Tag: Prashant Sambargi

  • ಬಂಧನಕ್ಕೊಳಗಾಗಿರುವ ಸಂಜನಾ ಆಪ್ತ ರಾಹುಲ್ ಜೊತೆ ಸಂಬರಗಿ ಫೋಟೋ

    ಬಂಧನಕ್ಕೊಳಗಾಗಿರುವ ಸಂಜನಾ ಆಪ್ತ ರಾಹುಲ್ ಜೊತೆ ಸಂಬರಗಿ ಫೋಟೋ

    -ರಾಹುಲ್ ಪರಿಚಯವಿತ್ತಾ ಸಂಬರಗಿಗೆ?
    -ಫೋಟೋ ವೈರಲ್ ಬಳಿಕ ಸಂಬರಗಿ ಸ್ಪಷ್ಟನೆ

    ಬೆಂಗಳೂರು: ಡ್ರಗ್ಸ್ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ನಟಿ ಸಂಜನಾ ಆಪ್ತ ಎನ್ನಲಾದ ರಾಹುಲ್ ಪರಿಚಯ ಸಾಮಾಜಿಕ ಹೋರಾಟಗಾರ ಪ್ರಶಾಂತ್ ಸಂಬರಗಿ ಅವರಿಗೆ ಮೊದಲೇ ಇತ್ತ ಅನುಮಾನವೊಂದು ಹುಟ್ಟಿಕೊಂಡಿದೆ. ರಾಹುಲ್ ಜೊತೆ ಪ್ರಶಾಂತ್ ಸಂಬರಗಿ ಕ್ಲಿಕ್ಕಿಸಿಕೊಂಡಿರುವ ಫೋಟೋ ವೈರಲ್ ಆಗುತ್ತಿದೆ.

    ಸ್ಯಾಂಡಲ್‍ವುಡ್ ನಲ್ಲಿರುವ ಡ್ರಗ್ಸ್ ಮಾಫಿಯಾ ನಿರ್ಮೂಲನೆ ಆಗಬೇಕೆಂದು ಪ್ರಶಾಂತ್ ಸಂಬರಗಿ ಹೇಳುತ್ತಿದ್ದು, ನಟ ಸಂಜನಾ ಗಲ್ರಾನಿ ವಿರುದ್ಧ ಗಂಭೀರ ಆರೋಪಗಳನ್ನ ಮಾಡಿದ್ದರು. ಇದೀಗ ಸಂಜನಾ ಆಪ್ತನ ಜೊತೆ ಫೋಟೋ ರಿವೀಲ್ ಆಗಿದೆ.

    ಫೋಟೋ ರಿವೀಲ್ ಆಗುತ್ತಿದ್ದಂತೆ ಸ್ಪಷ್ಟನೆ ನೀಡಿರುವ ಪ್ರಶಾಂತ್ ಸಂಬರಗಿ, 2017ರಲ್ಲಿ ಕ್ಲಿಕ್ಕಿಸಿಕೊಂಡಿರುವ ಫೋಟೋ ಇದಾಗಿದ್ದು, ಆತನಿಗೂ ಮತ್ತು ನನಗೂ ಯಾವುದೇ ಸಂಪರ್ಕವಿಲ್ಲ. ಅಂದು ಯುಬಿ ಸಿಟಿಯಲ್ಲಿ ನಡೆದ ಪಾರ್ಟಿಗೆ ಬಹುತೇಕ ಗಣ್ಯರು ಆಗಮಿಸಿದ್ದರು. ಪಾರ್ಟಿಯಲ್ಲಿ ಫೋಟೋ ತೆಗೆದುಕೊಳ್ಳಲಾಗಿತ್ತು. ಈ ವಿಚಾರದಲ್ಲಿ ಪೊಲೀಸರು ಸಮನ್ಸ್ ನೀಡಿದ್ರೆ ನಾನು ವಿಚಾರಣೆಗೆ ಸಿದ್ಧ ಎಂದು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

  • ಪ್ರಚಾರಕ್ಕಾಗಿ ಈ ರೀತಿ ಮಾಡ್ತಿದ್ದಾರೆ – ಸಂಬರಗಿ ವಿರುದ್ಧ ಸಾರಾ ಗೋವಿಂದು ಆಕ್ರೋಶ

    ಪ್ರಚಾರಕ್ಕಾಗಿ ಈ ರೀತಿ ಮಾಡ್ತಿದ್ದಾರೆ – ಸಂಬರಗಿ ವಿರುದ್ಧ ಸಾರಾ ಗೋವಿಂದು ಆಕ್ರೋಶ

    ಬೆಂಗಳೂರು: ಪ್ರಚಾರಕ್ಕಾಗಿ ಈ ರೀತಿ ಮಾತನಾಡುತ್ತಿದ್ದಾರೆ ಎಂದು ಸಾರಾ ಗೋವಿಂದ್ ಅವರು ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಸ್ಯಾಂಡಲ್‍ವುಡ್ ಡ್ರಗ್ ಮಾಫಿಯಾದ ಬಗ್ಗೆ ಬಹಳ ಚರ್ಚೆಯಾಗುತ್ತಿದೆ. ಈ ವಿಚಾರದ ಬಗ್ಗೆ ಮಾತನಾಡಿದ್ದ ಪ್ರಶಾಂತ್ ಸಂಬರಗಿಯವರು, ಕೆಲ ನಟ-ನಟಿಯರು ಡ್ರಗ್ಸ್ ತೆಗೆದುಕೊಳ್ಳುತ್ತಾರೆ ಎಂದು ಆರೋಪ ಮಾಡಿದ್ದರು. ಇದಕ್ಕೆ ಸಾರಾ ಗೋವಿಂದ್ ಅವರು ಸಂಬರಗಿ ನಮ್ಮ ಚಿತ್ರರಂಗದವರೇ ಅಲ್ಲ ಎಂದು ದೂರಿದ್ದರು. ಈಗ ಇದೇ ವಿಚಾರವಾಗಿ ಆರೋಪ ಪ್ರತ್ಯಾರೋಪಗಳು ನಡೆಯುತ್ತಿವೆ.

    ಇಂದು ಈ ವಿಚಾರವಾಗಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಸಾರಾ ಗೋವಿಂದು, ಹಾದಿ ಬಿದಿಯಲ್ಲಿ ಮಾತಾಡೋರಿಗೆಲ್ಲಾ ಉತ್ತರ ಕೊಡೋಕಾಗಲ್ಲ. ಪ್ರಶಾಂತ್ ಸಂಬರಗಿ ಯಾರು? ನಮ್ಮ ಮೆಂಬರ್ ಅಲ್ಲ, ಸದಸ್ಯ ಅಲ್ಲ. ಕನ್ನಡ ಚಿತ್ರ ರಂಗಕ್ಕೂ ಪ್ರಶಾಂತ್ ಸಂಬರಗಿಗೂ ಏನ್ ಸಂಬಂಧ, ಚಿತ್ರರಂಗಕ್ಕೆ ಇವರ ಕೊಡುಗೆ ಏನು? ನಮ್ಮ ಬಗ್ಗೆ ಮಾತಾಡೋಕೆ, ಪ್ರಶ್ನೆ ಮಾಡೋಕೆ ಇವರು ಯಾರು ಎಂದು ಪ್ರಶ್ನೆ ಮಾಡಿದ್ದಾರೆ.

    ವಾಣಿಜ್ಯ ಮಂಡಳಿಗೆ ಒಂದು ಘನತೆ, ಗೌರವ ಇದೆ. ಎಲ್ಲೋ ಕುಳಿತುಕೊಂಡು ಮಾತಾಡೋದಲ್ಲ. ಮೊದಲು ಕನ್ನಡ ಬೆಳೆಸಿ, ಕನ್ನಡತನ ಉಳಿಸಿ ಆಮೇಲೆ ಚಿತ್ರರಂಗದ ಬಗ್ಗೆ ಮಾತಾಡಿ. ನಮ್ಮ ಚಿತ್ರರಂಗ ಬೆಳೆಸೋದಕ್ಕೆ, ಉಳಿಸೋದಕ್ಕೆ ಏನು ಮಾಡಬೇಕೋ ಅದನ್ನು ನಾವು ಮಾಡುತ್ತೇವೆ. ನಿಮ್ಮಿಂದ ನಾವು ಕಲಿಯಬೇಕಿಲ್ಲ, ಚಿತ್ರರಂಗದ ಬಗ್ಗೆ ಮಾತಾಡುವಾಗ ಹಗುರವಾಗಿ ಮಾತಾಡಬೇಡಿ. ಮಂಡಳಿ ರಚನೆ ಆಗಿ 75 ವರ್ಷ ಆಗಿದೆ. ವಾಣಿಜ್ಯ ಮಂಡಳಿಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ. ಪ್ರಚಾರಕ್ಕಾಗಿ ಈ ರೀತಿ ಮಾಡುತ್ತಿದ್ದಾರೆ ಅವರ ಮಾತಿಗೆ ಮಹತ್ವ ಕೊಡುವ ಅಗತ್ಯವಿಲ್ಲ ಎಂದು ಸಾರಾ ಗೋವಿಂದು ಅವರು ಕಿಡಿಕಾರಿದ್ದಾರೆ.

  • ಪೊಲೀಸ್ ಠಾಣೆ ಮೆಟ್ಟಿಲೇರಿತು #MeToo ಬ್ಯಾಟಲ್ – ಸರ್ಜಾ ಆಪ್ತನ ವಿರುದ್ಧ ಶೃತಿ ದೂರು

    ಪೊಲೀಸ್ ಠಾಣೆ ಮೆಟ್ಟಿಲೇರಿತು #MeToo ಬ್ಯಾಟಲ್ – ಸರ್ಜಾ ಆಪ್ತನ ವಿರುದ್ಧ ಶೃತಿ ದೂರು

    ಬೆಂಗಳೂರು: #MeToo ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಶೃತಿ ಹರಿಹರನ್ ಬಹುಭಾಷಾ ನಟ ಅರ್ಜುನ್ ಸರ್ಜಾ ಅವರ ಆಪ್ತನ ವಿರುದ್ಧ ದೂರು ದಾಖಲಿಸಿದ್ದಾರೆ.

    ದೂರಿನಲ್ಲಿ ಏನಿದೆ?
    ಫಿಲಂ ಚೇಂಬರ್ ನಲ್ಲಿ ಸಭೆ ನಡೆಯುತ್ತಿದ್ದ ವೇಳೆ ಫಿಲಂ ಚೇಂಬರ್ ಕಟ್ಟಡದ ಒಳಗೆ ಮತ್ತು ಹೊರಗೆ ನಮ್ಮ ಪ್ರಕರಣ ಸಂಬಂಧ ಪಡದ ಅನಪೇಕ್ಷಿತ ವ್ಯಕ್ತಿಗಳು ಜಮಾವಣೆಗೊಂಡಿದ್ದರು. ಈ ಸಂದರ್ಭ ದುರ್ಬಳಕೆ ಮಾಡಿಕೊಂಡ ಪ್ರಶಾಂತ್ ಸಂಬರ್ಗಿ ಎಂಬ ವ್ಯಕ್ತಿ ಗೂಂಡಾಗಳ ಜೊತೆ ಜಮಾವಣೆಗೊಂಡಿದ್ದರು.

    ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರಶಾಂತ್ ಸಂಬರ್ಗಿ, ಅವಳು ಶೃತಿ ಹರಿಹರನ್ ಹಿಂದೂ ಜನರ ಭಾವನೆಗಳಿಗೆ ಧಕ್ಕೆ ತರುವಂತೆ ವರ್ತಿಸಿದ್ದಾಳೆ ಎಂದು ಹೇಳಿದ್ದಾನೆ. ಇದು ನನ್ನನ್ನು ಧರ್ಮವೊಂದಕ್ಕೆ ಎತ್ತಿಕಟ್ಟುವ ಅಪರಾಧವಾಗಿರುತ್ತದೆ. ಮುಂದುವರಿದು ವಿದೇಶಿ ಹಣದಲ್ಲಿ ಮಾಧ್ಯಮಗಳಿಗೆ ಹಣ ನೀಡಿ ಮಹಿಳಾ ದೌರ್ಜನ್ಯ ವಿರೋಧಿ ಸುದ್ದಿಗಳನ್ನು ಮಾಡಿದ್ದಾಳೆ ಎಂದು ಹೇಳಿದ್ದಾನೆ.

    ಇದು ಆಧಾರ ರಹಿತ ಆರೋಪವಾಗಿದ್ದು ನನ್ನ ಮತ್ತು ಮಾಧ್ಯಮಗಳ ತೇಜೋವಧೆ ಮಾಡುವ ಕೃತ್ಯವಾಗಿರುತ್ತದೆ. ಮುಂದುವರಿದು ಮಾತನಾಡಿದ ಪ್ರಶಾಂತ್ ಸಂಬರ್ಗಿ ಶೃತಿ ಹರಿಹರನ್ ಬಳಸೋ 3 ಫೇಸ್‍ಬುಕ್‍ಗಳ ಐಪಿ ಅಡ್ರೆಸ್ ಬಗ್ಗೆ ಸಂಪೂರ್ಣ ಮಾಹಿತಿ ನನ್ನ ಬಳಿ ಇದೆ ಎಂದು ಹೇಳಿದ್ದಾನೆ.

    ಇದು ನನ್ನ ಖಾಸಗಿತನಕ್ಕೆ ಧಕ್ಕೆಯಾಗಿದೆ. ನಾನು ಯಾವುದೇ ಕಾರಣಕ್ಕೂ ಶೃತಿ ಹರಿಹರನ್‍ಳನ್ನು ಬಿಡುವುದಿಲ್ಲ ಎಂದಿದ್ದಾನೆ. ಏಕವಚನದಲ್ಲಿ ನಿಂದಿಸಿ ನನ್ನ ಘನತೆಯ ಬದುಕಿಗೆ ಅಡ್ಡಿಯಾಗಿದ್ದಲ್ಲದೆ, ಕೊಲೆ ಬೆದರಿಕೆ ಒಡ್ಡಿದ್ದಾನೆ. ಇದಲ್ಲದೆ ನಾನು ಆರೋಪಿಸಲ್ಪಟ್ಟ ವ್ಯಕ್ತಿ ಕೂಡ ನಟನಾಗಿರೋದ್ರಿಂದ ಅವರ ಅಭಿಮಾನಿಗಳಿಗೆ ನನ್ನ ವಿರುದ್ಧ ಕೊಲೆ, ಹಲ್ಲೆಯ ಪ್ರಚೋದನೆ ಮಾಡಿದ್ದಾನೆ. ಸೂಕ್ತ ಕ್ರಮ ಕೈಗೊಂಡು, ನನಗೆ ರಕ್ಷಣೆ ಕೊಡುವಂತೆ ಕೋರುತ್ತೇನೆ ಎಂಬುದಾಗಿ ಶೃತಿ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

    ಸದ್ಯ ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಯಾವುದೇ ಪ್ರಕರಣ ದಾಖಲಾಗಿಲ್ಲ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=RKPY3g4jWRM

    https://www.youtube.com/watch?v=Mud4GP9t0ik