Tag: Prashant Sambargi

  • ನನಗೆ ಆ ಆಘಾತದಿಂದ ಆಚೆ ಬರಲು ಆಗುತ್ತಿಲ್ಲ: ರಘು

    ನನಗೆ ಆ ಆಘಾತದಿಂದ ಆಚೆ ಬರಲು ಆಗುತ್ತಿಲ್ಲ: ರಘು

    ಪ್ರತಿವಾರ ಕೊನೆಯಲ್ಲಿ ಕಿಚ್ಚ ಸುದೀಪ್ ಅವರು ಯೆಸ್ ಆರ್ ನೋ ಪ್ರಶ್ನೆಗಳನ್ನು ಮನೆಯ ಸ್ಪರ್ಧಿಗಳನ್ನು ಕೇಳುತ್ತಾರೆ. ಹಾಗೆಯೇ ಈ ವಾರ ಸುದೀಪ್, ಮೊದಲ ಪ್ರಶ್ನೆಯಲ್ಲಿಯೇ ಸ್ನಾನಕ್ಕೆ ಹೋದ ಮೇಲೆ ಇನ್ಮುಂದೆ ಯಾವುದೇ ಕಾರಣಕ್ಕೂ ರಘುರವರು ಬಾಗಿಲು ತೆಗೆಯುವುದಿಲ್ಲ ಎಂದು ಹೇಳುತ್ತಾರೆ.

    ಈ ವೇಳೆ ಮನೆಮಂದಿ ಯೆಸ್ ಎಂದು ಉತ್ತರಿಸಿದ್ದಾರೆ. ಆಗ ಸುದೀಪ್‍ರವರು ಯೆಸ್ ಯಾಕೆ ಎಂದು ಪ್ರಶಾಂತ್ ಸಂಬರ್ಗಿಯವರನ್ನು ಕೇಳಿದಾಗ, ರಘು ಈಗ ಹೆದರಿಕೊಂಡು ಬಿಟ್ಟಿದ್ದಾರೆ. ಸೋಪ್ ಬೇಕು, ಟವೆಲ್ ಬೇಕು ಎಂದು ಏನೂ ಕೇಳುವುದಿಲ್ಲ. ಬಟ್ಟೆ ಹಾಕಿಕೊಂಡು ಆಚೆ ಬರುತ್ತಾರೆ ಎನ್ನುತ್ತಾರೆ. ನಂತರ ಶಮಂತ್ ಇನ್ನು ಏನೂ ಉಳಿದಿಲ್ಲ ಎಂದು ಹೇಳುತ್ತಾರೆ.

    ಆದರೆ ನೋ ಎಂದಿದ್ದ ಚಕ್ರವರ್ತಿಯವರು, ಶೋ ಮುಗಿದ ನಂತರ ಎಲ್ಲಾ ಗೊತ್ತಾಗಿರುತ್ತದೆ. ಏನು ಭಯವಿರುವುದಿಲ್ಲ. ಒಂದು ಸಾರಿ ಆ ರೀತಿ ಆಗುವ ತನಕ ಅಷ್ಟೇ. ರಘು ಈಗ ಯಾವ ಕಾನ್ಫಿಡೆಂಟ್ಸ್ ಲೆವರ್‍ನಲ್ಲಿದ್ದಾರೆ ಎಂದರೆ ರೊಚ್ಚು ರಘು ಆಗಿದ್ದಾರೆ ಎಂದಿದ್ದಾರೆ.

    ಕೊನೆಗೆ ರಘುರವರು ನಾನು ಆ ಆಘಾತದಿಂದ ಆಚೆ ಬರುವುದಕ್ಕೆ ಆಗುತ್ತಿಲ್ಲ ಎಂದಾಗ, ಸುದೀಪ್‍ರವರು ಪ್ರಶಾಂತ್‍ರವರಿಗೂ ಬರಲು ಆಗುತ್ತಿಲ್ಲ ಎನ್ನುತ್ತಾರೆ. ಈ ವೇಳೆ ರಘು ಪ್ರಶಾಂತ್‍ರವರಿಗೆ ಆಘಾತವಾಗಿರುವಂತೆ ನನಗೆ ಒಂದು ಪರ್ಸೆಂಟ್ ಕೂಡ ಕಾಣಿಸುತ್ತಿಲ್ಲ. ಸ್ನಾನಕ್ಕೆ ಹೋಗುವುದಕ್ಕೂ ಮುನ್ನ ಸೋಪ್, ಶ್ಯಾಂಪೂ ಎಲ್ಲ ಇದ್ಯಾ ಎಂದು ಚೆಕ್ ಮಾಡುತ್ತೇನೆ. ಆದರೆ ಅವತ್ತು ಜಗ್‍ನನ್ನು ಮರೆತು ಹೋಗಿದ್ದೆ ಅಷ್ಟೇ ಸರ್. ಬಾಗಿಲು ತೆರೆದು ಸ್ವಲ್ಪ ಕೈ ಆಚೆ ಹಾಕಿದ್ದೆ ಅಷ್ಟೋತ್ತಿಗೆ ಇವರು ಬಂದು ಬಿಟ್ಟರು. ಅದರಲ್ಲೂ ಅಂದು ನನ್ನನ್ನು ಎಳೆದು ಈಚೆ ಎಲ್ಲಿ ಹಾಕಿಬಿಡುತ್ತಾರೋ ಎಂದು ಭಯವಾಗಿತ್ತು ಎಂದು ಹೇಳುತ್ತಾರೆ. ಈ ವೇಳೆ ರಘು ಮಾತು ಕೇಳಿ ಮನೆಮಂದಿಯೆಲ್ಲಾ ಸಿಕ್ಕಾಪಟ್ಟೆ ನಕ್ಕಿದ್ದಾರೆ.

  • ನೀನು ನನಗೆ ಅಡ್ವೈಸ್ ಮಾಡಬೇಡ: ನಿಧಿಗೆ ಶುಭಾ ಟಾಂಗ್

    ನೀನು ನನಗೆ ಅಡ್ವೈಸ್ ಮಾಡಬೇಡ: ನಿಧಿಗೆ ಶುಭಾ ಟಾಂಗ್

    ಇಷ್ಟು ದಿನ ಬಿಗ್‍ಬಾಸ್ ಮನೆಯಲ್ಲಿ ಚಿಕ್ಕಮಕ್ಕಳಂತೆ ಜಗಳ, ಚೇಷ್ಟೆ, ತಮಾಷೆ ಮಾಡಿಕೊಮಡಿದ್ದ ನಿಧಿ ಸುಬ್ಬಯ್ಯ ಮತ್ತು ಶುಭಾ ಪೂಂಜಾ ಜಗಳ ಮಾಡಿದ್ದಾರೆ.

    ಗಾರ್ಡನ್ ಏರಿಯಾದಲ್ಲಿ ಶುಭಾ ಪೂಂಜಾ ಗೇಮ್‍ಗೆ ಸಂಬಂಧ ಪಟ್ಟ ವಿಚಾರದಲ್ಲಿ ಎಷ್ಟು ಬೇಕಾದರೂ ಕಿತ್ತಾಡಿ, ಆದರೆ ವೈಯಕ್ತಿಕವಾಗಿ ಬೇಡ ಎಂದು ಪ್ರಶಾಂತ್ ಹಾಗೂ ಚಕ್ರವರ್ತಿಯವರಿಗೆ ಮನವಿ ಮಾಡಿದ್ದರು. ನಂತರ ದಿವ್ಯಾ ಸುರೇಶ್ ಬಳಿ ಹೋಗಿ ಇನ್ನು ಮುಂದೆ ಏನು ಮಾತನಾಡಬೇಡ ಎಲ್ಲವನ್ನು ಇಗ್‍ನೋರ್ ಮಾಡು, ಯಾವ ಹುಡುಗಿಯರ ಬಗ್ಗೆನೂ ಕೆಟ್ಟದಾಗಿ ಮಾತನಾಡುವುದು ನನಗೆ ಇಷ್ಟ ಆಗುವುದಿಲ್ಲ. ಯಾಕೆಂದರೆ ನಾನು ಇದನ್ನು ಅನುಭವಿಸಿದ್ದೇನೆ. ಇರುವುದು ಮೂರು ಅಥವಾ ಎರಡು ವಾರ ಎಲ್ಲವನ್ನು ಬಿಟ್ಟು ಬಿಡು ಎಂದು ಕಿವಿ ಮಾತು ಹೇಳಿದ್ದರು.

    ನಂತರ ಈ ವಿಚಾರವಾಗಿ ಶುಭಾಪೂಂಜಾ ನಿಧಿ ಸುಬ್ಬಯ್ಯ ಜೊತೆ ರಾತ್ರಿ ಮಾತನಾಡಿದ್ದಾರೆ. ಈ ವೇಳೆ ನಿಧಿ ಸುಬ್ಬಯ್ಯ, ಪ್ರಶಾಂತ್‍ರವರಿಗೆ ನೀನು ಹೇಳಿದ್ದು ಸರಿ, ಆದರೆ ದಿವ್ಯಾ ಸುರೇಶ್‍ಗೆ ಹೇಳಬಾರದಿತ್ತು. ಯಾಕೆಂದರೆ ಅವಳು ಮೊದಲೇ ಅಳುತ್ತಿದ್ದಾಳೆ. ಆಗ ಶುಭಾ ಅವಳಿಗೆ ಹೀಗೆ ನೂರು ಬಾರಿ ಹೇಳುತ್ತಿದ್ದರೆ, ಇನ್ನೂ ಕುಗ್ಗಿ ಹೋಗುತ್ತಾಳೆ ಎಂದು ಹೇಳುತ್ತಾರೆ.

    ಇದಕ್ಕೆ ಶುಭಾ ಪೂಂಜಾ ನೀನು ನನ್ನನ್ನು ಅರ್ಥಮಾಡಿಕೊಳ್ಳುತ್ತಿಲ್ಲ. ನೀನು ಒಂದು ಹೇಳಿದರೆ, ಅವರು ಒಂದು ಹೇಳುತ್ತಾರೆ, ಪ್ಲೀಸ್ ನಿಧಿ ನೀನು ಕೆಲವೊಂದು ಬಾರಿ ಅರ್ಥನೇ ಮಾಡಿಕೊಳ್ಳುವುದಿಲ್ಲ ಎನ್ನುತ್ತಾರೆ. ಆಗ ನಿಧಿ ಸುಬ್ಬಯ್ಯ ನಾನು ಅವರನ್ನು ಫುಲ್ ಡೇ ಇಗ್‍ನೋರ್ ಮಾಡುತ್ತಿದ್ದೇನೆ ಎಂದಾಗ ನೀನು ಇಗ್‍ನೋರ್ ಮಾಡುತ್ತಿಲ್ಲ. ಬದಲಾಗಿ ನೀನು ಏನೇನೋ ಕಮೆಂಟ್ಸ್ ಮಾಡುತ್ತಿರುತ್ತೀಯಾ? ನೀನು ಕಮೆಂಟ್ ಪಾಸ್ ಮಾಡುವುದನ್ನು ನಿಲ್ಲಿಸು ಎಂದು ಶುಭಾ ಕಿಡಿಕಾರುತ್ತಾರೆ.

    ಯಾವ ಕಮೆಂಟ್ ಪಾಸ್ ಮಾಡುತ್ತಿದ್ದೇನೆ ಎಂದು ನಿಧಿ ಪ್ರಶ್ನಿಸಿದಾಗ, ನೀನು ನನಗೆ ಅಡ್ವೈಸ್ ನೀಡುವುದನ್ನು ನಿಲ್ಲಿಸು. ನನಗೂ ನಾನು ಏನು ಮಾಡುತ್ತಿದ್ದೇನೆ ಗೊತ್ತಿದೆ. ದಯವಿಟ್ಟು ನನ್ನನ್ನು ಸ್ವಲ್ಪ ಬಿಟ್ಟು ಬಿಡು. ನನಗೂ ಏನು ಮಾತನಾಡುತ್ತಿದ್ದೇನೆ ಎಂಬ ಬುದ್ದಿ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:ದೊಡ್ಮನೆ ಒಳಗಿನ ಗುಂಪುಗಾರಿಕೆ ಕಂಡು ಬೇಸರ ವ್ಯಕ್ತಪಡಿಸಿದ ಶಮಂತ್

  • ನಾನು ಒಳ್ಳೆಯವರಿಗೆ ತುಂಬಾ ಒಳ್ಳೆಯವನು, ಕೆಟ್ಟವರಿಗೆ ದುಷ್ಟ: ಸಂಬರಗಿ

    ನಾನು ಒಳ್ಳೆಯವರಿಗೆ ತುಂಬಾ ಒಳ್ಳೆಯವನು, ಕೆಟ್ಟವರಿಗೆ ದುಷ್ಟ: ಸಂಬರಗಿ

    ಬಿಗ್‍ಬಾಸ್ ಸೆಕೆಂಡ್ ಇನ್ನಿಂಗ್ಸ್‍ನ ವಾರದ ಕಥೆ ಕಿಚ್ಚನ ಜೊತೆ ಸಂಚಿಕೆಯ ವೇಳೆ ದಿವ್ಯಾ ಸುರೇಶ್ ಹೇಳಿದ ಒಂದು ಹೇಳಿಕೆಯಿಂದ ಪ್ರಶಾಂತ್ ಸಂಬರಗಿ ಮತ್ತು ಚಕ್ರವರ್ತಿ ಚಂದ್ರಚೂಡ್ ಆಕ್ರೋಶಗೊಂಡಿದ್ದಾರೆ.

    ಭಾನುವಾರ ನಡೆದ ‘ವಾರದ ಕಥೆ ಕಿಚ್ಚನ ಜೊತೆ’ ಕಾರ್ಯಕ್ರಮದಲ್ಲಿ ಪ್ರಶಾಂತ್ ಸಂಬರಗಿ ಹಾಗೂ ಚಕ್ರವರ್ತಿ ಚಂದ್ರಚೂಡ್‍ರವರನ್ನು ಬಹುಶಃ ನಿನ್ನನ್ನು ಸೆಕ್ಯೂರಿಟಿ ಗಾರ್ಡ್ ಆಗಿ ಕರೆಸಿರಬಹುದು. ಯಾವಾಗಲೂ ಹಿಂದೆ ಮಾತನಾಡುತ್ತಿದ್ದರು ಎಂದು ನಮ್ಮ ಮನೆಯಲ್ಲಿ ಹೇಳುತ್ತಿದ್ದರು ಎಂದು ದಿವ್ಯಾ ಸುರೇಶ್ ಸುದೀಪ್ ಎದುರಲ್ಲಿ ಹೇಳಿದ್ದರು.

    ವಾರದ ಕೊನೆಯಲ್ಲಿ ಪ್ರಶಾಂತ್ ಅವರನ್ನು ಎಲಿಮಿನೆಟ್‍ಗೊಳಿಸಿ ನಂತರ ಮನೆಯ ಸ್ಪರ್ಧಿಗಳಿಗೆ, ಪ್ರಶಾಂತ್ ಅವರು ಸೇವ್ ಆಗಿದ್ದು, ಬಿಗ್‍ಬಾಸ್ ಮುಂದಿನ ಆದೇಶದವರೆಗೂ ಮನೆಯಲ್ಲಿ ಪ್ರಶಾಂತ್ ಕಂಡರೂ ಕಾಣದಂತೆ ವರ್ತಿಸಬೇಕು ಎಂದು ಬಿಗ್‍ಬಾಸ್ ಸೂಚಿಸಿದ್ದರು. ನಂತರ ಮನೆ ಮಂದಿಯನ್ನೆಲ್ಲಾ ಮಾತನಡಿಸಲು ಸರ್ಕಸ್ ಮಾಡಿದ ಪ್ರಶಾಂತ್ ಜೊತೆಗೆ ಯಾರು ಕೂಡ ಮಾತನಾಡಲಿಲ್ಲ.

    ಈ ವೇಳೆ ದಿವ್ಯಾ ಸುರೇಶ್‍ರನ್ನು ಬಿಡದೇ ಪ್ರಶಾಂತ್ ಸಂಬರ್ಗಿ ಕೆದಕುವ ಪ್ರಯತ್ನ ಮಾಡಿದ್ದಾರೆ. ಡೈನಿಂಗ್ ಹಾಲ್ ಕುಳಿತು ದಿವ್ಯಾ ಸುರೇಶ್ ಟಿಫಿನ್ ಮಾಡುತ್ತಿರುತ್ತಾರೆ. ಆಗ ಪ್ರಶಾಂತ್, ಪ್ರಿಯಾಂಕ ಆಚೆ ಹೋದಾಗ ನನ್ನ ಟಿವಿ ಸಂದರ್ಶನಗಳನ್ನು ನೋಡಿದ್ಯಾ? ಫೇಕ್ ಲವ್ ಸ್ಟೋರಿ ಬಗ್ಗೆ ಹೇಳಿದ್ದೇನೆ. ಅದನ್ನು ಇಲ್ಲಿಯೂ ಒಪ್ಪಿಕೊಂಡಿದ್ದಾರೆ. ಪ್ರಿಯಾಂಕ ಫೇಕ್ ಲವ್ ಸ್ಟೋರಿ ಬಗ್ಗೆ ಕೇಳಿದ್ಯಾ? ಕೃತಕವಾದ ಮೆಕನಿಕಲ್ ಲವ್ ಸ್ಟೋರಿ ಬಗ್ಗೆ ನಾನು ಆಚೆ ಹೇಳಿದ್ದೇನೆ. ಕರ್ನಾಟಕ ಜನತೆ ಮುಂದೆ ಆಡಿರುವ ನಾಟಕ ಒಪ್ಪಿಕೊಂಡಿದ್ದಾರೆ. ಇರುವುದನ್ನು ಹಾಗೇ ನಾನು ಆಚೆ ನೇರವಾಗಿ ಹೇಳಿದರೆ ನಿಷ್ಠುರವಾಗಿ ಕೋಪ ಬರುತ್ತದೆ. ಪ್ರಿಯಾಂಕ ನಮ್ಮ ಮನೆಯ ಸೆಕ್ಯೂರಿಟಿ ಗಾರ್ಡ್‍ಗೆ ಎಷ್ಟು ಕೆಲಸ ಗೊತ್ತಾ? ನಮ್ಮ ಮನೆಯ ಸೆಕ್ಯೂರಿಟಿ ಗಾರ್ಡ್‍ಗೆ 30 ಸಾವಿರ ಸಂಬಳ ಜೊತೆಗೆ ಮನೆ ಕೂಡ ನೀಡಿದ್ದೇನೆ ಎಂದು ಅಣುಕಿಸಿದ್ದಾರೆ.

    ನಂತರ ಶಮಂತ್ ಕಿವಿಯ ಬಳಿ ಬಂದು ನಾನು ಒಳ್ಳೆಯವರಿಗೆ ತುಂಬಾ ಒಳ್ಳೆಯವನು ಕೆಟ್ಟವರಿಗೆ ದುಷ್ಟ ಎಂದು ನನಗೆ ಶತ್ರುಗಳಿಗಿಂತ ಮಿತ್ರರು ಜಾಸ್ತಿ ಇದ್ದಾರೆ. ಆದರೆ ಶತ್ರುಗಳೇ ರಿಯಲ್ ಎಂದು ಹೇಳಿದ್ದಾರೆ. ಇದನ್ನೂ ಓದಿ: ಬಿಕ್ಕಿ ಬಿಕ್ಕಿ ಅತ್ತ ಪ್ರಶಾಂತ್ ಸಂಬರಗಿ

  • ಪ್ರಶಾಂತ್ ಬಿಗ್ ಬಾಸ್ ಚೆನ್ನಾಗಿ ಆಡಿ ಗೆಲ್ಲೋ ಮಂಗ್ಯ

    ಪ್ರಶಾಂತ್ ಬಿಗ್ ಬಾಸ್ ಚೆನ್ನಾಗಿ ಆಡಿ ಗೆಲ್ಲೋ ಮಂಗ್ಯ

    ಬಿಗ್‍ಬಾಸ್‍ಮನೆಯಲ್ಲಿ ಹೆಚ್ಚು ಸುದ್ದಿಯಲ್ಲಿರುವ ಪ್ರಶಾಂತ್ ಸಂಬರ್ಗಿ ಬಂದ ಮೊದಲ ದಿನದಿಂದಲೂ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಾಗುತ್ತಾ ಇದ್ದರು. ಇವರಿಗೆ ಕ್ಯಾಪ್ಟನ್ ಆಗುವ ಹಂಬಲ ಇತ್ತು. ಹೀಗಾಗಿ ಏನೆಲ್ಲಾ ಕಸರತ್ತುಗಳನ್ನು ಮಾಡುತ್ತಿದ್ದರು. ಈ ವಾರದ ಕ್ಯಾಪ್ಟನ್ ಆಗಿದ್ದಾರೆ. ಈ ವಿಚಾರವಾಗಿ ಮನೆಮಂದಿಗೆ ಕೊಂಚ ಬೇಸರವಾಗಿದೆ ಆದರೆ ನಗು ಮುಖದಿಂಲೇ ಸಂಬರ್ಗಿಗೆ ಶುಭ ಕೋರಿದ್ದಾರೆ.

    ಕ್ಯಾಪ್ಟನ್ಸಿ ಟಾಸ್ಕ್ ಗೆದ್ದು ಪ್ರಶಾಂತ್ ಸಂಬರ್ಗಿ ಅವರು ಈ ವಾರದ ಕ್ಯಾಪ್ಟನ್ ಆಗಿದ್ದಾರೆ. ಹೀಗಾಗಿ ಅವರನ್ನು ಯಾರೂ ಎಲಿಮಿನೇಶನ್ ವೇಳೆ ನಾಮಿನೇಟ್ ಮಾಡುವಂತಿಲ್ಲ. ಪ್ರಶಾಂತ್ ಕ್ಯಾಪ್ಟನ್ ಆಗಿದ್ದು ಬಿಗ್ ಬಾಸ್ ಕನ್ನಡ ಸೀಸನ್ 8ರ ಮನೆಯ ಅನೇಕ ಸದಸ್ಯರಿಗೆ ಹಾಗೂ ವೀಕ್ಷಕರಿಗೆ ಶಾಕ್ ಆಗಿದೆ.

    ಪ್ರಶಾಂತ್ ಸಂಬರ್ಗಿ ಅವರು ಕ್ಯಾಪ್ಟನ್ ಆಗಿದ್ದಕ್ಕೆ ಅವರ ಅಕ್ಕ ಸೀಮಾರಿಂದ ಸಂದೇಶ ಬಂದಿದೆ. ನಿನ್ನ ನೋಡಿ ತುಂಬ ಖುಷಿಯಾಯ್ತು. ಚಿಕ್ಕವನಿದ್ದಾಗ ನಿನಗೆ ಚೆನ್ನಾಗಿ ಅಭ್ಯಾಸ ಮಾಡಲೇ ಮಂಗ್ಯ ಅಂತ ಹೇಳುತ್ತಿದ್ದೆ. ಬಿಗ್ ಬಾಸ್‍ನಲ್ಲಿ ಸಿಕ್ಕ ಜನಪ್ರಿಯತೆಯನ್ನು ನೀನು ಒಳ್ಳೆಯ ಕೆಲಸಕ್ಕೆ ಬಳಸಿಕೊಳ್ತೀಯಾ ಅಂತ ನಂಬಿದ್ದೇನೆ. ಈಗ ಬಿಗ್ ಬಾಸ್‍ನಲ್ಲಿ ಆಡಿ ಗೆಲ್ಲೋ ಮಂಗ್ಯ ಅಂತ ಹೇಳ್ತೀನಿ, ನಿನ್ನ ಪ್ರೀತಿಯ ಅಕ್ಕ ಸೀಮಾ ಎಂದು ಹೇಳಿದ್ದಾರೆ.

    ಸೀಮಾ ಮಾತು ಕೇಳಿ ಪ್ರಶಾಂತ್ ಸಂಬರ್ಗಿ ಭಾವುಕರಾಗಿ ಕಣ್ಣೀರು ಹಾಕಿದ್ದಾರೆ. ಬಿಗ್ ಬಾಸ್ ಧನ್ಯವಾದಗಳು. ಈ ವಾರ ಬಿಗ್ ಬಾಸ್ ಮನೆಯ ಕ್ಯಾಪ್ಟನ್ ಆಗಿದ್ದೇನೆ. ನನ್ನ ಪ್ರೀತಿಯ ಅಕ್ಕನ ಧ್ವನಿ ಕೇಳಿ ಸಂತೋಷವಾಯಿತ್ತು. ನನಗೆ ಮಾತು ಬರ್ತಿಲ್ಲ, ಕಣ್ಣೀರು ಬರ್ತಿದೆ. ಅಕ್ಕನ ಹಾರೈಕೆ, ಆಶೀರ್ವಾದ, ಮಾರ್ಗದರ್ಶನ, ಬೆಂಬಲ ಎಲ್ಲವೂ ನನಗೆ ಬೇಕು ಎಂದು ಪ್ರಶಾಂತ್ ಸಂಬರ್ಗಿ ಅವರು ಬಿಗ್ ಬಾಸ್ ಕ್ಯಾಮರಾ ಮುಂದೆ ಬಂದು ಹೇಳಿದ್ದಾರೆ.

     ಮಾವ ಕ್ಯಾಪ್ಟನ್ ಆದ್ರು. ಕ್ಯಾಪ್ಟನ್ ಆಗಿರೋದಕ್ಕೆ ಮಾವ ಅಂತ ಕೂಡ ಕರೆಯೋಹಾಗಿಲ್ಲ. ಮಾವನ ಆರ್ಭಟ ಶುರು ಎಂದು ಹೇಳಿದ್ದಾರೆ. ಬಿಗ್‍ಬಾಸ್ ಮನೆಯ ಮಾವ ಯಾವ ರೀತಿಯ ಆಟ ಮಾಡಲಿದ್ದಾರೆ. ಎಲೇಲ್ಲೂ ಡ್ರಾಮಗಳು ಮನೆಯಲ್ಲಿ ಈ ವಾರ ನಡೆಯಲಿದೆ ಎನ್ನುವ ಕುತುಹೊಲ ಹೆಚ್ಚಾಗಿದೆ. ಪ್ರಶಾಂತ್ ಅವರ ಮುಂದಾಳತ್ವದಲ್ಲಿ ಏನೆಲ್ಲಾ ನಡೆಯಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.

  • ಮತ್ತೆ ಒಂದಾದ ಮಂಜು-ಪ್ರಶಾಂತ್!

    ಮತ್ತೆ ಒಂದಾದ ಮಂಜು-ಪ್ರಶಾಂತ್!

    ಬಿಗ್‍ಬಾಸ್ ಮನೆಯಲ್ಲಿ ಎರಡು ದಿನಗಳ ಹಿಂದೆಯಷ್ಟೇ ಕಿತ್ತಾಡಿಕೊಂಡಿದ್ದ ಮಂಜು ಹಾಗೂ ಪ್ರಶಾಂತ್ ನಿನ್ನೆ ಮತ್ತೆ ಒಂದಾಗಿದ್ದಾರೆ.

    ಮೊದಮೊದಲಿಗೆ ಬಿಗ್‍ಬಾಸ್ ಕಾರ್ಯಕ್ರಮ ಆರಂಭವಾದಾಗ ಪ್ರಶಾಂತ್ ಸಂಬರ್ಗಿಯನ್ನು ಮಂಜು ಪವಾಗಡ ಮಾವ ಎಂದು ಕರೆಯಲು ಆರಂಭಿಸಿದರು. ಅಂದಿನಿಂದ ದೊಡ್ಮನೆಯಲ್ಲಿ ಪ್ರಶಾಂತ್ ಸಂಬರ್ಗಿ ಮಾವ ಎಂದೇ ಫೇಮಸ್ ಆದರು.

    ಆದರೆ ಎರಡು ದಿನಗಳ ಹಿಂದೆ ಪ್ರಶಾಂತ್ ಸಂಬರ್ಗಿ, ನನ್ನನ್ನು ಮಾವ ಎಂದು ಕರೆಯಬೇಡ ಅಂತಾ ಸ್ವಿಮಿಂಗ್ ಪೂಲ್ ಬಳಿ ಮಂಜು ಮೇಲೆ ರೇಗಾಡಿ ಜಗಳ ಮಾಡಿದ್ದರು. ಈ ಮಧ್ಯೆ ಪ್ರಶಾಂತ್ ದಿವ್ಯಾ ಸುರೇಶ್ ಹೆಸರು ಎತ್ತಿದ್ದಕ್ಕೆ ಮಂಜು ಹಾಗೂ ಪ್ರಶಾಂತ್ ಮಧ್ಯೆ ಮಾತಿನ ಚಕಮಕಿ ನಡೆದಿತ್ತು ಇವರಿಬ್ಬರ ಜಗಳಕ್ಕೆ ಬಿಗ್‍ಮನೆ ಕಾವೇರಿತ್ತು.

    ಇದೀಗ ನಿನ್ನೆ ಮಂಜು ಪ್ರಶಾಂತ್ ಬಳಿ ಹೋಗಿ ಸಾರಿ ಎಂದು ಕೇಳಿದ್ದಾರೆ. ಈ ವೇಳೆ ಪ್ರಶಾಂತ್ ನಾನು ನಿನಗೆ ಮೊದಲಿನಿಂದಲೂ ನಾಲ್ಕು ಬಾರಿ ಮಾವ ಎಂದು ಕರೆಯಬೇಡ ಅಂತ ಹೆಳಿದ್ದೆ. ಅಲ್ಲದೇ ಕೈ ಮುಗಿದು ಕೇಳಿಕೊಳ್ಳುತ್ತೇನೆ ಎಂದು ರಿಕ್ವೆಸ್ಟ್ ಕೂಡ ಮಾಡಿಕೊಂಡಿದ್ದೆ, ಆದರೂ ನೀನು ಹಾಗೆಯೇ ಕರೆಯುತ್ತಿದೆ ಎಂದು ಹೇಳುತ್ತಾರೆ.

    ಈ ವೇಳೆ ಮಂಜು ನಾನು ಮೊದಲಿನಿಂದಲೂ ನಿಮಗೆ ಮಾವ ಎಂದು ಕರೆದು ಅಭ್ಯಾಸ ಆಗಿ ಹೋಯಿತು. ಹಾಗಾಗಿ ನಿಮ್ಮನ್ನು ಹಾಗೇ ಕರೆಯುತ್ತಿದ್ದೆ ಎಂದು ಹೇಳಿದಾಗ ಹೋಗಲಿ ಬಿಡು ಇಬ್ಬರು ಮಾತನಾಡಿದ್ದು, ತಪ್ಪಾಗಿದೆ ಎಂದು ಹೇಳಿ ಹೆಗಲ ಮೇಲೆ ಕೈ ಹಾಕಿಕೊಂಡು ಒಟ್ಟಿಗೆ ಹೋಗುತ್ತಾರೆ.

  • ಮಾವನ ವಿರುದ್ಧ ತಿರುಗಿ ಬಿದ್ದ ಅಳಿಯ

    ಮಾವನ ವಿರುದ್ಧ ತಿರುಗಿ ಬಿದ್ದ ಅಳಿಯ

    ಬಿಗ್‍ಬಾಸ್ ಮನೆಯಲ್ಲಿ ಇಷ್ಟು ದಿನಗಳ ಚೆನ್ನಾಗಿದ್ದ ಮಾವ-ಅಳಿಯನ ಮಧ್ಯೆ ಜಗಳ ಶುರುವಾಗಿದೆ. ಮಾವ, ಅಳಿಯ ಎಂದು ಕರೆದುಕೊಳ್ಳುತ್ತಿದ್ದ ಅವರು ಏನು.. ಏನು ಎಂದು ಮಾತಿಗೆ ಮಾತು ಬೆಳಸುವಷ್ಟರಮಟ್ಟಿಗೆ ಕಿತ್ತಾಡಿಕೊಂಡಿದ್ದಾರೆ.

    ಚದುರಂಗದ ಆಟದಲ್ಲಿ ಬಿಗ್‍ಬಾಸ್ ಕೆಲವು ನಿಯಮಗಳನ್ನು ಹಾಕಿದ್ದಾರೆ. ಈ ನಿಯಮವನ್ನು 2 ಗುಂಪಿನ ತಂಡದ ಸದಸ್ಯರು ಪಾಲಿಸಬೇಕು. ನಿಯಮ ಉಲ್ಲಂಘನೆ ಮಾಡುತ್ತಿದ್ದಾರೆ ಎನ್ನುವ ಕುರಿತಾಗಿ ಮಂಜು ಪಾವಗಡ ಮತ್ತು ಪ್ರಶಾಂತ್ ಸಂಬರ್ಗಿಯ ಮಧ್ಯೆ ಜಗಳವಾಗಿದೆ.

     ಮನೆಯಲ್ಲಿ ಚದುರಂಗದ ಆಟ ನಡೆಯುತ್ತಿದೆ. ಈ ಆಟದಲ್ಲಿ ಕೆಲವು ನಿಯಮಗಳನ್ನು ಬಿಗ್‍ಬಾಸ್ ಹಾಕಿದ್ದಾರೆ. ಒಬ್ಬ ಸ್ಪರ್ಧಿ ತಮ್ಮ ಆಟವನ್ನು ಮಗಿಸಿ ಬಿಗ್‍ಬಾಸ್ ಹೇಳುವವರೆಗೂ ಮನೆಯಿಂದ ಸ್ಪರ್ಧಿಗಳು ಹೊರಗೆ ಬರುವಂತಿಲ್ಲ. ಆದರೆ ಸಂಬರ್ಗಿ ಹೊರಗೆ ಬಂದಿದ್ದಾರೆ. ಮಾವ ನೀನು ಅವರು ಹೇಳುವ ಮೊದಲೆ ಯಾಕೆ ಹೊರಗೆ ಬರುತ್ತಿಯಾ ಪೌಲ್ ಎಂದು ಹೇಳಿದ್ದರೆ ಏನು ಮಾಡುತ್ತಿದ್ದೆ? ಎಂದ ಮಂಜು ಅವರದ್ದೇ ಗುಂಪಿನ ಸದಸ್ಯನಾಗಿರುವ ಸಬಂರ್ಗಿಗೆ ಹೇಳಿದ್ದಾರೆ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ.

    ಚದುರಂಗದ ಆಟದಲ್ಲಿ ಸೋತು ಸಂಬರ್ಗಿ ಆಟದಿಂದ ಹೊರೆ ಇದ್ದಾರೆ. ಚಂದ್ರಕಲಾ ಮೋಹನ್ ನೀಡಿದ್ದ ಸವಾಲನ್ನು ಸ್ವೀಕರಿಸಿದ ಅರವಿಂದ್ ಆಟವನ್ನು ಪೂರ್ತಿ ಮಾಡಿದ್ದಾರೆ. ಈ ವೇಳೆ ಪ್ರಶಾಂತ್ ಅರವಿಂದ್ ಅವರಿಗೆ ಶುಭಕೋರಲು ಹೊರಗೆ ಬಂದಿದ್ದಾರೆ. ಈ ವೇಳೆ ರೂಲ್ಸ್ ಬ್ರೇಕ್ ಮಾಡಿರುವ ಕುರಿತಾಗಿ ಮನೆಯಲ್ಲಿ ಜಗಳವಾಗಿದೆ.

    ನಿನಗೆ ಮಾತ್ರ ಅಲ್ಲ ನನಗೂ ಜವಾಬ್ದಾರಿ ಇದೆ. ನಿನಗೆ ಒಬ್ಬನಿಗೆ ಬುದ್ದಿವಂತಿಕೆ ಇಲ್ಲ. ನೀನು ಯಾಕೆ ಆಚೆ ಬಂದೆ. ಸರಿ ಇರಲ್ಲ ಹೇಳುತ್ತಿದ್ದೇನೆ ಎಂದು ಸಂಬರ್ಗಿ ಮಂಜುಗೆ ಅವಾಜ್ ಹಾಕಿದ್ದಾರೆ. ಮಂಜು ಮಾತ್ರ ರೂಲ್ಸ್ ವಿಚಾರವಾಗಿ ಮೊದಲು ನಿಧಾನವಾಗಿ ಹೇಳಿದ್ದರು ಆದರೆ ಇಬ್ಬರ ನಡುವೆ ಮಾತಿಗೆ ಮಾತು ಬೆಳದಿದೆ. ಈ ವೇಳೆ ಮನೆಯ ಕ್ಯಾಪ್ಟನ್ ಅರವಿಂದ್ ಮಧ್ಯ ಪ್ರವೇಶಿಸಿ ಇಬ್ಬರ ಜಗಳವನ್ನು ತಡೆದಿದ್ದಾರೆ. ಇಂದು ಪ್ರಸಾರವಾಗಲಿರುವ ಎಪಿಸೋಡ್‍ನಲ್ಲಿ ಈ ಕುರಿತಾಗಿ ಎನೆಲ್ಲಾ ಡ್ರಾಮಾ ನಡೆಯಲಿದೆ ಎಂಬುದನ್ನು ಕಾದು ನೋಡ ಬೇಕಿದೆ.

  • ಬಿಗ್‍ಬಾಸ್ ಮನೆ ತುಪ್ಪದ ವಿಷ್ಯ ಬ್ಯಾಡವೋ ಶಿಷ್ಯ..

    ಬಿಗ್‍ಬಾಸ್ ಮನೆ ತುಪ್ಪದ ವಿಷ್ಯ ಬ್ಯಾಡವೋ ಶಿಷ್ಯ..

    ಬಿಗ್‍ಬಾಸ್ ಮನೆಯಲ್ಲಿ ತುಪ್ಪದ ವಿಷ್ಯಕ್ಕೆ ಗಲಾಟೆ ನಡೆದಿದೆ. ರುಚಿಯಾದ ತುಪ್ಪ ಎಲ್ಲರ ಮನದಲ್ಲಿ ಕೊಂಚ ಬಿಸಿ ಬಿಸಿ ಮಾಡಿದ್ದಂತೂ ಸುಳ್ಳಲ್ಲ. ತುಪ್ಪಕ್ಕಾಗಿ ಮನೆ ಮಂದಿ ಕಿತ್ತಾಡಿಕೊಂಡಿದ್ದಾರೆ.

    ಹೌದು ಬಿಗ್‍ಬಾಸ್ ಮನೆಯಲ್ಲಿ ರೇಶನ್ ಒಂದು ಅಳತೆಯಲ್ಲಿ ಬರುತ್ತದೆ. ಬೇಕಾ ಬಿಟ್ಟಿಯಾಗಿ ಖರ್ಚು ಮಾಡುವಂತಿಲ್ಲ. ಮಾಡಿದರೆ ಅವರೆ ಮುಂದೆ ಮತ್ತೆ ರೇಶನ್ ಬರುವವರೆಗೂ ಅದೇ ಸಾಮಾಗ್ರಿಗಳಲ್ಲಿ ಅಡುಗೆ ಮಾಡಿಕೊಂಡು ಹೋಗಬೇಕು. ಆದರೆ ಒಂಟಿ ಮನೆಯ ಸದಸ್ಯರು ತುಪ್ಪ ಖಾಲಿ ಆಗಿದೆ ಎಂದು ಒಬ್ಬರಿಗೊಬ್ಬರು ಕಿತ್ತಾಡಿಕೊಂಡಿದ್ದಾರೆ.

    ಪ್ರಶಾಂತ್ ಸಂಬರಗಿ ಮನೆಯವರಿಗಾಗಿ ತಪ್ಪು ಉಪಯೋಗಿಸಿ ಹೊಸ ಅಡುಗೆ ಮಾಡಿದ್ದಾರೆ. ಶುಭಾ ಪೂಂಜಾ, ನಿಧಿ, ಚಂದ್ರಕಲಾ ಮೋಹನ್ ಮನೆಯಲ್ಲಿರುವ ತುಪ್ಪ ಖಾಲಿ ಆಗಿದೆ ಎಂದು ಹೇಳಿದ್ದಾರೆ. ಈ ವೇಳೆ ಮನೆ ಮಂದಿ ಎಲ್ಲ ಪ್ರಶಾಂತ್ ಮಾಡಿಕೊಟ್ಟಿರುವ ತಿಂಡಿಯನ್ನು ತಿಂದು ಮತ್ತೆ ತುಪ್ಪವನ್ನು ಖಾಲಿ ಮಾಡಿದ್ದೀರಾ ಎಂದು ಬೆರಳು ಮಾಡಿ ತೋರಿಸಿದ್ದಾರೆ. ಒಬ್ಬರು ಒಂದೊಂದು ರೀತಿಯಾಗಿ ಮಾತನಾಡಿದ್ದಾರೆ. ಸಂಬರಗಿ ಮಾತ್ರ ನಾನು ತಪ್ಪವನ್ನು ಬಳಕೆಯೆ ಮಾಡಿಲ್ಲ ಎಂದು ಜಾರಿಕೊಂಡ್ರು.

    ಮನೆಯಲ್ಲಿ ಎಲ್ಲರಿಗೂ ಅಡುಗೆಯನ್ನು ಮಾಡುತ್ತಾರೆ ಅದನ್ನು ಎಲ್ಲರೂ ತಿನ್ನಬೇಕು. ನಾವು ನಮಗೆ ಬೇಕಾದದ್ದನ್ನು ಹೋಗಿ ಮಾಡಿಕೊಂಡು ತಿನ್ನ ಬಾರದು. ಎಲ್ಲರೂ ಹೊಂದಿಕೊಂಡು ಹೋಗೋಣ ಎಂದು ಮನೆಯ ಕ್ಯಾಪ್ಟನ್ ಅರವಿಂದ್ ಹೇಳಿದ್ದಾರೆ. ಮನೆಯ ಸದಸ್ಯರೆಲ್ಲ ಈ ವಿಚಾರವಾಗಿ ಒಪ್ಪಿಕೊಂಡಿದ್ದಾರೆ.

    ನಿಧಿ, ಶುಭಾ ವಾದ ಮನೆಗೆ ಬರುವ ರೇಶನ್ ಬಳಕೆ ಸರಿಯಾಗಿ ಆಗಬೇಕು, ಎಲ್ಲರಿಗೂ ಸಿಗಬೇಕು ಎನ್ನುತ್ತಾರೆ. ಆದರೆ ಮನೆಮಂದಿ ಮಾತ್ರ ಈ ವಿಚಾರವನ್ನು ಅರ್ಥ ಮಾಡಿಕೊಳ್ಳದೆ ಒಬ್ಬೊಬ್ಬರು ಒಂದೊಂದು ರೀತಿಯಾಗಿ ಮಾತಾಡಿದ್ದರಿಂದ ಡೊಡ್ಡ ಮನೆಯಲ್ಲಿ ಡೊಡ್ಡದಾಗಿಯೇ ಒಂದು ಗಲಾಟೆ ಆಗಿದೆ.

    ಆದರೆ ನಿನ್ನೆ ಪೂರ್ತಿಯಾಗಿ ಮನೆ ಮಂದಿ ಮಾತನಾಡಿಕೊಂಡಿದ್ದೇಲ್ಲ ತುಪ್ಪದ್ದೇ ವಿಚಾರ. ತುಪ್ಪ ಖಾಲಿಯಾಗಿದೆ ಎಂದು ಮನೆಯಲ್ಲಿ ಒಂದು ಡ್ರಾಮಾವೇ ನಡೆದಿದೆ.

  • ಮೂರನೆ ದಿನವೇ ಬಿಗ್‍ಬಾಸ್ ಮುಂದೆ ಬೇಡಿಕೆಯಿಟ್ಟ ನಿಧಿ.!

    ಮೂರನೆ ದಿನವೇ ಬಿಗ್‍ಬಾಸ್ ಮುಂದೆ ಬೇಡಿಕೆಯಿಟ್ಟ ನಿಧಿ.!

    ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳು ಕ್ಯಾಮೆರಾ ಮುಂದೆ ಬಂದು ಮನಸ್ಸು ಬಿಚ್ಚಿ ಮಾತನಾಡಿರುವ ಎಷ್ಟೋ ಉದಾಹರಣೆಗಳಿವೆ. ಹಾಗೆಯೇ ಇದೀಗ ನಿಧಿ ಸುಬ್ಬಯ್ಯ 3ನೇ ದಿನವೇ ಬಿಗ್‍ಬಾಸ್ ಬಳಿ ಒಂದು ಬೇಡಿಕೆ ಇಟ್ಟಿದ್ದಾರೆ.

    ಪ್ರಶಾಂತ್ ಸಂಬರ್ಗಿ ಅವರು ಕಾಫಿ ಪೌಡರ್ ಖಾಲಿ ಮಾಡಿದ್ದಾರೆ. ಅವರನ್ನು ಜೈಲಿಗೆ ಹಾಕಿ ಕಾಫಿ ಪೌಡರ್ ಕಳಿಸಿ ಬಿಗ್ ಬಾಸ್. ಸ್ವಿಮ್ಮಿಂಗ್ ಪೂಲ್ ಟಾಸ್ಕ್ ನಿಂದ ನನ್ನ ಮೂಗು, ತಲೆಯಲ್ಲಿ ನೀರು ಸೇರಿಕೊಂಡು ಬಿಟ್ಟಿದೆ ದಯವಿಟ್ಟು ಕಳಿಸಿಕೊಡಿ, ನನಗೆ ಕಾಫಿ ಇಲ್ಲದೇ ಆಗುತ್ತಿಲ್ಲ, ಬೇಕಾದರೆ ಪ್ರಶಾಂತ್ ಅವರನ್ನು ಜೈಲಿಗೆ ಹಾಕಿ ಎಂದು ನಿಧಿ ಮನವಿ ಮಾಡಿದ್ದಾರೆ. ಈ ವೇಳೆ ಜೊತೆಗೆ ಇದ್ದ ರಾಜೀವ್ ಕೂಡ ಹೌದು ಬಿಗ್ ಬಾಸ್ ನನ್ನ ಗಂಟಲು ಕೆಟ್ಟುಹೋಗಿದೆ.. ದಯವಿಟ್ಟು ಸ್ವಲ್ಪ ಕಾಫಿ ಪೌಡರ್ ಕಳಿಸಿಕೊಡಿ ಎಂದು ಕ್ಯಾಮೆರಾ ಮುಂದೆ ಕೇಳಿಕೊಂಡಿದ್ದಾರೆ.

    ಮನೆಯ ಸದಸ್ಯರೊಂದಿಗೆ ಹೇಳಿಕೊಳ್ಳಲಾಗದ ಎಷ್ಟೋ ವಿಷಯವನ್ನು ಮನೆ ಸದಸ್ಯರು ಕ್ಯಾಮೆರಾ ಮುಂದೆ ಹೇಳಿಕೊಳ್ಳುತ್ತಾರೆ. ಇದೀಗ ಬಿಗ್‍ಬಾಸ್ ಇವರ ಕೋರಿಕೆಯನ್ನು ನೇರವೇರಿಸುತ್ತಾರಾ ಎಂದು ಕಾದು ನೋಡಬೇಕಿದೆ. ಒಂದು ಕಾಫಿಗಾಗಿ ಪ್ರಶಾಂತ್ ಅವರನ್ನು ಜೈಲಿಗೆ ಹಾಕಿ ನಮಗೆ ಕಾಫಿ ಕಳಿಸಿಕೊಡಿ ಎಂದು ಕೇಳಿರುವ ನಿಧಿ ಸುಬ್ಬಯ್ಯ ಅವರ ಆಟದ ವೈಖರಿ ಮತ್ತು ಬುದ್ದಿವಂತಿಕೆ ಕುರಿತಾಗಿ ನೆಟ್ಟಿಗರು ಮೆಚ್ಚಿದ್ದಾರೆ. ಮನೆಯಲ್ಲಿ ಆಟದ ರಂಗು ಏರಿದೆ. ಅಭಿಮಾನಿಗಳಲ್ಲಿ ಬಿಗ್‍ಬಾಸ್ ಕುರಿತಾದ ನೀರಿಕ್ಷೆ ಅಧಿಕವಾಗುತ್ತಿದೆ.

  • ಡಾಕ್ಟರ್ ಕೇಳಿ ಟೀ ಮಾಡೋದು ಕಲಿತ್ರಂತೆ ಪ್ರಶಾಂತ್ ಸಂಬರ್ಗಿ

    ಡಾಕ್ಟರ್ ಕೇಳಿ ಟೀ ಮಾಡೋದು ಕಲಿತ್ರಂತೆ ಪ್ರಶಾಂತ್ ಸಂಬರ್ಗಿ

    ಬೆಂಗಳೂರು: ದೊಡ್ಡಮನೆಯಲ್ಲಿ ಸೆಲೆಬ್ರಿಟಿಗಳು ಬಣ್ಣ ಬಣ್ಣದ ಆಟ ಶುರು ಮಾಡಿದ್ದಾರೆ. 2ನೇ ದಿನವೇ ಮನೆಯಲ್ಲಿ ರಂಗು ರಂಗಿನ ಕಥೆಗಳು ಒದೊಂದಾಗಿಯೇ ಹೊರಬರುತ್ತಿದೆ. ಪ್ರಶಾಂತ್ ಸಂಬರ್ಗಿ ಮನೆಯ ಹೆಂಗಳೆಯರಿಗೆ ಟೀ ಮಾಡುವುದನ್ನು ಹೇಳಿಕೊಟ್ಟಿದ್ದಾರೆ.

    ಹಾಲು ಮತ್ತು ನೀರನ್ನು ಕುದಿಸಬಾರದು ವಿಷವಾಗುತ್ತದೆ. ನೀರು, ಟೀ ಪೌಡರ್ ಹಾಕಿ ಕುದಿಸ ಬೇಕು. ಹಾಲು ಒಂದೆಡೆ ಕುದಿಸಬೇಕು. ನಮ್ಮ ಆರೋಗ್ಯಕ್ಕೆ ಯಾವುದು ಬೇಕು ಎಂಬುದನ್ನು ಡಾಕ್ಟರ್ ಕೇಳಿ ಟೀ ಮಡುವುದನ್ನು ಕೇಳಿ ಕಲಿತುಕೊಂಡಿದ್ದೇನೆ. 2 ಗುಳ್ಳೆ ಬಂದಾಗ ಟೀ ಪೌಡರ್ ಹಾಕಿ ಕುದಿಸಬೇಕು. ನಂತರ ತುಂಬಾ ಗುಳ್ಳೆ ಬಂದಾಗ ಆಫ್ ಮಾಡಿ ಟೀ ರೇಡಿಯಾಗುತ್ತದೆ ಎಂದು ಪ್ರಶಾಂತ್ ಸಂಬರ್ಗಿ ಹೇಳಿದ್ದಾರೆ. ಇದನ್ನು ಕೇಳುತ್ತಾ ನಿಂತಿದ್ದವರು ತಮ್ಮ ಮುಖದ ಭಾವನಗಳಲ್ಲೇ ಉತ್ತರವನ್ನು ನೀಡಿದ್ದಾರೆ.

    ನಂತರ ಪ್ರಶಾಂತ್ ಸಂಬರ್ಗಿ ಹಾಲಿಗೆ ಒಂದು ಹನಿ ಲಿಂಬುವನ್ನು ಹಾಕಿ ಮೊಸರು ಮಾಡುತ್ತೇನೆ ಎಂದು ಹೇಳಿದರು. ಆದರೆ ಕಿಚನ್‍ನಲ್ಲಿ ಇದ್ದ ನಿಧಿ ಸುಬ್ಬಯ್ಯ, ಶಂಕರ್ ಅಶ್ವಥ್, ನಿರ್ಮಿಲಾ ಚನ್ನಪ್ಪ, ಚಂದ್ರಕಲಾ ಮೋಹನ್ ಸಾಧ್ಯವೇ ಇಲ್ಲ ಎಂದು ಹೇಳಿದ್ದಾರೆ. ನಾನು ಮಾಡಿಯೇ ಮಾಡುತ್ತೇನೆ ನೋಡುತ್ತಿರಿ ಅಂತ ಹೇಳಿ ಹೋಗಿದ್ದಾರೆ. ಪ್ರಶಾಂತ್ ಸಂಬರ್ಗಿ ಮೊಸರು ಮಾಡುತ್ತಾರೋ ಇಲ್ಲ ಕೆಸರು ಮಾಡುತ್ತಾರೋ ಎಂದು ಶಂಕರ್ ಅಶ್ವಥ್ ಹಾಸ್ಯ ಮಾಡಿ ನಕ್ಕಿದ್ದಾರೆ.

    ಒಂಟಿ ಮನೆಯ ಮೊದಲ ದಿನದಿಂದಲೇ ಆಟ ಆರಂಭವಾಗಿದೆ. ಬಿಗ್ ಮನೆಯಲ್ಲಿರುವವರು ಒಂದೇ ದಿನದಲ್ಲಿ ಹಲವಾರು ವಿಚಾರಗಳಿಂದ ಸುದ್ದಿ ಮಾಡುತ್ತಿದ್ದಾರೆ. ನಿನ್ನೆ ಬಿಗ್ ಮನೆಯ ವಾಸ್ತು ಬಗ್ಗೆ ಚರ್ಚೆ ನಡೆಸಿದ್ದ ಪ್ರಶಾಂತ್ ಸಂಬರ್ಗಿ ಇಂದು ಟೀ ಮಾಡುವುದು ಹೇಗೆ ಎಂದು ಹೇಳಿ ಕೊಟ್ಟು ಸುದ್ದಿಯಾಗಿದ್ದಾರೆ.

    ಬಿಗ್ ಬಾಸ್ ಮನೆಯಲ್ಲಿ ಪ್ರಶಾಂತ್ ಸಂಬರ್ಗಿ ಇರುವ ರೀತಿ, ಏನೇ ಹೇಳಿದರೂ ಅವರದ್ದೇ ಆಗಿರುವ ಸ್ಟೈಲ್‍ನಲ್ಲಿ ಖಡಕ್ ಉತ್ತರವನ್ನು ನೀಡುವುದು. ಕೆಲವಷ್ಟು ವಿಚಾರಗಳಿಗೆ ಅವರದ್ದೇ ಆಗಿರುವ ತಾರ್ಕಿಕವಾದವನ್ನು ಮಾಡುತ್ತಿರುವುದು ನೋಡುಗರಿಗೆ ಇನ್ನಷ್ಟು ಮನರಂಜನೆ ನೀಡಲಿದೆ. ವಾಸ್ತುವಿನ ಕುರಿತಾಗಿ ಮಾತನಾಡಿದಾಲೇ ನೆಟ್ಟಿಗರು ಇವರಿಂದ ಹೆಚ್ಚಿನ ಮನರಂಜನೆಯ ನೀರಿಕ್ಷೆ ಮಾಡಿದ್ದರು. ಇದೀಗ ನೀರಿಕ್ಷೆಯ ಮಟ್ಟ ಹೆಚ್ಚಾಗಿದೆ ಎಂದು ನೆಟ್ಟಿಗರು ಸೋಶಿಯಲ್ ಮೀಡಿಯಾದಲ್ಲಿ ಮಾತನಾಡಿಕೊಳ್ಳುತ್ತಿದ್ದಾರೆ.

  • ವಾಟ್ಸಪ್‌ನಲ್ಲಿ ತೇಜೋವಧೆ – ಸಂಬರಗಿ ವಿರುದ್ದ ಎಫ್‌ಐಆರ್‌ ದಾಖಲು

    ವಾಟ್ಸಪ್‌ನಲ್ಲಿ ತೇಜೋವಧೆ – ಸಂಬರಗಿ ವಿರುದ್ದ ಎಫ್‌ಐಆರ್‌ ದಾಖಲು

    ಬೆಂಗಳೂರು: ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ವಿರುದ್ಧ ಸುಬ್ರಮಣ್ಯಪುರ ಪೊಲೀಸ್‌ ಠಾಣೆಯಲ್ಲಿ ಎಫ್ಐಆರ್‌ ದಾಖಲಾಗಿದೆ.

    ಅಧಿಕ ಬಡ್ಡಿ ನೀಡಿಲ್ಲವೆಂದು ವಾಟ್ಸಪ್‌ನಲ್ಲಿ ತೇಜೋವಧೆ ಮಾಡಿದ್ದರೆ ಎಂದು ಆರೋಪಿಸಿ ವೆಸ್ಟ್ ಆಫ್ ಕಾರ್ಡ್ ರೋಡ್ ನಿವಾಸಿ ವೈ.ಕೆ.ದೇವನಾಥ್ ಎಂಬುವರು ದೂರು ನೀಡಿದ್ದರು. ಸಂಬರಗಿ ವಿರುದ್ಧ ಐಪಿಸಿ ಸೆಕ್ಷನ್‌ 499(ಮಾನಹಾನಿ) 500(ಮಾನಹಾನಿಗಾಗಿ ದಂಡನೆ) ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಅಡಿ ಪ್ರಕರಣ ದಾಖಲಾಗಿದೆ.

    ದೂರಿನಲ್ಲಿ ಏನಿದೆ?
    ಪ್ರಶಾಂತ್‌ ಸಂಬರಗಿ ಬಳಿ ನಾನು ಬಡ್ಡಿ ಸಾಲ ಪಡೆದಿದ್ದೆ. ಈ ವೇಳೆ ಭದ್ರತೆಗಾಗಿ ನನ್ನ ಆಸ್ತಿ-ಪತ್ರಗಳನ್ನು ಅಡವಿಟ್ಟಿದ್ದೆ. ಸಾಲದ ಹಣ ಬಡ್ಡಿ ಸಮೇತ ಹಣ ಪಾವತಿಸಿದ್ದರೂ ಆಸ್ತಿ ದಾಖಲಾತಿಯನ್ನು ವಾಪಸ್‌ ನೀಡಿಲ್ಲ. ಆಸ್ತಿ ದಾಖಲಾತಿಯನ್ನು ನೀಡಬೇಕಾದರೆ ಶೇ.10 ರಷ್ಟು ಬಡ್ಡಿ ಹಣವನ್ನು ನೀಡಬೇಕೆಂದು ಬೇಡಿಕೆ ಇಟ್ಟಿದ್ದಾರೆ. ಬಡ್ಡಿ ಹಣವನ್ನು ನೀಡದ್ದಕ್ಕೆ ಸಿಸಿಬಿಯಲ್ಲಿ ಕೇಸ್‌ ದಾಖಲಿಸುತ್ತೇನೆ ಎಂದು ಬೆದರಿಸಿ ವಾಟ್ಸಪ್‌ ಗ್ರೂಪ್‌ನಲ್ಲಿ ದೇವನಾಥ ದೊಡ್ಡ ಮೋಸಗಾರ ಎಂದು ಅವಹೇಳನಕಾರಿ ಸಂದೇಶ ಪ್ರಕಟಿಸಿ ನನ್ನ ಗೌರವವನ್ನು ಹಾನಿ ಮಾಡಿ ಘನತೆಗೆ ಕುಂದುಂಟು ಮಾಡಿದ್ದಾರೆ. ಹೀಗಾಗಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು.