Tag: Prashant Neil

  • ಗ್ರೌಂಡ್ ರಿಪೋರ್ಟ್ : ರಿಲೀಸ್ ಹಿಂದಿನ ಪಕ್ಕಾ ಲೆಕ್ಕಾಚಾರ, ಆರ್.ಆರ್.ಆರ್ ದಾಖಲೆ ಮುರಿದ ಕೆಜಿಎಫ್ 2

    ಗ್ರೌಂಡ್ ರಿಪೋರ್ಟ್ : ರಿಲೀಸ್ ಹಿಂದಿನ ಪಕ್ಕಾ ಲೆಕ್ಕಾಚಾರ, ಆರ್.ಆರ್.ಆರ್ ದಾಖಲೆ ಮುರಿದ ಕೆಜಿಎಫ್ 2

    ಪ್ರಶಾಂತ್ ನೀಲ್ ನಿರ್ದೇಶನದ ‘ಕೆಜಿಎಫ್ 2’ ಸಿನಿಮಾ ರಿಲೀಸ್ ಗೆ ಇನ್ನೊಂದೇ ದಿನ ಬಾಕಿ. ಏ.14ರಂದು ವಿಶ್ವದಾದ್ಯಂತ ರಿಲೀಸ್ ಆಗುತ್ತಿರುವ ಈ ಚಿತ್ರ ಬಿಡುಗಡೆಗೂ ಮುನ್ನವೇ ಹಲವು ದಾಖಲೆಗಳನ್ನು ಬರೆದಿದೆ. ಅಲ್ಲದೇ, ಬಾಕ್ಸ್ ಆಫೀಸ್ ನಲ್ಲೂ ನಿರ್ಮಾಪಕರ ಜೇಬು ತುಂಬಿಸುತ್ತಿದೆ. ಕೇವಲ ಭಾರತದಲ್ಲಿ ಮಾತ್ರವಲ್ಲ, ವಿದೇಶಗಳಲ್ಲೂ ಕೆಜಿಎಫ್ 2 ಕ್ರೇಜ್ ಹೆಚ್ಚಾಗಿದ್ದು, ಮುಂಗಡ ಟಿಕೆಟ್ ಗಳು ಈಗಾಗಲೇ ಬಿಕರಿ ಆಗಿವೆ.

    ರಾಜಮೌಳಿ ಅವರು ಆರ್.ಆರ್.ಆರ್ ಸಿನಿಮಾದ ಜೊತೆ ಕನ್ನಡದ ಕೆಜಿಎಫ್ ಚಿತ್ರವನ್ನು ಹೋಲಿಸಲಾಗುತ್ತಿದ್ದು, ಸ್ಕ್ರೀನಿಂಗ್ ಮತ್ತು ಬಾಕ್ಸ್ ಆಫೀಸ್ ಕಲೆಕ್ಷನ್ ವಿಚಾರದಲ್ಲಿ ಆರ್.ಆರ್.ಆರ್ ಗಿಂತಲೂ ಕೆಜಿಎಫ್ 2 ಮುಂದಿದೆ. ವಿಶ್ವದಾದ್ಯಂತ ಅಂದಾಜು 9000ಕ್ಕೂ ಹೆಚ್ಚು ಸ್ಕ್ರೀನ್ ಗಳಲ್ಲಿ ಕೆಜಿಎಫ್ 2 ತೆರೆ ಕಾಣುತ್ತಿದ್ದು, ಕರ್ನಾಟಕದಲ್ಲೇ 950 ಕ್ಕೂ ಅಧಿಕ ಸ್ಕ್ರೀನ್ ಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಕರ್ನಾಟಕದಲ್ಲಿ ಮೊದಲ ದಿನವೇ ಮೂರು ಸಾವಿರಕ್ಕೂ ಹೆಚ್ಚು ಶೋಗಳನ್ನು ಏರ್ಪಡಿಸಲಾಗಿದ್ದು, ಬೆಂಗಳೂರು ಒಂದರಲ್ಲೇ 1500 ಶೋಗಳು ನಡೆಯಲಿವೆ. ಒಟ್ಟು 630 ಸಿಂಗಲ್ ಸ್ಕ್ರೀನ್  ಮತ್ತು ಮಲ್ಟಿಪ್ಲೆಕ್ಸ್ ನಲ್ಲಿ ಚಿತ್ರ ಪ್ರದರ್ಶನ ಕಾಣುತ್ತಿದ್ದು, ಕನ್ನಡದ ಆವೃತ್ತಿ 500 ಸ್ಕ್ರೀನ್ ಗಳ್ಲಲ್ಲಿದ್ದರೆ, ಉಳಿದ ಆವೃತ್ತಿಗಳು ತಲಾ 50 ಸ್ಕ್ರೀನ್ ಗಳಲ್ಲಿ ನೋಡಬಹುದಾಗಿದೆ. ಇದನ್ನೂ ಓದಿ:  ಕೊನೆಗೂ ಮದುವೆಯ ವಿಚಾರ ಖಚಿತಪಡಿಸಿದ ಆಲಿಯಾ!

    ಭಾರತದ ಮಟ್ಟಿಗೆ ಬರುವುದಾದರೆ, 6000ಕ್ಕೂ ಅಧಿಕ ಸ್ಕ್ರೀನ್ ಗಳಲ್ಲಿ ಭಾರತದಾದ್ಯಂತ ಕೆಜಿಎಫ್ 2 ಪ್ರದರ್ಶನ ಕಾಣುತ್ತಿದೆ. ದಕ್ಷಿಣ ಭಾರತದಲ್ಲಿ 3000 ಸಾವಿರ ಸ್ಕ್ರೀನ್ ಮೇಲೆ ರಾಕಿಭಾಯ್ ತನ್ನ ಆರ್ಭಟವನ್ನು ತೋರಲಿದ್ದಾನೆ. ಯುಎಸ್ ನಲ್ಲಿ 1000 ಸ್ಕ್ರೀನ್ ಗಳಲ್ಲಿ ಪ್ರದರ್ಶನಕ್ಕೆ ಈಗಾಗಲೇ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮೂಲಗಳ ಪ್ರಕಾರ ಕೆಜಿಎಫ್ ಚಾಪ್ಟರ್ ಹಿಂದಿ ಆವೃತ್ತಿಯ ಬುಕಿಂಗ್ ಗಳು ಆರ್.ಆರ್.ಆರ್ ದಾಖಲೆಗಳನ್ನು ಈಗಾಗಲೇ ಮುರಿದಿವೆ ಎನ್ನಲಾಗುತ್ತಿದೆ.  ಇದನ್ನೂ ಓದಿ: ಬೆಂಕಿ ಬಿರುಗಾಳಿ ಎಬ್ಬಿಸಿದ ಕಂಗನಾ ಶೋ: ಪತಿ ಜತೆ ಮಲಗಿದವರ ಲಿಸ್ಟ್ ಹೇಳಿದ ನಟಿ ಮಂದರಾ

    ಬೆಂಗಳೂರಿನ ಅನೇಕ ಚಿತ್ರಮಂದಿರಗಳಲ್ಲಿ ಮಧ್ಯರಾತ್ರಿಯಿಂದಲೇ ಪ್ರದರ್ಶನಕ್ಕೆ ಸಿದ್ಧತೆ ಮಾಡಿಕೊಂಡಿದ್ದು, ಮೊದಲ ಶೋ ಮಧ್ಯರಾತ್ರಿ 1 ಗಂಟೆಗೆ ಶುರುವಾಗಲಿದೆ. ಆ ಪ್ರದರ್ಶನಗಳ ಒಟ್ಟು ಟಿಕೆಟ್ ಗಳನ್ನು ಅಭಿಮಾನಿಗಳು ಖರೀದಿಸಿದ್ದು, ಅದನ್ನು ಅಭಿಮಾನಿ ಶೋ ಎಂದೇ ಕರೆಯಲಾಗುತ್ತಿದೆ. ಮಧ್ಯ ರಾತ್ರಿ ಒಂದು ಗಂಟೆಯಿಂದ, 3 ಮತ್ತು 4 ಗಂಟೆಗೂ ಚಿತ್ರ ಪ್ರದರ್ಶನಗಳು ಬೆಂಗಳೂರಿನಲ್ಲಿ ಮತ್ತು ಇತರ ಜಿಲ್ಲಾ ಕೇಂದ್ರಗಳಲ್ಲಿ ನಡೆಯುತ್ತಿವೆ. 1100 ಸಾವಿರ ಸೀಟುಗಳಿರುವ ಬೆಂಗಳೂರಿನ ಊರ್ವಶಿ ಥಿಯೇಟರ್ ಮೊದಲ ಪ್ರದರ್ಶನದ ಬಹುತೇಕ ಟಿಕೆಟ್ ಗಳು ಖಾಲಿ ಆಗಿವೆಯಂತೆ. ಆ ಥಿಯೇಟರ್ ನಲ್ಲಿಯೇ ಐದು ಪ್ರದರ್ಶನಗಳು ನಡೆಯಲಿವೆ. ಇದನ್ನು ಓದಿ: ಬಂಕಿಮ್ ಚಂದ್ರ ಚಟರ್ಜಿ ಬಯೋಪಿಕ್: ಸ್ಕ್ರಿಪ್ಟ್ ಬರೆಯಲಿದ್ದಾರೆ ಜಕ್ಕಣ್ಣನ ತಂದೆ ವಿಜಯೇಂದ್ರ ಪ್ರಸಾದ್

    .14 ಅಂಬೇಡ್ಕರ್ ಜಯಂತಿ, .15ರಂದು ಗುಡ್ ಫ್ರೈಡೇ, ಶನಿವಾರ ಮತ್ತು ಭಾನುವಾರ ರೆಗ್ಯುಲರ್ ರಜೆ ದಿನಗಳು ಇರುವ ಕಾರಣಕ್ಕಾಗಿ ಮೊದಲ ವಾರದ ಕಲೆಕ್ಷನ್ ಆರ್.ಆರ್.ಆರ್ ಗಿಂತ ಎರಡು ಪಟ್ಟು ಹೆಚ್ಚಾಗಲಿದೆ ಎನ್ನುವ ಲೆಕ್ಕಾಚಾರವಿದೆ.

  • ಕೆಜಿಎಫ್ 2 : ಗಗನ ನೀ.. ಇಂದು ಅಮ್ಮನ ಹಾಡು ರಿಲೀಸ್

    ಕೆಜಿಎಫ್ 2 : ಗಗನ ನೀ.. ಇಂದು ಅಮ್ಮನ ಹಾಡು ರಿಲೀಸ್

    ನ್ನಡದ ಪ್ಯಾನ್ ಇಂಡಿಯಾ ಸಿನಿಮಾ ಕೆಜಿಎಫ್ 2 ಈಗಾಗಲೇ ಒಂದು ಹಾಡು ರಿಲೀಸ್ ಮಾಡಿದೆ. ಈಗ ಮತ್ತೊಂದು ಗೀತೆಯನ್ನು ಪ್ರೇಕ್ಷಕರಿಗೆ ಕೇಳಿಸೋಕೆ ಚಿತ್ರತಂಡ ರೆಡಿ ಮಾಡಿಕೊಂಡಿದೆ. ಇಂದು ಮಧ್ಯಾಹ್ನ 1 ಗಂಟೆಗೆ ಚಿತ್ರದ ಎರಡನೇ ಲಿರಿಕಲ್ ವಿಡಿಯೋ ರಿಲೀಸ್ ಆಗಲಿದೆ. ಈ ಹಾಡು ಅಮ್ಮನಿಗೆ ಅರ್ಪಣೆ ಮಾಡಿದ್ದಾರೆ ನಿರ್ದೇಶಕ ಪ್ರಶಾಂತ್ ನೀಲ್. ಇದನ್ನೂ ಓದಿ : ನೀನಾಸಂ ಸತೀಶ್ ಫಸ್ಟ್ ಫೋಟೋ ಶೂಟ್ ಸ್ಟೋರಿ ವಿತ್ ಫೋಟೋ ಆಲ್ಬಂ

    ನಾಲ್ಕು ಭಾಷೆಗಳಲ್ಲಿ ರಿಲೀಸ್ ಆಗುತ್ತಿರುವ ಈ ಹಾಡು ‘ಗಗನ ನೀ..’ ಸಾಹಿತ್ಯದಿಂದ ಶುರುವಾಗಲಿದ್ದು, ಅಮ್ಮನಿಗೆ ಸಂಬಂಧಿಸಿದ ಗೀತೆ ಇದಾಗಿದೆ. ಚಾಪ್ಟರ್ 1 ರಲ್ಲಿ ತಾಯಿ ಮತ್ತು ಮಗನ ಸೆಂಟಿಮೆಂಟ್ ಗೂ ನಿರ್ದೇಶಕರು ಒತ್ತು ನೀಡಿದ್ದರು. ಈ ಸಿನಿಮಾದಲ್ಲೂ ಆ ದೃಶ್ಯಗಳು ರಿಪೀಟ್ ಆಗಿರಬಹುದು. ಹಾಗಾಗಿ ಈ ಹಾಡು ಅಲ್ಲಿ ಬಳಕೆ ಆಗಿದೆ. ರವಿ ಬಸ್ರೂರು ಸಂಗೀತ ಸಂಯೋಜನೆಯಲ್ಲಿ ಈ ಹಾಡು ಮೂಡಿ ಬಂದಿದ್ದು, ಉಳಿದ ಸಂಗತಿಗಳನ್ನು ಹಾಡಿನೊಂದಿಗೆ ವಿವರ ನೀಡಲಿದೆ ಚಿತ್ರತಂಡ. ಇದನ್ನೂ ಓದಿ: ರಣಬೀರ್ ನನ್ನ ದೊಡ್ಡ ವಿಮರ್ಶಕ ಎಂದು ಹೇಳಿ ನಾಚಿ ನೀರಾದ ಆಲಿಯಾ

    ಇದೇ ತಿಂಗಳು 14 ರಂದು ಸಿನಿಮಾ ವಿಶ್ವದಾದ್ಯಂತ ರಿಲೀಸ್ ಆಗುತ್ತಿದೆ. ಈಗಾಗಲೇ ದೇಶಾದ್ಯಂತ ರಿಲೀಸ್ ಗೆ ಭರ್ಜರಿ ಸಿದ್ಧತೆ ನಡೆಸಲಾಗಿದೆ. ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿಯಲ್ಲಿ ಈ ಸಿನಿಮಾ ಏಕಕಾಲಕ್ಕೆ ಬಿಡುಗಡೆ ಆಗುತ್ತಿದೆ. ಈ ಬಾರಿಯೂ ಬಹುದೊಡ್ಡ ತಾರಾಗಣವನ್ನೇ ಈ ಸಿನಿಮಾ ಹೊಂದಿದ್ದು, ಬಾಲಿವುಡ್ ತಾರೆಯರಾದ ಸಂಜಯ್ ದತ್, ರವೀನಾ ಟಂಡನ್ ಮತ್ತು ಪ್ರಕಾಶ್ ರೈ ಜತೆಯಾಗಿದ್ದಾರೆ. ಎಂದಿನಂತೆ ಯಶ್ ಅಭಿಮಾನಿಗಳು ಈ ಚಿತ್ರಕ್ಕಾಗಿ ಕಾಯುತ್ತಿದ್ದಾರೆ. ಇದನ್ನೂ ಓದಿ: RK ಹೌಸ್‌ನಲ್ಲಿ ರಣಬೀರ್-ಆಲಿಯಾ ಮದುವೆ : ಆ ಸ್ಥಳದ ಹಿಂದಿದೆ ಇಂಟ್ರಸ್ಟಿಂಗ್ ಕಹಾನಿ

    ಈಗಾಗಲೇ ರಿಲೀಸ್ ಆಗಿರುವ ಟ್ರೈಲರ್ ಸಿನಿಮಾ ರಂಗದಲ್ಲಿ ಭಾರೀ ಸದ್ದು ಮಾಡಿದೆ. ಈ ಹಾಡು ಕೂಡ ಎಲ್ಲರಿಗೂ ಇಷ್ಟವಾಗಲಿದೆ ಎಂಬ ನಂಬಿಕೆ ಚಿತ್ರತಂಡದ್ದು.

  • ಖಾಸಗಿ ವಿಮಾನದಲ್ಲಿ ಪ್ರಚಾರಕ್ಕೆ ಹೊರಟ ಯಶ್ ಅಂಡ್ ಟೀಮ್

    ಖಾಸಗಿ ವಿಮಾನದಲ್ಲಿ ಪ್ರಚಾರಕ್ಕೆ ಹೊರಟ ಯಶ್ ಅಂಡ್ ಟೀಮ್

    ಶ್ ನಟನೆ ‘ಕೆಜಿಎಫ್ ಚಾಪ್ಟರ್ 2’ ಸಿನಿಮಾದ ಸೆನ್ಸಾರ್ ಆಗುತ್ತಿದ್ದಂತೆಯೇ ರಾಕಿಭಾಯ್ ಅಂಡ್ ಟೀಮ್ ಬೇರೆ ಬೇರೆ ರಾಜ್ಯಗಳ ಪ್ರವಾಸ ಕೈಗೊಂಡಿದೆ. ಐದಾರು ಭಾಷೆಗಳಲ್ಲಿ ಈ ಸಿನಿಮಾ ರಿಲೀಸ್ ಆಗುತ್ತಿರುವುದರಿಂದ ಅಷ್ಟೂ ರಾಜ್ಯಗಳ ಪ್ರಮುಖ ನಗರಗಳಿಗೆ ನಟ ಯಶ್, ನಿರ್ದೇಶಕ ಪ್ರಶಾಂತ್ ನೀಲ್, ನಾಯಕಿ ಮತ್ತು ಚಿತ್ರತಂಡದ ಹಲವರು ಖಾಸಗಿ ವಿಮಾನದಲ್ಲಿ ಇಂದಿನಿಂದ ಪ್ರಯಾಣ ಬೆಳೆಸಿದ್ದಾರೆ. ಒಟ್ಟು ಒಂದು ವಾರಗಳ ಕಾಲ ಬೇರೆ ಬೇರೆ ರಾಜ್ಯಗಳಲ್ಲಿ ಸಿನಿಮಾ ಪ್ರಚಾರ ಮಾಡಲಿದೆ ತಂಡ. ಇದನ್ನೂ ಓದಿ : ಸೆನ್ಸಾರ್ ಪಾಸ್ ಆದ ರಾಕಿಭಾಯ್ : ಕೆಜಿಎಫ್ 1 ಗಿಂತ ಕೆಜಿಎಫ್ 2 ಸಿನಿಮಾ 13 ನಿಮಿಷ ಉದ್ದ

    ಅಂದಹಾಗೆ ಇಂದು ಕೆಜಿಎಫ್‍ ಚಾಪ್ಟರ್ 2ಕ್ಕೆ ಸೆನ್ಸಾರ್ ಆಗಿದ್ದು, ಪ್ರಾದೇಶಿಕ ಚಲನಚಿತ್ರ ಪ್ರಮಾಣಪತ್ರ ಮಂಡಳಿಯು ಯು/ಎ ಸರ್ಟಿಫಿಕೇಟ್ ನೀಡಿದೆ. ಹಾಗಾಗಿ ಮಕ್ಕಳು ಕೂಡ ತಮ್ಮ ಪಾಲಕರ ಜತೆ ಈ ಸಿನಿಮಾವನ್ನು ನೋಡಬಹುದಾಗಿದೆ. ಸೆನ್ಸಾರ್ ಮಂಡಳಿಯು ನೀಡಿರುವ ಪ್ರಮಾಣ ಪತ್ರದಲ್ಲಿ ನಮೂದಾಗಿರುವಂತೆ ಕಳೆದ ಕೆಜಿಎಫ್ 1 ಚಿತ್ರಗಿಂತಲೂ ಚಾಪ್ಟರ್ 2 ಸಿನಿಮಾ ಹದಿಮೂರು ನಿಮಿಷಗಳ ಕಾಲ ಹೆಚ್ಚಿದೆ. ಕೆಜಿಎಫ್ 1 ಚಿತ್ರ 2 ಗಂಟೆ 35 ನಿಮಿಷಗಳ ಕಾಲಾವಧಿಯಲ್ಲಿತ್ತು. ಚಾಪ್ಟರ್ 2  ಸಿನಿಮಾ 2 ಗಂಟೆ 48 ನಿಮಿಷದ್ದಾಗಿದೆ. ಈ ಪ್ರಮಾಣ ಪತ್ರದಲ್ಲಿ ಇನ್ನೂ ಹಲವು ಇಂಟ್ರಸ್ಟಿಂಗ್ ಸಂಗತಿಗಳಿವೆ. ಅವು ಏನು ಅನ್ನುವುದನ್ನೂ ನೀವೇ ಸೂಕ್ಷ್ಮವಾಗಿ ಗಮನಿಸಿ. ಇದನ್ನೂ ಓದಿ : ಏಪ್ರಿಲ್ 2ಕ್ಕೆ ಗಣೇಶ್ ನಟನೆಯ ಹೊಸ ಸಿನಿಮಾದ ಟೈಟಲ್ ಲಾಂಚ್

    ಯಶ್ ನಟನೆಯ ‘ಕೆಜಿಎಫ್ 2’ ರಿಲೀಸ್ ಗೆ ಭರದಿಂದ ಸಿದ್ಧತೆ ನಡೆದಿದೆ. ಹಲವು ಭಾಷೆಗಳಲ್ಲಿ ಈ ಸಿನಿಮಾ ರಿಲೀಸ್ ಆಗುತ್ತಿರುವುದರಿಂದ ಆಯಾ ಭಾಷೆಯ ಅಭಿಮಾನಿಗಳು ಸಿನಿಮಾವನ್ನು ನೋಡಲು ಕಾತುರದಿಂದ ಕಾಯುತ್ತಿದ್ದಾರೆ. ಏಪ್ರಿಲ್ 14ರಂದು ವಿಶ್ವದಾದ್ಯಂತ ಈ ಸಿನಿಮಾ ರಿಲೀಸ್ ಆಗುತ್ತಿದೆ. ಇದನ್ನೂ ಓದಿ : ನನ್ನ ಹತ್ತಿರ ಡೇಂಜರ್ಸ್ ಹುಡುಗೀರು ಇದ್ದಾರೆ- ರಾಜಮೌಳಿಗೆ ರಾಮ್ ಗೋಪಾಲ್ ವರ್ಮಾ ಹೀಗಂದಿದ್ಯಾಕೆ..?

    ಕೆಜಿಎಫ್ 2 ಸಿನಿಮಾ ಕನ್ನಡ, ಮಲಯಾಳಂ, ಹಿಂದಿ, ತಮಿಳು ಮತ್ತು ತೆಲುಗಿನಲ್ಲಿ ಬಿಡುಗಡೆ ಆಗುತ್ತಿದ್ದು ವಿಶ್ವದಾದ್ಯಂತ ಏಳು ಸಾವಿರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ರಿಲೀಸ್ ಮಾಡುವ ಪ್ಲ್ಯಾನ್ ಮಾಡಲಾಗಿದೆ ಅಂತಾರೆ ನಿರ್ಮಾಪಕ ವಿಜಯ್ ಕಿರಗಂದೂರು. ಕರ್ನಾಟಕದಲ್ಲೇ 450ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ರಿಲೀಸ್ ಆದರೆ, ತಮಿಳಿನಲ್ಲಿ ಸಾವಿರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಕೆಜಿಎಫ್ 2 ಪ್ರದರ್ಶನ ಕಾಣಲಿದೆ. ಹಾಗೆಯೇ ವಿವಿಧ ಭಾಷೆಯ ಚಿತ್ರಮಂದಿರಗಳಲ್ಲಿ ಸಾವಿರ ಸಾವಿರ ಥಿಯೇಟರ್ ನಲ್ಲಿ ಈ ಸಿನಿಮಾ ರಿಲೀಸ್ ಆಗುತ್ತಿರುವುದು ವಿಶೇಷ.

  • ಸೆನ್ಸಾರ್ ಪಾಸ್ ಆದ ರಾಕಿಭಾಯ್ : ಕೆಜಿಎಫ್ 1 ಗಿಂತ ಕೆಜಿಎಫ್ 2 ಸಿನಿಮಾ 13 ನಿಮಿಷ ಉದ್ದ

    ಸೆನ್ಸಾರ್ ಪಾಸ್ ಆದ ರಾಕಿಭಾಯ್ : ಕೆಜಿಎಫ್ 1 ಗಿಂತ ಕೆಜಿಎಫ್ 2 ಸಿನಿಮಾ 13 ನಿಮಿಷ ಉದ್ದ

    ಶ್ ನಟನೆ ಕೆಜಿಎಫ್ ಚಾಪ್ಟರ್ 2 ಸಿನಿಮಾ ಸೆನ್ಸಾರ್ ಅಂಗಳದಲ್ಲಿತ್ತು. ಇದೀಗ ಸೆನ್ಸಾರ್ ಆಗಿದ್ದು, ಪ್ರಾದೇಶಿಕ ಚಲನಚಿತ್ರ ಪ್ರಮಾಣಪತ್ರ ಮಂಡಳಿಯು ಯು/ಎ ಸರ್ಟಿಫಿಕೇಟ್ ನೀಡಿದೆ. ಹಾಗಾಗಿ ಮಕ್ಕಳು ಕೂಡ ತಮ್ಮ ಪಾಲಕರ ಜತೆ ಈ ಸಿನಿಮಾವನ್ನು ನೋಡಬಹುದಾಗಿದೆ. ಇದನ್ನೂ ಓದಿ : ಏಪ್ರಿಲ್ 2ಕ್ಕೆ ಗಣೇಶ್ ನಟನೆಯ ಹೊಸ ಸಿನಿಮಾದ ಟೈಟಲ್ ಲಾಂಚ್

    ಸೆನ್ಸಾರ್ ಮಂಡಳಿಯು ನೀಡಿರುವ ಪ್ರಮಾಣ ಪತ್ರದಲ್ಲಿ ನಮೂದಾಗಿರುವಂತೆ ಕಳೆದ ಕೆಜಿಎಫ್ 1 ಚಿತ್ರಗಿಂತಲೂ ಚಾಪ್ಟರ್ 2 ಸಿನಿಮಾ ಹದಿಮೂರು ನಿಮಿಷಗಳ ಕಾಲ ಹೆಚ್ಚಿದೆ. ಕೆಜಿಎಫ್ 1 ಚಿತ್ರ 2 ಗಂಟೆ 35 ನಿಮಿಷಗಳ ಕಾಲಾವಧಿಯಲ್ಲಿತ್ತು. ಚಾಪ್ಟರ್ 2  ಸಿನಿಮಾ 2 ಗಂಟೆ 48 ನಿಮಿಷದ್ದಾಗಿದೆ. ಈ ಪ್ರಮಾಣ ಪತ್ರದಲ್ಲಿ ಇನ್ನೂ ಹಲವು ಇಂಟ್ರಸ್ಟಿಂಗ್ ಸಂಗತಿಗಳಿವೆ. ಅವು ಏನು ಅನ್ನುವುದನ್ನೂ ನೀವೇ ಸೂಕ್ಷ್ಮವಾಗಿ ಗಮನಿಸಿ. ಇದನ್ನೂ ಓದಿ : ನನ್ನ ಹತ್ತಿರ ಡೇಂಜರ್ಸ್ ಹುಡುಗೀರು ಇದ್ದಾರೆ- ರಾಜಮೌಳಿಗೆ ರಾಮ್ ಗೋಪಾಲ್ ವರ್ಮಾ ಹೀಗಂದಿದ್ಯಾಕೆ..?

    ಯಶ್ ನಟನೆಯ ‘ಕೆಜಿಎಫ್ 2’ ರಿಲೀಸ್ ಗೆ ಭರದಿಂದ ಸಿದ್ಧತೆ ನಡೆದಿದೆ. ಹಲವು ಭಾಷೆಗಳಲ್ಲಿ ಈ ಸಿನಿಮಾ ರಿಲೀಸ್ ಆಗುತ್ತಿರುವುದರಿಂದ ಆಯಾ ಭಾಷೆಯ ಅಭಿಮಾನಿಗಳು ಸಿನಿಮಾವನ್ನು ನೋಡಲು ಕಾತುರದಿಂದ ಕಾಯುತ್ತಿದ್ದಾರೆ. ಏಪ್ರಿಲ್ 14ರಂದು ವಿಶ್ವದಾದ್ಯಂತ ಈ ಸಿನಿಮಾ ರಿಲೀಸ್ ಆಗುತ್ತಿದೆ. ಇದನ್ನೂ ಓದಿ:  ‘ಕೆಜಿಎಫ್ 2’ ರಿಲೀಸ್ ದಿನವೇ ಪುನೀತ್ ‘ಜೇಮ್ಸ್’ ಸಿನಿಮಾ ಓಟಿಟಿಯಲ್ಲಿ ರಿಲೀಸ್

    ಕೆಜಿಎಫ್ 2 ಸಿನಿಮಾ ಕನ್ನಡ, ಮಲಯಾಳಂ, ಹಿಂದಿ, ತಮಿಳು ಮತ್ತು ತೆಲುಗಿನಲ್ಲಿ ಬಿಡುಗಡೆ ಆಗುತ್ತಿದ್ದು ವಿಶ್ವದಾದ್ಯಂತ ಏಳು ಸಾವಿರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ರಿಲೀಸ್ ಮಾಡುವ ಪ್ಲ್ಯಾನ್ ಮಾಡಲಾಗಿದೆ ಅಂತಾರೆ ನಿರ್ಮಾಪಕ ವಿಜಯ್ ಕಿರಗಂದೂರು. ಕರ್ನಾಟಕದಲ್ಲೇ 450ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ರಿಲೀಸ್ ಆದರೆ, ತಮಿಳಿನಲ್ಲಿ ಸಾವಿರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಕೆಜಿಎಫ್ 2 ಪ್ರದರ್ಶನ ಕಾಣಲಿದೆ. ಹಾಗೆಯೇ ವಿವಿಧ ಭಾಷೆಯ ಚಿತ್ರಮಂದಿರಗಳಲ್ಲಿ ಸಾವಿರ ಸಾವಿರ ಥಿಯೇಟರ್ ನಲ್ಲಿ ಈ ಸಿನಿಮಾ ರಿಲೀಸ್ ಆಗುತ್ತಿರುವುದು ವಿಶೇಷ.

  • ಪುನೀತ್ ರಾಜ್‌ಕುಮಾರ್ ಮನೆಗೆ ಭೇಟಿ ನೀಡಿದ ಸಂಜಯ್ ದತ್

    ಪುನೀತ್ ರಾಜ್‌ಕುಮಾರ್ ಮನೆಗೆ ಭೇಟಿ ನೀಡಿದ ಸಂಜಯ್ ದತ್

    ಕೆಜಿಎಫ್ 2 ಸಿನಿಮಾದ ಟ್ರೈಲರ್ ಬಿಡುಗಡೆಗೆ ಆಗಮಿಸಿರುವ ಬಾಲಿವುಡ್ ಖ್ಯಾತ ನಟ ಸಂಜಯ್ ದತ್ ಇಂದು ಪುನೀತ್ ರಾಜ್ ಕುಮಾರ್ ನಿವಾಸಕ್ಕೆ ಭೇಟಿ ಮಾಡಿದ್ದಾರೆ. ಅಪ್ಪು ಮನೆಯಲ್ಲೇ ರಾಘವೇಂದ್ರ ರಾಜ್ ಕುಮಾರ್ ಮತ್ತು ಕುಟುಂಬ ಸಂಜಯ್ ದತ್ ಅವರನ್ನು ಭೇಟಿ ಮಾಡಿದೆ.

    ಈ ಸಂದರ್ಭದಲ್ಲಿ ರಾಘವೇಂದ್ರ ರಾಜ್ ಕುಮಾರ್ ಪತ್ನಿ ಮತ್ತು ಮಕ್ಕಳಾದ ವಿನಯ್ ರಾಜ್ ಕುಮಾರ್ ಕೂಡ ಅಲ್ಲಿದ್ದರು. ಕೆಲ ಹೊತ್ತು ಪುನೀತ್ ಕುಟುಂಬದ ಯೋಗಕ್ಷೇತ್ರ ವಿಚಾರಿಸಿ ಮತ್ತೆ ಅವರು ಉಳಿದುಕೊಂಡಿರುವ ಹೋಟೆಲ್ ಗೆ ಆಗಮಿಸಿದರು ಸಂಜಯ್ ದತ್. ಇದನ್ನು ಓದಿ : ಚಂದನವನ ವಿಮರ್ಶಕರ ಪ್ರಶಸ್ತಿ: ರಾಜ್ ಬಿ ಶೆಟ್ಟಿ ಅತ್ಯುತ್ತಮ ನಟ, ಗಾನವಿ ಲಕ್ಷ್ಮಣ್ ನಟಿ, ಉಳಿದ ಪ್ರಶಸ್ತಿ ವಿವರ

    ಕೆಜಿಎಫ್ 2 ಸಿನಿಮಾದ ಟ್ರೈಲರ್ ಇಂದು ಸಂಜೆ 6.40ಕ್ಕೆ ಯಶ್ ನಟನೆಯ ಕೆಜಿಎಫ್ 2 ಸಿನಿಮಾದ ಟ್ರೈಲರ್ ಬಿಡುಗಡೆ ಆಗಲಿದೆ. ಐದು ಭಾಷೆಗಳಲ್ಲಿ  ಸಿನಿಮಾ ಬಿಡುಗಡೆ ಆಗುತ್ತಿದ್ದು, ಹಾಗಾಗಿ ಐದು ಭಾಷೆಯಲ್ಲೂ ಏಕಕಾಲಕ್ಕೆ ಟ್ರೈಲರ್ ರಿಲೀಸ್ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ ನಿರ್ದೇಶಕ ಪ್ರಶಾಂತ್ ನೀಲ್. ತೆಲುಗಿನ ಖ್ಯಾತ ನಟ ರಾಮ್ ಚರಣ್ ತೇಜ ಕೆಜಿಎಫ್‍ 2 ತೆಲುಗು ಸಿನಿಮಾದ ಟ್ರೈಲರ್ ರಿಲೀಸ್ ಮಾಡಿದರೆ, ತಮಿಳಿನ ಖ್ಯಾತ ನಟ ಸೂರ್ಯ ಕೆಜಿಎಫ್ 2 ತಮಿಳು ಸಿನಿಮಾದ ಟ್ರೈಲರ್ ಬಿಡುಗಡೆ ಮಾಡಲಿದ್ದಾರೆ. ಕೆಜಿಎಫ್ 2 ಮಲಯಾಳಂ ಟ್ರೈರಲ್ ಅನ್ನು ಅಲ್ಲಿನ ಖ್ಯಾತ ನಟ ಪೃಥ್ವಿರಾಜ್ ರಿಲೀಸ್ ಮಾಡಲಿದ್ದಾರೆ ಎಂದು ಹೊಂಬಾಳೆ ಫಿಲ್ಮ್ ಹೇಳಿದೆ.  ಈ ಟ್ರೈಲರ್ ರಿಲೀಸ್ ಅನ್ನು ವಿಶೇಷ ರೀತಿಯಲ್ಲಿ ಬಿಡುಗಡೆಗೆ ಸಿದ್ಧತೆ ಮಾಡಿಕೊಂಡಿದ್ದು, ಯಶ್ ಅಭಿಮಾನಿಗಳು ರಾಜ್ಯದ ನಾನಾ ಕಡೆ ಹಬ್ಬದಂತೆ ಆಚರಿಸುತ್ತಿದ್ದಾರೆ. ಇದನ್ನೂ ಓದಿ : ಕಾಂಗ್ರೆಸ್ ಅವಧಿಯಲ್ಲಿ ನಡೆದ ಭಯೋತ್ಪಾದನೆ ತಿಳಿಯಲು ‘ದಿ ಕಾಶ್ಮೀರ್ ಫೈಲ್ಸ್’ ನೋಡಿ: ಅಮಿತ್ ಶಾ

    ಹಾಗೆಯೇ ಹಿಂದಿಯಲ್ಲೂ ಈ ಟ್ರೈಲರ್ ಬಿಡುಗಡೆ ಆಗುತ್ತಿದ್ದು, ಅದನ್ನು ಬಾಲಿವುಡ್ ಖ್ಯಾತ ನಟ ಫರಾನ್ ಅಖ್ತರ್ ರಿಲೀಸ್ ಮಾಡುತ್ತಿದ್ದಾರೆ. ಈಗಾಗಲೇ ನಾಲ್ಕು ಟ್ರೈಲರ್ ಗಳನ್ನು ಯಾರೆಲ್ಲ ರಿಲೀಸ್ ಮಾಡಲಿದ್ದಾರೆ ಎನ್ನುವ ಮಾಹಿತಿಯನ್ನು ಚಿತ್ರತಂಡ ಹಂಚಿಕೊಂಡಿದೆ. ಕನ್ನಡದ ಟ್ರೈಲರ್ ರಿಲೀಸ್ ಯಾರು ಮಾಡಲಿದ್ದಾರೆ ಎನ್ನುವ ಮಾಹಿತಿಯನ್ನು ಇನ್ನೂ ಹಂಚಿಕೊಂಡಿಲ್ಲ. ಇವತ್ತು ಟ್ರೈಲರ್ ಬಿಡುಗಡೆಯ ಮುಖ್ಯ ಅತಿಥಿಗಳಾಗಿ ಶಿವರಾಜ್ ಕುಮಾರ್ ಮತ್ತು ಸಚಿವ ಅಶ್ವತ್ಥ್ ನಾರಾಯಣ ಭಾಗಿ ಆಗುತ್ತಿರುವುದರಿಂದ ಇವರೇ ಬಹುಶಃ ಟ್ರೈಲರ್ ಬಿಡುಗಡೆ ಮಾಡಬಹುದು ಎನ್ನಲಾಗುತ್ತಿದೆ.

  • ತೂಫಾನಿಗೆ ಸೋಷಿಯಲ್ ಮೀಡಿಯಾ ಗಡಗಡ: ಪೂಜೆಗೆ ಬಂದ ಯಶ್ ಅಭಿಮಾನಿಗಳು

    ತೂಫಾನಿಗೆ ಸೋಷಿಯಲ್ ಮೀಡಿಯಾ ಗಡಗಡ: ಪೂಜೆಗೆ ಬಂದ ಯಶ್ ಅಭಿಮಾನಿಗಳು

    ಕೆಜಿಎಫ್ 2 ಸಿನಿಮಾದ ಮೊದಲ ಲಿರಿಕಲ್ ಹಾಡು ‘ತೂಫಾನ್’ ಇಂದು ಬಿಡುಗಡೆ ಆಗಿದೆ. ರಿಲೀಸ್ ಆದ ಕೆಲವೇ ಕ್ಷಣಗಳಲ್ಲಿ ಲಕ್ಷ ಲಕ್ಷ ವಿವ್ಯ್ಸು ಪಡೆದುಕೊಂಡಿದೆ. ಸೋಷಿಯಲ್ ಮೀಡಿಯಾದಲ್ಲಿ ಈ ತೂಫಾನ್ ಟ್ರೆಂಡ್ ಆಗಿದೆ. ‘ತೂಫಾನ್’ ಕ್ಯಾಚಿ ಶಬ್ದವೂ ಆಗಿರುವುದರಿಂದ ತಾಂತ್ರಿಕವಾಗಿ ಹುಡುಕಲು ಅದು ವರವೂ ಆಗಿದೆ.

    ತೂಫಾನ್ ಹಾಡು ಬಿಡುಗಡೆ ಆಗುತ್ತಿದ್ದಂತೆಯೇ ಯಶ್ ಅಭಿಮಾನಿಗಳು ಕೆಜಿಎಫ್ 2 ಸಿನಿಮಾ ಹಿಟ್ ಆಗಲಿ ಎಂದು ಬೆಂಗಳೂರಿನ ದೊಡ್ಡ ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಅಲ್ಲಿ ಸಿಹಿ ಕೂಡ ಹಂಚಿದ್ದಾರೆ ಯಶ್ ಅವರ ಮಹಿಳಾ ಅಭಿಮಾನಿಗಳು.  ಇದನ್ನೂ ಓದಿ : ಅಮೆರಿಕಾದಲ್ಲಿ ಅಪ್ಪು ಬರ್ತಡೇ, ಪುನೀತ್ ರಾಜ್ ಕುಮಾರ್ ಮಗಳೇ ಅತಿಥಿ

    ಇದೊಂದು ನಾಯಕನ ಬಿಲ್ಡ್ ಅಪ್ ರೀತಿಯ ಗೀತೆಯಾಗಿದ್ದು, ರವಿ ಬಸ್ರೂರು ಅವರ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದಿದೆ. ರವಿ ಅವರೇ ಸಾಹಿತ್ಯ ಬರೆದದ್ದು ಮತ್ತೊಂದು ವಿಶೇಷ. ಮತ್ತೊಂದು ವಿಶೇಷ ಅಂದರೆ, ಇದೇ ಮೊದಲ ಬಾರಿಗೆ ಇಷ್ಟೊಂದು ಗಾಯಕರು ಒಟ್ಟಿಗೆ ಸೇರಿ ಸಿನಿಮಾ ಹಾಡೊಂದನ್ನು ಹಾಡಿದ್ದಾರೆ. ಇದನ್ನೂ ಓದಿ : ಕನ್ನಡದ ‘ದಸರಾ’ ವರ್ಸಸ್ ತೆಲುಗಿನ ‘ದಸರಾ’: ಯಾರಿಗೆ ಸಿಗತ್ತೆ ದಸರಾ ಟೈಟಲ್?

    ಸಂತೋಷ್ ವೆಂಕಿ, ಮೋಹನ್ ಕೃಷ್ಣ, ಸಚಿನ್ ಬಸ್ರೂರು, ಪುನೀರ್ ರುದ್ರನಾಗ್, ವರ್ಷ ಆಚಾರ್ಯ ಜತೆ ಬಾಲ ಗಾಯಕರಾದ ಗಿರಿಧರ್ ಕಾಮತ್, ಸಚಿನ್ ಕಾಮತ್, ನಿಶಾಂತ್ ಕಿಣಿ, ಭರತ್ ಭಟ್, ಅನಘ ನಾಯಕ್, ಅವಿನಿ ಭಟ್, ಸ್ವಾತಿ ಕಾಮತ್, ಶಿವಾನಂದ್ ನಾಯಕ್, ಕೀರ್ತನ್ ಬಸ್ರೂರು ಈ ಹಾಡಿಗೆ ಧ್ವನಿಯಾಗಿದ್ದಾರೆ.

  • ಸರ್ರಂತ ಸುಡುವ ಜ್ವಾಲಾಗ್ನಿ ಆಗಿ ಬಂದ ಈ ತೂಫಾನ್: ಕೆಜಿಎಫ್ 2 ಫಸ್ಟ್ ಲಿರಿಕಲ್ ಹಾಡು ರಿಲೀಸ್

    ಸರ್ರಂತ ಸುಡುವ ಜ್ವಾಲಾಗ್ನಿ ಆಗಿ ಬಂದ ಈ ತೂಫಾನ್: ಕೆಜಿಎಫ್ 2 ಫಸ್ಟ್ ಲಿರಿಕಲ್ ಹಾಡು ರಿಲೀಸ್

    ಶ್ ನಟನೆಯ ಕೆಜಿಎಫ್ 2 ಸಿನಿಮಾದ ‘ತೂಫಾನ್’ ಹಾಡಿಗೆ ಅಭಿಮಾನಿಗಳು ಕಾದಿದ್ದರು. ಕೊನೆಗೂ ಅಂದುಕೊಂಡ ವೇಳೆಗೆ ಹಾಡನ್ನು ರಿಲೀಸ್ ಮಾಡಿದೆ ಹೊಂಬಾಳೆ ಫಿಲ್ಮಸ್. ಇದು ಕೆಜಿಎಫ್ 2 ಸಿನಿಮಾದ ಬಿಡುಗಡೆ ಆಗುತ್ತಿರುವ ಮೊದಲ ಹಾಡಾಗಿದ್ದರಿಂದ, ಯಾವ ರೀತಿಯ ಸಾಂಗ್ ಇರಬಹುದು ಎನ್ನುವ ಕುತೂಹಲ ಇದ್ದೇ ಇತ್ತು. ಅದಕ್ಕೀಗ ತೆರೆ ಬಿದ್ದಿದೆ.

    ಇದೊಂದು ನಾಯಕನ ಬಿಲ್ಡ್ ಅಪ್ ರೀತಿಯ ಗೀತೆಯಾಗಿದ್ದು, ರವಿ ಬಸ್ರೂರು ಅವರ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದಿದೆ. ರವಿ ಅವರೇ ಸಾಹಿತ್ಯ ಬರೆದದ್ದು ಮತ್ತೊಂದು ವಿಶೇಷ. ಮತ್ತೊಂದು ವಿಶೇಷ ಅಂದರೆ, ಇದೇ ಮೊದಲ ಬಾರಿಗೆ ಇಷ್ಟೊಂದು ಗಾಯಕರು ಒಟ್ಟಿಗೆ ಸೇರಿ ಸಿನಿಮಾ ಹಾಡೊಂದನ್ನು ಹಾಡಿದ್ದಾರೆ. ಇದನ್ನೂ ಓದಿ : ‘ದಿ ಕಾಶ್ಮೀರ್ ಫೈಲ್ಸ್’ ರಿಯಲ್ ಸ್ಟೋರಿ : ಅಕ್ಕಿ ಡ್ರಮ್ ನಲ್ಲಿ ಕೊಲ್ಲಲ್ಪಟ್ಟ ನಿಜವಾದ ಕಾಶ್ಮೀರಿ ಪಂಡಿತ ಇವರು

    ಸಂತೋಷ್ ವೆಂಕಿ, ಮೋಹನ್ ಕೃಷ್ಣ, ಸಚಿನ್ ಬಸ್ರೂರು, ಪುನೀರ್ ರುದ್ರನಾಗ್, ವರ್ಷ ಆಚಾರ್ಯ ಜತೆ ಬಾಲ ಗಾಯಕರಾದ ಗಿರಿಧರ್ ಕಾಮತ್, ಸಚಿನ್ ಕಾಮತ್, ನಿಶಾಂತ್ ಕಿಣಿ, ಭರತ್ ಭಟ್, ಅನಘ ನಾಯಕ್, ಅವಿನಿ ಭಟ್, ಸ್ವಾತಿ ಕಾಮತ್, ಶಿವಾನಂದ್ ನಾಯಕ್, ಕೀರ್ತನ್ ಬಸ್ರೂರು ಈ ಹಾಡಿಗೆ ಧ್ವನಿಯಾಗಿದ್ದಾರೆ. ಇದನ್ನೂ ಓದಿ: ಮೌಳಿಯ ರಂಗೀನ್ ಲೋಕದಲ್ಲಿ ಮಿಂದೆದ್ದ ಜನಸಾಗರ… ಒಂದೇ ವೇದಿಕೆಯಲ್ಲಿ ಸೌತ್ ಸ್ಟಾರ್ಸ್‍ಗಳ ಸಮಾಗಮ

    ಸರ್ರಂತ ಸುಡುವ ಜ್ವಾಲಾಗ್ನಿ ಎಂದು ಶುರುವಾಗುವ ಈ ಗೀತೆಯು ನಾಯಕನ ಹೀರೋಯಿಸಂ ಅನ್ನು ಬಿಂಬಿಸುತ್ತಾ ಹೋಗುತ್ತದೆ. ಕಥಾ ನಾಯಕನ ಒಂದು ರೀತಿಯ ಚರಿತ್ರೆಯಾಗಿಯೂ ಈ ಹಾಡಿನಲ್ಲಿ ಕಟ್ಟಿ ಕೊಡುತ್ತಾ ಹೋಗಿದ್ದಾರೆ ನಿರ್ದೇಶಕ ಪ್ರಶಾಂತ್ ನೀಲ್.  ಲಹರಿ ಮ್ಯೂಸಿಕ್ ನಲ್ಲಿ ಈ ಹಾಡು ಬಿಡುಗಡೆ ಆಗಿದ್ದು, ರಿಲೀಸ್ ಆದ ಕೆಲವೇ ಗಂಟೆಗಳಲ್ಲೇ ಟ್ರೆಂಡ್ ಕ್ರಿಯೇಟ್ ಮಾಡಿದೆ. ಕನ್ನಡದಲ್ಲಿ ಮಾತ್ರವಲ್ಲ, ತಮಿಳು, ತೆಲುಗು, ಹಿಂದಿ, ಮಲಯಾಳಂ ಸೇರಿದಂತೆ ಹಲವು ಭಾಷೆಗಳಲ್ಲೂ ಈ ಹಾಡು ರಿಲೀಸ್ ಆಗಿದೆ.

  • ‘ಮೇ ಐ ಕಮ್ ಇನ್’ – ಕೆಜಿಎಫ್ ರಿಲೀಸ್ ಡೇಟ್ ಔಟ್

    ‘ಮೇ ಐ ಕಮ್ ಇನ್’ – ಕೆಜಿಎಫ್ ರಿಲೀಸ್ ಡೇಟ್ ಔಟ್

    ಬೆಂಗಳೂರು: ಭಾರತ ಚಿತ್ರರಂಗದ ಬಹುನಿರಿಕ್ಷೀತ ಚಿತ್ರ ಕೆಜಿಎಫ್-2 ಚಿತ್ರ ಬಿಡುಗಡೆಯಾಗುವ ದಿನ ರಿವೀಲ್ ಆಗಿದೆ. ಕೆಜಿಎಫ್-2 ಚಿತ್ರ ಇದೇ ವರ್ಷ ಆಕ್ಟೋಬರ್ 23ರಂದು ಬಿಡುಗಡೆಯಾಗಲಿದೆ.

    ಕೆಜಿಎಫ್ ಚಾಪ್ಟರ್ 1 2018ರ ಡಿಸೆಂಬರ್ 21ರಂದು ದೇಶ, ವಿದೇಶಗಳಲ್ಲಿ ಐದು ಭಾಷೆಗಳಲ್ಲಿ ತೆರೆಕಂಡು ಸೂಪರ್ ಹಿಟ್ ಫಿಲ್ಮ್ ಆಗಿ ಹೊರಹೊಮ್ಮಿತ್ತು. ಇದೀಗ ಕೆಜಿಎಫ್ ಚಾಪ್ಟರ್ 2 ಸಿನಿಮಾ ಚಿತ್ರೀಕರಣ ಪೂರ್ಣಗೊಂಡಿದ್ದು, ಪೋಸ್ಟ್ ಪ್ರೊಡಕ್ಷನ್ ನಡೆಯುತ್ತಿದ್ದು ದಸರಾ ಹಬ್ಬದ ಸಮಯದಲ್ಲಿ ಸಿನಿಮಾ ಬಿಡುಗಡೆಯಾಗಲಿದೆ.

    ಇಡೀ ಭಾರತ ಚಿತ್ರರಂಗವೇ ಕನ್ನಡ ಸಿನಿಮಾ ಕಡೆ ತಿರುಗಿ ನೋಡುವಂತೆ ಮಾಡಿದ್ದ ಕೆಜಿಎಫ್ ಚಾಪ್ಟರ್ 1 ಪ್ಯಾನ್ ಇಂಡಿಯಾ ಲೆವೆಲ್‍ನಲ್ಲಿ ಬ್ಲಾಕ್ ಬಸ್ಟರ್ ಹಿಟ್ ಆಗಿತ್ತು. ಈ ವಿಚಾರವಾಗಿ ಕೆಜಿಎಫ್-2 ಚಿತ್ರದ ವಿಡಿಯೋವೊಂದನ್ನು ಯಶ್ ಅವರು ಟ್ವೀಟ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಕೆಜಿಎಫ್-2 ಸಿನಿಮಾದ ಬಿಡುಗಡೆ ದಿನಾಂಕವನ್ನು ಹಾಕಲಾಗಿದೆ.

    ಬಾಲಿವುಡ್ ನಟ ಸಂಜಯ್ ದತ್ ಹುಟ್ಟು ಹಬ್ಬದಂದು ಚಿತ್ರತಂಡ ಅಧೀರನ ಫಸ್ಟ್ ಲುಕ್ ಬಿಡುಗಡೆ ಮಾಡುವ ಮೂಲಕ ದತ್ ಗೆ ವಿಶೇಷ ಉಡುಗೊರೆ ನೀಡಿತ್ತು. ಬಿಡುಗಡೆಯ ದಿನಾಂಕ ಪ್ರಕಟವಾಗುವುದರೊಂದಿಗೆ ಕೆಜಿಎಫ್-2 ಸಿನಿಮಾ ಬಿಡುಗಡೆ ಯಾವಾಗ ಎಂಬ ಕುತೂಹಲಕ್ಕೆ ಕೊನೆಗೂ ತೆರೆ ಬಿದ್ದಂತಾಗಿದೆ.