Tag: Prasidh Krishna

  • ಸಿರಾಜ್‌, ಕೃಷ್ಣ ಮ್ಯಾಜಿಕ್‌ – ಭಾರತಕ್ಕೆ ರೋಚಕ 6 ರನ್‌ಗಳ ಜಯ

    ಸಿರಾಜ್‌, ಕೃಷ್ಣ ಮ್ಯಾಜಿಕ್‌ – ಭಾರತಕ್ಕೆ ರೋಚಕ 6 ರನ್‌ಗಳ ಜಯ

    ಲಂಡನ್‌: ನಾಟಕೀಯ ತಿರುವುಗಳಿಂದ ಕೂಡಿದ್ದ ತೆಂಡುಲ್ಕರ್‌- ಆ್ಯಂಡರ್‌ಸನ್‌ ಟೆಸ್ಟ್‌ ಸರಣಿಯ ಐದನೇ ಪಂದ್ಯದ ಐದನೇ ದಿನ ಭಾರತ (Team India)  ಇಂಗ್ಲೆಂಡ್‌ ವಿರುದ್ಧ ರೋಚಕ 6 ರನ್‌ಗಳ ಜಯ ಸಾಧಿಸಿದೆ. ಈ ಪಂದ್ಯವನ್ನು ಗೆಲ್ಲುವ ಮೂಲಕ ಸರಣಿ 2-2 ರಲ್ಲಿ ಸಮಬಲಗೊಂಡಿದೆ.

    ಓವಲ್‌ ಕ್ರೀಡಾಂಗಣದಲ್ಲಿ ಟೀಂ ಇಂಡಿಯಾ ನೀಡಿದ್ದ ಬೃಹತ್‌ ರನ್‌ ಬೆನ್ನಟ್ಟಿದ ಇಂಗ್ಲೆಂಡ್‌ (England)  ಅಂತಿಮವಾಗಿ 85.1 ಓವರ್‌ಗಳಲ್ಲಿ 367 ರನ್‌ಗಳಿಗೆ ಆಲೌಟ್‌ ಆಗಿ ಸೋಲೊಪ್ಪಿಕೊಂಡಿತು.

    2ನೇ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್‌ ಗೆಲುವಿಗೆ 374 ರನ್‌ಗಳ ಬೃಹತ್‌ ಗುರಿಯನ್ನು ಭಾರತ ನೀಡಿತ್ತು. ಬೃಹತ್‌ ಮೊತ್ತವನ್ನು ಗುರಿ ಬೆನ್ನತ್ತಿದ ಇಂಗ್ಲೆಂಡಿಗೆ ಕೊನೆಯ ದಿನ 4 ವಿಕೆಟ್‌ ಸಹಾಯದಿಂದ 35 ರನ್‌ ಬೇಕಿತ್ತು.

    ನಾಲ್ಕನೇಯ ದಿನ ಅಜೇಯರಾಗಿದ್ದ ಸ್ಮಿತ್‌ ನಿನ್ನೆಯ ಮೊತ್ತವಾದ 2 ರನ್‌ಗೆ ಸಿರಾಜ್‌ (Mohammed Siraj) ಬೌಲಿಂಗ್‌ನಲ್ಲಿ ಕ್ಯಾಚ್‌ ನೀಡಿ ಔಟಾದರೆ ಓವರ್‌ಟನ್‌ 8 ರನ್‌ಗಳಿಸಿ ಸಿರಾಜ್‌ ಎಲ್‌ಬಿ ಔಟಾದರು. ಜೋಶ್‌ ಟಂಗ್‌ ಅವರು ಪ್ರಸಿದ್ಧ್‌ ಕೃಷ್ಣ (Prasidh Krishna) ಬೌಲ್ಡ್‌ ಮಾಡಿದರು. 10ನೇಯವರಾಗಿ ಗಂಭೀರವಾಗಿ ಗಾಯಗೊಂಡಿದ್ದ ಕ್ರೀಸ್‌ ವೋಕ್ಸ್‌ ಮೈದಾನಕ್ಕೆ ಇಳಿದಿದ್ದರು. ಇದನ್ನೂ ಓದಿ: ಟೀಕೆಯಿಂದ ಖಿನ್ನತೆಗೆ ಜಾರಿದ್ದೆ, ಆತ್ಮಹತ್ಯೆಗೆ ಯೋಚಿಸಿದ್ದೆ – ಮೌನ ಮುರಿದ ಚಹಲ್‌

    ಗಸ್ ಅಟ್ಕಿನ್ಸನ್ ಅವರು ಕ್ರೀಸ್‌ ವೋಕ್ಸ್‌ಗೆ ಸ್ಟ್ರೈಕ್‌ ನೀಡುತ್ತಿರಲಿಲ್ಲ. ಸ್ಟ್ರೈಕ್‌ ನೀಡಿದ್ದರೆ 1 ಕೈಯಲ್ಲಿ ಬ್ಯಾಟ್‌ ಬೀಸಬೇಕಿತ್ತು. ಓವರ್‌ ಕೊನೆಯಲ್ಲಿ ಒಂದು ರನ್‌ ಓಡುವ ಮೂಲಕ ಮತ್ತೆ ಗಸ್ ಅಟ್ಕಿನ್ಸನ್ ಸ್ಟ್ರೈಕ್‌ಗೆ ಬರುತ್ತಿದ್ದರು. ಆದರೆ ಕೊನೆಗೆ ಸಿರಾಜ್‌ 17 ರನ್‌ ಹೊಡೆದಿದ್ದ ಗಸ್ ಅಟ್ಕಿನ್ಸನ್ ಬೌಲ್ಡ್‌ ಮಾಡುವ ಮೂಲಕ ಭಾರತಕ್ಕೆ ಜಯ ತಂದುಕೊಟ್ಟರು.

    ಸಿರಾಜ್‌ 5 ವಿಕೆಟ್‌ ಕಿತ್ತರೆ ಪ್ರಸಿದ್ಧ್‌ ಕೃಷ್ಣ 4 ವಿಕೆಟ್‌ ಪಡೆದರು. ಈ ಪಂದ್ಯದಲ್ಲಿ 9  ವಿಕೆಟ್‌ ಪಡೆದ ಸಿರಾಜ್‌ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರೆ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಹ್ಯಾರಿ ಬ್ರೂಕ್‌ ಅವರಿಗೆ ಸರಣಿ ಶ್ರೇಷ್ಠ ಗೌರವಕ್ಕೆ ಪಾತ್ರರಾದರು.

    ಸಂಕ್ಷಿಪ್ತ ಸ್ಕೋರ್‌
    ಭಾರತ ಮೊದಲ ಇನ್ನಿಂಗ್ಸ್‌ 224/10
    ಇಂಗ್ಲೆಂಡ್‌ ಮೊದಲ ಇನ್ನಿಂಗ್ಸ್‌ 247/10
    ಭಾರತ ಎರಡನೇ ಇನ್ನಿಂಗ್ಸ್‌ 396/10
    ಇಂಗ್ಲೆಂಡ್‌ ಎರಡನೇ ಇನ್ನಿಂಗ್ಸ್‌ 367/10

  • IPL 2024: ರಿಷಭ್ ಪಂತ್ ಸಂಪೂರ್ಣ ಫಿಟ್‌ – ಐಎಪಿಎಲ್‌ಗೆ ಬಿಸಿಸಿಐನಿಂದ ಗ್ರೀನ್‌ ಸಿಗ್ನಲ್‌

    IPL 2024: ರಿಷಭ್ ಪಂತ್ ಸಂಪೂರ್ಣ ಫಿಟ್‌ – ಐಎಪಿಎಲ್‌ಗೆ ಬಿಸಿಸಿಐನಿಂದ ಗ್ರೀನ್‌ ಸಿಗ್ನಲ್‌

    – ಕನ್ನಡಿಗ ಪ್ರಸಿದ್ಧ್‌ ಕೃಷ್ಣ, ಶಮಿ ಐಪಿಎಲ್‌ನಿಂದ ಔಟ್‌

    ಮುಂಬೈ: ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಕ್ರಿಕೆಟಿಗ ರಿಷಭ್ ಪಂತ್‌ಗೆ (Rishabh Pant) ಫಿಟ್‍ನೆಸ್ ಕ್ಲಿಯರೆನ್ಸ್ ಸರ್ಟಿಫಿಕೆಟ್ ನೀಡಿದ ಬೆನ್ನಲ್ಲೇ ಐಪಿಎಲ್‌ನಲ್ಲಿ ಪಾಲ್ಗೊಳ್ಳುವುದಕ್ಕೆ ಬಿಸಿಸಿಐ (BCCI) ಗ್ರೀನ್‌ ಸಿಗ್ನಲ್‌ ನೀಡಿದೆ. ರಿಷಭ್‌ ಸಂಪೂರ್ಣ ಫಿಟ್‌ ಆಗಿದ್ದು, ಅವರು ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಸೇರಬಹುದಾಗಿದೆ ಎಂದು ಅನುಮತಿ ನೀಡಿದೆ. ಆದ್ರೆ ಕನ್ನಡಿಗ ಪ್ರಸಿದ್ಧ್‌ ಕೃಷ್ಣ ಮತ್ತು ವೇಗಿ ಮೊಹಮ್ಮದ್‌ ಶಮಿ ಅವರು ಐಪಿಎಲ್‌ನಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಿದೆ.

    2022ರ ಡಿಸೆಂಬರ್ 30ರಂದು ತಡರಾತ್ರಿ ಪಂತ್‌ ಅವರು ಪ್ರಯಾಣಿಸುತ್ತಿದ್ದ ಕಾರು ಭೀಕರ ಅಪಘಾತಕ್ಕೀಡಾಗಿತ್ತು. ಅಂದಿನಿಂದ ಚಿಕಿತ್ಸೆ ಪಡೆಯುತ್ತಿದ್ದ ಪಂತ್‌ ಕಳೆದ 2-3 ತಿಂಗಳ ಹಿಂದೆ ಮತ್ತೆ ಬ್ಯಾಟ್‌ ಹಿಡಿಯಲು ಪ್ರಾರಂಭಿಸಿದ್ದರು. ನಂತರ ಅವರು ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿ ಪುನರ್ವಸತಿ ಕೇಂದ್ರದಲ್ಲಿ ಅಭ್ಯಾಸ ನಡೆಸುತ್ತಿದ್ದರು. ಕಳೆದ ಎರಡು ದಿನಗಳ ಹಿಂದೆಯಷ್ಟೇ ಎನ್‌ಸಿಎ ಪಂತ್‌ ಅವರಿಗೆ ಫಿಟ್‌ನೆಸ್‌ ಕ್ಲೆಯರೆನ್ಸ್‌ ನೀಡಿದ್ದು, ಈ ಬೆನ್ನಲ್ಲೇ ಬಿಸಿಸಿಐ ಸಹ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ (Delhi Capitals) ಪರವಾಗಿ ಪ್ರತಿನಿಧಿಸಲು ಗ್ರೀನ್‌ ಸಿಗ್ನಲ್‌ ಕೊಟ್ಟಿದೆ.

    ರಿಷಬ್‌ಗೆ ಏನಾಗಿತ್ತು?
    2022ರ ಡಿಸೆಂಬರ್ 30ರಂದು ಟೀಂ ಇಂಡಿಯಾ ಆಟಗಾರ ರಿಷಭ್ ಪಂತ್ ಅವರು ಪ್ರಯಾಣಿಸುತ್ತಿದ್ದ ಕಾರು ಭೀಕರ (Car Accident) ಅಪಘಾತಕ್ಕೀಡಾಗಿತ್ತು. ಉತ್ತರಾಖಂಡದಲ್ಲಿರುವ ತಮ್ಮ ನಿವಾಸಕ್ಕೆ ತೆರಳುತ್ತಿದ್ದಾಗ ಹಮ್ಮದ್‌ಪುರ ಝಾಲ್ ಬಳಿ ರೂರ್ಕಿಯ ನರ್ಸನ್ ಗಡಿಯಲ್ಲಿ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದು, ಪಂತ್ ಗಂಭೀರವಾಗಿ ಗಾಯಗೊಂಡಿದ್ದರು. ರಿಷಭ್ ಪಂತ್ ಅವರ ತಲೆ (ಹಣೆಯ ಭಾಗ), ಕಾಲಿಗೆ ಗಂಭೀರ ಪೆಟ್ಟಾಗಿದ್ದು, ಆರೋಗ್ಯ ಸ್ಥಿತಿ ಗಂಭೀರವಾಗಿತ್ತು.

    ಬಿಸಿಸಿಐ ಪ್ರಕಟಣೆಯಲ್ಲಿ ಏನಿದೆ?
    ರಿಷಭ್ ಪಂತ್ ಮುಂದಿನ 2024ರ ಟಾಟಾ ಐಪಿಎಲ್‌ 17ನೇ ಆವೃತ್ತಿಯಲ್ಲಿ ವಿಕೆಟ್‌ ಕೀಪರ್‌, ಬ್ಯಾಟರ್‌ ಆಗಿ ಆಡಲು ಫಿಟ್‌ ಆಗಿದಾರೆ. ಇದನ್ನೂ ಓದಿ: ಮಾ.22 ರಿಂದ IPL ಶುರು; ಉದ್ಘಾಟನಾ ಪಂದ್ಯದಲ್ಲೇ ಚೆನ್ನೈ-ಆರ್‌ಸಿಬಿ ನಡುವೆ ಹೈವೋಲ್ಟೇಜ್‌ ಕದನ!

    ಪ್ರಸಿದ್ಧ್ ಕೃಷ್ಣ:
    ಕನ್ನಡಿಗ ಪ್ರಸಿದ್ಧ್‌ ಕೃಷ್ಣ (Prasidh Krishna) ಕಳೆದ ಫೆಬ್ರವರಿ 23 ರಂದು ಪ್ರಾಕ್ಸಿಮಲ್ ಕ್ವಾಡ್ರೈಸ್ಪ್ ಸ್ನಾಯುರಜ್ಜು (ಎಡಗಾಲಿನ ಮಂಡಿಮೂಳೆ) ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಸದ್ಯ ಅವರನ್ನು ಬಿಸಿಸಿಐ ವೈದ್ಯಕೀಯ ತಂಡವು ಮೇಲ್ವಿಚಾರಣೆ ನಡೆಸುತ್ತಿದೆ. ಶೀಘ್ರದಲ್ಲೇ ಅವರು ಎನ್‌ಸಿಎನಲ್ಲಿ ಅಭ್ಯಾಸ ಆರಂಭಿಸಲಿದ್ದಾರೆ. ಆದ್ರೆ ಸದ್ಯಕ್ಕೆ 2024 ಐಪಿಎಲ್‌ ಟೂರ್ನಿಯಲ್ಲಿ ಭಾಗವಹಿಸಲು ಆಗುವುದಿಲ್ಲ.

    ಮೊಹಮ್ಮದ್ ಶಮಿ:
    2023ರ ಏಕದಿನ ವಿಶ್ವಕಪ್‌ ಟೂರ್ನಿ ವೇಳೆ ಎಡಪಾದದ ಗಾಯಕ್ಕೆ ತುತ್ತಾಗಿದ್ದ ಶಮಿ (Mohammed Shami) ಕಳೆದ ಫೆಬ್ರವರಿ 26ರಂದು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಸದ್ಯ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ಸದ್ಯ ಬಿಸಿಸಿಐ ವೈದ್ಯಕೀಯ ತಂಡ ಅವರನ್ನ ಮೇಲ್ವಿಚಾರಣೆ ನಡೆಸುತ್ತಿದ್ದು, ಅವರೂ 2024ರ ಐಪಿಎಲ್‌ ಆವೃತ್ತಿಯಲ್ಲಿ ಪಾಲ್ಗೊಳ್ಳಲಾಗುವುದಿಲ್ಲ ಎಂದು ತಿಳಿಸಿದೆ. ಇದನ್ನೂ ಓದಿ: ಐಪಿಎಲ್‍ನಿಂದ ಶಮಿ ಔಟ್ – ಟಿ20ಗೆ ಕಣಕ್ಕಿಳಿಸಲು ಬಿಸಿಸಿಐ ಚಿಂತನೆ

    ಟೈಟಾನ್ಸ್‌ಗೆ ಆಘಾತ:
    ಗುಜರಾತ್‌ ಟೈಟಾನ್ಸ್‌ (Gujarat Titans) ತಂಡದ ಬೌಲಿಂಗ್‌ ಸಾರಥಿ ಮೊಹಮ್ಮದ್‌ ಶಮಿ (Mohammed Shami) 2024ರ ಐಪಿಎಲ್‌ ಟೂರ್ನಿಯಿಂದಲೇ ಹೊರಗುಳಿದಿದ್ದಾರೆ. ಈಗಾಗಲೇ ಹಾರ್ದಿಕ್‌ ಪಾಂಡ್ಯ ಅವರನ್ನು ಕಳೆದುಕೊಂಡು ಸಂಕಷ್ಟಕ್ಕೀಡಾಗಿದ್ದ ಗುಜರಾತ್‌ ತಂಡಕ್ಕೆ ಮೊಹಮ್ಮದ್‌ ಶಮಿ ಅವರ ಗೈರು ಮತ್ತಷ್ಟು ಆಘಾತ ನೀಡಿದೆ.

  • ಕನ್ನಡದಲ್ಲಿ ಮಾತನಾಡಿ ಕನ್ನಡಿಗರ ಮನಗೆದ್ದ ಪ್ರಸಿದ್ಧ್ ಕೃಷ್ಣ

    ಕನ್ನಡದಲ್ಲಿ ಮಾತನಾಡಿ ಕನ್ನಡಿಗರ ಮನಗೆದ್ದ ಪ್ರಸಿದ್ಧ್ ಕೃಷ್ಣ

    ಚೆನ್ನೈ: ಕೋಲ್ಕತ್ತಾ ಮತ್ತು ಹೈದರಾಬಾದ್ ನಡುವಿನ ಐಪಿಎಲ್ ಪಂದ್ಯಕ್ಕೂ ಮೊದಲು ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ವೇಗದ ಬೌಲರ್ ಕನ್ನಡಿಗ ಪ್ರಸಿದ್ಧ್ ಕೃಷ್ಣ ಅವರು ಸಂದರ್ಶಕರು ಕೇಳಿದ ಪ್ರಶ್ನೆಗೆ ಕನ್ನಡದಲ್ಲೇ ಉತ್ತರಿಸುವ ಮೂಲಕ ಕನ್ನಡಿಗರ ಮನಗೆದ್ದಿದ್ದಾರೆ.

    ಐಪಿಎಲ್ ಆರಂಭಕ್ಕೂ ಮೊದಲು ಭಾರತ ಹಾಗೂ ಇಂಗ್ಲೆಂಡ್ ನಡುವಿನ ಏಕದಿನ ಸರಣಿಯಲ್ಲಿ ಭಾರತ ತಂಡಕ್ಕೆ ಪಾರ್ದಾಪಣೆ ಮಾಡಿದ ಯುವ ವೇಗಿ ಪ್ರಸಿದ್ಧ್ ಕೃಷ್ಣ ತನ್ನ ಚೊಚ್ಚಲ ಪಂದ್ಯದಲ್ಲೇ ತಾನೊಬ್ಬ ಪ್ರತಿಭಾವಂತ ಬೌಲರ್ ಎಂಬುದನ್ನು ತೋರಿಸಿ ಕೊಟ್ಟಿದ್ದರು. ಆ ಬಳಿಕ ಇದೀಗ ಆರಂಭಗೊಂಡಿರುವ 14ನೇ ಆವೃತ್ತಿಯ ಐಪಿಎಲ್‍ನಲ್ಲಿ ಕೆಕೆಆರ್ ತಂಡದ ಪರವಾಗಿ ಆಡುತ್ತಿರುವ ಪ್ರಸಿದ್ಧ್ ಕೃಷ್ಣ ಮೊದಲ ಪಂದ್ಯದಲ್ಲೇ ಮತ್ತೆ ತನ್ನ ಬೌಲಿಂಗ್ ಕರಾಮತ್ತನ್ನು ಪ್ರದರ್ಶಿಸಿದ್ದಾರೆ. ಈ ಮೂಲಕ ಈ ಬಾರಿಯ ಐಪಿಎಲ್‍ನಲ್ಲಿ ಭರವಸೆಯ ವೇಗಿಯಾಗಿ ಗುರುತಿಸಿಕೊಂಡಿದ್ದಾರೆ.

    ಕೆಕೆಆರ್ ಮತ್ತು ಎಸ್‍ಆರ್‍ಎಚ್ ನಡುವಿನ ಪಂದ್ಯಕ್ಕೂ ಮೊದಲು ಕ್ರೀಡಾ ಸಂದರ್ಶಕರು ಪ್ರಸಿದ್ಧ್ ಕೃಷ್ಣ ಅವರನ್ನು ಸಂದರ್ಶನ ಮಾಡಿದ್ದರು ಈ ವೇಳೆ ಪ್ರಸಿದ್ಧ್ ಕೃಷ್ಣ ಸಂದರ್ಶಕರು ಇಂಗ್ಲೀಷ್‍ನಲ್ಲಿ ಕೇಳಿದ ಪ್ರಶ್ನೆಗಳಿಗೆ ಕನ್ನಡದಲ್ಲಿ ಉತ್ತರಿಸಿದ್ದಾರೆ.

    ಮೊದಲು ಸಂದರ್ಶಕರು ನೀವು ಟೀಂ ಇಂಡಿಯಾದಲ್ಲಿ ನೀಡಿದ ಅತ್ಯುತ್ತಮ ಪ್ರದರ್ಶನದ ಬಳಿಕ ನಿಮ್ಮ ಬೌಲಿಂಗ್‍ನಲ್ಲಿ ಏನು ಬದಲಾವಣೆ ಮಾಡಿದ್ದೀರಿ ಎಂದು ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಪ್ರಸಿದ್ಧ್ ಕೃಷ್ಣ, ನನ್ನ ಪ್ರದರ್ಶನ ಹಾಗೇ ಇದೆ ಅಲ್ಲಿನ ಪ್ರದರ್ಶನ ತುಂಬಾ ಖುಷಿ ಕೊಟ್ಟಿದೆ. ಅದೇ ರೀತಿ ಇಲ್ಲಿಯು ಕೂಡ ತಂಡಕ್ಕಾಗಿ ಉತ್ತಮ ಪ್ರದರ್ಶನ ಕೊಡಬೇಕೆಂದು ಇದ್ದೇನೆ ಎಂದಿದ್ದಾರೆ.

    ನಂತರ ಇಂಗ್ಲೆಂಡ್ ಸರಣಿಯಲ್ಲಿ ಮಾರ್ಗನ್ ಇಂಗ್ಲೆಂಡ್ ತಂಡದ ನಾಯಕರಾಗಿದ್ದರು. ಆ ಪಂದ್ಯದಲ್ಲಿ ನೀವು ಉತ್ತಮ ಪ್ರದರ್ಶನ ತೋರಿದ್ದೀರಿ ಬಳಿಕ ಅಲ್ಲಿ ಮಾರ್ಗನ್ ಜೊತೆ ಮಾತುಕತೆ ಮಾಡಿದ್ದೀರ ಎಂದು ಪ್ರಶ್ನೆ ಎತ್ತಿದ್ದಾರೆ. ಇದಕ್ಕೆ ಪ್ರಸಿದ್ಧ್, ಆ ಸರಣಿಯಲ್ಲಿ ನಾವಿಬ್ಬರು ಪರಸ್ಪರ ಚೆನ್ನಾಗಿ ತಿಳಿದಿದ್ದರಿಂದ ಮಾತುಕತೆ ನಡೆಸುತ್ತಿದ್ದೇವು. ಇದೀಗ ಒಂದೇ ತಂಡದಲ್ಲಿ ಆಡುತ್ತಿದ್ದೇವೆ ಇಲ್ಲಿಯೂ ಕೂಡ ತುಂಬಾ ಮಾತುಕತೆಯಲ್ಲಿ ತೊಡಗಿದ್ದೇವೆ ಎಂದಿದ್ದಾರೆ.

    ಬಳಿಕ ಸಂದರ್ಶಕರು ಕಳೆದ ಬಾರಿಯ ಐಪಿಎಲ್ ಹೋಲಿಕೆ ಮಾಡಿದರೆ ಈ ಬಾರಿಯ ಐಪಿಎಲ್‍ನಲ್ಲಿ ಒಬ್ಬ ಬೌಲರ್ ಆಗಿ ಬೌಲಿಂಗ್ ಕೌಶಲ್ಯ, ಮಾನಸಿಕವಾಗಿ ಮತ್ತು ದೈಹಿಕವಾಗಿ ಯಾವರೀತಿ ಬದಲಾವಣೆ ಮಾಡಿಕೊಂಡಿದ್ದೀರಿ ಎಂದಾಗ, ಪ್ರಸಿದ್ಧ್ ಈ ಕುರಿತು ನನ್ನನ್ನು ನೋಡಿ ಮುಂದೆ ನೀವೇ ತಿಳಿಸಬೇಕೆಂದಿದ್ದಾರೆ.

    ಈ ಬಾರಿಯ ಐಪಿಎಲ್‍ನ ಕೊನೆಯ 5 ಪಂದ್ಯಗಳು ಕೆಕೆಆರ್ ತಂಡ ಬೆಂಗಳೂರಿನಲ್ಲಿ ಆಡಲಿದೆ ಅಲ್ಲಿ ಉತ್ತಮ ಪ್ರದರ್ಶನ ನೀಡಲು ಸಜ್ಜಾಗಿದ್ದೀರ ಎಂದು ಸಂದರ್ಶಕರು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಪ್ರಸಿದ್ಧ್ ನಾನು ಕಳೆದ 10 ವರ್ಷಗಳಿಂದ ಬೆಂಗಳೂರಿನಲ್ಲಿ ಆಡುತ್ತಿದ್ದೇನೆ ಹಾಗಾಗಿ ಇದು ನನಗೆ ತುಂಬಾ ಸಹಕಾರಿಯಾಗಲಿದೆ ಅಲ್ಲಿ ಉತ್ತಮ ಪ್ರದರ್ಶನ ತೋರಲು ಬಯಸುತ್ತೇನೆ ಎಂದಿದ್ದಾರೆ.

    ಪ್ರಸಿದ್ಧ್ ಕೃಷ್ಣ ಎಸ್‍ಆರ್‍ಎಚ್ ವಿರುದ್ಧದ ಪಂದ್ಯದಲ್ಲಿ ತನ್ನ ಮೊದಲ ಓವರ್‍ ನ ಮೂರನೇ ಎಸೆತದಲ್ಲೇ ಎದುರಾಳಿ ತಂಡದ ಸ್ಪೋಟಕ ಬ್ಯಾಟ್ಸ್‌ಮ್ಯಾನ್ ನಾಯಕ ಡೇವಿಡ್ ವಾರ್ನರ್ ಅವರ ವಿಕೆಟ್ ಬೇಟೆಯಾಡಿ ಕೆಕೆಆರ್‍ ಗೆ ಮೇಲುಗೈ ತಂದು ಕೊಟ್ಟಿದ್ದರು. ಈ ಪಂದ್ಯದಲ್ಲಿ 4 ಓವರ್ ಮಾಡಿದ ಪ್ರಸಿದ್ಧ್ 35ರನ್ ಬಿಟ್ಟುಕೊಟ್ಟು 2 ವಿಕೆಟ್ ಪಡೆದು ಮಿಂಚಿದ್ದರು.

  • 4 ವಿಕೆಟ್‌ ಕಿತ್ತು ಕರ್ನಾಟಕದ ಪ್ರಸಿದ್ಧ್‌ ಕೃಷ್ಣ ದಾಖಲೆ – ಭಾರತಕ್ಕೆ 66 ರನ್‌ಗಳ ಭರ್ಜರಿ ಜಯ

    4 ವಿಕೆಟ್‌ ಕಿತ್ತು ಕರ್ನಾಟಕದ ಪ್ರಸಿದ್ಧ್‌ ಕೃಷ್ಣ ದಾಖಲೆ – ಭಾರತಕ್ಕೆ 66 ರನ್‌ಗಳ ಭರ್ಜರಿ ಜಯ

    ಪುಣೆ: ಪ್ರಸಿದ್ದ್‌ ಕೃಷ್ಣ, ಶಾರ್ದೂಲ್‌ ಠಾಕೂರ್‌ ಅವರ ಮಾರಕ ಬೌಲಿಂಗ್‌ ದಾಳಿಯಿಂದ ಇಂಗ್ಲೆಂಡ್‌ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯವನ್ನು ಭಾರತ 66 ರನ್‌ಗಳಿಂದ ಗೆದ್ದುಕೊಂಡಿದೆ. ಈ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

    318 ರನ್‌ಗಳ ಕಠಿಣ ಗುರಿಯನ್ನು ಪಡೆದ ಇಂಗ್ಲೆಂಡ್‌ ಉತ್ತಮ ಸ್ಥಿತಿಯಲ್ಲಿತ್ತು. ಆದರೆ ಮಧ್ಯಮ ಕ್ರಮಾಂಕದಲ್ಲಿ ವಿಕೆಟ್‌ ಪತನಗೊಂಡ ಹಿನ್ನೆಲೆಯಲ್ಲಿ ಇಂಗ್ಲೆಂಡ್‌ 251 ರನ್‌ಗಳಿಗೆ ಆಲೌಟ್‌ ಆಯ್ತು.

    ಜಾನಿ ಬೈರ್‌ಸ್ಟೋವ್ ಹಾಗೂ ಜೇಸನ್ ರಾಯ್ ಮೊದಲ ವಿಕೆಟಿಗೆ 14.2 ಓವರ್‌ಗಳಲ್ಲಿ 135 ರನ್‌ ಜೊತೆಯಾಟವಾಡಿ ಉತ್ತಮ ಅಡಿಪಾಯ ಹಾಕಿದ್ದರು. ಆದರೆ ಶಾರ್ದೂಲ್‌ ಠಾಕೂರ್‌ ಮತ್ತು ಪ್ರಸಿದ್ಧ್‌ ಕೃಷ್ಣ ಅವರ ಮಾರಕ ಬೌಲಿಂಗ್‌ಗೆ ಇಂಗ್ಲೆಂಡಿನ ಮಧ್ಯಮ ಕ್ರಮಾಂಕ ಸಂಪೂರ್ಣ ಕುಸಿದ ಪರಿಣಾಮ ಭಾರತ ಸುಲಭವಾಗಿ ಪಂದ್ಯವನ್ನು ಗೆದ್ದುಕೊಂಡಿತು. ಇದನ್ನೂ ಓದಿ: ಮೊದಲ ಪಂದ್ಯದಲ್ಲೇ ವಿಶ್ವದಾಖಲೆ ನಿರ್ಮಿಸಿದ ಕೃನಾಲ್‌ ಪಾಂಡ್ಯ

    ಪ್ರಸಿದ್ಧ್‌ ಕೃಷ್ಣ 8.1 ಓವರ್‌ ಎಸೆದು 1 ಮೇಡನ್‌ 54 ರನ್‌ ನೀಡಿ 4 ವಿಕೆಟ್‌ ಪಡೆದರೆ ಶಾರ್ದೂಲ್‌ ಠಾಕೂರ್‌ 6 ಓವರ್‌ ಎಸೆದು 37 ರನ್‌ ನೀಡಿ 3 ವಿಕೆಟ್‌ ಕಿತ್ತರು. ಭುವನೇಶ್ವರ್‌ ಕುಮಾರ್‌ 2 ವಿಕೆಟ್‌, ಕೃನಾಲ್‌ ಪಾಂಡ್ಯ 1 ವಿಕೆಟ್‌ ಪಡೆದರು.

    ಜೇಸನ್‌ ರಾಯ್‌ 46 ರನ್‌(35 ಎಸೆತ, 7 ಬೌಂಡರಿ, 1 ಸಿಕ್ಸರ್‌), ಜಾನಿ ಬೈರ್‌ಸ್ಟೋವ್‌ 94 ರನ್‌(66 ಎಸೆತ, 6 ಬೌಂಡರಿ, 7 ಸಿಕ್ಸರ್‌) ನಾಯಕ ಇಯಾನ್‌ ಮಾರ್ಗನ್‌ 22 ರನ್‌, ಮೋಯಿನ್‌ ಆಲಿ 30 ರನ್‌ ಗಳಿಸಿ ಔಟಾದರು. 98 ರನ್‌ (106 ಎಸೆತ, 11 ಬೌಂಡರಿ, 2 ಸಿಕ್ಸರ್‌) ಹೊಡೆದು ಔಟಾಗಿದ್ದ ಶಿಖರ್‌ ಧವನ್‌ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

    ಪ್ರಸಿದ್ಧ್‌ ಕೃಷ್ಣ ದಾಖಲೆ: ಇಲ್ಲಿಯವರೆಗೆ ಭಾರತದ ತಂಡದಲ್ಲಿ ಪದಾರ್ಪಣೆಗೈದ ಪಂದ್ಯದಲ್ಲಿ ಯಾರೂ 4 ಮತ್ತು ಅದಕ್ಕಿಂತ ಹೆಚ್ಚಿನ ವಿಕೆಟ್‌ ಪಡೆದಿರಲಿಲ್ಲ. ಆದರೆ ಇಂದಿನ ಪಂದ್ಯದಲ್ಲಿ 4 ವಿಕೆಟ್‌ ಕೀಳುವ ಮೂಲಕ ಪ್ರಸಿದ್ಧ್‌ ಕೃಷ್ಣ ಭಾರತದ ಪರ ದಾಖಲೆ ನಿರ್ಮಿಸಿದ್ದಾರೆ.

  • `ಈ ಸಲ ಕಪ್ ನಮ್ದೆ’ – ನಾವು ಕನ್ನಡಿಗರೇ ನಮ್ಮನ್ನು ಬೆಂಬಲಿಸಿ : ಉತ್ತಪ್ಪ, ಕೃಷ್ಣ

    `ಈ ಸಲ ಕಪ್ ನಮ್ದೆ’ – ನಾವು ಕನ್ನಡಿಗರೇ ನಮ್ಮನ್ನು ಬೆಂಬಲಿಸಿ : ಉತ್ತಪ್ಪ, ಕೃಷ್ಣ

    ಕೋಲ್ಕತ್ತಾ: ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡ ಪ್ಲೇ ಆಫ್‍ಗೆ ಅರ್ಹತೆ ಪಡೆದಿಲ್ಲ. ಹೀಗಾಗಿ ನಾವು ಕನ್ನಡಿಗರೇ ನಮ್ಮನ್ನು ಬೆಂಬಲಿಸಿ ಎಂದು ಕನ್ನಡಿಗರಾದ ರಾಬಿನ್ ಉತ್ತಪ್ಪ, ಪ್ರಸಿದ್ಧ ಕೃಷ್ಣ ಕನ್ನಡಲ್ಲೇ ಮನವಿ ಮಾಡಿದ್ದಾರೆ.

    ಚೆನ್ನೈ ವಿರುದ್ಧ ಪಂದ್ಯದ ಬಳಿಕ ಮಾತನಾಡಿರುವ ಕೋಲ್ಕತ್ತಾ ತಂಡ ಪರ ಆಡುತ್ತಿರುವ ರಾಬಿನ್ ಉತ್ತಪ್ಪ ಮತ್ತು ಕೃಷ್ಣ, ಆರ್ ಸಿಬಿ ಈ ಟೂರ್ನಿಯಲ್ಲಿ ಇಲ್ಲ. ಅದ್ದರಿಂದ ತಮಗೇ ಬೆಂಬಲ ನೀಡಿ ಎಂದು ಕೇಳಿದ್ದಾರೆ.

    ಇದೇ ವೇಳೆ ಈ ಸಲ ಕಪ್ ನಮ್ದೆ ಎಂದು ಹೇಳಿದ ಇಬ್ಬರು ಆಟಗಾರರು, ಕೆಕೆಆರ್ ತಂಡದಲ್ಲಿ ಹಲವರು ಕನ್ನಡಿಗರು ಆಡುತ್ತಿದ್ದಾರೆ. ಈ ಬಾರಿ ಕಪ್ ಗೆಲ್ಲುವ ವಿಶ್ವಾಸವಿದೆ. ಅದ್ದರಿಂದ ಬೆಂಬಲ ನೀಡಿ ಎಂದು ಕನ್ನಡದಲ್ಲೇ ಮನವಿ ಮಾಡಿದರು.

    ಶನಿವಾರ ಹೈದರಾಬಾದ್ ವಿರುದ್ಧ ನಡೆದ ಪಂದ್ಯದಲ್ಲಿ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ ಕೃಷ್ಣ, ಕೊನೆಯ ಓವರ್ ನಲ್ಲಿ ರನೌಟ್ ನೊಂದಿಗೆ ಒಟ್ಟು 4 ವಿಕೆಟ್ ಪಡೆದು ಮಿಂಚಿದ್ದರು. ಈ ವೇಳೆ ಮಾತನಾಡಿದ ಕೃಷ್ಣ ಇನ್ನಿಂಗ್ಸ್ ಮೊದಲ ಓವರ್ ನಲ್ಲಿ 11 ರನ್ ನೀಡಿದ ವೇಳೆ ಹೆಚ್ಚಿನ ಒತ್ತಡವಾಗಿತ್ತು, ಬಳಿಕ ನನ್ನ ಮೇಲಿನ ವಿಶ್ವಾಸವನ್ನು ದೃಢಮಾಡಿ ಬೌಲ್ ಮಾಡಿದೆ ಎಂದು ಹೇಳಿದ್ದರು. ಕೆಕೆಆರ್ ಪ್ಲೇ ಆಫ್ ಪ್ರವೇಶಿಸಲು ಹೈದರಾಬಾದ್ ವಿರುದ್ಧ ನಡೆದ ಪಂದ್ಯದಲ್ಲಿ ಉತ್ತಪ್ಪ ಹಾಗೂ ಕೃಷ್ಣ ಪ್ರಮುಖ ಪಾತ್ರವಹಿಸಿದ್ದರು. ಈ ಪಂದ್ಯದಲ್ಲಿ ಉತ್ತಪ್ಪ 34 ಎಸೆತಗಳಲ್ಲಿ 45 ರನ್ ಸಿಡಿಸಿದ್ದರು.

    ಈ ಬಾರಿ ಟೂರ್ನಿಯಲ್ಲಿ ಕೆಕೆಆರ್ ತಂಡ ಮಾತ್ರವಲ್ಲದೆ ರಾಜಸ್ಥಾನ ಪರ ಕನ್ನಡಿಗರಾದ ಶ್ರೇಯಸ್ ಗೋಪಾಲ್, ಕೆ ಗೌತಮ್ ಆಡಿದ್ದರೆ, ಕೆಎಲ್ ರಾಹುಲ್, ಕರುಣ್, ಮಾಯಾಂಕ್ ಅಗರವಾಲ್ ಪಂಜಾಬ್ ತಂಡವನ್ನು ಪ್ರತಿನಿಧಿಸಿದ್ದರು. ಕೆಕೆಆರ್ ನಲ್ಲಿ ವಿನಯ್ ಕುಮಾರ್ ಆಡುತ್ತಿದ್ದಾರೆ.

    https://www.youtube.com/watch?v=oY-HilLrKn4