Tag: Prashant Neil

  • ಸಾವಿರಾರು ಕೋಟಿ ಬಾಚಿದ ‘ಕೆಜಿಎಫ್ 2’ ಸಿನಿಮಾ ಆಗಸ್ಟ್ 20ರಂದು ಜೀ  ಕನ್ನಡದಲ್ಲಿ ಪ್ರಸಾರ

    ಸಾವಿರಾರು ಕೋಟಿ ಬಾಚಿದ ‘ಕೆಜಿಎಫ್ 2’ ಸಿನಿಮಾ ಆಗಸ್ಟ್ 20ರಂದು ಜೀ ಕನ್ನಡದಲ್ಲಿ ಪ್ರಸಾರ

    ಕೆಜಿಎಫ್ ಚಾಪ್ಟರ್ 2, ಇಡೀ ಜಗತ್ತು ಒಮ್ಮೆಲೇ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿದ ಹೆಮ್ಮೆಯ ಇಂಡಿಯಾದ ಬ್ಲಾಕ್ ಬಸ್ಟರ್  ಸಿನಿಮಾ. ಕಥೆ, ತಾಂತ್ರಿಕತೆ ,ಶ್ರೀಮಂತಿಕೆ ಮತ್ತು ಕಲಾವಿದರ ಆಯ್ಕೆಯಲ್ಲಿ ಚಾಪ್ಟರ್ 1ನ್ನೇ ಮೀರಿಸುವಂತೆ ತೆರೆಗೆ ಅಪ್ಪಳಿಸಿದ ಈ ಚಿತ್ರ ಬಿಡುಗಡೆಗೊಂಡ ಎಲ್ಲಾ ಭಾಷೆಗಳಲ್ಲೂ ಯಶಸ್ವಿಯಾಗಿದ್ದು ಈಗ ಇತಿಹಾಸ . ಇದೀಗ ಈ ಸಿನಿಮಾ ಕನ್ನಡ ಕಿರುತೆರೆಗೆ ಸಿರಿತನವನ್ನು ಪರಿಚಯಿಸಿದ ಕನ್ನಡಿಗರ ನೆಚ್ಚಿನ ನಂಬರ್ 1 ಮನರಂಜನಾ ವಾಹಿನಿ  ಜೀ ಕನ್ನಡದಲ್ಲಿ ಇದೇ ಆಗಸ್ಟ್ 20 ರಂದು ಶನಿವಾರ ಸಂಜೆ 7 ಗಂಟೆಗೆ ಪ್ರಸಾರವಾಗುತ್ತಿದೆ .

    ಸ್ಯಾಂಡಲ್ ವುಡ್ ಜೊತೆಗೆ ಅತ್ಯುತ್ತಮ ನಂಟು ಹೊಂದಿರುವ ಜೀ ಕನ್ನಡ ವಾಹಿನಿ ತಮ್ಮ ವಿವಿಧ ಕಾರ್ಯಕ್ರಮಗಳ ಮೂಲಕ ಉದ್ಯಮಕ್ಕೆ ಶ್ರೇಷ್ಟ ಕಲಾವಿದರನ್ನು ಕೊಡುಗೆಯಾಗಿ ನೀಡಿರುವ ಹೆಗ್ಗಳಿಕೆ ಹೊಂದಿದೆ. ಕೆಜಿಎಫ್ 2 ಚಿತ್ರದಲ್ಲೂ ಹಲವಾರು ಜೀ ಕುಟುಂಬದ ಕಲಾವಿದರು ನಟಿಸಿರುವುದು ಇದಕ್ಕೆ ಸಾಕ್ಷಿಯಾಗಿದೆ. ಗೆಲುವಿನ ಸರದಾರ ರಾಕಿಂಗ್ ಸ್ಟಾರ್ ಯಶ್ , ಶ್ರೀನಿಧಿ ಶೆಟ್ಟಿ , ಸಂಜಯ್ ದತ್ ,ರವೀನಾ ಟಂಡನ್ , ಮಾಳವಿಕಾ ,ವಸಿಷ್ಠ ಸಿಂಹ ,ಪ್ರಕಾಶ್ ರಾಜ್  ಹೀಗೆ ದೇಶ ಕಂಡ ಅದ್ಭುತ ಕಲಾವಿದರ ದಂಡೇ ಈ ಚಿತ್ರದಲ್ಲಿದ್ದು ಪ್ರಶಾಂತ್ ನೀಲ್ ಅವರ ಅತ್ಯದ್ಭುತ ನಿರ್ದೇಶನವಿದೆ. ಚಂದನವನದ ಹೆಮ್ಮೆಯ ನಿರ್ಮಾಣ ಸಂಸ್ಥೆಯಾದ ಹೊಂಬಾಳೆ ಫಿಲಂಸ್  ಇದಕ್ಕೆ ಹಣ ಹೂಡಿಕೆ ಮಾಡಿದ್ದಾರೆ. ಭುವನ್ ಗೌಡ ಛಾಯಾಗ್ರಹಣದ ಜವಾಬ್ಧಾರಿ ಹೊತ್ತಿದ್ದರೇ  ರವಿ ಬಸ್ರೂರು ಸಂಗೀತ ಸಂಯೋಜನೆ ಮಾಡಿದ್ದಾರೆ . ಇದನ್ನೂ ಓದಿ:ಬಿಗ್ ಬಾಸ್ ಮನೆಯಲ್ಲಿ ಬಿಕ್ಕಿ ಬಿಕ್ಕಿ ಅತ್ತ ಆರ್ಯವರ್ಧನ್ ಗುರೂಜಿ

    ಚಾಪ್ಟರ್ 1 ನಿಂದಲೇ ಕನ್ನಡ ಚಿತ್ರರಂಗದ ದಿಕ್ಕು ಬದಲಿಸುವ ಸೂಚನೆ ನೀಡಿದ್ದ ಕೆಜಿಎಫ್ ಇದೀಗ ಚಾಪ್ಟರ್ 2 ನಿಂದ ಅದನ್ನು ನಿಜವಾಗಿಸಿದೆ. ಬಿಡುಗಡೆಯಾದ ಮೊದಲ ದಿನದಿಂದಲೇ ಯಶಸ್ಸಿನ ಸವಾರಿ ಮಾಡಲು ಶುರುಮಾಡಿ 1000 ಕೋಟಿಗೂ ಹೆಚ್ಚು ಆದಾಯ ಗಳಿಸಿ ದಾಖಲೆ ಸೃಷ್ಟಿಸಿದ್ದಷ್ಟೇ  ಅಲ್ಲದೇ ಶತದಿನೋತ್ಸವವನ್ನು ಆಚರಿಸಿ ಬಾಕ್ಸ್ ಆಫೀಸ್ ಧೂಳಿಪಟ ಮಾಡಿದೆ.

    ಹಬ್ಬಗಳ ಮಾಸ ಶ್ರಾವಣದಲ್ಲಿ ಕಿರು ಪರದೆಯ ಮೇಲೆ ಕೆಜಿಎಫ್ 2 ಅಬ್ಬರ ಆರಂಭವಾಗುತ್ತಿದ್ದು ಈಗಾಗಲೇ ಬಿಡುಗಡೆಯಾಗಿರುವ ವಿಶಿಷ್ಟ ಶೈಲಿಯ ಪ್ರೋಮೋಗಳು ವೀಕ್ಷಕರು ಈ ಸಿನಿಮಾ ಹಬ್ಬವನ್ನು ಕಣ್ತುಂಬಿಕೊಳ್ಳಲು ತುದಿಗಾಲಿನಲ್ಲಿ ಕಾಯುವಂತೆ ಮಾಡಿದೆ.  ಇದೇ ಆಗಸ್ಟ್ 20 ರಂದು ಶನಿವಾರ ಸಂಜೆ 7 ಗಂಟೆಗೆ ಪ್ರಸಾರವಾಗುತ್ತಿರುವ ಕೆಜಿಎಫ್ ಚಾಪ್ಟರ್ 2 ಅನ್ನು ಮನೆಮಂದಿಯೆಲ್ಲಾ ಕೂತು ನೋಡಿ ಈ ಸಿನಿಮೋತ್ಸವವನ್ನು ಆಚರಿಸಿ , ಆನಂದಿಸಿ. ಜೀ ಕನ್ನಡದ ಇತರೆ ಕಾರ್ಯಕ್ರಮಗಳಿಗೆ ನೀಡುವ ಪ್ರೋತ್ಸಾಹವನ್ನು ಮುಂದುವರೆಸಿ.

     

    Live Tv
    [brid partner=56869869 player=32851 video=960834 autoplay=true]

  • ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಬಿಡುಗಡೆಯಾಯ್ತು ‘ಸಲಾರ್’ ಚಿತ್ರದ ಪೋಸ್ಟರ್

    ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಬಿಡುಗಡೆಯಾಯ್ತು ‘ಸಲಾರ್’ ಚಿತ್ರದ ಪೋಸ್ಟರ್

    ಡೀ ದೇಶವೇ ಮೆಚ್ಚಿ ಹೆಮ್ಮೆಪಟ್ಟಂತಹ ‘ಕೆಜಿಎಫ್’ 1 ಮತ್ತು ‘ಕೆಜಿಎಫ್2’ ಚಿತ್ರಗಳ ನಿರ್ಮಾಪಕರಾದ ಹೊಂಬಾಳೆ ಫಿಲಂಸ್ ಸಂಸ್ಥೆಯಿಂದ ನಿರ್ಮಾಣವಾಗಿರುವ ಮೊದಲ ಬಾರತೀಯ ಚಿತ್ರವಾದ ಪ್ರಭಾಸ್ ಅಭಿನಯದ ‘ಸಲಾರ್’ನ ಪೋಸ್ಟರ್, ಸೋಮವಾರ 75ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಬಿಡುಗಡೆಯಾಗಿದೆ. ಹೊಂಬಾಳೆ ಫಿಲಂಸ್ನಡಿ ವಿಜಯಕುಮಾರ್ ಕಿರಗಂದೂರು ನಿರ್ಮಿಸಿ, ಪ್ರಶಾಂತ್ ನೀಲ್ ನಿರ್ದೇಶಿಸುತ್ತಿರುವ ‘ಸಲಾರ್’ ಚಿತ್ರವು 2023ರ ಸೆಪ್ಟೆಂಬರ್ 28ರಂದು ಜಗತ್ತಿನಾದ್ಯಂತ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. 400 ಕೋಟಿ ರೂ.ಗಳಿಗೂ ಮೀರಿದ ಅತೀ ದುಬಾರಿ ವೆಚ್ಚದ ಮತ್ತು ಅತೀ ನಿರೀಕ್ಷೆಯ ಈ ಚಿತ್ರವು ಈಗಾಗಲೇ ತನ್ನ ಹೈವೋಲ್ಟೇಜ್ ಆಕ್ಷನ್ ದೃಶ್ಯಗಳಿಂದ ಸಾಕಷ್ಟು ಸುದ್ದಿ ಮಾಡುತ್ತಿದೆ. ಈ ಹಿಂದೆ ಬಿಡುಗಡೆಯಾದ ಚಿತ್ರದ ಕೆಲವು ಪೋಸ್ಟರ್ಗಳು ಈಗಾಗಲೇ ಜನರ ಮನ ಗೆದ್ದಿದೆ. ಇದೀಗ ಚಿತ್ರತಂಡವು ಹೊಸ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಚಿತ್ರದ ಬಿಡುಗಡೆ ದಿನಾಂಕವನ್ನು ಅಧಿಕೃತವಾಗಿ ಘೋಷಿಸಿದೆ.

    ‘ಸಲಾರ್’ ಒಂದು ಪಕ್ಕಾ ಆಕ್ಷನ್ ಮತ್ತು ಸಾಹಸಮಯ ಚಿತ್ರವಾಗಿದ್ದು ಭಾರತವಲ್ಲದೆ, ಯೂರೋಪ್, ಆಫ್ರಿಕಾ ಮುಂತಾದ ಕಡೆ ಚಿತ್ರೀಕರಣವಾಗಲಿದೆ. ಈ ಚಿತ್ರವು ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದ್ದು, ಈಗಾಗಲೇ ಮೊದಲ ಭಾಗದ ಚಿತ್ರೀಕರಣ ಸಂಪೂರ್ಣವಾಗಿದೆ. ಚಿತ್ರತಂಡವು ಸದ್ಯದಲ್ಲೇ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ತೊಡಗಿಸಿಕೊಳ್ಳಲಿದ್ದು, ಈ ಚಿತ್ರದ ಗ್ರಾಫಿಕ್ಸ್ ಕೆಲಸದ ಜವಾಬ್ದಾರಿಯನ್ನು ವಿದೇಶದ ಪ್ರತಿಷ್ಠಿತ ಸ್ಟುಡಿಯೋಗೆ ನೀಡಲಾಗಿದ್ದು. ಭಾರತದಲ್ಲಿ ಇದುವರೆಗೂ ಯಾವ ಚಿತ್ರದಲ್ಲೂ ನೋಡದಂತಹ ಅತ್ಯುನ್ನತ ವಿಎಫ್ಎಕ್ಸ್ ಕೆಲಸವನ್ನು ಈ ಚಿತ್ರದಲ್ಲಿ ನೋಡಬಹುದು ಎಂದು ಹೇಳಲಾಗಿದೆ. ಇದನ್ನೂ ಓದಿ:ಬಾರ್ಸಿಲೋನದಲ್ಲಿ ನಯನತಾರಾ- ವಿಘ್ನೇಶ್ ಶಿವನ್ ದಂಪತಿ

    ‘ಕೆಜಿಎಫ್ 2’ ಚಿತ್ರದ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ಪ್ರಶಾಂತ್ ನೀಲ್, ಈಗ ಭಾರತದಲ್ಲೇ ಅತ್ಯಂತ ಬೇಡಿಕೆಯ ನಿರ್ದೇಶಕ ಎಂದರೆ ತಪ್ಪಾಗಲಾರದು. ಇಂಥ ಜನಪ್ರಿಯ ಮತ್ತು ಯಶಸ್ವಿ ನಿರ್ದೇಶಕರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರವು ಐದು ಭಾಷೆಗಳಲ್ಲಿ ಮೂಡಿ ಬರುತ್ತಿರುವ ಭಾರತೀಯ ಚಿತ್ರವಾಗಿದೆ. ಪ್ರಭಾಸ್ಗೆ ನಾಯಕಿಯಾಗಿ ಶ್ರುತಿ ಹಾಸನ್ ಅಭಿನಯಿಸಿದ್ದು, ಪೃಥ್ವಿರಾಜ್ ಸುಕುಮಾರನ್, ಜಗಪತಿ ಬಾಬು, ಈಶ್ವರಿ ರಾವ್, ಶ್ರೀಯಾ ರೆಡ್ಡಿ ಮುಂತಾದ ಪ್ರತಿಭಾವಂತ ಕಲಾವಿದರ ದಂಡಿದೆ.

    ‘ಸಲಾರ್’ ಚಿತ್ರವು ಈ ದೇಶ ಕಂಡು ಎರಡು ದೊಡ್ಡ ಚಿತ್ರಸರಣಿಗಳಾದ ಬಾಹುಬಲಿ ಮತ್ತು ಕೆಜಿಎಫ್ನ ಅತೀ ದೊಡ್ಡ ಸಂಗಮ ಎಂದರೆ ತಪ್ಪಿಲ್ಲ. ‘ಕೆಜಿಎಫ್’ ಚಿತ್ರತಂಡ ಒಂದು ಕಡೆಯಾದರೆ, ‘ಬಾಹುಬಲಿ’ ಚಿತ್ರದ ನಾಯಕ ಪ್ರಭಾಸ್, ಭಾರತದ ಅತೀ ದೊಡ್ಡ ಆಕ್ಷನ್ ಚಿತ್ರಕ್ಕೆ ಕೈಜೋಡಿಸಿರುವುದು ವಿಶೇಷ. ಈ ಸಂಗಮದ ಬಗ್ಗೆ ಸಾಕಷ್ಟು ಕುತೂಹಲ ಮತ್ತು ನಿರೀಕ್ಷೆಗಳಿದ್ದು, ಆಕ್ಷನ್ ಪ್ರಿಯರಿಗೆ ಇದೊಂದು ರಸದೌತಣವಾಗಲಿದೆ.

    Live Tv
    [brid partner=56869869 player=32851 video=960834 autoplay=true]

  • ಪ್ರಶಾಂತ್ ನೀಲ್ ನಿರ್ದೇಶನದ ‘ಸಲಾರ್’ ನೋಡಲು ಇನ್ನೂ ಒಂದು ವರ್ಷ ಕಾಯಬೇಕು

    ಪ್ರಶಾಂತ್ ನೀಲ್ ನಿರ್ದೇಶನದ ‘ಸಲಾರ್’ ನೋಡಲು ಇನ್ನೂ ಒಂದು ವರ್ಷ ಕಾಯಬೇಕು

    ಪ್ರಶಾಂತ್ ನೀಲ್ ಅವರ ತೆಲುಗಿನ ಚೊಚ್ಚಲ ನಿರ್ದೇಶನದ ಸಿನಿಮಾ ಸಲಾರ್ ಟೀಮ್ ನಿಂದ ಹೊಸ ಅಪ್ ಡೇಟ್ ಸಿಕ್ಕಿದೆ. ಈಗಾಗಲೇ ಸಾಕಷ್ಟು ನಿರೀಕ್ಷೆ ಮತ್ತು ಕುತೂಹಲ ಮೂಡಿಸಿರುವ ಈ ಸಿನಿಮಾ ಇದೇ ವರ್ಷ ರಿಲೀಸ್ ಆಗಲಿದೆ ಎಂದು ಹೇಳಲಾಗುತ್ತಿದೆ. ಈ ವರ್ಷದ ಕೊನೆ ಅಥವಾ ಮುಂದಿನ ವರ್ಷದ ಮೊದಲ ತಿಂಗಳಲ್ಲೇ ಸಲಾರ್ ತೆರೆಗೆ ಅಪ್ಪಳಿಸಲಿದೆ ಎಂದು ಕಾಯಲಾಗುತ್ತಿತ್ತು. ಆ ಕಾಯುವಿಕೆಗೆ ಬ್ರೇಕ್ ಬಿದ್ದಿದೆ. ಆದರೆ, ಈ ಎರಡೂ ನಿರೀಕ್ಷೆಗಳು ಹುಸಿಯಾಗಿವೆ.

    ಆಗಸ್ಟ್ 15 ರಂದು ಸಲಾರ್ ಟೀಮ್ ನಿಂದ ಹೊಸ ಅಪ್ ಡೇಟ್ ಸಿಗಲಿದೆ ಎಂದು ಹೊಂಬಾಳೆ ಫಿಲ್ಮಸ್ ಹೇಳಿತ್ತು. ಕೊಟ್ಟ ಮಾತಿನಂತೆ ಹೊಸ ಅಪ್ ಡೇಟ್ ಕೊಟ್ಟಿದ್ದರೂ, ಅದು ಅಭಿಮಾನಿಗಳಲ್ಲಿ ನಿರಾಸೆ ಮೂಡಿಸುವಂತಹ ಅಪ್ ಡೇಟ್ ಆಗಿದೆ. ಇದೇ ವರ್ಷ ಸಲಾರ್ ಸಿನಿಮಾ ರಿಲೀಸ್ ಆಗಲಿದೆ ಎಂದು ಆಸೆಗಣ್ಣಿನಿಂದ ಕಾಯುತ್ತಿದ್ದ ಅಭಿಮಾನಿಗಳು ಈ ಸಿನಿಮಾ ನೋಡಲು ಇನ್ನೂ ಒಂದು ವರ್ಷ ಕಾಯಬೇಕು ಎಂದು ಹೇಳಿದೆ. ಇದನ್ನೂ ಓದಿ:ಬಾರ್ಸಿಲೋನದಲ್ಲಿ ನಯನತಾರಾ- ವಿಘ್ನೇಶ್ ಶಿವನ್ ದಂಪತಿ

    ಪ್ರಶಾಂತ್ ನೀಲ್ ಮತ್ತು ಪ್ರಭಾಸ್ ನಟನೆಯ ಈ ಸಲಾರ್ ಸಿನಿಮಾ ಹಲವು ಭಾಷೆಗಳಲ್ಲಿ ತಯಾರಾಗುತ್ತಿದೆ. ಇನ್ನೂ ಗ್ರಾಫಿಕ್ಸ್ ಕೆಲಸ ಆಗಬೇಕಿದೆ ಮತ್ತು ಶೂಟಿಂಗ್ ಕೂಡ ಬಾಕಿ ಇದೆ. ಹಾಗಾಗಿ ಈ ಸಿನಿಮಾವನ್ನು 28 ಸೆಪ್ಟೆಂಬರ್ 2023ರಲ್ಲಿ ರಿಲೀಸ್ ಮಾಡುವುದಾಗಿ ಹೊಂಬಾಳೆ ಫಿಲ್ಮ್ಸ್ ಅಧಿಕೃತ ಮಾಹಿತಿ ನೀಡಿದೆ. ಹೀಗಾಗಿ ಸಲಾರ್ ಸಿನಿಮಾವನ್ನು ಕಣ್ತುಂಬಿಕೊಳ್ಳಲು ಇನ್ನೂ ಒಂದು ವರ್ಷ ಕಾಯುವುದು ಅನಿವಾರ್ಯವಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಆಸ್ಕರ್ ರೇಸ್ ನಲ್ಲಿ ‘ಆರ್.ಆರ್.ಆರ್’ ಹೆಸರು, ‘ಕೆಜಿಎಫ್ 2’ ಯಾಕಿಲ್ಲ ಎಂದ ಅಭಿಮಾನಿಗಳು

    ಆಸ್ಕರ್ ರೇಸ್ ನಲ್ಲಿ ‘ಆರ್.ಆರ್.ಆರ್’ ಹೆಸರು, ‘ಕೆಜಿಎಫ್ 2’ ಯಾಕಿಲ್ಲ ಎಂದ ಅಭಿಮಾನಿಗಳು

    ಸ್ಕರ್ ಪ್ರಶಸ್ತಿಗಳ ಕುರಿತು ಇದೀಗ ಮತ್ತೊಂದು ಸುತ್ತಿನ ಚರ್ಚೆ ಶುರುವಾಗಿದೆ. ಈ ಬಾರಿ ಆಸ್ಕರ್ ಪ್ರಶಸ್ತಿ ರೇಸ್ ನಲ್ಲಿ ಆರ್.ಆರ್.ಆರ್ ಹೆಸರು ಕೇಳಿ ಬರುತ್ತಿದ್ದು, ಈ ಬಾರಿ ಈ ಸಿನಿಮಾ ಭಾರೀ ಪೈಪೋಟಿ ಮಾಡಲಿದೆ ಎಂದು ಅಂದಾಜಿಸಲಾಗುತ್ತಿದೆ. ಈ ಸಿನಿಮಾಗಿಂತಲೂ ಹೆಚ್ಚು ಸದ್ದು ಮಾಡಿದ್ದ ಕನ್ನಡದ ಕೆಜಿಎಫ್ 2 ಸಿನಿಮಾ ಹೆಸರು ಯಾಕೆ ರೇಸ್ ನಲ್ಲಿ ಕೇಳಿ ಬರುತ್ತಿಲ್ಲ ಎಂಬ ಪ್ರಶ್ನೆ ಕನ್ನಡ ಅಭಿಮಾನಿಗಳದ್ದು.

    ದಕ್ಷಿಣದ ಸಿನಿಮಾಗಳು ಒಂದೇ ಎಂದು ನಂಬಿಸುತ್ತಾ ಬರುತ್ತಿದ್ದರೂ, ಕನ್ನಡ ಮೂಲದ ಸಿನಿಮಾಗಳಿಗೆ ಅದಕ್ಕೆ ಸಿಗಬೇಕಾದ ಮನ್ನಣೆ ದೊರೆಯದೇ ಇರುವುದಕ್ಕೂ ಕೆಲವರು ಆಕ್ಷೇಪ ವ್ಯಕ್ತ ಪಡಿಸುತ್ತಿದ್ದಾರೆ. ಆರ್.ಆರ್.ಆರ್ ಸಿನಿಮಾಗಿಂತಲೂ ಕೆಜಿಎ‍ಫ್ 2 ಸಿನಿಮಾ ಹೆಚ್ಚು ಕಡೆ ರಿಲೀಸ್ ಆಗಿದೆ. ಬಾಕ್ಸ್ ಆಫೀಸಿನಲ್ಲು ಸದ್ದು ಮಾಡಿದೆ, ಇನ್ನೂ ಹಲವು ಕಡೆ ಪ್ರದರ್ಶನ ಕಾಣುತ್ತಿದೆ. ಕನ್ನಡದ ಸಿನಿಮಾವೊಂದು ಈ ಮಟ್ಟಕ್ಕೆ ಹೆಸರು ಮಾಡಿದ್ದರೂ ಆಸ್ಕರ್ ರೇಸ್ ನಲ್ಲಿ ಈ ಸಿನಿಮಾ ಇದೆ ಎಂದು ಎಲ್ಲೂ ಬಿಂಬಿತವಾಗಿಲ್ಲ ಎಂದು ಬೇಸರ ಹೊರಹಾಕಿದ್ದಾರೆ. ಇದನ್ನೂ ಓದಿ:ಅವಳಿ ಮಕ್ಕಳಿಗೆ ತಾಯಿಯಾಗಲಿದ್ದಾರಾ ಆಲಿಯಾ: ರಣ್‌ಬೀರ್‌ ಕೊಟ್ರು ಬ್ರೇಕಿಂಗ್‌ ನ್ಯೂಸ್

    ಕೆಜಿಎಫ್ 2 ಸಿನಿಮಾ ಬಾಲಿವುಡ್ ಮಂದಿಯನ್ನು ನಿದ್ದೆಗೆಡಿಸಿದೆ. ಬಾಕ್ಸ್ ಆಫೀಸಿನಲ್ಲಿ ಅತೀ ಹೆಚ್ಚು ಹಣಗಳಿಸಿದ್ದು ಹಿಂದಿಯಲ್ಲಿ. ಹಾಗಾಗಿ ಬಾಲಿವುಡ್ ನವರು ಆರ್.ಆರ್.ಆರ್ ಗೆ ಮಣೆ ಹಾಕಿ, ಕೆಜಿಎಫ್ 2 ಸಿನಿಮಾವನ್ನು ಹಿಂದಿಕ್ಕಿಸುವ ಪ್ರಯತ್ನ ಮಾಡುತ್ತಿದ್ದಾರೆ ಎನ್ನುವ ಆರೋಪ ಕೂಡ ಇದೆ. ಈ ಕುರಿತು ಸೋಷಿಯಲ್ ಮೀಡಿಯಾದಲ್ಲಂತೂ ಭಾರೀ ಚರ್ಚೆ ಆಗುತ್ತಿದೆ. ಕನ್ನಡದ ಸಿನಿಮಾಗೆ ಮನ್ನಣೆ ಸಿಗಲೇಬೇಕು ಎಂದು ಹಲವರು ಒತ್ತಾಯಿಸುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕನ್ನಡ, ಕನ್ನಡಿಗರನ್ನೇ ಮರೆತು ಬಿಟ್ಟರಾ ‘ಕೆಜಿಎಫ್ 2’ ನಿರ್ದೇಶಕ ಪ್ರಶಾಂತ್ ನೀಲ್ : ಏನಿದು ಹೊಸ ಆರೋಪ?

    ಕನ್ನಡ, ಕನ್ನಡಿಗರನ್ನೇ ಮರೆತು ಬಿಟ್ಟರಾ ‘ಕೆಜಿಎಫ್ 2’ ನಿರ್ದೇಶಕ ಪ್ರಶಾಂತ್ ನೀಲ್ : ಏನಿದು ಹೊಸ ಆರೋಪ?

    ಕೆಜಿಎಫ್ ನಂತರ ಪ್ರಶಾಂತ್ ನೀಲ್ ತೆಲುಗಿಗೆ ಹಾರಿದಾಗಲೇ ಒಂದಷ್ಟು ವಿರೋಧಗಳನ್ನು ಅವರು ಎದುರಿಸಬೇಕಾಯಿತು. ಕನ್ನಡದಲ್ಲೇ ಮೊಲದ ಸಿನಿಮಾ ಮಾಡಿ, ಕನ್ನಡದಲ್ಲೇ ಸಕ್ಸಸ್ ಕಂಡು, ದಿಢೀರ್ ಅಂತ ಬೇರೆ ಭಾಷೆಗೆ ಹೋಗುವುದು ಎಷ್ಟು ಸರಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಹಲವರು ಚರ್ಚೆ ಮಾಡಿದರು. ಭಾರತೀಯ ಸಿನಿಮಾ ರಂಗ ಒಂದೇ ಆಗಿರುವಾಗ, ಕನ್ನಡದ ಪ್ರತಿಭೆಯೊಬ್ಬರು ಬೇರೆ ಭಾಷೆಯಲ್ಲಿ ಸಿನಿಮಾ ಮಾಡುವುದು ತಪ್ಪೇನು ಅಂತ ಕೆಲವರು ಪ್ರಶ್ನೆ ಮಾಡಿದರು. ಕೆಲವರು ಇನ್ನಷ್ಟು ಸಿನಿಮಾಗಳನ್ನು ನೀಲ್ ಇಲ್ಲಿಯೇ ಮಾಡಬಹುದಿತ್ತು ಎಂದು ಕಾಮೆಂಟ್ ಮಾಡಿದರು.

    ಕೆಜಿಎಫ್ 2 ಮತ್ತೆ ಹಿಟ್ ಆಗುತ್ತಿದ್ದಂತೆಯೇ ಪ್ರಶಾಂತ್ ನೀಲ್ ಮೇಲಿನ ಮುನಿಸನ್ನು ಮರೆತು, ಮತ್ತೆ ಅವರನ್ನು ಗೌರವಿಸಿದರು. ಇದೀಗ ಅದೇ ಪ್ರಶಾಂತ್ ನೀಲ್ ಮೇಲೆ ಮತ್ತೆ ಕೆಲ ಕನ್ನಡಿಗರು ಮುನಿಸಿಕೊಂಡಿದ್ದಾರೆ. ಕಾರಣ ತಮಿಳು ಸಿನಿಮಾ. ಕಮಲ್ ಹಾಸನ್ ನಟನೆಯ ವಿಕ್ರಮ್ ಸಿನಿಮಾ ಕನ್ನಡವೂ ಸೇರಿದಂತೆ ಹಲವು ಭಾಷೆಗಳಲ್ಲಿ ರಿಲೀಸ್ ಆಗಿದೆ. ಉತ್ತಮ ಪ್ರತಿಕ್ರಿಯೆ ಕೂಡ ವ್ಯಕ್ತವಾಗಿದೆ. ಇದೇ ಸಮಯದಲ್ಲೇ ಚಾರ್ಲಿ 777 ಸಿನಿಮಾ ಕೂಡ ರಿಲೀಸ್ ಆಗಿ, ಅದಕ್ಕೂ ಕೂಡ ಉತ್ತಮ ಪ್ರತಿಕ್ರಿಯೆ ಫಲಿತಾಂಶ ಸಿಕ್ಕಿದೆ. ಪ್ರಶಾಂತ್ ನೀಲ್ ತಮಿಳಿನ ವಿಕ್ರಮ್ ಸಿನಿಮಾ ಹೊಗಳಿ, ಕನ್ನಡದ ಯಾವ ಚಿತ್ರಗಳ ಬಗ್ಗೆಯೂ ಅವರು ಮಾತನಾಡುವುದಿಲ್ಲ ಎಂದು ಆರೋಪಿಸಲಾಗಿದೆ. ಇದನ್ನೂ ಓದಿ:Breaking-ಬಿಗ್ ಬಾಸ್ ಸೀಸನ್ 8 ಶೂಟಿಂಗ್ ಶುರು: ಪ್ರೊಮೋ ಚಿತ್ರೀಕರಣದಲ್ಲಿ ಸುದೀಪ್ ಭಾಗಿ

    ಕನ್ನಡದ ಹಲವು ಸಿನಿಮಾಗಳು ಕೂಡ ಯಶಸ್ವಿ ಪ್ರದರ್ಶನ ಕಾಣುತ್ತಿವೆ. ಬಾಕ್ಸ್ ಆಫೀಸಿನಲ್ಲೂ ಗೆಲ್ಲುತ್ತಿವೆ. ಉತ್ತಮ ಕಂಟೆಂಟ್ ಹೊಂದಿರುವ ಚಿತ್ರ ಎಂಬ ಪ್ರಶಂಸೆಗೂ ಕಾರಣವಾಗುತ್ತಿವೆ. ಬೇರೆ ಬೇರೆ ಸಿನಿಮಾ ರಂಗ ಸಿಲೆಬ್ರಿಟಿಗಳು ಕನ್ನಡ ಸಿನಿಮಾಗಳನ್ನು ಹಾಡಿ ಹೊಗಳುತ್ತಿದ್ದಾರೆ. ಆದರೆ, ಪ್ರಶಾಂತ್ ನೀಲ್ ಆ ಸಿನಿಮಾಗಳ ಬಗ್ಗೆ ಒಂದೇ ಒಂದು ಮಾತುಗಳನ್ನೂ ಆಡದೇ, ತಮಿಳು ಸಿನಿಮಾ ಬಗ್ಗೆ  ಮೆಚ್ಚುಗೆಯ ಮಾತುಗಳನ್ನು ಆಡುತ್ತಾರೆ. ಕನ್ನಡ, ಕನ್ನಡಿಗರ ಮೇಲೆ ಯಾಕೆ ಇಷ್ಟೊಂದು ತಾತ್ಸಾರ ಎಂದು ಸೋಷಿಯಲ್ ಮೀಡಿಯಾದಲ್ಲಿ ಹಲವರು ಪ್ರಶ್ನೆ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ತೆಲುಗಿನ ಪ್ರಭಾಸ್ ನಟನೆಯ ಸಲಾರ್ ಚಿತ್ರದಲ್ಲಿ ಯಶ್ ಅತಿಥಿ ಪಾತ್ರ?

    ತೆಲುಗಿನ ಪ್ರಭಾಸ್ ನಟನೆಯ ಸಲಾರ್ ಚಿತ್ರದಲ್ಲಿ ಯಶ್ ಅತಿಥಿ ಪಾತ್ರ?

    ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಯಶ್ ಮತ್ತೆ ನಟಿಸುತ್ತಿದ್ದಾರಾ? ಹೌದು, ಎನ್ನುತ್ತಿವೆ ಕೆಲವು ಮೂಲಗಳು. ಕೆಜಿಎಫ್ 2 ನಂತರ ಯಶ್ ಮತ್ತು ಪ್ರಶಾಂತ್ ನೀಲ್ ಕಾಂಬಿನೇಷನ್ ನಲ್ಲಿ ಕೆಜಿಎಫ್ 3 ಸಿನಿಮಾ ಬರುತ್ತದೆ ಎಂದು ಹೇಳಲಾಗಿತ್ತು. ಅದಕ್ಕೂ ಮುನ್ನ ಸಲಾರ್ ಸಿನಿಮಾದಲ್ಲಿ ಈ ಜೋಡಿ ಒಂದಾಗಲಿದೆ ಎನ್ನಲಾಗುತ್ತಿದೆ. ಹಾಗಂತ ಗಾಂಧಿನಗರದಲ್ಲಿ ಸುದ್ದಿ ದಟ್ಟವಾಗಿದೆ.

    ಪ್ರಭಾಸ್ ನಟನೆಯ ಸಿನಿಮಾ ಇದಾಗಿದ್ದು, ಈ ಸಿನಿಮಾದಲ್ಲಿ ಒಂದು ಮಹತ್ವದ ಪಾತ್ರವನ್ನು ಯಶ್ ನಿರ್ವಹಿಸಲಿದ್ದಾರಂತೆ. ಅದು ಗೆಸ್ಟ್ ಪಾತ್ರವಾದರೂ, ಪಾತ್ರಕ್ಕೆ ತನ್ನದೇ ಆದ ತೂಕ ಇರಲಿದೆ ಎಂದು ಹೇಳಲಾಗುತ್ತಿದೆ. ಆದರೆ ಈ ಕುರಿತು ಪ್ರಶಾಂತ್ ನೀಲ್ ಆಗಲಿ ಅಥವಾ ಯಶ್ ಆಗಲಿ ಅಧಿಕೃತವಾಗಿ ಹೇಳಿಕೊಂಡಿಲ್ಲ. ಆದರೆ, ಮಾತುಕತೆಯಂತೂ ನಡೆದಿರುವುದು ಪಕ್ಕಾ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ:`ರಾ ರಾ ರಕ್ಕಮ್ಮ’ ನಂತರ ನಾಳೆ ಮತ್ತೊಂದು ಸಾಂಗ್ ರಿಲೀಸ್: ವಿಕ್ರಾಂತ್ ರೋಣ

    ಸಲಾರ್ ಸಿನಿಮಾದ ಮುಹೂರ್ತದ ಸಂದರ್ಭದಲ್ಲಿ ಯಶ್ ಕೂಡ ಭಾಗಿಯಾಗಿದ್ದರು. ಅಲ್ಲದೇ, ಇದು ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ನಲ್ಲಿ ಮೂಡಿ ಬರುತ್ತಿರುವ ಸಿನಿಮಾ. ಪ್ರಶಾಂತ್ ನೀಲ್ ನಿರ್ದೇಶನ. ಇವೆಲ್ಲ ಕಾರಣಕ್ಕಾಗಿ ಯಶ್ ಅತಿಥಿ ಪಾತ್ರವನ್ನು ಮಾಡಲು ಒಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಆ ಪಾತ್ರದ ಬಗ್ಗೆ ಪ್ರಶಾಂತ್ ನೀಲ್ ಅವರು ಯಶ್ ಜೊತೆ ಮಾತೂ ಆಡಿದ್ದಾರಂತೆ. ಸದ್ಯದಲ್ಲೇ ಶೂಟಿಂಗ್ ಕೂಡ ನಡೆಯಲಿದೆ ಎಂದು ಹೇಳಲಾಗುತ್ತಿದೆ.

    Live Tv

  • ಕೆಜಿಎಫ್ 3 ಗ್ಯಾರಂಟಿ : ಅಕ್ಟೋಬರ್ ತಿಂಗಳಿಂದ ಶೂಟಿಂಗ್ ಶುರು ಎಂದಿದೆ ಚಿತ್ರತಂಡ

    ಕೆಜಿಎಫ್ 3 ಗ್ಯಾರಂಟಿ : ಅಕ್ಟೋಬರ್ ತಿಂಗಳಿಂದ ಶೂಟಿಂಗ್ ಶುರು ಎಂದಿದೆ ಚಿತ್ರತಂಡ

    ಶ್ ಮತ್ತು ಪ್ರಶಾಂತ್ ನೀಲ್ ಕಾಂಬಿನೇಷನ್ ನ ‘ಕೆಜಿಎಫ್ 2’ ಸಿನಿಮಾ ಬಾಕ್ಸ್ ಆಫೀಸಿನಲ್ಲಿ ಇನ್ನೂ ದಾಖಲೆಗಳ ಮೇಲೆ ದಾಖಲೆ ಮಾಡುತ್ತಿದೆ. ಈ ನಡುವೆ ಕೆಜಿಎಫ್ 3 ಸಿನಿಮಾ ಬರಲಿದೆಯಾ ಎನ್ನುವ ಚರ್ಚೆ ಶುರುವಾಗಿತ್ತು. ನಿರ್ದೇಶಕ ಪ್ರಶಾಂತ್ ನೀಲ್ ಇನ್ನೂ ಎರಡು ಚಿತ್ರಗಳನ್ನು ಒಪ್ಪಿಕೊಂಡಿರುವ ಕಾರಣಕ್ಕಾಗಿ ಕೆಜಿಎಫ್ 3 ಸಿನಿಮಾವನ್ನು ಕೂಡಲೇ ಕೈಗೆತ್ತಿಕೊಳ್ಳಲು ಸಾಧ್ಯವಿಲ್ಲ ಎನ್ನಲಾಗುತ್ತಿತ್ತು. ಇದನ್ನೂ ಓದಿ : Exclusive- ಅಮೆಜಾನ್ ಪ್ರೈಮ್ನಲ್ಲಿ ‘ಕೆಜಿಎಫ್ 2’ : ಫಸ್ಟ್ ಟೈಮ್ ಮೆಂಬರ್ ಅಲ್ಲದವರೂ ಸಿನಿಮಾ ನೋಡಬಹುದು

    ಆದರೆ, ಕೆಜಿಎಫ್ 2 ಸಿನಿಮಾದ ನಿರ್ಮಾಪಕ ವಿಜಯ್ ಕಿರಗಂದೂರು ಅಚ್ಚರಿಯ ಹೇಳಿಕೆಯೊಂದನ್ನು ಕೊಟ್ಟಿದ್ದಾರೆ. ಮಾಧ್ಯಮದೊಂದಿಗೆ ಮಾತನಾಡಿರುವ ಅವರು ‘ಅಕ್ಟೋಬರ್ ಒಳಗೆ ಸಲಾರ್ ಸಿನಿಮಾದ ಶೂಟಿಂಗ್ ಮುಗಿಸಬೇಕೆಂದು ತೀರ್ಮಾನ ಮಾಡಿದ್ದೇವೆ. ಅಂದುಕೊಂಡಂತೆ ಆ ಸಿನಿಮಾದ ಕೆಲಸ ಮುಗಿದರೆ, ಅಕ್ಟೋಬರ್ ನಿಂದಲೇ ಕೆಜಿಎಫ್ 2 ಸಿನಿಮಾದ ಕೆಲಸ ಆರಂಭಿಸಲಿದ್ದೇವೆ’ ಎಂದು ಹೇಳಿದ್ದಾರೆ. ಇದನ್ನೂ ಓದಿ : ಕಾಲೇಜು ದಿನಗಳಲ್ಲೇ ರಮ್ಯಾ ಮೇಲೆ ಕ್ರಶ್ ಆಗಿದೆ : ರಕ್ಷಿತ್ ಶೆಟ್ಟಿ

    ಕೆಜಿಎಫ್ 2 ಸಿನಿಮಾದಲ್ಲಿ ನಾಯಕ ಬದುಕಿದನಾ ಅಥವಾ ಸತ್ತನಾ ಎನ್ನುವುದು ಅಸ್ಪಷ್ಟ. ಹಾಗಾಗಿ ಯಶ್ ಅವರೇ ಈ ಸಿನಿಮಾದ ನಾಯಕ ಆಗುತ್ತಾರಾ? ಅಥವಾ ಕೆಜಿಎಫ್ 3 ನಲ್ಲಿ ಬೇರೆ ನಾಯಕ ಇರಲಿದ್ದಾರೆ ಎನ್ನುವುದಕ್ಕೆ ಅವರು ಯಾವುದೇ ಸ್ಪಷ್ಟತೆ ನೀಡಿಲ್ಲ. ಆದರೆ, ಸ್ಪೈಡರ್ ಮ್ಯಾನ್, ಹೋಮ್ ಕಮಿಂಗ್ ರೀತಿಯಲ್ಲಿ ಪಾತ್ರಗಳನ್ನು ಬದಲಾಯಿಸಿದರೆ, ಇನ್ನೂ ಹೆಚ್ಚಿನ ಸಂಖ್ಯೆಯ ಜನರಿಗೆ ಸಿನಿಮಾವನ್ನು ತಲುಪಿಸಬಹುದು’ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ ನಿರ್ಮಾಪಕರು. ಇದನ್ನೂ ಓದಿ : ಪತಿ ಉಪ್ಪಿಗಿಂತಲೂ ಪತ್ನಿ ಪ್ರಿಯಾಂಕಾ ಉಪೇಂದ್ರ ಫಾಸ್ಟ್ : ಡಿಟೆಕ್ಟೀವ್ ತೀಕ್ಷ್ಣ @ 50

    ಈಗಾಗಲೇ ತೆಲುಗಿನ ಖ್ಯಾತ ನಟ ರಾಣಾ ದಗ್ಗುಬಾಟಿಯನ್ನು ನಿರ್ಮಾಪಕರು ಸಂಪರ್ಕಿಸಿದ್ದಾರೆ ಎನ್ನುವ ಸುದ್ದಿ ಗಾಂಧಿನಗರದಲ್ಲಿ ಹರಿದಾಡುತ್ತಿದೆ. ಆದರೆ, ಈ ಕುರಿತು ನಿರ್ಮಾಪಕ ವಿಜಯ್ ಕಿರಗಂದೂರು ಯಾವುದೇ ಮಾಹಿತಿಯನ್ನು ನೀಡಿಲ್ಲ. ಒಟ್ಟಿನಲ್ಲಿ ಕೆಜಿಎಫ್ 2 ಗಿಂತಲೂ ಇನ್ನೂ ದೊಡ್ಡದಾಗಿ ಈ ಸಿನಿಮಾ ಇರಲಿದೆ ಎನ್ನುವ ಮಾಹಿತಿಯನ್ನಂತೂ ನೀಡಿದ್ದಾರೆ. ಅಲ್ಲಿಗೆ ಕೆಜಿಎಫ್ 3 ಸಿನಿಮಾ ಲೇಟಾದರೂ, ನಿರ್ಮಾಣವಾಗಲಿದೆ ಎನ್ನುವುದು ಖಚಿತ.

  • ಮೇ ತಿಂಗಳಿಂದ ಸಲಾರ್ ಶೂಟಿಂಗ್ ಶುರು: ರೆಡಿಯಾಗ್ತಿದ್ದಾರೆ ಪ್ರಶಾಂತ್ ನೀಲ್

    ಮೇ ತಿಂಗಳಿಂದ ಸಲಾರ್ ಶೂಟಿಂಗ್ ಶುರು: ರೆಡಿಯಾಗ್ತಿದ್ದಾರೆ ಪ್ರಶಾಂತ್ ನೀಲ್

    ಕೆಜಿಎಫ್ 2 ಸಿನಿಮಾದ ಸಕ್ಸಸ್ ಅಲೆಯಲ್ಲಿ ತೇಲುತ್ತಿರುವ ನಿರ್ದೇಶಕ ಪ್ರಶಾಂತ್ ನೀಲ್, ರಿಲ್ಯಾಕ್ಸ್ ಮೂಡ್ ನಿಂದ ವರ್ಕಮೂಡ್ ನತ್ತ ಶಿಫ್ಟ್ ಆಗುತ್ತಿದ್ದಾರೆ. ಕೆಜಿಎಫ್ ಸಿನಿಮಾ ಬಿಡುಗಡೆ, ಕೋವಿಡ್ ಕಾರಣದಿಂದಾಗಿ ಸಲಾರ್ ಸಿನಿಮಾದ ಶೂಟಿಂಗ್ ನಿಲ್ಲಿಸಿರುವ ಅವರು, ಮೇ ತಿಂಗಳಿಂದ ಮತ್ತೆ ಚಿತ್ರೀಕರಣ ಪ್ರಾರಂಭಿಸಲಿದ್ದಾರೆ. ಇದನ್ನೂ ಓದಿ : ‘ಗುರು’ ಹೆಸರು ‘ಯುವ’ ರಾಜಕುಮಾರ್ ಬದಲಾಗಿದ್ದು ಹೇಗೆ? : ನಾಮಬಲ ನಂಬಿಕೆಯ ಡಾ.ರಾಜ್ ಕುಟುಂಬ

    ಪ್ರಭಾಸ್ ನಟನೆಯ ಸಲಾರ್ ಸಿನಿಮಾದ ಶೂಟಿಂಗ್ ಈವರೆಗೂ ಕೇವಲ ಶೇ.30ರಷ್ಟು ಅಷ್ಟೇ ಆಗಿದೆ ಎನ್ನುವ ಮಾಹಿತಿ ಇದೆ. ಹೀಗಾಗಿ ಮೇ ತಿಂಗಳಿಂದ ಚಿತ್ರೀಕರಣ ಶುರು ಮಾಡಿ, ಅಂದುಕೊಂಡಂತೆ ಆದರೆ, ಇದೇ ವರ್ಷವೇ ಚಿತ್ರವನ್ನು ತೆರೆಗೆ ತರುವ ಪ್ಲ್ಯಾನ್ ಕೂಡ ಆಗಿದೆಯಂತೆ. ಈ ಕಾರಣಕ್ಕಾಗಿಯೇ ಪ್ರಭಾಸ್ ಮತ್ತೊಂದು ಸಿನಿಮಾ ಒಪ್ಪಿಕೊಂಡಿಲ್ಲ ಎನ್ನುವ ಮಾಹಿತಿ ಇದೆ. ಇದನ್ನೂ ಓದಿ : ಹೊಂಬಾಳೆ ಫಿಲ್ಮ್ಸ್‌ನಿಂದ ಯುವರಾಜ್ ಕುಮಾರ್ ಲಾಂಚ್: ನಿನ್ನೆಯೇ ಬ್ರೇಕ್ ಮಾಡಿತ್ತು ಪಬ್ಲಿಕ್ ಟಿವಿ

    ಎರಡನೇ ಹಂತದ ಚಿತ್ರೀಕರಣದಲ್ಲಿ ಭಾರೀ ಬಜೆಟ್ ಬೇಡುವಂತಹ ದೃಶ್ಯಗಳನ್ನು ಸೆರೆ ಹಿಡಿಯಲಿದ್ದಾರಂತೆ ಪ್ರಶಾಂತ್ ನೀಲ್. ಒಂದು ದೃಶ್ಯಕ್ಕೇ ಅಂದಾಜು 20 ಕೋಟಿ ರೂಪಾಯಿ ಖರ್ಚು ಮಾಡಲಿದ್ದಾರೆ ಎನ್ನುವ ಅಚ್ಚರಿ ಸುದ್ದಿ ಕೂಡ ಇದೆ. ನೂರಾರು ಕೋಟಿ ಬಜೆಟ್ ಸಿನಿಮಾದಲ್ಲಿ 20 ಕೋಟಿ ಏನೂ ಅಲ್ಲದಿದ್ದರೂ, ಇದೇ ಮೊದಲ ಬಾರಿಗೆ ಈ ಪ್ರಮಾಣದ ಬಜೆಟ್ ಅನ್ನು ಒಂದೇ ಒಂದು ದೃಶ್ಯ ಬೇಡುತ್ತಿರುವುದು ಕುತೂಹಲಕ್ಕೆ ಕಾರಣವಾಗಿದೆ. ಇದನ್ನೂ ಓದಿ : ದಕ್ಷಿಣದ ಸಿನಿಮಾ ನೋಡಲ್ಲ: ವಿವಾದಕ್ಕೆ ಕಾರಣವಾದ ಬಾಲಿವುಡ್ ಖ್ಯಾತ ನಟ ನವಾಜುದ್ಧೀನ್ ಸಿದ್ದಿಕಿ

    ರಾಧೆ ಶ್ಯಾಮ್ ಸಿನಿಮಾದ ಸೋಲಿನ ನೋವಿನಲ್ಲಿರುವ ಪ್ರಭಾಸ್ ಅವರಿಗೆ ಸಲಾರ್ ಕೈ ಹಿಡಿಯಬೇಕಿದೆ. ಆ ನಂಬಿಕೆ ಕೂಡ ಅವರಿಗಿದೆ. ಕೆಜಿಎಫ್ 2 ಸಿನಿಮಾದಿಂದಾಗಿ ಪ್ರಶಾಂತ್ ನೀಲ್ ಅವರಿಗೂ ಒಂದು ಮಾರ್ಕೆಟ್ ಕ್ರಿಯೇಟ್ ಆಗಿದೆ. ಈ ಎಲ್ಲ ಕಾರಣಗಳಿಂದಾಗಿ ಸಲಾರ್ ಮತ್ತೊಂದು ಮಹತ್ವದ ಚಿತ್ರವಾಗಲಿದೆ.

  • ಕೆಜಿಎಫ್ ಯಶ್ ಪಾತ್ರಕ್ಕೆ ಹಿಂದಿಯಲ್ಲಿ ಡಬ್ ಮಾಡಿದ್ದು ಸಚಿನ್

    ಕೆಜಿಎಫ್ ಯಶ್ ಪಾತ್ರಕ್ಕೆ ಹಿಂದಿಯಲ್ಲಿ ಡಬ್ ಮಾಡಿದ್ದು ಸಚಿನ್

    ಪ್ರಶಾಂತ್ ನೀಲ್ ನಿರ್ದೇಶನದ ‘ಕೆಜಿಎಫ್ 2’ ಸಿನಿಮಾ ಬಾಲಿವುಡ್ ನಲ್ಲಿ ಬಹುತೇಕ ದಾಖಲೆಗಳನ್ನು ಮುರಿದು ಮುನ್ನುಗ್ಗುತ್ತಿದೆ. ಬೇರೆ ಭಾಷೆಗಳ ಡಬ್ಬಿಂಗ್ ಚಿತ್ರಗಳಿಗೆ ಹೋಲಿಸಿದರೆ, ಹಿಂದಿಯಲ್ಲೇ ಅತೀ ಹೆಚ್ಚು ದುಡ್ಡು ಮಾಡಿದೆ. ಹೀಗಾಗಿ ಕೆಜಿಎಫ್ 2 ಹಿಂದಿ ಚಿತ್ರದ ಬಗ್ಗೆ ಎಲ್ಲರೂ ಮಾತಾಡುವಂತಾಗಿದೆ. ಇದನ್ನೂ ಓದಿ : ದಕ್ಷಿಣದ ಸಿನಿಮಾ ನೋಡಲ್ಲ: ವಿವಾದಕ್ಕೆ ಕಾರಣವಾದ ಬಾಲಿವುಡ್ ಖ್ಯಾತ ನಟ ನವಾಜುದ್ಧೀನ್ ಸಿದ್ದಿಕಿ

    ಕೆಜಿಎಫ್ ಚಾಪ್ಟರ್ ಒನ್ ಮಾಡುವಾಗ ಕೇವಲ ಅದು ಕನ್ನಡ ಸಿನಿಮಾವಾಗಿತ್ತು. ನಂತರ ತೆಲುಗು, ತಮಿಳು, ಮಲಯಾಳಂ ಭಾಷೆಗೆ ಡಬ್ ಮಾಡಲು ಪ್ಲ್ಯಾನ್ ಮಾಡಲಾಯಿತು. ಬಾಹುಬಲಿ ಸಿನಿಮಾ ಹಿಂದಿಯಲ್ಲೂ ಭರ್ಜರಿ ಯಶಸ್ಸು ಗಳಿಸಿದ ನಂತರವಷ್ಟೇ ಹಿಂದಿಯಲ್ಲೂ ಕೆಜಿಎಫ್ ಡಬ್ ಮಾಡಲು ಯೋಚನೆ ಮಾಡಿಕೊಂಡಿತ್ತು ಚಿತ್ರತಂಡ. ಕಳೆದ ಸಲ ಹಿಂದಿಯಲ್ಲಿ ನಿರೀಕ್ಷಿಸಿದಷ್ಟು ಬಾಕ್ಸ್ ಆಫೀಸ್ ನಲ್ಲಿ ಹಣ ತಂದುಕೊಡದೇ ಇದ್ದರೂ, ಕನ್ನಡದ ಸಿನಿಮಾವೊಂದು ಬಾಲಿವುಡ್ ಅಂಗಳದಲ್ಲಿ ಹವಾ ಕ್ರಿಯೇಟ್ ಮಾಡಿದ್ದನ್ನು ಮರೆಯುವಂತಿಲ್ಲ. ಇದನ್ನೂ ಓದಿ : ಕರ್ನಾಟಕದಲ್ಲೇ ನಡೆಯಿತು ತಮಿಳು ಸಿನಿಮಾಗೆ ಮುಹೂರ್ತ: ಬೆಂಗಳೂರಿಗೆ ಬಂದಿಳಿದ ತಮಿಳು ನಟ

    ಕೆಜಿಎಫ್ 2 ಹಾಗಾಗಲಿಲ್ಲ. ಕನ್ನಡ, ತಮಿಳು, ತೆಲುಗು, ಮಲಯಾಳಂ ಹೀಗೆ ಅಷ್ಟೂ ಭಾಷೆಗಳ ಚಿತ್ರಗಳನ್ನೂ ಹಿಂದಿಕ್ಕಿ ಭರ್ಜರಿ ಗೆಲುವು ಕಂಡಿದೆ. ನೇರವಾಗಿ ಕೆಜಿಎಫ್ 2 ಸಿನಿಮಾವನ್ನು ಹಿಂದಿಯಲ್ಲಿಯೇ ಮೇಕಿಂಗ್ ಮಾಡಿದ್ದಾರೆ ಎನ್ನುವಷ್ಟರ ಮಟ್ಟಿಗೆ ಫರ್ಫೆಕ್ಟ್ ಆಗಿ ಮೂಡಿ ಬಂದಿದೆ. ಅದಕ್ಕೆ ಕಾರಣ ಡಬ್ಬಿಂಗ್ ಆರ್ಟಿಸ್ಟ್. ಅದರಲ್ಲೂ ಯಶ್ ಪಾತ್ರಕ್ಕೆ ಡಬ್ ಮಾಡಿದ ಸಚಿನ್ ಗೋಲ್, ಪಾತ್ರಕ್ಕೆ ಸಖತ್ ಆಗಿಯೇ ಜೀವ ತುಂಬಿದ್ದಾರೆ. ಇದನ್ನೂ ಓದಿ : ಮಸಾಜ್ ಪಾರ್ಲರ್ ಹುಡುಗಿ ಪಾತ್ರದಲ್ಲಿ ಅದಿತಿ ಪ್ರಭುದೇವ್

    ಈಗಾಗಲೇ ಸಚಿನ್ ಗೋಲ್, ದಕ್ಷಿಣದ ರಜನಿಕಾಂತ್, ಧನುಷ್, ದುಲ್ಕರ್ ಸಲ್ಮಾನ್ ಹೀಗೆ ಸಾಕಷ್ಟು ಸ್ಟಾರ್ ನಟರ ಚಿತ್ರಕ್ಕೆ ಹಿಂದಿಗೆ ಡಬ್ ಮಾಡಿದವರು. ಇದೇ ಮೊದಲ ಬಾರಿಗೆ ಯಶ್ ಅವರ ಪಾತ್ರಕ್ಕೆ ವಾಯ್ಸ್ ನೀಡಿದ್ದಾರೆ. ಈ ಕುರಿತು ಮಾತನಾಡಿರುವ ಅವರು ‘ಸಾಮಾನ್ಯವಾಗಿ ನಾನು ನಾಲ್ಕೈದು ತಾಸುಗಳಲ್ಲಿ ಡಬ್ ಮಾಡಿ ಮುಗಿಸುತ್ತೇನೆ. ಆದರೆ, ಯಶ್ ಅವರ ಪಾತ್ರಕ್ಕೆ ಹಾಗೆ ಮಾಡಲು ಆಗಲಿಲ್ಲ. ಒಂದೊಂದು ಪದವೂ ಹಿಂದಿಯಂತೆಯೇ ತುಟಿಚಲನೆ ಕಾಣಬೇಕು ಎಂದು ನಿರ್ದೇಶಕರು ಮತ್ತು ಯಶ್ ಅವರು ಹೇಳಿದ್ದರು. ಹಾಗಾಗಿ ಒಂದು ವಾರ ಟೈಮ್ ತಗೆದುಕೊಂಡು ಡಬ್ ಮಾಡಿದೆ’ ಎಂದಿದ್ದಾರೆ. ಇದನ್ನೂ ಓದಿ : ನಮ್ಮದು ಪ್ಯಾನ್ ಇಂಡಿಯಾ ಸಿನಿಮಾವಲ್ಲ, ಸಿನಿಮಾ ಅಷ್ಟೇ : ಬಾಲಿವುಡ್ ವಿರುದ್ಧ ಕಿಚ್ಚ ಸುದೀಪ್ ಗುಡುಗು

    ಹಲವು ವರ್ಷಗಳಿಂದ ಡಬ್ಬಿಂಗ್ ಆರ್ಟಿಸ್ಟ್ ಆಗಿ ಕೆಲಸ ಮಾಡಿರುವ ಸಚಿನ್, ಭಾರತೀಯ ಭಾಷೆಗಳ ಸಿನಿಮಾಗಳಿಗೆ ಮಾತ್ರವಲ್ಲ ಅನೇಕ ಹಾಲಿವುಡ್ ಚಿತ್ರಗಳಿಗೂ ಮಾತಿನ ಮರುಲೇಪನ ಮಾಡಿದ್ದಾರಂತೆ. ನಟನಾಗಿಯೂ ಅವರು ಗುರುತಿಸಿಕೊಂಡಿದ್ದಾರೆ. ಹೀಗಾಗಿ ಸಚಿನ್ ಅವರಿಗೆ ಇಂಥದ್ದೊಂದು ಅವಕಾಶ  ಒದಗಿ ಬಂದಿದೆಯಂತೆ.

  • ಹಾಸನದಲ್ಲಿ ‘ಕೆಜಿಎಫ್ 2’ ಸಿನಿಮಾ ವೀಕ್ಷಿಸಿದ ಯಶ್ ತಂದೆ

    ಹಾಸನದಲ್ಲಿ ‘ಕೆಜಿಎಫ್ 2’ ಸಿನಿಮಾ ವೀಕ್ಷಿಸಿದ ಯಶ್ ತಂದೆ

    ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್ 2 ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ನಾಲ್ಕು ದಿನಗಳ ಕಾಲ ರಜೆ ಇರುವ ಕಾರಣದಿಂದಾಗಿ ಬಹುತೇಕ ಕಡೆ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಅಲ್ಲದೇ, ಒಂದು ವಾರದ ಟಿಕೆಟ್ ಗಳು ಕೂಡ ಸೋಲ್ಡೌಟ್ ಆಗಿವೆ. ಈ ನಡುವೆ ಕೆಲ ಅಚ್ಚರಿಯ ಸಂಗತಿಗಳು ನಡೆದಿವೆ. ಇದನ್ನೂ ಓದಿ: ಗ್ರೌಂಡ್ ರಿಪೋರ್ಟ್ : ರಿಲೀಸ್ ಹಿಂದಿನ ಪಕ್ಕಾ ಲೆಕ್ಕಾಚಾರ, ಆರ್.ಆರ್.ಆರ್ ದಾಖಲೆ ಮುರಿದ ಕೆಜಿಎಫ್ 2

    ಚಿತ್ರ ತಂಡದ ಕೆಲ ಕಲಾವಿದರು ಮಧ್ಯೆ ರಾತ್ರಿಯೇ ಕೆಜಿಎಫ್ ಸಿನಿಮಾ ವೀಕ್ಷಿಸಿದ್ದಾರೆ. ಬೆಂಗಳೂರಿನ ಊರ್ವಶಿ ಥಿಯೇಟರ್ ಗೆ ಆಗಮಿಸಿದ್ದ ಶ್ರೀನಿಧಿ ಶೆಟ್ಟಿ, ಅವಿನಾಶ್, ಗರುಡ, ಮೇಘನಾ ಮತ್ತಿತರು ಅಭಿಮಾನಿಗಳ ಮಧ್ಯೆ ಕೂತು ಸಿನಿಮಾ ನೋಡಿದ್ದಾರೆ. ಅಲ್ಲದೇ, ಡಾ.ರಾಜ್ ಕುಟುಂಬದ ಕುಡಿಗಳಾದ ಯುವರಾಜ್ ಕುಮಾರ್ ಮತ್ತು ವಿನಯ್ ರಾಜ್ ಕುಮಾರ್ ಕೂಡ ಮಧ್ಯೆ ರಾತ್ರಿಯೇ ಚಿತ್ರವನ್ನು ವೀಕ್ಷಿಸಿದ್ದಾರೆ. ಇದನ್ನೂ ಓದಿ : ಕೆಜಿಎಫ್ 2 ಜೊತೆ ನೋಡಬಹುದು ಹೊಂಬಾಳೆ ಫಿಲ್ಮ್ಸ್ ನ ಮತ್ತೆರಡು ಸಿನಿಮಾ ಟೀಸರ್

    ಅಷ್ಟೇ ಅಲ್ಲದೇ, ನಿರ್ದೇಶಕರುಗಳಾದ ಪವನ್ ಒಡೆಯರ್, ಮಹೇಶ್ ಕುಮಾರ್, ಸುನಿ, ರಿಷಭ್ ಶೆಟ್ಟಿ ಸೇರಿದಂತೆ ಸಾಕಷ್ಟು ತಂತ್ರಜ್ಞರು ಕೂಡ ರಾತ್ರಿಯೇ ಸಿನಿಮಾ ವೀಕ್ಷಣೆ ಮಾಡಿದ್ದಾರೆ. ರಕ್ಷಿತ್ ಶೆಟ್ಟಿ ಕೂಡ ಸಿನಿಮಾ ಮೆಚ್ಚಿಕೊಂಡು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

    ಈ ರೀತಿಯಾಗಿ ಸೆಲೆಬ್ರಿಟಿಗಳು, ನಾನಾ ಕ್ಷೇತ್ರದ ಗಣ್ಯರು ಕೂಡ ಸಿನಿಮಾ ನೋಡಿ, ಮೆಚ್ಚಿ ಮಾತನಾಡಿದ್ದಾರೆ. ಹಾಗೆಯೇ ಯಶ್ ತಂದೆ ಅರುಣ್ ಕುಮಾರ್ ಕೂಡ ಸಿನಿಮಾ ನೋಡಲು ಹಾಸನದಲ್ಲಿರುವ ಎಸ್.ಬಿ.ಜಿ ಥಿಯೇಟರ್ ಆಗಮಿಸಿದ್ದರು. ಯಶ್ ತಂದೆ ಇದೀಗ ಹಾಸನ ಸಮೀಪದಲ್ಲಿ ತೋಟ ಮಾಡಿಕೊಂಡು ಅಲ್ಲಿಯೇ ವಾಸವಿದ್ದಾರೆ. ಹಾಗಾಗಿ ಹಾಸನಕ್ಕೆ ಬಂದು, ಅಭಿಮಾನಿಗಳ ಜತೆ ಸಿನಿಮಾ ನೋಡಿದ್ದಾರೆ.