Tag: Prashanth Sambaragi

  • ಸಂಬರ್ಗಿಗೆ ಬೌ ಬೌ ಸ್ಟಾರ್ ಬಿರುದು ಕೊಟ್ಟ ಅರುಣ್ ಸಾಗರ್

    ಸಂಬರ್ಗಿಗೆ ಬೌ ಬೌ ಸ್ಟಾರ್ ಬಿರುದು ಕೊಟ್ಟ ಅರುಣ್ ಸಾಗರ್

    ಬಿಗ್ ಬಾಸ್(Bigg Boss Kannada) ಮನೆ ಇದೀಗ 6ನೇ ವಾರಕ್ಕೆ ಕಾಲಿಟ್ಟಿದೆ. ಸಾಕಷ್ಟು ವಿಷ್ಯವಾಗಿ ದೊಡ್ಮನೆ ಹೈಲೈಟ್ ಆಗುತ್ತಿದೆ. ಇದೀಗ ಸಂಬರ್ಗಿಗೆ ಅರುಣ್ ಸಾಗರ್ ಭಿನ್ನವಾಗಿರುವ ಸ್ಟಾರ್ ಪಟ್ಟವನ್ನ ಕೊಟ್ಟಿದ್ದಾರೆ. ಪ್ರಶಾಂತ್‌ಗೆ ಬೌ ಬೌ ಸ್ಟಾರ್ ಎಂದು ಕರೆಯುವ ಮೂಲಕ ಅರುಣ್ ಸಾಗರ್(Arun Sagar) ಗಮನ ಸೆಳೆದಿದ್ದಾರೆ.

    ದೊಡ್ಮನೆಯ ಆಟ ಇದೀಗ ಮೊದಲ ದಿನ ಇದ್ದಂತೆ ಇಲ್ಲ. ಶಾಂತವಾಗಿದ್ದ ಮನೆ ಈಗ ರಣರಂಗವಾಗಿದೆ. ಇನ್ನೂ ಕಿಚ್ಚನ ವೀಕೆಂಡ್ ಪಂಚಾಯಿತಿಯಲ್ಲಿ ಸಿನಿಮಾ ಸ್ಟಾರ್‌ಗಳಂತೆ ಮನೆಯ ಸ್ಪರ್ಧಿಗಳಿಗೆ ಯಾರಿಗೆ ಯಾವ ಸ್ಟಾರ್ ಪಟ್ಟ ಕೊಡುತ್ತೀರಾ ಎಂದು ಸುದೀಪ್ ಕೇಳಿದ್ದಾರೆ. ಆಗ ಒಬ್ಬಬ್ಬರು ಒಂದೊಂದು ರೀತಿಯ ಭಿನ್ನ ಉತ್ತರವನ್ನ ಕೊಟ್ಟಿದ್ದರೆ, ಅರುಣ್ ಸಾಗರ್ ಅವರ ಉತ್ತರ ಮನೆಮಂದಿಯ ನಗುವಿಗೆ ಕಾರಣವಾಗಿದೆ. ಇದನ್ನೂ ಓದಿ:ಖಾಸಗಿ ವಿಮಾನ ಖರೀದಿಸಿದ್ರಾ ರಿಷಬ್ ಶೆಟ್ಟಿ? ‘ಬಡವ್ರ ಮಕ್ಕಳು ಬೆಳಿಬೇಕು’ ಟ್ರೋಲ್

    ಪ್ರಶಾಂತ್ ಸಂಬರ್ಗಿ(Prashanth Sambargi) ಅವರಿಗೆ ನಾನು ಬೌ ಬೌ ಸ್ಟಾರ್ ಪಟ್ಟ ಕೊಡುತ್ತೀನಿ ಎಂದು ಅರುಣ್ ಸಾಗರ್ ಹೇಳಿದ್ದಾರೆ. ಅವರು ಯಾವಾಗಲೂ ನಾನ್ ಸ್ಟಾಪ್ ಆಗಿ ಮಾತನಾಡುತ್ತಾರೆ, ಜಗಳ ಆಡುತ್ತಾರೆ ಅವರಿಗೆ ಬೌ ಬೌ ಸ್ಟಾರ್ ಎಂಬ ಬಿರುದು ಕೊಡುತ್ತೀನಿ ಎಂದಿದ್ದಾರೆ. ಅರುಣ್ ಮಾತಿಗೆ ಸುದೀಪ್ ಸೇರಿದಂತೆ ಮನೆಮಂದಿಯ ಜೊತೆ ಸಂಬರ್ಗಿ ಕೂಡ ಇದನ್ನ ಪಾಸಿಟಿವ್ ಆಗಿ ತೆಗೆದುಕೊಂಡು ನಕ್ಕಿದ್ದಾರೆ.

    ಇನ್ನೂ ರೂಪೇಶ್ ರಾಜಣ್ಣ(Roopesh Rajanna) ಅವರಿಗೆ ರೂಪೇಶ್ ಶೆಟ್ಟಿ, ಕಂಟಿನಿಟಿ ಸ್ಟಾರ್ ಬಿರುದು ಕೊಟ್ಟಿದ್ದಾರೆ. ಅವರು ಯಾವಾಗಲೂ ಹೇಳಿದ್ದನ್ನೇ ಹೇಳುತ್ತಾರೆ ಎಂದು ಮಾತನಾಡಿದ್ದಾರೆ. ಇದಕ್ಕೆ ಮನೆಮಂದಿ ಕೂಡ ನಿಜ ಎಂದು ಬಿದ್ದು ಬಿದ್ದು ನಕ್ಕಿದ್ದಾರೆ. ಅದರಲ್ಲೂ ಬೌ ಬೌ ಸ್ಟಾರ್ ಬಿರುದು ಎಲ್ಲರನ್ನೂ ನಗಿಸಿದೆ.

    Live Tv
    [brid partner=56869869 player=32851 video=960834 autoplay=true]

  • ಕಳಪೆ ಆಟದಿಂದ ದೀಪಿಕಾಗೆ ಮುಖ ತೋರಿಸಲಾಗದೇ ಟಾಯ್ಲೆಟ್ ಒಳಗೆ ಸೇರಿಕೊಂಡ ಸಂಬರ್ಗಿ

    ಕಳಪೆ ಆಟದಿಂದ ದೀಪಿಕಾಗೆ ಮುಖ ತೋರಿಸಲಾಗದೇ ಟಾಯ್ಲೆಟ್ ಒಳಗೆ ಸೇರಿಕೊಂಡ ಸಂಬರ್ಗಿ

    ಬಿಗ್ ಬಾಸ್ (Bigg Boss) ಮನೆ ಇದೀಗ ರಣರಂಗವಾಗಿ ಮಾರ್ಪಟ್ಟಿದೆ. ಎರಡನೇ ವಾರಕ್ಕೆ ಕಾಲಿಟ್ಟಿರುವ ದೊಡ್ಮನೆಯಲ್ಲಿ ಪ್ರಶಾಂತ್ ಸಂಬರ್ಗಿ ಕಳಪೆ ಪ್ರದರ್ಶನ ನೀಡಿ, ದೀಪಿಕಾ ದಾಸ್‌ಗೆ(Deepika Das) ಮುಖ ತೋರಿಸಲಾಗದೇ ಟಾಯ್ಲೆಟ್ ಒಳಗೆ ಸೇರಿಕೊಂಡಿದ್ದಾರೆ. ಮನೆ ಮಂದಿಯನ್ನ ಬುಗುರಿ ಆಡಿಸಿದಂತೆ ಆಡುತ್ತಿದ್ದ ಸಂಬರ್ಗಿ ಅವರು ಇದೀಗ ತನ್ನ ತಂಡವನ್ನ ಗೆಲ್ಲಿಸಲಾಗದೆ ಸೋತು ಮಕಾಡೆ ಮಲಗಿದ್ದಾರೆ.

    ಕಳೆದ ಸೀಸನ್‌ನಿಂದ ಮೋಡಿ ಮಾಡಿದ್ದ ಪ್ರಶಾಂತ್ ಸಂಬರ್ಗಿ(Prashanth Sambargi) ಇದೀಗ ಬಿಗ್ ಬಾಸ್ ಸೀಸನ್ 9ಕ್ಕೂ ಕಾಲಿಟ್ಟಿದ್ದಾರೆ. ಒಂದಲ್ಲಾ ಒಂದು ವಿಚಾರವಾಗಿ ಮನೆಯ ಕಲಹಕ್ಕೆ ಕಾರಣವಾಗುವ ಸಂಬರ್ಗಿ ಇದೀಗ ಅನುಪಮಾ ಮುಂದೆ ಸೋತು ದೀಪಿಕಾ ಮುಖ ತೋರಿಸಲಾಗದೇ ಟಾಯ್ಲೆಟ್ ಒಳಗೆ ಸೇರಿಕೊಂಡಿದ್ದಾರೆ.

    ಎರಡನೇ ವಾರದಲ್ಲಿ ದೀಪಿಕಾ ದಾಸ್ (Deepika Das) ಮತ್ತು ಅನುಪಮಾ ಗೌಡ (Anupama Gowda) ಅವರನ್ನ ಕ್ಯಾಪ್ಟನ್ ಮಾಡಿ ಎರಡು ತಂಡಗಳನ್ನಾಗಿ ವಿಂಗಡಿಸಿತ್ತು. ಮೊದಲ ಟಾಸ್ಕ್‌ನಲ್ಲಿ ಬುಟ್ಟಿಯ ಒಳಗೆ ಹಾಕುವ ಟಾಸ್ಕ್‌ನಲ್ಲಿ ಮಯೂರಿ ಮುಂದೆ ಸಂಬರ್ಗಿ ಸೋತಿದ್ದರು. ಆ ಬಳಿಕ ದಿನದ ಮತ್ತೊಂದು ಟಾಸ್ಕ್ ಪ್ರಾರಂಭವಾಯ್ತು, ಎರಡು ಕಾರುಗಳನ್ನು ನಿಲ್ಲಿಸಿ ಅದರ ಪ್ರತಿಯೊಂದು ಟೈರ್ ಅನ್ನು ಜಾಕ್ ಸಹಾಯದಿಂದ ಬಿಚ್ಚಿ ಹೊಸ ಟೈರ್ ಹಾಕುವ ಟಾಸ್ಕ್ ಅದಾಗಿತ್ತು. ಇದನ್ನೂ ಓದಿ:ಮಗಳ ಫೋಟೋ ಜೊತೆ ಹೆಸರು ರಿವೀಲ್ ಮಾಡಿದ `ಕಾಂತಾರಾ’ ಹೀರೋ ರಿಷಬ್ ಶೆಟ್ಟಿ

    ಟೈಯರ್ ಅನ್ನು ಬದಲಾಯಿಸುವ ಅಭ್ಯಾಸ ನನಗೆ ಇದೆಯೆಂದು 200% ಈ ಟಾಸ್ಕ್ ನಾನು ಆಡಬಲ್ಲೆ ಎಂದು ದೀಪಿಕಾ ತಂಡದಿಂದ ಪ್ರಶಾಂತ್ ಸಂಬರ್ಗಿ ಮೊದಲು ಹೋದರು. ಅನುಪಮಾ ತಂಡದಿಂದ ರಾಕೇಶ್ ಮೊದಲು ಹೋದರು. ಆದರೆ ಪ್ರಶಾಂತ್ ಸಂಬರ್ಗಿಗೆ ಒಂದೇ ಒಂದು ಟೈರ್ ಅನ್ನು ಫಿಟ್ ಮಾಡಲು ಸಾಧ್ಯವಾಗಲಿಲ್ಲ. ಆದರೆ ಅನುಪಮಾ ತಂಡದಿಂದ ರಾಕೇಶ್, ದರ್ಶ್ ಚಂದಪ್ಪ, ಆರ್ಯವರ್ಧನ್ ಗುರೂಜಿ ಹಾಗೂ ಅಮೂಲ್ಯ ಅವರುಗಳು ಟೈರ್ ಅನ್ನು ಆರಾಮವಾಗಿ ಬದಲಾಯಿಸಿ ಟಾಸ್ಕ್ ಅನ್ನು ಸುಲಭವಾಗಿ ಗೆದ್ದುಬಿಟ್ಟರು.

    ಆದರೆ ಒಂದೂ ಟೈಯರ್ ಬದಲಾಯಿಸಲಾಗದೆ ಸೋತ ಪ್ರಶಾಂತ್, ಬೇಸರದಿಂದ ಟಾಯ್ಲೆಟ್ ಒಳಗೆ ಸೇರಿಕೊಂಡು ಬಿಟ್ಟಿದ್ದರು. ಎಷ್ಟು ಹೊತ್ತಾದರೂ ಬರಲಿಲ್ಲ, ಕೊನೆಗೆ ದೀಪಿಕಾ, ರೂಪೇಶ್ ಇನ್ನಿತರರು ಹೋಗಿ ಕರೆದ ಬಳಿಕ ಅವರು ಹೊರಗೆ ಬಂದರು. ಹೊರಗೆ ಬಂದರೂ ಬಹಳ ಬೇಸರದಲ್ಲಿಯೇ ಇದ್ದರು. ಆದರೆ ಅವರ ತಂಡದ ಸದಸ್ಯರಾದ ರೂಪೇಶ್ ರಾಜಣ್ಣ ಹಾಗೂ ನವಾಜ್ ಅವರುಗಳು ಪ್ರಶಾಂತ್ ಬಗ್ಗೆ ತೀವ್ರ ಬೇಸರದಲ್ಲಿದ್ದರು. ಅವರಿಗೆ ಟೈರ್ ಬದಲಾಯಿಸುವುದು ಬರಲಿಲ್ಲವೆಂದ ಮೇಲೆ ಮೊದಲು ಹೋಗಿದ್ದು ಏಕೆ ಎಂದು ರೂಪೇಶ್ ರಾಜಣ್ಣ ಪ್ರಶ್ನೆ ಮಾಡಿದರು. ಇನ್ನು ನವಾಜ್, ತನಗೆ ಆಡಲು ಅವಕಾಶ ಸಿಗಲಿಲ್ಲವೆಂದು ಬೇಸರದಲ್ಲಿದ್ದರು. ನಾನು ನಾಮಿನೇಟ್ ಆಗಿದ್ದೇನೆ, ನನಗೆ ಆಡಲು ಅವಕಾಶ ಬೇಕು ಎಂದು ಕ್ಯಾಪ್ಟನ್ ದೀಪಿಕಾ ಬಳಿ ಅಳಲು ತೋಡಿಕೊಂಡಿದ್ದರು. ಸಂಬರ್ಗಿ ಕಳಪೆ ಪ್ರದರ್ಶನಕ್ಕೆ ದೀಪಿಕಾ ದಾಸ್ ತಂಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಬಿಗ್ ಬಾಸ್ ಟಿವಿ ಸೀಸನ್‌ನಲ್ಲಿ ಮತ್ತೆ ಪ್ರಶಾಂತ್‌ ಸಂಬರಗಿ, ಅನುಪಮಾ ಗೌಡ, ದೀಪಿಕಾ ದಾಸ್‌

    ಬಿಗ್ ಬಾಸ್ ಟಿವಿ ಸೀಸನ್‌ನಲ್ಲಿ ಮತ್ತೆ ಪ್ರಶಾಂತ್‌ ಸಂಬರಗಿ, ಅನುಪಮಾ ಗೌಡ, ದೀಪಿಕಾ ದಾಸ್‌

    ಕಿರುತೆರೆಯ ಬಿಗ್ ಶೋ ಬಿಗ್ ಬಾಸ್‌ಗೆ(Bigg Boss) ಈಗಾಗಲೇ ಕೌಂಟ್ ಡೌನ್ ಶುರುವಾಗಿದೆ. ಬಿಗ್ ಬಾಸ್ ಓಟಿಟಿ 38 ದಿನಗಳನ್ನ ಪೂರೈಸಿದ್ದು, ಇನ್ನೂ ಕೆಲವೇ ದಿನಗಳಲ್ಲಿ ಈ ಶೋ ಮುಗಿಯಲಿದೆ. ಈ ಬೆನ್ನಲ್ಲೇ ಟಿವಿ ಶೋ ಬಿಗ್ ಬಾಸ್ ಶುರುವಾಗಲು ದಿನಗಣನೆ ಶುರುವಾಗಿದೆ. ಈ ಸೀಸನ್‌ನಲ್ಲಿ ಯಾರೆಲ್ಲಾ ಸ್ಪರ್ಧಿಗಳಿರುತ್ತಾರೆ ಎಂಬ ಕುತೂಹಲ ಮನೆ ಮಾಡಿದೆ. ಹೊಸ ಸ್ಪರ್ಧಿಗಳ ಜೊತೆ ಮಾಜಿ ಸ್ಪರ್ಧಿಗಳು ಇರಲಿದ್ದಾರೆ ಎಂಬ ಮಾಹಿತಿ ವಾಹಿನಿ ಕಡೆಯಿಂದಲೇ ಹೊರಬಿದ್ದಿದೆ.

    ಓಟಿಟಿಯಲ್ಲಿ ದೊಡ್ಮನೆ ಆಟ ಮುಗಿಯಲು ಕೆಲವೇ ದಿನಗಳು ಬಾಕಿಯಿದೆ. ಒಂದೇ ವಾರದ ಗ್ಯಾಪ್‌ನಲ್ಲಿ ಬಿಗ್ ಬಾಸ್ 9ನೇ ಸೀಸನ್ ಬರಲು ಡೇಟ್ ಫಿಕ್ಸ್ ಆಗಿದೆ. ಈ ಹೊಸ ಸೀಸನ್ ಹೇಗಿರಲಿದೆ ಎಂಬುದಕ್ಕೆ ವಾಹಿನಿ ಕೂಡ ಹಿಂಟ್ ಬಿಟ್ಟು ಕೊಟ್ಟಿದೆ. ಹೊಸ ಸ್ಪರ್ಧಿಗಳ ಜೊತೆ ಮಾಜಿ ಸ್ಪರ್ಧಿಗಳು ಇರಲಿದ್ದಾರೆ ಎಂಬುದನ್ನ ತಿಳಿಸಲು ಈ ಕುರಿತ ಪ್ರೋಮೋ ಕೂಡ ಔಟ್ ಆಗಿದೆ. ಇದರಲ್ಲಿ ಪ್ರಶಾಂತ್ ಸಂಬರಗಿ, ವೈಷ್ಣವಿ, ದೀಪಿಕಾ ದಾಸ್, ಅನುಪಮಾ ಗೌಡ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ:ನಾನು ‘ಹಾಟ್ ಹಾಟ್’ ಆಗಿ ಕಾಣಿಸಿಕೊಂಡರೆ ಫ್ಯಾನ್ಸ್ ಒಪ್ಪಲ್ಲ ಅಂದ್ಬಿಟ್ರು ರಚಿತಾ ರಾಮ್

    ಸುದೀಪ್ (Sudeep) ನಿರೂಪಣೆಯ ಬಿಗ್ ಬಾಸ್ ಹೊಸ ಸೀಸನ್ ಪ್ರೋಮೋ ಹಂಚಿಕೊಳ್ಳಲಾಗಿದೆ. ಮಾಜಿ ಸ್ಪರ್ಧಿಗಳಾದ ದೀಪಿಕಾ ದಾಸ್, ಪ್ರಶಾಂತ್ ಸಂಬರಗಿ, ಅನುಪಮಾ ಗೌಡ, ವೈಷ್ಣವಿ ಅವರು ಕದ್ದು ಮುಚ್ಚಿ ತಮ್ಮ ಲಗೇಜ್ ಪ್ಯಾಕ್ ಮಾಡಿಕೊಂಡು ಬಿಗ್ ಬಾಸ್‌ಗೆ ಮನೆಗೆ ಓಡೋಡಿ ಬರುತ್ತಿರುವುದನ್ನು ಇದರಲ್ಲಿ ತೋರಿಸಲಾಗಿದೆ. ಇಷ್ಟದ ಹಳೇ ಸ್ಪರ್ಧಿಗಳನ್ನು ಮತ್ತೆ ದೊಡ್ಮನೆಯಲ್ಲಿ ನೋಡಲು ವೀಕ್ಷಕರು ಕಾದಿದ್ದಾರೆ. ಇನ್ನೂ ಯಾರೆಲ್ಲ ಈ ಬಾರಿ ಚಾನ್ಸ್ ಪಡೆದುಕೊಳ್ಳುತ್ತಾರೆ ಎಂಬುದನ್ನು ತಿಳಿಯುವ ಕುತೂಹಲ ನಿರ್ಮಾಣ ಆಗಿದೆ.

    ಇನ್ನು ಸೆ.24ರ ಸಂಜೆ ಬಿಗ್ ಬಾಸ್ ಸೀಸನ್ 9, ಸಂಜೆ 6ಕ್ಕೆ ಗ್ರ್ಯಾಂಡ್ ಲಾಂಚ್ ಆಗಲಿದೆ. ಪ್ರತಿದಿನ ರಾತ್ರಿ 9.30ಕ್ಕೆ ಸಂಚಿಕೆ ಪ್ರಸಾರವಾಗಲಿದೆ. ಸುದೀಪ್ ನಿರೂಪಣೆಯ ಈ ಶೋ ನೋಡಲು ಫ್ಯಾನ್ಸ್ ಕಾತರದಿಂದ ಕಾಯುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮಸಿ ಬಳಿದು ನನ್ನನ್ನು ದೂರವಿಡಲು ಸಾಧ್ಯವಿಲ್ಲ, ನಾನೂ ಯಾವತ್ತು ಹಿಂದೂಪರ ಹೋರಾಟಗಾರ: ಕಾಳಿ ಸ್ವಾಮಿ

    ಮಸಿ ಬಳಿದು ನನ್ನನ್ನು ದೂರವಿಡಲು ಸಾಧ್ಯವಿಲ್ಲ, ನಾನೂ ಯಾವತ್ತು ಹಿಂದೂಪರ ಹೋರಾಟಗಾರ: ಕಾಳಿ ಸ್ವಾಮಿ

    ಬೆಂಗಳೂರು: ಮಸಿ ಬಳಿದು ನನ್ನನ್ನು ದೂರವಿಡಲು ಆಗಲ್ಲ. ನಾನು ಯಾವಾಗಲೂ ಹಿಂದೂ ಪರ ಹೋರಾಟ ಮಾಡುತ್ತಲೇ ಇರುತ್ತೇನೆ ಎಂದು ಕಾಳಿ ಸ್ವಾಮಿ ಗುಡುಗಿದ್ದಾರೆ.

    ಮಲ್ಲೇಶ್ವರಂ ಗಂಗಮ್ಮ ದೇವಾಲಯದ ಹೊರಗೆ ಮಸಿ ಬಳಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡಿದ್ದಾರೆ. ಸರ್ವಜನಾಂಗದ ಶಾಂತಿಯ ತೋಟದಲ್ಲಿ ಕಲ್ಲು, ಮುಳ್ಳು ಇದೆ ಎಂದಿದ್ದೆ. ಕುವೆಂಪು ಅವರನ್ನು ಅನುಸರಿಸುವವರನ್ನು ಗುಂಡಿಟ್ಟು ಕೊಲ್ಲಿ ಎಂದಿಲ್ಲ. ಶಿವರಾಮೇಗೌಡ್ರು ಯಾಕೆ ನನ್ನ ಮೇಲೆ ಹಗೆ ಸಾಧಿಸ್ತಿದ್ದಾರೆ? ಕುವೆಂಪುರ ವಿರುದ್ಧ ನಾನು ಮಾತಾಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ಪೂಜೆ ಮುಗಿಸಿ ಬರುತ್ತಿದ್ದ ಕಾಳಿ ಸ್ವಾಮಿ ಮುಖಕ್ಕೆ ಮಸಿ

    ನನ್ನ ಮೇಲೆ ಆರೋಪ ಮಾಡಿದವರಿಗೆ ನಾನು ಚಾಲೇಂಜ್ ಮಾಡ್ತೀನಿ. ಕುವೆಂಪು ಅವರ ರಾಮಾಯಣ ದರ್ಶನಂ ಬಗ್ಗೆ ಬನ್ನಿ ಚರ್ಚೆ ಮಾಡೋಣ. ನಾನು ಮಸಿ ಬಳಿದ ಪ್ರಕರಣದಿಂದ ಹಿಂದೆ ಸರಿಯಲ್ಲ. ನನಗೆ ಪ್ರತಿದಿನ ಕೊಲೆ ಬೆದರಿಕೆ ಕರೆಗಳು ಬರ್ತಿವೆ. ಆದ್ದರಿಂದ ನಾನು ಇಂದು ಬಂದು ಕಂಪ್ಲೇಂಟ್ ನೀಡಿದ್ದೇನೆ ಎಂದಿದ್ದಾರೆ.

    ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಬಂದ ಕಾಳಿ ಸ್ವಾಮಿಗೆ ಪ್ರಶಾಂತ್ ಸಂಬರಗಿ, ಪುನೀತ್ ಕೆರೆಹಳ್ಳಿ ಸಾಥ್ ನೀಡಿದರು. ಇದನ್ನೂ ಓದಿ: ಮಸಿ ಬಳಿದವರ ವಿರುದ್ಧ ಕಾನೂನು ಹೋರಾಟ ಮಾಡುತ್ತೇನೆ: ಕಾಳಿಸ್ವಾಮಿ

    ಏನಿದು ಘಟನೆ?
    ಮಲ್ಲೇಶ್ವರಂ ಗಂಗಮ್ಮ ದೇವಾಲಯದಲ್ಲಿ ಪೂಜೆ ಮುಗಿಸಿ ಹೊರಬರುತ್ತಿದ್ದ ಕಾಳಿ ಸ್ವಾಮಿಗೆ ಗುಂಪೊಂದು ಏಕಾಏಕಿ ಮಸಿ ಬಳಿದ ಘಟನೆ ಕೆಲದಿನಗಳ ಹಿಂದೆ ನಡೆದಿತ್ತು. ಕಾಳಿಕಾ ಸೇನೆಯ ವತಿಯಿಂದ ಮಲ್ಲೇಶ್ವರಂನ ಗಂಗಮ್ಮ ದೇವಾಲಯದಲ್ಲಿ ವಿಶೇಷ ಪೂಜೆ ಆಯೋಜಿಸಲಾಗಿತ್ತು. ಪೂಜೆ ಮುಗಿಸಿ ಕಾಳಿ ಸ್ವಾಮಿ ಹೊರಬರುತ್ತಿದ್ದರು. ಈ ವೇಳೆ ಅವರಿಗೆ ಎದುರಾದ ಗುಂಪೊಂದು ನೀವು ಕುವೆಂಪು ಅವರನ್ನು ಮತ್ತು ಕನ್ನಡಪಡೆಗಳನ್ನು ನಿಂದಿಸಿದ್ದೀರಾ ಎಂದು ಜಗಳವಾಡಿ ಏಕಾಏಕಿ ಮಸಿ ಬಳಿದಿತ್ತು.

  • ಹಲಾಲ್ ಮಾಡಿದ್ದ ಹಣ ಭಯೋತ್ಪಾದನೆ ಮಾಡೋರಿಗೆ ಹೋಗುತ್ತೆ: ಪ್ರಶಾಂತ್ ಸಂಬರ್ಗಿ

    ಹಲಾಲ್ ಮಾಡಿದ್ದ ಹಣ ಭಯೋತ್ಪಾದನೆ ಮಾಡೋರಿಗೆ ಹೋಗುತ್ತೆ: ಪ್ರಶಾಂತ್ ಸಂಬರ್ಗಿ

    ಬೆಂಗಳೂರು: ಹಲಾಲ್ ಮಾಡಿದ್ದ ಹಣ ಭಯೋತ್ಪಾದನೆ ಮಾಡುವವರಿಗೆ ಹೋಗುತ್ತದೆ ಎಂದು ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರ್ಗಿ ತಿಳಿಸಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಸ್ಲಿಂ ಭಯೋತ್ಪಾದಕರ ಚಟುವಟಿಕೆಗೆ ಈ ಹಲಾಲ್ ಹಣ ಹೋಗುತ್ತದೆ. ಹಲಾಲ್ ನಮ್ಮ ಆಹಾರವಲ್ಲ. ಜೊತೆಗೆ ಹಲಾಲ್ ನಡೆಸಲು ಸರ್ಕಾರಿ ಸರ್ಟಿಫಿಕೇಟ್ ಇಲ್ಲ ಎಂದು ಕಿಡಿಕಾರಿದರು.

    ಹಲಾಲ್ ಎನ್ನುವುದು ದೇಶಕ್ಕೆ ಮಾರಕವಾಗಿದೆ. ಇದು ಮುಸ್ಲಿಂ ಸಂಸ್ಕೃತಿಯಾಗಿದೆ. ಇದನ್ನು 15 ವರ್ಷಗಳಿಂದ ನಮ್ಮ ಮೇಲೆ ಹೇರಿಕೆ ಮಾಡಿಕೊಂಡು ಬರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಹಲಾಲ್ ಬಾಯ್ಕಾಟ್ ವಿಚಾರವಾಗಿ ನಾವು ಎರಡು ವರ್ಷ ಹಿಂದೆಯೇ ಈ ಅಭಿಯಾನದ ಆರಂಭ ಮಾಡಿದ್ದೇವೆ. ಹಲಾಲ್ ಎಲ್ಲಿ ಹೋಗುತ್ತದೆ ಎನ್ನುವುದರ ಕುರಿತು ಜಾಗೃತಿ ಕೆಲಸ ಮಾಡುತ್ತಿದ್ದೇವೆ. ಒಬ್ಬ ಮುಲ್ಲಾ ಹಲಾಲ್ ಮಾಡಿದರೆ ಮೆಕ್ಕಾ ಕಡೆ ಮುಖ ಮಾಡಿ ಕೋಳಿ ಕತ್ತರಿಸುತ್ತಾನೆ ಎಂದರು. ಇದನ್ನೂ ಓದಿ: ಹಲಾಲ್ ಕಟ್, ಜಟ್ಕಾ ಕಟ್ ಎಂದರೇನು?

    300 ಹಲಾಲ್ ಸರ್ಟಿಫಿಕೇಟ್ ಇರುವ ಕಂಪನಿಗಳಿವೆ. ಇವೆಲ್ಲ ಕಾನೂನು ಬಾಹಿರ ಸರ್ಟಿಫಿಕೇಟ್‍ಗಳಾಗಿವೆ. ಅನೇಕ ಮುಸ್ಲಿಂ ಯುವಕರಿಗೆ ಇದೊಂದು ಉದ್ಯಮವಾಗಿದೆ. ಅವರ ದೇವರಿಗೆ ಪ್ರಾರ್ಥನೆ ಮಾಡಿ ಆಮೇಲೆ ಹಿಂದೂಗಳಿಗೆ ಅರ್ಪಣೆ ಮಾಡುತ್ತಾರೆ. ಇದು ಒಳ್ಳೆದಲ್ಲ. ಹಿಂದೂ ಜಟ್ಕಾಮೀಟ್ ಆರಂಭ ಆಗಬೇಕು. ಗ್ರಾಹಕರ ಹಕ್ಕುಗಳ ಕುರಿತು ಮುಂದಿನ ಮೂರು ತಿಂಗಳ ಒಳಗೆ ಅಭಿಯಾನ ಆಗುತ್ತದೆ ಎಂದು ಹೇಳಿದರು. ಇದನ್ನೂ ಓದಿ: ಹಲಾಲ್ ಮಾಂಸ ಎಂದರೇನು? ಹಲಾಲ್ ಕಟ್ ಏನು?

  • ಡಿಕೆಶಿ ಬಗ್ಗೆ ಅವಹೇಳನಕಾರಿ ಪೋಸ್ಟ್ – ಪ್ರಶಾಂತ್ ಸಂಬರ್ಗಿ ವಿರುದ್ಧ FIR ದಾಖಲು

    ಡಿಕೆಶಿ ಬಗ್ಗೆ ಅವಹೇಳನಕಾರಿ ಪೋಸ್ಟ್ – ಪ್ರಶಾಂತ್ ಸಂಬರ್ಗಿ ವಿರುದ್ಧ FIR ದಾಖಲು

    ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹಾಗೂ ಸಹೋದರ ಡಿ.ಕೆ ಸುರೇಶ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿದ ಆರೋಪದಡಿ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರ್ಗಿ ವಿರುದ್ಧ ಎಫ್‍ಐಆರ್ ದಾಖಲಾಗಿದೆ.

    ಪ್ರಶಾಂತ್ ಸಂಬರ್ಗಿ ಮತಾಂತರ ಬಿಲ್ ಹರಿದು ಹಾಕಿದ್ದ ಡಿ.ಕೆ ಶಿವಕುಮಾರ್‌ರನ್ನು ವಿರೋಧಿಸುವ ಭರದಲ್ಲಿ ಕೋಮು ಪ್ರಚೋದನೆ ನೀಡುವ ಪೋಸ್ಟ್ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಈ ಬಗ್ಗೆ ದೂರು ದಾಖಲಾದ ಹಿನ್ನೆಲೆ ಎಫ್‍ಐಆರ್ ದಾಖಲಾಗಿದೆ. ಇದನ್ನೂ ಓದಿ: ಬಿಜೆಪಿಯ ಬೂಟಿನ ರುಚಿಗಾಗಿ ಹಪಹಪಿಸುವ ಪ್ರಶಾಂತ್ ಸಂಬರ್ಗಿ ಕನ್ನಡ ವಿರೋಧಿ: ಚಂದ್ರಚೂಡ್

    ಸಂಬರ್ಗಿ ಪೋಸ್ಟ್ ಹಾಕಿರುವುದನ್ನು ಗಮನಿಸಿ ಕೋಮು ಭಾವನೆ ಕೆರಳಿಸುವ ಪೋಸ್ಟ್ ಎಂಬ ಆರೋಪದಡಿ ನಾರಾಯಣ್ ಸ್ವಾಮಿ ಸೌತ್ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದೀಗ ಪೊಲೀಸರು ಎಫ್‍ಐಆರ್ ದಾಖಲು ಮಾಡಿದ್ದಾರೆ. ಇದನ್ನೂ ಓದಿ: ಅರವಿಂದ್ ವೀಡಿಯೋ ಮಾಡಿ ಅದನ್ನು ಟ್ರೋಲಿಗನಿಗೆ ಸಂಬರ್ಗಿ ಕೊಟ್ಟ: ಚಂದ್ರಚೂಡ್

    ಬಿಗ್ ಬಾಸ್ ಸೀಸನ್ 8ರ ಸ್ಪರ್ಧಿಯಾಗಿದ್ದ ಪ್ರಶಾಂತ್ ಸಂಬರ್ಗಿ ಮತ್ತು ಚಕ್ರವರ್ತಿ ಚಂದ್ರಚೂಡ್ ನಡುವೆ ಈ ಹಿಂದೆ ಇದೇ ರೀತಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಹಾಕಿದ್ದ ಬಗ್ಗೆ ದೊಡ್ಡ ಮಟ್ಟದ ಮಾತಿನ ಚಕಮಕಿ ನಡೆದಿತ್ತು. ಇದನ್ನೂ ಓದಿ: ಜನತೆಯ ಹಿತದೃಷ್ಟಿಯಿಂದ ಕಠಿಣ ಕ್ರಮ: ಸುಧಾಕರ್ ಸಮರ್ಥನೆ

  • ನೋಡ್ತಾ ಇದ್ದೀನಿ ನಿನ್ನ ಆಟ ಎಲ್ಲ – ಶಮಂತ್‍ಗೆ ಪ್ರಶಾಂತ್ ಟಾಂಗ್

    ನೋಡ್ತಾ ಇದ್ದೀನಿ ನಿನ್ನ ಆಟ ಎಲ್ಲ – ಶಮಂತ್‍ಗೆ ಪ್ರಶಾಂತ್ ಟಾಂಗ್

    ದೊಡ್ಮನೆಯಲ್ಲಿ ಕಣ್ಮಣಿಯನ್ನು ಮಿಸ್ ಮಾಡಿಕೊಳ್ಳುತ್ತಿರುವ ಶಮಂತ್, ಕಣ್ಮಣಿಗಾಗಿಯೇ ಹಾಡೊಂದನ್ನು ಬರೆದಿದ್ದರು. ಈ ಹಾಡನ್ನು ಕ್ಯಾಮೆರಾ ಮುಂದೆ ದಿವ್ಯಾ ಉರುಡುಗ ಸಾರಥ್ಯದಲ್ಲಿ ಶಮಂತ್ ಹಾಡಿದ್ದರು. ಈ ವೇಳೆ ನನ್ನನ್ನು ಕಡೆಗಣಿಸಿದ್ದಾರೆ ಎಂದು ಪ್ರಶಾಂತ್ ಸಂಬರಗಿ ಶಮಂತ್ ವಿರುದ್ಧ ಬೇಸರಗೊಂಡಿದ್ದಾರೆ.

    ಗಾರ್ಡನ್ ಏರಿಯಾದಲ್ಲಿ ಪ್ರಶಾಂತ್ ಸಂಬರಗಿ ಕುಳಿತುಕೊಂಡಿರುತ್ತಾರೆ. ಈ ವೇಳೆ ಬಾತ್‍ರೂ ಏರಿಯಾದ ಕ್ಯಾಮೆರಾ ಮುಂದೆ ಶಮಂತ್ ಕಣ್ಮಣಿ ಕುರಿತಂತೆ ಹಾಡೊಂದನ್ನು ಹಾಡಿದ್ದು, ದಿವ್ಯಾ ಉರುಡುಗ ಹಾಡಿಗೆ ತಕ್ಕಂತೆ ತಾಳ ಹಾಕಿದ್ದಾರೆ.

    ನಂತರ ಬೇಸರಗೊಂಡಿದ್ದ ಪ್ರಶಾಂತ್‍ರನ್ನು ಗಮನಿಸಿದ ಶಮಂತ್ ಬಾತ್ ರೂ ಏರಿಯಾಗೆ ಕರೆದುಕೊಂಡು ಹೋಗಿ, ದಿವ್ಯಾ ಉರುಡುಗಗೆ ತಾಳ ಹಾಕಲು ಹೇಳಿದ್ದೆ, ಅರವಿಂದ್ ಬ್ರೋ ಬೇಗ ಹಾಡುತ್ತೀಯಾ ನಮಗೆಲ್ಲಾ ನಿದ್ದೆ ಬರುತ್ತಿದೆ ಅಂತ ಹೇಳಿದ್ರು ಹಾಗಾಗಿ ಸಾಂಗ್ ಹಾಡಿದೆ ಅಂತ ಹೇಳುತ್ತಾರೆ.

    ಪ್ರಶಾಂತ್ ಬ್ರೋ ಬನ್ನಿ ಎಂದು ಕರೆಯಬೇಕಾಗಿತ್ತು. ಧ್ವನಿಗಿಂತ ನಮ್ಮ ನಡವಳಿಕೆ ಹೆಚ್ಚಾಗಿ ಮಾತನಾಡುತ್ತದೆ. ನಿನ್ನ ನಡುವಳಿಕೆಯಲ್ಲಿ ಗೊತ್ತಾಗುತ್ತದೆ. ನಿನ್ನ ತೆಲೆಯಲ್ಲಿ ಏನಿದೆ. ನಿನ್ನ ಎದೆಯಲ್ಲಿ ಏನಿದೆ ಎಂದು ಪ್ರಶಾಂತ್ ಹೇಳುತ್ತಾರೆ. ಆಗ ಶಮಂತ್ ನಾನು ಆಗಲಿಂದಲೂ ಯಾಕೆ ಸೈಲೆಂಟ್ ಆಗಿದ್ದೀರಾ ಎಂದು ಕೇಳುತ್ತಲೆ ಇದ್ದೇನೆ. ಈಗ ಹಾಡು ಹೇಳಲು ಕರೆಯಲಿಲ್ಲ ಎಂದು ಇಷ್ಟೊಂದು ಬೇಜಾರ? ಎಂದು ಪ್ರಶ್ನಿಸುತ್ತಾರೆ.

    ಆಗ ಪ್ರಶಾಂತ್ ಹಾಡೊಂದೇ ಅಲ್ಲ, ನೋಡುತ್ತಿದ್ದೇನೆ ನಿನ್ನ ಆಟ ಎನ್ನುತ್ತಾರೆ. ಅಯ್ಯೋ ಬ್ರೋ ಏನು ಆಟಯೆಲ್ಲಾ, ಹೊಸದಾಗಿ ಏನೇನೋ ಅಂದುಕೊಂಡ್ರಾ ಎಂದು ಶಮಂತ್ ಹೇಳುತ್ತಾ, ಕಣ್ಮಣಿಗೆ ಹಾಡನ್ನು ಹೇಳಿದೆ ಅಷ್ಟೇ ಎನ್ನುತ್ತಾರೆ. ಇದಕ್ಕೆ ಪ್ರಶಾಂತ್ ಗೊತ್ತು, ನೀನು ಹಾಡಿನ ಫಸ್ಟ್ ಲೈನ್ ಬರೆಯಬೇಕಾದರೆ ನಾನು ಇದ್ದೆ. ಜಡೆ ಕಟ್ಟುವುದು ಎಲ್ಲೋ, ಹೂವಿನ ಹಾರ ಕಟ್ಟುವುದು ಎಲ್ಲೋ, ಹಾಕುವುದು ಎಲ್ಲೋ ಎಂದು ಹೇಳುತ್ತಾರೆ.

    ಏನೇನೋ ಯೋಚನೆ ಮಾಡುತ್ತೀರಾ ನೀವು ಎಂದು ಶಮಂತ್ ಮತ್ತೆ ಹೇಳುತ್ತಾರೆ. ಆಗ ಪ್ರಶಾಂತ್, ಏನೇನೋ ಯೋಚನೆ ಮಾಡಿ ಹೇಳುತ್ತಿಲ್ಲ. ನಡೆದಿರುವುದನ್ನು ಹೇಳುತ್ತಿದ್ದೇನೆ ಅಷ್ಟೇ. ಕಣ್ಮಣಿಗೆ ಹಾಡು ಹೇಳಲು ಒಂದು ಲೈನ್ ಬೇರೆ ಕೊಟ್ಟಿದ್ದೇನೆ. ಅದರಲ್ಲಿ ನನ್ನ ಇನ್ವಾಲ್‍ಮೆಂಟ್ ಕೂಡ ತೋರಿಸಿದ್ದೇನೆ ಎಂದಿದ್ದಾರೆ. ಇದನ್ನೂ ಓದಿ:ಒಂದು ಸಲ ಮದ್ವೆ ಆದ್ಮೇಲೆ ಯಾವತ್ತು ಮೋಸ ಮಾಡಲ್ಲ: ವೈಷ್ಣವಿ

  • ಹೆಚ್ಚಿನ ಮಾಹಿತಿ ಕೇಳಿದ್ದಾರೆ, ಮತ್ತೆ ಶುಕ್ರವಾರ ವಿಚಾರಣೆಗೆ ಹೋಗ್ತೀನಿ – ಸಂಬರಗಿ

    ಹೆಚ್ಚಿನ ಮಾಹಿತಿ ಕೇಳಿದ್ದಾರೆ, ಮತ್ತೆ ಶುಕ್ರವಾರ ವಿಚಾರಣೆಗೆ ಹೋಗ್ತೀನಿ – ಸಂಬರಗಿ

    – ಜಮೀರ್‌ಗೂ ಡ್ರಗ್ಸ್‌ಗೂ ಸಂಬಂಧ ಇದೆ ಅಂತ ನಾನು ಹೇಳಿಲ್ಲ
    – ನಾನು ಏನೂ ಸಾಕ್ಷ್ಯ ಕೊಟ್ಟಿಲ್ಲ
    – ಕೊಂಲಬೋಗೆ ಹೋಗಿರುವುದನ್ನ ಜಮೀರ್ ಒಪ್ಪಿಕೊಂಡಿದ್ದಾರೆ

    ಬೆಂಗಳೂರು: ಮತ್ತೆ ಶುಕ್ರವಾರ ವಿಚಾರಣೆಗೆ ಬರುವಂತೆ ಸಿಸಿಬಿ ತನಿಖಾಧಿಕಾರಿಗಳು ನನಗೆ ಸೂಚಿಸಿದ್ದಾರೆ ಎಂದು ಉದ್ಯಮಿ, ಸಿನಿ ವಿತರಕ ಪ್ರಶಾಂತ್ ಸಂಬರಗಿ ಹೇಳಿದ್ದಾರೆ. ಇದನ್ನೂ ಓದಿ: ಜಮೀರ್ ಆಸ್ತಿಯನ್ನು ಸರ್ಕಾರಕ್ಕೆ ಕೊಡಿಸುತ್ತಿದ್ದೇನೆ: ಪ್ರಶಾಂತ್ ಸಂಬರಗಿ

    ಸಿಸಿಬಿ ವಿಚಾರಣೆ ಮುಗಿದ ನಂತರ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಪ್ರಶಾಂತ್ ಸಂಬರಗಿ, ತನಿಖಾಧಿಕಾರಿಗಳ ಮುಂದೆ ಕೊಟ್ಟ ದಾಖಲೆಗಳು ಸಮರ್ಪಕವಾಗಿಲ್ಲ ಅಂದಿದ್ದಾರೆ. ಸಂಪೂರ್ಣವಾದ ದಾಖಲೆಗಳನ್ನು ತರುವಂತೆ ಹೇಳಿದ್ದಾರೆ. ಅಲ್ಲದೇ ಮತ್ತೆ ಶುಕ್ರವಾರವೂ ಬರುವಂತೆ ಹೇಳಿದ್ದು, ನೋಟಿಸ್ ಕೊಡುತ್ತೇವೆ ಎಂದಿದ್ದಾರೆ. ವಿಡಿಯೋ ಬಿಡುಗಡೆ ಮಾಡಿರುವುದು ತೋರಿಸುವಂತೆ ಹೇಳಿದರು. ನಾನು ನನ್ನ ಬಳಿ ಇರುವ ವಿಡಿಯೋವನ್ನು ತೋರಿಸಿದೆ. ಆದರೆ ಆ ವಿಡಿಯೋ ನಮ್ಮ ಬಳಿಯೂ ಇದೆ, ನಿಮ್ಮ ಬಳಿ ಇರುವುದು ಕೊಡಿ ಅಂದರು. ಆಗ ನಾನು ನನ್ನ ಬಳಿಯೂ ಇದೆ ವಿಡಿಯೋ ಇರುವುದು ಅಂತ ಹೇಳಿದ್ದೇನೆ ಎಂದು ಅವರು ತಿಳಿಸಿದರು.

    ನಾನು ಫೇಸ್‍ಬುಕ್, ಟ್ವಿಟ್ಟರ್ ಯಾವುದೇ ಸೋಶಿಯಲ್ ಮೀಡಿಯಾದಲ್ಲಿ ಜಮೀರ್‌ಗೂ ಡ್ರಗ್ಸ್‌ಗೂ ಸಂಬಂಧ ಇದೆ ಅಂತ ನಾನು ಹೇಳಿಲ್ಲ. ಜಮೀರ್ ಕೊಲಂಬೋಗೆ ಹೋಗಿದ್ದರು ಎಂದು ಹೇಳಿದ್ದೆ ಎಂದು ಪ್ರಶಾಂತ್ ಸಂಬರಗಿ ಈ ವೇಳೆ ಸ್ಪಷ್ಟಪಡಿಸಿದ್ದರು.

    ವಿಚಾರಣೆ ವೇಳೆ ಜಮೀರ್ ನಾನು ಶ್ರೀಲಂಕಾ ಹೋಗಿದ್ದೇನೆ ಅಂತ ಒಪ್ಪಿಕೊಂಡಿದ್ದಾರೆ ಅನ್ನೋ ವಿಚಾರ ಟಿವಿಯಲ್ಲಿ ನೋಡಿದೆ. ಹೀಗಾಗಿ ನಾನು ಮಾಡಿರುವ ಆರೋಪಕ್ಕೆ ಉತ್ತರ ಇಲ್ಲೇ ಸಿಕ್ಕಿದೆ. ನಾನು ಯಾವ ದಾಖಲೆಗಳನ್ನು ಕೊಟ್ಟಿದ್ದೇನೆ ಎನ್ನುವುದನ್ನು ಹೇಳುವುದಕ್ಕೆ ಆಗಲ್ಲ. ನಾನು ಏನೂ ಸಾಕ್ಷ್ಯ ಕೊಟ್ಟಿಲ್ಲ ಎಂದೇ ತಿಳಿದುಕೊಳ್ಳಿ, ನಾನು ಏನೂ ಸಾಕ್ಷ್ಯ ಕೊಟ್ಟಿಲ್ಲ ಎಂದರು.

    ಜಮೀರ್ ಕೊಲಂಬೋಗೆ ಹೋಗಿದ್ದರು ಎಂದು ಹೇಳಿದ್ದೆ. ಅದನ್ನು ಈಗ ಅವರೇ ಒಪ್ಪಿಕೊಂಡಿದ್ದಾರೆ. ಈಗ ಶೇಖ್ ಫಾಝಿಲ್ ಬಗ್ಗೆ ವಿಚಾರಣೆ ಮಾಡಿ ಅಂತ ಮಾತ್ರ ನಾನು ಹೇಳಿದ್ದೇನೆ. ಸಾಕಷ್ಟು ಪ್ರಶ್ನೆಗಳನ್ನು ಕೇಳಿದರು. ಅದಕ್ಕೆ ಪೂರಕ ಸಾಕ್ಷ್ಯ ಕೊಡಿ ಅಂದರು. ನಾನು ನನ್ನ ಬಳಿ ಇರುವಷ್ಟು ಮಾಹಿತಿಯನ್ನು ಕೊಟ್ಟಿದ್ದೇನೆ. ಆದರೆ ಸಿಸಿಬಿ ಇನ್ನೂ ಹೆಚ್ಚಿನ ಮಾಹಿತಿಯನ್ನು ಕೇಳಿದ್ದಾರೆ. ಹೀಗಾಗಿ ಶುಕ್ರವಾರ ಮತ್ತೆ ವಿಚಾರಣೆಗೆ ಕರೆಯುತ್ತಾರೆ ಎಂದು ಸಂಬರಗಿ ತಿಳಿಸಿದರು.

    ನಾನು ರಾಹುಲ್ ಜೊತೆ ಇದ್ದ ಫೋಟೋಗಳ ಬಗ್ಗೆಯೂ ಕೇಳಿದರು ಎಂದರು. ನಾನು ಸಂಜನಾ ಬಗ್ಗೆ ಯಾವುದೇ ಸಾಕ್ಷ್ಯಗಳನ್ನು ಕೊಟ್ಟಿಲ್ಲ. ಆದರೆ ಅವರ ಟಿಕ್‍ಟಾಕ್ ವಿಡಿಯೋಗಳು, ದುಬೈಗೆ ಹೋಗಿರುವ ಮಾಹಿತಿ ಹೇಳಿದೆ. ಬೇರೆ ಯಾವುದೇ ನಟಿ-ನಟರ ಬಗ್ಗೆ ಮಾಹಿತಿ ಕೊಟ್ಟಿಲ್ಲ. ನಾನು ಬಿಜೆಪಿ ವಕ್ತಾರ ಎಂದು ಹೇಳುತ್ತಿದ್ದಾರೆ. ಆದರೆ ನಾನು ಕಾಂಗ್ರೆಸ್ ಅವರನ್ನೂ ಭೇಟಿ ಮಾಡಿದರೆ ಕಾಂಗ್ರೆಸ್ ವಕ್ತಾರ ಎಂದು ಹೇಳುತ್ತಾರೆ. ರಾಜಕೀಯಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ, ರಾಜಕೀಯ ಪ್ರೇರಿತವಾಗಿ, ಈ ಉದ್ದೇಶಪೂರವಾಗಿ ಈ ಅಭಿಯಾನ ನಡೆಸುತ್ತಿಲ್ಲ ಎಂದು ಪ್ರಶಾಂತ್ ಆಕ್ರೊಶದಿಂದ ಮಾತನಾಡಿದರು.

    ಜಮೀರ್ ಕೊಲಂಬೋಕ್ಕೆ ಹೋದ ಬಗ್ಗೆ ಪೊಲೀಸರು ಪ್ರಶ್ನೆ ಕೇಳಲ್ಲ ಎಂದಿದ್ದಾರೆ. ಯಾಕೆಂದರೆ ಜಮೀರ್ ಕೊಲಂಬೋಕ್ಕೆ ಹೋಗಿರುವ ಬಗ್ಗೆ ಅವರೇ ಒಪ್ಪಿಕೊಂಡಿದ್ದಾರೆ. ಶಾಸಕ ಜಮೀರ್ ಬಗ್ಗೆ ನನಗೆ ಯಾವುದೇ ಅಭ್ಯಂತರ ಇಲ್ಲ. ಅವರ ವೈಯಕ್ತಿಕ ವಿಷಯದ ಬಗ್ಗೆ ನಾನು ಮಾತಾಡಲ್ಲ. ಮಾನ್ಯ ಶಾಸಕರ ಬಗ್ಗೆ ನನ್ನ ಅಭ್ಯಂತರ ಇಲ್ಲ. ಆದರೆ ಶಾಸಕರ ಆಪ್ತ ಬಂಟ ಶೇಖ್ ಫಾಝಿಲ್ ಬಗ್ಗೆ ಮಾತಾಡಿದ್ದೇನೆ ಎಂದರು.

     

    ನನ್ನ ವಿರುದ್ಧದ ಎಫ್‍ಐಆರ್ ಬಗ್ಗೆ ನಮ್ಮ ವಕೀಲರು ನೋಡಿಕೊಳ್ಳುತ್ತಾರೆ. ಜಮೀರ್‍ಗೂ ಶೇಖ್ ಫಾಝೀಲ್‍ಗೂ ಏನು ಸಂಬಂಧ ಇದೆ ಅನ್ನೋದನ್ನ ವಿಚಾರ ಮಾಡುವಂತೆ ಹೇಳಿದ್ದೇನೆ. ಅದೆಲ್ಲದಕ್ಕೂ ನಾನು ಉತ್ತರವನ್ನು ಕೊಟ್ಟಿದ್ದೇನೆ. ಕೆಲವೊಂದು ಡಾಕ್ಯುಮೆಂಟ್ ತರುವುದಕ್ಕೆ ಹೇಳಿದ್ದಾರೆ. ಎಲ್ಲವನ್ನು ಶುಕ್ರವಾರ ತಂದು ಕೊಡುತ್ತೇನೆ ಎಂದು ಪ್ರಶಾಂತ್ ಸಂಬರಗಿ ಹೇಳಿದರು.

  • ಸಂಬರಗಿಗೆ ಸಿಸಿಬಿ ನೋಟಿಸ್ – ಟೆನ್ಶನ್ ಜಾಸ್ತಿಯಾಗಿ ರಾತ್ರಿ ನಿದ್ದೆ ಮಾಡದ ಸಂಜನಾ

    ಸಂಬರಗಿಗೆ ಸಿಸಿಬಿ ನೋಟಿಸ್ – ಟೆನ್ಶನ್ ಜಾಸ್ತಿಯಾಗಿ ರಾತ್ರಿ ನಿದ್ದೆ ಮಾಡದ ಸಂಜನಾ

    ಬೆಂಗಳೂರು: ಇಂದು ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ಪ್ರಶಾಂತ್ ಸಂಬರಗಿಗೆ ನೋಟಿಸ್ ನೀಡಿತ್ತು. ಈ ಹಿನ್ನೆಲೆಯಲ್ಲಿ ಇಂದು ಸುಮಾರು 10 ಗಂಟೆ ನಂತರ ಸಿಸಿಬಿ ಕಚೇರಿಗೆ ಪ್ರಶಾಂತ್ ಸಂಬರಗಿ ಬರಲಿದ್ದಾರೆ. ಆದರೆ ಇದರಿಂದ ನಟಿ ಸಂಜನಾ ಮತ್ತು ಶಾಸಕ ಜಮೀರ್ ಅಹ್ಮದ್‍ಗೆ ಟೆನ್ಶನ್ ಶುರುವಾಗಿದೆ. ಇದನ್ನೂ ಓದಿ:   ಕೋರ್ಟ್ ಆದೇಶ ಹೊರಬರುತ್ತಿದ್ದಂತೆ ರಾಗಿಣಿ-ಸಂಜನಾ ಕಣ್ಣೀರು

    ಪ್ರಶಾಂತ್ ಸಂಬರಗಿ ನಟಿ ಸಂಜನಾ ಮತ್ತು ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ವಿರುದ್ಧ ಆರೋಪ ಮಾಡಿದ್ದರು. ಬಾಲಿವುಡ್ ಸೇರಿದಂತೆ ಸ್ಯಾಂಡಲ್‍ವುಡ್ ಡ್ರಗ್ಸ್ ಮಾಫಿಯಾ ಹಿಂದೆ ಶಾಸಕರ ಕೈವಾಡವಿದೆ ಎಂದು ಆರೋಪ ಮಾಡಿದ್ದರು. ಹೀಗಾಗಿ ನಿಮ್ಮ ಬಳಿ ಇರುವ ದಾಖಲೆ ಸಹಿತ ವಿಚಾರಣೆ ಬನ್ನಿ ಎಂದು ಸಿಸಿಬಿ ಪೊಲೀಸರು ನೋಟಿಸ್ ನೀಡಿದ್ದರು. ಇದನ್ನೂ ಓದಿ: ಸಿಕ್ಕಾಕೊಂಡ್ರರೆ ನಾವು ಮತ್ತೆ ಜೈಲಿಗೆ ಹೋಗ್ಬೇಕಾಗುತ್ತೆ- ಆಸ್ಪತ್ರೆಯಲ್ಲಿ ನಟಿ ರಾಗಿಣಿ ಕಿರಿಕ್

    ಡ್ರಗ್ಸ್ ಜಾಲದಲ್ಲಿ ಯಾರ‍್ಯಾರು ನಂಟು ಹೊಂದಿದ್ದಾರೆಂಬ ಮಾಹಿತಿ ಕೋರಿ ನೋಟಿಸ್ ನೀಡಲಾಗಿದೆ. ಆದ್ದರಿಂದ ದಾಖಲೆ ಸಮೇತ ಸಿಸಿಬಿಗೆ ಹಾಜರಾಗಲು ಸಂಬರಗಿ ಸಿದ್ಧತೆ ಮಾಡಿಕೊಂಡಿದ್ದಾರೆ. ಹೀಗಾಗಿ ಸಂಬರಗಿ ಯಾವ ದಾಖಲೆ ನೀಡಲಿದ್ದಾರೆ ಎಂದು ನಟಿ ಸಂಜನಾ ಮತ್ತು ಶಾಸಕ ಜಮೀರ್ ಆತಂಕಗೊಂಡಿದ್ದಾರೆ. ಸಂಬರಗಿಗೆ ಸಿಸಿಬಿ ನೋಟಿಸ್ ವಿಚಾರ ಕೇಳಿ ಸಂಜನಾಗೆ ಟೆನ್ಶನ್ ಮಾಡಿಕೊಂಡು ರಾತ್ರಿಯಿಡೀ ನಿದ್ದೆ ಮಾಡಲಿಲ್ಲ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಸಂಜನಾ ಜೊತೆ ಕೊಲಂಬೋಗೆ ಹೋಗಿದ್ದು ಸಾಬೀತಾದ್ರೆ ನನ್ನ ಆಸ್ತಿಯೆಲ್ಲ ಸರ್ಕಾರಕ್ಕೆ ಬರೆದುಕೊಡ್ತೀನಿ: ಜಮೀರ್

    ಸಂಜನಾ ರಾಜಕಾರಣಿ ಜೊತೆ ಶ್ರೀಲಂಕಾ ಕ್ಯಾಸಿನೋಗೆ ಹೋಗಿದ್ದರು ಎಂದು ಸಂಬರಗಿ ಆರೋಪ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಇಂದು ಪ್ರಶಾಂತ್ ಸಂಬರಗಿ ಸಿಸಿಬಿ ಮುಂದೆ ಮಹತ್ವದ ದಾಖಲೆಗಳನ್ನು ಒದಗಿಸುವ ಸಾಧ್ಯತೆ ಇದೆ. ಸಿಸಿಬಿ ಪೊಲೀಸರಿಗೆ ಸಂಜನಾಗೆ ಸಂಬಂಧಪಟ್ಟ ಫೋಟೋಗಳು ಹಾಗೂ ವಿಡಿಯೋ ನೀಡುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಮತ್ಯಾವ ಸಾಕ್ಷ್ಯ ಬಿಚ್ಚಿಡುತ್ತಾರೋ ಎಂದು ರಾಗಿಣಿ ಜೊತೆಯೂ ಮಾತನಾಡದೆ ಮೌನವಾಗಿದ್ದರು ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

    ಇತ್ತ ಜಮೀರ್ ವಿರುದ್ಧ ಹಲವು ವಿಚಾರಗಳನ್ನು ಪ್ರಸ್ತಾಪ ಮಾಡಿದ್ದರು. ಹೀಗಾಗಿ ಸಂಬರಗಿ ಹೇಳಿಕೆ ವಿರುದ್ಧ ಎಫ್‍ಐಆರ್ ದಾಖಲು ಮಾಡುವಂತೆ ಜಮೀರ್ ಕೋರ್ಟ್ ಮೊರೆ ಹೋಗಿ ಕೇಳಿಕೊಂಡಿದ್ದರು. ಅದರಂತೆಯೇ ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

    ನಟಿ ಸಂಜನಾ ಅವರ ವಿಚಾರದಲ್ಲಿ ತಮ್ಮ ವಿರುದ್ಧ ಕೇಳಿ ಬಂದ ಆರೋಪಗಳ ಕುರಿತು ಎರಡು ದಿನಗಳ ಹಿಂದೆ ಮಾತನಾಡಿದ್ದ ಜಮೀರ್ ಅವರು, ಸಂಜನಾ ಹಾಗೂ ನಾನು ಕೊಲಂಬೋಗೆ ಹೋಗಿರುವ ಬಗ್ಗೆ ಖುದ್ದು ಸಿಎಂ ತನಿಖೆ ಮಾಡಲಿ ಎಂದು ಮನವಿ ಮಾಡುತ್ತೇನೆ. ನಾನು ತನಿಖೆ ಎದುರಿಸಲು ತಯಾರಿದ್ದೇನೆ ಎಂದಿದ್ದರು.

    ನಾನು ಆಕೆ ಒಂದೇ ಹೋಟೆಲ್‍ನಲ್ಲಿ ಉಳಿದುಕೊಂಡಿದ್ದರೆ ಅಲ್ಲಿ ಪಾಸ್‍ಪೋರ್ಟ್ ಕೊಡಬೇಕಾಗುತ್ತೆ. ಅದನ್ನು ಪರಿಶೀಲಿಸಲಿ. ನಾನು ಸಂಜನಾ ಕೊಲಂಬೋಗೆ ಹೋದರೆ ಒಂದೇ ವಿಮಾನದಲ್ಲಿ ತಾನೇ ಹೋಗಬೇಕು. ಆ ಕುರಿತಾದ ಫ್ಲೈಟ್ ಮಾಹಿತಿಗಳನ್ನು ಪರಿಶೀಲನೆ ನಡೆಸಲಿ. ವಿದೇಶಗಳ ಹೋಟೆಲ್‍ಗಳಲ್ಲಿ ಹೋಟೆಲ್ ಸಿಸಿ ಕ್ಯಾಮರಾ ದೃಶ್ಯಗಳನ್ನು 10 ವರ್ಷ ಇಡಬೇಕು. ಅದನ್ನೂ ಚೆಕ್ ಮಾಡಲಿ ಎಂದು ತಿಳಿಸಿದ್ದರು.

    ಅಲ್ಲಿರುವ ಸಿಸಿಟಿವಿ ಪರಿಶೀಲನೆ ಮಾಡಿದರೆ ನಾನು ಸಂಜನಾ ಅವರೊಂದಿಗೆ ಉಳಿದುಕೊಂಡಿದ್ದರೆ ಖಂಡಿತ ಗೊತ್ತಾಗುತ್ತೆ. ಈಗ ನಮ್ಮ ಸರ್ಕಾರ ಇಲ್ಲ. ಬಿಜೆಪಿ ಸರ್ಕಾರನೇ ಇರುವುದರಿಂದ ಅವರೇ ಎಲ್ಲವನ್ನೂ ಪರಿಶೀಲನೆ ಮಾಡಲಿ. ಒಂದೊಮ್ಮೆ ನನ್ನ ಮೇಲಿನ ಆರೋಪ ಸಾಬೀತು ಆದರೆ ನನ್ನ ಆಸ್ತಿಯನ್ನು ಸರ್ಕಾರಕ್ಕೆ ಬರೆದುಕೊಡುತ್ತೇನೆ. ಆದರೆ ಆರೋಪ ಸುಳ್ಳಾದರೆ ಪ್ರಶಾಂತ್ ಸಂಬರಗಿ ಏನು ಮಾಡುತ್ತೀರಾ ನೀವೇ ಹೇಳಿ ಎಂದು ಸರ್ಕಾರಕ್ಕೆ ಸವಾಲು ಹಾಕಿದ್ದರು.

  • ಟಿವಿಯಲ್ಲಿ ಚಿರು ಫೋಟೋ ನೋಡಿದ್ರೆ ಕಣ್ಣೀರು ಬರುತ್ತೆ – ಇಂದ್ರಜಿತ್ ಆರೋಪಕ್ಕೆ ಮೇಘನಾ ಮಾತು

    ಟಿವಿಯಲ್ಲಿ ಚಿರು ಫೋಟೋ ನೋಡಿದ್ರೆ ಕಣ್ಣೀರು ಬರುತ್ತೆ – ಇಂದ್ರಜಿತ್ ಆರೋಪಕ್ಕೆ ಮೇಘನಾ ಮಾತು

    ಬೆಂಗಳೂರು: ನಿರ್ದೇಶಕ ಇಂದ್ರಜಿತ್ ಲಂಕೇಶ್ ನಟ ಚಿರಂಜೀವಿ ಸರ್ಜಾ ಸಾವಿನ ಕುರಿತು ಚರ್ಚೆ ಹುಟ್ಟುಹಾಕಿದ್ದರು. ಆದರೆ ಇಂದ್ರಜಿತ್ ಆರೋಪಕ್ಕೆ ಚಿರು ಪತ್ನಿ ಮೇಘನಾ ರಾಜ್ ಕಣ್ಣೀರು ಹಾಕಿದ್ದಾರೆ. ಇದನ್ನೂ ಓದಿ: ಈ ಹಿಂದೆ ತೀರಿಕೊಂಡ ನಟನ ಪೋಸ್ಟ್ ಮಾರ್ಟಂ ಆಗಿಲ್ಲ ಏಕೆ?: ಇಂದ್ರಜಿತ್

    ಇಂದ್ರಜಿತ್ ಲಂಕೇಶ್ ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ದಾಗ, ಇತ್ತೀಚೆಗೆ ಒಬ್ಬ ಯುವ ನಟ ತೀರಿಹೋದರು ಅವರ ಮರಣೋತ್ತರ ಪರೀಕ್ಷೆಯೇ ಆಗಲಿಲ್ಲ. ಯಾಕೆ ಆಗಲಿಲ್ಲ? ರಾಜಕೀಯ ಒತ್ತಡವಿದೆಯೇ, ಪೊಲೀಸರಿಗೆ ಒತ್ತಡವಿತ್ತಾ? ಎಂದು ಪ್ರಶ್ನೆ ಮಾಡಿದ್ದರು. ಇಂದ್ರಜಿತ್ ಪ್ರಶ್ನೆ ಮಾಡಿದ ನಂತರ ಮೂರು ತಿಂಗಳ ನಂತರ ಚಿರು ಸಾವಿನ ಬಗ್ಗೆ ಚರ್ಚೆ ನಡೆಯುತ್ತಿದೆ. ಅಲ್ಲದೇ ಇಂದ್ರಜಿತ್ ಹೇಳಿಕೆಗೆ ಪರವಿರೋಧ ಹೇಳಿಕೆಗಳು ಕೇಳಿಬರುತ್ತಿದೆ.

    ಇದೀಗ ಇಂದ್ರಜಿತ್ ಆರೋಪಕ್ಕೆ ಚಿರು ಪತ್ನಿ ಮೇಘನಾ ರಾಜ್ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಮೇಘನಾ ರಾಜ್ ವಾಟ್ಸಪ್ ಮೆಸೇಜ್ ಮೂಲಕ ಪ್ರಶಾಂತ್ ಸಂಬರಗಿ ಜೊತೆ ಈ ಬಗ್ಗೆ ಮಾತನಾಡಿದ್ದಾರೆ. ಇಂದ್ರಜಿತ್ ಆರೋಪದಿಂದ ನನಗೆ ತುಂಬಾ ನೋವಾಗಿದೆ. ಮೃತಪಟ್ಟಿರುವವರು ಈಗ ಮಾತಾಡಲು ಸಾಧ್ಯನಾ? ಈಗ ಚಿರು ಇಲ್ಲ, ಈಗ ಅವರ ಉತ್ತರ ಕೊಡಲು ಸಾಧ್ಯವೇ ಎಂದು ಬೇಸರ ತೋಡಿಕೊಂಡಿದ್ದಾರೆ.

    ಚಿರು ಈಗ ಇಲ್ಲ, ಆದರೂ ಅವರನ್ನು ಜನ ಬಿಡುತ್ತಿಲ್ಲ. ಚಿರು ಸರ್ಜಾ ಹೆಸರು ಹೇಳಿದರೆ ಇವರಿಗೆ ಏನು ಸಿಗುತ್ತೆ?, ಟಿವಿಯಲ್ಲಿ ಚಿರು ಫೋಟೋ ನೋಡಿದರೆ ಕಣ್ಣೀರು ಬರುತ್ತೆ. ಇಂದ್ರಜಿತ್ ಬೇರೆಯವರ ಹೆಸರನ್ನು ಹಾಳು ಮಾಡಬಾರದು. ಅಲ್ಲದೇ ಇಂದ್ರಜಿತ್ ಪರಿಸ್ಥಿತಿಯ ಲಾಭ ಪಡೆಯುತ್ತಿದ್ದಾರೆ. ಚಿರು ಹೆಸರನ್ನು ಇಂದ್ರಜಿತ್ ಯಾಕೆ ಹೇಳುತ್ತಿದ್ದಾರೆ ನನಗೆ ಅರ್ಥ ಆಗುತ್ತಿಲ್ಲ ಎಂದು ಚಿರಂಜೀವಿ ಸರ್ಜಾ ಪತ್ನಿ ಮೇಘನಾ ರಾಜ್ ನೋವಿನಿಂದ ಮಾತನಾಡಿದ್ದಾರೆ.