸ್ತುವಾಗಿ ಬಳಸಿದ್ದಾರೆ. ನಮ್ಮಲ್ಲಿ ಹೆಣ್ಣಿಗೆ ಪೂಜ್ಯ ಸ್ಥಾನ ಕೊಟ್ಟಿದೆ ಇದನ್ನ ಜನರು ಅರ್ಥ ಮಾಡಿಕೊಳ್ಳಬೇಕು ಅಂತ ಕಿಡಿಕಾರಿದ್ದಾರೆ.
ಲೋಕಸಭೆಗೆ ಸ್ಪರ್ಧೆ ಖಚಿತ:
ಮುಂದಿನ ಲೋಕಸಭೆಗೆ ಟಿಕೆಟ್ ನನಗೆ, ಗೆಲ್ಲೋದು ನಾನೇ. ಕೆಲ ಮಾಧ್ಯಮಗಳು ನನ್ನ ಮೇಲೆ ಅಪಾರ ಪ್ರೀತಿ ಹೊಂದಿದ್ದಾರೆ. ವಾಪಸ್ ಪತ್ರಿಕೋದ್ಯಮಕ್ಕೆ ಬರಲಿ ಅಂತ ನನಗೆ ಟಿಕೆಟ್ ಇಲ್ಲ ಎಂದು ಬರೆಯುತ್ತಾರೆ. ಆದ್ರೆ ಈ ಬಾರಿ ಟಿಕೆಟ್ ನನಗೆ ಸಿಗುವುದು ಖಚಿತ, ಗೆಲ್ಲುವುದು ಖಚಿತವಾಗಿದೆ. ನಮ್ಮ ಬಿಜೆಪಿಯ 15 ಸಂಸದರಿಗೂ ಟಿಕೆಟ್ ಈಗಾಗಲೇ ಫೈನಲ್ ಆಗಿದೆ. ಯಡಿಯೂರಪ್ಪ ಹಾಗೂ ಹೈಕಮಾಂಡ್ ಕೆಲಸ ಮಾಡುವಂತೆ ಹೇಳಿದೆ. ಮೈಸೂರು ಕ್ಷೇತ್ರದ ಟಿಕೆಟ್ ಬಗ್ಗೆ ಯಾವುದೇ ಗೊಂದಲ ಬೇಡ ಅಂತ ಅವರು ಸ್ಪಷ್ಟಪಡಿಸಿದ್ರು.
ದಿನೇಶ್ ಗುಂಡೂರಾವ್ ಹೇಳಿದ್ದೇನು?:
ವಿಧಾನಸೌಧದಲ್ಲಿ ಹಣ ಪತ್ತೆಯಾದ ಬಗ್ಗೆ ಯಾರ ಮೇಲೂ ಆರೋಪ ಮಾಡುವುದು ಸರಿಯಲ್ಲ. ಅದರ ಬಗ್ಗೆ ಪೊಲೀಸರು ಖಂಡಿತವಾಗಿಯೂ ತನಿಖೆ ನಡೆಸುತ್ತಾರೆ ಎಂಬ ವಿಶ್ವಾಸ ಇದೆ. ಯಾರ ದುಡ್ಡು, ಯಾರು ತೆಗೆದುಕೊಂಡು ಹೋಗುತ್ತಿದ್ದರು..?, ಏನು ಅದರ ಮೂಲ ಎಂಬುದನ್ನೆಲ್ಲ ತಿಳಿದುಕೊಳ್ಳಬೇಕಾಗುತ್ತದೆ.
30 ಸಾವಿರ ಕೋಟಿ ಹಗರಣಕ್ಕೆ ಒಂದು ಜಾಯಿಂಟ್ ಪಾರ್ಲಿಮೆಂಟರಿ ಕಮಿಟಿ ಮಾಡಿ ಅಂದ್ರೂ ಒಪ್ಪಿಕೊಳ್ಳುತ್ತಿಲ್ಲವಲ್ಲ. ಈ ಮಧ್ಯೆ ಇದ್ಯಾವುದು 20 ಲಕ್ಷ ರೂ. ಪುಟುಗೋಸಿ. ಒಟ್ಟಿನಲ್ಲಿ ಈ ಬಗ್ಗೆ ಉನ್ನತಮಟ್ಟದಲ್ಲಿ ತನಿಖೆ ಆಗಬೇಕು. ಯಾರಾದ್ರು ನಮ್ಮ ಪಕ್ಷದವರು ಇದರಲ್ಲಿ ಭಾಗಿಯಾಗಿದ್ದರೆ, ಕಾರಣಕರ್ತರು ಇದ್ದರೆ ತೀಕ್ಷಣವಾದ ಕ್ರಮ ಕೈಗೊಳ್ಳುತ್ತೇವೆ ಅಂತ ಗುಂಡೂರಾವ್ ಹೇಳಿದ್ದರು.